ಪರಮಹಂಸ ನಿತ್ಯಾನಂದರನ್ನು ಕುರಿತು
This text was machine-transcribed from the printed book and may contain errors. Select the words and choose “Report a mistake”.
ಜೀವನದ ಉದ್ದೇಶವನ್ನು ಅರಿಯುವ ಮಾನವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ. ಆನಂದವು ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೊಂದಿದ ಮತ್ತು ಆಧುನಿಕ ಆಧ್ಯಾತ್ಮಿಕ ಗುರುಗಳಾದ ಪರಮಹಂಸ ನಿತ್ಯಾನಂದರ ಅನುಭವ ಮತ್ತು ಬೋಧನೆ.
ಅವರ ಜೀವನ ಧ್ವೇಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ - ಅಂದರೆ ದಿನದ 24 ಗಂಟೆಗಳೂ ಆನಂದದಲ್ಲಿ ಬದುಕುವುದು! ಎಂದು ಅನುಭವದಿಂದ ಅರಿಯುವುದನ್ನು ಮೊದಲು ನೀಡುವುದು. ನಮ್ಮದೇ ಆಂತರ್ಯದ ಮಾರ್ಗದಲ್ಲಿ ಕೆಲಸ ಮಾಡುವ ಮುಖಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದು ಸಾಧ್ಯವೆಂಬ ಅರಿವನ್ನು ನಮ್ಮಲ್ಲಿ ತರುತ್ತಾರೆ.
ಪರಮಹಂಸರು ಹುಟ್ಟಿದ್ದು ತಿರುವಣ್ಣಾಮಲೈ- ದಕ್ಷಿಣ ಭಾರತದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ ತೀವ್ರವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮಾನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಫೋಟಿಸಲು ಮತ್ತು ಆಧ್ಯಾತ್ಮಿಕವಾಗಿ ಬಲಾಢ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಂತ್ರಜ್ಞಾನವೊಂದನ್ನು ರೂಪಿಸಿದರು. ರೂಪಿಸಿರುವ ಅಸಂಖ್ಯಾತ ಕಾರ್ಯಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು ಬೀಳುವಂತೆ ಮಾಡುತ್ತವೆ. ಅವರು ಹೇಳುತ್ತಾರೆ, ಭೌತಿಕ ಜಗತ್ತಿನಲ್ಲಿ ಯಶಸ್ಸನ್ನು ಮತ್ತು ನಿಮ್ಮ ಅಂತರಂಗದಲ್ಲಿ ಆಳವಾದ ಸಾಫಲ್ಯತೆಯನ್ನು ತರಲು ಧ್ಯಾನವು ಅನುಪಮ ಕೀಲಿಕೈ.
ಲೈಫ್ ಬ್ಲಿಸ್ ಫೌಂಡೇಶನ್ ಕುರಿತು (LBF)
ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1000 ಕೇಂದ್ರಗಳಷ್ಟು ಹಬ್ಬಿದೆ. ಅದರ ತೆಕ್ಕೆಯಲ್ಲಿ ಇಂಟರ್ ನ್ಯಾಶನಲ್ ವೇದಿಕ್ ಹಿಂದೂ ಯೂನಿವರ್ಸಿಟಿ (IVHU) ಯುಎಸ್ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್ಎ, ಇವುಗಳನ್ನು ಹೊಂದಿದೆ.
ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ ಅಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ ಬೆಳವಣಿಗೆಯು ಅಗಾಧವಾಗಿದ್ದು ಬಾಹ್ಯ ಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದಂತಹ ವಿವಿಧ ಚಟುವಟಿಕೆಗಳಿಂದ ಅನ್ವೇಷಿಸಲು ಮತ್ತು ವಿಸ್ಫೋಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡು ಪರಮಾನಂದದ
ಜೀವನವನ್ನು ಸೃಷ್ಟಿಸುವಂತಹ ಪರಿಮಾಣಿತ ಆಧ್ಯಾತ್ಮಿಕತೆ (Quantum Spirituality)ಯನ್ನು ಅವು ಪೋಷಿಸುತ್ತವೆ. ಅವು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. IVHU ಮುಖಾಂತರ ಪ್ರಪಂಚದಾದ್ಯಂತ ವೈರುಧ್ಯ ಶ್ರೇಣಿಯ ಧ್ಯಾನತಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭಾರತದಲ್ಲಿ ಒಂದು ವರ್ಷ ಅವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ.
ನಿತ್ಯಾನಂದ ಧೀರ ಸೇವಾ ಸೇನಾ (NDSS)ದ ಆನಂದ ಸೇವಕ್ಸ್ ಎಂಬ ಸ್ವಯಂ ಸೇವಕರು ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡಿದ್ದು ಅತ್ಯುತ್ಸಾಹದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.
ಲೈಫ್ ಬ್ಲಿಸ್ ಫೌಂಡೇಶನ್ (LBF) ನ ಕೊಡುಗೆ
ದೇಹ, ಮನಸ್ಸು ಮತ್ತು ಆತ್ಮದ ಹಂತದಲ್ಲಿ ಲಕ್ಷಗಟ್ಟಲೆ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವೈಶಿಷ್ಟ್ಯ ಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು:
LBP ಹಂತ 1 - ಲೈಫ್ ಬ್ಲಿಸ್ ಪ್ರೋಗ್ರಾಂ
ನಿಮ್ಮನ್ನೇ ನೀವು ಸಚೇತನಗೊಳಿಸಿಕೊಳ್ಳಿ
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಅದು ನಿಮ್ಮ ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳುವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ಧಿಕ ತಿಳುವಳಿಕೆಯನ್ನು ನೀಡುವುದು. ಅದು ಬೌದ್ಧಿಕ ಹಂತದಲ್ಲಿ ಆಧ್ಯಾತ್ಮಿಕತೆಯ ಪರಿಣಾಮವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮದೇ ಆತ್ಮscoreದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನಗಳಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದ ಕಾರ್ಯಾಗಾರವಾಗಿದೆ.
LBP ಹಂತ 2 - ನಿತ್ಯಾನಂದ ಸ್ಪುರಣ ಪ್ರೋಗ್ರಾಂ
ಸಾವಿನ ರಹಸ್ಯದ ಭೇದನೆ
ಸಾವಿನ ಕಲ್ಪನೆಯ ಗಹನತೆಯನ್ನು ನಿವಾರಿಸಿ ಜೀವನದ ಕಲೆಯನ್ನು ಬಿಡುಗಡೆಗೊಳಿಸುವ ಒಂದು ಕಾರ್ಯಕ್ರಮ. ಸಾವಿನ ಉದ್ದೇಶ ಹಾಗೂ ಕ್ರಮವು ನಿಮಗೆ ತಿಳಿದಿದ್ದರೆ, ನಿಮ್ಮ ಜೀವನವನ್ನು ಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಜೀವಿಸುವಿರಿ ! ಅದು ಆಳವಾಗಿ ಬೇರೂರಿದ ಮತ್ತು ಪ್ರಜ್ಞಾರಹಿತ ಮನೋಭಾವನೆಗಳಿಂದ ಬೇರ್ಪಡಿಸಲು ಜಾಗವನ್ನು ಸೃಷ್ಟಿಸುತ್ತದೆ. ಇವೆಲ್ಲವೂ ಅಂತಿಮವಾದ ಸಾವಿನ ಭಯದಿಂದ ಹುಟ್ಟಿರುವಂತಹವು. ಸ್ವಾಭಾವಿಕ ಬುದ್ಧಿ ಮತ್ತು ಸ್ವಯಂ ಸ್ಫೂರ್ತಿದಾಯಕವಾದ ಉತ್ಸಾಹದಿಂದ ನಡೆಸಲ್ಪಡುವ ಒಂದು ನವ ಜೀವನಕ್ಕೆ ಇದು ಹೆಬ್ಬಾಗಿಲು.
LBP ಹಂತ 3 - ಆತ್ಮ ಸ್ಪುರಣ ಪ್ರೋಗ್ರಾಂ / ಧ್ಯಾನ ಸ್ಫೂರ್ಣ ಪ್ರೋಗ್ರಾಂ
ನಿಮ್ಮೊಂದಿಗೆ ನೀವು ಸಂಪರ್ಕವನ್ನು ಹೊಂದಿರಿ
ಇದೊಂದು ರಹಸ್ಯಗಳನ್ನು ಭೇದಿಸಬಲ್ಲಂತಹ ಕಾರ್ಯಕ್ರಮವಾಗಿದ್ದು ಮನಸ್ಸಿನ ಕಾರ್ಯಗಳನ್ನು ಸ್ಪಷ್ಟವಾಗಿ ವಿಶ್ಲೇಷಿಸಿ ಅದು ನಿಮ್ಮನ್ನು ಆಳುವ ಬದಲು ನೀವೇ ಅದರ ಯಜಮಾನರು ಹೇಗೆ ಆಗಬಹುದೆಂದು ಅನುಭವ ಪೂರಕವಾಗಿ ತೋರಿಸುವುದು. ನಿಮ್ಮನ್ನು ಮೂಲ ಮನೋಭಾವನೆಗಳಾದ ಕಾಮ, ದುರಾಸೆ, ಭಯ ಮತ್ತು ಕೋಪಗಳಿಂದ ತರ್ಕದ ಸೂಕ್ಷ್ಮ ಸತ್ಯಗಳು ಬುದ್ಧಿವಂತಿಕೆ ಮತ್ತು ಅಂತಿಮವಾಗಿ ಪರಮಾನಂದಕ್ಕೆ ನಿಮ್ಮನ್ನು ಮೇಲೆತ್ತಲು ಒಂದು ಖಚಿತವಾದ ಪರಿಹಾರ.
ಲೈಫ್ ಬ್ಲಿಸ್ ಟೆಕ್ನಾಲಜಿ (LBT)
LBT ಯು 18 ರಿಂದ 30 ವರ್ಷದೊಳಗಿನ ಯುವಜನಾಂಗಕ್ಕಾಗಿ ಇರುವ ಒಂದು ವರ್ಷದ ಅವಧಿಯ ನಿವಾಸಿತ ಕಾರ್ಯಕ್ರಮ. ಪೌರಾತ್ಯ ವ್ಯವಸ್ಥೆಯಾದ ವೇದೀಯ ಶಿಕ್ಷಣದಲ್ಲಿ ಅದರ ಬೇರುಗಳು ಇದ್ದು ಈ ಕಾರ್ಯಕ್ರಮವು ಆಧುನಿಕ ಯುವಜನಾಂಗಕ್ಕೆ ಒಳ್ಳೆಯ ದೈಹಿಕ, ಮಾನಸಿಕ ಮತ್ತು ಮನೋಭಾವನೆಗಳ ಆರೋಗ್ಯದಿಂದ ಶಕ್ತೀಕರಿಸಲು ವಿನ್ಯಾಸಗೊಳಿಸಲಾಗಿದೆ.
ಅವರ ಸೃಜನಾತ್ಮಕ ಬುದ್ಧಿವಂತಿಕೆ ಮತ್ತು ಸ್ವಯಂ ಸ್ಫೂರ್ತಿಯನ್ನು ಪೋಷಿಸುವುದರ ಮೂಲಕ, ಮತ್ತು ವೃತ್ತಿಯ ಕೌಶಲ್ಯವನ್ನು ನೀಡುವ ಮೂಲಕ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸ್ವಯಂಪೂರ್ಣರಾದ ಯುವಕರನ್ನು ಸೃಷ್ಟಿಸುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ ಇದು ಜ್ಞಾನೋದಯ ಹೊಂದಿದ ಗುರುಗಳೊಬ್ಬರ ಪಾಲನೆಯಲ್ಲಿ ಇದ್ದು ಕಲಿಯಬಹುದಾದಂತಹ ಜೀವಿತಕಾಲದ ಒಂದು ಸದವಕಾಶವನ್ನು ನೀಡುತ್ತದೆ.
ನಮ್ಮನ್ನು ಸಂಪರ್ಕಿಸಲು :
USA
ಲೈಫ್ ಬ್ಲಿಸ್ ಫೌಂಡೇಶನ್
ಮಾಂಟ್ಕ್ಲೇರ್
CA 91763, USA
ಫೋನ್ : 626 531 6065
E-mail : [email protected].
URL : www.lifebliss.org
ಭಾರತ :
ನಿತ್ಯಾನಂದ ಧ್ಯಾನ ಪೀಠಂ ನಿತ್ಯಾನಂದ ಪುರಿ, ಕಲ್ಲುಗೋಪ ಹಳ್ಳಿ , ಮೈಸೂರು ರಸ್ತೆ ಬಿಡದಿ, ಬೆಂಗಳೂರು - 562 109. ಕರ್ನಾಟಕ, ಭಾರತ ಆಶ್ರಮ : 91-80-65591844,27202084 Fax : 91 +8027288207 Email: [email protected] URL: www.dhyanapeetam.org www.nithyananda.org
ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ, www.dhyanapeetam.org ಗೆ ಭೇಟಿ ಕೊಡಿ.
ಓದನ್ನು ಮುಂದುವರಿಸಲು ಸೂಚಿತ ಪುಸ್ತಕಗಳು
- ನೋವಿನಿಂದ ಆನಂದಕ್ಕೆ
- ಸರಳವಾದ ಸತ್ಯ ನೇರವಾಗಿ!
- ಚಿಂತೆಯಿಂದ ಚಿಂತನೆಗೆ
- ತೆರೆಬಾಗಿಲು ತಂಗಾಳಿ ಒಳಗೆ ಬೀಸಲಿ!
- ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?
- ಪ್ರೀತಿಯ ಅನ್ವೇಷಣೆ
- ಖಚಿತ ಪರಿಹಾರಗಳು
- ನಿತ್ಯಧ್ಯಾನ
- ಅವರ ಹೆಸರು ನಿತ್ಯಾನಂದ
ಪರಮಹಂಸ ನಿತ್ಯಾನಂದರ ಪುಸ್ತಕಗಳು 23 ಭಾಷೆಗಳಲ್ಲಿ ಲಭ್ಯವಾಗಿವೆ. ಲೈಫ್ ಬ್ಲಿಸ್ ಗೇಲೇರಿಯಾನಿಂದ DVDಗಳು, CDಗಳು, 'ಮೆಡಿಟೇಶನ್ ಕಿಟ್' ಮತ್ತು ಇತರ ಪದಾರ್ಥಗಳಾಗಿ www.lifeblissgalleria.com ಅನ್ನು ವೀಕ್ಷಿಸಿ ಅಥವಾ ನಮ್ಮನ್ನು ಸಂಪರ್ಕಿಸಿ.
‘ನನ್ನ ಉಪಸ್ಥಿತಿಯಲ್ಲಿ ನಿಮ್ಮ ಪ್ರಶ್ನೆಯು
ತನ್ನಷ್ಟಕ್ಕೆ ಮಾಯವಾದರೆ, ಅದು ನಿಮ್ಮ
ನೈಜ ಪ್ರಶ್ನೆಯಾಗಿರಲಿಲ್ಲ, ಅದು ಕೇವಲ
ನಿಮ್ಮ ಮನಸ್ಸಿನ ಒಂದು ಆಟವಾಗಿತ್ತು.’
-ಪರಮಹಂಸ ನಿತ್ಯಾನಂದ
Ebook ISBN : 979-8-88572-451-7
ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ)