KAILASA Library/ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)/ವಿಶ್ವಶಾಂತಿSign in
ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)

ವಿಶ್ವಶಾಂತಿ

This text was machine-transcribed from the printed book and may contain errors. Select the words and choose “Report a mistake”.

ಪಾಶ್ಚಿಮಾತ್ಯ ದೇಶಗಳಲ್ಲಿ ಯಾವುದಾದರೂ ಒಂದು ಗುಂಪು ಪ್ರಪಂಚದಲ್ಲಿ ಎಲ್ಲಿಯೋ ನಡೆಯುತ್ತಿರುವ ಯುದ್ಧದ ಬಗ್ಗೆ ಅಸಮ್ಮತಿಯನ್ನು ಸೂಚಿಸಲು ಬೀದಿಗಿಳಿದು ಪ್ರದರ್ಶನ ಮಾಡುತ್ತಾರೆ. ಇಂತಹ ಪ್ರದರ್ಶನಗಳು ಹಿಂಸೆ, ಧ್ವಂಸಗಳಲ್ಲಿ ಕೊನೆಯಾಗುತ್ತವೆ. ಹೀಗೇಕೆ? ಅಹಿಂಸಾಪರ ಸಂಸ್ಥೆಗಳೂ ಕೂಡ ಹಿಂಸಾತ್ಮಕ ಭಾಷೆಯನ್ನು ಬಳಸುತ್ತವೆ.

‘ಅಹಿಂಸಾ’ ಎಂಬುದು ನಿಮ್ಮೊಳಗೇಯೇ ಆರಂಭವಾಗುತ್ತದೆ. ಸಂಯಮದಲ್ಲಿರುವ ವ್ಯಕ್ತಿಯಲ್ಲಿ ಹಿಂಸೆಯು ತಾನಾಗಿಯೇ ಸಹಜವಾಗಿ ಕಳಚಿ ಬೀಳುತ್ತದೆ. ತನಗೆ ತಾನೇ ಘಾಸಿ ಮಾಡಿಕೊಳ್ಳುವುದನ್ನು ಪ್ರಯತ್ನ ಪೂರ್ವಕವಾಗಿ ನಿಲ್ಲಿಸಿರುತ್ತಾನೆ. ತನ್ನಲ್ಲಿ ಶಾಂತಿಯನ್ನು ಬೆಳೆಸುವುದರ ಮೂಲಕ ವಿಶ್ವಕ್ಕೆ ಸಕಾರಾತ್ಮಕ ಶಾಂತಿಯನ್ನು ನೀಡುತ್ತಾನೆ.

ಅಮೇರಿಕದ ವಾಷಿಂಗ್ಟನ್‌ನಲ್ಲಿ ನಡೆದ ಸ್ವಾರಸ್ಯಕರವಾದ ಪ್ರಯೋಗ ಶ್ರೇಣಿ ಹೀಗಿದೆ:

ಒಂದು ಗುಂಪು ಜನರನ್ನು ಏಕಕಾಲದಲ್ಲಿ ಧ್ಯಾನಮಾಡುವಂತೆ ಹೇಳಲಾಯಿತು. ಆ ಊರಿನಲ್ಲಿ ಈ ಧ್ಯಾನ ಮಾಡುವ ಮುಂಚೆ, ಧ್ಯಾನ ನಡೆಯುತ್ತಿರುವಾಗ ಮತ್ತು ಧ್ಯಾನದ ನಂತರ ಹಿಂಸಾಪ್ರಕರಣಗಳ ಅಂಕಿ-ಅಂಶಗಳನ್ನು ದಾಖಲಿಸಲಾಯಿತು. ಆಶ್ಚರ್ಯವೆಂದರೆ, ಧ್ಯಾನವನ್ನು ಮಾಡುತ್ತಿದ್ದಾಗ ಆ ಊರಿನ ಹಿಂಸಾಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು!

ಈ ಪ್ರಯೋಗಗಳನ್ನು ಅನೇಕ ವಿಶ್ವವಿದ್ಯಾಲಯಗಳಲ್ಲಿ, ಬೇರೆ ಬೇರೆ ನಗರಗಳಲ್ಲಿಯೂ ನಡೆಸಲಾಯಿತು. ಇದು ಧ್ಯಾನದ ಸಕಾರಾತ್ಮಕ ಪರಿಣಾಮವು ಕೇವಲ ಆಕಸ್ಮಿಕವಲ್ಲವೆಂಬುದನ್ನು ನಿರೂಪಿಸಿತು.

ನಮ್ಮ ನಡುವೆ ಇರುವ ಸಂಬಂಧ ಕೇವಲ ಸಾಮಾಜಿಕ ಮಾತ್ರವಲ್ಲನಾವೆಲ್ಲರೂ ಆ ಪರಿಪೂರ್ಣತೆಯ ಅಂಶಗಳು. ನಾವುಗಳು ಒಂದು ಸಮಗ್ರ ಅರಿವು.

ನಾವೆಂದುಕೊಂಡಂತೆ ನಾವು ಒಂಟಿ ದ್ವೀಪಗಳಲ್ಲ. ನಮ್ಮ ಆಲೋಚನೆಗಳು, ರಾಗ-ಭಾವಗಳು, ಅನಿಸಿಕೆಗಳು, ನಮ್ಮನ್ನು ಮಾತ್ರವಲ್ಲದೆ ಇಡೀ ವಿಶ್ವವನ್ನೇ ನಾಟುತ್ತವೆ. ನಾವೆಲ್ಲರೂ ಶಾಂತಿಯನ್ನು ಅನುಭವಿಸಿ ಹೊರಸೂಸಿದರೆ ಸುಂದರವಾದ ವಿಶ್ವಶಾಂತಿಯು ತಾನಾಗಿಯೇ ಮೂಡುತ್ತದೆ. ಹಾಗೆಯೆ, ಒಬ್ಬ ವ್ಯಕ್ತಿಯು ಸ್ವತಃ ಬದಲಾಗುವುದರ ಮೂಲಕ ಇತರರಲ್ಲೂ ಪರಿವರ್ತನೆಯನ್ನು ತರಬಲ್ಲನು!

ನಮ್ಮ ದಿವ್ಯತೆಯನ್ನು ನಾವು ಅರಿತಾಗ, ನಮ್ಮನ್ನು ನಾವು ಗೌರವಿಸುವುದಲ್ಲದೆ ಇಂತಹ ಅದ್ಭುತವಾದ ದೇಹ-ಮನಸ್ಸುಗಳ ರಚನೆ ಹಾಗೂ ಜೀವನವೆಂಬ ಕೊಡುಗೆಯ ಬಗ್ಗೆ ವಿಸ್ಮಯ ಮತ್ತು ಧನ್ಯತಾಭಾವವನ್ನು ಹೊಂದುತ್ತೇವೆ.

ನಮ್ಮ ಶರೀರವೇ ದೇವಾಲಯ ಎಂಬುದನ್ನು ಎಂದಿಗೂ ‘ಮರೆಯಬೇಡಿ’.

ದುರದೃಷ್ಟವಶಾತ್ ನಾವು ನಮ್ಮ ಅದ್ಭುತ ಚೈತನ್ಯವನ್ನು ತಿರಸ್ಕರಿಸಿ ತೊಂದರೆಗಳನ್ನು ಸೃಷ್ಟಿಸಿ ಜೀವನದ ನಿಯಮಗಳಿಗೆ ಅಡ್ಡಿಮಾಡುತ್ತೇವೆ..

ಆಗ ವಿಶ್ವದ ಸಾಮೂಹಿಕ ನಕಾರಾತ್ಮಕತೆಯಲ್ಲಿ ನಾವೂ ನಮ್ಮ ಕೊಡುಗೆಯನ್ನು ಸೇರಿಸುತ್ತೇವೆ. ಪ್ರಕೃತಿಯಲ್ಲುಂಟಾಗುವ ಪ್ರಕೋಪಗಳು ಈ ಸಾಮೂಹಿಕ ನಕಾರಾತ್ಮಕತೆಯ ಭೌತಿಕ ಅಭಿವ್ಯಕ್ತಿಗಳು. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ವಿಶ್ವಶಾಂತಿಯ ಕಲ್ಪನೆಯನ್ನು ಸಾಕಾರಗೊಳಿಸುವ ಸಕಾರಾತ್ಮಕ ಚೈತನ್ಯವನ್ನು ಬೆಳೆಸಿ ನಾವೂ ಬೆಳೆಯುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದು ಘಟಿಸಲು ನಾವೆಲ್ಲರೂ ವೈಯುಕ್ತಿಕವಾಗಿ ಇದಕ್ಕೆ ಹೊಣೆಗಾರರು. ಇದನ್ನು ದೊಡ್ಡ ಪ್ರಮಾಣದಲ್ಲಿ ಸಾಕಾರಗೊಳಿಸುವ ಹೊಣೆ ನಮ್ಮ ಕೈಲಿದೆ.

ಪರಿಹಾರಗಳನ್ನು ಹೊರ ಪ್ರಪಂಚದಲ್ಲಿ ಹುಡುಕುತ್ತಾ ಅಲೆಯುವುದು ನಿಲ್ಲಿಸುವ ಕಾಲ ಬಂದಿದೆ. ನಮ್ಮ ಅಂತರಾಳದ ಒಳಹೊಕ್ಕು ಜೀವನವನ್ನು ಆಧ್ಯಾತ್ಮಿಕಗೊಳಿಸುವ ಕಾಲ ಬಂದಿದೆ. ವೈಯುಕ್ತಿಕ ಬದಲಾವಣೆಯಿಂದ ಮಾತ್ರ ವಿಶ್ವವನ್ನು ಪರಿವರ್ತಿಸಲು ಸಾಧ್ಯ.

ಆತ್ಮ ಸಾಕ್ಷಾತ್ಕಾರ ಹೊಂದಿದ ಮಹಾತ್ಮರು ಪದೇ ಪದೇ ಇದೇ ಸಂದೇಶವನ್ನು ಸಾರಿದ್ದಾರೆ.

ನಿಮ್ಮ ಅಂತರಾಳಕ್ಕೆ ಹತ್ತಿರ ಹತ್ತಿರ ಹೋದಂತೆ ಮಹಾತ್ಮರು ಉಪದೇಶಿಸಿರುವ ಎಲ್ಲ ಸತ್ಯಗಳು ನಿಮಗೆ ಗೋಚರವಾಗುತ್ತವೆ.

ಒಂದು ಸಣ್ಣ ಕಥೆ:

ಒಂದು ನರಿಗೆ ಬಹಳ ದಾಹವಾಗಿತ್ತು. ಬಾಯಾರಿ ಬಳಲಿದ ಆ ನರಿಯು ಒಂದು ನದಿಯ ಅಂಚಿಗೆ ಹೋದ ಕೂಡಲೇ ನೀರನ್ನು ಕುಡಿಯಲಾರಂಭಿಸಿತು.

ನೀರಿನಲ್ಲಿದ್ದ ಮೀನೊಂದು ನರಿಯ ಈ ಕಾತರತೆಯನ್ನು ನೋಡಿ "ಈ ನೀರು ನಿನಗೆ ಇಷ್ಟೇಕೆ ರುಚಿಸುತ್ತದೆ? ನನಗೆ ಅಷ್ಟೇನೂ ರುಚಿಸುವುದಿಲ್ಲವಲ್ಲಾ" ಎಂದಿತು.

ನರಿಯು "ನಾನು ನೀರಿಗಾಗಿ ಅಷ್ಟೇಕೆ ಹಂಬಲಿಸುತ್ತೇನೆಂದು ತಿಳಿಯಬೇಕೇ?" ಎಂದು ಕೇಳಿತು. ಮೀನು "ಹೌದು" ಎಂದಿತು.

Fox talking to a fish

ತಕ್ಷಣವೇ ನರಿಯು ಮೀನನ್ನು ಹಿಡಿದು ಕಾದ ಮರಳಿನ ಮೇಲೆ ಹಾಕಿತು. ಆ ಮೀನು ನೀರಿಲ್ಲದೆ ಚಡಪಡಿಸಿತು. ಅದು ಇನ್ನೇನು ಸಾಯುವ ಸ್ಥಿತಿಯಲ್ಲಿದ್ದಾಗ ನರಿಯು ಅದನ್ನು ನೀರಿಗೆ ಹಾಕಿ 'ಈಗ ತಿಳಿಯಿತೆ, ನೀರಿಗಾಗಿ ಅಷ್ಟೇಕೆ ಹಂಬಲಿಸುವೆನೆಂದು?' ಎಂದಿತು. ಮೀನು 'ಹೌದು - ಈ ನೀರೇ ನನಗೆ ಜೀವವೆಂದೂ, ಅದಿಲ್ಲದೆ ನಾನು ಬದುಕಲಾರೆನೆಂದೂ ಈಗ ತಿಳಿಯಿತು!' ಎಂದಿತು.

ಪ್ರಾಪಂಚಿಕ ಜೀವನದ ಚಕ್ರಬಿಂಬನ ಕೋಟೆಯಲ್ಲಿ ಸಿಲುಕಿದ ವ್ಯಕ್ತಿಯ ಚಡಪಡಿಕೆಯು ಅನ್ವೇಷಣೆಯಾಗಿ, ಅನ್ವೇಷಣೆಯು ಕಾತರತೆಯಾಗಿ, ಕಾತರತೆ ಅನ್ವೇಷಣೆಯಾದಾಗ, ಆಧ್ಯಾತ್ಮಿಕತೆಯು ಜೀವಜಲವಾಗುತ್ತದೆ,

A fox at the water's edge looking at a fish swimming in the water
ನರಿ ಮತ್ತು ಮೀನು

ಮಾರ್ಗದರ್ಶಿಯೂ, ಪರಿಹಾರವೂ, ಜೀವನದ ಗುರಿಯೂ ಅದೇ ಆಗುತ್ತದೆ. ಆಧ್ಯಾತ್ಮಿಕತೆಯೇ ಅಂತಿಮ ವಿಜ್ಞಾನ- ಮಾಯೆಯು ನಶಿಸಿ ಶಾಶ್ವತ ಜೀವನವು ಆರಂಭವಾಗುವ ವಿಜ್ಞಾನ. ಅದು ಜೀವನ್ಮುಕ್ತಿಯ ವಿಜ್ಞಾನವೇ!.

ನಿರಂತರ ಆನಂದವಾದ 'ನಿತ್ಯಾನಂದ'ವು ನೀವಾಗಿ, ಅದನ್ನು ಪ್ರಕಾಶಿಸಿ, ವ್ಯಕ್ತಪಡಿಸುವಂತಾಗಲೀ! ಧನ್ಯವಾದಗಳು.

* * *