ಪರಮಹಂಸ ನಿತ್ಯಾನಂದ
This text was machine-transcribed from the printed book and may contain errors. Select the words and choose “Report a mistake”.
- ಪರಮಹಂಸ ನಿತ್ಯಾನಂದ -
ಸರಳವಾದ ಸತ್ಯ ನೇರವಾಗಿ!
( 'The Simple Truth Straightaway!' in Kannada )

ಪ್ರಪಂಚದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳಿಗೆ ಮತ್ತು ಆನಂದ ಸಮಾಜಿಯರಿಗೆ ನೀಡಲಾದ ಪ್ರವಚನಗಳು
ಸರಳವಾದ ಸತ್ಯ ನೇರವಾಗಿ!
ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)
Ebook ISBN : 979-8-88572-453-1
ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ
ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)
ಕಾಪಿರೈಟ್ © 2007
ಮೊದಲ ಆವೃತ್ತಿ : 2004
ಎರಡನೇ ಆವೃತ್ತಿ : ಡಿಸೆಂಬರ್ 2007
ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.
ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ
ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ
ಅಥವಾ ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರೆಕಾರ್ಡಿಂಗ್ ಅಥವಾ
ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ
ಮಾಡಕೂಡದು.
ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ
ಉಪಯೋಗಿಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕೃತ್ಯಗಳಿಗೆ
ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು
ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.
ಭಾರತದಲ್ಲಿ ಮುದ್ರಣ : Modern Printing Press
Bangalore
E-mail:[email protected]
ಯಾವುದನ್ನಾದರೂ ನೇರವಾಗಿ ಹೇಳುವುದು ಸತ್ಯ. ಯಾವುದಾದರೂ ವಿಷಯವನ್ನು ಆಧ್ಯಾತ್ಮಿಕ ಭಾಷೆಯ ಸುಂದರ ಪದಗಳಲ್ಲಿ ಅಲಂಕರಿಸಿ ಹೇಳಿದರೆ ಅದು ಅರ್ಧ ಸತ್ಯ.
ಅರ್ಧ ಸತ್ಯವು ಸುಳ್ಳಿಗಿಂತಲೂ ಕೆಳಮಟ್ಟದ್ದು.
ಯಾವಾಗಲಾದರೂ ಒಬ್ಬ ವ್ಯಕ್ತಿಯು ಪರಮಾರ್ಥ ಸತ್ಯವನ್ನು ತಿಳಿದರೆ, ಸರ್ವೋತ್ಕೃಷ್ಟ ಸತ್ಯವನ್ನು ಅನುಭವಿಸಿದರೆ, ಆ ಸತ್ಯವು ಯಾವಾಗಲು ಒಂದೇ ಆಗಿರುವುದು.
ಆದರೆ ಅದರ ಅಭಿವ್ಯಕ್ತತೆಯು ಎಷ್ಟು ಹೆಚ್ಚು ಕಡಿಮೆಯಾಗುತ್ತದೆ ಎಂದರೆ ಅದು ಬಹಳ ಗಲಿಬಿಲಿ ಉಂಟುಮಾಡುತ್ತದೆ. ಭ್ರಾಂತಿ ಗೊಳಿಸುತ್ತದೆ. ಅದು ಒಂದು ವ್ಯವಸ್ಥೆ (system) ಯಿಂದ ಮತ್ತೊಂದು ವ್ಯವಸ್ಥೆಗೆ ಬಹಳ ವ್ಯತ್ಯಾಸವನ್ನು ಸೃಷ್ಟಿಸುತ್ತದೆ.
ನೀವು ಆಳವಾಗಿ ಆಲೋಚಿಸಿದರೆ ವಿಜ್ಞಾನ, ಗಣಿತ, ತರ್ಕಶಾಸ್ತ್ರ ಇತಿಹಾಸ, ಭೂಗೋಳ ಮೊದಲಾದ ಯಾವ ಕ್ಷೇತ್ರವೂ ಆಧ್ಯಾತ್ಮಿಕ ಕ್ಷೇತ್ರದಷ್ಟು ವಿರೋಧೋಕ್ತಿಯನ್ನು ಹೊಂದಿಲ್ಲ. ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ವಿರೋಧೋಕ್ತಿಯನ್ನು ಒಂದು ಧಾಟಿಯಲ್ಲಿ ವ್ಯಕ್ತಿಗೊಳಿಸಲಾಗುತ್ತದೆ. ವಿಷಯಗಳು ಮತ್ತು ಸಂಕೇತಗಳು ಸ್ವಲ್ಪ ವ್ಯತ್ಯಾಸಗೊಳ್ಳಬಹುದು. ಆದರೆ ಮುಖ್ಯ ವಿಚಾರವು ಒಂದೇ ಆಗಿರುವುದು. ವಿಜ್ಞಾನದಲ್ಲಿ ಒಬ್ಬ ವಿಜ್ಞಾನಿಗೂ ಮತ್ತೊಬ್ಬ ವಿಜ್ಞಾನಿಗೂ ಹೆಚ್ಚು ಅಂತರವಿರುವುದಿಲ್ಲ.
ಗಣಿತದಲ್ಲೂ ಅಷ್ಟೆ ಇತಿಹಾಸದಲ್ಲೂ ಅಷ್ಟೆ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವಷ್ಟು ಪ್ರಮುಖ ಅಂತರವು ಬೇರೆ ಯಾವ ಕ್ಷೇತ್ರದಲ್ಲೀಯೂ ಇರುವುದಿಲ್ಲ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ನೀವು ಪ್ರಮುಖ ಅಂತರವನ್ನು ಕಾಣದಿದ್ದರೆ ಅದು ಬಹಳ ಅಪರೂಪ ! ಒಂದು ಸುಂದರವಾದ ಹೇಳಿಕೆಯಿದೆ, ಏನೆಂದರೆ ಇಬ್ಬರು ಋಷಿಗಳು ಒಂದು ವಿಷಯವನ್ನು ಒಂದೇ ರೀತಿಯಲ್ಲಿ ಹೇಳಿದರೆ, ಇಬ್ಬರು ಋಷಿಗಳ ಹೇಳಿಕೆಯಲ್ಲಿ ಅಂತರವಿಲ್ಲದಿದ್ದರೆ, ಅವರಲ್ಲಿ ಒಬ್ಬನು ನಕಲಿ ಎಂದು ನೀವು ಖಂಡಿತ ತಿಳಿಯಬಹುದು !!
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಏಕೆ ಅಷ್ಟೊಂದು ವಿರುಧೋಕ್ತಿಗಳು, ಏಕೆ ಅಷ್ಟೊಂದು ಹೊಸ ತತ್ವಗಳು ಇವೆ ? ಹಿಂದೂ ಧರ್ಮದಲ್ಲಿ ಏಕೆ ಅಷ್ಟೊಂದು ಗುಂಪುಗಳು, ಅಷ್ಟೊಂದು ಪಂಥಗಳು, ಅಷ್ಟೊಂದು ದೇವತೆಗಳು ? ಇದು ಏಕೆಂದರೆ ಎಲ್ಲಿ ಸ್ವಾತಂತ್ರ್ಯವಿರುವುದೋ ಅಲ್ಲಿ ವಿವಿಧತೆ ಇರುತ್ತದೆ.
ಪಾಶ್ಚಿಮಾತ್ಯ ಸಮಾಜದಲ್ಲಿ ಸಾಮಾಜಿಕ ಸ್ವಾತಂತ್ರ್ಯ ಬೇಕಾದಷ್ಟು ಇರುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಅವರು ತಮ್ಮ ಮನೆಯನ್ನು ತಮ್ಮ ಕಾರನ್ನು ತಮ್ಮ ಹೆಂಡತಿಯನ್ನು ಬದಲಾಯಿಸುತ್ತಾರೆಂದು ಹೇಳಲಾಗುತ್ತದೆ. ಈ ಮೂರು ವಸ್ತುಗಳನ್ನು ಅವರು ಕ್ರಮಬದ್ಧವಾಗಿ ಬದಲಾಯಿಸುತ್ತಾರೆ. ಹೊರ ಪ್ರಪಂಚದಲ್ಲಿ ಸಾಮಾಜಿಕ ರಚನೆಯಲ್ಲಿ ಅವರಿಗೆ ಪ್ರಚಂಡ ಸ್ವಾತಂತ್ರ್ಯವಿದೆ. ಆದರೆ ಒಳ ಪ್ರಪಂಚದಲ್ಲಿ ಅವರಿಗೆ ಸ್ವಾತಂತ್ರ್ಯವಿಲ್ಲ. ಅವರ ಒಳ ಪ್ರಪಂಚದ ವಿಷಯವನ್ನು ಹೇಳುವುದಾದರೆ ಕೆಲವು ನಂಬಿಕೆಗಳನ್ನು ಅವರಿಗೆ ಸ್ವಾಭಾವಿಕವಾಗಿ ನೀಡಲಾಗುತ್ತದೆ. ಅದನ್ನು ಅವರು ಜೀರ್ಣಿಸಿಕೊಳ್ಳುತ್ತಾರೋ ಇಲ್ಲವೆ ವಾಂತಿ ಮಾಡಿಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟಿದ್ದು!
ಪಾಶ್ಚಿಮಾತ್ಯ ಪದ್ಧತಿಯಲ್ಲಿ ಒಳಪ್ರಪಂಚದ ಸ್ವಾತಂತ್ರ್ಯ ಅವರಿಗಿರುವದಿಲ್ಲ. ಆದ್ದರಿಂದಲೆ ಅನೇಕ ಗುಂಪುಗಳು ಪಂಥಗಳು, ಮತಗಳು ಸೃಷ್ಟಿಯಾಗಿಲ್ಲ. ಆದರೆ ಪೌರ್ವಾತ್ಯ ದೇಶಗಳಲ್ಲಿ ನಮಗೆ ಒಳ ಪ್ರಪಂಚದ ಪ್ರಚಂಡ ಸ್ವಾತಂತ್ರ್ಯವಿದೆ. ಯಾರು ಬೇಕಾದರೂ ಒಳ ಪ್ರಪಂಚವನ್ನು ಪ್ರವೇಶಿಸಬಹುದು, ಸಂಶೋಧನೆಯನ್ನು ಮಾಡಬಹುದು, ತಮ್ಮ ವರದಿಯನ್ನು ಪ್ರಕಟಿಸಬಹುದು, ಈ ಪ್ರಪಂಚಕ್ಕೆ ಒಂದು ಹೊಸ ತತ್ವವನ್ನು ಕೊಡಬಹುದು, ಈ ಭೂಮಿಗೆ ಒಂದು ಹೊಸ ದೇವರನ್ನು ಕೊಡಬಹುದು. ಸಮಾಜವನ್ನು ಕುರಿತು ಅಥವಾ ಹೊರ ಪ್ರಪಂಚವನ್ನು ಕುರಿತು ನಮಗೆ ಸ್ವಾತಂತ್ರ್ಯವಿರುವುದಿಲ್ಲ. ಆದರೆ
'ಯಾವುದೇ ಕ್ಷೇತ್ರದಲ್ಲಿ
ಉನ್ನತಿಯನ್ನು ಹೊಂದಬೇಕಾದರೆ
ಸ್ವಾತಂತ್ರ್ಯವು ಮೂಲಭೂತವಾಗಿ
ಇರಲೇಬೇಕು'
-ವಿವೇಕಾನಂದರು
ಒಳ ಪ್ರಪಂಚದಲ್ಲಿ ನಿಮಗೆ ಬಹಳ ಸ್ವಾತಂತ್ರ್ಯ ಇರುತ್ತದೆ. ಇದರಿಂದಾಗಿಯೇ ನಮ್ಮಲ್ಲಿ ಬಹಳ ಗುಂಪುಗಳು, ಪಂಥಗಳು, ಮತಗಳು, ತತ್ವಗಳು ಇರುವುವು ಮತ್ತು ಅನೇಕ ಗುರುಗಳು ಇದ್ದಾರೆ. ಪೌರ್ವಾತ್ಯ ದೇಶಗಳಲ್ಲಿ ನಾವು ಒಳ ಪ್ರಪಂಚಕ್ಕೆ ಪ್ರವೇಶಿಸಲು ಬೇಕಾದ ಎಲ್ಲಾ ಸ್ವಾತಂತ್ರ್ಯವನ್ನು ಹೊಂದಿದ್ದೇವೆ.
ಪಾಶ್ಚಿಮಾತ್ಯ ದೇಶದಲ್ಲಿ ಯಾರಾದರೂ ಆಧ್ಯಾತ್ಮಿಕ ಬೋಧಕರಾಗಬೇಕಾದರೆ, ಸಂಬಂಧ ಪಟ್ಟ ಸಂಸ್ಥೆಯು ಅವರನ್ನು ಸಂತರೆಂದು (saint) ಪರಿಗಣಿಸಬೇಕು, ಅವನು ಮಹಾತ್ಮನೋ ಅಲ್ಲವೋ ಎಂದು ಸಂಸ್ಥೆಯು ತೀರ್ಮಾನಿಸುತ್ತದೆ. ಪೌರ್ವಾತ್ಯ ದೇಶಗಳಲ್ಲಿ ಆ ರೀತಿಯ ಪರಿಗಣನೆ ಅಥವಾ ಪ್ರಕಟಣೆ ಬೇಕಿಲ್ಲ. ಒಬ್ಬ ವ್ಯಕ್ತಿಯು ತಾನು ಸಾಧಿಸಿರುವೆನೆಂದು ಯೋಚಿಸಿದರೆ, ಅದನ್ನು ಅವನು ಪ್ರಪಂಚಕ್ಕೆ ತಿಳಿಸಬಹುದು. ನಾವು ಆಳವಾದ ಜೀವನದಲ್ಲಿ ಪ್ರವೇಶಿಸಬಹುದು ಮತ್ತು ಜೀವನದ ಸತ್ಯವನ್ನು ಅರಿಯಬಹುದು. ಆದ್ದರಿಂದಲೇ ನಾವು ಬೇಕಾದಷ್ಟು ತತ್ವಗಳನ್ನು, ವಿವಿಧತೆಯನ್ನು, ಬೇಕಾದಷ್ಟು ಗುರುಗಳನ್ನು ಮತ್ತು
ಜೀವನ ಸತ್ಯವನ್ನು ತಿಳಿಸುವ ಅನೇಕ ಮಾರ್ಗಗಳನ್ನು ಕಾಣುತ್ತೇವೆ. ಪ್ರತಿಯೊಬ್ಬ ಬೋಧಕನೂ ಪ್ರತಿಯೊಂದು ಬೋಧನೆಯೂ ಕೊನೆಗೆ ಜೀವನದ ಸತ್ಯದ ಕಡೆಗೆ ಕರೆದುಕೊಂಡು ಹೋಗುತ್ತದೆ. ಎಷ್ಟು ನಂಬಿಕೆಗಳಿವೆಯೋ ಅಷ್ಟೂ ಮಾರ್ಗಗಳು ಇರುತ್ತವೆ. ಇದು ನಿಜ. ಇದನ್ನೇ ಶ್ರೀ ರಾಮಕೃಷ್ಣರು ಬಹಳ ಸುಮಧುರವಾಗಿ ಹೇಳುತ್ತಾರೆ : ಯಥೋಮಾ, ತಥೋಪಥ್ - ಎಷ್ಟು ನಂಬಿಕೆಗಳೋ ಅಷ್ಟು ಮಾರ್ಗಗಳು.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಅನುಭವವನ್ನು ಒಂದು ವಿಭಿನ್ನವಾದ ರೀತಿಯಲ್ಲಿ ತಿಳಿಸುತ್ತಾನೆ. ಒಂದು ಉದಾಹರಣೆಗೆ ಪತಂಜಲಿ ಹೇಳುತ್ತಾರೆ ತಲೆಯಲ್ಲಿರುವ ಚಕ್ರವು ಸಹಸ್ರಾರ - ಸಾಹಿತ್ಯವಾಗಿ ಇದರ ಅರ್ಥ ಸಾವಿರದಳಗಳುಳ್ಳ ಕಮಲದ ಹೂ. ಆದರೆ ನೀವೇನಾದರೂ ಜನರ ತಲೆ ಬುರುಡೆಯನ್ನು ತೆರೆದು ನೋಡಿದರೆ ಅಲ್ಲಿ ಸಾವಿರದಳದ ಕಮಲವನ್ನು ಕಾಣುವಿರಾ ? ಖಂಡಿತ ಇಲ್ಲ (ಇನ್ನು ಕೆಲವರ ತಲೆಗಳಲ್ಲಿ ಕಮಲವು ಹುಟ್ಟುವ ಕೆಸರನ್ನು ನೀವು ಕಾಣುತ್ತೀರೆ ಹೊರತು ಕಮಲವನ್ನಲ್ಲ). ಹಾಗಾದರೆ ಅವರೇಕೆ ಸಾವಿರ ದಳದ ಕಮಲ ಎಂದು ಹೇಳುತ್ತಾರೆ ? ವ್ಯಕ್ತಿಯ ಚೈತನ್ಯವು (ಅಥವಾ ಶಕ್ತಿಯು) ಸಹಸ್ರಾರದ ಕೇಂದ್ರವನ್ನು ತಲುಪಿದಾಗ ಆಗುವ ಅನುಭವದ ಆಧ್ಯಾತ್ಮಿಕ ಭಾವವನ್ನು (metaphysical expression) ವ್ಯಕ್ತಪಡಿಸುವುದು. ಚೈತನ್ಯವು ಸಹಸ್ರಾರದ ಕೇಂದ್ರವನ್ನು ತಲುಪಿದಾಗ ಉಂಟಾಗುವ ಅನುಭವವು ಒಂದು ಸಹಸ್ರದಳ ಕಮಲವು ಅರಳಿದಂತೆ. ಅದು ಎಷ್ಟು ಸುಂದರವಾಗಿದೆ ! ಅದೇ ರೀತಿ ನಿಮ್ಮ ಅಸ್ತಿತ್ವವೂ, ನಿಮ್ಮ ಅಂತರಂಗವೂ ಅರಳುತ್ತದೆ. ನಿಮ್ಮ ಅಂತರಂಗವು ತನ್ನಿಂದ ತಾನೇ ಅದರ ಎಲ್ಲಾ ದಿವ್ಯ ಪ್ರಭೆಯಲ್ಲೂ ವ್ಯಕ್ತಪಡಿಸುತ್ತದೆ. ಇದು ಭೌತಿಕ ಉದಾಹರಣೆಯ ಮೂಲಕ ವ್ಯಕ್ತಗೊಳಿಸುವ ಒಂದು ಆಧ್ಯಾತ್ಮಿಕ ಅನುಭವ. ಆದರೆ ಅನಾನುಭವಿಯಾದ ಮನಸ್ಸು ಆ ಅನುಭವವನ್ನು ಕೇಳಿದಾಗ, ಆ ಅನುಭವವನ್ನು ವಾಸ್ತವವಾಗಿ ಪಡೆಯಲು ಹವಣಿಸುತ್ತದೆ. ಆದ್ದರಿಂದ ಏನು ಅರ್ಥವಾಗಿದೆ ಮತ್ತು ಏನು ನಡೆಯುತ್ತಿದೆ ಎನ್ನುವುದು ಬಹಳ ವ್ಯತ್ಯಾಸಗೊಂಡಿರುತ್ತದೆ. ಯಾರಾದರೂ ಆಧ್ಯಾತ್ಮಿಕ ಅನುಭವವನ್ನು ಸಾಮಾನ್ಯ ಭಾಷೆಯಲ್ಲಿ ವಿವರಿಸಲು ಪ್ರಯತ್ನಿಸಿದಾಗ ನುಡಿಗಳು ಅಥವಾ ಮಾತುಗಳು ಅಥವಾ ಭಾಷೆಯು ಆ ಅನುಭವಕ್ಕೆ ತಕ್ಕ ಹಾಗೆ ಇರುವುದಿಲ್ಲ ಮತ್ತು ಆ ಅನುಭವದ ಬಗ್ಗೆ ತಪ್ಪು ಅಭಿಪ್ರಾಯವನ್ನು ಕೊಡಬಹುದು.
ಒಬ್ಬ ಅನ್ವೇಷಕನು ಒಬ್ಬ ಜ಼ೆನ್ ಗುರುವನ್ನು ಕೇಳಿದನು, 'ಗುರುವೇ, ಜ್ಞಾನಿಯು ಮಾತನಾಡುವನೇ?'
ಗುರುವು ಉತ್ತರಿಸಿದರು, 'ಜ್ಞಾನಿಯು ಮಾತನಾಡುವುದಿಲ್ಲ. ಜ್ಞಾನವು ಮಾತುಗಳಲ್ಲಿ ತಿಳಿಯಪಡಿಸುವಂಥದ್ದು ಅಲ್ಲ. ಜ್ಞಾನಿಯು ಮಾತನಾಡುವುದೇ ಇಲ್ಲ. ಒಂದು ವೇಳೆ ಅವನು ಮಾತಾಡುತ್ತಿದ್ದರೆ ಖಂಡಿತವಾಗಿಯೂ ಅವನು ಜ್ಞಾನಿಯೇ ಅಲ್ಲ ಎಂಬುದನ್ನು ತಿಳಿದುಕೊಳ್ಳಿ.'
ಆ ಅನ್ವೇಷಕನು ಈಗ ಕೇಳಿದನು 'ಆದ್ದರಿಂದ ಒಬ್ಬ ಜ್ಞಾನಿಯು ಮೌನಿಯಾಗಿರುತ್ತಾನೆಯೇ?'
ಗುರು ಹೇಳಿದರು 'ಒಬ್ಬ ಜ್ಞಾನಿಯು ಎಂದಿಗೂ ಮೌನವಾಗಿರುವುದಿಲ್ಲ. ಅವನು ಮೌನವಾಗಿದ್ದರೆ ಅವನು ಜ್ಞಾನಿಯೇ ಅಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ, ಏಕೆಂದರೆ ನೀವು ಜ್ಞಾನವನ್ನು ಹೊಂದಿದ್ದರೆ ನೀವು ಮೌನವಾಗಿರಬಹುದು. ಆದರೆ ನೀವು ಎಂದಿಗೂ ಜ್ಞಾನವನ್ನು ಹೊಂದುವುದಿಲ್ಲ. ಕೇವಲ ಜ್ಞಾನವು ನಿಮ್ಮನ್ನು ಹೊಂದಿರುತ್ತದೆ. ನೀವು ಏನಾದರೂ ಹೊಂದಿದ್ದರೆ ಅದನ್ನು ನೀವು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳಬಹುದು. ಅಥವಾ ಅದನ್ನು ನೀವು ನಿಮ್ಮ ನಿಧಿಪೆಟ್ಟಿಗೆಯಲ್ಲಿ ಹಾಕಿಟ್ಟು ಸುಮ್ಮನಿರಬಹುದು. ಆದರೆ ಜ್ಞಾನವು ಅಥವಾ ದೇವರು ನಿಮ್ಮನ್ನು ಹೊಂದಿದಾಗ ನೀವು ಎಂದಿಗೂ ಸುಮ್ಮನಿರಲಾರಿರಿ. ಆದ್ದರಿಂದ ಯಾರಾದರೂ ಮೌನವಾಗಿದ್ದರೆ ಅವನು ಜ್ಞಾನಿ ಅಲ್ಲ ಎಂದು ಖಂಡಿತವಾಗಿ ತಿಳಿದುಕೊಳ್ಳಿ.'
ಶಿಷ್ಯನು ಗಲಿಬಿಲಿಗೊಂಡು ಕೇಳಿದನು 'ಹಾಗಾದರೆ ಸತ್ಯ ಯಾವುದು ? ನೀವು ಒಬ್ಬ ಜ್ಞಾನಿಯು ಎಂದಿಗೂ ಮಾತನಾಡುವುದಿಲ್ಲ ಎಂದು ಹೇಳಿದಿರಿ. ಆಮೇಲೆ ಜ್ಞಾನಿಯು ಎಂದಿಗೂ ಮೌನವಾಗಿರುವುದಿಲ್ಲ ಎಂದು ಹೇಳಿದಿರಿ. ಹಾಗಾದರೆ ಸತ್ಯವೇನು ? ಅವನು ಏನು ಮಾಡುವನು ?'
ಗುರುವಿನ ಸುಂದರವಾದ ಅಚ್ಚುಕಟ್ಟಾದ ಉತ್ತರ - 'ಅವನು ಹಾಡುತ್ತಾನೆ ' ಜ್ಞಾನವನ್ನು ಬಿಂಬಿಸುವ ಒಂದು ದಾರಿಯಿದೆ - ಹಾಡುವಿಕೆ. ಅವನು ಒಂದು ಟೊಳ್ಳಾದ ಬಿದಿಲಾಗುತ್ತಾನೆ. ದೈವವು, ಸೌಂದರ್ಯವನ್ನು ಬಿಂಬಿಸಲು ಆಧ್ಯಾತ್ಮಿಕತೆಯನ್ನು ತಿಳಿಸಲು ಸತ್ಯವನ್ನು ಬೋಧಿಸಲು ಅವನನ್ನು ಒಂದು ಕೊಳಲನ್ನಾಗಿ ಉಪಯೋಗಿಸಿಕೊಳ್ಳುತ್ತದೆ.
ಹಾಡುವಿಕೆಯ ಅರ್ಥವೇನು ? ಹಾಡುವಿಕೆಯ ಅರ್ಥವೇನೆಂದರೆ ಶಾರೀರಿಕ ಭಾಷೆ. ಜ್ಞಾನವೆಂದರೇನು ಎಂಬುದನ್ನು ಈ ಶಾರೀರಿಕ ಭಾಷೆಯೋ ತಿಳಿಸಬಲ್ಲದು. ಅದನ್ನು ಭಾಷೆಯ ಮೂಲಕವಾಗಲೀ, ಮೌನದ ಮೂಲಕವಾಗಲೀ, ತಿಳಿಸಲು ಸಾಧ್ಯವಿಲ್ಲ. ನಿಶ್ಯಬ್ದವೆಂದರೆ ಸತ್ತಂತೆಯೇ, ಹಾಡುವಿಕೆಯು ಒಂದು ವಿಧವಾದ ಮೌನವೇ - ಒಂದು ಸುಂದರವಾದ ಕಂಪನವನ್ನುಂಟುಮಾಡುವ ಮೌನ. ಮೌನವು ಚೈತನ್ಯದ ಜೊತೆ ಸೇರಿ ಕಂಪನಗೊಂಡಾಗ ತನ್ನ ತುತ್ತತುದಿಯಲ್ಲಿ ಅತಿ ಎತ್ತರದಲ್ಲಿ ವ್ಯಕ್ತವಾದಾಗ ಅದು ಹಾಡಾಗುತ್ತದೆ. ಅದು ಮಾತೂ ಅಲ್ಲ ಮೌನವೂ ಅಲ್ಲ. ನಕಾರಾತ್ಮಕ ಮೌನ ನುಡಿರಹಿತವಾದುದು, ಶಬ್ದರಹಿತವಾದುದು, ಸಕಾರಾತ್ಮಕ ಮೌನವೇ ಈ ಹಾಡುವಿಕೆ. ಒಬ್ಬ ವ್ಯಕ್ತಿಯು ಜ್ಞಾನವನ್ನು ಪಡೆದಿದ್ದರೆ ಅವನ ನಡಿಗೆಯೇ ನೃತ್ಯದಂತಿರುತ್ತದೆ. ಅವನ ಪ್ರತಿಯೊಂದು ಚಲನವಲನದಲ್ಲೂ ಪ್ರೀತಿ ಅಥವಾ ಪ್ರೇಮ ವ್ಯಕ್ತವಾಗುತ್ತದೆ. ಅವನ ಅಂತರಂಗವು ಹಾಡುತ್ತದೆ. ಆನಂದವನ್ನು ಸವಿಸುತ್ತದೆ. ಸಂತೋಷವನ್ನು ಒಸರುತ್ತದೆ. ಸರಳವಾದ ಸತ್ಯವನ್ನು ವ್ಯಕ್ತಪಡಿಸುವುದಕ್ಕೆ ಕೇವಲ ಇದು ಒಂದೇ ರೀತಿ. ಸತ್ಯವನ್ನು ವ್ಯಕ್ತಪಡಿಸುವುದಕ್ಕೆ ಮಾತುಗಳನ್ನು ಬಳಸಿದಾಗ, ಅದು ಸತ್ಯವೇ ಅಲ್ಲ ಎಂದು ತಿಳಿದುಕೊಳ್ಳಿ, ಗುರುವು ಸತ್ಯವನ್ನೇ ಹೇಳುತ್ತಿದ್ದಾರೆ - ಆದರೆ ಆ ಸತ್ಯವು ನಿಮಗೆ ತಲುಪುವುದಿಲ್ಲ. ಏಕೆಂದರೆ ಗುರುವೇ ಒಂದು ಸ್ತರದಿಂದ ಹೇಳುತ್ತಾರೆ ಮತ್ತು ನೀವು ಬೇರೆಯೊಂದು ಸ್ತರದಿಂದ ಕೇಳಿಸಿಕೊಂಡಿರುವಿರಿ. ಈ ಎರಡು ಸ್ತರಗಳ ನಡುವೆ ಯಾವ ಕಾರ್ಯ ನಡೆಸಬಹುದು ? ಖಂಡಿತ ನಡೆಸಬಹುದು - ನೀವು ಗುರುವಿನ ಶಾರೀರಿಕ ಭಾಷೆಯಿಂದ ಸತ್ಯವನ್ನು ತಿಳಿದುಕೊಳ್ಳಬಹುದು. ಗುರುವಿನ ಸಮಕ್ಷಮದಲ್ಲಿ ಸತ್ಯವನ್ನು ಗ್ರಹಿಸಬಹುದು. ಗುರುವಿನೊಡನೆ ಆಗುವ ಸತ್ಯ ಅದೊಂದೇ. ಅದಕ್ಕೆ ನಾನು ಹೇಳುವುದೇನೆಂದರೆ ನೇರವಾಗಿ ಸರಳವಾದ ಸತ್ಯ ಒಬ್ಬ ಗುರುವಿನ ಜೊತೆಯಲ್ಲಿರುವುದರಿಂದ ಸರಳವಾದ ಸತ್ಯವು ಮಿಂಚಿನಂತೆ ನಿಮ್ಮಲ್ಲಿಗೆ ಬರುವುದು.
ಒಂದು ಸಲ ಒಬ್ಬ ಜೈನ್ ಗುರುವನ್ನು ಒಬ್ಬ ರಾಜನು ತನ್ನ ಅರಮನೆಗೆ 'ಅಧ್ಯಾತ್ಮ ಎಂದರೇನು?' ಎಂದು ತಿಳಿಸಲು ಆಹ್ವಾನಿಸಿದನು. ಗುರುಗಳು ಬಂದರು, ವೇದಿಕೆಯ ಮೇಲೆ ಕುಳಿತರು; ಕುಳಿತರು, ಕುಳಿತರು, ಕುಳಿತೇಇದ್ದರು. ಸ್ವಲ್ಪ ಹೊತ್ತಾದ ಮೇಲೆ ಅವರು ಸುಮ್ಮನೆ ಎದ್ದು ಹೊರನಡೆದರು.
ಆಶ್ಚರ್ಯದಿಂದ ಚಕಿತನಾದ ರಾಜನು ಗುರುವಿನ ಶಿಷ್ಯರನ್ನು ಕೇಳಿದನು “ಏನಾಯಿತು ?” ನಿಮ್ಮ ಗುರುಗಳು ಒಂದು ಮಾತನ್ನೂ ಆಡಲಿಲ್ಲ. ಅವರು ಬಂದರು, ಸುಮ್ಮನೆ ಕುಳಿತರು ಮತ್ತು ಎದ್ದು ಹೊರಟು ಹೋದರು.
ಶಿಷ್ಯರು ಉತ್ತರಿಸಿದರು “ಇದಕ್ಕೆ ಮೊದಲು ಅವರೆಂದೂ ಇಷ್ಟು ಚೆನ್ನಾಗಿ ಮಾತಾಡಿರಲಿಲ್ಲ. ಅವರು ವಿವರಿಸಿ ಹೇಳಬೇಕಾದದನ್ನು ಬಹಳ ಚೆನ್ನಾಗಿಯೇ ವಿವರಿಸಿ ಹೇಳಿದರು."
“ನಿಮ್ಮ ಮಾತಿನ ಅರ್ಥವೇನು?” ಎಂದು ರಾಜನು ಕೇಳಿದನು.
“ಹೇಳಬೇಕಾದುದನ್ನು ಅವರು ಮೌನದ ಮೂಲಕವೇ ಹೇಳಿದರು,” ಎಂದು ಶಿಷ್ಯರು ವಿವರಿಸಿದರು.
“ಹಾಗಾದರೆ ಅವರು ಏಕೆ ಇಲ್ಲಿಗೆ ಬಂದರು ? ಅವರ ಆಶ್ರಮದಲ್ಲಿಯೇ ಕುಳಿತುಕೊಂಡು ಹೀಗೆ ಮಾಡಬಹುದಾಗಿತ್ತಲ್ಲ. ಏನೂ ಮಾತನಾಡದೇ ಇರುವುದಕ್ಕೆ ಅವರೇಕೆ ಇಷ್ಟು ದೂರ ಬಂದರು?”
ಶಿಷ್ಯನು ಬಹಳ ಚಾತುರ್ಯದಿಂದ ಉತ್ತರಿಸಿದನು, “ತಿಳಿಯಬೇಕಾದುದನ್ನು ಮಾತಿನಿಂದ ಹೇಳಲಾಗುವುದಿಲ್ಲ. ಆದರೆ ಅದನ್ನು ಶಾರೀರಿಕ ಭಾಷೆಯಿಂದ, ಅಂತರಂಗದಿಂದ, ಪ್ರಾತ್ಯಕ್ಷಿಕೆಯಿಂದ, ಮಾತಿಗಿಂತ ಬಹಳ ಎತ್ತರದಲ್ಲಿರುವ ರೀತಿಯಲ್ಲಿ ತಿಳಿಸಬಹುದು.”
ಗುರುವಿನ ಸಮಕ್ಷಮದಲ್ಲಿ ಏನಾದರೂ ನಡೆಯಬಹುದು. ನೀವು ಒಳ ಮೌನದಿಂದ ಅದನ್ನು ಕೇಳಿದರೆ ಅದನ್ನು ಅರ್ಥಮಾಡಿಕೊಳ್ಳಬಹುದು. ನಿಮ್ಮ ಮನಸ್ಸಿನಿಂದ ಅದನ್ನು ಕೇಳಿದರೆ ನನ್ನ ಸಂದೇಶವನ್ನು ತಿಳಿಯದೆ ನನ್ನ ಮಾತಿನ ವಿಮರ್ಶನೆ ಮಾಡುತ್ತಿರುವ ನಿಮ್ಮ ಒಳಹರಟೆ ಕಡೆಗೆ ಗಮನ ಕೊಡುವಿರಿ.
ನಿಮ್ಮ ಮನಸ್ಸು ನನ್ನ ಮಾತನ್ನು ಕೇಳಿ ಈ ರೀತಿ ಪ್ರತಿಕ್ರಿಯಿಸಬಹುದು. ಸ್ವಾಮೀಜಿಯ ಎಂತಹ ವಾಕ್ಚತುರರು, ಎಂತಹ ಮಾತುಗಾರರು ಅಥವಾ ನೀವು ನನ್ನ ಮಾತುಗಳನ್ನು ವಿರೋಧಿಸಿ ಯೋಚಿಸುವಿರಿ. ಅವರು ಹೇಳುವ ಒಂದು ಮಾತನ್ನು ನಾನು ನಂಬುವುದಿಲ್ಲ. ನಾನು ಅಂದುಕೊಳ್ಳುವುದಕ್ಕೂ, ಅವರು ಹೇಳುವುದಕ್ಕೂ ಬಹಳ ವ್ಯತ್ಯಾಸವಿದೆ.
ನೀವು ನನ್ನ ಮಾತುಗಳನ್ನು ಒಪ್ಪಬಹುದು ಅಥವಾ ಇಲ್ಲದಿರಬಹುದು. ನೀವು ಕೇವಲ ನಿಮ್ಮ ತಲೆಯಿಂದ (ಬುದ್ಧಿವಂತಿಕೆಯಿಂದ) ಕೇಳಿದರೆ ನೀವು ಇವೆರಡರಲ್ಲಿ ಯಾವುದಾದರೂ ಒಂದನ್ನು ಮಾಡುವಿರಿ. ಎರಡು ತರಹದಲ್ಲಿ ನೀವು ನನ್ನ ಇರುವಿಕೆಯ ಉದ್ದೇಶವನ್ನು ಕಳೆದುಕೊಳ್ಳುವಿರಿ. ಒಪ್ಪಿಕೊಳ್ಳುವ ಮತ್ತು ವಿರೋಧಿಸುವ ಕೆಲಸದಲ್ಲಿ ನಾನು ಹೇಳುವುದನ್ನು ನಿಮಗೆ ಕೇಳಲಾಗುವುದಿಲ್ಲ. ನೀವು ಒಪ್ಪಿಕೊಳ್ಳುವ ಹೊತ್ತಿಗೆ ನಾನು ಹೇಳುವ ವಿಷಯದಲ್ಲಿ ಆಗಲೇ ಒಂದು ಹೇಳಿಕೆಯನ್ನು ಕಳೆದುಕೊಂಡಿರುವಿರಿ. ನೀವು ವಿರೋಧಿಸುವ ಹೊತ್ತಿಗೆ ಎರಡು ಮೂರು ವಿಷಯಗಳನ್ನು ಕಳೆದುಕೊಂಡಿರುವಿರಿ. ಆದ್ದರಿಂದ ನೀವೇನು ತಿಳಿದುಕೊಂಡಿರುತ್ತೀರೋ ಅದು ಪೂರ್ಣ ಸತ್ಯವಲ್ಲ. ನೀವು ತಿಳಿದುಕೊಂಡಿರುವುದು ಪೂರ್ಣವಲ್ಲ. ನೀವು ಸಂಪೂರ್ಣವಾಗಿ ತಿಳಿದುಕೊಂಡರೆ ಮಾತ್ರ ಪೂರ್ಣವಾದ ಪವಿತ್ರವಾದ ಸತ್ಯವನ್ನು ತಿಳಿದುಕೊಂಡಂತೆ. ಸಂಪೂರ್ಣವಾದದ್ದೆಲ್ಲ ಮಾತ್ರ ಪವಿತ್ರವಾದದ್ದು.
ನೀವು ನಿಮ್ಮ ತಲೆಯಿಂದ ಮಾತ್ರ ಕೇಳಿದರೆ ನೀವು ನಾನು ಹೇಳಿದ್ದನ್ನು ಒಪ್ಪಿಕೊಳ್ಳುತ್ತಾ ಇರುವಿರಿ ಅಥವಾ ವಿರೋಧಿಸುತ್ತಾ ಇರುವಿರಿ. ಇದರಲ್ಲಿ ಯಾವುದೂ ನಿಮಗೆ ಅನುಕೂಲಕರವಲ್ಲ. ಇದಕ್ಕೆ ಪ್ರತಿಯಾಗಿ ಅಂತರಂಗವನ್ನು ತೆರೆದಿಟ್ಟುಕೊಂಡಿರುವ ಮನೋಭಾವದಿಂದ ಕೇಳಿದರೆ, ನಿಮ್ಮ ಮನಸ್ಸಿನ ಒಳಹರಟೆಯನ್ನು ಬಿಟ್ಟರೆ ನನ್ನ ಮಾತಿಗಿಂತಲೂ ಹೆಚ್ಚಾದುದನ್ನು ಹೇಳಬಲ್ಲೆ. ನಿಮ್ಮಲ್ಲೇ ಏನೋ ಆಗುತ್ತಿದೆ ಎಂಬುದನ್ನು ನೀವು ಕಾಣುವಿರಿ. ನನ್ನ ಮಾತುಗಳು ಮಾಡಲಾರದದ್ದನ್ನು ನನ್ನ ಸಮಕ್ಷಮವು ಮಾಡಬಲ್ಲದು
- ಮತ್ತು ನೀವು ಪಡೆಯುವುದು ನಾನು ಹೇಳಿದ ಸರಳ ಸತ್ಯ. ಅದನ್ನು ನೀವು ಕ್ಯಾಸೆಟ್ಟುಗಳಲ್ಲಿ, ವಿಡಿಯೋ ಉಪದೇಶಗಳಲ್ಲಿ ಕಾಣಲಾರಿರಿ. ಪುಸ್ತಕಗಳಲ್ಲಿಯೂ ತಿಳಿಸಲಾಗದು. ಅದನ್ನು ನೇರವಾಗಿ ಗುರುವಿನಿಂದ ನಿಮಗೆ ಕೊಡಲಾಗುವುದು.
ವಾಸ್ತವವಾಗಿ ಈ ಸರಳ ಸತ್ಯವನ್ನು ನಿಮಗೆ ವೇದವಾಗಲೀ, ಬೈಬಲ್ ಆಗಲೀ ಅಥವಾ ಕುರಾನ್ ಆಗಲೀ, ಕೊಡಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅವನ್ನು ಹೇಳಿದ ಗುರುಗಳು ಜೀವಂತವಾಗಿದ್ದಾಗ ಅವೆಲ್ಲವೂ ಸತ್ಯವಾಗಿದ್ದವು - ಆದರೆ ಈಗ ಅವುಗಳು ಕೇವಲ ನುಡಿಗಳು. ಗುರುಗಳು ಮಾತನಾಡಿದಾಗೆಲ್ಲ ನಿಮಗೆ ತಿಳವಳಿಕೆಯನ್ನು ಕೊಡಬೇಕೆಂಬ ಜ್ಞಾನವನ್ನು ಉಪದೇಶಿಸಬೇಕೆಂಬ ಉದ್ದೇಶದಿಂದ ಮಾತನಾಡುವುದಿಲ್ಲ. ಅದರ ಉದ್ದೇಶವೇ ಬೇರೆಯಾಗಿರುತ್ತದೆ. ನೀವು ಮಾತಾಡುವುದನ್ನು ನಿಲ್ಲಿಸಲೆಂದು ಅವರು ಮಾತನಾಡುತ್ತಾರೆ. ನೀವು ಮಾತಾಡುವುದವನ್ನು ನಿಲ್ಲಿಸಲೆಂದು ನಾನು ಮಾತನಾಡುತ್ತೇನೆ. ನೀವು ಮಾತಾಡುವುದನ್ನು ನಿಲ್ಲಿಸಿದರೆ ಮಾತ್ರ ನಮ್ಮಿಬ್ಬರ ನಡುವೆ ಏನಾದರೂ ರಾಸಾಯನಿಕ ಕ್ರಿಯೆಯು ಆಗಬಹುದು. ನಿಜವಾಗಲೂ ಸರಿಯಾದ ಪಾದರಸವಾದ ಅಥವಾ ಆಲ್ಕೆಮಿ (alchemy). ಒಂದಷ್ಟು ರಸವಾದ ನಡೆಯುತ್ತದೆ. ಒಂದಷ್ಟು ಬೆಳಕಿನ ರವಾನೆಯು ನಡೆಯುತ್ತದೆ. ಅದೇ ನಿಜವಾದ ವಾಸ್ತವವಾದ ಸತ್ಯ. ಸಂದೇಶವನ್ನು ಅದು ಇರುವಂತೆಯೇ ನಿಮಗೆ ಪಡೆಯಲು ಆಗುವುದಿಲ್ಲವಾದ್ದರಿಂದ ನಿಮ್ಮ ಮನಸ್ಸಿನ ಒಳಹರಟೆಯಿಂದ ಈ ಕಡೆಗೆ ತಿರುಗಿಸಲು ನಾವು ಕೆಲವು ಮಾತುಗಳನ್ನು ಆಡುತ್ತೇವೆ. ನಿಮ್ಮ ಗಮನ ಈ ಮಾತುಗಳ ಮೇಲಿದ್ದಾಗ ನಿಮ್ಮ ಅಂತರಂಗವು ನಾ ಕೊಡುವ ಸತ್ಯಕ್ಕೆ ತೆರೆದುಕೊಳ್ಳುವುದು. ಈ ಸತ್ಯವನ್ನು ಸತ್ಯವೆಂಬ ಬೆಳಕನ್ನು ಸ್ಥಳಾಂತರಿಸಬಹುದು. ವಾಸ್ತವವನ್ನು ಅನುಭವಿಸಬಹುದು ಮತ್ತು ನಿತ್ಯಾನಂದವು ನಿಮ್ಮ ಅಂತರಂಗವನ್ನು ಪ್ರವೇಶಿಸಬಹುದು. ಆದ್ದರಿಂದ ನಿಮ್ಮ ಒಳ ಮಾತುಗಳನ್ನು ಬಿಟ್ಟು ಬಿಡಿ, ಮತ್ತು ನಿಮ್ಮ ಒಳ ಶರೀರದಲ್ಲಿ, ನಿಮ್ಮ ಅಂತರಂಗದಲ್ಲಿ ಏನಾಗುತ್ತದೆ ಎಂಬುದನ್ನು ತತ್ಕ್ಷಣವೇ ವೀಕ್ಷಿಸಿ.
ನಮಗೆ ಎರಡು ಶರೀರಗಳಿವೆ. ಒಂದು ಹೊರ ಶರೀರ - ಇಲ್ಲಿ ಕುಳಿತಿರುವುದು. ಇನ್ನೊಂದು ಒಳ ಶರೀರ
- ಅದು ಇಲ್ಲಿ ಕುಳಿತಿರಬಹುದು ಅಥವಾ ಇಲ್ಲದೇ ಇರಬಹುದು. ನಿಮ್ಮ ಒಳ ಶರೀರಕ್ಕೆ ಏನಾಗುತ್ತಿದೆ ಎಂದು ಭಾವಿಸಿ. ನಿಮ್ಮ ಒಳ ಶರೀರವನ್ನು ನಿಮ್ಮ ಹೊರ ಶರೀರದಲ್ಲಿ ಹಾಕಿ, ನಿಮ್ಮ ಹೊರ ಶರೀರದಲ್ಲಿ ನಿಮ್ಮ ಒಳ ಶರೀರದ ಇರುವಿಕೆಯನ್ನು ಅನುಭವಿಸಿ - ಅಷ್ಟೇ ಸಾಕು. ನೀವು ಗುರುವಿನ ಶಾರೀರಿಕ ಭಾಷೆಯಿಂದ ಅರ್ಥಮಾಡಿಕೊಳ್ಳುವಿರಿ. ಕೇವಲ ನಿಮ್ಮ ಹೊರ ಶರೀರವು ಇಲ್ಲಿದ್ದರೆ ನೀವು ನನ್ನ ಮಾತಿನಿಂದ ಕಲಿಯುವಿರಿ.
ನಿಮ್ಮ ಒಳ ಶರೀರವು ಇಲ್ಲಿದ್ದರೆ ನೀವು ನನ್ನ ಶಾರೀರಿಕ ಭಾಷೆಯಿಂದ ಕಲಿಯುವಿರಿ. ನನ್ನ ಮಾತಿನಿಂದ ನೀವು ಏನನ್ನು ಪಡೆಯುವಿರೋ ಅದು ಅರ್ಧ ಸತ್ಯ. ನನ್ನ ಶಾರೀರಿಕ ಭಾಷೆಯಿಂದ ಏನು ಅರ್ಥ ಮಾಡಿಕೊಳ್ಳುವಿರೋ ಅದು ಸರಳವಾದ ಸಂಪೂರ್ಣವಾದ ಸತ್ಯ. ನೀವು ಹೀಗೆ ನನ್ನ ಮಾತನ್ನು ಕೇಳುತ್ತಿರುವಾಗಲೇ ನಮ್ಮಿಬ್ಬರ ಮಧ್ಯ ಏನೋ ನಡೆಯುತ್ತದೆ - ಈ ಆಧ್ಯಾತ್ಮಿಕ ಅನುಭವವನ್ನು ಸುಮ್ಮನೆ ಆಗಲು ಬಿಡಿ ಮತ್ತು ನೀವು ಸರಳವಾದ ಸತ್ಯವನ್ನು ನೇರವಾಗಿ ಮಿಂಚಿನಂತೆ ಪಡೆಯುವಿರಿ!
ಧನ್ಯವಾದಗಳು
ನಾನು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತ ಅಥವಾ ನಿಮ್ಮ ಉತ್ತರಗಳನ್ನು ಪ್ರಶ್ನಿಸುತ್ತ ಸ್ವಲ್ಪ ಸಮಯವನ್ನು ಕಳೆಯುತ್ತೇನೆ.
ನಾನು ಈ ಕೋಣೆಯನ್ನು ಪ್ರವೇಶಿಸಿದಾಗ ನನಗೆ ಯಾರೋ ಹೇಳಿದರು, ಸ್ವಾಮೀಜಿ ಇಂದಿನ ಜನಗಳ ಸಂಖ್ಯೆ ಬಹಳ ಕಡಿಮೆ.
ನನಗೆ ಇದು ಕೇಳಿ ಸಂತೋಷವಾಯಿತು. ನಾನು ಕಡಿಮೆ ಜನರ ಗುಂಪಿನ ಮಧ್ಯೆ ಕುಳಿತಾಗೆಲ್ಲ ನಾನು ನಿಮ್ಮ ಜೊತೆ ಏನೋ ಹಂಚಿಕೊಂಡಿದ್ದೇನೆ ಎಂದು ನನಗೆ ಅತ್ಯಂತ ಸಮಾಧಾನವಿರುತ್ತದೆ. ರಾಜಕೀಯ ಸಭೆ ಸಮಾರಂಭಗಳಿಗೆ ತುಂಬ ಜನರು ಬೇಕು. ಆಧ್ಯಾತ್ಮಿಕ ಸಭೆಗಳಿಗೆ ಒಂದು ಸಣ್ಣ ಗುಂಪು ಇದ್ದರೆ ಸಾಕು, ತುಂಬ ಜನರ ಅಗತ್ಯವಿಲ್ಲ. ಸರಿ, ಮೊದಲನೆಯ ಪ್ರಶ್ನೆ ಏನು?