KAILASA Library/ಜೀವನ್ಮುಕ್ತಿ/ಗುರುಗಳೊಂದಿಗೆ ನಿಜವಾದ ಸಂಬಂಧSign in
ಜೀವನ್ಮುಕ್ತಿ

ಗುರುಗಳೊಂದಿಗೆ ನಿಜವಾದ ಸಂಬಂಧ

This text was machine-transcribed from the printed book and may contain errors. Select the words and choose “Report a mistake”.

ವಾಸ್ತವವಾಗಿ ಇದನ್ನೇ ನಾನು ಗುರುಗಳೊಂದಿಗಿನ
ಸಂಬಂಧ ಎನ್ನುವುದು. ಗುರುಗಳೊಂದಿಗಿನ ಸಂಬಂಧ
ಎಂದರೆ ಸುಮ್ಮನೆ ಅವರನ್ನು ಪೂಜಿಸುವುದೋ
ಅಥವಾ ಯಾವಾಗಲಾದರೊಮ್ಮೆ ಹೂಗಳನ್ನು ಹಾಕಿ
ಅರ್ಚಿಸುವುದೋ ಅಲ್ಲ!

ಗುರುಗಳಿಂದ ಸಂಪೂರ್ಣವಾಗಿ
ಪ್ರಭಾವಿತರಾಗಿದ್ದಾಗ ನಿಜವಾದ ಸಂಬಂಧವು
ಉಂಟಾಗುತ್ತದೆ. ಯಾವಾಗಲಾದರೂ, ಯಾವುದೇ
ಭಯ, ಅಭದ್ರತೆ, ದುರಾಸೆ ಅಥವಾ ಕೋಪವು
ಬಂದಾಗ, 'ಗುರುಗಳು ಹೇಗೆ ನಡೆದುಕೊಳ್ಳುತ್ತಾರೆ?'
ಎಂದು ಯೋಚಿಸಿರಿ. ಅದು ಸುಮ್ಮನೆ
ಮಾಯವಾಗುತ್ತದೆ. ಅದು ಹಾಗೆಯೇ ಮಾಯವಾಗಿ
ಬಿಡುತ್ತದೆ.

ಅನೇಕ ಸಲ, ಗುರುಗಳೊಂದಿಗೆ ಗಾಢವಾದ ಸಂಬಂಧ ಹೊಂದಿದ್ದರೆ ಸಾಕೆಂದು ನಾನು ಜನರಿಗೆ ಹೇಳುತ್ತೇನೆ. ನಿಮಗೆ ಮತ್ತಾವುದರ ಅಗತ್ಯವೂ ಇಲ್ಲ. ಅದು ಕೇವಲ ನಿಮ್ಮ ಒಂದು ಸಾಮಾನ್ಯ ಸಂಬಂಧವಲ್ಲ. ಒಂದು ಸಾಮಾನ್ಯ ಸಂಬಂಧದಲ್ಲಿ, ನೀವು ಗುರುಗಳನ್ನು ತಿಳಿದುಕೊಳ್ಳಲಾಗಲೀ, ಅವರ ಮಾತುಗಳನ್ನು ಅಳವಡಿಸಿಕೊಳ್ಳಲಾಗಲೀ ಪ್ರಯತ್ನಿಸುವುದಿಲ್ಲ. ಬರಿಯ ಸ್ವಲ್ಪ ಭಾವನೆ ಇರುತ್ತದೆ. ಅದನ್ನು ಸಂಬಂಧವೆಂದೂ ನಾನು ಕರೆಯುವುದಿಲ್ಲ. ಅದು ಸಾಮಾನ್ಯವಾದ ಕ್ರಮಬದ್ಧ ಒಡನಾಟ.

ಗುರುಗಳೊಂದಿಗೆ ಸಂಪರ್ಕ ಹೊಂದುವುದೆಂದರೆ ಕೇವಲ ಅವರೇ ಆಗಿ ಬಾಳುವುದು. ಗುರುಗಳಂತೆ ಬಾಳಿದಾಗ, ಅವರೊಂದಿಗೆ ಗಾಢವಾಗಿ ಸಂಬಂಧಿತರಾಗಿರುವುದಾಗಿ ಭಾವಿಸುತ್ತೀರಿ. ಆಗಲೇ ನೀವು ವಿಕಾಸವಾಗುವುದು. ಆಗಲೇ ನಿಮಗೆ ಏನಾದರೂ ಪರಿವರ್ತನೆ ಆಗುವುದು. ಇತರ ಅನೇಕ ಸಂಬಂಧಗಳಿಂದ ಇದು ನಿಮಗೆ ಆಗಿಲ್ಲ. ನಿಮ್ಮ ಅಂತರಂಗದಲ್ಲಿ ಅನೇಕರು ನೆಲೆಸಿರುತ್ತಾರೆ ಹಾಗೂ ಅನೇಕರು ಪ್ರಭಾವ ಬೀರಿರುತ್ತಾರೆ ಅಥವಾ ಪ್ರೇರೇಪಿಸಿರುತ್ತಾರೆ ಅಥವಾ ಅವರು ನಾಯಕರೆಂಬ ಕಲ್ಪನೆಯನ್ನು ನೀಡಿರುತ್ತಾರೆ. ನಿಮ್ಮ ಅಂತರಂಗದಲ್ಲಿ ಗುರುಗಳನ್ನು ಸುಮ್ಮನೆ ತುಂಬಿಕೊಳ್ಳಿರಿ ಹಾಗೂ ನಿಮ್ಮ ಸಮಸ್ಯೆಗಳು ಕರಗುವುದನ್ನು ಗಮನಿಸಿರಿ.

ತೀವ್ರತೆ - ಪರಮೋನ್ನತವಾದ ತಂತ್ರ

ನೀವು ಮಾಡುವ ಎಲ್ಲದರಲ್ಲಿಯೂ
ತೀವ್ರವಾಗಿರಿ. ತಿನ್ನುವುದು, ನರ್ತಿಸುವುದು,
ಪ್ರಾರ್ಥಿಸುವುದು ಅಥವಾ ಕೆಲಸ ಮಾಡುವುದು,
ಯಾವುದೇ ಆದರೂ ಆ ಕ್ಷಣದಲ್ಲಿ ಸಂಪೂರ್ಣವಾಗಿ
ತನ್ಮಯರಾಗಿರಿ.

ತೀವ್ರತೆಯೇ ಜ್ಞಾನೋದಯ. ಈಗಲಾದರೂ ನಿಮ್ಮ ಸ್ವಲ್ಪ ಭಾಗವು ತೀವ್ರತೆಯಿಂದಿದ್ದರೆ ಹಾಗೂ ಸ್ವಲ್ಪ ಭಾಗವು ಸೋಮಾರಿಯಾಗಿದೆ. ಶೇಕಡಾ 100ರಷ್ಟು ತೀವ್ರತೆಯಿಂದಿರುವುದೇ ಜ್ಞಾನೋದಯ.

ಜೀವನ್ಮುಕ್ತಿಗೆ ಬೇಕಾದ ಮೊದಲನೆಯ
ಅಂಶವೆಂದರೆ ತೀವ್ರತೆ. ನಿಮ್ಮ ಮನಸ್ಸನ್ನು
ಒಡೆಯಬಹುದಾದ ಖಡ್ಗವೇ ತೀವ್ರತೆ.

ಅದು ಒಂದು ಕನಸಿನಿಂದ ಎಚ್ಚೆತ್ತಂತೆ. ನಿಮಗೆ
ಬೇಕಾದ ಮೊದಲ ಅಂಶವೆಂದರೆ
ಎಚ್ಚರಗೊಳ್ಳಬೇಕೆಂಬ ಉದ್ದೇಶ ಅಥವಾ ಕಲ್ಪನೆ.
ಆದ್ದರಿಂದ ಈಗ ನಿಮಗೆ ಎಚ್ಚರಗೊಳ್ಳಬೇಕೆಂಬ
ತೀವ್ರವಾದ ವಿಚಾರದ ಅಗತ್ಯವಿದೆ.

ತಿಳಿಯಿರಿ, ನಿಮ್ಮ ಸಂಪತ್ತು, ಸಂಬಂಧಗಳು
ಇತ್ಯಾದಿಗಳೊಂದಿಗೆ ಯಾವ ತೀವ್ರತೆಯಿಂದ
ಕೆಲಸಮಾಡುತ್ತೀರೋ, ಅದನ್ನು ಒಂದು ಸ್ವಲ್ಪ
ಜೀವನ್ಮುಕ್ತಿಯ ಕಡೆಗೆ ತಿರುಗಿಸಿದರೆ ನೀವು
ಜಾಗೃತರಾಗುತ್ತೀರಿ.

'ನಾನು ಜೀವನವೆಂದು ಕರೆಯುವ ಈ ಜೀವನದಿಂದ ಎಚ್ಚರಗೊಳ್ಳುತ್ತೇನೆ', ಎಂದು ತೀವ್ರವಾಗಿ ನಿರ್ಧರಿಸಿರಿ. ಒಂದು ತೀವ್ರ ಸಂಕಲ್ಪ ಅಥವಾ ಪ್ರಾರ್ಥನೆಯನ್ನು ಮಾಡಿಕೊಳ್ಳಿರಿ. ಒಂದು ಸಂಕಲ್ಪವನ್ನು ಮಾಡಿಕೊಂಡು, ಅದನ್ನು ನಿಮ್ಮೆಡೆಗೆ ನಿರ್ದೇಶಿಸಿದಾಗ, ಅದನ್ನು ನಿರ್ಧಾರವೆನ್ನುತ್ತಾರೆ. ಒಂದು ಸಂಕಲ್ಪವನ್ನು ಮಾಡಿಕೊಂಡು, ದೈವದೆಡೆಗೆ ಅದನ್ನು ನಿರ್ದೇಶಿಸಿದಾಗ ಅದನ್ನು ಒಂದು ಪ್ರಾರ್ಥನೆ ಎನ್ನುತ್ತಾರೆ.

ಎಚ್ಚರಗೊಳ್ಳಲು, ಸಂತೃಪ್ತರಾಗಲು,
ಜೀವನ್ಮುಕ್ತಿಯನ್ನು ಪಡೆಯಲು, ಶಾಶ್ವತ ಆನಂದ
ಹೊಂದಲು, ತೀವ್ರತೆಯೇ ಬಲವಾದ
ಉದ್ದೇಶವಾಗುತ್ತದೆ. ನಿಮಗೂ ಜೀವನ್ಮುಕ್ತಿಗೂ
ನಡುವೆ ಇರುವ ಒಂದೇ ಅಂತರವೆಂದರೆ
ತೀವ್ರತೆಯೇ.

ತೀವ್ರತೆಯನ್ನು ಪಡೆಯುವುದು ಹೇಗೆ

ನಿಮಗೆ ಸಂತೋಷಕೊಡುವ ವಸ್ತುಗಳ ಹಿಂದೆ ತೀವ್ರವಾಗಿ ಹಾಗೂ ಕಾತರತೆಯಿಂದ ಹೇಗೆ ಓಡುತ್ತೀರೆಂದು ನೆನಪಿಸಿಕೊಳ್ಳಿರಿ. ಒಂದು ವೇಳೆ ತೀವ್ರವಾಗಿ ಯಾರು ಬೇಡುತ್ತಾರೆಯೋ ಅವರಿಗೆ 10 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸಿದಾಗ, ನೀವು ನಿಮ್ಮ ಜೀವನದಲ್ಲೆಂದೂ ತೋರದಿದ್ದ ತೀವ್ರತೆಯನ್ನು ತೋರುತ್ತೀರಿ, ಅಲ್ಲವೆ? ನಿಮ್ಮನ್ನು ಸಂತೃಪ್ತಿಗೊಳಿಸುವ ಯಾವುದೇ ವಸ್ತುವಿದೆ ಎಂದು ನಿಮಗನಿಸುವ ಮಾತ್ರಕ್ಕೆ ನೀವು ತೀವ್ರರಾಗುತ್ತೀರಿ. ಹಣವು ನಿಮ್ಮ ಜೀವನಕ್ಕೆ ಉಪಯುಕ್ತವಾಗುವುದೆಂದು ನಿಮಗೆ ತಿಳಿದಿದೆ. ಅದೇ ರೀತಿ, ಜೀವನ್ಮುಕ್ತಿಯೂ ಕೂಡ ನಿಮ್ಮ ಜೀವನಕ್ಕೆ ಅಮೂಲ್ಯವಾದುದನ್ನು ಸೇರಿಸುವುದು.

ಜೀವನ್ಮುಕ್ತಿಯೆಡೆಗೆ ತೀವ್ರತೆಯನ್ನು ಹೊಂದಲು, ನೀವು ಬಯಸಿರುವ ವಸ್ತುಗಳನ್ನು ಪಡೆಯುವುದರ ಬಗ್ಗೆ ಇರುವ ತೀವ್ರತೆಯನ್ನು ಸೃಷ್ಟಿಸಿಕೊಳ್ಳುವುದರಿಂದ ಆರಂಭಿಸಬಹುದು. ಉದಾಹರಣೆಗೆ, ನೀವು ಆರೋಗ್ಯವನ್ನೋ, ಸಂಪತ್ತನ್ನೋ ಬಯಸಿದರೆ, ಅದರ ಬಗ್ಗೆ ತೀವ್ರತೆಯನ್ನು ಹೊಂದಿರಿ. ಆ ಹಂಬಲವು ಸಮಗ್ರವಾಗಿ, ನಿಮಗೆ ತಿಳಿಯದ ವಿಷಯವಾದ ಜೀವನ್ಮುಕ್ತಿಯೆಡೆಗೆ ತಿರುಗುತ್ತದೆ. ಅಷ್ಟೇ ಅಲ್ಲದೆ, ತೀವ್ರತೆಯಿಂದ ನಿಮ್ಮ ಈಡೇರದ ಆಸೆಗಳು ದಹಿಸಿ ಹೋಗಬಲ್ಲವು.

ಯಾವುದನ್ನು ನೀವು ಸಂತೃಪ್ತತೆ ಎಂದು ಅನುಭವಿಸುತ್ತೀರೋ ಅದಕ್ಕಾಗಿ ಹಂಬಲಿಸಿರಿ.

ಯೋಗ ಮುದ್ರೆಯಲ್ಲಿ ಕುಳಿತಿರುವ ವ್ಯಕ್ತಿ

ತೀವ್ರವಾದ ಹಂಬಲವೇ ಸಾಕು. ಅದು ನಿಮ್ಮನ್ನು
ಇಂಗಿಸುತ್ತದೆ ಹಾಗೂ ಆ ಪೂರ್ಣತ್ವವೂ ನೀವು
ಅನೇಕ ಬಾರಿ ಅನುಭವಿಸಿರುವ ಪೂರ್ಣತ್ವಕ್ಕಿಂತಲೂ
ಬಹಳ ಪಟ್ಟು ಹೆಚ್ಚಿನದಾಗಿರುತ್ತದೆ.

ತೀವ್ರತೆಯನ್ನು ಹೊಂದಲು ಧ್ಯಾನ ತಂತ್ರಗಳು

ಇದು ಶಿವಸೂತ್ರದ, ಬಹಳ ಶಕ್ತಿಶಾಲಿಯಾದ ಒಂದು ಧ್ಯಾನತಂತ್ರ.

ಸೂತ್ರವು ಹೇಳುತ್ತದೆ,

ನೀವು ಇನ್ನಿಲ್ಲದಿರುವ ಅನಂತ ಶೂನ್ಯದೊಳಗೆ ಮರಣಿಸಿರಿ.

ಇಂದ್ರಿಯಗಳನ್ನು ಮೀರಿ ಶಿವಪ್ರಜ್ಞೆಯತ್ತ ಸಾಗುವುದು.

ಈ ತಂತ್ರಕ್ಕೆ ಷಣ್ಮುಖಿ ಮುದ್ರ ಎನ್ನುತ್ತಾರೆ. ಈ
ಭಂಗಿಯಲ್ಲಿ ಹೆಚ್ಚು ಕಾಲ ಉಳಿಯಲು
ಕಷ್ಟವಾಗುವುದರಿಂದ ನಿಮ್ಮ ಅನುಕೂಲಕ್ಕಾಗಿ ನೆಲದ
ಮೇಲೆ ಕುಳಿತು, ಕೈಗಳಿಗೆ ಕುರ್ಚಿಯ ಆಧಾರವನ್ನು
ನೀಡಬಹುದು. ನಿಮ್ಮ ಮುಂದೆ ಒಂದು ಕುರ್ಚಿಯನ್ನು
ಹಾಕಿ, ನಿಮ್ಮ ಕೈಗಳನ್ನು ಇಟ್ಟುಕೊಳ್ಳಲು ಸಹಾಯ
ಪಡೆಯಬಹುದು ಅಥವಾ ಕುರ್ಚಿಯ ಮೇಲೆ ಕುಳಿತು
ನಿಮ್ಮ ಮುಂದಿರುವ ಕುರ್ಚಿಯನ್ನು ಕೈಗಳನ್ನು
ಇಟ್ಟುಕೊಳ್ಳಲು ಸಹಾಯ ಪಡೆಯಬಹುದು.
ಕೈಗಳನ್ನು ಕುರ್ಚಿಯ ಮೇಲೆ ಆಧರಿಸುವುದರಿಂದ
ಭುಜದ ನೋವನ್ನು ತಡೆಯಬಹುದು.

ಈ ತಂತ್ರವು ನಿಮ್ಮ ಇಂದ್ರಿಯಗಳ ದ್ವಾರಗಳನ್ನು ಮುಚ್ಚುತ್ತದೆ. ಈ ತಂತ್ರವನ್ನು ಧ್ಯಾನದಲ್ಲಿ ಸ್ವಲ್ಪ ಅನುಭವವಿರುವವರು ಮಾತ್ರ ಅಭ್ಯಾಸ ಮಾಡಬೇಕು. ಎಲ್ಲಾ ಧ್ಯಾನಗಳಲ್ಲಿ ಕುಳಿತುಕೊಳ್ಳುವಂತೆ, ಸುಖಾಸನದಲ್ಲೋ ಅಥವಾ ಕುರ್ಚಿಯ ಮೇಲೋ ಬೆನ್ನು, ಕತ್ತು ಮತ್ತು ತಲೆಯನ್ನು ನೇರವಾಗಿಟ್ಟು ಕುಳಿತುಕೊಳ್ಳಿರಿ.

ಷಣ್ಮುಖಿ ಮುದ್ರೆಯಲ್ಲಿ ಇರುವಾಗ ನಿಮ್ಮ ಶಕ್ತಿಯ ಹರಿವು ಮುಖದಲ್ಲಿರುವ ಏಳು ರಂಧ್ರಗಳ ಮೂಲಕ (ಎರಡು ಕಿವಿಗಳು, ಎರಡು ಕಣ್ಣುಗಳು, ಎರಡು ಮೂಗಿನ ಹೊಳ್ಳೆಗಳು ಹಾಗೂ ಒಂದು ಬಾಯಿ) ಹೊರಗಿನ ಪ್ರಪಂಚಕ್ಕೆ ಹೋಗುವುದು ನಿರ್ಬಂಧಿಸಲ್ಪಟ್ಟು ಅಂತರ್ಮುಖವಾಗುತ್ತದೆ. ನಿಮ್ಮ ಕೈಗಳು ಬಹಳ ಶಕ್ತಿಯುತವಾದವು. ಕೈಗಳಲ್ಲಿರುವ ಶಕ್ತಿಕೇಂದ್ರಗಳು ಎಷ್ಟು ಶಕ್ತಿಶಾಲಿಯಾದವು ಎಂದರೆ, ಅವು ಶಕ್ತಿ ಸಂಚಾರವನ್ನು ತಡೆದು ಒಂದು ಕೇಂದ್ರೀಕೃತ ಚೈತನ್ಯದ ಕಿರಣದಂಡವಾಗಿ ತಿರುಗಿಸಿ ಅದನ್ನು ಆಜ್ಞಾಚಕ್ರ ಅಥವಾ ಮೂರನೆಯ ಕಣ್ಣಿನೆಡೆಗೆ ನಿರ್ದೇಶಿಸುತ್ತದೆ.

ಸಾಮಾನ್ಯವಾಗಿ ನಮ್ಮ ಉಸಿರು ಒಳಗಕ್ಕೂ
ಹೊರಕ್ಕೂ ಅಸ್ತವ್ಯಸ್ತವಾಗಿ ಹೋಗಿಬರುತ್ತದೆ.
ಮೂಗಿನ ಹೊಳ್ಳೆಗಳನ್ನು ನಿಮ್ಮ ಬೆರಳುಗಳಿಂದ
ಭಾಗಶಃ ಮುಚ್ಚುವುದರಿಂದ, ಗಾಳಿಯ ಚಲನೆಯನ್ನು
ಕಡಿಮೆಮಾಡಿ ಅದನ್ನು ಸಮತೋಲನ
ಮಾಡಬಹುದು.

ಷಣ್ಮುಖಿ ಮುದ್ರೆಯು ಮೊದಲು ಹೊರಕ್ಕೆ ಹರಿಯುವ ಚೈತನ್ಯದ ಹರಿವನ್ನು ನಿಲ್ಲಿಸುತ್ತದೆ.

ಎರಡನೆಯದಾಗಿ, ನಾವು ಇಂದ್ರಿಯಗಳನ್ನು ಅಂತರ್ಮುಖವಾಗಿಸುತ್ತೇವೆ.

ಮೂರನೆಯದಾಗಿ, ಅವನ್ನು ಮೂರನೆಯ ಕಣ್ಣಿನತ್ತ ಕೇಂದ್ರೀಕರಿಸುತ್ತೇವೆ.

ಸೂಚನೆಗಳು:

ನೀವು ಕನ್ನಡಕ ಹಾಕುತ್ತಿದ್ದರೆ, ಅದನ್ನು ತೆಗೆಯಿರಿ. ನಿಮ್ಮ ಬೆರಳುಗಳನ್ನು ಈ ರೀತಿ ಇಟ್ಟುಕೊಳ್ಳಿರಿ:

ಹೆಬ್ಬೆರಳುಗಳನ್ನು ಕಿವಿಯ ಚಿಕ್ಕ ಹಾಲೆಗಳ
ಮೇಲಿಟ್ಟು ಒಂದು ಝೇಂಕಾರದ ಧ್ವನಿ
ಕೇಳಿಸುವವರೆಗೂ ಮುಚ್ಚಿಕೊಳ್ಳಿರಿ.

ತೋರು ಬೆರಳುಗಳನ್ನು ಮೃದುವಾಗಿ ಎರಡು ಕಣ್ಣುಗಳ ಮೇಲೆ ಇಡಿರಿ.

ಮಧ್ಯದ ಬೆರಳುಗಳನ್ನು ಮೂಗಿನ ಸೇತುವೆಯ ಮೇಲೆ ಇಟ್ಟುಕೊಳ್ಳಿರಿ.

ಉಂಗುರ ಬೆರಳುಗಳನ್ನು ಮೃದುವಾಗಿ ಮೂಗಿನ ಹೊಳ್ಳೆಗಳ ಮೇಲೆ ಇಟ್ಟುಕೊಳ್ಳಿರಿ.

ಕಿರು ಬೆರಳುಗಳು ತುಟಿಗಳ ಮೇಲಿರಲಿ.

ಮುಂದಿನ 21 ನಿಮಿಷಗಳು ಈ ಕೆಳಗೆ ಕೊಟ್ಟಿರುವ ಸೂಚನೆಗಳನ್ನು ಅನುಸರಿಸಿರಿ.

ಮೂಗನ್ನು ಭಾಗಶಃ ಮುಚ್ಚಿರಿ. ಪ್ರಾಣದ ಹರಿವನ್ನು ಕಡಿಮೆಗೊಳಿಸಿರಿ. ನಿಮ್ಮ ಮನಸ್ಸು ತಾನಾಗಿಯೇ ನೆಲೆಗೊಂಡಾಗ, ಪ್ರಾಣದ ಹರಿವು ಕಡಿಮೆಯಾಗುತ್ತದೆ. ಷಣ್ಮುಖಿ ಮುದ್ರೆಯಲ್ಲಿರಿ ಹಾಗೂ ಉಚ್ಛ್ವಾಸ ನಿಶ್ವಾಸವು ಸಾಧ್ಯವಾದಷ್ಟೂ ನಿಧಾನವಾಗಿಯೂ ಆಳವಾಗಿಯೂ ಆಗಲಿ. ಬಾಯಿಯನ್ನು ಗಟ್ಟಿಯಾಗಿ ಮುಚ್ಚಿಕೊಂಡಿರಿ. ನಿಮ್ಮ ಕಣ್ಣಿನ ಗುಡ್ಡೆಗಳೆರಡೂ ಕಲ್ಲುಗಳಾಗಿರುವಂತೆ ದೃಶ್ಯೀಕರಿಸಿಕೊಳ್ಳಿರಿ ಹಾಗೂ ಅವು ಅಲುಗಾಡದಿರಲಿ.

ನಿಮ್ಮ ಅರಿವನ್ನು ತೀವ್ರಗೊಳಿಸಿರಿ. ಒತ್ತಡವನ್ನು ಸೃಷ್ಟಿಸದಿರಿ - ಗಾಢವಾದ ಅರಿವಿನಿಂದ ಭೇದಿಸಲು ಯತ್ನಿಸಿರಿ. ಒತ್ತಡವನ್ನು ಸೃಷ್ಟಿಸದಿರಿ, ಕೇವಲ ಅರಿವನ್ನು ಸೃಷ್ಟಿಸಿರಿ. ನಿಮ್ಮ ಮೂರನೆಯ ಕಣ್ಣನ್ನು ಒಂದು ಬೈರಿಗೆ(ಡ್ರಿಲ್‌ಬಿಟ್)ಯಿಂದ ಭೇದಿಸುತ್ತಿರುವಂತೆ ಕಲ್ಪಿಸಿಕೊಳ್ಳಿರಿ.

ವಿರಮಿಸಿರಿ. ಕಣ್ಣುಗಳನ್ನು ನಿಧಾನವಾಗಿ ತೆರೆಯಿರಿ.

ಷಣ್ಮುಖಿ ಮುದ್ರೆಯನ್ನು ಮಾಡುವಾಗ, ಆ ಮುದ್ರೆಯಲ್ಲಿ ಆರಾಮವಾಗಿ ಇರುವಂತೆ ನೋಡಿಕೊಳ್ಳುವುದು ಮುಖ್ಯ. ನಿಮ್ಮ ಅಂತಃಪ್ರಜ್ಞಾವು ಜಾಗೃತವಾಗಲು ಮೂರನೆಯ ಕಣ್ಣಲ್ಲಿ ಅಸಾಧಾರಣವಾದ ಚೈತನ್ಯವು ಸೃಷ್ಟಿಯಾಗುವುದನ್ನು ಕಾಣುವಿರಿ. ನೀವು ಆರಾಮವಾಗಿದ್ದಾಗ, ಆಳವಾದ ಚೈತನ್ಯ ಅಥವಾ ಉನ್ನತ ಪ್ರಜ್ಞೆಯೊಳಗೆ ಪ್ರವೇಶಿಸುತ್ತಿರುವುದನ್ನು ಕಾಣುವಿರಿ.