ಯುಕ್ತಿ—ಸ್ಪಷ್ಟತೆ
ಯುಕ್ತಿ—ಸ್ಪಷ್ಟತೆ
ಯುಕ್ತಿಯೆಂದರೆ ಸ್ಪಷ್ಟತೆ; ನೀವು ಎಷ್ಟೇ ಬದಲಾಯಿಸಿದರೂ, ಒಪ್ಪಿಕೊಂಡರೂ, ಸಕಲವೂ ಮತ್ತೊಂದು ಕನಸೆಂಬ ಸ್ಪಷ್ಟತೆ ! ತಿಳಿಯಿರಿ. ನಾನು ವೇದಾಂತದ ಪರಮೋನ್ನತ ಬೋಧನೆಯನ್ನು ನೀಡುತ್ತಿದ್ದೇನೆ. ಪರಮಶ್ರೇಷ್ಠ ಸತ್ಯವನ್ನು ಸರಳವಾದ ಮಾತುಗಳಲ್ಲಿ ಹೇಳುವುದಾದರೆ: ಯಾವುದೇ ವಿಷಯವನ್ನು ಬದಲಾಯಿಸಿದರೂ, ಒಪ್ಪಿದರೂ, ಒಪ್ಪಿದರೂ, ಈ ಇಡೀ ಬ್ರಹ್ಮಾಂಡವೇ ಒಂದು ನಿರಂತರವಾಗಿ ಬದಲಾಗುತ್ತಿರುವ ಕನಸು ! ಅದನ್ನು ಅಳೆಯಲಾಗುವುದಿಲ್ಲ. ಸಕಲವೂ ಒಂದು ಬದಲಾಗುತ್ತಿರುವ ಕನಸಷ್ಟೇ.
ನಾನೀಗ, ಎಲ್ಲವನ್ನೂ ಒಂದೇ ವಾಕ್ಯದಲ್ಲಿ ಮುಂದಿಡುತ್ತಿದ್ದೇನೆ: ನೀವು ಕಷ್ಟಪಡಬೇಕಾಗಿಯೇ ಇಲ್ಲ. ಜೆನ್ ಅಥವಾ ಅದ್ವೈತ ಸಿದ್ದಾಂತದಲ್ಲಿ ಪರಮಶ್ರೇಷ್ಠ ಸತ್ಯವೆಂದು ಹೇಳುವುದು ಇದನ್ನೇ ಎಂದು ನಾನು ಹೇಳಬಲ್ಲೆ.
ನೀವು ಏನನ್ನು ಬದಲಾಯಿಸಿದರೂ, ಸಕಲವೂ ಸತತವಾಗಿ ಬದಲಾಗುತ್ತಿರುವ ಒಂದು ಕನಸು.
ಎಷ್ಟೇ ಬದಲಾಯಿಸಿದರೂ, ಈ ಎಲ್ಲವೂ ಸತತವಾಗಿ ಬದಲಾಗುತ್ತಿರುವ ಕನಸೆಂಬ ಸತ್ಯವನ್ನು ಅರಿತರೆ, ಇದ್ದಕ್ಕಿದ್ದಂತೆ ನೀವು 'ಅನ್‌ಕ್ಲಚ್' ಆಗಿರುವುದನ್ನು ಕಾಣುವಿರಿ. ಜೀವನದ ಬಗ್ಗೆ ನಿಮ್ಮ ಮನಸ್ಸಿನ ಬೇಡದ ಆಲೋಚನಾ ಗೊಂದಲದಿಂದ ಬೇರ್ಪಡುತ್ತೀರಿ. ಆಂತರಿಕವಾಗಿ ಒಂದು ಅಸಾಧಾರಣವಾದ ನೆಮ್ಮದಿಯನ್ನು ಪಡೆಯುತ್ತೀರಿ.
'ಎಲ್ಲವೂ ಬದಲಾಗುತ್ತಿರುವ ಕನಸಾದರೆ, ನಾವು ಏನನ್ನು ಮಾಡಬಯಸುವೆವೋ, ಅದನ್ನು ಮಾಡಬಹುದೆ ?' ಎಂದು ಜನರು ನನ್ನನ್ನು ಕೇಳುತ್ತಾರೆ.
ಎಲ್ಲವೂ ಒಂದು ಬದಲಾಗುತ್ತಿರುವ ಕನಸೆಂಬ ಈ ಮಹಾಸತ್ಯವನ್ನು ಮನಗಂಡರೆ, ನೀವು ಮಾಡಬಯಸುವುದನ್ನು ಮಾಡಲಾಗುವುದಿಲ್ಲ ! ವಿಶ್ವವು ಬಯಸುವುದನ್ನು ಮಾತ್ರ ಮಾಡುತ್ತೀರಿ. ನೀವು ಮಾಡಿಸುವುದನ್ನು ಮಾಡಲಾಗುವುದಿಲ್ಲವೇಕೆಂದರೆ ಈ ಸತ್ಯವನ್ನು ತಿಳಿದಾಕ್ಷಣವೇ ನಿಮ್ಮಲ್ಲಿ ಅಸಾಧಾರಣ ಆಂತರಿಕ ಉಪಶಮನವಾಗಲು ಆರಂಭವಾಗುತ್ತದೆ. ನಿಮ್ಮ ಕಷ್ಟ ಅಥವಾ ವೇದನೆಯು ಕೊನೆಗೊಳ್ಳುತ್ತದೆ. ಒಂದು ನಡೆಯುತ್ತಿರುವುದೆಲ್ಲವೂ ಒಂದು ಕನಸು, ಅದು ಸತತವಾಗಿ ಬದಲಾಗುತ್ತಿದೆ, ನಿಮ್ಮ ಕಲ್ಪನೆಗಳು ಬದಲಾಗುತ್ತಿವೆ, ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವು ಬದಲಾಗುತ್ತಿದೆ. ಪರಿವರ್ತನೆಯ ಬಗ್ಗೆ ಇರುವ ನಿಮ್ಮ ಅಭಿಪ್ರಾಯಗಳು ಬದಲಾಗುತ್ತಿವೆ. ಸಮಸ್ಯೆಗಳ ಬಗ್ಗೆ ನಿಮ್ಮ ಅನಿಸಿಕೆಗಳು ಬದಲಾಗುತ್ತಿವೆ...... ಹೀಗೆ ಎಲ್ಲವೂ ಬದಲಾಗುತ್ತದೆ !
ಕೆಲವೊಮ್ಮೆ ಜನರು, 'ಹನ್ನೆರಡು ವರ್ಷಗಳ ಹಿಂದೆ, ನಾನು ಆಧ್ಯಾತ್ಮಿಕ ಅಭ್ಯಾಸಗಳನ್ನು ಆರಂಭಿಸಿದೆ. ನನ್ನ ಕಷ್ಟಗಳೆಲ್ಲವೂ ಪರಿಹಾರವಾಗುವುದೆಂದು ತಿಳಿದಿದ್ದೆ. ಆದರೆ ಈಗ, ಹನ್ನೆರಡು ವರ್ಷಗಳ ನಂತರವೂ ನನಗೆ ಕಷ್ಟಗಳಿವೆ ಅಂತಲ್ಲಾ ?' ಎಂದು ಕೇಳುತ್ತಾರೆ.
ನಿಮಗೆ ಕಷ್ಟಗಳಿರಬಹುದು, ಆದರೆ ಅವು ಅದೇ ಕಷ್ಟಗಳಲ್ಲ. ಅವು ಬೇರೆಯವು, ಹೆಚ್ಚು ಸೂಕ್ಷ್ಮವಾದ ಕಷ್ಟಗಳು ! ನಿಮ್ಮ ಕಷ್ಟಗಳ ಪರಿವರ್ತನೆಯು ನಿಮ್ಮಲ್ಲಿ ಸ್ವಲ್ಪ ಪರಿವರ್ತನೆಯಾಗಿರುವುದನ್ನು ತೋರಿಸುತ್ತದೆ. ಹನ್ನೆರಡು ವರ್ಷಗಳ ಹಿಂದೆ, ನೀವು ಯಾವುದಾದರೊಂದು ವಿಷಯದೊಂದಿಗೆ ಹೋರಾಡಿದ್ದಿರಬಹುದು; ಈಗ ಹನ್ನೆರಡು ವರ್ಷಗಳಾದ ಮೇಲೆ, ಬೇರೆ ಬೇರೆ ಯಾವುದೋ ವಿಷಯದೊಂದಿಗೆ ಹೋರಾಡುತ್ತಿರುತ್ತೀರಿ.
ನಿಮ್ಮ ಎದುರಾಳಿಯು ಬದಲಾಗಿದ್ದರೆ, ನೀವೇ ಬದಲಾಗಿದ್ದೀರೆಂದು ಸ್ಪಷ್ಟವಾಗಿ ತಿಳಿಯಿರಿ. ನೀವು ಬದಲಾಗದೆ, ನಿಮ್ಮ ಎದುರಾಳಿಯು ಬದಲಾಗಲು ಸಾಧ್ಯವಿಲ್ಲ. ನಿಮ್ಮ ಎದುರಾಳಿಯು ಬದಲಾದಾಗ, ನಿಮ್ಮಲ್ಲಿ ಪರಿವರ್ತನೆ ಆಗಿದೆ ಎಂದರ್ಥ.
ಈಗ ನಿಮ್ಮ ಹೋರಾಟವು ಒಂದು ಬೇರೆಯ ಮಟ್ಟದಲ್ಲಿ, ಒಂದು ಬೇರೆ ಸ್ತರದಲ್ಲಿರುತ್ತದೆ. ಹನ್ನೆರಡು ವರ್ಷಗಳ ಹಿಂದೆ, ನಿಮ್ಮ ಆಸೆ ಏನಾಗಿತ್ತೋ, ನಿಮ್ಮ ಭಯವು ಏನಾಗಿತ್ತೋ, ನೀವು ಪರಿವರ್ತನೆಯೆಂದರೆ ಏನೆಂದು ತಿಳಿದಿದ್ದರೋ, ಯುಕ್ತಿಯ ಬಗ್ಗೆ ನಿಮಗಿದ್ದ ತಿಳಿವಳಿಕೆ ಏನಾಗಿತ್ತೋ, ಅವೆಲ್ಲವೂ ಬದಲಾಗುತ್ತವೆ. ಯುಕ್ತಿಯ ಬಗ್ಗೆ ನಿಮ್ಮ ಕಲ್ಪನೆಯೂ ಸತತವಾಗಿ ಬದಲಾಗುತ್ತಿರುತ್ತದೆ. ನೀವು ವಿಕಸಿಸಿದಷ್ಟೂ, ನಿಮ್ಮ ಅಭಿಪ್ರಾಯವೂ ಬದಲಾಗುತ್ತದೆ.
ಒಂದು ಅಮಿತ ಅಖಂಡಧಾರೆ
ಜೀವನ್ಮುಕ್ತಿಯ ಅನುಭವವು ಅಂತಿಮವಾದದ್ದಾದರೂ, ಕೊನೆಯದಲ್ಲವೆಂದು ನಾನು ಜನರಿಗೆ ಯಾವಾಗಲೂ ಹೇಳುತ್ತೇನೆ. ಇವೆರಡಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಜೀವನ್ಮುಕ್ತಿಯೊಂದು ಅಂತಿಮವಾದದ್ದು, ಏಕೆಂದರೆ, ಜೀವನ್ಮುಕ್ತಿಯ ಬಗ್ಗೆ ಮತ್ತು ದೇಹ, ಮನಸ್ಸುಗಳ ಬಗ್ಗೆ ನಿಮ್ಮೆಲ್ಲಾ ಕಲ್ಪನೆಗಳೂ ಶೂನ್ಯವಾಗುತ್ತವೆ. ಆದರೆ ಎಲ್ಲವೂ ಮುಗಿಯಿತೆಂದು ಇದರರ್ಥವಲ್ಲ. ಅಲ್ಲವೇ ಅಲ್ಲ.
ನೀವು ಬೇರೆಂತುದೊಂದು ಅಂತಹ ಸ್ವಳಕ್ಕೆ ಸತತವಾಗಿ ಸ್ಪೋಟಿಸುತ್ತಿರುತ್ತೀರಿ. ನೀವು ಅಂದುಕೊಳ್ಳಬಹುದು, 'ಓ ದೇವರೆ ! ನಾನು ತಡೆದುಕೊಳ್ಳಲಾಗುವ ಅಂತಿವು ಅನುಭವ ಇದು. ಇದಕ್ಕಿಂತಲೂ ಹೆಚ್ಚಿನದನ್ನು ನನ್ನಿಂದ ತಡೆದುಕೊಳ್ಳಲಾಗುವುದಿಲ್ಲ' ಎಂದು. ಆದರೆ ತಿಳಿಯಿರಿ, ಅದು ಅಲ್ಲಿಗೆ ನಿಲ್ಲುವುದಿಲ್ಲ. ಪ್ರತಿಕ್ಷಣವೂ, ಈ ಕ್ಷಣವನ್ನು ತಡೆದುಕೊಳ್ಳಲಾರೆ ಎಂಬಂತಹ ಅದೇ ಭಾವನೆಯನ್ನು ಅನುಭವಿಸುತ್ತೀರಿ. ಅದನ್ನೇ ನಾನು ಜೀವನ್ಮುಕ್ತಿ ಎನ್ನುವುದು.
ಅದೊಂದು ಮಿತಿಯಿಲ್ಲದ ಅಖಂಡದಾರೆ. ಅದು ಸತತವಾಗಿ ಹಾಗೂ ನಿರಂತರವಾಗಿ ಸ್ಫೋಟಿಸುತ್ತಿರುತ್ತದೆ. ನೀವು ಅಂತಿಮವೆಂದು ತಿಳಿಂದುುವುದು ಈಗ ನಿಮ್ಮಲ್ಲಿ ಆಗುತ್ತ್ರಲೇ ಇರುತ್ತದೆ. ಕೆಲವು ಕ್ಷಣಗಳ ನಂತರ, ಆ ಕ್ಷಣದಲ್ಲಿ ಂನಾವುದನ್ನು ಅಂತಿಮವೆಂದು ತಿಳಿಯುತ್ತೀರೋ ಅದೇ ನಿಮ್ಮಲ್ಲಿ ಆಗುತ್ತಿರುತ್ತದೆ. ನೀವು
ಅಂತಿವುವೆಂದು ತಿಳಿಂಗುುವುದೇ ಪ್ರತಿಕ್ಷಣವೂ ನಡೆಂುುತ್ತದೆ ! ಅದೊಂದು ಮಿತಿಯಿಲ್ಲದ ಅಖಂಡಧಾರೆ. ಸಕಲವೂ ಸತತವಾಗಿ ಬದಲಾಗುತ್ತಿರುತ್ತದೆ. ಅಂದರೆ, ಜ್ಞಾನೋದಂತುದ ಬಗ್ಗೆ, ನಿವ್ಮ ಆಸೆಂಕು ಬಗ್ಗೆ, ನಿಮ್ಜ ದುರಾಸೆಂಬು ಬಗ್ಗೆ, ನಿವ್ಮು ಬಗ್ಗೆ, ನಿಮ್ಮ ಅಭಿಪ್ರಾಯಗಳು ಸತತವಾಗಿ ಬದಲಾಗುತ್ತಿರುತ್ತವೆ. ಜೀವ (ಆತ್ಮ), ಈಶ್ವರ (ದೇವರು), ಜಗತ್ (ಪ್ರಪಂಚ) ಎಂಬೀ ಮೂರರ ಬಗ್ಗೆ ನಿಮ್ಮ ಅಭಿಪ್ರಾಯವು ಸತತವಾಗಿ ಬದಲಾಗುತ್ತಿರುತ್ತದೆ. ಅದನ್ನೇ ನಾನು
ಜೀವನ್ಮುಕ್ತಿಯು ನಿವೃತ್ತಿಯಂತೆ ಎಂದು ಕೆಲವರು ತಿಳಿದಿರುತ್ತಾರೆ. ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಜೀವನ್ನುಕ್ತಿಯ ನಂತರ ಯಾವ ಯೋಜನೆಯನ್ನು ಹಾಕಿಕೊಳ್ಳಬೇಕು ?' ಎಂದು. ನಾನವರಿಗೆ, 'ಅದನ್ನು ವಿಶ್ವಶಕ್ತಿಯು ಯೋಜಿಸುತ್ತದೆ. ನೀವು ಮಾಡಲಾಗುವುದಿಲ್ಲ !' ಎಂದು ಹೇಳುತ್ತೇನೆ.
ನೀವು ಈ ರೀತಿ ಯೋಜಿಸುವವರೆಗೂ, ಜೀವನ್ಮುಕ್ತರಾಗಲಾಗುವುದಿಲ್ಲ. ಜೀವನ್ನುಕ್ತಿಯು ನೀವು ವಾಡಬಹುದಾದ ಕಡೆಂತು ನಿರ್ಧಾರ. ನಿಮ್ಮಿಂದ ಯಾವ ನಿರ್ಧಾರಗಳನ್ನೂ ಮಾಡಲಾಗುವುದಿಲ್ಲ. ಎಲ್ಲಾ ನಿರ್ಧಾರಗಳನ್ನೂ ಬೇರೆ ಂತುಾರೋ ವರಾಡುತ್ತಾರೆ. ಜನರು
ಜೀವನ್ನು ಕ್ಲಿಂದುನ್ನು ಒಂದು ನಿವೃತ್ತಿ ಯೋಜನೆಯೆಂದು ತಿಳಿಯುತ್ತಾರೆ. ಇಲ್ಲ, ಅದೊಂದು ಸತತವಾಗಿ ನಡೆಯುವ ಸಂಗತಿ. ನೀವು ಬದಲಾದರೂ, ಒಪ್ಪಿದರೂ, ಎಲ್ಲವೂ ನಿರಂತರವಾಗಿ ಬದಲಾಗುತ್ತಿದೆಯೆಂದು ತಿಳಿಂತುುತ್ತೀರಿ.
ನೀವು ಏನನ್ನು ನಿಜವೆಂದು ಕರೆಯುತ್ತೀರೋ ಅದು ಒಂದು ಬದಲಾಗುತ್ತಿರುವ ಕನಸೆಂದು ತಿಳಿಯುವ ಸಷ್ಟತೆಯನ್ನೇ ನಾನು 'ಯುಕ್ಕಿ' ಎನ್ನುವುದು. ಎಲ್ಲವೂ ಒಂದು ಬದಲಾಗುತ್ತಿರುವ ಕನಸೆಂದು ತಿಳಿದಾಗ, ನಿಮ್ನೊಳಗೆ ಅದ್ಭುತವಾದ ಅನೇಕ ಸತ್ಲಗಳು ಗೋಚರಿಸುತ್ತವೆ. ನಿಮ್ಮ ಇಡೀ ಪ್ರಪಂಚವೂ ನಿಮ್ಮ ಮನಃ ಶರೀರದ ಅನುಭವವಲ್ಲದೆ ಬೇರೇನೂ ಅಲ್ಲ. ಉದಾಹರಣೆಗೆ, ಈಗ ನಿಮ್ಮ ಪ್ರಪಂಚ ಯಾವುದು ? ಏನನ್ನು ನೋಡುತ್ತೀರೋ, ಹಾಗೂ ನೋಡುವುದರಿಂದ, ಕೇಳುವುದರಿಂದ ಯಾವುದೇ ಅಲೆಗಳು ನಿಮ್ಮೊಳಗೆ ಸೃಷ್ಟಿಯಾಗುತ್ತವೋ ಅದೇ ಈಗಿನ ನಿಮ್ಮ ಪ್ರಪಂಚ.
ಈಗ ನಾನು ಮಾತನಾಡುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ನೀವು ನೋಡುತ್ತಿರುವುದಕ್ಕೆ ಹಾಗೂ ಕೇಳುತ್ತಿರುವುದಕ್ಕೆ ಪ್ರತಿಯೊಬ್ಬರೂ ನಿಮ್ಮ ಅಂತರಂಗದಲ್ಲಿ ಬೇರೆಯ ರೀತಿಯಲ್ಲಿಯೇ ಪ್ರತಿಕ್ರಿಯಿಸುತ್ತಿದ್ದೀರಿ. ಇದೇ ಪ್ರತಿಂಗೊಬ್ಬರ ಪ್ರಪಂಚ.
ನನ್ನ ವರಾತಿಗೆ ಪ್ರತಿಂಗೊಬ್ಬರೂ ಬೇರೆ ಬೇರೆ ರೀತಿಂಬುಲ್ಲಿ ಸ್ಪಂದಿಸುತ್ತಿರುವುದನ್ನು ನಾನು ನೋಡಬಲ್ಲೆ. ಉದಾಹರಣೆಗೆ,
'ಎಲ್ಲವೂ ಬದಲಾಗುತ್ತಿದ್ದರೆ, ನಾನೇಕೆ ಕೆಲಸವನ್ನು ವಾಾಡಬೇಕು ? ನಾನೇಕೆ ವುಲಗಬಾರದು ? ಎಂದು ಒಬ್ಬರು ಂನೋಜಿಸುತ್ತಾರೆ.