ಉತ್ಪಾದಕತೆ
This text was machine-transcribed from the printed book and may contain errors. Select the words and choose “Report a mistake”.
ನಿರೂಪಣೆ ಮತ್ತು ತಿಳಿವಳಿಕೆ
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ಅಧಿಕಾರಿಯು ತನ್ನ ನೌಕರನನ್ನು '
ಇಷ್ಟೊಂದು ಸರಳವಾದ ಕೆಲಸ ಮಾಡಲು ನಿನಗೆ
ಆರು ತಿಂಗಳುಗಳು ಏಕೆ ಹಿಡಿಯಿತು?' ಎಂದು
ವಿಚಾರಿಸಿದನು.
ನೌಕರನು, 'ನಿಮ್ಮ ಅಸ್ಪಷ್ಟ ನಿರ್ದೇಶನಗಳಿಂದ,
ನಿರಂತರ ಮಾರ್ಪಾಡುಗಳಿಂದ ಮತ್ತು ಕಡಿಮೆ
ಕೆಲಸದ ದಿನಗಳಿಂದಾಗಿ ಹೀಗಾಯಿತು' ಎಂದು
ಉತ್ತರಿಸಿದನು.
ಅಧಿಕಾರಿಯು, 'ನೀನು ಸೋಮಾರಿ ಎಂಬಂತಹ
ಎಂದು ಉತ್ತರ ನೀಡುವಿಯೇನೋ ಎಂದು ಎದುರು
ನೋಡುತ್ತಿದ್ದೆ!' ಎಂದು ಉತ್ತರಿಸಿದನು.
ಸಂಸ್ಥೆಗಳಲ್ಲಿ ಉತ್ಪಾದಕತೆಯನ್ನು ಕುರಿತು ಅದೆಷ್ಟೋ ಹೇಳಿದ್ದಾರೆ ಮತ್ತು ಬರೆದೂ ಇದ್ದಾರೆ. ಹಿಂದಿನ ಎರಡು ಅಥವಾ ಮೂರು ದಶಕಗಳಿಂದ ಉತ್ಪಾದಕತೆ ಎಂಬುದು ಒಂದು ಮಂತ್ರವಾಗಿಬಿಟ್ಟಿದೆ. ಕಂಪ್ಯೂಟರ್ಗಳ ಆವಿಷ್ಕಾರ ಮತ್ತು ಹೊಸ ಮಾಹಿತಿ ತಂತ್ರಜ್ಞಾನಗಳಾದ ಸೆಲ್ಫೋನ್ ಮತ್ತು ಇಂಟರ್ನೆಟ್ಗಳಿಂದ ಈ ಪ್ರಪಂಚವೇ ಒಂದು ಸಣ್ಣ ಪ್ರದೇಶವಾಗಿಬಿಟ್ಟಿದೆ. ಸಂಸ್ಥೆಗಳಲ್ಲಿ ಉತ್ಪಾದಕತೆಯು ಹೆಚ್ಚಾಗಿದ್ದರೂ ಅದು ನೌಕರರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಸೌಖ್ಯ ಬಹುದೊಡ್ಡ ಬೆಲೆಯನ್ನು ತೆರಬೇಕಾಗಿ ಬಂದಿದೆ. ಒತ್ತಡದ
ಪಾರ್ಶ್ವಪ್ರಭಾವವಿಲ್ಲದೆ, ಉತ್ಪಾದಕತೆ ಎಂದರೇನು
ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಹೇಗೆ
ಎಂಬುದನ್ನು ಈಗ ತಿಳಿದುಕೊಳ್ಳಲು
ಪ್ರಾರಂಭಿಸೋಣ.
ಸರಳವಾದ ಪದಗಳಲ್ಲಿ ಉತ್ಪಾದಕತೆಯನ್ನು ಈ ರೀತಿ ಅಳೆಯಬಹುದು.
ಉತ್ಪಾದಕತೆ = ಉತ್ಪಾದನೆ ÷ ತೊಡಗುವಿಕೆ
ಉತ್ಪಾದನೆಯ ಅಳತೆ ಎಂದರೆ, ಒಬ್ಬ ವ್ಯಕ್ತಿ
ಅಥವಾ ಒಂದು ಸಂಘ ಎಷ್ಟು ಕೆಲಸವನ್ನು ಮಾಡಿ
ಮುಗಿಸಿತು ಎನ್ನಬಹುದು ಅಥವಾ ಉತ್ಪಾದನೆಯ
ಸಂಸ್ಥೆಗಳಲ್ಲಿ ಎಷ್ಟು ಹಣ ಸಂಪಾದನೆಯಾಯಿತು
ಎನ್ನಬಹುದು.
ತೊಡಗುವಿಕೆಯ ಅಳತೆ ಎಂದರೆ, ಒಂದು
ಯೋಜನೆಯ ಕೆಲಸಕ್ಕೆ ಎಷ್ಟು ಗಂಟೆಗಳ
ಶ್ರಮಬೇಕಾಯಿತು, ತಯಾರಿಕೆಗೆ ಎಷ್ಟು
ವೆಚ್ಚವಾಯಿತು, ಮೊದಲಾದುವು ಸೇರಿರಬಹುದು.
ಪ್ರಾಚ್ಯ ಯೋಗ ರಹಸ್ಯದಿಂದ ಅರಿವು - ಉತ್ಪಾದಕತೆಯ ಮೇಲೆ ಸಂಸ್ಕಾರಗಳ ಪರಿಣಾಮ
ಮಾನವನ ಉತ್ಪಾದಕತೆಯನ್ನು ಹೆಚ್ಚಿಸಲು ವಿಶ್ವದಾದ್ಯಂತ ಸಂಸ್ಥೆಗಳು ಅನೇಕ ಬಿಲಿಯನ್ ಡಾಲರುಗಳನ್ನು ವ್ಯಯಮಾಡುತ್ತಿವೆ. ಬಹುಮಟ್ಟಿಗೆ ಈ ಕಾರ್ಯಕ್ರಮಗಳು ಹೊಸ ಕುಶಲತೆ ನೀಡುವುದು, ಇತರ ಮಾಧ್ಯಮ ಮತ್ತು ಸಂಪರ್ಕಗಳಾದ ಸಂಸ್ಥೆಯ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ತರಬೇತಿ ನೀಡುವುದು ಅಥವಾ ತಾಂತ್ರಿಕ ಸುಧಾರಣೆ ಮಾಡುವುದಕ್ಕೆ ಕೇಂದ್ರೀಕರಿಸುವುದು ಆಗಿರುತ್ತದೆ. ಇನ್ನು ಕೆಲವು ಸಂಸ್ಥೆಗಳು ಸಂಘಭಾವನೆಯನ್ನು ಅಭಿವೃದ್ಧಿಪಡಿಸುವುದು, ಪರಸ್ಪರ ವ್ಯಕ್ತಿವ್ಯವಹಾರ ಕುಶಲತೆಯನ್ನು ಕಲಿಸುವುದು, ಈ ರೀತಿಯಾದ ‘ಸಾಫ್ಟ್ ಸ್ಕಿಲ್ಸ್’ ಅಂದರೆ ‘ಸೂಕ್ಷ್ಮ ಕುಶಲತೆ’ಯಲ್ಲಿ ಬಂಡವಾಳ ಹಾಕುತ್ತಾರೆ. ಆದರೆ, ಬಹುಪಾಲು ತರಬೇತಿಗಳೆಲ್ಲವೂ ಕೇವಲ ಮೇಲ್ಮೈಯಲ್ಲಿರುವ ಕ್ರಿಯೆಗಳು, ನಡವಳಿಕೆಗಳು ಮತ್ತು ಗ್ರಹಿಕೆಗಳನ್ನೊಳಗೊಂಡ ಜಾಗೃತ ಮನಸ್ಸನ್ನು ಉದ್ದೇಶಿಸಿ ಮಾಡಲಾಗಿದೆ. ಆದರೆ ಶೇಕಡ 90 ಭಾಗ ನಮ್ಮ ಮನೋಭಾವನೆ ಮತ್ತು ನಡವಳಿಕೆಗಳು ಮನಸ್ಸಿನ ಆಳದಲ್ಲೆಲ್ಲೋ ಇರುತ್ತವೆ. ಅದನ್ನೇ ಸುಪ್ತಮನಸ್ಸು ಎಂದು ಮನೋವಿಶ್ಲೇಷಕ ಸಿಗ್ಮಂಡ್ ಫ್ರಾಯ್ಡ್ ಕರೆಯುವುದು.
ಜಾಗೃತ ಅರಿವಿನ ಸ್ತರದಲ್ಲಿ ಮನಸ್ಸನ್ನು ನೋಡಿದರೆ ಅಲ್ಲಿ ಆಲೋಚನೆಗಳು ಮತ್ತು ಗ್ರಹಿಕೆಗಳು ಜಾಗೃತ ಸ್ತರದಲ್ಲಿ ಶೇಖರಿಸಿಕೊಂಡಿರುತ್ತವೆ. ಆದರೆ ಅವುಗಳಿಗಿಂತಲೂ ಆಳವಾದ ನೆನಪುಗಳು ಮತ್ತು ಗ್ರಹಿಕೆಗಳಿದ್ದು ಸಮಸ್ಯೆಗಳನ್ನು ಬಗೆಹರಿಸಲು ನಾವು ಅವನ್ನು ಬಳಸಿಕೊಳ್ಳುತ್ತೇವೆ. ನಂತರ ಸುಪ್ತ ಅರಿವಿನ ಸ್ತರದಲ್ಲಿ ಭಾವನೆಗಳ ಮತ್ತು ಅನುಭವಗಳ ಒಂದು ಇಡೀ ಶ್ರೇಣಿಯೇ ಹುದುಗಿದೆ. ಇಲ್ಲಿಯೇ ನಮ್ಮ ಸಂಸ್ಕಾರಗಳು ಅಥವಾ ಕೊರೆಯಲ್ಪಟ್ಟ ನೆನಪುಗಳು ನೆಲೆಸಿರುವುದು.
ತಿಳಿವಳಿಕೆ ಅಥವಾ ನಿರ್ದಿಷ್ಟ ಕುಶಲತೆಯನ್ನು
ಕಲಿಸಲು ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳು
ಬಹುಪಾಲು ಜಾಗೃತ ಮಾನಸ್ಸಿನ ಮೇಲೆ
ಕೇಂದ್ರಿತವಾಗಿರುತ್ತವೆ. ಆದರೆ ಯಾವಾಗ
ಬೇಕಾದರೂ ಸಿಡಿದು ಚಿಮ್ಮಲು ಸಿದ್ಧವಾಗಿರುವ
ಮನೋಭಾವನೆಯ ಜ್ವಾಲಾಮುಖಿಯ ಮೇಲೆ ನಾವು
ಕುಳಿತಿದ್ದೇವೋ ಎಂಬಂತಿದೆ ವಾಸ್ತವ ಸ್ಥಿತಿ!
ನಮ್ಮ ಅಸಮರ್ಥತೆ ಮತ್ತು ಕೆಲವು ವೇಳೆ
ತರ್ಕವಿಲ್ಲದ ನಡವಳಿಕೆಗಳಿಗೆ ಈ ಅಡಗಿರುವ
ಮನೋಭಾವನೆಗಳೇ ಕಾರಣ!
ಸಂಸ್ಕಾರಗಳು ನಮ್ಮ ನಿರ್ಧಾರ ಪ್ರಕ್ರಿಯೆಗೆ ಅಡ್ಡ ಬರುತ್ತವೆ. ಇವನ್ನು ಮಾನಸ್ಸಿನಲ್ಲಿರುವ ಅಸಮರ್ಥತೆಗಳು ಎನ್ನೋಣ! ಈ ಸಂಸ್ಕಾರಗಳು ಎಷ್ಟೆಷ್ಟು ಹೆಚ್ಚಾಗಿರುತ್ತವೆಯೋ ಅಷ್ಟಷ್ಟು ನಮ್ಮ ಯೋಚನೆಯ ಪ್ರಕ್ರಿಯೆಗಳು ಮಬ್ಬಾಗಿ ಇರುತ್ತವೆ ಮತ್ತು ಉತ್ಪಾದನೆಯಲ್ಲಿ ಇಳಿತವಾಗುತ್ತದೆ. ಇನ್ನೊಂದು ರೀತಿ ಹೇಳಬೇಕೆಂದರೆ, ಒಂದು ನಿರ್ದಿಷ್ಟವಾದ ಉತ್ಪಾದನೆಗೆ ಹೆಚ್ಚು ಸಂಸ್ಕಾರಗಳಿದ್ದರೆ ಹೆಚ್ಚು ಜನ, ಇಲ್ಲವೇ ಹೆಚ್ಚು ವೆಚ್ಚ ಇಲ್ಲವೇ, ಹೆಚ್ಚು ಸಮಯ ಬೇಕಾಗುತ್ತದೆ. ಹಾಗಾಗಿ ಇವು ಕಡಿಮೆ ಉತ್ಪಾದಕತೆಯಾಗಿ ಪರಿಣಮಿಸುತ್ತವೆ.
ಫ್ರಾಯ್ಡ್ರವರ ಸುಪ್ತಮನಸ್ಸಿನ ನಿರೂಪಣೆ
ಮನೋವಿಜ್ಞಾನವನ್ನು ಅಧ್ಯಯನ ಮಾಡಿದ ಬಹುಪಾಲು ಓದುಗರೆಲ್ಲರಿಗೂ ಫ್ರಾಯ್ಡ್ರವರ ಮನೋವ್ಯಾಖ್ಯಾನ ತಿಳಿದಿರುತ್ತದೆ. ಅನೇಕ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ತರಬೇತಿ ಮತ್ತು ಕುಶಲತೆಯನ್ನು ವೃದ್ಧಿಸುವ ಕಾರ್ಯಕ್ರಮಗಳು ನಮ್ಮ ಸಾಮರ್ಥ್ಯದ ಕೇವಲ ಶೇಕಡ 10 ಭಾಗ ಜಾಗೃತ ಮನಸ್ಸನ್ನು ಉದ್ದೇಶಿಸಿರುತ್ತದೆ. ಸಂಸ್ಕಾರಗಳನ್ನು ಉದ್ದೇಶಿಸಿದಾಗ ಮಾತ್ರ ಸಾಮರ್ಥ್ಯದ ಶೇಕಡ 90 ಭಾಗವನ್ನು ವಾಸ್ತವಿಕರಿಸಬಹುದು. ಈ ಬಹುದೊಡ್ಡ ಸಾಮರ್ಥ್ಯವನ್ನು ಧ್ಯಾನತಂತ್ರಗಳ ಮೂಲಕ ಅನುಭವಕ್ಕೆ ತಂದುಕೊಳ್ಳಬಹುದು.
ಈಗ ನಾನು ವಿವರಿಸಿದ ವಿಚಾರದ ಉದಾಹರಣೆಗಾಗಿ ಒಂದು ಸರಳವಾದ ಪ್ರಯೋಗ ಮಾಡಲು, ನಿಮ್ಮ ಹದಿನೈದು ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೇನೆ. ಒಂದು ಬಿಳಿಯ ಹಾಳೆಯನ್ನು ತೆಗೆದುಕೊಂಡು ನಿಮ್ಮ ಮನಸ್ಸಿಗೆ ಏನೇನು ಬರುತ್ತದೆಯೋ ಅದನ್ನು ಗುರುತುಹಾಕಿಕೊಳ್ಳಿರಿ. ದಯವಿಟ್ಟು ನಿಮ್ಮಲ್ಲಿ ಬರುವ ಯೋಚನೆಗಳನ್ನು ತಿದ್ದುವುದಾಗಲೀ, ಶೋಧಿಸುವುದಾಗಲೀ ಅಥವಾ ತೀರ್ಪುನೀಡುವುದಾಗಲೀ ಮಾಡಬೇಡಿರಿ. ನಿಮ್ಮಲ್ಲಿ 'ಆಲೋಚನೆ ಮುದ್ರಣಮಾಡುವ ಯಂತ್ರ'(ಧ್ವನಿ ಮುದ್ರಣ ಯಂತ್ರದಂತೆ) ಒಂದನ್ನು ಜೋಡಿಸಲಾಗಿದೆ ಎಂಬಂತೆ ಮತ್ತು ನಿಮ್ಮ ಮನಸ್ಸಿನಲ್ಲಿ ಏನೇನು ಬರುತ್ತವೆಯೋ ಅವೆಲ್ಲವನ್ನೂ ಗುರುತು ಮಾಡಿಕೊಳ್ಳಿರಿ. ಈಗ 15 ನಿಮಿಷಗಳ ನಂತರ ನಿಮ್ಮ ಲೇಖನಿಯನ್ನು ಬದಿಗಿಟ್ಟು, ನೀವು ಈಗತಾನೇ ಬರೆದಿರುವುದನ್ನು ಓದಿಕೊಳ್ಳಿರಿ.
ನೀವು ನಿಸ್ಪೃಹವಾಗಿ ಮನಸ್ಸಿಗೆ ಬಂದದ್ದನ್ನು
ದಾಖಲೆ ಮಾಡಿದ್ದರೆ, ಗೊತ್ತುಗುರಿ ಇಲ್ಲದ,
ಸಂಬಂಧವಿಲ್ಲದ, ತರ್ಕವಿಲ್ಲದ ಆಲೋಚನೆಗಳು
ಗೊತ್ತುಗುರಿಯಿಲ್ಲದ
ಆಲೋಚನೆಗಳನ್ನು
ನಿರ್ಮೂಲ
ಮಾಡಲು
ಬೇಕಾದ
ಉಪಕರಣವನ್ನು
ನಾನು ಧ್ಯಾನ
ಎಂದು
ಕರೆಯುತ್ತೇನೆ.
ಮನಸ್ಸಿನಲ್ಲಿ ಹಾದು
ಹೋಗಿರುವುದನ್ನು
ತಿಳಿಯುತ್ತೀರಿ. ಈ
ಆಲೋಚನೆಗಳು
ಇರುವುದು ಒಂದು
ಯಂತ್ರದಲ್ಲಿ ಇರುವ
ತಿಕ್ಕಾಟ ಇದ್ದಂತೆ. ಅದು
ಯಂತ್ರವನ್ನು
ಅಸಾಮರ್ಥ್ಯಗೊಳಿಸಿ,
ನಿರುತ್ಪಾದಕತೆ ಆಗುವಂತೆ
ಮಾಡುತ್ತದೆ. ಇದೇ ಕಡಿಮೆ ಉತ್ಪಾದಕತೆಯ ಮೂಲ
ಕಾರಣ.
ಈ ಪ್ರಕ್ರಿಯೆಮಾಡಿ ತಮ್ಮ ಸಂಸ್ಕಾರಗಳನ್ನು
ತೆಗೆದುಹಾಕಲು ಶ್ರಮಪಟ್ಟ ನನ್ನ ಅನೇಕ ಶಿಷ್ಯರು
ನನ್ನ ಬಳಿ ಬಂದು, ಈಗ ತಮಗೆ ಕಾರ್ಯನಿರತ
ಜೀವನದಲ್ಲೂ ಸಹ ಎಷ್ಟೊಂದು ಸಮಯವಿದೆ
ಎನ್ನಿಸುತ್ತದೆ ಮತ್ತು ಈಗ ಚಂಚಲ ಮನಸ್ಸಿನಿಂದ
ಮತ್ತು ತರ್ಕವಿಲ್ಲದ ಆಲೋಚನೆಗಳಿಂದ
ತೊಂದರೆಯಾಗುತ್ತಿಲ್ಲವೆಂದು ಹೇಳುತ್ತಾರೆ.
ಈ ಗೊತ್ತುಗುರಿಯಿಲ್ಲದ ಆಲೋಚನೆಗಳನ್ನು
ನಿರ್ಮೂಲ ಮಾಡಲು ಬೇಕಾದ ಉಪಕರಣವನ್ನೇ
ನಾನು ಧ್ಯಾನ ಎಂದು ಕರೆಯುತ್ತೇನೆ. ಒಮ್ಮೆ ಈ
ಆಲೋಚನೆಗಳನ್ನು ತೆಗೆದುಹಾಕಿದರೆ, ಯಂತ್ರದಲ್ಲಿ
ತಿಕ್ಕಾಟವನ್ನು ಕಡಿಮೆ ಮಾಡಿದಂತಾಗುತ್ತದೆ ಮತ್ತು
ಯಂತ್ರದ ಸಾಮರ್ಥ್ಯ ಹಾಗೂ ಉತ್ಪಾದನೆ
ಹೆಚ್ಚಾಗಲು ಅನುವುಮಾಡಿಕೊಟ್ಟಂತೆ ಆಗುತ್ತದೆ.
ನಮ್ಮ ಧ್ಯಾನ ಕಾರ್ಯಕ್ರಮಗಳಲ್ಲಿ ಎಲ್ಲಾ ಬುಡಕಟ್ಟಿನವರು, ಎಲ್ಲಾ ದೇಶದವರು, ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ಸಾವಿರಾರು ಜನರು, ತಮ್ಮ ಸಂಸ್ಕಾರಗಳನ್ನು ತೆಗೆದುಹಾಕುವ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಸಾವಿರಾರು ಜನರು ನನ್ನ ಬಳಿ ಬಂದು ಹೇಳುವುದೇನೆಂದರೆ, ತಮ್ಮ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಪರಸ್ಪರ ವ್ಯಕ್ತಿ ಸಂಬಂಧಗಳು ಉತ್ತಮಗೊಂಡಿವೆ ಎಂದು. ಒತ್ತಡ ಕಡಿಮೆಯಾಗಿರುವ ಅನುಭವವಾಗುತ್ತಿದೆಯೆಂದೂ, ಹೆಚ್ಚು ಸೃಜನತೆ ಮತ್ತು ನವೀನತೆಯನ್ನು ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಅನುಭವಿಸುತ್ತಿದ್ದೇವೆಯೆಂದೂ ಹೇಳುತ್ತಾರೆ. ನಾನು ಮುಂಚೂಣಿಯಲ್ಲಿರುವ ಸಂಸ್ಥೆಗಳ ಮುಖ್ಯಸ್ಥರೊಡನೆಯೂ, ನೊಬೆಲ್ ಬಹುಮಾನ ಪಡೆದವರ ಜೊತೆಗೂ ಈ ಬಗ್ಗೆ ಆಸಕ್ತಿಯಿಂದ ಮಾತನಾಡಿದ್ದೇನೆ. ಅವರೆಲ್ಲರೂ ಸಂಸ್ಕಾರಗಳಿಂದ ಬಿಡುಗಡೆ ಹೊಂದಿದ ಮೇಲೆ ಸೃಜನಶೀಲತೆ ಹಾಗೂ ಅಂತಃಸ್ಫೂರ್ತಿಯು ಹೇಗೆ ಬೆಳೆಯುತ್ತವೆಂಬುದನ್ನು ನನಗೆ ಹೇಳಿದ್ದಾರೆ.
ಉತ್ಪಾದಕತೆಯನ್ನು ವಿವರಿಸಲು ಈ ಮುಂದಿನ ಸಮೀಕರಣವನ್ನು ಹೀಗೆ ಪುನರುತ್ಪಾದಿಸಬಹುದು.
ಉತ್ಪಾದಕತೆ = ಉತ್ಪಾದನೆ ÷ ತೊಡಗುವಿಕೆ
ತೊಡಗುವಿಕೆ = ಬುದ್ಧಿಶಕ್ತಿ + ತಾಂತ್ರಿಕ ಕುಶಲತೆ
- ಸಂಸ್ಕಾರಗಳು
ನಿಮಗೆ ತಿಳಿದಹಾಗೆ ನಾವು ನಮ್ಮ ಮನಸ್ಸಿನೊಂದಿಗೆ 24 ಗಂಟೆ 365 ದಿನಗಳು ಜೀವಿಸುತ್ತೇವೆ. ಬಹಳ ಜನರಿಗೆ ಮನಸ್ಸು ಯಾವಾಗಲೂ ಓಡುತ್ತಿರುತ್ತದೆ, ವಿಶ್ಲೇಷಣೆ ಮಾಡುತ್ತಿರುತ್ತದೆ. ವ್ಯಕ್ತಿಗಳ ಮೇಲೆ ತೀರ್ಪುಗಳನ್ನು ನೀಡುತ್ತಿರುತ್ತದೆ, ವಿಧವಿಧವಾದ ಭಾವನೆಗಳನ್ನು ಹೊಂದಿರುತ್ತದೆ ಮತ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯೆ ನೀಡುತ್ತಿರುತ್ತದೆ. ಇವೆಲ್ಲವೂ ನಮ್ಮನ್ನು 'ಕಾಡುತ್ತಿರುವ' ಸಂಸ್ಕಾರದ ಮಟ್ಟವನ್ನು ಅವಲಂಬಿಸಿರುತ್ತದೆ.
ಈ ಸಂಸ್ಕಾರಗಳ ಭಾರವಿಲ್ಲದೆ ನಿಮ್ಮ ಮನಸ್ಸು
ನಿಮ್ಮ ಜೊತೆ ನೂಕಾಟ, ಎಳೆದಾಟ ಮಾಡುವ
ಬದಲು, ನಿಮ್ಮ ಸ್ವಾಭಾವಿಕ ಬುದ್ಧಿಶಕ್ತಿ ಹಾಗೂ
ವಿದ್ಯಾಭ್ಯಾಸದಲ್ಲಿ ನೀವು ಬೆಳೆಸಿಕೊಂಡ
ಕುಶಲತೆಗಳನ್ನು ತರಬೇತಿಗಳನ್ನು ಅಥವಾ ಜೀವನದ
ಅನುಭವಗಳನ್ನು ನೇರವಾಗಿ ಉತ್ಪಾದನೆಗೆ
ಉಪಯೋಗವಾಗುತ್ತದೆ. ಉತ್ಪಾದನೆಯಮಟ್ಟವು
ಸುಲಭವಾಗಿ ಮೇಲೇರುವುದನ್ನು ಕಾಣುವಿರಿ.
ಈ ಒಂದು ಕ್ಷೇತ್ರಕ್ಕೆ ಕಂಪೆನಿಗಳು ಮತ್ತು ಸಂಸ್ಥೆಗಳು ಗಮನಕೊಟ್ಟಿಲ್ಲ. ಆದರೆ ಸಂಸ್ಕಾರಗಳನ್ನು ತೆಗೆದುಹಾಕಿ, ಮನಸ್ಸನ್ನು ಶುದ್ಧಿಗೊಳಿಸಲು ತಂತ್ರಗಳನ್ನು ರಚಿಸಿರುವ ಪ್ರಾಚ್ಯ ಅನುಭಾವಿಗಳು ಕೊಟ್ಟ ಸರಳವಾದ ಉಪಕರಣಗಳು ಮತ್ತು ತಂತ್ರಗಳಿವೆ.
ಕೆಲವು ಸಲ ಜನರು 'ನಾವು ಸಂಸ್ಕಾರಗಳಿಂದ ಮುಕ್ತರಾದರೆ ಆಲೋಚನೆ ಮಾಡುವುದನ್ನು ನಿಲ್ಲಿಸಿ ಬಿಡುತ್ತೇವೆಯೆ? ಸೋಮಾರಿಗಳಾಗಿ ತೃಪ್ತಿಯಿಂದ ಇದ್ದು ಬಿಡುತ್ತೇವೆಯೋ?' ಎಂದು ನನ್ನನ್ನು ಕೇಳುತ್ತಾರೆ. ಆದರೆ ಹೇಳುತ್ತೇನೆ ಕೇಳಿರಿ, ನಿಜಸ್ಥಿತಿ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಈ ಸ್ವಲ್ಪ ಸಮಯದ ಹಿಂದೆ, ಹದಿನೈದು ನಿಮಿಷ ಮನಸ್ಸಿಗೆ ಬಂದದ್ದನ್ನು ಬಿಳಿಯಹಾಳೆಯ ಮೇಲೆ ಗುರುತುಮಾಡುವ, ಪ್ರಯೋಗವನ್ನು ಪುನಃ ಮಾಡಿನೋಡಿರಿ. ಮನಸ್ಸು ಸಂಸ್ಕಾರಗಳ ಪ್ರಭಾವದಿಂದ ಮುಕ್ತವಾಗಿದ್ದರೆ ಬುದ್ಧಿಶಕ್ತಿಯಲ್ಲಿ ನೀವು ಪರಿಮಾಣಿತ ಜಿಗಿತವನ್ನು ಕಾಣುವಿರಿ ಮತ್ತು ಸೃಜನಶೀಲರಾಗುವಿರಿ ಹಾಗೂ ಬುದ್ಧಿವಂತಿಕೆಯ ಒಂದು ಸಮಗ್ರ ಹೊಸ ವಲಯವೇ ಮೇಲೆದ್ದು ಬರುವುದು. ಇದ್ದಕ್ಕಿದ್ದ ಹಾಗೆ ನೀವು ಅಂತಃಸ್ಫೂರ್ತಿಯ ಮತ್ತು ನವೀನತೆಯ ಕುಶಲತೆಗಳು ನಿಮ್ಮಿಂದ ಹೊರಹೊಮ್ಮುವುದನ್ನು ಕಾಣುವಿರಿ.
ತಿಳಿಯಿರಿ, ಈಗ ನೀವು ಪ್ರವೇಶಮಾಡುವುದು ಒಂದು ನಿಗೂಢ ವಲಯ ಅಲ್ಲ. ಬಹಳ ಸ್ಪಷ್ಟತೆಯಿಂದಿರಿ, ಅಂತಃಸ್ಫೂರ್ತಿಯ ಕುಶಲತೆ ನಮ್ಮೆಲ್ಲರಲ್ಲೂ ಒಳಗೆ ನೆಲೆಸಿರುತ್ತದೆ. ಸಂಸ್ಕಾರಗಳ ಪ್ರಭಾವದಿಂದ ಅವು ಅಸ್ಪಷ್ಟವಾಗಿವೆ. ಈಗ ನಾನು ಅಂತಃಸ್ಫೂರ್ತಿಯನ್ನು ಹಾಗೂ ನವೀನತೆಯನ್ನು ಸಂಸ್ಕಾರಗಳಿಂದ ಮುಕ್ತವಾದ ಮನೋ-ಶರೀರ ವ್ಯವಸ್ಥೆಯು ಯಾವ ರೀತಿ ಉತ್ತಮಗೊಳಿಸುತ್ತದೆ ಎಂಬುದನ್ನು ವಿವರಿಸುತ್ತೇನೆ.