KAILASA Library/ಪ್ರೀತಿಯ ಅನ್ವೇಷಣೆ/ಪ್ರೀತಿ ಎಂದರೆ ಏನುSign in
ಪ್ರೀತಿಯ ಅನ್ವೇಷಣೆ

ಪ್ರೀತಿ ಎಂದರೆ ಏನು

This text was machine-transcribed from the printed book and may contain errors. Select the words and choose “Report a mistake”.

ಬಹಳ ಸರಳವಾದ ಪ್ರಶ್ನೆ ಎನಿಸುವುದಲ್ಲವೆ? ಆದರೆ ಎಷ್ಟು ಆಟಮಾಟಿಸುವ ಪ್ರಶ್ನೆ! ಈ ಪ್ರಶ್ನೆಯು ನಿಮ್ಮನ್ನು ಎಷ್ಟು ಆಳಕ್ಕೆ ಕೊಂಡೊಯ್ಯುವುದೆಂದು ಗಮನಿಸಿ.

ಸಾಮಾನ್ಯವಾಗಿ ನಾವು ಯಾವುದನ್ನು ಪ್ರೀತಿ ಎಂದು ಕರೆಯುತ್ತೇವೋ ಅದು ಕೇವಲ ನಮ್ಮ ಶರೀರದ ಅಂತಃಸ್ರಾವಗಳ (hormones) ಒಂದು ತುಂಟಾಟ. ಅದು ಮನುಷ್ಯನ ಲೋಭ, ಭಯ, ಕೋಪ ಮತ್ತು ಹೊಟ್ಟೆಕಿಚ್ಚಿನ ಭಾವನೆಗಳ ಸೆಳೆತಗಳ ಮೇಲೆ ಕಾರ್ಯಮಾಡುವುದು. ಈ ರೀತಿ ಪ್ರೀತಿಸುವುದು, ನಮ್ಮ ಮನಸ್ಸು ಮತ್ತು ಅಂತಃಸ್ರಾವಗಳು ಉಂಟು ಮಾಡಿದ ಹಾವಳಿಗೆ ಆಹುತಿ ಆಗಿರುವುದು, ಆವಶ್ಯಕವಾಗಿ ನರಕದಲ್ಲಿರುವ ಸಮಾನ!

ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ತಮ್ಮ ಜೀವನದ ಸ್ವಾರ್ಥಪರ ರೂಪದ ಸಣ್ಣ ಪುಟ್ಟ, ಅಲ್ಪ ಸ್ವಲ್ಪ ಪ್ರೀತಿಯ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದನ್ನು ಮೀರಿ ಬೇರೆ ಕಲ್ಪನೆಯೇ ಇಲ್ಲ. ಪ್ರೀತಿಯ ನಿಜವಾದ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ನಾವು ಮನುಷ್ಯನ ಸ್ವಭಾವವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

ಬುದ್ಧಿ ಶಕ್ತಿ, ಮನೋಭಾವ ಮತ್ತು ಅಂತರಂಗದಿಂದ ರಚಿತವಾಗಿರುವ ಮನುಷ್ಯನದು ಒಂದು ವಿಧವಾದ 'ಮುಮ್ಮಡಿಯ ಬದುಕು'. ಇವುಗಳನ್ನೆಲ್ಲ ಮೀರಿ ಮುಂದೆ ಇರುವುದು ಮನುಷ್ಯನ ಅತ್ಯಂತ ಒಳಗಿನ ತಿರುಳು- 'ಆತ್ಮ' (self).

ನಾವೆಲ್ಲರೂ ಒಂದೇ ರೀತಿಯಲ್ಲಿ ಪ್ರೀತಿಸುತ್ತೇವೋ ಅಥವಾ ಬೇರೆ ಬೇರೆ ಪ್ರಕಾರದ ಪ್ರೀತಿ ಇರುವವೊ ?

ಪ್ರೀತಿಯು ಒಂದೇ ಇರುವುದು. ಆದರೆ ಅದು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ವ್ಯಕ್ತಗೊಳ್ಳುವುದು.

ಬೌದ್ಧಿಕವಾದ ಪ್ರೀತಿಯನ್ನು ತಲೆಯಿಂದ ವ್ಯಕ್ತಪಡಿಸಲಾಗುವುದು. ಈ ರೀತಿಯ ಪ್ರೀತಿ ಮನಸ್ಸಿಗೆ ಸಂಬಂಧಪಟ್ಟದ್ದರಿಂದ ಎಲ್ಲಕ್ಕಿಂತ ಹೆಚ್ಚು ಕಲಂಕಿತವಾದದ್ದು.

ಬುದ್ಧಿಮತ್ತೆಯು (Intellect) ಪ್ರೀತಿಯನ್ನು ಒಂದು ವ್ಯಾಪಾರ ಅಥವಾ ಒಪ್ಪಂದವಾಗಿ (ಕಾಂಟ್ರಾಕ್ಟ್-contract) ಗ್ರಹಿಸುವುದು. ಈ ರೀತಿಯ ಪ್ರೀತಿಯು ಖಡಾ ಖಂಡಿತವಾದ ಅದಲು ಬದಲನ್ನು ಅನುಸರಿಸುವುದು. ಇದು ಬಹಳ ಲೆಕ್ಕಾಚಾರದ ಮನೋಭಾವ – ‘ಈ ಸಂಬಂಧದಲ್ಲಿ ನನಗೆ ಏನು ಸಿಗುತ್ತದೆ?’ ಎಂದು ಯೋಚಿಸುವ ಮನೋಭಾವ. ಈ ರೀತಿಯ ಪ್ರೀತಿಯು ಅವಶ್ಯಕವಾಗಿ ಒಡೆತನ, ಹೊಟ್ಟೆಕಿಚ್ಚು ಮತ್ತು ಚಿತ್ರಹಿಂಸೆಯಾಗಿ ಪರಿಣಮಿಸುವುದು. ಈ ರೀತಿಯ ಪ್ರೀತಿಯು, ಪ್ರೀತಿ ಮಾಡುವವರನ್ನಾಗಲಿ ಅಥವಾ ಅವರು ಪ್ರೀತಿ ಮಾಡಿದ್ದವರನ್ನಾಗಲಿ, ಇಬ್ಬರನ್ನೂ ಪರಿವರ್ತಿಸಲಾರದು.

ಭಾವನಾತ್ಮಕ ಪ್ರೀತಿಯನ್ನು ಹೃದಯದಿಂದ ವ್ಯಕ್ತ ಪಡಿಸಲಾಗುವುದು - ಈ ಕಾರಣದಿಂದ ಇದರ ಪ್ರಕಟಣೆಯು ಬೌದ್ಧಿಕ ಪ್ರೀತಿಗಿಂತ ಹೆಚ್ಚು ನಿರ್ಮಲವಾದದ್ದು. 'ಪ್ರೀತಿಯಲ್ಲಿ ಏರುವುದು' (rising in love) ಎಂದು ಕರೆಯಬಹುದು. ನಮ್ಮ ಅಂತರಂಗದ ಮೂಲಕ ಪ್ರಕಟವಾದಾಗ ಅದನ್ನು 'ಪ್ರೀತಿಯಲ್ಲಿ ಹಾರುವುದು' (flying in love) ಎಂದು ಕರೆಯಲಾಗುವುದು ಮತ್ತು ಯಾವ ಪ್ರೀತಿಯು ನಿಮಗೆ ರೆಕ್ಕೆ ನೀಡಿ ಹಾರಲು ಸಾಧ್ಯ ಮಾಡುವುದೋ, ಅದೊಂದೇ 'ಪ್ರೀತಿ' ಎನ್ನುವ ಪದಕ್ಕೆ ಯೋಗ್ಯವಾದದ್ದು.

ಸಾಮಾನ್ಯ ಪ್ರೀತಿಗೂ, ದೈವಿಕ ಪ್ರೀತಿಗೂ (Divine love) ಏನು ವ್ಯತ್ಯಾಸ? ಇವೆರಡೂ ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗಿದ್ದ ಒಂದೇ ಅನ್ವೇಷಣೆಯ ಪರಿಣಾಮವೇ ?

ಪ್ರೀತಿಯಲ್ಲಿ ಎರಡು ರೀತಿ ಇರುವುದು ಎಂದು ನಾನು ಹೇಳಬಲ್ಲೆ - ಒಂದು ವಿಭಾಗಿಸುವ ಪ್ರೀತಿ (Dividing love) ಮತ್ತು ಇನ್ನೊಂದು ದೈವಿಕ ಪ್ರೀತಿ (Divine love) ಸಾಮಾನ್ಯ ಪ್ರೀತಿಯು ವಿಭಾಗಿಸುವುದು, ದೈವಿಕ ಪ್ರೀತಿಯು ಒಗ್ಗೂಡಿಸುವುದು.

ಸಾಮಾನ್ಯ ಪ್ರೀತಿಯು ಪರಿಮಿತಿಗಳನ್ನು ಗ್ರಹಿಸುವುದು, ದೈವಿಕ ಪ್ರೀತಿಯು ಪರಿಮಿತಿಯನ್ನೇ ಗುರುತಿಸಲಾರದು.

ಆದರೆ ಹೌದು, ಇವೆರಡೂ ಒಂದೇ ಅನ್ವೇಷಣೆಯ ಅಭಿವ್ಯಕ್ತತೆಗಳು. ಇವೆರಡು ರೀತಿಯ ಪ್ರೀತಿಯು ಅಂತಸ್ತಿನಲ್ಲಿ ಮಾತ್ರ ಬೇರೆ ಹೊರತು ಸ್ವಭಾವದಲ್ಲಿ ಬೇರೆಯಲ್ಲ. ಸಾಮಾನ್ಯ ಪ್ರೀತಿಯು ಬುದ್ಧಿಯ ಸ್ತರದಿಂದ ಅಂತರಂಗದ ಸ್ತರಕ್ಕೆ ಏರುತ್ತಾ ಬಂದಾಗ, ಅದು ದೈವಿಕ ಪ್ರೀತಿಯ ಲಕ್ಷಣಗಳನ್ನು ಪಡೆಯುತ್ತಾ ಬರುವುದು. ಎಷ್ಟರಮಟ್ಟಿಗೆ ವಿಶ್ವಾಸ ಇಟ್ಟುಕೊಳ್ಳುವುದೆಂದರೆ ಅದಕ್ಕೆ ಭಯದ ತಿಳುವಳಿಕೆಯೇ ಆಗಲಾರದು. ಪ್ರೀತಿಯು ಪ್ರಶ್ನಿಸುವುದಿಲ್ಲ, ಪ್ರೀತಿಯು ಬೇರೆಯವರಲ್ಲಿ ಪ್ರಾಮಾಣಿಕತೆಯನ್ನು ಆಗ್ರಹಿಸುವುದಿಲ್ಲ - ಅದು ಕೇವಲ ಸಂಪೂರ್ಣವಾಗಿ ಶರಣಾಗುವುದು.

ಇಬ್ಬರು ಒಬ್ಬರನೊಬ್ಬರನ್ನು ಸತ್ಯವಾಗಿ ಪ್ರೀತಿಸಿದಾಗ ಅವರು ಒಬ್ಬರಿಗೊಬ್ಬರು ಶರಣಾಗಲಾರರೇ - ಹೊರತು, ಇಬ್ಬರೂ ಪ್ರೀತಿಯ ಅದ್ಭುತ ಅನುಭವಕ್ಕೆ ಶರಣಾಗುವರು.

ನೀವು ಪ್ರೀತಿಸುತ್ತಾಗಿದ್ದೀರ ಎಂಬುವ ಸತ್ಯವೇ ಒಂದು ಭರವಸೆ, ಒಂದು ಗ್ಯಾರಂಟಿ. ಯಾವ ಒಪ್ಪಂದದ ರಕ್ಷಣೆಯ ಅವಶ್ಯಕತೆಯೇ ಇಲ್ಲ. ನಿಜ ಏನೆಂದರೆ ನಮ್ಮ ವಿಶ್ವಾಸವನ್ನು ಭಂಗ ಮಾಡಿದರೂ, ಪ್ರೀತಿಯು ವಿಶ್ವಾಸವನ್ನು ಇಟ್ಟುಕೊಂಡೇ ಇರುವುದು. ವಿಶ್ವಾಸಿಸುವುದೇ ಪ್ರೀತಿಯ ಗುಣ. ಅದಕ್ಕೆ ಬೇರೆ ಯಾವ ರೀತಿಯೂ ಗೊತ್ತೇ ಇಲ್ಲ. ವಿಶ್ವಾಸದ ದಾರಿ ಬಿಟ್ಟರೆ, ಪ್ರೀತಿಸಿದವರಿಗೆ ದುಃಖ ಉಂಟಾಗುವುದು ಮತ್ತು ನಿಜವಾಗಲೂ ಪ್ರೀತಿಸುವವರಿಗೆ ಇತರರ ದುಃಖ ಎಂದಿಗೂ ತಡೆಯುವುದಕ್ಕೆ ಸಾಧ್ಯ ಇಲ್ಲ.

ಪ್ರೀತಿಗೆ ಹೊಟ್ಟೆಕಿಚ್ಚಿನ, ಒಡೆತನದ ಭಾಷೆಯೇ ಗೊತ್ತಿಲ್ಲ, ಇವುಗಳನ್ನು ಪ್ರೀತಿಯ ಸಂಬಂಧದಲ್ಲಿ ತರುವುದು ಖಂಡಿತ ಪ್ರೀತಿಯನ್ನು ನಾಶ ಮಾಡುವ ಹಾಗೆ. ಎಚ್ಚರಿಕೆಯಿradiರಿ! ಪೂರೈಸುವುದಕ್ಕೆ ಬೇರೆಯವರ ಕಡೆಗೆ ತಿರುಗುವ ಅವಶ್ಯಕತೆಯು ಇರುವುದಿಲ್ಲ. ಆಗ ‘ಫ್ರೀ ಸೆಕ್ಸ್'ನ ‘ಫ್ರೀ' ಪದವು ಹೊರಟು ಹೋಗುವುದು - ಕೇವಲ ‘ಸೆಕ್ಸ್' ಉಳಿದುಕೊಳ್ಳುವುದು.

ಎಲ್ಲಕ್ಕಿಂತ ಹೆಚ್ಚಾಗಿದ್ದ ಪ್ರೀತಿಯ ಪ್ರಕಾಶವು ಮನುಷ್ಯನ ಅಂತರಂಗದಿಂದ ಹೊರಸೂಸಿದಾಗ, ‘ಸೆಕ್ಸ್' ಎಂಬುವ ಪದವೇ ಮಾಯವಾಗುವುದು. ಈ ಸ್ಥಿತಿಯಲ್ಲಿ ಮನುಷ್ಯನು ಇನ್ನೊಬ್ಬರ ಅನುಪಸ್ಥಿತಿಯಲ್ಲಿಯೂ ಒಂದು ಅದ್ಭುತವಾದ ಸಂತುಷ್ಟತೆಯನ್ನು ಅನುಭವಿಸುವನು. ಅವನಲ್ಲಿ ಎಷ್ಟರಮಟ್ಟಿಗೆ ಸ್ವಸಂಪೂರ್ಣತೆ ಇರುತ್ತದೆ ಎಂದರೆ ಅವನಿಗೆ ‘ಸೆಕ್ಸ್'ನ (ಲೈಂಗಿಕ ಸಂಬಂಧದ) ಅವಶ್ಯಕತೆಯೇ ಇರುವುದಿಲ್ಲ.

ಸಂಪೂರ್ಣವಾಗಿ ಭೌತಿಕ ವಿಧಾನವಾಗಿರುವ ‘ಫ್ರೀ ಸೆಕ್ಸ್' ಏಕೆ ಬುದ್ಧಿಮತ್ತೆಯ ಮೂಲಕ ವ್ಯಕ್ತಪಡಿಸಲಾಗುವುದು ?

'ಸೆಕ್ಸ್' (ಲೈಂಗಿಕ ಸಂಬಂಧವು) ಕೇವಲ ಒಂದು ಭೌತಿಕವಾದ ವಿಧಾನ ಎಂದು ಯಾರು ಹೇಳಿದರು ? ಅದು ಕೇವಲ ಶರೀರದಿಂದ ವ್ಯಕ್ತಗೊಂಡಿದ್ದರೆ ಅದನ್ನು ತ್ಯಜಿಸುವುದು ಬಹಳ ಸುಲಭವಾಗಿರುತ್ತಾಯಿತ್ತು. ಅದು ಮನಸ್ಸಿನ ಮೂಲಕ ವ್ಯಕ್ತವಾಗುವುದರಿಂದ ಸಮಸ್ಯೆ ಶುರುವಾಗುವುದು. ವಾಸ್ತವವಾಗಿ 90% ನಮ್ಮ ಪ್ರೀತಿ ಮಾಡುವಿಕೆಯು ಮಾನಸಿಕವಾಗಿರುವುದು. ಮನಸ್ಸಿನಲ್ಲಿ ಕಲ್ಪನೆ ಇಲ್ಲದೆ ಎಷ್ಟು ಜನರಿಗೆ ಲೈಂಗಿಕ ಪರಿಪೂರ್ಣತೆ ಪಡೆಯಲು ಸಾಧ್ಯ? ಇದರ ಅರ್ಥವೇನೆಂದರೆ ಲೈಂಗಿಕ ಕ್ರಿಯೆಯು ಕೇವಲ ಒಂದು ಮಾನಸಿಕ ಸಾಧನೆ.

ಮಾನಸಿಕ ಕಲ್ಪನೆಯ ಸಹಾಯವಿಲ್ಲದೆ, ಕೇವಲ ನೀವು ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಪರಿಪೂರ್ಣತೆಯ ಅನುಭವವಾಗಲು ಸಾಧ್ಯವಾದರೆ, ನೀವು ‘ಸೆಕ್ಸ್' ನಿಂದ ಬಿಡುಗಡೆ ಪಡೆಯುವಿರಿ.

ಪ್ರಮಾಣ (quantity) ರೂಪದ ಪ್ರೀತಿಯ ವಿರುದ್ಧವಾಗಿ ಗುಣದ (quality) ರೂಪದಲ್ಲಿರುವ ಪ್ರೀತಿಯನ್ನು ನೀವು ವಿವರಿಸುತ್ತಾ ಇದ್ದೀರಿ.

ಪ್ರೀತಿಯನ್ನು ಲೆಕ್ಕಾಚಾರದ ಆಧಾರದ ಮೇಲೆ ಕೊಟ್ಟರೆ ಅದು ಆಯ್ದುಕೊಂಡಿರುವ ಸ್ವೀಕರಿಸಬಲ್ಲ ಕೆಲವರನ್ನು ಬಿಟ್ಟರೆ ಮಿಕ್ಕದವರಿಂದ ಕಾಪಾಡಿ ಇಟ್ಟುಕೊಂಡಿರುವ ರೀತಿಯಲ್ಲಿ ತುಚ್ಛ ಮತ್ತು ಸೀಮಿತ ಪ್ರಮಾಣದಲ್ಲಿ ವ್ಯಕ್ತಗೊಳ್ಳುವುದು. ನಿರೀಕ್ಷಣೆ, ದುಃಖ ಮತ್ತು ನಿರಾಸೆಯೇ ಈ ರೀತಿಯ ಪ್ರೀತಿಯ ಪರಿಣಾಮ!

ಇದಕ್ಕೆ ವಿರುದ್ಧವಾಗಿ ಪ್ರೀತಿಯು ನಿಮ್ಮ ಅಂತರಂಗದ ಗುಣವೇ ಆಗಿಹೋದಾಗ ಅದು ಸೂರ್ಯನ ಪ್ರಕಾಶದ ರೀತಿಯಲ್ಲಿ ನಿಮ್ಮಿಂದ ಹೊರಸೂಸುವುದು - ಈ ಪ್ರೀತಿಯ ಪ್ರಕಾಶವನ್ನು ಯಾರು ಪಡೆದರೂ ಸರಿ - ಈ ಪ್ರೀತಿ ನಿಮಗೆ ಹಿಂತಿರುಗಿ ಬರದೆ ಇದ್ದರೂ ಸರಿ. ಈ ರೀತಿಯ ಪ್ರೀತಿಯು ಕೇವಲ ನಿಮ್ಮ ಅಂತರಂಗದ ವಿಕಸನದ ಒಂದು ಅಭಿವ್ಯಕ್ತತೆ. ಇದು ಒಂದು ಪ್ರಶ್ನಿಸದೇ ಇರುವ, ಶರತ್ತುಗಳನ್ನು ಹೊರಿಸದೇ ಇರುವ, ಎಲ್ಲರನ್ನು ಆಲಂಗಿಸಿ ಸ್ವೀಕರಿಸುವ, ಎಲ್ಲರಿಗೂ ಒಂದೇ ಸಮ ಹರಡುವ ನಿರ್ಮಲವಾದ ಪ್ರೀತಿ.

ಪ್ರೀತಿಯು ಮನುಷ್ಯನ ಅಹಂಕಾರ ಅಥವಾ ಸೊಕ್ಕನ್ನು ಪೂರೈಸುವ ಉಪಕರಣವಾಗಿರಬಹುದೆ ?

ಪ್ರೀತಿಯು ಬುದ್ಧಿಮತ್ತೆಯ ಮೂಲಕ ವ್ಯಕ್ತಗೊಂಡಾಗ ಖಂಡಿತ ಮನುಷ್ಯನ ಅಹಂಕಾರವನ್ನು ಸೊಕ್ಕನ್ನು ಪೂರೈಸುವುದಕ್ಕೆ ಉಪಕರಣವಾಗಿರುವುದು. ವಾಸ್ತವವಾಗಿ ಬಹಳಮಟ್ಟಿಗೆ ಸಂಬಂಧಗಳಲ್ಲಿ ಜನರು ಒಬ್ಬರನ್ನೊಬ್ಬರ ಅನುಚಿತ ಉಪಯೋಗ ಮಾಡಿಕೊಂಡಿರುವರು. ಇಬ್ಬರ ನಡುವೆ ಪ್ರೀತಿ-ದ್ವೇಷ, ಇರುವ ಅಸ್ಥಿರವಾದ ಸಂಬಂಧಗಳ (Love-hate relationship) ಕಾರಣವೇ ಅಹಂಕಾರ. ಸಂಬಂಧದಲ್ಲಿ ಒಬ್ಬರ ಸೊಕ್ಕನ್ನು ಪೂರೈಸುವುದಕ್ಕೆ ಅವರ ನಿರಂತರ ಒತ್ತಾಯ ತಡೆಯಲಾರದ ಇನ್ನೊಬ್ಬರು ಪ್ರತಿಭಟಿಸಿದಾಗ, ಸಂಬಂಧವು ಈ ಪ್ರೀತಿ-ದ್ವೇಷದ ಅಸ್ಥಿರ ಸ್ಥಿತಿಯನ್ನು ಹೊಂದುವುದು.

“ಅವಳು ನನ್ನ ಮಾತನ್ನೇ ಕೇಳುವುದಿಲ್ಲ, ಅವನು ನನಗೆ ಮರ್ಯಾದೆಯೇ ಕೊಡುವುದಿಲ್ಲ, ಅವಳು ನನ್ನ ಅಪೇಕ್ಷೆಗಳನ್ನೇ ಅರ್ಥ ಮಾಡಿಕೊಂಡಿಲ್ಲ” ಇಬ್ಬರು ಪ್ರೀತಿಸುತ್ತಿದ್ದವರ ಚಾಡಿಗಳನ್ನು ಕೇಳಿದರೆ ಇವೆಲ್ಲ ಅವರಿಬ್ಬರ ಅಹಂಕಾರಕ್ಕೆ ಏಟು ತಾಕಿದೆ ಎಂಬುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು.

ಜ್ಞಾಪಕ ಇಟ್ಟುಕೊಳ್ಳಿ, ಸಂಘರ್ಷ ರೂಪದ ಆಹಾರವೇ ಅಹಂಕಾರವನ್ನು ಪೋಷಿಸುತ್ತಾ ಇರುವುದು. ಸಂಘರ್ಷವು “ನನ್ನ ವಿರುದ್ಧವಾಗಿ ಅವಳು” (ಅಥವಾ ನಿಮ್ಮ ಸಂಬಂಧಗಳಲ್ಲಿ ನೀವು ಈ ಲಕ್ಷಣಗಳನ್ನು ಕಂಡುಹಿಡಿದಿದ್ದರೆ, ನೀವು ಅನುಭವಿಸುತ್ತಿರುವುದು ಪ್ರೀತಿ ಅಲ್ಲ ಎಂದು ನೀವು ತೀರ್ಮಾನಿಸಬಹುದು. ನಿಜವಾದ ಪ್ರೀತಿಗೆ ವಿರುದ್ಧ ಇಲ್ಲ ಎಂದು ಹೇಳುತ್ತಾರೆ. ನಿಜವಾದ ಪ್ರೀತಿಯನ್ನು ಎಂದಿಗೂ ದ್ವೇಷಕ್ಕೆ ಪರಿವರ್ತಿಸಲಾಗದು. ನಿಮ್ಮ ಅಸ್ತಿತ್ವವನ್ನು ವ್ಯಕ್ತಪಡಿಸುವುದಕ್ಕೆ ಇನ್ನೊಬ್ಬರ ಮೂಲಕ ಪೂರೈಸಿಕೊಳ್ಳುತ್ತಿರುವ ಸಂಬಂಧ ಅಲ್ಪಕಾಲಿಕವಾಗಿರುವುದು. ಇದು ಖಂಡಿತ ನಿಜವಾದ ಪ್ರೀತಿಯ ಸಂಬಂಧವಲ್ಲ, ಎಚ್ಚರಿಕೆಯಿರಲಿ!