KAILASA Library/ಜೀವನ್ಮುಕ್ತಿ/ಭಯ ಹಾಗೂ ದುರಾಸೆಗಳೆಂಬ ಪ್ರೇರಕ ಶಕ್ತಿಗಳುSign in
ಜೀವನ್ಮುಕ್ತಿ

ಭಯ ಹಾಗೂ ದುರಾಸೆಗಳೆಂಬ ಪ್ರೇರಕ ಶಕ್ತಿಗಳು

This text was machine-transcribed from the printed book and may contain errors. Select the words and choose “Report a mistake”.

ನಾವು ನಮ್ಮನ್ನು ಬಹಳ ಬುದ್ಧಿವಂತರೆಂದು ತಿಳಿದಿರುವ ಕಾರಣ, ನಮ್ಮ ಮಕ್ಕಳನ್ನು ನಮ್ಮಂತೆಯೇ ಬುದ್ಧಿವಂತರಾಗುವಂತೆ ರೂಪಿಸುತ್ತೇವೆ. ಈ ಕ್ರಿಯೆಯನ್ನು ಆರಂಭಿಸಿದಾಗ, ನಾವು ಮಗುವಿಗೆ ಮೊದಲು ಜೀವನದಲ್ಲಿ ಭಯ ಅಥವಾ ದುರಾಸೆಯಿಂದ ಪ್ರೇರೇಪಿತ ತರ್ಕವನ್ನು ಕಲಿಸುತ್ತೇವೆ.

ಅವನು ಹೆಚ್ಚಾಗಿ ಸಾಧಿಸಲು ಏನನ್ನಾದರೂ
ಮಾಡಬೇಕು ಇಲ್ಲವೇ ಅವನಿಗೆ ಏನು ಇಷ್ಟವಿಲ್ಲವೋ
ಅದು ಆಗದಂತೆ ತಡೆಯಲು ಏನಾದರೂ
ಮಾಡಬೇಕು. ಏನಾದರೂ ಆಗಲು ಬಯಸುವುದು

  • ದುರಾಸೆ. ಏನಾದರೂ ಆಗಿಬಿಡಬಹುದು ಎಂದು ಹೆದರುವುದು - ಭಯ.

ಅವನು ಒಂದು ಒಳ್ಳೆಯ ಕಾಲೇಜು ಸೇರಲು,
ಉತ್ತಮ ದರ್ಜೆಯನ್ನು ಪಡೆಯಲು
ಓದಬೇಕೆನ್ನುವುದು - ದುರಾಸೆಯಿಂದ
ಪ್ರೇರಿತವಾದುದು. ಅವನ ಮುಂದಿನ ವೃತ್ತಿಪರ
ಜೀವನದಲ್ಲಿ ಹಿಂದುಳಿಯಬಾರದೆಂಬ ಕಾರಣದಿಂದ
ಓದಬೇಕೆನ್ನುವುದು - ಭಯದಿಂದ ಪ್ರೇರಿತವಾದುದು.

ಮಗುವಿಗೆ ಪ್ರೇರಣೆಯು ದುರಾಸೆ ಅಥವಾ
ಭಯವೇ ಹೊರತು ಸಂತೃಪ್ತಿ ಅಲ್ಲವೇ ಅಲ್ಲ.
ಸ್ವಾಭಾವಿಕವಾಗಿ ಮಗುವು ತನಗೆ ನಿಜವಾಗಿ
ಬೇಕಾದುದನ್ನು ಗಳಿಸಲು ಶ್ರಮಿಸುತ್ತಿದ್ದೇನೋ
ಇಲ್ಲವೋ ಎಂದು ಯೋಚಿಸಲು ಸಮಯವೂ
ಇಲ್ಲದಂತೆ ಸ್ಪರ್ಧೆಯ ಮನೋಭಾವದ ಓಟದಲ್ಲಿ

ಸಿಕ್ಕಿಹಾಕಿಕೊಳ್ಳುತ್ತಾನೆ. ಅವನಿಗೆ ಆ ಓಟದಲ್ಲಿಯೂ ಸಂತೋಷಪಡಬಹುದೆಂದು ಸಹ ತಿಳಿಯದು! ಅವನ ಗಮನವು ಬೇರೆಡೆಗೆ ತಿರುಗಿದರೆ, ಗುರಿಯನ್ನು ಮುಟ್ಟಲು ಅಮೂಲ್ಯವಾದ ಸಮಯವು ಹಾಳಾಗುತ್ತದೆ ಎಂಬಂತೆ ಅವನಿಗೆ ತರಬೇತಿ ನೀಡಲಾಗಿದೆ.

ಆದರೆ 'ಗುರಿ' ಸಾಧಿಸಿದ ನಂತರ ಎಷ್ಟು ಮಂದಿ ತೃಪ್ತರಾಗಿದ್ದಾರೆ? ನೀವು ಇಟ್ಟುಕೊಂಡ ಗುರಿಯನ್ನು ತಲುಪಿದಾಗ, ಗುರಿಯ ಕಂಬವೇ ಇನ್ನಿಲ್ಲವೆಂದು ತಿಳಿಯುತ್ತೀರಿ. ಅದು ಮುಂದಕ್ಕೆ ಹೋಗಿರುತ್ತದೆ - ಈಗ ನಿಮಗೆ ಮತ್ತೇನೋ ಬೇಕಾಗಿರುತ್ತದೆ!

ತಿಳಿಯಿರಿ, ಬೇರೆಯವರು ಮಾಡುವುದನ್ನು
ನೋಡುವುದರ ಮೇಲೆ ನಿಮ್ಮ ಜೀವನವು
ಆಧಾರಿತವಾದರೆ, ನಿಮ್ಮ ಅಮೂಲ್ಯವಾದ
ಜೀವನವನ್ನು ಸುಮ್ಮನೆ ವ್ಯರ್ಥಮಾಡಿಕೊಳ್ಳುವಿರಿ.
ಇದನ್ನೇ 'ಮಂದೆಯ ಮನೋಭಾವ' ಎನ್ನುವುದು-
ಎಲ್ಲರೂ ಇಲಿಗಳ ಸ್ಪರ್ಧೆಯಲ್ಲಿರುವುದರಿಂದ ನೀವೂ
ಅವರನ್ನು ಸೇರುವುದು, ನೀವೇನಾದರೂ ಇಲಿಗಳ
ಸ್ಪರ್ಧೆಯಲ್ಲಿ ಗೆದ್ದರೂ, ನೀವು ಒಂದು
ಇಲಿಯಾಗಿಯೇ ಇರುತ್ತೀರಿ ಅಷ್ಟೆ!

ಬುದ್ಧಿಗೆ ಮಾಪನ ಯಾವುದು?

ಬುದ್ಧಿಯನ್ನು ಅಳೆಯಬಹುದೇ? ಬುದ್ಧಿಯನ್ನು ಅಳೆಯಲು ಒಂದು ನಿಗದಿತ ಮಾಪನ ಇದೆಯೇ?

ಒಬ್ಬ ವ್ಯಕ್ತಿಯ ಬುದ್ಧಿಯ ಮಟ್ಟವೆಂದು ಹೇಳಲ್ಪಟ್ಟದ್ದನ್ನು ನಿರ್ಧರಿಸಲು ನಾವು ಶಾಲೆಯ ಕಾಲದಿಂದಲೇ ನಿರ್ದಿಷ್ಟವಾದ ಮಾನದಂಡವನ್ನು ಬಳಸುತ್ತೇವೆ. ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೆ ಕ್ರಮವಾಗಿ ದರ್ಜೆಯ ವ್ಯವಸ್ಥೆಯಲ್ಲಿ ನಾವು ಎಲ್ಲಾ ಮಕ್ಕಳನ್ನೂ ಅನೇಕ ನೈಪುಣ್ಯ ಹಾಗೂ ಕೌಶಲ್ಯಗಳಲ್ಲಿ ಹೋಲಿಸಿ ದರ್ಜೆಯನ್ನು ನಿರ್ಣಯಿಸುತ್ತೇವೆ.

ಇಲ್ಲಿ ನಾವು ಒಂದು ಮುಖ್ಯವಾದ ವಿಷಯವನ್ನು
ತಿಳಿಯಬೇಕು: ಒಬ್ಬ ವಿಜ್ಞಾನಿಯಾಗಲು ಒಂದು
ರೀತಿಯ ಬುದ್ಧಿವಂತಿಕೆ ಬೇಕಾಗುತ್ತದೆ, ಒಬ್ಬ
ಕವಿಯಾಗಲು ಮತ್ತೊಂದು ರೀತಿಯ ಬುದ್ಧಿವಂತಿಕೆ
ಬೇಕಾಗುತ್ತದೆ. ಒಬ್ಬ ಒಲಂಪಿಕ್ ಈಜುಗಾರನಾಗಲು
ಬೇರೊಂದು ರೀತಿಯ ಬುದ್ಧಿವಂತಿಕೆ ಬೇಕಾಗುತ್ತದೆ!
ಒಂದು ಸಂದರ್ಭಕ್ಕೆ ಅಥವಾ ಸವಾಲಿಗೆ ಸ್ಪಂದಿಸುವ
ಸಾಮರ್ಥ್ಯವೇ ಬುದ್ಧಿ. ಪ್ರತಿಯೊಬ್ಬರೂ
ಹುಟ್ಟಿನಿಂದಲೂ ಬುದ್ಧಿವಂತರೇ; ಪ್ರತಿಯೊಬ್ಬರ
ಬುದ್ಧಿಯ ಅನನ್ಯತೆಯ ಆಯಾಮಗಳನ್ನು
ಕಂಡುಕೊಳ್ಳುವುದೇ ಬಹಳ ಮುಖ್ಯ.

ಸಮಯಸ್ಫೂರ್ತಿ - ನೇರವಾದ, ಸರಳವಾದ ಬುದ್ಧಿಶಕ್ತಿ

ನಿಮ್ಮಲ್ಲಿ ಒಂದು ಸಹಜವಾದ
ಸಮಯಸ್ಫೂರ್ತಿಯುತ ಬುದ್ಧಿಶಕ್ತಿಯಿದೆ. ನೀವು
ಅದನ್ನು ಮಗುವಾಗಿದ್ದಾಗ ಆಸ್ವಾದಿಸಿದ್ದೀರಿ.

ಮಗುವಾಗಿದ್ದಾಗ ವಿಷಯಗಳನ್ನು ಬಹಳ
ಸರಳವಾಗಿ, ಬಿಚ್ಚುಮನಸ್ಸಿನಿಂದ ಕಂಡಿದ್ದೀರಿ.
ಆದ್ದರಿಂದಲೇ ನೀವು ಅಷ್ಟು ಸ್ವಾಭಾವಿಕವಾಗಿ

ಸಮಯಸ್ಫೂರ್ತಿಯಿಂದ ಇದ್ದದ್ದು. ನೀವು ಬೆಳೆದಂತೆ ನಿಮ್ಮನ್ನು ಆ ಸರಳತೆಯಿಂದ ದೂರಮಾಡಿದ್ದು ಯಾವುದು? 'ನೀವು ಸಾಲದು' ಎಂಬ ಭಾವನೆಯನ್ನು ಸಮಾಜದ ಕಟ್ಟುಪಾಡುಗಳು ನಿಮಗೆ ಮಗುವಾದಾಗಿನಿಂದ ಹೇರುತ್ತಲೇ ಇವೆ. ಈ ಕಾರಣದಿಂದ ನೀವು ಬೇರೆ ಏನಾದರೂ ಆಗಲು ಹಾಗೂ ಬೇರೆಯವರಿಗೆ ಏನನ್ನಾದರೂ ಸಾಧಿಸಿ ತೋರಿಸಲು ಸತತವಾಗಿ ಪ್ರಯತ್ನಿಸುತ್ತಿದ್ದೀರಿ. ನೀವು ಸಾಲದೆಂದು ಸತತವಾಗಿ ಆಲೋಚಿಸುವುದರಿಂದ, ನೀವು ಇತರರನ್ನು ಅನುಕರಿಸಲು ಯತ್ನಿಸುತ್ತೀರಿ ಹಾಗೂ ನಿಮ್ಮೊಳಗೆ ಚಿಮ್ಮುತ್ತಿರುವ ಸ್ವಾಭಾವಿಕವಾದ ಅದ್ಭುತ ಶಕ್ತಿಯನ್ನು ವ್ಯರ್ಥಗೊಳಿಸುತ್ತೀರಿ.

ಒಮ್ಮೆ ಒಂದು ಕಂಪನಿಯ ಪ್ರಕಟಣಾ ಫಲಕದ
ಮೇಲೆ ಹೀಗೆ ಬರೆದಿರುವುದನ್ನು ಕಂಡೆ - 'ಸಾವು
ಒಂದು ಅನಿವಾರ್ಯವೆಂದು ಒಪ್ಪಬಹುದು. ಆದರೆ
ನಮಗೆ 2 ವಾರಗಳ ಸೂಚನೆಯಿದ್ದರೆ ಒಳಿತು,
ಏಕೆಂದರೆ ನಿಮ್ಮ ಸಾವಿನ ಮುಂಚೆ ಬೇರೊಬ್ಬರಿಗೆ
ನಿಮ್ಮ ಕೆಲಸವನ್ನು ಕಲಿಸುವುದು ನಿಮ್ಮ
ಕರ್ತವ್ಯವೆಂದು ನಾವು ಭಾವಿಸುತ್ತೇವೆ'.

ಸೂಚನೆ : ಈ ಹೊಸ ಸೌಲಭ್ಯದ ಕಾರ್ಯಕ್ರಮ ನೆನ್ನೆಯ ದಿನ ಆರಂಭವಾಯಿತು.

ನೀವು ನಿಮ್ಮ ಸಮಯಸ್ಫೂರ್ತಿಯಿಂದ, ನಿಮ್ಮದೇ
ಬುದ್ಧಿವಂತಿಕೆಯಿಂದ ವರ್ತಿಸುವುದನ್ನು ಬಿಟ್ಟು
ಇತರರ ನಿರ್ವಹಣೆ ಅಥವಾ ವರ್ತನೆಯನ್ನು
ಕುರುಡಾಗಿ ಅನುಕರಿಸಿದರೆ ನೀವು ನಿಮ್ಮನ್ನೇ
ಅದ್ಭುತವಾದ ಸಾಧ್ಯತೆಗಳಿಂದ
ವಂಚಿಸಿಕೊಳ್ಳುತ್ತಿರುತ್ತೀರಿ.

ಒಮ್ಮೆ ಒಬ್ಬ ಅಂಕಿಅಂಶ ಶಾಸ್ತ್ರದ ವಿದ್ಯಾರ್ಥಿಯು
ವಾಹನ ಚಾಲನೆ ಮಾಡುತ್ತಿದ್ದನು. ಆತನು
ಯಾವಾಗಲೂ ಯಾವುದೇ ರಸ್ತೆಯ ತಿರುವನ್ನು
ತಲುಪುವ ಮುಂಚೆ ಜೋರಾಗಿ ವಾಹನವನ್ನು
ಚಾಲನೆ ಮಾಡಿ, ಅದನ್ನು ದಾಟಿದ ನಂತರ
ನಿಧಾನವಾಗಿ ಚಾಲನೆ ಮಾಡುತ್ತಿದ್ದನು.

ಒಂದು ದಿನ ಆತನ ಗೆಳೆಯನೊಬ್ಬನು ಆತನೊಂದಿಗೆ ಪಯಣಿಸುತ್ತಿದ್ದನು. ರಸ್ತೆಯ ತಿರುವು ಬಂದಾಗ ಆತನು ಮಾಮೂಲಿನಂತೆ ದಾಟಿದನು. ಆತನ ಸ್ನೇಹಿತನು, 'ರಸ್ತೆಗಳ ತಿರುವುಗಳಲ್ಲಿ ನಿಧಾನವಾಗಿ ವಾಹನ ಚಾಲನೆ ಮಾಡುವುದರ ಬದಲಾಗಿ ನೀನೇಕೆ ಜೋರಾಗಿ ಚಾಲನೆ ಮಾಡುತ್ತೀಯೆ?' ಎಂದು ಆಶ್ಚರ್ಯದಿಂದ ಕೇಳಿದನು.

ಆಗ ಆ ಅಂಕಿಅಂಶದ ವಿದ್ಯಾರ್ಥಿಯು,
'ಅಂಕಿಅಂಶಗಳ ಪ್ರಕಾರ ಹೇಳುವುದಾದರೆ,
ಅಪಘಾತಗಳು ರಸ್ತೆಗಳ ತಿರುವುಗಳಲ್ಲಿ ಸಂಭವಿಸುವ
ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ನಾನು ಆದಷ್ಟು
ಕಡಿಮೆ ಸಮಯ ಅಲ್ಲಿ ಕಳೆಯಲು ಇಚ್ಛಿಸುತ್ತೇನೆ'
ಎಂದು ಹೇಳಿದನು.

ಬುದ್ಧಿವಂತಿಕೆಯಿಂದ ಅನ್ವಯಿಸಿದಾಗ ಮಾತ್ರ
ಪಾಂಡಿತ್ಯವು ಒಳ್ಳೆಯದು. ನಿಜವಾದ ಫಲಿತಾಂಶ
ಕೊಡುವುದು ಬುದ್ಧಿವಂತಿಕೆ, ಪಾಂಡಿತ್ಯವಲ್ಲ.
ಪಾಂಡಿತ್ಯವು ಸರಿಯಾದ ಸ್ಥಳದಲ್ಲಿ, ಸರಿಯಾದ
ಸಮಯದಲ್ಲಿ ಬಳಸಿದಾಗ ಅದು
ಬುದ್ಧಿವಂತಿಕೆಯಾಗುತ್ತದೆ. ನಾವು ನಮ್ಮ
ಪಾಂಡಿತ್ಯವನ್ನು ಸರಿಯಾದ ಜಾಗದಲ್ಲಿ, ಸರಿಯಾದ
ಸಮಯದಲ್ಲಿ, ಸುಲಭವಾಗಿ ವ್ಯಕ್ತಪಡಿಸುವುದನ್ನು
ಅಥವಾ ನಮ್ಮ ಬುದ್ಧಿಯನ್ನು ಬಳಸುವುದನ್ನೇ
ಸಮಯಸ್ಫೂರ್ತಿ ಎನ್ನುವುದು.

ಅರಿವಿಗೆ ಸಾಧನ

ಒಂದು ಸಣ್ಣ ಕಥೆ:

ಒಬ್ಬ ಹುಡುಗನು ಶಾಲೆಯಲ್ಲಿ ಹಾಗೂ ಮನೆಯಲ್ಲಿ ಅನೇಕ ಹೊಸ ವಿಷಯಗಳನ್ನು ಕಲಿಯುತ್ತಿದ್ದನು. ಒಂದು ದಿನ ಆತನು ಶಿಕ್ಷಕರಿಗೆ ಹೇಳಿದನು, 'ನೆನ್ನೆಯ ದಿನ ನಾನು ಮೂರು ಹೆಣ್ಣು ನೊಣಗಳನ್ನು ಹಾಗೂ ಎರಡು ಗಂಡು ನೊಣಗಳನ್ನು ಕೊಂದೆನು' ಎಂದು. ಆಶ್ಚರ್ಯಗೊಂಡ ಶಿಕ್ಷಕರು, 'ಆ ನೊಣಗಳು ಗಂಡೋ ಹೆಣ್ಣೋ ಎಂದು ನಿನಗೆ ಹೇಗೆ ತಿಳಿಯಿತು?' ಎಂದು ಕೇಳಿದರು.

ಹುಡುಗನು, 'ಅದು ಬಹಳ ಸುಲಭ. ಮೂರು ನೊಣಗಳು ಕನ್ನಡಿಯ ಮೇಲೆ ಕುಳಿತಿದ್ದವು, ಎರಡು ನೊಣಗಳು ಸಿಗರೇಟಿನ ಡಬ್ಬಿಯ ಮೇಲೆ ಕುಳಿತಿದ್ದವು!' ಎಂದು ಉತ್ತರಿಸಿದನು.

ಅರಿವಿನಿಂದಲೂ ಹಾಗೂ ಸಮಯ ಸ್ಪೂರ್ತಿಯಿಂದಲೂ ಇರುವುದೇ ಬುದ್ಧಿಶಕ್ತಿ. ಒಂದು ಮುಖ್ಯವಾದ ವಿಷಯವನ್ನು ತಿಳಿಯಿರಿ: ನೀವು ಆಳವಾದ ಅರಿವಿನಿಂದ ಕೂಡಿದ್ದರೆ, ತಪ್ಪುಗಳನ್ನು ಮಾಡಲಾರಿರಿ!

ಅರಿವನ್ನು ಹೊಂದಿದ್ದರೆ, ಬೇರೆಯವರು ನಿಮಗೆ ಕಲಿಸಿದ್ದನ್ನು ನೀವು ನೆಚ್ಚಿಕೊಳ್ಳುವುದಿಲ್ಲ. ಬಹಳ ವರ್ಷಗಳಿಂದ ನಿಮ್ಮೊಳಗಿರುವ ಹಿಂದಿನ ಕಟ್ಟುಪಾಡುಗಳನ್ನು ನೆಚ್ಚಿಕೊಳ್ಳುವುದಿಲ್ಲ. ಅರಿವಿನಿಂದ ಬಂದ ಹೊಸದಾದ ಬುದ್ಧಿಶಕ್ತಿಯಿಂದ ವರ್ತಿಸುತ್ತೀರಿ.

ಅನೇಕ ವರ್ಷಗಳು ಅಭ್ಯಾಸಗಳಿಂದಲೇ ಬಾಳಿದ ಕತ್ತಲನ್ನು ನಿವಾರಿಸಲು ಅರಿವಿನ ಬೆಳಕೊಂದೇ ಸಾಕು. ಎಲ್ಲಕ್ಕಿಂತ ಮಿಗಿಲಾದ ಅಂಶವೆಂದರೆ, ನೀವು ಅರಿವಿನಿಂದ ಇದ್ದಾಗ ಮಾತ್ರವೇ ನಿಮ್ಮ ಬುದ್ಧಿಯು ಕಾರ್ಯನಿರ್ವಹಿಸುವುದು. ಪ್ರತಿಯೊಂದು ಕ್ಷಣವೂ ಸಂಪೂರ್ಣವಾದ ಅರಿವಿನಿಂದ ಬಾಳುವುದೇ ಧ್ಯಾನ.

ನಿಯಮಗಳನ್ನು ಮೀರಿ ಜವಾಬ್ದಾರಿಯೆಡೆಗೆ

ಒಂದು ಸಣ್ಣ ಕಥೆ:

ಒಮ್ಮೆ ಒಬ್ಬ ಸೇನಾಧಿಕಾರಿಯು ತನ್ನ ತರಬೇತಿ ಅಧಿವೇಶನದಲ್ಲಿ ಬಂದೂಕನ್ನು ಮಾಡಲು ಆಕ್ರೋಡು ಮರವನ್ನೇ ಏಕೆ ಬಳಸುತ್ತಾರೆಂದು ಹೊಸದಾಗಿ ದಾಖಲಾದ ಸೈನಿಕರನ್ನು ಕೇಳಿದನು. ಅವರು ದೀರ್ಘವಾಗಿ ಆಲೋಚಿಸಿದ ನಂತರ ಅವರಲ್ಲೊಬ್ಬನು, 'ಏಕೆಂದರೆ ಆಕ್ರೋಡು ಇತರ ಬೀಜಗಳಿಗಿಂತ ಗಟ್ಟಿಯಾದುದು' ಎಂದು ಹೇಳಿದನು.

ಸೇನಾಧಿಕಾರಿಯು ಅವನ ಉತ್ತರವನ್ನು ತಳ್ಳಿಹಾಕಿ, 'ತಪ್ಪು' ಎಂದನು. ಮತ್ತೊಬ್ಬ ಸೈನಿಕನು ಧೈರ್ಯ ತಂದುಕೊಂಡು 'ಏಕೆಂದರೆ ಅದು ಹೆಚ್ಚು ಬಾಳಿಕೆ ಬರುತ್ತದೆ' ಎಂದು ಹೇಳಿದನು. ಸೇನಾಧಿಕಾರಿಯ ಧ್ವನಿಯು ಗಟ್ಟಿಯಾಗಿ ಮೊಳಗಿತು 'ತಪ್ಪು' ಎಂದು. ಮೂರನೆಯವನು ತನ್ನ ಅದೃಷ್ಟವನ್ನು ಪರೀಕ್ಷಿಸಿ 'ಏಕೆಂದರೆ ಅದು ಜಲನಿರೋಧಕ' ಎಂದು ನುಡಿದನು .

ಸೇನಾಧಿಕಾರಿಗೆ ಈ ಉತ್ತರಗಳಿಂದ ಸಾಕಾಗಿ, 'ನೀವು ಖಂಡಿತವಾಗಿ ಬಹಳಷ್ಟನ್ನು ಕಲಿಯಬೇಕು. ಬಂದೂಕನ್ನು ಆಕ್ರೋಡು ಮರದಿಂದ ಮಾಡಿರುವ ಸರಳವಾದ ಕಾರಣವೆಂದರೆ, ಅದು ಹಾಗೆಯೇ ಮಾಡಬೇಕೆಂದು ನಿಯಮಗಳ ಪುಸ್ತಕದಲ್ಲಿದೆ' ಎಂದು ಉತ್ತರಿಸಿದನು.

ಜೀವನದಲ್ಲಿ ಇತರರ ಮೇಲೆ ಜವಾಬ್ದಾರಿಯನ್ನು ಹೊರಿಸುವುದು ಸುಲಭವಾದ್ದರಿಂದ ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ನೆಚ್ಚಿಕೊಳ್ಳುವುದನ್ನು ಬಿಟ್ಟು ಇತರರ ನಿರ್ದೇಶನಗಳನ್ನು ಕುರುಡಾಗಿ ಅನುಸರಿಸುತ್ತೀರಿ.

ಜವಾಬ್ದಾರಿಯ ಬಗ್ಗೆ ಹೇಳಬೇಕೆಂದರೆ ಜನರು ಜವಾಬ್ದಾರಿಯನ್ನು ಹೇಗೆ ತಿಳಿಯುತ್ತಾರೆನ್ನುವುದಕ್ಕೆ ಒಂದು ಸಣ್ಣ ಹಾಸ್ಯ:

ಒಮ್ಮೆ ಒಬ್ಬ ತಪ್ಪಿತಸ್ಥನು ತನ್ನ ವಕೀಲರನ್ನು ತೆಗಳುತ್ತಿದ್ದನು, 'ನೀನು ಒಬ್ಬ ಅಪ್ರಯೋಜಕನಾದ ವಕೀಲ. ನಿನಗೆ ಯಾವಾಗ ವಿರುದ್ಧ ಹೇಳಿಕೆ ನೀಡಬೇಕೆಂಬ ಜವಾಬ್ದಾರಿಯೇ ಇಲ್ಲ' ಎಂದು.

ದಿಗ್ಭ್ರಮೆಗೊಂಡ ವಕೀಲರು, 'ನನಗೆ ಅರ್ಥವಾಗುತ್ತಿಲ್ಲ. ನಾನು ಯಾವಾಗ ಆಕ್ಷೇಪಣೆ ಮಾಡಿರಬೇಕಾಗಿದ್ದನ್ನು ಮಾಡಲಿಲ್ಲವೆಂಬ ನಿಮ್ಮ ಭಾವನೆ?' ಎಂದು ಕೇಳಿದನು.

ತಪಿತಸ್ಥನು, 'ವಿರುದ್ಧವಾದ ವಕೀಲನು ಮಾತನಾಡುತ್ತಿದ್ದಾಗ ನೀನು ಆಕ್ಷೇಪಿಸಿದೆ. ಆದರೆ, ನ್ಯಾಯಾಧೀಶರು ನನ್ನನ್ನು ತಪಿತಸ್ಥನೆಂದು ಘೋಷಿಸಿದಾಗ ನಿನ್ನ ದೊಡ್ಡ ಬಾಯಿಯನ್ನು ಮುಚ್ಚಿಕೊಂಡಿದ್ದೆ. ಆ ಸಮಯದಲ್ಲಿಯೇ ಎಲ್ಲಾ ಆಕ್ಷೇಪಣೆಯನ್ನೂ ಮಾಡಬೇಕಾದದ್ದು!' ಎಂದು ನುಡಿದನು.

ನಿಮ್ಮ ಜೀವನದಲ್ಲಿ ಆದುದಕ್ಕೆಲ್ಲಾ ಇತರರನ್ನು ತೆಗಳುವುದು ಬಹಳ ಸುಲಭ. ಆದರೆ, ಸ್ವಲ್ಪ ಆಳವಾಗಿ ಅವಲೋಕಿಸಿದರೆ, ನಿಮ್ಮ ಜೀವನದ ಆಗುಹೋಗುಗಳಿಗೆ ನೀವೇ ಸಂಪೂರ್ಣವಾಗಿ ಜವಾಬ್ದಾರರೆಂದು ತಿಳಿಯಬಹುದು.

ಈಗ, ಇಲ್ಲಿ

ಬುದ್ಧಿವಂತರಾಗಿರುವುದಕ್ಕೆ ಬೇಕಾಗಿರುವುದು ನೀವು ನೀವಾಗಿಯೇ ಇರುವುದು. ಆದರೆ ಆ ಅಭ್ಯಾಸವೇ ನಿಮಗಿಲ್ಲದಂತಾಗಿದೆ. ಆದ್ದರಿಂದ ಹಿಂದಿನ ಅನುಭವಗಳ ಆಧಾರದ ಮೇಲೆ ಪ್ರತಿಕ್ರಿಯಿಸಲು ನಿರ್ಧರಿಸುತ್ತೀರಿ.

ಸಾಮಾನ್ಯವಾಗಿ ನಾವು ಪ್ರೋಗ್ರಾಂ ಮಾಡಿರುವ ಯಂತ್ರಗಳಂತೆ ಪ್ರತಿಕ್ರಿಯಿಸುತ್ತೇವೆ; ನಾವು ಸಂದರ್ಭಗಳಿಗೆ ಸ್ಪಂದಿಸುವುದಿಲ್ಲ. ಯಾರಾದರೂ ನಿಮಗೆ ಅಪಮಾನಗೊಳಿಸಿದರೆ ನೀವು ಮಾಡುತ್ತಿರುವುದನ್ನು ಅರಿತುಕೊಳ್ಳುವ ಮೊದಲೇ ಕೋಪಗೊಳ್ಳುತ್ತೀರಿ.

ಬುದ್ಧನ ಜೀವನದಿಂದ ಆಯ್ದ ಒಂದು ಸೊಗಸಾದ ಕಥೆ:

ಒಮ್ಮೆ ಒಬ್ಬ ವ್ಯಕ್ತಿ ಬುದ್ಧನನ್ನು ಬಹಿರಂಗವಾಗಿ ಅವಮಾನಗೊಳಿಸಿದನು. ಆತನ ಶಿಷ್ಯನಾದ ಆನಂದನು, 'ನನಗೆ ಆ ವ್ಯಕ್ತಿಯ ಮೇಲೆ ಬಹಳ ಕೋಪ ಬರುತ್ತಿತ್ತು. ನೀವೇಕೆ ಸುಮ್ಮನಿದ್ದಿರಿ? ಕಡೇಪಕ್ಷ ನಾನಾದರೂ ನನ್ನ ಮನಸಾರೆ ಅವನನ್ನು ಛೀಮಾರಿ ಮಾಡುತ್ತಿದ್ದೆ' ಎಂದು ಹೇಳಿದನು. ಬುದ್ಧನು ಸಮಾಧಾನದಿಂದ, ‘ನೀನು ನನಗೆ ಆಶ್ಚರ್ಯವನ್ನಂಟು ಮಾಡುತ್ತಿರುವೆ. ಅವನು ಹೇಳುತ್ತಿದ್ದುದು ಸಂಪೂರ್ಣವಾಗಿ ಅಸಂಬದ್ಧವಾದುದೆಂದು ನಿನಗೂ ತಿಳಿದಿದೆ. ಹಾಗಿದ್ದಲ್ಲಿ ನೀನೇಕೆ ಕೋಪಗೊಳ್ಳುತ್ತಿರುವೆ? ನಿನ್ನನ್ನು ನೀನೇ ಶಿಕ್ಷಿಸಿಕೊಳ್ಳುತ್ತಿರುವೆ. ಅದು ಮೂರ್ಖತನ. ಬೇರೆ ಯಾರೋ ತಪ್ಪನ್ನು ಮಾಡಿದ್ದಾಗ, ನೀನೇಕೆ ಅದಕ್ಕಾಗಿ ಸಂಕಟಪಡುತ್ತಿದ್ದೀಯೆ?’ ಎಂದು ಉತ್ತರಿಸಿದನು.

ಸಮಯದೊಂದಿಗೆ ಸಾಗುತ್ತಾ ಜೀವನದೊಂದಿಗೆ ಹರಿಯುತ್ತಾ, ಒಂದು ಘನವಾದ ಅಹಂಕಾರವನ್ನು ಬಿಟ್ಟು, ಒಂದು ಸ್ರವಿಸುವ ಪ್ರಕ್ರಿಯೆಯಾಗುವುದನ್ನೇ ಬುದ್ಧಿವಂತಿಕೆ ಎನ್ನುವುದು.

ಪ್ರೀತಿಯ ಬುದ್ಧಿಶಕ್ತಿಯ ದ್ವಾರವು ತಲೆಯನ್ನು ಮೀರಿ ಇರುವುದು

ಒಮ್ಮೆ ಒಬ್ಬ ತಂದೆ ಹಾಗೂ ಮಗ ರಾತ್ರಿ
ಸಮಯದಲ್ಲಿ ಒಂದು ಅಗ್ಗವಾದ ಹೋಟೆಲಿನಲ್ಲಿ
ತಂಗಿದರು.

ತಂದೆಯು ಮಗನನ್ನು ಹಾಸಿಗೆಯ ಮೇಲೆ ಮಲಗಿಸಿ,
ಹೊದಿಸಿ, ದೀಪವನ್ನು ಆರಿಸಿ ತನ್ನ ಮಗನಿಗೆ ಭರವಸೆ
ನೀಡುತ್ತಾ ಹೇಳಿದನು, ‘ಮಗನೇ, ಹೆದರದಿರು.
ದೇವತೆಗಳು ನಿನ್ನನ್ನು ನೋಡಿಕೊಳ್ಳುತ್ತಿದ್ದಾರೆ’
ಎಂದು.

‘ನನಗೆ ಗೊತ್ತು, ಇಬ್ಬರು ಈಗ ತಾನೇ ನನ್ನನ್ನು ಕಚ್ಚಿದರು!’ ಎಂದು ಮಗನು ಹೇಳಿದನು.

ಬುದ್ಧಿವಂತಿಕೆಯಿಂದ ವ್ಯವಹರಿಸುವುದು ನೀವು ಹುಟ್ಟಿದಾಗ ಇದ್ದ ಮುಗ್ಧತೆಗೆ ಹಿಂದಿರುಗುವ ಪ್ರಕ್ರಿಯೆ. ಅದು ಹೊಸದನ್ನು ಪಡೆಯುವಂತಹದಲ್ಲ; ಅದು ನಿಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವಂತಹುದು. ಅದು ನೀವು ನಿಜವಾಗಿ ಯಾರೆಂದು ತಿಳಿಯುವ ನಿಜವಾದ ಮಾರ್ಗ.

ನೀವು ವಿಚಾರವಂತರಾದಾಗ ಕೇವಲ ತಲೆಯಿಂದ, ತರ್ಕದಿಂದ, ವ್ಯವಹರಿಸುತ್ತೀರಿ.

ಒಂದು ಸಣ್ಣ ಕಥೆ:

ಒಬ್ಬ ವ್ಯಕ್ತಿಯು ವೇದಾಂತದಲ್ಲಿ ಡಾಕ್ಟರೇಟ್ ಪದವಿ ಪಡೆಯಲು ಶ್ರಮಿಸುತ್ತಿದ್ದನು. ಆತನು ತನ್ನ ಅಧ್ಯಯನದಲ್ಲಿ ಹಾಗೂ ಸಂಶೋಧನೆಯಲ್ಲಿ ಎಷ್ಟು ತೊಡಗಿದ್ದನೆಂದರೆ, ಆತನ ಹೆಂಡತಿಯು, ತನ್ನ ಬಗ್ಗೆ ಆತನಿಗೆ ನೆನಪು ಮಾಡದಿದ್ದಲ್ಲಿ ಆಕೆಯನ್ನು ಮರೆತೇ ಬಿಡಬಹುದೆಂದು ಆಲೋಚಿಸಿದಳು. ಆದ್ದರಿಂದ ಒಂದು ದಿನ ಆಕೆಯು ಆತನಿಗೆ ಪ್ರಾಸಂಗಿಕವಾಗಿ ಕೇಳಿದಳು, ‘ರೀ, ನೀವು ನನ್ನನ್ನು ಇಷ್ಟೊಂದು ಪ್ರೀತಿಸಲು ಇರುವ ಒಂದೇ ಕಾರಣವೇನು?’ ಎಂದು.

ಆ ವ್ಯಕ್ತಿಯು ಅತಿ ಗಂಭೀರವಾಗಿ, ‘ನೀನು
‘ಇಷ್ಟೊಂದು’ ಎಂದಾಗ ನೀನು
ಉಲ್ಲೇಖಿಸುತ್ತಿರುವುದು ಅಳವನ್ನೋ,
ಗುಣಮಟ್ಟವನ್ನೋ, ಪರಿಮಾಣವನ್ನೋ ಅಥವಾ
ವ್ಯಕ್ತತೆಯ ರೀತಿಯನ್ನೋ?’ ಎಂದು ಕೇಳಿದನು.

ನೀವು ಅತಿಯಾದ ಜಾಣತನದಲ್ಲಿಯೇ
ಸಿಕ್ಕಿಕೊಂಡಾಗ ನಿಮ್ಮ ತರ್ಕ ಹಾಗೂ ನಿಮ್ಮ
ಜಾಣತನದಿಂದ ಇಡೀ ಜೀವನವನ್ನೇ ತಿಳಿಯಲು
ಸಾಧ್ಯವೆಂದು ಯೋಚಿಸಲಾರಂಭಿಸುತ್ತೀರಿ. ಈ
ವಿಶ್ವದಲ್ಲಿರುವ ಎಲ್ಲವನ್ನೂ ನಿಮ್ಮ ತಲೆಯ
ಚೌಕಟ್ಟಿನೊಳಗಿಡಲು ಪ್ರಯತ್ನಿಸುತ್ತೀರಿ.

ಮತ್ತೊಂದು ಸಣ್ಣ ಕಥೆ:

ಒಮ್ಮೆ ಒಬ್ಬ ವಿದ್ಯಾರ್ಥಿಯು ಕೊಳಾಯಿಕೆಲಸದಲ್ಲಿ
ಹೊಸದಾಗಿ ಪದವಿ ಪಡೆದಿದ್ದನು. ಆತನು
ವಿಹಾರಕ್ಕೆಂದು ಜೋಗ್ ಜಲಪಾತವನ್ನು ನೋಡಲು
ತನ್ನ ಸ್ನೇಹಿತರೊಂದಿಗೆ ಹೋದನು. ಆ ಬೃಹತ್ತಾದ
ಜಲಪಾತವನ್ನು ನೋಡಿ, ‘ಇದನ್ನು ರಿಪೇರಿ ಮಾಡಿ
ನಿಲ್ಲುವಂತೆ ಮಾಡಲು ನನ್ನಿಂದ ಸಾಧ್ಯವೆಂದು
ತೋರುತ್ತದೆ’ ಎಂದು ಹೇಳಿದನು.

ನಿಮ್ಮ ಪಾಂಡಿತ್ಯವು ನೀವು ಇರುವುದೆಲ್ಲವನ್ನೂ ತಿಳಿದಿರುವಿರೆಂಬ ಭ್ರಮೆಯನ್ನು ನಿಮಗೆ ನೀಡುತ್ತದೆ. ಅದು ನಿಮ್ಮನ್ನು ಭದ್ರವಾಗಿ ನಿಮ್ಮ ತಲೆಯೆಲ್ಲೇ ಇರಿಸುತ್ತದೆ.

ನಿಮ್ಮ ಬುದ್ಧಿಶಕ್ತಿಯು ಜಾಗೃತವಾದಾಗ ನೀವು ಬುದ್ಧಿಯಿಂದ ಹೃದಯಕ್ಕೆ ಹಾಗೂ ತರ್ಕದಿಂದ ಪ್ರೇಮಕ್ಕೆ ಇಳಿದು ಬರುತ್ತೀರಿ. ನಂತರ ನೀವು ಕೇವಲ ವೈಚಾರಿಕತೆಯಿಂದಲೂ ಅಲ್ಲದೆ, ಕೇವಲ ಭಾವನಾತ್ಮಕ ಪ್ರೇಮದಿಂದಲೂ ಅಲ್ಲದೆ, ಪ್ರೇಮಮಯವಾದ ಬುದ್ಧಿಶಕ್ತಿಯಿಂದ ಕಾರ್ಯನಿರ್ವಹಿಸುತ್ತೀರಿ ಹಾಗೂ ನಿಮ್ಮ ಸುತ್ತ ಇರುವವರೆಲ್ಲರೊಂದಿಗೆ ಸ್ವಾಭಾವಿಕವಾಗಿ ಸಹಾನುಭೂತಿಯನ್ನು ಹೊರಸೂಸುತ್ತೀರಿ.

ತಿಳಿದುಕೊಳ್ಳುವುದು, ಯೋಚಿಸುವುದಲ್ಲ

ಒಂದು ಸಣ್ಣ ಕಥೆ:

ಒಮ್ಮೆ ಮೂವರು ವಿವೇಕಿಗಳು ಎಂದುಕೊಂಡವರು ಜೀವನದ ಬಗ್ಗೆ ಹೆಚ್ಚಾಗಿ ತಿಳಿಯಲು ಒಂದು ನಗರಕ್ಕೆ ಪಯಣಿಸಿದರು. ನಗರವನ್ನು ಪ್ರವೇಶಿಸಿ, ಅಲ್ಲಿ ಒಂದು ಎತ್ತರವಾದ ಗಗನಚುಂಬಿ ಕಟ್ಟಡವನ್ನು ದೂರದಿಂದ ನೋಡಿದರು. ಅದು ಏನಿರಬಹುದೆಂದು ಅವರು ಆಶ್ಚರ್ಯಗೊಂಡರು.

ಅವರು ಒಟ್ಟಾಗಿ ಸೇರಿ ಏನು ಮಾಡಬೇಕೆಂದು
ಚರ್ಚಿಸಿದರು. ಅದರಲ್ಲಿ ಅಪಾಯವಾದದ್ದು
ಏನಾದರೂ ಇದ್ದರೆ? ಅದರೊಳಗೆ ಹೋಗಿ,
ಅಲ್ಲಿಂದ ಹೊರಬರಲಾಗದಿದ್ದರೆ ಏನು ಗತಿ? ಎಂದು
ಅದರ ಬಳಿ ಹೋಗಿ ನೋಡಲು ಹೆದರಿದರು.
ಆದ್ದರಿಂದ ಅದರ ಬಳಿ ಹೋಗುವ ಮೊದಲು
ಅದೇನಿರಬಹುದೆಂದು ತಿಳಿಯೋಣವೆಂದು
ನಿರ್ಧರಿಸಿದರು.

ಅವರ ಹಿಂದಿನ ಅನುಭವದ ಪ್ರಕಾರ, ಅದೇನಿರಬಹುದೆಂಬ ಎಲ್ಲಾ ಸಾಧ್ಯತೆಗಳನ್ನೂ ವಿಶ್ಲೇಷಿಸಿದರು. ಕೊನೆಗೆ ಮನುಷ್ಯನಿಗಿಂತ ಅದು ಅತಿದೊಡ್ಡದಾದ ಕಾರಣ ಅದು ರಾಕ್ಷಸರಿಗೇ ಸೇರಿದ್ದಾಗಿರಬೇಕೆಂದು ನಿರ್ಣಯಿಸಿದರು. ಆದ್ದರಿಂದ ರಾಕ್ಷಸರು ಇರುವ ಈ ನಗರದಲ್ಲಿ ಅವರು ಇರುವುದು ಸುರಕ್ಷಿತವಲ್ಲ ಎನಿಸಿತು.

ಈ ಹೊಸ ತಿಳಿವಳಿಕೆಯನ್ನು ಪಡೆದುದಕ್ಕಾಗಿ ಅತ್ಯಂತ ತೃಪ್ತಿಯಿಂದ ಅವರು ತಮ್ಮ ಚೀಲಗಳನ್ನು ತೆಗೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗಿದರು!.

ಆದ್ದರಿಂದ ಯಾವುದೇ ವಿಷಯದ ಬಗ್ಗೆ ಹಿಂದಿನ
ತಿಳಿವಳಿಕೆಯಿಂದ ಹೆಚ್ಚು ಗ್ರಹಿಸಲಾಗುವುದಿಲ್ಲ.
ಮನಸ್ಸಿನಲ್ಲಿ ಏನನ್ನೋ ಆಲೋಚಿಸಿ ಎಲ್ಲವನ್ನೂ
ಆ ಅನಿಸಿಕೆಯಂತೆ ತಿಳಿಯಲು ಪ್ರಯತ್ನಿಸುತ್ತೀರಿ.
ಪೂರ್ಣವಾಗಿ ತಿಳಿಯಲು ನೀವು ಅದನ್ನು ನೋಡಿ
ಅನುಭವಿಸುವ ಅಗತ್ಯವಿದೆ.

ಮತ್ತೊಂದು ವಿಷಯ: ನೀವೇ ಕಂಡದ್ದನ್ನು
ಹಾಗೂ ಅನುಭವಿಸಿದ್ದನ್ನು ಮಾತ್ರ ನಿಮ್ಮಿಂದ
ಯೋಚಿಸಲು ಸಾಧ್ಯ. ನಿಮಗೆ ತಿಳಿಯದ ವಿಷಯದ
ಬಗ್ಗೆ ಯೋಚಿಸಲು ಸಾಧ್ಯವೆ? ಆ ತಿಳಿಯದ
ವಿಷಯದ ಬಗ್ಗೆ ಅವಾಸ್ತವವಾಗಿ
ಕಲ್ಪಿಸಿಕೊಳ್ಳಬಹುದು. ಆದರೆ ಅದೂ ಸಹ ನೀವು
ಹಿಂದೆ ಕಂಡದ್ದರ ಮೇಲೆ ಆಧಾರಿತವಾಗಿಯೇ
ಇರುತ್ತದೆ.

ಆಲೋಚಿಸುವುದರಲ್ಲಿ ಬುದ್ಧಿಶಕ್ತಿಯ ಹಾಗೂ
ಸತ್ಯದ ಚೈತನ್ಯವಿರುವುದಿಲ್ಲ. ಆದ್ದರಿಂದ
ಪರಿಣಾಮವು ನಿಮ್ಮ ಸೀಮಿತವಾದ ಅನುಭವದ
ಮೇಲೆ ಆಧಾರಿತವಾಗಿರುತ್ತದೆ ಹಾಗೂ ಅದು ಇನ್ನೂ
ಹೆಚ್ಚು ಪ್ರಶ್ನೆಗಳು ಹಾಗೂ ಅನುಮಾನಗಳಿಗೆ
ಕಾರಣವಾಗುತ್ತದೆ.

ಹಳೆಯ ನೆನಪಿನಿಂದ ಮೇಲೇಳುವ ಉತ್ತರಗಳನ್ನು ಆಶ್ರಯಿಸದೆ, ನಿಮ್ಮ ಈಗಿನ ಪ್ರಜ್ಞೆಯಿಂದ ಕಾರ್ಯನಿರ್ವಹಿಸುವುದನ್ನು ತಿಳಿವಳಿಕೆ ಎನ್ನುತ್ತಾರೆ.

ಮನಸ್ಸು-ಯಜಮಾನನೋ ಅಥವಾ ಸಲಕರಣೆಯೋ?

ಆಲೋಚಿಸುವುದು ಮನಸ್ಸಿನಿಂದ ಹುಟ್ಟುತ್ತದೆ. ವಾಸ್ತವವಾಗಿ ಇದೊಂದು ಅತ್ಯದ್ಭುತವಾದ ಪ್ರಕ್ರಿಯೆ. ಆದರೆ ನಿಮ್ಮ ಮನಸ್ಸು ನಿಮ್ಮ ಕೈಯಲ್ಲಿ ಒಂದು ಸಲಕರಣೆಯಾಗುವ ಬದಲು ನಿಮ್ಮ ಯಜಮಾನನಾದಾಗಲೇ ಸಮಸ್ಯೆಗಳು ಏಳುತ್ತವೆ.

ಒಂದು ಸಣ್ಣ ಕಥೆ:

ಒಬ್ಬ ರಾಜನಿಗೆ ಪ್ರಾಮಾಣಿಕನಾದ ಒಬ್ಬ
ಸೇವಕನಿದ್ದನು. ಕೆಲವು ಸಂದರ್ಭಗಳಲ್ಲಿ ಆತನು
ರಾಜನ ಜೀವವನ್ನು ಕಾಪಾಡಲು ತನ್ನ ಜೀವವನ್ನೇ
ಆಪತ್ತಿಗೆ ಒಡ್ಡಿದ್ದನು.

ಅಂತಹ ಒಂದು ಸಂದರ್ಭದಲ್ಲಿ ಆತನ
ವರ್ತನೆಯಿಂದ ಅತ್ಯಂತ ಸಂತೋಷಗೊಂಡ
ರಾಜನು ಆತನಿಗೆ ಏನನ್ನಾದರೂ ಬೇಡುವಂತೆ
ಹೇಳಿದನು. ಆತನು ವಿನಯದಿಂದ , 'ರಾಜ,
ನನಗೇನೂ ಬೇಡ. ನೀನು ನನ್ನ ಅಗತ್ಯಗಳನ್ನೆಲ್ಲಾ
ಪೂರೈಸಿದ್ದೀಯೆ' ಎಂದು ಉತ್ತರಿಸಿದನು.

ಆದರೆ ರಾಜನು ಒತ್ತಾಯ ಮಾಡಿದನು. ಕೊನೆಗೆ
ಸೇವಕನು, 'ಸರಿ, ನೀನು ನನಗೆ ನಿಜವಾಗಿ
ಏನನ್ನಾದರೂ ಕೊಡಲೇಬೇಕೆನ್ನುವುದಾದರೆ, ನನ್ನನ್ನು
ಒಂದು ದಿನದ ಮಟ್ಟಿಗೆ ರಾಜನನ್ನಾಗಿ ಮಾಡು'
ಎಂದು ಹೇಳಿದನು. ರಾಜನಿಗೆ ಇದರಿಂದ ಸ್ವಲ್ಪ
ಮುಜುಗರವಾದರೂ, ಮಾತುಕೊಟ್ಟಿದ್ದರಿಂದ
ಅದನ್ನು ಉಳಿಸಿಕೊಳ್ಳಬೇಕಾಗಿತ್ತು.

ಮಾರನೇ ದಿನ ಬೆಳಗ್ಗೆ ಸೇವಕನು ರಾಜನಾದನು. ಆತನು, ರಾಜನ ಸೇವಕರಿಗೆ ರಾಜನನ್ನು ಕೊಲ್ಲುವಂತೆ ಆಜ್ಞಾಪಿಸಿದನು. ರಾಜನು ದಿಗ್ಭ್ರಮೆಗೊಂಡು, 'ನೀನೇನು ಹೇಳುತ್ತಿರುವೆಯೆಂದು ನಿನಗೆ ತಿಳಿದಿದೆಯೇ?' ಎಂದು ಸೇವಕನನ್ನು ಕೇಳಿದನು. ಸೇವಕನು ನಿಶ್ಚಲನಾಗಿ, ಶಾಂತನಾಗಿ, 'ಇಂದು ನಾನು ರಾಜ. ನನ್ನ ಇಚ್ಛೆಯಂತೆ ನಾನು ಮಾಡಬಹುದು' ಎಂದು ಉತ್ತರಿಸಿದನು.

ರಾಜನು ಕೊಲ್ಲಲ್ಪಟ್ಟನು ಹಾಗೂ ಸೇವಕನೇ ರಾಜನಾದನು.

ತಿಳಿಯಿರಿ: ಅದೇ ರೀತಿ, ನಮ್ಮ ಮನಸ್ಸಿಗೆ
ಅಧಿಕಾರವನ್ನು ಕೊಟ್ಟರೆ, ಅದು ನಮ್ಮನ್ನು
ಸಂಪೂರ್ಣವಾಗಿ ನಿಯಂತ್ರಿಸುತ್ತದೆ.

ದೇಹದ ಬುದ್ಧಿಶಕ್ತಿ

ನಮ್ಮಲ್ಲಿ ಎಷ್ಟು ಜನರಿಗೆ ನಮ್ಮ ದೇಹದಲ್ಲಿನ ಅಸಾಧಾರಣವಾದ ಬುದ್ಧಿಶಕ್ತಿಯ ಬಗ್ಗೆ ತಿಳಿದಿದೆ?

ಪಚನ ಕ್ರಿಯೆಯ ಬುದ್ಧಿಶಕ್ತಿ

ನಮ್ಮ ಪಚನಕ್ರಿಯೆಯ ವ್ಯವಸ್ಥೆಯ
ಉದಾಹರಣೆಯನ್ನು ತೆಗೆದುಕೊಳ್ಳೋಣ. ಅನ್ನವನ್ನು
ರಕ್ತವನ್ನಾಗಿಸುವ ಇಡೀ ಪ್ರಕ್ರಿಯೆಯು ಬಹಳ ಜಟಿಲ
ಹಾಗೂ ಸೂಕ್ಷ್ಮವಾದದ್ದು. ಅನೇಕ ಬಗೆಯ
ಆಹಾರಗಳನ್ನು, ದೇಹವನ್ನು ನಡೆಸಲು ಬೇಕಾಗಿರುವ
ಶಕ್ತಿಯನ್ನಾಗಿ ಪರಿವರ್ತಿಸಲು ಶುದ್ಧವಾದ
ಬುದ್ಧಿಶಕ್ತಿಯು ಬೇಕಾಗುತ್ತದೆ.

ದೇಹದೊಳಗೆ ಕೆಲವೇ ಅಡಿಗಳ ಸುರುಟಿಕೊಂಡ
ಕರುಳು ಮಾಡುವ ಕೆಲಸವನ್ನು ದೇಹದ ಹೊರಗೆ
ಕಾರ್ಖಾನೆಯೊಂದರಲ್ಲಿ ಮಾಡಬೇಕೆಂದರೆ ಕೆಲವು
ಮೈಲಿಗಳಷ್ಟು ಉದ್ದವೇ ಬೇಕಾಗುತ್ತದೆ.

ಪಚನ ಕ್ರಿಯೆಯು ನಮ್ಮ ಬಾಯಿಯಿಂದಲೇ ಆರಂಭವಾಗುತ್ತದೆ. ನಾವು ಆಹಾರವನ್ನು ಅಗಿದಾಗ ನಮ್ಮ ಬಾಯಿಯಲ್ಲಿ ಒಸರುವ ಜೊಲ್ಲು ಪಚನದ ಕ್ರಿಯೆಯನ್ನು ಆರಂಭಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಅದ್ಭುತವಾದ ಕೆಲಸವನ್ನು ಮಾಡುವ ಅನೇಕ ದೊಡ್ಡದಾದ ಹಾಗೂ ಚಿಕ್ಕದಾದ ದೇಹದ ಭಾಗಗಳಿವೆ. ನಾವು ಆಹಾರವನ್ನು ನುಂಗಿದಾಗ ಅದು ಗಂಟಲಿನ ಮೂಲಕ ಅನ್ನನಾಳವನ್ನು ತಲುಪುತ್ತದೆ. ಎಪಿಗ್ಲಾಟಿಸ್‌ನ ಸಹಾಯದಿಂದ ಆಹಾರವು ಶ್ವಾಸನಾಳಕ್ಕೆ ಹೋಗುವುದರ ಬದಲಿಗೆ ಸುಂದರವಾಗಿ ತಡೆಯಲ್ಪಟ್ಟು ಅನ್ನನಾಳಕ್ಕೆ ಹೋಗುತ್ತದೆ. ಆಹಾರವು ಒಂದು ಹಿಗ್ಗಿ-ಕುಗ್ಗುವ ಚೀಲದಂತಿರುವ, ಸೂಕ್ಷ್ಮವಾದ ಹಾಗೂ ಪ್ರಬಲವಾಗಿ ಜೀರ್ಣಿಸುವ ವ್ಯವಸ್ಥೆಯನ್ನು ಹೊಂದಿರುವ ಜಠರವನ್ನು ತಲುಪುತ್ತದೆ. ಕಾರ್ಬೋಹೈಡ್ರೇಟ್, ಪ್ರೋಟೀನ್ ಅಥವಾ ಕೊಬ್ಬಿನಂತಹ ಅನೇಕ ಬಗೆಯ ಆಹಾರವನ್ನು ಆಧರಿಸಿ ಪಚನದ ವ್ಯವಸ್ಥೆಯು ಬದಲಾಗುತ್ತದೆ.

ಜಠರಾಗ್ನಿಯೆಂದು ಸಂಸ್ಕೃತದಲ್ಲಿ ಕರೆಯಲ್ಪಡುವ
ಈ ಜೀರ್ಣಕಾರಿ ಅಗ್ನಿಯು ಜಠರದಲ್ಲಿನ ಆಮ್ಲಕ್ಕೆ
ಸಂಬಂಧಿಸಿದೆ. ಜಠರವು ಒಂದು ಸೂಕ್ಷ್ಮವಾದ
ಅಂಗವಾದರೂ, ನಾವು ತಿನ್ನುವ ಆಹಾರವನ್ನು
ಜೀರ್ಣಿಸಲು ಅಗತ್ಯವಾದ ಪ್ರಬಲವಾದ ಆಮ್ಲವನ್ನು
ಹೊಂದಿದೆ. ಜಠರದ ಗೋಡೆಯ ಸುತ್ತಲೂ ಒಂದು
ದಪ್ಪವಾದ ಲೋಳೆಯ ಪದರವು ಇದ್ದು, ಈ

ಆಮ್ಲವನ್ನು ನಿಷ್ಪರಿಣಾಮಗೊಳಿಸುವುದರಿಂದ ಅದು ಸುಂದರವಾಗಿ ರಕ್ಷಿಸಲ್ಪಟ್ಟಿದೆ.

ನಾವು ತಿನ್ನುವ ಬಗೆಬಗೆಯ ಆಹಾರಗಳು ಕೆಲವೇ ಘಂಟೆಗಳಲ್ಲಿ ಜೀರ್ಣವಾಗಿ ನಮ್ಮ ದೇಹದಲ್ಲಿ ಅರಗುತ್ತದೆ. ನೋಡಿ, ಇವುಗಳಲ್ಲಿ ಕೇವಲ ಒಂದು ಸಣ್ಣ ಪ್ರಕ್ರಿಯೆಯ ಬಗ್ಗೆಯೂ ನಾವು ಪ್ರಜ್ಞಾಪೂರ್ವಕವಾಗಿ ಆಲೋಚಿಸುವ ಅಗತ್ಯವಿಲ್ಲ. ಅದು ತನ್ನನ್ನು ತಾನೇ ನಿಭಾಯಿಸಿಕೊಳ್ಳುತ್ತದೆ ಹಾಗೂ ನಮ್ಮೆಲ್ಲಾ ಆಹಾರ ಕ್ರಮಗಳಿಗೂ ಯಥಾವತ್ತಾಗಿ ಹೊಂದಿಕೊಳ್ಳುತ್ತದೆ.

ಜಠರದ ನಂತರ, ಆಹಾರವು ಅಧಿಕವಾಗಿ
ಜೀರ್ಣವಾಗುವ ಸಣ್ಣ ಕರುಳಿಗೆ ಹೋಗುತ್ತದೆ.
ವಾಸ್ತವವಾಗಿ ಅದೊಂದು ಉದ್ದವಾದ ರಚನೆ. ಆದರೆ
ಅರಗಿಸುವ ಹೊರತಲ ಪ್ರದೇಶವನ್ನು ಹೆಚ್ಚಿಸಿ, ಒಂದು
ಸಣ್ಣ ಜಾಗದಲ್ಲಿ ಅನೇಕ ಮಡಿಕೆಗಳಿಂದ
ಸಮರ್ಥವಾಗಿ ಜೋಡಣೆಯಾಗಿದೆ. ಬಹಳಷ್ಟು
ಪೌಷ್ಟಿಕ ಪದಾರ್ಥಗಳು ಸಣ್ಣ ಕರುಳಿನಲ್ಲಿ
ಅರಗುತ್ತದೆ. ಸಣ್ಣ ಕರುಳಿನ ಪ್ರಧಾನ ಕಾರ್ಯವು
ಪೌಷ್ಟಿಕ ವಸ್ತುಗಳನ್ನು ಅರಗಿಸುವುದು.
ಕಾರ್ಬೋಹೈಡ್ರೇಟ್ ಹಾಗೂ ಪ್ರೋಟೀನ್‌ಗಳಂತಹ
ಸಂಯುಕ್ತ ಪದಾರ್ಥಗಳು ಮೂಲ ವಸ್ತುಗಳಾಗಿ
ಒಡೆಯಲ್ಪಟ್ಟು ಅರಗಲ್ಪಡುತ್ತವೆ. ಅರಗಿದ ಪೌಷ್ಟಿಕ
ಪದಾರ್ಥಗಳು ಪಿತ್ತಜನಕಾಂಗಕ್ಕೆ ಮತ್ತಷ್ಟು
ಸಂಸ್ಕರಣೆಗಾಗಿ ಕೊಂಡೊಯ್ಯಲ್ಪಡುತ್ತವೆ.

ನಂತರ ಹೆಚ್ಚಿನ ಮಟ್ಟಿಗೆ ನೀರಿನಾಂಶದ
ಅರಗುವಿಕೆಯಾಗುವ ದೊಡ್ಡ ಕರುಳಿಗೆ ಆಹಾರವು
ಸಾಗುತ್ತದೆ. ನಂತರ ನಾರಿನಂತಹ ಜೀರ್ಣಿಸಲಾಗದ
ಆಹಾರವು ಇತರ ಸತ್ತ್ವವಿಲ್ಲದ ವಸ್ತುಗಳೊಂದಿಗೆ
ಬೆರೆತು ಹೊರಹಾಕಲ್ಪಡುತ್ತದೆ. ಇದು ಜೀರ್ಣದ
ಕೇವಲ ಒಂದು ಮೂಲಭೂತವಾದ ವಿವರಣೆ. ಆದರೆ
ಇದು ದೇಹದಲ್ಲಿ ಬಹಳ ಸಂಕೀರ್ಣವಾದ,
ಸುವ್ಯವಸ್ಥಿತವಾದ ಹಾಗೂ ಹೊಂದಿಕೊಳ್ಳುವ
ಪ್ರಕ್ರಿಯೆಯೊಂದರ ಕಾರ್ಯರೀತಿ.

ವಿಭಜಿಸಿ ಹಂಚಲ್ಪಟ್ಟ ಬುದ್ಧಿವಂತಿಕೆ

ಮಾನವ ಶರೀರವು ಒಂದೇ ಒಂದು
ಜೀವಕಣದಿಂದ ಆರಂಭವಾಗಿ ಸುಮಾರು 250
ಬಗೆಯ ಜೀವಕಣಗಳಾಗಿ ಪುನರಾವರ್ತಿಸುತ್ತದೆ.

ಕಲ್ಪಿಸಿಕೊಳ್ಳಿ: ಒಂದು ಜೀವಕಣವು ಅನೇಕ
ಬಗೆಯ ವಿಶಿಷ್ಟ ಜೀವಕಣಗಳಾಗಿ
ಪರಿವರ್ತನೆಗೊಂಡು ಸಂಕೀರ್ಣವಾದ ದೇಹದ
ಭಾಗಗಳನ್ನು ರೂಪಿಸುತ್ತದೆ! ಈ ಜೀವಕಣಗಳು
ತಮ್ಮ ವಿಶಿಷ್ಟವಾದ ಕಾರ್ಯವನ್ನು ಮಾಡುವುದಲ್ಲದೆ
ಅವುಗಳ ಪೋಷಣೆಗಾಗಿಯೇ ಒಂದು ಕ್ಷಣದಲ್ಲಿ ಅತಿ
ಹೆಚ್ಚು ಸಂಖ್ಯೆಯ ಕೆಲಸಗಳನ್ನು ಮಾಡಬೇಕಾಗುತ್ತದೆ
ಹಾಗೂ ಅವುಗಳ ಎಲ್ಲಾ ಚಟುವಟಿಕೆಗಳನ್ನೂ
ಒಟ್ಟುಗೂಡಿಸಿ, ದೇಹವು ಒಂದು ಜೀವಿಯಂತೆ
ಕಾರ್ಯನಿರ್ವಹಿಸಲು ಸಹಯೋಜಿಸಬೇಕಾಗುತ್ತದೆ.
ಇದು ವಿಭಾಗಿಸಲ್ಪಟ್ಟ ಬುದ್ಧಿವಂತಿಕೆಗೆ ಒಂದು
ಉತ್ತಮವಾದ ಉದಾಹರಣೆ.

ನಿಮ್ಮ ದೇಹದ ಪ್ರತಿಯೊಂದು ಜೀವಕಣಕ್ಕೂ ಬುದ್ಧಿಶಕ್ತಿ ಇದೆ

ನಮ್ಮ ಬುದ್ಧಿಶಕ್ತಿಯ ಕೇಂದ್ರವು ಮೆದುಳು ಎಂದು ನಮಗೆ ಹೇಳಿಕೊಡಲಾಗಿದೆ. ನಾವು ನಮ್ಮ ದೇಹವನ್ನು ಮೆದುಳಿನ ಸಹಾಯದಿಂದ ನಿಯಂತ್ರಿಸುತ್ತೇವೆಂದು ತಿಳಿದಿದ್ದೇವೆ. ಉಸಿರಾಟ, ಜೀರ್ಣ, ರಕ್ತ ಪರಿಚಲನೆ ಹಾಗೂ ದೇಹದ ಇತರ ಚಟುವಟಿಕೆಗಳನ್ನು ಮೆದುಳು ನಿಯಂತ್ರಿಸುತ್ತದೆಂದು ವಿಜ್ಞಾನವು ಈವರೆಗೂ ತಿಳಿಸುತ್ತಿದೆ.

ಈಗ, ತೀವ್ರವಾದ ಸಂಶೋಧನೆಯು ಎಪಿಜೆನೆಟಿಕ್ಸ್ ಎಂಬ ಒಂದು ಹೊಸ ಕ್ಷೇತ್ರವನ್ನು ಸೃಷ್ಟಿಸಿದೆ. ಈ ಕ್ಷೇತ್ರದ ಆದಿಪರಿಶೋಧಕರಲ್ಲಿ ಒಬ್ಬರಾದ ಡಾ|| ಬ್ರೂಸ್ ಲಿಪ್ಟನ್ ಎಂಬ ಶ್ರೇಷ್ಠ ಜೀವಶಾಸ್ತ್ರಜ್ಞರು, ಎಪಿಜೆನೆಟಿಕ್ಸ್ ಎಂಬ ಕ್ಷೇತ್ರದಲ್ಲಿ ಸುಮಾರು ಹತ್ತು ವರ್ಷಗಳಿಂದಲೂ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಅವರ ‘ಬಯೊಲಜಿ ಆಫ್ ಬಿಲೀಫ್ಸ್’ ಎಂಬ ಪುಸ್ತಕದಲ್ಲಿ ನಮ್ಮ ಮೆದುಳು ನಮ್ಮ ದೇಹವನ್ನು ನಿಯಂತ್ರಿಸುವುದಿಲ್ಲವೆಂದು ಹೇಳುತ್ತಾರೆ. ವಾಸ್ತವವಾಗಿ ಪ್ರತಿಯೊಂದು ಜೀವಕಣ ಹಾಗೂ ಜೀವಕಣದ ಒಳಪೊರೆಯಲ್ಲಿಯೂ ಬುದ್ಧಿವಂತಿಕೆಯ ಪ್ರಮಾಣವಿದೆ ಎಂಬುದಕ್ಕೆ ಆಧಾರಗಳಿವೆ!

ಅಮೆರಿಕಾದ ಸ್ಯಾಂಡಿಯಾ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಇತ್ತೀಚೆಗೆ ನಡೆದ ಸಂಶೋಧನೆಯು, ಜೀವಕಣದ ಬುದ್ಧಿಶಕ್ತಿಯ ಸಿದ್ಧಾಂತವನ್ನು ಸಮರ್ಥಿಸುತ್ತದೆ. ಒಂದು ಹಾನಿಕರವಾದ ಆಂಟಿಜೆನ್ ಎಂಬ ಪದಾರ್ಥವು ದೇಹದ ಜೀವಕಣಗಳನ್ನು ಆಕ್ರಮಣ ಮಾಡಿದಾಗ, ಅವು ಹೇಗೆ ಸ್ಪಂದಿಸಿತೆಂದು ಅಲ್ಲಿನ ವಿಜ್ಞಾನಿಗಳು ಅಧ್ಯಯನ ಮಾಡಿದರು. ಒಂದು ಜೀವಕಣದ ಪೊರೆಯು ಆಂಟಿಜೆನ್ ನೊಂದಿಗೆ ಹೋರಾಡಲು ಒಂದು ಸುಂದರವಾದ ಹಾಗೂ ಸಂಕೀರ್ಣವಾದ ರಚನೆಯನ್ನು ಹೊಂದಿದೆಯೆಂದೂ, ಅದು ಈವರೆಗೂ ನಂಬಲಾಗಿದ್ದ ಒಂದು ಸರಳವಾದ ರಚನೆಯಲ್ಲವೆಂದೂ ಅವರು ನಿರ್ಣಯಿಸಿದರು.

ನಮ್ಮ ದೇಹವು ಮೆದುಳಿನಿಂದ ನಿಯಂತ್ರಿಸಲ್ಪಟ್ಟ
ಬುದ್ಧಿಯ ಒಂದು ಸರಳವಾದ ಕೇಂದ್ರೀಕೃತ
ವ್ಯವಸ್ಥೆಯಲ್ಲ. ಮಾನವದೇಹವು ಸುಂದರವಾದ,
ಸಹಜ ಹೊಂದಾಣಿಕೆಯ, ಅತ್ಯಂತ ಮೇಲ್ಮಟ್ಟದ,
ವಿತರಣಾ ಬುದ್ಧಿಶಕ್ತಿಯ ವ್ಯವಸ್ಥೆ.

ನಿಮ್ಮ ಜೀವನವನ್ನು ನಡೆಸಲು ‘ನಿಮ್ಮ’ ಅಗತ್ಯವಿಲ್ಲ

ನಿಮ್ಮನ್ನು ಆಘಾತಗೊಳಿಸುವಂತಹ, ನೀವು ತಿಳಿಯಬೇಕಾದ, ಒಂದು ಮುಖ್ಯವಾದ ವಿಷಯ:

ನಿಮ್ಮ ಶರೀರದಲ್ಲಿ ನಿಮ್ಮ ಹಸ್ತಕ್ಷೇಪವಿಲ್ಲದೆಯೇ ಜೀವನವನ್ನು ನಡೆಸುವ ಸ್ವತಂತ್ರವಾದ ಬುದ್ಧಿವಂತಿಕೆ ಇದೆ.

ಈಗ, ನಿಮ್ಮ ಜೀವನವನ್ನು
ಸುಖಮಯವಾಗಿಡಲು ನೀವು ನಿಮ್ಮ ಬುದ್ಧಿವಂತಿಕೆಯ
ಹಸ್ತಕ್ಷೇಪ ಮಾಡುವ ಅಗತ್ಯವಿದೆಯೆಂದು

ಯೋಚಿಸುತ್ತಿದ್ದೀರಿ. ಆದರೆ ಸತ್ಯವೇನೆಂದರೆ, ಯಾವ ಬುದ್ಧಿವಂತಿಕೆಯಿಂದ ನೀವು ಈ ಭೂಗ್ರಹದ ಮೇಲೆ ಬಂದಿರೋ, ಯಾವ ಬುದ್ಧಿವಂತಿಕೆಯು ನಿಮ್ಮ ದೇಹವನ್ನು ಸೃಷ್ಟಿಸಿತೊ, ಆ ಬುದ್ಧಿವಂತಿಕೆಯೇ ನಿಮ್ಮ ಜೀವನವನ್ನು ಸುಂದರವಾಗಿ ನಡೆಸಬಲ್ಲುದು.

ನೀವು ಹುಟ್ಟುವಾಗ ನಿಮ್ಮ ದೇಹವನ್ನು ಯಾವ
ಚೈತನ್ಯ ಅಥವಾ ಬುದ್ಧಿವಂತಿಕೆಯ ಆಧಾರದ ಮೇಲೆ
ನೀವು ಸೃಷ್ಟಿಸಿದಿರೋ ಅದನ್ನು 'ಬಯೊಮೆಮೊರಿ'
ಎಂದರೆ ಸ್ನಾಯು ನೆನಪು ಎಂದು ಕರೆಯುತ್ತಾರೆ.
ಒಂದು ಮುಖ್ಯವಾದ ಸತ್ಯವನ್ನು ನೀವಿಲ್ಲಿ
ತಿಳಿಯಬೇಕು; ಕೆಲವು ನಿರ್ದಿಷ್ಟವಾದ ವಿಷಯಗಳನ್ನು
ಅನುಭವಿಸಲು, ಒಂದು ನಿರ್ದಿಷ್ಟವಾದ
ಕಾಲದವರೆಗೂ ಬದುಕಲು, ಕೆಲವು ನಿರ್ದಿಷ್ಟವಾದ
ಕೆಲಸಗಳನ್ನು ಮಾಡಲು, ನಿಮ್ಮ ದೇಹವನ್ನು
ನಿಯೋಜಿಸಿಕೊಂಡವರು ನೀವೇ.

ಜೀವನದ ಸಾರವೆಂದು ನೀವು ಏನನ್ನು
ತಿಳಿಯುತ್ತೀರೋ ಅದರ ಆಧಾರದ ಮೇಲೆ ನಿಮ್ಮ
ಜೀವನವನ್ನು, ನಿಮ್ಮ ಸಂತೋಷಗಳನ್ನು, ನೀವು
ಮಾಡಬೇಕಾದುದನ್ನು, ನೀವು ಹುಟ್ಟುವಾಗ
ನಿರ್ಧರಿಸುತ್ತೀರಿ. ಆ ಬಯೊಮೆಮೊರಿಗೆ ನಿಮ್ಮ
ಜೀವನವನ್ನು ನಡೆಸಿ, ಅದನ್ನು ವಿಕಸಿಸಲು ಸಾಕಷ್ಟು
ಬುದ್ಧಿವಂತಿಕೆ ಇದೆ. ನೀವು ನಂಬಿದರೂ,
ನಂಬದಿದ್ದರೂ, ನೀವು ಒಪ್ಪಿದರೂ, ಒಪ್ಪದಿದ್ದರೂ,
ಪ್ರತಿಕ್ಷಣವೂ ಕಾರ್ಯನಿರ್ವಹಿಸುತ್ತಿರುವುದು ಆ
ಅಸಾಧಾರಣ ಬುದ್ಧಿಶಕ್ತಿಯೇ. ಆದರೆ ನಮ್ಮ
ಸೀಮಿತವಾದ ತಿಳಿವಳಿಕೆಯು ಇದನ್ನು
ಅರಿಯುವುದನ್ನು ತಡೆಯುತ್ತದೆ ಹಾಗೂ ಜೀವನವು
ಈ ವರ್ತಮಾನ ಕ್ಷಣದಲ್ಲಿ ಬೇರೇನೊ
ಆಗಬೇಕಿತ್ತೆಂದು ನಾವು ಸತತವಾಗಿ ಭಾವಿಸುತ್ತೇವೆ.

ಆ ಬುದ್ಧಿಶಕ್ತಿಯನ್ನು ನಂಬಿ, ವಿರಮಿಸುವುದನ್ನೇ
ನಾನು ಭಕ್ತಿಯೆಂದು ಕರೆಯುತ್ತೇನೆ. ಆ ಉನ್ನತವಾದ
ಬುದ್ಧಿಶಕ್ತಿಗೆ ಶರಣಾಗುವುದೇ ನಿಜವಾದ ಶರಣಾಗತಿ.
ನಮ್ಮ ಸಹಜವಾದ ಬುದ್ಧಿವಂತಿಕೆಯೊಂದಿಗೆ
ಸಾಮರಸ್ಯದಿಂದ ಬಾಳುವುದೇ ಆಧ್ಯಾತ್ಮಿಕ ಜೀವನದ
ಬಾಳು.

ಧ್ಯಾನ ತಂತ್ರ - ನಿತ್ಯ ಸೂತ್ರವಾದ ಒಪ್ಪಿಕೊಳ್ಳುವಿಕೆ

ದಯವಿಟ್ಟು ನೆಟ್ಟಗೆ ಕುಳಿತುಕೊಳ್ಳಿರಿ. ಕಣ್ಣುಗಳನ್ನು ಮುಚ್ಚಿ ದೇಹವನ್ನು ಅಲುಗಾಡಿಸದೆ ವಿಶ್ರಾಂತರಾಗಿ ಇರಿ. ದೇಹದ ಅಲುಗಾಟವು ಆಲೋಚನೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ನಿಮ್ಮ ದೇಹವು ಅಲುಗಾಡದೆ ಸ್ಥಿರವಾಗಿದ್ದರೆ, ಅದು ನಿಮ್ಮನ್ನು ಬಹಳ ಆಳವಾದ ಮೌನಕ್ಕೆ ಕರೆದೊಯ್ಯಬಹುದು.

ಬಾಹ್ಯಪ್ರಪಂಚದಲ್ಲಿ ಹಾಗೂ ಒಳ ಪ್ರಪಂಚದಲ್ಲಿ
ನಿಮ್ಮನ್ನು ನೀವಿರುವಂತೆ ಒಪ್ಪಿಕೊಳ್ಳುವ ಒಂದು
ಉದ್ದೇಶವನ್ನು ಬಹಳ ಅರಿವಿನಿಂದಲೂ ಹಾಗೂ
ತೀವ್ರತೆಯಿಂದಲೂ ಈ ಕ್ಷಣ ಮಾಡಿಕೊಳ್ಳಿರಿ.

ನಿಮಗೇ ನೀವು ಹೇಳಿಕೊಳ್ಳಿರಿ,
'ಬಾಹ್ಯಪ್ರಪಂಚದಲ್ಲಿ ನನಗೆ ಸಾಕಷ್ಟು ಒಳ್ಳೆಯ
ವಸ್ತುಗಳಿವೆ, ಸಾಕಷ್ಟು ಸ್ವತ್ತು ಇದೆ. ನನ್ನ
ಅಂತರಂಗದಲ್ಲಿ ಅನೇಕ ಒಳ್ಳೆಯ ಗುಣಗಳಿವೆ ಹಾಗೂ

ಭಾವನೆಗಳಿವೆ. ನಾನು ನನ್ನನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಬಾಹ್ಯಪ್ರಪಂಚದಲ್ಲಾಗಲಿ, ಆಂತರಿಕ ಪ್ರಪಂಚದಲ್ಲಾಗಲೀ ನನ್ನನ್ನು ಪಕ್ವವಾಗಿಸಿಕೊಳ್ಳುವ ಅಗತ್ಯವಿಲ್ಲ. ನನ್ನಲ್ಲಿ ಅಹಂಕಾರವಿದ್ದರೆ ಇರಲಿ, ನನ್ನಲ್ಲಿ ತಪ್ಪಿತಸ್ಥತೆ ಇದ್ದರೆ, ಇರಲಿ, ನನ್ನಲ್ಲಿ ಭಯವಿದ್ದರೆ ಇರಲಿ, ನನ್ನಲ್ಲಿ ದುರಾಸೆಯಿದ್ದರೆ ಇರಲಿ, ನನ್ನಲ್ಲಿರುವುದು ಏನೇ ಆಗಿದ್ದರೂ ಸರಿ, ಒಂದು ವೇಳೆ ಮರುಕ್ಷಣವೇ ನಾನು ಸಾಯುವುದಾದರೆ ಅದೂ ಸರಿ.

'ನಾನು ಎಲ್ಲವನ್ನೂ ಒಪ್ಪಿಕೊಳ್ಳುತ್ತೇನೆ' ಎಂದು
ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿರಿ. ಅದು ಸರಿಯೋ
ತಪ್ಪೋ ಎಂದು ಚಿಂತಿಸದಿರಿ. ನಿಮ್ಮ ಮನಸ್ಸು ಏನೇ
ಅಡ್ಡಿಯನ್ನು ಒಡ್ಡಿದರೂ, ಅದನ್ನೂ ಸಮ್ಮತಿಸಿರಿ.

ಈ ಕ್ಷಣವನ್ನು ಒಪ್ಪಿಕೊಳ್ಳಿ. ಎಲ್ಲಾ ಭವಿಷ್ಯತ್ತಿನ ಕ್ಷಣಗಳನ್ನೂ ಒಪ್ಪಿಕೊಳ್ಳಿ. ನಿಮ್ಮ ಜೀವನದಲ್ಲಿ ಅತ್ಯಂತ ಕೆಟ್ಟದೆಂದು ನಿಮ್ಮ ಮನಸ್ಸು ಏನನ್ನು ಹೇಳುತ್ತದೋ ಅದನ್ನೆಲ್ಲಾ ಒಪ್ಪಿಕೊಳ್ಳಿ. ಅದು ಹಾಗೆಯೇ ಆದರೂ ಅದನ್ನು ತಡೆಯಲಾಗುವುದಿಲ್ಲ. ಅದು ಅನಿವಾರ್ಯವಾದುದು. ಅನಿವಾರ್ಯತೆಯನ್ನು ಅರ್ಥಮಾಡಿಕೊಂಡು ಎಲ್ಲವನ್ನೂ ಒಪ್ಪಿಕೊಳ್ಳಿ.

ಇದನ್ನು 21 ನಿಮಿಷಗಳ ಕಾಲ ಅಭ್ಯಸಿಸಿರಿ.

ನಿಮ್ಮ ಬುದ್ಧಿಯು ಸುಮ್ಮನೆ ಜಾಗೃತವಾಗಿ, ನೀವು ಪ್ರತಿಯೊಂದು ಕ್ಷಣವೂ ಹೇಗೆ ವರ್ತಿಸಬೇಕೆಂದು, ಪ್ರತಿಯೊಂದು ಸಂದರ್ಭದಲ್ಲಿ ಹಾಗೂ ಸಂಬಂಧದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ನಿಮಗೆ ತಿಳಿಸುತ್ತದೆ.

ವಿಶ್ವದ
ಬುದ್ಧಿಶಕ್ತಿಯು
ನಮಗೆ
ಸ್ಪಂದಿಸುತ್ತದೆ

ನಿಮ್ಮ ದೈಹಿಕ
ವ್ಯವಸ್ಥೆಯಲ್ಲಿ
ನಿಮ್ಮ
ಹಸ್ತಕ್ಷೇಪವಿಲ್ಲದೆಯೇ
ಜೀವನವನ್ನು
ನಡೆಸುವ
ಸ್ವತಂತ್ರವಾದ
ಬುದ್ಧಿವಂತಿಕೆ ಇದೆ.

ಇದೊಂದು
ಆಶ್ಚರ್ಯದ
ಸಂಗತಿಯಂತೆ ತೋರಬಹುದು. ಆದರೆ
ಸತ್ಯವೇನೆಂದರೆ, ಬ್ರಹ್ಮಾಂಡದ ಅಥವಾ ವಿಶ್ವದ
ಬುದ್ಧಿಶಕ್ತಿಯು ನಮ್ಮ ಪ್ರತಿಯೊಂದು ಆಲೋಚನೆಗೂ
ಸ್ಪಂದಿಸುತ್ತದೆ. ಜಪಾನ್ ದೇಶದ ವಿಜ್ಞಾನಿ ಡಾ॥
ಮಸರು ಎಮೊಟೋರವರು ತಮ್ಮ
ಸಂಶೋಧನೆಯಲ್ಲಿ ಈ ಕುತೂಹಲಕಾರಿ
ವಿಷಯವನ್ನು ಅತಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ನೀರು ನಮ್ಮ ಆಲೋಚನೆಗಳಿಗೆ ಸ್ಪಂದಿಸುತ್ತದೆ

ಡಾ॥ ಮಸರು ಎಮೊಟೋರವರು ನೀರಿನ ಮೇಲೆ
ಪ್ರಯೋಗಗಳನ್ನು ಮಾಡಿದರು. ಅವರು ನೀರಿನ
ಸ್ಯಾಂಪಲ್‌ಗಳನ್ನು ಬೇರೆ ಬೇರೆ ಮೂಲಗಳಿಂದ
ತೆಗೆದುಕೊಂಡು ಅವನ್ನು ಅನೇಕ ಬಗೆಯ
ಆಲೋಚನೆಗಳಿಗೆ ಗುರಿಪಡಿಸಿ, ನಂತರ ಆ
ಸ್ಯಾಂಪಲ್‌ಗಳನ್ನು ಘನೀಕರಿಸಿ, ಸೂಕ್ಷ್ಮದರ್ಶಕದ
ಮೂಲಕ ಅತಿವೇಗದ ಛಾಯಾಚಿತ್ರದ ಸಹಾಯದಿಂದ,
ಅವುಗಳ ಹರಳುಗಳಿಂದ ಆದ ರಚನೆಯನ್ನು
(ಕ್ರಿಸ್ಟಲ್)ಅಧ್ಯಯನ ಮಾಡಿದರು. ಇಂತಹ

ಸಾವಿರಾರು ಹರಳುಗಳ ಬಗ್ಗೆ ಅತಿಯಾಗಿ
ನಿಯಂತ್ರಿಸಲ್ಪಟ್ಟ ಶಾಖ, ತಂಪಾಗಿಸುವ ಸಮಯ
ಹಾಗೂ ಬೆಳಕಿನ ಸ್ಥಿತಿಗಳಲ್ಲಿ ಅಧ್ಯಯನ
ಮಾಡಲಾಯಿತು.

ಈ ನೀರಿನ ಸ್ಯಾಂಪಲ್‌ಗಳ ಮೇಲೆ ಅವರು
ಅನೇಕ ಪ್ರಯೋಗಗಳನ್ನು ಮಾಡಿದರು-ಅನೇಕ
ಬಗೆಯ ಸಂಗೀತವನ್ನು ನೀರಿಗೆ ಕೇಳಿಸುವಂತೆ
ಮಾಡುವುದು, ನೀರಿನೊಂದಿಗೆ ಮಾತನಾಡುವುದು,
ಪ್ರಾಚೀನ ಕಾಲದ ಬೋಧನೆಗಳನ್ನು ಓದುವುದು,
ಒಂದು ನಿರ್ದಿಷ್ಟವಾದ ಉದ್ದೇಶದಿಂದ ಬೇಡುವುದು,
ಇತ್ಯಾದಿ. ಗುಣಪಡಿಸುವ ಸಂಗೀತಕ್ಕೆ ನೀರನ್ನು
ಒಳಪಡಿಸಿದಾಗ, ನೀರಿನ ಹರಳುಗಳು ಬಹಳ
ಸುಂದರವಾಗಿ, ಅಂದವಾಗಿ ರೂಪುಗೊಳ್ಳುವುದನ್ನು
ಅವರು ಕಂಡರು. ನಕಾರಾತ್ಮಕ ಭಾವನೆ ಅಥವಾ
ಆಲೋಚನೆಗಳಿಗೆ ಒಳಪಟ್ಟ ನೀರು ಹರಳುಗಳಾಗಿ
ರೂಪುಗೊಳ್ಳದೆ ಅವನ್ನು ನಿರ್ವಹಿಸುವ ವ್ಯಕ್ತಿಯ
ಭಾವನೆಗಳನ್ನು ಪ್ರತಿಬಿಂಬಿಸಿ, ಅಸ್ತವ್ಯಸ್ತವಾದ
ಆಕಾರವನ್ನು ಹೊಂದಿದುವು.

ನಮ್ಮ ದೇಹವು ಶೇಕಡಾ 70ರಷ್ಟು ಭಾಗ
ನೀರಿನಿಂದ ಕೂಡಿದೆ. ಭೂಗ್ರಹವು ಸುಮಾರು 70ರಷ್ಟು
ಭಾಗ ನೀರಿನಿಂದ ಕೂಡಿದೆ. ನೀರಿನ ಮೇಲೆ ನಮ್ಮ
ಆಲೋಚನೆಗಳ ಪರಿಣಾಮವನ್ನು ತಿಳಿದ ಮೇಲೆ,
ನಮ್ಮ ಆಲೋಚನೆಗಳು, ಮಾತುಗಳು ಹಾಗೂ
ಉದ್ದೇಶಗಳ ಅಸಾಧಾರಣ ಪರಿಣಾಮವು ಭೂಗ್ರಹದ
ಮೇಲೆ ಹಾಗೂ ನಮ್ಮ ಮೇಲೆ ಎಷ್ಟಿರಬೇಕೆಂದು
ಊಹಿಸಿರಿ!

ಚರಿತ್ರೆಯಿಂದ ಆಯ್ದ ಮತ್ತೊಂದು ನಿಜವಾದ ಘಟನೆ:

ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಬ್ರಿಟಿಷರು ಇಂಗ್ಲೆಂಡಿನಿಂದ ಭಾರತಕ್ಕೆ ಬರುವಾಗ ತಮ್ಮ ಹಡಗಿನಲ್ಲಿ ನೀರನ್ನು ತರುವಾಗ ಹಡಗಿನಲ್ಲಿರುವಾಗಲೇ ನೀರು ಕೆಟ್ಟುಹೋಗುತ್ತಿತ್ತು. ಆದರೆ ಅವರು ಭಾರತದಿಂದ ಇಂಗ್ಲೆಂಡಿಗೆ ನೀರನ್ನು ಕೊಂಡೊಯ್ಯುವಾಗ, ನೀರು ಚೆನ್ನಾಗಿದುದಷ್ಟೇ ಅಲ್ಲದೆ, ಇಂಗ್ಲೆಂಡಿಗೆ ತಲುಪಿ ನೀರೆಲ್ಲವನ್ನೂ ಸೇವಿಸುವವರೆಗೂ ಅದು ಚೆನ್ನಾಗಿರುತ್ತಿತ್ತು! ವಿಜ್ಞಾನಿಗಳು ಈ ಆಶ್ಚರ್ಯಕರ ಸಂಗತಿಯನ್ನು ಅಧ್ಯಯನ ಮಾಡಿದಾಗ ಅವರು ತಿಳಿದಿದ್ದೇನೆಂದರೆ ಆ ನೀರು ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ಪೂಜಿಸುವ ಪವಿತ್ರವಾದ ಗಂಗಾ ನದಿಯ ನೀರಾಗಿತ್ತು. ಆ ನೀರಿಗೆ ಹಾನಿಕರ ರೋಗಾಣುಗಳನ್ನು ನಾಶಪಡಿಸುವ ಹಾಗೂ ತನ್ನನ್ನೇ ಶುದ್ಧೀಕರಿಸಿಕೊಳ್ಳುವ ಸಹಜ ಗುಣವಿದ್ದಿತು.

ಸಾವಿರಾರು ವರ್ಷಗಳಿಂದ ಕೋಟ್ಯಾಂತರ
ಜನರು ಗಂಗೆಯನ್ನು ಪೂಜಿಸುತ್ತಾ ಬಂದಿದ್ದಾರೆ.
ಸ್ವಾಭಾವಿಕವಾಗಿ ಅವರು ತಮ್ಮ ಪ್ರಾರ್ಥನಾ
ಭಾವನೆಗಳನ್ನು ಈ ನೀರಿನ ಮೇಲೆ ಅಚ್ಚೊತ್ತಿರುವ
ಕಾರಣ, ಅದು ಅಷ್ಟೊಂದೂ
ಚೈತನ್ಯದಾಯಕವಾಗಿಯೂ ಸ್ವಯಂ
ಉಪಶಮನಕಾರಿಯೂ ಆಗಿದೆ.

ಈಜಿಪ್ಟ್ ದೇಶದಲ್ಲಿಯೂ ಸಾವಿರಾರು
ವರ್ಷಗಳಿಂದ ನೈಲ್ ನದಿಯನ್ನು ಈಜಿಪ್ಟಿನ
ಜನರಿಂದ ಅದರ ಹರಿವು, ಸಮತಲ, ಉದ್ರಿಕ್ತ
ಸ್ಥಿತಿಗಳಿಗಾಗಿ ಅಧ್ಯಯನ ಮಾಡಲಾಗಿದೆ. ಅನೇಕ
ಬಾರಿ ಈ ಪ್ರಮಿತಿಗಳು ಪ್ರಪಂಚದ ಅತಿದೂರದ
ಭಾಗಗಳಲ್ಲಿಯೇ ಆದರೂ ಈಗಾಗಲೇ ಉಂಟಾದ
ಅಥವಾ ಉಂಟಾಗಬಹುದಾದ ಭೂಕಂಪ,

ಜ್ವಾಲಾಮುಖಿ ಹಾಗೂ ಸುನಾಮಿಗಳಂತಹ ಪ್ರಕೃತಿಯ ವಿಪತ್ತುಗಳನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಕಂಡುಹಿಡಿದಿದ್ದಾರೆ.

ಪ್ರಕೃತಿಯೊಂದಿಗೆ ಸಂಬಂಧ

ನಾವು ಪ್ರಕೃತಿಗೆ ಸ್ಪಂದಿಸದವರಾಗುವುದು ಯಾವುದರಿಂದ? ನಮ್ಮ ಅಹಂಕಾರವು ಕಾಣಿಸಿಕೊಂಡ ಕ್ಷಣವೇ ನಾವು ಪ್ರಕೃತಿಗೆ ಸ್ಪಂದಿಸದವರಾಗುತ್ತೇವೆ.

ಒಬ್ಬ ಕವಿಯು ತನ್ನ ಎಳೆಯ ವಯಸ್ಸಿನಲ್ಲಿ ತನ್ನ
ಮನೆಯ ಬಳಿ ಕ್ರೂರ ಮೃಗಗಳೊಂದಿಗೆ
ಆಟವಾಡುತ್ತಿದ್ದ ಒಂದು ಕಥೆಯ ಬಗ್ಗೆ ನಾನು
ಓದುತ್ತಿದ್ದೆ. ಆತನ ತಂದೆಯು, ಕ್ರೂರ
ಮೃಗಗಳೊಂದಿಗೆ ಆಟವಾಡಬಾರದೆಂದೂ, ಅವು
ದುಷ್ಟ ಪ್ರಾಣಿಗಳಾದ್ದರಿಂದ
ತೊಂದರೆಕೊಡಬಹುದೆಂದೂ ಬುದ್ಧಿ ಹೇಳುತ್ತಿದ್ದನು.

ಆದರೂ ಆ ಹುಡುಗನು ಸಾಧ್ಯವಾದಾಗಲೆಲ್ಲ ಕ್ರೂರ
ಮೃಗಗಳೊಂದಿಗೆ ಕಾಲ ಕಳೆಯುತ್ತಿದ್ದನು. ಆತನು
ಹೇಳುತ್ತಿದ್ದನು, 'ಪ್ರಾಣಿಗಳು ನನಗೆ ತೊಂದರೆ
ಪಡಿಸುವ ಸಾಧ್ಯತೆ ಇದೆಯೆಂದು ನನಗೆ ತೋಚಿದಾಗ
ಹಾಗೂ ಭಯಗೊಂಡಾಗ, ಅವು ನನ್ನ ಬಳಿ
ಬರುತ್ತಲೇ ಇರಲಿಲ್ಲ; ಸಂವಾದವೂ
ಉಂಟಾಗುತ್ತಿರಲಿಲ್ಲ. ಸಂಬಂಧವೂ
ಉಂಟಾಗುತ್ತಿರಲಿಲ್ಲ'.

ಆದರೆ, ನಾನು ಧೈರ್ಯದಿಂದಿದ್ದಾಗ ಅಥವಾ
ವಿನೋದಪರನಾಗಿದ್ದಾಗ, ಭಯ ಅಥವಾ
ಸ್ವಪ್ರಜ್ಞೆಯು ಇರದೇಹೋದಾಗ, ಸಂವಾದ ಹಾಗೂ
ಸಂಬಂಧವು ಗಾಢವಾಗಿರುತ್ತಿತ್ತು. ಪ್ರಾಣಿಗಳು
ನನ್ನೊಂದಿಗೆ ಸಂಪರ್ಕಿತ ಭಾವನೆಯನ್ನು
ಹೊಂದುತ್ತಿದ್ದವು ಹಾಗೂ ನಾನು ಅವುಗಳೊಂದಿಗೆ
ಸಂಪರ್ಕಿತ ಭಾವನೆಯನ್ನು
ಹೊಂದುತ್ತಿದ್ದೇನೆಂಬುದನ್ನು ಸ್ಪಷ್ಟವಾಗಿ
ತಿಳಿಯುತ್ತಿದ್ದೆ' ಎನ್ನುತ್ತಿದ್ದನು.

ತಿಳಿಯಿರಿ, ನಿಮ್ಮ ಅಹಂಕಾರವು
ಗಾಢವಾಗುತ್ತದೆಂದು ಹೇಳಿದಾಗ, ನಾನು
ಅರ್ಥೈಸುವುದೇನೆಂದರೆ, ನೀವು ಒಬ್ಬ ಪ್ರತ್ಯೇಕ
ವ್ಯಕ್ತಿಯೆಂಬ ಗುರುತು ಗಾಢವಾಗುವುದು ಎಂದು,
ಹೀಗೆ ಆದಾಗ ಪ್ರಕೃತಿಯೊಂದಿಗೆ ನಿಮ್ಮ ಸಂಬಂಧವು
ಕದಡುತ್ತದೆ. ಮುಗ್ಧವಾಗಿ ಸಂಬಂಧ ಕಂಡುಕೊಳ್ಳುವ
ರೀತಿಯು ತಪ್ಪಿಹೋಗುತ್ತದೆ. ಸಂಪರ್ಕವನ್ನು
ಕಂಡುಕೊಳ್ಳುವ ಭಾವನೆ ತಪ್ಪಿಹೋಗುತ್ತದೆ. ಇದು
ಮನುಷ್ಯನಿಗೆ ಆಗಬಹುದಾದ ಅತಿ ದೊಡ್ಡ
ನಷ್ಟಗಳಲ್ಲೊಂದು.

ಒಬ್ಬ ಕುರುಡನಿಗೆ, ಆತನಿಗೇನು ನಷ್ಟವಾಗಿದೆ
ಎಂಬುದನ್ನು ಹೇಗೆ ತಿಳಿಯಪಡಿಸಲಾಗುವುದಿಲ್ಲವೋ,
ಹಾಗೆಯೇ, ಹೃದಯದೊಂದಿಗೆ ಸಂಬಂಧಿಸುವುದನ್ನು
ಮರೆತಿರುವವನಿಗೆ ತಾನೇನು
ಕಳೆದುಕೊಂಡಿರುವನೆಂಬುದನ್ನು ತಿಳಿಯಪಡಿಸ-
ಲಾಗುವುದಿಲ್ಲ.

ಜಾಗವು ತಡೆಯಲ್ಲ

ಕೆಲವು ವರ್ಷಗಳ ಹಿಂದೆ ಒಟ್ಟಿಗೆ ಧ್ಯಾನ
ಮಾಡುತ್ತಿರುವ ಇಬ್ಬರು ವ್ಯಕ್ತಿಗಳ ಮೆದುಳಿನ
ತರಂಗಗಳನ್ನು ಅಳೆಯಲು ವಿಜ್ಞಾನಿಗಳು EEG
(ಎಲೆಕ್ಟ್ರೋ ಎನ್ಸಿಫೆಲೋಗ್ರಾಫ್)ಯನ್ನು ಬಳಸಿದ

ಪ್ರಯೋಗದ ಬಗ್ಗೆ ನಾನು ಓದುತ್ತಿದ್ದೆ. ಕೆಲವು
ಜೋಡಿ ವ್ಯಕ್ತಿಗಳ ಮೆದುಳಿನ ತರಂಗಗಳ
ಮಾದರಿಯಲ್ಲಿ ದೃಢವಾದ ಪರಸ್ಪರ
ಸಂಬಂಧವಿರುವುದಾಗಿ ಕಂಡುಬಂದಿತು. ಅಂತಹ
ಘನವಾದ ಪರಸ್ಪರ ಸಂಬಂಧವಿದ್ದ ಜೋಡಿಗಳನ್ನು
ಪಕ್ಕ ಪಕ್ಕದಲ್ಲಿ ಕುಳಿತು ಧ್ಯಾನಿಸುವಂತೆ
ಹೇಳಲಾಯಿತು. ನಂತರ ಅವರನ್ನು ಬೇರೆ ಬೇರೆ
ಕೋಣೆಗಳಿಗೆ ವರ್ಗಾಯಿಸಲಾಯಿತು, ಅಂದರೆ
ಜೋಡಿಗಳನ್ನು ಬೇರ್ಪಡಿಸಲಾಯಿತು.

ನಂತರ, ಧ್ಯಾನಿಸಿದ ಜೋಡಿಯ ಒಬ್ಬ
ವ್ಯಕ್ತಿಯನ್ನು ಒಂದು ಕೋಣೆಯಲ್ಲಿ ಇರಿಸಿ, ಅವನ
ಮೇಲೆ ಪ್ರಕಾಶಮಾನವಾದ ಬೆಳಕನ್ನು
ಉದ್ದೀಪನಗೊಳಿಸಲಾಯಿತು. EEG ಮೆದುಳಿನ
ತರಂಗಗಳ ದಾಖಲೆಯು, ಧ್ಯಾನಿಸುತ್ತಿರುವವರ
ಮೆದುಳಿನಲ್ಲಿ, ನಿರೀಕ್ಷಿಸಿದ ಚಟುವಟಿಕೆಯನ್ನು
ತೋರಿಸಿತು; ಆದರೆ ಆಶ್ಚರ್ಯಕರವಾಗಿ, ದೀಪವನ್ನು
ಉದ್ದೀಪನಗೊಳಿಸದೇ ಇದ್ದ ಬೇರೆ ಕೋಣೆಯಲ್ಲಿದ್ದ
ಜೋಡಿಯ ಇನ್ನೊಬ್ಬ ಧ್ಯಾನಸ್ಥರ ಮೆದುಳಿನಲ್ಲಿ ಅದೇ
ಕ್ರಿಯೆಯು ಆ ಕೂಡಲೇ ಹಾಗೂ ತಾನಾಗಿಯೇ
ಉಂಟಾದುದನ್ನು ತೋರಿಸಿತು!

ತಿಳಿಯಿರಿ: ನಿಮ್ಮ ಮನಸ್ಸಿನಲ್ಲಿಾಗುವುದು ನಿಮ್ಮ ಮೇಲೆ ಮಾತ್ರವಲ್ಲದೆ, ನಿಮ್ಮ ಸುತ್ತಲಿರುವವರ ಮೇಲೂ ಪರಿಣಮಿಸುತ್ತದೆ. ಆಲೋಚನೆಗಳಿಗೆ ಸ್ಥಳವು ನಿರ್ಣಾಯಕ ಅಂಶವಲ್ಲ. ಅವು ಸುಮ್ಮನೆ ಗಾಳಿಯಲ್ಲಿ ಚಲಿಸುತ್ತವೆ. ಆದ್ದರಿಂದಲೇ ನಿಮ್ಮ ಮನೆಯಲ್ಲಿ ನೀವು ಚಿಂತೆ ಹಾಗೂ ನಕಾರಾತ್ಮಕ ಭಾವನೆಗಳನ್ನು ಅಧಿಕವಾಗಿ ವ್ಯಕ್ತಪಡಿಸಿದರೆ ನಿಮ್ಮ ಕುಟುಂಬವರ್ಗದವರಿಗೆ ಆ ವಾತಾವರಣವೇ ಭಾರವಾಗುತ್ತದೆ. ನೀವು ಹೊರಸೂಸುವ ನಕಾರಾತ್ಮಕತೆಯಿಂದ ಅವರು ಪ್ರಭಾವಿತರಾಗುತ್ತಾರೆ.

ವಿಚಾರ ಮಾಡುವ ಶಕ್ತಿ ಹಾಗೂ ಬುದ್ಧಿಶಕ್ತಿ

ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯು ಮಾಹಿತಿಯ
ಮೌಲ್ಯ ಮಾಪನವನ್ನು ಆಧರಿಸಿದೆಯೇ ಹೊರತು
ಬುದ್ಧಿವಂತಿಕೆಯ ಮೇಲಲ್ಲ. ಅದು ವಿಚಾರ ಮಾಡುವ
ಶಕ್ತಿ ಹಾಗೂ ಶಬ್ದಪ್ರಯೋಗದಿಂದ
ದೊಡ್ಡಲ್ಪಟ್ಟಿದೆಯೇ ಹೊರತು ದೃಶ್ಯೀಕರಣದಿಂದಲ್ಲ.

ಮಾಹಿತಿಯ ಆಧಾರದ ಮೇಲೆ ಪ್ರತಿಕ್ರಿಯಿಸಲು ಪ್ರಯತ್ನಿಸಿದರೆ ಬುದ್ಧಿವಂತರಾಗುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತೀರಿ. ವಾಸ್ತವವಾಗಿ ನೀವು ತರ್ಕಬದ್ಧವಾಗಿ ತಾರ್ಕಿಕವಾಗಿದ್ದರೆ ತರ್ಕವೇ ತರ್ಕಬದ್ಧದ್ದಲ್ಲವೆಂದು ತಿಳಿಯುತ್ತೀರಿ. ಜೀವನವು ತಾರ್ಕಿಕವಲ್ಲ. ಅದನ್ನು ಲೌಕಿಕ ತರ್ಕದಿಂದ ಹಾಗೂ ವಿಚಾರ ಮಾಡುವ ಶಕ್ತಿಯಿಂದ ವಿವರಿಸಲಾಗುವುದಿಲ್ಲ. ಅದು ವಿಚಾರ ಮಾಡುವ ಶಕ್ತಿಗಿಂತಲೂ ಉನ್ನತ ಸ್ತರದಲ್ಲಿ ಉಂಟಾಗುವಂತಹುದು.

ಬುದ್ಧಿವಂತನಾದ ವ್ಯಕ್ತಿಯು ಕ್ಷಣದಿಂದ ಕ್ಷಣಕ್ಕೆ
ಜೀವಿಸುತ್ತಾನೆ, ತರ್ಕದ ಮೂಲಕವಲ್ಲ. ಆತನು
ಎರವಲು ಪಡೆದ ಉತ್ತರಗಳನ್ನು ನಂಬುವುದಿಲ್ಲ.
ಆತನು ಸಂದರ್ಭದ ಸವಾಲನ್ನು ನೋಡಿ ಅದಕ್ಕೆ

ನೇರವಾಗಿ ಸ್ಪಂದಿಸುತ್ತಾನೆ.

ಒಬ್ಬ ವಿಚಾರವಂತನು ಒಂದು ಛಾಯಾಚಿತ್ರದಂತೆ; ಆತನ ಮೇಲೆ ಗತಕಾಲದ ಮುದ್ರೆಯಾಗಿರುತ್ತದೆ. ಬುದ್ಧಿವಂತನು ಒಂದು ಕನ್ನಡಿಯಂತೆ; ಆತನು ನಿಜತ್ವವನ್ನು ಪ್ರತಿಬಿಂಬಿಸಿ ಸ್ಪಂದಿಸುವುದರಿಂದ ಆತನು ಸಮಯಸ್ಫೂರ್ತಿಯಿಂದಿರುತ್ತಾನೆ.

ವೈಚಾರಿಕತೆಯು (ಸದಾ ವಿಮರ್ಶೆ ಮಾಡುವ
ಗುಣ) ಒಂದು ಸಲಕರಣೆಯಾಗಿರುವವರೆಗೂ
ಅದೊಂದು ಸುಂದರವಾದ ಯಾಂತ್ರಿಕ ಸಂಯೋಜನೆ.
ಅದು ನಿಯಂತ್ರಿಸುವ ಅಂಶವಾಗಬಾರದು. ನಿಮ್ಮ
ವಿಚಾರ ಮಾಡುವ ಶಕ್ತಿಯನ್ನು ಪಕ್ಕಕ್ಕೆ ಹಾಕಿದರೆ
ಇನ್ನಷ್ಟು ಆಳವಾದ ಒಂದು ಬುದ್ಧಿಶಕ್ತಿಯು
ನಿಮ್ಮೊಳಗೆ ಜಾಗೃತವಾಗುತ್ತದೆ. ನೀವು ನಿಮ್ಮ
ಪರಿಧಿಯಿಂದಲ್ಲದೆ ನಿಮ್ಮ ಕೇಂದ್ರಸ್ಥಾನದಿಂದ
ಕಾರ್ಯಾಚರಣೆಯನ್ನು ಮಾಡುತ್ತೀರಿ. ಹಾಗೂ ನಿಮ್ಮ
ಕೇಂದ್ರಸ್ಥಾನವೇ ಶುದ್ಧವಾದ ಬುದ್ಧಿಶಕ್ತಿ.

ಬುದ್ಧಿಶಕ್ತಿಯನ್ನು ಮತ್ತೆ ಕಂಡುಕೊಳ್ಳಬಹುದು.
ಅದನ್ನು ಪುನಃ ಕಂಡುಕೊಳ್ಳಲು ಧ್ಯಾನವೊಂದೇ ದಾರಿ.
ನೀವು ಬುದ್ಧಿವಂತರಾಗುವುದನ್ನು ತಡೆಯಲು
ಸಮಾಜವು ಸೃಷ್ಟಿಸಿರುವ ತಡೆಗಳನ್ನೆಲ್ಲಾ ಧ್ಯಾನವು
ನಾಶಪಡಿಸುತ್ತದೆ. ಇದು ಹೇಗೆಂದರೆ, ಒಂದು
ಹರಿಯುತ್ತಿರುವ ನದಿಯಲ್ಲಿ ನೀರು ಹಾಯಾಗಿ
ಹರಿಯಲು ಧ್ಯಾನವು ಬಂಡೆಗಳನ್ನು ತೆಗೆಯುವಂತೆ.

ಬುದ್ಧಿವಂತಿಕೆಗೆ ಅಸಾಧಾರಣವಾದ ಧೈರ್ಯವು ಬೇಕಾಗುತ್ತದೆ; ಅದಕ್ಕೆ ಸಾಹಸದ ಒಲವು ಬೇಕಾಗುತ್ತದೆ! ನೀವು ಸದಾ ತಿಳಿಯದ ದಿಕ್ಕಿನೆಡೆಗೆ ಹೋಗುತ್ತಿದ್ದಾಗ ಅದು ಬೆಳೆದು ತೀಕ್ಷ್ಣವಾಗುತ್ತದೆ. ತಿಳಿಯದ್ದನ್ನು ಪ್ರತಿಕ್ಷಣ ಎದುರಾಗುತ್ತಿದ್ದಾಗಲೇ ಅದು ಬೆಳೆಯುವುದು.

ಬುದ್ಧಿಶಕ್ತಿಯು
ಸೃಜನಾತ್ಮಕವಾದುದು
ಏಕೆಂದರೆ ಅದು
ದಿವ್ಯಶಕ್ತಿಯ
ಒಂದು ಭಾಗ.

ವೈಚಾರಿಕತೆಯು ಕೇವಲ ಒಂದು ಮಾನಸಿಕ
ಆಟ; ಅದು ಸೃಜನಾತ್ಮಕವಾಗಲಾರದು.
ವೈಚಾರಿಕತೆಯು ಕಾಲ್ಪನಿಕ ಆದರೆ ಸೃಜನಾತ್ಮಕವಲ್ಲ.
ಬುದ್ಧಿಶಕ್ತಿಯು ಸೃಜನಾತ್ಮಕವಾದುದು ಏಕೆಂದರೆ
ಅದು ದಿವ್ಯಶಕ್ತಿಯ ಒಂದು ಭಾಗ.

ಧ್ಯಾನತಂತ್ರ - ವೈಚಾರಿಕತೆಯನ್ನು ಬಿಟ್ಟುಬಿಡಿ

ಮುಂದಿನ 48 ಗಂಟೆಗಳ ಕಾಲ ಇದನ್ನು ಅಭ್ಯಾಸಿಸಲು ಯತ್ನಿಸಿರಿ. ನಿಮ್ಮ ಸಮಸ್ಯೆಗಳ ಬಗ್ಗೆ ಚಿಂತಿಸುವುದಿಲ್ಲವೆಂದು ಪ್ರಜ್ಞಾಪೂರ್ಣವಾಗಿ ನಿರ್ಧರಿಸಿರಿ. ನಿಮಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಮಯಸ್ಫೂರ್ತಿಯುತವಾದ ಬುದ್ಧಿವಂತಿಕೆ ಇಲ್ಲವೆಂದೂ, ಅಂತಹ ಸಮಯಸ್ಫೂರ್ತಿಯನ್ನು ಸೃಷ್ಟಿಸುವ ಸಾಮರ್ಥ್ಯವು ನಿಮಗಿಲ್ಲವೆಂದೂ ಸತತವಾಗಿ ಹೇಳುವ ವೈಚಾರಿಕತೆಯನ್ನು ಬಿಟ್ಟುಬಿಡಿ.

ನಿಮ್ಮ ಸಮಸ್ಯೆಗಳನ್ನು ಧೈರ್ಯದಿಂದ ಹಾಗೂ
ಸರಳವಾದ ಅರಿವಿನಿಂದ ಪರಿಹರಿಸಿಕೊಳ್ಳಲು
ಶ್ರಮಿಸಿರಿ. ಆಗ ಒಂದು ಉನ್ನತವಾದ

ಬುದ್ಧಿಸೂಕ್ಷ್ಮತೆಯು ಉಂಟಾಗುವುದನ್ನು ತಿಳಿಯುತ್ತೀರಿ. ನೀವು ಒಂದು ಪಾಠವನ್ನು ಕಲಿಯುತ್ತೀರಿ: ನಿಮ್ಮ ಅರಿವಿಲ್ಲದೆಯೇ ಉನ್ನತವಾದ ಬುದ್ಧಿಶಕ್ತಿಯು ನಿಮಗಾಗಿ ಎಲ್ಲವನ್ನೂ ಮಾಡುತ್ತದೆ, ಎಂದು. ಇದರ ಬಗ್ಗೆ ನೀವು ಸೂಕ್ಷ್ಮತೆಯನ್ನು ಹೊಂದಿದರೆ, ನಿಮ್ಮ ಅರಿವು ದಿಢೀರ್ ನೆಗೆತವನ್ನು ಪಡೆಯುತ್ತದೆ. ಆಗ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶ್ರಮಿಸುವ ಅಗತ್ಯವೇ ನಿಮಗಿರುವುದಿಲ್ಲ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ಸಹಜವಾದ ಸಮಯಸ್ಫೂರ್ತಿಯುಳ್ಳ ಬುದ್ಧಿಶಕ್ತಿಯಿಂದ ಸುಮ್ಮನೆ ಕರಗಿಹೋಗುತ್ತವೆ.