KAILASA Library/ಜೀವನ್ಮುಕ್ತಿ/ಸಾವು ಎಂಬುದು ಒಂದು ಸಂಭ್ರಮದಾಚರಣೆSign in
ಜೀವನ್ಮುಕ್ತಿ

ಸಾವು ಎಂಬುದು ಒಂದು ಸಂಭ್ರಮದಾಚರಣೆ

This text was machine-transcribed from the printed book and may contain errors. Select the words and choose “Report a mistake”.

ಕರ್ಮ ಎಂಬ ವಿಷಯದಲ್ಲಿರುವ ನಮ್ಮ
ಆಸಕ್ತಿಯು ಸಾವಿನ ಭಯದಲ್ಲಿ ಅಡಗಿದೆ. ಅದು
ಅಪರಿಚಿತವಾದುದರ ಮೇಲಿರುವ ಒಂದು
ಆದ್ಯಭಯ. ಈ ಜನ್ಮದ ನಮ್ಮ ಬಹುತೇಕ ಕೃತ್ಯಗಳು,
ಮರಣಾನಂತರ ಇನ್ನೂ ಉತ್ತಮವಾದ
ಜಾಗದಲ್ಲಿರಬೇಕೆಂಬ ಬಯಕೆಯಿಂದುಯಿಂದಲೋ
ಅಥವಾ ಇನ್ನೂ ಕೆಳಮಟ್ಟದ ಜಾಗದಲ್ಲಿ
ಇರಬಾರದೆಂಬ ಭಯದಿಂದಲೋ ನಡೆಸಲ್ಪಡುತ್ತವೆ.
ದೇಹ ಮತ್ತು ಮನಸ್ಸುಗಳನ್ನು ಬಿಟ್ಟುಹೋಗಬೇಕಾದ
ಈ ಭಯವು ಯುಗಯುಗಗಳಿಂದಲೂ ಇದೆ.

ಯಯಾತಿಯ ಕಥೆ:

ಮಹಾಭಾರತದಲ್ಲಿ ಒಂದು ಸುಂದರವಾದ ಕಥೆಯಿದೆ:

ಹಿಂದೊಮ್ಮೆ ಯಯಾತಿ ಎಂಬ ಅರಸನಿದ್ದನು. ಆತನು
ಚೆನ್ನಾಗಿ ರಾಜ್ಯಭಾರಮಾಡುತ್ತಾ ಜೀವನದ ಸಕಲ
ಭೌತಿಕ ಹಾಗೂ ಮಾನಸಿಕ ಸುಖಗಳನ್ನೂ
ಭೋಗಿಸುತ್ತಾ ನೂರು ವರ್ಷಗಳ ಕಾಲ ಬಹಳ
ಸುಖವಾಗಿದ್ದನು. ನೂರು ವರ್ಷಗಳ ಕೊನೆಯಲ್ಲಿ
ಈ ಲೋಕವನ್ನು ಬಿಡಬೇಕಾಗಿ ಬಂದಾಗ
ಯಮಧರ್ಮರಾಯನು ಆತನನ್ನು ಕರೆದೊಯ್ಯಲು
ಬಂದನು. ಯಮನನ್ನು ನೋಡಿ ದಿಗ್ಧಾಂತನಾದ
ರಾಜನು, ‘ಇಷ್ಟು ಬೇಗ ನೀನೇಕೆ ಬಂದುಬಿಟ್ಟೆ?
ಅದೂ ಇದ್ದಕ್ಕಿದ್ದಂತೆಯೇ, ಯಾವ ಸೂಚನೆಯನ್ನು
ನೀಡದೆಯೇ ಬಂದೆಯಲ್ಲಾ? ನಾನಿನ್ನೂ ಜೀವನವನ್ನು
ಸಂಪೂರ್ಣವಾಗಿ ಭೋಗಿಸಿಯೇ ಇಲ್ಲವಲ್ಲಾ.
ಕೃಪೆಮಾಡಿ ನನಗೆ ಜೀವಿಸಲು ಇನ್ನಷ್ಟು ಕಾಲಾವಕಾಶ
ಕೊಡು' ಎಂದು ರೋಧಿಸಿದನು.

ಯಮನು, ಆ ರೀತಿ ಜೀವನವನ್ನು ಹೆಚ್ಚಿಸಲು
ಸಾಧ್ಯವಿಲ್ಲವೆನ್ನಲು ಯಯಾತಿಯು ಬಿಡದೆ
ದಂಬಾಲುಬಿದ್ದು ಕಾಲಾವಧಿಯನ್ನು ಹೆಚ್ಚಿಸೆಂದು
ಬೇಡಿಕೊಂಡನು. ಕೊನೆಗೆ ಯಮನು ಒಂದು
ನಿಯಮಕ್ಕೆ ಒಪ್ಪಿಕೊಂಡನು. ಯಯಾತಿಯ
ಗಂಡುಮಕ್ಕಳಲ್ಲಿ ಯಾರಾದರೊಬ್ಬರು ತಮ್ಮ
ಆಯುಷ್ಯವನ್ನು ಧಾರೆಎರೆದರೆ, ರಾಜನು ಅಷ್ಟುಕಾಲ
ಬದುಕಿರಬಹುದೆಂಬುದೇ ಆ ನಿಯಮವಾಗಿತ್ತು.

ಯಯಾತಿಯು ತನ್ನ ಮಕ್ಕಳಲ್ಲಿ ಒಬ್ಬನನ್ನು ಕೇಳಲು, ಆ ಮಗನು 'ನನ್ನ ಆಯುಷ್ಯವನ್ನು ಧಾರೆಎರೆಯುತ್ತೇನೆ, ನನ್ನ ತಂದೆಯು ಬಾಳಲಿ' ಎಂದು ಒಪ್ಪಿಕೊಂಡು ತನ್ನ ಆಯುಷ್ಯವನ್ನು ಕೊಟ್ಟನು.

ಯಮನು ಯಯಾತಿಯ
ಆಯುಷ್ಯವನ್ನು ನೂರು
ವರ್ಷಗಳ ಕಾಲ
ಹೆಚ್ಚಿಸಿದನು.

ಯಯಾತಿಯು ಹಿಂದಿನಂತೆಯೇ ಸಕಲ ಐಹಿಕ ಭೋಗಗಳನ್ನೂ ಅನುಭವಿಸುತ್ತಾ, ಇನ್ನೂ ನೂರು ವರ್ಷಗಳ ಕಾಲ ಜೀವಿಸಿದನು. ಈ ಕಾಲಾವಧಿಯು ಮುಗಿಯುತ್ತಲೇ ಆತನನ್ನು ಕರೆದೊಯ್ಯಲು ಯಮನು ಪುನಃ ಬಂದನು. ಈ ಬಾರಿಯೂ ಯಯಾತಿಗೆ ಅಷ್ಟು ಬೇಗ ಬಂದ ಯಮನನ್ನು ಕಂಡು ದಿಗ್ಧಮೆಯಾಯಿತು. ಆತನಿಗೆ ತಾನು ತನ್ನ ಬಾಳನ್ನು ಇನ್ನೂ ಸರಿಯಾಗಿ ಬಾಳಿಯೇ ಇಲ್ಲವೆನಿಸಿ, ತಾನು ಸಾಯಲು ಸಿದ್ಧನಾಗಿಲ್ಲವೆಂದೂ, ತನಗೆ ಇನ್ನಷ್ಟು ಕಾಲಾವಧಿ ಬೇಕೆಂದೂ ಬೇಡಿದನು.

ಯಮನು ರಾಜನಿಗೆ ಮತ್ತೊಂದು ಅವಕಾಶಕೊಟ್ಟನು;
ಯಯಾತಿಯ ಮತ್ತೊಬ್ಬ ಮಗನು ತನ್ನ ತಂದೆಗಾಗಿ
ತನ್ನ ಜೀವತೆತ್ತನು ಹಾಗೂ ಯಯಾತಿಗೆ ಮತ್ತೊಂದು
ನೂರು ವರ್ಷಗಳ ಜೀವಾವಧಿ ದೊರಕಿತು.

ಯಯಾತಿಯು ಇನ್ನೂ ನೂರು ವರ್ಷಗಳ ಕಾಲ
ಭೋಗಿಸಿದನು, ನಂತರ ಯಮನು ಆತನನ್ನು
ಕರೆದೊಯ್ಯಲು ಹಿಂದಿರುಗಿದನು. ಪುನಃ
ಯಯಾತಿಯು ಕಾಲಾವಧಿಯನ್ನು ಬೇಡಿದನು, ಆದರೆ
ಯಮನು ಅದೇ ನಾಟಕವನ್ನಾಡಲು ಒಪ್ಪಲಿಲ್ಲ.

ರಾಜನ ಬೇಡಿಕೆಯನ್ನು ಮನ್ನಿಸುವುದರ ಬದಲಾಗಿ
ಈ ಬಾರಿ ಯಮನು ಅನುಕಂಪದಿಂದ, 'ಓ ರಾಜನೇ,
ಜ್ವಾಲೆಗೆ ತೈಲವನ್ನು ಸುರಿದು ಅದನ್ನು ಆರಿಸಲು
ಸಾಧ್ಯವೇ? ಹೆಚ್ಚು ಹೆಚ್ಚಾಗಿ ಭೋಗಿಸುವುದರಿಂದ
ನಿನ್ನ ಆಕಾಂಕ್ಷೆಗಳು
ಈಡೇರುತ್ತವೆಂದುಕೊಂಡಿರುವೆಯಾ?' ಎಂದು
ಹೇಳಿ, ಕೆಲವೇ ಮಾತುಗಳಲ್ಲಿ ಇಡೀ ಜೀವನದ
ಉದ್ದೇಶವನ್ನು ವಿವರಿಸಿದನು. ಕಟ್ಟಕಡೆಗೆ
ಯಯಾತಿಯು ಸತ್ಯವನ್ನರಿತು, ಯಮನನ್ನು
ಹಿಂಬಾಲಿಸಿ, ಭಗವಂತನ ಪಾದಾರವಿಂದಗಳನ್ನು
ಸೇರಿದನು.

ಇಂದ್ರಿಯಗಳಿಗೆ ಇಂದ್ರಿಯ ಸುಖಗಳನ್ನು
ನೀಡುತ್ತಲೇ ಇದ್ದು, ಸಂತೃಪ್ತಿಯನ್ನು ಪಡೆಯಲು
ಸಾಧ್ಯವಿಲ್ಲ. ತೀವ್ರತೆಯಿಂದ ಜೀವಿಸದೆಯೇ ಸಾವಿಗೆ
ನಾವು ಸಿದ್ಧರು ಎಂದು ಭಾವಿಸಲಾಗುವುದಿಲ್ಲ.
ಇಂದ್ರಿಯಗಳನ್ನು ತೃಪ್ತಿಪಡಿಸುವ ಪ್ರಯತ್ನದಲ್ಲಿ
ಇಂದ್ರಿಯಗಳಿಗೆ ಸುಖವನ್ನು ನೀಡುವುದಾಗಲೀ,
ಅಥವಾ ಇಷ್ಟಬಂದಂತೆ ಜೀವಿಸುವುದಾಗಲೀ
ಮಾಡಿದಲ್ಲಿ ತೀವ್ರವಾಗಿ ಜೀವಿಸಿದಂತಾಗುವುದಿಲ್ಲ.
ತೀವ್ರತೆಯಿಂದ ಜೀವಿಸಿದಾಗ, ಮುಕ್ತಿಯು
ತಾನೇತಾನಾಗಿ ಲಭಿಸುತ್ತದೆ.

ನಾವು ಸಾವಿಗೇಕೆ ಹೆದರುತ್ತೇವೆ?

ಸಹಜವಾಗಿಯೇ ನಾವು ಬದಲಾವಣೆಯನ್ನು
ಪ್ರತಿಭಟಿಸುವಂತಹವರು ಮತ್ತು ಸಾವು
ಇದ್ದಕ್ಕಿದ್ದಂತೆಯೇ ಆಗುವಂತಹ
ಬದಲಾವಣೆಯಾಗಿರುವುದರಿಂದ ನಾವು ಸಾವಿಗೆ
ಹೆದರುತ್ತೇವೆ. ಗುರು ಚುವಾಂಗ್ ತ್ಸು ಚೆನ್ನಾಗಿ
ಹೇಳುತ್ತಾರೆ, 'ಭವಿಷ್ಯದಲ್ಲಿ ಬದುಕಬೇಕೆಂಬ

ಮಾನವನ ಹಾತೊರೆಯುವಿಕೆಯೋ ಆತನನ್ನು
ವರ್ತಮಾನದಲ್ಲಿ ಬದುಕಿರಲಾಗದಂತೆ ಮಾಡುತ್ತದೆ’
ಎಂದು.

ನಾವು ಯಾರು ಎಂದು ನಮಗೆ ಗೊತ್ತಿಲ್ಲ,
ಆದ್ದರಿಂದ ನಾವು ಭಯ ಪಡುತ್ತೇವೆ. ನಮ್ಮ
ಕುಟುಂಬ, ಸಂಬಂಧಗಳು, ವೃತ್ತಿ, ಸಂಪತ್ತು,
ಸಾಮಾಜಿಕ ನಿಲುವು ಇವುಗಳ ಆಧಾರದ ಮೇಲೆ
ನಮ್ಮ ಗುರುತನ್ನು ಇಟ್ಟುಕೊಂಡಿರುತ್ತೇವೆ. ನಮ್ಮ
ಗುರುತು ಯಾವ ತಳಹದಿಯ ಮೇಲೆ
ನಿರ್ಮಿತವಾಗಿದೆಯೋ ಸಾವು ಅದನ್ನೇ
ಕಿತ್ತುಹಾಕಿಬಿಡುತ್ತದೆ. ಆದುದರಿಂದ ಸಾವು
ನಮ್ಮದಾಗಿರುವ ಎಲ್ಲವನ್ನೂ ಕಸಿದುಕೊಳ್ಳುತ್ತದೆ
ಎಂದುಕೊಳ್ಳುತ್ತೇವೆ.

ಹಾಗೆ ನೋಡಿದರೆ, ಸಾವಿನ ಬಗ್ಗೆ ನಮ್ಮ ತಿಳಿವಳಿಕೆ ಅಥವಾ ತಪ್ಪು ತಿಳಿವಳಿಕೆಯು, ಸಾವನ್ನು ಒಂದು ಭಯಂಕರವಾದ ಹೆದರಿಕೆಯ ಅನುಭವವನ್ನಾಗಿಸುತ್ತದೆ. ಸಾವನ್ನು ವಿರೋಧಿಸುವವನು ಬದುಕಿದ್ದಾಗಲೇ ಸತ್ತಂತೆ. ಸಾವೆಂಬ ಅಭಿಪ್ರಾಯದಿಂದಲೇ ಹಿಂಸೆಗೊಳಗಾದವನು ಪ್ರತಿನಿಮಿಷವೂ ಸಾಯುತ್ತಾನೆ. ನಾನು 'ಸಾವು' ಎನ್ನುವಾಗ, ಭೌತಿಕ ಸಾವನ್ನು ಮಾತ್ರ ಹೇಳುತ್ತಿಲ್ಲ. ಏನನ್ನಾದರೂ ಕಳೆದುಕೊಳ್ಳುವುದು ಸಾವಿನ ರೂಪವೇ. ಸುಖಜೀವನವನ್ನು ಕಳೆದುಕೊಳ್ಳುವುದು ಒಂದು ರೂಪವಾದರೆ, ಬಂಧುಗಳನ್ನು ಅಗಲುವುದು ಇನ್ನೊಂದು ರೂಪ. ಯಾವ ವಿಧವಾಗಿ ಕಳೆದುಕೊಂಡರೂ ಅದು ಸಾವಲ್ಲದೆ ಮತ್ತೇನಲ್ಲವೆಂಬುದನ್ನು ದಯವಿಟ್ಟು ತಿಳಿದುಕೊಳ್ಳಿರಿ.

ಹುಟ್ಟು-ಸಾವುಗಳ
ವಿಷವರ್ತುಲದಿಂದ
ಪಾರಾಗಬೇಕಾದರೆ
ಜೀವನ್ಮುಕ್ತ-
ರಾಗುವುದೊಂದೇ
ಮಾರ್ಗ.

ಎರಡು ವಿಷಯ-
ಗಳಿವೆ: ನಮ್ಮ ಜೀವನದ
ಅಂತ್ಯದಲ್ಲಿ ಸಂಭವಿಸುವ
ಸಾವು ಮತ್ತು ಮಾನಸಿಕ
ಸಾವು. ನಿಜವಾದ ಸಾವು
ಸಂಭವಿಸುವುದು ಒಂದೇ
ಸಲ. ಆದರೆ ಸಾವಿನ ಭಯದಿಂದ ಆಗುವ ಮಾನಸಿಕ
ಸಾವು ನಮ್ಮ ಜೀವನದಲ್ಲೆಲ್ಲಾ
ಹಾಸುಹೊಕ್ಕಾಗಿರುತ್ತದೆ. ಸಾವಿನ ಬಗ್ಗೆ ನಮ್ಮ
ಅಭಿಪ್ರಾಯ ಹಾಗೂ ಸಾವಿನ ಭಯ, ನಮ್ಮ ಇಡೀ
ಜೀವನಶೈಲಿಯನ್ನು ನಿರ್ಧರಿಸುತ್ತದೆ.

ನಿಮ್ಮ ದೇಹದ ಪ್ರತಿಯೊಂದು ಭಾಗವೂ ಒಬ್ಬರಲ್ಲ ಒಬ್ಬರಿಗೆ ಸಂಬಂಧಿಸಿದೆ. ನಿಮ್ಮ ವ್ಯಕ್ತಿತ್ವ ವೈಯಕ್ತಿಕವಾದುದಲ್ಲ. ಅದು ನೀವೆಂದುಕೊಂಡಂತೆ ಒಬ್ಬಂಟಿಯಾದುದೋ, ಬೇರ್ಪಟ್ಟಿರುವುದೋ ಅಲ್ಲ. ನಾವೆಲ್ಲರೂ ಒಬ್ಬರಿಗೊಬ್ಬರು ಪರಸ್ಪರ ಸಂಪರ್ಕದಿಂದಿರುವವರು. ಆದುದರಿಂದಲೇ ಯಾರನ್ನಾದರೂ ಅಥವಾ ಯಾವುದನ್ನಾದರೂ ಕಳೆದುಕೊಂಡಾಗ ಅಗಾಧವಾದ ಯಾತನೆಗೀಡಾಗುವುದು. ಯಾರನ್ನೇ ಆಗಲಿ, ಯಾವುದನ್ನೇ ಆಗಲಿ, ಕಳೆದುಕೊಳ್ಳುವ ಪ್ರತಿಯೊಂದು ಅನುಭವವನ್ನೇ ನಾನು ಸಾವೆನ್ನುವುದು. ಸಾವಿನ ಭಯವೆಂದರೆ ನಮ್ಮ ಜೀವನ ನಾವೆಂದುಕೊಂಡಂತೆ ಮುಂದುವರಿಯಬೇಕು ಅಥವಾ ಒಂದು ವೇಳೆ ಮುಂದುವರಿಯದಿದ್ದರೆ ಎಂಬ ಭಯ. ನಮಗೆ ‘ಮುಂದೇನು’ ಎಂಬುದರ ಭಯ.

ಸಾವಿನ ರಹಸ್ಯದಲ್ಲಿ ಬದುಕಿನ ಪರಿಹಾರ ಅಡಗಿದೆ

ಅಮೆರಿಕಾದಲ್ಲಿ ಒಮ್ಮೆ ಒಬ್ಬ ಮಹಿಳೆಯು ವಿವೇಕಾನಂದರನ್ನು, 'ಬದುಕು ಎಂದರೇನು?' ಎಂದು ಕೇಳಿದಳು. ವಿವೇಕಾನಂದರು, 'ಭಾರತಕ್ಕೆ ನನ್ನೊಡನೆ ಬನ್ನಿ. ನಾನು ನಿಮಗೆ ತಿಳಿಸುತ್ತೇನೆ' ಎಂದರು. ಆಕೆ 'ನೀವು ನನಗೇನನ್ನು ತಿಳಿಸುತ್ತೀರಿ?' ಎಂದು ಕೇಳಿದಳು.

ಅವರು, 'ಸಾಯುವುದು ಹೇಗೆಂಬುದನ್ನು ಕಲಿಸುತ್ತೇನೆ' ಎಂದರು.

ನಿಮಗೆ ಸಾವಿನ ರಹಸ್ಯ ತಿಳಿದರೆ, ಬದುಕಿನ
ಗುಣಮಟ್ಟವೇ ಬೇರೆಯಾಗುತ್ತದೆ. ಪ್ರತಿಯೊಂದರ
ಮೇಲಿನ ನಿಮ್ಮ ತಿಳಿವಳಿಕೆ ಹಾಗೂ ಅಭಿಪ್ರಾಯ
ಬದಲಾಗುತ್ತದೆ.

ಸಾವೆಂಬುದು ಕೇವಲ ಬದುಕಿನ ಅಂತ್ಯದಲ್ಲಿ
ನಡೆಯುವ ಘಟನೆಯಲ್ಲ. ಅದೊಂದು ಪರಮ
ಜ್ಞಾನ. ಸಾಯುವುದು ಹೇಗೆಂದು ತಿಳಿದರೆ,
ಬದುಕುವುದು ಹೇಗೆಂದು ತಿಳಿಯುತ್ತದೆ. ಬದುಕು
ಸಾವುಗಳು ಒಂದೇ ನಾಣ್ಯದ ಎರಡು ಮುಖಗಳು.
ಸಾವೆಂಬುದನ್ನು ಅರಿತುಕೊಂಡರೆ ಬಾಳುವ
ರೀತಿಯೇ ಸಂಪೂರ್ಣವಾಗಿ ಬೇರೆಯದಾಗುತ್ತದೆ.

ಸಾವಿನೊಳಗೆ ಪ್ರವೇಶ

ಸುಮಾರು ಎಲ್ಲಾ ಸಂಪ್ರದಾಯಗಳೂ ಸಾವನ್ನು ಗೆಲ್ಲುವ, ಸಾವನ್ನು ಮೀರುವ ಪ್ರಯತ್ನವನ್ನು ಮಾಡಿವೆ. ಆದರೆ ನಿಜವಾಗಿಯೂ ಬುದ್ಧಿವಂತರಾದವರು, ಅಂತರ್ಜ್ಞಾನವುಳ್ಳವರು ಸಾಕಷ್ಟು ಪರಿಶ್ರಮದ ನಂತರ, ಸಾವನ್ನು ತಾವು ಸಂಪೂರ್ಣವಾಗಿ ತಪ್ಪು ದಾರಿಯಲ್ಲಿ ನೋಡುತ್ತಿದ್ದೇವೆಂಬುದನ್ನು ಅರ್ಥಮಾಡಿಕೊಂಡರು. ಆಗ ಅವರು 180 ಡಿಗ್ರಿಗಳ ತಿರುವನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದರು. ಸಾವಿನ ವಿಷಯದಲ್ಲಿ ಬೇರೆ ರೀತಿಯಾಗಿ ಕಾರ್ಯೋನ್ಮುಖರಾಗಲು ಪ್ರಾರಂಭಿಸಿದರು.

ಹಿಂದೆ ಬೇರೆ ಯಾರೂ ಮಾಡಾದ, ಯಾರೂ
ತಲುಪದ ಸ್ಥಿತಿಯನ್ನು ತಲುಪಲು, ಧ್ಯಾನದ
ಮಾರ್ಗವನ್ನು ಹಿಡಿದರು. ಆ ಕೆಲವು ಬುದ್ಧಿವಂತರೇ
ಉಪನಿಷತ್ತಿನ ಕಾಲದ ಋಷಿವರ್ಯರು. ಸಾವಿನ
ವಿಷಯದ ಅವರ ಸಂಶೋಧನೆಯ ವರದಿಯೇ
ಕಠೋಪನಿಷತ್.

ಈ ಋಷಿವರ್ಯರು ಸಾವಿನ ಬಗ್ಗೆ ಆಳವಾಗಿ ಸಂಶೋಧಿಸಿ, ಕೊನೆಗೆ ಸಾವನ್ನು ಅರಿಯಲಾಗಲೀ, ಮೀರಲಾಗಲೀ ಅದನ್ನು ಪ್ರತಿರೋಧಿಸುವುದರಿಂದ ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದರು. ಸಾವನ್ನು ಪ್ರತಿರೋಧಿಸುವುದರಿಂದ ಸಾವನ್ನು ಮೀರಿಹೋಗಲಾಗುವುದಿಲ್ಲ. ಹುಟ್ಟು-ಸಾವುಗಳ ವಿಷವರ್ತುಲದಿಂದ ಪಾರಾಗಬೇಕಾದರೆ ಸಾವಿನೊಳಗೆ ಪ್ರವೇಶಿಸಿ, ಸಾವಿನ ಭಯವನ್ನು ಬಿಟ್ಟು ಜೀವನ್ಮುಕ್ತರಾಗುವುದೊಂದೇ ಮಾರ್ಗ.

ಸಾವು ನಿಮ್ಮ ಮೇಲೆ ಪ್ರಭಾವ
ಬೀರುವುದೇಕೆಂದರೆ, ನಿಮಗೆ ಅದರ ಮೇಲಿರುವ
ಅಭಿಪ್ರಾಯ ಹಾಗೂ ನಂಬಿಕೆಗಳಿಂದಲೇ ಎಂಬುದನ್ನು
ದಯವಿಟ್ಟು ಮನಗಾಣಿರಿ, ಅಷ್ಟೇ. ಸ್ವಲ್ಪ
ಕಾಲಾವಕಾಶಮಾಡಿಕೊಂಡು ಸಾವಿನ ಭಯದ ಬಗ್ಗೆ

ಪರ್ಯಾಲೋಚಿಸಿದ್ದೇ ಆದರೆ, ಅದಕ್ಕೆ ನಿಮ್ಮ ಜೀವನವನ್ನೇ ಸಕಾರಾತ್ಮಕವಾಗಿ ಬದಲಾಯಿಸುವ ಶಕ್ತಿ ಇದೆಯೆಂದು ತಿಳಿದುಬರುತ್ತದೆ. ಅದು ಜೀವನಕ್ಕೆ ವಿರುದ್ಧವಾಗಿಲ್ಲ, ಆದರೆ ಸಹಕಾರಿಯಾಗಿದೆ ಎಂಬುದು ತಿಳಿದುಬರುತ್ತದೆ.

ಸಾವೆಂಬುದು ಒಂದು ಆಳವಾದ ವಿಶ್ರಾಂತಿ. ಅದು ಅಂತಿಮ 'ಬಿಡುಗಡೆ'. ಅದು ಹಳೆಯದನ್ನು ಬಿಟ್ಟು, ಹೊಸದನ್ನು ಆರಂಭಿಸುವುದು. ನಿಮ್ಮ ಜೀವಕ್ಕೆ ಬೇಕಾಗಿರುವುದನ್ನು ಈ ದೇಹದ ಮೂಲಕ ಸಾಧಿಸಲು ಸಾಧ್ಯವಿಲ್ಲವೆನಿಸಿದಾಗ, ಅದು ಹೊರಡಲು ನಿರ್ಧರಿಸುತ್ತದೆ. ಈ 'ಹೊರಡುವಿಕೆ', 'ಮುಂದುವರಿಕೆಯನ್ನೇ' ಸಾವೆನ್ನುವುದು.

ವರ್ಷಗಳು ಕಳೆದಂತೆ ನಿಮ್ಮ ಹೊಸ ಮನೆಯು
ಹಳೆಯದಾದಾಗ, ಅದನ್ನು ರಿಪೇರಿಮಾಡಲು
ಯತ್ನಿಸುತ್ತೀರಿ; ಇಲ್ಲವೇ ಅದನ್ನು ಮಾರಿ
ಮತ್ತೊಂದು ಹೊಸ ಮನೆಗೆ ಹೋಗುತ್ತೀರಿ. ಅದೇ
ರೀತಿ, ನಿಮಗೆ ಹೇಗೆ ಬೇಕಾಗಿತ್ತೋ ಆ ರೀತಿಯಲ್ಲಿ
ಜೀವನವನ್ನು ಸಾಗಿಸಲಾಗಲಿಲ್ಲ ಎಂಬ
ಕೊರತೆಯಿದ್ದಲ್ಲಿ, ಈ ದೇಹವನ್ನು ಬಿಟ್ಟು
ಹೊಸದನ್ನು ಪಡೆಯುತ್ತೀರಿ. ಎಲ್ಲವನ್ನೂ ಪುನಃ
ಪ್ರಾರಂಭಿಸಬೇಕು ಎಂದುಕೊಳ್ಳುವ ನಿಮ್ಮ
ಆಯ್ಕೆಯನ್ನೇ ಸಾವೆನ್ನುವುದು.

ರಹಸ್ಯಗಳ ರಹಸ್ಯ

ಮಹಾಭಾರತದಲ್ಲೊಂದು ಸುಂದರವಾದ ಕಥೆಯಿದೆ:

ಯಕ್ಷನು ಯುಧಿಷ್ಠಿರ-
ನನ್ನು ಪ್ರಶ್ನಿಸುತ್ತಾನೆ,
'ಈ ಲೋಕದಲ್ಲಿ
ಅತ್ಯಂತ ರಹಸ್ಯ-
ವಾದುದಾವವುದು?'
ಎಂದು.

ಎಲ್ಲವನ್ನೂ ಪುನಃ
ಪ್ರಾರಂಭಿಸಬೇಕು
ಎಂದುಕೊಳ್ಳುವ
ನಿಮ್ಮ
ಆಯ್ಕೆಯನ್ನೇ
ಸಾವೆನ್ನುವುದು.

ಯುಧಿಷ್ಠಿರನು, 'ಪ್ರತಿದಿನವೂ ಎಷ್ಟೊಂದು ಜೀವಿಗಳು ಯಮನ ಆಲಯಕ್ಕೆ ತೆರಳುತ್ತಿದ್ದರೂ, ಇಲ್ಲಿರುವವರು ತಾವು ಎಂದೆಂದಿಗೂ ಬದುಕಿರುತ್ತೇವೆಂದುಕೊಂಡಿರುತ್ತಾರೆಂಬುದೇ' ಎಂದು ಉತ್ತರಿಸಿದನು.

ನಾವು ಯಾವಾಗಲೂ ಸಾಯುವವರು ಬೇರೆ
ಯಾರೋ ಎಂದೂ, ನಾವಲ್ಲವೆಂದೂ
ಭಾವಿಸುತ್ತೇವೆ. ಸಾವು ನಿಜವಾಗಿಯೂ ಎಲ್ಲಾ
ರಹಸ್ಯಗಳ ರಹಸ್ಯ.

ಸಾವಿನ ವಿಷಯದಲ್ಲಿ ಎರಡು ಮಾತ್ರ ಸತ್ಯ.
ಒಂದು, ಯಾವುದೋ ಒಂದು ಸಮಯದಲ್ಲಿ
ಸಾಯುತ್ತೇವೆಂಬುದು. ಮತ್ತೊಂದು, ಯಾವಾಗ,
ಹೇಗೆ ಸಾಯುವೆವೆಂಬುದನ್ನು ತಿಳಿಯದಿರುವುದು.

ಹುಟ್ಟಿದ್ದೆಲ್ಲವೂ ಸಾಯಲೇಬೇಕು. ಅದು ಪ್ರಕೃತಿ ನಿಯಮ.

ಬುದ್ಧನ ಜೀವನದ ಒಂದು ಕಥೆ:

ಒಮ್ಮೆ ಒಬ್ಬ ಮಹಿಳೆಯು ತನ್ನ ಸತ್ತ
ಮಗುವನ್ನೆತ್ತಿಕೊಂಡು ಬುದ್ಧನ ಬಳಿಗೆ ಬಂದಳು.
ತನ್ನ ಒಂದೇ ಮಗುವಿನ ಸಾವಿನ ದುಃಖದಿಂದ ಆಕೆ
ಹುಚ್ಚಳಂತಾಗಿದ್ದಳು. ಆಕೆಯು ಬುದ್ಧನನ್ನು ಕಂಡು,
'ಗುರುವೇ, ನನ್ನ ಕಂದನನ್ನು ಪುನಃ ಜೀವಕ್ಕೆ

ತರುವಂತಹ ಯಾವುದಾದರೂ ಔಷಧಿಯನ್ನು ದಯಪಾಲಿಸಿರಿ' ಎಂದು ರೋಧಿಸಿದಳು.

ಬುದ್ಧನು 'ಒಂದು ಹಿಡಿ ಸಾಸಿವೆ ಕಾಳನ್ನು
ತೆಗೆದುಕೊಂಡು ಬಾ' ಎಂದನು. ಆ ಮಹಿಳೆಯು ಆ
ಕ್ಷಣವೇ ಎದ್ದು ಸಾಸಿವೆಯನ್ನು ತರಲು ಹೊರಟಳು.
ಆಗ ಬುದ್ಧನು, 'ಆ ಸಾಸಿವೆಯನ್ನು ಸಾವಿಲ್ಲದ
ಮನೆಯಿಂದ ತರಬೇಕು. ಆ ಮನೆಯಲ್ಲಿ ಯಾರೂ
ತಮ್ಮ ಪ್ರೀತಿಪಾತ್ರರಾದ ಮಗು, ಗಂಡ, ತಂದೆ-
ತಾಯಿ, ಸ್ನೇಹಿತರನ್ನು ಕಳೆದುಕೊಂಡಿರಬಾರದು'
ಎಂಬುದನ್ನು ಸೇರಿಸಿದನು.

ಆ ಮಹಿಳೆಯು ಮನೆಯಿಂದ ಮನೆಗೆ ಅಲೆದಾಡಿದಳು.
ಹತಾಶಳಾಗಿ ರೋಧಿಸುತ್ತಿದ್ದ ಆಕೆಯ ಮೇಲಿನ
ಕನಿಕರದಿಂದ ಜನರು ಆಕೆಗೆ ಸಾಸಿವೆಯನ್ನು ಕೊಡಲು
ಮುಂದಾದರು. ಆದರೆ ಆ ಮನೆಯಲ್ಲಿ ಅವರು ತಮಗೆ
ಪ್ರೀತಿಪಾತ್ರರಾದವರು ಯಾರಾದರೂ ಸತ್ತಿರುವರೇ
ಎಂದು ವಿಚಾರಿಸಿದಾಗ, ಒಬ್ಬರಲ್ಲಾ ಒಬ್ಬರು
ಮರಣಿಸಿದ ಸಂಗತಿ ಇರುತ್ತಿತ್ತು.

ಸೂರ್ಯಾಸ್ತವಾಗುವವರೆಗೂ ಆಕೆಯು ಮನೆಯಿಂದ
ಮನೆಗೆ ಹೋದಳು. ಆದರೆ ಸಾವು ಸಂಭವಿಸದ
ಮನೆಯೇ ಸಿಗಲಿಲ್ಲ. ನಿಧಾನವಾಗಿ ಸಾವು
ಅನಿವಾರ್ಯವೆಂಬ ಸತ್ಯವು ಆಕೆಯಲ್ಲಿ
ಗೋಚರಿಸಲಾರಂಭಿಸಿತು. ಆಕೆಯು ತನ್ನ ಮಗನ
ದೇಹದ ಅಂತ್ಯ ಸಂಸ್ಕಾರವನ್ನು ಮಾಡಿ ಬುದ್ಧನೆಡೆಗೆ
ತೆರಳಿದಳು. ಬುದ್ಧನ ಪಾದಗಳಿಗೇರಗಿ, 'ಗುರುವೇ,
ನನಗೆ ಸತ್ಯವನ್ನು ಬೋಧಿಸಿರಿ. ಸಾವೆಂದರೇನು?
ಸಾವಿನ ನಂತರ ಏನಿರುತ್ತದೆ?' ಎಂದು ಕೇಳಿದಳು.

ಆಕೆಯು ಬುದ್ಧನ ಶಿಷ್ಯೆಯಾಗಿ ಉಳಿದ ಜೀವನವನ್ನು ಬುದ್ಧನ ಸೇವೆಯಲ್ಲಿ ಕಳೆದಳು.

ಸುಂದರವಾದೊಂದು ನಾಣ್ಣುಡಿ ಇದೆ,
‘ನಾಳೆಯೋ, ಮರುಜನ್ಮವೋ, ಯಾವುದು
ಮೊದಲೋ ಅರಿಯೆವು' ಎಂದು.

ಪುನರ್ಜನ್ಮದ ವಿಷಯವು ಜನಜನಿತವಾಗಿಲ್ಲ.
ಏಕೆಂದರೆ, ಅದನ್ನು ವಿಜ್ಞಾನದಿಂದ
ಸಾಬೀತುಪಡಿಸಲಾಗುವುದಿಲ್ಲ. ಆದರೂ, ಈಗೀಗ
ಅನೇಕ ವೈದ್ಯರು, ಮನಃಶಾಸ್ತ್ರಜ್ಞರು ಸಾವಿಗೆ
ಸನ್ನಿಹಿತವಾದ ಅನುಭವಗಳನ್ನು ದಾಖಲಿಸಿ,
ಅದೊಂದು ಬಿಸಿ ಸುದ್ದಿಯಾಗಿದೆ. ಸಾವಿಗೆ
ಸನ್ನಿಹಿತವಾದ ಸಾವಿರಗಟ್ಟಲೆ ದಾಖಲೆಗಳಿದ್ದು,
ಅವುಗಳು ಬಹುತೇಕ ಒಂದೇ
ನಮೂನೆಯಾಗಿರುತ್ತವೆಯೆಂದು ಅನೇಕರು
ಅಭಿಪ್ರಾಯಪಟ್ಟಿದ್ದಾರೆ. ಅವರೆಲ್ಲರೂ ತಮ್ಮ
ಜೀವನಗಳಲ್ಲಿ ನಡೆದಿದ್ದ ಘಟನೆಗಳನ್ನೇ
ಪುನರ್ಜೀವಿಸುತ್ತಾರೆ. ಸಂಮೋಹನಾಕಾರರು
ಜನರನ್ನು ಅವರ ಹಿಂದಿನ ಜನ್ಮಗಳಿಗೆ
ನಿವರ್ತಿಸಿದ್ದಾರೆ. ಇವೂ ಸಹ ಒಂದು
ನಮೂನೆಯಾಗಿರುತ್ತವೆ. ಇದು ಸಾವಿರ
ವರುಷಗಳಿಗೂ ಹಿಂದೆ ಋಷಿಗಳು
ಕಠೋಪನಿಷತ್ತಿನಲ್ಲಿ ದಾಖಲಿಸಿರುವಂತೆ, ಸಾವು
ಸಂಭವಿಸಿದಾಗ ಏನಾಗುತ್ತದೆಂದು ಹೇಳಿರುವುದಕ್ಕೆ
ಇದು ಅನುಗುಣವಾಗಿದೆ.

ನನ್ನೆದುರಿಗಾದ ಸಾವು - ಜ್ಞಾನೋದಯ ಹೊಂದುವ ಮೊದಲು

ಈ ಘಟನೆಯು ನಾನು ಜ್ಞಾನೋದಯ
ಹೊಂದುವ ಮೊದಲು ಮೊದಲು ನನ್ನ
ಪಾರಿವ್ರಾಜಕದ ದಿನಗಳಲ್ಲಿ ನಡೆದುದು.

ಹಿಂದೂಗಳ ಆಧ್ಯಾತ್ಮಿಕ ಕೇಂದ್ರವಾದ
ವಾರಣಾಸಿಯ ಬಳಿ ಇರುವ ಘಾಸಿಯಾಬಾದ್
ಎಂಬ ಹಳ್ಳಿಯ ಬಳಿ ವಾಸಿಸುತ್ತಿದ್ದೆ. ಹಿಂದೂಗಳು
ಅವರ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ
ನೀಡಲು ಬಯಸುವ ಈ ಪಟ್ಟಣದಲ್ಲಿ ಪ್ರತಿದಿನ
ಬಂದು ಹೋಗುವ ಜನಸಮುದಾಯ
ಏನಿಲ್ಲವೆಂದರೂ ಎರಡು ಲಕ್ಷ.

ಅಲ್ಲಿ ನಾನು ಆಸ್ಪತ್ರೆಯ ತೀವ್ರನಿಗಾಘಟಕ(ಐ.ಸಿ.ಯು.)ದಲ್ಲಿ ನರಳುತ್ತಿದ್ದ ಹಿರಿಯ ಸಾಧುಗಳೊಬ್ಬರನ್ನು ನೋಡಿಕೊಳ್ಳುತ್ತಿದ್ದೆ. ವೈದಿಕ ಸಂಪ್ರದಾಯದಂತೆ, ಯುವ ಸಾಧುಗಳು ಹಿರಿಯ ಸಾಧು-ಸನ್ಯಾಸಿಗಳನ್ನು ನೋಡಿಕೊಳ್ಳುತ್ತಾರೆ. ಆ ಹಳ್ಳಿಯಲ್ಲಿ ಯುವ ಸಾಧುವಾಗಿದ್ದ ನಾನು ಆ ಹಿರಿಯ ಸಾಧುವನ್ನು ನೋಡಿಕೊಳ್ಳುತ್ತಿದ್ದೆ.

ಒಂದು ದಿನ ಅವರೊಂದಿಗಿದ್ದಾಗ, ಇದ್ದಕ್ಕಿದ್ದಂತೆ ಅವರ ಪಕ್ಕದ ಮಂಚದಲ್ಲಿದ್ದವರು ಸಾಯುವುದರಲ್ಲಿದ್ದಾರೆಂಬ ಸೂಚನೆ ಬಂದಿತು. ಆತನು ತನ್ನ ಜೀವಕ್ಕಾಗಿ ಒದ್ದಾಡುತ್ತಿದ್ದನು. ಆತನಲ್ಲಿ ಏನಾಗುತ್ತದೆ ಎಂಬುದನ್ನು ನಿಚ್ಚಳವಾಗಿ ಕಾಣಬಲ್ಲವನಾಗಿದ್ದೆ. ಆಗಾಗಲೇ ನನಗೆ ಗಾಢವಾದ ಆಧ್ಯಾತ್ಮಿಕ ಅಥವಾ 'ಸತೋರಿ'ಯ ಅನುಭವವಾಗಿತ್ತು. ಆದರೆ, ಪೂರ್ಣ ಜ್ಞಾನೋದಯವಾಗಿರಲಿಲ್ಲ, ನನ್ನ ಜೀವನದ ಉದ್ದೇಶ ಈಡೇರಿರಲಿಲ್ಲ. ನಾನಿನ್ನೂ ಅನ್ವೇಷಕನೇ ಆಗಿದ್ದು, ಸಾಕ್ಷಾತ್ಕಾರದ ನಂತರದ ಶಕ್ತಿ ಸ್ಪೋಟಕ್ಕಾಗಿ ನನ್ನ ದೇಹವು ಸಿದ್ಧವಾಗುತ್ತಿತ್ತು.

ಅನೇಕ ವೈದ್ಯರು ಆತನಿಗೆ ವಿಷಮ ವೈದ್ಯಕೀಯ ಗಮನ ಹಾಗೂ ನೆರವನ್ನು ನೀಡಲು ಪ್ರಯತ್ನಿಸುತ್ತಿದ್ದರು. ಆತನು ಎದುಸಿರೆಳೆಯುತ್ತಿದ್ದನು. ನನಗೆ ಆತನಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಪ್ರಾಣವು ದೇಹದಿಂದ ಬೇರೆ ಆಗಿ ಹೋಗುವುದನ್ನು ಬಹಳ ಸ್ಪಷ್ಟವಾಗಿ ನೋಡಬಲ್ಲವನಾಗಿದ್ದೆ.

ನನ್ನ ಜೀವನದಲ್ಲಿ ನನ್ನ ದೇಹದ ಹೊರಗೆ ನಡೆದ
ಗಾಢವಾದ ಅನುಭವವೆಂದರೆ ಅದೇ. ನನ್ನ
ದೇಹದಲ್ಲಿ ನಡೆದ ಅತ್ಯಂತ ಗಾಢವಾದ
ಅನುಭವವೆಂದರೆ, ದೈವನಿಯಾಮಕವಾದ ನನ್ನ
ಧ್ಯೇಯವನ್ನು ಅರಿತುಕೊಂಡದ್ದು!

ನಡೆಯುತ್ತಿದ್ದದ್ದನ್ನು ನೋಡುತ್ತಿದ್ದೇನಾದರೂ ಅದನ್ನು ಸಹಿಸಲಾಗಲಿಲ್ಲ. ನೀವು ತಿಳಿಯಬೇಕಾದ ಮುಖ್ಯಾಂಶವೆಂದರೆ, ಯಾರಾದರೂ ದೈಹಿಕವಾಗಿ ನೋವನುಭವಿಸುತ್ತಿರುವುದನ್ನು ಕಂಡರೆ, ಅದು ನಿಮ್ಮನ್ನು ಕೇವಲ ಶೇಕಡಾ 30 ರಿಂದ 40 ರಷ್ಟು ಮಾತ್ರ ಘಾಸಿಗೊಳಿಸುತ್ತದೆ. ಆದರೆ ನೀವು ಖಿನ್ನತೆಯಲ್ಲಿರುವ ಯಾರನ್ನಾದರೂ ಕಂಡರೆ ಹಾಗೂ ಆ ವ್ಯಕ್ತಿಯೊಡನೆ ಸಂಬಂಧ ಕಲ್ಪಿಸಿ, ಆ ಖಿನ್ನತೆಯನ್ನು ನೀವೂ ಭಾವಿಸುವಿರಾದರೆ ಇನ್ನೂ ಹೆಚ್ಚಾಗಿ ಘಾಸಿಗೊಳ್ಳುವಿರಿ - ಸುಮಾರು ಶೇಕಡಾ 60ರಷ್ಟು. ನಂತರ ಅದು ಭಾವನಾತ್ಮಕ ನೋವಾದರೆ, ಹಾಗೂ ನೀವು ಅದಕ್ಕೆ ಸ್ಪಂದಿಸಿ, ನೋವನ್ನರಿತುಕೊಂಡರೆ, ಅದು ನಿಮ್ಮನ್ನು ಇನ್ನೂ ಹೆಚ್ಚು ಘಾಸಿಗೊಳಿಸುತ್ತದೆ

  • ಸುಮಾರು ಶೇಕಡಾ 80ರಷ್ಟು. ನೋವು ಎಷ್ಟು ಸೂಕ್ಷ್ಮವಾದದ್ದೋ ಅಷ್ಟು ಘಾಸಿಗೊಳ್ಳುವಿರಿ.

ನಾನು ನೋಡುತ್ತಿದ್ದುದು ಆ ಸಾಯುತ್ತಿದ್ದ ವ್ಯಕ್ತಿಯ ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ ನೋವುಗಳನ್ನು ಮಾತ್ರವಲ್ಲ, ಆತನ ಆತ್ಮದ ಮಟ್ಟದ ನೋವನ್ನೂ ನೋಡುತ್ತಿದ್ದೆ. ಅದು ಆ ನೋವನ್ನು ಬಹುಮಟ್ಟಿಗೆ ನಾನೇ ಅನುಭವಿಸುತ್ತಿರುವಂತೆಯೇ ಇತ್ತು. ನಾನಲ್ಲಿಂದ ಓಡಿಹೋಗಿಬಿಡಬೇಕೆಂದಿರುವಷ್ಟರಲ್ಲಿ ಆ ಹಿರಿಯ ಸಾಧುಗಳು ಹೆದರಿ, ನನ್ನ ಕೈ ಹಿಡಿದು ಹೋಗಬೇಡೆಂದು ಬೇಡಿಕೊಂಡರು. ನಾನು ಆತನನ್ನು ಎರಡು-ಮೂರು ತಿಂಗಳಿಂದಲೂ ನೋಡಿಕೊಳ್ಳುತ್ತಿದ್ದೆ. ಹಾಗಾಗಿ ಅವರಿಗೆ ನನ್ನ ಮೇಲೆ ಬಹಳ ವಿಶ್ವಾಸ ಬೆಳೆದಿತ್ತು.

ಚಿಕ್ಕಂದಿನಿಂದಲೂ ನನಗೆ ಸಾಧುಗಳನ್ನು ಸೇವಿಸುವುದು ಬಹಳ ಇಷ್ಟ. ನಮ್ಮ ಮನೆಯಿಂದ ತಿಂಡಿ-ತಿನಿಸು ಹಾಗೂ ಉಡುಪುಗಳನ್ನು ತೆಗೆದುಕೊಂಡು ಹೋಗಿ ಸಾಧುಗಳಿಗೆ ಕೊಟ್ಟುಬಿಡುತ್ತಿದ್ದೆ! ಸಾಧುಗಳ ಸೇವೆ ಎಂದರೆ ನನಗೆ ಎಂದಿಗೂ ಬಹಳ ಇಷ್ಟ. ಈ ವೈದಿಕ ಸಂಪ್ರದಾಯವೆಲ್ಲವೂ ಇಂದಿಗೂ ಜೀವಂತವಾಗಿರುವುದು ಇಂತಹ ಸಾಧುಗಳಿಂದಲೇ ಎಂದು ನನಗೆ ಎನ್ನಿಸುತ್ತಲೇ ಇರುತ್ತದೆ. ಅವರು ಈ ವಿಜ್ಞಾನವನ್ನು ಸಜೀವವಾಗಿಟ್ಟಿದ್ದಾರೆ.

ಯಾವುದೇ ವಿಜ್ಞಾನದಲ್ಲಿಯಾದರೂ
ಸಂಶೋಧನೆ ಮಾಡಬೇಕೆಂದರೆ ಬಹಳ ಕ್ಷೇತ್ರಗಳಲ್ಲಿ
ನೆರವು ಬೇಕಾಗಿರುತ್ತದೆ. ಉದಾಹರಣೆಗೆ,
ಪಾಶ್ಚಿಮಾತ್ಯ ದೇಶಗಳಲ್ಲಿ ಹೊರಜಗತ್ತಿನ
ಸಂಶೋಧನೆಗಳು ಹೇರಳವಾಗಿ ನಡೆಯುತ್ತವೆ,
ಏಕೆಂದರೆ ಅದಕ್ಕೆ ನೆರವಾಗುವ ಜನರೂ ಸಂಸ್ಥೆಗಳೂ
ಅಲ್ಲಿವೆ. ಅದು ಔಷಧಗಳ ಮೇಲಿನ
ಸಂಶೋಧನೆಯಾದರೆ, ಔಷಧಗಳ ತಯಾರಿಕೆ ಮತ್ತು
ವಿನಿಯೋಗದಲ್ಲಿ ನಿರತವಾದ ಸಂಸ್ಥೆಗಳ ನೆರವು
ದೊರಕುತ್ತದೆ. ಅದೇನಾದರೂ ಬಾಹ್ಯಾಕಾಶ ಮತ್ತು
ಖಗೋಳಶಾಸ್ತ್ರದ್ದಾದರೆ, ಸರ್ಕಾರವೇ
ಹೊಣೆಹೊತ್ತು ನೆರವಾಗುತ್ತದೆ.

ಹಾಗೆಯೇ, ಭಾರತದಲ್ಲಿ ಆಧ್ಯಾತ್ಮಿಕ ಜ್ಞಾನದ
ಸಂಶೋಧನೆಗೆ, ಇಡೀ ದೇಶವೇ ಜವಾಬ್ದಾರಿ
ತೆಗೆದುಕೊಂಡು ನೆರವಾಗುತ್ತದೆ. ಆಂತರಿಕ ಜಗತ್ತಿನ
ವಿಜ್ಞಾನಿಯ ನೆರವಿಗಾಗಿ, ಆತನ ಆಹಾರ, ವಸತಿ
ಮತ್ತು ಉಡುಪುಗಳನ್ನು ನೀಡುತ್ತದೆ. ಈ ರೀತಿ,
ಹೊರ ಜಗತ್ತಿನ ಅವಶ್ಯಕತೆಗಳಿಗಾಗಿ ಆತನಿಗೆ ಕಾಲ
ವ್ಯಯವಾಗದೆ, ಆಂತರಿಕ ಜಗತ್ತಿನ ಆತನ
ಸಂಶೋಧನೆಯನ್ನು ಮುಂದುವರೆಸುವುದಕ್ಕಾಗಿ, ಇಡೀ
ದೇಶವೇ ಜವಾಬ್ದಾರಿಯನ್ನು ಹೊರುತ್ತದೆ.
ಆದುದರಿಂದ ಸಾಧುಗಳ ಹಾಗೂ ಆಂತರಿಕ ಜಗತ್ತಿನ
ವಿಜ್ಞಾನಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ
ನನ್ನದೆಂದು ನನಗೆ ಯಾವಾಗಲೂ ಎನಿಸುತ್ತದೆ.

ಐ.ಸಿ.ಯು.ನಲ್ಲಿ ನಾನು ನೋಡಿಕೊಳ್ಳುತ್ತಿದ್ದ
ಹಿರಿಯ ಸಾಧುಗಳು ನನ್ನನ್ನು ಹೋಗಗೊಡಲಿಲ್ಲ.
ಏಕೆಂದರೆ ತಮ್ಮ ಪಕ್ಕದಲ್ಲೇ ಇದ್ದ ವ್ಯಕ್ತಿಯು
ಸಾಯುವುದನ್ನು ನೋಡಿ ಅವರಿಗೆ ಭಯವಾಗಿತ್ತು.
ವ್ಯಕ್ತಿಯು ಬಹಳವಾಗಿ ಕಷ್ಟಪಡುತ್ತಿದ್ದನು. ಆತನ

ಯಾತನೆ ಆತನ ಆರು ಅಡಿ ದೇಹವನ್ನು ಛಿದ್ರಗೊಳಿಸಿದಂತಹ ಯಾತನೆಯಾಗಿತ್ತು! ನಿಮ್ಮ ಬೆರಳಿಗೆ ಚಿಕ್ಕದೊಂದು ಗಾಯವಾದರೆ ಎಷ್ಟು ನೋವಾಗುತ್ತದೆಂದು ಕಲ್ಪಿಸಿಕೊಳ್ಳಿರಿ. ಈಗ ನಿಮ್ಮ ಇಡೀ ಶರೀರದ ಚರ್ಮವನ್ನು ಅಕ್ಷರಶಃ ಸುಲಿದೇಬಿಟ್ಟರೆ ಎಷ್ಟು ನೋವಾಗಬಹುದೆಂದು ಕಲ್ಪಿಸಿಕೊಳ್ಳಿರಿ. ಅದು ಸಾವಿರ ಚೇಳುಗಳು ಒಟ್ಟಿಗೆ ಕುಟುಕಿದಂತೆ! ಆತನು ಪಡುತ್ತಿದ್ದ ಯಾತನೆಯನ್ನು ನಾನು ಸ್ಪಷ್ಟವಾಗಿ ಕಾಣುತ್ತಿದ್ದೆನು.

ಒಂದು ಕಡೆ ಆತನ ಆತ್ಮವು ತನ್ನೆಲ್ಲಾ ಪೂರೈಸಲಾಗದ ಭಾವನೆಗಳಾದ ಆಸೆ, ಆಕಾಂಕ್ಷೆ, ಲೋಭ ಹಾಗೂ ತಪ್ಪಿತಸ್ಥ ಭಾವನೆಗಳೊಂದಿಗೆ ಭಯಂಕರ ಯಾತನೆಗೀಡಾಗಿತ್ತು. ಆತನ ಆತ್ಮವು ದೇಹದಲ್ಲಿಯೇ ಇದ್ದು ಇವುಗಳನ್ನೆಲ್ಲವನ್ನೂ ಪೂರೈಸಿಕೊಳ್ಳಬೇಕೆಂದಿತ್ತು. ಆದರೆ ದೇಹವು ಆಯಾಸಗೊಂಡು ವಿಶ್ರಮಿಸಬೇಕೆಂದಿತ್ತು! ಅದು ದೇಹಕ್ಕೂ ಆತ್ಮಕ್ಕೂ ನಡೆದ ಕಾಳಗವಾಗಿತ್ತು. ದೇಹಕ್ಕೆ ಹೊರಡೋಣವೆನಿಸಿದರೂ ಆತ್ಮವು ಅದನ್ನೇ ಕಚ್ಚಿಕೊಂಡಿರುವ ಪ್ರಯತ್ನಮಾಡುತ್ತಿರುವಂತಿತ್ತು. ಬಲಗೈ ಹೋದರೆ, ಆತ್ಮವು ಎಡಗೈಯನ್ನು ಆಶ್ರಯಿಸುವಂತಿತ್ತು. ಬಲಗಾಲು ಸತ್ತುಹೋಗಿದ್ದರೆ ಆತ್ಮವು ಎಡಗಾಲನ್ನೇ ನೆಚ್ಚಿಕೊಳ್ಳುವಂತಿತ್ತು. ಆತ್ಮವು ದೇಹದ ಯಾವ ಭಾಗದಲ್ಲಿ ಆಶ್ರಯಪಡೆಯಲು ಸಾಧ್ಯವೋ ಅದನ್ನೇ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿತ್ತು.

ದೇಹವು ಸ್ವಲ್ಪ ಸ್ವಲ್ಪವಾಗಿ ಸಾಯುತ್ತಿತ್ತು.
ದೇಹದ ಕೆಳಭಾಗದಲ್ಲಿ ಅಷ್ಟಾಗಿ
ಗೊಂದಲವಿರಲಿಲ್ಲವೆಂಬುದನ್ನು ಮನಗಂಡೆ. ಆದರೆ
ದೇಹದ ಮೇಲ್ಭಾಗಕ್ಕೆ ಬಂದಾಗ ಇಡೀ ದೇಹವೇ
ನೋವಿನಿಂದ ಕಂಪಿಸುತ್ತಲೂ ಮಿಡಿಯುತ್ತಲೂ
ಇತ್ತು.

ನಿಧಾನವಾಗಿ ಆತ್ಮವು ದೇಹದಿಂದ
ಹೊರಬರಲಾರಂಭಿಸಿತು. ತಿಳಿಯಿರಿ, ಉಸಿರಾಟವು
ನಿಲ್ಲುವುದೇ ಆತ್ಮವು ಸ್ಕೂಲಶರೀರವನ್ನು ಬಿಡುವ
ಸಮಯ. ನಿಮ್ಮಲ್ಲಿ ಏಳು ಕೋಶಗಳು ಅಥವಾ
ಶರೀರಗಳಿವೆ. ನೀವು ನೋಡುವ ರಕ್ತ, ಮಾಂಸ
ಹಾಗೂ ಮೂಳೆಗಳಿಂದ ಆಗಿರುವುದೇ ಭೌತಿಕ ಶರೀರ.
ನಿಮ್ಮಲ್ಲಿ ಚಲಿಸುವ ಪ್ರಾಣ ಅಥವಾ ಜೀವ ಶಕ್ತಿಯೇ
ಪ್ರಾಣ ಶರೀರ. ಶರೀರದಲ್ಲಿ ಐದು ರೀತಿಯ ವಾಯು
ಸಂಚಾರಗಳಾಗುತ್ತವೆ: ದೇಹವನ್ನು ಪ್ರವೇಶಿಸುವ
ವಾಯು, ದೇಹದಲ್ಲಿ ಸುತ್ತುವ ವಾಯು,
ದೇಹದಲ್ಲೆಲ್ಲಾ ಜೀವ ಚೈತನ್ಯದಂತೆ
ಹರಡಿಕೊಳ್ಳುವ ವಾಯು, ದೇಹದಿಂದ ಹೊರಬರುವ
ವಾಯು ಮತ್ತು ದೇಹವನ್ನು ಶುದ್ಧಗೊಳಿಸುವ
ವಾಯು. ಇವೆಲ್ಲವೂ ಸೇರಿ ಎರಡನೆಯದಾದ ಪ್ರಾಣ
ಶರೀರವಾಗುತ್ತದೆ.

ಮೂರನೆಯ ಶರೀರವೆಂದರೆ, ನಿಮ್ಮಲ್ಲಿ
ಯಾವಾಗಲೂ ನಡೆಯುವ ಒಳ
ಹರಟೆಯನ್ನೊಳಗೊಂಡ ಶರೀರ. ಒಳಹರಟೆಯೆಂದರೆ
ಸತತವಾಗಿ ನಿಮ್ಮಲ್ಲೇಳುವ ಮಾತುಗಳು ಅಥವಾ
ಆಲೋಚನೆಗಳಲ್ಲದೆ ಬೇರೆ ಏನೂ ಅಲ್ಲ.

ನಾಲ್ಕನೆಯ ಶರೀರವು ಭಯ, ಕೋಪ,
ದುರಾಸೆಗಳಂತಹ ಭಾವನೆಗಳಿಂದ ಕೂಡಿದ್ದು,
ಮಾತಿಗೂ ಮೀರಿದ ಭಾವನೆಗಳಿಂದ ದೇಹದಲ್ಲೆಲ್ಲಾ
ಹರಡಿಕೊಂಡಿರುತ್ತದೆ. ನಮ್ಮನ್ನು ನಡುಗಿಸಲು ಒಂದು
ಭಾವನೆಯೇ ಸಾಕು. ಇದು ಭಾವನಾತ್ಮಕ ಪದರ.

ಐದನೆಯ ಶರೀರವೆಂದರೆ ನಿದ್ರೆಯಲ್ಲಿ
ಅನುಭವಿಸುವ ಶರೀರ. ಇಲ್ಲಿಯೇ ನಿಮ್ಮ ಎಲ್ಲಾ
ಕೋರೆಯಲ್ಪಟ್ಟ ನೆನಪುಗಳು ಅಥವಾ ಸಂಸ್ಕಾರಗಳು
ಬೀಜ ರೂಪದಲ್ಲಿ ಅಡಗಿರುವುದು. ಇದೇ ಕಾರಣ
ಶರೀರ. ಸಂಸ್ಕಾರಗಳು ಚಟುವಟಿಕೆಯಿಂದಿರುವುದೂ
ಇಲ್ಲ, ನಿರ್ಜೀವವಾಗಿರುವುದೂ ಇಲ್ಲ. ಅದೊಂದು
ಆಳವಾದ ಸುಪ್ತಸ್ಥಿತಿಯಂತೆ (coma). ನಿಮ್ಮ
ಇಷ್ಟದಂತೆ ಬದುಕಿದ್ದಂತೆಯೂ ಅಲ್ಲ, ಸತ್ತಂತೆಯೂ
ಅಲ್ಲ. ಈ ಪದರದಲ್ಲಿ ಸಿಕ್ಕಿಬಿದ್ದಂತಿರುತ್ತೀರಿ.

ಕಾರಣ ಶರೀರದಿಂದ ಪ್ರತ್ಯೇಕವಾದ ಜೀವಾತ್ಮವು
ಆತ್ಮಶರೀರಕ್ಕೆ ಚಲಿಸುತ್ತದೆ. ಆರನೆಯ ಶರೀರವೇ
ಆನಂದವನ್ನನುಭವಿಸುವ ಆತ್ಮಶರೀರ. ನೀವು
ಸತತವಾಗಿ ಸತ್ಯಾನ್ವೇಷಣೆಯಲ್ಲಿ ತೊಡಗಿರಲು
ಸ್ಪೂರ್ತಿಯನ್ನುಂಟುಮಾಡುವ ಪದರವೇ ಇದು. ನೀವು
ಸಾಧಕರಾದರೆ, ಈ ಪದರವು ನಿಮ್ಮಲ್ಲಿ ಗಾಢವಾಗಿದೆ
ಎಂದರ್ಥ. ಈ ಪದರವನ್ನು ಬೆಳೆಸಿಕೊಂಡರೆ ನಿಮ್ಮ
ಜೀವನವು ಆನಂದಮಯವಾಗಿರುತ್ತದೆ. ಈ
ಪದರದಲ್ಲಿ ಯಾವುದೇ ಸಂಸ್ಕಾರವು ಉಳಿದುಬಿಟ್ಟರೆ
ಮತ್ತೊಂದು ದೇಹವನ್ನು ಧರಿಸಿಬರಬೇಕಾಗುತ್ತದೆ.

ನೀವು ಸುಖಕರವಾದ ಅನುಭವಗಳನ್ನು ಸತತವಾಗಿ ಅನುಭವಿಸುತ್ತಿದ್ದರೆ, ಆಗ ನೀವು ಸ್ವರ್ಗದಲ್ಲಿದ್ದೀರೆಂದು ಹೇಳಲಾಗುತ್ತದೆ. ನೀವು ನೋವಿನಲ್ಲಿ ಸಿಕ್ಕಿಹೋಗಿದ್ದರೆ, ನರಕದಲ್ಲಿದ್ದೀರೆಂದು ಹೇಳಲಾಗುತ್ತದೆ. ಜೀವನದಲ್ಲಿ ಎಷ್ಟು ಕಾಲವನ್ನು ನೋವಿನಲ್ಲಿ ಕಳೆದಿರುತ್ತೀರೋ ಸಾವಿನ ವೇಳೆಯಲ್ಲಿ ಅಷ್ಟು ಕಾಲ ನೋವಿನ ಶರೀರ ಅಥವಾ ನರಕದಲ್ಲಿರುತ್ತೀರಿ. ಜೀವನದಲ್ಲಿ ಎಷ್ಟು ಕಾಲ ಸುಖವಾಗಿ ಕಳೆದಿರುತ್ತೀರೋ ಅಷ್ಟು ಕಾಲ ಆತ್ಮ ಶರೀರದಲ್ಲಿ ಅಥವಾ ಸ್ವರ್ಗದಲ್ಲಿರುತ್ತೀರಿ. ಸ್ವರ್ಗ ನರಕಗಳೆರಡೂ ಸಂಪೂರ್ಣವಾಗಿ ಮಾನಸಿಕವಾದವು. ಇದೇ ಸತ್ಯ. ನಿಮ್ಮಲ್ಲಿರುವ ಸಂಸ್ಕಾರಗಳಿಗನುಸಾರವಾಗಿ ಸ್ವರ್ಗ-ನರಕಗಳನ್ನು ಅನುಭವಿಸುವಿರಿ. ಆ ಕಾರಣದಿಂದಲೇ ಬೇರೆಬೇರೆ ಸಂಸ್ಕೃತಿಗಳವರು ಸ್ವರ್ಗವನ್ನು ಅವರಿಗೆ ಬೇಕಾದ ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತಾರೆ. ಏಕೆಂದರೆ ಸ್ವರ್ಗವೆಂಬುದು ಒಂದು ಸ್ಥಳವಲ್ಲ, ಅದೊಂದು ಅನುಭವ.

ಏಳನೆಯದು ಜ್ಞಾನೋದಯಕ್ಕೆ ಅನ್ವಯಿಸುವಂತಹ ನಿರ್ವಾಣ ಶರೀರ.

ಸಾವಿನ ಸಮಯದಲ್ಲಿ ಒಡೆಯನಿಗೂ (ಆತ್ಮಕ್ಕೂ)
ಮತ್ತು ವಸ್ತುವಿಗೂ (ದೇಹಕ್ಕೂ) ನಡುವೆ
ಸಮರವಾಗುತ್ತದೆ. ವಸ್ತು ಹೇಳುತ್ತದೆ, 'ನನಗೆ
ಸಾಕಾಗಿದೆ, ನಾನಿನ್ನು ದುಡಿಯಲಾರೆ' ಎಂದು.
ಯಜಮಾನ ಹೇಳುತ್ತಾನೆ 'ಇಲ್ಲ, ನಾನು ನಿನ್ನನ್ನು
ಉಪಯೋಗಿಸಬೇಕು' ಎಂದು.

ವಸ್ತುವು ಜಯಶಾಲಿಯಾದರೆ ಸ್ಕೂಲ ಶರೀರವು ನಶಿಸಿ, ಆತ್ಮವು ಮುಂದಿನ ಪದರವಾದ ಪ್ರಾಣ ಶರೀರಕ್ಕೆ ಚಲಿಸುತ್ತದೆ. ನೀವು ಸಾಮಾನ್ಯವಾಗಿ ಕನಸುಕಾಣುವ ಪದರವೇ ಇದು. ಕನಸುಕಾಣುತ್ತಿರುವಾಗ ತರ್ಕವು ನಿಮ್ಮ ಮೇಲಿನ ಪ್ರಭಾವವನ್ನು ಕಳೆದುಕೊಳ್ಳುತ್ತದೆ. ಆದರೆ ಆಸೆಗಳು ಸಜೀವವಾಗಿ ಉಳಿದುಕೊಂಡಿರುತ್ತವೆ. ತರ್ಕದ ಪ್ರಭಾವವಿಲ್ಲದೆ ಆಸೆಗಳು ಹಾಗೂ ಸಂಸ್ಕಾರಗಳು ಸಜೀವವಾಗಿ ಉಳಿದುಕೊಂಡಿರುವುದೇ ಕನಸಿನ ಲಕ್ಷಣ. ಪ್ರಜ್ಞೆ ಇಲ್ಲದೆ ಹೋದಾಗಲೂ ಅಥವಾ ಸುಪ್ತಸ್ಥಿತಿಯಲ್ಲಿದ್ದಾಗಲೂ ತರ್ಕವು ಚುರುಕಾಗಿರುವುದಿಲ್ಲ.

ನೀವು ಸ್ಥಾಲ ಶರೀರದಲ್ಲಿರುವವರೆಗೂ ನಿಮಗೆ ಆಸೆಗಳಿರುತ್ತವೆ ಹಾಗೂ ಆಸೆಗಳಿರಬೇಕೇ ಅಥವಾ ಬೇಡವೇ, ಇದ್ದರೆ ಯಾವ ಆಸೆಯನ್ನು ಪೂರೈಸಿಕೊಳ್ಳಬೇಕು ಮುಂತಾದುವನ್ನು ವಿಶ್ಲೇಷಿಸುವ ತರ್ಕವೂ ಇರುತ್ತದೆ. ಆಸೆಗಳು ನಿಮ್ಮ ಹಿಡಿತದಲ್ಲಿರುತ್ತವೆ; ಸಮತೋಲನದಲ್ಲಿರಲು ಸಾಧ್ಯವಾಗುತ್ತದೆ. ಆದರೆ, ತರ್ಕವಿಲ್ಲದೆಯೇ ಕೇವಲ ಆಸೆಗಳಿದ್ದರೆ, ಆತ್ಮವು ಆಸೆಗಳಿಂದ ಫುಟ್‌ಬಾಲಿನಂತೆ ಒದೆಸಿಕೊಳ್ಳುತ್ತದೆ. ಒಂದು ಕಡೆ ತಪ್ಪಿತಸ್ಥ ಭಾವನೆ, ಇನ್ನೊಂದು ಕಡೆ ಆತ್ಮದೊಡನೆ ಆಟವಾಡುವ ಆಸೆಗಳಿರುತ್ತವೆ.

ಸಾಯುತ್ತಿದ್ದ ಆ ವ್ಯಕ್ತಿಯನ್ನು ನೋಡಿದಾಗ
ಆತ್ಮವು ನಿಧಾನವಾಗಿ, ಪದರಪದರವಾಗಿ,
ಹೊರಹೋಗುತ್ತಿದ್ದುದು ಕಾಣುತ್ತಿತ್ತು. ಆತ್ಮವು
ಪೂರೈಸದ ಆಸೆಗಳಿಂದ ತೀವ್ರವಾಗಿ ನರಳುತ್ತಿದ್ದುದು
ಕಾಣುತ್ತಿತ್ತು. 'ಜೀವನೋದ್ದೇಶವನ್ನೂ, ಜೀವನದ
ಕಾರಣವನ್ನೂ ಪೂರೈಸದೆ ಹೋದೆನಲ್ಲಾ' ಎಂದು
ಅರಿಯುತ್ತಾ ಆತ್ಮವು ಅಕ್ಷರಶಃ ತಪ್ಪಿತಸ್ಥ
ಮನೋಭಾವದಿಂದ ತಿಂದುಹೋಗುತ್ತಿತ್ತು.
ತಿಳಿಯಿರಿ, ನೀವು ಜನ್ಮವೆತ್ತಿದ ಉದ್ದೇಶವನ್ನು
ಸಾವಿನ ಸಮಯದಲ್ಲಿ ಮಾತ್ರವೇ ಸ್ಮರಿಸುವುದು.

ನೀವು ಹುಟ್ಟಿದಾಗ, ನಿಮ್ಮ ತಾಯಿಯ ಜನನ ನಾಳದ ಮೂಲಕ ದೇಹವು ಹೊರಬರುತ್ತದೆ. ಆಮೇಲೆ ನೀವು ಅನುಭವಿಸುವ ಅಪಾರವಾದ ಯಾತನೆಯಿಂದಾಗಿ ಸುಪ್ತ ಸ್ಥಿತಿ (coma) ಅಥವಾ ಗಾಢ ಪ್ರಜ್ಞಾಹೀನ ಸ್ಥಿತಿಗೆ ಹೋಗುವಿರಿ. ಹಾಗಾಗಿ ಹುಟ್ಟಿ ಬಂದ ಉದ್ದೇಶವನ್ನೇ ಮರೆತುಬಿಡುತ್ತೀರಿ. ಅದಾಗುವುದು ಹೀಗೆ: ವಿಮಾನ ಯಾನದ ಟಿಕೆಟನ್ನು ಕೊಂಡಿರುತ್ತೀರಿ, ವಿಮಾನದಲ್ಲಿ ಕುಳಿತದ್ದೂ ಆಗಿರುತ್ತದೆ, ಆದರೆ ಯಾನದ ಕಾಲದಲ್ಲಿ ನಿಮಗೆ ಅಸಹಜ ಸುಪ್ತ ಸ್ಥಿತಿ ಬಂದು, ಆ ಕಾರಣದಿಂದ ನೀವು ಇಳಿದಾಗ, ಅಲ್ಲಿಗೇಕೆ ಬಂದೆ ಎಂಬುದೆಲ್ಲವನ್ನೂ ಮರೆತಿರುತ್ತೀರಿ! ಮತ್ತು ಆ ಸ್ಥಳವನ್ನು ಬಿಟ್ಟು ವಿಮಾನವನ್ನು ಪುನಃ ಹತ್ತುವಾಗ ಮಾತ್ರವೇ ಇದ್ದಕ್ಕಿದ್ದಂತೆ ಅಲ್ಲಿಗೇಕೆ ಬಂದಿದ್ದೆನೆಂಬುದನ್ನು ಜ್ಞಾಪಿಸಿಕೊಳ್ಳುತ್ತೀರಿ!

ಇದೇ ರೀತಿಯಲ್ಲಿ, ಸಾವು ಬಂದಾಗ ಪ್ರಾರಬ್ಧ
ಕರ್ಮವನ್ನು ಅಥವಾ ನೀವು ಜನ್ಮತಾಳಿದ
ಉದ್ದೇಶವನ್ನೇ ಪೂರೈಸದ ಅಪರಾಧ ಭಾವನೆ
ಉಂಟಾಗುತ್ತದೆ.

ಈ ಅಪರಾಧ ಮನೋಭಾವವು ಸರಿದ ಮೇಲೆ,
ಜೀವನದಲ್ಲಿ ನಡೆದ ಎಲ್ಲಾ ನೋವಿನ ಅನುಭವಗಳ
ಸ್ಮರಣೆಗಳು ಮೇಲೆಳುತ್ತವೆ. ಹೀಗಾಗಿ ಸಾವಿನ
ಸಮಯದಲ್ಲಿ ಮೊದಲು ದೈಹಿಕ ನೋವು, ನಂತರ
ಎಲ್ಲಾ ಆಸೆಗಳು, ನಂತರ ಎಲ್ಲಾ ಅಪರಾಧಗಳು,
ನಂತರ ಎಲ್ಲಾ ಭಾವನಾತ್ಮಕ ನೋವುಗಳು ಹಾಗೂ
ಈ ಜನ್ಮದಲ್ಲಿ ಪಟ್ಟ ಎಲ್ಲಾ ಸುಖಗಳನ್ನೂ
ಹಾದುಹೋಗುವಿರಿ.

ಸಾಮಾನ್ಯವಾಗಿ ಆತ್ಮ ಶರೀರ ಅಥವಾ ಆರನೆಯ
ಪದರವನ್ನು ತಲುಪಿದ ಕೂಡಲೇ
ಪುನರ್ಜನ್ಮವಾಗುತ್ತದೆ. ಅಂದರೆ, ಆತ್ಮವು ಮುಂದಿನ
ದೇಹವನ್ನು ಪಡೆಯುತ್ತದೆ.

ಕೆಲವು ಸಲ, ಅಪರೂಪಕ್ಕೆ, ಆರನೆಯ
ಪದರವನ್ನು ಮೀರಿಹೋಗಿ ನಿರ್ವಾಣಶರೀರಕ್ಕೆ
ಹೋಗಿಬಿಡುವಿರಿ. ಹಾಗಾದಾಗ
ಪುನರ್ಜನ್ಮವಿರುವುದಿಲ್ಲ.

ಈ ಶರೀರ ಕೋಶಗಳ ಮೂಲಕ ಸರಿದು,
ಪೂರೈಸದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುತ್ತಾ
ಗಾಢವಾದ ತಪ್ಪಿತಸ್ಥ ಭಾವನೆ ಹಾಗೂ ತೀವ್ರವಾದ
ನೋವನ್ನು ಅನುಭವಿಸುತ್ತಿರುವಾಗ, 'ಇನ್ನೊಂದು
ದೇಹವನ್ನು ಧರಿಸೋಣ, ಮತ್ತೆ ಹುಟ್ಟಿಬರೋಣ;
ಬಂದಾಗ ನನ್ನ ಜೀವಿತೋದ್ದೇಶವನ್ನು ಮರೆತು ಈ
ಭ್ರಮೆಯ ಲೀಲೆಗಳಲ್ಲಿ ಸಿಲುಕುವುದಿಲ್ಲ, ಸತ್ಯದ
ಹಾದಿಯನ್ನು ನೇರವಾಗಿ ಅನುಸರಿಸುತ್ತೇನೆ' ಎಂದು
ದೃಢವಾಗಿ ನಿರ್ಧರಿಸುವಿರಿ. ಆದರೆ, ನಿಜವಾಗಿಯೂ
ಮತ್ತೆ ಪುನರ್ಜನ್ಮವಾದಾಗ, ಹುಟ್ಟುವ ಕಾಲದಲ್ಲಿ
ಅನುಭವಿಸುವ ಅಪಾರ ಯಾತನೆಯಿಂದಾಗಿ, ಅಸಹಜ
ಗಾಢ ನಿದ್ರೆಗೊಳಗಾಗಿ, ನಿರ್ಧಾರದ ಬಗ್ಗೆ
ಸಂಪೂರ್ಣವಾಗಿ ಮರೆಯುತ್ತೀರಿ!

ಕೊನೆಗೆ ಆ ವ್ಯಕ್ತಿಯು ಮರಣಹೊಂದಿದನು. ಆದರೆ ಆ ಅನುಭವವು ನನ್ನಲ್ಲೊಂದು ಬಲವಾದ ಮಚ್ಚೆಯನ್ನು ಮೂಡಿಸಿಬಿಟ್ಟಿತು. ನನ್ನ ಮನಸ್ಸಿನಲ್ಲಿ ಬಹಳ ಗಾಢವಾದ ಪರಿಣಾಮವನ್ನು ಬೀರಿತು. ಅದೃಷ್ಟವೆಂದರೆ, ಆ ಹಿರಿಯ ಸಾಧುಗಳು ಗುಣಹೊಂದಿ ಆಸ್ಪತ್ರೆಯಿಂದ ಹೊರಬಂದರು. ನಾನು ನನ್ನ ಪ್ರಯಾಣವನ್ನು ಮುಂದುವರೆಸುತ್ತಾ ಕೆಲವು ತಿಂಗಳುಗಳು ಕಳೆಯುತ್ತಿದ್ದಂತೆ, ನನಗೆ ನನ್ನದೇ ಸಾವಿನ ಅನುಭವವಾಗಿ, ಜ್ಞಾನೋದಯವಾಗಿ, ಆ ಮೂಲಕ ನನ್ನ ಜೀವನದ ಧೈಯ ಮತ್ತು ಉದ್ದೇಶಗಳ ಅರಿವಾಯಿತು. ಹನ್ನೆರಡನೆಯ ವಯಸ್ಸಿಗೇ ಆಗಿದ್ದ ಗಾಢವಾದ ಆಧ್ಯಾತ್ಮಿಕ ಅನುಭವದಿಂದ ನನ್ನ ಮುಕ್ತಾತ್ಮ ಜೀವನವು ಪ್ರಾರಂಭವಾಗಿತ್ತು. ಆದರೆ ಆ ದೈವನಿಯಮಿತ ಕಾರ್ಯದ ಬಗ್ಗೆ ಹಾಗೂ ನನ್ನ ದೇಹದ ಮೂಲಕ ಆಗಬೇಕಾಗಿರುವುದು ಏನೆಂಬುದರ ಬಗ್ಗೆ ನಿಶ್ಚಿತವಾದ ಅಭಿಪ್ರಾಯವು, ನಾನು ಜ್ಞಾನೋದಯ ಹೊಂದಿದಾಗ ಉದಯಿಸಿತು.

ನನ್ನೆದುರಿಗಾದ ಸಾವು - ಜ್ಞಾನೋದಯವನ್ನು ಹೊಂದಿದ ನಂತರ

ನನಗೆ ಜ್ಞಾನೋದಯವಾದ ನಂತರ, ದಕ್ಷಿಣಭಾರತಕ್ಕೆ ಹಿಂದಿರುಗಿದೆ. ಬೆಂಗಳೂರಿನ ಒಬ್ಬ ಭಕ್ತರ ಮನೆಯಲ್ಲಿದ್ದು, ನನ್ನನ್ನು ಹುಡುಕಿಕೊಂಡು ಬಂದವರಿಗೆ ಧ್ಯಾನಚಿಕಿತ್ಸೆ (ಹೀಲಿಂಗ್) ಮಾಡುತ್ತಿದ್ದೆ. ಆಗ ಒಬ್ಬ ಭಕ್ತರು ಐ.ಸಿ.ಯು.ಗೆ ಸೇರಿಸಲ್ಪಟ್ಟಿದ್ದು, ಅವರನ್ನು ಗುಣಪಡಿಸಿರೆಂದು ನನ್ನನ್ನು ಬೇಡಿಕೊಂಡರು.

ಅಲ್ಲಿಯೂ ಸಹ ಆ ಭಕ್ತನನ್ನು ಗುಣಪಡಿಸುತ್ತಿದ್ದಾಗ, ಆತನ ಪಕ್ಕದ ರೋಗಿಯು ಸಾವನ್ನಪ್ಪುತ್ತಿದ್ದನು. ಇನ್ನೇನು ಸಾಯುತ್ತಾನೆನ್ನುವ ಆತನನ್ನು ನೋಡಿದ ಕೂಡಲೇ ಮೊದಲಿಗೆ ಬಂದ ಆಲೋಚನೆ ಎಂದರೆ, ಎದುರಾಗಲಿರುವ ಯಾತನೆಯಿಂದ ದೂರ ಹೋಗಿಬಿಡಬೇಕೆಂಬುದು. ಆದರೆ ಭಕ್ತನಿಗೆ ಭಯವಾಗುತ್ತಿದ್ದಿದ್ದರಿಂದ ನನ್ನನ್ನು ಹೋಗೊಡಲಿಲ್ಲ!

ಇದ್ದಕ್ಕಿದ್ದಂತೆ ನೋಡಿದೆ; ಸಾಯುತ್ತಿದ್ದ ಈ
ವ್ಯಕ್ತಿಯು ಮುಂಚಿನವನಂತೆ ಯಾತನೆ
ಪಡುತ್ತಿರಲಿಲ್ಲ. ನನಗೆ ದಿಗ್ಭ್ರಮೆಯಾಗಿ ಬಹಳ
ಕುತೂಹಲವಾಯಿತು. ಮುಂಚಿನ ಆತ್ಮಕ್ಕೆ ಪದರದಿಂದ
ಪದರಕ್ಕೆ ಹೋಗುವಾಗ ಯಾತನೆಯೂ ಹಿಂಸೆಯೂ
ಅಪಾರವಾಗಿ ಆಗುತ್ತಿತ್ತು. ಆದರೆ ಈ ಆತ್ಮವು
ಪದರದಿಂದ ಪದರಕ್ಕೆ, ಒಂದು ಚಾಕು ಬೆಣ್ಣೆಯ
ಮೂಲಕ ಹೋಗುವಂತೆ ಅಥವಾ ಮಂಜುಗಡ್ಡೆ
ಉರುಳುವಂತೆ ಸುಲಭವಾಗಿ, ಬಹಳ ಸಲೀಸಾಗಿ
ಹೋಗುತ್ತಿತ್ತು!

ಮೊದಲ ಹಂತದಲ್ಲಿ ಅಥವಾ ಸ್ಥಾಲಶರೀರದ ಹಂತದಲ್ಲಿ ಸ್ವಲ್ಪ ನೋವಿತ್ತು. ನಂತರ ಇದ್ದಕ್ಕಿದ್ದಂತೆಯೇ ನೋವು ಅದೃಶ್ಯವಾಗಿ, ಆತ್ಮವು ಪ್ರಾಣಶರೀರವನ್ನು ಸೇರಿತು. ಅದು ಒಳ್ಳೆ ರಾಜ ಠೀವಿಯಿಂದ ಒಂದು ಪದರದಿಂದ ಮತ್ತೊಂದು ಪದರಕ್ಕೆ ಹೋಗುತ್ತಿತ್ತು! ಅದು ಎಷ್ಟು ಶಕ್ತಿಯುತವಾಗಿತ್ತೆಂದರೆ ಆಸೆ, ತಪ್ತಿತಸ್ತತೆ ಹಾಗೂ ಯಾತನೆಗಳು ಅದನ್ನೇನೂ ಮಾಡುವಂತಿರಲಿಲ್ಲ. ಕಾರಣ ಶರೀರದಲ್ಲಿಯೂ ಸಹ ಅದು ಸುಪ್ತಾವಸ್ಥೆಗೆ ಹೋಗಲಿಲ್ಲ. ಅದು ಅಷ್ಟು ಶಕ್ತಿಯುತವಾಗಿದ್ದು, ಕೊನೆಗೆ ನಿರ್ವಾಣ ಶರೀರಕ್ಕೆ ಹೋಗಿ, ವಿಶ್ರಾಂತವಾಗಿದ್ದು ಹಾಗೆಯೇ ಅದೃಶ್ಯವಾಯಿತು!

ಈ ವ್ಯಕ್ತಿಯು ವಿಕಸನ ಹೊಂದಿದ ವ್ಯಕ್ತಿಯೇ
ಇರಬೇಕೆಂದು ಭಾವಿಸಿದೆ. ಈತನು ಆಧ್ಯಾತ್ಮಿಕೋ
ಅಥವಾ ಧ್ಯಾನಮಾಡುತ್ತಿದ್ದವನೇ ಎಂದು ಆತನ
ಬಂಧುಗಳನ್ನು ಕೇಳಿದೆ. ಆ ಕುಟುಂಬದವರಿಗೆ
ಆಶ್ಚರ್ಯವಾಗಿ, ಆತನು ಜೀವನದಲ್ಲೆಂದೂ
ಧ್ಯಾನವನ್ನಾಗಲೀ ಆಧ್ಯಾತ್ಮಿಕ ಸಾಧನೆಗಳನ್ನಾಗಲೀ
ಮಾಡಿದವನಲ್ಲವೆಂದು ತಿಳಿಸಿದರು. ಆತನು
ಸಂಪೂರ್ಣವಾಗಿ ಪ್ರಾಪಂಚಿಕ ಜೀವನವನ್ನೇ
ನಡೆಸಿದ್ದನು.

ಮೊದಲು ಕಂಡ ಸಾವು ಅಷ್ಟು ಭಯಂಕರವಾಗಿದ್ದು, ಎರಡನೆಯದು ಇಷ್ಟು ಆನಂದಮಯವಾಗಿದ್ದುದು ಏಕೆಂದು ನನ್ನಲ್ಲಿಯೇ ವಿಚಾರ ಮಾಡಿನೋಡಿದೆ. ಈಗ ನಾನು ಹೇಳಲಿರುವುದು ಪ್ರಾಮಾಣಿಕವೂ ನೇರವಾದುದೂ ಆದ ಸತ್ಯ ಹಾಗೂ ಅದನ್ನೇಕೆ ಹೇಳುತ್ತಿದ್ದೇನೆಂದರೆ ಅದನ್ನು ನಿಮಗೆ ಹೇಳಬೇಕಾದ ಅತಿ ದೊಡ್ಡ ಜವಾಬ್ದಾರಿ ನನ್ನದು. ಎರಡು ಸಾವುಗಳ ವ್ಯತ್ಯಾಸವನ್ನು ಧ್ಯಾನಿಸಿ ನೋಡಿದಾಗ, ನಿಜಾಂಶವು ಪ್ರಕಟವಾಯಿತು: ಎರಡನೆಯ ಸಾವು ಸಂಭವಿಸಿದಾಗ ನಾನು ಜ್ಞಾನಿಯಾಗಿದ್ದೆ. ಎರಡನೆಯ ವ್ಯಕ್ತಿಯು ಜ್ಞಾನಿಯೊಬ್ಬರ ಸಾನ್ನಿಧ್ಯದಲ್ಲಿ ಮರಣಹೊಂದಿದ್ದನು! ಮೊದಲನೆಯ ಸಾವಿನ ವಿಷಯದಲ್ಲಿ, ನನ್ನ ಇರುವಿಕೆಯು ಏನೂ ಮಾಡಲಾಗಲಿಲ್ಲ, ಏಕೆಂದರೆ ಆಗ ಆತ್ಮಜ್ಞಾನದ ಚೈತನ್ಯವನ್ನು ನನ್ನಿಂದ ಪಸರಿಸಲಾಗುತ್ತಿರಲಿಲ್ಲ. ಹೀಗಾಗಿ ಮೊದಲನೆಯ ವ್ಯಕ್ತಿಯು ಸಾಧಾರಣ ಸಾವನ್ನು ಹೊಂದಿದನು ಹಾಗೂ ಎರಡನೆಯ ವ್ಯಕ್ತಿಯು ಒಬ್ಬ ಸತ್ಯವನ್ನರಿತ ಜ್ಞಾನಿಯ ಸಾನ್ನಿಧ್ಯದಲ್ಲಿ ಸುಖಕರವಾದ ಸಾವನ್ನಪ್ಪಿದನು.

ಈ ಸತ್ಯವು ನನ್ನಲ್ಲಿ ಪ್ರಕಟವಾದಾಗ ನನ್ನಿಂದ
ಒಂದು ಆಳವಾದ ಅನುಕಂಪ ಹೊರಬರುತ್ತಿದ್ದುದನ್ನು
ಕಂಡೆ. ಈ ಕೊಡುಗೆಯನ್ನು ಪ್ರತಿಯೊಬ್ಬರಿಗೂ
ಕೊಡಬಲ್ಲೆನಾದರೆ ನನ್ನ ಉದ್ದೇಶವು
ಸಾರ್ಥಕವಾಗುತ್ತದೆ ಎನಿಸಿತು. ಶಾಂತವಾದ

ಸಾವೆಂಬುದು ಬಹಳ ಅದ್ಭುತವಾದ ಹಾಗೂ
ಆನಂದಕರವಾದ ಕೊಡುಗೆಯಾಗಿ ನೀಡುವಂತಹದು.
ಇದನ್ನು ಒಬ್ಬ ಜ್ಞಾನಿಯಿಂದ ಮಾತ್ರವೇ ನೀಡಲು
ಸಾಧ್ಯ. ನಾನು ಈ ಕೊಡುಗೆಯನ್ನು
ಪ್ರತಿಯೊಬ್ಬರಿಗೂ ಕೊಡುವುದು ಹೇಗೆಂದು
ಧ್ಯಾನಿಸಲಾರಂಭಿಸಿದೆ. ಖಂಡಿತವಾಗಿಯೂ ನಾನು
ಎಲ್ಲಾ ಆಸ್ಪತ್ರೆಗಳ ಐ.ಸಿ.ಯು.ಗಳಲ್ಲಿಯೂ ಇದ್ದು,
ಜನರು ಸಾಯುವುದನ್ನೇ ಕಾಯುತ್ತಿರುವುದು
ಸಾಧ್ಯವಿಲ್ಲ! ಈ ಎಲ್ಲದರ ಹಿಂದಿನ ವಿಜ್ಞಾನವನ್ನು
ಕುರಿತು ಧ್ಯಾನಿಸಿದೆ ಮತ್ತು ಸಾವಿನ ಸಮಯದಲ್ಲಿ
ನಿಜವಾಗಿಯೂ ಏನಾಗುತ್ತದೆ ಎಂಬುದನ್ನು
ತಿಳಿದುಕೊಂಡೆ.

ವಿವರಿಸುತ್ತೇನೆ: ನೀವು ನಿಮ್ಮ ಸಾಮಾನ್ಯ ತರ್ಕಕ್ಕೆ ಕಟ್ಟುಬಿದ್ದು, ಸ್ಕೂಲ ಶರೀರದ ಪದರದಲ್ಲಿಯೇ ಇದ್ದರೆ, ಗುರುವೆಂಬುವನು ಕೇವಲ ಸರಳವಾದೊಂದು ನಂಬಿಕೆಯ ವ್ಯಕ್ತಿಯಾಗುತ್ತಾನೆ. ಭೌತಿಕ ಪ್ರಪಂಚವು ಹೆಚ್ಚು ಘನವಾಗಿಯೂ ನಿಜವಾಗಿರುವುದಾಗಿಯೂ ತೋರುತ್ತದೆ. ಆದರೆ ಇನ್ನೂ ಗಹನವಾದ ಪದರಗಳಿಗೆ ಹೋದಾಗ, ಗುರುವು ನಿಜವೆಂದೂ, ಭೌತಿಕ ಪ್ರಪಂಚವು ಅಸ್ಪಷ್ಟ ಹಾಗೂ ಮಂಕಾಗಿ ಕಾಣುತ್ತದೆ.

ಇದು ಹೇಗೆಂದರೆ, ರಾತ್ರಿ ಕನಸು
ಕಾಣುತ್ತಿರುವಾಗ ಕನಸಿನ ಲೋಕವು ನಿಜವೆಂದೂ,
ಎಚ್ಚರದ ಪ್ರಪಂಚವು ಅಸ್ಪಷ್ಟವೆಂದೂ
ತೋರುವುದಲ್ಲದೆ, ಎಚ್ಚರವಾಗಿರುವಾಗ ಎಂದರೆ,
ಒಂದು ಉನ್ನತ ಪ್ರಜ್ಞೆಯೊಂದಿಗಿದ್ದಾಗ, ಕನಸಿನ
ಲೋಕವು ಕಲ್ಪನೆಯಾಗುತ್ತದೆ ಹಾಗೂ ಎಚ್ಚರದ
ಪ್ರಪಂಚ ನಿಜವೆಂದು ತೋರುತ್ತದೆ. ಕನಸಿನ
ಸ್ಥಿತಿಯಲ್ಲಿ ನೀವು ಕಾಣುವ ಕನಸಿನ ಲೋಕವು
ನಾಲ್ಕು ಆಯಾಮದ ಬಣ್ಣದ ಚಿತ್ರದಂತೆ
ಸಜೀವವಾಗಿರುವಂತೆ ಕಾಣುವಿರಿ! ಕನಸಿನಿಂದ
ಹೊರಬಂದಾಗ ಕನಸೆಲ್ಲವೂ ಕಪ್ಪು-ಬಿಳುಪಾಗಿ
ತೋರುತ್ತದೆ.

ಅದೇ ರೀತಿ, ನೀವು ಇನ್ನೂ ಉನ್ನತ
ಪ್ರಜ್ಞೆಗೇರಿದರೆ, ಈ ಎಚ್ಚರದ ಪ್ರಪಂಚವು
ಮಂದವಾಗಿ, ಆಧ್ಯಾತ್ಮಿಕ ಸತ್ಯಗಳು, ಗುರುಗಳು;
ಜೀವಂತವೂ ಮತ್ತು ನಿಜವೆಂದೂ ಆಗುತ್ತವೆ.
ದೇಹದಿಂದ ಬೇರ್ಪಟ್ಟು ಇನ್ನೂ ಉನ್ನತ
ಪ್ರಜ್ಞೆಗೇರಿದಾಗ, ಗುರುಗಳೂ ಉನ್ನತಪ್ರಜ್ಞೆಯ
ಚೈತನ್ಯವೂ ಘನವಾದ ಸತ್ಯವಾಗುತ್ತವೆ.

ಎರಡನೆಯ ಸಾವು ಸಂಭವಿಸಿದಾಗ, ಗಾಢವಾದ
ಜ್ಞಾನೋದಯದ ಸನ್ನಿಧಿಯು ನೇರವಾಗಿ ಆತನನ್ನು
ಅದಕ್ಕೆ ಬಲವಾಗಿ ಹೊಂದಿಕೊಳ್ಳಲು
ಕಾರಣವಾಯಿತು.

ತಿಳಿಯಿರಿ, ನೀವಿಲ್ಲಿ ಈಗ ಕುಳಿತಿರುವ
ಹಾಗೆಯೇ, ಗುರುಗಳ ಜ್ಞಾನ ಶಕ್ತಿಯೊಂದಿಗೆ
ಹೊಂದಿಕೊಂಡು, ಅದರಲ್ಲೇ ಐಕ್ಯವಾಗಿಬಿಡಲು
ತಡೆಯುತ್ತಿರುವುದಾದರೂ ಏನು? ಕೇವಲ ನಿಮ್ಮ
ತರ್ಕ ಹಾಗೂ ಕಾರಣಗಳು.

ನೀವಿಲ್ಲಿ ಕುಳಿತಿದ್ದಂತೆಯೇ, ನಿಮ್ಮ ಪ್ರಜ್ಞಾಹೀನತೆಯಲ್ಲಿ, 'ನನ್ನ ಆಸ್ತಿಯನ್ನೆಲ್ಲಾ ಬಿಟ್ಟು ಶರಣಾದರೆ ಗುರುಗಳು ಅದನ್ನು ತೆಗೆದುಕೊಂಡುಬಿಟ್ಟಾರು!' ಎಂಬಂತಹ ಅನುಮಾನಗಳು ಇನ್ನೂ ಇವೆ. ಮತ್ತೊಂದು ಸಮಸ್ಯೆ ಎಂದರೆ, ಸದ್ಯದಲ್ಲಿ ಈಗಿನ ಮಟ್ಟಿಗೆ, ಪ್ರಪಂಚದ

ಬೇರೆ ವಿಷಯಗಳೆಲ್ಲವೂ ನಿಜವೆಂಬಂತೆಯೇ
ತೋರುತ್ತಿರುತ್ತದೆ. ಹಾಗೆಯೇ, ಗುರುಗಳೂ ಅದೇ
ಮಟ್ಟದಲ್ಲಿಯೇ ನಿಜವೆನಿಸುತ್ತಾರೆ.

ನನ್ನ ಕಂಪನವನ್ನು ಉಳಿದ ಪ್ರಾಪಂಚಿಕ ಜಗತ್ತಿನ
ಕಂಪನದಷ್ಟೇ ಎಂದು ಭಾವಿಸುತ್ತೀರಿ. ಎರಡನೇ
ಸಾವಿನ ವಿಷಯದಲ್ಲಿ ಆತನಿಗೆ ತನ್ನ ಹೊರಜಗತ್ತಿನ
ಎಲ್ಲ ವಸ್ತುಗಳೂ ಮರಣಕಾಲದಲ್ಲಿ ಸಿಗದೇ
ಹೋದವು. ಆತನು ಚೆಕ್‌ಗಳನ್ನು
ಬರೆಯುವಂತೆಯೂ ಇರಲಿಲ್ಲ. ಕಾರನ್ನು
ಓಡಿಸುವಂತೆಯೂ ಇರಲಿಲ್ಲ. ಪ್ರಾಪಂಚಿಕ ಜಗತ್ತಿನ
ಯಾವ ವಿಷಯಗಳು ಅವನನ್ನು ಹಿಡಿದೆಳೆಯುತ್ತಿತ್ತೋ
ಅವೆಲ್ಲವೂ ತಾವಾಗಿಯೇ ಆತನಿಂದ ತೆಗೆದುಕೊಂಡು
ಹೋಗಲಾಗಿತ್ತು. ಆತನು ಸುತ್ತಲೂ ನೋಡಿದಾಗ
ಕೇವಲ ಜ್ಞಾನಚೈತನ್ಯವಾದ ನಾನು ಮಾತ್ರವೇ
ಅಲ್ಲಿದ್ದದ್ದು! ಆತನು ಗಾಢವಾದ ಬೆಳಕಿನ
ಚೈತನ್ಯವನ್ನು ನೋಡಿ, ನನ್ನನ್ನು ಹಿಡಿದುಕೊಂಡನು!
ಶರಣಾಗತಿಯು ತಾನಾಗಿಯೇ ಆಗಿಹೋಯಿತು,
ಏಕೆಂದರೆ ಆ ಕ್ಷಣದಲ್ಲಿ ನಾನಲ್ಲಿದ್ದೆ. ಆತನ
ವಿಷಯದಲ್ಲಿಯೂ ಆತನು ಬದುಕಿದ್ದಾಗಲೇ ನನ್ನನ್ನು
ನೋಡಿದ್ದಿದ್ದರೆ, ಶರಣಾಗಲೂ, ನನ್ನನ್ನು ಸೇರಲೂ
ಕಷ್ಟಪಡುತ್ತಿದ್ದನು! ಯಾವಾಗ ಎಲ್ಲವೂ
ಹೊರಟುಹೋಯಿತೋ, ತನ್ನಿಂದ ಹಿಡಿದಿಡಲು
ಆತನಲ್ಲಿ ಏನೂ ಇರಲಿಲ್ಲ.

ಭಾಗವತದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಜೀವನದ ಒಂದು ಸುಂದರವಾದ ಕಥೆ ಇದೆ:

ಒಮ್ಮೆ ಒಬ್ಬ ರಾಜನು ಕೃಷ್ಣಭಕ್ತನಾಗಿದ್ದನು. ಆತನು ಕೃಷ್ಣನನ್ನು, 'ನನಗಿನ್ನೂ ಹೆಚ್ಚು ಸಿರಿಸಿಂಪತ್ತುಗಳು ಬೇಕು' ಎಂದು ಕೇಳಿದನು. ಆತನ ಬೇಡಿಕೆಯನ್ನು ಕೃಷ್ಣನು ಕರುಣಿಸಿದನು. ಅಂತೆಯೇ ಒಬ್ಬ ಬಡವಿಯೂ ಇದ್ದಳು. ಆಕೆಯ ಬಳಿ ಒಂದು ಹಸುವೂ ಒಂದು ಚಿಕ್ಕ ಮನೆಯೂ ಇತ್ತು. ಒಮ್ಮೆ ಕೃಷ್ಣನು ಆಕೆಯ ಮನೆಗೆ ಹೋಗಿ, ಆಕೆ ನೀಡಿದ ಆಹಾರವನ್ನು ಸ್ವೀಕರಿಸಿ, ಆಕೆಯನ್ನು ಅನುಗ್ರಹಿಸಿ, ಹೊರಟುಹೋದನು. ಅದೇ ದಿನವೇ ಆಕೆಯ ಹಸು ಸತ್ತುಹೋಯಿತು.

ಯಾರೋ ಒಬ್ಬರು ಶ್ರೀ ಕೃಷ್ಣನನ್ನು ಕೇಳಿದರು, ಒಬ್ಬ ಶ್ರೀಮಂತನಿಗೆ ಮತ್ತಷ್ಟು ಸಿರಿಸಿಂಪತ್ತುಗಳು ದೊರೆತು, ಬಡವಿಯೊಬ್ಬಳಿಗೆ ಇದ್ದ ಒಂದೇ ವರಮಾನವೂ ಇಲ್ಲದೆ ಹೋದದ್ದು ವಿಚಿತ್ರವಲ್ಲವೇ ಎಂದು.

ಶ್ರೀ ಕೃಷ್ಣನು, 'ಆ ರಾಜನು ಈಗಾಗಲೇ ಈ ಪ್ರಪಂಚದ ಭ್ರಮೆಯ ಸುಳಿಯಲ್ಲಿ ಸಿಲುಕಿದ್ದನು. ಆದುದರಿಂದ ಆತನಿಗೆ ಬೇಕಾದುದನ್ನು ಕೊಟ್ಟುಬಿಟ್ಟರೆ ಕೊನೆಗೆ ಸಾಕಾಗಿ, ಆತನು ಆತ್ಮಜ್ಞಾನದ ಕಡೆಗೆ ತಿರುಗುತ್ತಾನೆಂದು ಆತನಿಗೆ ಅದನ್ನು ದಯಪಾಲಿಸಿದೆ. ಬಡವಿಯ ವಿಷಯದಲ್ಲಿ, ಆಕೆಗೆ ಬೇಕಾಗಿದ್ದದ್ದು ಒಂದೇ ಒಂದು; ಅದು ನನ್ನನ್ನು ಸೇರುವುದು. ಆದರೆ ಅದನ್ನು ತಡೆಯುತ್ತಿದ್ದುದು ಆ ಹಸು. ನಾನು ಆ ಹಸುವನ್ನು ತೆಗೆದುಕೊಂಡು ಆಕೆಯು ಸಂಪೂರ್ಣವಾಗಿ ನನ್ನಲ್ಲಿ ಐಕ್ಯವಾಗುವಂತೆ ಮಾಡಿದೆ!' ಎಂದು ವಿವರಿಸಿದನು.

ಅದೇ ರೀತಿ, ಎರಡನೆಯ ಸಾವಿನ ವಿಷಯದಲ್ಲಿ ಆ 'ಹಸು'ವನ್ನು ತೆಗೆದುಕೊಂಡದ್ದಾಯಿತು. ಸ್ಥframe ಶರೀರದಲ್ಲಿ ಆ ವ್ಯಕ್ತಿಗೆ ಸೇರಲಾಗುತ್ತಿರಲಿಲ್ಲ. ಆದರೆ

ಪ್ರಾಣಶರೀರ ಕೋಶದಲ್ಲಿ ಆತ್ಮನ ಪ್ರಜ್ಞೆಯು ಬೇರೆ ಆಯಾಮವನ್ನು ಪ್ರವೇಶಿಸಿತು. ಆತನು ಅಲ್ಲಿ ನನ್ನನ್ನು ನೋಡಲು ಸಾಧ್ಯವಾಯಿತು. ಗುರುಗಳ ಸನ್ನಿಧಿಯು ಅಂತಹ ಒಂದು ದಿವ್ಯ ಪ್ರಭೆ. ಅದು ಈ ಪ್ರಪಂಚಕ್ಕಿಂತಲೂ ಶಕ್ತಿಶಾಲಿಯಾದ ಹಾಗೂ ಹೆಚ್ಚಿನ ಕಂಪನವುಳ್ಳದ್ದು. ಹೇಗೆ ನಿಮ್ಮ ಕನಸಿನಲೋಕದ ಕಂಪನಕ್ಕಿಂತಲೂ ಈ ಪ್ರಪಂಚದ ಕಂಪನವು ಹೆಚ್ಚಾಗಿರುತ್ತದೆಯೋ ಹಾಗೆಯೇ.

ಅಲ್ಲಿ ಏನೋ ಹೆಚ್ಚಿನ ಕಂಪನದ್ದು ಇದೆ
ಎಂಬುದನ್ನು ಆ ವ್ಯಕ್ತಿಯು ಅರಿತುಕೊಂಡು ಅದಕ್ಕೆ
ಸಂಪೂರ್ಣವಾಗಿ ಶರಣಾದನು. ಆತನು ಶರಣಾದಾಗ
ಆತನ ಸಂಸ್ಕಾರಗಳೆಲ್ಲವೂ ಆತನ ಮೇಲಿನ
ಪ್ರಭಾವವನ್ನು ಕಳೆದುಕೊಂಡವು. ವೈಯಕ್ತಿಕ
ಪ್ರಜ್ಞೆಯು ಶಕ್ತಿಯುತವಾಯಿತು. ಆಸೆಗಳು,
ತಪ್ಪಿತಸ್ಥತೆ, ನೋವು, ನಲಿವು, ಎಲ್ಲವೂ
ತಲೆಬಾಗಿದವು, ಆತ್ಮದ ಕಂಪನವು ನೇರವಾಗಿ
ಹೆಚ್ಚಾಯಿತು.

ತಿಳಿಯಿರಿ, ಕಾಣುತ್ತಿರುವವನು (ವೀಕ್ಷಕ)
ಬಲವಾದಾಗ, ಕಂಡದ್ದಕ್ಕೆ (ವೀಕ್ಷಿತ) ನಿಮ್ಮ ಮೇಲೆ
ಪ್ರಾಬಲ್ಯ ಇರುವುದಿಲ್ಲ. ಇದು ಸಾವಿನ ವಿಜ್ಞಾನ.

ಮೊದಲನೆಯ ಸಾವಿನ ವಿಷಯದಲ್ಲಿ ಕಂಡದ್ದು (ವೀಕ್ಷಿತವು) ಕಾಣುವವ(ವೀಕ್ಷಕ)ನಿಗಿಂತಲೂ ಬಲವಾಗಿತ್ತು. ಎರಡನೆಯ ಸಾವಿನ ವಿಷಯದಲ್ಲಿ, ಕಾಣುವವನು (ವೀಕ್ಷಕ) ಕಂಡದ್ದಕ್ಕಿಂತಲೂ (ವೀಕ್ಷಿತ) ಬಲವಾಗಿದ್ದನು.

ಇದನ್ನು ಜನರಿಗೆ ಹೇಗೆ ತಿಳಿಸಿಕೊಡಬೇಕೆಂದು
ನಾನು ತೀವ್ರವಾಗಿ ಧ್ಯಾನಿಸಿದೆ. ತಕ್ಷಣವೇ
ನನಗೊಂದು ದಿವ್ಯಜ್ಞಾನವು ಉದಯಿಸಿತು.

ತಿಳಿಯಿರಿ, ಚೈತನ್ಯವು ಕಾಲ, ಸ್ಥಳಗಳಿಂದ ನಿರ್ಬಂಧಿತವಾಗಿಲ್ಲ. ಅದು ಆಕಾಶದಲ್ಲಿರುವ ಸ್ಯಾಟಲೈಟ್ ತರಂಗಗಳಂತೆ. ನಿಮ್ಮಲ್ಲಿ ಸೆಟ್-ಟಾಪ್ ಬಾಕ್ಸ್ ಕನ್ವರ್ಟರ್ ಇದ್ದರೆ ನಿಮಗೆ ಬೇಕಾದ ಚಾನೆಲ್ ನೋಡಬಹುದು. ಜ್ಞಾನಿಗಳ ಚೈತನ್ಯವು ಬ್ರಹ್ಮಾಂಡವೆಲ್ಲವನ್ನೂ ವ್ಯಾಪಿಸಿರುತ್ತದೆ. ನಾನು ಸುಮ್ಮನೆ ಆ ಸೆಟ್-ಟಾಪ್ ಬಾಕ್ಸ್‌ನ್ನು ಜನರಲ್ಲಿ ಇಡಬೇಕಷ್ಟೆ. ಅದು ನಡಿಗೆ ನಿಯಂತ್ರಕ(ಪೇಸ್ ಮೇಕರ್)ವಾದರೆ, ಇದು ಶಾಂತಿ ನಿಯಂತ್ರಕ(ಪೀಸ್ ಮೇಕರ್)! ಒಮ್ಮೆ ಅದನ್ನು ಒಬ್ಬ ಮನುಷ್ಯನಲ್ಲಿ ಇರಿಸಿದರೆ, ಆತನು ದೇಹವನ್ನು ಬಿಡುವಾಗ ಅದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ಗುರುವಾದವನು ತನ್ನ ಒಳ ಪ್ರಪಂಚದ ಆಧ್ಯಾತ್ಮಿಕ ಅನುಭವಗಳನ್ನು ಇತರರ ಒಳಪ್ರಪಂಚದಲ್ಲಿ ಪುನರುತ್ಪಾದಿಸಲು ಸೂತ್ರವನ್ನು ನಿರ್ಮಿಸುತ್ತಾನೆ. ಇಂತಹುದೊಂದು ಸೂತ್ರವೇ ಲೈಫ್ ಬ್ಲಿಸ್ ಪ್ರೋಗ್ರಾಂ - ಹಂತ 2 ಅಥವಾ ನಿತ್ಯಾನಂದ ಸ್ಪುರಣ ಧ್ಯಾನ ಕಾರ್ಯಕ್ರಮ. ಇದು ವ್ಯಕ್ತಿಗಳಲ್ಲಿ ಶಾಂತಿ ನಿಯಂತ್ರಕವನ್ನು ಒಳಸೇರಿಸುವ ಒಂದು ಕಾರ್ಯಕ್ರಮ.

ಶಾಂತಿ ನಿಯಂತ್ರಕವನ್ನು ಒಳ ಸೇರಿಸುವುದರ
ಜೊತೆ, ಸಾವಿನ ಸಮಯದಲ್ಲಿ ನೀವೆಲ್ಲಿಯೇ
ಇದ್ದರೂ ಯಾವುದೇ ಸನ್ನಿವೇಶದಲ್ಲಿದ್ದರೂ ನಾನು
ಅಲ್ಲಿದ್ದು ನೀವು ಹಾಯಾಗಿ ನಿರ್ವಾಣ ಶರೀರಕ್ಕೆ
ಹೋಗುವಂತೆ ಮಾಡುತ್ತೇನೆ ಎಂದು ಭಾಷೆ
ಕೊಡುತ್ತೇನೆ. ದಯವಿಟ್ಟು ತಿಳಿದುಕೊಳ್ಳಿರಿ, ಈಗ
ನಾನಾಡುತ್ತಿರುವ ಮಾತಿಗೆ ನಾನು

ಜವಾಬ್ದಾರನಾಗಿದ್ದೇನೆ. ಒಂದು ವೇಳೆ ನಾನೇ
ದೇಹವನ್ನು ಬಿಟ್ಟರೂ ನಾನು ಜವಾಬ್ದಾರ. ಏಕೆಂದರೆ
ಅದೊಂದು ಪ್ರಮಾಣ; ಯಾರೇ ಇದನ್ನು ನನ್ನಿಂದ
ನೇರವಾಗಿ ಕೇಳಿದರೂ, ಅವರಿಗೆ ಇದು ನನ್ನ ಬದ್ಧತೆ.

ಈ ತಾಂತ್ರಿಕ ಜ್ಞಾನವನ್ನು ಜನರೊಂದಿಗೆ
ಹಂಚಿಕೊಳ್ಳಲು ಆರಂಭಿಸಿದಾಗ, ಅವರು ತಮ್ಮ
ಜೀವಿತಕಾಲದ ಅಂತ್ಯದಲ್ಲಿ ಶಾಂತಿಯನ್ನು
ಅನುಭವಿಸಿದುದು ಮಾತ್ರವಲ್ಲ, ನಾನವರೊಂದಿಗೆ
ಅದನ್ನು ಹಂಚಿಕೊಳ್ಳುತ್ತಿದ್ದಂತೆಯೇ ಅವರ
ಜೀವನವೇ ತೀವ್ರವಾಗಿಯೂ,
ಸಂತೋಷಕರವಾಗಿಯೂ ಹಾಗೂ
ಆನಂದಮಯವಾಗಿಯೂ ಆಗಿದ್ದುದನ್ನು ಕಂಡೆನು.

ತಿಳಿಯಿರಿ, ಆಳವಾಗಿ ಕೊರೆಯಲ್ಪಟ್ಟ ನೆನಪುಗಳನ್ನು (ಸಂಸ್ಕಾರಗಳನ್ನು) ನಿಮ್ಮ ಅಸ್ತಿತ್ವದಿಂದ ತೆಗೆದುಹಾಕಿದಾಗ ಜೀವನ ಹಾಗೂ ಮರಣಗಳೆರಡೂ ಆನಂದಮಯವಾಗುತ್ತವೆ. ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ. ಐಶ್ವರ್ಯ ಹಾಗೂ ಉತ್ತಮವಾದ ಸಂಬಂಧಗಳನ್ನು ಆಕರ್ಷಿಸುತ್ತೀರಿ. ಏಕೆಂದರೆ ನಿಮ್ಮ ಅಸ್ತಿತ್ವದ ಕಂಪನವೇ ಬೇರೆ ರೀತಿಯದಾಗುತ್ತದೆ.

ನಿಮ್ಮಲ್ಲಿ ಶಾಂತಿನಿಯಂತ್ರಕವನ್ನಿರಿಸಿದಾಗ
ನಿರ್ವಾಣ ಶರೀರದಲ್ಲಿ ವಿರಮಿಸುವಿರಿ. ಆಗ ನಿಮಗೆ
ಪ್ರಜ್ಞಾಪೂರ್ಣ ವ್ಯಕ್ತಿಯಾಗಿ ಮತ್ತೊಮ್ಮೆ
ಜನಿಸುವುದೋ ಅಥವಾ ಜ್ಞಾನೋದಯವನ್ನು
ಹೊಂದಿ ಎಂದಿಗೂ ಪುನಃ ದೇಹಧರಿಸದೆ
ಇರುವುದೋ ಎಂಬ ಸ್ವಾತಂತ್ರ್ಯ ಲಭಿಸುತ್ತದೆ.

ಕೊನೆಯ ಕ್ಷಣದ ಸ್ಮರಣೆಯೇ ಲೆಕ್ಕಕ್ಕೆ ಬರುವುದು

ಕೊನೆಯ
ನಿಮಿಷದಲ್ಲಿ ನೀವು
ಏನನ್ನು
ಆಲೋಚಿಸುತ್ತೀರೋ
ನೀವು ಅದೇ
ಆಗುತ್ತೀರಿ

ಪವಿತ್ರ ವೇದ ಗ್ರಂಥಗಳಾದ ಉಪನಿಷತ್ತಿನಲ್ಲಿ ಒಂದು ಸೊಗಸಾದ ಕಥೆ ಇದೆ:

ಜಡಭರತನೆಂಬ ಋಷಿಯು ತಾನು ಕಾಪಾಡಿದ್ದ
ಒಂದು ಜಿಂಕೆಯ ಮೇಲೆ ಬಹಳ
ವ್ಯಾಮೋಹವನ್ನಿಟ್ಟುಕೊಂಡಿದ್ದನು. ಆತನು
ತ್ಯಾಗಜೀವನ ನಡೆಸುತ್ತಿದ್ದನು. ಆದರೆ ಈ ಜಿಂಕೆಗೆ
ವ್ಯಾಮೋಹಗೊಂಡನು. ಬೆಳಗಿನಿಂದ ರಾತ್ರಿಯವರೆಗೂ
ಜಿಂಕೆಯನ್ನು ನೋಡಿಕೊಳ್ಳುವುದೇ ಆಯಿತು. ಸಾವು
ಸನ್ನಿಹಿತವಾದಾಗ ಈ ಪ್ರಾಣಿಯನ್ನು
ಮರೆಯಲಾಗಲಿಲ್ಲ. ಅದಕ್ಕಾಗಿ
ಮರುಗಲಾರಂಭಿಸಿದನು, ‘ಓಹ್! ಅದನ್ನು ಯಾರು
ನೋಡಿಕೊಳ್ಳುತ್ತಾರೆ? ನಾನು ಸತ್ತ ನಂತರ ಅದರ
ಗತಿ ಏನು?’ ಎಂದು.

ಆತನು ಸತ್ತು, ಪುನರ್ಜನ್ಮದಲ್ಲಿ ಒಂದು ಜಿಂಕೆಯಾಗಿ ಹುಟ್ಟಿದನು.

ಕೊನೆಯ ನಿಮಿಷದಲ್ಲಿ ನೀವು ಏನನ್ನು
ಆಲೋಚಿಸುತ್ತೀರೋ ನೀವು ಅದೇ ಆಗುತ್ತೀರಿ
ಎಂದು ಉಪನಿಷತ್ತಿನ ಶ್ಲೋಕವು ಸುಂದರವಾಗಿ
ಸಾರುತ್ತದೆ.

ಕೆಲವರು ಬಹಳ ಜಾಣತನದಿಂದ ಆಲೋಚಿಸುತ್ತಾರೆ, ‘ನನ್ನ ಜೀವನವೆಲ್ಲಾ ನನಗೆ ಬೇಕಾದಂತೆ ಇದ್ದು ಬಿಡುತ್ತೇನೆ. ಕೊನೆಯ ಕೆಲವು ಕ್ಷಣಗಳಲ್ಲಿ ದೈವ ಸ್ಮರಣೆಮಾಡಿ, ಆತನ ನಾಮ ಜಪಮಾಡಿ ಹೇಗಾದರೂ ಸ್ವರ್ಗಕ್ಕೆ ಹೋಗುವೆನು’ ಎಂದು. ದಯವಿಟ್ಟು ಸ್ಪಷ್ಟಮಾಡಿಕೊಳ್ಳಿರಿ, ದೇಹವನ್ನು ಬಿಡುವಾಗ ನೀವು ಜೀವನದುದ್ದಕ್ಕೂ ಮಾಡಿದ ಆಲೋಚನೆಗಳೇ ಮೇಲೆಳುವುದು. ಕೊನೆಯ ಘಳಿಗೆಯಲ್ಲಿ ಆಟವಾಡಬಹುದು ಎಂದು ಕೊಳ್ಳಬೇಡಿರಿ! ಅದು ಸಾಧ್ಯವಿಲ್ಲ!

ನಿಜವಾಗಿಯೂ ನೀವು ದೇಹವನ್ನು ಬಿಡುವಾಗ,
ನಿಮ್ಮ ಇಡೀ ಮನೋಶರೀರದ ವ್ಯವಸ್ಥೆಯು
ನೊಂದಿರುತ್ತದೆ. ಏಕೆಂದರೆ ಆಗ ನಿಮ್ಮ ಕಳೆದ 80-
90 ವರ್ಷಗಳ ಜೀವನವು ಬೇಗಬೇಗನೇ (ಫಾಸ್ಟ್
ಫಾರ್ವಡ್್ರನಂತೆ) ಕಣ್ಣು ಮುಂದೆ
ಹಾಯ್ದುಹೋಗುತ್ತದೆ. ಕಾಣುವುದೆಲ್ಲವೂ
ಕಳೆದುಹೋದ, ಫಾಸ್ಟ್ ಫಾರ್ವಡ್ ಆದ ದೃಶ್ಯಗಳ
ಮರುಕಳಿಕೆಯೇ. ಜೀವನದಲ್ಲಿ ನಡೆದ ಯಾವುದೇ
ಗಾಢ ಅನುಭವವು ನಿಮ್ಮ ಮುಂದೆ ಆಗ
ಗೋಚರವಾಗುವುದು. ನಿಮ್ಮ ಆಧ್ಯಾತ್ಮಿಕ
ಅನುಭವಗಳು ವರ್ಣರಂಜಿತವಾಗಿ ಮೇಲೆಳುವವು.

ದಯವಿಟ್ಟು ತಿಳಿದುಕೊಳ್ಳಿರಿ, ‘ಯೋಚನಾ ರಹಿತ ಅರಿವು’ ಎಂಬುದೇ ನಿಮ್ಮ ಜೀವಮಾನದಲ್ಲಿ ನೀವು ಹೊಂದಬಹುದಾದ ಅತ್ಯಂತ ಗಾಢವಾದ ಅನುಭವ. ಒಂದು ಕ್ಷಣವೇ ಆದರೂ ಆ ಅನುಭವವನ್ನು ಪಡೆದಿದ್ದರೆ ಅಷ್ಟೇ ಸಾಕು. ಸಹಜವಾಗಿ, ದೇಹವನ್ನು ಬಿಡುವಾಗ ಅದು ಮೇಲೆ ಬರುತ್ತದೆ. ಅದೊಂದು ಜ್ಯೋತಿಯಂತೆ ವರ್ತಿಸಿ ನೀವು ದಿವ್ಯ ಚೈತನ್ಯದೊಳಗೆ ಸಾಗಲು ಅನುವುಮಾಡಿಕೊಡುತ್ತದೆ.

ನನ್ನ ಸಾವಿನ ಅನುಭವ

ವಾರಣಾಸಿಯಲ್ಲಿ ನನ್ನ ಪ್ರಜ್ಞಾಪೂರ್ಣ ಸಾವಿನ ಅನುಭವವನ್ನು ನಿರೂಪಿಸುತ್ತೇನೆ.

ನನಗೆ ಸಾವಿನ ಅನುಭವವಾಗಬೇಕು. ನಾನು ಸಾವನ್ನು
ನೇರವಾಗಿ ಎದುರಿಸಬೇಕೆಂದು ಯಾವಾಗಲೂ
ಅಂದುಕೊಳ್ಳುತ್ತಿದ್ದೆ. ಆದರೆ ಅದೇಕೋ ಆ
ಆಲೋಚನೆಗೆ ಆದ್ಯತೆ ದೊರಕಲೇ ಇಲ್ಲ. ಯಾವುದೇ
ಅನುಭವವಾಗಬೇಕೆಂದರೂ ಅದಕ್ಕೆ ಸಂಬಂಧಿಸಿದ
ಆಲೋಚನೆ ಅತ್ಯುನ್ನತ ಆದ್ಯತೆಯದ್ದಾಗಿರಬೇಕು.
ಅದು ಎಲ್ಲೋ ಮನಸ್ಸಿನ ಒಂದು
ಮೂಲೆಯಲ್ಲಿದ್ದರಾಗುವುದಿಲ್ಲ.

ಸಾಮಾನ್ಯವಾಗಿ ನಮ್ಮ ‘ಮಾಡಬೇಕಾದ’ ಪಟ್ಟಿಗಳಲ್ಲಿ ಇರುವುದು, ಬಟ್ಟೆ ಒಗೆಯುವುದು, ಓರಣಮಾಡುವುದು, ಬಾಡಿಗೆ ಕೊಡುವುದು, ಫೋನ್ ಬಿಲ್ ಕಟ್ಟುವುದು, ಕೊನೆಗೆ ಸಮಯವಿದ್ದರೆ, ಆತ್ಮಸಾಕ್ಷಾತ್ಕಾರಕ್ಕೆ ಪ್ರಯತ್ನ ಮಾಡುವುದು. ಇಲ್ಲ! ಈ ರೀತಿಯಾದರೆ ಆತ್ಮಸಾಕ್ಷಾತ್ಕಾರವಾಗುವುದಿಲ್ಲ. ಅದು ಆಗುವುದು ನಮ್ಮ ಪ್ರಮುಖ ಆದ್ಯತೆಯಾದಾಗ ಮಾತ್ರ, ಪಾತೊರಿಕೆಯು ಅವಸರವಾದಾಗ ಮಾತ್ರ, ಆ ಅನುಭವವಾಗಲು ನಿಮ್ಮ ಸುತ್ತಮುತ್ತಲದ್ದೆಲ್ಲವೂ ತಾನಾಗಿಯೇ ಸರಿಹೊಂದಿಕೊಳ್ಳಲಾರಂಭಿಸುತ್ತದೆ. ಇದು ಆತ್ಮಸಾಕ್ಷಾತ್ಕಾರದ ವಿಷಯಕ್ಕಾಗಿ ಮಾತ್ರವೇ ಅಲ್ಲ. ಪ್ರತಿಯೊಂದಕ್ಕೂ ಇದು ಸತ್ಯ.

ತಿಳಿಯಿರಿ, ನೀವೇನಾದರೂ ‘ನನಗೆ ಬೇಕಾದುದು
ಆಗುತ್ತಲೇ ಇಲ್ಲ’ ಎಂದು ಗೋಳಾಡುತ್ತಿದ್ದರೆ, ಅದು
ನಿಮ್ಮ ಆದ್ಯತೆಯ ಪಟ್ಟಿಯಲ್ಲಿ
ಪ್ರಮುಖವಾದದ್ದಾಗಿಯೇ ಇಲ್ಲ ಎಂದೇ ಅರ್ಥ,
ಮತ್ತೇನಿಲ್ಲ. ಬೇರೆ ಏನನ್ನೂ, ಬೇರೆ ಯಾರನ್ನೂ

ಅದಕ್ಕಾಗಿ ಆಕ್ಷೇಪಿಸುವಂತಿಲ್ಲ. ಅದು ಪ್ರಮುಖ
ಆದ್ಯತೆಯಾದ ಕ್ಷಣವೇ ಒಂದು ಚೈತನ್ಯದ ಲೀಲೆ
ಪ್ರಕಟವಾಗುತ್ತದೆ ಹಾಗೂ ಅದು ನಡೆಯುತ್ತದೆ.
ಅದುವರೆಗೂ ಅದು ನಿಮಗಾಗಿ ಕಾಯುತ್ತಿರುತ್ತದೆ
ಅಷ್ಟೆ. ಸಾವಿನ ಅನುಭವ ನನ್ನ ಪ್ರಮುಖ
ಆದ್ಯತೆಯಾಗಿರಲಿಲ್ಲವಾದುದರಿಂದ ಅದು ಹೇಗೋ
ಮುಂದಕ್ಕೆ ತಳ್ಳುತ್ತಿತ್ತು.

ನನ್ನ ಪಾರಿವ್ರಾಜಕದ ದಿನಗಳಲ್ಲಿ ಒಮ್ಮೆ ವಾರಣಾಸಿಗೆ ಹೋಗಿದ್ದೆ. ಅಲ್ಲಿ ಪ್ರತಿದಿನ ಬಂದು-ಹೋಗುವವರ ಸಂಖ್ಯೆ 3 ಲಕ್ಷವೆಂದು ಅಂದಾಜುಮಾಡಲಾಗಿದೆ. ಇಷ್ಟೇ ಅಲ್ಲದೆ, ಪವಿತ್ರ ಗಂಗಾನದಿಯ ದಡದಲ್ಲಿರುವ ಮಣಿಕರ್ಣಿಕಾ ಘಾಟ್‌ ಎಂಬಲ್ಲಿ ಪ್ರತಿದಿನವೂ ಸುಮಾರು 100 ಮೃತ ದೇಹಗಳ ದಹನಕ್ರಿಯೆ ನಡೆಯುತ್ತದೆ. ಸಾಂಪ್ರದಾಯಿಕ ನಂಬಿಕೆ ಏನೆಂದರೆ, ಅಲ್ಲಿ ಯಾರಾದರೂ ಮೃತಹೊಂದಿದರೆ ಅಥವಾ ಅವರ ಮೃತದೇಹವನ್ನು ದಹಿಸಿದರೆ, ಅವರಿಗೆ ಮೋಕ್ಷ ದೊರಕುವುದೆಂಬುದು ಪ್ರತೀತಿ. ಅವರಿಗೆ ನೇರವಾಗಿ ಸಾಕ್ಷಾತ್ಕಾರವಾಗುತ್ತದೆ.

ಅದು ಕೇವಲ ಸಾಂಪ್ರದಾಯಿಕ ನಂಬಿಕೆ ಮಾತ್ರವೇ ಅಲ್ಲ, ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಸ್ವಾನುಭವದಿಂದ ಅದನ್ನು ದೃಢೀಕರಿಸಿದ್ದಾರೆ. ‘ಉರಿಯುತ್ತಿದ್ದ ಪ್ರತಿಯೊಂದು ದೇಹದ ಬಳಿಯೂ ಶಿವನು ಹೋಗಿ, ಆತ್ಮವನ್ನು ತೆಗೆದುಕೊಂಡು, ದೇಹ – ಮನಸ್ಸಿನಿಂದ ಅದನ್ನು ಬಿಡುಗಡೆಮಾಡಿ, ನಂತರ ಅದಕ್ಕೆ ಮುಕ್ತಿನೀಡುತ್ತಿದ್ದದ್ದನ್ನು ನಾನು ಬಹಳ ಸ್ಪಷ್ಟವಾಗಿ ನೋಡಿದೆ!’ ಎನ್ನುತ್ತಾರೆ. ಆದುದರಿಂದ ಅದೊಂದು ಪೌರಾಣಿಕ ನಂಬಿಕೆ ಎನ್ನಲಾಗುವುದಿಲ್ಲ. ಅದು ಜ್ಞಾನಿಯೊಬ್ಬರ ಘನವಾದ ಅನುಭವ.

ನಾನು ಮಣಿಕರ್ಣಿಕಾ ಘಾಟಿಗೆ ಹೋಗುವ
ಅದೃಷ್ಟವಿತ್ತು. ಹಿಂದಿನ 2000 ವರ್ಷಗಳಿಂದಲೂ
ಅಲ್ಲಿ, ಸಾಂಪ್ರದಾಯಿಕವಾಗಿಯೇ ಚಿತೆಗೆ ಹಚ್ಚಲು
ಬಳಸುವ ಬೆಂಕಿಯನ್ನು ಆರಿಸಿಯೇ ಇಲ್ಲವೆಂಬುದು,
ನಂಬಿರುವುದು ಮಾತ್ರವೇ ಅಲ್ಲದೇ, ಸತ್ಯವೂ ಹೌದು.

ಮಳೆಯೇ ಬೀಳಲಿ, ಬಿಸಿಲೇ ಇರಲಿ, ಪ್ರವಾಹವೇ
ಬರಲಿ, ಜನರು ಮಣಿಕರ್ಣಿಕಾ ಘಾಟಿಗೆ
ಮೃತದೇಹವನ್ನು ತರುವಾಗ ಬೆಂಕಿಯನ್ನು ತರುವುದೇ
ಇಲ್ಲ. ಅಲ್ಲಿ ಬೆಂಕಿ ಆಗಲೇ ಉರಿಯುತ್ತಲೇ
ಇರುತ್ತದೆ. ಅವರು ಕೇವಲ ಅದನ್ನು ತೆಗೆದುಕೊಂಡು
ಮೃತದೇಹಕ್ಕೆ ಹಚ್ಚುತ್ತಾರೆ ಅಷ್ಟೆ, ಮೃತ ದೇಹಗಳು
ಬರುತ್ತಿರುವಂತೆಯೇ ಬೆಂಕಿಯು ಸತತವಾಗಿ
ಅವುಗಳನ್ನು ದಹಿಸುತ್ತದೆ. ಕೆಲವು ಬಾರಿ ಎರಡು-
ಮೂರು ಮೃತದೇಹಗಳನ್ನು ಒಟ್ಟಿಗೇ
ದಹಿಸುವುದನ್ನು ನೋಡುತ್ತಿದ್ದೆ, ಅಷ್ಟೊಂದು
ಮೃತದೇಹಗಳು ಬರುತ್ತಿರುತ್ತವೆ!

ಅದರಲ್ಲೂ ಸಂಜೆಯ ಹೊತ್ತಿನಲ್ಲಿ ಮೃತ ದೇಹಗಳ ಸಂಖ್ಯೆ ಹೆಚ್ಚು. ವ್ಯಕ್ತಿಯು ಮರಣಿಸಿದ ಸ್ಥಳದಿಂದಲೂ ‘ರಾಮ್‌ನಾಮ್ ಸತ್ಯಹೈ, ರಾಮ್‌ನಾಮ್ ಸತ್ಯಹೈ’ (ರಾಮ ನಾಮವೇ ಪರಮ ಸತ್ಯ) ಎಂಬಂತಹ ಮಂತ್ರಗಳನ್ನು ಜಪಿಸುತ್ತಾ ಮೃತದೇಹವನ್ನು ಹೊತ್ತು ಬರುತ್ತಾರೆ. ಸಂಜೆಹೊತ್ತಿಗೆ ಮಣಿಕರ್ಣಿಕಾ ಘಾಟನ್ನು ಸೇರುತ್ತಾರೆ.

ಅಲ್ಲಿಯ ದೃಶ್ಯವನ್ನು, ಹಾಗೂ ಸುಮ್ಮನೆ ಅಲ್ಲಿದ್ದು ಅನುಭವಿಸುವುದನ್ನು, ಮಾತುಗಳಲ್ಲಿ ವರ್ಣಿಸಲಾರೆ. ಅದನ್ನು ಅನುಭವಿಸಲು ನೀವು ಅಲ್ಲಿರಬೇಕು!

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೇವಲ ಅಲ್ಲಿ
ಇರುವ ಮಾತ್ರದಿಂದಲೇ ಸಾವಿನ ಭಯವು ನನ್ನಿಂದ
ಅದೃಶ್ಯವಾಯಿತು. ಅಲ್ಲಿದ್ದರೆ ನೀವು ಪ್ರತಿದಿನವೂ

ಸತತವಾಗಿ ದಹಿಸುತ್ತಿರುವ ಅನೇಕ ದೇಹಗಳನ್ನು ನೋಡುತ್ತೀರಿ. 'ನಾನು ಸಹ ಹೀಗೆಯೇ ಒಂದು ದಿನ ಸಾಯುತ್ತೇನೆ. . . ಇರಲಿ' ಎಂದುಕೊಳ್ಳುತ್ತೀರಿ, ಅಷ್ಟೇ! ನಿಮ್ಮ ಜೊತೆಯಲ್ಲಿ ಎಷ್ಟೊಂದು ಜನರಿದ್ದಾರಲ್ಲ ಎಂದುಕೊಳ್ಳುತ್ತೀರಿ! ನೀವು ಮತ್ತೊಮ್ಮೆ ವಿಹರಿಸಲು ಬಂದಿದ್ದೀರಿ ಎನ್ನುವಂತೆ ಇರುತ್ತದೆ, ಅಷ್ಟೆ! ಸಾವು ಎನ್ನುವುದರ ಬಗ್ಗೆ ನೀವು ಒಬ್ಬಂಟಿಗರು ಎನಿಸುವುದಿಲ್ಲ.

ನಿಮ್ಮ ಜೀವನದಲ್ಲಿ ಒಂದೋ ಎರಡೋ ಮೃತದೇಹಗಳು ದಹಿಸುವುದನ್ನು ನೋಡಬಹುದು, ಆದುದರಿಂದ ನಿಮಗಿನ್ನೂ ಸಾವಿನ ಭಯವಿರುತ್ತದೆ. ಆದರೆ ಮಣಿಕರ್ಣಿಕಾ ಘಾಟಿನಲ್ಲಿ ಶವಸಂಸ್ಕಾರ ಮಾಡುವುದಿಲ್ಲ. ಮೃತದೇಹವನ್ನು ತರುತ್ತಾರೆ. ನಂತರ, ‘ರಾಮ್‌ನಾಮ್ ಸತ್ಯಹೈ' ಎಂದು ಮೂರು ಬಾರಿ ಜಪಿಸುತ್ತಾ ನೇರವಾಗಿ ಗಂಗಾನದಿಯಲ್ಲಿ ಮುಳುಗಿಸುತ್ತಾರೆ. ಅಷ್ಟುಹೊತ್ತಿಗೆ ಚಿತೆಯು ಸಿದ್ಧವಾಗಿರುತ್ತದೆ. ಸೋದೆಯನ್ನು ಸಿದ್ಧಪಡಿಸಿರುತ್ತಾರೆ. ನೀರಿನಿಂದ ನೇರವಾಗಿ ದೇಹವನ್ನು ತಂದು ದಹಿಸುತ್ತಾರೆ, ಮುಗಿಯಿತು!

ಅಲ್ಲಿಯ ಒಂದು ಕುತೂಹಲಕಾರೀ ವಿಷಯವೆಂದರೆ,
ಸಂಬಂಧಿಗಳಾರೂ ಅಲ್ಲಿದ್ದು ನಂತರದ
ಸಂಸ್ಕಾರಗಳನ್ನು ಮಾಡುವುದಿಲ್ಲ. ದೇಹವನ್ನು
ಗಂಗೆಯಲ್ಲಿ ಮುಳುಗಿಸಿ ದಹಿಸಲು ಇಟ್ಟಕೂಡಲೇ
ಹೋಗಿಬಿಡುತ್ತಾರೆ, ಅಷ್ಟೇ! ಆ ಘಾಟನ್ನು
ನೋಡಿಕೊಳ್ಳುವವರು ಉಳಿದುದರ ಜವಾಬ್ದಾರಿ
ವಹಿಸುತ್ತಾರೆ. ತಂದ ಮೃತದೇಹವು ದಹಿಸಲು
ಎಷ್ಟು ಕಾಲ ತೆಗೆದುಕೊಳ್ಳುತ್ತದೆ ಎಂಬುದೂ ನಿಮಗೆ
ತಿಳಿಯುವುದಿಲ್ಲ. ಅಲ್ಲೊಂದು ದೊಡ್ಡ ಸಾಲೇ
ಇರುತ್ತದೆ. ಹಾಗೆಯೇ ಒಂದೇ ಸಮನೆ ದಹನಕ್ರಿಯೆ
ನಡೆಯುತ್ತಿರುತ್ತದೆ.

‘ನಾನಿಲ್ಲಿಯೇ ಕುಳಿತು ನಡೆಯುವುದನ್ನು ನೋಡೋಣ' ಎಂದು ನನ್ನಲ್ಲಿಯೇ ನಿರ್ಧರಿಸಿ ಘಾಟಿನಲ್ಲಿ ಕುಳಿತೆ. ಕೇವಲ ಒಂದು ಘಂಟೆ ಕಾಲದಲ್ಲಿ ಸಾವೆಂಬುದು ಯಾರೋ ಒಬ್ಬ ಸಂಬಂಧಿಕರಿಗೋ, ಸ್ನೇಹಿತರಿಗೋ ಸಂಭವಿಸುವಂತಹ ಒಂದು ವಿಚಿತ್ರವಾದ ಘಟನೆಯಲ್ಲವೆನಿಸಿತು. ಒಂದಾದರ ಮೇಲೊಂದು ಮೃತದೇಹಗಳು ಬರುತ್ತಿದ್ದುದನ್ನು ಗಮನಿಸುತ್ತಾ ಅಲ್ಲಿ ಕುಳಿತಿದ್ದೆ. ಅದೂ ಬೇರೆ ಎಲ್ಲ ಸಾಲುಗಳಂತೆಯೇ ಇತ್ತು, ಅಷ್ಟೇ! ಬೇರೆ ಬೇರೆ ಗಾತ್ರಗಳ, ಲಿಂಗಗಳ, ವಯಸ್ಸಿನ ಹಾಗೂ ಪಂಗಡಗಳ ಮೃತದೇಹಗಳು ಉರಿಯುತ್ತಿದ್ದ ಅಗ್ನಿಗೆ ಆಹುತಿಯಾಗಲು ಬರುತ್ತಿದ್ದುವು.

ಮೃತದೇಹಗಳು ಸತತವಾಗಿ ದಹಿಸುತ್ತಿರುವುದನ್ನು
ನೋಡಿದಾಗ, ನೀವು ಮರಣಕ್ಕೆ ಕೊಡುವ
ಮರ್ಯಾದೆಯು ಬಿಟ್ಟುಹೋಗುತ್ತದೆ. ಈಗ ನಿಮಗೆ
ಮರಣದ ಬಗ್ಗೆ ವಿಪರೀತವಾದ ಗೌರವ,
ವಿಪರೀತವಾದ ಕಲ್ಪನೆಗಳು ಇರುತ್ತವೆ. ಅದೇ
ಸಮಸ್ಯೆ. ವಾಸ್ತವವಾಗಿ ಸಾವೆಂದರೆ ಇದಲ್ಲದೆ
ಇನ್ನೇನಲ್ಲ. ಒಳಹೋಗುವ ಉಸಿರು
ಹೊರಬರುವುದಿಲ್ಲ ಅಷ್ಟೇ. ಅದಕ್ಕಿನ್ನೇನನ್ನೂ
ಮಾಡಲಾಗುವುದಿಲ್ಲ. ಅದನ್ನು ರೀವೈಂಡ್ ಆಗಲೀ
ಫಾಸ್ಟ್ ಫಾರ್ವರ್ಡ್ ಆಗಲೀ ಮಾಡಲಾಗುವುದಿಲ್ಲ.

ಈ ದೃಶ್ಯವನ್ನು ನಾನು ಒಂದೇ ಸಮನೆ
ನೋಡುತ್ತಿದ್ದಂತೆಯೇ ಮರಣದ ಬಗ್ಗೆ ಇದ್ದ
ಅಲ್ಪಸ್ವಲ್ಪ ಭಯವೂ ಮಾಯವಾಗಿದ್ದೇ ಅಲ್ಲದೆ,
ಬರುಬರುತ್ತಾ ಅದು ನಿಜವಾಗಿಯೂ ನೋಡಲು
ಸ್ವಾರಸ್ಯಕರವಾಗಿದೆ ಎನಿಸಿತು. ಉರಿಯನ್ನು
ನೋಡಿಕೊಳ್ಳುವವರ ಬಳಿ ಹೋಗಿ ಅವರಿಗೆ ಸಹಾಯ
ಮಾಡತೊಡಗಿದೆ. ಅವರಿಗೆ ಸಹಾಯ
ಮಾಡುತ್ತಿದ್ದಂತೆಯೇ 'ಎಷ್ಟೇ ಆಗಲಿ ಒಂದು ದಿನ

ಈ ನನ್ನ ದೇಹವೂ ಸಹ ಈಗ ದಹಿಸುತ್ತಿರುವ ಶವದಂತಾಗುತ್ತದೆ' ಎಂದುಕೊಳ್ಳುತ್ತಿದ್ದೆ.

ಸಾವು ನಿಮಗೂ ಸಂಭವಿಸುತ್ತದೆಂದು
ನೆನೆಸಿಕೊಂಡಾಗ, ನಿಮ್ಮ ಅಹಂಭಾವಕ್ಕೆ ನೀವು
ಕೊಡುವ ಗೌರವವು ಕಡಿಮೆಯಾಗುತ್ತದೆ. ಏಕೆಂದರೆ,
ಯಾವುದಾದರೂ ನಿಮ್ಮನ್ನು ಬಿಟ್ಟುಹೋಗಬಾರದು
ಎಂದುಕೊಂಡಾಗಲೆಲ್ಲಾ, ಅದು ಅಹಂಕಾರವೇ
ಆಗಿರುತ್ತದೆ, ಬೇರೇನಲ್ಲ. ಸಕಲವೂ ನಿಮ್ಮನ್ನು
ಬಿಟ್ಟುಹೋಗುತ್ತದೆ ಎಂಬುದು ನಿಶ್ಚಯವಾದಾಗ
ಅಹಂಕಾರಕ್ಕಿರುವ ಮನ್ನಣೆಯು ಸುಮ್ಮನೆ
ಬಿಟ್ಟುಹೋಗುತ್ತದೆ. ನನ್ನ ಅಹಂಕಾರದ ಮೇಲೆ
ನನಗಿದ್ದ ಗೌರವವೂ ನನ್ನನ್ನು ಬಿಟ್ಟುಹೋಯಿತು.

ಆಗ ನಾನು ನಿರ್ಧರಿಸಿದೆ, 'ಎಷ್ಟೇ ಆದರೂ ನಾನು
ಒಂದಲ್ಲಾ ಒಂದು ದಿನ ಸಾಯುವವನು. ಈಗಲೇ
ಪ್ರಜ್ಞಾಪೂರ್ವಕವಾಗಿ ಸತ್ತು, ಉಳಿದ ಜೀವನವನ್ನು
ಮರಣಭಯವಿಲ್ಲದೆಯೇ ಬದುಕಬೇಕು, ಇಲ್ಲವೇ
ನಿಜವಾಗಿಯೂ ಸಾಯಬೇಕು ಅಷ್ಟೇ. ಒಂದಲ್ಲಾ
ಒಂದು ರೀತಿಯಲ್ಲಿ ಸಾವು ಆಗುವುದನ್ನು ನಾನು
ಕಾಣಲೇಬೇಕು' ಎಂದು.

ಮೂಲೆಯಲ್ಲೊಂದು ಚಿಕ್ಕ ಶಿವನ ಗುಡಿ, ಅದರ
ಮೇಲೊಂದು ಗೋಪುರ ಇತ್ತು. ಯಾರೂ ನನಗೆ
ಅಡಚಣೆ ಮಾಡದಿರಲೆಂದು ಆ ಗೋಪುರದಲ್ಲಿ
ಹೋಗಿ ಕುಳಿತೆ. ಅಲ್ಲಿ ಕುಳಿತು, ಮೃತದೇಹಗಳು
ದಹಿಸುತ್ತಿರುವುದನ್ನು ಗಮನಿಸಲಾರಂಭಿಸಿದೆ.

ಇಡೀ ಅನುಭವವು ನಡೆಯಲು ಪ್ರಚೋದಿಸಿದ ಆ
ಕ್ಷಣದಲ್ಲಿ ಉಂಟಾದ ಅರಿವು, ಗಾಢವಾದ ಸ್ಪಷ್ಟತೆ,
ಹಾಗೂ ಆಳವಾದ ತಿಳಿವಳಿಕೆ ಎಲ್ಲವೂ ನನಗೆ
ನೆನಪಿದೆ.

ಭಯ
ಹೊರಬಂದಾಗಲೆಲ್ಲಾ
ಅದನ್ನು
ಪ್ರಜ್ಞಾಪೂರ್ವಕವಾಗಿ
ಎದುರಿಸದಿದ್ದರೆ
ಅದೊಂದು
ಭಯಾಘಾತವಾಗಿ
ಪರಿಣಮಿಸುತ್ತದೆ.

ವಯಸ್ಸಾದ ಮಹಿಳೆಯೊಬ್ಬಳ ದೇಹವನ್ನು ದಹಿಸಲಾಗುತ್ತಿತ್ತು. ಆಕೆಗೆ ದೊಡ್ಡ ಹೊಟ್ಟೆ ಇತ್ತು. ಆಕೆಯ ಬಟ್ಟೆಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿತ್ತು. ನಂತರ ಹೊಟ್ಟೆಯಲ್ಲಿದ್ದ ಕೊಬ್ಬು ಕರಗಿ, ಹರಿಯಲಾರಂಭಿಸಿತು. ಇದನ್ನು ಇಷ್ಟೊಂದು ವಿಷದವಾಗಿ ವಿವರಿಸುತ್ತಿರುವುದಕ್ಕಾಗಿ ಕ್ಷಮೆ ಇರಲಿ. ಆದರೆ ಆ ಗಾಢಾನುಭವವನ್ನು ವಿವರಿಸಲು ಹೀಗೆ ಮಾಡಲೇಬೇಕಾಗಿದೆ! ಕೊಬ್ಬು ಹರಿದು ಬರುತ್ತಿದ್ದುದ್ದರಿಂದ ಬೆಂಕಿಯು ಇನ್ನೂ ಹೆಚ್ಚು ತೀವ್ರತೆಯಿಂದ ಉರಿಯುತ್ತಿದ್ದುದನ್ನು ನೋಡುತ್ತಿದ್ದೆ. ಬಹಳ ಗಾಢವಾದ 'ಕ್ಲಿಕ್', ಅಂದರೆ ತಿಳಿವಳಿಕೆಯು ಘಟ್ಟನೆ ನನ್ನಲ್ಲಿ ಹೊಳೆಯಿತು. 'ದೇವರೇ! ನಿಜ, ಈ ದೇಹಕ್ಕೂ ಇದೇ ಆಗುವುದು!' ಎಂದುಕೊಂಡೆ.

ಆ ಕ್ಲಿಕ್ ನನ್ನೊಳಗೆ ಆಳವಾಗಿದ್ದ ಮರಣಭಯವನ್ನು ತೆರೆಯಿತು. ಆ ಭಯವು ದೇಹವನ್ನೆಲ್ಲಾ ಆಕ್ರಮಿಸಿತು. ಆದರೆ ನಾನು ಆ ಭಯವನ್ನು ಪ್ರಜ್ಞಾಪೂರ್ವಕವಾಗಿ ಎದುರಿಸಿದೆ. ದೇಹದಲ್ಲೆಲ್ಲಾ ಭಯವು ಆವರಿಸುತ್ತಿದ್ದದ್ದನ್ನು ಸ್ಪಷ್ಟವಾಗಿ ಕಾಣುತ್ತಿದ್ದು, ಭಯವು ನನ್ನ ಅರಿವನ್ನು ತಟ್ಟಿದಾಗ, ಅದು ನನ್ನ ಮರಣಾನುಭವವಾಯಿತು. ಪ್ರಜ್ಞಾಪೂರ್ವಕವಾಗಿ ನನ್ನ ಸ್ವಂತ ಸಾವನ್ನು ಅನುಭವಿಸಿ ಅದರಿಂದ ಹೊರಬಂದೆ.

ಭಯವನ್ನು ಅದುಮಿಟ್ಟಾಗಲೆಲ್ಲಾ ಅದು ನಿಮ್ಮಲ್ಲಿಯೇ
ಇರುತ್ತದೆಂಬುದನ್ನು ತಿಳಿದುಕೊಳ್ಳಿರಿ. ಭಯವು
ಹೊರಬಂದಾಗ, ಅದನ್ನು ಪ್ರಜ್ಞಾಪೂರ್ವಕವಾಗಿ

ಎದುರಿಸದಿದ್ದರೆ ಅದೊಂದು ಭಯಾಘಾತವಾಗಿ ನಿಮ್ಮ
ಇಡೀ ನರವ್ಯೂಹವನ್ನೇ ನಡುಗಿಸಿ,
ನಾಶಗೊಳಿಸುತ್ತದೆ. ಭಯವನ್ನು
ಪ್ರಜ್ಞಾಪೂರ್ವಕವಾಗಿ ಎದುರಿಸಿದಾಗ ಅದು
ಮರಣಾನುಭವವಾಗುತ್ತದೆ, ಅಷ್ಟೇ!

ಭಯವು ಮೇಲೇಳುತ್ತಿದ್ದದ್ದನ್ನು ನನಗೆ ಸ್ಪಷ್ಟವಾಗಿ ನೋಡಲಾಗುತ್ತಿತ್ತು. ನಾನು ಅರಿವಿನೊಂದಿಗೆ ಪ್ರಜ್ಞಾಪೂರ್ವಕವಾಗಿ ಎದುರಿಸಿದಾಗ ಅದು ನನ್ನ ಮರಣಾನುಭವವಾಯಿತು. ದೇಹವು ಮೃತವಾಗಿತ್ತು. ಅದು ಚಲಿಸುತ್ತಿರಲಿಲ್ಲ.

ಎರಡೂವರೆ ದಿನಗಳಕಾಲ ನನಗೆ ಆಹಾರ, ಆಲೋಚನೆ, ಪ್ರಶ್ನೆ, ಅನುಮಾನಗಳಾವುವೂ ಇರಲಿಲ್ಲ. ದೇಹ ಮಾತ್ರ ಅಲ್ಲಿತ್ತು. ಆ ಅನುಭವವು ಕಳೆದ ಮೇಲೆ ಮಾತ್ರವೇ, ಎರಡೂವರೆ ದಿನಗಳು ಹಾಗಿದ್ದೆನೆಂಬ ಅರಿವಾದದ್ದು! ಕಣ್ಣು ಮುಚ್ಚಿಕೊಂಡಿದ್ದರೂ ದೇಹವು ಮೃತ ಹೊಂದಿದ್ದು, ಅದಕ್ಕೆ ಯಾವುದೇ ಚಲನೆಯೂ ಇಲ್ಲ ಎಂಬುದು ಕಾಣಿಸುತ್ತಿತ್ತು. ಎರಡೂವರೆ ದಿನಗಳಾದ ನಂತರ ಇದ್ದಕ್ಕಿದ್ದಂತೆಯೇ ಆ ಸ್ಪಷ್ಟತೆಯು ಪುನಃ ಹೊಳೆಯಿತು, 'ದೇವರೇ! ದೇಹವು ಮರಣಹೊಂದಿದೆ, ಆದರೆ ನಾನು ಇನ್ನೂ ಬದುಕಿದ್ದೇನೆ!' ಎಂದು. ಆ ಸ್ಪಷ್ಟತೆಯು ನನಗೆ ಹೊಳೆದಾಗ, ಅದು ಗಾಢವಾದ ಪರಮಾನಂದವಾಯಿತು! ಮರಣಭಯವು ಶಾಶ್ವತವಾಗಿ ನನ್ನನ್ನು ಬಿಟ್ಟುಹೋಗಿತ್ತು.

ನಾನು ಅದೆಂತಹ ಗಾಢ ಭಾವಾವೇಶದಲ್ಲಿ, ಎಂತಹ ಸಂತೋಷದಲ್ಲಿ ಹಾಗೂ ಎಂತಹ ಆನಂದದಲ್ಲಿದ್ದೆ! ನಿಧಾನವಾಗಿ ಕಣ್ಣುಗಳನ್ನು ತೆರೆದೆ, ನಂತರ ದೇಹವನ್ನು ಚಲಿಸಲು ಸಾಧ್ಯವಾಯಿತು. ಮೊದಲನೆಯದಾಗಿ ಎಂತಹ ಹರ್ಷೋನ್ಮಾದದ ಸುರಿಮಳೆ ಹಾಗೂ ಕೃತಜ್ಞತೆಯನ್ನನುಭವಿಸಿದೆ! ಗಂಗೆಗೆ ತೆರಳಿ ಸ್ವಲ್ಪ ಗಂಗಾಜಲವನ್ನು ನನ್ನ ಮೇಲೆ ಪ್ರೋಕ್ಷಿಸಿಕೊಂಡೆ. ನನ್ನ ಕಮಂಡಲುವಿನಲ್ಲಿ ತುಂಬಿಸಿಕೊಂಡೆ. ಚಿತಾಗ್ನಿಯಿಂದ ಸ್ವಲ್ಪ ಭಸ್ಮವನ್ನು ತೆಗೆದುಕೊಂಡೆ ನಂತರ ನೇರವಾಗಿ ಕಾಶಿವಿಶ್ವನಾಥ ದೇವಾಲಯಕ್ಕೆ ಹೋದೆ. ಶಿವಲಿಂಗಕ್ಕೆ ಹೋಗಿ, ತಂದಿದ್ದ ಭಸ್ಮದಿಂದ ಹೇಳಲಾರದಷ್ಟು ಕೃತಜ್ಞತೆಯಿಂದ ಪೂಜೆಮಾಡಿದೆ. ವಿಶ್ವನಾಥನು ಅಲ್ಲಿ ಜೀವಂತವಾಗಿರುವುದನ್ನು ಕಂಡೆ!

ಇಲ್ಲಿ ತಿಳಿಯಬೇಕಾದ ಅಂಶವೆಂದರೆ 'ನಾನು' ಸತ್ತಿದ್ದರಿಂದ ವಿಶ್ವನಾಥನು ಬದುಕಿದನು! ಹಿಂದಿನ ದಿನದವರೆಗೂ 'ನಾನು' ಇನ್ನೂ ಬದುಕಿದ್ದುದರಿಂದ ವಿಶ್ವನಾಥನು ಯಾವಾಗಲೂ ಒಂದು ಸಾಧಾರಣ ಶಿಲೆಯೇ ಆಗಿದ್ದನು. ಆ ಶಿಲೆಯನ್ನು ಸ್ಪರ್ಶಿಸಲು ಸಾವಿರಗಟ್ಟಲೆ ಜನರು ಎಷ್ಟೋ ದೂರದಿಂದ ಪ್ರತಿದಿನವೂ ಬರುತ್ತಿರುತ್ತಾರೆ . . . . ಎಂತಹ ಮೂರ್ಖತನ! ಎಂದೆನಿಸುತ್ತಿತ್ತು. ವಿಶ್ವನಾಥ ಮೂರ್ತಿಯು ಸಾಧಾರಣ ಶಿಲೆಯೆಂದೇ ಯಾವಾಗಲೂ ಎಂದುಕೊಂಡಿದ್ದೆ. ಹಾಗೇಕೆ ಅನ್ನಿಸುತ್ತಿತ್ತೆಂದರೆ 'ನಾನು' ಇನ್ನೂ ಬದುಕಿದ್ದೆ. 'ನಾನು' ಮರಣಹೊಂದಿದಾಗ ಆತನು 'ಸಜೀವ'ಗೊಂಡದ್ದನ್ನು ಸ್ಪಷ್ಟವಾಗಿ ಕಂಡೆನು!

ಆತ, ಇಲ್ಲವೇ ನೀವು, ಯಾರಾದರೊಬ್ಬರು
ಮಾತ್ರವೇ ಜೀವಂತವಾಗಿರಲು ಸಾಧ್ಯ. ಸತ್ಯದ
ದರ್ಶನವಾದಾಗ ಆತನು ಸಜೀವಗೊಳ್ಳುತ್ತಾನೆ. ನೀವು
ಈಗ ಜೀವಂತವಾಗಿರುವುದಾಗಿ ಯೋಚಿಸುವಂತೆ
ಇನ್ನಿರುವುದಿಲ್ಲ. ಮರಣಭಯವು ಒಂದೇ ಬಾರಿಗೆ
ನನ್ನಿಂದ ಹೊರಟುಹೋಯಿತು. ಜ್ಞಾನೋದಯದ
ಅಂತಿಮ ಅನುಭವವನ್ನು ಅನ್ವೇಷಿಸಲೆಂದು ನನ್ನನ್ನು
ಪರಿವರ್ತಿಸಿದ ಬಹಳ ಗಾಢವಾದ ಅನುಭವಗಳಲ್ಲಿ
ಇದೂ ಒಂದು ಎಂದು ಹೇಳಬಲ್ಲೆ.