ಹಿಡಿತರಹಿತರಾಗಿರಿ
ಹಿಡಿತರಹಿತರಾಗಿರಿ
(ಸಮಯಾವಧಿ 7 ನಿಮಿಷಗಳು)
ಇಂದಿನ ಏಳು ನಿಮಿಷಗಳು ಸುಮ್ಮನೆ ಹಿಡಿತರಹಿತರಾಗಿರಿ. ಮನಸ್ಸೆಂಬುದು ಆಲೋಚನೆಗಳ ಸಂಗ್ರಹವಲ್ಲದೆ ಬೇರೇನಲ್ಲ ಒಂದು ಆಲೋಚನೆಯ ನಂತರ ಮತ್ತೊಂದು ಅನುಕ್ರಮವಾಗಿ ಬರುತ್ತಿರುವುದು. ನಮ್ಮ ಸಹಜ ಸ್ವಭಾವದಿಂದ ನಮ್ಮ ಆಲೋಚನೆಗಳು ಸಂಬಂಧಿತವಾಗಿರುವುದಿಲ್ಲ. ಅವುಗಳು ಮೀನಿನ ತೊಟ್ಟಿಯಲ್ಲಿರುವ ನೀರಿನ ಗುಳ್ಳೆಗಳಂತೆ. ಮೀನಿನ ತೊಟ್ಟಿಯಲ್ಲಿರುವ ನೀರಿನ ಗುಳ್ಳೆಗಳು ಒಂದಕ್ಕೊಂದು ಸಂಬಂಧಿತವಾಗಿರುವುದಿಲ್ಲ. ಅವು ನಿಶ್ಚಿತ ರೀತಿಯಲ್ಲಿ ಬೇರೆ
ಬೇರೆಯಾಗಿರುತ್ತವೆ, ಆದರೆ ನೋಟಕ್ಕೆ ಒಂದಕ್ಕೊಂದು ಜೋಡಣೆಯಾದಂತೆ ಕಾಣುತ್ತವೆ. ಇದೇ ರೀತಿಯಲ್ಲಿ ನಮ್ಮ ಆಲೋಚನೆಗಳು ಜೋಡಣೆಯಾದಂತೆ ಕಂಡುಬಂದರೂ ಅವುಗಳು ಸಂಬಂಧಿತವಾಗಿರುವುದಿಲ್ಲ. ನೀವು ಒಂದು ಚಿಕ್ಕ ಅಭ್ಯಾಸವನ್ನು ಮಾಡಬಹುದು. ಆಲೋಚನೆಗಳು ಬಂದ ಹಾಗೆ ಅವುಗಳೆಲ್ಲವನ್ನು ಬರೆದಿಡಿ. ಹತ್ತು ನಿಮಿಷಗಳ ಕಾಲ ನಿಶ್ಯಬ್ದವಾಗಿ ಕುಳಿತುಕೊಂಡು ಸುಮ್ಮನೆ ನಿಮ್ಮ ಆಲೋಚನೆಗಳನ್ನೆಲ್ಲಾ ದಾಖಲುಮಾಡಿಕೊಳ್ಳಲಾರಂಭಿಸಿರಿ. ನಿಯಂತ್ರಿಸುವುದಾಗಲೀ ಅಥವಾ ಯೋಚಿಸುವುದನ್ನಾಗಲೀ ಮಾಡಬೇಡಿ. ಸುಮ್ಮನೆ ನಿಶ್ಶಬ್ದವಾಗಿರಿ ಮತ್ತು ನಿಮ್ಮಲ್ಲಿ ಬರುತ್ತಿರುವ ಆಲೋಚನೆಗಳನ್ನು ಕಾಣುತ್ತೀರಿ. ಯಾವುದೇ ಆಲೋಚನೆಯು ಬಂದರೆ ಕೂಡಲೇ ಕಾಗದದ ಮೇಲೆ ಬರೆದಿಡಿ. ಇದನ್ನು ಹತ್ತು ನಿಮಿಷಗಳ ಕಾಲ ಮಾಡಿ. ಹತ್ತು ನಿಮಿಷಗಳ ನಂತರ ಬರೆದಿಟ್ಟಿರುವುದನ್ನು ಓದಿ. ಅದು ಒಂದು ತಲೆಕೆಟ್ಟವನ ದಿನಚರಿಯ ಪುಸ್ತಕವೆಂದು ನೀವು ಕಾಣುವಿರಿ ! ಅಲ್ಲಿ ಸಂಪೂರ್ಣ ಅಸ್ತವ್ಯಸ್ತತೆ ಇರುವುದು. ಅಲ್ಲಿ ಒಂದು ಆಲೋಚನೆಗೂ ಮತ್ತು ಮುಂದಿನ ಆಲೋಚನೆಗೂ ಏನೂ ಸಂಬಂಧವಿರುವುದಿಲ್ಲ. ಎಲ್ಲಾ ಆಲೋಚನೆಗಳೂ ಹಿಡಿತರಹಿತವಾಗಿದ್ದು ಸಂಬಂಧವಿಲ್ಲದೇ ಇರುವುವು. ನಿಮ್ಮ ಆಲೋಚನೆಗಳನ್ನು ಬರೆದಾಗ ಮಾತ್ರವೇ ನಿಮ್ಮ ಆಲೋಚನೆಗಳು ನಿಜವಾದ ಸಂಬಂಧವನ್ನು ಹೊಂದಿಲ್ಲವೆಂದು ನಿಮಗೆ ಗೊತ್ತಾಗುವುದು. ಒಂದು ಬಟ್ಟಲು ಕಾಫಿಯನ್ನು ಹೊಂದುವ ಬಗ್ಗೆ ನೀವು ಯೋಚಿಸುತ್ತಿರಬಹುದು ಮತ್ತು ಮುಂದಿನ ಕ್ಷಣವೇ ನಿಮ್ಮ ಕಚೇರಿಯ ಯಾವುದೋ ಉಳಿದಿರುವ ಕೆಲಸದ ಬಗ್ಗೆ ನೀವು ಯೋಚಿಸಬಹುದು. ಒಂದು ಬಟ್ಟಲು ಕಾಫಿಯನ್ನು ಹೊಂದುವುದಕ್ಕೂ ಕಚೇರಿಯ ಕೆಲಸಕ್ಕೂ ಯಾವುದೇ ನಿಜವಾದ ಸಂಬಧವಿರುವುದಿಲ್ಲ, ಎರಡೂ ಸ್ವತಂತ್ರವಾದ ಸಂಗತಿಗಳು. ಒಂದೇ ಸಂಗತಿಯ ಬಗ್ಗೆ ಅನುಕ್ರಮವಾದ ಆಲೋಚನೆಗಳಿದರೂ ಸಹ, ಆ ಆಲೋಚನೆಗಳು ಸಂಬಂಧಿತವಾಗಿರುವುದಿಲ್ಲ ಮತ್ತು ಅಲ್ಲಿ ನಿರಂತರತೆ (continuity) ಇರುವುದಿಲ್ಲ. ಈ ಆಲೋಚನೆಗಳ ಮಧ್ಯೆ ಯಾವಾಗಲೂ ಅಂತರವಿರುವುದು. ಆಲೋಚನೆಗಳ ಮಧ್ಯೆ ನಿಶ್ಯಬ್ದದ ಸಮಯವು ಇರುವುದು. ಆಲೋಚನೆಗಳು ಅವುಗಳ ಸಹಜ ಸ್ವ ಭಾವದಿಂದ ಹಿಡಿತರಹಿತವಾಗಿರುವುವು.
ಸಮಸ್ಯೆಯು ಉಂಟಾಗುವುದು ನಾವು ಈ ಆಲೋಚನೆಗಳನ್ನು ಜೋಡಿಸಿದಾಗ. ನಾವು ಈ ಸಂಬಂಧವಿಲ್ಲದ ಆಲೋಚನೆಗಳನ್ನು ಜೋಡಿಸಿ ಕಷ್ಟವನ್ನನುಭವಿಸುವೆವು. ಉದಾಹರಣೆಗೆ : ನೀವು ಐಸ್ ಕ್ರೀಂ ಅನ್ನು ಹತ್ತು ವರ್ಷಗಳ ಹಿಂದೆ ತಿಂದಿರಬಹುದು, ನೀವು ಐಸ್ ಕ್ರೀಂ ಅನ್ನು ಎರಡು ವರ್ಷಗಳ ಹಿಂದೆ ತಿಂದಿರಬಹುದು ಮತ್ತು ನೀವು ಐಸ್ ಕ್ರೀಂ ಅನ್ನು ನಿನ್ನೆ ತಿಂದಿರಬಹುದು. ಈ ಎಲ್ಲಾ ಅನುಭವಗಳೂ ನಿವುಗೆ ತುಂಬಾ ಉಲ್ಲಾಸದಾಯಕವಾಗಿರಬಹುದು. ಪ್ರತಿ ಬಾರಿ ಐಸ್‌ಕ್ರೀಂ ಅನ್ನು ತಿಂದಾಗಲೂ ನೀವು ಸಂತೋಷವನ್ನು ಅನುಭವಿಸಿರಬಹುದು. ಸಮಸ್ಯೆ ಏನೆಂದರೆ ನೀವು ಈ ಎಲ್ಲ ಅನುಭವಗಳನ್ನೂ ಜೋಡಿಸಿ ಐಸ್‌ಕ್ರೀಂ ಅನ್ನು ತಿನ್ನುವುದು ನಿಮ್ಮನ್ನು ಸಂತುಷ್ಪರನ್ನಾಗಿ ಮಾಡುವುದೆಂಬ ಒಂದು 'ಕಾಲ್ಪನಿಕ ಸ್ತಂಭ' (Imaginary shaft)ವನ್ನು ಅಥವ ಒಂದು ಗ್ರಹಿಕೆಯನ್ನು ಸೃಷ್ಟಿಸುವಿರಿ. ಆದ್ದರಿಂದ ನೀವು ಈ ಅನುಭವವನ್ನು ಭವಿಷ್ಯದಲ್ಲಿ ಪುನರಾವರ್ತಿಸಲು ಪ್ರಯತ್ತಿಸುವಿರಿ. ನೀವು ಯಾವಾಗಲೂ ಇದೇ ರೀತಿಯ ಆಲೋಚನೆಗಳನ್ನು ಜೋಡಿಸಿ ಒಂದು ಸ್ತಂಭವನ್ನು ಸೃಷ್ಟಿಸುವಿರಿ. ಹಲವು ಬಾರಿ ನೀವು ಐಸ್‌ಕ್ರೀಂ ಅನ್ನು ಕೆಲವು ದಿನಗಳ ಹಿಂದೆ ಅಥವಾ ಒಂದು ವರ್ಷದ ಹಿಂದೆ ಆಸ್ವಾದಿಸಿದಷ್ಟು ಆಸ್ವಾದಿಸಲಿಲ್ಲವೆಂಬುದು ನಿಮ್ಮ ಅನುಭವವಾಗಿರಬಹುದು. ನೀವು ಐಸ್ ಕ್ರೀಂ ಅನ್ನು ಆಸ್ವಾದಿಸದಿದ್ದರೂ ಸಹ ನೀವು ಐಸ್‌ಕ್ರೀಂ ಅನ್ನು ಇಷ್ಟಪಡುವಿರಿ ಎಂದು ನಿಮ್ಮನ್ನು ನೀವೇ ನಂಬುವಂತೆ ಮಾಡುವಿರಿ. ಆಲೋಚನೆಗಳನ್ನು ಜೋಡಿಸುವ ಅಭ್ಯಾಸಕ್ಕೆ ನೀವು ಸಿಕ್ಕಿಕೊಂಡಿರುವದರಿಂದ, ನೀವು ಪ್ರಜ್ಞೆ ಇಲ್ಲದೆಯೇ ಐಸ್ ಕ್ರೀಂ ಅನ್ನು ಆಸ್ವಾದಿಸುವಿರಿ ಎಂದು ಒಪ್ಪಿಕೊಳ್ಳಲಾರಂಭಿಸುವಿರಿ.
ನೋವಿನ ಅನುಭವಗಳೂ ಇದೇ ರೀತಿಯಲ್ಲಿರುತ್ತವೆ. ಹತ್ತು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು, ಏಳು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು, ಮೂರು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು ಮತ್ತು ನೀವು ನಿನ್ನೆ ಅನುಭವಿಸಿದ ನೋವು ಎಲ್ಲವೂ ಸ್ವತಂತ್ರವಾದ ಘಟನೆಗಳು ; ಈ ಘಟನೆಗಳ ಮಧ್ಯೆ ಏನೂ ಸಂಬಂಧವಿಲ್ಲ. ಆದರೆ ನೀವು ಈ ಕಾಲ್ಪನಿಕ ಸ್ತಂಭವನ್ನು ನಿರ್ಮಿಸಿ 'ನನ್ನ ಬದುಕು ಒಂದು ನೋವು', ಎಂದು ಚಿಂತಿಸಲಾರಂಭಿಸುತ್ತೀರಿ. ನಿಜ ಜೀವನದಲ್ಲಿ ಬಹಳ ಸಂತಸದಾಯಕವಾದ ಅನುಭವಗಳಿದ್ದರೆ ನೀವು 'ನನ್ನ ಬದುಕು ಸಂತಸದಾಯಕ', ಎನ್ನುವಿರಿ. ಆದರೆ ಇದು ಯಾವುದೂ ನಿಜವಲ್ಲ. ನಿಮ್ಮ ಬದುಕು ಸಂತಸದಾಯಕವಾಗಲೀ ಅಥವಾ ನೋವಾಗಲೀ ಅಲ್ಲ, ಏಕೆಂದರೆ ಈ ಘಟನೆಗಳನ್ನು ಜೋಡಿಸುವ ಕಾರ್ಯವಿಧಾನವೇ ತಪ್ಪು ಆಲೋಚನೆಗಳು ಸಂಬಂಧ ಹೊಂದಿರುತ್ತವೆ ಎಂಬ ಕಲನೆಯು ಒಂದು ತಪ್ಪು ತಿಳುವಳಿಕೆ. ಅದೂ ನಾವು ಎಲ್ಲ ಆಲೋಚನೆಗಳನ್ನೂ ಜೋಡಿಸುವುದಿಲ್ಲ. ನಾವು ಜೋಡಿಸುವ ಆಲೋಚನೆಗಳು ಕೇವಲ ನಾವು ಜ್ಞಾಪಿಸಿಕೊಂಡಿದ್ದಾಗಿರುವುದು ಮತ್ತು ಅದರಿಂದ ಒಂದು ಸ್ತಂಭವನ್ನು ಸೃಷ್ಟಿಸುವೆವು. ಒಂದು ಹೂಗಳ ಗೊಂಚಲಿನಿಂದ ಕೆಲವು ಹೂಗಳನ್ನು ಕಿತ್ತು ಕೊಂಡು ಒಂದು ಹಾರವನ್ನು ತಯಾರಿಸುವಂತೆ, ನಮ್ಮಲ್ಲಿರುವ ಲಕ್ಕಾಂತರ ಆಲೋಚನೆಗಳಿಂದ ನಾವು ಜ್ಞಾಪಕಕ್ಕೆ ಬರುವ ಕೆಲವು ಆಲೋಚನೆಗಳನ್ನು ಜೋಡಿಸಿ ಒಂದು ಸ್ತಂಭವನ್ನು ಸೃಷ್ಟಿಸುತ್ತೇವೆ. ಸ್ತಂಭವನ್ನು ಸೃಷ್ಟಿಸುವುದೇ ಮೊದಲ ಪಾಪ. ನಾವು ಸ್ತಂಭವನ್ನು ಸೃಷ್ಟಿಸಿದಾಗ ಕಷ್ಟವನ್ನು ಅನುಭವಿಸುತ್ತೇವೆ. ನೀವು ಒಂದು ಸಂತಸದ ಸ್ತಂಭವನ್ನು ನಿರ್ಮಿಸಿದರೆ, ಆಗ ನೀವು ಅದೇ ಸಂತಸದ ಅನುಭವವನ್ನು ಮತ್ತೊಮ್ಮೆ ಹೊಂದಲು, ಆ ಸ್ತಂಭವನ್ನು ವಿಸ್ತೃತಗೊಳಿಸಲು ಪ್ರಯತ್ನಿಸುತ್ತೀರಿ. ಅದೇ ನೀವು ನೋವಿನ ಸ್ತಂಭವನ್ನು ನಿರ್ಮಿಸಿದರೆ, ಆ ನೋವನ್ನು ತಪ್ಪಿಸಿಕೊಳ್ಳಲು, ಆ ಸ್ತಂಭವನ್ನು ಮುರಿಯಲು ಪ್ರಯತ್ನಿಸುವಿರಿ. ನೀವು
ಸಂಭವನ್ನು ವಿಸ್ತರಿಸುವುದಾಗಲೀ, ಇಲ್ಲವೇ ಮುರಿಯುವುದಾಗಲೀ ಮಾಡಲಾಗುವುದಿಲ್ಲ ಏಕೆಂದರೆ ಆ ಸ್ತಂಭವು ಅಸ್ತಿತ್ವದಲ್ಲಿಯೇ ಇಲ್ಲ. ಆ ಸ್ತಂಭವೇ ಒಂದು ಮಿಥ್ಯ. ಆ ಸ್ತಂಭದ ಸೃಷ್ಟಿಯೇ ನಿಮಗೆ ಇನ್ನೊಂದು ಸ್ತಂಭವಾಗಿದೆ. ನಿಮ್ಮ ಎಲ್ಲ ಅನುಭವಗಳೂ ಸ್ವತಂತ್ರ ಅನುಭವಗಳು. ನೀವು ಈ ಅನುಭವಗಳನ್ನು ಜೋಡಿಸಿದ ಕ್ಷಣವೇ ನಿಮಗಾಗಿ ನರಕವನ್ನು ಸೃಷ್ಟಿಸಿಕೊಳ್ಳುವಿರಿ ; ನೀವು ಕಷ್ಟವನ್ನು ಸೃಷ್ಟಿಸಿಕೊಳ್ಳುವಿರಿ; ಕಷ್ಟವೂ ಕೂಡ ಕಾಲ್ಪನಿಕ ಎಂದು ನಿಮಗೆ ಈಗ ಅರ್ಥವಾಗುತ್ತದೆ. ಅದು ಯಾವುದೋ ಕಲ್ಪನೆಯ ಮೇಲೆ ಆಧಾರಿತವಾಗಿದೆ. ಅದು ಯಾವುದೋ ನಿಜವಲ್ಲದರ ಮೇಲೆ ಅವಲಂಬಿತವಾಗಿದೆ. ಅದು ಕೇವಲ ಒಂದು ತೋರಿಕೆ. ಸ್ತಂಭವು ನಿಜವಲ್ಲ ; ಅದು ಅಸ್ತಿತ್ವದಲ್ಲಿ ಇಲ್ಲ. ಆದುದರಿಂದ ಸ್ತಂಭದಿಂದ ಸೃಷ್ಟಿಯಾದ ಕಷ್ಟವೂ ಕೂಡ ನಿಜವಲ್ಲ. ಒಮ್ಮೆ ಇದನ್ನು ನೀವು ಅರಿತುಕೊಂಡರೆ ನೀವು ಮುಕ್ತರಾಗುವಿರಿ.
ನಮ್ಮ ಆಲೋಚನೆಗಳು ಅಷ್ಟೊಂದು ಶಕ್ತಿಶಾಲಿಯಾಗಿರುವುದರಿಂದ, ಅವುಗಳು ಇತರ ಆಲೋಚನೆಗಳೊಂದಿಗೆ ಹಿಡಿತವನ್ನು ಸಾಧಿಸಿ ಒಂದು ಕಾಲ್ಪನಿಕ ಸ್ತಂಭವನ್ನು ಸೃಷ್ಟಿಸುತ್ತದೆ. ಕಾಲ್ಪನಿಕ ಸ್ತಂಭದ ನಿರ್ಮಾಣದ ಈ ರೀತಿಯ ಕಾರ್ಯವಿಧಾನವು ಅಹಂಭಾವದ ಕಾರ್ಯ. ಅಹಂಭಾವವು ಆಲೋಚನೆಗಳಿಂದ ಬೇರೇನಲ್ಲ. ಬದಲು, ಸ್ತಂಭವನ್ನು ನಿರ್ಮಿಸುವ ಆಲೋಚನೆಗಳ ವಿಶೇಷ ಗುಣ. ನಿಜವಾಗಿಯೂ ಹೇಳಬೇಕೆಂದರೆ ಅಹಂಭಾವವು ಅಸ್ತಿತ್ವದಲ್ಲಿಯೇ ಇರುವುದಿಲ್ಲ, ಏಕೆಂದರೆ ಸ್ತಂಭವು ಅಸ್ತಿತ್ವದಲ್ಲಿಯೇ ಇಲ್ಲ, ಸ್ತಂಭವು ಕಾಲ್ಪನಿಕ. ಅಹಂಭಾವ ಎಂಬುದು ಸ್ತಂಭವನ್ನು ನಿರ್ಮಿಸುವ ಈ ಕಾರ್ಯವಿಧಾನಕ್ಕೆ ನಾವು ಕೊಡುವ ಒಂದು ಹೆಸರಷ್ಟೆ ಈ ಸ್ತಂಭದಿಂದ ನಿರಂತರತೆಯ ಅನಿಸಿಕೆಯುಂಟಾಗುತ್ತದೆ. ಇದು ನಮಗೆ ಅಹಂಭಾವದ ಭ್ರಾಂತಿಯನ್ನುಂಟುಮಾಡುತ್ತದೆ.
ಇದೀಗ ನಮ್ಮ ಎಲ್ಲ ಆಲೋಚನೆಗಳೂ ಗಟ್ಟಿಯಾಗಿ ಹಿಡಿದುಕೊಳ್ಳುವುದರಿಂದ, ನಮಗೊಂದು ಅಹಂಭಾವವು ಇದೆಯೆಂದುಕೊಳ್ಳುತ್ತೇವೆ. ಆದರೆ ನಮ್ಮೆಲ್ಲ ಆಲೋಚನೆಗಳು ಅವುಗಳ ಸ್ವಭಾವದಿಂದಲೇ ಸ್ವತಂತ್ರವಾಗಿರುವುದು.
ಈ ಅಹಂಭಾವದ ಊಹೆಯೇ ಕಲ್ಪನೆಯಾಗಿರುವುದು. ಆದುದರಿಂದ ನಮ್ಮ ಸ್ವಭಾವದಿಂದಲೇ ನಾವು ಹಿಡಿತರಹಿತರಾಗಿರುವೆವು. ನಾವು ಜ್ಞಾನೋದಯವನ್ನು ಹೊಂದಿದವರಾಗಿದ್ದು ಕೇವಲ ನಾವು ಅದನ್ನು ಗ್ರಹಿಸಿಕೊಳ್ಳ ಬೇಕಷ್ಟೆ
ಒಮ್ಮೆ ಒಬ್ಬ ಶಿಷ್ಯನು ಜೈನ್ ಗುರುಗಳ ಬಳಿ ಹೋಗಿ, 'ನಾನು ಹೇಗೆ ಬುದ್ಧನಾಗಬಹುದು ?' ಎಂದು ಕೇಳಿದನು. ಗುರುಗಳು ಅವನ ಮುಖಕ್ಕೆ ಒಂದು ಬಿಗಿದು, 'ನೀನು ಈಗಾಗಲೇ ಬುದ್ಧನಾಗಿರುವೆ' ಎಂದು ಹೇಳಿದರು. ಬುದ್ಧನು ಬಂದು ಅವನು ಹೇಗೆ ಬುದ್ಧನಾಗಬೇಕೆಂದು ನಿಮ್ಮನ್ನು ಕೇಳಿದರೆ ನಿಮ್ಮ ಪ್ರತಿಕ್ರಿಯೆ ಏನಿರಬಹುದು ? ಜೈನ್ ಗುರುಗಳ ಪ್ರತಿಕ್ರಿಯೆಯೂ ಹಾಗೆಯೇ ಇರುವುದು. ಆದರಿಂದಲೇ ನಾವು ನಮ್ಮ ಸ್ವಭಾವದಿಂದಲೇ ಹಿಡಿತರಹಿತರಾಗಿರುವವು. ಕೇವಲ ಇದನ್ನು ಅರ್ಥಮಾಡಿಕೊಳ್ಳಬೇಕಷ್ಟೆ
ಒಬ್ಬ ವ್ಯಕ್ತಿಯು ತನ್ನ ವಿಧಿಯ ಮೇಲೆ ಅವಲಂಬಿತನಾಗಿದ್ದರೆ ನಲಿವನ್ನೂ ಮತ್ತು ನೋವನ್ನೂ ಅನುಭವಿಸುವನು. ನಿಮಗೆ ಬೇರೆ ಆಯ್ಕೆಯೇ ಇಲ್ಲ. ನಿಮಗೆ ನಲಿವನ್ನಾಗಲೀ ಅಥವಾ ನೋವನ್ನಾಗಲೀ ಆಯ್ಕೆ ಮಾಡಲಾಗುವುದಿಲ್ಲ ಆದರೆ ಈ ಅನುಭವಗಳನ್ನು ಜೋಡಿಸಿ ಕಾಲ್ಪನಿಕ ಸ್ತಂಭಗಳನ್ನು ನಿರ್ಮಿಸದೇ ಇರುವಂತಹ ಆಯ್ಕೆಯು ನಿಮಗಿದೆ. ನೀವು ಒಬ್ಬ ವ್ಯಕ್ತಿಗೆ ಅಥವಾ ಒಂದು ವಸ್ತುವಿಗೆ ಹಚ್ಚಿಕೊಳ್ಳುವಿರಿ, ಏಕೆಂದರೆ ನೀವು ಸ್ತಂಭಗಳನ್ನು
ನಿರ್ಮಿಸುವಿರಿ. ನೀವು ಮೂರು ವರ್ಷಗಳ ಹಿಂದೆ ಅನುಭವಿಸಿದ ಸಂಬಂಧ, ಒಂದು ವರ್ಷದ ಹಿಂದೆ ನೀವು ಅನುಭವಿಸಿದ ಸಂಬಂಧ, ಮತ್ತು ನೀವು ಈಗ ಅನುಭವಿಸುತ್ತಿರುವ ಸಂಬಂಧ, ಎಲ್ಲವೂ ಸ್ವತಂತ್ರವಾದ ಘಟನೆಗಳು. ನೀವು ಈ ಘಟನೆಗಳನ್ನು ಜೋಡಿಸಿದ ಕ್ಷಣವೇ, ನೀವು ಸ್ತಂಭವನ್ನು ವಿಸ್ತೃತಗೊಳಿಸುವುದಾಗಲೀ ಇಲ್ಲವೇ ಮುರಿಯುವುದಾಗಲೀ ಪ್ರಯತ್ನಿಸುವಿರಿ. ನಿಮ್ಮ ಸಂಬಂಧವು ಸಂತಸದಾಯಕವಾಗಿದ್ದರೆ ನೀವು ಆ ಸಂಬಂಧವು ಮುಂದೆಯೂ ಸಂತಸದಾಯಕವಾಗಿರುವುದೆಂದು ಭಾವಿಸುವಿರಿ. ಆ ಸಂಬಂಧವು ನೋವಿನಿಂದಿದ್ದರೆ ನೀವು ಆ ಸಂಬಂಧವನ್ನು ಮುರಿಯಲು ಪ್ರಯತ್ನಿಸುವಿರಿ ಅಥವಾ ಆ ಸಂಬಂಧವು ನಿಮಗೆ ಸರಿಯಲ್ಲವೆಂಬ ಊಹೆಯನ್ನು ಸೃಷ್ಟಿಸುತ್ತೀರಿ. ಪ್ರತಿ ಗಳಿಗೆಯೂ ನೀವೊಂದು ಹೊಸ ಸಂಬಂಧವನ್ನು ಅನುಭವಿಸುತ್ತಿರುವಿರೆಂಬುದನ್ನು ಗ್ರಹಿಸುವುದಿಲ್ಲ, ಏಕೆಂದರೆ ನಮ್ಮ ಸಹಜ ಪ್ರವೃತ್ತಿಯಿಂದಲೇ ನಾವು ಹಿಡಿತರಹಿತರಾಗಿರುವುದರಿಂದ ಪ್ರತಿ ಗಳಿಗೆಯೂ ಇಬ್ಬರು ಹೊಸಬರು ಜೊತೆಗೂಡಿರುತ್ತಾರೆ.
ನಿಜವಾದ ಸಮಸ್ಯೆಯು ನಲಿವು ಅಥವಾ ನೋವಿನಿಂದ ಆಗುವುದಿಲ್ಲ. ನಿಜವಾದ ಸಮಸ್ಯೆಯು ಉಂಟಾಗುವುದು ಅವೆರಡರ ಬಗ್ಗೆ ನಮಗಿರುವ ತಪ್ಪು ತಿಳುವಳಿಕೆಯಿಂದ ಹಾಗೂ ಅಂತಿಮವಾಗಿ ನಿರ್ಮಾಣವಾಗುವ ಕಾಲ್ಪನಿಕ ಸ್ತಂಭಗಳಿಂದ. ಒಬ್ಬ ಋಷಿಯ ವಿಚಾರದಲ್ಲಿಯಾದರೋ, ನಲಿವು ಇದ್ದರೆ ಅವನು ಅದನ್ನು ಸಂತೋಷದಿಂದ ಅನುಭವಿಸಿ ಮರೆತುಬಿಡುತ್ತಾನೆ. ನೋವಿದ್ದರೆ ಅವನು ನೋವನ್ನು ಅನುಭವಿಸಿ ಮರೆತುಬಿಡುತ್ತಾನೆ. ಅವನು ಆ ಅನುಭವಗಳನ್ನು ಸಮಯದ ಮಟ್ಟದಲ್ಲಿ ಕೊಂಡೊಯ್ಯುವುದಿಲ್ಲ. ಒಂದು ಅನುಭವವನ್ನು ನಾವು ಸಮಯದ ಮಟ್ಟದಲ್ಲಿ ಕೊಂಡೊಯ್ದ ಕ್ಷಣವೇ ನಾವು ಕಷ್ಟಪಡುತ್ತೇವೆ.
ನಾವು ಈ ಪ್ರಪಂಚದಲ್ಲಿ ಬದುಕಿದ್ದು ಜೀವನವನ್ನು ಅನುಭವಿಸಿದ್ದರೂ ಶಾಂತಿ ಮತ್ತು ಸಮಾನತೆಯಲ್ಲಿ ಕೇಂದ್ರೀಕೃತರಾಗಿರಬಹುದು. ಹೊರಗಿನ ಯಾವುದನ್ನೂ ತ್ಯಜಿಸುವ ಅವಶ್ಯಕತೆಯೇ ಇಲ್ಲ. ಸ್ತಂಭವನ್ನು ನಿರ್ಮಿಸುವುದನ್ನು ಒಮ್ಮೆ ನಿಲ್ಲಿಸಿದರೆ, ನಾವು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವ ಗುರುತೇ (identity) ಕಷ್ಟದ ಅದೇ ಕಾರಣವಾಗಿರುವುದು. ನಾವು ಆ ಗುರುತನ್ನು ಬಿಟ್ಟಕ್ಷಣವೇ, ನಿತ್ಯಾನಂದದೊಳಗೆ ಬರುವೆವು. ಆಗ ಹೊರಗಿನ ಘಟನೆಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ನೀವು ಈ ಘಟನೆಗಳನ್ನು ಜೋಡಿಸುವ ಅಭ್ಯಾಸವನ್ನು ಬಿಟ್ಟು ಬಿಟ್ಟಿರುತ್ತೀರಿ. ಆದ್ದರಿಂದ, ಪ್ರತಿಘಟನೆಯೂ ನಿಮಗೆ ಹೊಸ ಘಟನೆಯಾಗಿರುತ್ತದೆ. ನೀವು ಜೀವನವನ್ನು ಇನ್ನೂ ಹೆಚ್ಚು ಸುಂದರವಾಗಿ ನೋಡಲಾರಂಭಿಸುವಿರಿ. ಪ್ರತಿಯೊಂದೂ ಸಂತಸದಾಯವಾಗಿಯೂ ಮತ್ತು ಆನಂದದಾಯಕವಾಗಿಯೂ ಕಾಣುತ್ತದೆ. ನೀವು ಸಂಗತಿಗಳನ್ನು ಬೇಕಾದ ಹಾಗೆ ಅಂದುಕೊಳ್ಳುವುದನ್ನು ನಿಲ್ಲಿಸುವಿರಿ.
ಒಮ್ಮೆ ಜೀವನವನ್ನು ಕ್ಷಣದಿಂದ ಕ್ಷಣಕ್ಕೆ ಒಪ್ಪಿಕೊಳ್ಳಲಾರಂಭಿಸಿದರೆ, ನಿತ್ಯಾನಂದವು ಸಹಜವಾಗಿಯೇ ನಿಮಗೆ ಸಂಭವಿಸುತ್ತದೆ. ಹೊರಗಿನ ಸಂದರ್ಭಗಳು ನಿಮ್ಮ ಮೇಲೆ ಪರಿಣಾಮವನ್ನು ನೀವು ಅವುಗಳನ್ನು ಅನುಮತಿಸಿದರೆ ಮಾತ್ರ ಮಾಡಬಲ್ಲದು. ಯಾರೂ ನಿಮ್ಮ ಮೌನ ಅನುಮತಿಯಿಲ್ಲದೆ ನಿಮ್ಮನ್ನು ತೊಂದರೆಪಡಿಸಲಾರರು. ಜನಗಳು ಅವರ ಜೀವನವನ್ನು ಆ ಕ್ಷಣದಲ್ಲಿ ಜೀವಿಸಬಲ್ಲರೆಂದೂ, ಆದರೆ ಅವರ ಸುತ್ತಲಿರುವ ಜನರು ಮಾಡದಿದ್ದರೆ, ಆಗ ಅವರ ದುರ್ಲಾಭವನ್ನು ಪಡೆಯುವರೆಂದೂ ದೂರುವರು. ತುಂಬಾ ಸ್ಪಷ್ಟವಾಗಿ ತಿಳಿದಿರಿ, ಯಾರೂ ನಿಮ್ಮ ಮೌನ ಅನುಮತಿಯಿಲ್ಲದೆ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವುದಾಗಲೀ ಅಥವಾ ನಿಮಗೆ ತೊಂದರೆ ಕೊಡುವುದಾಗಲೀ
ಮಾಡಲಾರರು. ಒಮ್ಮೆ ನೀವು ಹಿಡಿತರಹಿತರೆಂದು ಅರ್ಥಮಾಡಿಕೊಂಡರೆ ಸಹಜವಾಗಿಯೇ ನಿತ್ಯಾನಂದವು ಹಿಂಬಾಲಿಸಿ ಬರುತ್ತದೆ.
ನಿರ್ವಾಣಾಷ್ಟಕಂ ನಲ್ಲಿ ಶಂಕರರು ಹೇಳುತ್ತಾರೆ, ''ಸದಾ ಮೇ ಸಮತ್ವಂ ನ ಮುಕ್ತಿಃ ನ ಬಂಧಾಃ, ಚಿದಾನಂದ ರೂಪಾ ಶಿವೋಹಂ ಶಿವೋಹಂ' ಎಂದು. ಅಂದರೆ, ನಾನು ಬಂಧನದಲ್ಲಿಯೂ ಇಲ್ಲ ಅಥವಾ ಮುಕ್ತನೂ ಅಲ್ಲ, ನಾನು ಸದಾಕಾಲವೂ ಸಮತೋಲನ ಸ್ಥಿತಿಯಲ್ಲಿರುವೆನು, ನಾನು ಶಿವಶಕ್ತಿಯ ಪರಿಶುದ್ದ ಪವಿತ್ರತೆಯ ಸ್ವಭಾವದವನು, ಎಂದು. ಬಂಧನ ಮತ್ತು ಮುಕ್ತಿ ಎರಡೂ ಮನಸ್ಸು ಸೃಷ್ಟಿಸಿದ ಕಲ್ಪನೆಗಳು. ಮುಕ್ತಿ ಎನ್ನುವುದು ಬಂಧನ ಎನ್ನುವುದು ಅಸ್ತಿತ್ವದಲ್ಲಿರುವ ತನಕವೂ ಇರುವುದು. ಆದರೆ ಬಂಧನ ಎನ್ನುವುದು ಇಲ್ಲವಾದರೆ ಮುಕ್ತಿ ಎನ್ನುವುದೂ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದನ್ನೆ ಶಂಕರರು ಉಲ್ಲೇಖಿಸುತ್ತಿರುವುದು.
ನೀವು ಒಳಮುಖವಾಗಿಯೋ ಅಥವಾ ಹೊರಮುಖವಾಗಿಯೋ ಹೋಗಲು ಪ್ರಯತ್ನಿಸುತ್ತಿದ್ದರೆ, ನೀವು ಎಲ್ಲಿಗಾದರೂ ಹೋಗುತ್ತಿರುವಷ್ಟು ಸಮಯವೂ ನೀವು ಸತ್ಯವನ್ನು ಕಳೆದುಕೊಳ್ಳುತ್ತಿರುತ್ತೀರ. ಪಯಣಿಸುತ್ತಿರುವ ಅಥವಾ ಹೋಗುತ್ತಿರುವ ಕಾರ್ಯವಿಧಾನವೇ ನಿಮ್ಮನ್ನು ಸತ್ಯ ದಿಂದ ದೂರ ಕೊಂಡೊಯ್ಯುತ್ತದೆ. ನಿಜವು ಇಲ್ಲಿಯೇ ಮತ್ತು ಈಗಲೇ ಇದೆ.
ಬೇರೆಲ್ಲಿಗೋ ಹೋಗುವ ಅವಶ್ಯಕತೆಯಿಲ್ಲ ಪುನಃ ನೀವು ಪ್ರಯತ್ನಿಸುತ್ತಿರುವ ಕಾರ್ಯ ವಿಧಾನವೇ ನೀವು ಸ್ತಂಭವೊಂದನ್ನು ನಿರ್ಮಿಸಿರುವುದನ್ನು ತೋರಿಸುತ್ತದೆ. ನಾವು ಸ್ವಲ್ಪ ಪ್ರಗತಿಯನ್ನು ನೋಡುತ್ತೇವೆ. ಯಾವ ಪ್ರಗತಿಯೂ ಇರುವುದಿಲ್ಲ, ಏಕೆಂದರೆ ಪ್ರಗತಿಯನ್ನು ಹೊಂದುತ್ತಿರುವ ಯಾರೂ ಇಲ್ಲ. ವ್ಯಕ್ತಿಯು ಪ್ರತಿ ಕ್ಷಣವೂ ಸಾಯುತ್ತಿರುತ್ತಾನೆ.
ಆಗ ಯಾರು ಮುಂದುವರಿಯುತ್ತಾರೆ? ನೀವು ಹಿಡಿತರಹಿತರಾದರೆ ನೀವು ಹಾಗೆಯೇ 360" ಯಷ್ಟು ವಿಸ್ಕೋಟಿಸುವಿರಿ. ಆಗ ಭೌತಿಕವಾದಿಯೋ ಅಥವಾ ಆಧ್ಯಾತ್ಮಿಕವಾದಿಯೋ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದಲೇ ಶಂಕರರು ಹೇಳುತ್ತಾರೆ, ಅವರು ಬಂಧನದಲ್ಲಿಯಾಗಲೀ ಇಲ್ಲವೇ ಮುಕ್ತರಾಗಲೀ ಇಲ್ಲ, ಎಂದು. ಅವರು ಎರಡನ್ನೂ ದಾಟಿ ಹೋದವರು. ಎರಡೂ ಕೇವಲ ಕಲ್ಪನೆಗಳು.
ಉದ್ದಾರವಾಗಬೇಕಿರುವ ಆತ್ಮವೆಂಬುದು ಇದೆಯೇ ? ಹಿಡಿತರಹಿತ ಆಲೋಚನೆಗಳ ಸರಣಿ ಮಾತ್ರವೇ ನೀವಾಗಿರುವುದು. ನೀವು ಆತ್ಮದ ಉದ್ದಾರಕ್ಕೆ ಪ್ರಯತ್ನಿಸಿದರೆ ಕೊನೆಯಲ್ಲಿ ಆಗುವುದು ನನ್ನ ಆತ್ಮವು ಉದ್ದಾರವಾಯಿತೆಂಬ ಕಲ್ಪನೆಯ ಸ್ತಂಭದ ನಿರ್ಮಾಣ ಮಾತ್ರ. ಅದು ನಿಮಗೆ ಒಳ್ಳೆಯ ಭಾವನೆಯನ್ನು ಭಾವಿಸುವುದನ್ನು ಕೊಡುತ್ತದೆ. ಒಂದು ಆಲೋಚನೆಯು ಆತ್ಮವು ಉದ್ದಾರವಾಗಿದೆಯೆಂದು ಯೋಚಿಸಬಹುದು, ಆದರೆ ಅದು ಕೇವಲ ಒಳ್ಳೆಯ ಭಾವನೆಯನ್ನು ಭಾವಿಸುವುದು ಮಾತ್ರ. ವಾಸ್ತವವಾಗಿ ಹೇಳಬೇಕೆಂದರೆ ಆತ್ಮವನ್ನು ಉದ್ದಾರಮಾಡಲಾಗದು, ಕಾಲ್ಪನಿಕ ಆತ್ಮವನ್ನು ಕೇವಲ ನಿರ್ಮೂಲ ಮಾಡಬಹುದಷ್ಟೆ ನೀವು ಆತ್ಮೋದ್ದಾರಕ್ಕೆ ಪ್ರಯತ್ನಿಸುತ್ತಿರುವ ತನಕವೂ, ನೀವು ಸ್ತಂಭವೊಂದನ್ನು ಸೃಷ್ಟಿಸುತ್ತಿರುವಿರಿ.
ಮನಸ್ಸು ಇರುವ ತನಕವೂ, ಅಸತ್ಯವನ್ನು ಗುರುತಿಸುವುದು ಮುಂದುವರಿಯುತ್ತದೆ. ಶಂಕರರು ಹೇಳುತ್ತಾರೆ, ''ಬ್ರಹ್ಮ ಸತ್ಯ ಜಗತ್ ಮಿಥ್ಯ, ಜೀವ ಬ್ರಹ್ಮೈವ ನ ಅಪರಃ'', ಎಂದರೆ
ಬ್ರಹ್ಮವೇನಿಜವಾಗಿದ್ದು, ಪ್ರಪಂಚವು ಅಸತ್ಯವೆಂದು ಮತ್ತು ಪ್ರತಿಯೊಬ್ಬನ ಆತ್ಮವೂ ಬ್ರಹ್ಮಗಿಂತ ವ್ಯತ್ಯಾಸವಿಲ್ಲವೆಂದೂ ಅರ್ಥ. ಅವರು ಇಲ್ಲಿ ಏನನ್ನು ಅರ್ಥೈಸುತ್ತಾರೆಂದರೆ ಮನಸ್ಸು ಇರುವುದು ಸ್ಥಗಿತಗೊಂಡರೆ, ಬ್ರಹ್ಮ ಹೊಳೆಯಲಾರಂಭಿಸುತ್ತದೆ, ಎಂದು. ವಾಸ್ತವಿಕತೆಯು ಅದರದೇ ಭವ್ಯತೆಯಲ್ಲಿ ಹೊಳೆಯಲಾರಂಭಿಸುತ್ತದೆ. ಮನಸ್ಸು ಇರುವ ತನಕವೂ, ಆಲೋಚನೆಗಳು ಇರುತ್ತವೆ. ಆಲೋಚನೆಗಳು ಯಾವಾಗಲೂ ಭೂತ ಮತ್ತು ಭವಿಷ್ಯತ್ ನಲ್ಲಿ ಹಾರಾಡುತ್ತಿರುತ್ತವೆ. ಪ್ರಸಕ್ತತೆಯ ಬಗ್ಗೆ ಯಾವೊಂದು ಆಲೋಚನೆಯೂ ಇರುವುದಿಲ್ಲ. ಪ್ರಸಕ್ತತೆಯಲ್ಲಿ ಕೇವಲ ಅರಿವು ಮಾತ್ರ ಇರಬಲ್ಲದು. ಆಲೋಚನೆಗಳು ಇರುವ ತನಕವೂ ನಾವು ಸ್ತಂಭಗಳ ಸೃಷ್ಟಿಯನ್ನು ಮಾಡುತ್ತಿರುತ್ತೇವೆ. ನಾವು ಈ ಆಲೋಚನೆಗಳನ್ನು ಜೋಡಿಸಿ ನಲಿವಿನ ಇಲ್ಲವೇ ನೋವಿನ ಕಾಲ್ಪನಿಕ ಸ್ತಂಭಗಳನ್ನು ಸೃಷ್ಟಿಸುತ್ತೇವೆ. ಸ್ತಂಭದ ನಿರ್ಮಾಣವಾದ ಕ್ಷಣವೇ ಅಸತ್ಯದ ಗುರುತಿಸುವಿಕೆಯು ಆಗುತ್ತದೆ. ಕಾರಣವೇನೆಂದರೆ ನಾವು ಈ ಸಂಬಂಧಗಳಿಲ್ಲದ ಆಲೋಚನೆಗಳನ್ನು ಜೋಡಿಸುತ್ತೇವೆ. ಆಲೋಚನೆಗಳನ್ನು ಜೋಡಿಸುವ ಕಾರ್ಯ ವಿಧಾನವೇ ಈ ಸಂಸಾರ ಸಾಗರ (ಪ್ರಪಂಚ) ದ ಕೋಟಲೆಗಳಿಗೆ ಕಾರಣ. ನಾವು ಆಲೋಚನೆಗಳನ್ನು ಜೋಡಿಸುವ ಕಾರಣ ಕಾಲ್ಪನಿಕ ಗುರುತು (Identity) (ಅದನ್ನು ಶಂಕರರು ಜೀವ ಎಂದು ಕರೆಯುತ್ತಾರೆ) ಇರುವಿಕೆಗೆ ಬರುತ್ತದೆ. ಜೀವವು ಕಾಣಿಸಿಕೊಳ್ಳುತ್ತಲೇ ಮಿಥ್ಯಾಲೋಕ (ಅಸತ್ಯದಿಂದ ಕೂಡಿರುವುದು) ಕಾಣಿಸಿಕೊಳ್ಳುತ್ತದೆ. ನಾವು ಹಿಡಿತರಹಿತರಾದರೆ ಅಸತ್ಯದ ಗುರುತು ತಾನಾಗಿಯೇ ಮಾಯವಾಗುವುದು ಮತ್ತು ಬ್ರಹ್ಮ ಪ್ರಜ್ಞೆಯು ಪ್ರಕಟಗೊಳ್ಳುವುದು. ನಮಗೆ ಎರಡು ವಿಧದ ಗುರುತಗಳಿರುವುವು. ಒಂದು ಗುರುತು ನಾವು ಹೊರ ಪ್ರಪಂಚಕ್ಕಾಗಿ ತೋರಿಸುವ ಗುರುತು ಮತ್ತು ಇನ್ನೊಂದು ಒಳಪ್ರಪಂಚಕ್ಕಾಗಿ ನಾವು ತೋರಿಸುವ ಗುರುತು. ಹೊರ ಪ್ರಪಂಚಕ್ಕಾಗಿ ನಾವು ತೋರಿಸುವ ಗುರುತನ್ನು ಅಹಂಕಾರ ಎಂದು ಕರೆಯಲಾಗುತ್ತದೆ. ಒಳ ಪ್ರಪಂಚಕ್ಕಾಗಿ ನಾವು ತೋರಿಸುವ ಗುರುತನ್ನು ಮಮಕಾರ ಎಂದು ಕರೆಯಲಾಗುತ್ತದೆ. ಈ ಎರಡೂ ಗುರುತುಗಳು ಪರಸ್ಪರ ತಿಕ್ಕಾಟದಲ್ಲಿರುತ್ತವೆ. ಉದಾಹರಣೆಗೆ, ಹೊರಗಡೆಗೆ ನಾವು ಇಂತಿಂತಹ ವ್ಯಕ್ತಿಯೆಂದು ಬಿಂಬಿಸಬಹುದು, ಆದರೆ ನಾವು ಒಂದಲ್ಲ ಒಂದು ರೀತಿಯಲ್ಲಿ ಕೊರತೆಯಲ್ಲಿದ್ದೇವೆ ಎಂದು ಒಳಗೆ ನಮಗೆ ಗೊತ್ತು. ಯಾವಾಗಲೂ ಈ ಎರಡೂ ಗುರುತುಗಳ ನಡುವೆ ಒಂದು ಹೆಚ್ಚು ಕಡಿಮೆ ಇರುವುದು. ಹೊರಪ್ರಪಂಚಕ್ಕಾಗಿ ನಾವು ಬಿಂಬಿಸುವ ಗುರುತು ಯಾವಾಗಲೂ ನಾವು ವಾಸ್ತವವಾಗಿ ಇರುವುದಕ್ಕಿಂತ ಹೆಚ್ಚಾಗಿರುತ್ತದೆ. ಒಬ್ಬ ವ್ಯಕ್ತಿಯು ಸದಾಕಾಲವೂ ತಾನು ಮಿಕ್ಕವರಿಗಿಂತ ಮಿಗಿಲು ಎಂದು ರುಜುವಾತು ಮಾಡಲು ಪ್ರಯತ್ನಿಸುತ್ತಾನೆ. ನಮ್ಮ ಮೇಲೆ ನಾವು ಬಿಂಬಿಸಿಕೊಳ್ಳುವ ಗುರುತು ಸದಾಕಾಲವೂ ವಾಸ್ತವವಾಗಿ ನಾವಿರುವುದಕ್ಕಿಂತಲೂ ಕಡಿಮೆ ಇರುತ್ತದೆ. ನಮ್ಮ ಬಗ್ಗೆಯೇ ನಾವು ಸಂತೃಪ್ತರಾಗಿಲ್ಲದಿರುವುದನ್ನು ನೀವು ಗಮನಿಸಿರಬಹುದು. ಒಂದೇ ಸಮನೆ ನಾವು ನಮ್ಮನ್ನು ಉತ್ತಮಪಡಿಸಿಕೊಳ್ಳಲು ಒಂದಲ್ಲ ಒಂದು ವಿಧದಲ್ಲಿ ಪ್ರಯತ್ನಿಸುತ್ತಿರುತ್ತೇವೆ. ಆಧ್ಯಾತ್ಮಿಕವಾಗಿ ನಾವು ಅಸಂತೃಪ್ತರಾಗಿರುವೆವೋ ಅಥವಾ ಭೌತಿಕವಾಗಿಯೋ ನಾವು ಅಸಂತೃಪ್ತರಾಗಿರುತ್ತೇವೆ. ನಾವು ಹೊತ್ತಿರುವ ಈ ಒಳಗುರುತು ಯಾವಾಗಲೂ ಯಾವುದಾದರೂ ಕೊರತೆಯಿಂದಿರುತ್ತದೆ ಮತ್ತು ಹೊರ ಗುರುತು ಯಾವಾಗಲೂ ಸಾಮಾನ್ಯಕ್ಕಿಂತಲೂ ಮೀರಿರುತ್ತದೆ. ಆದ್ದರಿಂದ ಈ ಎರಡೂ ಗುರುತುಗಳು ಯಾವಾಗಲೂ ಪರಸ್ಪರ ತಿಕ್ಕಾಟದಲ್ಲಿರುತ್ತವೆ. ಈ ಕಾರಣಕ್ಕಾಗಿಯೇ ನಾವು ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು, ಏಕೆಂದರೆ ನಾವು ಏನನ್ನು ಯೋಚಿಸುವೆವೋ ಅದನ್ನು ಮಾತನಾಡುವುದು ಅಪರೂಪ. ನಾವೇನಾದರೂ ನಮ್ಮ ಆಲೋಚನೆಗಳನ್ನು ನೇರವಾಗಿ ಶಬ್ದಗಳಾಗಿ ಉತ್ಪತ್ತಿಮಾಡಿದರೆ ನಮ್ಮ ಸುತ್ತಲಿರುವ ಜನರು
ನಮ್ಮಿಂದ ದೂರ ಓಡಿಹೋಗಲು ಪ್ರಾರಂಭಿಸುತ್ತಾರೆ. ರಾಮಕೃಷ್ಣರು ಹೇಳುತ್ತಿರುತ್ತಿದ್ದ ಹಾಗೆ ನಿಮ್ಮ ಆಲೋಚನೆಗಳನ್ನು ಮತ್ತು ಶಬ್ದಗಳನ್ನು ಒಟ್ಟಿಗೆ ತರುವುದೇ ನಿಜವಾದ ಆಧ್ಯಾತ್ಮಿಕತೆ. ಇದು ಈ ಎರಡೂ ಗುರುತುಗಳನ್ನು ಮೀರಿ ನಡೆದರೆ ಸಂಭವಿಸುವುದು.
ಈ ಎರಡೂ ಗುರುತುಗಳು ಅಸತ್ಯವಾದ ಗುರುತುಗಳು. ಈ ಗುರುತುಗಳು ನಾವು ಸೃಷ್ಟಿಸುವ ಸ್ತಂಭದ ಫಲಿತಾಂಶ. ವಾಸ್ತವತೆಯಲ್ಲಿ ಅವು ಅಸ್ತಿತ್ವದಲ್ಲಿಲ್ಲ. ಈ ಗುರುತುಗಳೊಂದಿಗೆ ನಾವು ಜೊತೆಗೂಡಿರುವ ತನಕವೂ ಸಂಸಾರದಲ್ಲಿ ಸಿಕ್ಕಿಕೊಂಡಿರುತ್ತೇವೆ. ಒಮ್ಮೆ ನಾವು ಈ ಗುರುತುಗಳನ್ನು ಮೀರಿ ನಡೆದರೆ, ನಾವು ಪರಮ ಜ್ಞಾನಿಗಳಾಗುತ್ತೇವೆ. ಸೃಷ್ಟಿ (ಬ್ರಹ್ಮ), ಸ್ಥಿತಿ (ವಿಷ್ಣು) ಮತ್ತು ಲಯ (ಮಹೇಶ್ವರ), ಈ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಾವು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ನಿಲ್ಲಿಸಿದರೆ, ನಾವು ಈ ಮೂರನ್ನೂ ಮೀರಿ ಪರಬ್ರಹ್ಮಸ್ಥಿತಿಯನ್ನು ತಲಪುತ್ತೇವೆ.
ಈ ನಡಿಗೆಯಲ್ಲಿ, ನಿಮ್ಮ ಯೋಚನೆಗಳು ಸಂಬಂಧ ಹೊಂದಿಲ್ಲದ, ಅಸಂಬದ್ದವಾದ ಮತ್ತು ಹಿಡಿತ ರಹಿತವಾದದ್ದೆಂಬ ಅರಿವನ್ನು ಕೊಂಡೊಯ್ಯಿರಿ. ನಿಮ್ಮ ಆಲೋಚನೆಗಳ ನಡುವೆ ಸಾರೂಪ್ಯವಾದ ಸಂಬಂಧವಿರುವುದಿಲ್ಲ. ಆಲೋಚನೆಗಳಿದ್ದರೂ ಅವುಗಳನ್ನು ಅದುಮಿಡುವುದಾಗಲೀ ಇಲ್ಲವೇ ಪ್ರತಿಕ್ರಿಯಿಸುವುದಾಗಲೀ ಮಾಡಬೇಡಿ. ಅವುಗಳು ಹಿಡಿತರಹಿತವೆಂಬ ತಿಳುವಳಿಕೆಯಿಂದ ಸುಮ್ಮನೆ ಅವುಗಳನ್ನು ಗಮನಿಸಿ. ತಾನಷಕ್ಕೇ ಗಮನಿಸುವ ಪ್ರಜ್ಞೆಯು ನಿಮ್ಮೊಳಗೆ ಆಗಲು ಪ್ರಾರಂಭವಾಗುತ್ತದೆ ; ನೀವು ಈ ಎರಡೂ ಗುರುತುಗಳನ್ನು ದಾಟಿ ಹೋಗುವಿರಿ.
ನೀವು ನಲಿವಿನ ಸ್ತಂಭವೋ ಇಲ್ಲವೇ ನೋವಿನ ಸ್ತಂಭವೋ ಅಲ್ಲದೆ, ನೀವು ಈ ಸ್ತಂಭಗಳನ್ನು ಬರೆದ ಹಿನ್ನೆಲೆ ಎಂದು ಅರಿತುಕೊಳ್ಳುವಿರಿ. ನೀವು ಅರಿತುಕೊಂಡಿರಿ ಇಲ್ಲವೇ ಬಿಡಿ, ಒಪ್ಪಿಕೊಳ್ಳಿ ಇಲ್ಲವೇ ಬಿಡಿ, ನೀವು ಈಗಾಗಲೇ ಜ್ಞಾನೋದಯವನ್ನು ಹೊಂದಿದವರು ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ಸಹಜ ಸ್ವಭಾವದಿಂದಲೇ ನೀವು ಹಿಡಿತರಹಿತರು. ಆದರಿಂದ ಈ ತಿಳುವಳಿಕೆಯೊಂದಿಗೆ ಮುಂದಿನ ಏಳು ನಿಮಿಷಗಳ ಕಾಲ ನಿಶ್ಯಬ್ಲವಾಗಿ ಕುಳಿತುಕೊಂಡು ಹಿಡಿತರಹಿತದ ಸ್ಥಿತಿಯನ್ನು ಪವಿತ್ರವಾದ ಆತ್ಮದ ಮತ್ತು ನಿತ್ಯಾನಂದದ ಅನುಭವವನ್ನು ಹೊಂದಿರಿ. ಜ್ಞಾನೋದಯದ ಸ್ಥಿತಿಯ ಅನುಭವವನ್ನು ಹೊಂದಲು ಇದೇ ಪರಮ ತಂತ್ರ.
ಈ ಸತ್ಯದಿಂದ ನೀವು ಪ್ರೇರಿತರಾದಂತೆ ಭಾವಿಸಿದರೆ, ಈ ಹಿಡಿತ ರಹಿತದ ಕಲನೆಯ ಬಗ್ಗೆ ವಿಶದವಾಗಿ ಮಾತನಾಡುವ 'ಧ್ಯಾನ'ಸ್ಪುರಣ ಪ್ರೋಗ್ರಾಂ' ನಲ್ಲಿಯೂ ಸಹ ಭಾಗವಹಿಸಬಹುದು.
'ಧ್ಯಾನ ಸ್ಪುರಣ ಪ್ರೋಗ್ರಾಂ' ಎಂಬುದು 2 ದಿನದ ಧ್ಯಾನದ ಕಾರ್ಯಕ್ರಮವಾಗಿದ್ದು ನಮ್ಮನ್ನು ನಮ್ಮೊಳಗೆ ಕೇಂದ್ರೀಕೃತಗೊಳಿಸಿ ಮತ್ತು ನಮ್ಮ ನಿಜವಾದ ಧ್ಯಾನದ ಸ್ವಭಾವದೊಂದಿಗೆ ನಮ್ಮನ್ನು ಪುನರ್ ಜೋಡಣೆಗಾಗಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಮನಸ್ಸಿನ ಉಪ ಉತ್ಪನ್ನಗಳಾದ ನಮ್ಮ ಮನಸ್ಸಿನ ಹಿಡಿತದಿಂದ, ನಮ್ಮ ಮನೋಭಾವನೆಗಳಿಂದ ನಮ್ಮನ್ನು ಬಿಡುಗಡೆ ಮಾಡಿಸಿಕೊಳ್ಳಲು ಈ ಕಾರ್ಯಕ್ರಮವು ರೂಪಿತವಾಗಿದೆ. ನಮ್ಮ ಮಿಥ್ಯೆಯಾದ ಮನಸ್ಸಿನಲ್ಲಿ ರೂಪಿತವಾಗಿರುವ ನೋವು ಮತ್ತು ನಲಿವುಗಳನ್ನು ತೊಡೆದು ಧ್ಯಾನವು ವಿಕಸಿತಗೊಳ್ಳಲು ನಮ್ಮೊಳಗೆ ಸ್ಥಳವನ್ನು ಕಲ್ಪಿಸುವ ಉದ್ದೇಶವನ್ನು ಇದು ಹೊಂದಿದೆ.