ಜವಾಬ್ದಾರಿಯು ನಿಮ್ಮನ್ನು ಉತ್ತಮಗೊಳಿಸುತ್ತದೆ
This text was machine-transcribed from the printed book and may contain errors. Select the words and choose “Report a mistake”.
ನಾವು ಯಾರು, ಇಲ್ಲೇನು ಮಾಡುತ್ತಿದ್ದೇವೆ
ಎಂಬುದರ ಬಗ್ಗೆ ತಿಳಿವಳಿಕೆ ಉಂಟಾದರೆ ನಮಗೆ
ಇತರರ ಬಗ್ಗೆ ಜವಾಬ್ದಾರಿಯ ಭಾವನೆ ಮೂಡುತ್ತದೆ.
ನಾವು ಇತರರಿಂದ ಬೇರ್ಪಟ್ಟವರಲ್ಲ, ಆದರೆ
ಒಬ್ಬರಿಗೊಬ್ಬರು ಪರಸ್ಪರ ಸೇರಿಕೊಂಡಿರುವವರೇ
ಎಂಬುದು ತಿಳಿದು ಬರುತ್ತದೆ.
ಕೆಲವು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಕ್ಷಯ ರೋಗವು ಹರಡಿಬಿಟ್ಟಿತ್ತು. ಕಡೆಗೆ ಔಷಧಗಳಿಂದ ಅದನ್ನು ತಡೆಹಿಡಿಯಲಾಯಿತು. ಅದನ್ನು ನಿವಾರಿಸಲು ಪಟ್ಟ ಶ್ರಮಕ್ಕೆ ಅಧಿಕಾರಿಗಳು ತಾವೇ ನಿರ್ಮೂಲನೆ ಮಾಡಿದೆವೆಂದು ಹೆಮ್ಮೆಯಿಂದ ಆ ಜವಾಬ್ದಾರಿಯನ್ನು ತಾವೇ ಬೀಗಿಕೊಂಡರು. ಆದರೆ, ಮೊಟ್ಟಮೊದಲಿಗೆ ಊರಿನಲ್ಲೆಲ್ಲಾ ಖಾಯಿಲೆ ಹರಡಿಕೊಳ್ಳಲು ಬಿಟ್ಟ ಹೊಣೆಯೂ ಅವರದ್ದೇ ಆಗಿತ್ತು! ಆ ಜವಾಬ್ದಾರಿಯನ್ನು ಅವರು ಹೊತ್ತರೆ? ಇಲ್ಲ! ವಾಸ್ತವವಾಗಿ ಕ್ಷಯ ಹರಡುವುದಕ್ಕೆ ಕಾರಣರಾದವರೂ ಅವರೇ, ಅಲ್ಲವೆ? ಪ್ರಾರಂಭದಲ್ಲಿಯೇ ಅದನ್ನು ತಡೆಗಟ್ಟಬೇಕಾಗಿತ್ತು, ಅಲ್ಲದೆ, ಆಪತ್ಕಾಲದಲ್ಲಿ ಸುಧಾರಿಸಿದುದಕ್ಕೆ ಮಾತ್ರ ಹೆಮ್ಮೆಪಡಬೇಕಾಗಿರಲಿಲ್ಲ!
ಹಾಗೆಯೇ ನಮ್ಮ ಜೀವನದಲ್ಲೂ ಏನೇ
ಒಳಿತಾದರೂ ಅದಕ್ಕೆ ನಾವೇ ಜವಾಬ್ದಾರರೆಂದು
ಕೊಚ್ಚಿಕೊಳ್ಳುತ್ತೇವೆ. ಆದರೆ, ಏನಾದರೂ
ಕೆಡುಕಾದಾಗ ಅದರ ಹೊಣೆಯನ್ನು ನಿರಾಕರಿಸುತ್ತೇವೆ.
ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ
ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ.
ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದಕ್ಕೂ
ಜವಾಬ್ದಾರಿಯನ್ನು ತೆಗೆದುಕೊಂಡಾಗ ಮಾತ್ರವೇ
ನಾವು ಬೆಳೆಯಲಾರಂಭಿಸುವುದು.
ವಿವೇಕಾನಂದರು ಸೊಗಸಾಗಿ ಹೇಳುತ್ತಾರೆ,
'ನಿಮಗೆ ಸಾಧ್ಯವಾದಷ್ಟೂ ಜವಾಬ್ದಾರಿಯನ್ನು
ಹೊತ್ತುಕೊಳ್ಳಿರಿ. ಎಷ್ಟು ಜವಾಬ್ದಾರಿಯನ್ನು
ಹೊರುವಿರೋ ಅಷ್ಟು ವಿಕಸಿಸುವಿರಿ. ವಿಕಸನವೊಂದೇ
ಬೆಳವಣಿಗೆ; ವಿಕಸನವಿಲ್ಲದಿದ್ದರೆ ಸಂಕುಚಿಸಿ
ನಶಿಸಿಹೋಗುವಿರಿ' ಎಂದು.
ಒಂದು ಚಿಕ್ಕ ಕಥೆ:
ಒಮ್ಮೆ ಧರ್ಮಛತ್ರವೊಂದರಲ್ಲಿ ಒಬ್ಬ ವ್ಯಕ್ತಿಯು
ಜವಾಬ್ದಾರಿಯ ಬಗ್ಗೆ ಭಾಷಣ ಮಾಡುತ್ತಿದ್ದನು.
ಕೆಲವು ದಿನಗಳ ಹಿಂದೆ ನಡೆದ ಪ್ರಸ್ತಾಪವೊಂದನ್ನು
ಉದಾಹರಣೆಯಾಗಿ
ಹೇಳುತ್ತಿದ್ದನು, ‘ನನ್ನ
ಮಿತ್ರನೂ ನಾನೂ
ಉದ್ಯಾನವನದ ಬಳಿ
ನಡೆಯುತ್ತಿದ್ದಾಗ ಒಬ್ಬ
ನಿಸ್ಸಹಾಯಕನಾದ ವ್ಯಕ್ತಿಯು
ಪ್ರಜ್ಞೆತಪ್ಪಿ ರಸ್ತೆಯಲ್ಲಿ
ಬಿದ್ದಿರುವುದನ್ನು ಕಂಡೆವು’
ಎಂದು. ಸ್ವಲ್ಪ ತಡೆದು,
ಜನರ ಆತಂಕಗೊಂಡ ಮುಖಗಳನ್ನು ನೋಡಿದನು.
ನಂತರ ಮುಂದುವರೆಸುತ್ತಾ, 'ಯಾರೊಬ್ಬರೂ
ಆತನಿಗೆ ಸಹಾಯ ಮಾಡುವ ಚಿಂತೆ ಮಾಡಲಿಲ್ಲ.
ಅಷ್ಟೇ ಅಲ್ಲ, ನಾವು ಉದ್ಯಾನವನದಿಂದ
ಹಿಂದಿರುಗಿದಾಗಲೂ ಆ ವ್ಯಕ್ತಿಯು ಅಲ್ಲಿಯೇ
ಬಿದ್ದಿದ್ದನು!' ಎಂದು ಹೇಳಿದನು.
ಬೇರೊಬ್ಬರನ್ನು ನಿಂದಿಸುವ ಬದಲು, ನಮ್ಮೊಳಗೆ ನಾವೇ ನೋಡಿಕೊಳ್ಳೋಣ ಹಾಗೂ ಸಮಸ್ಯೆಯ ಬಗ್ಗೆ ನಾವೇನು ಮಾಡುತ್ತಿದ್ದೇವೆಂದು ನೋಡೋಣ. ಜವಾಬ್ದಾರಿಯನ್ನು ಹೊತ್ತಷ್ಟೂ ಬೆಳೆಯುವಿರಿ. ನಿಮ್ಮ ಪರಿಸರದಲ್ಲಿ ನಡೆಯುತ್ತಿರುವ ಎಲ್ಲಕ್ಕೂ ನೀವೇ ಜವಾಬ್ದಾರರೆನಿಸಿದಾಗ ಮಾತ್ರವೇ ನೀವು ಮುಖಂಡರಾಗುವುದು. ಅಲ್ಲಿಯವರೆಗೂ ನೀವು ಕೇವಲ ಅನುಯಾಯಿಯೇ ಆಗಿರುತ್ತೀರಿ.
ಹರಿಯುತ್ತಿದೆಯಲ್ಲಾ, ಇದು ಹೇಗೆ ಸಾಧ್ಯ?’ ಎಂದು ನನ್ನನ್ನು ಕೇಳಿದರು.
ಇತರರ ಬಗ್ಗೆ ನಿಮಗೆ ಅನುಕಂಪ ಉಂಟಾದಾಗ
ಅದೆಲ್ಲವೂ ಒಂದು ಜವಾಬ್ದಾರಿಯ ರೂಪತಾಳಿ,
ಚೈತನ್ಯವಾಗಿ ಹೊರಬರುತ್ತದೆ, ಅಷ್ಟೆ. ಹಾಗೆ
ನೋಡಿದರೆ, ಯಾರೇ ಆಗಲಿ, ನೋವಿನ
ಜವಾಬ್ದಾರಿಯನ್ನು ಹೊತ್ತಾಗ, ಆ ಕ್ಷಣವೇ ಅವರು
ಚೈತನ್ಯವನ್ನು ಹೊರಹೊಮ್ಮಿಸಲಾರಂಭಿಸುತ್ತಾರೆ.
ಸ್ಪಷ್ಟವಾಗಿ ತಿಳಿದುಕೊಳ್ಳಿರಿ, ಜನರ ಬೆಳವಣಿಗೆಗೆ, ಅವರ ಏಳಿಗೆಗೆ, ನೀವು ಜವಾಬ್ದಾರರೆನಿಸಿದಾಗ ಮಾತ್ರ ನೀವು ಎದ್ದು ನಿಲ್ಲಬಲ್ಲಿರಿ. ಜನರಿಗಾಗಿ ನಿಮಗೆ ಸಾಧ್ಯವಾದಷ್ಟೂ ಶ್ರಮಿಸುತ್ತೇನೆಂದು ಹೇಳಿ, ಹೊಣೆಹೊತ್ತು ನಿಂತಾಗ, ನೀವು ವಿಕಸಿಸುವಿರಿ ಹಾಗೂ ದಿವ್ಯಶಕ್ತಿಯು ನಿಮ್ಮ ಮೂಲಕ ಹರಿಯುತ್ತದೆ. ಈ ವಿಷಯವನ್ನು ಆಳವಾಗಿ ಅರಿತುಕೊಳ್ಳಲು ಈ ವಿಷಯದ ಬಗ್ಗೆ ಪರ್ಯಾಲೋಚಿಸಿರಿ.
ಅಹಂಕಾರದಿಂದ ಮುಕ್ತರಾಗಿ ಜವಾಬ್ದಾರಿಯಿಂದ
ಎದ್ದು ನಿಂತಾಗ ವಿಕಸನವಾಗುತ್ತದೆ ಮತ್ತು ನೀವು
ಬಿದಿರಿನ ಕೊಳಲಿನಂತಾಗುತ್ತೀರಿ. ಆಗ ಕೊಳಲನ್ನು
ಹೊಕ್ಕ ಗಾಳಿಯು ಮಧುರನಾದವಾಗಿ
ಹೊರಬರುವಂತೆ, ನಿಮ್ಮೊಳಗೆ ಹೊಕ್ಕ ಗಾಳಿಯು
ಚೈತನ್ಯವಾಗಿ ನಿಮ್ಮ ಮೂಲಕ ಹರಿಯುತ್ತದೆ!
ಅನುಕಂಪವೆಂಬುದೇ ಜವಾಬ್ದಾರಿ ಹಾಗೂ ಚೈತನ್ಯ
ಒಮ್ಮೆ ನನ್ನ ಶಿಷ್ಯರೊಬ್ಬರು, 'ಸ್ವಾಮೀಜಿ, ನಿಮ್ಮಿಂದ ಎಷ್ಟೊಂದು ಚೈತನ್ಯವು ಸತತವಾಗಿ
ಗ್ರಹಣಶಕ್ತಿಯ ಸ್ಥಿತ್ಯಂತರ
ಜವಾಬ್ದಾರಿಯನ್ನು ಹೊತ್ತಾಗ ನಿಮ್ಮೊಳಗೊಂದು ವೈಚಾರಿಕ ಸ್ಥಿತ್ಯಂತರವಾಗುತ್ತದೆ. ನಿಮ್ಮ ಮಾನಸಿಕ
ಸ್ಥಿತಿಯು ಬದಲಾಗುತ್ತದೆ. ನಮ್ಮಲ್ಲನೇಕರು
ಜೀತದಾಳುಗಳಂತೆ ಜೀವಿಸುತ್ತೇವೆ. ಉದಾಹರಣೆಗೆ,
ಕಛೇರಿಯಲ್ಲಿ ಎಂಟು ಗಂಟೆಗಳ ಕಾಲ ಇನ್ನೊಬ್ಬರ
ಆಜ್ಞೆಯನ್ನು ಪಾಲಿಸುತ್ತಾ ಕಳೆದರೆ ಬೇಸರವಾಗಿ
ಆಯಾಸಗೊಳ್ಳುತ್ತೇವೆ. ಅದರ ಬದಲು ನಾವೇ
ಮುಂದಾಗಿ ಜವಾಬ್ದಾರಿಯನ್ನು ವಹಿಸಿಕೊಂಡರೆ, ಆ
ಎಂಟು ಗಂಟೆಗಳೇ ಇನ್ನೂ ಸುಲಭವಾಗಿಯೂ,
ಸುಖಕರವಾಗಿಯೂ ಇರುತ್ತದೆ.
ಉದಾಹರಣೆಗೆ, ಸ್ವಂತ ಉದ್ದಿಮೆ ಮಾಡುತ್ತಿರುವ ಒಬ್ಬ ವ್ಯಕ್ತಿಯನ್ನೂ, ಯಾವುದೋ ಒಂದು ಕಛೇರಿಯಲ್ಲಿ ನೌಕರನಾದ ಮತ್ತೊಬ್ಬ ವ್ಯಕ್ತಿಯನ್ನೂ ತೆಗೆದುಕೊಳ್ಳೋಣ. ಸ್ವಂತ ಉದ್ದಿಮೆಯಲ್ಲಿ ತೊಡಗಿರುವವನು ವ್ಯವಹಾರದ ಪೂರ್ಣ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಆದರೆ ಕಛೇರಿಯಲ್ಲಿ ನೌಕರನಾಗಿರುವವನು ಪೂರ್ಣ ಜವಾಬ್ದಾರಿಯನ್ನು ಹೊತ್ತಿರುವುದಿಲ್ಲ. ಆ ಜವಾಬ್ದಾರಿಯಿಲ್ಲದಿರುವಾಗ, ಇಡೀ ಕೆಲಸವೇ ಒಂದು ದೊಡ್ಡ ಹೊರೆಯಂತಾಗುತ್ತದೆ. ಸ್ವ-ಪ್ರೇರಣೆ ಎಂಬುದು ಅತಿ ಕಡಿಮೆ ಅಥವಾ ಇರುವುದೇ ಇಲ್ಲ. ಹೊರಡಲು ಸಮಯವಾಯಿತೇ ಎಂದು ತನ್ನ ಗಡಿಯಾರವನ್ನು ನೋಡುತ್ತಿರುತ್ತಾನೆ! ಆತನಿಗೆ ತಿಂಗಳಿನ ಮೊದಲ ದಿನವೇ ಮಧುರ, ಏಕೆಂದರೆ ಅದು ಸಂಬಳದ ದಿನ! ಒಂದು ತಿಂಗಳಲ್ಲಿ ಒಂದು ದಿನದ ಸಂತಸಕ್ಕಾಗಿ ತನ್ನ ಜೀವನದ ಇಪ್ಪತ್ತೊಂಬತ್ತು ದಿನಗಳನ್ನು ತೆರುತ್ತಾನೆ. ವೈಯಕ್ತಿಕ ಜವಾಬ್ದಾರಿಯ ಒಂದು ಭಾವನೆಯು ಯಾವುದೇ ಸನ್ನಿವೇಶವನ್ನು ಬದಲಾಯಿಸಬಲ್ಲದು. ವೈಯಕ್ತಿಕ ಜವಾಬ್ದಾರಿಯ ಭಾವನೆಯು ಮಹತ್ತರವಾದುವುಗಳನ್ನು ಸಾಧಿಸಬಲ್ಲದು.
ಜವಾಬ್ದಾರಿಯಿಂದ ಎದ್ದು ನಿಂತಾಗ, ನೀವು
ಒಂದು ಘನ ಶಕ್ತಿಯಾಗುತ್ತೀರಿ. ಅಲ್ಲಿಯವರೆಗೂ
ನಿಮಗೂ ಇತರರಿಗೂ ಹೊರೆಯಾಗಿರುತ್ತೀರಿ.
ಕೆಲವೊಮ್ಮೆ ನಾವು ಒಂದು ಸಾಧಾರಣವಾದ
ಕೆಲಸದಲ್ಲಿದ್ದೇವೆ ಎಂದು ಭಾವಿಸುತ್ತೇವೆ. ನಮ್ಮ
ಮೇಲಧಿಕಾರಿಗಳೇ ಕೆಲಸದ ಬಗ್ಗೆ ಜವಾಬ್ದಾರಿಯನ್ನು
ವಹಿಸದಿರುವಾಗ ನಾವು ಮಾತ್ರ ಹೆಚ್ಚು
ಜವಾಬ್ದಾರಿಯನ್ನೇಕೆ ವಹಿಸಬೇಕೆಂದು
ಯೋಚಿಸುತ್ತೇವೆ.
ಹೇಳುತ್ತೇನೆ ಕೇಳಿರಿ, ಒಂದು ಕಛೇರಿಯಲ್ಲಿ ಕಸ ಬಳಿಯುವವನು ತನ್ನ ಕೆಲಸಗಳೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದಾಗ, ಆತನು ಜನರನ್ನು ಸ್ಫೂರ್ತಿಗೊಳಿಸುತ್ತಾನೆ. ನೋಡಿರಿ, ಒಂದು ಸಂಸ್ಥೆಗೆ ಮಾಲೀಕನಾದವನು ಜವಾಬ್ದಾರನಾಗಿರಲೇಬೇಕು. ಅದಕ್ಕಾಗಿ ಆತನಿಗೆ ಯಾವ ಪ್ರಶಂಸೆಯನ್ನೂ ಮಾಡಬೇಕಾಗಿಲ್ಲ. ಆದರೆ, ಕೆಳಗಿನ ದರ್ಜೆಯಲ್ಲಿರುವ ಯಾರೇ ಆದರೂ ಅಂತಹ ಜವಾಬ್ದಾರಿಯನ್ನು ವಹಿಸಿದ್ದೇ ಆದರೆ, ಅದು ನಿಜವಾಗಿಯೂ ಸ್ಫೂರ್ತಿದಾಯಕ.
ಮೇಲಧಿಕಾರಿಗಳಿಗಿಂತಲೂ ಕೆಳದರ್ಜೆಯವರು
ತಮ್ಮ ಜವಾಬ್ದಾರಿಯಿಂದ ಬೇರೆಯವರನ್ನು
ಸ್ಫೂರ್ತಿಗೊಳಿಸುವ ಸಂಭವವು ಇನ್ನೂ ಹೆಚ್ಚು.
ಆದುದರಿಂದ ಜವಾಬ್ದಾರಿಯುತವಾಗಿರಲು
ಯಾವುದೋ ಅಧಿಕಾರ ದೊರಕಲೆಂದು
ಕಾಯಬೇಡಿರಿ.
ಎರಡನೆಯದಾಗಿ, ಕೆಳದರ್ಜೆಯಲ್ಲಿದ್ದೇವೆಂದೂ
ಆದುದರಿಂದ ಜವಾಬ್ದಾರಿಯಿಂದಿರಬೇಕಾಗಿಲ್ಲವೆಂದು
ಕೊಳ್ಳಬೇಡಿರಿ.
ಮೂರನೆಯದಾಗಿ, ನಿಮ್ಮಲ್ಲಿ ಗ್ರಹಣ ಶಕ್ತಿಯ ಸ್ಥಿತ್ಯಂತರವಾಗಲು ನಿಮ್ಮನ್ನು ಅನುವಾಗಿಸಿಕೊಳ್ಳಿರಿ.
ಬುದ್ಧನ ಬಗ್ಗೆ ಒಂದು ಚೆನ್ನಾಗಿರುವ ಕಥೆ ಇದೆ.
ಬುದ್ಧನು ಭಿಕ್ಷೆ ಬೇಡಲು ಹೊರಟಾಗ ಆತನು
ರಾಜನಂತೆ ಶೋಭಿಸುತ್ತಿದ್ದನೆಂದೂ ಆತನಿಗೆ ಭಿಕ್ಷೆ
ನೀಡುತ್ತಿದ್ದ ಅರಸರು ಭಿಕ್ಷುಕರಂತೆ
ಕಂಡುಬರುತ್ತಿದ್ದರೆಂದೂ ಹೇಳುತ್ತಾರೆ!
ಭಿಕ್ಷುಕನಂತಾಗಲೀ, ಅರಸನಂತಾಗಲೀ
ಕಂಡುಬರುವುದು ಆಸ್ತಿ-ಅಂತಸ್ತುಗಳಿಂದಲ್ಲ. ಅದು
ನಿಮ್ಮ ಆಂತರಿಕ ಸ್ಥಿತಿಯಿಂದ.
ಇಡೀ ಬ್ರಹ್ಮಾಂಡದ ಜವಾಬ್ದಾರಿಯನ್ನು ಹೊತ್ತಾಗ, ನೀವು ವಿಕಸಿಸಿ, ನಾಯಕರಂತೆ ಕಂಡುಬರುವುದೇ ಅಲ್ಲದೆ ಮುಖಂಡರೇ ಆಗುತ್ತೀರಿ. ಒಬ್ಬ ಮುಖಂಡರು ಉಚ್ಚಾಸನದಲ್ಲಿ ಕುಳಿತರೂ, ಜವಾಬ್ದಾರಿ ತೋರದೆ, ಜವಾಬ್ದಾರಿಗಾಗಿ ಇತರರಿಗೆ ಬೆರಳು ತೋರಿಸುತ್ತಿದ್ದರೆ, ಆತನು ಅಲ್ಪವಾಗಿಯೇ ತೋರಿಬರುವನು. ಸ್ಥಿತಿಯಿಂದ ಅಂತಸ್ತು ದೊರಕುತ್ತದೆಯೇ ವಿನಃ ಅಂತಸ್ತಿನಿಂದ ಸ್ಥಿತಿಯಲ್ಲ. ನಿತ್ಯಾನಂದ ಸ್ಥಿತಿಯು ನಿತ್ಯಾನಂದ ಅಂತಸ್ತಿಗಿಂತಲೂ ಭಿನ್ನವಾದುದು.
ಅಹಂಕಾರ ಹಾಗೂ ಜವಾಬ್ದಾರಿ
ನೀವು ಜವಾಬ್ದಾರಿಯುತರಾಗಿ ಎದ್ದು ನಿಂತಾಗ ನಿಮ್ಮ ತೊಂದರೆಗಳೆಲ್ಲವೂ ಕರಗಿಹೋಗುತ್ತವೆ. ನಿಮ್ಮಲ್ಲಿ ನವಚೈತನ್ಯ ಮೂಡುತ್ತದೆ. ಅದು ಅಹಂಕಾರವಲ್ಲ. ಅಹಂಕಾರಿಯಾಗಿದ್ದೇನೇನೋ ಎಂದುಕೊಳ್ಳಬೇಡಿರಿ. ಅಹಂಕಾರವೇ ಬೇರೆ, ಜವಾಬ್ದಾರಿಯೇ ಬೇರೆ. ಜವಾಬ್ದಾರಿಯಿಂದಿದ್ದಾಗ ನೀವು ಕೆಲಸಕ್ಕೆ ಮೊದಲಿಗರಾಗುತ್ತೀರಿ; ಅಹಂಕಾರಿಗಳಾಗುವುದಿಲ್ಲ. ನಾನು ಮತ್ತೊಬ್ಬನಿಗಿಂತ ಚೆನ್ನಾಗಿ ಮಾಡುತ್ತಿದ್ದೇನೆ ಎಂದೆನಿಸಿದಾಗ ಮಾತ್ರವೇ ಅಹಂಕಾರವು ಪ್ರಧಾನವಾಗುವುದು. ಅಹಂಕಾರವು ಪ್ರಧಾನವಾದಾಗ, ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.
ವಿಶ್ವಾಸ ಮತ್ತು ತಾಳ್ಮೆ
ನಾನು ಜನರಿಗೆ ಯಾವಾಗಲೂ ಹೇಳುತ್ತೇನೆ,
‘ನನಗೊಂದಿಷ್ಟು ಸಾಮರ್ಥ್ಯವಿದೆ ಹಾಗೂ ಆ
ಸಾಮರ್ಥ್ಯಕ್ಕೆ ಅನುಗುಣವಾಗಿ ದುಡಿಯುತ್ತೇನೆ
ಎಂದುಕೊಳ್ಳಬೇಡಿರಿ, ಇಲ್ಲ. ನೀವು ಎಷ್ಟು ದುಡಿಮೆ
ಹಾಗೂ ಜವಾಬ್ದಾರಿಯನ್ನು ವಹಿಸುತ್ತೀರೋ
ಅದಕ್ಕನುಗುಣವಾಗಿ ಚೈತನ್ಯವು
ವ್ಯಕ್ತವಾಗಲಾರಂಭಿಸುತ್ತದೆ. ನೀವು ವಹಿಸುವ
ಜವಾಬ್ದಾರಿಗೆ ಅನುಗುಣವಾಗಿ ಚೈತನ್ಯವು ನಿಮಗೆ
ಬರುತ್ತದೆ. ಯಾವುದೇ ಜವಾಬ್ದಾರಿಯನ್ನು
ಹೊತ್ತಾಗಲೂ ನಿಮ್ಮ ಅಂತರಂಗವು ಅದಕ್ಕೆ ತಕ್ಕಷ್ಟು
ವಿಕಸಿಸಿ ಚೈತನ್ಯವು ನಿಮ್ಮಿಂದ ಹರಿಯುವುದನ್ನು
ಕಾಣುವಿರಿ!’
ನಿಮ್ಮ ಪರಿಸರದಲ್ಲಿ
ನಡೆಯುತ್ತಿರುವುದಕ್ಕೆಲ್ಲದಕ್ಕೂ ನೀವೇ
ಜವಾಬ್ದಾರರೆನಿಸಿದ ಕೂಡಲೇ ನೀವು
ಮುಂದಾಳಾಗುತ್ತೀರಿ. ನಿಮ್ಮ ಜೀವನವನ್ನೂ ಇತರರ
ಜೀವನವನ್ನೂ ಪರಿವರ್ತಿಸತೊಡಗುತ್ತೀರಿ.
ಜವಾಬ್ದಾರಿಯು ನಿಮ್ಮನ್ನು ಉತ್ತಮಗೊಳಿಸುತ್ತದೆ
ಪ್ರಜ್ಞಾವಂತರಾಗಿ ಬೆಳೆಯಲು ಜವಾಬ್ದಾರಿಯೂ ಒಂದು ಮಾರ್ಗ.
ನೀವು ಮಾಡಬೇಕಾದುದು ಎರಡೇ: ಜೀವನವು ಉತ್ತಮವಾಗಿದೆ ಎಂಬ ವಿಶ್ವಾಸವಿಡುವುದು ಮತ್ತು ನೀವೆಷ್ಟು ಜವಾಬ್ದಾರಿ ತೆಗೆದುಕೊಳ್ಳುವಿರೋ ಅಷ್ಟು ವಿಕಸಿಸುವಿರೆಂದು ಅರಿತುಕೊಳ್ಳುವುದು.
ಮತ್ತೊಂದು ವಿಷಯ : ಆ ವಿಕಸನವಾದಾಗ, ಪರಿವರ್ತನೆಯ ಪ್ರಕ್ರಿಯೆಯ ಕಾಲದಲ್ಲಿ ನೆಮ್ಮದಿಯಾಗಿದ್ದು ತಾಳ್ಮೆಯಿಂದಿರಿ. ಪರಿವರ್ತನಾ ಪ್ರಕ್ರಿಯೆಯ ತಾಳ್ಮೆಯನ್ನೇ ನಾನು 'ತಪಸ್ಸು' ಎಂದು ಕರೆಯುವುದು. ಶಿರಡಿ ಸಾಯಿಬಾಬಾರವರ ಬೋಧನೆಯಲ್ಲಿ 'ಶ್ರದ್ಧಾ ಸಬೂರಿ' - ಶ್ರದ್ಧೆ ಮತ್ತು ತಾಳ್ಮೆ ಎಂಬ ಗಾದೆಯಿದೆ. ಇದು ಜೀವನದ ಸಾರ.
ನಮ್ಮ ಜೀವನದಲ್ಲಿ ಪ್ರಚಂಡವಾದ ಬೆಳವಣಿಗೆಗಳಿಗೆ ನಾವು ಅವಕಾಶ ಕೊಡುವುದಿಲ್ಲವೇಕೆ? ಏಕೆಂದರೆ ಜೀವನವು ನಮ್ಮನ್ನು ಒಂದು ಹೊಸ ಅವಕಾಶದೆಡೆಗೆ ಕರೆದೊಯ್ಯುತ್ತದೆಯೆಂಬ ವಿಶ್ವಾಸ ಇಲ್ಲದಿರುವುದರಿಂದ. ವಿಶ್ವಾಸ ಮತ್ತು ತಾಳ್ಮೆಗಳನ್ನಿಟ್ಟುಕೊಳ್ಳಿರಿ. ಸರಳವಾದ ಸತ್ಯವೇನೆಂದರೆ, ನೀವು ಹೆಚ್ಚಾದ ಜವಾಬ್ದಾರಿಯನ್ನು ಹೊತ್ತಾಗ ನಿಜವಾಗಿಯೂ ವಿಕಸಿಸುವಿರಿ ಮತ್ತು ನಿಮ್ಮ ಮೂಲಕ ಹೆಚ್ಚು ಚೈತನ್ಯವು ಪ್ರಕಟವಾಗಲಾರಂಭಿಸುತ್ತದೆ.
ಜೀವನ್ಮುಕ್ತಿಯ ಜವಾಬ್ದಾರಿ
ತಿಳಿಯಿರಿ, ಜೀವನ್ಮುಕ್ತಿಯು ಮಹತ್ತರವಾದ
ಜವಾಬ್ದಾರಿಯೊಂದಿಗೆ ಬರುತ್ತದೆ. ಅದು ಪ್ರಚಂಡ
'ಒತ್ತಡಪಡಿಸಿದ' ಅನುಕಂಪದೊಡನೆ ಬರುತ್ತದೆ.
'ಒತ್ತಡಪಡಿಸಿದ' ಎಂಬುದೇ ಸರಿಯಾದ ಪದ! ನಿಮ್ಮ
ಇಡೀ ವ್ಯಕ್ತಿತ್ವವೇ ಗಾಢವಾದ ಅನುಕಂಪದಿಂದಲೂ
ಕರುಣೆಯಿಂದಲೂ ಕಂಪಿಸುತ್ತಿರುತ್ತದೆ.
ಒಂದು ಘಟನೆಯ ಬಗ್ಗೆ ಹೇಳುತ್ತೇನೆ;
ಒಂದು ದಿನ ಬೆಳಗ್ಗೆ ವಿವೇಕಾನಂದರು ಹಠಾತ್ತನೆ ಎದ್ದು, 'ನನ್ನ ಬಲಗೈ ವಿಪರೀತವಾಗಿ ನೋಯುತ್ತಿದೆ' ಎಂದರು. ಆಗ ಅವರು ಒಂದು ಹಾಸಿಗೆಯ ಮೇಲೆ ಮಲಗಿದ್ದರು. ಅವರು, 'ಸಮುದ್ರದ ಈ ಕಡೆಯ ಯಾವುದೋ ದೇಶವು ಏನೋ ಪ್ರಕೃತಿ ವಿಕೋಪದಿಂದ ಕಷ್ಟಕ್ಕೆ ಗುರಿಯಾಗಿದೆ. ನಮ್ಮ ಅವಶ್ಯಕತೆ ಎಲ್ಲಿಗೆ ಬೇಕಾಗಿದೆಯೋ ದಯವಿಟ್ಟು ಪತ್ತೇಹಚ್ಚಿ, ನಮ್ಮ ಸ್ವಾಮಿಗಳನ್ನು ಅಲ್ಲಿಗೆ ಕಳುಹಿಸಿ ಪರಿಹಾರಕಾರ್ಯವನ್ನು ಮಾಡಿಸಿರಿ' ಎಂದರು. ಮರುದಿನವೇ ಅಲ್ಲಿಗೆ ಹತ್ತಿರದಲ್ಲಿದ್ದ ದ್ವೀಪದಲ್ಲಿ ಭೂಕಂಪವಾಗಿದೆಯೆಂಬ ವಾರ್ತೆ ಬಂದಿತು. ಪರಿಹಾರ ಕಾರ್ಯಕ್ಕಾಗಿ ಎಲ್ಲ ಸ್ವಾಮಿಗಳೂ ತ್ವರೆಯಿಂದ ಹೊರಟರು.
ವಿವೇಕಾನಂದರು ಎಷ್ಟೋ ಮೈಲುಗಳ
ದೂರದಲ್ಲಿದ್ದ ಜನರ ಯಾತನೆಯನ್ನು ಗ್ರಹಿಸಬಲ್ಲ
ಸೂಕ್ಷ್ಮಗ್ರಾಹಿಗಳಾಗಿದ್ದು, ಅವರ ಯಾತನೆಯನ್ನು
ಅನುಭವಿಸಿದರು!
> ಸ್ಪಷ್ಟವಾಗಿ
> ತಿಳಿಯಿರಿ,
> ಜವಾಬ್ದಾರಿ
> ಎಂಬುದು
> ಒಂದು ಪ್ರಜ್ಞೆ.
ಜೀವನ್ಮುಕ್ತಿಯೊಂದಿಗೆ ಇಡೀ ಬ್ರಹ್ಮಾಂಡವೇ ದೇಹದೊಳಗಿರುವಂತೆ ಭಾಸವಾಗುತ್ತದೆ. ಜೀವನ್ಮುಕ್ತಿಯ ಅನುಭವದೊಂದಿಗೆ ಒಂದು ಆಳವಾದ ಒತ್ತಡದೊಂದಿಗೊಡಗೂಡಿದ ಅನುಕಂಪವು ನಿಮ್ಮನ್ನಾವರಿಸುತ್ತದೆ. ತಿಳಿಯಿರಿ, ಅದೊಂದು ಮಹತ್ತರವಾದ ಜವಾಬ್ದಾರಿ. ಅದು ಕೇವಲ ಸ್ವಾತಂತ್ರ್ಯವಲ್ಲ. ಅದೊಂದು ಮಹತ್ತರವಾದ ಜವಾಬ್ದಾರಿಯೂ ಹೌದು.
ಸ್ಥಿತಿ, ಅಂತಸ್ತಲ್ಲ
ನಮ್ಮಲ್ಲನೇಕರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅಂತಸ್ತಿಗಾಗಿ ಕಾಯುತ್ತೇವೆ. ಸ್ಪಷ್ಟವಾಗಿ ತಿಳಿಯಿರಿ, ಅದು ಹಾಗಾಗುವುದಿಲ್ಲ. ಅಂತಸ್ತು ಬರುವುದು ಜವಾಬ್ದಾರಿಯನ್ನು ತೆಗೆದುಕೊಂಡಾಗಲೇ. ಅಂತಸ್ತಿಗಾಗಿ ಕಾಯುವವರು ಅದು ದೊರೆತ ನಂತರವೂ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ! ಅವರು ಸುಮ್ಮನೆ ಮತ್ತೊಂದು ಕಾರಣವನ್ನೋ, ನೆಪವನ್ನೋ, ಹುಡುಕುತ್ತಾರೆ ಅಷ್ಟೇ.
ಸ್ಪಷ್ಟವಾಗಿ ತಿಳಿಯಿರಿ, ಜವಾಬ್ದಾರಿ ಎಂಬುದು ಒಂದು ಪ್ರಜ್ಞೆ.
ಅನೇಕರು ತಮಗೆ ಜೀವನ್ಮುಕ್ತಿಯು ಲಭಿಸಿದರೆ ಒಂದು ಸ್ವರ್ಣಸಿಂಹಾಸನವೇ ದೊರಕುತ್ತದೆ ಎಂದುಕೊಳ್ಳುತ್ತಾರೆ. ಯಾರಾದರೂ ಆಹಾರ, ವಸತಿಗಳನ್ನು ಒದಗಿಸುತ್ತಾರೆಂದುಕೊಳ್ಳುತ್ತಾರೆ. ಅವರ ಭಾವಚಿತ್ರಗಳನ್ನು ಪೂಜಿಸುತ್ತಾರೆಂದುಕೊಳ್ಳುತ್ತಾರೆ. ಜೀವನ್ಮುಕ್ತಿ ಹೊಂದಿದ ಗುರುವಿನ ಅಂತಸ್ತನ್ನು ಕಂಡು, ಅದಕ್ಕಾಗಿ ಜೀವನ್ಮುಕ್ತಿಯನ್ನು ಪ್ರಯತ್ನಿಸೋಣವೆಂದುಕೊಂಡಲ್ಲಿ, ಮೋಸಹೋಗುವಿರಿ. ಆದರೆ, ನೀವು ಜೀವನ್ಮುಕ್ತಿಯನ್ನು ಪಡೆದ ಗುರುಗಳ ಸ್ಥಿತಿಯನ್ನು ಕಂಡು, ಅದನ್ನು ಪಡೆಯಲಪೇಕ್ಷಿಸಿದರೆ ನೀವು ಜಯಶೀಲರಾಗುತ್ತೀರಿ. ಆನಂದವಾಗಿರುತ್ತೀರಿ. ಸಂತೋಷಪಡುತ್ತೀರಿ. ಇದೇ ಸ್ಥಿತಿಗೂ, ಅಂತಸ್ತಿಗೂ ಇರುವ ವ್ಯತ್ಯಾಸ.