KAILASA Library/ಪರಮಹಂಸ ನಿತ್ಯಾನಂದ/ನಿಮ್ಮ ಪ್ರಶ್ನೆಗಳಿಗೆ ಉತ್ತರSign in
ಪರಮಹಂಸ ನಿತ್ಯಾನಂದ

ನಿಮ್ಮ ಪ್ರಶ್ನೆಗಳಿಗೆ ಉತ್ತರ

This text was machine-transcribed from the printed book and may contain errors. Select the words and choose “Report a mistake”.

..........

... ಪ್ರಿಯ ಸ್ವಾಮೀಜಿ, ನಾವು ಈ ಪ್ರಪಂಚದಲ್ಲಿ ಇದ್ದೇವೋ, ಅಥವಾ ಈ ಪ್ರಪಂಚವು ನಮ್ಮೊಳಗೆ ಇರುವುದೋ ?

ನೀವೂ ಈ ಪ್ರಪಂಚದಲ್ಲಿ ಇಲ್ಲ, ಪ್ರಪಂಚವೂ ನಿಮ್ಮೊಳಗೆ ಇಲ್ಲ. ನೀವು ಪ್ರಪಂಚದೊಳಗಿರುವಿರಿ ಎನ್ನುವ ಆಲೋಚನೆಯು ನಿಮ್ಮನ್ನು ಪ್ರಾಪಂಚಿಕವಾದಿ ಅಥವಾ ಲೌಕಿಕವಾದಿ ಮಾಡುವುದು. ಪ್ರಪಂಚವು ನಿಮ್ಮೊಳಗಿದೆ ಎನ್ನು ವ ಆಲೋಚನೆಯು ನಿಮ್ಮನ್ನು ಆಧ್ಯಾತ್ಮಿಕ ಅಥವಾ ಪಾರಮಾರ್ಥ ಮಾಡುವುದು. ಆದರೆ ಎರಡು ಕೇವಲ ಪರಿಕಲ್ಪನೆಗಳು. ನೀವು ಈ ಪ್ರಪಂಚದಲ್ಲಿ ಇರುವಿರಿ ಎಂದು ಅಂದುಕೊಳ್ಳುವುದು ನಿಮ್ಮನ್ನು ಬಹಳ ಪ್ರಾಪಂಚಿಕವಾದಿ ಮಾಡುವುದು - ಈ ಪ್ರಪಂಚದ ಹಿಂದೆ ಓಡುವಿರಿ, ಪ್ರಪಂಚವನ್ನೇ ಪಡೆಯುವುದಕ್ಕೆ ಬಯಸುವಿರಿ. ಈ ಪ್ರಂಚವೇ ನಿಮ್ಮಲ್ಲಿ ಇದೆ ಎಂದು ಅಂದುಕೊಂಡರೆ ನೀವು ನಿಮ್ಮ ಅಂತರಂಗನ್ನು ಹಿಡಿದು, ಅದನ್ನು ಪಡೆಯಲು ಬಯಸುವಿರಿ. ಇದೂ ಒಂದು ಓಟವೇ - ಸ್ವಲ್ಪ ಗಮನ ಒಳಗಡೆ ತಿರುಗಿದೆ ಅಷ್ಟೆ ! ಯಾವುದೇ ಒಂದು ರಹಸ್ಯಾರ್ಥವುಳ್ಳ ಅನುಭವ (mystical experience) ಅಥವಾ ಯಾವುದೇ ಒಂದು ಆಧ್ಯಾತ್ಮಿಕ ಅನುಭವವನ್ನು ಪಡೆಯುವ ಮರುಳು ಕೇವಲ ಅದರ ಕುತೂಹಲ ಮತ್ತು ಕೋಲಾಹಲದ ಮೋಹ. ಇದರಿಂದ ಮೋಸ ಹೋಗಬೇಡಿ. ವಾಸ್ತವವಾಗಿ ಇವೆರಡೂ ಕೇವಲ ಪರಿಕಲ್ಪನೆಗಳು. ಇದರಿಂದ ನಿಜವಾದ ಆಧ್ಯಾತ್ಮಿಕ ಅಭಿವೃದ್ಧಿಯು ಆಗುವುದಿಲ್ಲ. ಇವೆಲ್ಲ ಕೇವಲ ಪರಿಕಲ್ಪನೆಗಳು ಅಂತ ನೀವು ಅರ್ಥ ಮಾಡಿಕೊಂಡರೆ ಆಧ್ಯಾತ್ಮಿಕ ಅನುಭವವು ನಿಮಗೆ ತಾನಾಗಿ ತಾನೆ ಸುಗಮವಾಗಿ ಸರಳವಾಗಿ ಆಗುವುದು - ಅದನ್ನು ಮಾತುಗಳಲ್ಲಿ ಹೇಳಲಾಗದು.

ಉದಾಹರಣೆಗೆ ಗಂಗಾ ನದಿಯ ಮೇಲೆ ಒಂದು ಚಿಕ್ಕ ಬಿದಿರಿನ ಕೋಲು ತೇಲುತ್ತಾ ಇದೆ ಎಂದು ಅಂದುಕೊಳ್ಳಿ. ಆ ಬಿದಿರಿನ ಕೋಲೇ ಗಂಗೆಯ ನಡುವಣ ಜಾಗ ಎಂದು ಇಟ್ಟುಕೊಂಡು ಗಂಗಾ

ನದಿಯು ಎರಡು ಭಾಗ ಆಗಿದೆ (ಎಡಗಡೆಯ ಗಂಗಾ ಮತ್ತು ಬಲಗಡೆಯ ಗಂಗಾ) ಎಂದು ಹೇಳಿದರೆ ಅದು ಸರಿಯೇ ? ಕೇವಲ ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕಾಗಿ ನಾವು ಅದನ್ನು ಎಡಗಡೆಯ ಗಂಗ ಮತ್ತು ಬಲಗಡೆಯ ಗಂಗ ಎಂದು ಹೆಸರಿಟ್ಟಿದ್ದೇವೆ. ಗಂಗೆಯು ಎಂದಿಗೂ ಭಾಗವಾಗುವುದಿಲ್ಲ. ಇದೇ ರೀತಿಯಲ್ಲಿ ನಾವು ನಮ್ಮ ಅನುಕೂಲಕ್ಕೋಸ್ಕರ ಇದು ನಮ್ಮ ದೇಹ ಮತ್ತು ಅದು ಪ್ರಪಂಚ ಎಂದು ಕೇವಲ ಹೆಸರಿಟ್ಟಿದ್ದೇವೆ.

ನಿಮ್ಮೊಳಗೆ ನೀವು ಆಳವಾಗಿ ನೋಡಿ. ನಿಮ್ಮೊಳಗೆ ಏಕೆ ಇಷ್ಟು ದಿನ ನಿಮ್ಮ ದೃಷ್ಟಿಯು ಕೇವಲ ಹೊರಗಡೆಯಿತ್ತು? ನೀವು ಒಳಗೆ ನೋಡಿದಾಗ ನೀವು ನಿಮ್ಮ ಮತ್ತು ಪ್ರಪಂಚದ ನಡುವೆ ಏನೂ ಪರಿಮಿತಿಯೇ ಇಲ್ಲ ಎಂದು ಕಂಡುಹಿಡಿಯುವಿರಿ. ನೀವು ಒಂದರ ಪರಿಮಿತಿಯನ್ನು ಬಹಳ ನಿರ್ಬಂಧವಾಗಿ ಗ್ರಹಿಸಿದರೆ, ನೀವು ಪ್ರಪಂಚದಲ್ಲಿದ್ದೀರ ಎಂದು ಭಾವಿಸುತ್ತೀರಿ. ನೀವು ಇನ್ನೊಂದು ಪರಿಮಿತಿಯನ್ನು ಬಹಳ ನಿರ್ಬಂಧವಾಗಿ ಗ್ರಹಿಸಿದರೆ, ಪ್ರಪಂಚವು ನಿಮ್ಮೊಳಗೆ ಇದೆ ಎಂದು ಭಾವಿಸುವಿರಿ. ನಾಗರಿಕತೆಯಲ್ಲಿರುವ ಸಾಂಸಾರಿಕ ಜನರು ಮತ್ತು ಭೌತವಾದಿಯರು (materialists) ಹೇಳುವರು ನಾವು ಈ ಪ್ರಪಂಚದೊಳಗೆ ಇದ್ದೇವೆ. ಹಿಮಾಲಯ ಪರ್ವತದ ಗುಹೆಗಳಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತುಕೊಂಡವರು ಪ್ರಪಂಚವು ನಮ್ಮೊಳಗೇ ಇದೆ ಎಂದು ಹೇಳುವರು. ಆದರೆ ಇವೆರಡೂ ಕೇವಲ ಪರಿಕಲ್ಪನೆಗಳು.

ನೀವು ಇವೆರಡು ಪರಿಕಲ್ಪನೆಗಳನ್ನು ತ್ಯಜಿಸಿದರೆ ಕೇವಲ ನೀವು ಇದ್ದೀರಾ ಮತ್ತು ಎಲ್ಲಿದ್ದೀರೋ ಅಲ್ಲಿ ಸಂತೋಷವಾಗಿದ್ದೀರಾ ಎಂದು ಸ್ಪಷ್ಟವಾಗಿ ನೋಡುವಿರಿ. ಸಾಮಾನ್ಯವಾಗಿ ಪುಣ್ಯಾತ್ಮರು ಮತ್ತು ಜ್ಞಾನಿಗಳು ನಿಮಗೆ ಪ್ರಪಂಚ ನಿಮ್ಮಲ್ಲಿದೆ ಎಂದು ಹೇಳಿಕೊಡುವರು. ಅದು ಏಕೆಂದರೆ ನೀವು ಈ ಪ್ರಪಂಚದೊಳಗೆ ಇರುವಿರಿ ಎಂಬುವ ವಿರುದ್ಧವಾದ ತತ್ವದಲ್ಲಿ ಮುಂಚಿತವಾಗಿಯೇ ಸಂಘಟಿತವಾಗಿರುವಿರಿ. ಈ ತತ್ವದಿಂದ ಹೊರಗೆ ಬರಲು ಸಂತರು ಈ ಪ್ರಪಂಚವು ನಿಮ್ಮೊಳಗೇ ಇದೆ ಎಂದು ಹೇಳಿಕೊಡುವರು. ನಿಮ್ಮ ಕಾಲಿನಿಂದ ಒಂದು ಮುಳ್ಳನ್ನು ತೆಗೆಯಲು ಇನ್ನೊಂದು ಮುಳ್ಳನ್ನು ಉಪಯೋಗಿಸುವ ಅವಶ್ಯಕತೆ ಇರುವುದು. ಆದರೆ ಮುಳ್ಳನ್ನು ತೆಗೆದಾದಮೇಲೆ ಎರಡು ಮುಳ್ಳನ್ನೂ ಬಿಸಾಡಬೇಕು. ಇದೇ ರೀತಿಯಲ್ಲಿ ಪ್ರಪಂಚ ನಿಮ್ಮಲ್ಲಿಯೇ ಇರುವುದು ಎಂದು ಹೇಳಿಕೊಡುವ ಉದ್ದೇಶ ನಿಮ್ಮನ್ನು ಮೊದಲೇ ಚುಚ್ಚುತ್ತಿರುವ ಮುಳ್ಳನ್ನು ತೆಗೆಯುವುದು. ಆದರೆ ಕಟ್ಟಕಡೆಯದಾಗಿ ಇವೆರಡೂ ಪರಿಕಲ್ಪನೆಗಳು. ಈ ಪರಿಮಿತಿಗಳನ್ನೆಲ್ಲ ನೀವು ದಾಟಿ ಮುಂದಕ್ಕೆ ಹೋದರೆ ಮಾತ್ರ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ - ಈ ಎರಡು ತತ್ತ್ವಗಳು ನಿಮಗೆ ಖಂಡಿತ ನಿಜವನ್ನು ತಿಳಿಸಲಾರವು. ನೀವು ಗಂಗಾನದಿಯಿಂದ ಬಿದಿರಿನ ಕೊಳಲನ್ನು ತೆಗೆದುಬಿಟ್ಟರೆ ಗಂಗೆಯು ಒಂದಾಗಿ ಹೋಗುವುದು ಎಂದು ಹೇಳಬಲ್ಲಿರಾ? ಇಲ್ಲ - ಏಕೆಂದರೆ ಗಂಗೆಯು ಯಾವಾಗಲು ಒಂದಾಗೇ ಇತ್ತು. 'ಎರಡು' ಭಾಗಗಳು ಇದೆ ಅಂತ ಹೇಳಿದರೆ ತಾನೇ 'ಒಂದು' ಎಂಬ ಪದಕ್ಕೆ ಅರ್ಥ ಬರುವುದು. 'ಎರಡು' ಇಲ್ಲದಿದ್ದರೆ ಒಂದು ಆಗಿ ಹೋಗಿದೆ ಎಂದು ಹೇಗೆ ಹೇಳಬಲ್ಲಿರಿ? ಅರ್ಥವಾಯಿತೇ? 'ಅನೇಕ' ಎಂಬುವ ಶಬ್ದವಿದ್ದರೆ ತಾನೇ 'ಏಕ' ಶಬ್ದಕ್ಕೆ ಅರ್ಥ ಇರುವುದು. ಅನೇಕ ಎಂಬ ತತ್ತ್ವವೇ ಅಥವಾ ಪದವೇ ಇಲ್ಲದಿದ್ದರೆ 'ಏಕ' ಪದದ ಪ್ರಶ್ನೆಯೇ ಇರುವುದಿಲ್ಲ. ಇದೇ ಕಾರಣದಿಂದ ಸಂತರು ಮತ್ತು ಋಷಿಗಳು ಇದನ್ನು ಅದ್ವೈತ ತತ್ತ್ವಜ್ಞಾನ ಎಂದು ಕರೆದರು.

ದ್ವೈತ ಎಂದರೆ ಅನೇಕ - ಬಹುತತ್ತ್ವವಾದ. ಆದರೆ ಅದ್ವೈತ ಪದಕ್ಕೆ 'ಏಕ' ಅಂತ ಅರ್ಥ ಬರುವುದಿಲ್ಲ. ಏಕೆಂದರೆ ಅದ್ವೈತವು ಅನೇಕದ ಉಪಸ್ಥಿತಿಯನ್ನು ಅಂಗೀಕರಿಸುವುದಿಲ್ಲ - ಮತ್ತು 'ಅನೇಕ' ವೇ ಇಲ್ಲದಿದ್ದರೆ 'ಏಕ' ಕ್ಕೆ ಅರ್ಥವೇ ಇಲ್ಲ. ಈ ಕಾರಣದಿಂದ 'ಅದ್ವೈತ' ಪದವನ್ನು ಎಂದಿಗೂ 'ಏಕ' ಎಂದು ಪ್ರಕಟಿಸಲಾರದು ಹೊರತು 'ಅನೇಕವಲ್ಲದ್ದು' ಎಂದು ಅದರ ಅರ್ಥ. 'ದ್ವೈತ' ಎಂದರೆ 'ದ್ವಿವಿಧ' ಅಥವಾ ಬಹುತತ್ತ್ವವಾದ. ಅದ್ವೈತ ಎಂದರೆ 'ಅನೇಕವಲ್ಲದ್ದು.'

ನೀವು ಪ್ರಪಂಚದೊಳಗೆ ಇದ್ದೀರಾ ಎಂದರೆ ನೀವು ದ್ವೈತ ಭಾವವನ್ನು ಪ್ರಕಟಿಸುವಿರಿ. ಪ್ರಪಂಚವು ನಿಮ್ಮಲ್ಲಿದೆ ಎಂದು ಹೇಳಿದರೂ ನೀವು ಅದೇ ಪ್ರಕಟಣೆಯನ್ನು ಮಾಡುತ್ತಿದ್ದೀರಾ. ಇವೆರಡೂ ನಿಜವಲ್ಲ ಎಂದು ನೀವು ಅನುಭವಿಸಿದರೆ, ನಿಮಗೆ ನಿಜದ ಅನುಭವವು ಆಗುವುದು. ಸತ್ಯವು ದ್ವೈತದಿಂದ

••• ಪ್ರಿಯ ಸ್ವಾಮೀಜಿ, ಇ ಕಾರ್ಯಕ್ರಮವು ಕುಂಡಲಿನೀ ಶಕ್ತಿಯನ್ನು ಜಾಗ್ರತಿಗೊಳಿಸುವ ಧ್ಯಾನ ಪದ್ಧತಿಗಳ ಪರಿಚಯ ಮಾಡುವುದೇ ?

ಖಂಡಿತ, ನಾವು ನಡೆಸುತ್ತಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಬಹಳ ಸುರಕ್ಷಿತ ಮತ್ತು ಪ್ರಯೋಗಶೀಲ ರೀತಿಯಲ್ಲಿ ಕುಂಡಲಿನೀ ಶಕ್ತಿಯು ಜಾಗೃತಿ ಆಗುವುದು.

ಒಂದು ಪರಿಪೂರ್ಣವಾದ, ಆನಂದವಾದ, ಪರಮಾರ್ಥವಾದ ಜೀವನ ಜೀವಿಸುವುದಕ್ಕೆ ಇವು ಎರಡರ ಆವಶ್ಯಕತೆ ಇದೆ. ಒಂದು - ನಮ್ಮ ಸುತ್ತುಗಟ್ಟಿರುವ ದಿವ್ಯ ಶಕ್ತಿಯ ಪರಿಪಕ್ವ ಅರಿವು. ಇನ್ನೊಂದು - ಧ್ಯಾನ ಅಥವಾ ಮೆಡಿಟೇಶನ್ (meditation). ಅರಿವು ನಿಮ್ಮ ಪ್ರಜ್ಞೆಯನ್ನು (concious mind) ಸ್ವಚ್ಛಗೊಳಿಸುತ್ತದೆ. ಮತ್ತು ಧ್ಯಾನವು ನಿಮ್ಮ ಮನಸ್ಸಿನ ಗೂಢ ಭಾಗಗಳನ್ನು (unconscious mind) ಶುದ್ಧೀಕರಿಸುತ್ತದೆ. ಕೇವಲ ಅರಿವಿನಿಂದ ಅಥವಾ ಅರ್ಥಮಾಡಿಕೊಳ್ಳುವುದರಿಂದ ಕೆಲಸ ಸಾಗುವುದಿಲ್ಲ. ಉದಾಹರಣೆಗೆ ಎಲ್ಲರಿಗೂ ಧೂಮಪಾನ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಗೊತ್ತು. ಸಿಗರೇಟಿನ ಎಲ್ಲಾ ಜಾಹಿರಾತುಗಳಲ್ಲಿ ಕಾನೂನು ಸ್ಥಾಪಿಸಿದ ಈ ಎಚ್ಚರಿಕೆಯು ನೀಡಲಾಗಿದೆ - 'ಧೂಮಪಾನವು ಆರೋಗ್ಯಕ್ಕೆ ಅಪಾಯಕಾರಿ.' ಎಲ್ಲರಿಗೂ ಇದು ಗೊತ್ತು, ಆದರೂ ಈ ಸೂಚನೆಯನ್ನು ಉಪೇಕ್ಷಿಸಿ ಬಹಳ ಜನ ಸಿಗರೇಟನ್ನು ಸೇದುವ ಅಭ್ಯಾಸದಿಂದ ಕಷ್ಟಪಡುತ್ತಾ ಇದ್ದಾರೆ. ಹೀಗೆ ಕೇವಲ ಬೌದ್ಧಿಕ ತಿಳವಳಿಕೆಯು ಸಾಲದು. ಇಂತಹ ಸಂದರ್ಭಗಳಲ್ಲಿ ನಮ್ಮ ಚೈತನ್ಯವನ್ನು (ಎನರ್ಜಿಯನ್ನು) ಮನಸ್ಸಿನ ಗೂಢಭಾಗಗಳಿಗೆ ತಲುಪಿಸುವುದು ಅಗತ್ಯ.

ಪ್ರಜ್ಞೆ ಇರುವ ನಮ್ಮ ಮನಸ್ಸಿನ ಪ್ರಾಂತ್ಯವನ್ನು (conscious zone) ಸ್ಪಷ್ಟವಾದ ತಿಳಿವಳಿಕೆ ಮತ್ತು ಪ್ರಬುದ್ಧತೆಯಿಂದ ಸ್ವಚ್ಛಗೊಳಿಸಬಹುದು - ಇದರಿಂದ ನಮ್ಮ ಶೇಕಡ 50 ರಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸ್ಪಷ್ಟವಾದ ತಿಳಿವಳಿಕೆಗೆ ನಮ್ಮ ಸುಖ ಜೀವನದಲ್ಲಿ ಅದರದೇ ಒಂದು ಪ್ರಾಮುಖ್ಯತೆ ಇರುವುದು. ಆದರೆ ಅದು ಸಾಲದು. ಅದು ಕಟ್ಟಕಡೆಯ ಪರಿಹಾರ ಅಲ್ಲ. ಹೀಗೆ, ಸ್ಪಷ್ಟವಾದ ಬೌದ್ಧಿಕ ತಿಳವಳಿಕೆಯಿಂದ ನಿಮಗೆ ಎಲ್ಲ ಚಕ್ರಗಳ ಬಗ್ಗೆ ಒಂದೊಂದರ ಪ್ರಾಮುಖ್ಯತೆಯು ಮತ್ತು ಹೇಗೆ ಈ ಚಕ್ರಗಳ ಎನರ್ಜಿಯನ್ನು ಬಿಡುಗಡೆ ಮಾಡುವುದು ಎಂದು ಅರ್ಥಮಾಡಿಕೊಳ್ಳುವಿರಿ. ಉದಾಹರಣೆಗೆ : ಡಿಪ್ರೆಷನ್ (depression) ಅಥವಾ ಕೊರಗು, ನಮ್ಮ ನಾಭಿಯ ಹತ್ತಿರ ಇರುವ ಮಣಿಪೂರಕ ಚಕ್ರದೊಡನೆ ಬಹಳ ಸಮೀಪವಾದ ಸಂಬಂಧ ಹೊಂದಿದೆ. ಶೋಚನೀಯ ಸಮಾಚಾರವನ್ನು ಕೇಳಿ ನಿಮಗೆ ದುಃಖವನ್ನು ತಡೆಯುವುದಕ್ಕೆ ಆಗದೆ ಇರುವಾಗ ನಿಮ್ಮ ಹೊಟ್ಟೆಗೆ ಏಕೆ ಮೊದಲು ಪೆಟ್ಟಾಗುವುದು ? ನಿಮಗೆ ಅಜೀರ್ಣ ಅಥವಾ ಭೇದಿಯ ತೊಂದರೆ ಆಗುವುದು. ಇದರ ಪ್ರಾಮುಖ್ಯತೆ ಏನೆಂದರೆ ಹೇಗೆ ನಮ್ಮ ಆಹಾರ ಪಚನ ಸರಿಯಾಗಿ ಆಗದಿದ್ದರೆ ನಮಗೆ ಹೊಟ್ಟೆಯ ತೊಂದರೆಗಳು ಉಂಟಾಗುವುದೋ ಅದೇ ರೀತಿಯಲ್ಲಿ ದುಃಖಕರ ಸುದ್ದಿಯನ್ನು ನಮಗೆ ತಡೆಯುವುದಕ್ಕೆ ಆಗದಿದ್ದರೆ ಹೊಟ್ಟೆಗೆ ಏಟು ಬೀಳುವುದು. ನೀವು ಅಂತಹ ಸುದ್ದಿಯನ್ನು ಕೇಳಿದಾಗ ನನಗೆ ಇದನ್ನು ಜೀರ್ಣಿಸುವುದಕ್ಕೆ ಸಾಧ್ಯವಿಲ್ಲ, 'ನನ್ನ ಹೊಟ್ಟೆಗೆ ಈ ಸುದ್ದಿಯನ್ನು ತಡೆಯುವುದಕ್ಕೆ ಆಡುವುದಿಲ್ಲ' ಎಂದು ಹೇಳುವಿರಿ. ಕೇವಲ ಇಂಗ್ಲೀಷ್ ಭಾಷೆಯಲ್ಲಿ ಅಲ್ಲ, ಎಲ್ಲಾ ಭಾಷೆಗಳಲ್ಲಿಯೂ ಈ ರೀತಿ ಪ್ರಕಟಣೆಯನ್ನು ಮಾಡುವರು. ಹೀಗೆ ನೀವು ದುಃಖಕ್ಕೂ ಮತ್ತು ಹೊಟ್ಟೆಗೂ ಒಂದು ಸಮೀಪವಾದ ಸಂಬಂಧವನ್ನು ಕಾಣುವಿರಿ.

ಹೀಗೆ ಅನಾಹತ ಚಕ್ರಕ್ಕೂ, ಪ್ರೀತಿಗೂ ಸಮೀಪವಾದ ಸಂಬಂಧವಿದೆ. ಪ್ರೀತಿ ಮತ್ತು ಹೃದಯ - ಇವೆರಡು ಪದಗಳು ಎಲ್ಲಾ ಭಾಷೆಗಳಲ್ಲೂ ಏಕಾರ್ಥ ಪದಗಳಾಗಿರುವವು. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಭಾಷೆಗಳು ಬೇರೆ ಬೇರೆ ಸಮಯದಲ್ಲಿ ಉದ್ಭವವಾಗಿರುವವು. ಉದಾಹರಣೆಗೆ ದಕ್ಷಿಣ ಭಾರತದಲ್ಲಿ ತಮಿಳು, ಉತ್ತರ ಭಾರತದಲ್ಲಿ ಹಿಂದಿಯೂ ಮತ್ತು ಇಂಗ್ಲೆಂಡ್‌ನಲ್ಲಿ ಇಂಗ್ಲೀಷು. ಆದರೂ ಈ ಎಲ್ಲಾ ಭಾಷೆಗಳಲ್ಲಿಯೂ ಪ್ರೀತಿ ಮತ್ತು ಹೃದಯ ಏಕಾರ್ಥ ಪದಗಳಾಗಿರುವುದು. ಇದರ

ಅರ್ಥವೇನೆಂದರೆ ನಿಮ್ಮ ಭಾವನೆಗಳಿಗೂ ನಿಮ್ಮ ಅಂತರಂಗಕ್ಕೂ ಒಂದು ಅಗಾಧವಾದ ಸಂಬಂಧವು ಇರುವುದು. ಹೃದಯದ ಹತ್ತಿರ ಇರುವ ಅನಾಹತ ಚಕ್ರಕ್ಕೆ ಪ್ರೀತಿಯ ಎನರ್ಜಿಯ ಜೊತೆ ಬಹಳ ಹತ್ತಿರದ ಸಂಬಂಧವಿದೆ. ವಿವೇಚನೆ ಮತ್ತು ತಿಳಿವಳಿಕೆಯಿಂದ ಈ ಭಾವನೆಯನ್ನು ನಿಮಗೆ ನಿಭಾಯಿಸುವುದಕ್ಕಾದರೆ ನಿಮ್ಮ ಸಮಸ್ಯೆಯ ಶೇಕಡಾ 50 ಭಾಗವನ್ನು ಪರಿಹರಿಸಿಕೊಳ್ಳಬಹುದು. ಪ್ರಬುದ್ಧತೆಯಿಂದ ಎನರ್ಜಿ ನಿರ್ಮಿಸಬಲ್ಲದು. ಈ ಎನರ್ಜಿಯು ತಿರುಗಿ ಪ್ರಬುದ್ಧತೆಯನ್ನು ನಿರ್ಮಿಸುವುದು. ಹೀಗೆ ಒಂದು ಚಕ್ರಗತಿಯು ಉಂಟಾಗಿ ವಿವೇಚನೆ ಮತ್ತು ಎನರ್ಜಿಯ ಅದ್ಭುತ ಸಮಯೋಗದಿಂದ ನೀವು ಪರಮಾನಂದವನ್ನು ಅನುಭವಿಸುವಿರಿ.

ಈ ಎರಡು ದಿನದ ಕಾರ್ಯಕ್ರಮದಲ್ಲಿ ಒಂದೊಂದಾಗಿ ಎಲ್ಲಾ ಚಕ್ರಗಳ ವಿವರಣೆಯನ್ನು ನಿಮಗೆ ಮಾಡಲಾಗುವುದು.

ಪರಿಪಕ್ವ ತಿಳಿವಳಿಕೆಯು ಪ್ರಜ್ಞೆಯನ್ನು ಸ್ಪಷ್ಟಗೊಳಿಸುವುದು ಮತ್ತು ಧ್ಯಾನವು ಮನಸ್ಸಿನ ಗೂಢಭಾಗಗಳನ್ನು ಸ್ಪಷ್ಟಗೊಳಿಸುವುದು. ಇವೆರಡೂ ಭಾಗಗಳು ಸ್ಪಷ್ಟಗೊಂಡಾಗ ನೀವು ನಿಮ್ಮ ಅಂತರಂಗದ ಒಂದು ಪರಿವರ್ತನೆಯನ್ನು ಮತ್ತು ಒಂದು ಅದ್ಭುತವಾದ ವಿಕಸನವನ್ನು ಕಾಣುವಿರಿ.

ಇದೇ ಕಾರಣಕ್ಕೆ ನಾನು ಈ ಕಾರ್ಯಕ್ರಮವನ್ನು 'ಆನಂದ ಸ್ಫುರಣ' ಎಂದು ಕರೆಯುವೆನು. ಆನಂದದ ವಿಕಸನವು ನಮ್ಮಲ್ಲಿ ನಿರಂತರವಾಗಿ ಆಗುತ್ತಾ ಇರುವುದು. ಆದರೆ ನಾವು ನಮ್ಮ ಒಳಗೆ ನೋಡದೇ ಇರುವುದರಿಂದ ನಮಗೆ ಇದು ತಿಳಿಯದು. ಸ್ವಲ್ಪ ಗಮನವನ್ನು ಒಳಗಡೆಗೆ ತಿರುಗಿಸಿ - ನೀವು ನಿಮ್ಮೊಳಗೆ ಆಗುತ್ತಿರುವ ಆನಂದದ ವಿಕಸನಕ್ಕೆ ಸಾಕ್ಷಿಯಾಗುವಿರಿ. •••

...ಪ್ರಿಯ ಸ್ವಾಮೀಜಿ, ಆಧ್ಯಾತ್ಮಿಕ ಜಾಗರಣೆಗೆ ನನ್ನಲ್ಲಿ ಯೋಗ್ಯತೆ ಇದೆಯೋ, ಇಲ್ಲವೋ ಎಂದು ನನಗೆ ಹೇಗೆ ತಿಳಿಯುವುದು?

ಒಳ್ಳೆ ಪ್ರಶ್ನೆ. ಒಬ್ಬ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಜಾಗರಣೆಗೆ ಯೋಗ್ಯತೆ ಇರಬೇಕು ಎಂಬುವುದು ಪುರೋಹಿತರು ಉಂಟು ಮಾಡಿರುವ ಒಂದು ಭ್ರಮೆ. ವಾಸ್ತವವಾಗಿ ನೀವು ಬದುಕಿರುವ ತಿಳಿವಳಿಕೆ ನಿಮ್ಮಲ್ಲಿ ಇದ್ದರೆ ಸಾಕು - ನೀವು ಖಂಡಿತ ಆಧ್ಯಾತ್ಮಿಕ ಜಾಗರಣೆಗೆ ಯೋಗ್ಯರಾಗಿದ್ದೀರಿ.

ಒಮ್ಮೆ ಒಬ್ಬನು ರಮನ ಮಹರ್ಷಿಯವರ ಬಳಿಗೆ ಬಂದು ಕೇಳಿದನು, "ಭಗವಾನ್, ನಾನು ಆಧ್ಯಾತ್ಮಿಕ ಜಾಗರಣೆಗೆ, ಆಧ್ಯಾತ್ಮಿಕ ಮಾರ್ಗಕ್ಕೆ ಯೋಗ್ಯನಾಗಿದ್ದೀನಾ?"

ರಮಣ ಮಹರ್ಷಿಯರು ಕೇಳಿದರು. "ನೀವು ಜೀವಂತವಾಗಿದ್ದೀರಾ?"

"ಖಂಡಿತ ಜೀವಂತವಾಗಿದ್ದೇನೆ." ಎಂದು ಶಿಷ್ಯನು ಉತ್ತರಿಸಿದ.

"ಹಾಗಾದರೆ ನಿನ್ನಲ್ಲಿ ಸಾಕಷ್ಟು ಯೋಗ್ಯತೆ ಇದೆ." ಎಂದು ರಮಣರು ಹೇಳಿದರು.

ಕಲ್ಪನೆಯನ್ನು ಹುಟ್ಟುಹಾಕಿರುವುದು ಪುರೋಹಿತರು ಸ್ವಪ್ರಯೋಜನಕ್ಕಾಗಿ ಜನರನ್ನು ಕೈವಶ ಮಾಡಿಕೊಳ್ಳಲು. ಈ ಜನಮನದಲ್ಲಿ ಒಂದು ಸಂಕೋಚವನ್ನು ಒಂದು ಕೀಳರಿಮೆಯನ್ನು ಉಂಟುಮಾಡಿ ಅವರನ್ನು ಕುಗ್ಗಿಸುವರು. ಈ ತತ್ವವೇ ಜನಾಂಗದ ತಿಳಿವಳಿಕೆಯನ್ನು ಮತ್ತು ಆಧ್ಯಾತ್ಮ ಪ್ರಗತಿಯನ್ನು ತಡೆಹಿಡಿದಿರುವುದು. ಈ ಕೀಳರಿಮೆಯ ಭಾವನೆಯು ಜನಮನದಲ್ಲಿ ಎಷ್ಟರಮಟ್ಟಿಗೆ ನೆಲೆಗೊಂಡಿದೆ, ಎಷ್ಟರ ಮಟ್ಟಿಗೆ ಒಂದು ಅಪರಾಧೀ (guilt) ಭಾವನೆಯನ್ನು ಉಂಟುಮಾಡಿದೆ ಎಂದರೆ ಈ ಪ್ರಪಂಚದಲ್ಲಿ ತಮ್ಮನ್ನು ತಾವು ಆಧ್ಯಾತ್ಮಿಕ ದಾರಿಗೆ ಯೋಗ್ಯರು ಎಂದು ನಂಬಿಕೊಂಡಿದ್ದವರು ಯಾರೂ ಇಲ್ಲ. ಎಷ್ಟು ವರ್ಷಗಳ ಕಾಲ ಸಾಧನೆ ಮಾಡಿದ್ದರೂ ನೀವು ಇದಕ್ಕೆ ಯೋಗ್ಯರಾಗಿದ್ದೀರೋ ಇಲ್ಲವೋ ಎಂದು ಯೋಚಿಸುವಿರಿ. ಇದು ಏಕೋ ನನಗೆ ಗೊತ್ತಿಲ್ಲ, ಚೆನ್ನಾಗಿ ಅರ್ಥಮಾಡಿಕೊಳ್ಳಿ. ಈ ಮುಂಬಯಿ ನಗರದಲ್ಲಿ ಮಾತ್ರ ಅಲ್ಲ, ನೀವು ಮುಂದೆಯೂ ಎಲ್ಲಿ ಇರುವಿರೋ, ನೀವು ಖಂಡಿತ ಇದಕ್ಕೆ ಯೋಗ್ಯರಾಗಿದ್ದೀರಾ - ನೀವು ಬದುಕಿರುವ ತಿಳಿವಳಿಕೆ ನಿಮ್ಮಲ್ಲಿ ಇದ್ದರೆ ಸಾಕು, ನೀವು ಯೋಗ್ಯರಾಗಿದ್ದೀರಿ. ಈ ಯೋಗ್ಯತೆಯ ಪರಿಕಲ್ಪನೆಯನ್ನು ಕೇವಲ ನಿಮ್ಮನ್ನು ಕುಗ್ಗಿಸಿಟ್ಟಿರುವುದಕ್ಕೆ ಮಾಡಲಾಗಿರುವುದು.

ಝೆನ್ ಬೌದ್ಧಧರ್ಮದಿಂದ ಒಂದು ಸೊಗಸಾದ ಕಥೆ : ಒಬ್ಬ ವ್ಯಕ್ತಿಯು ಗುರುಗಳ ಬಳಿಗೆ ಹೋಗಿ ಕೇಳಿದನು, "ಗುರುಗಳೇ ನಾನು ಆಧ್ಯಾತ್ಮಿಕ ದಾರಿಗೆ ಯೋಗ್ಯನಾಗಿದ್ದೇನಾ ? ಈ ದಾರಿಯಲ್ಲಿ ಬಹಳ ಅಡಚಣೆಗಳು ಇವೆ ಎಂದು ನನಗೆ ಅನಿಸುತ್ತದೆ."

ಗುರುಗಳ ಉತ್ತರ : "ನೀನು ಉಪಯೋಗಿಸಿರುವ ಈ 'ಅಡಚಣೆ' ಪದ ಮಾತ್ರ ಒಂದು ಅಡಚಣೆಯಾಗಿರುವುದು. ಬೇರೆ ಏನೂ ಇಲ್ಲ."

ಆಧ್ಯಾತ್ಮಿಕ ಜೀವಕ್ಕೆ ಈ ಅಡಚಣೆ ಪದ ಒಂದೇ ಅಡಚಣೆಯಾಗಿರುವುದು - ಏಕೆಂದರೆ ಎಲ್ಲಾ ಜೀವಿಗಳಲ್ಲಿಯೂ ದೈವತ್ವದ ಯೋಗ್ಯತೆ ಇರುವುದು. ಮಾನವನ ಒಳಗೆ ಈ ದೈವತ್ವದ ಯೋಗ್ಯತೆ ಇರುವಾಗ ಅವನಿಗೆ ಬೇರೆ ಯಾವ ಯೋಗ್ಯತೆಯ ಅವಶ್ಯಕತೆ ಇದೆ? ಆಧ್ಯಾತ್ಮ ದಾರಿಗೆ ಬರಲು ಯೋಗ್ಯತೆಯ ಅವಶ್ಯಕತೆ ಇದ್ದರೆ ಅದರ ಉದ್ದೇಶವೇ ಕಳೆದುಹೋಗುವುದು.

ಒಬ್ಬರು ನನ್ನಲ್ಲಿ ಬಂದು ಕೇಳಿದರು ಸ್ವಾಮೀಜಿ, "ನಾನು ಎಂದಿಗೂ ಆಯಮದ ಮತ್ತು ನಿಯಮದ ಸಾಧನೆಯನ್ನು ಮಾಡಿಲ್ಲ." ಪತಂಜಲಿ ಯೋಗ ಸೂತ್ರದಲ್ಲಿ ಮೊದಲನೆಯದು ಆಯಮ. ಆಯಮವೆಂದರೆ ಬ್ರಹ್ಮಚರ್ಯ, ಅಹಿಂಸೆ, ಸತ್ಯ, ಆಪ್ತಿಕರ, ಅಸ್ತೇಯ - ಇವುಗಳ ಸಾಧನೆ - "ಈ ಸಾಧನೆಗಳನ್ನು ಮಾಡಿದರೆ ತಾನೇ ನಾನು ಯೋಗಕ್ಕೆ ಯೋಗ್ಯನಾಗುವುದು ?"

ಇನ್ನೊಬ್ಬರು ನನ್ನಲ್ಲಿ ಬಂದು ಹೇಳಿದರು. "ಸ್ವಾಮೀಜಿ ಈ ಐದು ಸಾಧನೆಗಳನ್ನು ನಾನು ಮಾಡಿಲ್ಲ, ನಾನು ಹೇಗೆ ಯೋಗದ ಅಭ್ಯಾಸವನ್ನು ಮಾಡಲಿ?"

"ನೀವು ಈ ಐದು ಸಾಧನೆಗಳನ್ನು ಮಾಡಿದ್ದರೆ ನಿಮಗೆ ಯೋಗದ ಅವಶ್ಯತೆಯೇ ಇಲ್ಲ!" ಎಂದು ನಾನು ಹೇಳಿದೆ.

ಪ್ರಬುದ್ಧತೆ ಮತ್ತು ಧ್ಯಾನ ಒಂದಕ್ಕೊಂದು ಸಮರ್ಥನೆ ಕೊಡುವವು. ಪ್ರಬುದ್ಧತೆಯು ನಿಮಗೆ ಚೈತನ್ಯವನ್ನು ಕೊಡುತ್ತದೆ, ಚೈತನ್ಯವು ನಿಮ್ಮನ್ನು ಪ್ರಬುದ್ಧರಾಗಿ ಮಾಡುತ್ತದೆ. ಇವೆರಡು ಇದ್ದರೆ ಸಾಕು, ನೀವು ಯಾವ ಸ್ತರದಲ್ಲಿದ್ದೀರೋ ಅಲ್ಲಿಂದಲೇ ಶುರು ಮಾಡಿ, ಚಕ್ರಗತಿಯು ಉಂಟಾಗುವುದು ಮತ್ತು ನೀವು ಆನಂದದ ಅನುಭವವನ್ನು ಪಡೆಯುವಿರಿ. ...

... ಐ ಥಿಂಕ್ ದೇರ್‌ಫೋರ್ ಐ ಆಮ್ (I think, therefore I am) ಅಥವಾ 'ನಾನು ಅಂದುಕೊಂಡಿದ್ದೇನೆ ಆದ್ದರಿಂದ ಇದ್ದೇನೆ' ಇದು ನಿಜವೇ?

ಇದು ನಾನು ಈ ಪ್ರಪಂಚದಲ್ಲಿ ಇರುವೆನಾ ಅಥವಾ ಪ್ರಪಂಚವು ನನ್ನಲ್ಲಿ ಇದೆಯೋ ಪ್ರಶ್ನೆಯನ್ನು ತಿರುಗಿಸಿ ಕೇಳಿರುವುದು. ಅಷ್ಟೆ.

ಎರಡೂ ಅಲ್ಲ! ನೀವು ಯೋಚಿಸುವುದೂ ಇಲ್ಲ ಮತ್ತು ನೀವು ಇಲ್ಲ!

ನೀವು ಯೋಚಿಸಿದರೆ ನೀವು ಇರಬೇಕು ಅಲ್ಲವೇ? ಆದರೆ ನಿಮ್ಮ ಇರುವಿಕೆ ಇದ್ದರೆ ನೀವು

ಯೋಚಿಸಲಾರಿರಿ - ನೀವು ಇದ್ದರೆ ನೀವು ಯೋಚಿಸಲಾರಿರಿ. ನೀವು ಯೋಚಿಸಿದರೆ ನೀವು ಇರಬೇಕು

  • ನೀವು ಇದ್ದರೆ ನೀವು ಯೋಚಿಸಲಾರಿರಿ.

ನೀವು ಇದ್ದರೆ ನೀವು ಯೋಚಿಸಲಾರಿರಿ - ಏಕೆಂದರೆ ಇರುವಿಕೆ ಎಂದರೆ ಕೇವಲ ಇರುವ ಪ್ರಾಜ್ಞತೆ. ಸಂಪೂರ್ಣ ಪ್ರಾಜ್ಞತೆಯು ಕೇವಲ ಅನುಭವಿಸಬಲ್ಲದು, ಗ್ರಹಿಸಬಲ್ಲದು, ಯೋಚಿಸಲಾರದು, ವಾಸ್ತವವಾಗಿ ಇದು ಬಹಳ ತೊಡಕಾದ ಪ್ರಶ್ನೆ ಇದು ಅದೇ ಹಳೆಯ ಪ್ರಶ್ನೆ 'ನಾವು ಈ ಪ್ರಪಂಚದಲ್ಲಿದ್ದೇವೋ, ಪ್ರಪಂಚವು ನಮ್ಮೊಳಗೆ ಇದೆಯೋ' ನಾವು ಮೊದಲು ಇದ್ದು ಯೋಚಿಸುತ್ತೇವೋ ಅಥವಾ ಯೋಚಿಸಿ ಇರುತ್ತೇವೋ. ಆದರೆ ಇರುವುದರ ಮತ್ತು ಯೋಚಿಸುವುದರ ನಡುವೆ ಸೀಮೆ ಇಲ್ಲ. ನೀವು ಏಕೆ ಒಂದು ಸೀಮೆಯ ಮೇಲೆ ನಿಂತು ಅದೊಂದು, ಇದೊಂದು, ಅದು ಬೇರೆ, ಇದು ಬೇರೆ ಎಂದು ವಿಂಗಡನೆಯನ್ನು ಮಾಡುತ್ತೀರಾ ? ನೀವು ಏಕೆ ಗಂಗಾ ನದಿಯ ಎಡಭಾಗ ಅಥವಾ ಬಲಭಾಗದಲ್ಲಿ ಸ್ನಾನ ಮಾಡಲು ಇಚ್ಛಿಸುವಿರಿ ? ನೀವು ಕೇವಲ ಗಂಗಾ ನದಿಯಲ್ಲಿರುವಿರಿ. ಗಂಗಾ ನದಿ ಒಂದೇ ಇರುವುದು. ಹೇಗೆ ನಿಮಗೆ ಯೋಚಿಸುವುದು, ಇರುವುದು ಒಂದೇ ಅಂತ ಗೊತ್ತಾದ ಹಾಗೆ ನಿಮಗೆ ಇವೆರಡರ ಮಧ್ಯೆ ಪರಿಮಿತಿ ಇಲ್ಲ ಅಂತ ಕಾಣುವಿರಿ. ಇವತ್ತು ಕಾರಿನಲ್ಲಿ ಒಬ್ಬರು ನನ್ನನ್ನು ಈ ಪ್ರಪಂಚದಲ್ಲಿ ಪದಾರ್ಥ ಮತ್ತು ಚೈತನ್ಯ ಎರಡೂ ಇರುವುದೇ ಎಂದು ಕೇಳಿದರು. ನಾನು ಈ ಪ್ರಪಂಚದಲ್ಲಿ ಕೇವಲ ಚೈತನ್ಯ ಇದೆ, ಪದಾರ್ಥ ಇಲ್ಲ ಎಂದು ಉತ್ತರಿಸಿದೆ ಮತ್ತು ಚೈತನ್ಯ ಮಾತ್ರ ಇರಬೇಕಾದರೆ ಈ ಚೈತನ್ಯ ಪದವನ್ನು ಹೇಗೆ ಉಪಯೋಗಿಸಬಲ್ಲೆವು ? ಪದಾರ್ಥ ಅಂತ ಇದ್ದರೆ ತಾನೇ ಚೈತನ್ಯ ಬೇರೆ, ಪದಾರ್ಥ ಬೇರೆ ಎಂದು ಎರಡು ವಿವಿಧ ಪದಗಳನ್ನು ಬಳಸಬಹುದು. ಒಂದೇ ಇದ್ದರೆ ಅದನ್ನು ಹೇಗೆ ಪದಾರ್ಥ ಅಥವಾ ಚೈತನ್ಯ ಎಂದು ಕರೆಯಬಲ್ಲೆವು. ಹೀಗೆ 'ಯೋಚಿಸುವುದು ಮತ್ತು ಇರುವುದು' ಇವೆರಡು ಬೇರೆ ಬೇರೆ ವಿಧವಾದದ್ದು ಅಲ್ಲ, 'ಇರುವುದು, ಯೋಚಿಸುವುದು ಒಂದೇ' ಆದರೆ ನೀವು ಅವುಗಳನ್ನು ಬೇರೆ ಮಾಡಿ ಅವುಗಳ ನಡುವೆ ಪರಿಮಿತಿಯನ್ನು ಮಾಡುವಿರಿ - ಏಕೆಂದರೆ ಪರಿಮಿತಿ ಮಾಡಿದರೆ ತಾನೆ ನಿಮಗೆ ಹಿತವಾಗಿರುವುದು.

ಎಲ್ಲಾ ತತ್ತ್ವಗಳನ್ನು ಬೇರೆ ಬೇರೆ ಭಾಗ ಮಾಡಿ, ಚೂರು ಚೂರು ಮಾಡಿ, ಬೇರೆ ಬೇರೆ ಹೆಸರುಗಳನ್ನು ಕೊಟ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ತರ್ಕಶಾಸ್ತ್ರದ ಒಂದು ಗುಣ. ಎಲ್ಲವನ್ನು ಹೆಚ್ಚು ಹೆಚ್ಚಾಗಿ ತರ್ಕಶಾಸ್ತ್ರನುಸಾರ ಮತ್ತು ಬೌದ್ಧಿಕವಾಗಿ ಮಾಡಿ ಅರ್ಥ ಮಾಡಿಕೊಳ್ಳುವಿರಿ. ಅದಕ್ಕೆ ನಿಮ್ಮ ಅನುಕೂಲಕ್ಕೋಸ್ಕರ ಎಡಗಡೆಯ ಗಂಗಾ ಮತ್ತು ಬಲಗಡೆಯ ಗಂಗಾ ಅಂತ ಹೇಳಬಹುದು. ಆದರೆ ವಾಸ್ತವವಾಗಿ ಎರಡೂ ಗಂಗೆಗಳು ಇಲ್ಲ! ಹೀಗೆ ಎಡಗಡೆಯ ಗಂಗಾ ಮತ್ತು ಬಲಗಡೆಯ ಗಂಗಾ ಎಂದು ನಮ್ಮ ಅನುಕೂಲಕ್ಕೋಸ್ಕರ ಹೆಸರಿಟ್ಟಿದ್ದೇವೆ. ಕೇವಲ ಅವುಗಳ ಪರಸ್ಪರ ಸಂಬಂಧದಲ್ಲಿ ಮಾತ್ರ ಎಡಗಡೆ ಗಂಗಾ ಮತ್ತು ಬಲಗಡೆ ಗಂಗಾ ಇರುವುವು. ಇರುವಿಕೆಯ ಸತ್ಯದಲ್ಲಿ ಗಂಗಾ ಒಂದೇ. ಇದೇ ರೀತಿಯಲ್ಲಿ ನೀವು ಇರುವುದು ಮತ್ತು ಯೋಚಿಸುವುದು ಎರಡನ್ನೂ ಬೇರೆ ಮಾಡಿ ಹೆಸರಿಟ್ಟುಕೊಳ್ಳುವುದರಿಂದ ಅವುಗಳ ಪರಸ್ಪರ ಸಂಬಂಧದಲ್ಲಿ ಮಾತ್ರ ಎರಡು ಬೇರೆ ಬೇರೆ ಆಗಿರುವುವು. ಆದರೆ ಇರುವಿಕೆಯ ಸತ್ಯದಲ್ಲಿ ನೀವು ಬದುಕಿದ್ದೀರಾ, ಅಷ್ಟೆ. ಬದುಕು ಎನ್ನುವ ಪದ ಮಾತ್ರ ಇರುವುದು. ಇರುವುದು ಮತ್ತು ಯೋಚಿಸುವುದು. ಇವೆರಡರ ನಡುವೆ ಪರಿಮಿತಿಯೇ ಇಲ್ಲ. ನೀವು ಈ ಪರಿಮಿತಿಯವರೆಗೆ ಇರುವಿರಿ ಮತ್ತು ಅದನ್ನು ದಾಟಿದ ಮೇಲೆ ನೀವು ಯೋಚಿಸುವಿರಿ ಎಂದು ಹೇಳಬಲ್ಲಿರಾ ? ಇವೆರಡು ಬೇರೆ ಬೇರೆ ಅಲ್ಲವೇ ಅಲ್ಲ. ಶಿವ ಮತ್ತು ಶಕ್ತಿ ಎಂಬುವುದು ಇಲ್ಲ. ಒಂದೇ ಇರುವುದು - ಶುದ್ಧ ಶಕ್ತಿ ಅಥವಾ ಕೇವಲ ಶಕ್ತಿ. ಒಂದೇ ಇರಬೇಕಾದರೆ ಶಕ್ತಿ ಪದವನ್ನು ಕೂಡ ಉಪಯೋಗಿಸಲಾರದು. ನೀವು ಯೋಚಿಸುತ್ತಿರುವುದರಿಂದ ಇರುವಿರೋ ಅಥವಾ ನೀವು ಇರುವುದರಿಂದ ಯೋಚಿಸುತ್ತಿರುವಿರೋ ಅಂತ ಚಿಂತೆ ಮಾಡುತ್ತಾ ಇರುವ ತನಕ ನಿಮ್ಮ ಮನಸ್ಸಿನಲ್ಲಿ ಬಹಳ ಗೊಂದಲವಿರುವುದು. ಇವುಗಳ ಕೇವಲ ಪದಗಳ ಒಂದು ಆಟ - ಅಷ್ಟೆ.

ನೀವು ಒಂದು ಆಟದ ವಿಮಾನದಲ್ಲಿ ಹಾರಿದರೆ ಎಲ್ಲಿ ಬೀಳುವಿರಿ ಗೊತ್ತಲ್ಲವೆ? ಹೀಗೆ, ಪದಗಳ ಜೊತೆಗೆ ಆಡಿದರೂ, ಆಟಕ್ಕೆ ಮಾತ್ರ ಚೆನ್ನಾಗಿರುವುದು. ಆದರೆ ಅವುಗಳಿಗೆ ಬೇಡವಾದ ಪ್ರಾಮುಖ್ಯತೆ ಕೊಟ್ಟರೆ, ನಿಮಗೆ ಯಾವ ಉತ್ತರವೂ ಸಿಗುವುದಿಲ್ಲ...

• • • ಪ್ರಿಯ ಸ್ವಾಮೀಜಿ, ಅಧ್ಯಾತ್ಮದ ಹೆಸರಿನಲ್ಲಿ ಪ್ರಪಂಚದಲ್ಲಿ ಏಕೆ ಇಷ್ಟೊಂದು ಆವೇಶ ಇರುವುದು?

ಜಗಳ ಮತ್ತು ಆವೇಶಕ್ಕೆ ಅಧ್ಯಾತ್ಮವು ಕಾರಣವಲ್ಲ - ಇವುಗಳಿಗೆ ಧರ್ಮವು ಕಾರಣವಾಗಿರುವುದು. ಅಧ್ಯಾತ್ಮವು ಎಲ್ಲೆಲ್ಲಿ ಜೀವಂತವಾಗಿದೆಯೋ ಅಲ್ಲಿ ಜಗಳ, ಆವೇಶ ಇಲ್ಲ. ಇದರ ಬದಲು ಪದ್ಧತಿಗಳ, ಅನುಷ್ಠಾನದ ಪ್ರಾಮುಖ್ಯತೆ ಹೆಚ್ಚಾಗಿ ಇದ್ದರೆ, ಆವೇಶವು ಉಂಟಾಗುವುದು. ಉದಾಹರಣೆಗೆ, ನೀವು ಗೀತೆಗೆ ಪ್ರಾಮುಖ್ಯತೆ ಕೊಟ್ಟರೆ ಏನೂ ಸಮಸ್ಯೆ ಇಲ್ಲ. ಆದರೆ ಕೇವಲ ಕೃಷ್ಣನಿಗೆ ಮಾತ್ರ ಪ್ರಾಮುಖ್ಯತೆ ಕೊಟ್ಟರೆ ಸಮಸ್ಯೆ ಉಂಟಾಗುವುದು. ಗೀತಾ ಅರ್ಥ ಮಾಡಿಕೊಳ್ಳುವುದಕ್ಕೆ ಕೃಷ್ಣನ ಪ್ರಾಮುಖ್ಯತೆ ಖಂಡಿತ ಬೇಕಾಗುವುದು. ಕೃಷ್ಣನಲ್ಲಿ ಭಕ್ತಿ ಇದ್ದರೆ ಏನೂ ತಪ್ಪಿಲ್ಲ. ಆದರೆ ಕೃಷ್ಣನನ್ನು ಹಿಡಿದು ಅವನ ಉಪದೇಶವನ್ನು ತಿಳಿದುಕೊಳ್ಳದಿದ್ದರೆ ಪ್ರಯೋಜನವಿಲ್ಲ. ಕೃಷ್ಣನಿಂದ ಶುರು ಮಾಡುವುದು ಉಚಿತ. ಆದರೆ ಅಲ್ಲಿಗೇ ನಿಂತು ಹೋಗುವುದು ಅನುಚಿತ. ಚರ್ಚಿನಲ್ಲಿ ಹುಟ್ಟುವುದು ಉಚಿತ ಆದರೆ ಅಲ್ಲೇ ಸಾಯುವುದು ಅನುಚಿತ,

ವ್ಯಕ್ತಿತ್ವದ ಮೋಹವನ್ನು ಮೀರಿ ಮುಂದಕ್ಕೆ ಹೋಗದಿದ್ದರೆ ನಮ್ಮ ಆಧ್ಯಾತ್ಮಿಕ ಪ್ರಗತಿಯು ಆಗುವುದಿಲ್ಲ ಮತ್ತು ಸಮಾಜದಲ್ಲಿ ಸಂಘರ್ಷ, ಪ್ರತಿದ್ವಂದ್ವ, ಆವೇಶ ಇವೆಲ್ಲ ಉಂಟಾಗುವುದು, ಶಾಂತಿಯ ಭಂಗವಾಗುವುದು. ಧರ್ಮದಿಂದ ಶುರು ಮಾಡಿ, ಆದರೆ ಅದನ್ನು ಮೀರಿ ಮುಂದಕ್ಕೆ ಹೋಗಿ. ನಿಮಗೆ ಅಯೋಧ್ಯ ಪದದ ಅರ್ಥವೂ ಗೊತ್ತೇ ? ಈ ಪದವು ಆಯೋಧಿ ಪದದಿಂದ ಉದ್ಭವವಾಗಿರುವುದು. ಇದರ ಅರ್ಥ ಯುದ್ಧವಿಲ್ಲದೇ ಇರುವುದು ರಾಮನು ಆಯೋಧ್ಯವನ್ನು ಒಂದು ಶಾಂತ, ಆನಂದವಾದ, ನೈಸರ್ಗಿಕ ರಾಜ್ಯವಾಗಿ ಕಲ್ಪಿಸಿರಬೇಕು. ಈ ಕಾರಣವೇ ರಾಮನು ಈ ರಾಜ್ಯವನ್ನು ಆಯೋಧಿ ಎಂದು ಕರೆದನು - ಯುದ್ಧವನ್ನು ಸಂಘರ್ಷವನ್ನು ಮೀರಿ ಮುಂದೆ ಇರುವ ಒಂದು ರಾಜ್ಯ ! ಇಲ್ಲೂ ನಾವು ರಾಮನನ್ನು ಮಾತ್ರ ಹಿಡಿದು ಅವನ ದೃಷ್ಟಿಯನ್ನು ಅವನ ಉಪದೇಶವನ್ನು ಬಿಟ್ಟುಬಿಡುತ್ತೇವೆ. ಹೀಗೆ ಏಸು ಕ್ರಿಸ್ತನನ್ನು ಹಿಡಿದು ಬೈಬಲನ್ನು ಬಿಟ್ಟು ಬಿಟ್ಟರೆ ಸಮಸ್ಯೆ ಉಂಟಾಗುವುದು.

ಒಂದು ಸುಂದರವಾದ ಸಣ್ಣ ಕಥೆ : ಬನಾರಸ್ ಪಟ್ಟಣದಲ್ಲಿ ಒಬ್ಬ ರಾಮ ಭಕ್ತನು ಗಂಗಾ ತೀರದಲ್ಲಿ ವಾಸ ಮಾಡುತ್ತಿದ್ದನು. ಪ್ರತಿದಿನ ಬೆಳಗ್ಗೆ ಈ ಸಂತನು ತುಳಸಿ ರಾಮಾಯಣ ಪುಸ್ತಕದಿಂದ ರಾಮಾಯಣವನ್ನು ದೇವರನ್ನು ಕಾಣುವುದಕ್ಕೆ ಪಠಿಸುತ್ತಿದ್ದನು. ಇಡೀ ದಿವಸ ಅವನು ತುಳಸಿ ರಾಮಾಯಣವನ್ನು ಹಾಡಿ ರಾಮ ನಾಮ ಪಠಣದಲ್ಲಿ ಆನಂದಿಸುತ್ತಿದ್ದನು. ಅವನು ಸಂತೋಷದ, ಆನಂದದ, ಜ್ಞಾನಿಯ ಜೀವನವನ್ನು ಜೀವಿಸುತ್ತಿದ್ದನು ಮತ್ತು ಅಲ್ಲಿಯ ಜನರು ಅವನ ಆಶೀರ್ವಾದ ಪಡೆಯಲು ಅವನ ಬಳಿ ಬರುತ್ತಿದ್ದರು.

ಒಂದು ದಿನ ಒಬ್ಬ ಭಿಕ್ಷುಕನು ಅವನ ಬಳಿಗೆ ಬಂದು ಕೇಳಿದನು. 'ಸ್ವಾಮಿ, ನಾನು ಮೂರು ದಿನದಿಂದ ಏನೂ ತಿಂದಿಲ್ಲ. ದಯವಿಟ್ಟು ನನಗೆ ತಿನ್ನಲು ಏನಾದರೂ ಕೊಡಿ.' ಇದು ಕೇಳಿ ಸಂತನ ಮನಸ್ಸಿನಲ್ಲಿ ಸಹಾನುಭೂತಿ ಉಂಟಾಯಿತು. ಕೇವಲ ಸಹಾನುಭೂತಿಯು ಅಲ್ಲ - ಅವನು ಭಿಕ್ಷುಕನ ದುಃಖವನ್ನು ಸಂಪೂರ್ಣವಾಗಿ ಭಾವಿಸಿದನು. ಸಾಮಾನ್ಯ ಜನಗಳಲ್ಲಿ ಕೇವಲ ಸಹಾನುಭೂತಿಯೂ ಉಂಟಾಗುವುದು ಆದರೆ ಅವನು ಜ್ಞಾನಿ ಆದ್ದರಿಂದ ಅವನ ಮನಸ್ಸಿನಲ್ಲಿ ಅನುಭೂತಿಯೂ ಉಂಟಾಯಿತು. - ಬೇರೆಯವರ ಭಾವನೆಯನ್ನು ಜ್ಞಾನಿಗಳು ಸಂಪೂರ್ಣವಾಗಿ ಭಾವಿಸಬಲ್ಲರು - ಅವರ ಈ ಪ್ರತಿಕ್ರಿಯೆಯು ದುಃಖಿಸುತ್ತಿರುವವರನ್ನು ಒಂದು ಎತ್ತರದ ಸ್ತರಕ್ಕೆ ಏರಿಸುವುದು. ಸಾಮಾನ್ಯ ಜನರು ಬೇರೆಯವರ ದುಃಖದಲ್ಲಿ ಪಾಲುಗೊಂಡು ಅವರೂ ಅವರ ತಗ್ಗಾದ ಸ್ಥಿತಿಗೆ ಬಿದ್ದು ಹೋಗುವರು. ಆದರೆ ಜ್ಞಾನಿಗಳು ತಗ್ಗಾದ ಸ್ತರಕ್ಕೆ ಬೀಳದೆ ದುಃಖಿಸುತ್ತಿರುವವರನ್ನು ಅವರ ಪ್ರೀತಿಯಿಂದ ಒಂದು ಮೇಲಿನ ಸ್ತರಕ್ಕೆ ಏರಿಸುವರು.

ರಾಮನ ಉಪದೇಶ ಅಥವಾ ತತ್ತ್ವ ಏನು? ದಾನಮಾಡುವುದಲ್ಲವೆ ಅಂತಿಮ ತ್ಯಾಗ?

ಒಬ್ಬರು ಮೂರು ದಿನದಿಂದ ಊಟ ಮಾಡದೆ ಇರುವುದನ್ನು ಕಂಡು ಸಂತನಿಗೆ ತಡೆಯುವುದಕ್ಕೆ ಆಗಲಿಲ್ಲ. ಆದರೆ ಅವನ ಹತ್ತಿರ ತುಳಸಿ ರಾಮಾಯಣದ ಪುಸ್ತಕವನ್ನು ಬಿಟ್ಟು ಭಿಕ್ಷುಕನಿಗೆ ಕೊಡುವುದಕ್ಕೆ ಬೇರೆ ಏನೂ ಇರಲಿಲ್ಲ. ಅದಕ್ಕೆ 'ದಯವಿಟ್ಟು ಈ ಪುಸ್ತಕವನ್ನು ತೆಗೆದುಕೊಂಡು ಪೇಟೆಯಲ್ಲಿ ಮಾರಿಬಿಟ್ಟು ಆ ದುಡ್ಡಿನಿಂದ ತಿನ್ನಲು ಏನಾದರೂ ಕೊಂಡುಕೋ' ಎಂದು ಭಿಕ್ಷುಕನಿಗೆ ಹೇಳಿ ಅವನಿಗೆ ಅವನ ಬಹು ಅಮೂಲ್ಯವಾದ ಪುಸ್ತಕವನ್ನು ಕೊಟ್ಟು ಬಿಟ್ಟನು.

ಭಿಕ್ಷುಕನು ಹೊರಟ ಮೇಲೆ ಸಂತನು ರಾಮನನ್ನು ಪ್ರಾರ್ಥಿಸಿದನು. 'ಓ ರಾಮನೇ, ನಿನ್ನ ಉಪದೇಶವನ್ನು ಪಾಲಿಸುವುದಕ್ಕೆ ನಿನ್ನ ಉಪದೇಶವನ್ನು ಕೊಟ್ಟುಬಿಟ್ಟೆ, ನಿನ್ನ ಉಪದೇಶವನ್ನು ಪಾಲಿಸಲು ನಿನ್ನ ಉಪದೇಶವನ್ನು ಕೊಟ್ಟು ಬಿಟ್ಟೆ.' ಹೀಗೆ ಉಪದೇಶವನ್ನು ಪಾಲಿಸಲು ಉಪದೇಶವನ್ನು ಕೊಟ್ಟು ಬಿಟ್ಟರೆ ಯಾವ ಸಂಘರ್ಷವೂ ಆಗುವುದಿಲ್ಲ. ಉಪದೇಶದ ಸಾರವನ್ನು, ಅರ್ಥವನ್ನು ಹಿಡಿದು ಪಾಲಿಸಿದರೆ (ಉಪದೇಶದ ಪದಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಬದಲು) ನೀವು ಶಾಂತಿ, ಆನಂದ ಮತ್ತು ಒಳಗಿನ ಸ್ವರಮೇಳವನ್ನು ಅನುಭವಿಸುವಿರಿ. ಆವೇಶವನ್ನು ಸಂಘರ್ಷವನ್ನು ನಿವಾರಿಸಲು ಇದು ಒಂದೇ ದಾರಿ. ನೀವು ರೀತಿ, ಪದ್ಧತಿ, ಅನುಷ್ಠಾನ ಮತ್ತು ಭೋದಕರ ಸ್ವರೂಪಕ್ಕೆ ಪ್ರಾಮುಖ್ಯತೆ ಕೊಡುವ ಬದಲು ನಿಮ್ಮ ಚೈತನ್ಯವನ್ನು ನಿಮ್ಮ ಜೀವನವನ್ನು ಅರ್ಥಮಾಡಿಕೊಂಡು ಮುಂದಕ್ಕೆ ಹೋಗಲು ಉಪಯೋಗಿಸಿದರೆ ಅದು ಇನ್ನೂ ಉತ್ತಮ. ...

... ಪ್ರಿಯ ಸ್ವಾಮೀಜಿ, ಚಕ್ರಗಳ ಮತ್ತು ಮಂತ್ರಗಳ ಬಗ್ಗೆ ಸ್ವಲ್ಪ ವಿವರಿಸುವಿರಾ ?

ನೀವು ಎರಡು ವಿಷಯಗಳ ಬಗ್ಗೆ ಕೇಳಿದ್ದೀರಾ – ಚಕ್ರಗಳು ಮತ್ತು ಮಂತ್ರಗಳು.

ಮೊದಲು ಚಕ್ರಗಳ ಬಗ್ಗೆ ನಾನು ವಿವರಿಸುವೆನು. ಏಳು ಚಕ್ರಗಳು ನಿಮ್ಮ ಅಂತರಂಗದೊಳಗಿರುವ ಸೂಕ್ಷ್ಮ ಚೈತನ್ಯ (ಎನರ್ಜಿಯ) ಕೇಂದ್ರಗಳು. ಅವುಗಳಿಗೆ ಒಂದು ಭೌತಿಕ ಬದುಕು ಇಲ್ಲ .ಅವುಗಳನ್ನು ಸಚೇತನಗೊಳಿಸಿದರೆ ಮನುಷ್ಯನ ಕಾಯಿಲೆಗಳನ್ನು ಪರಿಹರಿಸಬಹುದು. ಈ ಏಳು ಎನರ್ಜಿ ಕೇಂದ್ರಗಳು ನಿಮ್ಮ ಎಲ್ಲಾ ಶಾರೀರಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಪಾಲಿಸುವವು.

ಉದಾಹರಣೆಗೆ ನಿಮ್ಮ ಹೊಟ್ಟೆಯಲ್ಲಿ ತೊಂದರೆ ಇದ್ದರೆ, ನೀವು ಒಳ್ಳೆ ಸುದ್ದಿಯನ್ನು ಕೇಳಿದಾಗಲೂ ನೀವು ಉಲ್ಲಾಸಗೊಳ್ಳಲಾರಿರಿ. ನಿಮ್ಮ ಹೊಟ್ಟೆಯು ಆರಾಮವಾಗಿದ್ದರೆ, ನಿಮ್ಮ ಒಳಗೆ ನೀವು ಹಗುರವಾಗಿದ್ದರೆ ಅಸಮರ್ಪಕ ಸುದ್ದಿ ಅಥವಾ ತಪ್ಪುಗಳನ್ನೂ ನಿಶ್ಚಿಂತ ಭಾವನೆಯಿಂದ ಸ್ವೀಕರಿಸುವಿರಿ. ನೀವು ಬೇಗ, ತಪ್ಪು ಮಾಡಿದ್ದವರನ್ನು ಕ್ಷಮಿಸುವಿರಿ. ಈ ಚಕ್ರಗಳು ನಿಮ್ಮ ಶಾರೀರಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಮುಖ್ಯವಾದ ಪಾತ್ರ ವಹಿಸುವವು. ಅವುಗಳು ತಲ್ಲಣಗೊಂಡಿದ್ದರೆ, ನಿಮ್ಮ ಅಂತರಂಗದಲ್ಲಿ ಅವು ನೆಮ್ಮದಿಯಿಂದಿಲ್ಲದಿದ್ದರೆ (dis-ease) ನಿಮಗೆ ಕಾಯಿಲೆ (disease) ಉಂಟಾಗುವುದು. ಯಾವುದಾದರೂ ಉತ್ತಮವಾದ ಕೌಶಲ್ಯದಿಂದ ಚಕ್ರಗಳನ್ನು ಚೇತನಗೊಳಿಸಿದರೆ, ನೀವು ಕಾಯಿಲೆಯಿಂದ ಪರಿಹಾರ ಪಡೆಯುವುದಲ್ಲದೆ ಒಂದು ನಿಜವಾದ ಕ್ಷೇಮದ ರುಚಿಯ ಅನುಭವವನ್ನು ಕಾಣುವಿರಿ.

ನಮ್ಮ ದೇಹಕ್ಕೆ ಯಾವ ಕಾಯಿಲೆಯೂ ಇಲ್ಲದಿದ್ದರೂ ಕ್ಷೇಮವನ್ನು (well-being, positive good health) ಬಹಳ ಅಪರೂಪವಾಗಿ ಅನುಭವಿಸುವವು. ನಿಮ್ಮ ಯೋಗಕ್ಷೇಮವನ್ನು ಯಾವ ತಕ್ಕಡಿಯಿಂದ ಮಾಪನ ಮಾಡಬಲ್ಲಿರಿ? ಈ ಪ್ರಯೋಗವನ್ನು ಮಾಡಿ : ನೀವು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಹಾಸಿಗೆಯಿಂದ ಬಾತ್‌ರೂಮಿಗೆ ಹೋಗುವಾಗ ನಿಮ್ಮ ಹೆಜ್ಜೆಗಳನ್ನು ಗಮನಿಸಿ. ಅವುಗಳು ಕೇವಲ ಮಾಮೂಲಿ ಹೆಜ್ಜೆಗಳು ಅಲ್ಲದೆ ಹೊರತು ನೃತ್ಯ ಮಾಡುವ ರೀತಿಯಲ್ಲಿದ್ದರೆ ನೀವು ಆರೋಗ್ಯವಾಗಿರುವಿರಿ. ನೀವು ನಿದ್ರೆಯಿಂದ ಏಳುವ ಸಮಯ ನಿಮ್ಮ ಮನಸ್ಸು ಅಪ್ರಜ್ಞಾ ಸ್ಥಿತಿಯಿಂದ ಹೊರಗೆ ಬಂದಾಗ-ಇದೇ ನಿಮ್ಮ ಆರೋಗ್ಯದ ಪ್ರಮಾಣ ಮಾಡುವುದಕ್ಕೆ ಸರಿಯಾದ ಸಮಯ.

ಬೆಳಿಗ್ಗೆ ನಿದ್ದೆಯಿಂದ ಎದ್ದ ಪ್ರಾಣಿಗಳನ್ನು ಗಮನಿಸಿ. ಹಕ್ಕಿಗಳು ಯಾವುದೇ ಕಾರಣವಿಲ್ಲದೇ ತಮ್ಮ ಚಿಲಿಪಿಲಿ ಧ್ವನಿಯಲ್ಲಿ ಹಾಡುವುವು. ಕರುವು ಕಟ್ಟಿದ್ದ ಹಗ್ಗದ ಸುತ್ತಲು 2-3 ಸಾರಿ ಎಗರುವುದು. ಬೆಕ್ಕು 4-5 ಸಾರಿ ಗುಂಡಗೆ ಸುತ್ತುವುದು. ಬೆಳಿಗ್ಗೆ ಎಚ್ಚರವಾದ ತಕ್ಷಣ ತಿರುಗಿಕೊಂಡು ಮತ್ತೊಮ್ಮೆ ನಿದ್ದೆ ಮಾಡುವವನು ಮಾನವ ಪ್ರಾಣಿ ಮಾತ್ರ ! ಪ್ರಕೃತಿಯಿಂದ, ವಿಶ್ವಶಕ್ತಿಯಿಂದ ಸಂಪೂರ್ಣವಾಗಿ ಹೊಂದಿಕೆಯಿಲ್ಲದಿರುವವನು ಮಾನವ ಪ್ರಾಣಿ ಮಾತ್ರ.

ಒಮ್ಮೆ ಒಬ್ಬ ಮಧ್ಯ ವಯಸ್ಸಿನ ಮನುಷ್ಯನು ಅವನ ಹೆಂಡತಿಯು ಸಾಕಿದ ಒಂದು ಬೆಕ್ಕನ್ನು ಓಡಿಸಲು ಪ್ರಯತ್ನ ಪಟ್ಟನು. ಒಂದು ದಿನ ಅವನು ಬೆಕ್ಕನ್ನು ಹಿಡಿದು 10 ಮೈಲಿ ದೂರವಿರುವ ಅಪರಿಚಿತ ಜಾಗದಲ್ಲಿ ಬಿಟ್ಟು ಬಂದನು. ಆದರೆ ಅವನು ಮನೆಗೆ ವಾಪಸು ಬಂದಾಗ ಬೆಕ್ಕು ಅಲ್ಲಿ ಅವನನ್ನು ಕಾದುಕೊಂಡು ಬಾಗಿಲ ಹತ್ತಿರ ನಿಂತಿತ್ತು.

ಮಾರನೆ ದಿವಸ ಅವನು ಬೆಕ್ಕನ್ನು 20 ಮೈಲಿ ಪಟ್ಟಣದ ಇನ್ನೊಂದು ತೀರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ಬಂದನು. ಒಂದು ಗಂಟೆ ಹೊತ್ತಾದ ಮೇಲೆ ಅವನು ಮನೆಗೆ ತಿರುಗಿ ಬಂದಾಗ ಮತ್ತೊಮ್ಮೆ ಬೆಕ್ಕು ಅವನ ಮನೆಯ ಮುಂದೆ ನಿಂತಿತ್ತು.

ಆ ಮನುಷ್ಯನಿಗೆ ರೇಗಿ ಹೋಯಿತು. ಮಾರನೆ ದಿನ ಅವನು ಕೋಪದಿಂದ ಬೆಕ್ಕನ್ನು ಒಂದು ಗೋಣಿ ಚೀಲದಲ್ಲಿ ಹಾಕಿಕೊಂಡು ಅದನ್ನು ಗೊಂದಲದಲ್ಲಿ ಹಾಕುವುದಕ್ಕೆ ಆ ಕಡೆ, ಬಲಗಡೆ, ಎಡಗಡೆ, ದಕ್ಷಿಣಕ್ಕೆ, ಪಶ್ಚಿಮಕ್ಕೆ ಪ್ರಯಾಣ ಮಾಡಿ ಕಡೆಗೆ ಒಂದು ಕಾಡಿಗೆ ಬಂದು ಬೆಕ್ಕನ್ನು ಅಲ್ಲಿ ಬಿಟ್ಟು ಬಿಟ್ಟನು. ಇದೇ ಉತ್ತಮವಾದ ಜಾಗ. ಈ ಜಾಗವು ನನಗೇ ಗೊತ್ತಿಲ್ಲ. ಖಂಡಿತ ಈ ಜಾಗದಿಂದ ಹಿಂತಿರುಗಿ ಮನೆಗೆ ಬರುವುದಕ್ಕೆ ಬೆಕ್ಕಿಗೂ ಸಾಧ್ಯವಿಲ್ಲ, ಎಂದು ಯೋಚಿಸಿ ಅಲ್ಲಿಂದ ಹೊರಟನು.

ದಾರಿಯಲ್ಲಿ ಅವನು ಹೆಂಡತಿಗೆ ಫೋನ್ ಮಾಡಿದನು., “ಬೆಕ್ಕು ಏನಾದರೂ ಮನೆಗೆ ವಾಪಸು ಬಂದಿದೆಯೇ ?”

“ಹೌದು, ಆವಾಗಲೇ ವಾಪಸು ಬಂತು” ಎಂದು ಹೆಂಡತಿ ಉತ್ತರಿಸಿದಳು.

‘ಹೇಗಾದರೂ ಮಾಡಿ ಅದನ್ನು ಇಲ್ಲಿಂದ ವಾಪಸು ಬರುವ ದಾರಿಯನ್ನು ಕೇಳಿ ನನಗೆ ತಿಳಿಸುವೆಯಾ ? ನನಗೆ ದಾರಿ ತಪ್ಪಿ ಹೋಗಿದೆ. ಅದಕ್ಕೆ ದಾರಿ ಗೊತ್ತಿರುವುದರಿಂದ ನನಗೆ ಹೇಳಬಲ್ಲದು.’

ಪ್ರಕೃತಿಯಿಂದ ಹೊಂದಿಕೆ ಕಳೆದುಕೊಂಡಿರುವವನು, ದಾರಿ ತಪ್ಪಿದ್ದವನು ಮಾನವ ಪ್ರಾಣಿ ಮಾತ್ರ !

ಹೀಗೆ ನೀವು ಪ್ರಾಣಿಗಳ ರೀತಿಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಹೆಜ್ಜೆಗಳು ನೃತ್ಯ ಮಾಡುವ ರೀತಿಯಲ್ಲಿದ್ದರೆ ನೀವು ದಾರಿ ತಪ್ಪಿಲ್ಲ ನೀವು ಯೋಗಕ್ಷೇಮದ ಜೀವನವನ್ನು ಜೀವಿಸುತ್ತಾ ಇರುವಿರಿ. ಚಕ್ರಗಳನ್ನು ಎಚ್ಚರಗೊಳಿಸಿದರೆ ನಿಮ್ಮ ಕಾಯಿಲೆಗಳ ಪರಿಹಾರ ಆಗುವುದೊಂದೇ ಅಲ್ಲ ನೀವು ಒಂದು ಸಕಾರಾತ್ಮಕ ಆರೋಗ್ಯದ ಸ್ಥಿತಿಯನ್ನು ಯೋಗಕ್ಷೇಮದ ಸ್ಥಿತಿಯನ್ನು ಹೊಂದುವಿರಿ. ನಮ್ಮಲ್ಲಿ ಹೆಚ್ಚಿನವರು ಈ ಸ್ಥಿತಿಯನ್ನು ತಲುಪಿಲ್ಲ ಇದರ ಅನುಭವ ಅವರಿಗೆ ಇಲ್ಲ - ಮತ್ತು ಹೇಗೆ ಒಬ್ಬ ಜನ್ಮದಿಂದ ಕುರುಡನಾಗಿರುವವನಿಗೆ ತಾನು ಏನು ಕಳೆದುಕೊಂಡಿದ್ದಾನೆ ಅಂತ ಗೊತ್ತಿಲ್ಲವೋ, ಅದೇ ರೀತಿಯಲ್ಲಿ ಕ್ಷೇಮವನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿರುವುದರಿಂದ ಅದನ್ನು ಮರೆತು ಬಿಟ್ಟಿದ್ದೇವೆ ಮತ್ತು ಏನು ಕಳೆದುಕೊಂಡಿದ್ದೇವೆ ಎಂದು ನಮಗೆ ಗೊತ್ತಿಲ್ಲ. ಆದರೆ ನೀವು ಈ ಚಕ್ರಗಳನ್ನು ಸಚೇತನಗೊಳಿಸಿ ಕ್ಷೇಮವನ್ನು ಪಡೆದಾಗ, ಇಷ್ಟು ದಿನ ಕಳೆದುಕೊಂಡಿರುವ ಪ್ರಾಮುಖ್ಯತೆಯು ನಿಮಗೆ ತಿಳಿಯುವುದು. ಇದೇ ಚಕ್ರಗಳ ಒಂದು ಆಧಾರಭೂತ ವಿವರಣೆ.

ಈಗ ಮಂತ್ರಗಳ ವಿಚಾರ : ಪದಗಳು ಕೇವಲ ಪದಗಳು ಅಂತ ಎಂದಿಗೂ ಅಂದುಕೊಳ್ಳಬೇಡಿ. ಇದು ಸ್ಪಷ್ಟವಾಗಿ ತಿಳಿದುಕೊಳ್ಳಿ. ಪದಗಳು ಚೈತನ್ಯದ ಮೂರ್ತರೂಪಗಳು ಆಗಿರುವವು. ಉದಾಹರಣೆಗೆ ನಾನು ಈಗ ಒಂದು ಪದ ಹಸು ಅನ್ನುತ್ತೇನೆ. ಕೂಡಲೆ ನಿಮ್ಮ ಮನಸ್ಸಿನಲ್ಲಿ ನಾಲ್ಕು ಕಾಲುಗಳಿರುವ ಎರಡು ಕೊಂಬುಗಳು, ಎರಡು ಕಿವಿಗಳು ಮತ್ತು ಬಾಲವಿರುವ ಆಕಾರವು ಬಂದಿರುವುದು. ಈ ಪದ ನಿಮ್ಮ ಕಿವಿಗೆ ಬಿದ್ದ ತಕ್ಷಣ ಈ ಆಕಾರವು ನಿಮ್ಮ ಮನಸ್ಸಿನಲ್ಲಿ ರಚನೆ ಆಗಿರುವುದು. ಈಗ ನೀವು ಯಾವುದಾದರೂ ಪದದ ಶಬ್ದವನ್ನು ಮಾಡದೇ ಅದರ ಆಕಾರವನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಲು ಪ್ರಯತ್ನಿಸಿ. ಇದು ಸಾಧ್ಯವೇ ಇಲ್ಲ. ಕೇವಲ ಶಬ್ದದಿಂದ ಮಾತ್ರ ನಿಮ್ಮ ಮನಸ್ಸಿನಲ್ಲಿ ಆಕಾರವನ್ನು ಚಿತ್ರಿಸಬಹುದು. ಈ ಮನಸ್ಸಿನಲ್ಲಿ ಚಿತ್ರಿಸುವುದೇ ಇಚ್ಛಾ ಶಕ್ತಿ ಎಂದು ಕರೆಯಲಾಗುವುದು.

ನಿಮ್ಮ ವ್ಯವಸ್ಥೆಯಲ್ಲಿ ಮೂರು ಬಗೆಯ ಚೈತನ್ಯಗಳು ಇರುವುವು. ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಮತ್ತು ಜ್ಞಾನ ಶಕ್ತಿ. ಕ್ರಿಯಾ ಶಕ್ತಿಗೆ ಮತ್ತು ಜ್ಞಾನ ಶಕ್ತಿಗೆ ಇಚ್ಛಾ ಶಕ್ತಿಯೇ ಮೂಲ ಧಾತು. ಈ ಮೂಲ ಧಾತುವಿನಿಂದ ಬಂಗಾರ ನಿರ್ಮಾಣವಾಗುವುದು. ಕ್ರಿಯಾ ಶಕ್ತಿಯ ಮತ್ತು ಜ್ಞಾನ ಶಕ್ತಿಯ ನಿರ್ಮಾಣ ಕಚ್ಚಾ ಚೈತನ್ಯವಾದ ಇಚ್ಛಾ ಶಕ್ತಿಯಿಂದಲೇ ಆಗುವುದು. ಕ್ರಿಯಾ ಶಕ್ತಿಯು 22-ಕ್ಯಾರೆಟ್ ಬಂಗಾರದ ಸಮಾನ ಮತ್ತು ಜ್ಞಾನ ಶಕ್ತಿಯು 24-ಕ್ಯಾರೆಟ್ ಬಂಗಾರದ ಸಮಾನ, 18-ಕ್ಯಾರೆಟ್ ಆಗಿದ್ದಾಗ, ಕೇವಲ ಕಚ್ಚಾ ಶಕ್ತಿ ಆಗಿದ್ದಾಗ, ಅದು ಇಚ್ಛಾ ಶಕ್ತಿ. ಕಚ್ಚಾ ವಸ್ತುವು ಇಚ್ಛಾಶಕ್ತಿ, 22 ಕ್ಯಾರೆಟ್ ಚಿನ್ನವು ಕ್ರಿಯಾ ಶಕ್ತಿ ಮತ್ತು 24 ಕ್ಯಾರೆಟ್ ಚಿನ್ನವು ಜ್ಞಾನ ಶಕ್ತಿ. ಆದರೆ ಈ ಕಚ್ಚಾ ಶಕ್ತಿಯೇ ಮೂಲ ಪದಾರ್ಥ. ಕಲ್ಪಿಸುವ ಅಥವಾ ಮನಸ್ಸಿನಲ್ಲಿ ಚಿತ್ರಿಸುವ ಯೋಗ್ಯತೆಯೇ ಕಚ್ಚಾ ಪದಾರ್ಥ. ಹೀಗೆ ಈ ಯೋಗ್ಯತೆಯೂ ಮತ್ತು ಪಠಿಸಿದ ಪದಗಳಿಗೂ ಸಮೀಪವಾದ ಸಂಬಂಧವಿದೆ.

ಕಚ್ಚಾ ಪದಾರ್ಥಕ್ಕೆ ಮಂತ್ರವನ್ನು ಸೇರಿಸುವುದು ಕಚ್ಚಾ ಧಾತು ಅಥವಾ ಮೂಲ ಧಾತುವನ್ನು ಶುದ್ಧ ಬಂಗಾರಕ್ಕೆ ಪರಿಷ್ಕಾರ ಮಾಡಿ ಶುದ್ಧಮಾಡುವುದರ ಹಾಗೆ.

ಮಂತ್ರ ಪದದ ಎರಡು ಅರ್ಥ ಆಗಬಲ್ಲದು.

ಮನ್ - ತ್ರ : ಮನ್ ಅಂದರೆ ಮಾನವಕುಲ
ತ್ರ ಎಂದರೆ ದಾರಿ ತೋರಿಸುವಂಥದ್ದು.
ಮಾನವನಿಗೆ ದಾರಿ ತೋರಿಸುವಂಥದ್ದು ಮಂತ್ರ

ಎರಡನೆಯ ಅರ್ಥ ಮನ್ ಅಂದರೆ ಮನಸ್ಸು ತ್ರ ಅಂದರೆ ದಾರಿ ತೋರಿಸುವಂಥದ್ದು ನಿಮಗೆ ಮನಸ್ಸಿನಿಂದ ಹೊರಗೆ ಬರುವ ದಾರಿಯನ್ನು ತೋರಿಸುವಂಥದ್ದು ಮಂತ್ರ.

ಹೀಗೆ ಮಾನವನನ್ನು ಮನಸ್ಸಿನ ಹೊರಗೆ ತರುವ ತಂತ್ರವೇ ಮಂತ್ರ - ಅಥವಾ ಮಾನವನನ್ನು ಪ್ರಪಂಚದಿಂದ ಹೊರಗೆ ತರುವ ತಂತ್ರವೇ ಮಂತ್ರ. ಮಂತ್ರವನ್ನು ನಿರಂತರವಾಗಿ ನಿಮ್ಮ ಅಂತರಂಗಕ್ಕೆ ಸೇರಿಸಿಕೊಳ್ಳುತ್ತಾ ಇದ್ದರೆ ಹಸಿ ಪದಾರ್ಥವನ್ನು ಸ್ವಚ್ಛ ಮಾಡಲು ಆಮ್ಲವನ್ನು ಸೇರಿಸುವ ರೀತಿಯಲ್ಲಿ ಅದು 22-ಕ್ಯಾರೆಟ್ ಬಂಗಾರ ಆಗುವುದು. ಇದಾದ ಮೇಲೆಯೇ ಈ ಪದ್ಧತಿಯನ್ನು ಮುಂದುವರಿಸಿದರೆ ಅದು 24-ಕ್ಯಾರೆಟ್ ಬಂಗಾರಕ್ಕೆ ಪರಿವರ್ತಿಸುವುದು. ಹೀಗೆ ಆಧ್ಯಾತ್ಮಿಕ ಪ್ರಾಂತ್ಯಕ್ಕೆ ಅಥವಾ ನಿಜವಾದ ಜೀವನಕ್ಕೆ ಪ್ರವೇಶಿಸಲು ಮಂತ್ರವು ಒಂದು ಪ್ರಭಾವವುಳ್ಳ ತಂತ್ರವಾಗಿರುವುದು.

ನಿಮ್ಮ ನಿತ್ಯ ಜೀವನದಲ್ಲಿಯೂ (ನೀವು ಯಾವುದನ್ನು ಜೀವನವೆಂದು ಕರೆಯುತ್ತೀರೋ) - ಮಂತ್ರಗಳ ಅವಶ್ಯಕತೆ ಇದೆ. ಮಂತ್ರಗಳು ಸಂಸ್ಕೃತದಲ್ಲಿಯೇ ಇರಬೇಕು ಎಂಬುವುದು ಅಗತ್ಯವಿಲ್ಲ. ನೀವೆಲ್ಲ ಇಂಗ್ಲಿಷ್ ಮಂತ್ರಗಳನ್ನು ಉಪಯೋಗಿಸುವಿರಿ - ನಾನು ನನ್ನ ಆಫೀಸಿನಲ್ಲಿ ಯಶಸ್ವಿಯಾಗಿರಬೇಕು, ಆ ವ್ಯಕ್ತಿಯನ್ನು ಇದಕ್ಕೆ ಒಪ್ಪಿಸಬೇಕು, ಬಿಸಿನೆಸ್‌ನಲ್ಲಿ ನನ್ನ ಪ್ರಗತಿಯಾಗಬೇಕು. ನಿಮ್ಮ ಎಚ್ಚರಿಕೆಯಿಲ್ಲದೆ ಈ ಮಂತ್ರಗಳನ್ನು ನಿರಂತರವಾಗಿ ಹೇಳಿಕೊಂಡರೆ, ಅವು ಮಂತ್ರಗಳಾಗುವವು, ಮಂತ್ರವೆಂದರೆ ಕೇವಲ ಓಂ ನಮಃ ಶಿವಾಯ, ಅಥವಾ 'ಹರಿ ಓಂ ನಮಃ ನಾರಾಯಣ' ಎಂದು ತಿಳಿದುಕೊಳ್ಳಬೇಡಿ. ಇವೆಲ್ಲ ಬಹಳ ಪುರಾತನ ಮಂತ್ರಗಳು, ಆಧುನಿಕ ಮಂತ್ರವು ನಿಮಗೆ ಬೆಳಿಗ್ಗೆ ಎದ್ದ ತಕ್ಷಣ ಬಂದ ಯೋಚನೆಯೂ ಆಗಬಹುದು. ಇವತ್ತು ಅವನ ಜೊತೆ ಮಾತನಾಡಿ ಆ ಅಕೌಂಟನ್ನು ಪಡೆಯಬೇಕು, ಇವತ್ತು ಅವಳೊಡನೆ ಮಾತಾಡಿ ಒಂದು ತೀರ್ಮಾನಕ್ಕೆ ಬರಬೇಕು, ನೀವು ಏನು ಅಂದುಕೊಳ್ಳುತ್ತೀರೋ ಅದೇ ಮಂತ್ರವಾಗಬಹುದು. ಪರಿಣಾಮವನ್ನು ಪಡೆಯುವುದಕ್ಕೆ ಮಂತ್ರ ಒಂದು ದಾರಿ. ಯಾವುದೇ ಒಂದು ಅಪೇಕ್ಷೆಯು ವಾಸ್ತವವಾಗಿರುವುದಕ್ಕೆ ಮುಂಚೆ ಅದು ಮಂತ್ರದ ರೂಪದಲ್ಲಿ ಕಾಣಿಸಿಕೊಳ್ಳುವುದು - ಆಮೇಲೆ ವಾಸ್ತವವಾಗುವುದು. ಮಂತ್ರವು ನಮ್ಮ ಪ್ರಜ್ಞೆ ಇಲ್ಲದೇ ನಮ್ಮೊಳಗೆ ಇದ್ದರೆ ನಮಗೆ ಅದರ ಪರಿಣಾಮದ ಪ್ರಜ್ಞೆಯೂ ಇರುವುದಿಲ್ಲ. ಆದರೆ ನೀವು ಸಂಪೂರ್ಣ ಪ್ರಜ್ಞೆಯಿಂದ ಮಂತ್ರವನ್ನು ಉಪಯೋಗಿಸಿದರೆ, ಪರಿಣಾಮದ ಪ್ರಜ್ಞೆಯು ನಿಮಗಿರುವುದು ಮತ್ತು ನೀವು ಆ ಪರಿಣಾಮದಿಂದ ಉಲ್ಲಾಸಗೊಳ್ಳಬಹುದು. ಪ್ರಜ್ಞೆ ಇಲ್ಲದೇ ಮಂತ್ರವು ಮನಸ್ಸಿನಲ್ಲಿದ್ದರೆ ಅದರ ಉದ್ದೇಶವು ಗೊತ್ತಾಗುವುದಿಲ್ಲ - ಮತ್ತು ಪರಿಣಾಮವು ಗೊತ್ತಾಗುವುದಿಲ್ಲ. ಎಚ್ಚರಿಕೆಯ ಪ್ರವಾಹವು ನಿಮ್ಮ ಮನಸ್ಸಿನಲ್ಲಾದರೆ, ನಿಮಗೆ ನಿಮ್ಮ ಉದ್ದೇಶವೂ ನಿಮ್ಮ ಗುರಿಯೂ, ಮಾರ್ಗವೂ ಇವೆಲ್ಲದರ ಸ್ಪಷ್ಟವಾದ ಜ್ಞಾನ ಇರುವುದು - ಮತ್ತು ನಿಮ್ಮ ಗುರಿಯನ್ನು ಉಲ್ಲಾಸದಿಂದ, ಹರುಷದಿಂದ ಸುರಕ್ಷಿತವಾಗಿ ತಲುಪುವಿರಿ. ಇದೊಂದು ಆನಂದಭರಿತ ಪ್ರಯಾಣ. ಆದರೆ ಪ್ರಜ್ಞೆ ಇದ್ದರೆ ತಾನೇ ನೀವು ಪ್ರಯಾಣ ಮಾಡುತ್ತಿರುವವಿರಿ ಎನ್ನಬಹುದು. ಮಂತ್ರದ ಪ್ರಜ್ಞೆ ಇಲ್ಲದಿದ್ದರೆ, ನಿಮಗೆ ನಿಮ್ಮ ಉದ್ದೇಶವೂ, ಗುರಿಯೂ ಏನೂ ಗೊತ್ತಿಲ್ಲದೇ ಇದ್ದರೆ, ಈ ಜೀವನದಲ್ಲಿ ಕೇವಲ ನಿಮ್ಮ ಸಾಗಣೆ ಆಗುವುದು - ನಿಮಗೆ ಕಾರನ್ನು ಹೇಗೆ ನಿಲ್ಲಿಸುವುದು, ಹೇಗೆ ಬ್ರೇಕ್ ಹಾಕುವುದು ಎಂದು ಗೊತ್ತಿದ್ದರೆ ನೀವು ಕಾರನ್ನು ಓಡಿಸುತ್ತಾ ಇರುವಿರಿ, ನಿಮಗೆ ಗೊತ್ತಿಲ್ಲದೇ ಇದ್ದರೆ, ಕಾರು ನಿಮ್ಮನ್ನು ಓಡಿಸುತ್ತಾ ಇರುವುದು !

ನಾವು ಧರ್ಮನಿಷ್ಠರಾಗಿರುವೆವೋ ಇಲ್ಲವೋ, ಪರಮಾರ್ಥಿಗಳಾಗಿರುವೆವೋ, ಭೌತವಾದಿಗಳಾಗಿರುವೆವೋ, ಇಲ್ಲವೋ ನಾವೆಲ್ಲರೂ ಮಂತ್ರಗಳನ್ನು ನಿರಂತರವಾಗಿ ಹೇಳಿಕೊಳ್ಳುತ್ತಾ ಇರುವೆವು - ಎಚ್ಚರಿಕೆಯಿಂದ ಅಥವಾ ಎಚ್ಚರಿಕೆಯಿಲ್ಲದೆ. ಎಚ್ಚರಿಕೆಯಿಂದ ಹೇಳಿಕೊಂಡರೆ ನೀವು ಕಾರನ್ನು ನಿಲ್ಲಿಸಬಲ್ಲಿರಿ ಮತ್ತು ಚಲಿಸಬಲ್ಲಿರಿ. ಮಂತ್ರ ನಿಮ್ಮನ್ನು ಪಠಿಸಲು ಬಿಟ್ಟರೆ, ಪ್ರಜ್ಞೆ ಇಲ್ಲದೇ ಮಂತ್ರ ನಿಮ್ಮೊಳಗಿದ್ದರೆ, ಕಾರು ನಿಮ್ಮನ್ನು ಓಡಿಸುವುದು. ನೀವು ಕಾರು ಓಡಿಸುತ್ತಾ ಇದ್ದರೆ ನೀವು ಎಲ್ಲಿ ಹೋಗುತ್ತಾ ಇದ್ದೀರಾ ಎಂದು ನಿಮಗೆ ಗೊತ್ತಿರುವುದು. ಕಾರು ನಿಮ್ಮನ್ನು ಓಡಿಸುತ್ತಿದ್ದರೆ ನೀವು ಎಲ್ಲಿ ತಲುಪುವಿರೋ ಅಂತ ನಿಮಗೆ ಗೊತ್ತಿರುವುದಿಲ್ಲ!...

... ಪ್ರಿಯ ಸ್ವಾಮೀಜಿ, ನಾವೆಲ್ಲರು ಇಡೀ ಅಖಂಡದ ಒಂದು ಅಂಶವೆಂದು ನೀವು ಹೇಳುವಿರಿ. ಆದರೆ ನನ್ನನ್ನು ನಾನು ಒಂದು ವಿಭಿನ್ನ (ಬೇರೆಯಾದ) ವ್ಯಕ್ತಿಯಾಗಿ ಅನುಭವಿಸುವೆನು. ಇದರ ಬಗ್ಗೆ ಸ್ವಲ್ಪ ವಿವರಿಸುವಿರಾ ?

ನೀವು ನಿಮ್ಮನ್ನು ಈ ವಿಶ್ವಶಕ್ತಿಯಿಂದ ವಿಂಗಡಿಸಿಕೊಂಡಿರುವ ಹಾಗೆ (ಬೇರೆಯಾಗಿ) ಅಂದುಕೊಂಡಿರಬಹುದು. ಆದರೆ ನಿಜವೇನೆಂದರೆ ನಿಮಗೆ ಬೇಕೋ ಬೇಡವೋ, ಇಷ್ಟವಿದೆಯೋ ಇಲ್ಲವೋ, ಅರ್ಥಮಾಡಿಕೊಂಡಿದ್ದೀರೋ, ಇಲ್ಲವೋ, ದೇವರ ಜೊತೆ ನಿಮ್ಮ ಸಂಬಂಧ ಇದೆ - ನೀವು ದೇವರ ಮಗು ಇದ್ದ ಹಾಗೆ. ಈಗ ನಿಮ್ಮ ತೊಡೆಯ ಮೇಲೆ ಚಿಕ್ಕ ಮಗುವನ್ನು ಕೂಡಿಸಿಕೊಂಡಿರುವಾಗ ಅದು ನಿಮ್ಮನ್ನು ಒದ್ದರೂ ಅಥವಾ ಹೊಡೆದರೂ ಅದನ್ನೇ ನಿಮ್ಮ ತೊಡೆಯ ಮೇಲೆ ಇಟ್ಟುಕೊಂಡಿರುವಿರಿ. ಹೀಗೆ, ನೀವು ಎಷ್ಟು ವಿರೋಧಿಸಿದರೂ, ನೀವು ದೈವತ್ವದಲ್ಲಿರುವಿರಿ. ನೀವು ನದಿಯ ಸೆಳೆತದೊಂದಿಗೆ ತೇಲುತ್ತಿರುವೋ ಅಥವಾ ಅದನ್ನು ಎದುರಿಸುತ್ತಿರುವೋ, ನೀವು ನದಿಯೊಂದಿಗೆ ಹೊಂದಿಕೊಂಡಿರುವಿರಿ, ವಿಶ್ವಪ್ರಜ್ಞೆಯೊಂದಿಗೆ ನಿಮ್ಮ ಸಂಬಂಧವು ಖಂಡಿತ ಇದೆ. ಎಲ್ಲಾ ಮನಸ್ಸುಗಳಿಗೆ ಒಂದಕ್ಕೊಂದು ಸಂಬಂಧವಿದೆ. ವಿಶ್ವಪ್ರಜ್ಞೆಯ ಚಕ್ರವನ್ನು ನೋಡಿದರೆ ಪರಿಧಿಯಲ್ಲಿ ಮಾತ್ರ ಬೇರೆ ಬೇರೆ ಬಿಂದುಗಳಿರುವವು. ಆದರೆ ಮಧ್ಯದಲ್ಲಿ ಎಲ್ಲಾ ಸೇರುವವು. ನೀವು ಚಕ್ರದ ಮಧ್ಯಕ್ಕೆ ಹೋದರೆ ನಿಮಗೂ ಬೇರೆಯವರಿಗೂ ದೂರ ಕಡಿಮೆಯಾಗಿರುವುದು - ಪರಿಧಿಯಲ್ಲಿದ್ದರೆ ದೂರ ಹೆಚ್ಚಾಗುವುದು. ಹೀಗೆ, ನಿಮಗೆ ಇಷ್ಟವೋ ಇಲ್ಲವೋ ಮನಸ್ಸಿನ ಸ್ತರದಲ್ಲಿ ಅಥವಾ ಅಂತರಂಗದ ಸ್ತರದಲ್ಲಿ ನೀವು ಬೇರೆ ಎಲ್ಲಾ ಜೀವಿಗಳೊಡನೆ ಸಂಪರ್ಕವನ್ನು ಹೊಂದಿರುವಿರಿ.

ಈ ಹೊಂದಿಕೆ ಇರುವುದರಿಂದ, ನಿಮ್ಮ ಮನಸ್ಸಿನಲ್ಲಿ ಸಂಪೂರ್ಣ ಪ್ರಜ್ಞೆಯಿಂದ ಮಂತ್ರ ಪಠಿಸಿದರೆ ಅಥವಾ ಬೇರೆಯವರಿಗೋಸ್ಕರ ಪ್ರಾರ್ಥಿಸಿದರೆ ಪರಿಣಾಮ ಉಂಟಾಗುವುದು. ಕೆರೆಯೊಳಗೆ ಒಂದು ಚಿಕ್ಕ ಕಲ್ಲನ್ನು ಎಸೆದರೆ ತೆರೆಯು ಉಂಟಾಗಿ ಕೆರೆಯೊಳಗೆಲ್ಲ ತರಂಗವಾಗಿ ಪ್ರಯಾಣ ಮಾಡಿ ಕೆರೆಯ ತೀರಕ್ಕೆ ಬರುವುದು. ಹೀಗೆ ನಿಮ್ಮ ಮನಸ್ಸಿನಲ್ಲಿ ಮಂತ್ರವನ್ನು ಪಠಿಸಿದರೆ ಅಥವಾ ಬೇರೆಯವರಿಗೋಸ್ಕರ

ಪ್ರಾರ್ಥಿಸಿದರೆ ನಿಮ್ಮ ವ್ಯವಸ್ಥೆಯ ಮೇಲೆ ಮತ್ತು ಬೇರೆಯವರ ವ್ಯವಸ್ಥೆಯ ಮೇಲೆಯೂ ಪರಿಣಾಮವಾಗುವುದು. ಕೆರೆಯ ಪರಿಧಿಯಲ್ಲಿ ಆಗುವ ಪರಿಣಾಮದ ರೀತಿಯಲ್ಲಿ ಬೇರೆ ಜೀವಿಗಳ ಮೇಲೆ ಪರಿಣಾಮವಾಗುವುದು. ಕೆರೆಯ ಮಧ್ಯದಲ್ಲಿ ಆಗುವ ಪರಿಣಾಮ ನಿಮ್ಮ ಅಂತರಂಗಕ್ಕೆ ಆಗುವುದು. ಅರ್ಥಾತ್ ನೀವು ಬೇರೆಯವರಿಗೋಸ್ಕರ ಪ್ರಾರ್ಥಿಸಿದಾಗೆಲ್ಲ ನಿಮ್ಮ ಮೇಲೆಯೇ ಪರಿಣಾಮವು ಇನ್ನೂ ಹೆಚ್ಚಾಗಿರುವುದು. ಬೇರೆಯವರಿಗೆ ನಿಮ್ಮ ಪ್ರಾರ್ಥನೆಯಿಂದ ಪರಿಣಾಮವಾಗುವುದು. ಆದರೆ ನಿಮಗೆ ಅದರ ಪೂರ್ಣ ಫಲವೇ ಸಿಗುವುದು. • • •

• • •ಪ್ರಿಯ ಸ್ವಾಮೀಜಿ ಚಕ್ರಗಳು ಅವಶ್ಯತೆಗಿಂತ ಹೆಚ್ಚಾಗಿ ಸಚೇತನಗೊಳಿಸಿದರೆ (hyperactivation) ಬೇಡದ ಪರಿಣಾಮಗಳು ಇರುವುವೆ?

ಚಕ್ರಗಳನ್ನು ಉತ್ತಮವಾದ ಪದ್ಧತಿಗಳಿಂದ ಸಚೇತನಗೊಳಿಸಿದರೆ, ಅವು ನಿಮಗೆ ಯೋಗಕ್ಷೇಮ ನೀಡುವುದು, ಬೇಡದ ಪರಿಣಾಮವಾಗುವುದಿಲ್ಲ. ನಾನು ರಚಿಸಿರುವ ಧ್ಯಾನತಂತ್ರಗಳು ಬೇಡದ ಪರಿಣಾಮಗಳನ್ನು ನೀಡದೆ ಇರುವ ಉತ್ತಮವಾದ ಪದ್ಧತಿಗಳು, ನಿಮ್ಮ ಸಾಧನೆಯಲ್ಲಿ ಏನಾದರೂ ತಪ್ಪು ಆದರೂ ಕೇವಲ ನಿಮಗೆ ಸಂಪೂರ್ಣವಾಗಿ ಲಾಭ ಆಗುವುದಿಲ್ಲ ಹೊರತು ಯಾವುದೇ ರೀತಿ ಹಾನಿಯು ಆಗುವುದಿಲ್ಲ.

ಅದು ಅಲ್ಲದೆ ಅತ್ಯಂತ ಹೆಚ್ಚು ಸಚೇತನಗೊಳಿಸುವುದು (hyperactive) ಎಂಬುವುದು ಏನೂ ಇಲ್ಲ. ಹಾಗಾದರೂ ನೀವು ಕೇವಲ ನಿಮ್ಮ ಎಚ್ಚರಿಕೆಯ ವಿಸ್ತಾರವನ್ನು ಅನುಭವಿಸುವಿರಿ. ಇದು ನಿಮಗೆ ಒಳ್ಳೆಯದು. ಅಮೃತಸಾಗರದಲ್ಲಿ ಬಿದ್ದರೆ ನೀವು ಎಂದಿಗೂ ಸಾಯುವುದಿಲ್ಲ! ಹೀಗೆ ಚಕ್ರಗಳ ಎಚ್ಚರಿಕೆ ಹೆಚ್ಚಾದರೆ ಕೇವಲ ನಿಮಗೆ ಯೋಗಕ್ಷೇಮ, ಆನಂದ, ಆಧ್ಯಾತ್ಮಿಕ ಅನುಭವ ಮತ್ತು ಕಟ್ಟ ಕಡೆಯಲ್ಲಿ ಜ್ಞಾನೋದಯವು ಆಗುವುದು. ಇದಕ್ಕೆ ವಿರುದ್ಧವಾಗಿ, ಕೇವಲ ಚಕ್ರಗಳ ನಿರುತ್ಸಾಹ, ಚಕ್ರಗಳ ತಮಸ್ಸು

••• ಪ್ರಿಯ ಸ್ವಾಮೀಜಿ, ನಾನು ಬೇರೆ ಒಬ್ಬ ಗುರುವಿನ ಅನುಯಾಯಿ ಆಗಿದ್ದೇನೆ. ಆದರೂ ಈ ಧ್ಯಾನ ಪದ್ಧತಿಗಳ ಸಾಧನೆಯನ್ನು ನಾನು ಮಾಡಬಹುದೆ ?

ಮೊದಲನೆಯದಾಗಿ ನೀವು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದ್ದು ಏನೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಿಮ್ಮ ಗುರುವನ್ನು ತ್ಯಜಿಸುವುದು ಅವಶ್ಯವಲ್ಲ - ಈ ಕಾರ್ಯಕ್ರಮವು ಗುರುವನ್ನು ಬದಲಾಯಿಸಬೇಕೆಂದು ಸೂಚಿಸಲಾರದು. ಎಲ್ಲಾ ಗುರುಗಳು ಒಂದೇ ಚೈತನ್ಯದ ಮೂರ್ತರೂಪಗಳು. ಕೇವಲ ಚೈತನ್ಯದ ಮಾರ್ಗವು ಬೇರೆಯಾಗಿರುವುದು. ಇದೇ ಕಾರಣಕ್ಕೆ ನಾನು ಯಾರನ್ನೂ ಅವರ ಗುರು ಬದಲಾಯಿಸುವುದಕ್ಕೆ ಹೇಳುವುದಿಲ್ಲ. ಜನಗಳು ಬಂದು ನನ್ನನ್ನು ಕೇಳುವರು. ಸ್ವಾಮೀಜಿ, ನಾನು ಬೇರೆ ಉಪನ್ಯಾಸಗಳಲ್ಲಿ ಹಾಜರು ಆಗಬಹುದೇ ? ನಾನು ಬೇರೆ ಗುರುವನ್ನು ಅನುಸರಿಸಬಹುದೇ ? ಖಂಡಿತ ಇವೆಲ್ಲ ಮಾಡಬಹುದು. ನಾನು ಒಂದು ಬಿಜಿನೆಸ್‌ನನ್ನು ನಡೆಸುತ್ತಿದ್ದರೆ ಬೇರೆಯವರ ಅಂಗಡಿಯಿಂದ ಜನರನ್ನು ನನ್ನ ಅಂಗಡಿಗೆ ಸೆಳೆಯಲು ಪ್ರಯತ್ನ ಪಡುತ್ತಿದ್ದೆ. ಆಧ್ಯಾತ್ಮವನ್ನು ಒಂದು ವ್ಯಾಪಾರದ ಸ್ತರಕ್ಕೆ ಇಳಿಸಲಾಗದು. ನಿಮಗೆ ಯಾವ ಗುರುವಿನೊಡನೆ ಹೊಂದಿಕೆ ಆಗುವುದೋ, ಅವರೇ ನಿಮ್ಮ ಗುರು. ಈ ಕಾರ್ಯಕ್ರಮವು ಕೇವಲ ನಿಮ್ಮನ್ನು ಪ್ರೇರಿಸುವುದು ನಿಮ್ಮ ಗುರುವನ್ನೇ ಅನುಸರಿಸುವುದಕ್ಕೆ ನಿಮಗೆ ಸಹಾಯ ಮಾಡುವುದು, ಎಚ್ಚರಿಸುವುದು. ನಾನು ಕೇವಲ ನಿಮಗೆ ನಿಮ್ಮ ಮಾರ್ಗದಲ್ಲಿಯೇ ವಿಕಸನ ಹೊಂದುವುದಕ್ಕೆ ಚೈತನ್ಯ ಮತ್ತು ಪ್ರೇರಣೆಯನ್ನು ಕೊಡುತ್ತಿರುವನು. ನೀವು ನಿಮ್ಮ ಗುರುವನ್ನಾಗಲಿ, ಧರ್ಮವನ್ನಾಗಲಿ, ನಿಮ್ಮ ಆಧ್ಯಾತ್ಮಿಕ ಮಾರ್ಗವನ್ನಾಗಲಿ, ನಿಮ್ಮ ತತ್ವಶಾಸ್ತ್ರವಾಗಲಿ, ಇವುಗಳನ್ನು ಬದಲಾಯಿಸುವುದೇ ಬೇಕಾಗಿಲ್ಲ.

ಖಂಡಿತ ಗುರುವಿನ ಚೈತನ್ಯದ ಅನುಗ್ರಹದಿಂದ ಮಾತ್ರ ಕುಂಡಲಿನಿಯ ಜಾಗರಣೆ ಆಗುವುದು. ಇದನ್ನು ಗುರುಶಕ್ತಿ ಎಂದು ಕರೆಯುತ್ತಾರೆ. ಎಲ್ಲಾ ಗುರು ಶಕ್ತಿಯೂ ಒಂದೇ - ಕೇವಲ ವಿವಿಧ ಸ್ವರೂಪಗಳಲ್ಲಿ ಇರಬಹುದು.

ರಾಮನಿಗೂ, ಕೃಷ್ಣನಿಗೂ ಏನೂ ಸಂಘರ್ಷವಿರಲಿಲ್ಲ. ಆದರೆ ರಾಮನ ಕಪಿಗಳು ಮತ್ತು ಕೃಷ್ಣನ ಹಸುಗಳು ಕಡೆಯವರೆಗೂ ಜಗಳ ಆಡಿಕೊಂಡಿರುತ್ತವೆ. ಹೀಗೆ ಕೇವಲ ನಮ್ಮ ಅಜ್ಞಾನದಿಂದ ನಾವು ಗುರುವನ್ನು ಬದಲಾಯಿಸುವ ವಿಷಯವನ್ನು ಮಾತನಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಆಧ್ಯಾತ್ಮ ಪದ್ಧತಿಗಳನ್ನು ಧರ್ಮವನ್ನು ಗುರುವನ್ನು ಇದಾವುದನ್ನು ಬದಲಾಯಿಸುವ ಅವಶ್ಯಕತೆ ಇಲ್ಲ - ಕೇವಲ ವ್ಯಕ್ತಿತ್ವದ ಬದಲಾವಣೆಯು ಆಗುವುದು. ಬೇರೆ ಏನೂ ಇಲ್ಲ.

ಒಂದು ಕಡೆಯ ಪ್ರಶ್ನೆ ಕೇಳಿ. ಅದನ್ನು ಉತ್ತರಿಸಿದ ಮೇಲೆ ಕಲಾಪವನ್ನು ಮುಕ್ತಾಯ ಮಾಡೋಣ.

• • • ಪ್ರಿಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವವರಿಗೆ ಮತ್ತು ಸ್ವಯಂಸೇವಕರಿಗೆ ಏಕೆ ಬಿಳಿ ಬಟ್ಟೆಯನ್ನು ಧರಿಸುವ ಅವಶ್ಯಕತೆ ಇರುವುದು ?

ಮನಸ್ಸಿನ ಮೇಲೆ ಬಣ್ಣಗಳ ಅಗಾಧವಾದ ಪ್ರಭಾವ ಇರುವುದು. ಈಗ ಪಶ್ಚಿಮ ದೇಶಗಳಲ್ಲಿ ಹೊಸದಾಗಿ ಬಣ್ಣ ಚಿಕಿತ್ಸೆಯನ್ನು (colour therapy) ಕಂಡುಹಿಡಿದಿದ್ದಾರೆ. ಅದು ಹೇಗೆ ಗೊತ್ತೇ ? ನಿಮ್ಮ ಬೆಡ್‌ರೂಮಿನಲ್ಲಿ ಕೆಂಪು ದೀಪ ಉರಿಸಿದರೆ ನಿಮಗೆ ಚೆನ್ನಾಗಿ ನಿದ್ದೆ ಬರುವುದಿಲ್ಲ. ನೀವು ಒಂದು ಮಬ್ಬಾದ ನೀಲಿ ಬಣ್ಣದ ದೀಪವನ್ನು ಉರಿಸಿದರೆ ನಿಮಗೆ ಏನೂ ಕನಸು ಬೀಳದೇ ಇರುವ ಒಳ್ಳೆ ನಿದ್ದೆ ಬರುವುದು.

ಬಗೆಬಗೆಯ ಬಣ್ಣಗಳ ದೀಪಗಳನ್ನು ಉಪಯೋಗಿಸಿದರೆ ಮನಸ್ಸು ಚೇತನಗೊಳ್ಳುವುದು. ಬಹುಶಃ ಈ ಕಾರಣಕ್ಕೆ ಡಿಸ್ಕೋಗಳಲ್ಲಿ ಇಂತಹ ದೀಪಗಳನ್ನು ಬಳಸಲಾಗುವುದು !

ಬಣ್ಣ ಚಿಕಿತ್ಸೆ ಎಂದು ಹೆಸರಿಡದೇನೇ ಈ ಚಿಕಿತ್ಸೆಯನ್ನು ಭಾರತದಲ್ಲಿ ಬಹುವರ್ಷಕಾಲದಿಂದ ಉಪಯೋಗಿಸಲಾಗಿದೆ.

ಬಿಳಿಯ ಬಣ್ಣವು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ಒಂದು ಶಾಂತ, ನಿಶ್ಯಬ್ದವಾದ ಸ್ಥಿತಿಯನ್ನು ನೀಡಿ ಮತ್ತು ಮನಸ್ಸಿನಲ್ಲಿ ಜ್ಞಾನವನ್ನು ಪಡೆದುಕೊಳ್ಳುವ ಸಿದ್ದತೆಯನ್ನು ಹೆಚ್ಚು ಮಾಡುವುದು. ಬಿಳಿಯ ಬಣ್ಣವನ್ನು ಉಪಯೋಗಿಸಿದಾಗ ಮನಸ್ಸಿನ ಅನಗತ್ಯವಾದ ಹೊಯ್ದಾಟ, ಅನಗತ್ಯವಾದ ಆಲೋಚನೆಗಳು ಕಡಿಮೆಯಾಗುತ್ತವೆ. ಬಣ್ಣವು ಮನಸ್ಸಿನಲ್ಲಿ ಒಂದು ಆರಾಮಕರ ಮನೋಭಾವವನ್ನು ಉಂಟುಮಾಡುವುದು. ಈ ಕಾರಣಕ್ಕೆ ಬಿಳಿ ಬಟ್ಟೆಯ ಧಾರಣೆಯನ್ನು ವಿಧಿಸಲಾಗಿದೆ. ಆದರೆ ಒತ್ತಾಯವೇನೂ ಇಲ್ಲ. ನಾನು ಯಾರನ್ನೂ ಬಲವಂತ ಮಾಡುವುದಿಲ್ಲ. ಇದರಲ್ಲೆಲ್ಲ ಏನೂ ಬಲವಂತ ಇಲ್ಲ. ಈ ನಿಯಮಗಳೆಲ್ಲ ನಿಮಗೆ ಕಾರ್ಯಕ್ರಮದ ಪೂರ್ಣ ಪರಿಣಾಮ ಪಡೆಯಲು ಕೇವಲ ಒಂದು ಸಲಹೆ. ಬಾಕಿ ಎಲ್ಲ ನಿಮಗೆ ಸೇರಿದ್ದು.

ಈಗ ಈ ಚರ್ಚೆಯು ಮುಗಿಸುವ ಸಮಯವಾಯಿತು !

ನನ್ನ ಪ್ರೀತಿ ಮತ್ತು ಆಶೀರ್ವಾದ ನಿಮ್ಮ ಜೊತೆಗೆ ಇವೆ.

ಧನ್ಯವಾದಗಳು ...

ಭಾವಚಿತ್ರ