3. ನಿತ್ಯಾನಂದರ ಬಗ್ಗೆ
# ನಿತ್ಯಾನಂದರ ಬಗ್ಗೆ
ಮಾನವನ ಜೀವನದುದ್ದೇಶದ ಕೊನೆ ಯಿಲ್ಲದ ಅನ್ವೇಷಣೆಯು ಈ ಸಾಲಿ ನಿಂದ ಕೊನೆಗೊಳ್ಳುತ್ತದೆ. ಪರವಾಾ ನಂದವೇ ಹಾದಿ ಹಾಗೂ ಗುರಿ. ಇದು ಪರಮಹಂಸ ನಿತ್ಯಾನಂದರ ಅನುಭವ ಹಾಗೂ ಬೋಧನೆ. ನಿತ್ಯಾನಂದರು ನಮ್ಮೊಡನೆ ಈಗಿರುವ ಒಬ್ಬ ಜ್ಞಾನೋ

ದಯ ಹೊಂದಿದ ಗುರು ಹಾಗೂ ನವಕಾಲೀನ ಅತೀಂದ್ರಿಯವಾದಿ.
ಪರಮಾನಂದವು ಕೊನೆಯಲ್ಲಿ ಸಿಗುವಂತಹುದಲ್ಲ., ಆದರೆ ಅದರ ಹಾದಿಯೇ ಪರಮಾನಂದವೆಂಬ ಅವರ ಅನುಭವ ಸಹಿತ ಜ್ಞಾನವನ್ನು ಮೊದಲು ನೀಡುವುದೇ ಅವರ ಜೀವಿತದ ಧ್ಯೇಯವಾಗಿದೆ. ಎಂದರೆ
ದಿನದ 24 ಗಂಟೆಗಳಲ್ಲಿಯುೂ ಪರವಾನಂದದಲ್ಲಿ ಇರಲು ಸಾಧ್ಯವಾಗುವಂತಹ ಸ್ಥಿತಿ! ನಾವು ನಮ್ಮ ಚಿದಾವಕಾಶದಲ್ಲಿ ಶ್ರಮಿಸುವುದರ ಮೂಲಕ ಈ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದು ಅವರು ತಿಳಿಯಪಡಿಸುತ್ತಾರೆ.
ನಿತ್ಯಾನಂದರು ದಕ್ಷಿಣ ಭಾರತದ ಒಂದು ಪ್ರಮುಖವಾದ ಆಧ್ಯಾತ್ಮಿಕ ಕೇಂದ್ರವಾದ ತಿರುವಣ್ಣಾಮಲೈ, ಎಂಬ ಊರಿನಲ್ಲಿ ಜನಿಸಿದರು. ತೀವ್ರ ಧ್ಯಾನ, ಹಾಗೂ ಯೋಗ, ತಂತ್ರ ಮತ್ತು ಇತರ ಪೌರಾತ್ಯ ಅತೀಂದ್ರಿಯ ಜ್ಞಾನಗಳ ಅಧ್ಯಯನದ ಮೂಲಕ ಆಂತರ್ಯದ ಪರಮಾನಂದ ಸ್ಥಿತಿಯನ್ನು ಹೊಂದಿದರು. ವೈಯಕ್ತಿಕ ಅರಿವನ್ನು ಸೋ್ಪಟಗೊಳಿಸಿ ಆಧ್ಯಾತ್ಮಿಕವಾಗಿ ಬಲಶಾಲಿಗಳಾದ ವ್ಯಕ್ತಿಗಳನ್ನು ಸೃಷ್ಟಿಸಲು ಅವರು ಸ್ವಾನುಭವದಿಂದ ಪರಮಾನಂದದ ತಂತ್ರಶಾಸ್ತ್ರವನ್ನು ನಿರೂಪಿಸಿದ್ದಾರೆ.
ನಮ್ಮ ಸಹಜಸ್ಥಿತಿಯಾದ ಧ್ಯಾನದಲ್ಲಿ ಮುಳುಗಲು ಅವರು ಅಸಂಖ್ಯಾತ ಕ್ರಮವಿಧಾನಗಳನ್ನು ನಿರ್ಮಿಸಿದ್ದಾರೆ. ಅವರು, ೆವಾಸ್ತವ ಪ್ರಪಂಚದಲ್ಲಿ ಯಶಸ್ಸನ್ನು ಗಳಿಸಲು ಹಾಗೂ ಆಂತರ್ಯದಲ್ಲಿ ಆಳವಾದ ಪೂರ್ಣತೆಯನ್ನು ಪಡೆಯಲು, ಧ್ಯಾನವೊಂದೇ ಇಂತಹ ಬೀಗಗಳನ್ನು ತೆಗೆಯಬಲ್ಲ ಕೀಲಿಕೈ' ಎಂದು ಹೇಳುತ್ತಾರೆ.
ನಿತ್ಯಾನಂದ ಸಂಸ್ಥೆ
ನಿತ್ಯಾನಂದ ಸಂಸ್ಥೆಯು ಆಂತರಿಕ ಆನಂದಕ್ಕಾಗಿ ಪ್ರಪಂಚದಾದ್ಯಂತ ನಿಯೋಜಿಸಿರುವ ಆಂದೋಲನ.
ಪರಮಹಂಸ ನಿತ್ಯಾನಂದರ ಅವತಾರವು, ವೈಯಕ್ತಿಕ ಪ್ರಜ್ಞೆಯನ್ನು ಸಮಗ್ರ ಪ್ರಜ್ಞೆಯನ್ನಾಗಿಸಿ, ವರಿಷ್ಠ ಪ್ರಜ್ಞಾ ಪರಿಧಿಯನ್ನು ಪ್ರವೇಶಿಸುವ ನೂತನ ಆವರ್ತವನ್ನು ನಿರ್ಮಿಸುವುದಾಗಿದೆ.
ಇದನ್ನು ಸಾಧಿಸಲು ಸಂಸ್ಥೆಯು ಒಂದು ಕೋಟಿ ಜನರಿಗೆ 'ನಿತ್ವಧ್ಯಾನ್' ಎಂಬ ವಿಶಿಷ್ಟವಾದ ಧ್ಯಾನ ದೀಕ್ಷೆಯನ್ನೂ, ಒಂದು ಲಕ್ಷ ಜನರಿಗೆ ಜೀವನ್ಮುಕ್ತ ದೀಕ್ಷೆಯನ್ನೂ ನೀಡಬೇಕೆಂದು ಉದ್ದೇಶಿಸಿದೆ.
ನಿತ್ಯಾನಂದ ಸಂಸ್ಥೆಯ ಕೇಂದ್ರಗಳು ಹಾಗೂ ಆಶ್ರಮಗಳು ಪ್ರಪಂಚದಾದ್ಯಂತ ಆಂತರಿಕ ಬೆಳವಣಿಗೆಯು ಮಹತ್ತರವಾಗಿಯೂ, ಬಾಹ್ಯದ ಬೆಳವಣಿಗೆಯು ಸಹಜ ಪರಿಣಾಮವಾದಂತೆಯೂ ಮಾಡುವ ಆಧ್ಯಾತ್ಮಿಕ ಪ್ರಯೋಗಾಲಯಗಳಂತೆ ನಡೆಯುತ್ತವೆ. ಈ ವಿದ್ಯಾ ಸಂಸ್ಥೆಗಳು ಧ್ಯಾನದಿಂದ ವಿಜ್ಞಾನದವರೆಗೆ ಅನೇಕ ಚಟುವಟಿಕೆಗಳ ಮೂಲಕ ಸಂಶೋಧನೆಯನ್ನು ಬಯಲು ಮಾಡುವಿಕೆಗೆ ಸ್ಥಳ ಮತ್ತು ಅವಕಾಶಗಳಾಗಿ ರೂಪಿಸಲ್ಪಟ್ಟಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ಮಿಲನವಾಗಿ ಆನಂದವಾದ ಜೀವನವನ್ನು ಸೃಷ್ಟಿಸುವಲ್ಲಿ, ಅವು ಪರಿಮಾಣ ಆಧ್ಯಾತ್ಮಿಕತೆಯನ್ನು ಬೆಳೆಸುತ್ತವೆ.
ಅವು ಶೀಘ್ರವಾಗಿ ಪರಿಣಾಮಕಾರಿಯಾಗಿ ಬದಲಾವಣೆಗಳನ್ನು ಕೊಡುವಂತಹ ಖಚಿತ ಜೀವನ ಪರಿಹಾರಗಳನ್ನು ನೀಡುತ್ತಿವೆ. ಅಂತರರಾಷ್ಟೀಯ ವೇದಿಕ್ ಹಾಗೂ ವಿಶ್ವವಿದ್ಯಾಲಯದ ಮೂಲಕ ವೈರುಧ್ಯ ಶ್ರೇಣಿಯ ಧ್ಯಾನ–ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ ಸಿಸ್ಟಂ ಮೂಲಕ ಉಚಿತ ಶಕ್ತಿ ಉಪಶಮನವನ್ನೂ, ಉಚಿತ ಯುವ ಶಿಕ್ಷಣವನ್ನೂ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನವನ್ನೂ ಸಾಮುದಾಯಿಕ
ಕಾರ್ಯಕ್ರಮಗಳನ್ನೂ, ಉಚಿತ ವೈದ್ಯಕೀಯ ಶಿಬಿರಗಳನ್ನೂ ಉಚಿತ ಭೋಜನಗಳನ್ನೂ, ಭಾರತದಲ್ಲಿ ಲೈಫ಼್ ಬ್ಲಿಸ್ ಟೆಕ್ನಾಲಜಿಯೆಂಬ ಉಚಿತವಾದ ಒಂದು ವರ್ಷದ ವಸತಿಯುತ ತರಬೇತಿ ಕಾರ್ಯಕ್ರಮ– ವನ್ನೂ, ಮಕ್ಕಳಿಗೆ ಒಳಾಂಗಣ ಗುರುಕುಲ ಪದ್ದತಿಯ ಶಿಕ್ಷಣವನ್ನೂ, ಹಾಗೂ ಇಂತಹ ಇನ್ನೂ ಅನೇಕ ಸೇವೆಗಳನ್ನೂ ಜಗತ್ತಿನಾದ್ಯಂತ ನೀಡಲಾಗುತ್ತಿದೆ.
ನಿತ್ಯ ಧೀರ ಸೇನಾದ ಆನಂದ ಸೇವಕರು – ಎಂಬ ಸ್ವಯಂ ಸೇವಕರು – ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡು ಅತ್ಯುತ್ಸಾಹದಿಂದ ಸಂಸ್ಥೆಂತುನ್ನು ಬೆಂಬಲಿಸುತ್ತಿದ್ದಾರೆ.
ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು
ನಿತ್ಯಾನಂದ ಸಂಸ್ಥೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹಂತಗಳಲ್ಲಿ ವೈಶಿಷ್ಟ್ಯಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ನಮೂದಿಸಲಾಗಿದೆ.
ಲೈಫ಼್ ಬ್ಲಿಸ್ ಪ್ರೋಗ್ರಾಂ ಹಂತ 1: ಆನಂದ ಸ್ಪುರಣ ಪ್ರೋಗ್ರಾಂ (LBP ಹಂತ 1 – ASP) ನಿಮ್ಮನ್ನು ಶಕ್ತಿಯುತವಾಗಿಸುತ್ತದೆ.
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿರಮಿಸುವ ಮತ್ತು ಶಕ್ತಿಯುತಗೊಳಿಸುವ ಚಕ್ರ ಅಭ್ಯಾಸದ ಕಾರ್ಯಕ್ರಮ, ದುರಾಸೆ, ಭಯ, ಚಿಂತೆ, ಗಮನದ ಕೊರತೆ, ಶ್ರಮ, ಹೊಟ್ಟೆಕಿಚ್ಚು, ಸ್ವಾಭಿಮಾನ,
ಅತೃಪ್ತಿ, ಮುಂತಾದ ನಿಮ್ಮ ವಿವಿಧ ರೀತಿಯ ಭಾವನೆಗಳಿಗೆ ಅದು ಸ್ಪಷ್ಟವಾದ ಬೌದ್ದಿಕ ಮತ್ತು ಅನುಭಾವಿಕ ಅರ್ಥವನ್ನು ನೀಡುತ್ತದೆ. ಅದನ್ನು ದೈಹಿಕ ಮಟ್ಟದಲ್ಲಿ ಆಧ್ಯಾತ್ಮಿಕ ಪರಿಣಾಮವನ್ನುಂಟು ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅದು ನಿಮ್ಮ ಆನಂದದ ಸತ್ಯತೆಯನ್ನು ಅನುಭವಿಸಲು ಇರುವ ಖಚಿತ ಜೀವನ ಪರಿಹಾರ. ಅದು ಈ ಭೂಗೋಳದಲ್ಲಿ ಲಕ್ಷಾಂತರ ಜನರಿಂದ ಪ್ರಮಾಣೀಕರಿಸಲ್ಪ– ಟ್ಟಿರುವ ಬಹಳ ಪ್ರಯೋಜನಕಾರಿಯಾದ ಕಾರ್ಯಗಾರ.
ಲೈಫ಼್ ಬ್ಲಿಸ್ ಪ್ರೋಗ್ರಾಂ ಹಂತ 2: ನಿತ್ಯಾನಂದ ಸ್ಫುರಣ ಪ್ರೋಗ್ರಾಂ (IBP ಹಂತ–2 NSP) ಮರಣದ ರಹಸ್ಯವನ್ನು ಕಳಚುವುದು.
ಮರಣದ ನಿಗೂಢತೆಯನ್ನು ಕಳಚಿ ಜೀವಿಸುವ ಕಲೆಯ, ಹಿಡಿತವನ್ನು ಸಡಲಿಸುವ, ಒಂದು ಕಾರ್ಯಕ್ರಮ. ನಿಮಗೆ ಮರಣದ ಪ್ರಕ್ರಿಯೆ ಮತ್ತು ಉದ್ದೇಶ ತಿಳಿದಿದ್ದರೆ, ನೀವು ನಿವ್ಮು ಜೀವನವನ್ನು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಜೀವಿಸುತ್ತೀರಿ. ಮರಣಾನಂತರದ ಭಯದಿಂದ ಬೇರೂರಿರುವ ಮತ್ತು ಪ್ರಜ್ಞಾರಹಿತ ಭಾವನೆಗಳಾದ ತಪ್ಪಿತಸ್ಥ ಮನೋಭಾವ, ಸುಖ ದುಃಖಗಳಿಂದ ವಿಮೋಚನೆಯನ್ನು ಹೊಂದುವ ಅವಕಾಶವನ್ನುಂಟು ಮಾಡುತ್ತದೆ. ಅದು ಸ್ವಾಭಾವಿಕ ಬುದ್ಧಿಶಕ್ತಿ ಮತ್ತು ಇದ್ದಕ್ಕಿದ್ದಂತೆಯೇ ಆಗುವ ಉತ್ಸಾಹದಿಂದ ಪ್ರೇರಿಸಲ್ಪಟ್ಟ ಹೊಸ ಜೀವನಕ್ಕೆ ದ್ವಾರವಾಗಿದೆ.
ಲೈಫ಼್ ಬ್ಲಿಸ್ ಪ್ರೋಗ್ರಾಂ ಹಂತ – 3: ಆತ್ಮ ಸ್ಫುರಣ ಪ್ರೋಗ್ರಾಂ (LBP ಹಂತ 3 ATSP) ಇದು ಅಡ್ಡಿ, ಆತಂಕಗಳನ್ನು ಪರಿಹರಿಸುತ್ತದೆ. ಮನಸ್ಸಿನ ಚಟುವಟಿಕೆಯನ್ನು ಸ್ಪಷ್ಟವಾಗಿ ಪರಿಶೀಲಿಸುವ ಮತ್ತು
ಮನಸ್ಸು ನಿಮ್ಮನ್ನು ಆಳುವುದಕ್ಕಿಂತ ಮನಸ್ಸಿನ ಒಡೆತನ ಗಳಿಸುವುದು ಹೇಗೆಂಬುದನ್ನು ಆನುಭಾವಿಕವಾಗಿ ತೋರಿಸುವ ಕಾರ್ಯಕ್ರಮ. ತಕ್ಷಣವೇ ಆನುಭಾವಿಕ ತಿಳುವಳಿಕೆಯನ್ನುಂಟುಮಾಡಲು ಅದು ಅಪೂರ್ವ ಧ್ಯಾನಗಳೊಡನೆ ಮಿಳಿತವಾದ ಸಂಪೂರ್ಣ ಮಹತ್ತರ ಬೌದ್ದಿಕ ಗ್ರಹಿಕೆಯನ್ನು ಒಳಗೊಂಡಿದೆ.

ಭಾರತದ ಬೆಂಗಳೂರಿನ ಬಳಿಯ ಬಿಡದಿಯ ಆಶಮದಲಿ ನಡೆಸಲಾಗುತ್ತಿರುವ LBT ತರಗತಿಗಳು
ಲೈಫ಼್ ಬ್ಲಿಸ್ ಟೆಕ್ನಾಲಜಿ (LBT)
ಲೈಫ಼್ ಬ್ಲಿಸ್ ಟೆಕ್ನಾಲಜಿಯು 18 ರಿಂದ 30 ವರ್ಷದೊಳಗಿನ ತರುಣರಿಗಾಗಿ ಪ್ರಾಯೋಗಿಕ ಜೀವನ ಚಾತುರ್ಯದ ಒಂದು ವರ್ಷದ ಉಚಿತ ವಸತಿಯುತ ಕಾರ್ಯಕ್ರಮ. ಕಾರ್ಯಕ್ರಮದ ಮೂಲವು ಪೌರಾತ್ಯ ಪದ್ಧತಿಯ ವೈದಿಕ ವಿದ್ಯಾಭ್ಯಾಸವಾಗಿದ್ದು, ಈಗಿನ ಕಾಲದ
ಯುವಕರಿಗೆ ಒಳ್ಳೆಯ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸುವಂತ ವಿನ್ಯಾಸಗೊಳಿಸಲಾಗಿದೆ. ಸೃಜನಾತ್ಮಕ ಬುದ್ಧಿ ಮತ್ತು ಸ್ವಾವಲಂಬನೆಗಳ ಶಿಕ್ಷಣವನ್ನು ಕೊಟ್ಟು, ವೃತ್ತಿಪರ ಅಭಿರುಚಿಗಳನ್ನು ನೀಡುವುದರ ಮೂಲಕ ಆರ್ಥಿಕವಾಗಿಯೂ, ಆಧ್ಯಾತ್ಮಿಕವಾಗಿಯೂ, ಸ್ವಾವಲಂಬಿಗಳಾದ ಯುವ ಜನಾಂಗವನ್ನು ನಿವರ್ವಾಣವರಾಡುತ್ತದೆ.
ಇದೆಲ್ಲದಕ್ಕಿಂತಲೂ ಮಿಗಿಲಾಗಿ, ಒಬ್ಬ ಆತ್ಮಜ್ಞಾನಿಯ ರಕ್ಷಣೆಯಲ್ಲಿ ಕಲಿಯುವ ಸದವಕಾಶವನ್ನು ಜೀವನದಲ್ಲೊಮ್ಮೆಯೇ ದೊರಕುವಂತಹ ಸದವಕಾಶವನ್ನು ನೀಡುತ್ತದೆ.
ನಿತ್ಯ ಸ್ಪಿರಿಚುಯಲ್ ಹೀಲಿಂಗ್ – ವಿಶ್ವಶಕ್ತಿಯ ಮೂಲಕ ಉಪಶಮನ ಇದು ಉಪಶವನಕಾರರಿಗೆ ಧ್ಯಾನವಾಗಿಯೂ, ಉಪಶವುನ ಹೊಂದುವವರಿಗೆ ಉಪಶವುನಕಾರಿಯಾಗಿಯೂ ಪರಿಣಾಮ ವಾಗುವಂತಹ ವಿಶ್ವಶಕ್ತಿಯ ಮೂಲಕ ಉಪಶಮನ ಮಾಡುವ ವಿಶೇಷವಾದ ಮತ್ತು ಶಕ್ತಿಶಾಲಿಯಾದ ಧ್ಯಾನ ವಿಧಾನ. ನಿತ್ಯಾನಂದರು ಮೈಗ್ರೇನ್‌ನಿಂದ ಕ್ಯಾನ್ಸರ್‌ವರೆಗೂ ಲಕ್ಷಾಂತರ ಜನರಿಗೆ ಇರುವ ರೋಗಗಳನ್ನು ಗುಣಪಡಿಸುವ ಈ ವೈಜ್ಞಾನಿಕ ್ನಿತ್ಯ ಸ್ಪಿರಿಚುಯಲ್ ಹೀಲಿಂಗ್'ನ ದೀಕ್ಷೆಯನ್ನು ಸಾವಿರಗಟ್ಟಲೆ ಜನರಿಗೆ ದಂದು ಪಾಲಿಸುತ್ತಿದ್ದಾರೆ.
ಧ್ಯಾನ್ – ಜೀವನಾನಂದದ ಧ್ಯಾನ (ಲೈಫ಼್ ಬ್ಲಿಸ್ ಧ್ಯಾನ)

ಈ ಭೂಗ್ರಹದ ಮೇಲೆ ನಲಿದಾಡುತ್ತಿರುವ ಲಕ್ಷಾಂತರ ಜನರ ಪೈಕಿ ನೀವೂ ಒಬ್ಬರಾಗಿರಿ. 'ಅನ್ ಕ್ಲಬ್ ಕಗಿರಿ' ಆನ್ ಲೈನ್‌ನಲ್ಲಿ ನೋಂದಾಯಿಸಿಕೊಂಡು ದೀಕ್ಷೆ ಪಡೆಯಿರಿ.
ನಿತ್ಯಧ್ಯಾನ್ ಎಂಬುದು ನಿತ್ಯಾನಂದರು
ಮಾನವತೆಗೆ ನೀಡಿರುವ ಪ್ರಭಾವಶಾಲಿಯಾದ ದೈನಂದಿನ ಧ್ಯಾನ. ಅದು ಒಂದು ಸೂತ್ರ ಅಥವ ತಂತ್ರ–ಸಮಗ್ರವಾದುದು ಹಾಗೂ ಪರಿಪೂರ್ಣವಾದುದು. ಅದು ಪೂರ್ಣ ವ್ಯಕ್ತಿತ್ವದ ಮೇಲೆ ಪರಿಣಮಿಸಿ ಪರಿವರ್ತನೆಯನ್ನುಂಟು ಮಾಡುತ್ತದೆ ಮತ್ತು ಆತ್ಮಜ್ಞಾನದ ಕೊನೆಯ ಅನುಭವವು ಉದಯಿಸಲು ತಯಾರು ಮಾಡುತ್ತದೆ. ಈ ತಂತ್ರದ ಪ್ರತಿಯೊಂದು ಭಾಗವೂ ಉಳಿದ ಭಾಗಗಳಿಗೆ ನೆರವಾಗಿದ್ದು, ವ್ಯಕ್ತಿ ಪ್ರಜ್ಞೆಯನ್ನು ಏರಿಸುತ್ತದೆ. ನಿಮ್ಮ ಮನಸ್ಸಿಗೆ 'ಆನ್ ಕ್ಲಬ್' ತರಬೇತಿಯನ್ನು ನೀಡುತ್ತದೆ ಮತ್ತು ಆನಂದವಾದ ಜೀವನವನ್ನು ನಡೆಸುವಂತಾಗುತ್ತದೆ. ಅದು ಶಾಶ್ವತಾನಂದಕ್ಕಾಗಿ ಮಾಡುವ ಧ್ಯಾನ.
ನೀವು 'ನಿತ್ಯಧ್ಯಾನ್' ಗೆ ದೀಕ್ಷೆ ಪಡೆಯಲು ಬಯಸುವಿರಾದರೆ, http:// www.dhyanapeetam.orgಗೆ ಭೇಟಿ ಕೊಡಿರಿ. ಮತ್ತು ಆನ್‌ಲೈನ್‌ನಲ್ಲಿ ನೋಂದಾಯಿಸಿರಿ. ನಿಮಗೆ ಅಂಚೆಯ ಮೂಲಕ ಒಂದು ಮಾಲೆ, ಒಂದು ಬ್ರೇಸ್ಲೆಟ್ಟು, ಆಧ್ಯಾತ್ಮಿಕ ಬೆಳವಣಿಗೆಗಾಗಿ ನಿತ್ಯಾನಂದರಿಂದ ಕೊಡಲ್ಪಡುವ ಒಂದು ಆಧ್ಯಾತ್ಮಿಕ ಹೆಸರು (ಐಚ್ಛಿಕ) 'ನಿತ್ಯಧ್ಯಾನ್'ದ CD ಮತ್ತು ನಿಮಗೆ ಬೇಕಾದ ಭಾಷೆಯಲ್ಲಿ ನಿತ್ಯಾನಂದರಿಂದಲೇ ಸಹಿ ಹಾಕಲ್ಪಟ್ಟ ನಿತ್ಯಧ್ಯಾನದ ಒಂದು ಕಿರುಹೊತ್ತಿಗೆ ಬರುತ್ತವೆ. (ನಿಮ್ಮ ಅನಿಸಿಕೆಗಳನ್ನು 'ಕಾಮೆಂಟ್' ಕಾಲಂನಲ್ಲಿ ತಿಳಿಸಿರಿ).