KAILASA Library/ಪ್ರೀತಿಯ ಅನ್ವೇಷಣೆ/ನಾನು ಅನುಭವಿಸುತ್ತಿರುವುದು ನಿಜವಾದ ಪ್ರೀತಿಯೋ ಅಥವಾ ಕೇವಲ ಒಂದು ಭ್ರಮೆಯೋ ಎಂದು ನನಗೆ ಹೇಗೆ ಗೊತ್ತಾಗುವುದು ?Sign in
ಪ್ರೀತಿಯ ಅನ್ವೇಷಣೆ

ನಾನು ಅನುಭವಿಸುತ್ತಿರುವುದು ನಿಜವಾದ ಪ್ರೀತಿಯೋ ಅಥವಾ ಕೇವಲ ಒಂದು ಭ್ರಮೆಯೋ ಎಂದು ನನಗೆ ಹೇಗೆ ಗೊತ್ತಾಗುವುದು ?

This text was machine-transcribed from the printed book and may contain errors. Select the words and choose “Report a mistake”.

ಪ್ರೀತಿಯು ಯಾವಾಗಲು ನಿಜವಾಗಿರುವುದು, ಅದು ಎಂದಿಗೂ ಭ್ರಮೆ ಯಾಗಿರುವುದಿಲ್ಲ. ಆದರೆ ಯಾವುದೋ ಒಂದು ಭಾವನೆಯನ್ನು ನೀವು ಪ್ರೀತಿ ಎಂದು ತಪ್ಪು ತಿಳಿದು ಕೊಂಡಿದ್ದೀರೋ ಏನೋ ಎಂದು ಪರೀಕ್ಷಿಸಿಕೊಳ್ಳಿ.

ಪ್ರೀತಿಯೆಂಬುವುದು ಎಂದಿಗೂ ನಾಶವಾಗದು. ವಿಶೇಷವಾಗಿ ವಾಸ್ತವಿಕತೆಯಿಂದ ಎಂದಿಗೂ ನಾಶವಾಗದು. 'ಹನಿಮೂನ್' ಮುಗಿದ ತಕ್ಷಣವೇ ಪ್ರೀತಿಯು ಮಾಯವಾಗಿ ಹೋದರೆ ಅದು ಖಂಡಿತ ಪ್ರೀತಿಯಲ್ಲ. ನಿಮ್ಮ ಸಂಗಾತಿಯು ನಿಮ್ಮ ಮದುವೆಯ ಆನಿವರ್ಸರಿಯನ್ನು (anniversary) ಮರೆತು ಹೋದರೆ ಅಥವಾ ಅವಳಿಗೆ (ಅಥವಾ ಅವನಿಗೆ) 'ತೂಕ ಹೆಚ್ಚಾದರೆ (ದಪ್ಪ ಆಗಿ ಹೋದರೆ) ನಿಮ್ಮ ಪ್ರೀತಿಯು ಕಡಿಮೆ ಆಗಿ ಹೋದರೆ ಅದು ಖಂಡಿತ ಪ್ರೀತಿ ಅಲ್ಲ! ಒಬ್ಬರು ವಿಶ್ವಾಸಕ್ಕೆ ಅಯೋಗ್ಯವಾಗಿದ್ದರೂ ಅವರಲ್ಲಿ ವಿಶ್ವಾಸ ಕಳೆದುಕೊಳ್ಳದಿದ್ದರೆ ಅದು ಖಂಡಿತ ನಿಜವಾದ ಪ್ರೀತಿ.

ನೀವು ಅನುಭವಿಸುತ್ತಿರುವುದು ನಿಜವಾದ ಪ್ರೀತಿ ಎಂದು ಹೇಗೆ ಗೊತ್ತಾಗುವುದು? ನಿಮ್ಮನ್ನು ನೀವು ಹೀಗೆ ಪರೀಕ್ಷಿಸಿಕೊಳ್ಳಿ. ನಾಶವಾಗಿಹೋಗಬಹುದು. ನಿಮ್ಮ ನಡುವೆ ಇದ್ದ ಮನಃಸ್ತಾಪವನ್ನು ಅಲಕ್ಷಿಸಬೇಡಿ ಹೊರತು ಅದನ್ನು ವೀಕ್ಷಿಸಿ, ಪರೀಕ್ಷಿಸಿ ನೋಡಿ. ಅದರಿಂದ ನೀವು ಏನು ಪಾಠವನ್ನು ಕಲಿಯಬಹುದು ಎಂದು ನೋಡಿ. ನೀವು ನಿಮ್ಮ ಅಂತರ್ಯದಲ್ಲಿ ಒಪ್ಪಿಕೊಳ್ಳುತ್ತಾ ಇಲ್ಲದೇ ಇರುವ ನಿಮ್ಮಲ್ಲೇ ಇದ್ದ ಯಾವುದೇ ಒಂದು ಕೊರತೆಯೇ ಈ ಮನಃಸ್ತಾಪಕ್ಕೆ ಕಾರಣವೇ? ಸಮೀಪವಾಗಿ ವೀಕ್ಷಿಸಿ.

ಬಹಳ ಆಪ್ತ ಬಳಕೆಯಿರುವ ಸಂಬಂಧದಲ್ಲಿ ಮಾತ್ರ ನೀವು ನಿಮ್ಮ ನಿಜವನ್ನು ಕಂಡು ಹಿಡಿಯಬಲ್ಲಿರಿ. ಈ ಬಹಳ ಸಲಿಗೆಯುಳ್ಳ ಸಂಬಂಧದಲ್ಲಿಯೇ ನಿಮ್ಮ ಸಂಗಾತಿಯು ನಿಮ್ಮ ನಿಜವಾದ ಸ್ವಭಾವವನ್ನು ಪ್ರತಿಬಿಂಬಿಸುತ್ತಾ ಇರುವರು. ಹೇಗಾದರೂ, ನಿಮ್ಮ ಜೀವನ ಸಂಗಾತಿ ಅಲ್ಲದೆ ಬೇರೆ ಯಾರಿಗೆ ನಿಮ್ಮ ಅತ್ಯಂತ ಕೆಟ್ಟ ಕೊರತೆಗಳನ್ನು ಅಷ್ಟೊಂದು ಸ್ಪಷ್ಟತೆಯಿಂದ ಸೂಚಿಸಲು ಸಾಧ್ಯ?

ಹಾಗಾಗಿ, ನಿಮ್ಮ ನಡುವೆ ಇರುವ ಮನಃಸ್ತಾಪದ ಮೂಲಕಾರಣವನ್ನು ಸಮೀಪವಾಗಿ ವೀಕ್ಷಿಸಿ. ಜ್ಞಾಪಕ ಇಟ್ಟುಕೊಳ್ಳಿ, ಸಂಬಂಧದಲ್ಲಿ ಒಂದು ಒಟ್ಟಿಗಿರುವ ಕಾಲವು ಇರಬಹುದು ಮತ್ತು ಸಂಬಂಧವನ್ನು ಕೊನೆಗೆ ತಂದು ಜೀವನದಲ್ಲಿ ಮುಂದುವರೆಯುವ ಕಾಲವು ಇರಬಹುದು. ಸಮೀಪವಾಗಿ ವೀಕ್ಷಿಸಿ-ನಿಮ್ಮಿಬ್ಬರ ನಡುವೆ ನಿಜವಾದ ಪ್ರೀತಿಯು ಇರುವುದೇ? ಆದರೆ ನೀವು ಆಲಿಸುತ್ತಿರುವ ಉತ್ತರವು 'ಇಲ್ಲ-ಹೊಂದಿಕೆಯೇ ಇಲ್ಲ' ಎಂದು ಆಗಿದ್ದರೆ ಸಂಬಂಧವನ್ನು ಕೊನೆಗೆ ತಂದು ನಿಮ್ಮ ಜೀವನದಲ್ಲಿ ಮುಂದುವರೆಯುವುದಕ್ಕೆ ಸಮಯ ಆಗಿದೆ ಎಂದು ತೀರ್ಮಾನಿಸಿ. ಇಬ್ಬರ ಅಂತರಂಗಗಳ ನಡುವೆ ಹೊಂದಿಕೆಯಿಲ್ಲದಿರುವ ಸಂಬಂಧದಲ್ಲಿ ಉಳಿದುಕೊಂಡಿದ್ದರೆ, ಇಬ್ಬರಿಗೂ ನ್ಯಾಯವಾಗುವುದಿಲ್ಲ - ಸಂಬಂಧದ ಅನಾದರಣೆ ಆಗುವುದು. ನಿಮ್ಮ ಜೀವನದ ಪ್ರಯಾಣದಲ್ಲಿ ಮುಂದಕ್ಕೆ ಹೋಗಿ, ನಿಮಗೆ ನಿಜವಾದ ಪ್ರೀತಿ ಸಿಗಬಹುದು. ಪ್ರೀತಿಯನ್ನು ಹುಡುಕಿಕೊಂಡು ಹೋಗಬೇಡಿ - ಕೇವಲ ನಿಮ್ಮ ಮನಸ್ಸನ್ನು ಪ್ರೀತಿಗೆ ತೆರೆದಿಟ್ಟುಕೊಳ್ಳಿ. ಆದರೆ ನಿಮ್ಮ ಸಂಘರ್ಷವುಳ್ಳ ಸಂಬಂಧ ನಿಮ್ಮನ್ನು ನಾಶ ಮಾಡಲು ಬಿಡಬೇಡಿ. ಈ ಸಂಬಂಧವು ನಿಮಗಲ್ಲ ಎಂದು ತಿಳಿದುಕೊಂಡು ಏನೂ ದ್ವೇಷವಿಲ್ಲದೆ ಮುಂದಕ್ಕೆ ಹೋಗಿ. ದ್ವೇಷವನ್ನು ಮನಸ್ಸಲ್ಲಿಟ್ಟುಕೊಂಡರೆ ನೀವು ಎಂದೆಂದಿಗೂ ಯಾರನ್ನೂ ಪ್ರೀತಿಸಲಾರಿರಿ. ಮನಸ್ಸಿನಲ್ಲಿ ದ್ವೇಷ ಸಾಧಿಸಿದರೆ ನಿಮಗೆ ನೀವೇ ದುಃಖ ತಂದುಕೊಳ್ಳುವಿರಿ ಮತ್ತು ಪ್ರೀತಿಯಲ್ಲೇ ವಿಶ್ವಾಸ ಕಳೆದುಕೊಳ್ಳುವಿರಿ - ಇದು ಬಹಳ ಅಪಾಯಕರವಾದ ಸ್ಥಿತಿ. ಹೊರಡಿಸುವವು, ಮತ್ತು ನೀವು ನಿಮ್ಮ ಕೊರತೆಗಳನ್ನು, ಅಪೂರ್ಣತೆಯನ್ನು ಹೊರಗಡೆಯಿಂದ (ಬೇರೆಯವರಿಂದ) ಪೂರೈಸುವುದಕ್ಕೆ ಬಯಸುವ ತನಕ ನೀವು ಪ್ರೀತಿಯ ಸಂಬಂಧದಲ್ಲಿ ದುಃಖವನ್ನು ಅನುಭವಿಸುವಿರಿ.

ನೀವು ಸ್ವಸಂಪೂರ್ಣವಾಗಿರುವುದಕ್ಕೆ ಪ್ರಯತ್ನಿಸಿ. ನಿಮ್ಮ ಅಂತರಂಗದೊಳಗೆ, ನಿಮ್ಮ ಅಸ್ತಿತ್ವದಲ್ಲಿ ಕೇಂದ್ರೀಕರಿಸಿಕೊಂಡು ಇರಿ. ಸಂಬಂಧದಲ್ಲಿ ನೀವು ಏನು ಪಡೆಯಬಹುದು ಎಂದು ಬಯಸುವ ಬದಲು ನಿಮ್ಮಿಂದ ಏನು ಕೊಡಲು ಸಾಧ್ಯ ಎಂಬ ಏಕಚಿತ್ತ ಗುರಿಯನ್ನು ಇಟ್ಟುಕೊಂಡು ಸಂಬಂಧವನ್ನು ಪಾಲಿಸಿ. ಪ್ರೀತಿಯ ಮೊದಲನೆಯ ಪಾಠ: ಬೇರೆಯವರಿಂದ ಪ್ರೀತಿಯನ್ನು ಬಯಸಬೇಡಿ. ಪ್ರೀತಿಯ ಭಿಕ್ಷೆ ಬೇಡಬೇಡಿ. ನಾವೆಲ್ಲರೂ ಬೇರೆಯವರ ಪ್ರೀತಿಯ, ಅವರ ಗಮನದ, ಒಂದು ವಿಧವಾದ ಭಿಕ್ಷೆಯನ್ನು ನಿರಂತರ ಬೇಡುತ್ತಾ ಇರುತ್ತೇವೆ. ನೀವೇ ಪ್ರೀತಿಯ ಭಿಕ್ಷೆ ಬೇಡುತ್ತಿರುವ ಸ್ಥಿತಿಯಲ್ಲಿದ್ದರೆ, ನೀವು ಹೇಗೆ ನಿಮ್ಮ ಪ್ರೀತಿಯನ್ನು ಬೇರೆಯವರಿಗೆ ಕೊಡಬಲ್ಲಿರಿ?

ನಿಮ್ಮ ಪ್ರೀತಿಯು ನಿಮಗೆ ಪ್ರತಿಯಾಗಿ ಸಿಗುವುದೋ ಇಲ್ಲವೋ ಎಂದು ಚಿಂತಿಸಬೇಡಿ. ಪ್ರೀತಿಯು ಒಂದು ಕಾಣಿಕೆ, ಚೆನ್ನಾಗಿ ಲೆಕ್ಕಚಾರ ಮಾಡಿದ ಒಪ್ಪಂದ ಅಲ್ಲ! ಪ್ರೀತಿಯು ಅಂತರಂಗದಿಂದ ಹೊರಸೂಸುವ ಹಾಗೆ ಪ್ರಕಟವಾದಾಗ ಅದನ್ನು ‘ಯಾರು ಪಡೆಯುವರು’, ‘ಯಾವಾಗ ಪಡೆಯುವರು’ ಎಂದು ಲೆಕ್ಕಚಾರವಿಲ್ಲದೆ

ಗುರುವಿನ ಮೇಲೆ ಪ್ರೀತಿ ಆದರೆ ಅದೂ ಒಂದು ವಿಧವಾಗಿ ಪ್ರೀತಿಯಲ್ಲಿ 'ಬಿದ್ದ' ಹಾಗೆಯೇ? (falling in love)

ಇದು ಒಂದು ವಿಧವಾಗಿ ನಿಜ, ಮತ್ತು ನಿಜವೂ ಅಲ್ಲ! ಗಮನಿಸಿ ಕೇಳಿ.

ಸಾಧಾರಣವಾಗಿ 'ಪ್ರೀತಿಯಲ್ಲಿ ಬೀಳುವುದು' (falling in love) ಎಂದರೆ ನೀವು ಪ್ರೀತಿಸಿದವರ ವ್ಯಕ್ತಿತ್ವದ, ರೂಪದ ಮೋಹ ಸಂಪೂರ್ಣವಾಗಿ ನಿಮ್ಮ ಮನಸ್ಸಿನಲ್ಲಿ ತುಂಬಿರುವುದು. ಗುರುವಿನ ವಿಷಯದಲ್ಲಿಯೂ ಹೀಗೇ ಆಗುವುದು. ಆದರೆ ಇದು ಕೇವಲ ಗುರುವಿನ ರೂಪದ ಮೋಹವನ್ನು ಮೀರಿ ಮುಂದಕ್ಕೆ ಹೋಗುವುದಕ್ಕೆ ಒಂದು ಮೆಟ್ಟಲಾಗಿರುವುದು.

ಸಾಧಾರಣವಾಗಿ ನೀವು 'ಪ್ರೀತಿಯಲ್ಲಿ ಬಿದ್ದಾಗ' (fall in love) ನೀವು ಬೇರೆ ಅನೇಕ ರೀತಿಗಳಲ್ಲಿಯೂ 'ಬೀಳುವಿರಿ'. ಕಾರಣವೇನೆಂದರೆ ಪ್ರೀತಿಯ ಜೊತೆಗೆ ಒಡೆತನ, ಹೊಟ್ಟೆಕಿಚ್ಚು, ಅಧಿಕಾರ, ಕೋಪ ಇವೆಲ್ಲ ಸೇರಿಕೊಂಡು ಬರುವುವು. ಸಾಮಾನ್ಯವಾಗಿ ಪ್ರೇಮಿಗಳು ಒಬ್ಬರ ಜೊತೆ ಒಬ್ಬರು ಬಹಳ ಸೂಕ್ಷ್ಮವಾದ ಗುಟ್ಟಾಗಿರುವ ಕಣ್ಣುಮುಚ್ಚಾಲೆ ಆಟವನ್ನು ಆಡುವರು. ಇಬ್ಬರಿಗೂ ತಮ್ಮ ತಮ್ಮ ಅಪೂರ್ಣತೆಯನ್ನು, ಕೊರತೆಯನ್ನು ಪೂರೈಸಿಕೊಂಡು ಸಂಪೂರ್ಣಗೊಳ್ಳುವುದಕ್ಕೆ ಇನ್ನೊಬ್ಬರ ಸಮರ್ಥನೆಯ ಅವಶ್ಯಕತೆ ಇರುವುದು. ಆದರೆ ಅವರ ಅಹಂಕಾರವು ಅಹಂಕಾರವನ್ನು ನಾಶಮಾಡಿ, ನಿಮ್ಮ ಅಂತರಂಗವನ್ನು ಪರಿವರ್ತಿಸುವುದು. ಗುರುವಿನ ಕೈಯಲ್ಲಿ ನೀವು ಒಂದು ಹೊಸ ಜನ್ಮವನ್ನು ಪಡೆಯುವಿರಿ.

ಇದೇ ಕಾರಣಕ್ಕಾಗಿ ಗುರುವಿನ ಮೇಲೆ ಇರುವ ಪ್ರೀತಿಯು ಯಾವಾಗಲೂ ಮನುಷ್ಯನಲ್ಲಿ ಒಂದು ಅದ್ಭುತವಾದ ಔನ್ನತ್ಯವನ್ನು ನೀಡುವುದು. ನೀವು ಪ್ರೀತಿಯಲ್ಲಿ ಬೀಳಬಹುದು. ಆದರೆ ನಾನು ನಿಮ್ಮನ್ನು 'ಬಿದ್ದಿರುವುದಕ್ಕೆ' ಎಂದಿಗೂ ಬಿಡುವುದಿಲ್ಲ; ಬದಲಾಗಿ ನೀವು 'ಪ್ರೀತಿಯಲ್ಲಿ ಏರುವಿರಿ' ಎಂದು ನೋಡಿಕೊಳ್ಳುತ್ತೇನೆ.

Portrait of Paramahamsa Nithyananda