Chapter 3

ಚಕ್ರಗಳ ಅರಿವು (ಚೈತನ್ಯ ಕೇಂದ್ರಗಳು)

1 sections

ಚಕ್ರಗಳ ಅರಿವು (ಚೈತನ್ಯ ಕೇಂದ್ರಗಳು)

(ಸಮಯದ ಅವಧಿ : 7 ನಿಮಿಷಗಳು )

ಈ ಹೆಜ್ಜೆಯಲ್ಲಿ ನೀವು ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಮುಂದುವರಿಸಬಹುದು ಅಥವಾ ಬೇಕೆನಿಸಿದರೆ ಕಾಲುಗಳನ್ನು ಮಡಚಿ ಕುಳಿತುಕೊಳ್ಳಬಹುದು. ಈಗ ನಿಮ್ಮ ಅರಿವನ್ನು ಮೂಲಾಧಾರ ಚಕ್ರ (ಮೂಲಕ ಕೇಂದ್ರ) ದಿಂದ ಪ್ರಾರಂಭಿಸಿ ಸಹಸ್ಯಾರ ಚಕ್ರ (ನೆತ್ತಿಯ ಕೇಂದ) ದವರೆಗೆ ಪ್ರತಿಚಕ್ರ (ಶಕ್ತಿಯ ಕೇಂದ್ರ) ಕ್ಕೂ ಕೊಂಡೊಯ್ಲಿರಿ.

ನಮ್ಮ ದೇಹದಲ್ಲಿ ಏಳು ಶಕ್ತಿಯ ಕೇಂದ್ರಗಳಿವೆ. ನಾವು ಈ ಏಳು ಶಕ್ತಿ ಕೇಂದ್ರಗಳ ಆಧ್ಯಾತ್ಮಿಕ ಸ್ಥಾನಗಳನ್ನು ಅರ್ಥಮಾಡಿಕೊಳ್ಳ

ಬೇಕು. ನಮ್ಮ ವ್ಯಕ್ತಿತ್ವವು ಮೂರು ದೇಹ ಅಥವಾ ಶರೀರಗಳನ್ನೊಳಗೊಂಡಿದೆ. ಭೌತಿಕ ಶರೀರ (ಸ್ಥೂಲ ಶರೀರ), ಮಾನಸಿಕ ಶರೀರ (ಸೂಕ್ಷ್ಮ ಶರೀರ) ಮತ್ತು ಕಾರ್ಯಕಾರಣ (ಕಾರಣ ಶರೀರ) ಎಂದು. ಅದೇ ರೀತಿಯಲ್ಲಿ ಮೂರು ಪ್ರಜ್ಞಾವಸ್ಥೆಗಳಿವೆ : ಜಾಗೃತಾವಸ್ಥೆ ಸ್ವಪ್ನಾವಸ್ಥೆ ಮತ್ತು ದೀರ್ಘ ನಿದ್ರಾವಸ್ಥೆ ಈ ಮೂರು ದೇಹಗಳನ್ನು ಮತ್ತು ಮೂರು ಜ್ಞಾವಸ್ಥೆಗಳಿಂದಾಚೆ ನೈಜಾತ್ಮ ಅಥವಾ ಆತ್ಮ ಅಥವಾ ನೀವು ಏನು ಕರೆಯ ಬಯಸುವಿರೋ ಅದು ಇರುತ್ತದೆ. ಸಂಸ್ಕೃತದಲ್ಲಿ ನಾವು ಈ ಅತ್ಯುನ್ನತ ಅವಸ್ಥೆಯನ್ನು ಶರೀರ ತ್ರೈವಲಕ್ಷಣ ಪಂಚ ಕೋಶಾತೀತ ಮತ್ತು ಅವಸ್ಥೆ ತ್ರಯ ಸಾಕ್ಷಿ (ಮೂರು ದೇಹಗಳ ಸಾಕ್ಷ್ಮಿ, ಐದು ಕವಚಗಳನ್ನು ದಾಟಿದ ಮತ್ತು ಮೂರು ಪ್ರಜ್ಞಾವಸ್ಥೆಯ ಸಾಕ್ಷಿ) ಎಂದು ಕರೆಯುತ್ತೇವೆ.

ಭೌತಿಕ ಶರೀರವೆಂಬುದು ನಮಗೆ ತಿಳಿದಿರುವ ಜಾಗ್ಗತಾವಸ್ಥೆಯಲ್ಲಿ ಊಟ ಮಾಡುವ, ಚಲಿಸುವ, ಮುಂತಾದವನ್ನು ಮಾಡುವ ಶರೀರ. ಮಾನಸಿಕ ಶರೀರವೆಂಬುದು ನಾವು ಸ್ವಪ್ನದಲ್ಲಿ ಉಪಯೋಗಿಸುವ ಶರೀರ. ನೀವು ಭರತದಲ್ಲಿ ನಿಮ್ಮ ಮನೆಯಲ್ಲಿ ಮಲಗಿರಬಹುದು, ಆದರೆ ನಿಮ್ಮ ಮನಸ್ಸು ಬೇರೊಂದು ದೇಶದಲ್ಲಿರಬಹುದು. ಆ ಸಮಯದಲ್ಲಿ ನೀವು ನಿಮ್ಮ ಮಾನಸಿಕ ಶರೀರವನು ಉಪಯೋಗಿಸುತ್ತಿರುವಿರಿ, ಏಕೆಂದರೆ ನಿಮ್ಮ ಆಲೋಚನೆಯ ಶಾಖೆಯು ನಿರಂತರವಾಗಿ ಜಾಗೃತಾವಸ್ಥೆಯಲ್ಲಿ ನಿರತವಾಗಿರುತ್ತದೆ. ನಾವು ಆಳವಾದ ವಿಶ್ರಾಂತ ಸ್ವಪ್ತರಹಿತ ನಿದ್ರೆಯಲ್ಲಿ ನಮ್ಮ ಶರೀರವನ್ನು ಉಪಯೋಗಿಸುವೆವು. ಇಡಿಯ ನಿದ್ರೆಯ ಚಕ್ರದಲ್ಲಿ ನಮ್ಮ ಮನಸ್ಸು ಸುಪ್ತಾವಸ್ಥೆಯಲ್ಲಿ ಯಾವುದೇ ಯೋಚನೆಗಳಿರದ ಹಂತಗಳಿರುವುದು. ಈ ಸಮಯಾದಲ್ಲಿಯೇ ನೀವು ನಿಮ್ಮ ಕಾರಣಶರೀರದ ಅನುಭವವನು ಹೊಂದುವಿರಿ.

ನಾವು ತಿಳಿದಿರಬಹುದಾದ ಹಾಗೆ ಈ ಮೂರು ದೇಹಗಳು ಬೇರೆಯಲ್ಲ. ಅವುಗಳು ಬಿಗಿಯಾಗಿ ಸೇರಿಕೊಂಡಿವೆ. ಒಂದು ಕಾಗದದ ತುಂಡಿನ ಮೇಲೆ ಏಳು ಜಾಗಗಳಲ್ಲಿ ಒಂದನ್ನೊಂದು ಛೇದಿಸುವ ಎರಡು ವಕ್ಕರೇಖೆಗಳನ್ನು ಪರಿಶೀಲಿಸಿ. ಇವುಗಳಲ್ಲಿ ಒಂದು ರೇಖೆಯು ಭೌತಿಕ ಶರೀರವನ್ನು ಪ್ರತಿನಿಧಿಸಿದರೆ ಇನ್ನೊಂದು ರೇಖೆಯು ಸೂಕ್ಷ್ಮದೇಹವನ್ನು ಪ್ರತಿನಿಧಿಸುತ್ತದೆ ಮತ್ತು ಕಾಗದವು ಕಾರಣ ಶರೀರವನ್ನು ಪ್ರತಿನಿಧಿಸುತ್ತದೆ, ಹಾಗೂ ಭೌತಿಕ

ಶರೀರವು ಮತ್ತು ಸೂಕ್ಷ್ಮ ಶರೀರವು ಕಾರಣ ಶರೀರದೊಂದಿಗೆ ಸಂಧಿಸುವ ಏಳು ಶಕ್ತಿ ಕೇಂದ್ರಗಳ ಸ್ಥಳಗಳು. ಈ ಏಳು ಶಕ್ತಿ ಕೇಂದ್ರಗಳು ಭೌತಿಕ, ಸೂಕ್ಷ್ಮ ಮತ್ತು ಕಾರಣ ಶರೀರಗಳ ಛೇದನೆಯ ಜಾಗದಲ್ಲಿ ಇರುತ್ತವೆ. ಅವುಗಳು ಆಧ್ಯಾತ್ಮಿಕ ಸಮಕ್ಷೇತ್ರದಲ್ಲಿ ಇರುತ್ತವೆ. ಪ್ರಭೆಯ ಚಿತ್ರೀಕರಣದ (ಕರ್ಲಿಯನ್ ಫೋಟೋಗ್ರಾಫಿ) ಇತ್ತೀಚಿನ ಸಂಶೋಧನೆಯಲ್ಲಿ ಈ ಶಕ್ತಿ ಕೇಂದ್ರಗಳ ಚಿತ್ರೀಕರಣವನ್ನೂ ಸಹ ಮಾಡಲಾಗಿದೆ.

ಈ ಏಳು ಶಕ್ತಿಕೇಂದ್ರಗಳು ನಮ್ಮೊಳಗಿನ ನಿರ್ದಿಷ್ಟ ಮನೋಭಾವನೆಗಳೊಂದಿಗೆ ಸಂಬಂಧಿಸಿವೆ. ಈ ಮನೋಭಾವನೆಗಳು ಗತಕಾಲದಲ್ಲಿ ಸಂಗ್ರಹವಾದ ಹುದುಗಿಡಲ್ಪಟ್ಟ ನೆನಪುಗಳ ಅಥವಾ ಸಂಸ್ಕಾರಗಳ ಫಲ. ಈ ಸಂಸ್ಕಾರಗಳು ನಿರ್ದಿಷ್ಟವಾದ ಶಕ್ತಿ ಕೇಂದ್ರವನ್ನು ಪ್ರತಿಬಂಧಿಸಿ ದೈಹಿಕ ಹಾಗೂ ಮಾನಸಿಕ ಕ್ಷೋಭೆಗಳನ್ನು ಉಂಟುಮಾಡುತ್ತವೆ.

ಸಂಸ್ಕಾರಗಳು ಅರಿವಿನ ಅಭಾವದಿಂದ ನಮ್ಮೊಳಗೆ ಇರುವುವು. ಆದುದರಿಂದ ನಾವು ಈ ಶಕ್ತಿ ಕೇಂದ್ರಗಳನ್ನು ಅರಿವಿನಿಂದ ತುಂಬಿಸಿ ಬಿಟ್ಟರೆ, ಈ ಶಕ್ತಿ ಕೇಂದ್ರಗಳು ನಕಾರಾತ್ಮಕ ಮನೋಭಾವನೆಗಳ ಪ್ರತಿಬಂಧನಗಳಿಂದ ಮುಕ್ತವಾಗಲು ಪ್ರಾರಂಭವಾಗುವುವು ಮತ್ತು ನಾವು ಪ್ರೀತಿ ಮತ್ತು ಅನುಕಂಪಗಳಂತಹ ಸಕಾರಾತ್ಮಕ ಮನೋಭಾವನೆಗಳನ್ನು ಹೊರಸೂಸಲು ಪ್ರಾರಂಭಿಸುತ್ತೇವೆ.

ನಮ್ಮ ಕಾಯಿಲೆಗಳಲ್ಲಿ ಬಹಳಷ್ಟು ಮಾನಸಿಕ ಒತ್ತಡದಿಂದ ಉಂಟಾಗುವ ದೈಹಿಕ ಕಾಯಿಲೆಗಳು. ಅವುಗಳು ಮನಸ್ಸಿನಲ್ಲಿ ಬೇರುಗಳನ್ನು ಹೊಂದಿರುತ್ತವೆ. ನಾವು ನೋಡುವುದು ಕೇವಲ ಪರಿಣಾಮ ಮತ್ತು ಆದ್ದರಿಂದ ನಾವು ಮನಸ್ಸು– ದೇಹಗಳ ಸಂಬಂಧವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವುದೇ ಇಲ್ಲ. ಯಾವಾಗಲಾದರೂ

ಒಂದು ನಿರ್ದಿಷ್ಠವಾದ ಶಕ್ತಿ ಕೇಂದ್ರವು ಪ್ರತಿ ಬಂಧನಕ್ಕೊಳಗಾದರೆ ಶಕ್ತಿ ಕೇಂದ್ರದ ಸಮೀಪವಿರುವ ದೇಹದ ಭಾಗವು ಪ್ರಭಾವಕ್ಕೆ ಒಳಗಾಗುತ್ತದೆ. ನೀವು ತುಂಬಾ ಚಿಂತಿಸಿದಾಗ ನಿಮ್ಮ ಹೊಟ್ಟೆಯು ಕೆಡುವುದನ್ನು ನೀವು ನೋಡಿರಬಹುದು. ಆದುದರಿಂದ ಒಳ್ಳೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಶಕ್ತಿಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ

ಕೆಳಗೆ ನಾನು ಯಾವುದು ಶಕ್ತಿಯ ಕೇಂದ್ರವನ್ನು ಪ್ರತಿರೋಧಿಸುತ್ತದೆ ಮತ್ತು ಯಾವುದು ಶಕ್ತಿ ಕೆಂದ್ರದ ಪ್ರತಿರೋಧವನ್ನು ತೆಗೆಯುತ್ತವೆ ಎಂದು ವಿವರಿಸುತ್ತೇನೆ.

ಭ್ರಮೆಗಳು, ಕಲ್ಪನೆಗಳು, ಭಯ, ಚಿಂತೆ, ಗಮನಾಪೇಕ್ಷೆ, ಅಸೂಯೆ, ಅಹಂಭಾವ ಮತ್ತು ಅತೃಪ್ತಿ, ಈ ಮನೋಭಾವನೆಗಳೆಲ್ಲ ನಕಾರಾತ್ಮಕ ಅಸ್ತಿತ್ವವನ್ನು ಹೊಂದಿರುತ್ತವೆ. ಕೊಠಡಿಯಲ್ಲಿ ಯಾವುದಾದರೂ ವಸ್ತು ಒಂದಿದ್ದು, ನಿಮ್ಮನ್ನು ಆ ವಸ್ತುವನ್ನು ಕೊಠಡಿಯಿಂದ ಕೊಂಡೊಯ್ಯಲು ಹೇಳಿದರೆ, ನೀವು ಆ ವಸ್ತುವನ್ನು ತೆಗೆದುಕೊಂಡು ಹೊರಗೆ ಕೊಂಡೊಯ್ಯಬಲ್ಲಿರಿ, ಏಕೆಂದರೆ ಈ ಅಸ್ತಿತ್ವವಿದೆ. ಆದರೆ ಒಂದು ಕತ್ತಲಿರುವ ಕೊಠಡಿ ಇದೆ. ಮತ್ತು ನಿಮ್ಮನ್ನು ಕತ್ತಲನ್ನು ಕೊಠಡಿಯಿಂದಾಚೆ ಕೊಂಡೊಯ್ಯಲು ಕೇಳಿದ್ದಾರೆ ಎಂದುಕೊಳ್ಳೋಣ. ಅದನ್ನು ಹೊರಗೆ ಕೊಂಡೊಯ್ಯಲಾಗದು. ನೀವು ಕೇವಲ ಒಂದು ವಿದ್ಯುತ್ ಬಲ್ಗನ್ನು ಹೊತ್ತಿಸಬೇಕು ಮತ್ತು ಕತ್ತಲು ತನ್ನಷ್ಟಕ್ಕೇ ನಿವಾರಣೆಯಾಗುತ್ತದೆ.

ಈ ಮನೋಭಾವನೆಗಳೆಲ್ಲವೂ ಕೊಠಡಿಯಲ್ಲಿರುವ ಕತ್ತಲಿನಂತೆ ನಕಾರಾತ್ಮಕ ಅಸ್ತಿತ್ವವನ್ನು ಹೊಂದಿರುವುವು. ನೀವು ಮಾಡಬೇಕಾದುದಿಷ್ಟೆ – ಅರಿವಿನ ಬೆಳಕನ್ನು ನಿಮ್ಮ ಅಸ್ತಿತ್ವದಲ್ಲಿ ತರಬೇಕು ಮತ್ತು ನಕಾರಾತ್ಮಕ ಮನೋಭಾವನೆಗಳೆಲ್ಲವೂ ತಮ್ಮಷ್ಟಕ್ಕೆ ಹಾಗೆಯೇ ಮಾಯವಾಗುವುವು.

ಒಮ್ಮೆ ಬುದ್ದನು ಒಂದು ಗಂಟನ್ನು ಹಾಕಿ ತನ್ನ ಶಿಷ್ಯನೊಬ್ಬನಿಗೆ ಗಂಟನ್ನು ಬಿಡಿಸಲು ಕೇಳಿದನು. ಆ ಶಿಷ್ಯನು ಗಂಟನ್ನು ಜೋರಾಗಿ ಎಳೆದು ಬಿಡಿಸಲು ಪ್ರಯತ್ರಿಸಿದನು ಮತ್ತು ಅದನ್ನು ಇನ್ನೂ ಜಟಿಲಗೊಳಿಸಿದನು. ಆಗ ಬುದ್ದನು ಮತ್ತೊಬ್ಬ ಶಿಷ್ಯನಿಗೆ ಆ ಗಂಟನ್ನು ಬಿಡಿಸಲು ಹೇಳಿದನು. ಈ ಶಿಷ್ಯನು ಮೊದಲು ಗಂಟಿನತ್ತ ಎಚ್ಚರಿಕೆಯಿಂದ ನೋಡಿದನು, ನಂತರ ನಿಧಾನವಾಗಿ ಗಂಟನ್ನು ಬಿಡಿಸಿದನು. ಆಗ ಬುದ್ದನು ಹೀಗೆ ವಿವರಿಸಿದನು–ನೀವು ನಿಮ್ಮೊಳಗಿರುವ ಅಜ್ಞಾನವೆಂಬ ಗಂಟನ್ನು ಬಿಡಿಸಬೇಕಾದರೆ, ಮೊದಲು ಎಚ್ಚರಿಕೆಯಿಂದ ನೋಡುವುದನ್ನು ಕಲಿಯಬೇಕು. ನೀವು ನಿಮ್ಮೊಳಗೆ ಅರಿವನ್ನು ತುಂಬಿಸಿಬಿಡಬೇಕು ಮತ್ತು ಅದು ಹೇಗೆ ರೂಪಗೊಂಡಿತೆಂದು ನೋಡಿ; ಆಗ ನಕಾರಾತ್ಮಕತೆಯು ತತ್ಕಕ್ಷಣವೇ ನಿರ್ನಾಮವಾಗುವುದು.

ಆದುದರಿಂದ ಈ ಹೆಜ್ಜೆಯಲ್ಲಿ ನಾವು ನಮ್ಮ ಪೂರ್ಣ ಅರಿವನ್ನು ಮೂಲಾಧಾರ ಚಕ್ರದಿಂದ ಮೊದಲುಗೊಂಡು ಸಹಸ್ರಾರ ಚಕ್ರದತನಕ ಪ್ರತಿ ಶಕ್ತಿಕೇಂದ್ರಗಳಲ್ಲೂ ಇಡುವೆವು. ಈ ರೀತಿ ನಾವು ಹೆಜ್ಜೆ ಹೆಚ್ಚೆಯಲ್ಲಿ ಮೇಲಕ್ಕೆ ಹೋಗುತ್ತಾ ಮೂರ್ಧ್ವ (ನೆತ್ತಿ) ಕೇಂದ್ರವನ್ನು ತಲಪುವೆವು. ನಿಮ್ಮ ಅರಿವನ್ನು ಶಕ್ತಿಕೇಂದ್ರದಲ್ಲಿ ಇಡಲು ಹೇಳಿದಾಗ ನೀವು ಶಕ್ತಿ ಕೇಂದ್ರವಾಗಿಬಿಡಬೇಕು. ಶಕ್ತಿ ಕೇಂದ್ರವನ್ನು ನಿಮ್ಮ ಅಸ್ತಿತ್ವವೇ ಶಕ್ತಿಕೇಂದ್ರವಾದಂತೆ ಪೂರ್ಣವಾಗಿ ಭಾವಿಸಿ. ಈ ಹೆಜ್ಜೆಯ ನಂತರ ನೀವು ಸಚೇತನರಾದಂತೆಯೂ ಮತ್ತು ಹಗುರವಾದಂತೆಯೂ ಭಾಸವಾಗುತ್ತದೆ. ಈ ಪ್ರಕಾರ ನಾವು ಮುಂದಿನ ಹೆಜ್ಜೆಗೆ ಹೋಗೋಣ.

ಚಕ್ರದ ವಿಜ್ಞಾನದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂದು ನಿಮಗೆ ಆಸಕ್ತಿಯಿದ್ದರೆ, ನೀವು ಲೈಫ್ ಬ್ಲಿಸ್ ಪ್ರೋಗ್ರಾಂ ಅಥವಾ ಆನಂದ ಸ್ಪುರಣ ಪ್ರೋಗ್ರಾಂ ಮಾಡಬಹುದು. ಇಲ್ಲಿ

ನಿಮಗೆ ಪ್ರತಿ ಚಕ್ರವನ್ನೂ ಚರ್ಚಿಸಲಾಗುತ್ತದೆ ಹಾಗೂ ಚಕ್ರದೊಂದಿಗೆ ಸಂಬಂಧಿತವಾದ ಮನೋಭಾವನೆ ಮತ್ತು ಪ್ರತಿ ಚಕ್ರಕ್ಕೆ ಧ್ಯಾನ ತಂತ್ರವನ್ನು ಸೂಚಿಸಲಾಗುವುದು.

ಶಕ್ತಿ ಕೇಂದ್ರನಿರ್ಬಂದಿತವಾಗಿ ಅರಿತನಿರ್ಬಂಧ ಮುಕ್ತವಾಗುವುದು
ಮೂಲಾಧಾರಚಕ್ರಭ್ರಮೆಗಳು ಮತ್ತು ಕಲ್ಪನೆಗಳಿಂದವಾಸ್ತವಿಕತೆಯನ್ನು ಒಪ್ಪಿಕೊಳ್ಳುವುದರಿಂದ
ಸ್ವಾಧಿಷ್ಠಾನ ಚಕ್ರಮರಣ ಭಯದಿಂದಮರಣವನ್ನು ಒಪ್ಪಿಕೊಳ್ಳುವುದರಿಂದ
ಮಣಿಪೂರಕ ಚಕ್ರಚಿಂತೆಗಳಿಂದಚಿಂತೆಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವುದರಿಂದ
ಅನಾಹತ ಚಕ್ರಗಮನಾಪೇಕ್ಷೆಯಿಂದನಿರಪೇಕ್ಷ ಪ್ರೀತಿಯಿಂದ
ವಿಶುದ್ಧಿ ಚಕ್ರಹೋಲಿಸುವುದು ಮತ್ತು ಅಸೂಯೆಯಿಂದಪ್ರತಿಯೊಬ್ಬರೂ ಅನನ್ಯರೆಂದು ಒಪ್ಪಿಕೊಳ್ಳುವುದರಿಂದ
ಆಜ್ಞಾ ಚಕ್ರಗಂಭೀರತೆಯಿಂದ ಮತ್ತು ಅಹಂಭಾವದಿಂದಸರಳತೆ ಮತ್ತು ಮುಗ್ಧತೆಯಿಂದ
ಸಹಸ್ರಾರ ಚಕ್ರಅತೃಪ್ತಿಯಿಂದಕೃತಜ್ಞತೆಯಿಂದ