ಮನಃಶಕ್ತಿ
This text was machine-transcribed from the printed book and may contain errors. Select the words and choose “Report a mistake”.
ಕಳೆದ ಶತಮಾನದಲ್ಲಿ ನಡೆಸಿದ ಒಂದು ಪ್ರಯೋಗದ ಸಂಗತಿ ಹೇಳುತ್ತೇನೆ:
ಒಬ್ಬನಿಗೆ ಅವನ ಅಪರಾಧಕ್ಕಾಗಿ ಮರಣದಂಡನೆಯ ಶಿಕ್ಷೆ ವಿಧಿಸ ಲಾಗಿತ್ತು. ಕೆಲ ವಿಜ್ಞಾನಿಗಳು ಅವನನ್ನು ಸಂಧಿಸಿ 'ನಿಗದಿತ ದಿನದಂದು ನಿನಗೆ ಮರಣದಂಡನೆ ಉಂಟಾಗುತ್ತದೆ ಎಂಬುದು ನಿನಗೆ ತಿಳಿದಿದೆಯೆ?' ಎಂದು ಕೇಳಿದರು. ಅವನು ಅದು ನಿಜವೆಂದೂ, ಅದನ್ನು ತಪ್ಪಿಸಲು ಸಾಧ್ಯವಿಲ್ಲವೆಂದೂ ಹೇಳಿದನು. ಆಗ ವಿಜ್ಞಾನಿಗಳು ಮರಣಕ್ಕೆ ಮೊದಲೇ ತನ್ನ ದೇಹವನ್ನು ಮಾನವಹಿತಕ್ಕಾಗಿ ಮಾಡುವ ಪ್ರಯೋಗಕ್ಕಾಗಿ ನೀಡಲು ಕೇಳಿದರು. ಅವನು ಒಪ್ಪಿಕೊಂಡನು.
ವಿಜ್ಞಾನಿಗಳು ನ್ಯಾಯಾಲಯದ ಲಿಖಿತ ಸಮ್ಮತಿಯನ್ನು ಪಡೆದರು. ವಿದ್ಯುತ್ತಿನಿಂದ ಪ್ರಾಣ ತೆಗೆಯುವ ನಿಶ್ಚಿತ ದಿನದಂದು ವಿಜ್ಞಾನಿಗಳೂ, ಮಾನಸಿಕ ತಜ್ಞರೂ ಹಾಗೂ ವೈದ್ಯರುಗಳು ತಯಾರಾಗಿ ಅಲ್ಲಿಗೆ ಬಂದರು. ತಮ್ಮ ಪ್ರಯೋಗಗಳನ್ನು ಆರಂಭಿಸಿದರು.
ಹೇಗಾದರೂ ಸಾವು ನಿಶ್ಚಿತವಾದುದರಿಂದ ವಿದ್ಯುದ್ಧಾತದ ಬದಲು, ಹಾವು ಕಡಿತದಿಂದ ಸಾವಾದರೆ ಹೇಗೆ ಎಂದು ಕೇಳಿದರು. ವಿಷವು ಹೇಗೆ ಹರಡುತ್ತದೆ, ಮನುಷ್ಯನು ಹಾವಿನ ಕಡಿತದಿಂದ ಹೇಗೆ ಸಾಯುತ್ತಾನೆ ಎಂಬುದನ್ನು ಅವರು ಪರೀಕ್ಷಿಸಬೇಕೆಂದರು. ಅವರು ಹಾವು ಕಡಿತದ ಮದ್ದು ಮನುಷ್ಯನನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ಪರೀಕ್ಷಿಸಲು ಬಯಸಿದರು. ಇದಕ್ಕೆ ಅವನ ಅನುಮತಿಯನ್ನು ಕೇಳಿದರು. ಅವನು ಈ ಪ್ರಯೋಗಕ್ಕೆ ಸಮ್ಮತಿಸಿದನು.
ವಿಜ್ಞಾನಿಗಳು ಒಂದು ಕುದುರೆಯ ಮೇಲೆ ಹಾವಿನ ವಿಷದ ಪರಿಣಾಮವನ್ನು ಅವನೆದುರಿಗೆ ಸಜೀವವಾಗಿ ಪ್ರದರ್ಶಿಸಿದರು. ಹಾವು ಕಡಿದ ಕೆಲವು ಕ್ಷಣಗಳಲ್ಲಿ ಕುದುರೆಯು ಕೆಳಗೆ ಬಿದ್ದು, ನರಳಿ ಮರಣ ಹೊಂದಿತು.
ವಿಜ್ಞಾನಿಗಳು ಇದೇ ಪ್ರಯೋಗವನ್ನು ಅವನ ಮೇಲೆ ಮಾಡುವು ದಾಗಿಯೂ, ಅವನ ಸಾವೂ ಇದೇ ರೀತಿಯಾಗಿರುತ್ತದೆಯೆಂದೂ ಹೇಳಿದರು.
ಅವನ ಕಣ್ಣಿಗೆ ಬಟ್ಟೆ ಕಟ್ಟಿ ಅವನು ಏನೂ ನೋಡಲಾರದಂತೆ ಮುಸುಕನ್ನೂ ಹಾಕಿದರು. ಇನ್ನೆರಡು ನಿಮಿಷದಲ್ಲಿ ಹಾವು ಕಡಿಯುವುದೆಂದು ಹೇಳಿದರು.
ಆದರೆ ಪ್ರಯೋಗದಲ್ಲಿ ಅವರು ಹಾವಿನ ಬದಲು ಇಲಿಯನ್ನು ಉಪಯೋಗಿಸಿದರು. ಆದರೆ ಅವನಿಗೆ ಹಾವೇ ಕಡಿಯಿತೆಂದೂ, ಅವನಿನ್ನೇನು ಸಾಯುತ್ತಾನೆಂದೂ ಹೇಳಿದರು. ಅವನ ಮನಸ್ಸಿಗೆ ಹಾವೇ ಕಡಿಯಿತೆಂಬುದು ಖಚಿತವಾಗಿ, ತಾನೂ ಆ ಕುದುರೆಯಂತೆಯೇ ಸಾಯುವನೆಂಬ ಗಾಢ ನಂಬಿಕೆಯುಂಟಾ ಗಿತ್ತು. ಆ 'ಹಾವು' ಕಡಿದೊಡನೆಯೇ ಅವನ ಮನಃಶಕ್ತಿಯು ದೇಹದಲ್ಲಿ ಕಂಪನ ಉಂಟುಮಾಡಿತು, ಆ ಕುದುರೆಯು ನರಳಿದಂತೆಯೇ ನರಳಿ ಅವನು ಪ್ರಾಣ ಬಿಟ್ಟನು.
ವಿಜ್ಞಾನಿಗಳು ಅವನ ರಕ್ತವನ್ನು ಪರೀಕ್ಷಿಸಿದಾಗ ಅದರಲ್ಲಿ ಹಾವಿನ ವಿಷವಿತ್ತು!
ಮನಸ್ಸಿಗೆ ಸಕಾರಾತ್ಮಕವಾದುನ್ನಾಗಲೀ, ನಕಾರಾತ್ಮಕವಾದುದನ್ನಾಗಲೀ, ಸೃಷ್ಟಿಸುವ ಸಾಮರ್ಥ್ಯವಿದೆ; ಅದು ನಿಮ್ಮ ಜೀವನವನ್ನು ಬಲಿತೆಗೆದುಕೊಳ್ಳಬಹುದು, ಉಳಿಸಲೂಬಹುದು! ರೋಗಗಳನ್ನು ಅದು ನಿಮ್ಮಲ್ಲಿ ಸೃಷ್ಟಿಸಬಲ್ಲದು, ಅದು ವಾಸಿ ಮಾಡಬಲ್ಲದು. ಇಹಲೋಕದಲ್ಲೇ ಸ್ವರ್ಗವನ್ನೋ, ನರಕವನ್ನೋ ಸೃಷ್ಟಿಸಬಲ್ಲದು. ಅದು ನಿಮ್ಮನ್ನು ಒಂದೇ ಸಂದರ್ಭದಲ್ಲಿ ಸಂತೃಪ್ತರನ್ನಾಗಿಯೋ ಸಂತಪ್ತರನ್ನಾಗಿಯೋ ಮಾಡಬಲ್ಲದು.
ಮನಸ್ಸು ಮಾಯೆಯ ವಿಷವನ್ನು ನಿಮ್ಮಲ್ಲಿ ಉಂಟುಮಾಡುತ್ತದೆ.
ಈ ಮನಸ್ಸು ಮಾಯೆಯಲ್ಲದೆ ಬೇರಲ್ಲ. ಸಂಸ್ಕೃತದಲ್ಲಿ ಹೇಳುವಂತೆ 'ಯ ಮಾ ಇತಿ ಮಾಯ;' ಯಾವುದು ಇಲ್ಲವೋ ಅದೇ ಮಾಯೆ. ತಾನಿಲ್ಲದಯೇ ಸತತವಾಗಿ ಮನಸ್ಸನ್ನು ಕಲಕುತ್ತದೆ. ಹಿಂದೆ ಹೇಳಿದ ಪ್ರಯೋಗದಲ್ಲಿ ಆ ವ್ಯಕ್ತಿಯು ಹಾವು ಕಡಿತವಾಗದೆಯೇ ಸಾವನ್ನಪ್ಪಿದನು! ಇದೇ ರೀತಿ ಪ್ರತಿನಿತ್ಯವೂ ನಿಜವಲ್ಲದ ಚಿಂತೆಗಳ ಭಾರದಿಂದ ಕುಗ್ಗುತ್ತಿದ್ದೇವೆ.
ನಿಮ್ಮ ಚಿಂತೆಗಳಲ್ಲಿ ಶೇಕಡ 99ರಷ್ಟು ನಿಜವಾಗುವುದೇ ಇಲ್ಲವೆಂದು ನಿಮಗೆ ಗೊತ್ತೆ?
ಈ ಚಿಂತೆಗಳು ಕೇವಲ ಮನಸ್ಸು ಉಂಟುಮಾಡಿದವುಗಳೆಂದು ನಿಮಗೆ ತಿಳಿದಿದೆಯೇ?
ಯಾವಾಗಲೂ ಚಿಂತೆಗಳು ಬಾಹ್ಯವಿಚಾರಗಳಿಂದ ಉಂಟಾಗುತ್ತವೆಂದು ನೀವು ಭಾವಿಸುತ್ತೀರಿ. ನೀವು ಯಾವಾಗಲೂ ಹೊರಪ್ರಪಂಚ ವನ್ನು, ನಿಮ್ಮ ಸುತ್ತಲಿನವರನ್ನೂ, ನಿಮ್ಮ ಚಿಂತೆಗೆ ಕಾರಣವೆಂದು ದೂಷಿಸುತ್ತೀರಿ. ಚಿಂತೆಗೆ ಕಾರಣವು ಹೊರಗಿನದೇ ಆಗಿದ್ದರೆ, ಈ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯಾದರೂ ಎಲ್ಲವನ್ನೂ ಜಯಿಸಿ ಚಿಂತೆಗಳಿಂದ ಮುಕ್ತನಾಗಿರಬೇಕಿತ್ತು! ಆದರೆ ಅದು ಹಾಗಿದೆಯೆ? ನೀವು ಸಂಧಿಸುವ ಪ್ರತಿಯೊಬ್ಬರಿಗೂ ಏನಾದರೂ ಚಿಂತೆಗಳಿದ್ದೇ ಇರುತ್ತವೆ. ಸಿರಿವಂತರೂ, ಬಡವರೂ, ಮದುವೆಯಾದವರೂ, ಆಗಿಲ್ಲದವರೂ, ಮಕ್ಕಳಿದ್ದವರೂ, ಇಲ್ಲದವರೂ, ನೌಕರಿಯಲ್ಲಿರುವವರೂ, ಸ್ವಂತ ವ್ಯಾಪಾರ ಮಾಡುವವರೂ – ಪ್ರತಿಯೊಬ್ಬರಿಗೂ ಚಿಂತೆಗಳಂತೂ ಇರುತ್ತವೆ.
ತಿಳಿಯಿರಿ, ಚಿಂತೆಗಳ ಮೂಲವು ಹೊರಗೆಲ್ಲೂ ಇಲ್ಲ; ನಮ್ಮೊಳಗೇ ಇರುವುದು. ಇದೇ ಸತ್ಯ. ಗಮನವಿಟ್ಟು ನೋಡಿದರೆ ನಿಮ್ಮ ಚಿಂತೆಯು ಯಾವುದೋ ಒಂದು ಘಟನೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯಲ್ಲದೆ ಬೇರಲ್ಲ ಎಂದು ನಿಮಗೆ ತಿಳಿಯುತ್ತದೆ. ನೀವು ಆಯ್ದುಕೊಳ್ಳುವ ಪ್ರತಿಕ್ರಿಯೆಯು ಆ ವಿಷಯವು ಚಿಂತೆಯೋ ಅಲ್ಲವೋ ಎಂಬುದನ್ನು ನಿರ್ಧರಿಸುತ್ತದೆ.
ಉದಾಹರಣೆಗೆ:
ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಏನೋ ಬಿಕ್ಕಟ್ಟಿನ ಪರಿಸ್ಥಿತಿಯಿದೆ ಎಂದು ಭಾವಿಸೋಣ. ಕೆಲವರನ್ನು ಕೆಲಸದಿಂದ ತೆಗೆಯುತ್ತಿದ್ದಾರಿಂದೂ ಭಾವಿಸೋಣ. ನಿಮ್ಮ ಕೆಲಸವೂ ಹೋಗುವ ಸಂಭವವೂ ಇದೆ. ಈ ವಿಷಯವನ್ನು ಕೇಳಿದೊಡನೆಯೇ ನೀವು ಆಳವಾದ ಚಿಂತೆಗೊಳಗಾಗುತ್ತೀರಿ. ಚಿಂತೆಗಳು ನಿಮ್ಮನ್ನು ಆವರಿಸುತ್ತವೆ. "ಏನಾಗುವುದೋ? ನನ್ನ ಮಡದಿ ಏನೆನ್ನುವಳೊ? ಮಕ್ಕಳಿಗೆ ಅವಮಾನವಾಗುತ್ತದೆ! ಹೊಸ ಕಾರಿನ ಸಾಲವನ್ನು ಹೇಗೆ ತೀರಿಸಲಿ?" ಎಂದು ಮುಂತಾಗಿ ನಿಮ್ಮ ಆಂತರ್ಯದ ಭಯಗಳೆಲ್ಲ ಮೇಲೆದ್ದು, ನೀವು ಬೀದಿಯ ಭಿಕಾರಿಯಾದಂತೆಯೂ ಅನಿಸಿಬಿಡಬಹುದು!
ಈ ರೀತಿ ಚಿಂತಿಸುವುದರಿಂದೇನೂ ಪ್ರಯೋಜನವಾಗದು. ನಿಮ್ಮ ತೊಂದರೆಗಳಿಗೆ ಪರಿಹಾರವೂ ದೊರಕುವುದಿಲ್ಲ. ದುರದೃಷ್ಟವಶಾತ್ ನಿಮ್ಮ ಕೆಲಸ ಹೋದರೂ ಹೋಗಬಹುದು, ಹೋಗದೆಯೂ ಇರಬಹುದಲ್ಲವೆ! ಅಂತ್ಯವಿಲ್ಲದಷ್ಟು ಸಾಧ್ಯತೆಗಳಿವೆ. ಯಾವುದೂ ನಿಶ್ಚಿತವಲ್ಲದಿದ್ದರೂ - ಈ ವೃಥಾಚಿಂತೆಯಿಂದ ನಿಮ್ಮ ಹೊಟ್ಟೆಯಲ್ಲಿ ಹುಣ್ಣಾಗುವ ಸಾಧ್ಯತೆ ಇದೆ.
ಆದ್ದರಿಂದ, ಇರುವ ತೊಂದರೆಗಳೊಂದಿಗೆ ಇನ್ನಷ್ಟನ್ನು ಏಕೆ ಸೇರಿಸಬೇಕು? ನಿಮ್ಮ ದೃಷ್ಟಿಗೆ ಮೀರಿದ ವಿಷಯಗಳ ಬಗ್ಗೆ ಚಿಂತಿಸುವುದನ್ನು ಕೈಬಿಡಿ.
ಚಿಂತೆಗಳ ಬಗ್ಗೆ ಚಿಂತಿಸುವುದನ್ನು ಬಿಡಿ. ಚಿಂತೆಗಳ ಬಗ್ಗೆ ಚಿಂತಿಸಿದಾಗ ಸತತವಾಗಿ ನಿಮ್ಮೊಳಗೆ ವಟಗುಟ್ಟುವಿಕೆ ಉಂಟಾಗುತ್ತದೆ. ಆಗ ಚಿಂತೆಗಳನ್ನು ಹುಟ್ಟಿಸುವ ಈ ಸತತ ವಟಗುಟ್ಟುವಿಕೆಯು ನಿಮ್ಮ ಒಡೆಯನಾಗುತ್ತದೆ.
ನಿಮ್ಮ ಶಕ್ತಿಯನ್ನು ನಕಾರದಕಡೆಗಲ್ಲದೆ, ಸಕಾರಾತ್ಮಕವಾಗಿ ಬಳಸಿಕೊಳ್ಳುವ ವಿವೇಕವನ್ನು ಹೊಂದಿರಿ. ಜೀವನದಲ್ಲಿ ಅಂತಹ ಭಯವುಂಟಾದಾಗ, ತಣ್ಣಗೆ ಕುಳಿತು, ನಿಮ್ಮ ಮನಸ್ಸು ಹೇಗೆ ಗೊಂದಲವೆಬ್ಬಿಸುತ್ತಿದೆಯೆಂದು ಗಮನಿಸಿ.
ಈ ಸಣ್ಣ ತಂತ್ರವನ್ನು ಪ್ರಯತ್ನಿಸಿ:
ಒಂದು ಪ್ರಶಾಂತವಾದ ಸ್ಥಳದಲ್ಲಿ ಕೆಲ ನಿಮಿಷಗಳು ಏಕಾಂತವಾಗಿ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಒಂದು ಕಾಗದವನ್ನೂ, ಲೇಖನಿಯನ್ನೂ ಪಕ್ಕದಲ್ಲಿ ಇಟ್ಟುಕೊಳ್ಳಿ. ಮನಸ್ಸನ್ನು ಯಾವ ವಿಷಯದ ಮೇಲೂ ಕೇಂದ್ರೀಕರಿಸಬೇಡಿರಿ. ಸಾಕ್ಷೀಭಾವದಿಂದ ಆಲೋಚನೆಗಳನ್ನು ಗಮನಿಸಿ. ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ. ಯೋಚನೆಗಳ ಸಾಲು ನಿಮ್ಮ ಮನಸ್ಸನ್ನು ಹಾಯುವುದನ್ನು ನೋಡುತ್ತೀರಿ. ನಿಮ್ಮೊಳಗೆ ಉದ್ಭವಿಸುತ್ತಿರುವ ಸತತ ವಟಗಟ್ಟುವಿಕೆಯನ್ನು ನೋಡುವಿರಿ.
ಈಗ ಲೇಖನಿಯಿಂದ ನಿಮ್ಮ ಎಲ್ಲ ಆಲೋಚನೆಗಳನ್ನು ಒಂದಾದ ಮೇಲೊಂದರಂತೆ ನಿಸ್ಪೃಹರಾಗಿ ಬರೆಯಿರಿ. ಇದನ್ನು 5 ನಿಮಿಷ ಮಾಡಿ!
ಈಗ ಓದಿ-
ನಿಮಗೆ ಗಾಬರಿಯಾಗುತ್ತದೆ. ನಿಮ್ಮ ಆಲೋಚನೆಗಳು ಎಷ್ಟು ಅಸಂಬದ್ಧ ವಾಗಿವೆ! ಎಷ್ಟು ಅಪ್ರಸ್ತುತ! ಒಂದು ಯೋಚನೆಯು ಒಂದು ವಿಚಾರದ ಬಗ್ಗೆಯಾದರೆ, ಅದರ ನಂತರದ ಯೋಚನೆಯು ಅದಕ್ಕೆ ಸಂಬಂಧವೇ ಇಲ್ಲದ ಇತ್ಯರ್ಥಕ್ಕೆ ಬಂದಿರುತ್ತದೆ! ನೀವು ಕೆಲಸ ಕಳೆದುಕೊಂಡಂತೆ, ಮನೆಗೆ ಹೋಗಿ ಹೆಂಡತಿಗೆ ಹೇಳಿದಾಗ ಅವಳು ನಿಮ್ಮನ್ನು ವಿಚ್ಛೇದಿಸಿ ನಿಮ್ಮ ಮಕ್ಕಳನ್ನೂ ಕರೆದುಕೊಂಡು ಮನೆ ಬಿಟ್ಟು ಹೊರಟುಹೋದಂತೆ, ನೀವು ಉದ್ಯೋಗಕ್ಕಾಗಿ ಅಲೆಯುತ್ತಿರುವಂತೆ, ಎಲ್ಲೂ ಕೆಲಸ ಸಿಕ್ಕದೆ, ನಿರುತ್ಸಾಹಿಯಾಗಿ ಎಲ್ಲವನ್ನೂ ಕಳೆದುಕೊಂಡಂತೆ ಭಾವಿಸುವಿರಿ.
ನಿಮ್ಮ ಎಲ್ಲಾ ಶಕ್ತಿಯೂ ಭವಿಷ್ಯದ ಬಗ್ಗೆ ನಕಾರಾತ್ಮಕ ಚಿತ್ರಣ ಮೂಡಿಸುವ ಎಡೆಗೇ ಮುನ್ನುಗ್ಗುತ್ತದೆ.
ಆದರೆ, ಮುಂದೆ ಹೀಗೆಯೇ ಆಗುವುದೆಂದು ನೀವು ಖಚಿತವಾಗಿ ಹೇಳಬಲ್ಲಿರಾ? ಅಲ್ಲದೆ, ಹೀಗೆಯೇ ಆಗಬೇಕೆಂಬುದು ನಿಶ್ಚಿತವಾಗಿದ್ದರೆ ಅದರಲ್ಲಿ ನೀವು ನಿಯಂತ್ರಿಸುವುದೇನಿದೆ? ಏನಾಗಬೇಕೋ ಅದೇ ಆಗುತ್ತದೆ. ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆಯು ಮಾತ್ರ ನಿಮ್ಮ ಕೈಲಿದೆ: ನೀವು ಯಾವ ರೀತಿ ಪ್ರತಿಕ್ರಿಯೆ ಮಾಡುವಿರೆಂಬುದು ಮಾತ್ರ ನಿಮ್ಮ ಇಚ್ಛೆಗೆ ಬಿಟ್ಟದ್ದು.
ಈ ವಿಷಯಗಳು ನಿಮ್ಮ ಈಗಿನ ಜೀವನದಲ್ಲಿ ಬಹಳ ಮುಖ್ಯವಾದವು, ಆದುದರಿಂದ ಅದರ ಕಡೆಗೆ ಹೆಚ್ಚಾದ ಆವೇಗವಿರುವುದು ಸಹಜವೇ.
ಆದರೆ ಭವಿಷ್ಯತ್ತಿನ ಅನೇಕ ಹೆಜ್ಜೆಗಳನ್ನು ಈಗಲೇ ನೋಡುವುದು ನಿರರ್ಥಕವೆಂಬುದನ್ನು ಮರೆಯಲೇಬೇಡಿರಿ. ಅಲ್ಲದೆ, ನೀವು ಸಾಮಾಜಿಕ ಗುರುತುಗಳನ್ನು ಮೀರಿದವರೆಂಬುದನ್ನೂ ನೆನೆಪಿನಲ್ಲಿಡಿ! ಆದುದರಿಂದ ಅವುಗಳ ಬಗ್ಗೆ ವಿಪರೀತವಾಗಿ ಚಿಂತಿಸುವ ಅವಶ್ಯಕತೆಯಿಲ್ಲ.
ನಿಮ್ಮೊಳಗೆ ಅಗಾಧವಾದ ಸೃಜನಶೀಲತೆಯು ಅಡಗಿದೆ. ಅದನ್ನು ಹೊರತರಲು ವಿಳಂಬ ಮಾಡದೆ, ನಿಮ್ಮೊಳಗೆ ವಿಷವನ್ನು ಸೇರಿಸದೆ, ನಿಮ್ಮ ತೊಂದರೆಗಳಿಗೆ ಸಕಾರಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಿರಿ. ನಿಮ್ಮ ಸೃಜನಶೀಲತೆಯಲ್ಲಿ ಭರವಸೆಯಿಡುವ ಮೂಲಕ ನಿಮ್ಮೆಡೆಗೆ ಮಂಗಳತ್ವವನ್ನು ಆಕರ್ಷಿಸಿ ಕಾರ್ಯೋನ್ಮುಖರಾಗಿರಿ.
ಚಿಂತೆಯು ಶ್ರಮಕ್ಕಿಂತಲೂ ಹೆಚ್ಚಾಗಿ ಜನರನ್ನು ಬಲಿತೆಗೆದುಕೊಂಡಿದೆಏಕೆಂದರೆ ಜನರು ಶ್ರಮಪಡುವುದಕ್ಕಿಂತ ಚಿಂತಿಸುವುದೇ ಹೆಚ್ಚು!
ಈ ಪ್ರಯೋಗವನ್ನು ಒಮ್ಮೆ ಮಾಡಿದರೆ ಸಾಕು. ಮನಸ್ಸಿನ ಸ್ವಭಾವದ ಅರಿವುಂಟಾಗಿ, ನಿಮ್ಮಲ್ಲಿ ವೈಚಾರಿಕ ಸ್ಥಿತ್ಯಂತರವುಂಟಾಗುವುದು.
ನನ್ನ ಅನುಭವದಿಂದ ಆಶ್ವಾಸನೆ ನೀಡುತ್ತೇನೆ- ಸೃಷ್ಟಿಯು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಅವಶ್ಯಕತೆಯನ್ನು ಪ್ರತಿಕ್ಷಣವೂ ಪೂರೈಸುತ್ತಿದೆ. ಆದರೆ ಲೌಕಿಕ ಯಶಸ್ಸಿಗಾಗಿ ಪೈಪೋಟಿ ಮಾಡುವುದರಲ್ಲಿ ನೀವು ವಿಶ್ವಶಕ್ತಿಯಲ್ಲಿ ನಂಬಿಕೆಯನ್ನು ಕಳೆದುಕೊಂಡಿರುವಿರಿ. ನಂಬಿಕೆ ಹಾಗೂ ಕಾಕತಾಳೀಯತೆಯ ಶಕ್ತಿಯ ಸೊಗಸನ್ನು ಕಳೆದುಕೊಂಡಿದ್ದೀರಿ. ಆದುದರಿಂದಲೇ ಅನಿರೀಕ್ಷಿತ ವಾದುದು ಸಂಭವಿಸಿದಾಗ ನಿರುತ್ಸಾಹಕ್ಕೆ ಬಲಿಯಾಗುತ್ತೀರಿ.
ನೋಡಿರಿ, ಜೀವನದಲ್ಲಿ ಬದಲಾವಣೆಗಳು ಅನಿವಾರ್ಯ. ಜೀವನವು ನೀವು ಬಯಸುವ ಸ್ಥಿರವಾದ ಆಧಾರವಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ವಿಶ್ವಕ್ಕೆ ತನ್ನದೇ ಆದ ಬುದ್ಧಿಶಕ್ತಿ ಇದೆ; ಅದು ಯಾರ ನಿಯಂತ್ರಣದಲ್ಲೂ ಇಲ್ಲ. ನೀವಿಂದು ನಡೆಸುತ್ತಿರುವ ಜೀವನವು ಸದಾ ಹೀಗೆಯೇ ಇರುವುದಿಲ್ಲ. ಇದೆಲ್ಲವೂ ಆಶ್ಚರ್ಯಕರವಾದ ವಾದ್ಯಮೇಳ. ಆದುದರಿಂದ ಮುಂದೂಡುವ ಬದಲು ಅದನ್ನು ಸ್ವಾಗತಿಸಿರಿ.
ಕಾಕತಾಳೀಯದ ಬಲವೇನು?
ನೀವು ಯಾವಾಗಲಾದರೂ ಹಳೆಯ ಸ್ನೇಹಿತನನ್ನು ಇದ್ದಕ್ಕಿದ್ದಂತೆ ನೆನೆದಿದ್ದೀರಾ? ಅವನನ್ನು ನೆನೆಯುತ್ತಿರುವಂತೆಯೇ ದೂರವಾಣಿಯಲ್ಲಿ ಅವನದೇಕರೆ ಬಂದರೆ?
ಬ್ರಹ್ಮಾಂಡದೆಡೆಗೆ ಮನತೆರೆದಂತೆಲ್ಲ ಇಂತಹ ಚಮತ್ಕಾರಗಳು ನಡೆಯುವುದನ್ನು ಕಾಣುವಿರಿ. ಇಂತಹ ಪವಾಡಸದೃಶವಾದ ಕಾಕತಾಳೀಯವನ್ನು 'ಕಾಕತಾಳೀಯ ಬಲ' ಎನ್ನುವುದು. ಆಧ್ಯಾತ್ಮಿಕತೆಯು ನೀವಿರುವ ಎಡೆಗೂ, ನಿಮ್ಮ ಪರಿಸರಕ್ಕೂ ನಿಮ್ಮನ್ನು ಹೆಚ್ಚು ಸೂಕ್ಷ್ಮಗ್ರಾಹಿಯನ್ನಾಗಿ ಮಾಡುತ್ತದೆ - ಬ್ರಹ್ಮಾಂಡದ ಪರಿಪೂರ್ಣತೆಯೊಡನೆ ಸಂಬಂಧವೇರ್ಪಟ್ಟಿರುವುದನ್ನು ನೀವು ಒಪ್ಪಿಕೊಳ್ಳುವಿರಿ.
ಕೆಲವೊಮ್ಮೆ ನಿಮ್ಮ ಪ್ರಾಮಾಣಿಕ ಪ್ರಶ್ನೆಗೆ ಯಾರೋ ಅಪರಿಚಿತರು ಉತ್ತರ ನೀಡುತ್ತಾರೆ. ಅಥವಾ, ಬಯಸಿದ ಸಿಹಿ ತಿಂಡಿಯನ್ನೇ ಯಾರೋ ನಿಮಗೆ ತಂದು ಕೊಡುತ್ತಾರೆ ಅಥವಾ ನೀವು ಸಿಂಧೂರ ಬಣ್ಣದ ಉಡುಪನ್ನು ಧರಿಸಿದವರನ್ನು ನೆನೆದಾಗ ಅದೇ ಉಡುಪನ್ನು ಧರಿಸಿದ ಮತ್ತೊಬ್ಬರು ಘಟ್ಟನೆ ನಿಮ್ಮೆದುರು ಹಾದು ಹೋಗುತ್ತಾರೆ.
ನೀವು ಆಧ್ಯಾತ್ಮದ ವಲಯದಲ್ಲಿ ಪ್ರವೇಶ ಮಾಡಿದರೆ ಇಂತಹ ಅನೇಕ ಸುಂದರ ಆಕಸ್ಮಿಕಗಳು ನಿಮ್ಮ ಸುತ್ತಲೂ ನಡೆಯುತ್ತವೆ. ನಿಮ್ಮನ್ನು ಆವರಿಸಿರುವ ಸೃಷ್ಟಿಯು ನಿಮ್ಮ ಭಾವನೆಗಳಿಗೆ ಪ್ರತಿಸ್ಪಂದಿಸುವ ಸಜೀವ ಚೈತನ್ಯವೆಂದು ತಿಳಿದುಬರುತ್ತದೆ. ಆಗ ದೇವರು, ಸೃಷ್ಟಿ ಅಥವಾ ಗುರುವಿನೊಡನೆ ಬಾಂಧವ್ಯ ಬೆಳೆಯುತ್ತದೆ. ಜೀವನದಲ್ಲಿ ಹೊಸ ಸ್ವಾದವಿರುತ್ತದೆ. ಸೃಷ್ಟಿಯ ಆನಂತ ಸೌಂದರ್ಯದ ಅನುಭವವಾಗುತ್ತದೆ.
ನೀವು ನಿಮ್ಮ ಕೇಂದ್ರದೆಡೆಗೆ ಸಾಗಿದಷ್ಟೂ ನಿಮ್ಮ ಜೀವನದಲ್ಲಿ ನಡೆಯುವ ಸುಂದರ ಸಮ್ಮಿಲನತೆಗಳನ್ನು ಗಮನಿಸುತ್ತೀರಿ. ವಿಶ್ವಚೈತನ್ಯವು ನಿಮ್ಮೊಡನೆ ಸಹಕರಿಸಿ ನಿಮ್ಮನ್ನು ಹೆಚ್ಚು ಪ್ರಜ್ಞಾವಂತರನ್ನಾಗಿಸುತ್ತದೆ.
ಹೇಳುವೆನು ಕೇಳಿ - ಸೃಷ್ಟಿಯು ನಿಮ್ಮನ್ನು ಆಧ್ಯಾತ್ಮ ಜೀವಿಯಾಗಲು ಆಹ್ವಾನಿಸುತ್ತಿದೆ, ಅದರೆಡೆಗೆ ಮನತೆರೆಯಿರೆಂದು ಕರೆಯುತ್ತಿದೆ. ಅದರ ಬುದ್ಧಿವಂತಿಕೆಯಲ್ಲಿ ನಂಬಿಕೆ ಇಡಬಹುದೆಂದು ಸಹನೆಯಿಂದ ರುಜುವಾತು ಪಡಿಸುತ್ತಿದೆ. ಅದು ನಿಮ್ಮ ಜೀವನವನ್ನು ನಡೆಸುವ ಭರವಸೆ ನೀಡುತ್ತದೆ, ಮನಸ್ಸು ಹಾಗೂ ಭೀತಿಗಳನ್ನು ಕೈಬಿಟ್ಟಷ್ಟೂ ನಿಮಗೆ ನನ್ನ ಮಾತಿನ ಅರ್ಥ ತಿಳಿಯುತ್ತಾಹೋಗುತ್ತದೆ.
ನಿಮ್ಮ ಸಕಾರಾತ್ಮಕ ಉದ್ದೇಶಗಳು ಈಡೇರಲಾರಂಭಿಸುತ್ತವೆ. ನಿಮ್ಮ ಹಾಗೂ ಇತರರ ಏಳಿಗೆಗೆ ಪೂರಕವಾದ ಸಕಾರಾತ್ಮಕ ಕಾರ್ಯಗಳು ಕೈಗೂಡುತ್ತವೆ. ಏಕೆಂದರೆ ನೀವು ನಿಮ್ಮ ಕೇಂದ್ರದೊಂದಿಗೆ ಹಾಗೂ ವಿಶ್ವಶಕ್ತಿಯ ಜೊತೆ ಶ್ರುತಿಗೂಡಿಸಿ ಕೆಲಸ ಮಾಡುತ್ತೀರಿ. ನೀವು 'ನಿಮ್ಮ' ಒಡನೆ ಕೈಗೂಡಿಸುತ್ತೀರಿ; ನೀವು ನಿಮ್ಮ ಸಹಭಾಗಿಯಾಗುವಿರಿ, ನೀವು ದನಿಗೂಡಿಸುತ್ತೀರಿ. ಆದ್ದರಿಂದ ನಿಮ್ಮೆಡೆಗೆ ಮಾಂಗಳ್ಯತ್ವವನ್ನು ಸೆಳೆದುಕೊಳ್ಳುತ್ತೀರಿ. ಸೃಷ್ಟಿಯು ನಿಮ್ಮ ಆಲೋಚನೆಗಳಿಗೆ ಪ್ರತಿಸ್ಪಂದಿಸುತ್ತದೆ.
ಸೃಷ್ಟಿಯ ಮಧುರವಾದ ಗಾನಲೀಲೆಯಲ್ಲಿ ನಿಮ್ಮ ಶ್ರುತಿ ಸೇರಿಸಿದರೆ ಸಾಕು; ಆನಂದವು ನಿಮ್ಮನ್ನು ಆವರಿಸುತ್ತದೆ. ಈ ಸಹಜ ಪಥದಲ್ಲಿ ಮುನ್ನಡೆದಂತೆ ನೀವು ಸ್ವಯಂಪ್ರೇರಿತರಾಗುತ್ತೀರಿ ಹಾಗೂ ನಿಮ್ಮ ಜೀವನದಲ್ಲೇನೇಬಂದರೂ ಧನ್ಯತಾಭಾವದಿಂದ ಸ್ವೀಕರಿಸುತ್ತೀರಿ.
ಒಂದು ಸುಂದರ ಕಥೆ:
ಎಲ್ಲವೂ ಬರಡಾದ ಒಂದು ಮರುಳುಗಾಡಿನಲ್ಲಿ ಒಂದು ಮೊಗ್ಗು ಅರಳಿತು. ಅದು ಪ್ರತಿದಿನವನ್ನೂ ಸವಿಯುತ್ತಾ ಬೆಳೆಯುತ್ತಾ ಸೂರ್ಯನನ್ನು ಕುರಿತು “ನಾನೆಂದು ದೊಡ್ಡದಾಗಿ ಅರಳುತ್ತೇನೆ?” ಎಂದು ಕೇಳುತ್ತಿತ್ತು. ಸೂರ್ಯ ದೇವನು “ತಾಳ್ಮೆಯಿರಲಿ. ನಾನು ನಿನ್ನನ್ನು ಸ್ಪರ್ಶಿಸಿದಂತೆಲ್ಲಾ ನೀನು ಸ್ವಲ್ಪ ಸ್ವಲ್ಪವಾಗಿ ಬೆಳೆಯುತ್ತಿರು ತ್ತೀಯೇ” ಎಂದನು. ಇದನ್ನು ಕೇಳಿ ಹೂವಿಗೆ ಆನಂದವಾಯಿತು. ತಾನಿರುವ ಮರುಳುಗಾಡಿನ ಭಾಗಕ್ಕೆ ಸೌಂದರ್ಯವನ್ನು ನೀಡಬಹುದೆಂಬ ಭಾವನೆಯಿಂದ ನಲಿಯಿತು. ಅದಕ್ಕೆ ಬೇಕಾದುದೂ ಅಷ್ಟೇ- ಮರುಭೂಮಿಯ ಆ ಭಾಗಕ್ಕೆ ಸ್ವಲ್ಪ ಸೌಂದರ್ಯವನ್ನು ತುಂಬುವುದು.
ಒಂದು ದಿನ ಒಬ್ಬ ಬೇಡನು ಅಲ್ಲಿಗೆ ಬಂದು ಆ ಹೂವನ್ನು ತುಳಿದನು. ಆ ಹೂವು ಸಾಯುವಂತಾಗಿ ಅದಕ್ಕೆ ಬಹಳ ದುಃಖವಾಯಿತು. ತಾನು ನಶಿಸುವೆನೆಂಬುದಕ್ಕಿಂತ ಮರುಳುಗಾಡಿನ ಈ ಭಾಗಕ್ಕೆ ಸೌಂದರ್ಯ ತುಂಬುವ ಅವಕಾಶ ಸಿಗಲಿಲ್ಲವಲ್ಲ ಎಂದು.
ದೇವರು ಈ ಹೂವನ್ನು ಗಮನಿಸುತ್ತಿದ್ದನು, ಅದರ ದನಿಯನ್ನು ಆಲಿಸುತ್ತಿದ್ದನು. ‘ಇದು ಬದುಕಿರಬೇಕು' ಎಂದವನೇ ಅದನ್ನು ಮುಟ್ಟಿ ಅದಕ್ಕೆ ಜೀವಕೊಟ್ಟನು.

ಅದು ಬೆಳೆದು ಸುಂದರ ಹೂವಾಗಿ ಅರಳಿತು. ಬೆಂಗಾಡಿನ ಆ ಭಾಗವೇ ಅದರಿಂದಾಗಿ ಸುಂದರವಾಯಿತು.
ನೀವಲ್ಲೇ ಇದ್ದರೂ ಈ ಹೂವಿನಂತೆ ಅರಳಲು ಸಿದ್ಧವಿದ್ದರೆ ಆ ಸ್ಥಳಕ್ಕೆ ನೀವೊಂದು ನಿಧಿಯಾಗಬಲ್ಲಿರಿ. ನಿಮ್ಮ ಸುತ್ತಲಿನ ಪರಿಸರವನ್ನೇ ಬದಲಾಯಿಸಬಹುದು. ಸಾಕ್ಷಾತ್ ಭಗವಂತನನ್ನೇ ಧರೆಗಿಳಿಸಬಹುದು.
ಸಾಕ್ಷಾತ್ಕಾರ ಹೊಂದಿದ ಮಹಾತ್ಮರು ಸಹ ಹೀಗೆಯೇ. ತಮ್ಮ ಪರಿಸರದಲ್ಲಿರುವ ಸಕಲವನ್ನೂ ವೃದ್ಧಿಗೊಳಿಸುವ ಸುಂದರ ಪುಷ್ಪಗಳು. ತಮ್ಮ ಸರಳ ಸಹಜತೆಯಿಂದ ಸಹಜ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಅವರ ಜೊತೆಯವರಿಗೆ ಅವರು ಪ್ರೇಮ, ನಿಸ್ವಾರ್ಥ ಸೇವೆಗಳ ಅವತಾರ. ಅವರು ಮೂರ್ತೀಭವಿಸಿದ ಆಧ್ಯಾತ್ಮಿಕತೆ!
* * *