KAILASA Library/ಜೀವನ್ಮುಕ್ತಿ/ಆಳವಾದ ಆಧ್ಯಾತ್ಮಿಕ ಅನುಭವSign in
ಜೀವನ್ಮುಕ್ತಿ

ಆಳವಾದ ಆಧ್ಯಾತ್ಮಿಕ ಅನುಭವ

This text was machine-transcribed from the printed book and may contain errors. Select the words and choose “Report a mistake”.

ಆಧ್ಯಾತ್ಮಿಕ ಅನುಭವಕ್ಕೆ ಬೇಕಾದ ಅವಶ್ಯಕತೆಗಳು

ಆಧ್ಯಾತ್ಮಿಕ ಅನುಭವವು ಉಂಟಾಗಲು ಎರಡು
ನಿಯಮಗಳನ್ನು ಪೂರೈಸಬೇಕು. ಮೊದಲನೆಯದು
ನೀವು ಸಂಪೂರ್ಣವಾಗಿ ತೆರೆದ ಮನಸ್ಕರಾಗಿ
ಸುತ್ತಮುತ್ತಲಿನ ಪರಿಸರಕ್ಕೆ ದೊರಕುವಂತಿರಬೇಕು.
ಎರಡನೆಯದು ಒಂದು ತೀವ್ರವಾದ ಚೈತನ್ಯಕ್ಷೇತ್ರ.

ಕೆಲವೊಮ್ಮೆ ನೀವು ತೆರೆದ ಮನಸ್ಕರಾದರೂ ತೀವ್ರವಾದ ಚೈತನ್ಯಕ್ಷೇತ್ರದಲ್ಲಿಲ್ಲದಿದ್ದರೆ, ನಿಮ್ಮ ಅಹಂಕಾರದ ಮೊದಲ ತೆಂಗಿನಕಾಯಿ ಒಡೆಯುವುದಿಲ್ಲ. ಮೊದಲ ಆಧ್ಯಾತ್ಮಿಕ ಅನುಭವವು ಒಂದು ತೆಂಗಿನಕಾಯಿಯನ್ನು ಒಡೆದಂತೆ. ಒಮ್ಮೆ ಅದು ಒಡೆದರೆ ಉಳಿದ ತೆಂಗಿನಕಾಯನ್ನು ಒಡೆಯುವುದು ಕಷ್ಟವೇನಲ್ಲ. ಮೊದಲನೆಯ ತೆರೆಯುವಿಕೆಗೆ ಒಂದು ತೀವ್ರವಾದ ಆಧ್ಯಾತ್ಮಿಕ ಚೈತನ್ಯಕ್ಷೇತ್ರದ ಅಗತ್ಯವಿದೆ.

ನನ್ನ ಮೊದಲ ಆಧ್ಯಾತ್ಮಿಕ ಅನುಭವಕ್ಕೆ ಈ ಎರಡು ಅಂಶಗಳೇ ಕಾರಣವಾಗಿದ್ದುದು. ನಾನು ತೆರೆದ ಮನಸ್ಕನಾಗಿ ಹೊರಗಿನ ಪರಿಸರಕ್ಕೆ ದೊರೆತಿದ್ದೆ; ಹಾಗೂ ಅರುಣಾಚಲದ ತೀವ್ರವಾದ ಚೈತನ್ಯಕ್ಷೇತ್ರದಲ್ಲಿದ್ದೆ. ಅದೃಷ್ಟವಶದಿಂದ ನಾನು ಆ ಬೆಟ್ಟದ ಸೌಂದರ್ಯಕ್ಕೆ ಆಕರ್ಷಿತನಾಗಿದ್ದೆ. ಸಾಮಾನ್ಯವಾಗಿ ನೀವು ಒಂದು ಬೆಟ್ಟವನ್ನೊ, ಒಂದು ನದಿಯನ್ನೊ ಅಥವಾ ಒಂದು ಸಮುದ್ರವನ್ನೊ ಪ್ರತಿದಿನವೂ ನೋಡುತ್ತಿದ್ದರೆ ಅದನ್ನು ನಿರ್ಲಕ್ಷಿಸುತ್ತೀರಿ. ಅದು ಹೇಗೋ ನಾನೆಂದಿಗೂ ಆ ಬೆಟ್ಟವನ್ನು ನಿರ್ಲಕ್ಷಿಸಲಿಲ್ಲ. ಎಂದೂ ಅದರ ಬಗ್ಗೆ ತಿಳಿದಿದ್ದೇನೆ ಎಂದುಕೊಳ್ಳುತ್ತಿರಲಿಲ್ಲ. ಸತತವಾಗಿ ತೆರೆದ ಮನಸ್ಕನಾಗಿರುತ್ತಿದ್ದೆ.

ತಿಳಿಯಿರಿ, ಪ್ರತಿ ಬಾರಿಯೂ ತೆರೆದ ಮನಸ್ಸಿನಿಂದ
ದೊರೆಯುವಂತೆ ಇರುವುದು, ಪ್ರತಿ ಬೆಳಗೈಯೂ
ಹೊಸತನದ ಕಣ್ಣುಗಳಿಂದ ಅಥವಾ ಅದನ್ನು ತೆರೆದ
ಮನಸ್ಸಿನಿಂದ ನೋಡುವುದನ್ನು ನಾನು ‘ತೆರೆದ

ಮಾನಸ್ಯನಾಗಿ ದೊರೆಯುವುದು' ಎಂದು
ಕರೆಯುತ್ತೇನೆ. ಅನೇಕ ಬಾರಿ ನಾವು ಸಮಾಜಕ್ಕೆ
ಸಂಪೂರ್ಣವಾಗಿ ನಮ್ಮನ್ನೇ ಮುಚ್ಚಿಕೊಳ್ಳುತ್ತೇವೆ.

ನಾವು ಯಾವುದೋ ಒಂದು ನಿರ್ಣಯಕ್ಕೆ
ಬರುತ್ತೇವೆ, ಯಾವುದೋ ತಿಳಿವಳಿಕೆಯನ್ನು
ಪಡೆಯುತ್ತೇವೆ ಹಾಗೂ ಎಂದಿಗೂ ನಮ್ಮ ತಿಳಿವಳಿಕೆ
ಅಥವಾ ಯತ್ನವನ್ನು ಫಲಿತಾಂಶದೊಂದಿಗೆ
ನವೀಕರಿಸುವುದಿಲ್ಲ.

ಪ್ರತಿ ದಿನವೂ ಅರುಣಾಚಲ ಬೆಟ್ಟವು ನನಗೆ ಜೀವಂತವಾಗಿ ಕಂಡಿತು. ಪ್ರತಿದಿನವೂ ನೆನ್ನೆಯ ದಿನ ನೋಡಿದ್ದ ಬೆಟ್ಟವು ಅದಾಗಿರುತ್ತಿರಲಿಲ್ಲ. ನನ್ನದು ಒಂದು ತಮಾಷೆಯ ರೂಢಿಯಾಗಿತ್ತು. ಬೆಳಿಗ್ಗೆ ಎದ್ದ ಕೂಡಲೇ ನಾನು ನನ್ನ ಕಣ್ಣುಗಳನ್ನು ಬಿಡುತ್ತಿರಲಿಲ್ಲ. ನಿಧಾನವಾಗಿ ನನ್ನ ಕೊಠಡಿಯಿಂದ ಮನೆಯಾಚೆಗೆ ಮೋಟುಗೋಡೆಯ ಸಹಾಯದಿಂದ ಬಂದು, ಬೆಟ್ಟವು ಕಾಣಬಹುದಾದ ಸ್ಥಳವೊಂದಕ್ಕೆ ಬರುತ್ತಿದ್ದೆ. ಆಗಲೇ ನಾನು ಕಣ್ಣುಗಳನ್ನು ತೆರೆಯುತ್ತಿದ್ದುದು. ಹಾಗಾಗಿ, ಎದ್ದ ಕೂಡಲೇ ನಾನು ಮೊದಲು ನೋಡುತ್ತಿದ್ದದ್ದು ಆ ಬೆಟ್ಟವಾಗಿರುತ್ತಿತ್ತು.

ಹೇಗೋ ಏನೋ ನಾನು ಮೊದಲು ಬೆಟ್ಟವನ್ನು
ನೋಡುವ ವಿಷಯವು ನನ್ನ ಅಣ್ಣ ತಮ್ಮಂದಿರಿಗೆ
ತಿಳಿದಿತ್ತು. ಅವರಿಗೆ ನನ್ನನ್ನು ಕೀಟಲೆಮಾಡಿ
ಖುಷಿಪಡಬೇಕೆಂದೆನಿಸುತ್ತಿತ್ತು. ನಾನು
ಹಾಸಿಗೆಯಿಂದೆದ್ದು ನಿಧಾನವಾಗಿ ನಡೆಯು-
ತ್ತಿರುವುದನ್ನು ಕಂಡಕೂಡಲೆ ಅವರು ನನ್ನ ಮುಂದೆ
ಬಂದು ನಿಲ್ಲುತ್ತಿದ್ದರು.

ನಾನು ಕಣ್ಣುಗಳನ್ನು ಬಿಟ್ಟಾಗ ಬೆಟ್ಟವನ್ನು ನೋಡದೆ, ಅವರ ಮುಖಗಳನ್ನು ನೋಡಿದರೆ ನಾನು ಮತ್ತೆ ಹಿಂತಿರುಗಿ ಹೋಗಿ ಮಲಗುತ್ತಿದ್ದೆ. ನಾನು ಮತ್ತೆ ಮಲಗಿ ಒಂದರ್ಧ ಘಂಟೆ ನಿದ್ದೆ ಮಾಡಿ ಎದ್ದು ನಂತರ ಬೆಟ್ಟವನ್ನು ನೋಡಲು ಮೆಲ್ಲನೆ ನಡೆದು ಹೋಗಿ ಕಣ್ಣು ಬಿಡುತ್ತಿದ್ದೆ. ಬೆಳಿಗ್ಗೆ ಬೆಟ್ಟವನ್ನು ಮೊದಲು ನೋಡಿದರೆ ಮಾತ್ರವೇ ನಾನು ನನ್ನ ಆ ದಿನದ ಕೆಲಸಗಳನ್ನು ಆರಂಭಿಸುತ್ತಿದ್ದುದು.

ಇದು ತಮಾಷೆಯಂತೆಯೂ,
ಮೂಢನಂಬಿಕೆಯಂತಲೂ ಅನಿಸಿದರೂ, ಈ ಬೆಟ್ಟವು
ಜ್ಞಾನಿಗಳಿಗೆ ಆಕರ್ಷಣೆ ಹೊಂದಿರುವ ಹಾಗೂ
ಸೆಳೆತವಾಗಿರುವುದರಿಂದಲೇ ನಾನು ಜನ್ಮತಾಳಿದದ್ದು,
ಈ ದೇಹವನ್ನು ಪಡೆದದ್ದು ಎಂದು ನಾನು ಸದಾ
ಭಾವಿಸುತ್ತಿದ್ದೆ.

ತಮಿಳಿನಲ್ಲಿ ಈ ಬೆಟ್ಟವನ್ನು ವರ್ಣಿಸುವ ಒಂದು
ಸುಂದರವಾದ ಪಂಕ್ತಿಯಿದೆ, 'ತನ್ನ ಸುತ್ತಲಿರುವ
ಜ್ಞಾನಿಗಳನ್ನು ಆಕರ್ಷಿಸುವ ಬೆಟ್ಟ' ಎಂದು. ಈ
ಬೆಟ್ಟವು ಈ ಭೂಗ್ರಹದ ಮೇಲಿನ ಜ್ಞಾನಿಗಳನ್ನು
ಆಕರ್ಷಿಸುತ್ತದೆ ಎಂಬುದೊಂದೇ ಅಲ್ಲದೆ, ಬೇರೆಯ
ಗ್ರಹಗಳಿಂದಲೂ ಸ್ಥಳಗಳಿಂದಲೂ ಜ್ಞಾನಿಗಳನ್ನು
ಭೂಗ್ರಹದೆಡೆಗೆ ಆಕರ್ಷಿಸುತ್ತದೆ ಎಂಬುದಕ್ಕಾಗಿ
ಇದನ್ನು ವಿಶೇಷವಾಗಿ ಗೌರವಿಸಲಾಗಿದೆ. ನಾನು
ಎಂದಿಗೂ ಈ ಬೆಟ್ಟವನ್ನು ಹೇಗಿದ್ದರೂ ಇದೆಯಲ್ಲಾ
ಎಂದು ತಿಳಿದಿರಲಿಲ್ಲ. ಅದು ಸದಾ
ಜೀವಂತವಾಗಿರುವ ಅಸ್ತಿತ್ವವಾಗಿತ್ತು.

ದೈವದೊಂದಿಗೆ ಸಮಾಗಮ

ಒಂದು ದಿನ ನಾನು ಕುಳಿತು ಧ್ಯಾನಿಸಲು ಯತ್ನಿಸುತ್ತಿದ್ದೆ. ಅಂದು ಹುಣ್ಣಿಮೆಯ ದಿನವಾಗಿತ್ತು. ಚಂದ್ರೋದಯವಾಗುತ್ತಿದ್ದಂತೆಯೇ ಸೂರ್ಯಾಸ್ತಮಾನವೂ ಆಗುತ್ತಿತ್ತು. ನಾನು ಅರುಣಾಚಲ ಬೆಟ್ಟದ ಒಂದು ಬಂಡೆಯ ಮೇಲೆ ಕುಳಿತು, ರಮಣಮಹರ್ಷಿಗಳ ಶಿಷ್ಯರೂ ಹಾಗೂ ಜ್ಞಾನಿಗಳೂ ಆದ ಅಣ್ಣಾಮಲೈ ಸ್ವಾಮಿಗಳಿಂದ ದೀಕ್ಷೆ ಪಡೆದಿದ್ದ ಧ್ಯಾನತಂತ್ರವನ್ನು ಸಾಧನೆ ಮಾಡುತ್ತಿದ್ದೆ.

ಬಂಡೆಯ ಮೇಲೆ ಕುಳಿತು, ‘ನಾನು’ ಎಂಬ ಭಾವನೆಯ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆ. ಅಂದು ವಿಶೇಷವಾಗಿ ದೀರ್ಘಕಾಲ ಕುಳಿತು ಆಳವಾಗಿ ಈ ಅಭ್ಯಾಸವನ್ನು ಮಾಡುತ್ತಿದ್ದೆ.

ಇದ್ದಕ್ಕಿದ್ದಂತೆ, ಏನೋ ಆದಂತಾಗಿ ನಾನು ಒಳಕ್ಕೆ ಹೀರಲ್ಪಟ್ಟಂತೆ, ಎಳೆಯಲ್ಪಟ್ಟಂತೆ ಭಾಸವಾಯಿತು. ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತಿದ್ದರೂ ನನ್ನೊಳಗೆ ಏನೋ ತೆರೆದುಕೊಂಡಂತೆ ಸ್ಪಷ್ಟವಾಗಿ ಕಂಡೆನು. ಅದು ಒಳಗೆ ತೆರೆದುಕೊಂಡ ಕ್ಷಣವೇ ನನ್ನ ಸುತ್ತಲೂ 360 ಡಿಗ್ರಿಗಳಷ್ಟು ನೋಡುವುದು ನನ್ನಿಂದ ಸಾಧ್ಯವಾಯಿತು. ನನ್ನ ಕಣ್ಣುಗಳು ಮುಚ್ಚಿದ್ದವು. ಆದರೆ ನಾನು ಸಂಪೂರ್ಣವಾಗಿ 360 ಡಿಗ್ರಿಗಳಷ್ಟನ್ನು – ಮುಂದೆ, ಹಿಂದೆ, ಪಕ್ಕಗಳಲ್ಲಿ, ಮೇಲೆ, ಕೆಳಗೆ ಎಲ್ಲಾ ದಿಕ್ಕುಗಳಲ್ಲೂ ಆಗುತ್ತಿರುವುದೆಲ್ಲವನ್ನೂ ನೋಡಲು ಸಾಧ್ಯವಾಗುತ್ತಿತ್ತು.

ನನಗೆ ನೋಡಲು ಸಾಧ್ಯವಾಗುತ್ತಿದ್ದದ್ದು
ಮಾತ್ರವಲ್ಲ, ನಮಗೆಲ್ಲರಿಗೂ ಹೇಗೆ ನಮ್ಮ
ಚರ್ಮದೊಳಗೆ ಬದುಕಿದ್ದೇವೆ ಎನಿಸುತ್ತದೆಯೋ,
ಅದೇ ತೀವ್ರತೆಯಲ್ಲಿ ನನಗೆ ಕಾಣಲು
ಸಾಧ್ಯವಾಗುತ್ತಿರುವ ಎಲ್ಲದರಲ್ಲಿಯೂ ನಾನಿದ್ದೇನೆ
ಎಂಬುದನ್ನು ಬಹಳ ಸ್ಪಷ್ಟವಾಗಿಯೂ, ಅದೇ
ತೀವ್ರತೆಯಲ್ಲಿಯೂ ಅನುಭವಿಸಲು ಸಾಧ್ಯವಾಯಿತು.

ನನ್ನ ಸುತ್ತಲೂ ಇರುವುದೆಲ್ಲವನ್ನೂ ನೋಡಲು ನನ್ನಿಂದ ಸಾಧ್ಯವಾಯಿತು. ಗಿಡಗಳು, ಬಂಡೆಗಳು, ಮರಗಳು ಹಾಗೂ ಎಲ್ಲದರಲ್ಲೂ ನಾನು ಜೀವಿಸುತ್ತಿದ್ದೇನೆಂದೆನಿಸುತ್ತಿತ್ತು. ನೀವೆಲ್ಲರೂ ನಿಮ್ಮ ದೇಹದೊಳಗೆ ಜೀವಿಸುತ್ತಿರುವುದನ್ನು ತಿಳಿಯುವ ಹಾಗೆ, ನಾನು ಇಡೀ ಬ್ರಹ್ಮಾಂಡದೊಂದಿಗೆ ಜೀವಿಸುತ್ತಿರುವುದಾಗಿ ಅನುಭವವಾಯಿತು.

ಅಲ್ಲಿಯವರೆಗೂ ನಾನು ಒಂದು
ದೇಹಮಾತ್ರವಾಗಿದ್ದೆ. ಅದಾದ ಮೇಲೆ ‘ನಾನು
ಒಂದು ದೇಹವೂ ಸಹ’ ಎಂಬುದನ್ನರಿತೆ. ತಿಳಿಯಿರಿ,
‘ನಾನು ದೇಹವೂ ಸಹ ಆಗಿದ್ದೇನೆ’ ಎಂಬುದನ್ನು
ಅರಿತೆ.

ಅದೊಂದು ಬಹಳ ಗಾಢವಾದ
ಅನುಭವವಾಗಿತ್ತು. ಅದು ಕೇವಲ ಒಂದು ಮಾತೋ
ಕಲ್ಪನೆಯೋ ಆಗಿದ್ದರೆ, ಅದು ಅಂತರಂಗದ ಮೇಲೆ
ಅಷ್ಟು ಪ್ರಭಾವ ಬೀರಲಾರದು. ಅದು ಒಂದು
ತೀವ್ರವಾದ ಪ್ರಜ್ಞಾಪೂರಿತ ಅನುಭವವಾಗಿತ್ತು.

ನೋಡಿರಿ, ನೀವು ನಿಮ್ಮ ಚರ್ಮದೊಳಗೆ ಇದ್ದೀರೆಂದು ಈಗ ನಿಮಗೆ ತಿಳಿದಿದೆ. ನಿಮ್ಮನ್ನು ತೊಂದರೆಪಡಿಸದಿರುವವರೆಗೂ ಏನು ಹೇಳಿದರೂ ಕೇಳುತ್ತೀರಿ. ಸಹಜವಾಗಿ ನಿಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕೆಂದು ನಿಮಗೆ ತಿಳಿದಿದೆ ಏಕೆಂದರೆ ನೀವು ನಿಮ್ಮೊಳಗೆ ಸಜೀವವಾಗಿದ್ದೀರಿ ಮತ್ತು ಅದು ನಿಮ್ಮ ಪ್ರಜ್ಞಾಪೂರಿತ ಅನುಭವ.

ನೀವು ಕೇವಲ ನಿಮ್ಮ ದೇಹವಷ್ಟೇ ಅಲ್ಲವೆಂದು
ಎಷ್ಟೋ ಜನರು ಬೋಧಿಸಿದರೂ, ನೀವು ಕೇವಲ
ಕೇಳುತ್ತೀರೇ ಹೊರತು, ಆ ಪದಗಳು ನಿಮ್ಮ ಮೇಲೆ
ಪರಿಣಾಮ ಬೀರಗೊಡುವುದಿಲ್ಲ! ಏಕೆಂದರೆ, ನಿಮ್ಮ
ಪ್ರಜ್ಞಾಪೂರಿತ ಅನುಭವವೇ ನಿಮ್ಮ ದೇಹ.

‘ನಾನು ಈ ಇಡೀ ಬ್ರಹ್ಮಾಂಡ’ ಎಂಬ ನನ್ನ
ಅನುಭವವು ನನ್ನ ಸತ್ಯವಾಯಿತು. ಆದ್ದರಿಂದಲೇ
ನಾನು ಅದರಂತೆ ಜೀವಿಸಲು ಆರಂಭಿಸಿದೆ.

ನಾನು ಅಷ್ಟೊಂದು ಎಳೆಯ ವಯಸ್ಸಿನಲ್ಲಿ
ಅಂತಹ ಬಲವಾದ, ತೀವ್ರವಾದ, ಜೀವನವನ್ನು
ನಡೆಸಿದುದನ್ನು ಕೇಳಿ ಜನರು ಆಶ್ಚರ್ಯಪಡುತ್ತಾರೆ.
ಅದು ಬಹಳ ಕಷ್ಟಕರವಾದುದೆಂದೂ,
ಊಹಿಸಿಕೊಳ್ಳಲೂ ಆಗದುದೆಂದೂ ಭಾವಿಸುತ್ತಾರೆ.
ಅದು ನಿಮಗೆ ಊಹಿಸಿಕೊಳ್ಳಲಾಗದುದು. ಏಕೆಂದರೆ,
ಅದು ನಿಮ್ಮ ಪ್ರಜ್ಞಾಪೂರ್ವಕ
ಅನುಭವವಲ್ಲವಾದುದರಿಂದ. ಅದು ನನಗೆ
ಸುಲಭವಾದದ್ದು, ಏಕೆಂದರೆ ಇಡೀ ವಿಶ್ವವು
ನನ್ನೊಳಗಿದೆ ಎಂಬ ಭಾವನೆಯು ನನಗೆ ಒಂದು
ಬಹಳ ಘನವಾದ ಅನುಭವವಾಗಿದ್ದುದರಿಂದ.

ಬುದ್ಧನ ತೀವ್ರತೆ

ಬೌದ್ಧ ಧರ್ಮದ ಸ್ಥಾಪಕನಾದ ಜ್ಞಾನಿಗುರು
ಗೌತಮ ಬುದ್ಧನ ಜೀವನಚರಿತ್ರೆಯನ್ನು ನೋಡಿರಿ.
ಆತನು ಆರು ದೀರ್ಘ ವರ್ಷಗಳ ಕಾಲ
ಅನ್ವೇಷಿಸಿದನು. ಆತನು ಅನೇಕ ಮಾರ್ಗಗಳನ್ನು
ಪ್ರಯತ್ನಿಸಿದನು. ಆದರೆ ತನ್ನ ಪ್ರತಿಯೊಂದು
ಪ್ರಯತ್ನದಲ್ಲೂ ತನ್ನ ಇಡೀ ಅಸ್ತಿತ್ವವನ್ನು
ತೊಡಗಿಸಿದುದೇ ಸೊಗಸಾದ ವಿಷಯ.

ಆತನು ಏನನ್ನು ಅನುಸರಿಸಬೇಕೆಂದು
ನಿರ್ಧರಿಸಿದರೂ, ಅದನ್ನು ಸಂಪೂರ್ಣವಾದ,
ದೃಢವಾದ ತೀವ್ರತೆಯಿಂದ ಮಾಡಿದನು. ಆತನು
ಉಪವಾಸ, ಸತತವಾದ ತಪಸ್ಸು, ಮಂತ್ರ, ಜಪ
ಮುಂತಾದ ಅನೇಕ ತಂತ್ರಗಳನ್ನು ಪ್ರಯತ್ನಿಸಿದನು.
ಆತನು ಸಾಧ್ಯವಾದ ಎಲ್ಲಾ ತಂತ್ರಗಳನ್ನೂ
ಪ್ರಯತ್ನಿಸಿದನು, ಆದರೆ ಯಾವುದೂ ಫಲಿಸಲಿಲ್ಲ.

ಆತನ ಅನ್ವೇಷಣೆಯ ಕಾಲದಲ್ಲಿ ಒಬ್ಬ ಗುರುಗಳು
ದಿನಕ್ಕೆ ಒಂದು ಅಕ್ಕಿ ಕಾಳಿನಂತೆ ಮೂರು ತಿಂಗಳ
ಕಾಲ ತಿನ್ನುವಂತೆ ಉಪದೇಶಿಸಿದರು. ಬುದ್ಧನು ಆತನ
ಸೂಚನೆಗಳನ್ನು ಪ್ರಾಮಾಣಿಕತೆಯಿಂದ
ಪರಿಪಾಲಿಸಿದನು. ಆಗ ಆತನ ದೇಹವು ಬರಿಯ
ಮೂಳೆಯ ಚಕ್ಕಳವಾಗಿ ಅತ್ಯಂತ
ದುರ್ಬಲವಾಯಿತು.

ಒಂದು ದಿನ ಸ್ನಾನ ಮಾಡಲು ಆತನು ನದಿಯೊಳಗೆ ಇಳಿದನು. ಆತನು ಎಷ್ಟು ದುರ್ಬಲನಾಗಿದ್ದನೆಂದರೆ ತನ್ನ ಕಾಲುಗಳನ್ನು ಎತ್ತಲು ಸಹ ಆಗಲಿಲ್ಲ ಹಾಗೂ ನೀರಿನ ಸೆಳೆತದಲ್ಲಿ ಸಿಕ್ಕಿ, ಕೊಚ್ಚಿಹೋದನು. ಒಂದು ಮರದ ಕೊಂಬೆಯನ್ನು ಹಿಡಿದು ಅದಕ್ಕೆ ಜೋತಾಡಿಕೊಂಡಿರುವಾಗ, ಆತನು ತನ್ನೆಲ್ಲಾ ಪ್ರಯತ್ನಗಳ ನಿಷ್ಫಲತೆಯನ್ನು ಇದ್ದಕ್ಕಿದ್ದಂತೆ ಅರಿತನು. ತನ್ನ ದೇಹವನ್ನು ದಂಡಿಸುತ್ತಿದ್ದು, ಆ ಪ್ರಕ್ರಿಯೆಯಲ್ಲಿ ತನ್ನ ದೇಹದ ಶಕ್ತಿಯನ್ನು ಮಾತ್ರ ಕಳೆದುಕೊಂಡಿದ್ದನಷ್ಟೆ.

ತನ್ನ ಅಂತರಂಗದ ಪ್ರಪಂಚದಲ್ಲಿ ಏನನ್ನೂ ಸಾಧಿಸಲಾಗುತ್ತಿಲ್ಲವೆಂದು ಹಾಗೂ

ಬಾಹ್ಯಪ್ರಪಂಚದಲ್ಲಿ ಅರ್ಥಪೂರ್ಣವಾದುದು ಏನೂ
ಇಲ್ಲವೆಂಬುದರ ಬಗ್ಗೆ ಆತನಿಗೆ ಒಂದು ಆಳವಾದ
ಖಿನ್ನತೆ ಉಂಟಾಯಿತು.

ಆತನು ನದಿಯಿಂದ ಹೊರಬಂದು ಒಂದು ಮರದ
ಕೆಳಗೆ ಕುಳಿತುಕೊಂಡನು. ಆತನು
ನಿರಾಶೆಗೊಂಡಿದ್ದನು. ಆದರೆ ಸಾಮಾನ್ಯವಾದ
ನಿರಾಶೆಗೂ ಬುದ್ಧನ ನಿರಾಶೆಗೂ ಇರುವ
ವ್ಯತ್ಯಾಸವೆಂದರೆ, ಆತನು ತನ್ನ ನಿರಾಶೆಯಲ್ಲಿಯೂ
ಸಂಪೂರ್ಣನೂ, ತೀವ್ರನೂ ಆಗಿದ್ದನು.

ಆತನಿಗೆ ಲವಲೇಶವಾದರೂ ಭರವಸೆ ಇರಲಿಲ್ಲ.
ಆತನು ಎಲ್ಲಾ ಭರವಸೆಗಳನ್ನೂ ಬಿಟ್ಟುಬಿಟ್ಟನು.
ಸಾಧಿಸಲು ಏನೂ ಇರಲಿಲ್ಲ. ಮುಂದೆ ಯೋಚಿಸಲು
ಏನೂ ಇರಲಿಲ್ಲ.

ಆ ರಾತ್ರಿ ಮಲಗಲು ಸಿದ್ಧವಾಗಿದ್ದು, ಆಕಾಶವನ್ನು
ನೋಡುತ್ತಿದ್ದಂತೆ ನಿರ್ವಾಣವನ್ನು ಹೊಂದಿದನೆಂದು
ಹೇಳಲಾಗಿದೆ.

ಬುದ್ಧನು ಜ್ಞಾನೋದಯವನ್ನು ಪಡೆಯಲು
ಕಾರಣವಾದ ಆ ಒಂದಂಶವೆಂದರೆ ತೀವ್ರತೆ. ನಮ್ಮಲ್ಲಿ
ಅನೇಕರು ಎಲ್ಲವನ್ನೂ ಮಾಡುತ್ತಿದ್ದೇವೆಂದು
ಸಾರಿದರೂ ಏನೂ ಆಗುತ್ತಿರುವುದಿಲ್ಲ. ನೀವು ನಿಮ್ಮ
ಜ್ಞಾನತೃಷೆಯಲ್ಲಿ ಹಾಗೂ ಅನ್ವೇಷಣೆಯಲ್ಲಿ ಎಷ್ಟು
ಸಮಗ್ರವಾಗಿರುವಿರಿ ಎಂಬುದನ್ನು ಇನ್ನೂ ಸ್ವಲ್ಪ
ಆಳವಾಗಿ ನೋಡಿರಿ. ನೀವು ಏನನ್ನೇ ಅನ್ವೇಷಿಸಿದರೂ
ನಿಮ್ಮ ಚೈತನ್ಯಗಳನ್ನು ಸಂಪೂರ್ಣವಾಗಿ ಅದಕ್ಕಾಗಿ
ಒಂದಾಗಿಸಿ ಮುಂದುವರೆಯಿರಿ. ಆಗ ವಿಶ್ವವು
ನಿಮಗಾಗಿ ಸಂಪೂರ್ಣವಾಗಿ ತೆರೆದುಕೊಳ್ಳುವುದನ್ನು
ಕಾಣುವಿರಿ.

ನನ್ನ ಆಳವಾದ ಆಧ್ಯಾತ್ಮಿಕ ಅನುಭವಕ್ಕಾಗಿ ಹೊಂದಿದ್ದ ತೀವ್ರತೆ

ನಾನು ವಿಶ್ವಶಕ್ತಿಯೊಂದಿಗೆ ಒಂದಾಗಿ ನನ್ನ ಸುತ್ತಲಿನ ಎಲ್ಲದರ 360 ಡಿಗ್ರಿಯ ವೀಕ್ಷಣೆಯ ಆಳವಾದ ಆಧ್ಯಾತ್ಮಿಕ ಅನುಭವದ ಬಗ್ಗೆ ತಿಳಿಸಿದ್ದೆ. ಅನೇಕ ಜನರು ಅನೇಕ ಧ್ಯಾನ ತಂತ್ರಗಳನ್ನು ಅಭ್ಯಸಿಸುತ್ತಿದ್ದಾರೆ. ಹಾಗಾದರೆ ಇದರಲ್ಲಿರುವ ವ್ಯತ್ಯಾಸವೇನು? ಒಬ್ಬ ಚಿಕ್ಕ ಹುಡುಗನಿಗೆ ಆ ಅನುಭವವು ಆಗಲು ಕಾರಣವೇನು?

ನಾನು ಹೇಳಬಲ್ಲ ಒಂದು ಮುಖ್ಯವಾದ
ಕಾರಣವೆಂದರೆ, ನನ್ನ ಇಡೀ ಅಂತರಂಗವು ಪಕ್ವವಾಗಿ,
ಒಂದು ಸಣ್ಣ ತಂತ್ರವೇ ಅದನ್ನು ಜಾಗೃತಗೊಳಿಸಿ
ತೆರೆಯುವಷ್ಟು ಸಿದ್ಧವಾಗಿತ್ತು ಎಂದು. ನನ್ನ
ಪ್ರಜ್ಞಾಪೂರಿತ ಅರಿವಿಲ್ಲದೆಯೇ ನಾನು ಸತತವಾಗಿ
ಜ್ಞಾನಿಗಳ ಉನ್ನತ ಆವರ್ತನದಲ್ಲಿದ್ದೆ.

ಎಳೆಯ ವಯಸ್ಸಿನಲ್ಲಿ ವಿಶೇಷವಾಗಿ ನಿಮ್ಮನ್ನು ಯಾರು ಪ್ರಚೋದಿಸಿ, ನಿಮ್ಮ ಮೇಲೆ ಪ್ರಭಾವವನ್ನುಂಟು ಮಾಡುವರೋ, ಅವರೇ ನಿಮ್ಮ ಅಂತರಂಗದ ನಾಯಕರಾಗುತ್ತಾರೆ. ಈ ಮಹಾ ಜ್ಞಾನಿಗಳು ನನ್ನ ಮೇಲೆ ಎಷ್ಟು ಪ್ರಭಾವ ಬೀರಿದ್ದರೆಂದರೆ ಪ್ರತಿಯೊಂದು ಸಂದರ್ಭದಲ್ಲಿಯೂ ನಾನು ಯೋಚಿಸುತ್ತಿದ್ದೆ, 'ಈ ಮಹಾ ಗುರುಗಳು ಹೇಗೆ ವರ್ತಿಸುತ್ತಿದ್ದರು?' ಎಂದು. ಉದಾಹರಣೆಗೆ ನನಗೆ ಭಯ ಉಂಟಾದಾಗ ನಾನು ನೆನಪು ಮಾಡಿಕೊಳ್ಳುತ್ತಿದ್ದೆ, 'ಅಣ್ಣಾಮಲೈ ಸ್ವಾಮಿಗಳು ಈ ಭಯವನ್ನು ಹೇಗೆ ಎದುರಿಸಬಹುದು? ಅವರು ಅದರ ಬಗ್ಗೆ ಚಿಂತಿಸುವುದಿಲ್ಲ. ಅವರು ಒಬ್ಬ ಜ್ಞಾನಿ. ನಾನೂ ಸಹ ಅವರಂತೆಯೇ ಇರೋಣ' ಎಂದು.

ನನ್ನ ಅಂತರಂಗವು ಈ ಶ್ರೇಷ್ಠ ಜ್ಞಾನಿಗಳಿಂದ ಎಷ್ಟು ಪ್ರಚೋದನೆಗೊಂಡು, ಪ್ರಭಾವಗೊಳಗಾಗಿತ್ತೆಂದರೆ, ನನ್ನ ಜೀವನದ ಪ್ರತಿ ಹೆಜ್ಜೆ ಇಡುವಾಗಲೂ ನಾನು ಆಲೋಚಿಸುತ್ತಿದ್ದೆ, 'ಅವರು ಹೇಗೆ ವರ್ತಿಸುತ್ತಾರೆ? ನಾನು ಹಾಗೆಯೇ ವರ್ತಿಸೋಣ' ಎಂದು. ನನ್ನ ಅಂತರಂಗವು ಆ ಎಳೆಯ ವಯಸ್ಸಿನಲ್ಲಿ ಬಹಳ ಶುದ್ಧವಾಗಿತ್ತು ಹಾಗೂ ನನಗೆ ಜ್ಞಾನಿಗಳನ್ನು ಬಿಟ್ಟರೆ ಬೇರೆ ನಾಯಕರಿರಲಿಲ್ಲ. ಪ್ರತಿ ಹೆಜ್ಜೆಯಲ್ಲಿಯೂ, 'ಅವರು ಹೇಗೆ ನಡೆದುಕೊಳ್ಳುತ್ತಾರೆ? ನಾನೂ ಹಾಗೆಯೇ ನಡೆದುಕೊಳ್ಳೋಣ. ಅವರು ಏನು ಮಾಡುತ್ತಾರೆ? ನಾನೂ ಅದನ್ನೇ ಮಾಡೋಣ' ಎಂದು ಯೋಚಿಸುತ್ತಿದ್ದೆ.

ರುದ್ರಭೂಮಿಗಳಲ್ಲಿ ಕಾಲ್ನಡಿಗೆ

ನಾನು ಅರುಣಾಚಲ ಬೆಟ್ಟಕ್ಕೆ ಪ್ರದಕ್ಷಿಣೆ ಮಾಡುತ್ತಿದ್ದೆ. ಅದು ಬೆಟ್ಟದ ಸುತ್ತಲು 12 ಕಿಲೋ ಮೀಟರ್‌ಗಿಂತಲೂ ಹೆಚ್ಚಾಗಿದೆ. ನಾನು ರಾತ್ರಿಯಲ್ಲಿ ಹೊತ್ತುಮೀರಿ ಹೋಗುತ್ತಿದ್ದೆ. ಸ್ವಲ್ಪ ಭಯವಾದಾಗ ನಾನು ಯೋಚಿಸುತ್ತಿದ್ದೆ, 'ಅಣ್ಣಾಮಲೈ ಸ್ವಾಮಿಗಳು ಹೇಗೆ ವರ್ತಿಸುತ್ತಾರೆ? ಅವರು ಭಯದ ಬಗ್ಗೆ ಚಿಂತಿಸುವುದಿಲ್ಲ. ನಾನೂ ಹಾಗೆಯೇ ಇರೋಣ' ಎಂದು.

ಒಂದು ಘಟನೆಯನ್ನು ನಿಮಗೆ ಹೇಳುತ್ತೇನೆ:

ಒಂದು ರಾತ್ರಿ ನಾನು ಬೆಟ್ಟದ ಸುತ್ತಲೂ
ಹೋಗುವಾಗ ಜೋರಾಗಿ ಮಳೆ ಬರುತ್ತಿತ್ತು. ನನಗೆ
ಆ ಭಾರಿ ಮಳೆ, ಮಿಂಚು, ಗುಡುಗುಗಳನ್ನು ನೋಡಿ
ಸ್ವಲ್ಪ ಭಯವಾಯಿತು. ಕೂಡಲೇ ನಾನು
ಯೋಚಿಸಿದೆ, 'ಅಣ್ಣಾಮಲೈ ಸ್ವಾಮಿಗಳು ಹೇಗೆ
ವರ್ತಿಸುತ್ತಾರೆ? ಅವರು ಇವುಗಳ ಬಗ್ಗೆ
ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಸುಮ್ಮನೆ
ನಡೆಯುತ್ತಾರೆ. ನಾನೂ ಹಾಗೆಯೇ ಮಾಡೋಣ'
ಎಂದು.

ನಾನು ಆ ಊರಿನ ಸ್ಮಶಾನದ ಬಳಿ ನಡೆಯುತ್ತಿದ್ದೆ.
ಭಾರತದಲ್ಲಿ ಶವದಹನ ಹಾಗೂ ಶವವನ್ನು
ಹೂಳುವುದು ಒಂದೇ ಸ್ಮಶಾನದಲ್ಲಿ ಮಾಡುತ್ತಾರೆ.
ನಾನು ಆ ಹಾದಿಯಲ್ಲಿ ನಡೆಯುತ್ತಿದ್ದೆ. ಏಕೆಂದರೆ,
ಬೆಟ್ಟದ ಪ್ರದಕ್ಷಿಣೆಯ ಹಾದಿಯು ಅದರ ಮೂಲಕವೇ
ಇದ್ದಿತು.

ಇದ್ದಕ್ಕಿದ್ದಂತೆ ಒಂದು ನಾಯಿ ಏನನ್ನೋ ಕಚ್ಚಿ ತಿನ್ನುತ್ತಿದ್ದುದನ್ನು ನೋಡಿದೆ. ನಾನು ನಾಯಿಯ ಬಳಿ ಹೋದಾಗ, ನಾಯಿಯು ನನ್ನನ್ನು ಕಂಡು ಬೊಗಳಿತು. ಮೊದಲಿಗೆ ನನ್ನಲ್ಲಿ ಭಯ ಉಂಟಾದಾಗ ನಾನು ಯೋಚಿಸಿದೆ, 'ಅಣ್ಣಾಮಲೈ ಸ್ವಾಮಿಗಳು ಈಗ ಹೇಗೆ ವರ್ತಿಸುತ್ತಿದ್ದರು? ಅವರು ಚಿಂತಿಸುವುದಿಲ್ಲ. ನಾನೂ ಸಹ ಸುಮ್ಮನೆ ಮುಂದಕ್ಕೆ ನಡೆಯೋಣ' ಎಂದುಕೊಂಡು ನಡೆಯಲಾರಂಭಿಸಿದೆ. ನಾನು ಮುಂದಕ್ಕೆ ಹೋದಾಗ ನಾಯಿಯೂ ಹೆದರಿ ಓಡಿಹೋಯಿತು.

ನಾನು ಹತ್ತಿರ ಹೋದಾಗ, ಅದೊಂದು
ಸಂಪೂರ್ಣವಾಗಿ ಕೊಳೆತಿದ್ದ ಶವವೆಂದು ತಿಳಿದೆ.
ಮಳೆಗೆ ಅದು ಹೊರಬಂದು ರಸ್ತೆಯ ಮೇಲಿತ್ತು.

ಒಬ್ಬ ಹನ್ನೆರಡೋ ಹದಿಮೂರೋ ವರ್ಷದ
ಬಾಲಕನಿಗೆ, ಒಬ್ಬನೇ ಆ ಮಧ್ಯರಾತ್ರಿಯಲ್ಲಿ
ನಡೆಯುತ್ತಿದ್ದಾಗ, ನಾಯಿಯ ಬಾಯಿಯಲ್ಲಿ ಶವದ
ತಲೆ ಇದ್ದುದರಿಂದ, ತಲೆ ಇಲ್ಲದ ಶವವನ್ನು
ನೋಡಿದಾಗ ಏನಾಗಬಹುದೆಂದು ಊಹಿಸಿಕೊಳ್ಳಿರಿ.

ಭಯವು ಆರಂಭವಾಯಿತಾದರೂ ಅದು ನನ್ನ ಅಸ್ತಿತ್ವವನ್ನು ಸಹ ಸಂಪೂರ್ಣವಾಗಿ ತಲುಪಲಿಲ್ಲ. ಆಘಾತ, ಭಯದ ಹೊಡೆತವೂ ಸಂಪೂರ್ಣವಾಗಿ ಆಗಲಿಲ್ಲ. ಮೊದಲ ಆಲೋಚನೆಯ ಮೇಲೆ ಬರುತ್ತಿದ್ದಂತೆಯೇ ನಾನು ಗಾಢವಾದ ಅರಿವಿನಿಂದ, 'ಅಣ್ಣಾಮಲೈ ಸ್ವಾಮಿಗಳು ಈಗ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಅವರು ಸುಮ್ಮನೆ ನಡೆದು ಹೋಗುತ್ತಿದ್ದರು. ನಾನೂ ಹಾಗೆಯೇ ಮಾಡೋಣ' ಎಂದು ಆಲೋಚಿಸಿದೆ.

ನಾನು ನಡೆಯುವುದನ್ನು ಮುಂದುವರೆಸಿದೆ. ಅಷ್ಟೇ.
ನಾನು ಮಾರ್ಗವನ್ನು ಬಳಸಿ ನಡೆದೆ. ಹಿಂದಿರುಗಿ
ನೋಡಲೂ ಇಲ್ಲ. ಒಂದು ನೀರಿನ ಗುಳ್ಳೆಯಂತೆ
ಆರಂಭವಾಗಲಿದ್ದ ಭಯದ ಹೊಡೆತವು
ತೆರೆದುಕೊಳ್ಳಲು ಇಲ್ಲ, ನನ್ನ ದೇಹವನ್ನು ತಲುಪಲೂ
ಇಲ್ಲ. ಭಯದಿಂದಾಗುವ ನಡುಕ ಅಥವಾ ಕಂಪನವು
ನನ್ನ ದೇಹದಲ್ಲಿರಲೇ ಇಲ್ಲ. ಅದು ಸುಮ್ಮನೆ
ಸತ್ತುಹೋಯಿತು.

ನನ್ನ ಇಡೀ ಪ್ರಜ್ಞಾಪೂರಿತ ಅಂತರಂಗವು ಗಾಢವಾಗಿ ತಯಾರಾಗಿದ್ದಿತು. ಆದ್ದರಿಂದಲೇ, ಬರಿಯ ಒಂದು ಸಣ್ಣ ಪ್ರೇರಣೆಯೇ ನನ್ನನ್ನು ಆ ಅನುಭವಕ್ಕೆ ಹಾಕಲು ಸಾಕಾಯಿತು. ಇದನ್ನೇ ನಾನು 'ಜೀವನ್ಮುಕ್ತಿ' ಎನ್ನುವುದು.

ಗಾಢವಾದ, ಮುಗ್ಧ ಅಂತರಂಗ

ಗುರುಗಳ ಹಾವಭಾವಗಳನ್ನು ಗಮನಿಸಿ ಅದನ್ನು
ಅಳವಡಿಸಿಕೊಂಡು ಜೀವಿಸಿದಾಗ, ನೀವು
ಜೀವನ್ಮುಕ್ತರಾಗಿ ಬದುಕುವಿರಿ.

ನನ್ನ ಅಂತರಂಗಕ್ಕೆ ಯಾವುದೇ ಆಲೋಚನೆಯು
ಬಂದಾಗ, ಅದು ಬಟ್ಟೆಗೋ, ಆಹಾರಕ್ಕೋ ಅಥವಾ
ಮತ್ತಿತರ ಯಾವುದಕ್ಕೋ ಸಂಬಂಧಿಸಿದುದೇ ಆದರೂ
ನಾನು ಆಲೋಚಿಸುತ್ತಿದ್ದ ಮೊದಲ ವಿಷಯವೆಂದರೆ,
'ಅಣ್ಣಾಮಲೈ ಸ್ವಾಮಿಗಳು ಹೇಗೆ ವರ್ತಿಸುವರು?
ಸಹಜವಾಗಿ ಅವರಿಗೆ ಯಾವ ಆಸೆಯೂ
ಇರುವುದಿಲ್ಲ. ಹಾಗಿದ್ದಲ್ಲಿ ಅದನ್ನು
ಮರೆತುಬಿಡೋಣ!' ಎಂದು.

ನನಗೆ ಧ್ಯಾನಿಸಲು ಅಥವಾ ಗಿರಿ ಪ್ರದಕ್ಷಿಣೆ ಮಾಡಲು ಸ್ವಲ್ಪ ಸೋಮಾರಿತನ ಉಂಟಾದರೆ, ನಾನು ಆಲೋಚಿಸುತ್ತಿದ್ದೆ, 'ಅಣ್ಣಾಮಲೈ ಸ್ವಾಮಿಗಳು ಹೇಗೆ ಯೋಚಿಸುತ್ತಾರೆ? ಈ ಸಂದರ್ಭವನ್ನು ಅವರು ಹೇಗೆ ನಿಭಾಯಿಸುತ್ತಾರೆ? ಅವರು ಸಹಜವಾಗಿಯೇ ಈ ಸೋಮಾರಿತನದ ಬಗ್ಗೆ ಚಿಂತಿಸುವುದಿಲ್ಲ. ಅವರು ಸುಮ್ಮನೆ ಎದ್ದು ಧ್ಯಾನಿಸುತ್ತಾರೆ, ಅಷ್ಟೇ! ಆದ್ದರಿಂದ ಹಾಗೆ ಮಾಡೋಣ!' ಹೀಗೆ ಬೆಳಗಿನಿಂದ ರಾತ್ರಿಯವರೆಗೆ ಸತತವಾಗಿ ಈ ಗುರುಗಳು ಪರಾಮರ್ಶನರಾದರು. ಅವರು ನನ್ನ ಜೀವದ ಕೇಂದ್ರಬಿಂದುವಾದರು.

ಒಮ್ಮೆ ನಾನು ಅಣ್ಣಾಮಲೈ ಸ್ವಾಮಿಗಳನ್ನು ಕೇಳಿದೆ, 'ನಾನು ಕನಸಿನಲ್ಲಿ ದೇವಿಯನ್ನು ಕಂಡೆ. ನಿಮ್ಮ ಕನಸಿನಲ್ಲೂ ಆಕೆಯನ್ನು ಕಾಣೆವಿರೇ?' ಎಂದು, ಅವರು, 'ಇಲ್ಲ, ನನಗೆ ಕನಸುಗಳು ಬೀಳುವುದಿಲ್ಲ'

ಎಂದರು. ನನಗೆ ದಿಗ್ಭ್ರಮೆಯಾಯಿತು. 'ನಿಮಗೆ ಕನಸು
ಬೀಳುವುದಿಲ್ಲವೆ! ಹಾಗಾದರೆ ನನಗೆ ಕನಸುಗಳು
ಹೇಗೆ ಬೀಳಲು ಸಾಧ್ಯ!' ಎಂದುಕೊಂಡೆ.

ಆ ರಾತ್ರಿ ನನಗೇ ನಾನು ಹೇಳಿಕೊಂಡೆ, 'ಈಗ ಕನಸುಗಳಿಲ್ಲ, ಅಣ್ಣಾಮಲೈ ಸ್ವಾಮಿಗಳು ಹೇಳಿದ್ದಾರೆ, 'ಕನಸುಗಳು ಇಲ್ಲ' ಹಾಗಾಗಿ, 'ನನಗೆ ಕನಸುಗಳು ಬೀಳಲಾಗದು' ಎಂದು. ನಿಮಗೆ ಆಶ್ಚರ್ಯವಾಗಬಹುದು, ಆ ರಾತ್ರಿ ಒಂದು ಕನಸು ಆರಂಭವಾಗುತ್ತಿದ್ದಂತೆ ನಾನು ಕನಸಿನೊಳಗಿಂದಲೇ ಸ್ಪಷ್ಟವಾಗಿ ಹೇಳುತ್ತಿದ್ದೆ, 'ಇಲ್ಲ! ಅಣ್ಣಾಮಲೈ ಸ್ವಾಮಿಗಳಿಗೆ ಕನಸು ಬೀಳುವುದಿಲ್ಲ. ನನಗೆ ಹೇಗೆ ಕನಸು ಬೀಳಲು ಸಾಧ್ಯ?' ಎಂದು.

ಕನಸು ಮಾಯವಾಯಿತು. ಕನಸು ಸುಮ್ಮನೆ
ಮಾಯವಾಯಿತು. ಅಂತರಂಗವು ಅಷ್ಟು
ಪೂರ್ಣವಾಗಿ, ಅಷ್ಟು ಮುಗ್ಧವಾಗಿ, ಅಷ್ಟು
ನೇರವಾಗಿದ್ದರಿಂದ, ಅದು ನಿಜವಾಗಿಯೂ ಹಾಗೆಯೇ
ಆಯಿತು.

ನನಗೆ ಚಳಿಯೆನಿಸಿದಾಗ ಅಥವಾ ಮತ್ತಾವುದೇ ಸಂದರ್ಭದಲ್ಲಿ, ಅವರನ್ನು ನೆನಪಿಸಿಕೊಳ್ಳುತ್ತಿದ್ದೆ, 'ಅಣ್ಣಾಮಲೈ ಸ್ವಾಮಿಗಳು ಹೇಗೆ ವರ್ತಿಸುತ್ತಾರೆ? ಅವರು ಚಿಂತಿಸುವುದಿಲ್ಲ. ಹಾಗಾದರೆ ನಾನು ಚಿಂತಿಸುವುದು ಬೇಡ, ಅಷ್ಟೇ.' ಮುಂದಿನ ಪ್ರಶ್ನೆಗಳಾಗಲೀ ಚರ್ಚೆಗಳಾಗಲೀ ಉದ್ಭವಿಸುತ್ತಿರಲಿಲ್ಲ!

ಜೀವನ್ಮುಕ್ತಿಯ
ಸಂದೇಶ –
'ಗುರುಗಳು
ಹೇಗೆ
ವರ್ತಿಸುತ್ತಾರೆ?'

ಗುರುಗಳ
ದೇಹದ
ಅಭಿವ್ಯಕ್ತಿಯ
ಶೈಲಿಯನ್ನು
ಅಳವಡಿಸಿಕೊಂಡು
ಜೀವಿಸಿದಾಗ,
ಸಾಕ್ಷಾತ್ಕಾರವನ್ನೇ
ಜೀವಿಸುತ್ತೀರಿ.

ನೀವೂ ಈ
ಸರಳವಾದ ಶಕ್ತಿಯುತವಾದ ತಂತ್ರವನ್ನು
ಬಳಸಬಹುದು. ಅದೆಷ್ಟು ಸರಳವೆಂದರೆ, ನಿಮ್ಮ
ಮನಸ್ಸು ತಪ್ಪಿಸಿಕೊಳ್ಳಲು ಯಾವ ಕಾರಣವೂ
ಇರುವುದಿಲ್ಲ.

ಯಾವುದೇ ಸಂದರ್ಭದಲ್ಲಿ ನಿಮ್ಮನ್ನು ಕೇಳಿಕೊಳ್ಳಿರಿ, 'ಗುರುಗಳು ಹೇಗೆ ಪ್ರತಿಕ್ರಿಯಿಸುತ್ತಾರೆ? ಈ ಸಂದರ್ಭವನ್ನು ಗುರುಗಳು ಹೇಗೆ ಎದುರಿಸುತ್ತಾರೆ?' ಎಂದು. ಅದನ್ನೇ ಮಾಡಿರಿ. ಒಂದು ನೂತನ ದ್ವಾರವು ತೆರೆದುಕೊಳ್ಳುವುದನ್ನು ನೋಡುತ್ತೀರಿ. ಇದನ್ನೇ ನಾನು 'ಜೀವನ್ಮುಕ್ತಿ' ಎಂದು ಕರೆಯುವುದು. ನಿಮಗೆ ಮತ್ತಾವುದೂ ಬೇಡ. ಇದೊಂದೇ ಸಾಕು.

ನೀವು ಕುಳಿತಿದ್ದಾಗಲೂ ಆಲೋಚನೆಗಳು
ಮೇಲೆದ್ದರೆ, 'ಗುರುಗಳು ಕುಳಿತಿದ್ದರೆ, ಯಾವುದು
ಮೇಲೇಳುತ್ತದೆ? ಸ್ವಾಭಾವಿಕವಾಗಿಯೇ ಅದು ಮೌನ.
ಹಾಗಿದ್ದರೆ ಏಕೆ ಆಲೋಚಿಸುತ್ತಿದ್ದೀಯೋ?
ಮೌನವಾಗಿರು' ಎಂದು ನಿಮ್ಮ ಮನಸ್ಸನ್ನು ಕೇಳಿರಿ,
ಅಷ್ಟೇ, ಮತ್ತೇನೂ ಅಲ್ಲ.

> ಗುರುಗಳಿಂದ
> ಸಂಪೂರ್ಣವಾಗಿ
> ಪ್ರಭಾವಿತರಾಗಿದ್ದಾಗ
> ಸಂಬಂಧವು
> ಉಂಟಾಗುವುದು.

ನಿಮ್ಮ ಮಾನಸ್ಸು
'ಇಲ್ಲ, ಇಲ್ಲ, ಅದು
ನಿಜವೆಂದು ನನಗೆ
ಗೊತ್ತು. ನನಗದು
ತಿಳಿದಿದೆ, ಆದರೆ ಅದು
ತೀರ ಅತಿ' ಎಂದರೆ, 'ಗುರುಗಳ ಮನಸ್ಸು ಇದನ್ನು
ಹೇಳಿದರೆ ಅವರು ಹೇಗೆ ವರ್ತಿಸುತ್ತಾರೆ?' ಎಂದು
ಯೋಚಿಸಿರಿ. ಮಾನಸ್ಸನ್ನು ಆ ಕ್ಷಣದಲ್ಲಿ
ನಾಶಪಡಿಸಿಬಿಟ್ಟಿರುತ್ತಾರೆ! ಅಷ್ಟೇ, ಬಹಳ
ಸ್ಪಷ್ಟವಾಗಿರಿ.

ಈ ಒಂದು ಸಂದೇಶವನ್ನು ಸ್ವೀಕರಿಸಿರಿ ಹಾಗೂ
ಈ ಸಂದೇಶವು - ಜೀವನ್ಮುಕ್ತಿಯ ಸಂದೇಶವು ನಿಮ್ಮ
ಜೀವವಾಗಲಿ. ತಿಳಿಯಿರಿ, ಹತ್ತು ವರ್ಷ
ವಯಸ್ಸಿನಿಂದಲೂ ಅಣ್ಣಾಮಲೈ ಸ್ವಾಮಿಗಳಿಂದ
ಪ್ರೇರಣೆಗೊಂಡು, ಪ್ರಭಾವಿತನಾದಾಗಿನಿಂದಲೂ,
ನಾನು ಈ ತಂತ್ರವನ್ನು ಮಾಡತೊಡಗಿದೆ. ಆಗ ನನಗೆ
ಇದೊಂದು ಧ್ಯಾನತಂತ್ರವೆಂದೂ ತಿಳಿದಿರಲಿಲ್ಲ.

ಅದು ಸುಮ್ಮನೆ, 'ಅಣ್ಣಾಮಲೈ ಸ್ವಾಮಿಗಳು ಈ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಾರೆ?' ಎಂದು ಆರಂಭವಾಯಿತು. ಹುಡುಗನಾಗಿದ್ದಾಗ ನಮ್ಮ ಮನೆಯಲ್ಲಿ ನನ್ನ ಅಣ್ಣ ತಮ್ಮಂದಿರು ಅಥವಾ ಇತರ ಕುಟುಂಬವರ್ಗದವರು ಯಾವುದರ ಬಗ್ಗೆಯಾದರೂ ತಮ್ಮ ಪಾಲಿಗೆ ಹೊಡೆದಾಡುತ್ತಿದ್ದಾಗ ನಾನು ಆಲೋಚಿಸುತ್ತಿದ್ದೆ, 'ಅಣ್ಣಾಮಲೈ ಸ್ವಾಮಿಗಳು ಹೇಗೆ ವರ್ತಿಸುತ್ತಾರೆ? ಅವರು ಇದರ ಬಗ್ಗೆ ಚಿಂತಿಸುವುದೂ ಇಲ್ಲ! ಇದನ್ನು ಮರೆತುಬಿಡೋಣ. ಅವರೇ ಇಟ್ಟುಕೊಳ್ಳಲಿ' ಎಂದು ಅಷ್ಟೇ.