KAILASA Library/ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)/ಅನುಬಂಧSign in
ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)

ಅನುಬಂಧ

This text was machine-transcribed from the printed book and may contain errors. Select the words and choose “Report a mistake”.

ನಿತ್ಯಾನಂದರ ಬಗ್ಗೆ

ನಿತ್ಯಾನಂದ

ಮಾನವನ ಜೀವನದುದ್ದೇಶದ ಕೊನೆ
ಯಿಲ್ಲದ ಅನ್ವೇಷಣೆಯು ಈ ಸಾಲಿ
ನಿಂದ ಕೊನೆಗೊಳ್ಳುತ್ತದೆ. ಪರಮಾ
ನಂದವೇ ಹಾದಿ ಹಾಗೂ ಗುರಿ. ಇದು
ಪರಮಹಂಸ ನಿತ್ಯಾನಂದರ ಅನುಭವ
ಹಾಗೂ ಬೋಧನೆ. ನಿತ್ಯಾನಂದರು
ನಮ್ಮೊಡನೆ ಈಗಿರುವ ಒಬ್ಬ
ಜ್ಞಾನೋದಯ ಹೊಂದಿದ ಗುರು ಹಾಗೂ ಸಮಕಾಲೀನ
ಅತೀಂದ್ರಿಯವಾದಿ.

ಪರಮಾನಂದವು ಕೊನೆಯಲ್ಲಿ ಸಿಗುವಂತಹುದಲ್ಲ, ಆದರೆ ಅದರ ಹಾದಿಯೇ ಪರಮಾನಂದವೆಂಬ ಅವರ ಅನುಭವ ಸಹಿತ ಜ್ಞಾನವನ್ನು ಮೊದಲು ನೀಡುವುದೇ ಅವರ ಜೀವಿತದ ಧೈಯವಾಗಿದೆ. ಎಂದರೆ ದಿನದ 24 ಗಂಟೆಗಳಲ್ಲಿಯೂ ಪರಮಾನಂದದಲ್ಲಿ ಇರಲು ಸಾಧ್ಯವಾಗುವಂತಹ ಸ್ಥಿತಿ! ನಾವು ನಮ್ಮ ಚಿದಾವಕಾಶದಲ್ಲಿ ಶ್ರಮಿಸುವುದರ ಮೂಲಕ ಈ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದು ಅವರು ತಿಳಿಯಪಡಿಸುತ್ತಾರೆ.

ನಿತ್ಯಾನಂದರು ದಕ್ಷಿಣ ಭಾರತದ ಒಂದು ಪ್ರಮುಖವಾದ ಆಧ್ಯಾತ್ಮಿಕ ಕೇಂದ್ರವಾದ ತಿರುವಣ್ಣಾಮಲೈ, ಎಂಬ ಊರಿನಲ್ಲಿ ಜನಿಸಿದರು. ತೀವ್ರ ಧ್ಯಾನ, ಹಾಗೂ ಯೋಗ, ತಂತ್ರ ಮತ್ತು ಇತರ ಪೌರಾತ್ಯ ಅತೀಂದ್ರಿಯ ಜ್ಞಾನಗಳ ಅಧ್ಯಯನದ ಮೂಲಕ ಆಂತರ್ಯದ ಪರಮಾನಂದ ಸ್ಥಿತಿಯನ್ನು ಹೊಂದಿದರು. ವೈಯಕ್ತಿಕ ಅರಿವನ್ನು ಸ್ಫೋಟಗೊಳಿಸಿ ಆಧ್ಯಾತ್ಮಿಕವಾಗಿ ಬಲಶಾಲಿಗಳಾದ ವ್ಯಕ್ತಿಗಳನ್ನು ಸೃಷ್ಟಿಸಲು ಅವರು ಸ್ವಾನುಭವದಿಂದ ಪರಮಾನಂದದ ತಂತ್ರಶಾಸ್ತ್ರವನ್ನು ನಿರೂಪಿಸಿದ್ದಾರೆ.

ನಮ್ಮ ಸಹಜಸ್ಥಿತಿಯಾದ ಧ್ಯಾನದಲ್ಲಿ ಮುಳುಗಲು ಅವರು ಅಸಂಖ್ಯಾತ ಕ್ರಮವಿಧಾನಗಳನ್ನು ನಿರ್ಮಿಸಿದ್ದಾರೆ. ಅವರು, 'ವಾಸ್ತವ ಪ್ರಪಂಚದಲ್ಲಿ ಯಶಸ್ಸನ್ನು ಗಳಿಸಲು ಹಾಗೂ ಆಂತರ್ಯದಲ್ಲಿ ಆಳವಾದ ಪೂರ್ಣತೆಯನ್ನು ಪಡೆಯಲು, ಧ್ಯಾನವೊಂದೇ ಇಂತಹ ಬೀಗಗಳನ್ನು ತೆಗೆಯಬಲ್ಲ ಕೀಲಿಕೈ' ಎಂದು ಹೇಳುತ್ತಾರೆ.

ನಿತ್ಯಾನಂದ ಸಂಸ್ಥೆ

ನಿತ್ಯಾನಂದ ಸಂಸ್ಥೆಯು ಆಂತರಿಕ ಆನಂದಕ್ಕಾಗಿ ಪ್ರಪಂಚದಾದ್ಯಂತ ನಿಯೋಜಿಸಿರುವ ಆಂದೋಲನ.

ಪರಮಹಂಸ ನಿತ್ಯಾನಂದರ ಅವತಾರವು, ವೈಯಕ್ತಿಕ ಪ್ರಜ್ಞೆಯನ್ನು ಸಮಗ್ರ ಪ್ರಜ್ಞೆಯನ್ನಾಗಿಸಿ, ವರಿಷ್ಠ ಪ್ರಜ್ಞಾ ಪರಿಧಿಯನ್ನು ಪ್ರವೇಶಿಸುವ ನೂತನ ಆವರ್ತವನ್ನು ನಿರ್ಮಿಸುವುದಾಗಿದೆ.

ಇದನ್ನು ಸಾಧಿಸಲು ಸಂಸ್ಥೆಯು ಒಂದು ಕೋಟಿ ಜನರಿಗೆ 'ನಿತ್ಯಧ್ಯಾನ' ಎಂಬ ವಿಶಿಷ್ಟವಾದ ಧ್ಯಾನ ದೀಕ್ಷೆಯನ್ನೂ, ಒಂದು ಲಕ್ಷ ಜನರಿಗೆ ಜೀವನ್ಮುಕ್ತ ದೀಕ್ಷೆಯನ್ನೂ ನೀಡಬೇಕೆಂದು ಉದ್ದೇಶಿಸಿದೆ.

ನಿತ್ಯಾನಂದ ಸಂಸ್ಥೆಯ ಕೇಂದ್ರಗಳು ಹಾಗೂ ಆಶ್ರಮಗಳು ಪ್ರಪಂಚದಾದ್ಯಂತ ಆಂತರಿಕ ಬೆಳವಣಿಗೆಯು ಮಹತ್ತರವಾಗಿಯೂ, ಬಾಹ್ಯದ ಬೆಳವಣಿಗೆಯು ಸಹಜ ಪರಿಣಾಮವಾದಂತೆಯೂ ಮಾಡುವ ಆಧ್ಯಾತ್ಮಿಕ ಪ್ರಯೋಗಾಲಯಗಳಂತೆ ನಡೆಯುತ್ತವೆ. ಈ ವಿದ್ಯಾಸಂಸ್ಥೆಗಳು ಧ್ಯಾನದಿಂದ ವಿಜ್ಞಾನದವರೆಗೆ ಅನೇಕ ಚಟುವಟಿಕೆಗಳ ಮೂಲಕ ಸಂಶೋಧನೆಯನ್ನು ಬಯಲು ಮಾಡುವಿಕೆಗೆ ಸ್ಥಳ ಮತ್ತು ಅವಕಾಶಗಳಾಗಿ ರೂಪಿಸಲ್ಪಟ್ಟಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ಮಿಲನವಾಗಿ ಆನಂದವಾದ ಜೀವನವನ್ನು ಸೃಷ್ಟಿಸುವಲ್ಲಿ, ಅವು ಪರಿಮಾಣ ಆಧ್ಯಾತ್ಮಿಕತೆಯನ್ನು ಬೆಳೆಸುತ್ತವೆ.

ಅವು ಶೀಘ್ರವಾಗಿ ಪರಿಣಾಮಕಾರಿಯಾಗಿ ಬದಲಾವಣೆಗಳನ್ನು ಕೊಡುವಂತಹ ಖಚಿತ ಜೀವನ ಪರಿಹಾರಗಳನ್ನು ನೀಡುತ್ತಿವೆ. ಅಂತರರಾಷ್ಟ್ರೀಯ ವೇದಿಕ್ ಹಾಗೂ ವಿಶ್ವವಿದ್ಯಾಲಯದ ಮೂಲಕ ವೈರುಧ್ಯ ಶ್ರೇಣಿಯ ಧ್ಯಾನ-ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ ಸಿಸ್ಟಂ ಮೂಲಕ ಉಚಿತ ಶಕ್ತಿ ಉಪಶಮನವನ್ನೂ, ಉಚಿತ ಯುವ ಶಿಕ್ಷಣವನ್ನೂ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನವನ್ನೂ ಸಾಮುದಾಯಿಕ ಕಾರ್ಯಕ್ರಮಗಳನ್ನೂ, ಉಚಿತ ವೈದ್ಯಕೀಯ ಶಿಬಿರಗಳನ್ನೂ ಉಚಿತ ಭೋಜನಗಳನ್ನೂ, ಭಾರತದಲ್ಲಿ ಲೈಫ್ ಬ್ಲಿಸ್ ಟೆಕ್ನಾಲಜಿಯೆಂಬ ಉಚಿತವಾದ ಒಂದು ವರ್ಷದ ವಸತಿಯುತ ತರಬೇತಿ ಕಾರ್ಯಕ್ರಮವನ್ನೂ, ಮಕ್ಕಳಿಗೆ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣವನ್ನೂ, ಹಾಗೂ ಇಂತಹ ಇನ್ನೂ ಅನೇಕ ಸೇವೆಗಳನ್ನೂ ಜಗತ್ತಿನಾದ್ಯಂತ ನೀಡಲಾಗುತ್ತಿದೆ.

ನಿತ್ಯ ಧೀರ ಸೇನಾದ ಆನಂದ ಸೇವಕರು - ಎಂಬ ಸ್ವಯಂ ಸೇವಕರು - ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡು ಅತ್ಯುತ್ಸಾಹದಿಂದ ಸಂಸ್ಥೆಯನ್ನು ಬೆಂಬಲಿ ಸುತ್ತಿದ್ದಾರೆ.