KAILASA Library/ಜೀವನ್ಮುಕ್ತಿ/ಅಂತಃಜ್ಞಾನ ಹಾಗೂ ನಾವೀನ್ಯತೆಯ ಮೇಲೆ ಸಂಸ್ಕಾರಗಳ ಪ್ರಭಾವSign in
ಜೀವನ್ಮುಕ್ತಿ

ಅಂತಃಜ್ಞಾನ ಹಾಗೂ ನಾವೀನ್ಯತೆಯ ಮೇಲೆ ಸಂಸ್ಕಾರಗಳ ಪ್ರಭಾವ

This text was machine-transcribed from the printed book and may contain errors. Select the words and choose “Report a mistake”.

ಅಂತಃಜ್ಞಾನ ಒಂದು ಅದ್ಭುತವಾದ ವಿಷಯ.
ನೀವು ಆಧುನಿಕ ಯುಗದ ಮುಖ್ಯಕಾರ್ಯಾಧಿಕಾರಿ
(ಸಿ.ಇ.ಒ.) ಗಳನ್ನು ಅವರ ಜೀವನದ ಪ್ರಧಾನ
ನಿರ್ಧಾರಗಳನ್ನು ಹೇಗೆ ತೆಗೆದುಕೊಂಡರು, ಅವರ
ಜೀವನದಲ್ಲಿ ತಿರುವು ಯಾವುದರಿಂದ ಆಯಿತು,
ಎಂದು ಕೇಳಿದಾಗ, ಪದೇ ಪದೇ ಅವರು ಕೊಡುವ

ಉತ್ತರ ನಿಮ್ಮನ್ನು ಚಕಿತಗೊಳಿಸುತ್ತದೆ. ಮತ್ತೆ ಮತ್ತೆ ಅವರು ಹೇಳುವುದು, ಅವರಿಗೆ ಯಶಸ್ಸು ಬಂದದ್ದು ಬುದ್ಧಿಶಕ್ತಿಯನ್ನು ಮೀರಿದ ಯಾವುದೋ ಒಂದು ಚೈತನ್ಯವು ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಶಕ್ತಿ ಮತ್ತು ಧೈರ್ಯವನ್ನು ಕೊಟ್ಟಿತು ಎಂದು. ಇದು ಕೇವಲ ಯಶಸ್ವಿಯಾದ ಸಿ.ಇ.ಒ.ಗಳಿಗೆ ಮಾತ್ರ ಸೀಮಿತವಲ್ಲ. ಇದು ವಿಜ್ಞಾನಿಗಳಿಗೂ ಅನ್ವಯಿಸುತ್ತದೆ.

ನೊಬೆಲ್ ಪ್ರಶಸ್ತಿ ವಿಜೇತ ಲೇಸರ್ ಮತ್ತು ಮೇಸರ್ ಕ್ಷೇತ್ರದ ವಿಜ್ಞಾನಿ ಡಾ|| ಚಾರ್ಲ್ಸ್ ಟೌನ್ಸ್‌ರವರ ಜೊತೆ ಭೋಜನ ಮಾಡುವ ಅವಕಾಶ ಒಂದು ದಿನ ನನಗೆ ಲಭಿಸಿತು. ನಾನು ‘ಸರ್, ನಿಮ್ಮ ಆವಿಷ್ಕಾರ ಹೇಗಾಯಿತು? ನೀವು ಅದನ್ನು ಹೇಗೆ ಸಾಧಿಸಿದಿರಿ?’ ಎಂದು ಅವರನ್ನು ಕೇಳಿದೆ. ಅವರು ಸುಂದರವಾಗಿ ಉತ್ತರ ನೀಡುತ್ತಾ, ‘ನಾನು ವಾಷಿಂಗ್ಟನ್ ಡಿ.ಸಿ.ಯ ಒಂದು ತೋಟದಲ್ಲಿ ಕುಳಿತುಕೊಂಡಿದ್ದೆ. ಇದ್ದಕ್ಕಿದ್ದ ಹಾಗೆ ನನ್ನಲ್ಲಿ ಏನೋ ಸಂಭವಿಸಿತು, ಸಿದ್ಧಾಂತವೂ ನನ್ನಲ್ಲಿತ್ತು. ಇದ್ದಕ್ಕಿದ್ದ ಹಾಗೆ ನನಗೆ ಸಿದ್ಧಾಂತವು ಗೋಚರವಾಯಿತು. ನನ್ನ ಅನುಭವವನ್ನು ಬರೆದಿಟ್ಟುಕೊಂಡೆ. ಈಗ ನನಗೊಂದು ದೊಡ್ಡ ಸಮಸ್ಯೆ ಎದುರಾಯಿತು. ಸಿದ್ಧಾಂತವೇನೋ ನನ್ನಲ್ಲಿತ್ತು, ಆದರೆ ಅದರ ಹೆಜ್ಜೆಗಳು ನನಗೆ ಗೊತ್ತಿರಲಿಲ್ಲ. ಹೆಜ್ಜೆಗಳನ್ನು ತಿಳಿಯದೆ ಸಿದ್ಧಾಂತವನ್ನು ಮಾತ್ರ ಬೇರೆ ಯಾರಿಗೂ ನಾನು ತೋರಿಸುವಂತಿರಲಿಲ್ಲ’ ಎಂದರು.

ಇದು ಚಾರ್ಲ್ಸ್ ಟೌನ್ಸ್‌ರವರಿಗೆ ಮಾತ್ರವಲ್ಲ, ಆಲ್ಬರ್ಟ್ ಐನ್‌ಸ್ಟೀನ್‌ರವರಿಗೂ ಆಗಿತ್ತು. ಅವರು

‘ನನಗೆ ಏನೇನು ಹೊಸದು ಘಟಿಸಿದವೋ ಅವೆಲ್ಲ
ಅಂತಃಜ್ಞಾನದಿಂದ ಆಯಿತೇ ವಿನಃ
ಭೌದ್ಧಿಕತೆಯಿಂದಲ್ಲ’ ಎಂದಿದ್ದಾರೆ. ಅವರು ಇದರ
ಸಾರಾಂಶವನ್ನು ಸುಂದರವಾಗಿ ‘ಅಂತಃಜ್ಞಾನವು
ಒಂದು ಪವಿತ್ರ ವರವಿದ್ದಂತೆ, ತರ್ಕಬುದ್ಧಿಯು
ನಿಷ್ಠಾವಂತ ಸೇವಕನಂತೆ. ನಾವು ಸೇವಕನನ್ನು
ಸನ್ಮಾನಿಸಿ ವರವನ್ನು ಮರೆತಿರುವ ಸಮಾಜವನ್ನು
ನಿರ್ಮಿಸಿದ್ದೇವೆ’ ಎನ್ನುತ್ತಿದ್ದರು.

ನಾವು ನಂಬುತ್ತೇವೆಯೋ ಇಲ್ಲವೋ,
ಒಪ್ಪಿಕೊಳ್ಳುತ್ತೇವೆಯೋ ಇಲ್ಲವೋ, ಆದರೂ
ಅಂತಃಜ್ಞಾನ ಎಂಬುದೊಂದು ಇದೆ. ಐನ್‌
ಸ್ಟೀನ್‌ರವರೂ ಸಹ ಅದೊಂದು ವರ ಎನ್ನುತ್ತಿದ್ದರು.
ಏಕೆಂದರೆ, ಅದು ಯಾವಾಗ ಉಂಟಾಗುತ್ತದೆ
ಎಂಬುದು ನಿಶ್ಚಯವಾದುದಲ್ಲ ಮತ್ತು
ಉಂಟಾಗುತ್ತದೆಯೋ ಇಲ್ಲವೋ ಎಂಬುದನ್ನೂ
ಹೇಳಲಾಗುವುದಿಲ್ಲ.

ಆದರೆ ನೀವು ಅದಕ್ಕಾಗಿ ಶ್ರಮಿಸಬಹುದು ಮತ್ತು
ಅದರ ಬಗ್ಗೆ ಖಚಿತವಾಗಿರಬಹುದು ಎಂದು
ಯೋಗಿಗಳು ಮತ್ತು ಅನುಭಾವಿಗಳು ಪದೇ ಪದೇ
ಹೇಳುತ್ತಾರೆ. ಅಂತಃಜ್ಞಾನವು ಒಂದು ವರ ಎಂದು
ಭಾವಿಸಬೇಕಾದುದಲ್ಲ. ನೀವು ಅದಕ್ಕಾಗಿ
ದುಡಿಯಬಹುದು. ಅದು ನಿಮ್ಮ ನಿತ್ಯ ಜೀವನದ
ಒಂದು ಭಾಗವಾಗಬಹುದು. ನಿಮ್ಮ ಸಮಸ್ತ ಜೀವನ
ಏಕೀಕರಣವಾದಾಗ ಮತ್ತು ನಿಮ್ಮ ತಾರ್ಕಿಕ
ಬುದ್ಧಿಶಕ್ತಿಯನ್ನು ಮೀರಿ ಏನಾದರೂ ಆದಾಗ, ಏನೇ
ಹೊಸದಾಗಿ ಆಗಿದ್ದರೂ, ಅದು ಅಂತಃಜ್ಞಾನದ
ಮೂಲಕ ಮಾತ್ರವೇ ಆಗಿರುತ್ತದೆ.

ನೀವು ನಿಮ್ಮ ಚೈತನ್ಯದ ಶಿಖರದಲ್ಲಿದ್ದಾಗ, ಏನೋ ತೆರೆದುಕೊಳ್ಳುತ್ತದೆ. ಅದು ತರ್ಕಶಾಸ್ತ್ರಕ್ಕೆ ಸಂಬಂಧಿಸಿದ ಬುದ್ಧಿಶಕ್ತಿಯನ್ನು ಮೀರಿದುದಾಗಿರುತ್ತದೆ. ಅದನ್ನು ನೀವು ಅಂತಃಜ್ಞಾನ ಅಥವಾ ದಿವ್ಯಜ್ಞಾನ ಎಂದು ಕರೆಯಬಹುದು. ಇದು ಒಂದು ವಿಜ್ಞಾನವೆಂದು ಅನುಭಾವಿಗಳು ಪದೇ ಪದೇ ಹೇಳಿದ್ದಾರೆ. ನೀವು ನಿಮ್ಮ ಅಸ್ತಿತ್ವದಲ್ಲೇ ಸದಾಕಾಲವಿರುವ ಈ ಅಂತಃಜ್ಞಾನಕ್ಕೆ ಶ್ರುತಿಗೂಡಿಸಿಕೊಂಡರೆ ಇದನ್ನು ನಿತ್ಯಜೀವನದಲ್ಲಿ ಉಪಯೋಗಿಸಿಕೊಳ್ಳಬಹುದು. ಇದೊಂದು ಘಟನೆಯಾಗಿದ್ದು ಅದನ್ನು ನೀವು ಘಟಿಸುವಂತೆ ಮಾಡಬಲ್ಲಿರಿ ಎಂದು ಅನುಭಾವಿಗಳು ಪದೇಪದೇ ಹೇಳುವರು. ಇದು ಸಂಭವಿಸುವಂತೆ ಅವರು ಮಾಡಬಲ್ಲರು. ನಿಮ್ಮ ಅಸ್ತಿತ್ವದಲ್ಲಿರುವ ಆ ಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುದು ಎಂಬುದನ್ನು ನೋಡೋಣ. ನಾನು ಈ ಮೊದಲು ವಿಚಾರಮಾಡಿದ ಅಂತಃಜ್ಞಾನದ ಕುಶಲತೆಯನ್ನು ಹೇಗೆ ಮಾನಸ್ಸಿನ ಚಟುವಟಿಕೆಯೊಂದಿಗೆ ಜೋಡಿಸಬಹುದು ಎಂಬುದನ್ನು ನೋಡೋಣ.

ಆ ಆಯಾಮವನ್ನು ನಾವು ಮರೆತಿದ್ದೇವೆ.

ಒಂದು ಧ್ಯಾನಕಾರ್ಯಕ್ರಮದಲ್ಲಿ ಒಬ್ಬರು, 'ನಾನು ಯಾರನ್ನೋ ನೆನೆಸಿಕೊಂಡರೆ ಮರುಕ್ಷಣ ದೂರವಾಣಿ ಕರೆ ಆಗುತ್ತದೆ ಮತ್ತು ಆ ವ್ಯಕ್ತಿಯೇ ಮಾತನಾಡುತ್ತಿರುತ್ತಾರೆ ಎಂದೂ, ಪಾರ್ಟಿಯಲ್ಲಿ ನಾನು ಯಾರನ್ನಾದರೂ ನೆನಸಿಕೊಂಡರೆ ಮರುಕ್ಷಣ ಅವರು ಕಾಣಿಸಿಕೊಳ್ಳುತ್ತಾರೆ, ಇದು ಹೇಗೆ?' ಎಂದು ನನ್ನನ್ನು ಕೇಳಿದರು. ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು, ನಿಮ್ಮ ಜೀವನದಲ್ಲಿ ಇಂತಹ ಸಂಗತಿ ಒಂದು ಸಲವಾದರೂ ಎಷ್ಟು ಮಂದಿಗೆ ಘಟಿಸಿದೆ ಎಂದು ಕೇಳಿದೆ. ಅವರಲ್ಲಿ ಶೇಕಡ 70 ರಷ್ಟು ಜನರು ತಮ್ಮ ಜೀವನದಲ್ಲಿ ಹೀಗೆ ಆಗಿದೆ ಎಂದರು! ಒಬ್ಬರ ಜೀವನದಲ್ಲಿ ಒಂದುಬಾರಿ ಈ ರೀತಿ ಆಗಿದ್ದರೆ, ಅದನ್ನು ನೀವು ಆಕಸ್ಮಿಕ ಎನ್ನಬಹುದು. ಆದರೆ ಅದು ಶೇಕಡ 70 ಜನರಿಗೆ ಘಟಿಸಿದಾಗ ಅದನ್ನು ಆಕಸ್ಮಿಕ ಎನ್ನಲಾಗುವುದಿಲ್ಲ. ಅದಕ್ಕೆ ಇನ್ನೂ ಉನ್ನತವಾದುದು ಇದೆ. ಅದರ ಹಿನ್ನೆಲೆಯಲ್ಲಿ ಸ್ವಲ್ಪ ತರ್ಕವಿದೆ.

ನಿಮಗೆ
ತರ್ಕತಿಳಿಯದಿದ್ದಾಗ
ನೀವು ಅದನ್ನು
ಆಕಸ್ಮಿಕ
ಅನ್ನುವಿರಿ. ಈ
ಭೂಗ್ರಹದ
ಮೇಲೆ
ಕಾರಣವಿಲ್ಲದೆ
ಏನೇನೂ ಆಗಲು
ಸಾಧ್ಯವಿಲ್ಲ.

ಅಂತಃಜ್ಞಾನವನ್ನು ವಿಸ್ತಾರವಾಗಿ ಚರ್ಚೆಮಾಡುವ ಮೊದಲು, ಅಂತಃಜ್ಞಾನವು ಪ್ರಕೃತಿಯಿಂದ ‘ಅದೃಷ್ಟವಶಾತ್' ಏನೋ ಒಂದು ಆಗುವಂತಹುದು ಎಂಬ ಸುಳ್ಳು ಅಭಿಪ್ರಾಯವನ್ನು ಮೊದಲು ದೂರಮಾಡೋಣ. ಅಂತಃಜ್ಞಾನವೂ ಒಂದು ಕುಶಲತೆ ಎಂದು ತಿಳಿದು, ನೀವು ಬೇರೆಬೇರೆ ಕುಶಲತೆಗಳನ್ನು ಗಳಿಸಿಕೊಂಡ ರೀತಿಯಲ್ಲೇ ಅದನ್ನು ಬೆಳೆಸಿಕೊಳ್ಳಬಹುದು. ಅದು ನಿಮ್ಮಿಂದಲೇ ಬರುತ್ತದೆ, ಬೇರಾರಿಂದಲೂ ಅಲ್ಲ! ನಮಗೆ ಆ ವಲಯದ ಅನುಭವ ಆಗಿಲ್ಲವಾದುದರಿಂದ ನಮ್ಮ ಅಸ್ತಿತ್ವದ

ನಾವು ತರ್ಕಬದ್ಧವಾಗಿ ಅದನ್ನು ತಿಳಿಯಲಾಗದೇ
ಹೋಗಬಹುದು. ಆದರೆ ಅದನ್ನು
ತಳ್ಳಿಹಾಕಲಾಗುವುದಿಲ್ಲ. ನಿಮಗೆ ತರ್ಕ ತಿಳಿದಾಗ
ಅದನ್ನು ಸಂಗತಿ ಎನ್ನುವಿರಿ. ನಿಮಗೆ ತರ್ಕ

ತಿಳಿಯದಿದ್ದಾಗ ಅದನ್ನು ಆಕಸ್ಮಿಕ ಎನ್ನುವಿರಿ. ಈ ಭೂಗ್ರಹದ ಮೇಲೆ ಕಾರಣವಿಲ್ಲದೆ ಏನೂ ಆಗಲು ಸಾಧ್ಯವಿಲ್ಲ. ಅದು ಯಾವಾಗಲೂ ಕಾರಣ ಮತ್ತು ಪರಿಣಾಮವೇ. ಕಾರಣ ಮತ್ತು ಪರಿಣಾಮದ ಸಂಬಂಧ ತಿಳಿದಾಗ ನೀವು ಅದನ್ನು ಸಂಗತಿ ಎನ್ನುವಿರಿ. ಅದು ಗೊತ್ತಿಲ್ಲದಿದ್ದಾಗ ಅದನ್ನು ಆಕಸ್ಮಿಕ ಎನ್ನುವಿರಿ.

ಅಂತಃಜ್ಞಾನದ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ನಾವು ಈ ಹಿಂದೆ ಚರ್ಚೆಮಾಡಿದ ಮನಸ್ಸಿನ ನಕ್ಷೆಯನ್ನು ಮತ್ತೆ ನೋಡೋಣ. ನಮ್ಮ ಕಣ್ಣಿನಂತಹ ಇಂದ್ರಿಯವು ಮಾಹಿತಿಯನ್ನು ಯಾವ ರೀತಿಯಾಗಿ ಚಕ್ಷು (ಡಿಎಸ್‌ಪಿ), ಚಿತ್ತ, ಮನಸ್ಸುಗಳ ಮಾರ್ಗವಾಗಿ ಹೋಗಿ ನಂತರ ಸಂಸ್ಕಾರಗಳಿಂದ ಕವಿದು ಹೋಗಿರುವ, ನಿರ್ಧಾರ ಮಾಡುವ ಅಹಂಕಾರಕ್ಕೆ ಪರಿಮಾಣಿತ ಜಿಗಿತ ಮಾಡುತ್ತದೆ ಎಂಬುದನ್ನು ಕುರಿತು ಮಾತನಾಡಿದೆವು.

ಕಣ್ಣಿನಿಂದ ಮನಸ್ಸಿನವರೆಗೆ ಇರುವ ಅಂತರದಲ್ಲಿ ನಡೆಯುವ ಪ್ರಕ್ರಿಯೆಯು ಅರಿವಿನಿಂದ ನಡೆಯುತ್ತದೆ. ಆ ಪ್ರಕ್ರಿಯೆಯ ಅರಿವು ನಿಮಗಿರುತ್ತದೆ. ನಿಮ್ಮ ಅರಿವಿನೊಂದಿಗೆ ಇದು ನಡೆಯುತ್ತದೆ. ಆದರೆ ಮನಸ್ಸಿನಿಂದ ಅಹಂಕಾರಕ್ಕೆ ಹೋಗುವಾಗ ನಡೆಯುವ ಪ್ರಕ್ರಿಯೆಯ ಅರಿವು ನಿಮಗೆ ಇರುವುದಿಲ್ಲ. ಅನೇಕಬಾರಿ ಈ ಪ್ರಕ್ರಿಯೆಯು ನಿಮ್ಮ ಅರಿವಿಲ್ಲದೇ ನಡೆಯುತ್ತದೆ. ನಿಮ್ಮ ತರ್ಕದ ವಿರುದ್ಧವಾಗಿ ನಿರ್ಧಾರ ಮಾಡುತ್ತೀರಿ. ನಿಮ್ಮ ಆಲೋಚನೆಯ ಪ್ರಕ್ರಿಯೆಯ ವಿರುದ್ಧ ನಿರ್ಧಾರ ಮಾಡುತ್ತೀರಿ. ಆದರೆ ಉದಾಹರಣೆಗೆ, ನೀವು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ, ಅದು ನಿಮ್ಮ ದೇಹಕ್ಕಾಗಲೀ ಅಥವಾ ಮನಸ್ಸಿಗಾಗಲೀ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿದೆ. ಆದರೆ ಮನಸ್ಸು ಅರಿವಿಲ್ಲದೆ ಅಹಂಕಾರಕ್ಕೆ ಜಿಗಿದಾಗ ನೀವು ಧೂಮಪಾನ ಮಾಡುವ ನಿರ್ಧಾರವನ್ನು ಸುಮ್ಮನೆ ಮಾಡಿಬಿಡುತ್ತೀರಿ!

ಅರಿವಿನಿಂದ ನಡೆಯುವ ಪ್ರಕ್ರಿಯೆಯು, 'ಇದು ಬೇಡ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ' ಎನ್ನುತ್ತದೆ. ಆದರೆ ಸುಪ್ತಪ್ರಜ್ಞೆಯಿಂದ ಆಗುವ ಪ್ರಕ್ರಿಯೆಯು ಹೇಳುತ್ತದೆ . . . ಅದು ಹೇಳುವುದೂ ಇಲ್ಲ, ಅದು ಸುಮ್ಮನೆ ನಿರ್ಧಾರ ಮಾಡುತ್ತದೆ ಮತ್ತು ನೀವು ಅದನ್ನು ಕಾರ್ಯರೂಪಕ್ಕಿಳಿಸುತ್ತೀರಿ. ಈ ನಿರ್ಧಾರಗಳು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ, ಏಕೆಂದರೆ ಸುಪ್ತಪ್ರಜ್ಞೆಯು ಬಹಳ ಬಲಶಾಲಿಯಾದುದು.

ಸುಪ್ತಪ್ರಜ್ಞೆಯನ್ನು ಮೂರು ವಿಧವಾಗಿ ಉಪಯೋಗಿಸಿಕೊಳ್ಳಬಹುದು. ಸಹಜಪ್ರವೃತ್ತಿಯ ಸ್ತರದಲ್ಲಿ, ಬುದ್ಧಿಯ ಸ್ತರದಲ್ಲಿ ಮತ್ತು ಅಂತಃಜ್ಞಾನದ ಸ್ತರದಲ್ಲಿ. ಸುಪ್ತಪ್ರಜ್ಞೆಯು ನಕಾರಾತ್ಮಕ ನೆನಪುಗಳಿಂದ ಹಾಗೂ ಅಸಮಾಧಾನದಿಂದ ತುಂಬಿರುವಾಗ ಅದು ಸಹಜ ಪ್ರವೃತ್ತಿಯ ಸ್ತರದಲ್ಲಿ ಕೆಲಸ ಮಾಡುತ್ತದೆ. ನೀವು ಸಹಜಪ್ರವೃತ್ತಿಯಿಂದ ನಿರ್ಧಾರಮಾಡುತ್ತೀರಿ. ನೀವೇಕೆ ಕೋಪಿಸಿಕೊಂಡಿದ್ದೀರಿ ಎಂಬುದು ನಿಮಗೆ ಗೊತ್ತೊ ಇರುವುದಿಲ್ಲ. ಇದ್ದಕ್ಕಿದ್ದಹಾಗೆ ನೀವು ಸಿಡಿದುಬಿಡುವಿರಿ. ಒಂದೊಂದುಸಲ ನೀವು ನಿಮ್ಮದೇ ಚಲನವಲನಗಳನ್ನು ಗಮನಿಸಿದಾಗ ಅಥವಾ ನೀವಾಡುತಿರುವ ಮಾತುಗಳನ್ನು ಗಮನಿಸಿದಾಗ ಇದು ನೀವೇ ಅಲ್ಲ ಎನ್ನಿಸುತ್ತದೆ. ನೀವೇನೋ ಒಂದನ್ನು ಮಾಡಿಬಿಡುತ್ತೀರಿ. ಆಮೇಲೆ ನೀವು 'ಇದು ನಾನಲ್ಲ, ಇದು ನನ್ನಿಂದ ಹೇಗೆ ಆಯಿತು? ಇದನ್ನು ಆಗಲು ನಾನು ಹೇಗೆ ಅವಕಾಶಮಾಡಿಕೊಟ್ಟೆ?' ಎಂದು ಯೋಚಿಸುತ್ತೀರಿ. ಸುಪ್ತಪ್ರಜ್ಞೆಯು ಸಹಜಪ್ರವೃತ್ತಿಯ ಸ್ತರದಲ್ಲಿ ಕೆಲಸ ಮಾಡಿರುವುದರಿಂದ ಹೀಗಾಗುತ್ತದೆ.

ಅನೇಕಬಾರಿ ಯಾವ ತರ್ಕವೂ ಇಲ್ಲದೆ, ನೀವು ಕೆಲವು ಸಂಗತಿಗಳನ್ನು ಜೋಡಿಸಿಬಿಡುತ್ತೀರಿ. ಉದಾಹರಣೆಗೆ, ಹಿಂದೊಂದಾದರೂ ಬಿಳಿಯ ಉಡುಪು ಧರಿಸಿದ ವ್ಯಕ್ತಿಯಿಂದ ನೀವು ಕ್ಷೋಭೆಗೊಂಡಿದ್ದರೆ, ಯಾರಾದರೂ ಬಿಳಿಯ ಉಡುಪು ಧರಿಸಿದವರನ್ನು ನೋಡಿದಾಕ್ಷಣ, ಹಳೆಯ ನೆನಪು ಮೂಡಿಬಂದು, ನಿಮಗೆ ಕೋಪದ ಅನುಭವವಾಗುತ್ತದೆ. ಇದು ಸಹಜಪ್ರವೃತ್ತಿಯ ಸ್ತರ. ಅರಿವುಳ್ಳ ಮನಸ್ಸು ಇಲ್ಲದೆ ನಿಮಗೆ ತಿಳಿಯದಂತೆ ಅದು ಹಾಗೆಯೇ ನಡೆದು ಹೋಗುತ್ತದೆ. ನಿಮ್ಮ ಸುಪ್ತಪ್ರಜ್ಞೆಯು ಸಂಸ್ಕಾರಗಳಿಂದ ತುಂಬಿಹೋಗಿ, ಅಶಾಂತಿಯಿಂದಿದ್ದರೆ, ನೀವು ಸಹಜಪ್ರವೃತ್ತಿ ಸ್ತರದಲ್ಲಿರುತ್ತೀರಿ.

ಮುಂದಿನದು ತಾರ್ಕಿಕ ಬುದ್ಧಿಯ ಸ್ತರ. ನಿಮಗೆ ಅರಿವಿರುತ್ತದೆ, ಆದರೆ ಸಾಕಷ್ಟು ಉತ್ಸಾಹವಿರುವುದಿಲ್ಲ. ನೀವು ಅರಿವಿನಿಂದ ಕೆಲಸಮಾಡುವಿರಿ, ಆದರೂ ಆ ಕೆಲಸ ಸೃಜನಶೀಲವಾಗಿರುವುದಿಲ್ಲ, ಹೊಸತನ ಇರುವುದಿಲ್ಲ. ನೀವು ದೊಡ್ಡ ಹೆಜ್ಜೆ ಹಾಕಲಾರಿರಿ, ನೀವು ಬೆಳೆಯುವುದಿಲ್ಲ. ಐನ್ ಸ್ಟೀನ್‌ರವರು ಹೇಳುವಂತೆ, ತಾರ್ಕಿಕ ಬುದ್ಧಿವಂತಿಕೆಯು ಒಬ್ಬ ನಿಷ್ಠಾವಂತ ಸೇವಕನಿದ್ದಂತೆ. ನಿಮ್ಮ ಜೀವನ ಪರ್ಯಂತ ಒಬ್ಬ ನಿಷ್ಠಾವಂತ ಸೇವಕನಂತೆಯೇ ಇದ್ದುಬಿಡಬಹುದು. ನೀವು ಒಬ್ಬ ಸೇವಕನಾಗಿದ್ದು ನಿಮ್ಮಿಂದ ಯಾವ ಮಹತ್ಕಾರ್ಯವೂ ಆಗುವುದಿಲ್ಲ. ನೀವು ಅಂಕಿಅಂಶಗಳನ್ನು ಸಂಗ್ರಹಿಸುತ್ತಾ, ಅದನ್ನು ಪರಿಷ್ಕರಿಸುತ್ತೀರಿ. ಅದನ್ನು ನೀಡುತ್ತಾ ಒಂದು ಕಂಪ್ಯೂಟರ್‌ಗಿಂತ ಹೆಚ್ಚಿನದೇನನ್ನೂ ಮಾಡಲಾರಿರಿ. ನೀವು ತಾರ್ಕಿಕ ಬುದ್ಧಿಸ್ತರದಲ್ಲೇ ನಿಂತಿದ್ದರೆ, ನಿಮ್ಮ ಶಕ್ತಿಯ ಪರಾಕಾಷ್ಠೆಗೆ ಎಂದರೆ, ತಲುಪಬೇಕಾದ ಎತ್ತರಕ್ಕೆ ತಲುಪುವುದಿಲ್ಲ. ಅದನ್ನು ಎಷ್ಟು ಉಪಯೋಗಿಸಬೇಕಾಗಿದ್ದಿತೋ ಅಷ್ಟು ಉಪಯೋಗಿಸುವುದಿಲ್ಲ.

ಇದಕ್ಕೆ ಮುಂದಿನದು ಅಂತಃಜ್ಞಾನದ ಸ್ತರ. ಅಂತಃಜ್ಞಾನವನ್ನು ಅರ್ಥಮಾಡಿಕೊಳ್ಳಲು ನೀವು ಸಂಪೂರ್ಣವಾಗಿ ವಿಜ್ಞಾನದ ಆಳಕ್ಕೆ ಇಳಿಯಬೇಕಾಗುತ್ತದೆ. ಆಗ ಮಾತ್ರ ನಾನು 'ಅಂತಃಜ್ಞಾನ' ಎಂದರೆ ಏನು ಎಂದು ಹೇಳುವುದು ನಿಮಗೆ ಅರ್ಥವಾಗುತ್ತದೆ. ನಿಮ್ಮ ತಾರ್ಕಿಕ ಬುದ್ಧಿವಂತಿಕೆಯನ್ನು ಮೀರಿ ಯಾವುದೋ ನಿಮಗಾಗುವುದೋ ಅದು ಅಂತಃಜ್ಞಾನ. ಇದ್ದಕ್ಕಿದ್ದಹಾಗೆ ಇದು ಸರಿಯಾದುದು ಎಂದು ತಿಳಿಯುತ್ತದೆ ಮತ್ತು ಅದನ್ನು ಮಾಡಲು ಸಾಕಷ್ಟು ಶಕ್ತಿಯೂ ನಿಮ್ಮಲ್ಲಿ ಇರುತ್ತದೆ. ಆದರೆ ಆ ನಿರ್ಧಾರಕ್ಕೆ ಬಂದ ಹೆಜ್ಜೆಯು ನಿಮಗೆ ಗೊತ್ತಿರುವುದಿಲ್ಲ. ಆದರೆ ಅದು ಸರಿಯೆಂದು ನಿಮಗೆ ಖಚಿತವಾಗಿ ಗೊತ್ತಿರುತ್ತದೆ.

ಪೂರ್ವ ನಿದರ್ಶನವಿಲ್ಲದ ಸಂದರ್ಭದಲ್ಲಿ, ಅತಿ ಕಡಿಮೆ ದತ್ತಾಂಶಗಳು ಮಾತ್ರ ಇದ್ದು ನೀವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದ್ದಲ್ಲಿ ಅಥವಾ ಅನೇಕ ಆಯ್ಕೆಗಳಿದ್ದು ನೀವು ಯಾವುದನ್ನು

ನೀವು ಸಂಗ್ರಹಿಸಿರುವ ಅಂಕಿಅಂಶಗಳಿಗೂ ಅನೈಚ್ಛಿಕ ಸ್ವಯಂಪೇರಣೆಗೂ ಸಂಬಂಧವಿಲ್ಲ. ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗದಿದ್ದರೆ ಈ ಶಕ್ತಿಯು ಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಅಂತಃ-ಜ್ಞಾನದ ಚೈತನ್ಯ ಸಹಾಯಕವಾಗುತ್ತದೆ. ಅಂತಃಜ್ಞಾನದ ಶಕ್ತಿಯು ನಿಮಗೆ ಧೈರ್ಯ ಅಥವಾ ಸರಿಯಾದ ಆಯ್ಕೆಯನ್ನು ನೀಡಬಲ್ಲುದು. ಅಂತಃಜ್ಞಾನವು ನಿರ್ಧಾರಮಾಡಲು ನಿಮಗೆ ಮತ್ತೆಮತ್ತೆ ಚೈತನ್ಯವನ್ನು ನೀಡುವುದಲ್ಲದೆ ನಿಮ್ಮ ನಿರ್ಧಾರವನ್ನು ಕಾರ್ಯಗತಮಾಡುವ ಶಕ್ತಿಯನ್ನೂ ನೀಡುತ್ತದೆ.

ಜನರು, 'ನನಗೆ ಅಂತಃಜ್ಞಾನವಾಗುತ್ತಿದೆಯೋ ಅಥವಾ ಅದು ನನ್ನ ತಾರ್ಕಿಕ ಬುದ್ಧಿವಂತಿಕೆಯೋ ಎಂಬುದನ್ನು ಹೇಗೆ ತಿಳಿಯುವುದು?' ಎಂದು ಕೇಳುತ್ತಾರೆ. ಒಂದೊಂದು ಸಮಯ, 'ಇದು ಅಂತಃಜ್ಞಾನವೋ ಅಥವಾ ತಾರ್ಕಿಕ ಬುದ್ಧಿವಂತಿಕೆಯೋ ಎಂದು ಗೊಂದಲವಾಗುತ್ತದೆ' ಎನ್ನುತ್ತಾರೆ. ನಾನು ಅವರಿಗೆ ಹೇಳುವುದೇನೆಂದರೆ, ನಿಮಗೆ ಗೊಂದಲವಾದರೆ ಸ್ಪಷ್ಟವಾಗಿರಿ, ಅದು ತಾರ್ಕಿಕ ಬುದ್ಧಿವಂತೆ ಎಂದು. ಆ ಗೊಂದಲವೇ ಅದು ತಾರ್ಕಿಕ ಬುದ್ಧಿವಂತಿಕೆ ಎಂದು ತಿಳಿಸುತ್ತದೆ. ನಿಮಗೆ ಅಂತಃಜ್ಞಾನದ ಅನುಭವವಾದಾಗ ಉತ್ತರವು ನಿಮ್ಮ ಬುದ್ಧಿಗೆ ಸ್ಪಷ್ಟವಾಗಿರುತ್ತದೆ. ಅಲ್ಲದೆ ಅದನ್ನು ಕಾರ್ಯಗತ ಮಾಡಲು ಬೇಕಾದ ಶಕ್ತಿಯನ್ನೂ ಅದು ಕೊಡುತ್ತದೆ.

ನಿಮ್ಮೊಳಗಿರುವ ಸಾಮರ್ಥ್ಯದ ಶಕ್ತಿಯು ಬಿಡುಗಡೆಯಾಗುತ್ತದೆ. ನೀವು ಅದನ್ನು ಹಾಗೆಯೇ ವ್ಯಕ್ತಪಡಿಸುತ್ತಾ, ಕಾರ್ಯಗತ ಮಾಡುತ್ತಾ ವಿಕಸಿಸುವಿರಿ.

ಈಗ ಮುಂದಿನ ಪ್ರಶ್ನೆ. ಈ ಅಂತಃಜ್ಞಾನವನ್ನು, ಇದರ ಶಕ್ತಿಯನ್ನು ಹೇಗೆ ಜಾಗೃತಗೊಳಿಸುವುದು? ನೀವು ಅರಿವಿಟ್ಟುಕೊಂಡು ಅದಕ್ಕೆ ಸ್ವಲ್ಪ ಸಮಯ ಹಾಗೂ ವಿಶ್ರಾಂತಿಯನ್ನು ಕೊಟ್ಟರೆ, ಸುಪ್ತಪ್ರಜ್ಞೆಯ ಸ್ತರದಲ್ಲಿ ಇರುವ ಆ ಚೈತನ್ಯವು ತೆರೆದುಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ಸುಪ್ತಪ್ರಜ್ಞೆಯು ತೆರೆದುಕೊಂಡಾಗ ಮೊದಲು ನಾವು ಏನನ್ನು ಅದುಮಿಟ್ಟಿರುವೇವೋ ಅವು ಹೊರಬರುತ್ತವೆ. ನಂತರ ಅಂತಃಜ್ಞಾನವೆಂದು ಕರೆಯಲ್ಪಡುವ ಶುದ್ಧವಾದ ಚೈತನ್ಯವು ವ್ಯಕ್ತವಾಗಲು ಪ್ರಾರಂಭವಾಗುತ್ತದೆ.

ಶುದ್ಧವಾದ ಚೈತನ್ಯವು ಸುಪ್ತಪ್ರಜ್ಞೆಯಿಂದ ವ್ಯಕ್ತವಾಗಲು ಪ್ರಾರಂಭವಾದೊಡನೆ ಸುಪ್ತಪ್ರಜ್ಞೆಯನ್ನು ಸಹಜಪ್ರವೃತ್ತಿ ಅಥವಾ ಬುದ್ಧಿಯ ಸ್ತರಗಳಲ್ಲಿ ಉಪಯೋಗಿಸುವುದಿಲ್ಲ. ನೀವು ಅದನ್ನು ಅಂತಃಜ್ಞಾನಕ್ಕಾಗಿ ಉಪಯೋಗಿಸುತ್ತೀರಿ. ಉನ್ನತ ಸ್ತರದ ಚೈತನ್ಯವು ನಿಮ್ಮಲ್ಲಿ ಮೂಡಿಬರಲು ಪ್ರಾರಂಭವಾಗುತ್ತದೆ ಮತ್ತು ಇವೆಲ್ಲವನ್ನೂ ಮೀರಿದ ಈ ಉನ್ನತಸ್ತರದ ಚೈತನ್ಯವು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ನಿಮ್ಮನ್ನು ಗುಣಪಡಿಸುತ್ತದೆ ಎಂದು ಸಾವಿರಾರು ವರ್ಷಗಳಿಂದ ಅನುಭಾವಿಗಳು ನಮಗೆ ನಿರೂಪಿಸಿದ್ದಾರೆ. ಉಪಶಮನ ಮಾತ್ರವಲ್ಲದೆ ಅದು ಒತ್ತಡವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ ಮತ್ತು ಸ್ವಯಂ ಪ್ರೇರಣೆಯಿಂದ ನಿರ್ಧಾರಮಾಡಲು ಸಹಾಯ ಮಾಡುತ್ತದೆ.

ನೀವು ಸಂಗ್ರಹಿಸಿರುವ ದತ್ತಾಂಶಗಳಿಗೂ ಸ್ವಯಂಪ್ರೇರಣೆಗೂ ಸಂಬಂಧವಿರುವುದಿಲ್ಲ; ಅದು ದತ್ತಾಂಶಗಳನ್ನು ಯಾವ ರೀತಿಯಲ್ಲಿ ಪ್ರಕ್ರಿಯಿಸುತ್ತೀರಿ ಮಾಡುತ್ತೀರಿ ಎಂಬುದಕ್ಕೆ ಸಂಬಂಧಿಸಿರುತ್ತದೆ. ಅದೇ ದತ್ತಾಂಶವನ್ನು ಅದೇ ಮಾಹಿತಿಯನ್ನು ಅನೇಕ ರೀತಿಯಲ್ಲಿ ಪ್ರಕ್ರಿಯಿಸಬಹುದು. ತಾರ್ಕಿಕ ಬುದ್ಧಿಶಕ್ತಿಯನ್ನು ಮೀರಿ ನೀವು ಹೇಗೆ ಪ್ರಕ್ರಿಯೆ ಮಾಡುತ್ತೀರಿ ಮತ್ತು ನಿರ್ಧಾರಕ್ಕೆ ಬರುತ್ತೀರಿ ಎಂಬುದೇ ಅಂತಃಜ್ಞಾನ.

ಯಾವ ರೀತಿಯಲ್ಲಿ ತೊಡಗಿಬಿಟ್ಟಿದ್ದೇವೆ ಎಂದರೆ ತಾರ್ಕಿಕ ಬುದ್ಧಿವಂತಿಕೆಯೇ ಸರ್ವೋತ್ತಮವೆಂದು ಭಾವಿಸಿದ್ದೇವೆ. ಆದರೆ ತಾರ್ಕಿಕ ಬುದ್ಧಿಶಕ್ತಿಯನ್ನು ಮೀರಿದ ಇನ್ನೂ ಅನೇಕ ಸಾಧ್ಯತೆಗಳಿವೆ ಎಂದು ಅನುಭಾವಿಗಳು ಪದೇ ಪದೇ ನಿರೂಪಿಸಿದ್ದಾರೆ.

ಯಾವುದೇ ಆವಿಷ್ಕಾರದಲ್ಲಿ ಅಥವಾ ಹೊಸಶೋಧನೆಯಲ್ಲಿ ಅಂತಃಜ್ಞಾನದ ಪಾತ್ರವು ಸದಾ ಇರುವುದನ್ನು ನೀವು ಕಾಣಬಹುದು. ಆಲ್ಬರ್ಟ್ ಐನ್‌ಸ್ಟೀನ್‌ಗಾಗಲಿ ಅಥವಾ ಐಸಾಕ್ ನ್ಯೂಟನ್‌ಗಾಗಲೀ ಅವರ ತಾರ್ಕಿಕ ಬುದ್ಧಿಶಕ್ತಿಯನ್ನು ಮೀರಿದ ಏನೋ ಇತ್ತು. ಯಾವುದೋ ತಾರ್ಕಿಕ ಬುದ್ಧಿಯನ್ನು ಮೀರಿದ ಒಂದು ಘಟನೆ ನಡೆಯಿತು. ಇದೇ ಚೈತನ್ಯ ನಮ್ಮೆಲ್ಲರಲ್ಲೂ ಇದೆ. ನಾವು ಈ ಚೈತನ್ಯದೊಂದಿಗೆ ಶೃತಿಗೂಡಿಸಿಕೊಂಡರೆ ಈ ಚೈತನ್ಯವು ನಮ್ಮಲ್ಲಿಯೂ ವ್ಯಕ್ತವಾಗಬಹುದು. ಆ ಚೈತನ್ಯದ ಜೊತೆಗೆ ಶೃತಿಗೂಡಿಸುವುದನ್ನೇ ನಾನು ಧ್ಯಾನವೆನ್ನುತ್ತೇನೆ.

ಧ್ಯಾನವೆಂದು ಕರೆಯುವ ತಂತ್ರ ಮತ್ತು ನಿಯಮಗಳಿಂದ ಈ ಅಂತಃಜ್ಞಾನದೊಂದಿಗೆ ಶೃತಿಗೂಡಿಸಿ ನಾವು ನಮ್ಮನ್ನು ಸಿದ್ಧಮಾಡಿಕೊಳ್ಳಬಹುದು. ನಮ್ಮ ಅಸ್ತಿತ್ವದಲ್ಲಿರುವ ಉನ್ನತ ಚೈತನ್ಯದೊಂದಿಗೆ ಶೃತಿಗೂಡಿಸುವುದನ್ನು ಪ್ರಾಚ್ಯದಲ್ಲಿ 'ಧ್ಯಾನ' ಎನ್ನಲಾಗಿದೆ ಮತ್ತು ತನ್ನ ಅಸ್ತಿತ್ವವನ್ನು ಮತ್ತೆಮತ್ತೆ ಅನುಭವಿಸಲು, ಅದು ಸತತವಾಗಿ ಆಹ್ವಾನವನ್ನು ನೀಡುತ್ತಿರುತ್ತದೆ. ಸಮಯ ಸಿಕ್ಕಾಗಲೆಲ್ಲಾ ನಿಮ್ಮೊಂದಿಗೆ ಕುಳಿತುಕೊಳ್ಳಿರಿ. ನಾವು ಇತರರಿಗೆ ಭೇಟಿಯಾಗಲು ನಿಗದಿತ ಸಮಯ ಕೊಡುತ್ತೇವೆ. ಆದರೆ ನಮ್ಮನ್ನೇ ಭೇಟಿಯಾಗಲು ಸಮಯ ಕೊಡುವುದಿಲ್ಲ ಎಂಬುದನ್ನು ಯಾವಾಗಲೂ ಕಾಣಬಹುದು. ನೀವು ನಿಮಗೇ ಸಮಯವನ್ನು ನೀಡಿದರೆ, ನಿಮ್ಮ ಅಸ್ತಿತ್ವದ ಒಂದು ಭಾಗವು ಅದೇನೋ ವ್ಯಕ್ತಪಡಿಸಬೇಕೆಂದಿರುವುದನ್ನೂ, ಇನ್ನೂ ಉನ್ನತವಾದುದು ಏನನ್ನೋ ಮಾಡಬೇಕೆಂದಿರುವುದನ್ನೂ ನೀವು ನಿಶ್ಚಯವಾಗಿ ಕಾಣುವಿರಿ. ಆದರೆ ನಾವು ಆ ಅಸ್ತಿತ್ವದ ಭಾಗಕ್ಕೆ ಸಮಯವನ್ನಾಗಲೀ ಅಥವಾ ಅವಕಾಶವನ್ನಾಗಲೀ ಕೊಡುವುದಿಲ್ಲ. ನಾವು ತಾರ್ಕಿಕ ಬುದ್ಧಿಶಕ್ತಿಯಲ್ಲಿ

ಧ್ಯಾನ ತಂತ್ರ

ಮಹಾಮಂತ್ರ ಧ್ಯಾನ:

ಹೃದಯ ಕೇಂದ್ರದಲ್ಲಿರುವ ಅನಾಹತ ಚಕ್ರವನ್ನು ಜಾಗೃತಗೊಳಿಸುವುದಕ್ಕಾಗಿ ಇರುವ ಪ್ರಾಚೀನಕಾಲದ ಟಿಬೆಟ್ಟಿನ ಬೌದ್ಧಮತದ ಒಂದು ತಂತ್ರವೇ ಮಹಾಮಂತ್ರ ಧ್ಯಾನ. ಈ ಧ್ಯಾನವು ನಿಮ್ಮ ಮನಸ್ಸನ್ನು ದೃಢವಾಗಿಯೂ, ಸಿದ್ಧವಾಗಿಯೂ ಇರುವಂತೆ

ಮಾಡುತ್ತದೆ. ನಿಮ್ಮ ಮನಸ್ಸು ಸದಾಕಾಲವೂ
ಆಲೋಚನೆಗಳಿಂದ ಓಲಾಡುತ್ತಿರುತ್ತದೆ. ಈ
ಧ್ಯಾನವು ನಿಮ್ಮ ಮನಸ್ಸನ್ನು ‘ಮನೋರಹಿತ’
ವಲಯದೊಳಗೆ ಹೋಗುವಂತೆ ಮಾಡಿ ಅದನ್ನು
ನಿಶ್ಚಲಗೊಳಿಸುತ್ತದೆ. ಅದು ಅನಂತದೊಳಗೆ
ಜಿಗಿಯುವ ಫಲಕವಿದ್ದಂತೆ.

ಇದನ್ನು ಬರಿದಾದ ಹೊಟ್ಟೆಯಲ್ಲಿ, ಆದಷ್ಟೂ
ಪ್ರಾತಃಕಾಲದಲ್ಲಿ ಅಥವಾ ಆಹಾರ ಸೇವಿಸಿದ ಎರಡು
ಗಂಟೆಗಳಾದ ಮೇಲೆ ಮಾಡಬೇಕು. ಇದನ್ನು
ಏಕಾಂಗಿಯಾಗಿಯೂ ಅಥವಾ ಸಾಮೂಹಿಕವಾಗಿಯೂ
ಮಾಡಬಹುದು. ಒಂದು ಸಮೂಹದೊಂದಿಗೆ
ಮಾಡಿದರೆ ಅದು ಮಾಡಿದ ಸ್ಥಳವನ್ನು
ಪರಿಣಾಮಕಾರಿಯಾಗಿ ಸಚೇತನಗೊಳಿಸುತ್ತದೆ.

ಸೂಚನೆಗಳು :

ಪೂರ್ಣ ಕಾಲಾವಧಿ : 30 ನಿಮಿಷ

ಹಂತ 1 : ಅವಧಿ 20 ನಿಮಿಷ

ಕಾಲುಗಳನ್ನು ಮಡಚಿಕೊಂಡು ನೆಲದಮೇಲೆ ಸುಖವಾಗಿರುವ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ತಲೆ, ಕತ್ತು ಮತ್ತು ಬೆನ್ನೆಲುಬು ಒಂದೇ ಸರಳರೇಖೆಯಲ್ಲಿ ಇರಬೇಕು. ನೆಲದ ಮೇಲೆ ಕುಳಿತುಕೊಳ್ಳಲಾಗದಿದ್ದರೆ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು. ವಿಶ್ರಮದಿಂದಿರಿ ಮತ್ತು ಕಣ್ಣು ಮುಚ್ಚಿಕೊಂಡಿರಿ. ಕಣ್ಣು ಮುಚ್ಚಿದ ಮೇಲೆಯೂ ಕಣ್ಣು ರೆಪ್ಪೆಗಳ ಹಿಂದೆ ಆಕಾರಗಳನ್ನೂ ಹಾಗೂ ಚಿತ್ರಗಳನ್ನೂ ಕಾಣುತ್ತೀರಿ. ಇದನ್ನು ನಿಭಾಯಿಸಲು ನಿಮ್ಮ ಕಣ್ಣುಗುಡ್ಡೆಗಳು ಕಲ್ಲಿನಂತಾಗಿವೆಯೆಂದು ಭಾವಿಸಿಕೊಳ್ಳಿರಿ. ಮಾನಸಿಕವಾಗಿ ಒತ್ತಡಹಾಕಿ ಅದನ್ನು ಗಟ್ಟಿಮಾಡಿ, ಅಷ್ಟೆ. ಆಗ ಚಿತ್ರಗಳು ಅಳಿಯುತ್ತವೆ. ನಿಮ್ಮ ಕಣ್ಣುಗಳ ಚಲನೆಗೂ ನಿಮ್ಮ ಮನಸ್ಸಿನೊಳಗಿನ ಆಲೋಚನೆಗಳ ಚಲನೆಗೂ ನಿಕಟ ಸಂಬಂಧವಿದೆ. ಆದುದರಿಂದಲೇ ಕಣ್ಣುಗುಡ್ಡೆಗಳ ಚಲನವನ್ನು ನಿರ್ಬಂಧಿಸಿ ಎಂದು ಹೇಳುವುದು. ಅದನ್ನು ನಿರ್ಬಂಧದಲ್ಲಿಡಲು ಅತಿಯಾಗಿ ಚಿಂತಿಸಬೇಡಿರಿ, ಸುಮ್ಮನೆ ಧ್ಯಾನವನ್ನು ಮುಂದುವರೆಸಿರಿ, ಅಷ್ಟೆ.

ತುಟಿಗಳನ್ನು ಸೇರಿಸಿಕೊಳ್ಳಿ ಮತ್ತು ‘ಮ್... ಎಂಬ ಶಬ್ದವನ್ನು ಒಳಗಿನಿಂದ ಮಾಡಿರಿ. ನೀವು ಮಾಡುವ ಶಬ್ದವು ಒಂದು ಅಲ್ಯೂಮಿನಿಯಂ ಪಾತ್ರೆಯಲ್ಲಿ ನಿಮ್ಮ ಮುಖವನ್ನಿಟ್ಟು ಝೇಂಕಾರ ಮಾಡಿದರೆ ಆಗುವ ಶಬ್ದದಂತೆ ಇರುತ್ತದೆ. ಇದು ‘ಹುಂ’ ಅಥವಾ ‘ಓಂ’ ಅಲ್ಲ ಎಂಬುದನ್ನು ಗಮನಿಸಿ. ಅದು ಸುಮ್ಮನೆ ನಿಮ್ಮ ತುಟಿಗಳನ್ನು ಒಂದಾಗಿಸಿ ‘ಮ್’ ಎಂಬ ಶಬ್ದವನ್ನು ಮಾಡುವುದು, ಅಷ್ಟೆ. ಈ ಝೇಂಕಾರವು ಮುಂದಿನ ಉಸಿರಾಟದವರೆಗೂ ಸಾಧ್ಯವಾದಷ್ಟೂ ದೀರ್ಘವಾಗಿರಬೇಕು. ಅದು ಆದಷ್ಟೂ ನಾಭಿಯಿಂದ ಬರಬೇಕು ಮತ್ತು ಸಾಧ್ಯವಾದಷ್ಟೂ ತೀವ್ರವಾಗಿರಬೇಕು.

ಪ್ರತಿಬಾರಿ ‘ಮ್’ ನಂತರವೂ ದೀರ್ಘವಾಗಿ ಶ್ವಾಸವನ್ನು ಒಳಗೆ ತೆಗೆದುಕೊಳ್ಳಲು ಪ್ರಯತ್ನಿಸಬೇಡಿರಿ; ಬೇಕಾದಾಗ ದೇಹವು ತಾನಾಗಿಯೇ ಉಸಿರನ್ನು ತೆಗೆದುಕೊಳ್ಳುತ್ತದೆ. ತುಂಬಾ ಉದ್ವೇಗದಿಂದಿರಬೇಡಿರಿ. ಇಡಿಯ ಅಸ್ತಿತ್ವವನ್ನು ಮತ್ತು ಚೈತನ್ಯವನ್ನು ಈ ಕಂಪನ ಹುಟ್ಟಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿರಿ. ಝೇಂಕಾರವೇ

ನೀವಾಗಿಬಿಡಿ. ನಿಮ್ಮ ದೇಹವು ಪೂರ್ಣವಾಗಿ ಈ ಕಂಪನದಿಂದ ತುಂಬಿಬಿಡಲಿ. ಈ ಝೇಂಕಾರದ ಕಂಪನವು ನಿಮ್ಮ ದೇಹವನ್ನೆಲ್ಲಾ ಆಕ್ರಮಿಸಿಕೊಳ್ಳಲು ಬಿಡಿರಿ. ಸ್ವಲ್ಪಸಮಯದ ನಂತರ ಈ ಝೇಂಕಾರವು ಯತ್ನವಿಲ್ಲದೇ ನಡೆಯುವುದನ್ನು ಗಮನಿಸುವಿರಿ, ನೀವು ಬರೀ ಶ್ರೋತೃವಾಗಿಬಿಡುವಿರಿ.

ಝೇಂಕಾರವು ನಿಮ್ಮ ಅರಿವನ್ನು ವರ್ತಮಾನಕ್ಕೆ
ತರುವ ಒಂದು ಪ್ರಬಲವಾದ ಕ್ರಮ. ತೀವ್ರವಾಗಿ
ಝೇಂಕಾರ ಮಾಡಿದಾಗ ನಿಮಗೆ ಬೇರಾವ
ಯೋಚನೆಯನ್ನೂ ಮಾಡಲು ಆಗುವುದಿಲ್ಲ.
ಆದುದರಿಂದ ಒಂದು ಸೆಕೆಂಡಿನಲ್ಲಿ ಬರುವ
ಆಲೋಚನೆಗಳು (ಟಿ.ಪಿ.ಎಸ್.) ತಾವಾಗಿಯೇ
ಕಡಿಮೆ ಆಗುತ್ತವೆ. ಈ ಝೇಂಕಾರದಿಂದ
ಉದ್ಭವಿಸಿದ ಚೈತನ್ಯವು ಮನೋಶರೀರ
ವ್ಯವಸ್ಥೆಯಲ್ಲಿರುವ ಚೈತನ್ಯತಡೆಗಳನ್ನು
ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ.

ನೀವು ತೀವ್ರವಾಗಿ ಝೇಂಕಾರ ಮಾಡುತ್ತಿರುವಾಗ
ನಿಮ್ಮ ಬಗ್ಗೆ ನಿಮಗಿರುವ ಅಭಿಪ್ರಾಯಗಳೆಲ್ಲವೂ
ಪೂರ್ಣವಾಗಿ ತಲ್ಲಣಗೊಳ್ಳುತ್ತವೆ. ಭೂಕಂಪದಂತೆ,
‘ಮನೋಕಂಪನ’ಕ್ಕೆ ಇದು ಒಂದು ತಂತ್ರ.

ಹಂತ 2 : ಕಾಲಾವಧಿ 10 ನಿಮಿಷ

ಝೇಂಕಾರವನ್ನು ನಿಲ್ಲಿಸಿದ ನಂತರ ಕಣ್ಣುಗಳನ್ನು ಮುಚ್ಚಿಕೊಂಡು ನಿಶ್ಯಬ್ದವಾಗಿ, ಅಲುಗಾಡದೆ, ಹಸನ್ಮುಖಿಯಾಗಿ ಮತ್ತು ಆನಂದಮಯವಾದ ಭಾವನೆಯಿಂದಿರಿ. ಯಾವುದಾದರೂ ಆಲೋಚನೆ ಮೇಲೆದ್ದರೆ ಅದನ್ನು ಬರಲು ಬಿಡಿ. ಒಂದು ಟೆಲಿವಿಷನ್ ನೋಡುವ ಹಾಗೆ ಅದನ್ನು ನೋಡಿರಿ. ಅದನ್ನು ವಿರೋಧಿಸಬೇಡಿರಿ ಮತ್ತು ಅವುಗಳ ಮೇಲೆ ಯಾವ ತೀರ್ಪುಗಳನ್ನೂ ಮಾಡಬೇಡಿರಿ. ನಿಶ್ಯಬ್ದವಾಗಿ ಹಾಗೂ ಆನಂದದಿಂದಿರಿ. ಈ ಸಮಯದಲ್ಲಿ ಝೇಂಕಾರದಿಂದ ಉಂಟಾದ ಶಕ್ತಿಯು ನಿಮ್ಮ ಅಸ್ತಿತ್ವದ ಎಲ್ಲಾ ಮೂಲೆಗಳಲ್ಲೂ ಆಳವಾಗಿ ಸೇರಿ ಸ್ವಚ್ಛಗೊಳಿಸುತ್ತದೆ. ಅದು ವರ್ತಮಾನದ ಕ್ಷಣದಲ್ಲಿ ನಿಮ್ಮ ಅರಿವನ್ನು ನೆಲೆಸುವಂತೆ ಮಾಡುತ್ತದೆ. ನಕಾರಾತ್ಮಕತೆಯನ್ನು ತೆಗೆಯಲು, ಸ್ಪಷ್ಟತೆಯನ್ನು ತರಲು ಮತ್ತು ನಿಮ್ಮ ನಿಜವಾದ ಸಾಮರ್ಥ್ಯದ ಅನುಭವವನ್ನು ಹೊಂದಲು ಈ ಅರಿವು ಒಂದಿದ್ದರೆ ಸಾಕು.