ತೀವ್ರ ಝೇಂಕರಿಸುವಿಕೆ (ಸಮಯದ ಅವಧಿ : 7 ನಿಮಿಷಗಳು)
ತೀವ್ರ ಝೇಂಕರಿಸುವಿಕೆ (ಸಮಯದ ಅವಧಿ : 7 ನಿಮಿಷಗಳು)
ಎರಡನೆಯ ಹೆಜ್ಜೆಯಲ್ಲಿ ನೀವು ವಜ್ರಾಸನದಲ್ಲಿ ಕುಳಿತುಕೊಳ್ಳ ಬೇಕು. ಚಿನ್‌ಮುದ್ರ ಮಾಡಿ ನಿಮ್ಮ ಕೈಗಳನ್ನು ಮಂಡಿಯ ಮೇಲೆ ಇಟುಕೊಳ್ಳಿ. ಈ ಭಂಗಿಯಲ್ಲಿ ಸಾಧ್ಯವಾದಷ್ಟು ತೀವ್ರವಾಗಿ, ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಮತ್ತು ಸಾಧ್ಯವಾದಷ್ಟು ದೀರ್ಘವಾಗಿ ಝೇಂಕಾರವನ್ನು ಉತತ್ತಿಸಿ.
ನಿಮ್ಮ ಇಡಿಯಾದ ಪ್ರಜ್ಞೆಯನ್ನು ಝೇಂಕರಿಸುವಿಕೆಯ ಮೇಲೆ ಹಾಕಿ. ನೀವೇ ಝೇಂಕಾರವಾಗಿ. ಝೋಂಕರಿಸುವುದು ನಿಮ ಒಳ ಹರಟೆಯನ್ನು ಕಡಿಮೆ ಮಾಡುತ್ತದೆ. ನಿರಂತರವಾಗಿ ನಮ್ಮ
ಮನಸಿನಲಿ ಮಾತನಾಡುವುದು ನಡೆಯುತ್ತಿರುತ್ತದೆ. ಬಾಹ್ಯದಲ್ಲಿ ನಾವು ಯಾರೊಂದಿಗೂ ಮಾತನಾಡದೇ ಇರಬಹುದು, ಆದರೆ ಅಂತರಂಗದಲ್ಲಿ ಸದಾಕಾಲವೂ ಏನಾದರೂ ಚಟುವಟಿಕೆಯು ನಡೆಯುತ್ತಲೇ ಇರುವುದು. ಈ ಒಳಹರಟೆಯನ್ನು ಕಡಿಮೆಮಾಡಲು ಝೇಂಕರಿಸುವುದು ಒಂದು ಅತ್ತುತ್ತಮ ತಂತ್ರ.
ಸಾಮಾನ್ಯವಾಗಿ ಜನಗಳಿಗೆ ಯೋಚನೆಗಳಿಲ್ಲದೆ ಕುಳಿತುಕೊಳ್ಳುವುದು ಬಹಳ ಕಷ್ಟ. ನೀವು ನಿಮ್ಮ ಮಧ್ಯ ವಯಸ್ಸಿನಲ್ಲಿ ಧ್ಯಾನಕ್ಕೆ ಕೈ ಹಾಕಿದರೆ, ನೀವು ಮೊದಲು ಕಂಡುಕೊಳ್ಳುವುದು ನಿಮ್ಚ ಮನಸ್ಸಿನ ಪ್ರತಿರೋಧ. ಮನಸ್ಸು ತಿರುಗಿ ಬೀಳುತ್ತದೆ; ಅದು ನಿಶ್ಯಬವಾಗಿ ಕುಳಿತುಕೊಳ್ಳಲು ಬಯಸುವುದಿಲ್ಲ. ವರ್ಷಾನುಗಟ್ಟಲೆಯಿಂದ ಓಡುವುದಕ್ಕೆ ಹೊಂದಿಕೊಂಡಿರುವ ಅದನ್ನು ನಿಶ್ಯಬವಾಗಿ ಕುಳಿತುಕೊಳ್ಳುವಂತೆ ಮಾಡಿರುವುದರಿಂದ ಸಹಜವಾಗಿಯೇ ಅದು ತಿರುಗಿಬೀಳುತ್ತದೆ. ವಾಸವವಾಗಿ ಜನಗಳು ಬಹಳಷ್ಟು ಸಾರಿ ದೂರುವುದೇನೆಂದರೆ, ಆಲೋಚನಾರಹಿತ ಸ್ಥಿತಿಗಾಗಿ ಪ್ರಯತ್ನಿಸಿದಾಗ, ಅವರಿಗೆ ಇನ್ನಷ್ಟು ಆಲೋಚನೆಗಳು ಎದುರಾಗುವುವು. ಬಹಳಷ್ಟು ವರ್ಷಗಳಿಂದ ಮನಸ್ಸು ನಿಶ್ಯಬ್ದವಾಗಿರುವುದಕ್ಕೆ ರೂಢಿಯಾಗಿಲ್ಲ. ಮತ್ತು ಅದನ್ನು ನಿಶ್ಯಬ್ದವಾಗಿಸಲು ಮಾಡುವ ಯಾವುದೇ ಪ್ರಾರಂಭಿಕ ಪ್ರಯತ್ರವು ಪ್ರವಾಹದ ಎದಿರಾಗಿ ಈಜಿದಂತಿರುತ್ತದೆ. ಮತ್ತು ಸಹಜವಾಗಿಯೇ ನದಿಯು ಖಂಡಿತವಾಗಿ ಪ್ರತಿಭಟಿಸುತ್ತದೆ.
ಈ ಸಮಯದಲ್ಲಿಯೇ ಬಹಳಷ್ಟು ಜನರು ಧ್ಯಾನವನ್ನು ಕೈ ಬಿಡುವುದು. ಅವರು ನಿರುತ್ತಾಹಗೊಳ್ಳುತ್ತಾರೆ ಮತ್ತು ಧ್ಯಾನವು ಅವರಿಗೆ ಸಾಧ್ಯವೇ ಇಲ್ಲವೆಂದು ಅಂದುಕೊಳ್ಳುತ್ತಾರೆ. ಆದರೆ ಪ್ರಾರಂಭದಲ್ಲಿ ಎಲ್ಲ ಸಾಧಕರಿಗೂ ಇದೇ ರೀತಿಯ ಅನುಭವವಾಗುವುದು ಎಂದು ನಾನು ಹೇಳ ಬಯಸುತ್ತೇನೆ. ನೀವು ಪ್ರಯತ್ತ ಮಾಡಲೇ ಬೇಕು. ಈ ಪ್ರಯತ್ತವನ್ನೇ ನಾನು ತಪಸ್ಸು ಎಂದು ಹೇಳುವುದು. ಪ್ರಾರಂಭದ ಪ್ರತಿರೋಧದಿಂದ ನೀವು ನಿರುತಾಹಗೊಂಡರೆ ನೀವು ಗೆಲ್ಲಲಾಗುವುದೇ ಇಲ್ಲ
ಹೀಗೊಂದು ಪುರಾಣದ ಕತೆಯಿದೆ. ಅಲ್ಲಿ ಸುರರು ಹಾಗೂ ಅಸುರರು ಒಟ್ಟಾಗಿ ಸಮುದ್ರ ಮಂಥನ ಮಾಡಿ ಅಮೃತವನ್ನು ಹೊರತಗೆಯಲು ಪ್ರಯತ್ನಿಸುತ್ತಾರೆ. ಆದರೆ
ಅವರಿಗೆ ಆಶ್ಚರ್ಯವಾಗಿದ್ದು ಏನೆಂದರೆ ಮಂಥನದಿಂದ ಮೊದಲಿಗೆ ಬಂದದ್ದು ಕಠೋರವಾದ ವಿಷ. ನಂತರ ಮಂಥನದಿಂದ ಇನ್ನೂ ಅನೇಕ ವಸ್ತುಗಳು ಬಂದವು ಮತ್ತು ಅಂತಿಮವಾಗಿ ಬಂದದ್ದು ಅಮೃತ. ಇದೊಂದು ಲಕ್ಷಣ ರೂಪಕ ಕತೆಯಾಗಿದ್ದು ಧ್ಯಾನದ ಕ್ರಮದಲ್ಲಿ ಒಂದು ಆಳವಾದ ಅರ್ಥವನ್ನು ಹೊಂದಿದೆ. ಜ್ಞಾನೋದಯದ ಅನುಭವವನ್ನು ಹೊರತೆಗೆಯಲು ಧ್ಯಾನದ ಕಾರ್ಯವಿಧಾನದಲ್ಲಿ ಮನಸ್ಸನ್ನು ಕಡೆದರೆ, ಮೊಟ್ಟಮೊದಲು ಬರುವುದು ಯಾವಾಗಲೂ ಹಿಂದೆ ಅದುಮಿಡಲ್ಪಟ್ಟ ನಕಾರಾತ್ಮಕ ಅನುಭವಗಳು. ನಿರುತಾಹ ಭಾವವನ್ನು ಹೊಂದುವಿರಿ; ಇದು ನಕಾರಾತ್ತಕತೆಯನ್ನು ಹೊರಹಾಕಲಾಗುತ್ತಿರುವ ಪ್ರಗತಿಯ ಸೂಚನೆಯಾಗಿರುತ್ತದೆ. ಅತ್ಯುನ್ನತ ಸ್ಥಿತಿಯ ಅನುಭವವಾಗುವತನಕ ಧ್ಯಾನದಲ್ಲಿ ಪ್ರಯತವನ್ನು ಮುಂದುವರೆಸಿ. ಈ ಪ್ರಾರಂಭಿಕ ಹಂತದಲ್ಲಿ ಒಳಹರಟೆಯು ನಿಮ್ಮನ್ನು ಬಾಧಿಸುತ್ತಿದ್ದರೆ, ತೀವನವಾಗಿ ಝೇಂಕರಿಸುವುದು ಒಂದು ಬಹಳ ಉಪಯುಕ್ತವಾದ ಸಲಕರಣೆಯಾಗಬಲ್ಲದು. ಅದು ನಿಮಗೆ ಮನಸ್ಸನ್ನು ನಿಶ್ಯಬ್ಧವಾಗಿಸಲು ಸಹಾಯ ಮಾಡುವುದು. ನಮ್ಮ ಒಳಹರಟೆಯು ಮಣಿಪೂರಕ ಮತ್ತು ಸ್ವಾದಿಷ್ಠಾನ ಚಕ್ರದ ನಡುವೆ ಉತ್ಪತ್ತಿಯಾಗುವುದು. ಈ ಕ್ಷೇತ್ರಕ್ಕೆ ಹರ ಎಂದೂ ಕರೆಯುವರು, ನಾವು ನಮ್ಮ ಹೊಕ್ಕಳ ಕೆಳಗೆ ಕಂಪನಾನುಭವ ಆಗುವ ಹಾಗೆ ತೀವ್ರವಾಗಿ ಝೇಂಕರಿಸಿದರೆ, ನಾವು ಒಳ ಹರಟೆಯ ಈ ಕಾರ್ಯ ವಿಧಾನವನ್ನು ನಿಲ್ಲಿಸುತ್ತೇವೆ. ಇದು ಒಂದು ರೀತಿಯಲ್ಲಿ ಹರವನ್ನು ಅಲುಗಾಡಿಸಿದಂತೆ. ಆದುದರಿಂದ ಝೋಂಕರಿಸುವುದು ಹೊಕ್ತಳ ಕೆಳಗಿನಿಂದ ಆಗಬೇಕು. ಒಳಹರಟೆಯೇ ಮನಸಿನ ಏಕೈಕ ಕಾರಣ. ಮನಸು ಒಳಹರಟೆಯಲ್ಲದೆ ಬೇರೆನೂ ಅಲ್ಲ. ಝೇಂಕರಿಸುವಿಕೆಯಿಂದ ಒಳ ಹರಟೆಯು ಕಡಿಮೆಯಾಗುತ್ತದೆ, ಮತ್ತು ನಿಮ್ಮಷ್ಟಕ್ಕೆ ನೀವೇ
ಮನೋರಹಿತದತ್ತ ಮುಂದುವರೆಯುವಿರಿ. ಅಸ್ತಿತ್ವದ ಬೇರೆಯ ಆಯಾಮವನ್ನು ನೀವು ಅನುಭವಿಸಲು ಪ್ರಾರಂಭಿಸುವಿರಿ.
ಒಬ್ಬ ಒಳ್ಳೆಯ ಕಾರಿನ ಚಾಲಕನಿಗೆ ತನ್ನ ಕಾರಿನ ಸೂಕ್ಷ್ಮ ಸಂಗತಿಗಳೆಲ್ಲವೂ ತಿಳಿದಿರುತ್ತದೆ, ಅದು ಬೇರೆ ಬೇರೆ ವೇಗಗಳಲ್ಲಿ ಮಾಡುವ ಶಬ್ದಗಳು ಇತ್ಯಾದಿ. ಇಂಜಿನ್ಸಿನ ಶಬ್ದವು ವ್ಯತ್ಯಾಸವಾದರೆ, ಕಾರ್ಯದಲ್ಲಿ ಏನೋ ದೋಷವಿದೆಯೆಂದು ಕೂಡಲೇ ಗ್ರಹಿಸುತ್ತಾನೆ ಮತ್ತು ಸರಿಪಡಿಸುವಿಕೆಯನ್ನು ಮಾಡುತ್ತಾನೆ. ಒಳಗಿನ ಪ್ರಯಾಣಿಕರಿಗೆ ಏನೂ ತಿಳಿದಿರುವುದಿಲ್ಲ ಆದರೆ ಒಬ್ಬ ನಿಷ್ಣಾತನಾದ ಚಾಲಕರಿಗೆ ಖಂಡಿತವಾಗಿ ತಿಳಿಯುತ್ತದೆ. ಇದೇ ರೀತಿ ಈ ಧ್ಯಾನವನ್ನು ವ್ಯವಸ್ಥಿತವಾಗಿ ಮಾಡಲಾರಂಭಿಸಿದರೆ, ತೀವ್ರತೆ ಮತ್ತು ಝೇಂಕಾರದ ಗುಣಮಟ್ಟದ ಆಧಾರದ ಮೇಲೆ ನಿಮ್ಮ ದೇಹದ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲಾ ರಂಭಿಸುವಿರಿ. ಮಿತಿಮೀರಿ ಆಹಾರವನ್ನು ಸೇವಿಸಿದಾಗ, ಅಥವಾ ಯಾವುದಾದರೂ ಆಹಾರವು ನಿಮ್ಮ ದೇಹಕ್ಕೆ ಅಷ್ಟಾಗಿ ಒಗ್ಗದಿದ್ದರೆ, ನಿಮ್ಮ ಝೇಂಕಾರದ ಗುಣಮಟ್ಟದಲ್ಲಿ ವ್ಯತ್ಯಾಸವನ್ನು ಕಂಡುಕೊಳ್ಳುವರಿ. ನಿಮ್ಮಷ್ಟಕ್ಕೆ ನೇವು ನಿಮ್ಮ ದೇಹದ ಅವಶ್ಯಕತೆಗಳಿಗೆ ಸರಿಹೊಂದಿಸಿ ನಿಮ್ಮ ಝೇಂಕಾರವು ಸುಸೂತ್ರವಾಗಿರುವಂತೆ ಖಚಿತಪಡಿಸಿಕೊಳ್ಳುವಿರಿ. ನಿಮ್ಮ ದೇಹದ ಸೂಕ್ಷ್ಮ ಸಂವೇದನೆಗಳಿಗೆ ಝೇಂಕಾರವು ನಿಮಗೆ ಒಂದು ಒಳದೃಷ್ಟಿಯನ್ನು ನೀಡುತ್ತದೆ ಮತ್ತು ಅಗತ್ಯವೆನಿಸಿದರೆ ಸರಿಪಡಿಸುವ ಕಾರ್ಯಕ್ಕೆ ನಿಮಗೆ ಸಹಾಯಮಾಡುತ್ತದೆ. ಅದು ತಾನಾಗಿಯೇ ಸಂಭವಿಸುತ್ತದೆ ಮತ್ತು ಅದನ್ನು ಹೇರಬೇಕಾಗಿಲ್ಲ.
ನಮ್ಮ ದೇಹ ಮತ್ತು ಮನಸ್ಸು ಯಾವಾಗಲೂ ಲಯಬದ್ದವಾಗಿರುವುದಿಲ್ಲ. ನಿಮ್ಮ ದೇಹವು ಇಲ್ಲಿದ್ದರೆ ನೀವು ಇಲ್ಲಿಲ್ಲವೆಂಬುದು ಬಹುಪಾಲು ಖಚಿತವೆಂದು ನಾನು ಜನಗಳಿಗೆ
ಸದಾ ಹೇಳುತ್ತಿರುತ್ತೇನೆ. ನಿಮ್ಮ ಮನಸ್ಸು ಯಾವಾಗಲೂ ಬೇರೆಲ್ಲೋ ಹಾರಾಡುತ್ತಿರುತ್ತದೆ. ನಮ್ಮ ದೇಹಕ್ಕೆ ಸದಾಕಾಲವೂ ಕಾರ್ಯ ಮಾಡುತ್ತಿರುವ ಅದರದೇ ಸಹಜಸ್ರಭಾವದ ಬುದಿವಂತಿಕೆಯು ಇರುತ್ತದೆ. ಅದು ದೇಹವನ್ನು ಕೆಲವು ಕೃತ್ಯಗಳನ್ನು ಮಾಡಲು ಬಲವಂತ ಪಡಿಸುತ್ತದೆ. ಮತ್ತು ಇವು ಕಾಲಾನಂತರದಲ್ಲಿ ಅಸ್ವಸ್ಥೆಯಾಗಿ ಪ್ರಕಟಗೊಳ್ಳುತ್ತದೆ. ಅಸ್ವಸ್ಥತೆ (disease) ಎಂದರೆ ಅ–ಸ್ವಾಸ್ಥ್ಯ (dis-ease) ಎಂದರೆ ಸ್ವಾಸ್ಥ್ಯ ಇಲ್ಲದಿರುವುದು ಎಂದು. ನಮ್ಮ ದೇಹವನ್ನು ಬಲವಂತವಾಗಿ ಓಡುವಂತೆ ಮಾಡಿದರೆ, ಅದು ಒಂದಾನೊಂದು ಸಮಯದಲ್ಲಿ ತಿರುಗಿ ಬೀಳುತ್ತದೆ.
ನೀವು ಬೇಕಾದಷ್ಟು ಸಲ ಮಿತಿಮೀರಿ ತಿನ್ನುವಿರಿ. ದೇಹವು ಅದು ಭರ್ತಿಯಾಯಿತೆಂದು ಸಂಕೇತಗಳನ್ನು ನೀಡುತ್ತಿರುತ್ತದೆ. ಆದರೆ ಮನಸ್ಸಿಗೆ ತೃಪ್ತಿಯಾಗಿರುವುದಿಲ್ಲ. ಅದಕ್ಕೆ ಇನ್ನಷ್ಟು ಬೇಕಾಗಿರುವುದು. ಅದು ದೇಹದೊಳಕ್ಕೆ ತುಂಬಿಸುತ್ತಲೇ ಇದ್ದು ಹೆಚ್ಚು ಹೆಚ್ಚು ಹಾನಿಯನ್ನು ಮಾಡುತ್ತಿರುತ್ತದೆ. ಇದರ ಪ್ರತಿಕ್ರಿಯೆಯು ನಂತರದಲ್ಲಿ ಅನುಭವವಾಗುತ್ತದೆ. ಆದುದರಿಂದ ದೇಹ ಮತ್ತು ಮನಸ್ಸುಗಳ ನಡುವೆ ಸಾಮರಸ್ಯವೇರ್ಪಡಿಸಲು ಇವುಗಳನ್ನು ದಾಟಿ ಹೋಗಲು ಮುಖ್ಯವಾಗಿರುವುದು, ಇಲ್ಲದಿದ್ದರೆ ನಾವು ಮನೋಭೌತಿಕ ಆಸ್ತಿತ್ವದಲ್ಲಿ ಸಿಲುಕುವೆವು ಮತ್ತು ಹೋಗಲು ಕಷ್ಟವಾಗುವುದು. ಝೇಂಕರಿಸುವುದು ದೇಹ ಮತ್ತು ಮನಸ್ಸುಗಳ ನಡುವೆ ಸೇತುವೆಯೊಂದನ್ನು ನಿರ್ಮಿಸಲು ಇರುವ ಅತ್ಯುತ್ತಮ ತಂತ್ರಗಳಲ್ಲಿ ಒಂದಾಗಿರುವುದು.
ಝೇಂಕರಿಸುವಿಕೆಯು ನಿಮ್ಮ ದೇಹವನ್ನು ಚೈತನ್ಯದಂತೆ ಭಾವಿಸಲು ಮಾಡುತ್ತದೆ. ನೀವು ಝೋಂಕರಿಸಲು ಪ್ರಾರಂಭಿಸಿದೊಡನೆಯೇ ನೀವು ತೇಲುತ್ತಿರುವ ಹಾಗೆ
ಹಗುರವಾದಂತೆ ಭಾಸವಾಗುವುದು. ನಿಮ್ಮ ದೇಹದಲ್ಲಿ ಭಾರವಾದಂತೆ ಎನಿಸುವುದಿಲ್ಲ, ಏಕೆಂದರೆ ಝೀಂಕರಿಸುವುದು ಮನಸಿನ ಕಂಪನವನ್ನು ದೇಹದ ಕಂಪನದೊಡನೆ ಸರಹೊಂದಿಸುವುದು. ದೇಹ ಮತ್ತು ಮನಸ್ಸು ಸಾಮರಸ್ಯದಿಂದಿರುವುದು. ನೀವು ನಿಮ್ಮನ್ನೇ ಚೈತನ್ನವೆಂಬಂತೆ ಅನುಭವಹೊಂದಲು ಪ್ರಾರಂಭಿಸುತ್ತೀರಿ. ಆದುದರಿಂದ ಈ ಹೆಜ್ಜೆಯಲ್ಲಿ ನಿಮ್ಮ ತುಟಿಗಳನ್ನು ಒಟ್ಟಾಗಿಸಿ 'ಮ್ ಮ್ ….' ಎಂಬ ಶಬ್ದವನ್ನು ಮಾಡುವುದಾಗಿರುತ್ತದೆ. ಝೇಂಕರಿಸುವಿಕೆಯು ಉಸಿರುಗಳ ನಡುವೆ ಸಾಧ್ಯವಾದಷ್ಟು ದೀರ್ಘವಾಗಿರಬೇಕು. ಅದು ಸಾಧ್ಯವಾದಷ್ಟು ಆಳವಾಗಿರಬೇಕು (ನಾಭಿಯ ಮಧ್ಯಭಾಗದಿಂದ) ಮತ್ತು ಆದಷ್ಟು ಜೋರಾಗಿರಬೇಕು. ಆಳವಾಗಿ ಉಸಿರೆಳೆದುಕೊಳ್ಳಲು ಪ್ರಯತ್ತಪಡಬೇಕಾದ
ಅವಶ್ಯಕತೆಯಿಲ್ಲ. ಉದ್ರೇಕಗೊಳ್ಳಬೇಡಿ ಮತ್ತು ಅದನ್ನು ಕೇವಲ ವಿಶ್ರಾಂತಿ ರೀತಿಯಲ್ಲಿ ಮಾಡಿ. ನಿಮ್ಮ ಇಡಿಯುತವನ್ನು ಮತ್ತು ಚೈತನ್ಯವನ್ನು ಈ ಕಂಪನವನ್ನು ಉತ್ಪತ್ತಿಮಾಡಲು ಮುಳುಗಿಸಿ. ಝೇಂಕಾರದ ಶಬ್ದಗಳ ನಡುವಿನ ಸಮಯಾಂತರವನ್ನು ಕನಿಷ್ಠಗೊಳಿಸಲು ಪ್ರಯತ್ನಿಸಿ. ಸ್ವಲ್ಪ ಸಮಯದ ನಂತರ ಝೇಂಕಾರವು ನಿಮ್ಮ ಪರಿಶ್ರಮವಿಲ್ಲದೆಯೇ ಮುಂದುವರಿಯು ತ್ತಿರುವ ಭಾವನೆಯಾಗುವುದು ಮತ್ತು ನೀವು ಕೇವಲ ಒಬ್ಬ ಕೇಳುಗರಾಗಿರುವಿರಿ. ದೇಹ ಮತ್ತು ಮನಸ್ಸು ಝೇಂಕಾರದ ಕಂಪನದೊಂದಿಗೆ ಅನುನಾದಿತವಾಗಲಾರಂಭಿಸುತ್ತದೆ.
ಇದನ್ನು ಚಿನ್‌ಮುದ್ರೆಮಾಡಿ ಕೈಗಳನ್ನು ಮಂಡಿಯ ಮೇಲಿಟ್ಟು ವಜ್ರಾಸನದ ಭಂಗಿಯಲ್ಲಿ ಮುಂದುವರಿಸಿ. ಇಲ್ಲಿ ಕಾಣಿಸಿರುವ ಚಿನ್‌ಮುದ್ರೆಯು ಕೈನ ಸಂಜ್ಞೆಯಾಗಿದ್ದು
ಮೊದಲ ಬೆರಳನ್ನು ಹೆಬ್ಬರಳಿನ ತುದಿಯಲ್ಲಿಟ್ಟು ಮಿಕ್ಕ ಮೂರು ಬೆರಳುಗಳನ್ನು ಮಡೆ ಚಿನ್ ಬದಿ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಸುತ್ತು ದಾರಿಯನ್ನು (circuit)ಉಂಟುಮಾಡುವುದರ ಮೂಲಕ ಚ್ಚೆತನ್ನವು ದೇಹದೊಳಗೇ ಇರುವಂತೆ ಮಾಡುತ್ತದೆ. ಅದು ಚೈತನ್ಯವು ದೇಹದಿಂದ ಚದುರಿ ಹೋಗುವುದನ್ನುತಪ್ಪಿಸುತ್ತದೆ.
ಮೊದಲೆರಡು ಹೆಜ್ಜೆಗಳಾದ ಅಸ್ತವ್ಯಸ್ತ ಉಸಿರಾಟ ಮತ್ತು ತೀಕ್ಷ್ಣವಾದ ಝೇಂಕಾರವನ್ನು ಕ್ರಮಿಸಿದ ನಂತರ, ನಾವು ನಮ್ಮ ಆಸ್ತಿತ್ವದ ಇನ್ನೂ ಸೂಕ್ಷ್ಮವಲಯವನ್ನು ಪ್ರವೇಶ ಮಾಡಲು ಮುಂದಿನ ಹೆಜ್ಜೆಯನ್ನಿಡೋಣ. ನಿಮಗೆ ಝೇಂಕಾರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ತಂತ್ರಗಳನ್ನು ತಿಳಿಯಬೇಕಾದರೆ, ಲೈಫ್ ಬ್ರಿಸ್ ಪ್ರೋಗ್ರಾಂ ಅಥವಾ ಆನಂದ ಸುರಣ ಪ್ರೋಗ್ರಾಂನಲ್ಲಿ ಹೇಳಿಕೊಡುವ ಮಹಾಮಂತ್ರ ಧ್ಯಾನತಂತ್ರವನ್ನು ಕೂಡ ಅಭ್ಯಾಸ ಮಾಡಬಹುದು.