KAILASA Library/ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)/ಇದು ಆಧ್ಯಾತ್ಮವೇ?Sign in
ಆಧ್ಯಾತ್ಮ - ಏಕೆ ಸರಣಿ_ಕನ್ನಡ (Adhyatma - Eke Series_Kannada)

ಇದು ಆಧ್ಯಾತ್ಮವೇ?

This text was machine-transcribed from the printed book and may contain errors. Select the words and choose “Report a mistake”.

ಹೌದು, ಪ್ರಶ್ನೆಗಳು ಅಂಕುರಿಸಿದರೆ ನೀವು ಆಧ್ಯಾತ್ಮಿಕತೆಯ ಹೊಸ್ತಿಲನ್ನು ಮುಟ್ಟಿದಂತೆಯೇ. ನೀವಾಗಲೇ ಒಳನೋಡುತ್ತಿರುವಿರಿ. ಇಲ್ಲಿಂದ ನಿಮ್ಮ ಒಳಪ್ರಪಂಚವನ್ನು ಪರಿಶೋಧನೆ ಮಾಡಬಹುದು.

ಒಂದು ಸಣ್ಣ ಕಥೆ:

ಒಂದು ದಿನ ಒಂದು ಕಾಡಿನ ಅಂಚಿನಲ್ಲಿ ಒಬ್ಬನು ಮರವನ್ನು ಕಡಿಯುತ್ತಿದ್ದನು. ಆಗ ಅಲ್ಲಿಗೆ ದಿವ್ಯಜ್ಞಾನಿಗಳಾದ ಗುರುಗಳೊಬ್ಬರು ಬಂದು ಅವನನ್ನು ನೋಡಿದರು. ಅವನನ್ನು ಕಂಡು 'ಇನ್ನೂ ಒಳಗೆ ಹೋಗು' ಎಂದರು.

ಅದನ್ನು ಕೇಳಿ ಅವನು ಕಾಡಿನ ಒಳ ಹೊಕ್ಕು ಚಂದನದ ಮರವನ್ನು ಕಂಡನು. ಅದನ್ನು ಕಡಿದು ಆ ಕೂಡಲೇ ಮಾರುಕಟ್ಟೆಯಲ್ಲಿ ಮಾರಲು ಹೊರಟನು.

ಮಾರನೆಯ ದಿನ ಅವನು ಮತ್ತೆ ಹೋಗಿ ಚಂದನದ ಮರವನ್ನು ಕಡಿಯುತ್ತಿದ್ದನು. ಗುರುಗಳು ಮತ್ತೆ ಅವನನ್ನು ಭೇಟಿ ಮಾಡಿ 'ಇನ್ನೂ ಒಳಗೆ ಹೋಗು' ಎಂದರು. ಆತನು ಹಾಗೆಯೇ ಕಾಡಿನಲ್ಲಿ ಇನ್ನೂ ಮುಂದಕ್ಕೆ ಹೋದನು. ಅಲ್ಲಿ ಅವನಿಗೆ ಬೆಳ್ಳಿಯ ಗಣಿ ಸಿಕ್ಕಿತು. ಅವನು ಗಣಿ ತೋಡಿ ಬೆಳ್ಳಿಯನ್ನು ತಂದು ಮಾರತೊಡಗಿದನು.

ಗುರುಗಳು ಕಟ್ಟಿಗೆ ಕಡಿಯುವವನಿಗೆ ಕಾಡಿನ ಒಳಗೆ ಹೋಗಲು ಸೂಚಿಸುತ್ತಿರುವುದು

ಅವನು ಹೀಗೆಯೇ ಕೆಲಕಾಲ ಗಣಿ ತೋಡಿ ಬೆಳ್ಳಿಯನ್ನು ತೆಗೆಯುತ್ತಿದ್ದನು. ಗುರುಗಳು ಮತ್ತೆ ಅವನನ್ನು ಸಂಧಿಸಿ 'ಇನ್ನೂ ಒಳಗೆ ಹೋಗು' ಎಂದರು. ಅವನು ಕಾಡಿನಲ್ಲಿ ಇನ್ನೂ ಒಳಕ್ಕೆ ಹೋಗಿ ನೋಡಲು ಅಲ್ಲಿ ಚಿನ್ನದ ಗಣಿಯನ್ನು ಕಂಡನು! ಅವ ನು ಆ ಚಿನ್ನವನ್ನು ಗಣಿತೋಡಿ, ಹೊರತೆಗೆದು ಮಾರತೊಡಗಿದನು.

ಗುರುಗಳು ಮತ್ತೆ ಅವನಿಗೆ, 'ಇನ್ನೂ ಒಳಗೆ ಹೋಗು' ಎಂದರು. ಈ ಬಾರಿ ಇನ್ನೂ ಒಳಗೆ ಹೋದನು. ಅವನಿಗೆ ವಜ್ರಗಳ ಗಣಿಯೇ ಸಿಕ್ಕಿತು.

ಒಬ್ಬ ಗುರು ಮತ್ತು ಶಿಷ್ಯ ಕಾಡಿನಲ್ಲಿರುವ ದೃಶ್ಯ

ಕರುಣಾಳುವಾದ ಗುರುವು ಮತ್ತೆ ಅವನ ಹಿಂದೆ ನಿಂತು 'ಇನ್ನೂ ಒಳಗೆ ಹೋಗು' ಎಂದರು. ಈಗ ಅವನು ಅನುಮಾನ ಪಡತೊಡಗಿದನು. ವಜ್ರಕ್ಕಿಂತಲೂ ಅಮೂಲ್ಯವಾದದ್ದು ಈ ಕಾಡಿನಲ್ಲಿ ಏನಿರಬಹುದು? ಈ ಜೀವನದಲ್ಲಾದರೂ ವಜ್ರದ ವ್ಯಾಪಾರಕ್ಕಿಂತಲೂ ಮಿಗಿದಾದುದೇನನ್ನು ಸಾಧಿಸಲು ಸಾಧ್ಯ?

ಅವನು ಗುರುವಿನತ್ತ ಕಣ್ಣು ಹಾಯಿಸಿದನು. ಗುರುವಿನ ಬಳಿ ಚಂದನವಾಗಲಿ, ಬೆಳ್ಳಿಯಾಗಲಿ, ಚಿನ್ನವಾಗಲಿ, ವಜ್ರವಾಗಲಿ ಮಾರುಕಟ್ಟೆಯಲ್ಲಿ ಮಾರಲು ಇಲ್ಲದಿದ್ದರೂ, ಗುರುವು ಅಲೌಕಿಕ ಶಾಂತಿಯನ್ನೂ, ಅನಿರ್ವಚನೀಯವಾದ ಪ್ರೇಮವನ್ನೂ ಹೊರ ಸೂಸುತ್ತಿರುವುದನ್ನು ಕಂಡನು. ಇವರ ಬಳಿ ಇದ್ದುದೇನು? 'ಆತ್ಮ'ವೆಂಬುದೊಂದೇ........

ಇದ್ದಕ್ಕಿದ್ದಂತೆ ಅವನಿಗೆ ಹೊಳೆಯಿತು. 'ಇನ್ನೂ ಒಳಗೆ ಹೋಗು, ಒಳಗೆ ಹೋಗು, ನಿನ್ನ ಒಳ ಪ್ರಪಂಚವನ್ನು ಶೋಧಿಸಿ ನೋಡು, ನಿನ್ನ ಆತ್ಮವನ್ನು ಕಾಣು, ಅದರಲ್ಲೇ ಶಾಶ್ವತ ಸಂಪತ್ತುಗಳು ಅಡಗಿವೆ'. ಅಂದಿನಿಂದಲೂ ಇದೇ ಗುರುವಿನ ಸಂದೇಶವಾಗಿತ್ತು.

ಆಧ್ಯಾತ್ಮಿಕ ಸಾಧನೆಗಳನ್ನು ಮಾಡತೊಡಗಿದಾಗ ನಿಮ್ಮ ಒಳ ಪ್ರಪಂಚದಲ್ಲಿ ವಿವಿಧ ಸ್ತರಗಳು ಇರುವುದನ್ನು ಕಾಣುತ್ತೀರಿ. ಪ್ರತಿ ಸ್ತರದಲ್ಲೂ ಅಡಗಿರುವ ಶಕ್ತಿಯನ್ನು ಉಪಯೋಗಿಸಿ, ಬಾಹ್ಯ ಜಗತ್ತಿನಲ್ಲಿಯೂ, ಪ್ರತಿಯೊಂದು ಆಯಾಮದಲ್ಲಿಯೂ ಕುಶಲತೆಯನ್ನು ನೀವು ಸಾಧಿಸಬಹುದು.

ಇದರ ಕಾರ್ಯವಿಧಾನವೇನು? ಪ್ರಾಚೀನ ಕಾಲದಿಂದಲೂ ಆಧ್ಯಾತ್ಮಿಕ ವಿಜ್ಞಾನಗಳು ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡಲು ಸರಳವಾದ ತಂತ್ರಗಳನ್ನು ರೂಪಿಸಿವೆ. ಉದಾಹರಣೆಗೆ, ಧ್ಯಾನ, ಯೋಗಗಳು ಇಂದು ವ್ಯಾಪಕವಾಗಿ ಅಭ್ಯಾಸದಲ್ಲಿವೆ. ಅಮೇರಿಕ ಒಂದರಲ್ಲಿಯೇ ತ್ರಿಕೋಟಿ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ?

ಬಹುಮುಖಿ ಹಾಗೂ ಸ್ಪಷ್ಟವಾದ ಲಾಭಗಳಿಂದ ಧ್ಯಾನವು ಜನಪ್ರಿಯ ವಾಗಿದೆ. ಧ್ಯಾನದಿಂದ ದೇಹ- ಮನಸ್ಸುಗಳ ಮೇಲಾಗುವ ಪ್ರಭಾವವನ್ನು ವಿಜ್ಞಾನವು ಆಳವಾಗಿ ಪರಿಶೀಲಿಸುತ್ತಾ ಇದೆ ಇಂದು ಮಾನವನಿಗೆ ಶಾರೀರಿಕ ಸೌಖ್ಯ, ಶಕ್ತಿ, ಮಾನಸಿಕ ಬಲ ಹಾಗೂ ಆತ್ಮಶಕ್ತಿಯು ಅವಶ್ಯಕವಾಗಿದೆ.

ದೈಹಿಕ ಶಕ್ತಿಯು ನಮ್ಮನ್ನು ಆರೋಗ್ಯವಂತರನ್ನಾಗಿಸಿ ದೈನಂದಿನ ಚಟುವಟಿಕೆಗಳನ್ನು ಯಾವ ತೊಂದರೆಯೂ ಇಲ್ಲದೆ ನಡೆಸುವಂತೆ ನೋಡಿಕೊಳ್ಳುತ್ತದೆ. ಧ್ಯಾನವು ದೇಹದಲ್ಲಿ ಅನೇಕ ಚಮತ್ಕಾರಗಳನ್ನು ಮಾಡಬಲ್ಲದು. ಧ್ಯಾನದಿಂದ ರಕ್ತದೊತ್ತಡ, ಮಧುಮೇಹ ಮುಂತಾದ ಅನೇಕ ಖಾಯಿಲೆಗಳನ್ನು ತಡೆಗಟ್ಟಬಹುದು.

ಪ್ರತ್ಯಕ್ಷ ಅಂಕಿ-ಅಂಶಗಳಿಂದ ಧ್ಯಾನ ಮಾಡುವವರಲ್ಲಿ ಹೃದ್ರೋಗದ ಸಂಭವವು ಶೇಕಡ 87ರಷ್ಟು ಹಾಗೂ ಕ್ಯಾನ್ಸರ್‌ನ ಸಂಭವವು ಶೇಕಡ 55ರಷ್ಟು ಕಡಿಮೆ ಎಂದು ರುಜುವಾತಾಗಿದೆ. ಅನೇಕರಿಗೆ ವಿವಿಧ ಖಾಯಿಲೆಗಳ ಉಪಶಮನವಾಗಿದೆ.

ಮನಃಶಕ್ತಿಯು ಸಮಚಿತ್ತವನ್ನೂ, ಸಮಾಧಾನವನ್ನೂ ಉಂಟುಮಾಡಿ ಜೀವನವನ್ನು ಪೂರ್ಣವಾಗಿ ಸವಿಯಲು ಸಹಾಯಕವಾಗುತ್ತದೆ.

ಧ್ಯಾನವು ಖಿನ್ನತೆಯನ್ನು ತೊಡೆದುಹಾಕಬಹುದು ಎಂದು ರುಜುವಾತಾಗಿದೆ. ಖಿನ್ನ ಮನಸ್ಥಿತಿಯು ದೈಹಿಕವಾಗಿಯೂ ಭಾವನಾತ್ಮಕವಾಗಿಯೂ ಬಹಳ ಹಾನಿಯನ್ನುಂಟುಮಾಡುತ್ತದೆ. ನಕಾರಾತ್ಮಕ ಆಲೋಚನೆಗಳು ನಕಾರಾತ್ಮಕ ಆರೋಗ್ಯ ಸ್ಥಿತಿಯನ್ನುಂಟು ಮಾಡುತ್ತವೆ. ಯಾವಾಗಲೂ ಸಕಾರಾತ್ಮಕ ಆಲೋಚನೆಗಳನ್ನು ಮಾಡುವುದು ಬಹಳ ಮುಖ್ಯ. ಎಲ್ಲಾ ಆಧ್ಯಾತ್ಮಿಕ ಸಾಧನೆಗಳೂ ಇದ್ದಕ್ಕಾಗಿಯೇ!

ಆತ್ಮಶಕ್ತಿಯೆಂಬುದು ಆಯಾಸಗೊಳ್ಳದ ಅಂತಃಶಕ್ತಿ. ನೀವು ವೈಯುಕ್ತಿಕ ರೂಪಾಂತರವನ್ನು ಹೊಂದಲು ಆಧಾರವಾಗಿ ನಿಲ್ಲುವ ಅಗಾಧ ಅಸ್ತಿತ್ವ. ನಿಮ್ಮ ಜೀವನದಲ್ಲಿ ಏನೇ ಬಂದರೂ ಸ್ಥಿರವಾಗಿ ನಿಲ್ಲುವುದಕ್ಕೆ ಸಹಾಯಕವಾಗುವುದು ನಿಮ್ಮ ಅಂತಃಸತ್ತ್ವ ಸಾಮಾನ್ಯವಾಗಿ ಕಷ್ಟಗಳು ಬಂದಾಗ ನಮ್ಮ ಗಹನವಾದ ಪೂರ್ವಾನುಭವಗಳು ನಮ್ಮನ್ನು ಕುಗ್ಗಿಸುವುದರಿಂದ, ಇದರೊಂದಿಗೆ ನಮ್ಮ ಸಂಪರ್ಕ ಅತಿ ವಿರಳ.

ನಿಮ್ಮೊಳಗಿರುವ 'ಅಂತರ್ಬೋಧೆ' ಎಂಬ ಪೂರ್ಣ ಅರಿವು ಎಷ್ಟು ಬಲಶಾಲಿಯಾದುದೆಂದರೆ, ಜೀವನದಲ್ಲಿ ಏನೇ ಬಂದರೂ ಮಾರ್ಗದರ್ಶನ ನೀಡಿ ಮೆಟ್ಟಿ ನಿಲ್ಲುವ ಧೈರ್ಯವನ್ನು ಅದು ನೀಡಬಲ್ಲದು. ನಿಮ್ಮ ಮನಸ್ಸು ನಿರಾಳವಾದಷ್ಟೂ, ಆಳಕ್ಕೆ ಇಳಿದಷ್ಟೂ, ಈ ಅಂತರ್ಬೋಧೆಯ ಧ್ವನಿಯು ಸ್ಪಷ್ಟವಾಗಿ ಕೇಳಿಬರುತ್ತದೆ.

ನೀವು ಅದರೊಂದಿಗೆ ಸಂಬಂಧ ಬೆಳೆಸಿದಂತೆ ನಿಮ್ಮ ಶರೀರ, ಆರೋಗ್ಯ, ಭಾವನೆಗಳು ಮತ್ತು ಮನಸ್ಸು ತಾವಾಗಿಯೇ ಶ್ರುತಿಗೂಡಿಸುತ್ತವೆ ಏಕೆಂದರೆ ಈ ಶಕ್ತಿಯು ಅವೆಲ್ಲದರ ಸಾಮಾನ್ಯ ಗುಣವಾಗಿ ಅವೆಲ್ಲವನ್ನೂ ಪೋಷಿಸುತ್ತದೆ. ಆಗ ಮಾತ್ರ ನೀವು ಸಂಪೂರ್ಣ ವ್ಯಕ್ತಿಯಾಗಿ ವಿಕಸಿಸುವಿರಿ. ಆಗ ನೀವು ಸಮಾಜಕ್ಕೂ, ಪ್ರಪಂಚಕ್ಕೂ ಅಮೂಲ್ಯ ನಿಧಿಯಾಗುವಿರಿ!

ಆಧ್ಯಾತ್ಮಿಕ ಅಭ್ಯಾಸಗಳು ಶಾರೀರಕವಾಗಿ ಗಾಢವಾದ ಸಕಾರಾತ್ಮಕ ಪ್ರಭಾವ ಬೀರಿ ಈ ಎಲ್ಲ ಶಕ್ತಿಗಳನ್ನೂ ಹೊರಗೆಡಹಬಲ್ಲವು.

ಆಧ್ಯಾತ್ಮಿಕ ಸಾಧನೆಗಳು ನಮ್ಮ ಮೇಲೆ ಇಂದ್ರಿಯಾತೀತವಾದ ಪ್ರಭಾವ ವನ್ನು ಕೂಡ ಹೊಂದಿವೆ. ನಮಗೆ ಭೌತಿಕ ಶರೀರವೇ ಅಲ್ಲದೆ ಸೂಕ್ಷ್ಮ ಶರೀರವೂ ಇದೆ. ಈ ಸೂಕ್ಷ್ಮ ಶರೀರವು ಪ್ರಾಣ ಅಥವಾ ಪ್ರಾಣಶಕ್ತಿಯ ನೆಲೆಯಾಗಿದೆ. ಪ್ರಾಣ ಎಂಬುದು ನಾವು ಉಸಿರಿ ನೊಂದಿಗೆ ಒಳತೆಗೆದುಕೊಳ್ಳುವ ಶಕ್ತಿ. ನಮಗೆ ಪ್ರಾಣವನ್ನು ಒದಗಿಸುವ ಮಾಧ್ಯಮವೇ ಗಾಳಿ. ನಿಜವೆಂದರೆ, ನಾವು ಬದುಕಿರಲು ಗಾಳಿಯೇ ಬೇಡ. ಪ್ರಾಣಮಾತ್ರವೇ ಸಾಕು. ಈ ಪ್ರಾಣವು ನಮ್ಮನ್ನು ಆವರಿಸಿಕೊಂಡಿದೆ. ದೇಹ ಮನಸ್ಸುಗಳು ಸಮತೋಲನದಲ್ಲಿದ್ದಾಗ ಅದನ್ನು ಹೆಚ್ಚಾಗಿ ಹೀರಿಕೊಳ್ಳಬಲ್ಲೆವು.

ನಮ್ಮ ಶರೀರದಲ್ಲಿ ಚಕ್ರ ವ್ಯವಸ್ಥೆ ಎಂಬ ಶಕ್ತಿ ವ್ಯವಸ್ಥೆ ಇದೆ. ಅದು ಅತೀಂದ್ರಿಯವಾದುದು. ಅದು ಬೆನ್ನುಹುರಿಯ ಉದ್ದಕ್ಕೂ ಏಳು ಶಕ್ತಿ ಕೇಂದ್ರಗಳನ್ನೊಳಗೊಂಡಿದೆ. ಅವು ನಮ್ಮ ಶಾರೀರಕ, ಮಾನಸಿಕ ಹಾಗೂ ಭಾವನಾತ್ಮಕ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ. ಈ ಚಕ್ರಗಳು ಸುಸಂಗತವಾಗಿದ್ದಾಗ ಮಾತ್ರ ನಾವು ಶಾರೀರಕ ಸೌಖ್ಯತೆ ಹಾಗೂ ಆರೋಗ್ಯವನ್ನು ಅನುಭವಿಸಬಹುದು. ಈ ಚಕ್ರಗಳು ನಮ್ಮ ಮನಃಸ್ಥಿತಿಗನುಗುಣವಾಗಿ ತೆರೆದಿರುತ್ತವೆ ಇಲ್ಲವೇ ಮುಚ್ಚಿಕೊಂಡಿರುತ್ತವೆ. ಅವು ತೆರೆದುಕೊಂಡಿರುವಾಗ ನಮ್ಮ ದೇಹದೊಳಕ್ಕೆ ಪ್ರಾಣವನ್ನು ಅಗಾಧವಾಗಿ ಸೆಳೆದುಕೊಳ್ಳುತ್ತವೆ. 'ನಾಡಿ' ಗಳೆಂಬ ಸೂಕ್ಷ್ಮವಾದ ಶಕ್ತಿನಾಲಗಳ ಮೂಲಕ ಈ ಅತ್ಯಗತ್ಯವಾದ ಶಕ್ತಿಯನ್ನು ನಮ್ಮ ಸೂಕ್ಷ್ಮ ಶರೀರಕ್ಕೆ ವಿತರಿಸುತ್ತವೆ. ಪ್ರಾಣಶಕ್ತಿಗೂ, ಶಾರೀರಕ ಹಾಗೂ ಮಾನಸಿಕ ಸ್ಥಿತಿಗೂ ನೇರ ಸಂಬಂಧವಿದೆ.

ಪ್ರಾಣಶಕ್ತಿಯನ್ನು ಹೀರಿಕೊಳ್ಳುವುದು ನಮ್ಮ ಮನಃಸ್ಥಿತಿಯ ಮೇಲೆ ಆಧಾರಿತವಾಗಿದೆ. ಅದು ಯಾಂತ್ರಿಕವಾದ ಪ್ರಕ್ರಿಯೆ. ಕುಗ್ಗಿದ ಸ್ಥಿತಿಯಲ್ಲಿದ್ದಾಗ ಚಕ್ರಗಳು ಮುಚ್ಚಿಕೊಂಡಿರುತ್ತವೆ. ನಿಮ್ಮ ಶಕ್ತಿಯೂ ಕಡಿಮೆಯಾಗಿ, ಅದೇ ಮನಃಸ್ಥಿತಿಯು ಮುಂದುವರೆಯುತ್ತದೆ. ನೀವು ಯೋಗ, ಧ್ಯಾನ ಅಥವಾ ಮಂತ್ರಜಪಗಳನ್ನು ಮಾಡಿ ಅರಿವನ್ನು ಅದರೆಡೆ ಹರಿಸಿದರೆ ಆಗಿಂದಾಗಲೇ ನಿಮ್ಮಲ್ಲಿ ಏನೋ ಅರಳಿದಂತಾಗುತ್ತದೆ. ನಿರಾಯಾಸವಾಗಿ ನಿಮ್ಮಲ್ಲಿ ಏನೋ ಕಗ್ಗಂಟು ಬಿಡಿಸಿದಂತಾಗಿ ನವಚೇತನವು ಈ ವ್ಯವಸ್ಥೆಯಲ್ಲಿ ಉಕ್ಕಿ ಹರಿಯುತ್ತದೆ. ಅದು ಹೇಗೆಂದರೆ, ನೀವು ಗಮನವನ್ನು ನಿಮ್ಮ ತೊಂದರೆಗಳ ಕಡೆಗಲ್ಲದೆ ನಿಮ್ಮ ಅಂತರಂಗದ ಕೇಂದ್ರಬಿಂದುವಿನ ಕಡೆಗೆ ತಿರುಗಿಸುತ್ತೀರಿ. ಕೇವಲ ಒಂದು ಕ್ಷಣ ಧ್ಯಾನ ಮಗ್ನರಾದರೂ ನಿಮ್ಮ ಮನವರಳಿ ನಿರಾಳವಾಗುವುದನ್ನು ನೀವು ಅನುಭವಿಸಬಹುದು. ಧ್ಯಾನವು ತಕ್ಷಣ ಫಲ ನೀಡುತ್ತದೆ. ಅದರ ಪ್ರಭಾವ ಎಷ್ಟು ಶಾಂತಿದಾಯಕವೆಂದರೆ ಅನತಿ ಕಾಲದಲ್ಲಿಯೇ ಎಲ್ಲ ಒತ್ತಡ, ಭಯ, ಕೋಪ ಮುಂತಾದವುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆಯ ವಿಧಾನವನ್ನು ಹೇಗೆ ಬದಲಾಯಿಸಬೇಕೆಂಬುದನ್ನು ಕಲಿಯುವಿರಿ.

ಒಂದು ಕಥೆ ಹೇಳುವೆ:

ಚಿಕಾಗೋದ ವಿಶ್ವವಿದ್ಯಾಲಯದಲ್ಲಿ ನಡೆಸಿದ ಒಂದು ಪ್ರಯೋಗದ ಸಂಗತಿ ಹೀಗಿದೆ:

ಆರೋಗ್ಯವಂತನೂ, ಬುದ್ಧಿವಂತನೂ ಆದ ಯುವಕನೊಬ್ಬನು ಬೆಳಿಗ್ಗೆ ಎದ್ದು ಆಫೀಸಿಗೆ ಹೊರಡಲು ಸಿದ್ಧನಾಗುತ್ತಾನೆ. ಅವನ ಹೆಂಡತಿಯು ಅವನನ್ನು ನೋಡಿ 'ಇಂದೇಕೋ ಆಯಾಸಗೊಂಡಂತೆ ಕಾಣುತ್ತೀರಿ. ನಿಮಗೆ ಹುಷಾರಿದೆ ತಾನೇ?' ಎಂದು ಕೇಳುತ್ತಾಳೆ.

ಅವಳ ಈ ಮಾತಿನಿಂದ ಸಿಡಿಮಿಡಿಗೊಂಡು 'ಇಲ್ಲದ್ದನ್ನು ಕಲ್ಪಿಸಿಕೊಳ್ಳ ಬೇಡ' ಎಂದು ಹೇಳಿ ಆಫೀಸಿಗೆ ಹೊರಡುತ್ತಾನೆ.

ಅವನು ಗ್ಯಾರೇಜಿನಿಂದ ಕಾರನ್ನು ಹೊರತೆಗೆಯುತ್ತಿದ್ದಂತೆ ಅವನನ್ನೇ ಗಮನಿಸುತ್ತಿದ್ದ ಅವನ ಪಕ್ಕದ ಮನೆಯವನು 'ನೀನು ಚೆನ್ನಾಗಿದ್ದೀಯ ತಾನೆ? ಏನೋ ಸುಸ್ತಾದಂತೆ ಕಾಣುತ್ತೀಯ?' ಎನ್ನುತ್ತಾನೆ.

ಯುವಕನಿಗೆ ಆಶ್ಚರ್ಯವಾಗುತ್ತದೆ. ತನಗೇನೂ ಆಗಿಲ್ಲವೆಂದು ಹೇಳಿ ಹೊರಡುತ್ತಾನೆ. ಅವನು ಆಫೀಸಿಗೆ ತಲುಪಿದೊಡನೆ ಸ್ವಾಗತಕಾರಳು ಅವನನ್ನು ನೋಡಿ ಆತಂಕದಿಂದ, 'ನಿಮಗೆ ಹುಷಾರಿದ್ದಂತಿಲ್ಲ ಕೆಲಸಕ್ಕೇಕೆ ಬಂದಿರಿ?' ಎಂದು ಕೇಳುತ್ತಾಳೆ. ಯುವಕನು 'ನನಗೇನೂ ಹಾಗೆ ಕಾಣುತ್ತಿಲ್ಲ. ನೋಡೋಣ' ಎಂದು ಹೇಳಿ ತನ್ನ ಕಪಾಟಿನತ್ತ ಹೋಗುತ್ತಾನೆ.

ಅವನನ್ನು ಕಂಡ ಸಹೋದ್ಯೋಗಿಯೂ 'ನಿನಗೇನಾಗಿದೆ? ನೀನು ಜ್ವರ ಬಂದವನಂತೆ ಕಾಣುತ್ತಿದ್ದೀಯೆ?' ಎನ್ನುತ್ತಾನೆ. ಇದೀಗ ಭರಿಸಲಾಗದಾಯಿತು ಮತ್ತು ಸ್ವಲ್ಪ ಆಯಾಸವಾದಂತೆ ಭಾಸವಾಯಿತು. ಅಷ್ಟು ಹೊತ್ತಿಗೆ ಸರಿಯಾಗಿ ಅವನ ಮೇಲಾಧಿಕಾರಿಗಳು ಒಳಗೆ ಕರೆಯುತ್ತಾರೆ. ಅವರೂ ಸಹ ಒಂದು ನೋಟದಲ್ಲೇ ‘ನಿಮಗೆ ನಿಜವಾಗಿಯೂ ಹುಷಾರಿದ್ದಂತಿಲ್ಲ. ಇಂದು ಕೆಲಸ ಮಾಡಲು ಸಾಧ್ಯವಾಗುತ್ತದೆಯೇ? ವೈದ್ಯರ ಬಳಿ ಹೋಗಬಾರದೆಕೆ?’ ಎನ್ನುತ್ತಾರೆ.

ಆತನಿಗೆ ಸಾಕಾಗಿ ಹೋಗಿ, ಈಗ ನಿಜವಾಗಿಯೂ ಖಾಯಿಲೆ ಬಂದಂತಾಗಿ, ಮನೆಗೆ ಹೋಗಲು ನಿಶ್ಚಯಿಸುತ್ತಾನೆ.

A woman touching a man's forehead to check his temperature

ಮನೆಯ ಕಡೆಗೆ ಹೋಗುತ್ತಾ, ಅವನಿಗೆ ಜ್ವರವೇರುತ್ತಿರುವಂತೆ ಭಾಸವಾಗುತ್ತದೆ. ಮನೆಯನ್ನು ತಲುಪಿದಾಗ ಹೆಂಡತಿಗೆ ಆಶ್ಚರ್ಯವಾಗಿ, ಅವನ ಹಣೆಯನ್ನು ಮುಟ್ಟಿದಾಗ ನಿಜವಾಗಿಯೂ ಬಿಸಿಯಾಗಿರುತ್ತದೆ. ಅವನಿಗೆ ಜ್ವರ ಏರಿರುತ್ತದೆ. ಈ ಪ್ರಯೋಗವನ್ನು ಹನ್ನೊಂದು ಜನರ ಮೇಲೆ ನಡೆಸಲಾಗಿತ್ತು ಹಾಗೂ ಕೊನೆಯಲ್ಲಿ ಹನ್ನೊಂದು ಜನರಿಗೂ ಹುಷಾರು ತಪ್ಪಿತ್ತು!

ಇದರಿಂದ ನಾವು ತಿಳಿಯಬೇಕಾದುದೇನೆಂದರೆ ನೀವು ಅಂತಸ್ಸತ್ವದ ಮೇಲೆ ಆಧಾರ ಪಡದಿದ್ದರೆ ಆಗುವುದೇ ಹೀಗೆ ಬಾಹ್ಯ ಪ್ರಭಾವದಿಂದಾಗಿ ನಿಮ್ಮಲ್ಲಿ ಏರಿಳಿತಗಳುಂಟಾಗುತ್ತವೆ.

ನಿಮ್ಮ ಆತ್ಮ ಕೇಂದ್ರವನ್ನು ಕಂಡುಕೊಂಡಾಗ ಅದರಡೆಗೆ ಜಾಗೃತರಾಗಿ ಹಿಂದಿರುಗಬಲ್ಲಿರಿ ಮತ್ತು ಪುನರ್ಜೀವನಗೊಳ್ಳುವಿರಿ. ನಿಮ್ಮಲ್ಲಿರುವ ಅಂತಃಶಕ್ತಿಯು ತೆರೆದುಕೊಂಡಂತೆ ನಿಮ್ಮಲ್ಲಿ ಹೊಸ ಉತ್ಸಾಹ, ಶಕ್ತಿ, ಧೈರ್ಯ, ಆತ್ಮಬಲ, ಮುಂದಾಳುತನದ ಗುಣಗಳು ಮೂಡಿಬರುತ್ತವೆ. ನಿಮ್ಮ ಕಾರ್ಯ ಸಾಧ್ಯತೆಯು ಪರಿಮಾಣದ ನೆಗೆತ ಹೊಂದುತ್ತದೆ. ನೀವು ಸ್ವತಃ ನಿಮ್ಮದೇ ಶಕ್ತಿಯ ಮೂಲವಾಗುತ್ತೀರಿ, ಜನಪ್ರಿಯರೂ ಆಗುತ್ತೀರಿ. ಏಕೆಂದರೆ, ನಿಮ್ಮ ವ್ಯಕ್ತಿತ್ವವೇ ಸ್ಪೂರ್ತಿದಾಯಕವಾಗಿರುತ್ತದೆ.