KAILASA Library/ಜೀವನ್ಮುಕ್ತಿ/ತೀವ್ರತೆಯೇ ತಪ್ಪದ ಮಾರ್ಗSign in
ಜೀವನ್ಮುಕ್ತಿ

ತೀವ್ರತೆಯೇ ತಪ್ಪದ ಮಾರ್ಗ

This text was machine-transcribed from the printed book and may contain errors. Select the words and choose “Report a mistake”.

ನಾವು ಮುನ್ನಡೆಸುವವರೋ,
ಹಿಂಬಾಲಿಸುವವರೋ, ನಾವು ಮಾಡುವ ಯಾವುದೇ
ಕಾರ್ಯಗಳಲ್ಲಿ ತೃಪ್ತಿಯುಂಟಾಗಲು ತೀವ್ರತೆಯು
ಅತ್ಯವಶ್ಯಕ.

ಒಂದು ಸಣ್ಣ ಕಥೆ:

ಒಬ್ಬ ಝೆನ್ ಗುರುವೂ ಆತನ ಶಿಷ್ಯನೂ, ಒಂದು ನದಿಯ ತೀರದಲ್ಲಿ ನಡೆಯುತ್ತಿದ್ದರು. ಶಿಷ್ಯನು, ‘ಗುರುವೇ ನನಗೆ ಜೀವನ್ಮುಕ್ತಿಯನ್ನು ನೀಡಿರಿ’ ಎಂದು ಹಿಂದೆ ಅನೇಕ ಬಾರಿ ಆಶಿಸಿದಂತೆಯೇ ಪುನಃ ಬೇಡಿದನು.

ಗುರುಗಳು ಹಠಾತ್ತನೆ ತಿರುಗಿ, ಶಿಷ್ಯನನ್ನು ಹಿಡಿದು ಆತನ ತಲೆಯನ್ನು ನೀರಿನಲ್ಲಿ ಮುಳುಗಿಸಿದರು. ದಿಗ್ಭ್ರಾಂತನಾದ ಶಿಷ್ಯನು ತಲೆಯನ್ನು ನೀರಿನಿಂದ ಮೇಲೆತ್ತಲು ಯತ್ನಿಸಿದನು. ಗುರುಗಳು ಆತನ ತಲೆಯನ್ನು ಭದ್ರವಾಗಿ ನೀರಿನಡಿಯಲ್ಲಿಯೇ ಹಿಡಿದಿದ್ದರು. ಈಗ ಶಿಷ್ಯನಿಗೆ ಉಸಿರಾಡಲೂ ಕಷ್ಟವಾಯಿತು. ಕಡೆಗೆ ಆಶ್ಚರ್ಯಗೊಂಡು ನಡುಗುತ್ತಿದ್ದ ಶಿಷ್ಯನನ್ನು ಗುರುಗಳು ಬಿಟ್ಟರು.

ಗುರುಗಳು, ‘ಈಗ ಹೇಳು, ನಿನ್ನ ತಲೆಯು ನೀರಿನಲ್ಲಿದ್ದಾಗ ಗಾಳಿಗಾಗಿ ಎಷ್ಟು ಹಾತೊರೆದೆಯೋ ಅಷ್ಟೇ ತೀವ್ರತೆಯಿಂದ ಜೀವನ್ಮುಕ್ತಿಯು ಬೇಕೆಂದು ಅನ್ನಿಸುತ್ತಿದೆಯೇ?’ ಎಂದು ಶಿಷ್ಯನನ್ನು ಕೇಳಿದರು,

ಹಂಬಲವು ಅವಸರವಾದಾಗ, ಪ್ರಶ್ನೆಯು
ಶೋಧನೆಯಾದಾಗ ಮಾತ್ರ ಅಂತಿಮ ಸತ್ಯವನ್ನು
ಅನುಭವಿಸಲು ಸಾಧ್ಯ. ಜೀವನ್ಮುಕ್ತಿಯು ಸಿಗಲು
ಅತಿಮುಖ್ಯವಾಗಿ ಬೇಕಾದುದೇ ತೀವ್ರತೆ.

ತೀವ್ರತೆ ಎಂದರೇನು?

ನೋಡಿರಿ, ಸಾಮಾನ್ಯವಾಗಿ ಹೊರಪ್ರಪಂಚದಲ್ಲಿ
‘ನಾನಿದನ್ನು ಮಾಡಲಿಲ್ಲ, ಅದನ್ನು ಮಾಡಲಿಲ್ಲ’
ಎಂದು ಮುಂತಾಗಿ ನಮಗೆ ಏನೋ
ಅಶಾಂತಿಯಿರುತ್ತದೆ. ಅದೇ ಅಶಾಂತಿಯು
ಒಳಮುಖವಾದಾಗ, ಅದು ತೀವ್ರತೆಯಾಗುತ್ತದೆ.

ಏನಾಗುತ್ತಿದೆಯೆಂದು ನಿಮಗೆ ತಿಳಿದಿಲ್ಲ, ಏನು
ಮಾಡಬೇಕೆಂದು ಗೊತ್ತಿಲ್ಲ, ಆದರೆ ಒಳಗಿನ ಸ್ಥಿತಿಯ
ಬಗ್ಗೆ ಇರುವ ಗಾಢವಾದ ಅತೃಪ್ತಿಯನ್ನೇ ನಾನು
ತೀವ್ರತೆಯೆನ್ನುವುದು.

ತೀವ್ರತೆಯು
ಒಳಗಾಗಲೀ
ಹೊರಗಾಗಲೀ
ಸಂಘರ್ಷವನ್ನುಂಟು
ಮಾಡುವುದಿಲ್ಲ.

ನಾನು ಅತೃಪ್ತಿಯನ್ನು
ಏಕೆ ಬೋಧಿಸು-
ತ್ತಿರುವೆನೆಂದು ನೀವು
ಆಶ್ಚರ್ಯಪಡುತ್ತಿರಬಹುದು.
ನಾನು ತೃಪ್ತಿಯನ್ನು
ಬೋಧಿಸಬೇಕು, ಅಲ್ಲವೆ? ಹೇಳುತ್ತೇನೆ,
ಹೊರಪ್ರಪಂಚದಲ್ಲಿರುವ ಅತೃಪ್ತಿಯು
ಒಳಮುಖವಾಗಿ ತಿರುಗಬೇಕು. ಆಗ ಮಾತ್ರವೇ ಅದು
ತೃಪ್ತಿಯೆಡೆಗೆ ಕೊಂಡೊಯ್ಯುವುದು.

ಮೊದಲನೆಯದಾಗಿ, ಆಗಬೇಕಾದುದು ತೃಪ್ತಿಯಲ್ಲ, ಆದರೆ ದಿಕ್ಕುಬದಲಾವಣೆ, ಅಂದರೆ ಮಾನಸಿಕ ಕ್ರಾಂತಿ. ಅಶಾಂತಿಯು ತೀವ್ರತೆಯಾಗಬೇಕು. ಅದು ಬಾಹ್ಯಪ್ರಪಂಚದ ಕಡೆಗಿದ್ದು, ನಿಮ್ಮ ಪ್ರಜ್ಞೆಯು ಸತತವಾಗಿ ಬಾಹ್ಯಪ್ರಪಂಚದೆಡೆಗೆ ಸಾಗುತ್ತಿದ್ದರೆ, ಅದನ್ನು ಅಶಾಂತೆ ಎನ್ನುತ್ತೇವೆ. ಅದು ಒಳ ಪ್ರಪಂಚದೆಡೆಗೆ ಸಾಗುತ್ತಿದ್ದರೆ, ಅದನ್ನು ತೀವ್ರತೆ ಎನ್ನುತ್ತೇವೆ.

ತೀವ್ರತೆಯೆಂದರೆ, ಬಂಧನದಿಂದ
ಬಿಡುಗಡೆಹೊಂದಲು ಅಥವಾ ಒಳಪ್ರಪಂಚದೊಳಗೆ
ಬಿಡುಗಡೆ ಹೊಂದಲು ತಕ್ಷಣವೇ ಏನನ್ನಾದರೂ
ಮಾಡಲೇಬೇಕೆಂಬ ಕಾತರತೆ.

ತೀವ್ರತೆಯು ಒಂದು ಮನೋಭಾವನೆಯಲ್ಲ.
ತೀವ್ರತೆಯಲ್ಲಿ ಒಂದು ಭಾಗ ಮನೋಭಾವನೆಯೂ
ಇರಬಹುದು. ಆದರೆ ತೀವ್ರತೆಯನ್ನು
ಮನೋಭಾವನೆಯೆನ್ನಲಾಗುವುದಿಲ್ಲ. ಅದು
ಶಾಖದಂತೆ. ಕರಗಿ ಹೊರಬರುವ ತೀವ್ರತೆಯ
ಭಾಗವನ್ನು ಮನೋಭಾವನೆಯೆಂದು ಕರೆಯಬಹುದು.
ಉದಾಹರಣೆಗೆ, ನೀವು ನಿಮ್ಮೊಂದಿಗೇ ತೀವ್ರತೆಯಿಂದ
ಏಕೀಕೃತರಾದಾಗ, ನಿಮ್ಮ ಒಂದು ಭಾಗವು
ಕರಗುತ್ತದೆ. ನಿಮ್ಮ ಹೃದಯವು ಕರಗಿದೆ
ಎಂದುಕೊಂಡರೆ, ಅದನ್ನು ಮನೋಭಾವನೆ
ಎನ್ನಬಹುದು. ತೀವ್ರತೆಯಲ್ಲಿ ಕೇವಲ ಹೃದಯವೇ
ಅಲ್ಲದೆ ತಾರ್ಕಿಕ ಬುದ್ಧಿಯೂ, ಅಸ್ತಿತ್ವವೂ
ಕರಗುತ್ತದೆ. ಮನೋಭಾವನೆಯು ತೀವ್ರತೆಯ ಒಂದು
ಪಾರ್ಶ್ವಪರಿಣಾಮ.

ನಿಮ್ಮ ತೀವ್ರತೆಯು ಯಾವುದರ ಬಗ್ಗೆ
ಇರಬೇಕೆಂದು ಚಿಂತಿಸಬೇಡಿ. 'ಯಾವುದರತ್ತ' ಎಂದು
ಚಿಂತಿಸಬೇಡಿ. ಅದು ನಿಮ್ಮ ಗುಣವೇ ಆಗಬೇಕು.
ನೀವೇನೇ ಮಾಡಿದರೂ ಯಾರನ್ನೇ ಆಗಲೀ,
ಯಾವುದನ್ನೇ ಆಗಲೀ ಸ್ಪರ್ಶಿಸಿದರೂ, ಆ
ಸ್ಪರ್ಶದಲ್ಲೂ ತೀವ್ರತೆಯಿರಲಿ'.

ಮಾತನಾಡುತ್ತಿದ್ದ ರೆ, ಅದರಲ್ಲೂ ತೀವ್ರತೆಯಿರಲಿ. ನಿಮ್ಮ ಬಾಂಧವ್ಯಗಳಲ್ಲಿ, ನಿರ್ಣಯಗಳಲ್ಲಿ, ನೆನಪುಗಳಲ್ಲಿ, ಆಲೋಚನೆಗಳಲ್ಲಿ, ಆಸೆಗಳಲ್ಲಿ, ಭಯಗಳಲ್ಲಿಯೂ ಕೂಡ ಈ ಕ್ಷಣದಿಂದ ತಪ್ಪಿಸಿಕೊಳ್ಳದಷ್ಟು ತೀವ್ರವಾಗಿರಿ. ಇದನ್ನೇ ನಾನು ತೀವ್ರತೆಯೆನ್ನುವುದು.

ತೀವ್ರತೆಯೆಂದರೆ, ಹೊರಗೂ ಒಳಗೂ ಘರ್ಷಣೆ ಇಲ್ಲದೆ ಪಸರಿಸುತ್ತಿರುವ ಚೈತನ್ಯ. ತೀವ್ರತೆಯೆಂದರೆ ತೀವ್ರವಾಗಿ ನಿಮ್ಮೊಳಗೇ ಇರುವುದು.

ತೀವ್ರತೆಯು ಒಳಗಾಗಲೀ ಹೊರಗಾಗಲೀ
ಸಂಘರ್ಷವನ್ನುಂಟುಮಾಡುವುದಿಲ್ಲ. ಅದು
ಸುಗಮವಾಗಿ ಹರಿದರೂ ಪ್ರಬಲವಾಗಿ ಹರಿಯುತ್ತದೆ.

ನದಿಯಂತೆ ಸುಗಮವಾಗಿ ಹರಿಯುತ್ತಿದ್ದರೆ ತೀವ್ರತೆ ಇರಲಾರದು, ಕಲ್ಲುಬಂಡೆಯಂತಿದ್ದರೆ

ತೀವ್ರವಾಗಿದ್ದರೆ ನಿರಾಳವಾಗಿ ಹರಿಯಲಾಗದು ಎಂದು
ಸಾಮಾನ್ಯವಾಗಿ ಭಾವಿಸುತ್ತೇವೆ. ಹಾಗಲ್ಲ,
ತೀವ್ರತೆಯು ಭರದಿಂದ ಹರಿಯುವ ಪ್ರವಾಹದಂತೆ.

ಕೆಲವರು ತೀವ್ರತೆಯಿಂದ ಪ್ರ ತಿ ಕ್ಷ ಣ ವೂ
ಸಂಘರ್ಷಗಳನ್ನು ಹುಟ್ಟಿಸುವುದನ್ನು ನಾನು
ನೋಡಿದ್ದೇನೆ! ನೀವು ಅವರಿಗೆ ಏನು ಮಾಡಲು
ಹೇಳಿದರೂ, ಅವರು ಘರ್ಷಣೆಯನ್ನುಂಟು ಮಾಡಲು
ಸಿದ್ಧರಾಗಿರುತ್ತಾರೆ.

ಒಂದು ಸಣ್ಣ ಕಥೆ:

ಒಬ್ಬ ಖೈದಿಯು ಹನ್ನೆರಡು ವರ್ಷಗಳ ನಂತರ
ಕಾರಾಗೃಹದಿಂದ ತಪ್ಪಿಸಿಕೊಂಡು ತನ್ನ ಮನೆಗೆ
ಹೋದನು. ಆತನ ಮಡದಿಯು ಬಾಗಿಲು
ತೆರೆದೊಡನೆಯೇ ಆತನ ಮೇಲೆ ರೇಗಿದಳು. ‘ಇಷ್ಟು
ತಡವಾಗಿ ಬರಲು ನಿನಗೆಷ್ಟು ಧೈರ್ಯ?’ ನೀನು
ಕಾರಾಗೃಹದಿಂದ ತಪ್ಪಿಸಿಕೊಂಡು ಇಪ್ಪತ್ತನಾಲ್ಕು
ಗಂಟೆಗಳಾಯಿತು. ಎಲ್ಲಿಗೆ ಹೋಗಿದ್ದೆ? ನೇರವಾಗಿ
ಮನೆಗೆ ಬರಬೇಕಿತ್ತು!’

ಆಕೆಯ ಚಿಂತೆಯೆಲ್ಲಾ ಆತನು ತಪ್ಪಿಸಿಕೊಂಡು
ನೇರವಾಗಿ ಮನೆಗೇಕೆ ಬರಲಿಲ್ಲವೆಂಬುದೇ ಆಗಿತ್ತು.
ಆಕೆಯು ಖಂಡಿತವಾಗಿಯೂ ತೀವ್ರತೆಯಿಂದಿದ್ದಳು,
ಆದರೆ ಘರ್ಷಣೆಗಳನ್ನು ಸೃಷ್ಟಿಸಲು ಮಾತ್ರ!

ನಿ ಜ ವಾ ದ ತೀವ್ರತೆಯು
ಘರ್ಷಣೆಗಳನ್ನುಂಟುಮಾಡುವುದಿಲ್ಲ. ಅದು
ಹರಿಯುತ್ತಿದ್ದರೂ ತೀವ್ರವಾಗಿರುತ್ತದೆ.

ತೀವ್ರತೆಯು ಒಗ್ಗೂಡಿಸುವಿಕೆ. ತೀವ್ರತೆಯು ಕೇಂದ್ರೀಕರಿಸುವಿಕೆ. ತೀವ್ರತೆಯು ಪ್ರಾಮಾಣಿಕತೆ.

ಸಾಮಾನ್ಯವಾಗಿ ತೀವ್ರತೆಯು ನಿಮಗೆ ಘನ ಭಾವನೆಯನ್ನು ನೀಡುತ್ತದೆ. ನೀವು ತೀವ್ರವಾಗಿದ್ದರೂ ಹರಿಯುವ ಸಾಮರ್ಥ್ಯವನ್ನು ಕಳೆದುಕೊಂಡಿರಬಹುದು, ಅಥವಾ ಹರಿಯುತ್ತಿದ್ದರೂ ತೀವ್ರತೆಯನ್ನು ಕಳೆದುಕೊಂಡಿರಬಹುದು.

ಅದು ಹೀಗೆ: ನೀವು ತೀವ್ರವಾಗಿದ್ದರೂ, ನಿಮ್ಮನ್ನು
ನಿಮ್ಮ ಅಹಂಕಾರವು ನಡೆಸುತ್ತಿರುವ ಕಾರಣ
ಹರಿಯುವ ಶಕ್ತಿಯನ್ನು ಕಳೆದುಕೊಂಡಿರಬಹುದು.
ನಿಮಗೆ ಬೇಕಾದುದನ್ನು ಸಾಧಿಸಲು ಖಚಿತ
ನಿರ್ಧಾರವಿದ್ದರೂ ಅದನ್ನು ಹೇಗೆ
ಸಾಧಿಸಬೇಕೆಂಬುದರ ಬಗ್ಗೆ ಕಠಿಣವಾದ
ಅಭಿಪ್ರಾಯಗಳಿರಬಹುದು. ಘಟನೆಗಳನ್ನು ನೀವು
ಯೋಜಿಸಿರುವುದಕ್ಕಿಂತಲೂ ವಿಶ್ವಶಕ್ತಿಯು ಹೆಚ್ಚು
ಸುಂದರವಾಗಿ ಹಾಗೂ ಪರಿಣಾಮಕಾರಿಯಾಗಿ
ನಡೆಯುವಂತೆ ಮಾಡಬಲ್ಲ ಸಾಧ್ಯತೆಯನ್ನು
ತಿಳಿಯಲಾರದೇ ಹೋಗುತ್ತೀರಿ.

ನಾನು ನನ್ನ ಶಿಷ್ಯರಿಗೆ, ‘ನಿಮ್ಮ ಕೈಲಾದಷ್ಟೂ
ದಕ್ಷತೆಯಿಂದ ಯೋಜನೆಯನ್ನು ಮಾಡಿರಿ, ಆಮೇಲೆ
ಕೈಬಿಡಿ. ಒಂದು ವೇಳೆ, ನಿಮ್ಮ ಯೋಜನೆಗಳೆಲ್ಲಾ
ಅಸ್ತವ್ಯಸ್ತವಾದಂತೆ ಕಂಡುಬರಬಹುದು – ಆಗಲೂ
ಕಳವಳಪಡಬೇಡಿರಿ. ನೀವು ಹೂಡಿದ
ಯೋಜನೆಗಿಂತಲೂ ಸುಂದರವಾದುದೇನೋ
ಮೂಡಿಬರಲಿದೆ’ ಎಂದು ಹೇಳುತ್ತೇನೆ.

ಇದರ ಇನ್ನೊಂದು ಸಾಧ್ಯತೆ ಎಂದರೆ, ನಿಮಗೆ
ಹರಿಯುವ ಶಕ್ತಿಯಿದ್ದರೂ ತೀವ್ರತೆಯನ್ನು
ಕಳೆದುಕೊಂಡಿರಬಹುದು. ತಮ್ಮ ದಾರಿಯಲ್ಲಿ
ಬರುವ ಪ್ರತಿಯೊಂದರಿಂದಲೂ ವ್ಯಗ್ರಗೊಂಡು
ಏಕಾಗ್ರತೆಯಿಲ್ಲದೆ ತಮ್ಮ ಶಕ್ತಿಯನ್ನು

> ಬದಲಾವಣೆಗೆ
> ನೀವು
> ತೆರೆದುಕೊಂಡಾಗ
> ಮಾತ್ರವೇ ನಿಮ್ಮ
> ದಾರಿಯನ್ನು
> ತೀವ್ರವಾಗಿ
> ಸಾಗರದೆಡೆಗೆ
> ಹರಿಯುವ
> ನದಿಯಂತೆ
> ಮಾಡಿಕೊಳ್ಳಬಹುದು.

ಹಾಳುಮಾಡಿಕೊಳ್ಳುವವರು ಇದರಲ್ಲಿ ಸೇರಿದ್ದಾರೆ.

ಅರ್ಥಮಾಡಿಕೊಳ್ಳಿರಿ, ನೀರು 100 ಡಿಗ್ರಿ ಸೆಲ್ಷಿಯಸ್‌ನಲ್ಲಿ ಮಾತ್ರ ಆವಿಯಾಗುತ್ತದೆ. 99 ಡಿಗ್ರಿಯಲ್ಲೂ ಅದು ನೀರೇ, ಆವಿಯಾಗುವುದಿಲ್ಲ. ಅದೇ ರೀತಿ ನಿಮ್ಮ ಸತ್ಯಾನ್ವೇಷಣೆಯಲ್ಲಿ ನೀವು ಸಮಗ್ರವಾಗಿಲ್ಲದಿದ್ದರೆ, ನಿಮ್ಮ ಚೈತನ್ಯಗಳೆಲ್ಲವೂ ಸಮಗ್ರವಾಗಿರುವುದಿಲ್ಲ. ಸಂಪೂರ್ಣ ಪರಿವರ್ತನೆಯು ಸಾಧ್ಯವಾಗುವುದಿಲ್ಲ.

ಏನನ್ನಾದರೂ ಕೈಗೆ ತೆಗೆದುಕೊಂಡರೆ ಅದನ್ನು
ತೀವ್ರತೆಯಿಂದ ಅನುಸರಿಸಿರಿ. ತೀವ್ರತೆಯೆಂದರೆ
ಕಠಿಣವಾಗಿದ್ದು ಬದಲಾವಣೆಗೆ ಅಥವಾ ನವೀನತೆಗೆ
ಆಸ್ಪದವೇ ಇಲ್ಲದಂತೆ ಮಾಡುವುದಲ್ಲ. ನೀವು
ಬದಲಾವಣೆಗೆ ತೆರೆದುಕೊಂಡಾಗ ಮಾತ್ರವೇ ನಿಮ್ಮ
ದಾರಿಯನ್ನು ಸಾಗರದೆಡೆಗೆ ತೀವ್ರವಾಗಿ ಹರಿಯುವ
ನದಿಯಂತೆ ಮಾಡಬಹುದು.

ಅಸ್ತಿತ್ವ ಎಂಬುದೇ ತೀವ್ರತೆ

ಅಸ್ತಿತ್ವ ಎಂದರೇನು? ಸಂಪೂರ್ಣವಾಗಿ, ಸಮಗ್ರವಾಗಿ, ಪೂರ್ಣ ಚೈತನ್ಯವನ್ನು ಪ್ರಕಟಿಸುತ್ತಿರುವುದನ್ನೇ ನಾನು 'ಅಸ್ತಿತ್ವ' ಎನ್ನುವುದು. ನಿಮ್ಮ ಅನುಭವ ಅಥವಾ ವ್ಯಕ್ತತೆಗಳಲ್ಲಿ ಭಾಗಶಃವಾಗಿದ್ದರೆ, ನೀವು ಕಪಟಿಯೆಂದೇ ಸ್ಪಷ್ಟವಾಗಿ ತಿಳಿಯಿರಿ.

ಕೋಪದಲ್ಲಿ ತೀವ್ರತೆ

ನಿಮ್ಮ ಕೋಪವು ಕಪಟವೇ. ಕೋಪವನ್ನು
ಹೊರತೋರಬೇಕೋ, ಬೇಡವೋ ಎಂಬುದನ್ನು
ನೀವೇ ನಿರ್ಣಯಿಸುವುದು. ನಿಮ್ಮ ಕೋಪವೂ ನಿಮ್ಮ
ತರ್ಕದೊಂದಿಗೆ ನೇರವಾಗಿ ಸಂಬಂಧಿತವಾಗಿದೆ.

ನಿಮ್ಮ ತರ್ಕಕ್ಕೆ ಮೀರಿ ಎಂದಿಗೂ ಕೋಪಗೊಳ್ಳುವುದಿಲ್ಲ. ಅದು ಯಾವಾಗಲೂ ನಿಮ್ಮ ತರ್ಕದಿಂದ ನಿಭಾಯಿಸಲ್ಪಡುತ್ತಿರುತ್ತದೆ. 'ಈ ಸನ್ನಿವೇಶದಲ್ಲಿ ನಾನು ಏನನ್ನಾದರೂ ಕಳೆದುಕೊಳ್ಳುತ್ತೇನೆಯೇ?' ಎಂದು ನೀವು ವಿಶ್ಲೇಷಣೆ ಮಾಡುತ್ತೀರಿ. ಏನನ್ನಾದರೂ ಕಳೆದುಕೊಳ್ಳುವುದು ಸ್ಪಷ್ಟವಾದರೆ, ನೀವು ಕೋಪವನ್ನು ತಡೆಹಿಡಿಯುತ್ತೀರಿ. ನಿಮಗೆ 'ನಾನೇನೂ ಕಳೆದುಕೊಳ್ಳುವುದಿಲ್ಲ. ಈ ವ್ಯಕ್ತಿಯ ಮೇಲೆ ನಾನು ರೇಗಿದರೂ ತೊಂದರೆಯಿಲ್ಲ, ಇವನೇನು ಮಾಡಬಲ್ಲ?' ಎಂಬುದು ಸ್ಪಷ್ಟವಾದರೆ ಅವಶ್ಯಕತೆಗಿಂತಲೂ ಹೆಚ್ಚಾಗಿಯೇ ಕೋಪವನ್ನು ತೋರಿಸುತ್ತೀರಿ. ಏನೇನು ಸಂಗ್ರಹಿಸಿಟ್ಟಿದ್ದಿರೋ ಅದೆಲ್ಲವನ್ನೂ ಹೊರಗೆಡಹುತ್ತೀರಿ!

ಹೊರತೋರುವುದೂ ಅಲ್ಲ, ಮುಚ್ಚಿಡುವುದೂ ಅಲ್ಲ - ಸುಮ್ಮನೆ ಇದ್ದು ಮುಕ್ತರಾಗಿರಿ

ಸ್ಪಷ್ಟವಾಗಿ ತಿಳಿಯಿರಿ, ತರ್ಕವು ಕೋಪವನ್ನು
ನಿಭಾಯಿಸಿದಾಗ, ಎರಡು ಬಗೆಯ
ಸಮಸ್ಯೆಗಳಿರುತ್ತವೆ. ಮೊದಲನೆಯದು
ಅನಾವಶ್ಯಕವಾಗಿ ಕೂಗಾಡುತ್ತೀರಿ ಇಲ್ಲವೇ
ಅನಾವಶ್ಯಕವಾಗಿ ಕೋಪವನ್ನು ತೋರಿಸುತ್ತೀರಿ.
ಎರಡನೆಯದಾಗಿ, ಕೋಪವನ್ನು ಹೊರಗೆ
ತೋರಿಸದಿದ್ದರೂ ಒಳಗೆ ಅದುಮಿಟ್ಟಿರುತ್ತೀರಿ.

ಮೊದಲನೆಯದಾಗಿ, ಹೊರತೋರುತ್ತಿದ್ದ ಪಕ್ಷದಲ್ಲಿ, ಅವಶ್ಯಕತೆಗಿಂತ ಅತಿ ಹೆಚ್ಚಾಗಿ ತೋರಿಸುತ್ತಿರುತ್ತೀರಿ. ಮತ್ತೆ ಹೊರತೋರದಿದ್ದರೆ ಮುಚ್ಚಿಟ್ಟಿರುತ್ತೀರಿ. ಸ್ಪಷ್ಟವಾಗಿ ತಿಳಿಯಿರಿ, ಎರಡೂ ಸರಿಯಲ್ಲ.

ಹೊರತೋರುವುದು, ಮುಚ್ಚಿಡುವುದು ಎರಡೂ
ಪ್ರಯೋಜನವಿಲ್ಲ. ‘ಹಾಗಾದರೆ ನಾವೇನು
ಮಾಡಬೇಕು?’ ಎಂದು ನೀವು ಕೇಳಬಹುದು. ಏನೂ
ಮಾಡಬೇಕಾಗಿಲ್ಲ. ಇರುವಂತೆಯೇ ಇರಿ.

ಆಧುನಿಕ ಯೋಗಿ ಜೆ. ಕೃಷ್ಣಮೂರ್ತಿಯವರು,
‘ಯಾವಾಗಲಾದರೂ ನಿಮ್ಮ ಮನೋಭಾವನೆಯು
ನಿಮ್ಮ ಕೈಮೀರಿ ಹೋದಾಗ, ಒಮ್ಮೆಯಾದರೂ ಆ
ಮನೋಭಾವನೆಗೆ ಎಡೆಕೊಡದೆ ಶರೀರವನ್ನು
ಅಲುಗಿಸದೆ ಸುಮ್ಮನಿರಲು ಸಾಧ್ಯವಾದರೆ, ಆ
ಮನೋಭಾವನೆಯು ನಿಮ್ಮನ್ನು ಬಿಟ್ಟುಹೋಗುತ್ತದೆ’
ಎಂದು ಸುಂದರವಾಗಿ ಹೇಳಿದ್ದಾರೆ.

ಯಾವುದೇ ಒಂದು ಮನೋಭಾವನೆಯಿಂದ
ತುಂಬಿಹೋಗಿದ್ದಾಗ ಇಲ್ಲವೇ ಅದರ ವಶರಾಗಿದ್ದರೆ
ಒಂದೇ ಒಂದು ಬಾರಿಯಾದರೂ ನೀವು ಶರೀರವನ್ನು
ಅಲುಗಾಡಿಸದೇ ಸುಮ್ಮನೆ ಕುಳಿತಿದ್ದರೆ, ತಕ್ಷಣವೇ
ಆ ಮನೋಭಾವನೆಯಿಂದ ವಿಮುಕ್ತರಾಗುತ್ತೀರಿ.
ಇದನ್ನು ಯಾವಾಗಲೂ ಅಭ್ಯಾಸ ಮಾಡಬೇಕೆಂದು
ನಾನು ಹೇಳುತ್ತಿಲ್ಲ. ಇಲ್ಲ, ಒಮ್ಮೆ, ಕೇವಲ ಒಂದು
ಬಾರಿ ಪ್ರಯತ್ನಿಸಿರಿ, ಆ ಭಾವನೆಯಿಂದಲೇ
ಮುಕ್ತರಾಗುತ್ತೀರಿ.

ತೀವ್ರತೆಯು ಕಾರ್ಯ ಸ್ವಭಾವಕ್ಕೆ ಅಧೀನವಾದುದಲ್ಲ

ತೀವ್ರತೆಯು ಕಾರ್ಯದ ಸ್ವಭಾವದ ಮೇಲೆ
ಆಧಾರಿತವಾಗಿಲ್ಲ. ಅದು ಒಂದು ಕೋಟ್ಯಾಂತರ
ರೂಪಾಯಿಯ ಕಂಪನಿಯನ್ನು ನಡೆಸುವಷ್ಟು
ಜಟಿಲವಾದುದಾಗಿಯೂ ಇರಬಹುದು. ಇಲ್ಲವೇ ನೆಲ
ಗುಡಿಸುವಷ್ಟೇ ಸರಳವಾಗಿರಬಹುದು. ‘ಯಾವುದು’
ಎಂಬುದು ಮುಖ್ಯವಲ್ಲ, ‘ಯಾವ ರೀತಿ’ ಎಂಬುದೇ
ಮುಖ್ಯ.

ನೀವೇನೇ ಮಾಡುತ್ತಿದ್ದರೂ ಅದನ್ನು
ಸಂಪೂರ್ಣತೆಯಿಂದ ಹಾಗೂ ತೀವ್ರತೆಯಿಂದ
ಮಾಡುತ್ತಾ, ಅದರಲ್ಲಿಯೇ ನೀವು ಕಳೆದುಹೋದರೆ,
ತೀವ್ರತೆಯ ಅರ್ಥವನ್ನು ಹಿಡಿದಂತೆಯೇ.

ಆ ಕಾರ್ಯದಲ್ಲಿ ‘ನೀವು’ ಕಳೆದುಹೋದರೆ
ವಿಶ್ವಶಕ್ತಿಯ ತುಟಿಗಳಲ್ಲಿರುವ ಕೊಳಲಿ-
ನಂತಾಗುತ್ತೀರಿ. ಕೊಳಲಿನೊಳಗೆ ಹೋಗುವ

> ಆಸಕ್ತಿಯು ಮನಸ್ಸಿನಿಂದ ಬರುತ್ತದೆ; ತೀವ್ರತೆಯು ವ್ಯಕ್ತಿತ್ವದಿಂದ ಉದ್ಭವಿಸುತ್ತದೆ.

ಗಾಳಿಯು ಮಧುರ-
ನಾದವಾಗಿ ಹೊರ-
ಬರುವಂತೆ, ವಿಶ್ವಶಕ್ತಿಯ
ಚೈತನ್ಯವು ನಿಮ್ಮ
ಮೂಲಕ ಹರಿಯಲು
ನೀವು ಒಂದು ಕಾಲುವೆ-
ಯಾಗುವಿರಿ. ಸಂಪೂರ್ಣವಾಗಿ ತೀವ್ರವಾಗಿರಿ. ಏನೇ
ಆದರೂ ಬಾಣವು ಗುರಿಮುಟ್ಟಲು ಇಷ್ಟೇ
ಬೇಕಾಗಿರುವುದು.

ಆಸಕ್ತಿ ಹಾಗೂ ತೀವ್ರತೆ

ಯಾವ ಗುಣವನ್ನು ತೀವ್ರತೆ ಎನ್ನಬಹುದು? ತೀವ್ರತೆಗೂ ಆಸಕ್ತಿಗೂ ವ್ಯತ್ಯಾಸವೇನು?

ಆಸಕ್ತಿಯು ಕಳೆದುಕೊಳ್ಳಬಹುದು, ಆದರೆ
ಎಂದಿಗೂ ತೀವ್ರತೆಯಲ್ಲ. ಆಸಕ್ತಿಯು ಮನಸ್ಸಿನಿಂದ
ಬರುತ್ತದೆ; ತೀವ್ರತೆಯು ಅಸ್ತಿತ್ವದಿಂದ
ಉದ್ಭವಿಸುತ್ತದೆ.

ಹೆಚ್ಚು ಕಡಿಮೆ ಕೆಲಕಾಲದ ನಂತರ ನಿಮ್ಮ
ಆಸಕ್ತಿಯು ಬೇಸರ ತರಬಹುದು. ಆದರೆ ತೀವ್ರತೆಯು
ಆತ್ಮದಾಹ. ಅದು ತರ್ಕಾಧಾರವನ್ನು ಮೀರಿದುದು.
ತೀವ್ರತೆಯು ಅಂತರಾಳದ ಕರೆ. ಅದಕ್ಕಾಗಿ
ತವಕಿಸಿದಷ್ಟೂ ಆ ದಾಹವು ಹೆಚ್ಚು ಹೆಚ್ಚು
ಬೆಳೆಯುತ್ತದೆ, ಅಗ್ನಿಯು ಹೆಚ್ಚು ಹೆಚ್ಚು
ಪ್ರಜ್ವಲಿಸುತ್ತದೆ.

ದೀಪಕ್ಕೂ ಲೇಸರ್‌ಗೂ ವ್ಯತ್ಯಾಸವನ್ನು ನೋಡಿರಿ.
ಎರಡೂ ಬೆಳಕಿನ ಕಿರಣಗಳೇ, ಆದರೂ ಲೇಸರ್
ಒಂದೇ ಆವರ್ತನಗಳ್ಳುಳ್ಳ ಬೆಳಕಿನ ಕಿರಣಗಳ
ಕೂಡಿರುವಿಕೆಯಿಂದ ಮೂಡುವಂತಹದು.

ತೀವ್ರತೆಯ ಪ್ರಭಾವದಿಂದ ಲೇಸರ್
ಲೋಹದಲ್ಲೂ ರಂಧ್ರವನ್ನು ಸುಡಬಲ್ಲದು. ಅದೇ
ವೇಳೆಯಲ್ಲಿ ಅದು ನಿಯಂತ್ರಿತ ಕೇಂದ್ರೀಕೃತ
ಶಕ್ತಿಯೂ ಹೌದು. ಹಾಗಾಗಿಯೇ ಅದನ್ನು ಕಣ್ಣಿನ
ಪೊರೆ ತೆಗೆಯುವಂತಹ ಸೂಕ್ಷ್ಮ ಕೆಲಸಕ್ಕೂ
ಉಪಯೋಗಿಸಬಹುದಾಗಿದೆ.

ಮರುಭೂಮಿಯಲ್ಲಿ ನಿಮ್ಮ ಬಾಯಾರಿಕೆಯು
ನಿಜವಾಗಿಯೂ ತೀವ್ರವಾದರೆ ಒಂದು ಲೋಟ
ನೀರಿಗಾಗಿ ಪ್ರಾಣವನ್ನೇ ಒತ್ತೆಯಿಡುವಿರಿ.
ಸಾಕ್ಷಾತ್ಕಾರದ ದಾಹವು ಅಷ್ಟೇ ತೀವ್ರವಾದರೆ
ಸತ್ಯಾನ್ವೇಷಣೆಗಾಗಿ ಪ್ರಾಣವನ್ನೇ ಅರ್ಪಿಸಲು
ಸಿದ್ಧರಾಗುವಿರಿ.

ಒಂದು ಸುಂದರ ಝೆನ್ ಕಥೆ:

ಒಬ್ಬ ಶಿಷ್ಯನು ಝೆನ್ ಬಗ್ಗೆ ಕಲಿಯುವುದಕ್ಕಾಗಿ ಝೆನ್ ಗುರುವಿನ ಬಳಿ ಬಂದನು. ಗುರುವು ಆತನಿಗೆ 'ಒಂದು ಕೈ ಚಪ್ಪಾಳೆಯ ಸದ್ದನ್ನು ಕೇಳು' ಎಂದು ಹೇಳಿದನು.

ಶಿಷ್ಯನು ಮೂರು ವರ್ಷ ಪ್ರಯತ್ನಪಟ್ಟರೂ ಏನೂ
ಪ್ರಯೋಜನವಾಗಲಿಲ್ಲ. ಗುರುವು ಹೇಳಿದುದನ್ನು
ಮಾಡಲಾಗಲಿಲ್ಲವೆಂದು ಆತನು
ನಿರುತ್ಸಾಹಕ್ಕೊಳಗಾದನು. ಆತನು ಕಣ್ಣೀರುಡುತ್ತಾ
ಗುರುವಿನ ಬಳಿ ಬಂದು ತನಗೆ ಹೇಳಿದುದ್ದನ್ನು
ಮಾಡಲಾಗದಿದ್ದದ್ದರಿಂದ ತಾನು
ಹಿಂದಿರುಗುವುದಾಗಿ ಹೇಳಿದನು.

ಗುರುವು 'ಇನ್ನೊಂದು ವಾರ ತಡೆ. ನಿರಂತರ ಧ್ಯಾನ ಮಾಡು' ಎಂದನು. ಶಿಷ್ಯನು, ಇನ್ನೊಂದು ವಾರ

ಧ್ಯಾನ ಮಾಡಿದನು. ಏನೂ ಆಗಲಿಲ್ಲ. ಗುರುವು
‘ಇನ್ನೂ ಐದು ದಿನ ಮಾಡು’ ಎಂದನು. ಶಿಷ್ಯನು
ಹಾಗೆಯೇ ಮಾಡಿದಾಗಲೂ ಏನೂ ಆಗಲಿಲ್ಲ.
ಶಿಷ್ಯನು ಹತಾಶನಾಗಿ ತನ್ನನ್ನು ಹೋಗಲು
ಅನುಮತಿಸುವಂತೆ ಬೇಡಿದನು. ಆಗ ಗುರುವು,
‘ಇನ್ನೂ ಮೂರು ದಿನ ಧ್ಯಾನ ಮಾಡು, ಜೀವನ್ಮುಕ್ತಿ
ದೊರಕದಿದ್ದರೆ ಪ್ರಾಣವನ್ನು ಕಳೆದುಕೊಳ್ಳುವುದೇ
ಲೇಸು’ ಎಂದನು.

ಎರಡನೆಯ ದಿನವೇ ಶಿಷ್ಯನಿಗೆ ಜ್ಞಾನೋದಯವಾಯಿತು.

ನಿಮ್ಮ ಇಡೀ ಅಸ್ತಿತ್ವವೇ ಸತ್ಯಾನ್ವೇಷಣೆಗಾಗಿ ತೀವ್ರವಾಗಿ ತಪಿಸುತ್ತಿದ್ದಾಗ, ಗುರುವಿನ ಆದೇಶವನ್ನು ಹಾಗೆಯೇ ಹೀರಿಕೊಳ್ಳುತ್ತೀರಿ. ಪರಿವರ್ತನೆಯ ಚಮತ್ಕಾರವು ಆಗಲೇಬೇಕು. ಆಗ ಮಾತ್ರವೇ ಆತನನ್ನು ಸ್ವೀಕರಿಸಿ ತೆರೆದುಕೊಳ್ಳಬಲ್ಲಿರಿ. ಅಲ್ಲಿಯವರೆಗೂ ಅದು ಕೇವಲ ಆಸಕ್ತಿಯೇ.

ಏನೇ ಮಾಡಿದರೂ ತೀವ್ರವಾಗಿರಿ

ಧ್ಯಾನದ ಗೂಢ ವಿಜ್ಞಾನವನ್ನೊಳಗೊಂಡ
‘ತಂತ್ರ’ದಲ್ಲಿ ಹೇಳುವಂತೆ - ಸತ್ಯವನ್ನರಿಯಲು
ಬೇಕಾದುದೊಂದೇ - ತೀವ್ರತೆ. ನೀವೇನಾಗಿದ್ದೀರೋ,
ಏನು ಮಾಡುತ್ತೀರೋ ಅದರಲ್ಲಿ ಸಂಪೂರ್ಣವಾಗಿರಿ.

ಈ ಕ್ಷಣದಲ್ಲಿ ಉತ್ಕಟವಾಗಿ ಬದುಕಿರಿ ಮತ್ತು ನಿಜವಾದ ಬದುಕನ್ನು ಆಸ್ವಾದಿಸಿ. ಇಲ್ಲವಾದರೆ ನೀವು ಜೀವಿಸಿಲ್ಲವೆಂದೇ ಹೇಳಬಹುದು. ಕೇವಲ ಸಾವಿಗಾಗಿ ಕಾಯುತ್ತಿದ್ದೀರಿ ಅಷ್ಟೇ.

ಊಟ ಮಾಡುವಾಗ
ತೀವ್ರತೆಯಿಂದ ತಿನ್ನಿರಿ.
ನಿಮ್ಮ ಸಂಪೂರ್ಣ ಗಮನ
ಮತ್ತು ಶಕ್ತಿ ಎಲ್ಲವೂ
ಊಟದ ಮೇಲಿರಲಿ.
ನಾಳೆಯ ಕೆಲಸದ ಮೇಲೆ
ಅಥವಾ ಬರಲಿರುವ
ರಜೆಯ ಮೇಲೆ ಗಮನ
ಹರಿಸಬೇಡಿರಿ.

ಊಟ ಮಾಡುವಾಗ ತೀವ್ರತೆಯಿಂದ ತಿನ್ನಿರಿ. ನಿಮ್ಮ ಸಂಪೂರ್ಣ ಗಮನ ಮತ್ತು ಶಕ್ತಿ ಎಲ್ಲವೂ ಊಟದ ಮೇಲಿರಲಿ.

ಎಲ್ಲಾ ಇಂದ್ರಿಯಗಳಿಂದಲೂ ಆಹಾರವನ್ನು ಸವಿಯಿರಿ. ಆಹಾರವನ್ನು ಬಾಯಿಯಲ್ಲಿ ಆಸ್ವಾದಿಸಿರಿ, ಕಣ್ಣಿನಿಂದ ನಿಮ್ಮ ಮುಂದಿರುವ ಊಟವನ್ನು ನೋಡಿ ಆನಂದಿಸಿರಿ, ಪ್ರೀತಿಯಿಂದ ಅದನ್ನು ಸ್ಪರ್ಶಿಸಿರಿ, ಆಹಾರದ ಸುವಾಸನೆಯನ್ನು ಆಘ್ರಾಣಿಸಿರಿ. ಈ ರೀತಿ ಸಂಪೂರ್ಣವಾಗಿ ಪ್ರತಿ ತುತ್ತನ್ನೂ ಆಸ್ವಾದಿಸಿದಾಗ, ಆಹಾರವು ನಿಜವಾಗಿ ಕೊಡಬೇಕಾಗಿರುವ ಜೀವಶಕ್ತಿಯನ್ನು ನಿಮ್ಮ ಶರೀರ ವ್ಯವಸ್ಥೆಗೆ ನೀಡಲಾಗುತ್ತದೆ.

ನೀರು ಕುಡಿಯುತ್ತಿರುವಾಗಲೂ ತೀವ್ರತೆಯಿರಲಿ.
ದಾಹವೇ ನೀವಾಗಿರಿ. ನೀರು ಬಾಯಲ್ಲಿ, ಗಂಟಲಲ್ಲಿ,
ಅನ್ನನಾಳದಲ್ಲಿ ಇಳಿಯುತ್ತಿರುವಾಗ ಆಗುವ ತಂಪನ್ನು
ಅನುಭವಿಸಿರಿ. ನಿಮ್ಮ ಬಾಯಲ್ಲಿ ಹೋಗುವ
ಒಂದೊಂದು ನೀರಿನ ಹನಿಯೂ ತೃಪ್ತಿಯನ್ನು
ಕೊಡಲಿ.

ತಮಿಳಿನ ಮೇರುಕೃತಿಯಾದ ಪೆರಿಯ ಪುರಾಣಂ,
ಶಿವಭಕ್ತರಾದ ನಾಯನ್ಮಾರರ ಕಥೆಗಳನ್ನು
ವಿವರಿಸುತ್ತದೆ.

ಕೇವಲ ಭಗವಂತನಿಗೆ ಮಾಲೆಗಳನ್ನು ಮಾಡುವಂತಹ ಸರಳ ಕಾರ್ಯಗಳಿಂದಲೇ ಪರಮ ಸತ್ಯದ ಸಾಕ್ಷಾತ್ಕಾರವನ್ನು ಪಡೆದಂತಹ ಅನೇಕರ ದೃಷ್ಟಾಂತಗಳು ಅದರಲ್ಲಿವೆ. ಒಂದು ಉದಾಹರಣೆಯೆಂದರೆ, ಗಣನಾಥ ನಾಯನಾರ್. ಈ ಭಕ್ತನು ಪೂಜೆಗೆ ಹೂಗಳನ್ನು ಕೊಯ್ಯುತ್ತಾ, ಹಾರಗಳನ್ನು ಮಾಡುತ್ತಾ, ದೇವಾಲಯದ ನೆಲವನ್ನು ಗುಡಿಸಿ ಸ್ವಚ್ಛಗೊಳಿಸುತ್ತಾ, ದೀಪಗಳನ್ನು ಬೆಳಗುತ್ತಾ ಇರುತ್ತಿದ್ದನು. ಇಂತಹ ಸರಳ ಜೀವನದಿಂದಲೇ ಪರಮ ಸತ್ಯವನ್ನು ಪಡೆದುಕೊಂಡ ಈತನಿಗೆ ‘ಗಣನಾಥ’ ಅರ್ಥಾತ್ ಶಿವಗಣಗಳ ಮುಖಂಡ ಎಂದು ಹೆಸರು ಕೊಡಲಾಯಿತು.

ನೀವು ಪ್ರಾರ್ಥಿಸುವಾಗ ನೈಜತೆ ಮತ್ತು
ಸ್ವಯಂಪ್ರೇರಣೆಯಿರಲಿ. ಏನೇ ಭಾವನೆ ಬಂದರೂ,
ಪರಿಪೂರ್ಣ ಭಾವನೆಯಿಂದ ದೇವರಿಗೆ ಅರ್ಪಿಸಿರಿ.
ನಿಮಗನಿಸುತ್ತಿರುವುದನ್ನು ಮುಚ್ಚಿಟ್ಟು
ಕಪಟವಾಗಿರಬೇಡಿರಿ. ದೇವರಿಂದ ನೀವೇನನ್ನೂ
ಮುಚ್ಚಿಡಲಾರಿರಿ. ಆತನು ನಿಮ್ಮನ್ನು ನಿಮಗಿಂತಲೂ
ಚೆನ್ನಾಗಿ ಬಲ್ಲನು.

ನೀವು ಅರಸುತ್ತಿರುವುದು ಯಾವಾಗ
ಫಲಿಸುವುದೆಂಬುದಕ್ಕೆ ನಿಮ್ಮ ತೀವ್ರತೆಯೊಂದೇ
ಮುಖ್ಯ. ಸಂಪೂರ್ಣ ತೀವ್ರತೆಯಿದ್ದರೆ ಆ ಕ್ಷಣವೇ
ಫಲಿಸುತ್ತದೆ. ತೀವ್ರತೆಯು ಸಮಗ್ರವಾಗಿಯೂ,
ಪರಿಪೂರ್ಣವಾಗಿಯೂ ಇಲ್ಲದಿದ್ದರೆ ಹೆಚ್ಚಿನ
ಕಾಲಾವಕಾಶ ಬೇಕಾಗುತ್ತದೆ. ಏಕೆಂದರೆ ಆ
ಸಮಯದಲ್ಲಿ ತೀವ್ರತೆಯ ಬಲವು ವೃದ್ಧಿಸಬೇಕು.

ನೀವು ಸಾಕಷ್ಟು ತೀವ್ರತೆಯಿಂದಿದ್ದರೆ ಅಂತಿಮಸತ್ಯವನ್ನು ತಲುಪಲು ಹೆಚ್ಚು ಸಮಯ ಬೇಕಾಗುವುದಿಲ್ಲ. ನೀವಾರು, ಎಲ್ಲಿರುವಿರಿ ಎಂಬುದು ಮುಖ್ಯವಲ್ಲ. ಇಲ್ಲಿ ಮತ್ತು ಈಗಲೇ ಅಲ್ಲಿಗೆ ತಲುಪಬಹುದು.

ಒಂದು ಸುಂದರವಾದ ಕಥೆ:

ಒಂದು ರಾಜ್ಯದಲ್ಲಿ ಭಯೋತ್ಪಾದಕನಾದ
ಡಕಾಯಿತನಿದ್ದನು. ಅನೇಕ ಮಂದಿಯನ್ನು ಲೂಟಿ
ಮಾಡಿದ ತನ್ನ ಕೆಲಸಗಳ ಮೇಲೆ ಆತನಿಗೇನೋ
ಕಳವಳವಾಗಲಾರಂಭಿಸಿತು. ಆತನು ಒಬ್ಬ ಗುರುವಿನ
ಬಳಿ ಹೋಗಿ, ‘ಗುರುವೇ, ನಾನೊಬ್ಬ ಪಾಪಿ. ನನಗೆ
ಮುಕ್ತಿಮಾರ್ಗವಿದೆಯೇ?’ ಎಂದು ಕೇಳಿದನು.

ಗುರುವು ಆ ಡಕಾಯಿತನನ್ನು ನೋಡಿ, ಆತನು
ಯಾವುದರಲ್ಲಿ ಪ್ರವೀಣನೆಂದು ಕೇಳಿದರು.
ಡಕಾಯಿತನು, ‘ಯಾವುದರಲ್ಲಿಯೂ ಇಲ್ಲ’
ಎಂದನು. ಗುರುವು ‘ಯಾವುದರಲ್ಲಿಯೂ
ಇಲ್ಲವೆಂದರೆ ಹೇಗೆ?, ನೀನು
ಯಾವುದರಲ್ಲಿಯಾದರೂ ದಕ್ಷನಿರಬೇಕಲ್ಲವೇ?’
ಎಂದರು. ಡಕಾಯಿತನು ಬಹಳ ಕಾಲ ಯೋಚಿಸಿ,
‘ಗುರುದೇವ, ನನಗೆ ಕದಿಯಲು ಮಾತ್ರ ಬರುತ್ತದೆ.
ಜೀವನವೆಲ್ಲಾ ಅದನ್ನೇ ಮಾಡಿಕೊಂಡಿದ್ದೇನೆ’
ಎಂದನು.

ಗುರುವು ಮಂದಸ್ಮಿತರಾಗಿ, ‘ಒಳ್ಳೆಯದು! ಈಗ ಅದನ್ನೇ ಬಳಸು. ಒಂದು ಪ್ರಶಾಂತವಾದ ಸ್ಥಳಕ್ಕೆ ಹೋಗಿ ನಿನ್ನ ಎಲ್ಲಾ ಅನಿಸಿಕೆಗಳು, ಗ್ರಹಿಕೆಗಳು, ಅಭಿಪ್ರಾಯಗಳನ್ನು ದೋಚು. ಭೂಮಿಯ ಮೇಲಿರುವ ಎಲ್ಲಾ ಮರಗಿಡ, ನದಿ, ಬಂಡೆಗಳನ್ನು ಲೂಟಿಮಾಡು. ಆಕಾಶದಲ್ಲಿರುವ ಗ್ರಹ, ತಾರೆಗಳನ್ನೆಲ್ಲಾ ಕದಿ. ಅವನ್ನೆಲ್ಲಾ ನಿನ್ನೊಳಗಿರುವ ಶೂನ್ಯದೊಳಗೆ ಲಯವಾಗಿಸು’ ಎಂದರು.

ಡಕಾಯಿತನು ಗುರುವಿನ ಉಪದೇಶವನ್ನು ಅಕ್ಷರಶಃ
ಪಾಲಿಸಿದನು. 21 ದಿನಗಳಲ್ಲಿ ಆತನು
ಜೀವನ್ಮುಕ್ತಿಯನ್ನು ಪಡೆದನು.

ತೀವ್ರತೆ ಹಾಗೂ ಪ್ರಜ್ಞೆಯ ನಾಲ್ಕು ಸ್ಥಿತಿಗಳು

ಪ್ರಜ್ಞೆಯ ನಾಲ್ಕು ಸ್ಥಿತಿಗಳು

ಪ್ರಜ್ಞೆಯಲ್ಲಿ ನಾಲ್ಕು ಸ್ಥಿತಿಗಳಿವೆ.

ಪ್ರಜ್ಞೆಯ ವಿವಿಧ ಸ್ಥಿತಿಗಳು
ಆಲೋಚನಾ ಸಹಿತಆಲೋಚನಾ ರಹಿತ
'ನಾನು' ಎಂಬ ಪ್ರಜ್ಞೆಯೊಂದಿಗೆಜಾಗ್ರತ ಎಚ್ಚರದ ಸ್ಥಿತಿ ಯೋಚನೆಗಳಿರುವ ಸ್ಥಿತಿತುರೀಯ ಆನಂದದ ಸ್ಥಿತಿ ಪೂರ್ಣ ಅರಿವಿನ ಸ್ಥಿತಿ
'ನಾನು' ಎಂಬ ಪ್ರಜ್ಞೆಯಿಲ್ಲದೆಸ್ವಪ್ನ ಕನಸಿನ ಸ್ಥಿತಿ ಕನಸು ಕಾಣುವ ಸ್ಥಿತಿಸುಷುಪ್ತಿ ಪ್ರಜ್ಞಾಶೂನ್ಯ ಸ್ಥಿತಿ ಗಾಢ ನಿದ್ರೆಯ ಸ್ಥಿತಿ

ಜಾಗ್ರತ, ಸ್ವಪ್ನ, ಸುಷುಪ್ತಿ ಮತ್ತು ತುರೀಯ.
'ನಾನು' ಎಂಬ ಪ್ರಜ್ಞೆಯಿದ್ದು ಆಲೋಚನೆಗಳಿದ್ದಾಗ
ಈಗಿರುವ ಎಚ್ಚರದ ಸ್ಥಿತಿಯಲ್ಲಿರುತ್ತೀರಿ. ಈ
ಸ್ಥಿತಿಯಲ್ಲಿ 'ನಾನು' ಎಂಬ ಭಾವನೆಯು
ಆಲೋಚನೆಗಳಿಗಿಂತಲೂ ಹೆಚ್ಚಾಗಿ
ಪುನರಾವರ್ತಿಸುತ್ತಿರುತ್ತದೆ. ಹಾಗಾಗಿ ನಿಮ್ಮ
ಆಲೋಚನೆಗಳನ್ನು ನೀವೇ ನಿಯಂತ್ರಿಸಬಹುದು.

'ನಾನು' ಎಂಬ ಭಾವನೆಯಿಲ್ಲದೆ ಆಲೋಚನೆಗಳು ಮಾತ್ರವಿದ್ದಾಗ, ಸ್ವಪ್ನ ಸ್ಥಿತಿಯಲ್ಲಿರುತ್ತೀರಿ. ಕನಸಿನ ಸ್ಥಿತಿಯಲ್ಲಿ, 'ನಾನು' ಎಂಬುದಕ್ಕಿಂತ ಆಲೋಚನೆಗಳೇ ಹೆಚ್ಚಾಗಿ ಉಂಟಾಗುತ್ತಿರುತ್ತವೆ. ಹಾಗಾಗಿಯೇ ಕನಸಿನಲ್ಲಿ ಆಲೋಚನೆಗಳಿದ್ದರೂ ಅವುಗಳ ಮೇಲೆ ಹತೋಟಿಯಿರುವುದಿಲ್ಲ.

'ನಾನು' ಎಂಬ ಅರಿವಿಲ್ಲದೆ, ಆಲೋಚನೆಗಳೂ ಇಲ್ಲದೆ ಇದ್ದಾಗ, ಗಾಢ ನಿದ್ರೆಯಲ್ಲಿರುತ್ತೀರಿ. ಸಾಮಾನ್ಯವಾಗಿ ಈ ಮೂರು ಸ್ಥಿತಿಗಳ ಬಗ್ಗೆ ಮಾತ್ರ ನಮಗೆ ಅರಿವಿರುತ್ತದೆ. ಎಚ್ಚರ, ಕನಸು ಹಾಗೂ ಗಾಢ ನಿದ್ರೆ – ಜಾಗ್ರತ, ಸ್ವಪ್ನ ಮತ್ತು ಸುಷುಪ್ತಿ. ನಾಲ್ಕನೆಯ ಸ್ಥಿತಿಯಲ್ಲಿ 'ನಾನು' ಎಂಬ ಅರಿವಿದ್ದು ಆಲೋಚನೆಗಳಿರುವುದಿಲ್ಲ – ಅದೇ ತುರೀಯ.

ತೀವ್ರ ಅನ್ವೇಷಣೆ - ಮೂರು ಸ್ಥಿತಿಗಳಲ್ಲಿನ ಅರಿವು

ತೀವ್ರತೆಯೆಂದರೆ ಪ್ರತಿಕ್ಷಣವೂ ಏನು
ಮಾಡುತ್ತಿರುವಿರೋ ಅದನ್ನು ತೀವ್ರವಾಗಿ ಮಾಡುವುದು
ಹಾಗಾಗಿ ಮೊದಲು ನಿಮಗೆ ಎಲ್ಲಾ ಸ್ಥಿತಿಗಳಲ್ಲೂ
ನಿಮ್ಮ ಅರಿವು ಇರಬೇಕು. ಆಗ ಮಾತ್ರ ಯಾವಾಗಲೂ
ತೀವ್ರತೆಯಿಂದಿರಲು ಸಾಧ್ಯ.

> ಮಾನವನು
> ಕನ್ನಡಿಯಂತೆ.
> ಅವನು
> ದಿವ್ಯತೆಯನ್ನು
> ಎದುರಿಸಿ
> ಪ್ರತಿಬಿಂಬಿಸಲೂ
> ಬಹುದು. ಮುಖ
> ತಿರುಗಿಸಲೂ
> ಬಹುದು.

ಈಗ ನೀವು ಯಾರೆಂಬ ಅರಿವು ಎಚ್ಚರದ ಸ್ಥಿತಿಯಲ್ಲಿ ಮಾತ್ರ ಇರುತ್ತದೆ. ನಾನು ವೈದ್ಯ, ನಾನು ವಕೀಲ, ನಾನು ಇಂಜಿನಿಯರ್ ಮುಂತಾಗಿ ಭಾವಿಸುತ್ತೀರಿ. ಮೂರು ಸ್ಥಿತಿಗಳಲ್ಲೂ ನಾವು ಹೊತ್ತಿರುವ ಹಾಗು ಅನುಭವಿಸುವ ನಮ್ಮ ಗುರುತಿನ ಅರಿವಿದ್ದಾಗ ಮಾತ್ರ ಈ ಮೂರು ಸ್ಥಿತಿಗಳ ಸೂತ್ರವನ್ನು ನಾವು ಕಂಡುಹಿಡಿಯಬಲ್ಲೆವು. ಈ ಮೂರು ಸ್ಥಿತಿಗಳ ಸೂತ್ರವನ್ನು ಹಿಡಿದಾಗ, ಇದ್ದಕ್ಕಿದ್ದಂತೆ ನಮ್ಮ ಗುರುತನ್ನು ಮೂರೂ ಸ್ಥಿತಿಗಳಲ್ಲಿಯೂ ಗ್ರಹಿಸುತ್ತೇವೆ.

ನನ್ನನ್ನು ಯಾರೋ ಕೇಳಿದರು, 'ಗಾಢ ನಿದ್ರೆಯಲ್ಲಿ ನನ್ನ ಅರಿವು ನನಗಿರಲಿಲ್ಲವೆನಿಸುತ್ತದೆ' ಎಂದು. ಹಾಗಾದರೆ ಆ ಸ್ಥಿತಿಯಿಂದ ಹೊರಬಂದು ಗಾಢನಿದ್ರೆಯಲ್ಲಿ ಶಾಂತಿಯಿತ್ತೆನ್ನುವ ವ್ಯಕ್ತಿಯು ಯಾರು?' 'ಆ ಸ್ಥಿತಿಯಲ್ಲಿ ಗಾಢಾಂಧಕಾರವಿತ್ತು ನಾನಿಲ್ಲವೇನೋ ಎಂಬಂತಿತ್ತು 'ಎಂದು ನೆನೆಯುವವರಾರು? ಹಿಂದಿರುಗಿ ಬಂದು 'ನಾನಿರಲೇ ಇಲ್ಲ' ಎಂಬ ಈ ಕಲ್ಪನೆಯನ್ನು ಮಾಡುವವರಾದರೂ ಯಾರು?

ಆ ಸ್ಥಿತಿಯಲ್ಲಿ ವ್ಯಕ್ತಿಯೇ ಸ್ವತಃ ಇಲ್ಲದೇ
ಹೋದರೆ ಈ ಮೂರು ಸ್ಥಿತಿಗಳಿಗೂ
ಸಂಬಂಧವೇರ್ಪಡಿಸಲು ಹಿಂದಿರುಗಿ ಬರುವವರು
ಯಾರು? ಇಲ್ಲ, ಗಾಢ ನಿದ್ರೆಯಲ್ಲಿ ನಾವಿಲ್ಲವೆಂದು
ಹೇಳಲಾಗದು. ನಾವಿದ್ದೆವು, ಆದರೆ ಆ ಸ್ಥಿತಿಯಲ್ಲಿ
ನಮ್ಮ ಗುರುತಿನ ಅರಿವು ನಮಗಿರಲಿಲ್ಲ.

ಅರ್ಥಮಾಡಿಕೊಳ್ಳಿರಿ. ಈ ಮೂರೂ ಸ್ಥಿತಿಗಳಲ್ಲಿಯೂ ಅರಿವಿರುವವನು ಪ್ರಜ್ಞಾವಂತನು. ಈ ಮೂರೂ ಸ್ಥಿತಿಗಳಲ್ಲಿಯೂ ನಮ್ಮ ಗುರುತು ನಮಗಿದ್ದರೆ, ನಾವು ಸಾಕಷ್ಟು ಪ್ರಜ್ಞಾವಂತರಾಗಿಯೂ, ನಮ್ಮ ಅನ್ವೇಷಣೆಯು ಫಲಿಸುವಷ್ಟು ಸಾಕಷ್ಟು ತೀವ್ರವಾಗಿಯೂ ಇದ್ದರೆ ನಾವು ದೀಕ್ಷೆ, ಆಶೀರ್ವಾದಗಳಿಗೆ ಸಾಕಷ್ಟು ತೀವ್ರತೆಯಿಂದಿರುವೆವು ಎಂದೇ ಅರ್ಥ.

ಈ ಮೂರೂ ಸ್ಥಿತಿಗಳ ಅರಿವು ಈಗಾಗಲೇ
ನಮಗಿಲ್ಲದಿದ್ದರೆ, ಒಂದೇ ಗುರುತಿನಲ್ಲಿ ಈ ಮೂರೂ
ಸ್ಥಿತಿಗಳನ್ನೂ ಅನುಭವಿಸದಿದ್ದರೆ, ಸಹಜವಾಗಿಯೇ
ನಮ್ಮ ಅನ್ವೇಷಣೆಯನ್ನೀಗ
ತೀವ್ರಗೊಳಿಸಿಕೊಳ್ಳಬೇಕಾಗಿದೆ.

ಉತ್ಕಟವಾದ ಸಾಧಕನು ತನ್ನ ಗುರುತನ್ನು ಈ ಮೂರು ಸ್ಥಿತಿಗಳಲ್ಲೂ ಯಾವಾಗಲೂ ಹೊಂದಿರುತ್ತಾನೆ. ಒಂದೆರಡು ಬಾರಿಯಾದರೂ ನಿಮ್ಮ ಎಚ್ಚರದ ಗುರುತನ್ನು ಸ್ವಪ್ನ ಸ್ಥಿತಿಯಲ್ಲಿಯೂ ಅನುಭವಿಸಿದ್ದರೆ ನೀವು ತೀವ್ರತೆಯಿರುವವರೆಂದೇ.

ಸ್ವಪ್ನ ಸ್ಥಿತಿಯಲ್ಲಿದ್ದಾಗ, ಇದ್ದಕ್ಕಿದ್ದಂತೆ ನೀವು ಆ ಸ್ಥಿತಿಯಲ್ಲಿ ಹೊರುವ ನಿಮ್ಮ ಗುರುತಿಗಿಂತ ಮೀರಿದವರು ಎಂದು ನೆನಪಾಗುತ್ತದೆ. ಸಾಧಕರು ಸ್ವಪ್ನ ಸ್ಥಿತಿಯಲ್ಲಿ ಇದನ್ನು ಅನುಭವಿಸುವುದನ್ನು ನಾನು ನೋಡಿದ್ದೇನೆ. ಕನಸಿನಲ್ಲಿ ಇದ್ದಕ್ಕಿದ್ದಂತೆ ಎಚ್ಚರದ ಸ್ಥಿತಿಯಲ್ಲಿನ ತಮ್ಮ ಗುರುತನ್ನು ಅನುಭವಿಸುತ್ತಾರೆ. ಆಗವರು ಸ್ವಪ್ನ ಸ್ಥಿತಿಯನ್ನು 'ಹೇ, ಇದು ಅತಿ ಸಣ್ಣದೂ, ಇದೇನೂ ಅಲ್ಲ' ಎಂದು ಅರ್ಥಮಾಡಿಕೊಳ್ಳುತ್ತಾರೆ.

ನಿಮ್ಮ ಎಚ್ಚರದ ಸ್ಥಿತಿಯ ಗುರುತು ನಿಮ್ಮ
ಸ್ವಪ್ನದಲ್ಲೂ ಇದ್ದ ಅನುಭವವಾಗಿದ್ದರೆ, ನಿಮಗೆ
ತೀವ್ರತೆಯಿದೆಯೆಂದೇ ಅರ್ಥಮಾಡಿಕೊಳ್ಳಿರಿ. ನಿಮ್ಮ
ಅನ್ವೇಷಣೆಯು ಉತ್ಕಟವಾಗಿದೆ.

ಜೀವನ್ಮುಕ್ತರಾಗುವುದು ಹೇಗೆ? ನನಗೆ ತುರ್ತಾಗಿ ಬೇಕೇ ಬೇಕಾಗಿದೆ.

ಅರ್ಥಮಾಡಿಕೊಳ್ಳಿರಿ: ಪ್ರಶ್ನೆಯು ಒಂದು ಮಾತು. ಶೋಧನೆಯು ಒಂದು ಭಾವನೆ.

ಮಾನವನು ಅನ್ವೇಷಕನಾಗಿ ಜನಿಸುತ್ತಾನೆ.
ಮನುಷ್ಯನ ಹಾಗೆ ಇನ್ನಾವುದೇ ವಸ್ತುವೂ ಅಸ್ತಿತ್ವದ
ದಿವ್ಯತೆಯನ್ನು ಪ್ರತಿಬಿಂಬಿಸಲಾರದು. ಮಾನವನು
ಕನ್ನಡಿಯಂತೆ. ಅವನು ದಿವ್ಯತೆಯನ್ನು ಎದುರಿಸಿ
ಪ್ರತಿಬಿಂಬಿಸಲೂಬಹುದು. ಮುಖ ತಿರುಗಿಸಲೂ
ಬಹುದು. ಮಾನವನು ಪ್ರಜ್ಞಾವಂತ ನಿರ್ಣಯವನ್ನು
ಮಾಡಬಲ್ಲವನಾಗಿರುವುದರಿಂದಲೇ ಆತನು
ಬೆಳೆಯಬಲ್ಲನು. ತನ್ನ ಮಾನವರೂಪದಿಂದ
ದಿವ್ಯತೆಯನ್ನು ಅರಿತುಕೊಳ್ಳುವ ಆಯ್ಕೆಮಾಡಬಹುದು.
ಸೃಷ್ಟಿಯ ಬೇರೆ ಯಾವ ವಸ್ತುವಿಗೂ ಈ
ಆಯ್ಕೆಯಿಲ್ಲ.

‘ನಾನು ಸಾಕ್ಷಾತ್ಕಾರವನ್ನು ಹೇಗೆ ಪಡೆಯಲಿ?
ನನಗೆ ತುರ್ತಾಗಿ ಬೇಕೇ ಬೇಕಾಗಿದೆ' ಎಂಬ
ಮಾತುಗಳು ಹೊರ-
ಬಂದರೆ, ಈ ಪ್ರಶ್ನೆಯು
ಆಳವಾದ ಶೋಧನೆ-
ಯಾಗಿ ಹೊರಬಂದರೆ,
ಆಗ ನಿಮಗೆ ಇನ್ನೇನೂ
ಬೇಕಾಗಿರುವುದಿಲ್ಲ.

ಕೇವಲ ಕುದಿಯಿರಿ;
ಈ ಶೋಧನೆಯಲ್ಲಿ
ನಿಮ್ಮ ಇರುವಿಕೆ ದಹಿಸಲಿ.
ಅಷ್ಟು ಸಾಕು. ಇನ್ನೇನೂ
ಮಾಡಬೇಕಾಗಿಲ್ಲ. ಈ ಕುದಿಯುವಿಕೆಯು
ತೀವ್ರವಾಗಿರಲಿ.

ಜೀವನ್ಮುಕ್ತಿಯನ್ನು
ಹೊಂದಲೇ-
ಬೇಕೆನ್ನುವ
ಭಾವನೆ
ನಿಮಗಿದ್ದರೆ
ನಿಮ್ಮೊಳಗಿನ
ಬುದ್ಧನು
ಎಚ್ಚರಗೊಳ್ಳಲಾ-
ರಂಭಿಸಿದ್ದಾನೆ
ಎಂದು ತಿಳಿಯಿರಿ.

ಈ ಕುದಿಯುವಿಕೆಯು ನಡೆಯಲು ಬಿಡಿ.
ಸುಡುವಿಕೆಯು ನಡೆಯಲು ಬಿಡಿ. ತೀವ್ರತೆ,
ಕಾತರತೆಯು ಇರಲು ಬಿಡಿರಿ.

ಕಾತರತೆ ಅವಸರವಾಗಲಿ. ಪ್ರಶ್ನೆಯು
ಶೋಧನೆಯಾಗಲಿ. ಅದು ನಿಮ್ಮ ಅಹಂಕಾರವನ್ನೂ,
ಅಂತರಂಗವನ್ನೂ ನುಂಗಲಿ.

ಜನರು ನನ್ನನ್ನು ಕೇಳುತ್ತಾರೆ, 'ನೀವು
ಜ್ಞಾನೋದಯ ಹೊಂದಿದ್ದು ದೈವ
ಕೃಪೆಯಿಂದಲೋ, ನಿಮ್ಮ ಪ್ರಯತ್ನದಿಂದಲೋ
ಅಥವಾ ನಿಮ್ಮ ಅನ್ವೇಷಣೆಯಿಂದಲೋ?' ಎಂದು.

‘ನಿಮಗೆ ಅನ್ವೇಷಿಸಬೇಕೆಂಬುದು ಇರುವುದೇ
ನಿಮಗೆ ದೈವ ಕೃಪೆಯಿರುವುದರ ಮೊದಲ ಚಿಹ್ನೆ.
ದೈವ ಕೃಪೆಯಿಲ್ಲದಿದ್ದರೆ ನಿಮಗೆ ಅನ್ವೇಷಿಸಬೇಕು
ಎಂಬುದೇ ಇರುವುದಿಲ್ಲ' ಎಂದು ನಾನವರಿಗೆ
ಹೇಳುತ್ತೇನೆ.

ಶೋಧನೆ ಅಥವಾ ಅನ್ವೇಷಣೆಯು ಒಂದು
ಬೀಜದಂತೆ ಎಂಬುದನ್ನು ತಿಳಿಯಿರಿ. ಅದು
ಹೇಗೆಂದರೆ, ಬೀಜವು ಚಿಪ್ಪಿನೊಳಗೆ ಇದ್ದಾಗ
ಉಸಿರುಕಟ್ಟಿದ ಭಾವದಿಂದಿರುತ್ತದೆ. ನೋಡಿ,
ಬೀಜದೊಳಗಿರುವ ಜೀವಕ್ಕೆ ಚಿಪ್ಪಿನೊಳಗೆ
ಉಸಿರುಕಟ್ಟಿಕೊಳ್ಳದಿದ್ದರೆ, ಅದು ತೆರೆದುಕೊಂಡು
ಮರವಾಗಲಾರದು.

ಬೀಜವು ತಾನು ತೆರೆದುಕೊಳ್ಳಬೇಕು ಎಂದುಕೊಂಡ ಕ್ಷಣವೇ ಅನ್ವೇಷಣಾ ಭಾವವು ಆರಂಭವಾದ ಕ್ಷಣವೇ ತಾನು ಒಡೆದುಕೊಂಡು ಮರವಾಗುವ ಅವಸರ ಮತ್ತು ಅನ್ವೇಷಣೆಯು ಪ್ರಾರಂಭವಾದ ಕ್ಷಣವೇ, ಬೀಜದಲ್ಲಿರುವ ಮರವು ತನ್ನನ್ನೇ ವ್ಯಕ್ತಪಡಿಸಿಕೊಳ್ಳಲು ಆರಂಭಿಸಿದೆ ಎಂದರ್ಥ.

ಜೀವನ್ಮುಕ್ತಿಯನ್ನು ಹೊಂದಬೇಕೆನ್ನುವ ಭಾವನೆ ನಿಮಗಿದ್ದರೆ, ನಿಮ್ಮೊಳಗಿನ ಬುದ್ಧನು ಕಣ್ಣೆರೆದಿದ್ದಾನೆ ಎಂದು ತಿಳಿಯಿರಿ. ನಿಮ್ಮೊಳಗಿನ ಬುದ್ಧನು ಎಚ್ಚರಗೊಳ್ಳಲಾರಂಭಿಸಿದ್ದಾನೆ. ನೀವು ಮಾಡಬೇಕಾದುದೆಲ್ಲವೂ ಏನೆಂದರೆ, ನಿಮ್ಮ ಕಣ್ಣುಗಳನ್ನು ತೆರೆಯುವುದಷ್ಟೇ!

ಈ ಅನ್ವೇಷಣೆಯನ್ನು ಆಗಲು ಬಿಡಿ. ಬೆಳಗಿನಿಂದ ರಾತ್ರಿಯವರೆಗೂ ಅದು ಕುದಿಯಲಿ, ಒಂದು ಆಳವಾದ ಅಸಮಾಧಾನವನ್ನು ನಿಮ್ಮೊಳಗೆ ಅದು ಸೃಷ್ಟಿಸಲಿ. ನಿಮ್ಮ ಚರ್ಮದ ಪ್ರತಿಯೊಂದು ಸೂಕ್ಷ್ಮರಂಧ್ರವೂ, ನಿಮ್ಮ ದೇಹದ ಪ್ರತಿಯೊಂದು ನರವೂ, ನಿಮ್ಮ ಪ್ರತಿಯೊಂದು ಜೀವಕಣವೂ ಆ ತೀವ್ರತೆಯಿಂದ ಕಂಪಿಸಲಿ. ನಿಮ್ಮ ಜೀವನದ ಎಲ್ಲಾ ಖಿನ್ನತೆಗಳನ್ನೂ ಅದು ನುಂಗಲಿ. ನಿಮ್ಮ ಜೀವನದಲ್ಲಿ ಎಷ್ಟೋ ವಸ್ತುಗಳು ಇಲ್ಲದುದಕ್ಕಾಗಿ ನಿಮಗೆ ಇತರ ಎಷ್ಟೋ ಖಿನ್ನತೆಗಳಿರಬಹುದು. ಆ ಎಲ್ಲಾ ವೇದನೆಗಳೂ ಈ ಒಂದು ವೇದನೆಯಿಂದ ನುಂಗಲ್ಪಡಲಿ.

ಒಂದು ಸುಂದರವಾದ ಝೆನ್ ಕಥೆ:

ಒಬ್ಬ ಝೆನ್ ವಿದ್ಯಾರ್ಥಿನಿಯು ತನ್ನ ಗುರುಗಳ ಬಳಿ
ಬಹಳ ಕಾಲದಿಂದ ತೀವ್ರವಾದ ಅಧ್ಯಯನ
ಮಾಡುತ್ತಿದ್ದರೂ ನಿಜವಾದ ಧ್ಯಾನವನ್ನು
ಅನುಭವಿಸಲಾಗಿರಲಿಲ್ಲ.

ಒಂದು ಹುಣ್ಣಿಮೆಯ ರಾತ್ರಿಯಂದು ಆಕೆ ಒಂದು
ಬಕೆಟ್ ನೀರನ್ನು ಒಂದು ಬಿದಿರಿನ ಕೋಲಿಗೆ
ತೂಗುಹಾಕಿಕೊಂಡು ಹೊರಟಿದ್ದಳು. ಆಕೆಯು
ಚಂದ್ರನ ಬಿಂಬವನ್ನು ಬಕೆಟಿನಲ್ಲಿ ಕಂಡಳು.
ಇದ್ದಕ್ಕಿದ್ದಂತೆ ಕೋಲು ಮುರಿದುಹೋಯಿತು.

ಬಕೆಟಿನಿಂದ ನೀರು ಚೆಲ್ಲಿಹೋಯಿತು. ಚಂದ್ರನ
ಬಿಂಬದ ಜೊತೆಗೆ ಆಕೆಯ ಅಹಂಕಾರವೂ
ಮಾಯವಾಯಿತು.

ಅನ್ವೇಷಣೆಯು ತೀವ್ರವಾದಾಗ ಅದು ನಿಮ್ಮ
ಅಹಂಕಾರದಿಂದ ಅದರ ಸಾರವನ್ನು ತೆಗೆಯುತ್ತದೆ.
ಹಸಿರು ಹುಲ್ಲು ಒಣಹುಲ್ಲಿನ ಮೆದೆಯಾಗುತ್ತದೆ.
ಇಡೀ ಹುಲ್ಲು ಮೆದೆಯನ್ನು ಸುಡಲು ಒಂದು
ಬೆಂಕಿಕಡ್ಡಿಯೇ ಸಾಕು. ಅಂತಿಮಸತ್ಯದ ಅನುಭವವೂ
ಒಂದು ಸರಳ ಘಟನೆಯಿಂದ ಕ್ಷಣಾರ್ಧದಲ್ಲಿ
ಉಂಟಾಗಬಹುದು.

ಆದುದರಿಂದ ತಿಳಿಯಿರಿ: 'ನನಗೆ ಜ್ಞಾನಪ್ರಾಪ್ತಿ
ಹೇಗಾಗುತ್ತದೆ? ನನಗದು ಬೇಕು... ಉತ್ಕಟವಾಗಿ
ಹಾಗೂ ಅವಸರವಾಗಿ' ಎಂದು ನೀವು ಹೇಳುವ
ಈ ಅನ್ವೇಷಣೆಯೂ, ಈ ಹುಡುಕಾಟವೂ ನಿಮ್ಮೆಲ್ಲ

ಇತರ ವೇದನೆಗಳನ್ನೂ, ಖಿನ್ನತೆಗಳನ್ನೂ,
ಆಸೆಗಳನ್ನೂ, ಜೀವನದ ಬಗ್ಗೆ ಇರುವ ಇತರ ಎಲ್ಲ
ಹಂಬಲಗಳನ್ನೂ ದಹಿಸಿಬಿಡುತ್ತದೆ.

ಅದನ್ನು ಆಗಲು ಬಿಡಿ, ಇದ್ದಕ್ಕಿದ್ದಂತೆ ಅನ್ವೇಷಣೆಯು ಮಾಯವಾಗುವುದನ್ನೂ ಅದು ಅಲ್ಲಿಲ್ಲದಿರುವುದನ್ನೂ ಕಾಣುವಿರಿ. ಅನ್ವೇಷಣೆಯು ಮಾಯವಾದಾಗ ಜ್ಞಾನೋದಯವನ್ನು ಹೊಂದಿರುತ್ತೀರಿ. ಏನನ್ನು ಅನ್ವೇಷಿಸುತ್ತಿದ್ದೀರೋ ಅದನ್ನು ಪಡೆದಿರುತ್ತೀರಿ.

ತೀವ್ರತೆಯು ಅಂತಿಮ ಸತ್ಯಾನುಭವಕ್ಕಾಗಿ ನಿಮ್ಮನ್ನು ತಯಾರು ಮಾಡುತ್ತದೆ

ದೀಕ್ಷೆ

ಋಷಿಗಳಿಗೆ ಹಾಗೂ ಯೋಗಿಗಳಿಗೆ ಜ್ಞಾನಪ್ರಕಾಶನದಂತೆ ತೋರಿದ ಪ್ರಾಚೀನ ವೇದ ಗ್ರಂಥಗಳಾದ ಉಪನಿಷತ್ತುಗಳ ಪ್ರಕಾರ, ದೀಕ್ಷೆಯನ್ನು ಪಡೆದ ಮನುಷ್ಯನಿಗೆ ಇಡೀ ಪ್ರಪಂಚವೇ ಸ್ವರ್ಗದಂತೆ ತೋರುತ್ತದೆ. 'ದೀಕ್ಷೆ' ಎಂಬ ಪದದ ಅರ್ಥವನ್ನು ತಿಳಿಯಿರಿ. ಅದು ಒಂದು ಕರ್ಮಾಚರಣೆಯಾಗಲೀ, ಧಾರ್ಮಿಕವಿಧಿಯ ಆಚರಣೆಯಾಗಲೀ ಅಲ್ಲ.

ದೀಕ್ಷೆಯೆಂದರೆ ನಿಮ್ಮಲ್ಲಿ ಉಂಟಾಗುವ ಒಂದು 'ಕ್ಲಿಕ್'. ಗುರುವು ಸತ್ಯವನ್ನು ವ್ಯಕ್ತಪಡಿಸಿದಾಗ, ಅದರ ಕ್ಲಿಕ್ ಅಥವಾ ಸಾಕ್ಷಾತ್ಕಾರವು ನಿಮ್ಮಲ್ಲಿ ಉಂಟಾಗಿ, ನಿಮಗೆ ಇದ್ದಕ್ಕಿದ್ದಂತೆ, 'ಓ ದೇವರೆ! ಅವರು ಹೇಳುತ್ತಿರುವುದು ಸರಿ. ನಾನು ಯಾವಾಗಲೂ ಇದನ್ನು ಹೀಗೆಯೇ ಆಲೋಚಿಸುತ್ತಿದ್ದೆ. ಅವರು ಅದನ್ನು ಸರಿಯಾದ ರೀತಿಯಲ್ಲಿ ಹೇಳುತ್ತಿದ್ದಾರೆ' ಎಂದೆನಿಸಿದರೆ ಅದೇ ದೀಕ್ಷೆ. ನಾನು ಮಾತನಾಡುತ್ತಿರುವುದೆಲ್ಲವೂ ನೀವು ಸದಾ ಯೋಚಿಸುತ್ತಿರುವಂತೆ ಆಗಿದ್ದು, ಆದರೆ ನಾನದನ್ನು ಸರಿಯಾದ ಮಾತುಗಳಿಂದ ಹೇಳುತ್ತಿದ್ದೇನೆಂದು ನಿಮಗನಿಸಿದರೆ, ದೀಕ್ಷೆಯು ಆಗಿದೆ ಎಂದರ್ಥ.

ಆಧ್ಯಾತ್ಮಿಕ
ಅನುಭವಕ್ಕಾಗಿ
ತೆರೆದ
ಮನಸ್ಕರಾಗಿದ್ದು,
ತೀವ್ರವಾದ
ಶಕ್ತಿಯ ಕ್ಷೇತ್ರ-
ದಲ್ಲಿರಬೇಕು.

ದಯವಿಟ್ಟು ತಿಳಿಯಿರಿ, ಎಲ್ಲಾ ತಯಾರಿಯನ್ನೂ ಮಾಡಿದ ನಂತರ, ನೀವು ಉನ್ನತ ತೀವ್ರತೆಯ ಸ್ಥಿತಿಯಲ್ಲಿದ್ದಾಗ, ಗುರುಗಳು ಹೇಳುವ ಸತ್ಯವು ಸುಮ್ಮನೆ ಕ್ಲಿಕ್ ಆಗುತ್ತದೆ ಅಂದರೆ ಸತ್ಯವು ಥಟ್ಟನೆ ಅರ್ಥವಾಗಿ ನಿಮ್ಮ ಅನುಭವವಾಗಿ ಬಿಡುತ್ತದೆ.

ಇನ್ನಷ್ಟು ಅನ್ವೇಷಣೆಯ ಅಗತ್ಯವಿಲ್ಲವೆಂದೂ ಈ ಕ್ಷಣವೇ ನಿಮ್ಮನ್ನು ಸುಮ್ಮನೆ ಬಿಡುಗಡೆಗೊಳಿಸಿಕೊಳ್ಳಿರೆಂದೂ ಗುರುಗಳು ಹೇಳಿದಾಗ ನೀವು ಸಾಕಷ್ಟು ಅನ್ವೇಷಣೆಯನ್ನು ಮಾಡಿ ತೀವ್ರತೆಯನ್ನು ಸೃಷ್ಟಿಸಿಕೊಂಡಿದ್ದರೆ ಮಾತ್ರ ನಿಮ್ಮಿಂದ ಹಾಗೆ ಮಾಡಲು ಸಾಧ್ಯ. ಇದೇ ವಿರೋಧಾಭಾಸ!

ಸರಿಯಾದ ತೀವ್ರತೆಯ ಭಾವನೆಯನ್ನು ಪಡೆಯುವುದೇ ತಂತ್ರ. ವಾಸ್ತವವಾಗಿ ನಿಮಗೆ ಹೆಚ್ಚಿನ ತೀವ್ರವಾದ ಚೈತನ್ಯವಿದ್ದರೆ ಸಹಜವಾಗಿಯೇ ನಿಮಗೆ ಸರಿಯಾಗಿ ಕೇಳಿಸಿಕೊಳ್ಳುವುದು ತಿಳಿದಿರುತ್ತದೆ. ಒಂದು ಮಿಂಚುನೋಟವನ್ನು ಪಡೆಯಲು ಸುಮ್ಮನೆ ಕಾಯುತ್ತಿರುತ್ತೀರಿ. ಕೇಳಿಸಿಕೊಳ್ಳಲು ಸುಮ್ಮನೆ ಕಾಯುತ್ತಿರುತ್ತೀರಿ. ಅಳವಡಿಸಿಕೊಳ್ಳಲು ಸುಮ್ಮನೆ ಕಾಯುತ್ತಿರುತ್ತೀರಿ.

ಆದ್ದರಿಂದಲೇ ಗುರುಗಳು ಮತ್ತೆ, ಮತ್ತೆ, ಮತ್ತೆ
ವರ್ಷಾನುಗಟ್ಟಲೆ ಮಾತನಾಡುವುದು. ನಾನು ಕೇವಲ
ಕೆಲವೇ ವರ್ಷಗಳಿಂದ ಮಾತನಾಡಲಾರಂಭಿಸಿದ್ದೇನೆ.
ಬುದ್ಧನು ಸುಮಾರು 40 ವರ್ಷಗಳಿಗೂ ಮೀರಿ
ಮಾತನಾಡಿದನು. ಆದರೆ ಸಂದೇಶವು ಒಂದೇ
ಆಗಿತ್ತು. ಆತನ ಮೊದಲ ಹಾಗೂ ಕೊನೆಯ
ಧರ್ಮೋಪನ್ಯಾಸವು ಬಹುಪಾಲು ಒಂದೇ ಆಗಿದೆ.

ಸಾವಿರಾರು ಶಿಷ್ಯರು ಪ್ರತಿದಿನವೂ ಅದೇ ಉಪನ್ಯಾಸವನ್ನು ಮತ್ತೆ ಮತ್ತೆ ಏಕೆ ಕೇಳಿಸಿಕೊಳ್ಳುತ್ತಿದ್ದರೆಂದು ನಿಮಗನಿಸಬಹುದು. ಏಕೆಂದರೆ ನೀವು ತೀವ್ರವಾದ ಚೈತನ್ಯದೊಂದಿಗೆ ಇದ್ದಾಗ ಮಾತ್ರ ಕ್ಲಿಕ್ ಆಗುವುದು. ತೀವ್ರತೆಯಿಂದ ಮಾತ್ರವೇ ಕ್ಲಿಕ್ ಆಗುವುದು. ಸುಮ್ಮನೆ ಜ್ವಾಲೆಯನ್ನು ಹಿಡಿಯಿರಿ, ಜಾಗೃತಿ ಉಂಟಾಗುತ್ತದೆ.