KAILASA Library/ಜೀವನ್ಮುಕ್ತಿ/ಮುಖಂಡಪ್ರಜ್ಞೆSign in
ಜೀವನ್ಮುಕ್ತಿ

ಮುಖಂಡಪ್ರಜ್ಞೆ

This text was machine-transcribed from the printed book and may contain errors. Select the words and choose “Report a mistake”.

ಮುಖಂಡತ್ವ - ಒಬ್ಬ ವ್ಯಕ್ತಿಯು

ಪ್ರಜ್ಞಾಪೂರ್ವಕವಾಗಿ ಮಾಡಿದ ಆಯ್ಕೆಯ ಫಲ

'ಮುಖಂಡಪ್ರಜ್ಞೆ' ಎಂದಾಗ ನಾನು ಹೇಳುತ್ತಿರುವುದರ ಅರ್ಥವೇನು?

ನಮ್ಮಲ್ಲಿ ಅನೇಕರು ಮುಖಂಡನ ಅಂತಸ್ತನ್ನು ಗಳಿಸುತ್ತೇವೆಯೇ ವಿನಃ ಸ್ಥಿತಿಯನ್ನಲ್ಲ. ಸ್ಥಿತಿ ಮತ್ತು ಅಂತಸ್ತು ಸಂಪೂರ್ಣವಾಗಿ ಬೇರೆಬೇರೆ. ಅಂತಸ್ತು ಬರುವುದು ಸಮಾಜದಿಂದ. ಬಲವಂತದಿಂದಲೋ ಅಥವಾ ದುರಾಸೆಯಿಂದಲೋ ಒಂದು ವಿಭಾಗದ ಮುಖಂಡತ್ವವನ್ನು ವಹಿಸಿಕೊಂಡಾಗ ಅಂತಸ್ತು ಬರುತ್ತದೆ. ಆದರೆ 'ಸ್ಥಿತಿ'ಯ ಎನ್ನುವುದರ ವಿಚಾರವೇ ಬೇರೆ.

'ಸ್ಥಿತಿ' ಎಂಬ ಪದವನ್ನು ಬಳಸುವಾಗ ನಾನು ಹೇಳುತ್ತಿರುವುದು ನಿಮ್ಮ ಅಂತರಂಗವನ್ನು ಕುರಿತಾಗಿದೆ ಅಥವಾ ನೀವು ಯಾವುದನ್ನು ಪ್ರವೇಶಿಸುವಿರೋ, ಯಾವುದರ ಜವಾಬ್ದಾರಿಯನ್ನು ಹೊರುವಿರೋ ಅದನ್ನು ನಿಭಾಯಿಸುವುದರ ಪಕ್ವತೆಯನ್ನು ಕುರಿತಾಗಿದೆ. ಸ್ಥಿತಿಯನ್ನು ಗಳಿಸದೆ ಅಂತಸ್ತನ್ನು ಮಾತ್ರ ಗಳಿಸಿದಾಗ, ಸಂಸ್ಥಾ ಪ್ರಪಂಚದಲ್ಲಿರುವ ಒತ್ತಡ ಉದ್ವೇಗಗಳು ಮುಂತಾದ ಸಮಸ್ಯೆಗಳು ನಿಮ್ಮ ವೈಯಕ್ತಿಕ ಹಂತದಲ್ಲಿಯೂ ರಾಜಕೀಯ, ಬೆನ್ನಿರಿತ ಮುಂತಾದುವುಗಳು ತಂಡದ ಹಂತದಲ್ಲಿಯೂ ಪ್ರಾರಂಭವಾಗುತ್ತವೆ. ಸ್ಥಿತಿಯನ್ನು ಹೊಂದದೆ, ಅಂತಸ್ತನ್ನು ಮಾತ್ರ ಗಳಿಸಿದಾಗ ಈ ಎಲ್ಲಾ ಸಮಸ್ಯೆಗಳೂ ಪ್ರಾರಂಭವಾಗುತ್ತವೆ.

ಅಂತಸ್ತು ಮಾತ್ರವಲ್ಲದೆ, ಮುಖಂಡಪ್ರಜ್ಞೆಯನ್ನು ಗಳಿಸುವುದು ಹೇಗೆ, ಮುಖಂಡಪ್ರಜ್ಞಾಸ್ಥಿತಿಯನ್ನು ಗಳಿಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಾಚ್ಯದ ಮಹಾನ್ ಪರಂಪರೆಯ ಸತ್ಯಗಳನ್ನು ವ್ಯಕ್ತಪಡಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ನೋಡಿರಿ, ನಾವು ಅಂತಸ್ತನ್ನು ಗಳಿಸುವುದು ಬಹಳ ಸುಲಭ, ಸ್ಥಿತಿಯನ್ನು ಸಂಪಾದಿಸುವುದು ಕಷ್ಟ. ಮುಖಂಡಸ್ಥಿತಿಯನ್ನು ಗಳಿಸಿದವನಿಗೆ ಅಂತಸ್ತು ತಾನಾಗಿಯೇ ಹಿಂಬಾಲಿಸಿ ಬರುತ್ತದೆ. ಅಂತಸ್ತು ಬರಲು ಅದರದೇ ಸಮಯ ತೆಗೆದುಕೊಂಡರೂ, ಅಂತಹವನು ಅದರಿಂದ ಚಿಂತಿತನಾಗುವುದಿಲ್ಲ ಮತ್ತು ಅವನು ರಾಜನಂತಿರುತ್ತಾನೆ! ಅವನ ಜೀವನವೇ ಪೂರ್ಣತ್ವದಿಂದ ತುಂಬಿರುತ್ತದೆ. ಮುಖಂಡಪ್ರಜ್ಞೆಯನ್ನು ಪಡೆದವರಿಗೆ ಅಮೂಲ್ಯವಾದ ಪೂರ್ಣತ್ವದ ಭಾವನೆಯು ದೊರಕುತ್ತದೆ.

ಮುಖಂಡಸ್ಥಿತಿ ಹಾಗೂ ಅದಕ್ಕೆ ಪ್ರತಿಯಾಗಿ ಮುಖಂಡನ ಅಂತಸ್ತು

ಮುಖಂಡಸ್ಥಿತಿ ಎಂಬ ಪದವನ್ನು ನಾನು ಹೇಳಿದಾಗ ಅದರ ಅರ್ಥವೇನು?

ಯಾರು ಅರಿವಿನಿಂದ ಜವಾಬ್ದಾರಿ ವಹಿಸಲು
ಸಿದ್ಧನೋ, ಯಾರು ಜೀವನವನ್ನು ಅರಿವಿನಿಂದ
ನಿರ್ವಹಿಸುವನೋ,
ಯಾರು ಹಿಂದಿನ
ನೆನಪುಗಳ ಮೇಲೆ
ಅವಲಂಬಿತನಾಗಿರುವುದಿ-
ಲ್ಲವೋ ಆತನೇ
ನಿಜವಾದ ಮುಖಂಡ.
ನೀವು ನೆನಪುಗಳ ಮೇಲೆ
ಅವಲಂಬಿತವಾಗಿದ್ದರೆ,
ನೀವು ಹಿಂದಿನದನ್ನು
ಆಧಾರವಾಗಿಟ್ಟುಕೊಂಡು ನಿರ್ಧಾರಗಳನ್ನು
ತೆಗೆದುಕೊಂಡರೆ, ಸ್ಪಷ್ಟವಾಗಿ ತಿಳಿಯಿರಿ, ನೀವು
ಅನುಯಾಯಿಗಳಾಗುವಿರೇ ವಿನಃ
ಮುಖಂಡರಾಗುವುದಿಲ್ಲ.

ಯಾರು
ಅರಿವಿನಿಂದ
ಜವಾಬ್ದಾರಿ
ವಹಿಸಲು
ಸಿದ್ಧನೋ
ಆತನೇ
ನಿಜವಾದ
ಮುಖಂಡ.

ಸಮಯಸ್ಫೂರ್ತಿಯಿಂದ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವುದನ್ನೇ ನಾನು ಜವಾಬ್ದಾರಿ ಎನ್ನುತ್ತೇನೆ.

ಯಾರು ಸಮಯಸ್ಫೂರ್ತಿಯಿಂದ ಪರಿಸ್ಥಿತಿಗಳಿಗೆ ಸ್ಪಂದಿಸಬಲ್ಲರೋ, ಯಾರು ಉಲ್ಲಾಸಕರವಾಗಿದ್ದು ಸಜೀವತೆಯಿಂದ ಕೂಡಿರುತ್ತಾರೆಯೋ ಹಾಗೂ ಹಿಂದಿನ ವಿಚಾರಗಳಲ್ಲಿ ಸಿಕ್ಕಿಕೊಂಡಿರುವುದಿಲ್ಲವೋ, ಅವರೇ ಒಬ್ಬ ಜವಾಬ್ದಾರಿಯುಳ್ಳ ಮುಖಂಡರು.

ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ, ಮುಖಂಡನ ಸ್ಥಿತಿಯನ್ನು ಪಡೆಯುವುದು ಹೇಗೆ, ಮುಖಂಡ ಪ್ರಜ್ಞೆ ಹೇಗೆ ಮೂಡುತ್ತದೆ ಎಂಬುದಕ್ಕೆ ಒಂದು ರೇಖಾಚಿತ್ರವನ್ನು ಕೊಡಲು ಪ್ರಯತ್ನಿಸುತ್ತೇನೆ. ನಾವು ಮಾಹಿತಿಗಳನ್ನು ಯಾವ ರೀತಿ ಗ್ರಹಿಸುತ್ತೇವೆ, ಪ್ರಕ್ರಿಯೆ ಮಾಡುತ್ತೇವೆ ಮತ್ತು ನಿರ್ಧಾರಗಳನ್ನು ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳೋಣ.

ಮನಸ್ಸು ಕಾರ್ಯಮಾಡುವ ರೀತಿ

ಉದಾಹರಣೆಗೆ, ನಿಮ್ಮ ಕಣ್ಣುಗಳಿಂದ ಏನನ್ನಾದರೂ ನೋಡುತ್ತಿದ್ದೀರಿ. ವಾಸ್ತವವಾಗಿ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶಗಳಿಂದ ನೀವು ಮಾಹಿತಿಗಳನ್ನು ಗ್ರಹಿಸುತ್ತೀರಿ. ಸದ್ಯಕ್ಕೆ ಕಣ್ಣನ್ನು ಉದಾಹರಣೆಯಾಗಿ ಪರಿಗಣಿಸೋಣ. ನೀವು ನಿಮ್ಮ ಕಣ್ಣುಗಳಿಂದ ನೋಡಿದಾಗ ಒಮ್ಮೆಲೇ ಆ ಕಡತ ‘ಚಕ್ಷು’ವೆಂಬ ಸ್ಥಳಕ್ಕೆ ಹೋಗಿ ಸೇರುತ್ತದೆ. ಅದು ಡಿಜಿಟಲ್ ಸಿಗ್ನಲ್ ಪ್ರೋಸೆಸರ್ (DSP) ನಂತಿರುತ್ತದೆ. ನೀವು ಏನನ್ನು ನೋಡುತ್ತಿದ್ದರೂ ಅದನ್ನು ಡಿಜಿಟಲ್ ಸಿಗ್ನಲ್ ಕಡತದಂತೆ ಜೀವ ಸಂಕೇತವಾಗಿ ಪರಿವರ್ತನೆ ಮಾಡುತ್ತದೆ.

ಈ ಕಡತ ಸಂಸ್ಕೃತದಲ್ಲಿ ಚಿತ್ತ ಎಂದು
ಕರೆಯಲ್ಪಡುವ ಸ್ಥಳಕ್ಕೆ ಸಾಗುತ್ತದೆ. ಅದು
ಕಂಪ್ಯೂಟರ್‌ನ ಮೆಮೊರಿ ಇದ್ದಂತೆ. ಇಲ್ಲಿ ಗುರುತು
ಹಿಡಿಯುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಉದಾಹರಣೆಗೆ, ಈಗ ನೀವು ಈ ಪುಸ್ತಕವನ್ನು
ನೋಡುತ್ತಿರುವಿರಿ. ಈ ಕಡತ ಸಂಪೂರ್ಣವಾಗಿ
DSP ಅಥವಾ ಚಕ್ಷುವಿಗೆ ಹೋಗುತ್ತದೆ. ಅದು
ಸಂಪೂರ್ಣವಾಗಿ ಜೀವಸಂಕೇತವಾಗಿ ಮಾರ್ಪಟ್ಟು
ನಂತರ ಚಿತ್ತಕ್ಕೆ ಸೇರುತ್ತದೆ.

‘ಇದು ಕಲ್ಲಲ್ಲ’, ‘ಇದು ಮರ ಅಲ್ಲ’, ‘ಇದು ಪ್ರಾಣಿ ಅಲ್ಲ’ ಎಂಬುದಾಗಿ ಚಿತ್ತವು ವಿಶ್ಲೇಷಣೆಮಾಡಲು ಪ್ರಾರಂಭವಾಗುತ್ತದೆ. ಈ ವರ್ಜಿಸುವ ಪ್ರಕ್ರಿಯೆಯು ಚಿತ್ತದಲ್ಲಿ ನಡೆಯುತ್ತದೆ. ಇದಾದನಂತರ ‘ಇದು ಒಂದು ಪುಸ್ತಕ’, ಎಂಬ ಗುರುತಿಸುವಿಕೆಯು ಮನಸ್ಸಿನಲ್ಲಿ ನಡೆಯುವುದು. ‘ಇದು ಆಧ್ಯಾತ್ಮದ ಪುಸ್ತಕ’, ‘ಇದು ಒಬ್ಬ ಜ್ಞಾನಿಯು ಬರೆದ ಪುಸ್ತಕ’ ಎಂದು ಮನಸ್ಸಿನಲ್ಲಿ ಗುರುತು ಹಿಡಿಯಲಾರಂಭಿಸುವಿರಿ.

ಗುರುತಿಸಿದ ನಂತರ, ಕಡತವನ್ನು ನಿರ್ಧಾರ ಕೇಂದ್ರ ಅಥವಾ ‘ಅಹಂಕಾರ’ ಎಂದು ನಾನು ಕರೆಯುವ ಜಾಗಕ್ಕೆ ಸಾಗುವುದು. ‘ಅಹಂಕಾರ’ದಲ್ಲಿ ನೀವು ಆಲೋಚಿಸಲು ಪ್ರಾರಂಭ ಮಾಡುತ್ತೀರಿ, ‘ಯಾವ ರೀತಿಯಲ್ಲಿ ನಾನು ಈ ಪರಿಸ್ಥಿತಿಗೆ ಸಂಬಂಧಿಸಿದ್ದೇನೆ?’ ಎಂದು. ಇಂತಹ ಪುಸ್ತಕಗಳು ನಿಮ್ಮ ಹಿಂದಿನ ಅನುಭವಗಳಲ್ಲಿ ಚೆನ್ನಾಗಿದ್ದರೆ ಇದನ್ನು ಓದಲು ನಿರ್ಧಾರ ಮಾಡುತ್ತೀರಿ. ಹಿಂದಿನ ಅನುಭವಗಳು ಚೆನ್ನಾಗಿಲ್ಲದಿದ್ದರೆ ‘ಓ, ಇದು ಒಂದು ವ್ಯರ್ಥ, ಹಿಂದಿನ ಸಲ ಬೇಜಾರಾಗಿತ್ತು’ ಅಥವಾ ‘ಇಂತಹ ಪುಸ್ತಕವನ್ನು ಓದಿದಾಗ ಯಾವ ಲಾಭವೂ ಕಂಡುಬರಲಿಲ್ಲ’ ಎಂಬ ನಕಾರಾತ್ಮಕ ಆಲೋಚನೆ ಬಂದರೆ ಓದನ್ನು ಮುಂದುವರೆಸುವುದು ಬೇಡ ಎಂಬ ನಿರ್ಧಾರಕ್ಕೆ ತಲುಪುವಿರಿ. ಅಹಂಕಾರವು ಹಿಂದಿನ ಅನುಭವಗಳನ್ನು ಆಧಾರ ಮಾಡಿಕೊಂಡು ನಿರ್ಧಾರಮಾಡುತ್ತದೆ. ನಿಮ್ಮ ಮನಸ್ಸು ಕಾರ್ಯಮಾಡುವ ರೀತಿ ಇದು.

ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಈ ನಿರ್ಧಾರವನ್ನು ನಿಮ್ಮಿಂದ

ಪ್ರಜ್ಞಾರಹಿತವಾಗಿ ತೆಗೆದುಕೊಳ್ಳುತ್ತದೆ. ಈ
ಪ್ರಕ್ರಿಯೆಯು ನೇರವಾಗಿ ನಡೆದರೆ, ನಿಮ್ಮ
ಜೀವನವೆಲ್ಲವೂ ಸುಗಮವಾಗಿಯೂ ಮತ್ತು ಯಾವ
ತೊಂದರೆಗಳೂ ಇಲ್ಲದಂತೆಯೂ ಇರುತ್ತದೆ.
ಪ್ರತಿಯೊಂದೂ ಸ್ಪಷ್ಟವಾಗಿಯೂ ಮತ್ತು
ನೇರವಾಗಿಯೂ ಇರುತ್ತದೆ!

ಆದರೆ ಈ ಪ್ರಕ್ರಿಯೆಯು ಯಾವಾಗಲೂ ಈ ರೀತಿ ನೇರವಾಗಿರುವುದಿಲ್ಲ. ಕೆಲವು ಬಾರಿ ಪ್ರಜ್ಞೆ ಇಲ್ಲದೆ ಕೆಲಸಗಳಾಗಲು ಪ್ರಾರಂಭವಾಗುತ್ತದೆ. ಉದಾಹರಣೆಗೆ, ನೀವು ಹಿಂದೆ ಓದಿದ ಇದೇ ರೀತಿಯ ಪುಸ್ತಕದಲ್ಲಿದ್ದದ್ದು ನಿಮ್ಮನ್ನು ಕ್ಷೋಭೆಗೊಳಿಸಿದ್ದರೆ ಅಥವಾ ನಿಮಗೆ ನೋವನ್ನುಂಟುಮಾಡಿದ್ದರೆ, ಈ ಪುಸ್ತಕವನ್ನು ನೋಡಿದಾಕ್ಷಣ ಆ ನೆನಪು ನಿಮ್ಮ ಅರಿವಿಲ್ಲದೆಯೇ ಜಾಗೃತವಾಗುತ್ತವೆ.

ನೋಡಿರಿ, ನಿಮ್ಮ ಜೀವನದಲ್ಲಿ ಒಂದು ನಿರ್ದಿಷ್ಟವಾದ ಜಾಗದಲ್ಲಿಯೋ ಅಥವಾ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿಯೋ ಅಥವಾ ಒಂದು ನಿರ್ದಿಷ್ಟ ಬಣ್ಣದ ಉಡುಪು ಧರಿಸಿದ ವ್ಯಕ್ತಿಯಿಂದಲೋ ನೀವು ಕ್ಷೋಭೆಗೊಂಡಿದ್ದರೆ ಅಥವಾ ನೋವು ಅನುಭವಿಸಿದ್ದರೆ, ಮುಂದಿನ ಬಾರಿ ಆ ಜಾಗಕ್ಕೆ ಹೋದಾಗ ಅಥವಾ ಆ ಬಣ್ಣದ ಉಡುಪನ್ನು ಧರಿಸಿದ ಬೇರೆಯಾರನ್ನಾದರೂ ಕಂಡಾಗ ಆ ಜಾಗವಾಗಲೀ ಅಥವಾ ಆ ವ್ಯಕ್ತಿಯಾಗಲೀ ಹಿಂದಿನ ಅನುಭವಕ್ಕೆ ಸಂಬಂಧವಿಲ್ಲವೆಂದು ತರ್ಕಬದ್ಧವಾಗಿ ತಿಳಿದಿದ್ದರೂ ಸಹ, ನೀವು ಮತ್ತೆ ಅದೇ ದುಃಖಿತ ಮನಸ್ಥಿತಿಯನ್ನು ಅನುಭವಿಸುತ್ತೀರಿ. ಮತ್ತೆ ನಿಮ್ಮ ಮನಸ್ಸಿನಲ್ಲಿ ಅದೇ ನೆನಪಾಗುತ್ತದೆ. ನಿಮಗೆ ಅದೇ ಅನುಭವ ಮತ್ತೆ ಆಗುತ್ತದೆ. ಇದನ್ನೇ ನಾನು 'ಸಂಸ್ಕಾರ' ಅಥವಾ ಕೊರೆಯಲ್ಪಟ್ಟ ನೆನಪು ಎನ್ನುವುದು.

ಈ ಕೊರೆಯಲ್ಪಟ್ಟ ನೆನಪುಗಳು- ಸಂಸ್ಕಾರಗಳು-
ನಿಮ್ಮ ನಿರ್ಧಾರ ಮಾಡುವ ಸಾಮರ್ಥ್ಯವನ್ನು ವಿಕೃತ
ಅಥವಾ ಗೊಂದಲಗೊಳಿಸುತ್ತವೆ. ನೋಡಿರಿ, ನಾನು
ಈಗ ವಿವರಿಸಿದ ಮನೋನಕ್ಷೆಯಲ್ಲಿನ ಪ್ರಕ್ರಿಯೆಯು
ಪೂರ್ಣವಾಗಿ ಅರಿವಿನಿಂದ ನಡೆದರೆ, ಆಗ ಅದು
ನೇರವಾದ ಮತ್ತು ತರ್ಕಬದ್ಧವಾದ ಪ್ರಕ್ರಿಯೆ
ಆಗಿರುತ್ತದೆ. ಆದರೆ ಅನೇಕ ಬಾರಿ ವಿವಶವಾದ
ಮನಸ್ಸಿನಿಂದಾಗಿ ಈ ಪ್ರಕ್ರಿಯೆಯು
ನೇರವಾಗಿರುವುದಿಲ್ಲ. ನಾನು ಈ ಹಿಂದೆ
ವಿವರಿಸಿದಂತೆ, ಒಂದು ನಿರ್ದಿಷ್ಟ ವ್ಯಕ್ತಿಯಿಂದ
ಅಥವಾ ಪರಿಸ್ಥಿತಿಯಿಂದ ಆದ ಅನುಭವದ ಕಡೆಗೆ
ನಾವು ವಾಲುತ್ತೇವೆ. ಈ ಜಾಗದಲ್ಲೇ ರಾಜಕೀಯ
ನಡೆದುಬಿಡುವುದು. ಈ ಜಾಗದಲ್ಲೇ ತರ್ಕವಿಲ್ಲದ
ಸಂಗತಿಗಳು ನಡೆದುಬಿಡುವುದು. ಇದೇ ಜಾಗದಲ್ಲಿ
ಹಿಂದಿನ ನೆನಪುಗಳು ಅಥವಾ ಸಂಸ್ಕಾರಗಳು
ನೆಲೆಸಿರುವುವು ಮತ್ತು ನೀವು ಏನು
ನಿರ್ಧಾರಮಾಡುತ್ತಿದ್ದೀರಿ ಎಂದೂ ನಿಮಗೆ
ತಿಳಿದಿರುವುದಿಲ್ಲ!

ಸುಪ್ತ ಮನಸ್ಸನ್ನು ಇನ್ನೂ ಹೆಚ್ಚಾಗಿ
ಅರ್ಥಮಾಡಿಕೊಳ್ಳಲು ಸುಪ್ತ ಮನಸ್ಸಿನ ಮತ್ತೊಂದು
ಉದಾಹರಣೆಯನ್ನು ಕೊಡುತ್ತೇನೆ. ಅರಿವಿನಿಂದ
ಅಥವಾ ತರ್ಕದಿಂದ ವಿಶ್ಲೇಷಣೆಯನ್ನು ಮಾಡಿದರೆ
ಧೂಮಪಾನವು ಆರೋಗ್ಯಕ್ಕೆ ಹಾನಿಕರವಾದದ್ದು
ಎಂಬುದು ನಿಮಗೆಲ್ಲಾ ತಿಳಿದ ವಿಷಯ. ಕಣ್ಣುಗಳಿಂದ
ಹೊರಟು ಮನಸ್ಸಿನವರೆಗೂ ಆಗುವ ಪ್ರಕ್ರಿಯೆಯ
ಮೂಲಕ ಹಾಯ್ದು ನೋಡಿದರೆ, ನಿಮ್ಮ

ಇಂದ್ರಿಯಗಳು ಶೇಖರಿಸಿರುವ ಮಾಹಿತೀಗಳ ಪ್ರಕಾರ, ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿದೆ. ಆದರೆ ಇದ್ದಕ್ಕಿದ್ದಹಾಗೆ ನಿಮ್ಮ ಅರಿವನ್ನೂ ಹಾಗೂ ತರ್ಕವನ್ನೂ ಮೀರಿ ತರ್ಕವು ಧೂಮಪಾನ ಬೇಡವೆಂದು ಹೇಳಿದರೂ ಸಹ, ಧೂಮಪಾನ ಸೇವಿಸುವ ನಿರ್ಧಾರವನ್ನು ಮಾಡುವಿರಿ. ಇಲ್ಲಿಯೇ ಸುಪ್ತವಾದ ಸಂಸ್ಕಾರಗಳು ನೆಲೆಸಿರುವುದು.

ಧೂಮಪಾನವು ಆರೋಗ್ಯಕ್ಕೆ ಹಾನಿಕರವೆಂಬುದು
ನಿಮ್ಮ ಅರಿವಿಗೆ ತಿಳಿದಿದ್ದರೂ ಸಹ, ಕಡತವು
ಅಹಂಕಾರಕ್ಕೆ ಸಾಗಿದಾಗ, ಕಡತವು ಪರಿಮಾಣಿತ
ಜಿಗಿತ ಮಾಡಿದಾಗ, ಧೂಮಪಾನ ಮಾಡುವ
ನಿರ್ಧಾರ ಮಾಡಿಬಿಡುತ್ತೀರಿ. ಬಹುಶಃ ನೀವು ಹಿಂದೆ
ಎಂದೋ ಧೂಮಪಾನ ಮಾಡಿದಾಗ
ಆರಾಮವಾಗಿತ್ತು ಎಂಬ ಯಾವುದೋ ನೆನಪೋ
ಅಥವಾ ಯಾವುದೋ ಅನುಭವವೋ ಆಗಿರಬಹುದು
ಅಥವಾ ನೀವು ಪ್ರಾಯದಲ್ಲಿ ಧೂಮಪಾನ
ಮಾಡಿದಾಗ ನಿಮಗೆ 'ಹೀರೋ' ಎಂಬ ಭಾವನೆ
ಬಂದಿರಬಹುದು. ಹಾಗಾಗಿ ನಿಮಗೆ ಧೂಮಪಾನ
ಹಾನಿಕರ ಎಂಬ ಪ್ರಜ್ಞೆ ಇದ್ದರೂ ಸಹ ಈ
ಸಂಸ್ಕಾರಗಳಿಗೂ ಮತ್ತು ಈ ಚಟಕ್ಕೂ ಸಂಬಂಧ
ಇರುವುದರಿಂದ ಈ ಸಂಸ್ಕಾರಗಳ ಕಾರಣದಿಂದ ನೀವು
ಧೂಮಪಾನ ಮಾಡುವ ನಿರ್ಧಾರ ಮಾಡುತ್ತೀರಿ.

ಇದೇ ರೀತಿ, ಅನೇಕ ಬಾರಿ ನಿಮ್ಮ ಜೀವನದಲ್ಲಿ ನಿಮಗೆ ಯಾವುದು ಸರಿ ಎಂದು ತಿಳಿದಿದ್ದರೂ ಸಹ ನಿಮ್ಮ ಸಂಸ್ಕಾರಗಳ ಕಾರಣದಿಂದ ನೀವು ವಿವಶರಾಗಿ ನಿರ್ಧಾರ ಮಾಡುತ್ತೀರಿ. ನಿಮ್ಮ ಜೀವನವು ನಿಮ್ಮ ಪ್ರಜ್ಞಾರಹಿತವಾದ ಸಂಸ್ಕಾರಗಳ ಹಿಡಿತದಲ್ಲಿರುತ್ತದೆ, ನಿಮ್ಮ ಹಿಡಿತದಲ್ಲಲ್ಲ. ನೀವೇ ನಿರ್ಧಾರ ಮಾಡುತ್ತಿದ್ದೀರಿ ಎಂದು ನೀವೆಂದುಕೊಂಡಿರಬಹುದು ಆದರೆ ನಿಮ್ಮ ಸುಪ್ತವಾದ ಸಂಸ್ಕಾರಗಳೇ ನಿರ್ಧಾರ ಮಾಡುತ್ತಿರುವುದು!

ನಮ್ಮ ನಡವಳಿಕೆಗಳಿಗೆ ಮೂಲ ಕಾರಣ ಈ ಸಂಸ್ಕಾರಗಳೇ. ನಾವು ಕೆಲವರೊಂದಿಗೆ ಒಂದು ರೀತಿ ನಡೆದುಕೊಳ್ಳುವುದಕ್ಕೆ ಕಾರಣ ಅವುಗಳೇ. ನಾವು ನಿರ್ಧಾರ ಮಾಡುವಾಗ ಈ ಸಂಸ್ಕಾರಗಳು ನಮ್ಮ ತೀರ್ಪುಗಳನ್ನು ಮಬ್ಬಾಗಿಸುತ್ತವೆ. ಸಂಸ್ಥೆಯಲ್ಲಿ ನಾವು ಸಾಧಿಸಬೇಕಾದ ಕಾರ್ಯಗಳ ಮೇಲೂ ಅವುಗಳ ಪ್ರಭಾವ ಬೀರುತ್ತದೆ. ನಮ್ಮ ಉತ್ಪಾದಕತೆಯನ್ನು, ಪರಸ್ಪರ ವ್ಯಕ್ತಿಗಳ ವ್ಯವಹಾರ ಕುಶಲತೆಯನ್ನು, ಸಾಾಂಘಿಕ ಕೆಲಸವನ್ನೂ, ತೀರ್ಪುಗಳನ್ನೂ, ನಡವಳಿಕೆಗಳನ್ನು ಹಾಗೂ ಪ್ರತಿಕ್ರಿಯೆಗಳನ್ನೂ ಈ ಸಂಸ್ಕಾರಗಳು ನಿರ್ದೇಶನ ಮಾಡುತ್ತವೆ. ಆದರೆ ಸಂಸ್ಥೆಗಳಲ್ಲಿ ನಡೆಯುವ ಮುಂದಾಳುತನದ ವಿಕಾಸ ಕಾರ್ಯಕ್ರಮಗಳಲ್ಲಿ ಹಾಗೂ ತರಬೇತಿಗಳಲ್ಲಿ ಈ ಸಂಸ್ಕಾರಗಳನ್ನು ಅರ್ಥಮಾಡಿಕೊಂಡಿರುವುದಿಲ್ಲ. ಹಾಗೂ ಇನ್ನೂ ಮುಖ್ಯವಾಗಿ ಯಾವ ಪ್ರಾಮುಖ್ಯತೆಯನ್ನೂ ನೀಡಲಾಗುವುದಿಲ್ಲ.

ಈ ಸಂಸ್ಕಾರಗಳಿಂದ ನಮ್ಮನ್ನು ಸ್ವಚ್ಛಗೊಳಿಸಲು
ಪ್ರಾಚ್ಯ ಅನುಭಾವಿಗಳೂ ಮತ್ತು ಆಂತರಿಕ ಪ್ರಪಂಚದ
ವಿಜ್ಞಾನಿಗಳೂ, ಧ್ಯಾನತಂತ್ರಗಳನ್ನು ಮತ್ತು
ಸಲಕರಣೆಗಳನ್ನು ರೂಪಿಸಲು ಸಾವಿರಾರು
ವರ್ಷಗಳಿಂದ ತೊಡಗಿದ್ದಾರೆ. ಈ ಸಂಸ್ಕಾರಗಳನ್ನು
ಧ್ಯಾನತಂತ್ರಗಳ ಮೂಲಕ ಪರಿಣಾಮಕಾರಿಯಾಗಿ
ಅಳಿಸಿಬಿಡಬಹುದು.

ಇತ್ತೀಚೆಗೆ ನನ್ನ ಶಿಷ್ಯರೊಬ್ಬರ ಮನೆಯಲ್ಲಿ
ಒಂದು ಸುಂದರವಾದ ಉಕ್ತಿಯನ್ನು ಕಂಡೆ. 'ಈ
ಮನೆಯ ಯಜಮಾನ ನಾನು, ಹಾಗೆಂದು
ಹೇಳಿಕೊಳ್ಳಲು ನನ್ನ ಹೆಂಡತಿಯ ಅನುಮತಿ ನನಗಿದೆ!'

ಇದೇ ರೀತಿ ನೀವು ನಿಮ್ಮನ್ನು ಯಜಮಾನ ಎಂದು ಭಾವಿಸಿರಬಹುದು. ಆದರೆ ನಿಮ್ಮ ಸುಪ್ತ ಸಂಸ್ಕಾರಗಳೇ ನಿಮ್ಮನ್ನು ನಡೆಸುತ್ತಿರುವುದು! ಈ ಸುಪ್ತ ಸಂಸ್ಕಾರಗಳ ಹಿಡಿತದಲ್ಲಿ ಇರುವವರೆಗೆ ನೀವು ಮುಖಂಡನ ಸ್ಥಿತಿಯನ್ನು ಎಂದಿಗೂ ಹೊಂದಲು ಆಗುವುದಿಲ್ಲ. ಬಹಳ ಕಷ್ಟಪಡುವುದರಿಂದ ಮತ್ತು ಹೋರಾಟಗಳಿಂದ ಮುಖಂಡನ ಅಂತಸ್ತುಗಳಿಸಬಹುದು.

ಸ್ಪಷ್ಟವಾಗಿ ತಿಳಿಯಿರಿ, ನೀವು ಬಹಳ ಕಷ್ಟಗಳಿಂದ
ಮತ್ತು ಹೋರಾಟದಿಂದ ಮುಖಂಡನ ಕುರ್ಚಿಯಲ್ಲಿ
ಕುಳಿತರೆ, ನಿಮ್ಮ ಕೈಕೆಳಗಿರುವ ಜನಗಳಲ್ಲೂ ಅದೇ
ಕಷ್ಟಗಳನ್ನು ಮತ್ತು ಹೋರಾಟಗಳನ್ನು
ಸೃಷ್ಟಿಮಾಡುವಂತಹವರಾಗುವಿರಿ!

'ನಾನು ಅಷ್ಟು ಕಷ್ಟಗಳನ್ನು ಮತ್ತು ಹೋರಾಟಗಳನ್ನು ಅನುಭವಿಸಿರುವೆ, ಇವರೇಕೆ ಅನುಭವಿಸಬಾರದು' ಎಂದು ನಿಮ್ಮ ಮನಸ್ಸು ಮತ್ತೆಮತ್ತೆ ಹೇಳುತ್ತದೆ. ನಿಮ್ಮ ಹಳೆಯ ಮನೋವ್ಯವಸ್ಥೆಯನ್ನು ಇತರರಲ್ಲೂ ಹುಟ್ಟಿಸುತ್ತೀರಿ. ಇದು ಸಂಸ್ಥೆಯಲ್ಲಿ ಉತ್ತೇಜನವಿಲ್ಲದಂತೆ ಮಾಡುವ ಒಂದು ದೊಡ್ಡ ಕಾರಣವಾಗಿಬಿಡುತ್ತದೆ.