KAILASA Library/ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)/ತಿಳುವಳಿಕೆಯ ರೂಪಾಂತರSign in
ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)

ತಿಳುವಳಿಕೆಯ ರೂಪಾಂತರ

This text was machine-transcribed from the printed book and may contain errors. Select the words and choose “Report a mistake”.

ನಿಮ್ಮ ಅಸ್ತಿತ್ವದ ಇರುವಿಕೆಯು ಮೇಲಿಂದ ಮೇಲೆ ಅನುಭವವಾದಾಗ ಸಹಜವಾಗಿಯೇ ನಿಮ್ಮಲ್ಲಾಗುವ ಬದಲಾವಣೆಯೇ ತಿಳುವಳಿಕೆಯ ರೂಪಾಂತರ.

ನಾವು ಒಳಹೊಕ್ಕಿ ನೋಡುವುದನ್ನು ಅಭ್ಯಾಸ ಮಾಡಿದಂತೆ, ನಮಗೆ ತಿಳಿದಿರದ ಪ್ರಪಂಚವೊಂದು ಗೋಚರವಾಗುತ್ತದೆ.

ನಮ್ಮ ಅಸ್ತಿತ್ವವನ್ನು ತಲುಪಿದಾಗ ನಮ್ಮೊಳಗೆ ಸುಪ್ತವಾಗಿದ್ದ ಶಕ್ತಿ, ಅರಿವು, ಸಂತುಲನಾಶಕ್ತಿ, ಸ್ವಾಭಾವಿಕತೆಗಳ ಮುಸುಕು ತೆರೆಯಲಾರಂಭಿಸುತ್ತದೆ.

ನಾವು ಹಿಂದেন্দೂ ಅನುಭವಿಸಿರದ ಶಾಂತಿ, ಪ್ರೇಮ ಮುಂತಾದ ಸುಂದರಭಾವಗಳನ್ನು ಕಾಣಲಾರಂಭಿಸುತ್ತೇವೆ. ಇನ್ನೂ ಆಳಕ್ಕೆ ಹೋದಾಗ, ನಾವು ಆನಂದವನ್ನು ಸಂಧಿಸುತ್ತೇವೆ ಮತ್ತು ಆನಂದವು ಯಾವಾಗಲೂ ಇದ್ದ ನಮ್ಮ ಸಹಜ ಸ್ಥಿತಿಯೇ ಎಂದು ಅನಿಸುತ್ತದೆ.

ನಾವು 'ನಿತ್ಯ ಆನಂದ'ರು- ಅಂದರೆ ಹೊರ ಪ್ರಪಂಚಕ್ಕಿಂತ ಹೆಚ್ಚು ನಿಜವಾಗುವ ಸ್ಥಿತಿ ಎಡೆಗೆ ಬೆಳೆಯುವ ಭಾವನೆ. ಈ ಭಾವನೆಯು ಬೆಳೆದು ಹೊರಪ್ರಪಂಚಕ್ಕಿಂತಲೂ ಹೆಚ್ಚು ವಾಸ್ತವವಾಗಬೇಕು.

ಇದನ್ನು ಅನುಭವಿಸಲು, ನಮ್ಮ ಅಸ್ತಿತ್ವಕ್ಕೆ ಹಿಂದಿರುಗುವ ಅಭ್ಯಾಸವೊಂದೇ ಸಾಕು. ಈ ಅನುಭವವು ಆಧ್ಯಾತ್ಮಿಕ ಅಭ್ಯಾಸಗಳಿಂದ ತಾನಾಗಿಯೇ ಮೂಡಿಬರುತ್ತದೆ. ಒತ್ತಾಯ ಬೇಕಿಲ್ಲ. ಇದು ಘಟಿಸಿದಾಗ ನಿಮ್ಮನ್ನು ನೀವು ಕಳಚಿಕೊಳ್ಳುವಿರಿ ಮತ್ತು ಬ್ರಹ್ಮಾಂಡದ ಪ್ರೇಮದೊಂದಿಗೆ ಬೆರೆತು ಮೇಲೇಳುವಿರಿ.

ಕ್ರಮೇಣ ಆ ಅಸ್ತಿತ್ವದಿಂದ ಕೆಲಸ ಮಾಡಲಾರಂಭಿಸುತ್ತೀರಿ ಮತ್ತು ನೀವು ಆಧ್ಯಾತ್ಮಿಕ ಗುಣಗಳನ್ನು ವ್ಯಕ್ತಪಡಿಸಲಾರಂಭಿಸುತ್ತೀರಿ. ನೀವು ಪ್ರಪಂಚವನ್ನು ನೋಡುವ ದೃಷ್ಟಿಯೇ ಬದಲಾಗಿ ಎಲ್ಲೆಡೆಯಲ್ಲಿ ಸೂಕ್ಷ್ಮವಾದ ಸೌಂದರ್ಯ, ಮಂಗಳತ್ವ, ಪರಿಪೂರ್ಣ ಮೌನ ಹಾಗೂ ಸಾಮರಸ್ಯಗಳೇ ಕಂಡುಬರುತ್ತವೆ. ಸೃಷ್ಟಿಯಲ್ಲಿ ಎಂದೂ, ಎಲ್ಲೂ, ಯಾವ ಅಪಸ್ವರವೂ ಇರಲಾರದೆಂದು ಆಗ ಮಾತ್ರ ಅರಿವಾಗುತ್ತದೆ.

ಆಗ ಯೋಗಿಗಳು ಯಾವುದನ್ನು 'ದೇವರು' ಎಂದು ಕರೆಯುತ್ತಾರೆಯೋ ಅದರೊಂದಿಗೆ ಮುಖಾಮುಖಿಯಾಗುತ್ತೀರಿ.

ಒಂದು ಸಣ್ಣ ಕಥೆ:

ಒಂದಾನೊಂದು ಕಾಲದಲ್ಲಿ ಒಬ್ಬ ಬಾಲಕನು ದೇವರನ್ನು ಸಂಧಿಸಬೇಕೆಂಬ ಬಯಕೆ ಹೊಂದಿದ್ದನು. ಅಲ್ಲಿಗೆ ಬಹಳ ದೂರ ಪ್ರಯಾಣ ಮಾಡಬೇಕಾಗುವುದೆಂದು ಅವನು ದಾರಿಗೆ ತಿಂಡಿ ತೀರ್ಥಗಳನ್ನೂ, ಚೀಲವನ್ನೂ ತೆಗೆದುಕೊಂಡು ಹೊರಟನು.

ಒಬ್ಬ ಹುಡುಗ ಮತ್ತು ಒಬ್ಬ ಮುದುಕಿ

ಕೊಂಚ ದೂರ ಹೋದ ನಂತರ ಅವನು ಒಬ್ಬ ಮುದುಕಿಯನ್ನು ಕಂಡನು. ಆಕೆಯು ಉದ್ಯಾನದಲ್ಲಿ ಪಾರಿವಾಳಗಳನ್ನು ನೋಡುತ್ತಾ ಕುಳಿತಿದ್ದಳು. ಹುಡುಗನು ಅವಳ ಸಮೀಪದಲ್ಲಿ ಕುಳಿತು ತನ್ನ ಚೀಲವನ್ನು ತೆಗೆದನು. ಅವನು ಪಾನೀಯವನ್ನು ಕುಡಿಯುವುದರಲ್ಲಿದ್ದಾಗ ಆಕೆಯು ಹಸಿದಿರುವಳೆಂಬುದನ್ನು ಗಮನಿಸಿ, ಅವಳಿಗೂ ಸ್ವಲ್ಪ ತಿಂಡಿಯನ್ನು ಕೊಟ್ಟನು.

ಆಕೆಯು ಅದನ್ನು ಹೃತ್ತೂರ್ವಕವಾಗಿ ಸ್ವೀಕರಿಸಿ, ಮುಗುಳ್ನಕ್ಕಳು. ಆಕೆಯ ನಗೆಯು ಎಷ್ಟು ಮನಮೋಹಕವಾಗಿತ್ತೆಂದರೆ, ಹುಡುಗನು ಅದನ್ನು ಮತ್ತೆ ನೋಡಬಯಸಿದನು. ಆದ್ದರಿಂದ ಅವನು ಆಕೆಗೆ ಪಾನೀಯವನ್ನು ನೀಡಿದನು.

ಆಕೆಯು ಮತ್ತೆ ಅವನನ್ನು ನೋಡಿ ಮುಗುಳ್ನಕ್ಕಳು. ಹುಡುಗನಿಗೆ ಅತ್ಯಾನಂದವಾಯಿತು. ಅವರಿಬ್ಬರೂ ಮಧ್ಯಾಹ್ನವೆಲ್ಲಾ ಅಲ್ಲಿಯೇ ತಿಂಡಿ ತಿನ್ನುತ್ತಾ ನಗುನಗುತ್ತಾ ಕಾಲ ಕಳೆದರು. ಆದರೆ ಇಬ್ಬರೂ

ಮಾತನಾಡಲಿಲ್ಲ. ಕತ್ತಲಾದಾಗ ಹುಡುಗನಿಗೆ ಆಯಾಸವಾಗಿ ಅಲ್ಲಿಂದ ಹೊರಡಲು ಅನುವಾದನು. ಎರಡು ಹೆಜ್ಜೆ ಮುಂದೆ ಹೋದವನು ಹಿಂದಿರುಗಿ ಓಡಿಬಂದು ಮುದುಕಿಯನ್ನು ಅಪ್ಪಿಕೊಂಡನು.

ಮುದುಕಿ ಅವನಡೆಗೆ ಹಿಂದಂದಿಗಿಂತಲೂ ದೊಡ್ಡ ನಗೆಯನ್ನು ಬೀರಿದಳು. ಹುಡುಗನು ತನ್ನ ಮನೆಗೆ ಹೋಗಿ ಬಾಗಿಲನ್ನು ತೆರೆದನು. ಅವನ ತಾಯಿಯು ಅವನ ಮುಖದಲ್ಲಿದ್ದ ಆನಂದವನ್ನು ನೋಡಿ ಆಶ್ಚರ್ಯಗೊಂಡಳು. "ಇಂದು ಇಷ್ಟು ಆನಂದವಾಗುವಂತಹದ್ದೇನನ್ನು ಮಾಡಿದೆ"? ಎಂದು ಕೇಳಿದಳು. "ನಾನು ದೇವರೊಡನೆ ಊಟ ಮಾಡಿದೆ" ಎಂದು ಹೇಳಿ, ತಾಯಿಯು ಏನಾದರೂ ಹೇಳುವ ಮೊದಲೇ ಮುಂದುವರಿಸಿದನು, "ನಿನಗೆ ಗೊತ್ತೆ? ಅವಳ

ಹುಡುಗ ಮತ್ತು ತಾಯಿ ತಮ್ಮ ಮನಸ್ಸಿನಲ್ಲಿ ಮುದುಕಿಯನ್ನು ಮತ್ತು ಹುಡುಗನನ್ನು ನೆನೆಯುತ್ತಿರುವುದು

ಮುಗುಳ್ನಗೆಯು ನಾನೀವರೆವಿಗೂ ಎಲ್ಲೂ ಕಂಡಿರದಷ್ಟು ಸುಂದರವಾಗಿತ್ತು!."

ಅತ್ತ ಮುದುಕಿಯೂ ತನ್ನ ಮನೆಗೆ ಅತ್ಯಾನಂದದಿಂದ ಹಿಂದಿರುಗಿ ದಳು, ಆಕೆಯ ಮಗನು ಅವಳ ಮುಖದಲ್ಲಿದ್ದ ಪ್ರಸನ್ನತೆಯನ್ನು ಕಂಡು ದಿಗ್ಭ್ರಮೆಗೊಂಡು “ಅಮ್ಮ, ಇಷ್ಟು ಸಂತೋಷವಾಗು ವಂತಹುದೇನು ನಡೆಯಿತು?” ಎಂದು ಕೇಳಿದನು. “ನಾನು ಉದ್ಯಾನವನದಲ್ಲಿ ದೇವರೊಡನೆ ಊಟ ಮಾಡಿದೆ.” ಮಗನು ಏನಾದರೂ ಹೇಳುವ ಮೊದಲೇ ಆಕೆಯು 'ದೇವರು ನಾನು ಎಣಿಸಿದುದಕ್ಕಿಂತಾ ಎಳೆವಯಸ್ಸಿನವನು!'. ಎಂದಳು.

ನೀವು ಆಧ್ಯಾತ್ಮದೆಡೆಗೆ ತಿರುಗಿದಾಗ ಇಂತಹ ರಮ್ಯ ಅನುಭವಗಳಾಗುತ್ತವೆ. ಇಂತಹ ಸುಂದರ ಸರಳತೆ ಮೂಡಿಬರುತ್ತದೆ! ಅನುಕಂಪ, ಸಹಾನುಭೂತಿ, ಉದಾರತೆ ಮುಂತಾದ ಉದಾರ ಗುಣಗಳು ಮಧುರನಾದದಂತೆ ಮೂಡಿ ಬರುತ್ತವೆ. ಈ ಭಾವನೆಗಳಿಗನುಸಾರವಾಗಿ ನಡೆದಾಗ ನಮ್ಮ ಹಿಂದಿನ ವರ್ತನೆಯೇ ಬದಲಾಗುತ್ತದೆ.

ತಿಳುವಳಿಕೆಯ ಈ ರೂಪಾಂತರವು ನಿಮ್ಮಲ್ಲಿ ತಾನಾಗಿಯೇ ಮೂಡಿ ಬರುತ್ತದೆ. ನಿಮ್ಮ ಅಸ್ತಿತ್ವದಿಂದ ಕಾರ್ಯೋನ್ಮುಖರಾಗುತ್ತೀರಿ. ನೀವು ಹೆಚ್ಚು ಹೆಚ್ಚಾಗಿ ಹೃದಯದಿಂದ ಸ್ಪಂದಿಸುತ್ತೀರಿ. ಕಾಲಕ್ರಮದಲ್ಲಿ ಮನಸ್ಸಿನಿಂದ ನಿರ್ಮನಸ್ಕ ಸ್ಥಿತಿಯನ್ನು ಹೊಂದುತ್ತೀರಿ. ಮನಸ್ಸೆಂಬುದು ನಿಮ್ಮ ಜೀವನದಲ್ಲಿ ಉಂಟುಮಾಡುತ್ತಿರುವ ಅಲ್ಲೋಲ ಕಲ್ಲೋಲವನ್ನು ಗ್ರಹಿಸಿ ಅದರಿಂದ ಬಿಡಿಸಿಕೊಳ್ಳುತ್ತೀರಿ- ನಿಮ್ಮ ಮೇಲಿನ ಅದರ ಹಿಡಿತವು ಕ್ರಮವಾಗಿ ಸಡಿಲಗೊಳ್ಳುತ್ತದೆ.