Chapter 11

ಕಲ್ಪತರು

1 sections

ಕಲ್ಪತರು

ಒಂದು ದಿನದ ಈ ಧ್ಯಾನ ಕಾರ್ಯಕ್ರಮವು ಜೀವನ್ಮುಕ್ತಿಯ ಬೀಜವನ್ನು ನಿಮ್ಮಲ್ಲಿ ಬಿತ್ತುತ್ತದೆ. ಈ ಕಾರ್ಯಕ್ರಮವು ನಿಮ್ಮ ಕಾರ್ಯಗಳನ್ನು ನಿಮ್ಮ ಉದ್ದೇಶಗಳೊಂದಿಗೆ ಸರಿಹೊಂದಿಸಿ ನಡೆಸುವ ಚೈತನ್ಯವನ್ನು ನೀಡಿ, ಹೊರಜಗತ್ತಿನ ಯಶಸ್ಸು ಹಾಗೂ ಆಂತರಿಕ ಆನಂದವನ್ನು ಪಡೆಯಲು ನಿಮಗೆ ಅನುವು ಮಾಡಿ ಕೊಡುತ್ತದೆ. ನಿಮ್ಮಲ್ಲಿ ಜೀವನ್ಮುಕ್ತಿಯ ಅಂಶಗಳಾದ ಶಕ್ತಿ, ಬುದ್ಧಿ, ಯುಕ್ತಿ, ಭಕ್ತಿಗಳ ಬೀಜಗಳನ್ನು ಬಿತ್ತುತ್ತದೆ.

ೆಪ್ರತಿಯೊಬ್ಬ ಮಾನವನಲ್ಲಿಯೂ ಅಸಾಧಾರಣ ಶಕ್ತಿಯು ಅಡಗಿದೆ. ಅದನ್ನು ಜಾಗೃತಗೊಳಿಸಿದರೆ, ಉನ್ನತವಾದ ಪ್ರಜ್ಞಾಸ್ತರಕ್ಕೆ ನಿಮ್ಮನ್ನು ಒಯ್ಯುತ್ತದೆ. ಈ ಉನ್ನತ ಪ್ರಜ್ಞೆಯ ಅನುಭವವು ನಿಮ್ಮ ನಿಜ ಸಾಮರ್ಥ್ಯವನ್ನು ವಾಸ್ತವೀಕರಿಸುತ್ತದೆ. ಇದೇ ಮಾನವ ಜೀವನದ ಪರಮೋದ್ದೇಶ – ಜೀವನ್ನುಕ್ತಿಯ ಪರಮಸುಖವನ್ನು ಸವಿಯುವುದು.'

– THE SUPREME PONTIFF OF HINDUISM BHAGAWAN SRI NITHYANANDA PARAMASHIVAM 21ನೇ ಶತಮಾನದಲ್ಲಿ ನಮ್ಮೊಂದಿಗಿರುವ ಜ್ಞಾನಿಗಳು