ಮರಣ ಕಾಲದಲ್ಲಿ ಏನಾಗುತ್ತದೆ?
This text was machine-transcribed from the printed book and may contain errors. Select the words and choose “Report a mistake”.
ಪ್ರಜ್ಞಾಪೂರ್ವಕವಾಗಿ ಸಾವನನುಭವಿಸಿ
ಹಿಂದಿರುಗಿರುವ ಒಬ್ಬ ಜ್ಞಾನಿಯು ಮಾತ್ರವೇ
ಮರಣಕಾಲದಲ್ಲಿ ಏನಾಗುತ್ತದೆ ಎಂಬುದನ್ನು
ಸರಿಯಾಗಿ ವಿವರಿಸಲು ಸಾಧ್ಯ.
ನಾನೀಗ ಸಾವಿನ ರಹಸ್ಯವನ್ನು
ಹೊರಗೆಡಹುತ್ತೇನೆ. ಇದು ನಿಮ್ಮಲ್ಲನೇಕರಿಗೆ
ಆಶ್ಚರ್ಯಕರವಾಗಿರಬಹುದು, ಆಘಾತವೂ
ಆಗಬಹುದು. ಆದರೆ ಇದು ಸತ್ಯ. ನೀವು
ನಂಬುತ್ತೀರೋ ಇಲ್ಲವೋ, ಒಪ್ಪುತ್ತೀರೋ
ಇಲ್ಲವೋ, ಸಾವಿನ ಕಾಲದಲ್ಲಿ ಆಗುವುದು ಇದು.
ನಮಗಿರುವುದು ಒಂದೇ ದೇಹವಲ್ಲ. ಈ ಸ್ಥೂಲ
ಶರೀರವು ನಮಗಿರುವ ಏಳು ಶರೀರಗಳಲ್ಲಿ ಒಂದು.
ಸ್ಥಳ-ಕಾಲಗಳಲ್ಲಿ ಅನುಭವಿಸಲು ಮತ್ತು ಕಾಣಲು
ಸಾಧ್ಯವಾಗುವಂತಹುದು ಸ್ಥೂಲಶರೀರ ಮಾತ್ರ.
ಆದರೂ, ನಾವು ವಾಸ್ತವವಾಗಿ ಅಸ್ತಿತ್ವದ ಏಳು
ಪದರಗಳು, ಶರೀರಗಳು ಹೊಂದಿದ್ದೇವೆ. ಈ
ಪದರಗಳು ಸೂಕ್ಷ್ಮವಾಗಿರುವುದರಿಂದ
ಸಾಮಾನ್ಯವಾದ ಕಣ್ಣುಗಳಿಗೆ ಅವನ್ನು ಕಾಣಲಾಗಲೀ
ಮುಟ್ಟಲಾಗಲೀ ಸಾಧ್ಯವಿಲ್ಲ.
ಏಳು ಶರೀರಗಳ ಸರಳವಾದ ಚಿತ್ರಣವನ್ನು ಈ ಕೆಳಗೆ ನಮೂದಿಸಲಾಗಿದೆ.

ಪ್ರತಿಯೊಂದು ಶರೀರವೂ ತನಗೆ
ಸಂಬಂಧಿತವಾದ ಭಾವನೆಯನ್ನು ಹೊಂದಿರುತ್ತದೆ.
ಉದಾಹರಣೆಗೆ, ಪ್ರಾಣ ಶರೀರವು ಜೀವನದಲ್ಲಿ
ಮೇಲೇಳುವ ಎಲ್ಲಾ ಆಸೆಗಳನ್ನೂ ಹೊಂದಿರುತ್ತದೆ.
ಮನೋಶರೀರವು ಜೀವನದಲ್ಲಿ ಅನುಭವಿಸಿದ ಎಲ್ಲಾ
ತಪ್ಪಿತಸ್ಥತೆಯ ಭಾವನೆಗಳನ್ನೂ ಹೊಂದಿರುತ್ತದೆ.
ಸೂಕ್ಷ್ಮಶರೀರವು ಜೀವನದಲ್ಲಿ ಅನುಭವಿಸಿದ
ಮನೋವೇದನೆಗಳನ್ನು ಹೊಂದಿರುತ್ತದೆ.
ಆತ್ಮವು ಶರೀರವನ್ನು ಬಿಟ್ಟಾಗ, ಅದು ಈ ಎಲ್ಲಾ
ಶರೀರಗಳ ಪದರಗಳನ್ನೂ ದಾಟುತ್ತದೆ. ಸ್ಥೂಲ ಶರೀರ
ಮರಣಹೊಂದುತ್ತದೆ. ಆದರೆ ಉಳಿದ ಆರು
ಶರೀರಗಳೂ ಪೂರ್ತಿಯಾಗಿ
ಮರಣಹೊಂದುವುದಿಲ್ಲ. ನಿಮ್ಮ ಜೀವನದಲ್ಲಿ ಬಹಳ
ಆಸೆಗಳನ್ನು ಹೊತ್ತಿದ್ದರೆ, ಆ ಎಲ್ಲಾ ಈಡೇರದ
ಆಸೆಗಳೂ ಪ್ರಾಣಶರೀರದಲ್ಲಿರುತ್ತವೆ. ಆದುದರಿಂದ
ಸ್ಥೂಲಶರೀರವು ಮರಣಹೊಂದಿದರೂ
ಪ್ರಾಣಶರೀರವು ಮರಣಹೊಂದುವುದಿಲ್ಲ.
> ಜೀವನಗಳಲ್ಲಿ
> ಸಂಗ್ರಹಿಸಿದ ಎಲ್ಲ
> ತಪ್ಪಿತಸ್ಥ
> ಭಾವನೆಯೂ
> ಮನೋಶರೀರದಿಂದ
> ಹಾಯ್ದುಹೋಗುವಾಗ
> ಮೇಲೇಳುತ್ತದೆ.
ಜೀವಶಕ್ತಿಯು ಪ್ರಾಣ-
ಶರೀರವನ್ನು ಬಿಟ್ಟಾಗ
ಜೀವವು ಅಗಾಧ
ಯಾತನೆಯನ್ನು
ಅನುಭವಿಸುತ್ತದೆ.
ಸ್ಥೂಲ ಶರೀರವನ್ನು
ಬಿಟ್ಟಾಗ, ಪ್ರಜ್ಞೆಯು
ದೇಹದಿಂದ ಹರಿದುಹೋಗುತ್ತದೆ ಹಾಗೂ ತಕ್ಷಣವೇ
ನೀವು ಕೋಮಾ ಸ್ಥಿತಿಗೆ ಹೋಗುವಿರಿ. ವೈದ್ಯರ
ಪ್ರಕಾರ ಕೋಮಾ ಎಂದರೆ ನೋವನ್ನು
ಅನುಭವಿಸದಂತೆ ಮಾಡಲು ಇರುವ ಸ್ವಯಂ
ಯಾಂತ್ರಿಕ ವ್ಯವಸ್ಥೆ. ಅದು ಸ್ವಯಂಚಾಲಿತ
ನೋವುನಾಶಕ (ಅನಸ್ತೇಶಿಯಾ). ನೋವು
ಬಹಳವಾದಾಗ ತಡೆದುಕೊಳ್ಳಲಾಗುವುದಿಲ್ಲ ಹಾಗಾಗಿ
ಕೋಮಾಗೆ ಹೋಗುವಿರಿ.
ಮೊದಲನೇ ಶರೀರದ ಪದರದಿಂದ ಎರಡನೇ
ಶರೀರದ ಪದರಕ್ಕೆ ಬಂದಾಗ, ಎಲ್ಲಾ ಈಡೇರದ
ಆಸೆಗಳೂ, ನಿಮಗೆ ಬದುಕಬೇಕೆನಿಸಿದ ರೀತಿಯಲ್ಲಿ
ಬದುಕಲಾಗದಿದ್ದ ಎಲ್ಲಾ ಇಚ್ಛೆಗಳೂ
ಮೇಲೆಬರುತ್ತವೆ. ಹೀಗಾದಾಗ ಬಹುಶಃ ಒಂದು
ಕೋಣೆಯಲ್ಲಿ ಹತ್ತು ಜನರು ನಿಂತು ಒಂದು
ಫುಟ್ಬಾಲನ್ನು ಒದೆಯುತ್ತಿದ್ದಾರೇನೋ
ಎಂಬಂತಿರುತ್ತದೆ. ಆಗ ಏನಾಗುತ್ತದೆ? ಯಾವ ರೀತಿ
ಫುಟ್ ಬಾಲ್ ಒಂದು ಮೂಲೆಯಿಂದ ಇನ್ನೊಂದು
ಮೂಲೆಗೆ ಒದೆಯಲ್ಪಡುತ್ತದೆಯೋ ಹಾಗೆಯೇ
ನಿಮ್ಮ ಪ್ರಜ್ಞೆಯು ಎಲ್ಲಾ ಮೂಲೆಗಳಿಂದಲೂ
ಒದೆಯಲ್ಪಡುತ್ತದೆ. ಪ್ರತಿಯೊಂದು
ಮೂಲೆಯಲ್ಲಿಯೂ ಯಾವುದೋ ಆಸೆಯು
ನಿಂತುಕೊಂಡು ಒದೆಯುತ್ತಿರುತ್ತದೆ. ನಿಮ್ಮ
ಚೈತನ್ಯವು ದೇಹವನ್ನು ಬಿಡಲು
ಪ್ರಯತ್ನಿಸುತ್ತಿರುವಾಗ ನಿಮ್ಮೆಲ್ಲಾ ಆಸೆಗಳು
ಅವುಗಳನ್ನು ಅನುಭವಿಸಿ ಈಡೇರಿಸಲೆಂದು
ದೇಹವನ್ನು ಪುನಃ ಪ್ರವೇಶಿಸಲು ನಿಮ್ಮನ್ನು
ಬಲಾತ್ಕರಿಸುತ್ತಿರುತ್ತವೆ.
ಒಂದು ಕಡೆ ಆಸೆಗಳು ನೀವು ಸಂತೋಷವಾಗಿ ಜೀವಿಸಲು ಆ ದೇಹವನ್ನು ಪುನಃ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದು ಕಡೆ ಆ ದೇಹವು 'ಬೇಡ! ನನಗೆ ಸಾಕಾಗಿದೆ. ನನ್ನಿಂದ ಇನ್ನು ಸಾಧ್ಯವಿಲ್ಲ, ಬಿಟ್ಟುಬಿಡಿ' ಎನ್ನುತ್ತದೆ. ಮರಣಕಾಲದಲ್ಲಿ ಎಳೆದಾಟ ತಳ್ಳಾಟಗಳಿಗೆ ಇದೇ ಕಾರಣವಾಗುವುದು. ಈ ಎಳೆದಾಟ ತಳ್ಳಾಟಗಳು ನಿಮ್ಮ ಆಸೆಗಳ ಮತ್ತು ದೇಹದ ನಡುವಿನ ಹೋರಾಟವಲ್ಲದೆ ಬೇರೇನಲ್ಲ.
ಪ್ರಾಣಶರೀರದಿಂದ ಹೇಗೋ ಆಚೆ ಬಂದು,
ಮನೋಶರೀರವನ್ನು ಪ್ರವೇಶಿಸುತ್ತೀರಿ.
ಮನೋಶರೀರವನ್ನು ಪ್ರವೇಶಿಸಿದ ಮೇಲೆ ನಿಮ್ಮೆಲ್ಲಾ
ಅಪರಾಧ ಭಾವನೆಗಳು ಮೇಲೇಳುತ್ತವೆ. ನೀವು
ಯಾವ ರೀತಿ ಜೀವಿಸಬೇಕೆಂದಿದ್ದಿರೋ ಹಾಗೆ
ಜೀವಿಸದೇ ಹೋದದ್ದು, ನೀವು ಮಾಡಿದ ತಪ್ಪುಗಳು,
ಪಟ್ಟ ಪಶ್ಚಾತ್ತಾಪಗಳು, ಎಲ್ಲವೂ ಮೇಲೇಳುತ್ತವೆ.
ಸರಿಯಾಗಿ ತಿಳಿದುಕೊಳ್ಳಿ, ಆಸೆಯು ಭವಿಷ್ಯತ್ ಕಾಲವನ್ನು ಕುರಿತದ್ದು ಹಾಗೂ ತಪ್ಪಿತಸ್ಥ ಭಾವನೆಯು ಭೂತಕಾಲದ್ದು. ಆದರೆ ವಾಸ್ತವವಾಗಿ ಎರಡೂ ಒಂದೇ. ಹೇಗೆ ಜೀವಿಸಬೇಕೆಂದು ಬಯಸುತ್ತೇವೆಯೋ ಅದು ಆಸೆ, ಹೇಗೋ ಇರಬೇಕೆಂದು ಬಯಸಿದರೂ ಹಾಗೆ
ಜೀವಿಸಲಿಲ್ಲವಲ್ಲಾ ಎಂಬುದು ತಪ್ಪಿತಸ್ಥ ಭಾವನೆ. ನಮ್ಮ ಹಿಂದಿನ ನಿರ್ಣಯಗಳನ್ನು ಈಗ ನಮಗಿರುವ ತಿಳಿವಳಿಕೆಯಿಂದ ಪುನಃ ಪರಿಶೀಲಿಸುವುದೇ ತಪ್ಪಿತಸ್ಥ ಭಾವನೆ. ಹೀಗೆ ಒಂದರ ನಂತರ ಒಂದು ದೇಹದ ಪದರಗಳ ಮೂಲಕ ಸರಿಯುತ್ತೇವೆ.
ಪೂರೈಸದ ಆಸೆಗಳು ಕಡಿಮೆಯಿದ್ದಷ್ಟೂ
ಪ್ರಾಣಶರೀರವು ಹಗುರವಾಗಿ, ಆ ದೇಹವನ್ನು
ಬಿಡುವುದು ಇನ್ನೂ ಸುಲಭವಾಗುತ್ತದೆ. ಅಂತೆಯೇ
ತಪ್ಪಿತಸ್ಥ ಭಾವನೆ ಕಡಿಮೆಯಿದ್ದಷ್ಟೂ
ಮನೋಶರೀರವು ಹಗುರವಾಗಿ, ಆ ದೇಹವನ್ನು
ಬಿಡುವುದು ಮತ್ತೂ ಸುಲಭವಾಗುತ್ತದೆ.
ಮತ್ತೊಂದು ವಿಷಯವೆಂದರೆ ಆಸೆ, ತಪ್ಪಿತಸ್ಥ ಭಾವನೆ ಮತ್ತು ನೋವುಗಳ ತೀವ್ರತೆಯು ಕಡಿಮೆಯಾಗಿದ್ದರೆ, ನೋವಿಲ್ಲದ, ಸುಲಭವಾದ, ಮರಣ ಸಂಭವಿಸುವುದೇ ಅಲ್ಲದೆ, ಬಹಳ ಸೊಗಸಾಗಿ ವೃದ್ಧಾಪ್ಯಕ್ಕೆ ಕಾಲಿಡುತ್ತೀರ. ರಮ್ಯವಾಗಿ ವೃದ್ಧರಾಗುವುದನ್ನೇ ವಾನಪ್ರಸ್ಥ ಸನ್ಯಾಸವೆಂಬುದು. ವಯಸ್ಸಾದ ಮೇಲೆ ಸಂತೃಪ್ತಿಯಿಂದ ಬಾಳುವುದು ವಾನಪ್ರಸ್ಥ ಸನ್ಯಾಸದ ಮಹತ್ತರವಾದ ಕೊಡುಗೆ.
ನಮ್ಮ ಜೀವನದಲ್ಲಿ ಸಂಗ್ರಹಿಸಿದ ಎಲ್ಲಾ ತಪ್ಪಿತಸ್ಥ ಭಾವನೆಗಳೂ ಮನೋಶರೀರದಿಂದ ಹಾಯ್ದುಹೋಗುವಾಗ ಮೇಲೇಳುತ್ತವೆ. ನಂತರ ನಮ್ಮೆಲ್ಲಾ ಕಷ್ಟ-ಕಾರ್ಪಣ್ಯಗಳಿಗೆ ಸಂಬಂಧಿಸಿದ ಸೂಕ್ಷ್ಮಶರೀರಕ್ಕೆ ಬರುತ್ತೇವೆ. ನಮ್ಮ ಜೀವನದಲ್ಲಿ ಅನುಭವಿಸಿದ ಎಲ್ಲಾ ಕಷ್ಟ ನಷ್ಟಗಳೂ ಇಲ್ಲಿ ಶೇಖರವಾಗಿರುತ್ತವೆ.
ಮೊದಲ ನಾಲ್ಕು ಶರೀರಗಳು ಭೌತಿಕವಾದ
ಮನಸ್ಸು-ಶರೀರದ ವ್ಯವಸ್ಥೆಗೆ ಸಂಬಂಧಿಸಿರುತ್ತವೆ.
ಆ ಜೀವವು ಅನುಭವಿಸಿದ ಆಸೆ, ತಪ್ಪಿತಸ್ಥ ಭಾವನೆ
ಹಾಗೂ ನೋವುಗಳ ಸಂಸ್ಕಾರಗಳು ಅವುಗಳಲ್ಲಿ
ಶೇಖರವಾಗಿರುತ್ತವೆ. ಗಾಢ ನಿದ್ರೆಯಲ್ಲಿ ಹಾಗೂ
ದೇಹವನ್ನು ಬಿಡುವಾಗ, ಐದನೆಯ ಶರೀರ
ಕೋಶವಾದ ಕಾರಣ ಶರೀರವನ್ನನುಭವಿಸುತ್ತೇವೆ.
ಆರನೆಯ ಶರೀರವಾದ ಆತ್ಮಶರೀರವು ಸವಿ
ನೆನಪುಗಳಿಗೆ ಸೇರಿದುದು ಹಾಗೂ ಏಳನೆಯ
ಶರೀರವಾದ ನಿರ್ವಾಣ ಶರೀರವು ಸುಖ-
ದುಃಖಗಳನ್ನು ಮೀರಿದ ಪರಮಾತ್ಮನ ಪ್ರಜ್ಞೆಗೆ
ಸೇರಿದುದು.
ಸ್ಪಷ್ಟವಾಗಿ ತಿಳಿಯಿರಿ, ಸವಿನೆನಪುಗಳ ಬಾಂಧವ್ಯವೂ ಸಹ ನಮ್ಮನ್ನು ಹುಟ್ಟು-ಸಾವಿನ ಚಕ್ರಕ್ಕೆ ಹಿಂದೆಳೆಯುತ್ತದೆ. ಅದೇ ರೀತಿಯಾದ ಸುಖ ಸಂತೋಷಗಳ ಘಟನೆಗಳನ್ನು ಅನುಭವಿಸಬೇಕೆಂದು ಮೆಲುಕುಹಾಕುವ ಆಸೆಯು ನಮ್ಮನ್ನು ಹಿಂದೆಳೆದು ಹೆಚ್ಚು ಹೆಚ್ಚು ಜನ್ಮಗಳನ್ನು ಪಡೆಯುವಂತೆ ಮಾಡುತ್ತದೆ.
ಸಂತೋಷವೆಂಬುದು ಮನಸ್ಸು ಸೃಷ್ಟಿಸಿಕೊಳ್ಳುವ
ತಾತ್ಕಾಲಿಕ ಭಾವನೆ. ಏಳನೆಯ ಶರೀರವಾದ
ಆನಂದವೇ ಸಹಜವಾದ ಸತ್ಯ. ಅದು ನಿಮ್ಮಲ್ಲಿ
ಕಾರಣರಹಿತವಾಗಿ, ಕೊನೆಯಿಲ್ಲದೆ
ಉಂಟಾಗುತ್ತಿರುವಂತಹ ಸ್ವಪ್ರೇರಿತ ಚೈತನ್ಯ, ಹರ್ಷ
ಮತ್ತು ಮಂಗಳತ್ವ. ಅದು ನಿಷ್ಕಾರಣವಾಗಿಯೇ
ಸತತವಾಗಿ ನಮ್ಮೊಳಗೆ ಉಕ್ಕುವ ಚಿಲುಮೆಯಂತೆ.
ವಾಸ್ತವವಾಗಿ ನಿಮಗಿಷ್ಟವಾದ ತಿನಿಸು
ಸಂತಸವನ್ನು ತರುವುದೇಕೆಂದರೆ, ಅದು ನಿಮ್ಮ
ಸಹಜಸ್ವಭಾವವಾದ ಆನಂದದ ಸ್ಥಿತಿಗೆ ನಿಮ್ಮನ್ನು
ಒಯ್ಯಲು ಪ್ರಚೋದನೆಯಂತೆ ವರ್ತಿಸುತ್ತದೆ. ಆದರೆ
ನೀವು ಬಾಹ್ಯವಸ್ತುವಾದ ಆ ತಿನಿಸಿನಿಂದಲೇ
ಸಂತೋಷವಾಯಿತೆಂದು ತಪ್ಪಾಗಿ ತಿಳಿಯುತ್ತೀರಿ.
ಆ ಕೆಲವು ಕ್ಷಣಗಳು ನೀವು ನಿಮ್ಮ
ಅಂತರಾನಂದದಲ್ಲಿ ಮಗ್ನರಾಗುವುದೇ ಆ
ಸಂತೋಷಕ್ಕೆ ಕಾರಣ.
ದೇಹಗಳು ಸ್ವಚ್ಛವಾದಷ್ಟೂ ಹಗುರವಾಗುತ್ತವೆ
ಹಾಗೂ ದೇಹದಿಂದ ಪ್ರಾಣ ಹೋಗುವುದು ಹೆಚ್ಚು
ಸುಲಭವಾಗುತ್ತದೆ. ಮಾಗಿದ ಬಾಳೆಹಣ್ಣಿನ ಸಿಪ್ಪೆ
ಸುಲಿದಂತೆ ಪ್ರಾಣವು ಸುಲಭವಾಗಿ ದೇಹದಿಂದ
ಹೊರಬರುತ್ತದೆ.
ಸಾವು ಪ್ರತಿದಿನವೂ ಸಂಭವಿಸುತ್ತಲೇ ಇರುತ್ತದೆ
ಪ್ರತಿ ಬಾರಿ ನಿದ್ರಿಸುವಾಗಲೂ, ಏಳು ಶರೀರಗಳ ಪೈಕಿ ನಾಲ್ಕು ಶರೀರಗಳಾದ ಸ್ಥಾಲ, ಪ್ರಾಣ, ಮಾನಸಿಕ ಮತ್ತು ಸೂಕ್ಷ್ಮ ಶರೀರಗಳು ಕಾರಣ ಶರೀರದಲ್ಲಿ ಲೀನವಾಗುತ್ತವೆ. ಪ್ರತಿ ದಿನವೂ ನಿಮ್ಮನ್ನು ಪುನರುಜ್ಜಿವನಗೊಳಿಸುವ ಗಾಢನಿದ್ರಾಸ್ಥಿತಿಯು ಕಾರಣ ಶರೀರದ ಕತ್ತಲಿಗೆ ಸಂಬಂಧಿಸಿದೆ. ಆದುದರಿಂದ ಐದನೆಯದಾದ ಕಾರಣಶರೀರವನ್ನು ದಾಟುವವರೆಗೂ ಈ 'ಸಾವು' ಪ್ರತಿದಿನವೂ ಸಂಭವಿಸುತ್ತಲೇ ಇರುತ್ತದೆ. ನಿಮ್ಮ ಪ್ರತಿದಿನದ ನಿದ್ರೆಯಲ್ಲಿಯೂ ಇದೇ ಆಗುವುದು.
ಪ್ರಾಣ ಬಿಡುವ ಸಮಯದಲ್ಲಿ, ಆ ಜೀವಶಕ್ತಿಯು
ಐದನೆಯದಾದ ಕಾರಣಶರೀರವನ್ನು ಬಿಟ್ಟು
ಆರನೆಯದಾದ ಆತ್ಮಶರೀರವನ್ನು ಪ್ರವೇಶಿಸಿದಾಗ
ಸಾವಿನ ಸಂಸ್ಕರಣ ಕೊನೆಗೊಳ್ಳುತ್ತದೆ.
ಜೀವಶಕ್ತಿಯು ತನ್ನ ಉಳಿದ ಆಸೆಗಳನ್ನು
ಈಡೇರಿಸಿಕೊಳ್ಳಲು ಮತ್ತೊಂದು ದೇಹದ ಅವಶ್ಯಕತೆ
ಇಲ್ಲವಾದಾಗ ಏಳನೆಯದಾದ ನಿರ್ವಾಣ
ಶರೀರವನ್ನು ಪ್ರವೇಶಿಸುತ್ತದೆ; ಅದೇ ಜ್ಞಾನೋದಯ.
ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಪುನಃ
ಮತ್ತೊಂದು ದೇಹವನ್ನು ಪಡೆದು ಜೀವಶಕ್ತಿಯು
ಬರಬೇಕಾಗುವುದೇ ಸಾವು.
ಜಾಗ್ರತಲೋಕ ಹಾಗೂ ನಿದ್ರಾಲೋಕ
ಇನ್ನೊಂದು ವಿಷಯ: ನೀವು ನಿದ್ರಾಸ್ಥಿತಿಗೆ
ಹೋಗಿ ಕನಸುಕಾಣಲು ಆರಂಭಿಸಿದಾಗ, ಈಗಿರುವ
ಪ್ರಪಂಚವು ಕಪ್ಪು-ಬಿಳುಪಿನದಾಗುತ್ತದೆ. ಏಕೆಂದರೆ
ಆಗ ನೀವು ಕನಸಿನ ಲೋಕದಲ್ಲಿರುತ್ತೀರಿ. ಈ
ಎಚ್ಚರದ ಸ್ಥಿತಿಯ ಇಡೀ ಪ್ರಪಂಚವು
ಮರೆತುಹೋಗಿ, ಕನಸಿನ ಪ್ರಪಂಚವು ಇನ್ನೂ
ನಿಜವಾದುದಾಗಿಯೂ ಬಣ್ಣಬಣ್ಣದ್ದಾಗಿಯೂ
ಕಂಡುಬರುತ್ತದೆ. ಕನಸಿನಿಂದ ಹೊರಬಂದರೆ ನೀವು
ಜಾಗೃತಗೊಳ್ಳುವ ಈ ಇಡೀ ಪ್ರಪಂಚವು ಪುನಃ
ನಾಲ್ಕು ಆಯಾಮಗಳುಳ್ಳದ್ದಾಗಿ(4D) ಕಾಣುತ್ತದೆ.
ಈ ಸ್ಥೂಲ ಶರೀರದಲ್ಲಿ ಜಾಗೃತಸ್ಥಿತಿಯಲ್ಲಿರುವಾಗ ಈ ಪ್ರಪಂಚವನ್ನು ನಾನಾ
ಬಣ್ಣಗಳಲ್ಲಿ, 4 ಆಯಾಮಗಳಲ್ಲಿ 4Dಯಲ್ಲಿ
ಕಾಣುವಿರಿ. ಕನಸಿನ ಲೋಕದಲ್ಲಿರುವಾಗ ಆ
ಲೋಕವನ್ನು 4Dಯಲ್ಲಿ ಕಾಣುವಿರಿ. ಹೀಗಾಗಿ
ನೀವಿದ್ದಿರುವಾಗ ಕನಸಿನ ಪ್ರಪಂಚವು
ಕಪ್ಪು ಬಿಳುಪಾಗುತ್ತದೆ ಮತ್ತು ಈ ಪ್ರಪಂಚವು 4D
ಆಗುತ್ತದೆ. ಹಾಗೆಯೇ ನೀವು ಅಲ್ಲಿದ್ದಾಗ ಕನಸು
4D ಆಗಿ ಈ ಪ್ರಪಂಚವು ಕಪ್ಪು-
ಬಿಳುಪಿನದಾಗುತ್ತದೆ.
ಅದೇ ರೀತಿ, ಸಾವಿನ ಸಮಯದಲ್ಲಿ ಸ್ಥಲ ಶರೀರದಿಂದ ಪ್ರಾಣಶರೀರಕ್ಕೆ ಹೋಗುವಾಗ ಈ ಇಡೀ ಭೌತಿಕ ಜಗತ್ತು ಅಸತ್ಯವಾಗಿ ಕಪ್ಪುಬಿಳುಪಿನಲ್ಲಿ ಕಾಣುತ್ತದೆ. ನಿಮ್ಮ ಎಲ್ಲಾ ಸಾಧನೆಗಳು ನೀವು ಹೆಮ್ಮೆ ಪಟ್ಟಂತಹ ವಿಷಯಗಳು, ನಿಮ್ಮ ಶ್ರಮಗಳು, ನಿಮ್ಮ ದುಃಖಗಳು, ನಿಮ್ಮ ಸಂತೋಷಗಳು
- ಈ ಯಾವುದಕ್ಕೂ ಅರ್ಥವೇ ಇಲ್ಲದೆ ಹೋಗಿ, ಎಲ್ಲವೂ ಕಪ್ಪು-ಬಿಳುಪಿನಲ್ಲೇ ಗೋಚರವಾಗುತ್ತವೆ. 'ಇಷ್ಟೆಲ್ಲಾ ಕೆಲಸಗಳನ್ನೂ ನಾನೇಕೆ ಮಾಡಿದೆ? ಇದನ್ನೆಲ್ಲವನ್ನೂ ನನ್ನ ಜೀವನದ ಅಡಿಪಾಯವೆಂದು ನಾನೇಕೆ ತಿಳಿದೆ?' ಎಂಬುದಾಗಿ ಆಶ್ಚರ್ಯಪಡುತ್ತೀರಿ.
ಇದೇನಾಗುತ್ತದೆ ಎಂಬುದನ್ನು ವಿವರಿಸುತ್ತೇನೆ. ನೀವು ಬದುಕಿರುವಾಗ ನಿಮ್ಮ ವ್ಯಕ್ತಿತ್ವದಲ್ಲಿ ಬಂಡವಾಳ ಹೂಡಿರುತ್ತೀರಿ. ನಿಮ್ಮ ವ್ಯಕ್ತಿತ್ವವನ್ನು ಕೆಲವು ಆಧಾರಸ್ತಂಭಗಳ ಮೇಲೆ ಕಟ್ಟಿರುತ್ತೀರಿ - ಹಣ, ಖ್ಯಾತಿ, ಸಂಬಂಧಗಳು, ಬೆಂಬಲಿಗರ ದೊಡ್ಡ ಗುಂಪೆಂಬ ಹೆಮ್ಮೆ, ಹಿಂಬಾಲಕರು, ಇತ್ಯಾದಿ.
ಭೌತಿಕ ಶರೀರದಿಂದ ಹೊರಬಂದಾಗ ಈ ಎಲ್ಲ ಸ್ತಂಭಗಳೂ, ಈ ಎಲ್ಲ ತಳಹದಿಗಳೂ
ಸಂಪೂರ್ಣವಾಗಿ ಅಲುಗಾಡಿಬಿಡುತ್ತವೆ. ನಿಮ್ಮ ಚೆಕ್ಕುಗಳ ಮೇಲೆ ಇನ್ನೂ ನೀವು ರುಜು ಹಾಕಲಾಗುವುದಿಲ್ಲ. ನಿಮ್ಮ ರುಜುವನ್ನು ಅಂಗೀಕರಿಸಲಾಗುವುದಿಲ್ಲ. ಬ್ಯಾಂಕಿನಲ್ಲಿರುವ ನಿಮ್ಮ ಹಣಕ್ಕೂ ನಿಮಗೂ ಇನ್ನು ಸಂಬಂಧವಿರುವುದಿಲ್ಲ. ನಿಮ್ಮ ಬ್ಯಾಂಕಿನ ಖಾತೆಯನ್ನು ಚಲಾಯಿಸುವಂತಿಲ್ಲ. ನಿಮ್ಮ ಕಾರು ನಿಮಗೆ ನಿಷ್ಪಯೋಜಕ. ಹೆಚ್ಚೆಂದರೆ ಆಂಬುಲೆನ್ಸ್ ಮಾತ್ರ ಉಪಯುಕ್ತವಾಗುತ್ತದೆ!
ಕೇವಲ ಪ್ರಜ್ಞೆಯ ಒಂದು ಇಣುಕುನೋಟ
ಮಾತ್ರ ನಿಮ್ಮೊಂದಿಗೆ ಬರಲು ಸಾಧ್ಯ. ನಿಮ್ಮ
ಜೀವನದ ಆಧಾರಗಳು ಏನೇನಿದ್ದವೋ ಅವೆಲ್ಲವೂ
ಅಲುಗಾಡಿಹೋಗುತ್ತವೆ. ಆಧಾರವೇ
ಅಲುಗಾಡಿಹೋಗಿರುವಾಗ ಸಹಜವಾಗಿಯೇ
ಹಿಡಿದುಕೊಳ್ಳಲೇನೂ ಇರುವುದಿಲ್ಲ.
ಸದ್ಯದಲ್ಲಿ ಈ ಇಡೀ ಪ್ರಪಂಚವು 4Dಯಲ್ಲಿ ಕಾಣುತ್ತದೆ. ಆಧ್ಯಾತ್ಮಿಕತೆ, ಧ್ಯಾನ, ಆಂತರಿಕ ಪ್ರಗತಿ, ಪ್ರಜ್ಞೆ ಮುಂತಾದ ಮಾತುಗಳೆಲ್ಲವೂ ಕಪ್ಪುಬಿಳುಪಿನಂತೆ ಕಾಣುತ್ತದೆ. ಆದುದರಿಂದಲೇ ನಾನು ಧ್ಯಾನಕ್ಕೆ ಜನರನ್ನು ಕರೆದಾಗ ಅವರು, 'ಧ್ಯಾನಕ್ಕೆ ನನಗೆ ಸಮಯವಿಲ್ಲ. ನನ್ನ ಕೆಲಸ ಕಾರ್ಯಗಳನ್ನೆಲ್ಲವನ್ನೂ ಮುಗಿಸಿದ ನಂತರ ಬರುತ್ತೇನೆ. ಇನ್ನೂ ಕೆಲವು ವರ್ಷಗಳಾದ ಮೇಲೆ ನೋಡೋಣ' ಎನ್ನುತ್ತಾರೆ.
ಸ್ಪಷ್ಟವಾಗಿ ತಿಳಿದುಕೊಳ್ಳಿರಿ, 'ಧ್ಯಾನಕ್ಕೆ ಸಮಯವಿಲ್ಲ' ಎಂದು ಮಾತ್ರ ಎಂದಿಗೂ ಹೇಳಬೇಡಿರಿ. ನಿಮಗೆ ನೀವೇ ಸರಿಯಾಗಿ ಅರ್ಥಮಾಡಿಕೊಂಡು, 'ಸದ್ಯದಲ್ಲಿ ಅದು ನನ್ನ ಜೀವನದಲ್ಲಿ ಅಷ್ಟು ಪ್ರಾಮುಖ್ಯವೆಂದೆನಿಸುತ್ತಿಲ್ಲ'
ಎನ್ನಿರಿ. ಧ್ಯಾನ ಮಾಡಲು ತಯಾರಾಗಿಲ್ಲದೆ ಇದ್ದು, ‘ನನ್ನ ಜೀವನದಲ್ಲಿ ಧ್ಯಾನ ಅಷ್ಟೇನೂ ಮುಖ್ಯವಲ್ಲವೆನಿಸುತ್ತದೆ’ ಎಂದರೆ, ಆಗ ನೀವು ಪ್ರಾಮಾಣಿಕರು. ಆದರೆ, ‘ನನಗೆ ಸಮಯವಿಲ್ಲ’ ಎಂದರೆ ನಿಮಗೆ ನೀವೇ ಮೋಸಮಾಡಿಕೊಂಡಂತೆ. ಪ್ರತಿಯೊಬ್ಬರಿಗೂ ತಾವೇನು ಮಾಡಬೇಕೆಂದಿರುವವರೋ ಅದನ್ನು ಮಾಡಲು 24 ಗಂಟೆಗಳಿರುತ್ತವೆ. ಧ್ಯಾನ ಮಾಡುವವರಿಗೆ ಕೆಲಸವಿಲ್ಲವೆಂದರ್ಥವಲ್ಲ. ನಿಮ್ಮ ಜೀವನದಲ್ಲಿ ನಿಮಗೆ ಬೇಕಾದ ಯಾವುದಕ್ಕೆ ಹೆಚ್ಚು ಗಮನಕೊಡುತ್ತೀರೆಂಬುದೇ ಪ್ರಶ್ನೆ. ಈಗ ನಿಮಗೆ ಆಧ್ಯಾತ್ಮಿಕತೆ ಹಾಗೂ ಧ್ಯಾನಗಳು ಕಪ್ಪು-ಬಿಳುಪಾಗಿ ಕಂಡರೆ ನಿಮ್ಮ ಚೈತನ್ಯವನ್ನು ನೀವು ಆ ದಿಕ್ಕಿಗೆ ತಿರುಗಿಸುವುದಿಲ್ಲ, ಅಷ್ಟೇ.
ನೋಡಿರಿ, ಈಗ ನಾವು ಎರಡು ಆಯಾಮಗಳಲ್ಲಿದ್ದೇವೆ. ಬಾಹ್ಯ ಪ್ರಪಂಚ ಮತ್ತು ಆಧ್ಯಾತ್ಮಿಕತೆ. ಸದ್ಯದಲ್ಲಿ ಏನಾಗುತ್ತಿದೆ ಎಂದರೆ, ನಮ್ಮ ವ್ಯಕ್ತಿತ್ವ ಹಾಗೂ ಜೀವನವನ್ನು ಎಷ್ಟೋ ಕಂಬಗಳ ಮೇಲೆ ಕಟ್ಟಿಕೊಂಡರೂ, ಆ ಕಂಬಗಳೆಲ್ಲವೂ 4 ಆಯಾಮದ್ದಾಗಿ (4Dಯಾಗಿ) ಕಾಣುವ ಬಾಹ್ಯ ಪ್ರಪಂಚವನ್ನಾಧರಿಸಿರುವಂತಹವು. ಒಂದೇ ಒಂದು ಕಂಬವಾದರೂ ಪ್ರಜ್ಞೆ ಅಥವಾ ಅಂತರಂಗವನ್ನು ಆಧರಿಸಿರುವುದಿಲ್ಲ. ನಮ್ಮ ಇಡೀ ವ್ಯಕ್ತಿತ್ವವೇ ಬಾಹ್ಯ ಜಗತ್ತಿನ – ನಿಮ್ಮ ಹೆಸರು ಮತ್ತು ಕೀರ್ತಿ, ಸಮಾಜ ನಮ್ಮ ಬಗ್ಗೆ ಏನೆನ್ನುತ್ತದೆ – ಮುಂತಾದುದರ ಮೇಲೆ ಆಧಾರಿತವಾಗಿದೆ. ನಮ್ಮ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ‘ನೀನು ಮಹಾವ್ಯಕ್ತಿ’ ಎಂದಿದ್ದರೆ, ನಾವೇ ಹೆಚ್ಚು ಎಂದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ‘ನೀನು ಅಪ್ರಯೋಜಕ’ ಎಂದುಬಿಟ್ಟರೆ, ನಾವು ಖಿನ್ನರಾಗುತ್ತೇವೆ.
ಇದಕ್ಕೆ ಕಾರಣ ನಮ್ಮ ಕಟ್ಟಡದ, ಅಂದರೆ ನಮ್ಮ
ಅಸ್ತಿತ್ವದ, ನಮ್ಮ ಅಂತರಂಗದ ಒಂದೇ ಒಂದು
ಕಂಬವಾಗಲೀ, ಆಧ್ಯಾತ್ಮಿಕತೆಯ ಮೇಲೆ ನಿಂತಿಲ್ಲ.
ಇಡೀ ಕಟ್ಟಡವು ಬಾಹ್ಯದ ವಿಷಯಗಳ ಮೇಲೆಯೇ
ಆಧಾರಿತವಾಗಿದೆ. ಆದ್ದರಿಂದಲೇ ಆ ಕಂಬಗಳು
ಯಾರಿಂದಲಾದರೂ ಅಲುಗಿಸಲ್ಪಟ್ಟಾಗ ನಾವು
ವಿಪರೀತವಾಗಿ ನೊಂದುಕೊಳ್ಳುತ್ತೇವೆ. ಒಂದೇ
ಒಂದು ಕಂಬವಾದರೂ ಪ್ರಜ್ಞೆಯ ಮೇಲೆ
ಆಧಾರಿತವಾಗಿದ್ದರೆ, ಅನಾಯಾಸವಾಗಿ ಅದರ ಮೇಲೆ
ನೆಟ್ಟಗೆ ನಿಲ್ಲಬಹುದು. ಒಂದು ಕಂಬವನ್ನಾದರೂ
ಅಂತರಂಗದ ಆಧಾರದ ಮೇಲೆ ಕಟ್ಟಿದರೆ ಆ
ಕಂಬವು ಮರಣಕಾಲದಲ್ಲಿ ನಾಲ್ಕು ಆಯಾಮಗಳಲ್ಲಿ
ಹೊಳೆದು, ದೇಹವನ್ನು ಬಹಳ ಸೊಗಸಾಗಿ
ತೊರೆಯಲು ಸಹಾಯ ಮಾಡುತ್ತದೆ.
ಸಾಯುವ ಕಲೆ
ಝೆನ್ ಸಂಪ್ರದಾಯದಲ್ಲಿ ಒಂದು ಗಾದೆಯಿದೆ.
‘ಸಾವಿನ ಕಲೆಯನ್ನು ಕಲಿಯುವುದು ನಮ್ಮ
ಜೀವನದಲ್ಲಿ ಕಲಿಯಬಹುದಾದ ನಿಜವಾದ ಮತ್ತು
ಅಂತಿಮ ಜ್ಞಾನ’ ಎಂದು.
ಒಂದು ಸಣ್ಣ ಝೆನ್ ಕಥೆ:
ಒಂದು ದಿನ ಒಬ್ಬ ಜ್ಞಾನಿಗಳು ಇದ್ದಕ್ಕಿದ್ದಂತೆಯೇ ತಾವು ಮಾರನೆಯ ದಿನ, ಬೆಳಗ್ಗೆ ಸುಮಾರು 6.00
ಗಂಟೆಗೆ ದೇಹತ್ಯಾಗ ಮಾಡುವುದಾಗಿ ಘೋಷಿಸಿದರು.
ನಿಜ, ಜ್ಞಾನಿಗಳು ಯಾವಾಗಲೂ ತಮ್ಮ ಮರಣದ
ಬಗ್ಗೆ ತಿಳಿದಿರುತ್ತಾರೆ. ಅವರು ಯಾವಾಗ
ದೇಹತ್ಯಾಗಮಾಡುವರೆಂಬುದನ್ನು ಮುಂಚೆಯೇ
ಹೇಳಬಲ್ಲರು. ಇವರು ತಾವು ಬೆಳಿಗ್ಗೆ ಸುಮಾರು
6.00 ಗಂಟೆಗೆ ದೇಹತ್ಯಾಗ ಮಾಡುವ ವಿಷಯವನ್ನು
ತಿಳಿಸಿದರು.
ಅವರ ಶಿಷ್ಯರು, 'ಬೇಡ, ಬೇಡ, ಎರಡು ಮೂರು
ಗಂಟೆಗಳು ತಡಮಾಡಿರಿ. ಬೆಳಗ್ಗೆ ಬಹಳ
ಚಳಿಯಾಗುತ್ತದೆ. ನಾವು ಅಂತ್ಯಕ್ರಿಯೆಗೆ ಸಿದ್ಧತೆ
ಮಾಡಿಕೊಳ್ಳಲು ಅನುಕೂಲವಾಗಲು ನೀವು ಕೆಲವು
ಗಂಟೆಗಳು ಕಾಯಬಾರದೆಕೆ?' ಎಂದರು.
ಗುರುಗಳು ಇದಕ್ಕೊಪ್ಪಿ ತಾವು ಸುಮಾರು 12.00 ಗಂಟೆಗೆ ದೇಹತ್ಯಾಗ ಮಾಡುವುದಾಗಿ ಹೇಳಿದರು. ಮಧ್ಯಾಹ್ನ 12.00 ಗಂಟೆಗೆ ಸರಿಯಾಗಿ ಅವರನ್ನೆಲ್ಲಾ ಬೀಳ್ಕೊಂಡು ದೇಹತ್ಯಾಗ ಮಾಡಿದರು!
ಮಂಗಳಕರವಾದ ಸಾವು
ಒಂದು ಸತ್ಯ ಕಥೆ:
ಭಾರತದ ಒಬ್ಬ ಮಹಾನ್ ಗುರುಗಳಾದ
ಪರಮಹಂಸ ಯೋಗಾನಂದರು 1920ರಲ್ಲಿ
ಅಮೆರಿಕಾಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಅವರು
ದೇಹವನ್ನು ಹೇಗೆ ತ್ಯಜಿಸಿದರೆಂಬುದು ಬಹಳ
ಸ್ವಾರಸ್ಯಕರವಾಗಿದೆ. ಕೊನೆಯ ಗಳಿಗೆಯವರೆಗೂ
ಅವರು ದೈನಂದಿನ ಪ್ರವಚನಗಳನ್ನು ನೀಡುತ್ತಾ
ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ
ಕಾರ್ಯಗಳಲ್ಲಿ ನಿರತರಾಗಿದ್ದರು.
ಅವರು ದೇಹತ್ಯಾಗ ಮಾಡಿದ ದಿನ ಅಮೆರಿಕಾಗೆ
ಭಾರತೀಯ ರಾಯಭಾರಿಗಳಾಗಿದ್ದ ಬಿನಯ್ ರಂಜನ್
ಸೇನ್ರವರ ಗೌರವಾರ್ಥವಾಗಿ ಲಾಸ್
ಏಂಜಲೀಸ್ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ
ಭಾಗವಹಿಸಿದ್ದರು.
ಅವರು ತಮ್ಮ ಪ್ರವಚನದ ಅಂತ್ಯದಲ್ಲಿ, ಸುಮ್ಮನೆ ತಮ್ಮ ದೇಹದಿಂದ ವಿರಮಿಸಿ, ಕೊನೆಯುಸಿರೆಳೆದರು.
ಇಪ್ಪತ್ತು ದಿನಗಳಾದರೂ ಅವರ ದೇಹವು
ಕೊಳೆಯಲಿಲ್ಲ. ಯಾವ ಹೊತ್ತಿನಲ್ಲಿಯೂ ಅವರ
ದೇಹದಿಂದ ದುರ್ಗಂಧ ಬರಲಿಲ್ಲ. ಅವರ
ಆತ್ಮಕಥೆಯ ಅನುಬಂಧದಲ್ಲಿ ಅವರ ಸಾವಿನ ಬಗ್ಗೆ
ಒಂದು ಸೊಗಸಾದ ಲೇಖನವಿದೆ. ಅದು ಅಂತಹ
ಸುಂದರ ಸಾವಾಗಿತ್ತು. ಅವರಿಗೆ ತಮ್ಮ ಸಾವೂ
ಮಂಗಳಕರವಾಗಿತ್ತು.
ನೈಜತೆಯೂ ಒಂದು ಕನಸು
ನೀವೇ ಕಣ್ಣುಗಳಲ್ಲ. ಕಣ್ಣುಗಳು ಕೇವಲ
ಸಲಕರಣೆಗಳು. ಎಷ್ಟೋ ಬಾರಿ, ನಿಮ್ಮ ಕಣ್ಣುಗಳು
ತೆರೆದಿರಬಹುದು. ನೀವು ನೋಡುತ್ತಿರಲೂಬಹುದು.
ಆದರೆ, ನೋಡುತ್ತಿರುವ ದೃಶ್ಯವನ್ನು
ದಾಖಲಿಸಿಕೊಳ್ಳದೆಯೇ ಇರಲೂಬಹುದು.
ಕಣ್ಣುಗಳ ಮೂಲಕ ನೋಡುತ್ತಿದ್ದೇನೆಂಬುದನ್ನು
ಕೇವಲ ನೆನಪಿಸಿಕೊಳ್ಳಿರಿ. ಕಣ್ಣುಗಳ ಮೂಲಕ
ನೋಡಿದರೆ ಇದ್ದಕ್ಕಿದ್ದಂತೆ ಸಕಲಕ್ಕೂ ನೀವು
ಸಾಕ್ಷಿಯಾಗಿರುವಂತೆ ಕಾಣುವಿರಿ. ನೀವು ಕಣ್ಣೆಂದು
ಕರೆಯುವುದು ಎರಡು ತೂತುಗಳಷ್ಟೆ. ನೀವು
ಕಣ್ಣುಗಳೆಂದು ಕರೆಯುವ ಆ ಎರಡು ತೂತುಗಳ ಮೂಲಕ ಕೇವಲ ನೋಡುತ್ತಿರುವಿರಿ, ಅಷ್ಟೆ.
ನಿಮ್ಮ ಎರಡು ಕಣ್ಣುಗಳೇ ನೀವು ಎಂದುಕೊಂಡಿದ್ದರೆ, ಅಹಂಕಾರದಲ್ಲಿ ಸಿಕ್ಕಿಬಿದ್ದಿರುತ್ತೀರಿ. ನಿಮ್ಮ ಕನಸಿನಲ್ಲಿ ವಸ್ತುಗಳ ಮೇಲೆ ನಿಮ್ಮ ಗಮನವಿರುವವರೆಗೂ ಕನಸು ಕಾಣುತ್ತಲೇ ಇರುವಿರಿ. ನಿಮ್ಮ ಗಮನವು ನಿಮ್ಮ ಕಡೆಗೆ ತಿರುಗಿದ ಕೂಡಲೇ - ಅಂದರೆ ವೀಕ್ಷಿತದಿಂದ ವೀಕ್ಷಕನ ಕಡೆಗೆ ತಿರುಗಿದ ಕೂಡಲೇ ನಿಮಗೆ ಎಚ್ಚರವಾಗುತ್ತದೆ.
ನೀವು ಕಣ್ಣುಗಳಿಗೆ ಮೀರಿದವರೆಂಬುದನ್ನು ಅರಿತ ಕ್ಷಣವೇ ನಿಮ್ಮ ಗಮನ ವೀಕ್ಷಕನ ಕಡೆಗೆ ತಿರುಗುತ್ತದೆ. ಆಗ ನಿಮಗೆ ಕನಸು ಯಾವ ವಸ್ತುವಿನಿಂದ ಮಾಡಲ್ಪಟ್ಟಿದೆಯೋ, ಪ್ರಪಂಚವೂ ಅದೇ ವಸ್ತುವಿನಿಂದ ಮಾಡಲ್ಪಟ್ಟಿದೆ ಎಂದು ಅರ್ಥವಾಗುತ್ತದೆ.
ನಾನು ನೋಡುತ್ತಿದ್ದೇನೆ
ಎಂದುಕೊಳ್ಳುತ್ತಿರುವವರೆಗೂ ಗಮನವೆಲ್ಲವೂ
ನೋಡುತ್ತಿರುವುದರ ಮೇಲೆಯೇ ಹೋಗುತ್ತದೆ.
ಅದನ್ನೇ ನಾನು ಅಹಂಕಾರವೆನ್ನುವುದು. ನೀವು
ಪುನರಾಲೋಚನೆಮಾಡಿ, ಕಣ್ಣುಗಳ ಮೂಲಕ
ನೋಡುತ್ತಿದ್ದೇನೆ ಎಂದರಿತಾಗ ಗಮನವೆಲ್ಲವೂ
ನೋಡುವವನ ಮೇಲೆಯೇ ಇರುತ್ತದೆ. ಅದನ್ನೇ
ನಾನು ಮುಗ್ಧತೆ ಎನ್ನುತ್ತೇನೆ. ಕನಸು ಯಾವ
ವಸ್ತುವಿನಿಂದ ಮಾಡಲ್ಪಟ್ಟಿದೆಯೋ ಬಾಹ್ಯ
ಪ್ರಪಂಚದಲ್ಲಿ ಕಾಣುವುದೆಲ್ಲವೂ ಅದೇ
ವಸ್ತುವಿನಿಂದ ಮಾಡಲ್ಪಟ್ಟಿದೆ ಎಂಬ ಸ್ಪಷ್ಟವಾದ
ತಿಳಿವಳಿಕೆಯೇ ಮುಗ್ಧತೆ.
ಇವೇ ಕೆಲವು ಹಂತಗಳು: ಮೊದಲನೆಯದು,
ನೋಡುತ್ತಿರುವುದೆಲ್ಲವೂ ಕನಸು ಎಂಬ ತಿಳಿವಳಿಕೆ
ಹೊಂದುವುದು. ಎರಡನೆಯದು, ಕನಸನ್ನು
ಬದಲಾಯಿಸುವ ಶಕ್ತಿಯನ್ನು ಹೊಂದುವುದು.
ಮೂರನೆಯದು, ಅದು ಒಂದು ಕನಸು, ಆದ್ದರಿಂದ
ಅದನ್ನು ಬದಲಾಯಿಸುವ ಅಗತ್ಯವಿಲ್ಲವೆಂದು
ಅರಿಯುವ ಬುದ್ಧಿಯನ್ನು ಹೊಂದುವುದು!
ಜೀವನ ಹಾಗೂ ಮರಣ, ಎಚ್ಚರ ಹಾಗೂ ನಿದ್ರೆ
ವಾಯು ಮತ್ತು ಪ್ರಾಣ
ಜೀವನವನ್ನೇ ಪರಿವರ್ತಿಸುವಂತಹ ಈ ಪ್ರಭಾವಪೂರ್ಣ ಸತ್ಯವನ್ನರಿತುಕೊಳ್ಳಲು ಸ್ವಪ್ನಲೋಕ ಹಾಗೂ ಈ ಲೋಕವು ಯಾವ ವಸ್ತುವಿನಿಂದ ಮಾಡಲ್ಪಟ್ಟಿದೆ ಎಂಬುದನ್ನು ಅರಿತುಕೊಳ್ಳಬೇಕು. ನಮಗೆ ಆಧಾರವಾಗಿರುವ ಜೀವ ಶಕ್ತಿಯಾದ ಪ್ರಾಣದ ಬಗ್ಗೆ ತಿಳಿದುಕೊಳ್ಳಬೇಕು.
ನೀವು ಉಸಿರಾಡುವ ಗಾಳಿಯು, ಪ್ರಾಣವು
ನಿಮ್ಮೊಳಗೆ ಬಂದು ಹೋಗಲು ಬಳಸುವ ಒಂದು
ವಾಹನವಷ್ಟೆ. ಪ್ರಾಣವೇ ಜೀವಶಕ್ತಿ ಎಂಬುದು.
ಇದೊಂದು ಉದಾಹರಣೆಯನ್ನು
ಅರ್ಥಮಾಡಿಕೊಳ್ಳಿರಿ. ಈ ಆವರಣದೊಳಕ್ಕೆ ಒಂದು
ಲಾರಿಯು ಬಂದು, ಏನನ್ನೋ ಇಳಿಸಿ,
ಹೊರಟುಹೋದರೆ; ಆ ಲಾರಿಯೇ ಗಾಳಿಯಂತೆ,
ಅದೇ ಉಸಿರು; ಇಳಿಸಿದ ಸರಕೇ ಪ್ರಾಣ.
ಜೀವನ ಅಥವಾ ಮರಣ: ಪ್ರಾಣದ ದಿಕ್ಕಿನ ಮೇಲೆ ಆಧಾರಿತ
ಮತ್ತೊಂದು ವಿಷಯ: ಒಳಗೆ ಬರುತ್ತಿರುವ ಉಸಿರು ಹೆಚ್ಚಾಗಿ ಪ್ರಾಣವನ್ನು ತರುತ್ತಿದ್ದು, ಹೊರಗೆ ಹೋಗುವ ಉಸಿರು ಖಾಲಿಯಾದ ವಾಹನದಂತೆ ಹೋಗುತ್ತಿರುವವರೆಗೂ ನಿಮ್ಮ ಜೀವನವು ಬಲಯುತಗೊಳ್ಳುತ್ತಿರುತ್ತದೆ.
ಅದಕ್ಕೆ ವಿರುದ್ಧವಾದುದು ನಡೆದರೆ ಎಂದರೆ, ಒಳಬರುವ ಉಸಿರು ಕಡಿಮೆ ಪ್ರಾಣವನ್ನು ತರುತ್ತಿದ್ದು, ಹೊರಗೆ ಹೋಗುವ ಉಸಿರು ಹೆಚ್ಚು ಪ್ರಾಣವನ್ನು ಹೊರಹಾಕುತ್ತಿದ್ದರೆ ಸಾವು ಸನ್ನಿಹಿತವಾಗುತ್ತಿದೆ ಅಥವಾ ಚೈತನ್ಯ ಸಾವಿನೆಡೆಗೆ ಹೋಗುತ್ತಿದೆ ಎಂದರ್ಥ. ಸಾವು ಸನ್ನಿಹಿತವಾದಾಗ ಕೇವಲ ಖಾಲಿ ಗಾಳಿ ಮಾತ್ರ ಒಳಗೆ ಹೋಗುತ್ತದೆ. ಆದರೆ ಅದು ಹೊರಗೆ ಹೋಗುವಾಗ, ಪ್ರಾಣದೊಂದಿಗೆ ಹೋಗುತ್ತದೆ.
ಆಯುರ್ವೇದದಲ್ಲಿ 'ಉಚ್ಛ್ರಾಯ' ಎಂಬ ಒಂದು ಸುಂದರವಾದ ತತ್ವವಿದೆ. ಇದು ಪ್ರಾಣವಿಜ್ಞಾನದ ಮೇಲೆ ಆಧಾರವಾಗಿದೆ. ಒಂದು ನಿರ್ದಿಷ್ಟವಾದ ವಯಸ್ಸಿನವರೆಗೂ ಒಬ್ಬ ವ್ಯಕ್ತಿಯು ತೆಗೆದುಕೊಳ್ಳುವ ಉಸಿರಿನಲ್ಲಿ ಹೆಚ್ಚು ಪ್ರಾಣವನ್ನು ತೆಗೆದುಕೊಳ್ಳುತ್ತಿರುತ್ತಾನೆ ಹಾಗೂ ಹೊರಗೆ ಬಿಡುವ ಉಸಿರಿನಲ್ಲಿ ಕಡಿಮೆ ಪ್ರಾಣವನ್ನು ಹೊರಹಾಕುತ್ತಿರುತ್ತಾನೆ. ಒಳತೆಗೆದುಕೊಳ್ಳುವ ಉಸಿರಿಗಿಂತಲೂ ಹೊರಬಿಡುತ್ತಿರುವ ಉಸಿರಿನಲ್ಲಿ ಪ್ರಾಣದ ಅಂಶವು ಹೆಚ್ಚಾಗುವುದಕ್ಕೆ ಪ್ರಾರಂಭವಾದ ಕೂಡಲೇ ವ್ಯಕ್ತಿಯು ಮರಣಕ್ಕೆ ಹತ್ತಿರವಾಗುತ್ತಿರುವನೆಂದು ತಿಳಿದುಕೊಳ್ಳುತ್ತಾರೆ.
ಅರಿವಿನಿಂದ ಇರಲು
ಆರಂಭಿಸಿದ
ಕ್ಷಣವೇ ಜೀವನ-
ಮರಣಗಳನ್ನು
ಹತೋಟಿ-
ಯಲ್ಲಿಟ್ಟುಕೊಳ್ಳಲು
ಆರಂಭಿಸುವಿರಿ.
ಜೀವನವನ್ನು ಅರಿವಿನ ಮೂಲಕ ಹತೋಟಿಯಲ್ಲಿಡುವುದು
ಜೀವನವು ಸತತವಾಗಿ ಜರುಗುತ್ತಿದೆ ಮತ್ತು ಸಾವನ್ನಪ್ಪುತ್ತಿದೆ. ಸಾವಿನೆಡೆಗೆ ಜೀವನವು ಜರುಗುವುದನ್ನು ಸಾಮಾನ್ಯವಾಗಿ ಜೀವನವೆನ್ನುತ್ತೇವೆ. ದಯವಿಟ್ಟು ತಿಳಿಯಿರಿ, ವಾಸ್ತವವಾಗಿ ನಾವು ಜೀವಿಸುವುದಿಲ್ಲ, ಕೇವಲ ಸಾವು ಸಂಭವಿಸುವುದನ್ನು ನಿರೀಕ್ಷಿಸುತ್ತಿರುತ್ತೇವೆ. ಸಾಮಾನ್ಯ ಮಾನವರು ಜೀವಿಸುವುದೇ ಇಲ್ಲ. ಜೀವನವು ಸಾವಿನೆಡೆಗೆ ಜರುಗಿ, ಸಾವಿನಲ್ಲಿ ಲೀನವಾಗುತ್ತದೆ. ಈ ಕಾರಣದಿಂದಾಗಿಯೇ, ನೀವೆಷ್ಟೇ ವರ್ಷಗಳು ಬದುಕಿದ್ದರೂ ತೃಪ್ತಿಯಾಗುವುದಿಲ್ಲ ಹಾಗೂ ಜೀವಿಸಿದಂತಾಗುವುದೂ ಇಲ್ಲ. ಏಕೆಂದರೆ ಜೀವನವೆಂದರೆ ಏನೆಂಬುದೇ ನಿಮಗೆ ತಿಳಿಯದು.
ಜೀವನದ ಬಗ್ಗೆ ನಿಮಗೆ ಪ್ರಜ್ಞೆ ಮೂಡಿದಾಗ,
ಜೀವನದ ಬಗ್ಗೆ ಆಲೋಚಿಸಲು ಪ್ರಾರಂಭಿಸಿದಾಗ,
ಜೀವನದಲ್ಲಿ ಅರಿವನ್ನು ತಂದುಕೊಂಡಾಗ, ನಿಮ್ಮ
ಅಸ್ತಿತ್ವದಲ್ಲಿ ಒಂದು ಹೊಸಕೇಂದ್ರವು
ಸೃಷ್ಟಿಯಾಗುತ್ತದೆ. ಈ ಜನನ ಮರಣಗಳ ನಡುವೆ
ನಡೆಯುವ ಜೀವನಕ್ಕೆ ಹೆಚ್ಚಾದ ಅರಿವನ್ನು
ತಂದುಕೊಂಡಾಗ, ಒಂದು ಹೊಸ ಕೇಂದ್ರವನ್ನು
ಒಂದು ಹೊಸ ಅವಕಾಶವನ್ನು ಸೃಷ್ಟಿಸುತ್ತೀರಿ - ಅದನ್ನೇ ನಾನು ಪ್ರಜ್ಞೆ ಎನ್ನುವುದು.
ನೀವು ಪ್ರಜ್ಞಾವಂತರಾಗಿ ಇರುವಾಗಲೆಲ್ಲವೂ ನಿಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಲಾರಂಭಿಸುತ್ತೀರಿ. ಉದಾಹರಣೆಗೆ ನಿಮಗೆ ಹೆಚ್ಚಿನ ತಿಳಿವಳಿಕೆ ಬರುತ್ತಿದ್ದ ಹಾಗೆಯೇ, ಯಾವ ಮಾದರಿಯ ಕಾರನ್ನು ಓಡಿಸಬೇಕು, ಎಂತಹ ಮನೆಯಲ್ಲಿ ವಾಸಿಸಬೇಕು, ಎಂತಹ ಜೀವನ ನಡೆಸಬೇಕು ಎಂಬುದನ್ನು ಆಯ್ಕೆಮಾಡಲು ಪ್ರಾರಂಭಿಸುವಿರಿ. ಪ್ರತಿಯೊಂದು ವಿಷಯದಲ್ಲಿಯೂ ನಿರ್ಧಾರ ತೆಗೆದುಕೊಳ್ಳುತ್ತೀರಿ: ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು, ಹೇಗೆ ಯೋಚಿಸಬೇಕು, ಈ ರೀತಿ ಪ್ರತಿಯೊಂದು ವಿಷಯದಲ್ಲಿಯೂ ಎಚ್ಚರವಾಗಿರಲು ಆರಂಭಿಸುವಿರಿ.
ಅರಿವಿನಿಂದ ಇರಲು ಆರಂಭಿಸಿದ ಕ್ಷಣವೇ
ನಿರ್ಧರಿಸಲು ಪ್ರಾರಂಭಿಸುವಿರಿ ಹಾಗೂ ನಿಮ್ಮ
ಜೀವನವನ್ನು ಹತೋಟಿಯಲ್ಲಿಟ್ಟುಕೊಳ್ಳಲು
ಆರಂಭಿಸುವಿರಿ. ಸಂಪೂರ್ಣವಾಗಿ ಅರಿವಿನಿಂದ
ಕೂಡಿದಾಗ ನಿಮ್ಮ ಸಾವನ್ನೂ
ಹತೋಟಿಯಲ್ಲಿಟ್ಟುಕೊಳ್ಳಲು ಮೊದಲುಮಾಡುವಿರಿ.
ಆಗ, ಜೀವನ ಹಾಗೂ ಮರಣಗಳೆಂಬ ಈ
ಎರಡು ಘಟನೆಗಳು ನಿಮ್ಮ ಪ್ರಜ್ಞಾಪೂರ್ವಕ
ಸ್ಥಿತಿಯಲ್ಲಿ ಜರುಗುವವು. ನೀವು
ಪ್ರಜ್ಞಾಪೂರ್ವಕವಾಗಿ ಯೋಚಿಸಿದರೆ ಅದು ಜೀವನ;
ನೀವು ಪ್ರಜ್ಞಾಪೂರ್ವಕವಾಗಿ ಯೋಚಿಸಲಾಗದಿದ್ದರೆ,
ಅದೇ ಸಾವು.
ಅರಿವು - ಸ್ವಪ್ನ, ಸುಷುಪ್ತಿ ಮತ್ತು ಜೀವನ, ಮರಣಗಳ ಮೇಲೆ ಹತೋಟಿ
ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ವಪ್ನ ಹಾಗೂ ಗಾಢವಾದ ನಿದ್ರೆ ಎಂದರೆ ಸುಷುಪ್ತಿ ಎಂಬ ಎರಡು ವಿಷಯಗಳೂ ನಡೆಯುತ್ತವೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ನೀವು ಅರಿವಿನಿಂದಿದ್ದರೆ ಅದು ಸ್ವಪ್ನ. ನಿಮಗೆ ಏನನ್ನಾದರೂ ನೋಡಲಾಗಲೀ, ಭಾವಿಸಲಾಗಲೀ, ಅನುಭವಿಸಲಾಗಲೀ, ಯಾವುದಾದರೂ ಚಲನೆಯನ್ನು ಗಮನಿಸಲಾಗಲೀ ಸಾಧ್ಯವಾದರೆ ಅದನ್ನು ಸ್ವಪ್ನವೆನ್ನುತ್ತೇವೆ. ನಿಮಗೆ ಯಾವುದರ ಪರಿಜ್ಞಾನವೂ ಇಲ್ಲದಿದ್ದರೆ, ಏನನ್ನೂ ಭಾವಿಸಲಾಗದಿದ್ದರೆ, ಯಾವ ಚಲನೆಯನ್ನೂ ಗಮನಿಸಲಾಗದಿದ್ದರೆ ಅದು ಗಾಢ ನಿದ್ರೆ.
ಎಚ್ಚರದ ಸ್ಥಿತಿಯಲ್ಲಿ ಅರಿವಿನಿಂದಿದ್ದಾಗ ಅಥವಾ ಮನೋವಿಜ್ಞಾನದಲ್ಲಿ ಹೇಳುವ ಪ್ರಜ್ಞಾಪೂರ್ವಕಸ್ಥಿತಿಯಲ್ಲಿದ್ದಾಗ, ಅದು ಜೀವನ; ಅರಿವಿನಿಂದಿಲ್ಲದಿದ್ದರೆ ಅದು ಸಾವು. ನಿಮ್ಮ ಜೀವನಕ್ಕೆ ಹೆಚ್ಚು ಅರಿವನ್ನು ತಂದರೆ, ಜೀವನದ ಜವಾಬ್ದಾರಿ ವಹಿಸುತ್ತೀರಿ. ಅದೇ ರೀತಿ, ಕನಸಿನಲ್ಲಿ ಹೆಚ್ಚು ಅರಿವನ್ನು ತರಲಾರಂಭಿಸಿದರೆ, ನಿಮ್ಮ ಕನಸು ಮತ್ತು ಗಾಢ ನಿದ್ರೆಗಳ ಜವಾಬ್ದಾರಿ ವಹಿಸುತ್ತೀರಿ.
ಜೀವನ ಮತ್ತು ಮರಣಗಳನ್ನು ಹಾಗೂ ಕನಸು
ಮತ್ತು ಗಾಢ ನಿದ್ರೆಗಳನ್ನು
ಹತೋಟಿಯಲ್ಲಿಟ್ಟುಕೊಳ್ಳಲು ಒಂದು ಮುಖ್ಯವಾದ
ಅವಶ್ಯಕತೆಯಿದೆ. ಅದೇ ಅರಿವು. ಜೀವನ,
ಮರಣಗಳನ್ನೂ, ಕನಸು - ಗಾಢ ನಿದ್ರೆಗಳನ್ನೂ
ಹತೋಟಿಯಲ್ಲಿಟ್ಟುಕೊಳ್ಳಲು ಮುಖ್ಯವಾದ ಆವಶ್ಯಕತೆಯೇ ಅರಿವು.
ಕನಸಿಗೆ ನಿಮ್ಮ ಅರಿವನ್ನು ತಂದುಕೊಳ್ಳುವುದರಿಂದ
ಕನಸು ಮತ್ತು ಆಳವಾದ ನಿದ್ರೆಯ ಮೇಲೆ ನಿಮಗೆ
ಹತೋಟಿ ಬರಲು ಸಹಾಯವಾಗುವುದು
ಮಾತ್ರವಲ್ಲದೆ, ಜೀವನ, ಮರಣಗಳನ್ನೇ
ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.
ನಿದ್ರೆ ಮತ್ತು ಸಾವಿನಲ್ಲಿ ಪ್ರಾಣದ ಚಲನೆ
ಕನಸಿನ ಸ್ಥಿತಿಗೆ ಸರಿಯಲಾರಂಭಿಸಿದಾಕ್ಷಣವೇ
ಪ್ರಾಣವು ಕಂಠ ಪ್ರದೇಶದ ವಿಶುದ್ಧಿ ಚಕ್ರಕ್ಕೆ
ಬರಲಾರಂಭಿಸುತ್ತದೆ. ಗಾಢ ನಿದ್ರೆಗೆ
ಇಳಿಯುತ್ತಿದ್ದಂತೆ ಅದು ಹೃದಯದ
ಪ್ರದೇಶದಲ್ಲಿರುವ ಅನಾಹತ ಚಕ್ರದೆಡೆಗೆ
ಸರಿಯುತ್ತದೆ.
ಜೀವನ್ಮರಣದ ವಿಷಯದಲ್ಲಿಯೂ ಸಹ
ಹೀಗೆಯೇ ಆಗುವುದು. ಹೆಚ್ಚು ಚುರುಕಾಗಿಯೂ
ಶಕ್ತಿಶಾಲಿಯಾಗಿಯೂ ಇದ್ದಷ್ಟೂ ಹೆಚ್ಚು ಪ್ರಾಣವು
ಸಂಗ್ರಹವಾಗಿ ಹಣೆಯಲ್ಲಿ ಕೇಂದ್ರೀಕೃತವಾಗುತ್ತದೆ.
ಒಳಬರುವ ಉಸಿರು ಹೆಚ್ಚು ಪ್ರಾಣವನ್ನು ತರುತ್ತಿರುವಾಗ ಹಾಗೂ ಹೊರಹೋಗುವ ಉಸಿರು ಖಾಲಿಯಾಗುತ್ತಿದ್ದಾಗ ನಿಮ್ಮ ಪ್ರಾಣವು ಹಣೆಯಲ್ಲಿ ಕೇಂದ್ರೀಕೃತವಾಗುತ್ತದೆ. ಒಳಬರುವ ಉಸಿರು ಕಡಿಮೆ ಪ್ರಾಣವನ್ನು ತಂದು ಹೊರಹೋಗುವ ಉಸಿರು ಹೆಚ್ಚು ಪ್ರಾಣವನ್ನು ಹೊರಹಾಕುತ್ತಿದ್ದರೆ, ಪ್ರಾಣವು ನಿಧಾನವಾಗಿ ಕಂಠದ ಕೇಂದ್ರವಾದ ವಿಶುದ್ಧಿ ಚಕ್ರಕ್ಕೆ ಜರುಗುತ್ತದೆ. ಒಳಬರುವ ಉಸಿರು ಪ್ರಾಣವನ್ನು ತರದಯೇ ಇದ್ದು, ಹೊರಹೋಗುವ ಉಸಿರು ಪ್ರಾಣವನ್ನು ಹೊರಹಾಕುತ್ತಿದ್ದರೆ, ಸಂಪೂರ್ಣವಾಗಿ ಹೃದಯಕೇಂದ್ರವಾದ ಅನಾಹತ ಚಕ್ರಕ್ಕೆ ಬರುತ್ತದೆ.
> ಕನಸು ಹಾಗೂ
> ನಿದ್ರೆ, ಜೀವನ
> ಹಾಗೂ
> ಮರಣಗಳನ್ನು
> ಪ್ರಾಣವೆಂಬ ಒಂದೇ
> ಜೀವನಾಳದಿಂದ
> ನಿಭಾಯಿಸಬಹುದು.
ವಾಸ್ತವವಾಗಿ, ಬದುಕಿನಿಂದ ಸಾವಿಗೆ
ಜರುಗುವುದು, ಎಚ್ಚರದ ಸ್ಥಿತಿಯಿಂದ ಗಾಢ
ನಿದ್ರಾಸ್ಥಿತಿಗೆ ಜರುಗವುದೆಂಬ ಈ ಎರಡೂ
ಕ್ರಿಯೆಗಳು ನೇರವಾಗಿ ಪ್ರಾಣದ ಚಲನೆಗೆ
ಸಂಬಂಧಿಸಿವೆ. ಪ್ರಾಣ ಚಲನೆಗಳಾದ ಉಚ್ಛ್ವಾಸ,
ನಿಶ್ವಾಸಗಳೆರಡನ್ನೂ ಸರಿಯಾಗಿ ನಿಭಾಯಿಸಿದ್ದೇ
ಆದಲ್ಲಿ, ಜೀವನ್ಮರಣಗಳನ್ನೂ ಕನಸು - ಗಾಢ
ನಿದ್ರೆಗಳನ್ನೂ ನಿಭಾಯಿಸಬಲ್ಲಿರಿ. ಕನಸು ಹಾಗೂ
ನಿದ್ರೆ, ಜೀವನ ಹಾಗೂ ಮರಣಗಳನ್ನು ಈ ಒಂದು
ಕೀಲಿ ಕೈಯಾದ, ಜೀವನಾಳವಾದ 'ಪ್ರಾಣ'ದಿಂದ
ನಿಭಾಯಿಸಬಹುದು.
ಬದುಕು - ಸಾವುಗಳ ಚಕ್ರದ ನಿಲುಗಡೆ
ಕನಸಿನ ಸ್ಥಿತಿಗೆ ಹೋದಾಗ ನಿಮ್ಮ ಪ್ರಜ್ಞೆಯು ನಿಧಾನವಾಗಿ ಮಸುಕಾಗುತ್ತಿದ್ದಾಗ, ನಿದ್ರಾವಶರಾಗುತ್ತಿದ್ದಾಗ, ನಿಮಗೆ ಅರಿವಿನಿಂದಿರಲು ಸಾಧ್ಯವಾದರೆ, ನೀವು ಕನಸನ್ನೇ ಬದಲಾಯಿಸಲು ಸಾಧ್ಯವಾಗುತ್ತದೆ.
ಕನಸನ್ನು ಬದಲಾಯಿಸಬಲ್ಲಿರಾದರೆ ನೀವು
ಮಾಡುವ ಮೊದಲನೆಯ ಕೆಲಸವೆಂದರೆ ಕನಸು
ಕಾಣುವುದನ್ನು ನಿಲ್ಲಿಸುವುದು ಎಂದು ಸ್ಪಷ್ಟವಾಗಿ
ತಿಳಿಯಿರಿ. ನೀವು ಕನಸು ಕಾಣುವುದನ್ನು ಏಕೆ
ನಿಲ್ಲಿಸುವಿರಿ ಎಂದರೆ, ಕನಸಿನ ನಿಷ್ಪಯೋಜಕತೆ
ನಿಮಗೆ ತಿಳಿದಿದೆ. ಕನಸು ಕಾಣುವುದರಲ್ಲಿ ಸಮಯ
ಮತ್ತು ಶಕ್ತಿಗಳು ಹಾಳಾಗುತ್ತವೆಂದು ನೀವು
ತಿಳಿದಿರುತ್ತೀರಿ. ಕನಸಿನ ಅರಿವಿರುವವನು ಎಂದಿಗೂ
ಕನಸು ಕಾಣುವುದಿಲ್ಲ. ಆತನು ಕನಸು ಕಾಣುವುದನ್ನು
ನಿಲ್ಲಿಸುತ್ತಾನೆ. ಜೀವನದ ಬಗ್ಗೆ ಅರಿವಿರುವವನು
ಬದುಕು ಸಾವಿನ ಚಕ್ರದಿಂದ ಮುಕ್ತನಾಗುತ್ತಾನೆ.
ಮತ್ತೊಂದು ಜನ್ಮವನ್ನೆತ್ತುವುದಿಲ್ಲ.
ಈ ವಿಷಯವನ್ನು ಗಮನಿಸಿರಿ: ಸಾವು ಎಂಬ ಪದವನ್ನು ನಾನು ಬಳಸಿದಾಗ, ಆತ್ಮಹತ್ಯೆ ಮಾಡಿಕೊಳ್ಳುತ್ತೀರೆಂದು ಹೇಳುತ್ತಿಲ್ಲ. ಜೀವನವನ್ನು ಅರಿತಾಗ ಸಾವನ್ನು ಪ್ರವೇಶಿಸುತ್ತೀರಿ ಎಂದಾಗ ನೀವು ಆತ್ಮಹತ್ಯೆಮಾಡಿಕೊಳ್ಳುತ್ತೀರಿ ಎಂದರ್ಥವಲ್ಲ. ಸಾಮಾನ್ಯವಾದ ರೀತಿಯಲ್ಲಿ ಜೀವಿಸುವುದನ್ನು ನಿಲ್ಲಿಸುತ್ತೀರಿ ಎಂದರ್ಥ. ನಿಮ್ಮನ್ನು ಗುರುತಿಸಿಕೊಳ್ಳುವುದನ್ನು ನಿಲ್ಲಿಸುತ್ತೀರಿ. ನಿಮ್ಮ ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ನೀವು ಒಬ್ಬ ಹೊಸ ವ್ಯಕ್ತಿಯಾಗಿ ಜನ್ಮತಾಳುತ್ತೀರ.
ಪ್ರತಿದಿನವೂ ಪ್ರಾಣವು ಹೃದಯಚಕ್ರವಾದ ಅನಾಹತ ಚಕ್ರಕ್ಕೆ ಇಳಿದಾಗ, ಅದರ ಅರಿವಿರಲು ಸಾಧ್ಯವಾದರೆ, ನಿಮ್ಮ ಕನಸುಗಳನ್ನು ಮತ್ತು ಗಾಢ ನಿದ್ರೆಯನ್ನು ನಿಲ್ಲಿಸಲೂ, ಬದಲಾಯಿಸಲೂ, ನಿಯಂತ್ರಿಸಲೂ ಸಾಧ್ಯ. ಪ್ರತಿ ಸಲ ನಿದ್ರಿಸುವಾಗಲೂ ಪ್ರಾಣವು ಆಜ್ಞಾಚಕ್ರದಿಂದ ಅನಾಹತ ಚಕ್ರಕ್ಕೆ ಇಳಿದಾಗ, ಅದರ ಅರಿವಿರಲು ನಿಮಗೆ ಸಾಧ್ಯವಾದರೆ, ನಿಮ್ಮ ಜೀವಿತಕಾಲದ ಅಂತ್ಯದಲ್ಲಿ ಬದುಕು, ಸಾವುಗಳನ್ನು ಬದಲಾಯಿಸಬಲ್ಲಿರಿ. ನಿಮಗೆ ಬೇಕೆನಿಸಿದರೆ ಅದನ್ನು ಸ್ವಲ್ಪ ಹಿಂದಕ್ಕೂ ತರಬಹುದು, ಮುಂದಕ್ಕೂ ಹಾಕಬಹುದು. ನಿಮಗೆ ಬೇಕಾದಂತೆ ಆಡಬಹುದು.
ಧ್ಯಾನ ತಂತ್ರ
ಈ ತಂತ್ರದಲ್ಲಿ ಎರಡು ಭಾಗಗಳಿವೆ. ಒಂದು
ನಿದ್ರೆಹೋಗುವಾಗ ಹಾಸಿಗೆಯ ಮೇಲೆ ಮಲಗಿ
ಮಾಡುವುದು. ಎರಡನೆಯದು ದಿನವಿಡೀ ನೆನಪು
ಮಾಡಿಕೊಂಡಾಗಲೆಲ್ಲಾ ಮಾಡುವಂತಹುದು.
ಮೊದಲನೆಯ ಭಾಗವು ಎರಡನೆಯ ಭಾಗವನ್ನು
ಮಾಡಲೂ, ಎರಡನೆಯ ಭಾಗವು ಮೊದಲನೆಯ
ಭಾಗವನ್ನು ಮಾಡಲೂ ಹೆಚ್ಚು
ಶಕ್ತಿಯನ್ನುಂಟುಮಾಡುತ್ತದೆ. ಅವು ಒಂದಕ್ಕೊಂದು
ಪೂರಕ.
ಮೊದಲನೆಯ ಭಾಗ : ಮಲಗಿಕೊಂಡಾಗ, ನಿದ್ರೆ
ಮಾಡುವ ಮೊದಲು, ಆಜ್ಞಾಚಕ್ರ ಅಥವಾ ಭ್ರೂ
ಮಧ್ಯದ ಮೂರನೆಯ ಕಣ್ಣಿನ ಜಾಗವನ್ನು
ಸ್ಮರಿಸಿಕೊಳ್ಳಿರಿ. ಕೇಂದ್ರೀಕರಿಸಬೇಡಿರಿ.
ಬಲಾತ್ಕರಿಸಿಕೊಂಡರೂ, ಕೇಂದ್ರೀಕರಿಸಿದರೂ
ನಿದ್ದೆಗೆಟ್ಟು ತಲೆನೋವು ಬರುತ್ತದೆ. ಕೇವಲ ಆ
ಜಾಗವನ್ನು ಆರಾಮವಾಗಿ ಒಂದು ಹೂವನ್ನು ನೋಡುವಂತೆ ಏನೂ ಯೋಚಿಸದೆ, ಕೇವಲ ಆ ಜಾಗವನ್ನು ಸ್ಮರಿಸಿರಿ. ನಿಧಾನವಾಗಿ ವಿಶ್ರಾಂತವಾದಂತೆ ಭಾಸವಾಗಿ, ನಿಧಾನವಾಗಿ ಗಾಢನಿದ್ರಾ ಸ್ಥಿತಿಗೆ ಹೋಗುತ್ತಿರುವುದನ್ನು ಕಾಣುತ್ತೀರಿ.
ಈ ಗಾಢನಿದ್ರೆಗೆ ತೆರಳುವಾಗ ಅರಿವಿನಿಂದಿರಿ, ಅಷ್ಟೇ ಸಾಕು. ಮೊದಲನೆಯ ದಿನ ನಿದ್ರೆಯೇ ಬರುವುದಿಲ್ಲವೆನಿಸಿ ಹತ್ತು, ಹದಿನೈದು ನಿಮಿಷಗಳು ನಿದ್ರೆ ನಿಧಾನವಾಗಬಹುದು. ಚಿಂತಿಸಬೇಡಿರಿ. ಆಜ್ಞಾ ಚಕ್ರದಲ್ಲಿ ಪ್ರಾಣದ ಚಲನೆಯ ಬಗ್ಗೆ ಕೇವಲ ಅರಿವಿರಲಿ.
ನಾನು ಕನಸುಕಾಣುತ್ತಿದ್ದೇನೆಂಬ ಅರಿವಿರುತ್ತದೆ.
ಕನಸು ಮುಂದುವರೆಯಲಿ ಎನಿಸಿದರೆ
ಮುಂದುವರೆಸುವಿರಿ. ಹಾಗನ್ನಿಸದಿದ್ದರೆ ಅದರಿಂದ
ಹೊರಬರುವಿರಿ. ಕನಸಿಗೆ ತೀವ್ರತೆ ಇರುವುದಿಲ್ಲ.
ಮುಂದಿನ ಹಂತದಲ್ಲಿ ಕನಸಿಲ್ಲದ ನಿದ್ರೆ
ಬರಲಾರಂಭಿಸುತ್ತದೆ. ಅದು ಇನ್ನೂ ಗಾಢವಾದ
ಸ್ತರ. ಒಂದು ಸಲ ಕನಸಿಲ್ಲದ
ನಿದ್ರೆಬರಲಾರಂಭಿಸಿದರೆ ಕನಸಿಲ್ಲದ ದಿನವೂ
ಇರಲಾರಂಭಿಸುತ್ತದೆ. ಕನಸಿಲ್ಲದ ದಿನ ಎಂದರೆ
ಹಗಲುಗನಸುಗಳಿಲ್ಲದೆ ನಿಮ್ಮ ಶಕ್ತಿಯು
ರಕ್ಷಣೆಯಾಗುತ್ತದೆ ಎಂದರ್ಥ.
ನಿಮಗೆ ಪ್ರಾಣದ ಅರಿವಿದ್ದರೆ ಅಷ್ಟೇ ಸಾಕು. ಅದು ತಾನಾಗಿಯೇ ಇನ್ನೂ ಉನ್ನತವಾದ ಶಕ್ತಿಗೆ ಹಿಂದಿರುಗುತ್ತದೆ ಮತ್ತು ಪ್ರಾಣದ ಹರಿವು ನಿಮ್ಮೆಲ್ಲ ವ್ಯಾಧಿಗಳಿಗೂ ನೇರವಾಗಿ ಸಂಬಂಧಿಸಿರುವುದರಿಂದ ನಿಮ್ಮ ದೇಹವು ತಾನಾಗಿಯೇ ಗುಣಹೊಂದುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ನಿಮ್ಮ ಕನಸನ್ನು ನಿಮಗೆ ಬದಲಾಯಿಸಲಾದರೆ, ನಿಮ್ಮ ಕನಸನ್ನು ನಿಭಾಯಿಸಲಾದರೆ, ನಿಮಗೆ ಜೀವನದ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿ ಸಾಮರ್ಥ್ಯಗಳು ಇರುತ್ತವೆ.
ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ - 2 - ನಿತ್ಯಾನಂದ ಸ್ಪುರಣ ಧ್ಯಾನ ಕಾರ್ಯಕ್ರಮ
(LBP Level 2 - NSP)
ನಮ್ಮ ಎರಡನೇ ಹಂತದ ಧ್ಯಾನ
ಕಾರ್ಯಕ್ರಮವಾದ ಎಲ್ ಬಿಪಿ ಲೆವೆಲ್ 2 -
ನಿತ್ಯಾನಂದ ಸ್ಪುರಣ ಧ್ಯಾನ ಕಾರ್ಯಕ್ರಮವು ನಿಮ್ಮ
ಜೀವನದೊಳಕ್ಕೆ ನಿಮ್ಮನ್ನು ಪಯಣಿಸುವಂತೆ ಮಾಡಿ,
ಅದೇ ಸಮಯದಲ್ಲಿ ಸಾವಿನ ರಹಸ್ಯಗಳನ್ನು
ಬಯಲಿಗೆಳೆಯುತ್ತದೆ. ನೀವು ಸಾಮಾನ್ಯವಾಗಿ
ಹೊರುವ ಭಾವನೆಗಳ ಹೊರೆಯನ್ನು ಇಳಿಸುವ
ಮೂಲಕ ನಿಮ್ಮ ಅಂತರಂಗವನ್ನು ಶುದ್ಧವಾಗಿಯೂ
ಸ್ವಚ್ಛವಾಗಿಯೂ ಇಡುತ್ತದೆ. ಆನಂದಮಯವಾಗಿ
ಜೀವಿಸಿ ಶಾಂತವಾಗಿ ಪ್ರಾಣಬಿಡುವುದನ್ನು
ಕಲಿಸುತ್ತದೆ. ಸಾವಿನ ಬಗ್ಗೆ ಸರಿಯಾದ
ತಿಳಿವಳಿಕೆಯನ್ನು ನೀಡುವುದರಿಂದಾಗಿ, ಜೀವನವು
ಹೆಚ್ಚು ಸಂತೋಷದಾಯಕವಾದುದೂ
ಅರ್ಥಪೂರ್ಣವಾದುದೂ ಆಗುತ್ತದೆ.
ಈ ಧ್ಯಾನ ಕಾರ್ಯಕ್ರಮವು ನಿಮ್ಮ
ಚೈತನ್ಯಪದರಗಳನ್ನು ಒಂದೊಂದಾಗಿ ತೆರೆಯುತ್ತದೆ.
ನೋವು ನಲಿವುಗಳು, ತಪ್ಪಿತಸ್ಥ ಭಾವನೆ ಹಾಗೂ
ಆಸೆಗಳು ಹೊರಹೊಮ್ಮುತ್ತವೆ. ಇವುಗಳು ಒಮ್ಮೆ
ತೆರೆದುಕೊಂಡು ಗುಣಹೊಂದಿದಲ್ಲಿ ನಿಮ್ಮಲ್ಲಿ
ಭಗವಂತನ ಒಂದು ಮಿನುಗುನೋಟವನ್ನು
ಅನುಭವಿಸುವಿರಿ.