KAILASA Library/ಪರಮಹಂಸ ನಿತ್ಯಾನಂದ/ನಿಮ್ಮ ಪ್ರಶ್ನೆಗಳಿಗೆ ಉತ್ತರSign in
ಪರಮಹಂಸ ನಿತ್ಯಾನಂದ

ನಿಮ್ಮ ಪ್ರಶ್ನೆಗಳಿಗೆ ಉತ್ತರ

This text was machine-transcribed from the printed book and may contain errors. Select the words and choose “Report a mistake”.

(Your Questions Answered in Kannada)

ಪರಮಹಂಸ ನಿತ್ಯಾನಂದ

ಪ್ರಪಂಚದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳಿಗೆ ಮತ್ತು ಆನಂದ ಸಮಾಜಿಯರಿಗೆ ನೀಡಲಾದ ಪ್ರವಚನಗಳು

ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ)

ನಿತ್ಯಾನಂದ ವೇದಿಕ್ ಸೈನ್ಸ್‌ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ
(ನಿತ್ಯಾನಂದ ವೇದಿಕ್ ಸೈನ್ಸ್‌ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ)

© : 2007
ಮೊದಲ ಆವೃತ್ತಿ : 2004
ಎರಡನೇ ಆವೃತ್ತಿ : ಡಿಸೆಂಬರ್ 2007
Ebook ISBN : 979-8-88572-451-7
ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.

ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ
ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ
ಅಥವಾ ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರಿಕಾರ್ಡಿಂಗ್ ಅಥವಾ
ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ
ಮಾಡಕೂಡದು.

ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ
ಉಪಯೋಗಿಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶಕರಾಗಲೀ ನಿಮ್ಮ ಕೃತ್ಯಗಳಿಗೆ
ಹೊಣೆಯನ್ನು ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು
ಉದಾರ ಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ.

ಭಾರತದಲ್ಲಿ ಮುದ್ರಣ : ಆದಿತ್ಯ ಪ್ರಿಂಟರ್ಸ್‌, ದೂ: 2660 6776

- ಪರಮಹಂಸ ನಿತ್ಯಾನಂದ-

ನಿಮ್ಮ ಪ್ರಶ್ನೆಗಳಿಗೆ ಉತ್ತರ

'"ನನ್ನ ಉಪಸ್ಥಿತಿಯಲ್ಲಿ ನಿಮ್ಮ ಪ್ರಶ್ನೆಗಳು ಎಲ್ಲಾ ಏಕೆ ಮಾಯವಾಗಿ ಹೋಗುವುವು?"

ಇದಕ್ಕೆ ಕಾರಣ - ನೀವು ನನ್ನ ಉಪಸ್ಥಿತಿಯಲ್ಲಿ ಇದ್ದಾಗ ನಿಮ್ಮಲ್ಲಿ ಎಷ್ಟು ತೀವ್ರವಾದ ಎಚ್ಚರಿಕೆಯು ಉಂಟಾಗಿರುವುದು ಮತ್ತು ನೀವು ಅದೆಷ್ಟು ಸಂಪೂರ್ಣವಾಗಿ ಪ್ರಸಕ್ತರಾಗಿರುತ್ತೀರಿ ಎಂದರೆ, ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟಲು ಅವಕಾಶವೇ ಇರುವುದಿಲ್ಲ. ಎಷ್ಟಾದ್ದರೂ ನಿಮ್ಮ ವರ್ತಮಾನದ ಮೇಲೆ ನಿಮ್ಮ ಗತಕಾಲದ ಮತ್ತು ನಿಮ್ಮ ಭವಿಷ್ಯದ ಹೊರೆಯೇ ಪ್ರಶ್ನೆಗಳು - ಅಲ್ಲವೇ ? ಈ ಕಾರಣಕ್ಕೇ - ನೀವು ನನ್ನ ಜೊತೆಯಲ್ಲಿದ್ದಾಗ ನಿಮ್ಮ ಶಂಕೆಗಳೆಲ್ಲ ಮಾಯವಾಗಿ ಹೋಗುವುವು. ನಾನು ಇರುವ ಉದ್ದೇಶವೇ ಇದು - ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಕ್ಕಲ್ಲ, ಆದರೆ ಅವುಗಳನ್ನು ಸಂಪೂರ್ಣವಾಗಿ ಕರಗಿಸಲು!

ಪ್ರಿಯ ಸ್ವಾಮೀಜಿ ಆತ್ಮ ಸಾಕ್ಷಾತ್ಕಾರಕ್ಕಾಗಿ ಈ ಸಂಸಾರವನ್ನು ತ್ಯಜಿಸುವುದು ಅಗತ್ಯವೆ?

ಆತ್ಮ ಸಾಕ್ಷಾತ್ಕಾರಕ್ಕಾಗಿ, ನೀವು ಕೇವಲ ಅಜ್ಞಾನವನ್ನು ತ್ಯಜಿಸುವುದಕ್ಕೆ ತಯಾರಾಗಿರ ಬೇಕು.

ಆತ್ಮ ಜ್ಞಾನವನ್ನು ಪಡೆಯುವುದಕ್ಕೂ, ಸಂಸಾರವನ್ನು ತ್ಯಜಿಸುವುದಕ್ಕೂ ಏನು ಸಂಬಂಧವಿಲ್ಲ. ಸಂಸಾರವನ್ನು ಬಿಟ್ಟು ಹೋಗುವುದು, ಸಂಸಾರವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವುದಷ್ಟೇ ಕೆಟ್ಟದ್ದು. ಈ ಎರಡು ಸಂಗತಿಗಳಲ್ಲಿಯೂ ಸಂಸಾರವು ನಿಮ್ಮನ್ನು ಹಿಡಿತದಲ್ಲಿಟ್ಟುಕೊಂಡಿರುವುದು ಎಂಬುವುದು ಸ್ಪಷ್ಟವಾಗಿ ಕಾಣಿಸಿ ಕೊಳ್ಳುವುದು. ಸಂಸಾರವನ್ನು ದ್ವೇಷಿಸುವುದು, ಸಂಸಾರದ ಮೇಲೆ ಹೆಚ್ಚು ಆಕ್ಕರೆ ಇರುವುದು ಇವೆರಡೂ ಅಜ್ಞಾನದ ಪರಿಣಾಮವಾಗಿರುವುವು.

ಒಬ್ಬ ವ್ಯಕ್ತಿಯು ಗುಡ್ಡದಲ್ಲಿ ಒಂದು ಗುಹೆಯೊಳಗೆ ವಾಸ ಮಾಡಿಕೊಂಡೂ ಅವನಲ್ಲಿ ಸದಾ ಸಂಸಾರದ ಹಂಬಲವಿರಬಹುದು ಹಾಗೂ ಇನ್ನೊಬ್ಬ ವ್ಯಕ್ತಿಯು ಸಂಸಾರದಲ್ಲಿ ವಾಸ ಮಾಡಿಕೊಂಡೂ ಸಂಸಾರದ ಒತ್ತಡಗಳಿಂದ ಸಂಪೂರ್ಣವಾಗಿ ನಿರ್ಲಿಪ್ತನಾಗಿರಬಹುದು. ಸಂನ್ಯಾಸವನ್ನು ತೆಗೆದು ಕೊಳ್ಳುವುದು ಎಂದರೆ ಕೇವಲ

ಸಂಸಾರವನ್ನು ತ್ಯಜಿಸುವುದಲ್ಲ, ಸಂಸಾರದ ಮೇಲೆ ಅಕ್ಕರೆ ಮತ್ತು ದ್ವೇಷ ಇವೆರಡನ್ನೂ ತ್ಯಜಿಸುವುದೇ ಸಂನ್ಯಾಸ ತೆಗೆದುಕೊಳ್ಳುವುದರ ಸರಿಯಾದ ಅರ್ಥ. ಅಜ್ಞಾನದ ಮಬ್ಬಿನಲ್ಲಿ ನೋಡಿದಾಗ ಯಾವ ಜೀವನವು ಸಂಸಾರ ಎನಿಸುವುದೋ ಅದೇ ಜೀವನವು ಜಾಗ್ರತೆಯ ಸ್ಪಷ್ಟ ಉಜ್ವಲ ಪ್ರಕಾಶದಲ್ಲಿ ನೋಡಿದಾಗ ಸಂನ್ಯಾಸವಾಗಿ ಹೋಗುವುದು.

ಸಂನ್ಯಾಸಿಗಳು ಸಂಸಾರವನ್ನು ಹಚ್ಚಿಕೊಳ್ಳದೆ ಒಂದು ಸರಳವಾದ ಜೀವನವನ್ನು ನಡೆಸುತ್ತಾರೆ ಎಂಬುದು ನಿಜ – ಆದರೆ ಅವರಿಗೆ ಸಂಸಾರದ ಮೇಲೆ ದ್ವೇಷ ಮತ್ತು ಅಕ್ಕರೆ ಇವೆರಡರನ್ನೂ ತ್ಯಜಿಸುವುದು ಒಂದು ಪ್ರಯಾಸಕರ ಕೆಲಸವಲ್ಲ. ಆತ್ಮ ಜ್ಞಾನವನ್ನು ಹೊಂದಿದಾಗ ವೈರಾಗ್ಯವು ತಾನಾಗಿ ತಾನೆ ಆಗುವುದು. ನಿಮ್ಮೊಳಗಿರುವ ಸಂಸಾರದ ಮೇಲೆ ಅಕ್ಕರೆ ಮತ್ತು ದ್ವೇಷದ ನಡುವೆ ಇರುವ ಸಂಘರ್ಷದ ತಿಳುವಳಿಕೆಯೇ ಸಂನ್ಯಾಸತ್ವಕ್ಕೆ ಮೊದಲನೆಯ ಹೆಜ್ಜೆ. ಈ ಸಂಘರ್ಷಕ್ಕೆ ನೀವು ಸಾಕ್ಷಿಯಾದಾಗ, ಮೋಹ ಮತ್ತು ದ್ವೇಷವನ್ನು ಮೀರಿರುವ, ಇದರ ವಿಚಾರವಾಗಿರುವ 'ಹೌದು-ಇಲ್ಲ'ಗಳಿಂದ ಸಂಪೂರ್ಣವಾಗಿ ನಿರ್ಲಿಪ್ತವಾಗಿರುವ ನಿಮ್ಮಲ್ಲಿದ್ದ ಅತಿ ಒಳಗಿನ ತಿರುಳನ್ನು ನೀವು ಗುರುತಿಸಬಲ್ಲಿರಿ. ಇದೇ ನಿಮ್ಮ ಆತ್ಮ ನಿರ್ವಿಕಾರವಾದ ಮತ್ತು ಶಾಶ್ವತವಾದ ನಿಮ್ಮ ಆತ್ಮ. ಈ ಜಾಗ್ರತೆಯ ಜ್ವಾಲೆಯಲ್ಲಿ ಬೇಡವಾಗಿರುವುದೆಲ್ಲಾ ಮರದಿಂದ ಒಣಗಿಹೋಗಿರುವ ಎಲೆಗಳು ಬಿದ್ದು ಹೋದಂತೆ ನಿಮ್ಮಿಂದ ಬಿದ್ದು ಹೋಗುವುದು. ಉಳಿದುಕೊಂಡಿರುವುದು ಕೇವಲ ಸಂಪೂರ್ಣವಾಗಿ ಸಾರಭೂತವಾದದ್ದು - ಇದೇ ಸಂನ್ಯಾಸ.

ಕೆರೆಯಲ್ಲಿ ಕಮಲದ ಹೂವಿನ ಜೀವನದ ಹಾಗೆ ನಿಜವಾದ ಸಂನ್ಯಾಸ - ಕೆಸರಿನಲ್ಲಿ ಆರಾಮವಾಗಿ ಇರುವುದು ಆದರೆ ಆ ನೀರಿನಿಂದ ಅಕಲಂಕಿತ ಮತ್ತು ನಿರ್ಲಿಪ್ತವಾಗಿರುವುದು.

ಜೆನ್ ಧರ್ಮದಿಂದ ಒಂದು ಕಥೆ:

ಒಬ್ಬ ಗುರು ಮತ್ತು ಅವನ ಶಿಷ್ಯನು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. ಎರಡು ಹಳ್ಳಿಗಳ ನಡುವೆ ಆಳವಿಲ್ಲದ ಒಂದು ಹೊಳೆ ಹರಿಯುತ್ತಿತ್ತು. ಸಾಮಾನ್ಯವಾಗಿ ನೀರಿನಲ್ಲಿ ನಡೆದು ಅವರು ಆ ಹೊಳೆಯನ್ನು ದಾಟುತ್ತಿದ್ದರು. ಆದರೆ ಈ ಸಾರಿ, ಭಾರಿ ಮಳೆ ಬಿದ್ದಿದ್ದರಿಂದ ಹೊಳೆಯು ಒಂದು ಚಿಕ್ಕ ನದಿಯಂತೆ ಉಬ್ಬಿಕೊಂಡಿತ್ತು. ಆಳ ಜಾಸ್ತಿ ಆಗಿದ್ದರಿಂದ ಅವರಿಗೆ ನೀರಿನಲ್ಲಿ ನಡೆಯುವುದಕ್ಕೆ ಸಾಧ್ಯವಾಗಲಿಲ್ಲ.

ಶಿಷ್ಯನ ಮನಸ್ಸಿನಲ್ಲಿ ಗಾಬರಿಯು ಉಂಟಾಗಿ ಅವನು ಗುರುವನ್ನು ಕೇಳಿದ, "ಗುರುಗಳೇ ಈ ನದಿಯನ್ನು ದಾಟುವುದಕ್ಕೆ ನಾವು ಪ್ರಯತ್ನಪಡಬೇಕೆ?"

ಕಣ್ಣುಗಳು ವಿನೋದದಿಂದ ಮಿನುಗುತ್ತಾ ಗುರುಗಳು ಉತ್ತರ ಕೊಟ್ಟರು, "ಮಗನೇ, ಖಂಡಿತ ನದಿಯನ್ನು ದಾಟಬೇಕು. ಆದರೆ ಒಂದು ಮಾತು ಜ್ಞಾಪಕ ಇಟ್ಟುಕೋ ನಿನ್ನ ಪಾದಗಳು ಒದ್ದೆ ಆಗದಂತೆ ನೋಡಿಕೋ!"

ಇದೇ ಸಂಸಾರದ ನಿಜವಾದ ಅರ್ಥ. ನಿಮಗೆ ಸಂಸಾರದ ನದಿಯನ್ನು ಸಂಸಾರದಿಂದ ಒದ್ದೆ ಮಾಡಿಕೊಳ್ಳದೆ ದಾಟುವುದಕ್ಕೆ ಸಾಧ್ಯವಾದರೆ, ನೀವು ಸಂನ್ಯಾಸತ್ವವನ್ನು ಪಡೆದಿದ್ದೀರಾ!

ಪ್ರ : ಅಹಂಕಾರವನ್ನು
ತ್ಯಜಿಸುವ ಇಚ್ಛೆಯೇ ಅಹಂ-
ಕಾರದ ಒಂದು ಅಭಿವ್ಯಕ್ತತೆ-
ಯಾಗಿರುವುದು. ಹೀಗೆ ಇರ-
ಬೇಕಾದರೆ ಅಹಂಕಾರವನ್ನು
ಹೇಗೆ ತ್ಯಜಿಸಲಾಗುವುದು?

ನಿಮಗೆ ಒಂದು ಪ್ರಶ್ನೆ: ಅಹಂಕಾರಕ್ಕೆ ಒಂದು
ಅಸ್ತಿತ್ವವೇ ಇಲ್ಲದಿರಬೇಕಾದರೆ ಅದನ್ನು
ನೀವು ಹೇಗೆ ತ್ಯಜಿಸಲು ಸಾಧ್ಯ?

ನೀವು ಒಂದು ಕತ್ತಲೆಯ ಕೊಠಡಿಯಲ್ಲಿ ಕುಳಿತುಕೊಂಡಿದ್ದೀರಾ ಎಂದು ಅಂದುಕೊಳ್ಳಿ. ಕತ್ತಲೆಯನ್ನು ಓಡಿಸಬೇಕೆಂದು ನಿಮಗೆ ಇಚ್ಛೆ. ಆದರೆ ಅದನ್ನು ಹಾಗೆ ಹೊರಗೆ ತಳ್ಳಲು ಸಾಧ್ಯವೇ? ಅದರೊಂದಿಗೆ ಯುದ್ಧ ಮಾಡಿ ಬಲವಂತದಿಂದ ಹೊರಗೆ ತಳ್ಳಬಲ್ಲಿರೇ? ಖಂಡಿತ ಇಲ್ಲ. ನೀವು ಎಷ್ಟು ಪ್ರಯತ್ನ ಪಟ್ಟರೂ ಕಟ್ಟು ಕಡೆಯಲ್ಲಿ ನೀವು ಸೋಲುವಿರಿ - ಅಷ್ಟೇ ಅಲ್ಲ ಒಂದು ಅಸ್ತಿತ್ವವೇ ಇಲ್ಲದಿರುವಂಥದ್ದು ನಿಮ್ಮನ್ನು ಸೋಲಿಸುವುದು! ಅಹಂಕಾರವೂ ಈ ಕತ್ತಲೆಯ ಸಮಾನ, ಅದಕ್ಕೆ ಒಂದು ಸಕಾರಾತ್ಮಕ (ಪಾಸಿಟಿವ್) ಅಸ್ತಿತ್ವ ಇಲ್ಲ. ಹೇಗೆ ಕತ್ತಲೆಯು ಕೇವಲ ಬೆಳಕಿನ ಅನುಪಸ್ಥಿತಿಯೋ ಅದೇ ರೀತಿಯಲ್ಲಿ ಅಹಂಕಾರವು ಕೇವಲ ಜಾಗ್ರತೆಯ ಅನುಪಸ್ಥಿತಿಯು ಆಗಿರುವುದು.

ಅಹಂಕಾರವನ್ನು ನಾಶ ಮಾಡುವುದಕ್ಕಾಗಿ ಯುದ್ಧ ಮಾಡುವುದು ಕತ್ತಲೆಯನ್ನು ಕೊಠಡಿ ಯಿಂದ ಹೊರಗೆ ತಳ್ಳಲು ಅದರೊಂದಿಗಿನ ಸಂಘರ್ಷದ ಸಮಾನ. ನೀವು ಕತ್ತಲನ್ನು ನಿಜವಾಗಿ ಓಡಿಸಬೇಕಾದರೆ ಅದರೊಂದಿಗೆ ಸಂಘರ್ಷವನ್ನು ಮರೆತು ಬಿಡಿ. ಅದರ ಬದಲು ನಿಮ್ಮ ಚೈತನ್ಯದ (ಎನರ್ಜಿಯ) ಗುರಿಯನ್ನು ಬೆಳಕಿನ ಕಡೆಗೆ ತಿರುಗಿಸಿ ಕೇವಲ ಒಂದು ಚಿಕ್ಕ ದೀಪವನ್ನು ಕೊಠಡಿಯೊಳಗೆ ತೆಗೆದುಕೊಂಡು ಬಂದರೆ ಸಾಕು, ಕತ್ತಲೆ ತಾನಾಗಿ ತಾನೆ ಮಾಯವಾಗಿ ಹೋಗುವುದನ್ನು ನೀವು ಕಾಣುವಿರಿ. ಅದಕ್ಕೇ ನಾನು ಹೇಳುತ್ತೇನೆ, ಅಹಂಕಾರದ ವಿಷಯ ಮರೆತು ಬಿಡಿ. ಅದರ ಬದಲು ಜಾಗ್ರತೆಯ ಬೆಳಕನ್ನು ನಿಮ್ಮ ಅಂತರಂಗದೊಳಗೆ ಹರಡಲು ಬಿಡಿ. ನಿಮ್ಮ ಇಡೀ ಪ್ರಾಜ್ಞತೆಯು ಒಂದು ದೀಪವಾಗಿ ಉರಿದಾಗ ನಿಮ್ಮ ಅಹಂಕಾರವು ಮಾಯವಾಗಿ ಹೋಗುವುದನ್ನು ನೀವು ಕಾಣುವಿರಿ.

ಅಹಂಕಾರವು ಕೇವಲ ಒಂದು ಭ್ರಮೆ. ನಿಮಗೆ ಅದರ ತಿಳುವಳಿಕೆ ಇಲ್ಲದಿದ್ದಾಗ ಅದನ್ನು ತ್ಯಜಿಸುವುದಕ್ಕೆ ಸಾಧ್ಯವಿಲ್ಲ, ಏಕೆಂದರೆ ನಿಮಗೆ ತ್ಯಜಿಸುವುದು ಹೇಗೆ ಎಂದು ಗೊತ್ತಿರುವುದಿಲ್ಲ. ಆದರೆ ನಿಮಗೆ ಅದರ ಅರಿವಾದಾಗ ಕೂಡ ಅದನ್ನು ತ್ಯಜಿಸುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲ - ಕಾರಣ ಏನೆಂದರೆ ನಿಮಗೆ ತ್ಯಜಿಸುವುದಕ್ಕೆ ಏನೂ ಇಲ್ಲ ಎಂದು ತಿಳುವಳಿಕೆ ಆಗಿರುವುದು!

“ಅಹಂಕಾರವನ್ನು ತ್ಯಜಿಸಿದರೆ ನಿಮಗೆ ಆತ್ಮ ಜ್ಞಾನವಾಗುವುದು'', ಎಂದು ನೀವು ಯಾವುದನ್ನು ಕೇಳಿದ್ದೀರೋ, ಓದಿದ್ದೀರೋ, ಕಲಿತುಕೊಂಡಿದ್ದೀರೋ - ಅವೆಲ್ಲ ಸಂಪೂರ್ಣವಾಗಿ ನಿರರ್ಥಕವಾದದ್ದು. ನಿಜವಾಗಿ ಆಗುವುದು ಇದಕ್ಕೆ ವಿರುದ್ಧ ! ಆತ್ಮಜ್ಞಾನವು ವಿಕಸಿಸುತ್ತಿದ್ದ ಹಾಗೇ ನಿಮಗೆ ಅಹಂಕಾರವೇ ಇಲ್ಲದೆ ಇರುವ ಅನುಭವವು ಆಗುವುದು. ಹಾಗೆ ತಾನಾಗಿ ತಾನೆ ಶರಣಾಗಿ ಹೋಗಿರುವುದು!

ಆದರೆ ಈ ಪ್ರಶ್ನೆಯು ನಿಮ್ಮ ಅಂತರಂಗದಲ್ಲಿ ಹುಟ್ಟಿರುವುದನ್ನು ಕಂಡು ನನಗೆ ಬಹಳ ಸಂತೋಷವಾಯಿತು. ಈ ಅಹಂಕಾರದ ಪ್ರಶ್ನೆಯೇ ನಿಮ್ಮ ಎಲ್ಲಾ ದುಃಖಗಳಿಗೆ ಮತ್ತು ಮಾನಸಿಕ ಉದ್ವೇಗಕ್ಕೆ ಮೂಲಭೂತ ಕಾರಣ ವಾಗಿರುವುದು. ಅದು ನರಕಕ್ಕೆ ಒಂದು ಹೆಬ್ಬಾಗಿಲು ಆಗಿರುವುದು. ಅಹಂಕಾರವನ್ನು ತ್ಯಜಿಸಬೇಕೆಂದು ಒಂದು ಉತ್ಸಾಹ ಇರುವುದು, ನಿಮ್ಮಲ್ಲಿ ಅದರ ಹೊರೆಯಿಂದ ಬಿಡುಗಡೆಯ ಅವಶ್ಯಕತೆ ಇರುವುದೇ, ಜಾಗೃತಿಯ ದಿಕ್ಕಿನಲ್ಲಿ ಒಂದು ಮುಖ್ಯವಾದ ಹೆಜ್ಜೆ. ನೀವು ನಿದ್ರೆಯಿಂದ ಎಚ್ಚರವಾಗುತ್ತಾ ಇರುವಿರಿ ಎಂದು ತೋರಿಸುತ್ತಾ ಇರುವುದು!

ಪ್ರ : ನಾನು ನಿಮ್ಮ ಸಾನಿಧ್ಯದಲ್ಲಿ ಇದ್ದಾಗಲೆ, ನನ್ನ ಪ್ರಶ್ನೆಗಳೂ, ಮಾಯಾವಾಗುವುವು ಮತ್ತು ಎಲ್ಲವೂ ಸಾಧ್ಯವೆಂದು ಎನಿಸುವುದು. ಆದರೆ ನಾನು ನಿಮ್ಮಿಂದ ದೂರವಿದ್ದಾಗ ಮತ್ತೊಮ್ಮೆ ನನ್ನ ಹಳೆ ಶಂಕೆಗಳು, ಪ್ರಶ್ನೆಗಳು ಮೆಲ್ಲನೆ ಹಿಂತಿರುಗುವುವು. ಹೀಗೆ ಏಕೆ ಆಗುವುದು? - ಮತ್ತು ಇದರ ಬಗ್ಗೆ ನಾನೇನು ಮಾಡಬಹುದು?ನನ್ನ ಉಪಸ್ಥಿತಿಯಲ್ಲಿ ನಿಮ್ಮ ಪ್ರಶ್ನೆಗಳು ತಾನಾಗಿ ತಾನೆ ಮಾಯವಾಗಿ ಹೋದರೆ ಅದು ಒಂದು ಪ್ರಶ್ನೆಯೇ ಆಗಿರಲಿಲ್ಲ , ಬದಲಾಗಿ ಕೇವಲ ನಿಮ್ಮ ಮನಸ್ಸಿನ ಒಂದು ಆಟವಾಗಿತ್ತು ಎಂದು ತಿಳಿದುಕೊಳ್ಳುವ ಸಮಯ ಬಂದಿದೆ. ನೀವು ನನ್ನ ಉಪಸ್ಥಿತಿಯಲ್ಲಿದ್ದಾಗ ನೀವು ನಿಮ್ಮ ಮನಸ್ಸಿನ ಹಿಡಿತದಲ್ಲಿ ಇರುವುದಿಲ್ಲ - ಬದಲಾಗಿ ನೀವು ಧ್ಯಾನದ ಸ್ಥಿತಿಯನ್ನು ಸುಗಮವಾಗಿ ಸರಳವಾಗಿ ಹೊಂದುವಿರಿ. ನೀವು ಶಾಂತವಾದ ಮೌನದಿಂದಿರುವಿರಿ. ಈ ಸ್ಥಿತಿಯಲ್ಲಿ ಕೇವಲ ನಿಮ್ಮ ನಿಜವಾದ ಪ್ರಶ್ನೆ, ನಿಮಗೆ ಸಮಂಜಸವಾದ ಪ್ರಶ್ನೆ ಮಾತ್ರ ನಿಮ್ಮಲ್ಲಿ ಉಳಿದುಕೊಂಡಿರುವುದು.

ನನ್ನ ಉಪಸ್ಥಿತಿಯಲ್ಲಿ ನಿಮ್ಮಲ್ಲಿ ಒಂದು ತೀವ್ರವಾದ ಎಚ್ಚರಿಕೆಯು ಇರುವುದು, ಮತ್ತು ನೀವು ವರ್ತಮಾನದಲ್ಲಿ ಎಷ್ಟರಮಟ್ಟಿಗೆ ಸಂಪೂರ್ಣವಾಗಿ ಇರುವಿರಿ ಅಂದರೆ

ನಿಮ್ಮ ಪ್ರಶ್ನೆಗಳಿಗೆ ಉತ್ತರ

ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟಲು ಅವಕಾಶವೇ ಇರುವುದಿಲ್ಲ. ನೀವು ನನ್ನ ಸಾನಿಧ್ಯವನ್ನು ಬಿಟ್ಟು ಹೋದಾಗ ಮತ್ತೊಮ್ಮೆ ನಿಮ್ಮ ಮನಸ್ಸಿನ ಹಿಡಿತದಲ್ಲಿ ಬಂದಾಗ ಅದಕ್ಕೆ ನಿಮ್ಮ ವರ್ತಮಾನದ ಮೇಲೆ ನಿಮ್ಮ ಗತಕಾಲವನ್ನು ಮತ್ತು ಭವಿಷ್ಯತ್ತನ್ನು ಹೊರಿಸುವ ಅವಕಾಶ ಸಿಗುವುದು.

ನಿಮ್ಮ ಅಹಂಕಾರವನ್ನೇ ಆಗಲಿ, ನಿಮ್ಮ ಮನಸ್ಸನ್ನೇ ಆಗಲಿ ಅವುಗಳನ್ನು ನಿಂದಿಸುವುದು ಅರ್ಥವಿಲ್ಲದ ಒಂದು ಸಂಘರ್ಷ. ಈ ಹೋರಾಟದಿಂದ ಏನೂ ಪ್ರಯೋಜನವೂ ಇಲ್ಲ. ಆದರೆ, ಈ ಮನಸ್ಸಿನ ಸ್ವಭಾವವೇ ಹೀಗೆ, ಅದು ಬದಲಾಯಿಸುವುದಿಲ್ಲ ಎಂಬ ಅರಿವಿದ್ದರೆ ಸಾಕು. ಮನಸ್ಸು ಯಾವಾಗಲು ತಲ್ಲಣ, ಗೊಂದಲ ಮತ್ತು ಸಂದೇಹಗಳನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಕೆ ಇದ್ದರೆ ಸಾಕು. ನಿಮ್ಮ ಮನಸ್ಸಿನ ಈ ವ್ಯರ್ಥ ಕಾರ್ಯಗಳ ಮೇಲೆ ವಿಮರ್ಶೆ ಮಾಡಬೇಡಿ. ನೀವು ಅದರ ಮೇಲೆ ಕೋಪ ಮಾಡಿಕೊಂಡರೂ ನೀವು ನಿಮ್ಮ ಚೈತನ್ಯವನ್ನು ಅದಕ್ಕೆ ಕಳೆದುಕೊಳ್ಳುವಿರಿ. ನೀವು ಮನಸ್ಸಿನ ಚಟುವಟಿಕೆಗಳಿಗೆ ಸಾಕ್ಷಿ ಆಗಿ ಅದನ್ನು ಕೇವಲ ವೀಕ್ಷಿಸಿರಿ. ಹೀಗೆ ಮಾಡುತ್ತ ಇದ್ದರೆ ಕಾಲ ಕಳೆದಂತೆ ನೀವೇ ಮನಸ್ಸಲ್ಲವೆಂದೂ, ನೀವು ಮನಸ್ಸನ್ನು ಮೀರಿ ಇರುವುದಾಗಿಯೂ ಮತ್ತು ನೀವು ಕೇವಲ ವೀಕ್ಷಕರು ಎಂದು ನಿಮಗೆ ಸ್ಪಷ್ಟವಾಗಿ ತಿಳುವಳಿಕೆ ಆಗುವುದು. ಆಗ ನಿಮ್ಮ ಮನಸ್ಸು ನಿಮ್ಮ ಚೈತನ್ಯವನ್ನು ಕಳೆದುಕೊಂಡು! ಅದಕ್ಕೆ ಸಹಜವಾಗಿರುವ ಚಟುವಟಿಕೆಗಳನ್ನು ನಡೆಸುವ ಶಕ್ತಿಯನ್ನು ಕಳೆದುಕೊಳ್ಳುವುದು. ನೀವು ಮನಸ್ಸೆಂದು ಕರೆಯುತ್ತಿರುವ ಈ ಯೋಚನೆಗಳ ಗೊಂದಲದ ಜಾಗದಲ್ಲಿ ಒಂದು ಸ್ಪಷ್ಟವಾದ, ತೀವ್ರವಾದ ವಿವೇಕವು ನಿಮ್ಮಲ್ಲಿ ಅರಳುವುದು. ಆ ಕ್ಷಣದಲ್ಲಿ ಎಲ್ಲಾ ಪ್ರಶ್ನೆಗಳು, ಶಂಕೆಗಳು ಮಾಯವಾಗಿ ಹೋಗುವುವು ಮತ್ತು ನಿಮ್ಮಲ್ಲಿ ಗೊಂದಲ, ತಲ್ಲಣ ಮನಸ್ಸು ಇನ್ನಿರುವುದಿಲ್ಲ.

ಇದರ ಒಂದು ಕ್ಷಣದೃಷ್ಟಿಯೇ ನೀವು ನನ್ನ ಸಾನಿಧ್ಯದಲ್ಲಿ ಅನುಭವಿಸುವಿರಿ. ಆದರೆ ನಾನು ನಿಮಗೆ ಈಗ ಹೇಳಿದ್ದನ್ನು ನೀವು ಸಾಧನೆ ಮಾಡಿದರೆ ಈ ಅನುಭವ ನಿಮ್ಮ ಜೊತೆಗೆ ಸದಾ ಇರುವುದು - ನೀವು ನನ್ನ ಜೊತೆ ಇಲ್ಲದಿದ್ದರೂ ಸಹ ಇರುವುದು. ಇದು ಒಂದು ಬಹಳ ನಿಧಾನವಾಗಿ ಆಗುವ ವಿಧಾನ; ಸ್ವಲ್ಪ ಸಮಯ ಕೊಡಿ, ಆಗುವುದು.

ಪ್ರ : ಪ್ರಿಯ ಸ್ವಾಮೀಜಿ, ನೀವು
ನಮಗೆ ಸಹಜವಾಗಿರುವ
ಭಾವಾವೇಶಗಳನ್ನು ಕುಗ್ಗಿಸಿಟ್ಟು
ಕೊಳ್ಳಬೇಡಿ ಎಂದು ಹೇಳು-
ವಿರಿ ಆದರೆ ನಾವು ಅವುಗಳನ್ನು
ಅನುಸರಿಸುವುದು ಸರಿಯೇ ?

ಈ ಪ್ರಶ್ನೆಯೂ ನಿಮ್ಮ ಮೊದಲನೆಯ ಪ್ರಶ್ನೆಯ
ದಿಕ್ಕನ್ನು ಸೂಚಿಸುತ್ತದೆ - ಸಂನ್ಯಾಸ ಅಥವಾ
ಸಂಸಾರ ? ಈ ಮಾರ್ಗದಲ್ಲಿ ನೀವು ಪದೇ
ಪದೇ ಹೊರಗಿನಿಂದ ದ್ವಿವಿಧವಾಗಿ ಕಾಣುವ
ಗುಣಗಳಂತೆ ಕಾಣುವಿರಿ: ಒಳ್ಳೆಯದು-ಕೆಟ್ಟದ್ದು,
ನಿಜ-ಸುಳ್ಳು, ಮೋಹ-ದ್ವೇಷ, ಅಂಕೆ-
ಅನುಸರಣ.

ವಾಸ್ತವವಾಗಿ ನಿಮ್ಮ ಅಂತರಂಗದಲ್ಲಿ ಸದಾ ಈ ವಿರುದ್ಧ ಗುಣಗಳ ಪ್ರಚಂಡವಾದ ಸಂಘರ್ಷವು ನಡೆಯುತ್ತಾ ಇರುವುದು. ಈ ದ್ವೈತದ ಹಿಡಿತದಲ್ಲಿ ನೀವು ಬಂದಾಗೆಲ್ಲ ಈ ಒಂದು ಗುಟ್ಟಿನ ಮಾತನ್ನು ಜ್ಞಾಪಕ ಇಟ್ಟುಕೊಳ್ಳಿ ಈ ಬದುಕು ಅದ್ವೈತವಾಗಿರುವುದು (ಅನೇಕವಲ್ಲದ್ದು) ವಿರುದ್ಧಗಳು ಇಲ್ಲವೇ ಇಲ್ಲ. ಅಂಕೆ ಅಥವಾ ಅನುಸರಣವನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ನಿಮ್ಮ ಅಜ್ಞಾನವನ್ನು ಸೂಚಿಸುವುದು. ಎಷ್ಟಿದ್ದರೂ ಭಾವಾವೇಶಗಳನ್ನು ಕುಗ್ಗಿಸುವುದು ಕೇವಲ ಅವುಗಳ ಅನುಸರಣೆಗೆ ಒಂದು ಪ್ರತಿಕ್ರಿಯೆ. ಮುಖ್ಯವಾಗಿ ನಾವು ನಮ್ಮ ಪ್ರವೃತ್ತಿಗಳ ಬಗ್ಗೆ ಅರಿವು ಇರುವುದು ಅಗತ್ಯ. ಕೋಪ, ವ್ಯಾಮೋಹ,

ಲೋಭ, ಮತ್ಸರ, ನಿಮ್ಮಲ್ಲಿ ಹುಟ್ಟುವ ಈ ಗುಣಗಳನ್ನು ಚೆನ್ನಾಗಿ ಗುರುತಿಸಿ. ಈ ಗುಣಗಳನ್ನು ಅನುಸರಿಸಲೂ ಬೇಡಿ, ಹಾಗು ಕುಗ್ಗಿಸಲೂ ಬೇಡಿ. ಕೇವಲ ಅವುಗಳನ್ನು ಚೆನ್ನಾಗಿ ಕಂಡುಹಿಡಿದು ಗುರುತಿಸಲು ಪ್ರಯತ್ನಿಸಿ - ಅವುಗಳು ಅಪರಿಚಿತವೇನೋ ಎಂದ ಹಾಗೆ ವೀಕ್ಷಿಸಿ. ನಿಮ್ಮ ಸಮರ್ಥನೆ ಇಲ್ಲದೆ ಈ ಗುಣಗಳು ನಿಮ್ಮಲ್ಲಿ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಕಂಡು ನಿಮಗೆ ಆಶ್ಚರ್ಯವಾಗುವುದು. ಅವುಗಳು ಹಾಗೇ ಮಾಯವಾಗಿಹೋಗುವುವು. ಈ ಅನುಭವಗಳನ್ನು ನಿಮಗೆ ಬೇರೆಯವರು ವಿವರಿಸಿದರೆ, ನಿಮಗೆ ಅಷ್ಟರಮಟ್ಟಿಗೆ ತಿಳುವಳಿಕೆ ಆಗಲಾರದು ಆದರೆ ನಿಮ್ಮ ನಿರಂತರ ಸಾಧನೆಯಿಂದ ನೀವೇ ಈ ಸತ್ಯವನ್ನು ಅನುಭವಿಸುವಿರಿ.

ಕೇವಲ ಈ ಎಚ್ಚರಿಕೆಯು ನಿಮ್ಮನ್ನು ಆತ್ಮಜ್ಞಾನದ ಕಡೆಗೆ ಕರೆದುಕೊಂಡು ಹೋಗುವುದು ಮತ್ತು ನಿಮ್ಮನ್ನು ಅನುಸರಣ-ಅಂಕೆ ಮತ್ತು ಎಲ್ಲಾ ದ್ವೈತ ತತ್ವಗಳಿಂದ ಬಿಡುಗಡೆ ಮಾಡುವುದು.

ಪ್ರ: ಪ್ರಿಯ ಸ್ವಾಮೀಜಿ ನೀವು ಮನಸ್ಸಿನಲ್ಲಿ ಪ್ರಶ್ನೆಗಳು ಎರಡು ಕಾರಣಕ್ಕಾಗಿ ಅವಿಶ್ವಾಸವು ಆಧ್ಯಾತ್ಮಿಕ ಹುಟ್ಟಬಹುದು, ಅವಿಶ್ವಾಸದಿಂದ ಅಥವಾ ಸಾಧನೆಗೆ ಅಥವಾ ವಿಕಾಸಕ್ಕೆ ಶಂಕೆಗಳಿಂದ. ಆದರೆ ಇವೆರಡರಲ್ಲಿ ಬಹಳ ದೊಡ್ಡ ಅಡ್ಡಿ ಎಂದು ಹೇಳು- ವ್ಯತ್ಯಾಸವಿರುವುದು. ವಿರಿ ಆದರೆ ನೀವು ನಮ್ಮ ಯಾವ ವಿಷಯದಲ್ಲಿಯೂ ವಿಶ್ವಾಸ ಶಂಕೆಗಳನ್ನು ವ್ಯಕ್ತಪಡಿಸುವು- ಇಲ್ಲದೆ ಇರುವುದು ಅವಿಶ್ವಾಸದ ಸ್ಥಿತಿ. ಒಬ್ಬ ದಕ್ಕೂ ಉತ್ತೇಜಿಸುವಿರಿ ಇದು ಅವಿಶ್ವಾಸಿಯು ವಾದಪ್ರಿಯನಾಗಿರುತ್ತಾನೆ - ಹೇಗೆ? ಏನೂ ಕಾರಣವಿಲ್ಲದೆ ಚರ್ಚೆ ಮಾಡುತ್ತಾನೆ. ಒಂದು ವಿಧವಾಗಿ ಅವಿಶ್ವಾಸವೇ ಒಂದು ಅಪ್ರಜ್ಞಾ ನಂಬಿಕೆಯಾಗಿರುವುದು ! - ಎಲ್ಲಾ ವಿಷಯಗಳಲ್ಲಿಯೂ ಮೊದಲೇ ನಿಶ್ಚಯಿಸಿದ ಒಂದು ನಕರಾತ್ಮಕ (ನೆಗೆಟಿವ್) ತೀರ್ಮಾನ ! ಒಂದು ಅವಿಶ್ವಾಸಿಗೆ ಅವನ ಸ್ವಂತ ಅಭಿಪ್ರಾಯ ಅಥವಾ ಸಿದ್ಧಾಂತಗಳು ಇರುವುದಿಲ್ಲ - ಆದರೆ ನೀವು ಯಾವ ಸಿದ್ಧಾಂತವನ್ನು ಅವನ ಮುಂದೆ ತಂದಿಟ್ಟರೂ ಅದರ ವಿರುದ್ಧವಾಗಿ ಅವನು ಚರ್ಚೆ ಮಾಡುವನು. ಒಂದು ವಿಷಯವನ್ನು ಅವನ ಮುಂದೆ ತಂದಿಟ್ಟರೆ ಅದರ ವಿರುದ್ಧವಾಗಿ ಅವನು ಬಹಳ ಹೊತ್ತು ಚರ್ಚೆ ಮಾಡುವನು - ಮತ್ತು ಯಾರಾದರೂ

ಆ ವಿಷಯಕ್ಕೆ ವಿರುದ್ಧವಾದ ಸಿದ್ಧಾಂತವನ್ನು ಅವನ ಮುಂದಿಟ್ಟರೂ ಅದರ ವಿರುದ್ಧವಾಗಿಯೂ ಅವನು ಅಷ್ಟೇ ನಿಶ್ಚಯಪೂರಕವಾಗಿ ಚರ್ಚೆ ಮಾಡುವನು. ಎಲ್ಲದಕ್ಕೂ 'ಇಲ್ಲ' ಎನ್ನುವುದೇ ಅವನಲ್ಲಿ ಖಾಯವಾಗಿರುವ ಮನೋಭಾವ. ಈ ದೃಷ್ಟಿಯಲ್ಲಿ ನೋಡಿದರೆ, ಅವಿಶ್ವಾಸದ ಮನೋಭಾವವು ಆಧ್ಯಾತ್ಮಿಕ ಸಾಧಕನ ಪ್ರಯಾಣದ ಕೊನೆಯನ್ನು ಸೂಚಿಸುವುದು - ಕಾರಣವೇನೆಂದರೆ ಈ ಮನೋಭಾವದಿಂದ ಅವನಿಗೆ ಯಾವ ಮಟ್ಟಕ್ಕೆ ತಲುಪುವುದಕ್ಕೂ ಕಷ್ಟವಾಗುವುದು. ಅವಿಶ್ವಾಸಿಯು ತನ್ನಲ್ಲಿ ಪರಿವರ್ತನೆಯಾಗುವ ದಾರಿಯನ್ನು ಸಂಪೂರ್ಣವಾಗಿ ಮುಚ್ಚಿಟ್ಟುಕೊಂಡು ಬಿಟ್ಟಿದ್ದಾನೆ.

ಇದಕ್ಕೆ ವಿರುದ್ಧವಾಗಿ ಸಂದೇಹವು ಒಂದು ತೆರೆದಿಟ್ಟುಕೊಂಡಿರುವ ಮತ್ತು ಗ್ರಹಿಸಲು ಸಿದ್ಧವಾಗಿರುವ ಮನಸ್ಸಿನ ಸ್ಥಿತಿ. 'ನನಗೆ ಗೊತ್ತಿಲ್ಲ ಆದರೆ ನಾನು ಕಲಿಯಬಲ್ಲೆನು' ಎಂದು ಸ್ವೀಕರಿಸಿರುವ ಒಂದು ಸ್ಥಿತಿಯೇ ಶಂಕೆಯ ಸ್ಥಿತಿ. ಇದು ಸಾಧಕನ ಯಾತ್ರೆಯ ಪ್ರಾರಂಭವನ್ನು ಸೂಚಿಸುವುದು. ಶಂಕೆಯೇ ಸಾಧಕನ ಮಾರ್ಗ. ಈ ಮಾರ್ಗವು ಸತ್ಯವನ್ನು ಗ್ರಹಿಸುವುದಕ್ಕೆ ಅಸತ್ಯವನೆಲ್ಲಾ ದಾರಿಯಿಂದ ತೆಗೆದು ಹಾಕಲು ಪ್ರಯತ್ನಿಸುತ್ತದೆ. ಸಂದೇಹಿಯು ಮರ್ಯಾದೆಯ ಮನೋಭಾವದಿಂದ ಆಲಿಸಿ ಕೇಳುತ್ತಾನೆ ಮತ್ತು ಕಲಿಯುತ್ತಾನೆ. ಒಂದು ಪ್ರತಿಭಟನೆಯ ಮನೋಭಾವದಿಂದ ಅಲ್ಲ, ಬದಲಿಗೆ ಅವನು ಸಾಧಕನಲ್ಲಿರಬೇಕಾಗಿರುವ ವಿನಮ್ರತೆಯನ್ನು ಹೊಂದಿರುತ್ತಾನೆ. ಅವನದು ಹೌದು ಎನ್ನುವ ಒಂದು ಸಕಾರಾತ್ಮಕವಾದ ಮನೋಭಾವ - ಅವನು ಕೇವಲ ವಿಶ್ವಾಸವನ್ನು ಹುಟ್ಟಿಸುವಂಥ ಸತ್ಯದ ಅನುಭವಗಳನ್ನು ಅನುಭವಿಸಲು ಪ್ರತೀಕ್ಷೆ ಮಾಡುತ್ತಾ ಇದ್ದಾನೆ, ಅಷ್ಟೆ.

ಚುರುಕು ಬುದ್ಧಿಯ ಒಬ್ಬ ವ್ಯಕ್ತಿಯು ಅವಿಶ್ವಾಸದ ದಾರಿಯಲ್ಲಿ ಬಿದ್ದರೆ ಅದು ಬಹಳ ಅಪಾಯಕರ ಸ್ಥಿತಿಯನ್ನು ಸೂಚಿಸುವುದು. ಒಂದು ಪ್ರಭಾವೋತ್ಪಾದಕ ರೀತಿಯಲ್ಲಿ ಬೇರೆಯವರ ಸಿದ್ಧಾಂತಗಳನ್ನೆಲ್ಲಾ ಚರ್ಚೆ ಮಾಡಿ ದಬಾಯಿಸುವುದು, ಅವನ ಅಹಂಕಾರವನ್ನು ಪೂರ್ಣಗೊಳಿಸುವುದು. ಆದರೆ ಕಟ್ಟಕಡೆಯಲ್ಲಿ ಅವಿಶ್ವಾಸಿಯು ತನಗೆ ತಾನೇ ಹಾನಿಯನ್ನು ತಂದುಕೊಳ್ಳುವನು. ವಿಶೇಷವಾಗಿ ಗುರುವಿನೊಡನೆ ಅವಿಶ್ವಾಸದ ಮನೋಭಾವವನ್ನು ಮಾಡಿಕೊಂಡರೆ ನಾನು ಯಾವ ರೀತಿಯಲ್ಲೂ ನಿಮ್ಮನ್ನು ತಲುಪಲು ಸಾಧ್ಯವಿಲ್ಲ. ಔಷಧ ಚೀಟಿಯಲ್ಲಿ ವಿವರಿಸಿದ ಪ್ರತಿಯೊಂದು ಮಾತ್ರೆಯ ಬಗ್ಗೆ ಪ್ರಶ್ನಿಸುವುದಕ್ಕೆ ವೈದ್ಯರ ಬಳಿ ಹೋಗುವುದರಲ್ಲಿ ಏನಾದರೂ ಅರ್ಥ ಉಂಟೆ?

ಹಾಗಾಗಿ, ಖಂಡಿತ ನಿಮ್ಮ ಪ್ರಶ್ನೆಗಳನ್ನು ವ್ಯಕ್ತಪಡಿಸಿ. ಕೇವಲ ನೀವು ಯಾವ ಮನೋಭಾವದಿಂದ ಪ್ರಶ್ನಿಸುತ್ತಾ ಇರುವಿರಿ ಎಂದು ಗಮನ ಇಟ್ಟುಕೊಳ್ಳಿ, ಅಷ್ಟೆ.

ಪ್ರ : ಪ್ರಿಯ ಸ್ವಾಮೀಜಿ ನೀವು
ಪ್ರೀತಿಯಲ್ಲಿ ನೀವು ನಮ್ಮನ್ನು
ನಮ್ಮ ಸಕಲವನ್ನು ಅರ್ಪಿಸು-
ವುದಕ್ಕೆ ಹೇಳುತ್ತಿರಾ. ಆದರೆ
ನಮ್ಮ ಈ ಪ್ರೀತಿಯು ಮೆಚ್ಚುಗೆ
ಆಗದಿದ್ದರೆ ಅಥವಾ ನಮಗೆ
ಹಿಂತಿರುಗಿ ಬರದಿದ್ದರೆ?

ನೀವು ನಿಜವಾಗಿ ಪ್ರೀತಿಸುತ್ತಿದ್ದರೆ ನೀವು
ಸಹಜವಾಗಿ ನಿಮ್ಮ ಸಕಲವನ್ನು ಅರ್ಪಿಸುವಿರಿ.
ಬೇಷರತ್ತಾದ ಹೊರಸೂಸುವಿಕೆಯೇ
ಪ್ರೀತಿಯ ನಿಜವಾದ ಅರ್ಥ. ನೀವು
ಪ್ರೀತಿಸುವಾಗ ನೀವು ಪ್ರೀತಿಸಿದವರು ನಿಮ್ಮ
ಈ ಪ್ರೀತಿಗೆ ಯೋಗ್ಯರೋ ಅಲ್ಲವೋ ಎಂದು
ನೀವು ಯೋಚಿಸುವುದಿಲ್ಲ. ವಾಸ್ತವವಾಗಿ
'ಅವರ' ಯೋಗ್ಯತೆಯ ಪ್ರಶ್ನೆಯೇ
ಇರುವುದಿಲ್ಲ. ಪ್ರೀತಿಯು ಒಂದು ಕಾಣಿಕೆ.

ನೀವು ಬೇರೆಯವರ ಯೋಗ್ಯತೆಯ ಅಳತೆ ಮಾಡಿ ಅಷ್ಟೇ ಮಟ್ಟಕ್ಕೆ ಅವರನ್ನು ಪ್ರೀತಿಸಿದರೆ ಅಥವಾ ಅಷ್ಟೇ ಪ್ರಮಾಣದಲ್ಲಿ ನಿಮ್ಮ ಪ್ರೀತಿಯನ್ನು ಕೊಟ್ಟರೆ ನಿಮ್ಮಿಬ್ಬರ ನಡುವೆ ಕೇವಲ ಒಂದು ಒಪ್ಪಂದ (ಕಾಂಟ್ರಾಕ್ಟ್) ಆಗುವುದು. ಅದು ಒಂದು ವ್ಯಾಪಾರ ಆಗುವುದು. ಪ್ರೀತಿ ಅಲ್ಲ. ನಿಜವಾದ ಪ್ರೀತಿಯಲ್ಲಿ ನಾನು ನನ್ನ ಸಕಲವನ್ನು ಅರ್ಪಿಸಬಹುದೆ? ಎಂಬುವ ಪ್ರಶ್ನೆಯೇ ನಿಮ್ಮ ಮನಸ್ಸಿನಲ್ಲಿ ಏಳುವುದಿಲ್ಲ.

ಈಗ ನಿಮ್ಮ ಪ್ರೀತಿಯು ಮೆಚ್ಚುಗೆ ಆಗುವ ಪ್ರಶ್ನೆಗೆ ಬರೋಣ. ಈಗ ಹೇಳಿ, ನೀವು ಪ್ರೀತಿಸುವ ಕಾರಣವೇನು? ಅದು ಚಪ್ಪಾಳೆ ತಟ್ಟಿ ಮೆಚ್ಚುವ ಒಂದು ಪ್ರದರ್ಶನವೇ? ನೀವು ಪ್ರೀತಿಸುತ್ತಿರುವುದೇ ನಿಮಗೆ ಸಂತುಷ್ಟಿಯನ್ನು ನೀಡುವುದಲ್ಲವೆ? ಅದಕ್ಕೂ ಹೆಚ್ಚಾಗಿರುವ ಪ್ರತಿಫಲವನ್ನು ಅಪೇಕ್ಷಿಸುವ ಅವಶ್ಯಕತೆ ಏನಿದೆ ? ನಿಮ್ಮ ಪ್ರೀತಿಯು ನಿಮಗೆ ಹಿಂತಿರುಗಿಬರುವುದು ಎಂದು ಆಗ್ರಹಿಸುವುದು, ನೀವು ನಿಮ್ಮ ಪ್ರಿಯತಮೆಯನ್ನು ನಿಮ್ಮ ವಶದಲ್ಲಿ ಇಟ್ಟುಕೊಂಡಿರುವುದಕ್ಕೆ ಬಯಸುತ್ತಾ ಇದ್ದೀರಾ ಎಂಬುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು. ಅವರು ನಿಮ್ಮನ್ನು ಹಿಂತಿರುಗಿ ಪ್ರೀತಿಸದೇಇರುವ ಸ್ವಾತಂತ್ರ್ಯವನ್ನು ಅವರಿಗೆ ನಿರಾಕರಿಸುತ್ತಾ ಇದ್ದೀರ ! ಇದು ಬೇರೆಯವರನ್ನು ನಿಮ್ಮ ಅಪೇಕ್ಷೆಗಳ ಸೆರೆಯಲ್ಲಿ ಬಂಧಿಸುವಂತಹ, ಅವರ ಮೇಲೆ ವಿಧಿಸುವ ಯಜಮಾನತನ. ನಾನು ನಿಮಗೆ ಪದೇ ಪದೇ ಹೇಳುತ್ತೇನೆ ಪ್ರೀತಿಯು ಎಂದಿಗೂ ಸೆರೆಯಲ್ಲಿ ಅರಳಲು ಸಾಧ್ಯವಿಲ್ಲ. ಗಮನವಿಟ್ಟು ಕೇಳಿ ಎರಡು ರೀತಿಯ ಪ್ರೀತಿ ಇರುವುದು ಪ್ರಮಾಣ (Quantity) ರೂಪದ ಪ್ರೀತಿ ಮತ್ತು ಗುಣ (Quality) ರೂಪದ ಪ್ರೀತಿ.

ಪ್ರೀತಿಯನ್ನು ಪ್ರಮಾಣ ರೂಪದಲ್ಲಿ ಗ್ರಹಿಸಿದರೆ ಅದು ಒಂದು ಸ್ವಾರ್ಥಪದ ರೂಪದ ಅದಲು ಬದಲುಗಳಾಗಿ ಪರಿಣಮಿಸುವುದು. ನೀವು ಒಂದು ಗಟ್ಟಿಯಾಗಿ ಕಟ್ಟಿದ್ದ

ಪ್ರೀತಿಯ ಗಂಟನ್ನು ನಿಮ್ಮ ಸಂಗಾತಿಗೆ ಕೊಡುವಿರಿ ಮತ್ತು ತಕ್ಷಣವೇ ಅದೇ ಪ್ರಮಾಣದ ಒಂದು ಗಂಟನ್ನು ಅವರಿಂದ ಅಪೇಕ್ಷಿಸುವಿರಿ. ನಿಮ್ಮ ಸಂಗಾತಿಯು ಈ ಗಂಟನ್ನು ಬೇರೆಯವರಿಗೆ ಕೊಡಲು ನಿಶ್ಚಯಿಸಿದರೆ ಅಥವಾ ನೀವು ಕೊಟ್ಟ ಪ್ರೀತಿಯನ್ನು ಎಲ್ಲರಲ್ಲಿ ಹರಡಿದರೆ ನಿಮ್ಮನ್ನು ನೀವು ಮೋಸ ಹೋಗಿರುವವರ ಹಾಗೆ ಗ್ರಹಿಸಿ ಕೋಪ ಮಾಡಿಕೊಳ್ಳುತ್ತೀರ. ನಿಮ್ಮಿಬ್ಬರ ನಡುವೆ ಒಂದು ಪರಸ್ಪರ ಬದಲಾಯಿಸುವಿಕೆಯ ಒಪ್ಪಂದದ ಬಂಧನಕಾರಕರಾಗಿರುವಿರಿ. ‘ಒಬ್ಬರಿಗೊಬ್ಬರಾಗಿ’ ಇರುವಿರಿ (made for each other). ಇವತ್ತು ಅಲ್ಲ ನಾಳೆ ಈ ರೀತಿಯ ಮನೋಭಾವದಿಂದ ನೀವು ಇಕ್ಕಟ್ಟನ್ನು ಅಥವಾ ಸೆರೆಯಲ್ಲಿರುವ ಭಾವನೆಯನ್ನು ಅನುಭವಿಸಿ ಸಂಪೂರ್ಣವಾಗಿ ನಿರಾಶೆಹೊಂದು, ಕೋಪದಿಂದ ನಿಮ್ಮ ‘ಗಂಟನ್ನು’ ಹಿಂತೆಗೆದುಕೊಂಡು ಇನ್ನೊಬ್ಬರ ಜೊತೆಗೆ ಅದನ್ನು ಅದಲು ಬದಲು ಮಾಡಲು ನೋಡುತ್ತೀರಾ ಅಥವಾ ಈ ಕೆಲಸವನ್ನು ನಿಮ್ಮ ಸಂಗಾತಿ ಮಾಡುತ್ತಾರೆ.

ಈಗ, ಪ್ರೀತಿಯ ಅನುಭವವು ನಿಮಗೆ ನಿಮ್ಮ ಅಂತರಂಗದ ಒಂದು ಸಹಜವಾದ ಗುಣವಾಗಿಯೇ ಅನುಭವಿಸುವ ಸ್ತರಕ್ಕೆ ನೀವು ಏರಬೇಕೆಂದು ನಾನು ಇಚ್ಛಿಸುತ್ತೇನೆ. ಈ ರೀತಿಯ ಪ್ರೀತಿಯು ಈ ಜೀವನಕ್ಕಾಗಿ ನಿಮ್ಮ ಆನಂದ ಮತ್ತು ಕೃತಜ್ಞತೆಯ ಕೇವಲ ಒಂದು ಹೊರಸೂಸುವಿಕೆ. ಈ ಆನಂದದ ಸುಗಂಧವು ಏನೂ ಕರಾರು ನಿಯಮವಿಲ್ಲದೇ ಎಲ್ಲಾ ಕಡೆ ಒಂದೇ ಸಮ ಹರಡುವುದು. ಇದನ್ನು ಯಾರು ಪಡೆಯುತ್ತಾರೆ ಎನ್ನುವುದಕ್ಕೆ ಏನೂ ಪ್ರಾಮುಖ್ಯತೆ ಇಲ್ಲ. ಈ ಪ್ರೀತಿಗೆ ಪ್ರೀತಿ ಹಿಂತಿರುಗಿ ಬರುವ ಅವಶ್ಯಕತೆಯೂ ಇಲ್ಲ. ಈ ಪ್ರೀತಿಯು ಸೂರ್ಯನ ಪ್ರಕಾಶ ಅಥವಾ ಮಳೆಗರೆಯುವಿಕೆಯ ರೀತಿಯಲ್ಲಿ ಇರುವುದು, ಬೇಷರತ್ತಾಗಿ ಕೊಡುವುದು ಮತ್ತು ಅದರ ಸುತ್ತಲಲ್ಲಿರುವವರೆಲ್ಲ ಅದರ ವಾತ್ಸಲ್ಯ ಮತ್ತು ನಾವೀನ್ಯತೆಯನ್ನು ಅನುಭವಿಸುವರು. ಈ ರೀತಿಯ ಪ್ರೀತಿಯು ಸದಾ ಮನುಷ್ಯನನ್ನು ಅಭಿವರ್ಧಿಸುವುದು ಮತ್ತು ಈ ಪ್ರೀತಿಯಿಂದ ನಾವು ಏನೂ ಭಯ ಮತ್ತು ದೋಷ ಇಲ್ಲದೆ ಉಲ್ಲಾಸಗೊಳ್ಳಬಹುದು.

ಪ್ರೀತಿಯು ನಿಮ್ಮ ಅಂತರಂಗದ ಒಂದು ಗುಣವೇ ಆಗಬೇಕಾದರೆ ನೀವು ಸಂಪೂರ್ಣವಾಗಿ ಶರಣಾಗುವುದಕ್ಕೆ ತಯಾರಾಗಿರಬೇಕು. ಕೇವಲ ಒಂದು ಸಂಪೂರ್ಣವಾದ ಅಹಂಕಾರವಿಹೀನ ಸ್ಥಿತಿಯಲ್ಲಿ ಈ ರೀತಿಯ ಪ್ರೀತಿಯು ಉದ್ಭವವಾಗುವುದು. ಇದು ಅಷ್ಟು ಸುಲಭವಲ್ಲ ಆದರೆ ನೀವು ಖಂಡಿತ ಪ್ರಯತ್ನಿಸಬಹುದು. ಕೇವಲ ಪ್ರೀತಿ ಮತ್ತು ಕೃತಜ್ಞತೆಯ ಮನೋಭಾವದ ಮೂಲಕ ನೀವು ನಿಮ್ಮ ಅಹಂಕಾರವನ್ನು ಸ್ವಲ್ಪ ಸ್ವಲ್ಪವಾಗಿ ತ್ಯಜಿಸುವುದನ್ನು ನೀವು ಕಾಣುವಿರಿ ಮತ್ತು ಅಹಂಕಾರದ ಈ ವರ್ಜ್ಯ ಆಗುತ್ತಾ ಇದ್ದ ಹಾಗೇ ಅದರ ಜಾಗದಲ್ಲಿ ಹೆಚ್ಚು ಹೆಚ್ಚಾಗಿ ಪ್ರೀತಿಯು ಪ್ರವೇಶವಾಗುವುದು. ನಿಮ್ಮ ಎಲ್ಲಾ ಸಂಬಂಧಗಳಲ್ಲಿ ಈ ಸಾಧನೆಯನ್ನು ಮಾಡಲು ಪ್ರಯತ್ನಿಸಿ. ನಿಮ್ಮ ಪ್ರೀತಿಯನ್ನು ಒಂದು ದೊಡ್ಡ ಸಂಭ್ರಮ ಅಥವಾ ರಂಪ ಮಾಡಬೇಕಾಗಿಲ್ಲ. ಪ್ರೀತಿಯಲ್ಲಿ ಗಾಂಭೀರ್ಯವನ್ನು ತರಬೇಡಿ, ಕೇವಲ ಪ್ರಾಮಾಣಿಕತೆಯನ್ನು ತನ್ನಿರಿ.

ಪ್ರ : ಪ್ರಿಯ ಸ್ವಾಮೀಜಿ, ಭಾರತ ದೇಶದಲ್ಲಿ ನಮ್ಮಲ್ಲಿ ಅನುಷ್ಠಾನ ಮತ್ತು ವಿಗ್ರಹ ಪೂಜೆಯ ಸಂಪ್ರದಾಯ ಇರುವುದು ನೀವು ಇದರ ಪರವಾಗಿರುವಿರೋ ಅಥವಾ ವಿರುದ್ಧವಾಗಿರುವಿರೋ?ಮೊದಲನೆಯದಾಗಿ ವಿಗ್ರಹ ಆರಾಧನೆಗೇ ಆಗಲಿ ಅಥವಾ ಯಾವುದೇ ವಿಷಯಕ್ಕಾಗಲಿ ನನಗೆ ಒಪ್ಪಿಗೆಯೂ ಇಲ್ಲ, ಅಸಮ್ಮತಿಯೂ ಇಲ್ಲ.
ಆದರೆ ಭಾರತ ದೇಶದಲ್ಲಿ ಮತ್ತು ಬೇರೆ ಪೌರಾತ್ಯ ದೇಶಗಳಲ್ಲಿ ವಿಗ್ರಹ ಆರಾಧನೆ ಒಂದು ಸಾಮಾನ್ಯ ಅಭ್ಯಾಸವಾಗಿರುವುದಕ್ಕೆ ಕಾರಣವಿದೆ. ಆಧ್ಯಾತ್ಮದ ಮಾರ್ಗದಲ್ಲಿ ಒಂದು ನೂತನ ಅಭ್ಯಾಸಿಗೆ ದೈವತ್ವವನ್ನು

ಅಮೂರ್ತವಾಗಿ ಕಲ್ಪಿಸಲು ಬಹಳ ಕಷ್ಟ. ಆದರೆ ದೈವತ್ವಕ್ಕೆ ಒಂದು ರೂಪವನ್ನು ಕೊಟ್ಟರೆ ಅದು ಅವನಿಗೆ ಪರಿಚಯ ಇದ್ದು ಮತ್ತು ಚೆನ್ನಾಗಿ ಅರ್ಥವಾಗುವಂತೆ ಅವನಲ್ಲಿ ಸ್ಪಷ್ಟವಾಗಿ ರೂಪಗೊಳ್ಳುವುದು. ವಿಗ್ರಹದೊಡನೆ ಅವನು ಅವನಿಗೆ ಪರಿಚಯ ಇದ್ದ ಭಾಷಾರೀತಿಯಲ್ಲಿ ಸಂಭಾಷಿಸಬಹುದು. ನಮ್ಮಲ್ಲಿರುವ ಸಾವಿರಾರು ದೇವತೆಗಳು ಕೇವಲ ದೈವತ್ವದ ವಿಭಿನ್ನ ಅಭಿವ್ಯಕ್ತತೆಗಳು.

ಆದರೂ ಯಾರಾದರೂ ಅವರೊಡನೆ ಮಾತನಾಡಬಹುದು, ಆಡಬಹುದು, ಅವರನ್ನು ಪ್ರಾರ್ಥಿಸಬಹುದು, ಅವರಿಂದ ಸಮಾಧಾನವನ್ನು ಅಪೇಕ್ಷಿಸಬಹುದು ಅಥವಾ ಅವರಿಗೆ ಅಭಿನಂದಿಸಬಹುದು. ಅದ್ಭುತವಾದ ಅಚಿಂತ್ಯವಾದ ಲಕ್ಷಣಗಳನ್ನು ಹೊಂದಿರುವ ದೈವತ್ವವನ್ನು ಒಂದು ಅರ್ಥವಾಗುವಂತೆ ಮತ್ತು ಸಂತೈಸುವ ಪ್ರಮಾಣಕ್ಕೆ ತಂದಿರುವುದಾಗಿದೆ. ಹೀಗೆ ಆಗಲೇ ಬೇಕಾಗಿತ್ತು - ಇಲ್ಲದಿದ್ದರೆ ರೂಪವಿಲ್ಲದ ದೈವತ್ವವು ಸಾಧಾರಣ ಮನಸ್ಸಿಗೆ ಬಹಳ ಹೆದರಿಸುವಂತಹ ತತ್ವವಾಗಿರುವುದು.

ಒಂದು ಅಗಾಧವಾದ ಮತ್ತು ಸೂಕ್ಷ್ಮವಾದ ಸ್ತರದಲ್ಲಿ ಇದು ಇನ್ನೊಂದು ಮುಖ್ಯವಾದ ಸಂದೇಶವನ್ನು ಮತ್ತೊಮ್ಮೆ ಎಚ್ಚರಿಸುತ್ತಾ ಇರುವುದು - ನೀವು ಆರಾಧಿಸುತ್ತಿರುವ ವಿಗ್ರಹವು ನಿಮ್ಮ ರೂಪದಲ್ಲಿಯೇ ಆಕಾರಗೊಂಡಿರುವುದು ಆದರೂ ಅದು ದೈವಿಕವಾಗಿರುವುದು ಸ್ವಲ್ಪ ಯೋಚನೆ ಮಾಡಿ ನೋಡಿ. ಇದು ನಿಮ್ಮನ್ನು ಏನನ್ನಾಗಿ ಸೂಚಿಸುತ್ತಾ ಇರುವುದು?

ನೀವು ವಿಗ್ರಹಾರಾಧಕರಾಗಿದ್ದರೂ ಏನೂ ಚಿಂತೆ ಇಲ್ಲ - ನಿಮ್ಮನ್ನು ನೀವೇ ನಿಂದಿಸಿಕೊಳ್ಳುವ ಆವಶ್ಯಕತೆ ಇಲ್ಲ. ನೀವು ಆಧ್ಯಾತ್ಮಿಕ ಮಾರ್ಗದಲ್ಲಿ ಅಭಿವೃದ್ಧಿ ಹೊಂದುತ್ತಾ ಇದ್ದ ಹಾಗೆ ನೀವು ದೈವತ್ವದೊಡನೆ ವಿಗ್ರಹವಿಲ್ಲದೇ ಸಂಭಾಷಿಸಬಲ್ಲಿರಿ ಎಂದು ಕಾಣುವಿರಿ. ಹೇಗೆ ಚಿಕ್ಕ ಮಕ್ಕಳು ದೊಡ್ಡವರಾಗುತ್ತಿದ್ದ ಹಾಗೆ ಬೊಂಬೆಗಳೊಡನೆ ಆಡುವುದನ್ನು ಬಿಟ್ಟು ಬಿಡುತ್ತಾರೋ ಅದೇ ರೀತಿಯಲ್ಲಿ ನೀವು ಸಮಯ ಬಂದಾಗ ಈ ವಿಗ್ರಹಗಳನ್ನು ತ್ಯಜಿಸುವಿರಿ. ಆದರೆ ಈ ಸಮಯದಲ್ಲಿ ವಿಗ್ರಹಗಳನ್ನು ಆರಾಧಿಸುವುದರಲ್ಲಿ ನಿಮಗೆ ಒಂದು ಕ್ಷೇಮದ ತಿಳುವಳಿಕೆಯನ್ನು ನೀಡುತ್ತಾಇದ್ದರೆ, ಖಂಡಿತ ವಿಗ್ರಹ ಆರಾಧನೆಯನ್ನು ಮಾಡಿ - ಏನೂ ತಪ್ಪಿಲ್ಲ. ಆಧ್ಯಾತ್ಮವು ಒಂದು ವಿಶಾಲವಾದ, ತೀರವಿಲ್ಲದ ಮಹಾಸಾಗರ. ನೀವು ಈಜುವುದಕ್ಕೆ ಕಲಿಯುತ್ತಿರುವಾಗ ಒಂದು ‘ಜೀವಾಳ’ದ (ಅಥವಾ ಲೈಫ್ ಬಾಯ್‌ನ) ಸಹಾಯ ಇದ್ದರೆ, ನಿಮ್ಮ ಆತ್ಮವಿಶ್ವಾಸವು ಖಂಡಿತ ಹೆಚ್ಚಾಗುವುದು. ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿ ಬೆಳೆಯುತ್ತಾ ಇದ್ದಹಾಗೆ, ನೀವಾಗಿಯೇ ನೀವು ನಿಮ್ಮ ಜೀವಾಳದ ಸಹಾಯವನ್ನು ಬಿಟ್ಟುನೀರಿನ ಆಳದೊಳಗೆ, ಏನೂ ಭಯವಿಲ್ಲದೆ ಆರಾಮವಾಗಿ ಪ್ರವೇಶಿಸುವಿರಿ.

ಸಂಪ್ರದಾಯಗಳು ಅಥವಾ ಅನುಷ್ಠಾನಗಳ ವಿಷಯಕ್ಕೆ ಬಂದರೆ, ಕೆಲವು ಬಣ್ಣಗಳು, ಶಬ್ದಗಳು ಅಥವಾ ಮಂತ್ರಗಳು ಮತ್ತು ಕಾರ್ಯಗಳು ನಿಮ್ಮ ಮನಸ್ಸಿನ ಸ್ಥಿತಿಯನ್ನು ಆಳವಾಗಿ ಪ್ರಭಾವಿಸುವವು. ಅಗತ್ಯವಿರುವ ಮೆದುಳಿನ ಪ್ರಾಂತ್ಯಗಳನ್ನು ಚೇತನಗೊಳಿಸುವುವು ಮತ್ತು ನಿಮ್ಮ ವಿವೇಕವನ್ನು ವಿಸ್ತರಿಸುವುವು ಎಂದು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಜನಗಳು ಈ ಸಂಪ್ರದಾಯಗಳ ನಿಜವಾದ ಅರ್ಥ ಕಳೆದುಕೊಂಡುಬಿಟ್ಟಿರುವುದರಿಂದ ಅವುಗಳ ವಿಶ್ವಾಸನೀಯತೆಯು ಕಳೆದುಹೋಗಿವೆ. ಅವುಗಳ ಕರಟಿ ಮಾತ್ರ ಉಳಿದುಕೊಂಡಿದೆ ಆದರೆ ಸಾರ ಕಳೆದುಹೋಗಿದೆ. ಆದರೆ ಇವತ್ತು ನಿಮಗೆ ಅದರ ಪ್ರಾಮುಖ್ಯತೆಯು ಕಾಣದಿದ್ದರೂ ಅವುಗಳ ಶಕ್ತಿಯನ್ನು ತಿರಸ್ಕರಿಸಬೇಡಿ, ಅವುಗಳನ್ನು ತಾತ್ಸಾರ ಮಾಡಬೇಡಿ. ಜ್ಞಾನ ಬೋಧಕರ ಯುಗಯುಗದ ತಪಸ್ಸು ಮತ್ತು ವಿವೇಕದ ಸಾರವೇ ಈ ಸಂಪ್ರದಾಯಗಳು. ಅವುಗಳನ್ನು ಉತ್ತಮವಾದ ರೀತಿಯಲ್ಲಿ ಆಚರಿಸಿದಾಗ ನಿಮ್ಮನ್ನು ಎಂದೂ ಕಲ್ಪಿಸದ ಎಚ್ಚರಿಕೆಯ ಮತ್ತು ಪರಿವರ್ತನೆಯ ಸ್ತರಕ್ಕೆ ಏರಿಸುವ ಶಕ್ತಿಗಳು ಅವುಗಳಲ್ಲಿ ಇರುವುವು.

ಈ ಆಶ್ರಮದಲ್ಲಿ ನೀವು ಹಲವು ಸಾರಿ ನಾನು ಪೂಜೆಗಳು ಮತ್ತು ಯಾಗಗಳನ್ನು ಮಾಡುತ್ತಾ ಇರುವುದನ್ನು ಕಂಡಿರಬಹುದು. ವಾಸ್ತವವಾಗಿ ನನ್ನ ಮಟ್ಟಿಗೆ ಇದರಲ್ಲೆಲ್ಲಾ ಏನೂ ಅರ್ಥ ಇಲ್ಲ, ದೈವತ್ವದೊಂದಿಗೆ ಸಂಭಾಷಿಸಲು ನನಗೆ ಯಾವ ಮಾಧ್ಯಮದ ಅವಶ್ಯಕತೆಯೂ ಇಲ್ಲ, ಇದೆಲ್ಲ ಕೇವಲ ನಾನು ಜನಗಳಿಗಾಗಿ ಮಾಡುತ್ತೇನೆ. ಶಾಂತಿ ಮತ್ತು ಸುರಕ್ಷೆಯನ್ನು ನೀಡುವ ಮತ್ತು ನಿಮಗೆ ಪರಿಚಯ ಇರುವ ಒಂದು ವಾತಾವರಣಕ್ಕೆ ನಿಮ್ಮನ್ನು ಸೆಳೆಯಲು ನಾನು ಇದೆಲ್ಲಾ ಮಾಡುತ್ತೇನೆ. ಈ ಪವಿತ್ರವಾದ ವಾತಾವರಣದಲ್ಲಿ ನಿಮ್ಮ ಪ್ರಿಯ ದೇವತೆಗಳನ್ನು ಆರಾಧಿಸುತ್ತಾ

ನಿಮಗೆ ಪರಿಚಯ ಇರುವ ಮಂತ್ರಗಳನ್ನು ಕೇಳುತ್ತಾ ನಿಮ್ಮೊಳಗೆ ಒಂದು ಮೌನವಾದ ಧ್ಯಾನದ ಸ್ಥಿತಿ ಮೆಲ್ಲನೆ ಉಂಟಾಗುವುದು. ಈ ಶರಣಾಗಿರುವ ಸ್ಥಿತಿಯಲ್ಲಿ ನನ್ನ ಚೈತನ್ಯವನ್ನು ಪಡೆಯುವುದಕ್ಕೆ ನಿಮ್ಮ ಅಂತರಂಗವು ಸಂಪೂರ್ಣವಾಗಿ ತೆರೆದಿರುವುದು. ನಿಮ್ಮಲ್ಲಿ ವಿರೋಧವಿಲ್ಲದೇ ಇರುವ ಈ ಸಮಯದಲ್ಲಿಯೇ ನಿಮಗೆ ಗೊತ್ತಿಲ್ಲದೇ ನಾನು ನನ್ನ ಸಂದೇಶವನ್ನು ನಿಮಗೆ ತಲುಪಿಸಬಲ್ಲೆನು. ಅರ್ಥವಾಯಿತೇ?

(ನಿಜ ಹೇಳಬೇಕೆಂದರೆ ನಾನು ಈಗಲೂ ಒಂದು ಮಗುವಿನ ಹಾಗೆ ಈ ಬೊಂಬೆ ಆಟದಿಂದ ಬಹಳ ಉಲ್ಲಸಿಸುತ್ತೇನೆ – ಆದರೆ ಬಿಡಿ ಅದು ಒಂದು ಬೇರೆ ವಿಷಯ).

ಪ್ರ : ಪ್ರಿಯ ಸ್ವಾಮೀಜಿ-
ಯವರೇ, 'ಕರ್ಮ' ಅಂದರೆ
ಏನು?

ಕರ್ಮದ ತತ್ವವನ್ನು ನಾನು ನಿಮಗೆ ವಿವರಿಸುತ್ತೇನೆ. ಯಾವುದೇ ಒಂದು ಕ್ರಿಯ ಅಥವಾ ಕಾರ್ಯ ಆರಂಭವಾಗಿ ಸಂಪೂರ್ಣಗೊಂಡಿಲ್ಲದಿದ್ದರೆ ಆ ಕಾರ್ಯ ವನ್ನು ಪೂರೈಸುವುದಕ್ಕೆ ಒಂದು ಶಕ್ತಿಯು ನಿಮ್ಮನ್ನು ಬಲವಾಗಿ ಎಳೆಯುತ್ತಾ ಇರುವುದು. ಈ ಬಲ ಅಥವಾ ಶಕ್ತಿಯೇ ಕರ್ಮ ಎನಿಸುವುದು. ನೀವು ಯಾವುದನ್ನು ಅಪೇಕ್ಷೆ ಪಟ್ಟು ರುಚಿಯನ್ನು ಕಂಡು ಆದರೆ ಸಂಪೂರ್ಣವಾಗಿ ಅನುಭವಿಸಿಲ್ಲವೋ, ನೀವು ಪರಿಪೂರ್ಣತೆಯನ್ನು ಭಾವಿಸುವವರೆಗೆ ನೀವು ಆ ಅನುಭವವನ್ನು ಪುನಃ ಪುನಃ ಅನುಭವಿಸುವುದಕ್ಕೆ ಅದು ನಿಮ್ಮನ್ನು ಸೆಳೆಯುತ್ತಾಇರುವುದು. ನೀವು ಮತ್ತು ಆ ಅನುಭವವು ಒಂದಾಗುವವರೆಗೆ ನೀವು ಆ ಕಾರ್ಯವನ್ನು ಪುನಃ ಪುನಃ ಮಾಡುವಿರಿ. ಕಾರಣವೇನೆಂದರೆ ಪರಿಪೂರ್ಣತೆಯೇ ನೀವು, ನೀವೇ ಪರಿಪೂರ್ಣತೆ: ನೀವು ಈ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೇ ಈ ದೇಹವನ್ನು ಪ್ರವೇಶಿಸಿದ್ದೀರ. ಕಾರ್ಯವನ್ನು ಪೂರ್ಣಗೊಳಿಸುವ ಮಾರ್ಗದಲ್ಲಿ ನೀವು ತೊಂದರೆಗಳು ಅಥವಾ ಕಷ್ಟಗಳನ್ನು ಕಾಣುವಿರಿ.

ಕರ್ಮಕ್ಕೆ ನಾನು ಈ ವಿವರಣೆಯನ್ನು ಕೊಡುವೆನು. ಬೇರೆ ಮಾತುಗಳೆಲ್ಲ - ನನ್ನ ಕೆಟ್ಟ ಕರ್ಮದಿಂದ ನನಗೆ ಈ ಖಾಯಿಲೆ ಬಂತು / ನನ್ನ ಒಳ್ಳೆಯ ಕರ್ಮದಿಂದ ನಾನು ಸ್ವಾಮೀಜಿಯನ್ನು ಭೇಟಿ ಮಾಡಿದೆ. ಈ ಮಾತುಗಳೆಲ್ಲ ನಾವು ಆ ಘಟನೆ ನಡೆದ ಮೇಲೆ ಹೇಳುವ ಮಾತು. ನಡೆದದ್ದೆಲ್ಲವುದಕ್ಕೂ ನಾವು ‘ಕರ್ಮ’ ಎಂದು ಹೆಸರು ಕೊಡುತ್ತೇವೆ.

‘ಕರ್ಮ’ ಪದದ ಬಹಳ ಅಪಾರ್ಥವು ಆಗಿರುವುದು. ನಾನು ನೀವೆಲ್ಲ ಅರ್ಥ ಮಾಡಿಕೊಂಡಿರುವಂತೆ ಕರ್ಮದ ಅರ್ಥವನ್ನು ಕೊಡುತ್ತಾ ಇಲ್ಲ. ನಾನು ಕರ್ಮಕ್ಕೆ ‘ವಿಧಿ’ ಎಂಬುವ ಅರ್ಥ ಕೊಡುವುದಿಲ್ಲ. ನನ್ನ ಅನುಭವದ ಪ್ರಕಾರ ವಿಧಿ ಎಂಬುವುದು ಎಂಥದ್ದೂ ಇಲ್ಲ. ಪ್ರಾಪಂಚಿಕ ಶಕ್ತಿಯು ನಮಗೆ ನಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ತೆರೆದು ಬಿಟ್ಟು ಕೊಟ್ಟಿರುವುದು. ನಿಶ್ಚಯ ಮಾಡುವುದು ನಮಗೆ ಸೇರಿದ್ದು.

ಈ ವಿಷಯದ ಬಗ್ಗೆ ಬೌದ್ಧಿಕ ಸ್ಪಷ್ಟತೆಯನ್ನು ನೀಡುವ ಒಂದು ಬಹಳ ಸುಂದರವಾದ ಕಥೆಯನ್ನು ರಾಮಕೃಷ್ಣರು ಹೇಳಿದ್ದಾರೆ. ಆದರೆ ಖಂಡಿತವಾಗಿ ಯಾರೂ ನಿಮಗೆ ಕರ್ಮದ ನಿಜವಾದ ಅನುಭವಾತ್ಮಕ ಸ್ಪಷ್ಟತೆಯನ್ನು ನೀಡಲಾರರು. ಕಾರಣವೇನೆಂದರೆ ಸ್ಪಷ್ಟತೆಯು ಕೇವಲ ಜ್ಞಾನೋದಯದೊಡನೆ ಬರುವುದು.

ಆದರೆ ಜ್ಞಾನೋದಯ ಹೊಂದಿದ್ದವರು ಅವರ ಅನುಭವವನ್ನು ಎಂದಿಗೂ ವ್ಯಕ್ತಪಡಿಸಲಾರರು.

ಈಗ 'ಕರ್ಮ' ದ ಬಗ್ಗೆ ಆ ಕಥೆ.

ಒಂದು ಹಸುವನ್ನು 5 - ಮೀಟರ್ ಉದ್ದದ ಹಗ್ಗದಿಂದ ಒಂದು ಕಂಬಕ್ಕೆ ಕಟ್ಟಲಾಗಿತ್ತು. ಆ ಸುತ್ತಳತೆಯ ಪರಿಧಿಯಲ್ಲಿ ಅದು ಕುಳಿತುಕೊಳ್ಳಬಹುದು, ತಿನ್ನಬಹುದು ಮತ್ತು ಇಷ್ಟ ಬಂದದನ್ನು ಮಾಡಬಹುದು. ನಮ್ಮ ಜೀವನವೂ ಹೀಗೆ. ನಮಗೆ ಕೇವಲ ಸೀಮಿತ ಪ್ರಮಾಣದಲ್ಲಿ ಸ್ವಾತಂತ್ರ್ಯಯ ಇರುವುದು. ಮಿಕ್ಕಿದ್ದೆಲ್ಲಾ ವಿಶ್ವಶಕ್ತಿ (Existence) ಯ ಕೈಯಲ್ಲಿ ಇದೆ. ಆದರೆ ಈ 5 ಮೀಟರ್‌ನ ಸ್ವಾತಂತ್ರ್ಯವು ನಾವು ಬುದ್ಧಿವಂತಿಕೆಯಿಂದ ಉಪಯೋಗಿಸಿದರೆ, ವಿಶ್ವಶಕ್ತಿಯು ನಮ್ಮ ಹಗ್ಗವನ್ನು ವಿಸ್ತರಿಸಬಹುದು. ಇದು ನಿಮ್ಮ ಮೇಲೆ ಹಾಗೂ ಆ ಒಡೆಯನ ಮೇಲೆ ಅವಲಂಬಿಸುತ್ತದೆ. ಅರ್ಥಾತ್ ಜೀವ (ಸಾಮಾನ್ಯ ಜೀವಿಗಳು) ಮತ್ತು ಶಿವ ಇವೆರಡರ ಮೇಲೆ ಅವಲಂಬಿಸುತ್ತವೆ. ನೀವು ನಿರ್ಬಂಧದಲ್ಲಿ ಇರುತ್ತೀರೋ ಅಥವಾ ಬಿಡುಗಡೆಗೆ ಪ್ರಯತ್ನಿಸುತ್ತೀರೋ ಅದು ನಿಮಗೆ ಸೇರಿದ್ದು. ಒಮ್ಮೆ ಒಬ್ಬರು ನನ್ನನ್ನು ಕೇಳಿದರು ‘ಅಕಸ್ಮಾತ್ತಾಗಿ ಹಸುವು ಹಗ್ಗವನ್ನು ಕಚ್ಚಲು ಕಲಿತುಕೊಂಡು ತನ್ನನ್ನು ತಾನೇ ಬಿಡಿಸಿಕೊಂಡು ಬಿಟ್ಟರೆ ಹೇಗೆ?’ ಎಂದು.

ನಿಮ್ಮ ಪ್ರಶ್ನೆಗಳಿಗೆ ಉತ್ತರ

ಮೊದಲನೆಯದಾಗಿ ನಿಮಗೆ ನಿಮ್ಮ ಹಗ್ಗ ಎಲ್ಲಿದೆ ಎಂದು ಗೊತ್ತೇ? ಯಾವ ಕಂಬಕ್ಕೆ ಕಟ್ಟಿರುವುದು ತಿಳಿದಿದೆಯೇ? ಎಲ್ಲಿ ಆರಂಭವಾಗುವುದು, ಎಲ್ಲಿ ಮುಗಿಯುವುದು? ಎಲ್ಲಿ ಕಚ್ಚುವುದು? ಹೇಗೆ ಕಚ್ಚುವುದು? ಹಸುವಿಗಾದರೆ ಇವೆಲ್ಲ ಕಾಣಿಸುವುದು, ನಿಮಗೆಲ್ಲ ನಿಮ್ಮ ಹಗ್ಗ ಯಾವುದು ಅಥವಾ ಎಲ್ಲಿದೆ ಎಂದು ಗೊತ್ತೇ ಇಲ್ಲ. ಅದಕ್ಕೇ ನಾನು ನಿಮಗೆ ಇಷ್ಟು ತಿಳಿಸಿ ನಿಮಗೆಲ್ಲ ಈ ಅನುಭವದ ಕೇವಲ ಒಂದು ಕಣದೃಷ್ಟಿಯನ್ನು ಕೊಟ್ಟು ನನ್ನೊಳ ಹೊಕ್ಕಲು ಪ್ರೇರೇಪಿಸಬಲ್ಲೆ.

ಪ್ರ : ಪ್ರಿಯ ಸ್ವಾಮೀಜಿ ನಿಮ್ಮ ಮನಸ್ಸು ಕೇವಲ ನಮ್ಮ ‘ಒಳಗಿನ ರಚಿ’ ಆಗಿರುವುದರಿಂದ ದೈವತ್ವದ ಬಳಿ ಹೋಗುವುದಕ್ಕೆ ಧೀಮಂತಿಕೆಯನ್ನು ತ್ಯಜಿಸುವ ಅವಶ್ಯಕತೆ ಇರುವುದೇ?ನಾನು ಅದನ್ನು ಉತ್ತರಿಸುವುದಕ್ಕೆ ಮುಂಚೆ ಮನಸ್ಸು ಕೆಲಸ ಮಾಡುವ ವಿಧಾನವನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ನಿಮಗೆ ಇರುವುದು. ನಮ್ಮ ಮನಸ್ಸು ನಾಲ್ಕು ಕಾರ್ಯ ವಿಭಾಗಗಳ ಮಿಶ್ರಣವಾಗಿರುವುದು : ಮನಸ್
(ಜ್ಞಾನೇಂದ್ರಿಯಗಳಿಂದ ತಿಳಿಯುವಿಕೆ ಆಗುವ ಭಾಗ)

ಚಿತ್ತ (ನೆನಪು ಅಥವಾ ವಿಶ್ವ ಜ್ಞಾನದ ದಾಖಲೆ - ಮೆಮರಿ)

ಬುದ್ಧಿ ಮತ್ತು ಅಹಂಕಾರ. ಇವುಗಳನ್ನೆಲ್ಲ ಮೀರಿ ಇರುವುದು - ಆತ್ಮ. ಎಲ್ಲಾ ಸುದ್ದಿ ಸೂಚನೆಗಳು ಈ ನಾಲ್ಕು ಭಾಗಗಳ ಮೂಲಕವೇ ನಮಗೆ ಬರುವುದು.

ಉದಾಹರಣೆಗೆ ನೀವು ಒಂದು ಚಂಡು ಹೂವನ್ನು ನೋಡಿದಾಗ ನೀವು ನೋಡಿರುವುದು ಹಳದಿ ಬಣ್ಣದ ಹೂವು ಎಂಬ ಸುದ್ದಿ ನಿಮ್ಮ ಚಕ್ಷುಗಳ ಮೂಲಕ ಗ್ರಹಿಸಲಾಗುವುದು. ಈ ಸಮಾಚಾರವು ಈಗ ಚಿತ್ತಕ್ಕೆ ಕಳುಹಿಸಲಾಗುವುದು.

ಚಿತ್ತವು ನೀವು ಇದಕ್ಕೆ ಮುಂಚೆ ನೋಡಿದ ಹೂವುಗಳ ದಾಖಲೆಯೊಂದಿಗೆ ಹೊಂದಿಸಿ ಅಥವಾ ಹೋಲಿಸಿ ನೋಡಿ, ಈ ಹೂವು ಪರಿಚಿತವಾದುದೋ ಅಲ್ಲವೋ ಎಂದು ನಿಶ್ಚಯಿಸುತ್ತದೆ.

'ಫೈಲ್' (ವಿಷಯ) ಮುಂದಿನ ಭಾಗಕ್ಕೆ ಹೋಗುವುದು. ಬುದ್ಧಿಯು ಈ [?] ಬಣ್ಣದ ಹೂವು ಚೆಂಡು ಹೂವು, ಅದು ದೊಡ್ಡದಾಗಿದೆ, ಅದರಲ್ಲಿ ಸುವಾಸನೆ ಇಲ್ಲ ಎಂದು ತೀರ್ಮಾನಿಸುತ್ತದೆ.

ಕಡೆಯದಾಗಿ ಅಹಂಕಾರದ ಕೆಲಸ - ತನ್ನ ಸ್ವಾರ್ಥದ ಆಧಾರದ ಮೇಲೆ ಅಭಿಪ್ರಾಯಗಳನ್ನು ಉತ್ಪನ್ನ ಮಾಡುವ ಕೆಲಸ. ಉದಾಹರಣೆಗೆ 'ನನಗೆ ಈ ಹೂವು ಇಷ್ಟ 'ಅಥವಾ 'ನಮ್ಮ ಪಕ್ಕದ ಮನೆಯಲ್ಲಿ ಬೆಳೆಯುತ್ತಿರುವ ಚೆಂಡು ಹೂವುಗಳು ಇನ್ನೂ ಚೆನ್ನಾಗಿವೆ' ಇತ್ಯಾದಿ. ಅಹಂಕಾರವು ನೀಡಿದ ಅಭಿಪ್ರಾಯದ (ಸುದ್ದಿಯ) ಆಧಾರದ ಮೇಲೆ ಆತ್ಮವು ಏನು ಮಾಡಬೇಕು, ಏನು ಕ್ರಮ ತೆಗೆದುಕೊಳ್ಳಬೇಕೆಂದು ನಿಶ್ಚಯಿಸುವುದು - 'ಹೂವನ್ನು ಕೀಳು' ಅಥವಾ 'ಗಿಡಕ್ಕೆ ನೀರನ್ನು ಹಾಕು' ಅಥವಾ 'ಎಸೆದು ಬಿಡು', ಹೀಗೆ.

ಆದರೆ ಈ ವಿಧಾನದಲ್ಲಿ ಸಮಸ್ಯೆ ಏನೆಂದರೆ ಸಮಾಚಾರವು ಆತ್ಮಕ್ಕೆ ತಲುಪುವಷ್ಟರಲ್ಲಿ ಅದು ಅಹಂಕಾರದ ಮೂಲಕ ಶೋಧಿಸಲಾಗಿರುವುದು - ಇದರ ಪರಿಣಾಮವಾಗಿ

ನಮಗೆ ಕಾಣುವುದು, ನಾವು ಪ್ರತಿಕ್ರಿಯೆ ನೀಡುವುದು ನಿಜದ ಆಧಾರದ ಮೇಲಾಗಿರುವುದಿಲ್ಲ, ಬದಲಿಗೆ ಅಹಂಕಾರವು ಶೋಧಿಸಿ ನೀಡಿರುವ ಸುದ್ದಿಯ ಮೇಲೆ ಆಧಾರವಾಗಿರುವುದು. ಇದಕ್ಕಾಗಿಯೇ ನೀವು ಸದಾ ಅಜ್ಞಾನ ಮತ್ತು ಗೊಂದಲದ ಸ್ಥಿತಿಯಲ್ಲಿದ್ದು ನಿಮ್ಮ ಮನಸ್ಸಿಗೆ ಒಳಗಿನ ಹರಟೆಯನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ತಪ್ಪು ತಿಳಿದುಕೊಂಡಿರುವಿರಿ.

ಆದರೆ ನಿಜವೇನೆಂದರೆ ವಿವೇಕವು ಅರಳಿದಾಗ ಅಹಂಕಾರವು ತಾನಾಗಿ ತಾನೆ ಕೊನೆಗಾಣುವುದು. ಆಗ ಆತ್ಮವು ಪರಿಸ್ಥಿತಿಗಳ ಮೇಲೆ ನೇರವಾಗಿ ಅಧಿಕಾರ ಹೊಂದುವುದು, ಅಹಂಕಾರದ ಮೂಲಕ ಅಲ್ಲ. ಅದು ‘ಪ್ರೆಸಿಡೆಂಟ್ಸ್ ರೂಲ್’ ಇದ್ದ ಹಾಗೆ ಚೈತನ್ಯದ ಅದ್ಭುತವಾದ ಸಂಗ್ರಹವು ನಮಗೆ ದೊರಕುವುದು. ಸೂಚನೆ ಸಮಾಚಾರಗಳು ಆಗ ಕೇವಲ ನಮ್ಮ ಐದು ಜ್ಞಾನೇಂದ್ರಿಯಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಇದರ ಪರಿಣಾಮವಾಗಿ ಸುದ್ದಿಯನ್ನು ಸಂಸ್ಕರಿಸಿ ತೀರ್ಮಾನಕ್ಕೆ ಬರುವ ಸಾಮರ್ಥ್ಯವು ಹೆಚ್ಚಾಗುವುದು - ಈ ಸ್ಥಿತಿಯು ಸಾಮಾನ್ಯ ಕಣ್ಣುಗಳಿಗೆ ಚಮತ್ಕಾರವಾಗಿ ಕಾಣುವುದು. ಈ ಸ್ಥಿತಿಯಲ್ಲಿಯೇ ಯೋಗಿಗಳು ಹಾರಬಲ್ಲರು ಮತ್ತು ಬೇರೆ ಬೇರೆ ಚಮತ್ಕಾರಗಳನ್ನು ಮಾಡಬಲ್ಲರು. ದೈವತ್ವದೊಂದಿಗೆ ಸಂಪೂರ್ಣ ಸ್ವರಮೇಳ ಇರುವ ಇದು ಒಂದು ಅದ್ಭುತವಾದ ಸ್ಥಿತಿ.

ನೀವು ದೈವತ್ವವನ್ನು ಸೇರುವುದಕ್ಕೆ ನಿಮ್ಮ ಮನಸ್ಸನ್ನು ಮತ್ತು ಧೀಮಂತಿಕೆಯನ್ನು ತ್ಯಜಿಸುವ ಅವಶ್ಯಕತೆ ಇಲ್ಲ, ಬದಲಿಗೆ ಅಹಂಕಾರವನ್ನು ತ್ಯಜಿಸಲು ನೀವು ತಯಾರಾಗಿರಬೇಕು. ಕಸದೊಂದಿಗೆ ರಸವನ್ನೂ ಎಸೆದು ಬಿಡಬೇಡಿ!

ಭಾವಚಿತ್ರ