Books / Karma Why Series Kannada merged

2. ಸಾಂಪ್ರದಾಯಿಕ ಪೂಜೆ–ಇಚ್ಛ್ಸಾಪೂರ್ತಿಗೆ ಶಕ್ತಿಸೋತ ಅದರೊಂದಿಗೆ ನಿಮ್ಜ ಸಂಚಿತವನ್ನು ದಹಿಸಿರಿ….

# ಸಾಂಪ್ರದಾಯಿಕ ಪೂಜೆ–ಇಚ್ಛ್ಸಾಪೂರ್ತಿಗೆ ಶಕ್ತಿಸೋತ ಅದರೊಂದಿಗೆ ನಿಮ್ಜ ಸಂಚಿತವನ್ನು ದಹಿಸಿರಿ…

ಪೂಜೆ ಎಂಬುದು ಒಂದು ಸಂಪ್ರದಾಯದ ಆಚರಣೆ. ನಿಮಗೆ ಯಾವಾಗಲೇ ಆಗಲಿ, ಕಷ್ಟ ಬಂದಾಗ, ಅವಶ್ಯಕವಾದ 'ಕ್ಲಿಕ್' (ಸಾಫಲ್ಯ) ತಾನೇ ತಾನಾಗಿ ಬರಲು, ಇಂದಿನವರೆವಿಗೂ ನಿಮ್ಮಲ್ಲಿ ಉಂಟಾದ ಎಲ್ಲ 'ಕ್ಲಿಕ್'ಗಳನ್ನೂ ಪ್ರತಿದಿನವೂ ಸ್ಟರಿಸಿಕೊಳ್ಳುವುದೇ ಪೂಜೆಯಲ್ಲದೆ, ಇನ್ನೇನೂ ಆಲ್ಲ,

ಗುರುಗಳು ಬೋಧಿಸುವಾಗ ಆದು ಬೋಧನೆಯೊಂದೇ ಆಗಿರುವುದಿಲ್ನ ಅದೊಂದು ಗುರುತರವಾದ ಅನುಭವವಾಗಿರುತ್ತದೆ. ನೀವು ಅವರಿಂದ ಪಡೆದ ದೀಕ್ಷೆಯನ್ನು ಪ್ರಯೋಗಿಸದಿದ್ದರೆ, ಹಾಗೂ ಅವರಿಂದ ಪಡೆದ ಆ ಶಾಸ್ತ್ರ-ಶಸ್ತ್ರ-ಶಸ್ತ್ರ-ಶಸ್ತ್ರ-ಶಸ್ತ್ರ ಮತ್ತೆ ಮತ್ತೆ ಉಪಯೋಗಿಸದಿದ್ದರೆ ಅವುಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ ಅವುಗಳನ್ನು ಮತ್ತೆ ಸ್ಮರಿಸಿಕೊಳ್ಳಲೂ ಆಗಲಾರದು. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಇದು.

ಉದಾಹರಣೆಗೆ, ನಿಮ್ಮ ಬಳಿ ಒಂದು ಮಂಚವಿದೆ ಎನ್ಸೋಣ. ನೀವು ಅದನ್ನು ಎರಡು ವರ್ಷ ಉಪಯೋಗಿಸದಿದ್ದರೆ, ಮಂಚವು ಉಪಯೋಗಕ್ಕೆ ಬಾರದೇ ಹೋಗುವುದಿಲ್ಲ ಅಥವ ಅದೃಶ್ಯವಾಗುವುದಿಲ್ಲ. ಆದರೆ, ನಿಮಗೆ ಅನುಗ್ರಹಿಸಿದ

ಜ್ಜಾನ ಹಾಗೂ ದೀಕ್ಷೆಗಳನ್ನು ನೀವು ಉಪಯೋಗಿಸದೇ ಹೋದರೆ ಅವು ನಿಮ್ಮ ಮಲಗುವ ಕೋಣೆಯಲ್ಲಿ ನಿಮ್ಮ ಉಪಯೋಗಕ್ಕಾಗಿ ಕುಳಿತಿರುವುದಿಲ್ಲ. ಇಲ್ಲ! ಅವು ಸುಮ್ಮನೆ ಮಾಯವಾಗುವುವು, ಅಷ್ಟೆ

ಹಾಗಾದರೆ, ನಿಮ್ಮಲ್ಲಾದ ಎಲ್ಲಾ ಕ್ಲಿಕ್ ಗಳನ್ನೂ ನೀವು ಪ್ರತಿದಿನವೂ ಹೇಗೆ ಸ್ಥರಿಸಿಕೊಳ್ಳುವಿರಿ? ಪ್ರತಿದಿನವೂ ಕುಳಿತುಕೊಂಡು, ನಿಮ್ಜಲ್ಲಾದ ಎಲ್ಲಾ ಕ್ಲಿಕ್‌ಗಳನ್ನೂ ಸ್ಟರಿಸಿಕೊಳ್ಳುವುದೇ ಪೂಜೆ ಅಥವ ಸಂಪ್ರದಾಯ ಎನ್ನುವುದು. ಈ ಲಕ್ಷ್ಯವನ್ನಿಟ್ಟುಗೊಂಡೇ ಪೂಜೆಗಳನ್ನು ರೂಪಿಸಿರುವುದು.

ಅಪ್ರಯತ್ತವಾಗಿ, ಪ್ರತಿದಿನವೂ, ನಿಮಗೆ ಬೇಕೋ ಬೇಡವೋ ನೀವು ಸಾಂಪ್ರದಾಯಿಕವಾಗಿ ಕುಳಿತಾಗ, ದೀಕ್ಷೆಯ, ಹಾಗೂ ಗುರುಗಳೊಂದಿಗಾದ ಅನುಭವಗಳನ್ನು ಸ್ಟರಿಸಿಕೊಳ್ಳುವಿರಿ. ಪ್ರತಿದಿನದ ಸಂಪ್ರದಾಯವು ನಿಮ್ಮನ್ನು ಪರಿಶುದ್ದವಾದ ಪ್ರಜ್ಞೆಗೆ ಕೊಂಡೊಯ್ಯುತ್ತದೆ. ಸಂಸ್ಕಾರಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳಲಾರಂಭಿಸುತ್ತವೆ. ನಿಮ್ಮ ಹುಟ್ಟಿನೊಂದಿಗೆ ಬಂದ ಸಂಸ್ಕಾರಗಳು ಯಾವಾಗ ನಿಮ್ಮ ಮೇಲಿನ ಶಕ್ತಿಯನ್ನು ಕಳೆದುಕೊಳ್ಳಲಾರಂಭಿಸುತ್ತವೆಯೋ ಆಗ ಹೊಸ ಸಂಸ್ಕಾರಗಳ ಸೇರ್ಪಡೆ ನಿಲ್ಲುತ್ತದೆ. ಸೇರ್ಪಡೆಯೂ. ನಿಂತು, ನಿಮಲ್ಲಿ ಇರುವ ಕರ್ಮಗಳ ಶಕ್ತಿಯೂ ಇಲ್ಲದೇ ಹೋದಾಗ, ನಿಮ್ಮನು ಉನ್ನತ ಪ್ರಜ್ಞಾವಸ್ಥೆಯ ವಲಯಕ್ಕೆ ಪುನಃ ಪುನಃ ತರುವ ಗುರುವು ನೀವು ದೇಹವನ್ನು ಬಿಡುವಾಗ ಪ್ರತ್ಯಕ್ಷವಾಗಿ, ನಿಮ್ಮ ಸಂಚಿತವನ್ನೂ ದಹಿಸಿಬಿಡುತ್ತಾನೆ.

ನಿಮ್ಮ ಸಂಚಿತಕರ್ಮದ ಬ್ಯಾಂಕಿನೊಂದಿಗೆ ನೀವು ನೇರವಾಗಿ ವ್ಯವಹರಿಸಲಾರಿರಿ ಎಂಬುದನ್ನೂ ತಿಳಿಯಿರಿ. ಸಂಚಿತವು ದಹಿಸಿಹೋಗಲು, ಗುರುಕೃಪೆಯೊಂದೇ ದಾರಿ. ನಿಮ್ಮ ಸಂಚಿತವನ್ನು ದಹಿಸಲು ಗುರುಕೃಪೆಯು ಏನುಬೇಕಾದರೂ ಮಾಡಬಲ್ಲುದು.

ಸಾಂಪ್ರದಾಯಿಕ ಪೂಜೆ – ಇಚ್ಛಾ ಮೂರ್ತಿಗೆ ಶಕ್ತಿಸೋತ 31

ಉದಾಹರಣೆಗೆ, ನಿಮ್ಜ ಮಗು ಒಂದು ಪುಟ್ಟ ಮನೆ ಕಟ್ಟಲು ಹೆಣಗಾಡುತ್ತಿರುವಾಗ ನೀವೇನು ಮಾಡುವಿರಿ? 'ಸರಿ, ಒದ್ದಾಡಬೇಡ, ನಾನು ಕಟ್ಟಿಕೊಡುತ್ತೇನೆ' ಎನ್ನುವಿರಿ. ಹಾಗೆಯೇ, ಒಬ್ಬ ಶಿಷ್ಯನು ತನ್ನ ಪ್ರಾರಬ್ದ ಮತ್ತು ಆಗಾಮ್ಯ ಕರ್ಮಗಳನ್ನು ತೊರೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವಾಗ, ಗುರುಕ್ಟಪೆಯು ತಾನೇ ತಾನಾಗಿ ನಡೆದು ಸಂಚಿತವೂ ಸಹ ತೊರೆದು ಹೋಗುತ್ತದೆ!

ಒಂದು ಬಹುಮುಖ್ಯವಾದ ಅಂಶವನ್ನು ತಿಳಿದುಕೊಳ್ಳಿರಿ, ಅದೇನೆಂದರೆ, ಇಲ್ಲಿ ಗುರುಕೃಪೆಯೆಂಬುದಾಗಿ ಮಾತನಾಡುತ್ತಿರುವುದು ನನ್ನ ಮೇಲೆ ಮಾತ್ರ ಆಧಾರಿತವಾಗಿಲ್ಲ. ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಸಾಧನೆ ಅಥವ ಧ್ಯಾನವನ್ನು ಯಾರೇ ಮಾಡಿದಾಗ್ಯೂ, ನನ್ನ ಹೊರತಾಗಿಯೂ, ಅವರ ಮೇಲೆ ಕೃಪೆಯಾಗುತ್ತದೆ! ಅದು ನನ್ನ ಮೇಲೆ ಆಧಾರಿತವಾಗಿಯೇ ಇಲ್ಲ, ಅದು ತನ್ನಷ್ಟ ತಾನೇ ನಡೆಯುವ ಕೌಶಲ್ಯ.

ಅದು ಕೇವಲ ನಿಮ್ಜ ಗ್ರಹಿಕೆಯ ಮೇಲೆ ಆಧಾರಿತವಾಗಿದೆಯೇ ವಿನಃ ನನ್ನ ಮೇಲಲ್ಲವೆಂಬುದನ್ನು ಸ್ಪಷ್ಟವಾಗಿಸಿಕೊಳ್ಳಿರಿ. ನಾನೊಂದು ಸಾಗರದಂತೆ– ಯಾರು ಬೇಕಾದರೂ ಯಾವಗಾತ್ರದ ಪಾತ್ರೆಯಲ್ಲಿಯಾದರೂ ತುಂಬಿಸಿಕೊಂಡು ಹೋಗಲು ನಾನು ಸದಾ ಲಭ್ಯ. ನೀವು ಒಂದು ತೆಂಗಿನಚಿಪ್ಪನ್ನು ತಂದರೆ, ನನ್ನನ್ನು ಅಷ್ಗರಮಟ್ಟಿಗೆ ತೆಗೆದುಕೊಂಡು ಹೋಗಬಹುದು. ಇನ್ನು ಸ್ವಲ್ಪ ದೊಡ್ಡ ಪಾತ್ರೆಯನ್ನು ತಂದರೆ ಅದರಲ್ಲಿ ಹಿಡಿಸುವಷ್ಟು ತೆಗೆದುಕೊಂಡು ಹೋಗಬಹುದು. ಇನ್ನೂ ದೊಡ್ಡದಾದ ಪಾತ್ರೆಯನ್ನು ತಂದರೆ ಅದೂ ಹಿಡಿಸುವಷ್ಟುತೆಗೆದುಕೊಂಡು ಹೋಗಬಹುದು. ಅದೇ, ನೀವು ಜಾಣರಾದರೆ, ಒಂದು ಕಾಲುವೆಯನ್ನೇ ತೋಡಿಕೊಳ್ಳಬಹುದು.

ಹೀಗೆ, ದೀಕ್ಷೆ ಅಥವ ಪೂಜೆ ಎಂದರೆ, ಎಲ್ಲಾ ದೀಕ್ಷೆಗಳ, ಗುರುಗಳೊಂದಿಗಾದ ಮಹಾನ್ ಅನುಭವಗಳ ಮತ್ತು ಆದೇ ಉನ್ನತವಾದ ಪ್ರಜ್ಞಾಸ್ಥಿತಿಗೆ ಮತ್ತೆ ಮತ್ತೆ ಹೋಗುವ ದೈನಂದಿನ ಸ್ಮರಣೆ. ಆ ಉನ್ನತವಾದ ಸ್ತರದಲ್ಲಿ ಪ್ರತಿದಿನವೂ ಇರಲು ತಯಾರಾದಾಗ, ಮುಂದಿನ 24 ಗಂಟೆಗಳ ಕಾಲ ನಡೆಯಲಿರುವ ಜೀವನದ ನಾಟಕಕ್ಕೆ ತಯಾರಾಗಿದ್ದೀರೆಂದೇ ಅರ್ಥ. ನಿಮಗೆ ಮುಂದಿನ 24 ಗಂಟೆಗಳಿಗೆ ಬೇಕಾಗುವ ಶಕ್ತಿ ಇರುತ್ತದೆ. ಪೂಜೆಯ ಹಿಂದಿರುವ ಕಾರಣವೇ ಇದು.

ಗುರು ಪೂಜೆ

ಗುರುಪೂಜೆಯಲ್ಲಿ ಆಂತರ್ಯದಲ್ಲಿ ಗುರುಗಳಿಗೆ ಗೌರವವನ್ನರ್ಪಿಸುವ ಕಲ್ಪನೆಯನ್ನು ಮಾಡಿಕೊಳ್ಳ ಲಾಗುತ್ತದೆ. ಗುರುಪೂಜೆಯಲ್ಲಿ, ಮಾನಸ ಪೂಜಾ ಮಂತ್ರದಿಂದ ನಿಮ್ಮಲ್ಲಾಗಿರುವ ಎಲ್ಲ ಕ್ಲಿಕ್ ಗಳೂ ನೆನಪಿಗೆ ಬರುವುವು.

ಮಾನಸ ಪೂಜಾಮಂತ್ರದ ಮೊದಲನೆಯ

ಪಂಕ್ತಿಯು 'ಹೃತ್ ಪದ್ಮಾಸನಂ ದದ್ಯಾತ್' ಎಂದರೆ, ನನ್ನ ಹೃದಯವು ನಿನ್ನ ಆಸನವಾಗಲಿ' ಎನ್ನುತ್ತದೆ. ನಮ್ಮ ಹೃದಯವು ಶುದ್ದವಾಗಿರಬೇಕೆಂಬುದನ್ನು ಈ ಪಂಕ್ತಿಯೇ ಸೂಚಿಸುತ್ತದೆ. ಅದು ಒಳಗೇ ಆಗುವ ನೆನಪು - ಒಂದು ಕ್ಲಿಕ್. ಈ ಕ್ಲಿಕ್ ಆದಾಗ, ನಮ್ಮ ಎಲ್ಲ ಆಲೋಚನೆಗಳು, ನುಡಿಗಳು ಮತ್ತು ಕ್ರಿಯೆಗಳು ತಾವಾಗಿಯೇ ಶುದ್ದವಾಗುತ್ತವೆ ಮತ್ತು ಇನ್ನೂ ಹೆಚ್ಚು ಕರ್ಮಗಳನ್ನು ಕಟ್ಟಿ ಕೊಳ್ಳದಂತೆಯೂ ಆಗುತ್ತದೆ. ನಮ್ಮ ನಡೆ, ನುಡಿ ಮತ್ತು ಆಚರಣೆಗಳು ಅತಿಶಯವಾದ ಆರಿವಿನಿಂದ ಕೂಡಿ ಕಟ್ಟಿಕೊಳ್ಳದಂತಾಗುತ್ತದೆ.

ನಂತರ, 'ಸಹಸ್ರಾರ್ ಅಚ್ಯುತಾಮೃತ್ಟೇ ಪಾದ್ಯಂ ಚರಣಯೋರ್ ದದ್ಯಾತ್' ಎಂಬ ಪಂಕ್ತಿ ಇದೆ. ಸಹಸ್ರಾರ ಅಮೃತ ಎಂದರೆ ನೀವು ಕೃತಜ್ಞತ್ತೆಯಿಂದ ತುಂಬಿಹೋದಾಗ ನಿಮ್ಮ ನಾಲಿಗೆ ಮತ್ತು ಗಂಟಲಿನಲ್ಲಿ ಆಗುವ ತೀಕ್ಷ್ಣವಾದ ಸಿಹಿಯ ರುಚಿ. ನಿಮ್ಮಲ್ಲಿ ಕೆಲವರು ಇದನ್ನು ಅನುಭವಿಸಿರಬಹುದು. ಅದರಲ್ಲೂ, ಆನಂದ ದರ್ಶನದ ಸಮಯದಲ್ಲಿ ಅನುಭವಿಸಬಹುದು. ನಿಮ್ಮಲ್ಲೆಷ್ಟು ಜನರಿಗೆ ಹೀಗಾಗಿದೆ? ಆನಂದ ದರ್ಶನ ನಡೆಯುತ್ತಿರುವಾಗ ನಿಮಗೆ ಇದ್ದಕ್ಕಿದ್ದಂತೆ ಗಂಟಲಿನಲ್ಲೆಲ್ಲಾ ಸಿಹಿಯಾಗುತ್ತದೆ. ಇದೇ ಆಳವಾದ ಕೃತಜ್ಣತೆಯಿಂದ ಉಂಟಾಗುವ 'ಸಹಸ್ರಾರಾಮೃತ್ಯೆಃ !'

ನಿಮಗೆ ಸಂತೃಪ್ತಿಯಾದಾಗ ಸಹಸ್ರಾರದಿಂದ–ಎಂದರೆ ನಿಮ್ಮ ನೆತ್ತಿಯ ಮಧ್ಯಭಾಗದಿಂದ–ಅಮೃತ ವರ್ಷವಾಗುತ್ತದೆ. ಹಾಗೂ ನಿಮ್ಮ ಗಂಟಲೆಲ್ಲಾ ಅದರಿಂದ ತುಂಬಿಕೊಳ್ಳುತ್ತದೆ. ಆ ಅಮೃತವನ್ನೇ 'ಪಾದ್ಯಂ' ಅಥವ ದೇವರ ಪಾದಗಳನ್ನು ತೊಳೆಯುವ ನೀರಾಗಿ ಉಪಯೋಗಿಸಬೇಕಾದುದು. ಅದರರ್ಥವೇನೆಂದರೆ, ಪ್ರತಿದಿನವೂ ಪೂಜೆಗೆ ಕುಳಿತಾಗ ಆ ಅಮೃತವನ್ನು ಅನುಭವಿಸಲು, ಅಮೃತವರ್ಷವಾಗಲು ಕಾರಣವಾದ ಸನ್ನಿವೇಶಗಳನ್ನು ಅಥವ ಒಳ್ಳೆಯ ಅನುಭವಗಳನ್ನು ಸ್ಮರಿಸಿಕೊಳ್ಳುವುದು ಅವಶ್ಯಕ! ನಮ್ಮ ಉದಾಹರಣೆಯಲ್ಲಿ, ಅದು ಆನಂದ ದರ್ಶನದ ಅನುಭವ. ಆಗ, ನೀವು ನೀವಾಗಿಯೇ ಆನಂದ ಪರವಶರಾಗುವಿರಿ. ಪೂಜೆಯ ಆ ಕ್ಷಣದಲ್ಲಿ ನಿಮ್ಮ ಗಂಟಲಿನಲ್ಲಿ ಆ ಸಿಹಿಯನ್ನು ಅನುಭವಿಸದಿದ್ದರೆ, ನೀವು ಪೂಜೆಯನ್ನು ಮಾಡಲಾಗುವುದಿಲ್ಲ ಏಕೆಂದರೆ, ನೀವು ಸುಳ್ಳು ಹೇಳಿದಂತಾಗುತ್ತದೆ! ನಿಮಗೆ ನಿಜವಾಗಿಯೂ ಆ ಭಾವನೆಯುಂಟಾದರೆ ಮಾತ್ರ ಪೂಜೆಯಲ್ಲಿ 'ಸಹಸ್ರಾರಚ್ಯುತಾಮೃತ್ಯೇ ಪಾದ್ಯಂ ಚರಣಯೋರ್ ದದ್ಯಾತ್' ಎಂಬ ಪದಗಳನ್ನುಚ್ಛರಿಸಲು ಅಧಿಕಾರವಿರುತ್ತದೆ.

'ಮನಸ್ತು ಅರ್ಘ್ಯಂ ನಿವೇದಯಾತ್' ಎಂದರೆ, ನಿಮ್ಮ ಮನಸ್ಸನ್ನೇ ಭಗವಂತನಿಗೆ ಆಹಾರವಾಗಿ ಅರ್ಪಿಸುತ್ತಿದ್ದೀರಿ ಎಂದರ್ಥ. ನಿತ್ಯಾನಂದ ಸ್ಪುರಣ ಪ್ರೋಗಾಂನ (ಲೈಫ್ ಬ್ಲಿನ್ ಪ್ರೋಗ್ರಾಂ–ಹಂತ–2) ಕೊನೆಯಲ್ಲಿ ನಿಮ್ಮ ಎಲ್ಲಾ ಸಂಸ್ಕಾರಗಳನ್ನೂ ಬೇರೂರಿರುವ ಸ್ಮರಣೆಗಳನ್ನೂ, ಅಥವ ಕರ್ಮವನ್ನು ಅಗ್ನಿಗೆ ಅರ್ಪಿಸುತ್ತೀರಿ. ಇವೆಲ್ಲವೂ ಸೇರಿ ಆಗಿರುವುದೇ ನಿಮ್ಮ ಮನಸ್ಸು ಹಾಗಾಗಿ, ನೀವು ಈ ಪಂಕ್ತಿಯನ್ನುಚ್ಚ ರಿಸಿದಾಗ ನೀವಾಗಿಯೇ ಆ ಕ್ರಿಯೆಯನ್ನು ಸ್ಟರಿಸಿಕೊಂಡು 'ಹಾಂ, N.S.P. ಯಲ್ಲಿ ಹೇಗೆ ಸಮಸ್ತವನ್ನೂ ಅರ್ಪಿಸಿದ್ದೆನೋ ಹಾಗೆಯೇ ಈಗಲೂ ಅಲ್ಲಿಂದೀಚೆಗೆ ಕೂಡಿಹಾಕಿಕೊಂಡಿರುವುದನ್ನು ನಿನ್ನ ಪಾದಗಳಿಗೆ ಸಮರ್ಪಿಸುತ್ತೇನೆ ಎಂದುಕೊಳ್ಳುತ್ತೀರಿ. ಇದು ಇಲ್ಲಿ ಆಗಬೇಕಾದ ಕ್ಲಿಕ್ ಗೆ ಮತ್ತೊಂದು ಉದಾಹರಣೆ.

'ತೇನ ಅಮೃತೇನ ಆಚಮನೀಯಂ' ಎಂದರೆ 'ಅದೇ ಭಾವೋದ್ರೇಕದ ಅಮೃತವನ್ನು ನಿನಗೆ ಕುಡಿಯಲು ಕೊಡುತ್ತೇನೆ' ಎಂದರ್ಥ.

ಆ ಅಮೃತವನ್ನು ಪುನಃ ಅನುಭವಿಸಲು ಈ ಪಂಕ್ತಿಯು, ಆ ಸಂತೋಷ, ಆ ಆನಂದಗಳ 'ಆನಂದದರ್ಶನ'ದ ಅನುಭವಕ್ಕೆ ನಿಮ್ಮನ್ನು ಮರಳಿಸುತ್ತದೆ. ಹಾಗಾಗಿ, ಈ ರೀತಿಯಲ್ಲಿ ಈ ಮಂತ್ರದ ಪ್ರತಿಯೊಂದು ಹಂತವೂ ನಿಮಗಾದಕ್ಲಿ ಕ್ಕುಗಳಿಗೂ ದೀಕ್ಷೆಯ ಅನುಭವಗಳಿಗೂ ನಿಮ್ಮನ್ನು ಮರಳಿಸುತ್ತದೆ. ನಾನು ಗುರುಮಂತ್ರದ ಕೆಲವು ಪದಗಳನ್ನು ಮಾತ್ರ ವಿವರಿಸಿದ್ದೇನೆ. ನೀವು ಅದೆಲ್ಲವನ್ನೂ ಅಮೂಲಾಗ್ರವಾಗಿ ಪರಿಶೀಲಿಸಿದರೆ, ಸಂಪ್ರದಾಯವನ್ನು ಶ್ಲಾಘಿಸುವುದು ಮಾತ್ರವಲ್ಲ, ಸಂಪ್ರದಾಯದ ಸಮಗ್ರ ವಿಜ್ಞಾನವು ಹೇಗೆ ಬಂದಿತೆಂಬುದನ್ನು ಶ್ಲಾಘಿಸಲು ಮೊದಲುಮಾಡುವಿರಿ.

ಅದು ಎಂತಹ ಸುಂದರವಾದ ಕಲ್ಪನೆ! ನೀವಿದನ್ನು ಅರ್ಥ ಮಾಡಿಕೊಂಡರೆ ಸಾಕು. ಬೇಡವಾದ ಎಲ್ಲ ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳು ತಾವಾಗಿಯೇ ನಿಮ್ಮನ್ನು ಬಿಟ್ಟುಹೋಗುತ್ತವೆ ಹಾಗೂ ಅನತಿ ಕಾಲದಲ್ಲಿಯೇ ಗುರುಕೃಪೆಯು ನಿಮ್ಮ ಮೇಲಾಗುವುದು. ಒಮ್ಮೆ ಅದಾಯಿತೆಂದರೆ, ನಿಮಗೆ ಮೋಕ್ಷ ದೊರೆತಂತೆಯೇ.

(ಸಮಗ್ರವಾದ ಗುರುಪೂಜೆಯ ಕ್ರಮ ಮತ್ತು ಅದರ ಉಪಯೋಗಗಳಿಗಾಗಿ ಚಿತ್ರಗಳ ಮೂಲಕ ವಿವರಿಸಲಾಗಿರುವ ಪರಮಹಂಸ ಶ್ರೀ ನಿತ್ಯಾನಂದರ 'ಡು ಗುರುಪೂಜಾ ಯುವರ್ ಸೆಲ್ಫ್' ಎಂಬ ಪುಸ್ತಕವನ್ನು ನೋಡಿರಿ.)

ಧ್ಯಾನ ಮತ್ತು ಪ್ರಜ್ಞೆ — ಕರ್ಮಕ್ಕೆ ಪ್ರತಿರೋಧಕಗಳು

ನಿಮ್ಜ ಮೇಲೆ ನನ್ನ ಕೆಲಸ.

ನಿಮಗೆ ಒಂದೇ ಒಂದು ಸಲವಾದರೂ ಶುದ್ದ ಪ್ರಜ್ಞೆಯ ಇಣುಕು ನೋಟವಾಗಿದ್ದರೂ ಸಾಕು, ಯಾವ ಕರ್ಮವೂ ಏನನ್ನೂ ಮಾಡಲಾರದು. ಕರ್ಮದ ಕಂಪನಕ್ಕಿಂತಲೂ ನಿಮ್ಮ ಕಂಪನವು ಹೆಚ್ಚಾಗುತ್ತದೆ. ನಿಮ್ಮಲ್ಲಿ ಆಲೋಚನೆಗಳಿರು ವವರೆವಿಗೂ ಕರ್ಮಾವು ನಿಮ್ಮ ಮೇಲೆ ಪ್ರಭಾವಬೀರಬಲ್ಲದು. ಪ್ರಜ್ಞಾಪೂರಿತ ಅರಿವಿನ ಸ್ಥಿತಿಯಲ್ಲಿ ನೀವು ಆಲೋಚನೆಗಳನ್ನು ಮೀರಿ

ಹೋಗುವಿರಿ. ಹಾಗಾಗಿ, ಸ್ವಾಭಾವಿಕವಾಗಿಯೇ ಕರ್ಮದ ಮೇಲೆ ಅಧಿಕಾರ ಮಾಡಲಾರಂಭಿಸುವಿರಿ. ಯಾವ ಧ್ಯಾನವನ್ನೇ ಆಗಲಿ, ತೀವ್ರವಾಗಿ ಮಾಡಿದಲ್ಲಿ, ಸತ್ಯದ, ಎಂದರೆ ಶುದ್ಧಪ್ರಜ್ಞೆಯ ಒಂದು ಇಣುಕುನೋಟವು ಲಭಿಸುತ್ತದೆ. ಆ ಕಾರಣದಿಂದಲೇ, ಧ್ಯಾನವೆಂದರೆ ನಿಮ್ಮ ಕ್ಯಾಮರಾದ ಫಿಲ್ಮ್‌ನ್ನು ನೇರವಾಗಿ ಸೂರ್ಯನಿಗೆ ತೆರೆದುಕೊಂಡಂತೆ ಎನ್ನುತ್ತಾರೆ. ಕ್ಯಾಮರಾದ ಮುಚ್ಚಳವು ಒಂದು ಸೆಕೆಂಡು ತೆರೆದುಕೊಂಡರೆ, ಅದರ ಮುಂದಿರುವುದೆಲ್ಲವೂ ಸೆರೆಹಿಡಿಯಲ್ಪಡುತ್ತದೆ. (ರೆಕಾರ್ಡ್ ಆಗುತ್ತದೆ). ಅದೇ, ಮುಚ್ಚಳವನ್ನು ಪೂರ್ತಿಯಾಗಿ ತೆರೆದೇ ಬಿಟ್ಟರೆ, ಏನಾಗುತ್ತದೆ? ಸೆರೆಹಿಡಿದ್ದೆಲ್ಲವೂ ಅಳಿಸಿಹೋಗುತ್ತದೆ.

ನೀವು ಹುಟ್ಟಿದಾಗ, ಕ್ಯಾಮರಾದ ಮುಚ್ಚಳವು ಒಂದು ಕ್ಷಣ ತೆರೆದುಕೊಂಡಿತು ಮತ್ತು ಜೀವವು ನಿಮ್ಮ ದೇಹವನ್ನು ಹೊಕ್ಟಿತು. ಆ ಕ್ಷಣದಲ್ಲಿ ಹೊರಗಡೆಯ ದೃಶ್ಯದಲ್ಲಿ ಇದ್ದುದೆಲ್ಲವೂ ಸೆರೆಯಾಯಿತು. ದೃಶ್ಯವೆಂಬ ಪದಕ್ಕೆ ನಾನು ಹೇಳುವುದು ಆ ಕ್ಷಣದಲ್ಲಿದ್ದ ಗ್ರಹಗತಿಗಳು. ಆ ಕಾರಣದಿಂದಲೇ ಹುಟ್ಟಿದ ಕಾಲ ಬಹಳ ಮುಖ್ಯ. ಆದನ್ನಾದರಿಸಿ ನಿಮ್ಮ ಚೈತನ್ಯವು ಕಾರ್ಯಶೀಲ ವಾಗುವುದು. ಹೇಗಾದರೂ, ಧ್ಯಾನ ಮಾಡುತ್ತಿರುವಾಗ, ನಾನು ಮುಚ್ಚಳವನ್ನು ಸಾಕಷ್ಟು ಬೇಕೆಂದೇ ತೆರೆದಿರುತ್ತೇನೆ! ಆದುದರಿಂದ ಸ್ವಾಭಾವಿಕವಾಗಿಯೇ ಸೆರೆಹಿಡಿದದ್ದೆಲ್ಲವೂ ಅಳಿಸಿಹೋಗುತ್ತದೆ.

Section 2

ಒಟ್ಟಿನಲ್ಲಿ ಹೇಳಬೇಕೆಂದರೆ, ನೀವು ಹುಟ್ಟಿದಾಗ ಮೊದಲನೆಯ ಬಾರಿಗೆ ಮುಚ್ಚಳವು ತೆರೆಯಲ್ಪಟ್ಟಿತ್ತು. ನಿಮಗೆ ದೀಕ್ಷೆ ಲಭಿಸಿದಾಗ ಎರಡನೆಯ ಬಾರಿಗೆ ತೆರೆಯಲ್ಪಟ್ಟಿತು. (ಮುಚ್ಚಳವನ್ನು ಪೂರ್ತಿಯಾಗಿಯೂ ಸಹಜ ವಾಗಿಯೂ ಸೂರ್ಯನ ಕಿರಣಗಳು ನಿಮ್ಮ ಕರ್ಮಗಳನ್ನೆಲ್ಲ ಅಳಿಸಿ ಹಾಕ ಲೆಂದು ಮುಚ್ಚಳವನ್ನು ಪೂರ್ತಿಯಾಗಿಯೂ ಸಹಜವಾಗಿಯೂ ತೆರೆದಿಡ ಲಾಗಿದೆ). ಗುರುಗಳಿಂದ ದೀಕ್ಷೆ ಪಡೆದಾಗ ನಿಮ್ಮನ್ನು 'ದ್ವಿಜ' ಎಂದು ಧ್ಯಾನ ಮತ್ತು ಪ್ರಜ್ಞೆ – ಕರ್ಮ ಕ್ಕೆ ಪ್ರತಿರೋಧಕಗಳು 39

ಕರೆಯುವುದು ಈ ಕಾರಣಕ್ಕಾಗಿಯೇ. ನಿಮ್ಮ ಕ್ಯಾಮರಾದ ಚಾಲಕನನ್ನೂ ಅಷ್ಟು ಕಾಲ ಮುಚ್ಚಳವನ್ನು ತೆರೆದಿದ್ದವನನ್ನೂ ಗುರು ಎಂದು ಕರೆಯುತ್ತಾರೆ– ಆತನೇ ಗುರು.

ಕರ್ಮ ಎಂಬ ವಿಷಯದ ಮುಂದುವರಿಕೆ

ತಿಳಿಯಿರಿ, ಸರಳವಾಗಿ ಹೇಳಬೇಕೆಂದರೆ ಅಜ್ಞಾನ ಜನ್ಯವಾದ ಆಲೋಚನೆಗಳ, ನುಡಿಗಳ ಮತ್ತು ಕ್ರಿಯೆಗಳ ಪ್ರತಿಫಲವಾಗಿ ತಿಳಿದೂ ತಿಳಿದೂ ಅದೇ ದುಃಖ ದುಮ್ಮಾನಗಳನ್ನು ಮತ್ತೆ ಮತ್ತೆ ಅನುಭವಿಸಬೇಕಾದುದಕ್ಕೆ ಕಾರಣವಾಗಿರುವುದೇ ಕರ್ಮ. ಈ ಚಕ್ರವನ್ನು ತಪ್ಪಿಸಿಕೊಳ್ಳಬೇಕಾದರೆ ಅನುಗ್ರಹಿಸಲ್ಪಟ್ಟ ಕ್ಲಿಕ್‌ಗಳಿಗೆ ಈಡು ಮಾಡಿಕೊಂಡು ಉತ್ತಮವಾದ ಪ್ರಜ್ಞೆಯ ಸ್ಗರದಲ್ಲಿ ಜೀವಿಸುವುದೇ ಮಾರ್ಗ. ಈ ಮೂಲ ವಿಜ್ಞಾನವನ್ನು ಅರಿತು ಕೊಳ್ಳದೇ ಹೋದಾಗ, ಸಕಲವನ್ನೂ ತಪ್ಪಾಗಿ ವ್ಯಾಖ್ಯಾನ ಮಾಡುವಿರಿ.

ಯಾರಿಗಾದರೂ ಸಲಹೆಕೊಟ್ಟಾಗಲಾಗಲೀ, ಯಾರನ್ನಾದರೂ ಸ್ರರ್ಷಿಸಿ ದಾಗಲಾಗಲೀ ಅವರ ಕರ್ಮವು ತಮಗೆ ಅಂಟಿಕೊಳ್ಳುವುದೇ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರು ಬೇರೆಯವರ ಕರ್ಮವನ್ನು ಕಟ್ಟಿಕೊಳ್ಳಲು ತಾವು ಬಹಳ ದುರ್ಬಲರು ಎಂದು ಕೊಳ್ಳುತ್ತಾರೆ. ಅದರಿಂದ ತಪ್ಪಿಸಿಕೊಳ್ಳಲು ಹೇಗೆಂದು ತಿಳಿಯಲು ಅಪೇಕ್ಷಿಸುತ್ತಾರೆ. ಬೇರೆಯವರ ಕರ್ಮವನ್ನು ನೀವು ಕಟ್ಟಿಕೊಳ್ಳಲು ಆಗುವುದೇ

ಇಲ್ಲವೆಂಬುದನ್ನು ತಿಳಿಯಿರಿ; ನಿಮಗೆ ನಿಮ್ಮದೇ ಸಾಕಷ್ಟಿದೆಯಲ್ಲ! ಆದುದರಿಂದ, ಇನ್ನೊಬ್ಬರಿಂದ ಕರ್ಮವನ್ನು ತೆಗೆದುಕೊಳ್ಳುವ ವಿಷಯದಲ್ಲಿ ಬಗ್ಗೆ ಚಿಂತಿಸಬೇಡಿರಿ.

ಯಾರನ್ನಾದರೂ ಸ್ಪರ್ಷಿಸುವುದರಿಂದಾಗಲೀ, ಸಲಹೆ ಕೊಡುವುದ— ರಿಂದಾಗಲೀ ದೈಹಿಕ ಸಂಬಂಧದಿಂದಾಗಲೀ ಅಥವ ದೈಹಿಕ ಸನಿಹದಿಂದಾಗಲೀ ಕರ್ಮವನ್ನು ಕಟ್ಟಿಕೊಳ್ಳಲಾಗುವುದೇ ಇಲ್ಲ. ಯಾರದಾದರೂ ಸುತ್ತಮುತ್ತ ಎಡೆಬಿಡದೇ ಇದ್ದು, ಸನಿಹದಲ್ಲಿಯೇ ಇದ್ದರೆ, ಅವರ ಮನೋಧರ್ಮವನ್ನು ಪಡೆಯಬಹುದು; ಆದರೆ ಆತನ ಆಕೆಯ ಕರ್ಮವನ್ನಲ್ಲವೇ ಅಲ್ಲ. ಅಂದ ಹಾಗೆ, ನೀವು ಅವರ ಮನೋಧರ್ಮವನ್ನು ಹೊಂದದೇ ಇರಲು ನಿಮಗೆ ಮನೋ ಧಾರ್ಡ್ಯ ಇರಬೇಕು. ಅದು ಅಪಾಯಕರ. ಆದರೆ ನಿಮಗಾದ ಕ್ಲಿಕ್‌ಗಳಿಂದಾಗಿ ನೀವು ದೃಢವಾಗಿದ್ದರೆ ಇದು ನಿಮ್ಮನ್ನು ಯಾವ ರೀತಿಯೂ ಬಾಧಿಸುವುದಿಲ್ಲ.

ಮತ್ತೊಂದು ವಿಷಯ– ನಾನು ನಿಮ್ಮ ಕರ್ಮದ ತಂಟೆಗೆ ಬರುವುದಿಲ್ಲ. ಸೂರ್ಯೋದಯವಾಗ ಕತ್ತಲೆಯು ಹೇಗೆ ನಿವಾರಣೆಯಾಗು– ತ್ತದೆಯೋ ಹಾಗೆ ಗುರುವಿನ ಸಾನಿಧ್ಯದಲ್ಲಿ ಕರ್ಮವು ದಹಿಸಿಬಿಡುತ್ತದೆ. ಕರ್ಮವು ಕತ್ತಲಿನಂತೆ ನಕಾರಾತ್ಮಕವಾದುದು. ಅದಕ್ಕೆ ಸಕಾರಾತ್ಮಕ ಉಳಿಗಾಲವಿಲ್ಲ; ನಾನು ಹೇಳುವುದೇನೆಂದರೆ, ಇಲ್ಲಿರುವ ವಸ್ತುವನ್ನು ತೆಗೆದುಕೊಂಡು ಎಸೆದುಬಿಡುವಂತೆ ಅದನ್ನು ಹೊರಗೆ ಎಸೆದು ಬಿಡಲಾಗುವುದಿಲ್ಲ.

ಬೆಳಕಿಲ್ಲದಿರುವಿಕೆಯನ್ನು ಕತ್ತಲು ಎನ್ನುವಂತೆಯೇ ನಮ್ಮ ಅಂತರಂಗದಲ್ಲಿ ಬೆಳಕಿಲ್ಲದಿರುವುದೇ ಕರ್ಮ ಅಥವ ಬೇರೆ ರೀತಿಯಲ್ಲಿ ಹೇಳಬೇಕೆಂದರೆ ಅಜ್ಞಾನ. ಅದು ಚೈತನ್ಯವಿಲ್ಲದಿರುವಿಕೆ. ಕ್ಲಿಕ್‌ಗಳ ನೆನಪಿನ ಮೂಲಕ ಅರ್ಥಮಾಡಿಕೊಂಡ ರೀತಿಯಲ್ಲಿ ಜೀವಿಸುವ ಮೂಲಕ ಯಾವ ಕರ್ಮವನ್ನಾದರೂ ದಹಿಸಬಹುದು.

ಕರ್ಮವೆಂಬುದು ಅದರಲ್ಲಿರುವ ನಿಮ್ಮ ಭಯವೇ ಹೊರತು ಬೇರೆಯಲ್ಲ. ಕೊನೆಯ ಪಕ್ಷ ಭಯದ ಅಂಶವಂತೂ ಭದ್ರವಾಗಿದೆ. ಕರ್ಮವು ನಿಮ್ಮ ಭಯದಷ್ಟು ಆಳವಾಗಿಯೂ ಇಲ್ಲ. ಭಯವು ನಿಮ್ಮ ಕಾರಣ ಶರೀರದ ಆಳಕ್ಕೆ ಹೋಗುತ್ತದೆ. ನೀವು ಆಳವಾಗಿ ನಿದ್ರೆಹೋಗುವಾಗ ಶಕ್ತಿ ಪದರಕ್ಕೆ ಹೋಗುವಂತೆ. ನಿಮ್ಮ ತಲೆಯ ಮೇಲೆ ಒಂದು ಕತ್ತಿ ಇದ್ದು, ನೀವು ನಿದ್ರಿಸಿದರೆ, ವಿಪರೀತವಾದ ಭಯದಿಂದ ನೀವು ಕಾರಣ ಶರೀರವನ್ನು ತಲಪುವಿರಿ. ಕರ್ಮ ವೆಂಬುದಕ್ಕೆ ಅಷ್ಟು ಆಳವೂ ಇಲ್ಲ. ಅದು ನೀವೇ ಮಾಡಿಕೊಂಡದ್ದು ಮತ್ತು ಅದನ್ನು ನೀವು ನಿವಾರಿಸಿಕೊಳ್ಳಬಹುದು ಮತ್ತು ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳದೆಯೂ, ಆಲೋಚನೆಗಳಿಂದಲೂ, ನುಡಿ ಗಳಿಂದಲೂ, ಕಾರ್ಯಗಳಿಂದಲೂ, ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳುವು ದಿಲ್ಲವೆಂಬ ಪ್ರಜ್ಞಾಪೂರಿತ ನಿರ್ಧಾರದಿಂದಲೂ ಅದನ್ನು ಇಲ್ಲವಾಗಿಸ ಬಹುದು.

ಕೇವಲ ಕರ್ಮವನ್ನು ತೀರಿಸಿಕೊಳ್ಳುತ್ತಲೂ ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳದೆಯೂ ಇರುವಂತಹ ಜೀವನವನ್ನು ನಡೆಸುವುದು ಬಹಳ ಮುಖ್ಯ. ವೈದಿಕ ಧರ್ಮದ ವಿವಾಹಗಳಲ್ಲಿ ಈ ವಿಚಾರವನ್ನೇ ಉತ್ತೇಜಿಸಿರುವುದು. ವೈದಿಕ ವಿವಾಹಗಳಲ್ಲಿ ಪತಿ ಪತ್ನಿಯರು

ತಮ್ಮ ದಾಂಪತ್ಯ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಮುಂದಾಗಿಸಿ– ಕೊಳ್ಳುವ ಸಂಕಲ್ಪವನ್ನು ಕೈಗೊಂಡು ಸಹಜೀವನವನ್ನು ನಡೆಸುತ್ತಾರೆ. ಇದನ್ನು ವಾನಪ್ರಸ್ತಾಶ್ರಮ ಎನ್ನುತ್ತಾರೆ. ಹಾಗೆಂದರೆ, ಅದು ಕರ್ಮವನ್ನು ತೊರೆಯಲೂ, ಹೊಸದಾದ ಕರ್ಮವನ್ನು ಕಟ್ಟಿ ಕೊಳ್ಳದೆಯೂ ಇರಲು ಪರಸ್ಪರವಾಗಿ ಅವರು ತೆಗೆದುಕೊಳ್ಳುವ ನಿರ್ಧಾರ. ಸಾಮಾನ್ಯವಾಗಿ ವಿವಾಹದಲ್ಲಿ ಗಂಡು ವಿಷಯಾಭಿಲಾಶೆಯಿಂದಲೂ, ಹೆಣ್ಣು ಭಯದಿಂದಲೂ ವರ್ತಿಸುತ್ತಾರೆ. ಗಂಡು, ಹೆಣ್ಣಿನ ಭಯದ ದೃಷ್ಟಿಕೋನವನ್ನೂ, ಹೆಣ್ಣು ಗಂಡಿನ ಆಸೆಯ ದೃಷ್ಟಿಕೋನವನ್ನೂ ದುರುಪಯೋಗಿಸುತ್ತಾರೆ. ಆದರೆ ಈ ಸಂಕಲ್ಪವು ಪರಸ್ಪರರ ಕರ್ಮವನ್ನು ನಿವಾರಿಸಲೂ, ಒಬ್ಬರಿಗೊಬ್ಬರು ದುರುಪಯೋಗ ಮಾಡದಂತೆಯೂ ಹಾಗೂ ಹೆಚ್ಚಿಸದಂತೆಯೂ ಇರುವುದನ್ನು ದೃಢೀಕರಿಸುತ್ತದೆ.

'ಸ್ವಾಮೀಜಿ, ಕರ್ಮವನ್ನು ಮೀರಿ ಹೋಗುವುದು ಹೇಗೆ?' ಎಂದು ಯಾರೋ ನನ್ನನ್ನು ಕೇಳಿದರು.

ಕರ್ಮವನ್ನು ಕಟ್ಟಿಕೊಳ್ಳುವುದನ್ನು ತಡೆಯುವುದು ಹೇಗೆಂದು ಇದುವರೆವಿಗೂ ನಾವು ಚರ್ಚಿಸಿದ್ದೇವೆ. ಕರ್ಮದ ನಿವಾರಣೆಗೆ ಪರಿಹಾರಾರ್ಥವಾಗಿ ನಾನೊಂದು ಸುಲಭೋಪಾಯವನ್ನು ಹೇಳಿ– ಕೊಡುತ್ತೇವೆ. ಈ ಕ್ಷಣದಿಂದಲೇ ನಿಮ್ಮ ಜೀವನದಲ್ಲಿ ಆದ ಆಗು ಹೋಗುಗಳನ್ನು ಸ್ಮರಿಸಿಕೊಳ್ಳಲು ಪ್ರಯತ್ನಿಸಿರಿ. ಈ ಕ್ಷಣದಿಂದ ನಿಮ್ಮ ಬಾಲ್ಯದ ದಿನಗಳಿಗೆ ಹಿಂದಿರುಗಿ ಹೋಗಿರಿ. ಎಷ್ಟು ಸಾಧ್ಯವೋ ಅಷ್ಟನ್ನು ಸ್ಮರಿಸಿರಿ. ಏನು ಸಾಧ್ಯವಿಲ್ಲವೋ ಅದಕ್ಕೆ ಚಿಂತಿಸಬೇಡಿರಿ. ನಿಮಗೆ ಏನನ್ನು ಸ್ಮರಿಸಲು ಸಾಧ್ಯವಿಲ್ಲವೋ ಅದು ಕೇವಲ ಉಳಿಕೆ ಎಂಬುದನ್ನು ತಿಳಿಯಲೇಬೇಕು. ಅದು ನಿಮ್ಮನ್ನು ಆಳವಾಗಿ ಹೊಕ್ಕಿಲ್ಲ. ಆದ

ಕಾರಣವೇ ಅದು ನಿಮ್ಮ ಸ್ಟೃತಿಯಲ್ಲಿಲ್ಲ. ಈ ತಂತ್ರವನ್ನು ಒಂದು ವರ್ಷಕಾಲ ಅಭ್ಯಾಸ ಮಾಡಿರಿ. ಪುನರ್ಜೀವಿಸುವುದು ಆಶ್ಚರ್ಯಕರ ವಾದ ಬಿಡುಗಡೆ.

ನಮ್ಮ ಎರಡನೆಯ ಹಂತದ ನಿತ್ಯಾನಂದ ಸ್ಪುರಣ ಕಾರ್ಯಕ್ರಮ (NSP) ಎಂಬುದು ಕೇವಲ ಈ ಮಾದರಿಯಾಗಿ ಕರ್ಮವನ್ನು ಕಳೆದುಕೊಳ್ಳುವುದಕ್ಕೆ ಕೇಂದ್ರೀಕೃತವಾಗಿದೆ.

ಅದು ಒಬ್ಬ ಆತ್ಮಜ್ಞಾನಿಯಾದ ಗುರುಗಳ ಸಮ್ಮುಖದಲ್ಲಿ ಆಗುವ ಆಧ್ಯಾತ್ಮಿಕಾಭಿಷೇಕದಂತೆ.

ಒಂದು ವಿಷಯವನ್ನು ತಿಳಿದುಕೊಳ್ಳಿರಿ. ಗುರುಗಳಾದವರಿಗೆ ಕರ್ಮ ವೆಂಬುದಿಲ್ಲ. ಅವರಿಗೆ ಆಗಬೇಕಾದುದ್ದೇನೂ ಇಲ್ಲ, ಪಡೆಯಬೇಕಾ– ದದ್ದೂ ಏನಿಲ್ಲ. ಹಾಗಾದರೆ, ಅವರು ದೇಹದಿಂದೇಕೆ ಇರಬೇಕು? ಅದು ಕೇವಲ ಮಾನವ ಪ್ರೇಮಕ್ಕಾಗಿ, ಅವರು ಮಾನವ ದೇಹವನ್ನು ಪಡೆಯುವುದು ಕೇವಲ ಇನ್ನೂ ಹೆಚ್ಚು ಜನರಿಗೆ ಜನನ ಮರಣಗಳ ಚಕ್ರದಿಂದಲೂ, ಕರ್ಮದ ಹಿಡಿತದಿಂದಲೂ ಮುಕ್ಕಿಯನ್ನು ದಯ ಪಾಲಿಸಲು ಮಾತ್ರ.

ಅನುಬಂಧ