KAILASA Library/ಜೀವನ್ಮುಕ್ತಿ/ನೀವೇ ಬುದ್ಧಿಶಕ್ತಿSign in
ಜೀವನ್ಮುಕ್ತಿ

ನೀವೇ ಬುದ್ಧಿಶಕ್ತಿ

This text was machine-transcribed from the printed book and may contain errors. Select the words and choose “Report a mistake”.

ನಮ್ಮ ಗುರುತನ್ನು ಕಳೆದುಕೊಳ್ಳುವ ಭಯವೇ ಆಗಿರುವ ಸಾವಿನ ಭಯದಿಂದ ಮುಕ್ತರಾಗಲು ನಾವು ಈ ದೇಹ ಮನಸ್ಸುಗಳನ್ನು ಮೀರಿದವರು ಎಂದು ತಿಳಿಯಬೇಕು. ಇದನ್ನು ತಿಳಿಯಲು ನಮಗೆ ಬುದ್ಧಿವಂತಿಕೆ ಬೇಕು. ಹಾಗಿದ್ದಲ್ಲಿ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ:

ಬುದ್ಧಿ ಎಂದರೆ ನಿರ್ದಿಷ್ಟವಾಗಿ ಏನು?

ನಮ್ಮಲ್ಲಿ ಕೆಲವರು ಇತರರಿಗಿಂತ ಹೆಚ್ಚು ಬುದ್ಧಿವಂತರೇ?

ನಮ್ಮ ಬುದ್ಧಿಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಾಧ್ಯವೇ?

ಸಹಜವಾದ ಬುದ್ಧಿವಂತಿಕೆ

ಬುದ್ಧಿವಂತಿಕೆಯು ಪಡೆಯುವಂತಹದಲ್ಲ;
ಪ್ರತಿಯೊಂದು ಜೀವಿಗೂ ಬುದ್ಧಿಯನ್ನು ನೀಡಲಾಗಿದೆ.
ನಮ್ಮಲ್ಲಿ ಪ್ರತಿಯೊಬ್ಬರಿಗೂ ಬುದ್ಧಿಯಿದೆ. ಹೇಗೆ
ಬೆಂಕಿಯು ಬಿಸಿಯಾಗಿದ್ದು ಮಂಜು ತಣ್ಣಗಿರುವುದೋ,
ಹಾಗೆಯೇ ಬುದ್ಧಿ ಎನುವಂತಹದು ಜೀವನದ
ಅಂತರ್ಗತವಾದ ಜನ್ಮಸಿದ್ಧವಾದ ಗುಣ.

‘ಬುದ್ಧಿವಂತರ’ ಬಗ್ಗೆ ಒಂದು ಹಾಸ್ಯದ ಕಥೆ ನೆನಪಾಗುತ್ತಿದೆ.

ಒಮ್ಮೆ ಒಂದು ಖಾಸಗಿ ವಿಮಾನದಲ್ಲಿ ನಾಲ್ವರು
ಪಯಣಿಸುತ್ತಿದ್ದರು. ಇದ್ದಕ್ಕಿದ್ದಂತೆ ವಿಮಾನದ
ಹಿಂಬದಿಯಲ್ಲಿ ಬೆಂಕಿ ಹೊತ್ತಿಕೊಂಡ ಕಾರಣ, ಒಂದು
ತುರ್ತುಪರಿಸ್ಥಿತಿ ಉಂಟಾಯಿತು. ದುರದೃಷ್ಟವಶಾತ್
ನಾಲ್ಕು ಪ್ರಯಾಣಿಕರಿಗೆ ಮೂರು ಪ್ಯಾರಾಚೂಟ್‌ಗಳೇ
ಇದ್ದದ್ದು.

ಮೊದಲನೆಯವನು ಕಂಗಾಲಾಗಿ ಪ್ಯಾರಾಚೂಟನ್ನು
ಹಿಡಿದು, ‘ನಾನು ಇತ್ತೀಚೆಗೆ ವಿವಾಹವಾಗಿದ್ದೇನೆ.
ನನ್ನ ಹೆಂಡತಿಯು ನನಗಾಗಿ ಕಾಯುತ್ತಿರುತ್ತಾಳೆ’
ಎಂದು ಹೇಳಿ ಧುಮುಕಿದನು.

ಎರಡನೆಯವನು, ‘ಪ್ರಪಂಚದಲ್ಲಿ ನಾನೇ ಅತ್ಯಂತ
ಬುದ್ಧಿವಂತನಾದವನು. ಭೂಗ್ರಹಕ್ಕೆ ನನ್ನ
ಬುದ್ಧಿವಂತಿಕೆಯು ಬೇಕಾಗುತ್ತದೆ’ ಎಂದು ಹೇಳಿ
ಧುಮುಕಿಬಿಟ್ಟನು.

ಇನ್ನಿಬ್ಬರು ಪ್ರಯಾಣಿಕರಲ್ಲಿ
ಒಬ್ಬನು ವಯಸ್ಸಾದ ವ್ಯಕ್ತಿ;
ಆತನು, 'ನನಗಾಗಲೇ
ವಯಸ್ಸಾಗಿದೆ. ಆದರೆ ನಿನಗೆ
ಇಡೀ ಜೀವನವು ನಿನ್ನ
ಮುಂದಿದೆ. ನೀನು ಈ ಪ್ಯಾರಾಚೂಟನ್ನು
ತೆಗೆದುಕೊಂಡು ಧುಮುಕು' ಎಂದು ಉಳಿದೊಬ್ಬನಿಗೆ
ಹೇಳಿದನು.

ಚಿಕ್ಕವಯಸ್ಸಿನವನು ಚಾತುರ್ಯದಿಂದ, 'ನೀವೂ ಬರಬಹುದು, ನಾವಿಬ್ಬರೂ ಹೋಗಬಹುದು. ಭೂಗ್ರಹದ ಅತ್ಯಂತ ಬುದ್ಧಿವಂತನು ಈಗ ತಾನೇ ನನ್ನ ಬ್ಯಾಗನ್ನು ಹೊತ್ತು ಧುಮುಕಿದ್ದಾನೆ' ಎಂದನು.

ನಮ್ಮಲ್ಲಿ ಬಹಳಷ್ಟು ಜನರು ನಮ್ಮ ಸಹಜವಾದ
ಬುದ್ಧಿವಂತಿಕೆಯನ್ನು ಕಳೆದುಕೊಂಡಿದ್ದೇವೆ;
ಆದ್ದರಿಂದಲೇ ನಾವು ಜೀವನವನ್ನು ಸಂಪೂರ್ಣ
ಸಾಮರ್ಥ್ಯದಿಂದ ಬಾಳಲಾಗುತ್ತಿಲ್ಲ. ನಾವು ಕಲಿತ
ವಿದ್ಯೆಯನ್ನು ಬುದ್ಧಿವಂತಿಕೆಯೆಂದು
ತಪ್ಪು ತಿಳಿಯುತ್ತೇವೆ; ಬ್ಯಾಗನ್ನು ಪ್ಯಾರಾಚೂಟ್
ಎಂದು ತಿಳಿದು ಧುಮುಕಿದ ವ್ಯಕ್ತಿಯಂತೆ ಇದ್ದೇವೆ!

ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ಸಹಜವಾದ ಬುದ್ಧಿಶಕ್ತಿಯನ್ನು ನೀಡಲಾಗಿದೆ. ಪಕ್ಷಿಗಳಿಗೆ ಹಾರುವ ಸ್ವಾಭಾವಿಕವಾದ ಬುದ್ಧಿವಂತಿಕೆ ಇದೆ. ಋತು ಬದಲಾದಂತೆ ವಲಸೆ ಹೋಗುವ ಪಕ್ಷಿಗಳು ಯಾವ ಭೂಪಟವೂ ಇಲ್ಲದೆ ಅಥವಾ ಅವುಗಳು ಹಿಂದಿರುಗುವ ಹಾದಿಯನ್ನು ತೋರುವವರಾರೂ ಇಲ್ಲದೆ, ಸಾವಿರಾರು ಮೈಲಿಗಳು ಆಕಾಶದಲ್ಲಿ ಹಾರುವುದನ್ನು ನೋಡಲು ವಿಸ್ಮಯವಾಗುತ್ತದೆ.

ನಿಮ್ಮ ಇಡೀ
ಅಸ್ತಿತ್ವವು
ಸುಮ್ಮನೆ ತನ್ನನ್ನು
ವ್ಯಕ್ತಪಡಿಸಿಕೊಳ್ಳಲು
ಬಿಡಿರಿ

ಭಾರತದ ಜ್ಞಾನಿಗಳು ಹಾಗೂ ಯೋಗವಿಜ್ಞಾನದ ಪಿತಾಮಹರೆನಿಸಿರುವ ಪತಂಜಲಿಯವರು ಕಡಿಮೆ ಪ್ರಜ್ಞೆಯ ಜೀವಿಗಳಾದ ಮರ, ಪಕ್ಷಿ ಹಾಗೂ ಪ್ರಾಣಿಗಳಿಗೂ ಬುದ್ಧಿಶಕ್ತಿ ಇದೆ ಎಂದು ಹೇಳಿದ್ದಾರೆ.

ಮನುಷ್ಯನಿಗೂ ಮರಗಳಂತೆ ತನ್ನ ಆಹಾರವನ್ನು ಉತ್ಪಾದಿಸಿಕೊಳ್ಳುವ ಸಾಮರ್ಥ್ಯವಿದೆ. ಪ್ರಾಣಿ, ಪಕ್ಷಿಗಳಂತೆ ಹುಟ್ಟಿದಾಗಿನಿಂದಲೂ ತನ್ನಷ್ಟಕ್ಕೆ ತಾನೇ ಬದುಕುವ ಯೋಗ್ಯತೆಯಿದೆ. ಸಹಜವಾಗಿ ನಮ್ಮ ಮಾನವ ಶರೀರದಲ್ಲಿ ಎಲ್ಲಾ ಬುದ್ಧಿಶಕ್ತಿಯೂ ಇದೆ. ಆದರೆ ಸಮಸ್ಯೆ ಏನೆಂದರೆ, ನಾವು ಸೀಮಿತರು ಎಂದು ದೃಢವಾಗಿ ನಂಬಿದ್ದೇವೆ. ನಮ್ಮ ಸಾಮರ್ಥ್ಯವು ಸೀಮಿತವಾದದ್ದು, ನಮ್ಮಿಂದೇನೂ ಮಾಡಲು ಆಗುವುದಿಲ್ಲ ... ಎಂದು ಯೋಚಿಸುವಂತೆ ನಾವು ಕಟ್ಟುಪಾಡಿಗೆ ಒಳಪಟ್ಟಿದ್ದೇವೆ. ಹಾಗಾಗಿ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದನ್ನು ಮರೆತಿದ್ದೇವೆ. ಆದ್ದರಿಂದ ನಮ್ಮ ಅಸ್ತಿತ್ವದ ಎಲ್ಲಾ ಆಯಾಮಗಳನ್ನೂ ಹೊರತೆಗೆಯುವ ತಂತ್ರಕ್ಕೆ ನಾವು ಹೊಂದಿಕೊಂಡಿಲ್ಲ.

ಮಕ್ಕಳು ಹುಟ್ಟಿನಿಂದಲೇ ಬುದ್ಧಿವಂತರಾಗಿರುತ್ತಾರೆ

ಒಂದು ಸಣ್ಣ ಕಥೆ:

ಒಬ್ಬ ಹುಡುಗನು ಶಾಲೆಯಿಂದ ಮನೆಗೆ ಬಂದು
ತನ್ನ ತಾಯಿಗೆ, 'ಶಾಲೆಯ ದಂತವೈದ್ಯರು ನೋವು
ಎಂಬುದನ್ನೇ ತಿಳಿಯದವರು' ಎಂದು ನೀನು

ಹೇಳಿದೆ. ಆದರೆ ಅವರು ಹಾಗಿರಲಿಲ್ಲ!' ಎಂದು ಹೇಳಿದನು.

ಅವನ ತಾಯಿಯು ಕಳವಳಗೊಂಡು, 'ಅವರು ನಿನಗೆ ನೋಯಿಸಿದರೇ' ಎಂದು ಕೇಳಿದಳು.

ಹುಡುಗನು ಉತ್ತರಿಸಿದನು, 'ಇಲ್ಲ, ನಾನು ಅವರ ಕೈಯನ್ನು ಕಚ್ಚಿದಾಗ ಕಿರಿಚಿಕೊಂಡರು'.

ಮಕ್ಕಳು ಹುಟ್ಟಿನಿಂದಲೇ ಬುದ್ಧಿವಂತರಾಗಿರುತ್ತಾರೆ. ಅವರು ಸ್ವಯಂಪ್ರೇರಿತರೂ, ಉತ್ಸಾಹಿಗಳೂ ಆಗಿರುತ್ತಾರೆ. ಆದರೆ ಕುಟುಂಬ, ಸಮಾಜ ಹಾಗೂ ಶಾಲೆಗಳು ತರ್ಕ, ಸ್ಮರಣಶಕ್ತಿ ಹಾಗೂ ಸ್ಪರ್ಧೆಗಳಿಗೆ ಕೊಡುವ ಅನುಚಿತ ಪ್ರಾಮುಖ್ಯತೆಯಿಂದ ಅವರ ನೈಜ ಬುದ್ಧಿವಂತಿಕೆಯು ನಾಶವಾಗುತ್ತದೆ. ಮಗುವು ವಿದ್ಯೆಗೆ ತೆರುವ ಮೌಲ್ಯವು ಅತಿಯಾದುದು - ಅವನ ಅರಿವಿಲ್ಲದೆಯೇ ತನ್ನ ಅಮೂಲ್ಯವಾದ ಸೃಜನಾಶೀಲತೆ ಹಾಗೂ ಅನನ್ಯತೆಗಳನ್ನು ತ್ಯಾಗ ಮಾಡಿರುತ್ತಾನೆ, ಅದು ಅವನಿಗೆ ತಿಳಿದೇ ಇರುವುದಿಲ್ಲ.

ಒಂದು ದಿನ ಒಬ್ಬ ಯುವಕನ ಟಿ-ಶರ್ಟಿನ
ಮೇಲೆ ಬರೆದ ಹೇಳಿಕೆಯನ್ನು ಓದಿದೆ, 'ಶಿಕ್ಷಣವು
ನನ್ನನ್ನು ನಾಶಪಡಿಸುವವರೆಗೂ ನಾನು
ಬುದ್ಧಿವಂತನಾಗಿಯೇ ಇದ್ದೆ' ಎಂದು.

ನಿಮ್ಮ ಇಡೀ ಅಸ್ತಿತ್ವವನ್ನು ಸುಮ್ಮನೆ
ವ್ಯಕ್ತಪಡಿಸಿಕೊಳ್ಳಲು ಬಿಡಿ - ನಿಮ್ಮ ಸಹಜವಾದ
ಬುದ್ಧಿಯು ಸುಂದರವಾಗಿ ಅರಳುವುದನ್ನು
ಕಾಣುತ್ತೀರಿ. ಇದನ್ನೇ ನಾನು ಸಮಗ್ರತೆ ಹಾಗೂ
ಪರಿಪೂರ್ಣತೆ ಎನ್ನುವುದು.