Books / ನೋವಿನಿಂದ ಆನಂದಕ್ಕೆ

1. ನೋವಿನಿಂದ ಆನಂದಕ್ಕೆ

ನೋವಿನ ಸ್ವರೂಪ

ಈ ಪ್ರಪಂಚದಲ್ಲಿ ನೋವು ಅಥವಾ ದುಃಖ ಎಲ್ಲಕ್ಕಿಂತ ಹೆದರಿಸುವಂತಹ ವಿಷಯ. ಈ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಒಂದೇ ವಿಷಯದ ಭಯ. ನೋವಿನ ಭಯ ! ನೀವು ಸ್ವಲ್ಪ ಆಳವಾಗಿ ನೋಡಿದರೆ ಮಾನವನು ಸಾವಿಗಿಂತ ಹೆಚ್ಚಾಗಿ ಅಂತಿಮ ಕಾಲದಲ್ಲಿ ಆಗುವ ನೋವು ಮತ್ತು ಪ್ರಾಣ ಸಂಕಟಕ್ಕೆ ಹೆದರುತ್ತಾನೆ. ಬಹಳ ಜನ ಬಡತನಕ್ಕೆ ಹೆದರುತ್ತಾರೆ. ಕೆಲವರು ಸಂಬಂಧಗಳಿಗೆ ಹೆದರುತ್ತಾರೆ - ಇನ್ನೂ ಕೆಲವರು ರೋಗಕ್ಕೆ - ಆದರೆ ಮನುಷ್ಯನ ಎಲ್ಲಾ ಭಯಗಳು ಕಡೆಗೆ ನೋವಿನ ಭಯಕ್ಕೆ ಪರಿಣಮಿಸುತ್ತವೆ. ಇದೇ ಕಾರಣದಿಂದ ಜನರು ನೋವು ಉಂಟು ಮಾಡದೆ ಇರುವ ದೊಡ್ಡ ಕಾಯಿಲೆಯನ್ನಾದರೂ ಅನುಭವಿಸಲು ತಯಾರಾಗಿರುವರು. ಆದರೆ ಒಂದು ಸಣ್ಣ ತಲೆ ನೋವನ್ನು ಅನುಭವಿಸಲು ಸಿದ್ದರಾಗಿರುವುದಿಲ್ಲ. ನೋವು ಎಂಬುದು ಏನು ? ಈ ವಿಷಯವನ್ನು ನಾವು ಆಳವಾಗಿ ಪರಿಶೀಲಿಸೋಣ, ನೋವು ಶಾರೀರಿಕವಾಗಿರಬಹುದು, ಮಾನಸಿಕವಾಗಿರಬಹುದು ಅಥವಾ ಭಾವನಾತ್ಮಕವಾಗಿರಬಹುದು. ಶಾರೀರಿಕ ನೋವಿನ ಬಗ್ಗೆ ನಾವು ಚಿಂತಿಸಬೇಕಾಗೇ ಇಲ್ಲ. ಅದು ಒಂದು ವಿಧವಾಗಿ ಶರೀರದ ಮೂಲಭೂತ ಅವಶ್ಯಕತೆ. ಸ್ವಲ್ಪ ಯೋಚನೆ ಮಾಡಿ ನೋಡಿ - ನಮ್ಮ ದೇಹಕ್ಕೆ ನೋವು ಎಂದಿಗೂ ಉಂಟಾಗದಿದ್ದರೆ ನಾವು ನಮ್ಮ ಕೂದಲನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಳ್ಳುತ್ತೀವೋ ಅದೇ ತರಹ ನಾವು ನಮ್ಮ ಮುಖ ಕೈಕಾಲುಗಳನ್ನೂ ಬೇರೆ ಬೇರೆ ವಿಧವಾಗಿ ಸ್ಟೈಲ್ ಮಾಡಿಕೊಳ್ಳುತ್ತಿದ್ದೆವು. ಈಗಿನ ಕಾಲದ ಯುವಕರು ಫ್ಯಾಷನ್*ಗಾಗಿ ಏನು ಮಾಡುತ್ತಾರೋ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ! ಇದು ಒಂದು ತಮಾಷೆಯ ಮಾತು - ಆದರೆ ನಿಜ ಏನೆಂದರೆ, ನೋವು ಶಾರೀರಿಕ ವಿವೇಕದ ಒಂದು ಪ್ರತೀಕ. ಈ ಶಾರೀರಿಕ ನೋವೇ ನಮ್ಮನ್ನು ಸಂಪೂರ್ಣ ಮಾನವರನ್ನಾಗ ಉಂಟುಮಾಡುತ್ತದೆ. ನಾವು ನಂಬಿಕೊಂಡಿರುವುದರ ಹಾಗೆ ನಮ್ಮಲ್ಲಿ ಹೆಚ್ಚಿನವರು ತಮ್ಮ ಸಂಪೂರ್ಣ ದೇಹದಲ್ಲಿ ವಾಸ ಮಾಡುತ್ತಾ ಇಲ್ಲ. ನಾವು ಕೇವಲ ಶರೀರದ ಮೇಲಿನ ಭಾಗಗಳಲ್ಲಿ ವಾಸ ಮಾಡುತ್ತಿದ್ದೇವೆ ಮತ್ತು ಕೆಳಗಿನ ಭಾಗಗಳನ್ನು ಉಪೇಕ್ಷಿಸುತ್ತಿದ್ದೇವೆ. ನಾನು ಹೇಳುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಂದು ಕೆಲಸ ಮಾಡಿ : ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು, ನಿಮ್ಮನ್ನು ನೀವೇ ಕಲ್ಪನೆ ಮಾಡಿಕೊಳ್ಳಿ. ನಿಮ್ಮ ಹೆಸರಿಟ್ಟು ಕರೆಯಿರಿ. ಶರೀರದ ಯಾವ ಭಾಗ ನಿಮ್ಮ ಮನಸ್ಸಿಗೆ ಜ್ಞಾಪಕ ಬರುವುದು ? ಖಂಡಿತ ನಿಮ್ಮ ಮುಖ, ಕೈಗಳು ಮತ್ತು ಎಲ್ಲಾ ಮೇಲಿನ ಭಾಗಗಳು ನಿಮ್ಮ ಮನಸ್ಸಿಗೆ ಬಂದಿರುವುದು - ನಿಮ್ಮ ಶರೀರದ

ದುಃಖ ಶರೀರ

ಕೆಳಗಿನ ಭಾಗಗಳು ನಿಮಗೆ ಖಂಡಿತ ಜ್ಞಾಪಕ ಬಂದಿರುವುದಿಲ್ಲ. ಈ ಪ್ರಯೋಗವು, ನಾವು ಪ್ರತಿ ಒಂದು ಅಂಗದಲ್ಲಿ ಪ್ರತಿ ಒಂದು ಜೀವಕಣದಲ್ಲಿ ಸಂಪೂರ್ಣವಾಗಿ ಜೀವಂತರಾಗಿಲ್ಲ ಎಂದು ತೋರಿಸುತ್ತದೆ - ನಮ್ಮ ಮನಸ್ಸಿನಲ್ಲಿ ಕೂಡ ನಾವು ಈ ವ್ಯತ್ಯಾಸವನ್ನು ಮಾಡುತ್ತಾ ಇದ್ದೇವೆ. ಮೇಲಿನ ಭಾಗಗಳು ಒಡೆಯರಾಗಿರುತ್ತವೆ ಮತ್ತು ಕೆಳಗಿನ ಭಾಗಗಳು ಸೇವಕರಾಗಿರುತ್ತವೆ. ಈ ವ್ಯತ್ಯಾಸವನ್ನು ನೀವು ಗೊತ್ತಿಲ್ಲದೆ ಮಾಡಿದರೂ ನಿಮ್ಮ ಚೈತನ್ಯವು (ಎನರ್ಜಿಯು), ಕೇವಲ ನೀವು ಏಕಾಗಿರುವ ಇಟಿಧ ಶರೀರದ ಭಾಗಗಳಿಗೆ ಮಾತ್ರ ತಲುಪುವುದು. ನಿಮ್ಮ ಕೆನ್ನೆಯನ್ನು ಸ್ವಲ್ಪ ಸ್ಪರ್ಶಿಸಿ ನೋಡಿ - ಬಹಳ ಜೀವಂತವಾಗಿ ಇದೆ, ಸೂಕ್ಷ್ಮವಾಗಿ ಇದೆ ಅಲ್ಲವೆ ? ಈಗ ನಿಮ್ಮ ಪಾದವನ್ನು ಮುಟ್ಟಿ ನೋಡಿ - ನಿಮ್ಮ ಪಾದವು ನಿಮ್ಮ ಕೆನ್ನೆಯಷ್ಟು ಸೂಕ್ಷ್ಮವಾಗಿ ಇಲ್ಲ ಅಂತ ಗೊತ್ತಾಗಿರಬೇಕು. ಅದು ಏಕೆ? ನಿಮಗೆ ನಂಬುವುದಕ್ಕೆ ಸ್ವಲ್ಪ ಕಷ್ಟವಾಗಬಹುದು - ಆದರೆ ಅದು ಏಕೆಂದರೆ ನೀವು ಆ ಭಾಗಕ್ಕೆ ಸಾಕಷ್ಟು ಗಮನ ಕೊಡುವುದಿಲ್ಲ. ಮನಸ್ಸು ನೋವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದೇ ? ಸಾಮಾನ್ಯವಾಗಿ ಮಾಸಿಕ ಹಾಗೂ ಭಾವನಾತ್ಮಕ স্তರದಲ್ಲಿ ಉಂಟಾಗುವ ನೋವು ನಮ್ಮ ಯಾವುದೇ ಒಂದು ತೀರ್ಮಾನ ಅಥವಾ ವಿಮರ್ಶೆಯ ಪರಿಣಾಮ, ವರ್ತಮಾನಕ್ಕೆ ವಿರೋಧವೇ ಸದಾ ನೋವಿನ ಮೂಲ, ನೀವು ವರ್ತಮಾನವನ್ನು ಸ್ವೀಕರಿಸಿದ ಕೂಡಲೆ ನಿಮ್ಮ ನೋವು ಮಾಯವಾಗುವುದು. ಮುಖ್ಯವಾಗಿ, ನೀವು ಈ ಸ್ತರಗಳಲ್ಲಿ ನೋವು ಅನುಭವಿಸಿದಾಗಲೇ ಅದರ ಒಂದು ಅಂಶವು ನಿಮ್ಮ ಶರೀರದಲ್ಲಿ ಉಳಿದುಕೊಳ್ಳುತ್ತದೆ. ಹೀಗೆ ಸಂಗ್ರಹಿಸಿದ ನೋವು ಸ್ವಲ್ಪ ಸಮಯದಲ್ಲಿಯೇ ನಿಮ್ಮ ಸುತ್ತಲೂ ಒಂದು ನಕಾರಾತ್ಮಕ ಚೈತನ್ಯ ಕ್ಷೇತ್ರವನ್ನು (negative energy field) ನಿರ್ಮಿಸುತ್ತದೆ - ಇದನ್ನು ನಾವು ದುಃಖ ಶರೀರ (Pain body) ಅಂತ ಕರೆಯುತ್ತೇವೆ. ಈ ದುಃಖಿತ ಶರೀರವು ಮೇಲಿಂದ ಮೇಲೆ ದುಃಖವನ್ನು ಆಕರ್ಷಿಸುತ್ತದೆ, ಈ ದುಃಖ ಶರೀರವೇ ನಮ್ಮ ಅನೇಕ ನೋವುಗಳಿಗೆ ಮತ್ತು ನೋವಿನ ಕ್ರಮ ವಿಧಾನಕ್ಕೆ ಹೊಣೆಯಾಗಿರುತ್ತದೆ. ಭಾವನಾತ್ಮಕ ಅಸಮತೋಲನತೆಯು ಶರೀರದಲ್ಲಿ ಆಗಾಧವಾದ ತಳ್ಣವನ್ನು ಉಂಟು ಮಾಡುವುದು ಎಂದು ವೈದ್ಯಕೀಯ ಪರೀಶೋಧನೆಯು ತೋರ್ಪಡಿಸುತ್ತದೆ. ಉದಾಹರಣೆಗೆ ಲೈಂಗಿಕ ನಿಯಂತ್ರಣದಿಂದ ಬೆನ್ನು ನೋವು ಉಂಟಾಗಬಹುದು, ಮನಸ್ಸಿನಲ್ಲಿ ಅಧಿಕ ಜವಾಬ್ದಾರಿಯ ತಿಳಿಯುವಿಕೆ ಇದ್ದರೆ ಅದು ಭುಜಗಳ ನೋವಿಗೆ ಕಾರಣವಾಗಬಹುದು. ಒಂದು ಅತಿ ಜನಭರಿತ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ನೀವು ಎಲ್ಲಾ ಬಗೆಯ ಜನಗಳ ಜೊತೆ ತುಂಬಿರುತ್ತೀರಿ. ಆದರೆ ನಿಮ್ಮ ಅಂತರಂಗವು ಅವರನ್ನು ಸ್ವೀಕರಿಸುವುದಿಲ್ಲ - ನಿಮ್ಮ ಮನಸ್ಸು, ನಿಮ್ಮ ವಿವೇಕವು ನಿಮ್ಮನ್ನು ಬಿಡುವುದಿಲ್ಲ. ಈ ಕಾರಣದಿಂದ ನಿಮ್ಮ ಅಂತರಂಗವು ಇನ್ನೂ ಆಳವಾಗಿ ನಿಮ್ಮೊಳಗೆ ಮುದುರಿ ಹೋಗುವುದು. ಒಂದು ಕಲ್ಕತ್ತಾ ನಗರದಲ್ಲಿ ಎರಡು ಸಣ್ಣ ಆಶ್ರಮಗಳಿವೆ. ಈ ಎರಡು ಆಶ್ರಮಗಳ ಅಧ್ಯಕ್ಷರ ನಡುವೆ ಮನಸ್ತಾಪ ಇತ್ತು. ಒಂದು ದಿನ ಒಬ್ಬ ಹಿರಿಯ ಅಧಿಕಾರಿ ಮೊದಲನೆಯ ಆಶ್ರಮಕ್ಕೆ ಭೇಟಿ ಕೊಟ್ಟರು ಮತ್ತು ಇನ್ನೊಂದು ಆಶ್ರಮಕ್ಕೆ ಅವರ ಜೊತೆ ಯಲ್ಲಿ ಹೋಗುವುದಕ್ಕೆ ಅಧ್ಯಕ್ಷರನ್ನು ಆಮಂತ್ರಿಸಿದರು. ಅಧ್ಯಕ್ಷರ ಮನಸ್ಸಿನಲ್ಲಿ ಧರ್ಮಸಂಕಟ ಉಂಟಾಯಿತು. ಆಮಂತ್ರಣವನ್ನು ತಿರಸ್ಕರಿಸುವುದೂ ಕಷ್ಟ ಆದರೆ ಅವರಿಗೆ ಹೋಗುವುದಕ್ಕೂ ಮನಸ್ಸಿರಲಿಲ್ಲ. ಭಕ್ತನೆ ಅವರ ದೇಹದಲ್ಲಿ ಅವರಿಗೆ ಜೋರು ಜ್ವರದ ಅನುಭವ ಆಯಿತು. ಈ ಕಾರಣದಿಂದ ಅವರು ಇನ್ನೊಂದು ಆಶ್ರಮಕ್ಕೆ ಹೋಗುವುದನ್ನು ತಪ್ಪಿಸಿಕೊಂಡರು. ನಾನು ಈ ಘಟನೆಯನ್ನು ಕಣ್ಣಾರೆ ನೋಡಿದ್ದೇನೆ. ಅಧಿಕಾರಿಯು ಅಲ್ಲಿಂದ ಹೊರಟ ತಕ್ಷಣವೇ ಅವರ ಜ್ವರ ಇಳಿದು ದೇಹವು ಸಾಮಾನ್ಯ ತಾಪಕ್ಕೆ ಬಂತು. ನಾವೆಲ್ಲರು ಸೋಮವಾರ ಬೆಳಿಗ್ಗೆಯ ನಿರುತ್ಸಾಹವನ್ನು ಅನುಭವಿಸಲ್ಪೆ? (Monday Morning Blues) ಮಕ್ಕಳು ಕೂಡ ಅವರನ್ನು ಇಷ್ಟವಿಲ್ಲದ ಕೆಲಸ ಮಾಡುವುದಕ್ಕೆ ಬಲವಂತ ಮಾಡಿದರೆ, ಜ್ವರದ ಲಕ್ಷಣಗಳನ್ನು ತೋರಿಸುತ್ತಾರೆ. (ಉದಾಹರಣೆಗೆ ಸ್ಕೂಲಿಗೆ ಹೋಗಬೇಕಾದಾಗ !) ಈ ರೀತಿಯ ರೋಗವು ನಮ್ಮಲ್ಲಿ ನಮ್ಮದೇ ಇಲ್ಲದಿದ್ದರೆ ಕಾಣಿಸಿಕೊಳ್ಳುವುದು. ನಿಮ್ಮ ದೇಹ ಮತ್ತು ನಿಮ್ಮ ಮನಸ್ಸು ಎರಡು ಎದುರಾಳಿವಾದ ದಿಕ್ಕಿನಲ್ಲಿ ನಿಮ್ಮನ್ನು ಎಳೆಯುವುದರಿಂದ ಹೀಗೆ ಆಗುವುದು. ನಿಮ್ಮಲ್ಲಿ ನೀವು ಆರಾಮವಾಗಿಲ್ಲದಿರುವ (dis-ease) ಸ್ಥಿತಿಯನ್ನೇ ರೋಗ (disease) ಎಂದು ಕರೆಯಲಾಗುವುದು. ಒಂದು ದಿನ ಸುಂದರವಾದ ಒಬ್ಬ ಯುವಕನನ್ನು ನಮ್ಮ ಹೀಲಿಂಗ್ ಕೇಂದ್ರಕ್ಕೆ ಅವರ ತಂದೆಯಿಯರು ಕರೆದುಕೊಂಡು ಬಂದರು. ಅವನ ಸಮಸ್ಯೆ - ಅನಿರೀಕ್ಷಿತ ದೃಷ್ಟಿಹೀನತೆ, ಹುಡುಗನು ಬಹಳ ಆರೋಗ್ಯವಂತನಾಗಿದ್ದರೂ ಇದಕ್ಕಿದ್ದಹಾಗೆ ಒಂದು ವಾರದ ಹಿಂದೆ ಅವನು ಅಂಧನಾಗಿಬಿಟ್ಟ ಎಲ್ಲಾ ವೈದ್ಯಕೀಯ ಪರೀಕ್ಷೆಗಳೂ ಅವನು ಕಣ್ಣುಗಳಲ್ಲಿ ಉತ್ತಮ ದೃಷ್ಟಿ ತೋರಿಸಿದ್ದವು. ಆದರೆ ಅವನಿಗೆ ಏನು ಕಾಣಿಸುತ್ತಿಲ್ಲ ಎಂದು ವಿವರಿಸಿ ಅವನ ತಂದೆ ತಾಯಿ ಅಳುತ್ತಾ ಹೇಳಿದರು. ಯುವಕನ ಒಳಗಿನ ಶಕ್ತಿಯನ್ನು ಶೋಧಿಸಿ ನಾವು ಅವನೊಡನೆ ಏಕಾಂತದಲ್ಲಿ ಮಾತನಾಡುವುದಕ್ಕೆ ಸ್ವಲ್ಪ ಹೊತ್ತು ಕೇಳಿದೆ. ಏಕಾಂತದಲ್ಲಿ ಮಾತನಾಡುವುದಕ್ಕೆ ಬಿಟ್ಟಾಗ ಹುಡುಗನು ತನ್ನ ತೊಂದರೆಗಳನ್ನೆಲ್ಲ ನನ್ನ ಮುಂದೆ ಹೇಳಿಕೊಂಡ. ಅವನು ಒಂದು ಹುಡುಗಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ. ಆದರೆ ಅವನ ತಂದೆಯಿಯರು ಅವಳನ್ನು ನೋಡುವುದನ್ನು ಬಲವಂತದಿಂದ ನಿಲ್ಲಿಸಿದರು ಎಂದು ಹುಡುಗನು ಹೇಳಿದ. ನಾನು ತಕ್ಷಣವೇ ಸಮಸ್ಯೆಯ ಮೂಲ ಕಾರಣವನ್ನು ಕಂಡು ಹಿಡಿದೆ. ಹುಡುಗಿಯ ಒಂದು

ಧ್ಯಾನ ಮತ್ತು ಚಿಕಿತ್ಸಾ ಅನುಭವಗಳು

ಚಿತ್ರಪಟವನ್ನು ಒದಗಿಸಿ ಅದರ ಮೇಲೆ ಮೂರು ದಿನಗಳ ನಿರಂತರ ಧ್ಯಾನ ಮಾಡುವುದಕ್ಕೆ ಸಲಹೆ ಕೊಟ್ಟೆ. ಅಸಾಧಾರಣವಾಗಿರುವ ಈ ಪರಿಹಾರವನ್ನು ಕೇಳಿ, ಅದೂ ಒಂದು ಆಧ್ಯಾತ್ಮಿಕ ಬೋಧಕರ ಬಾಯಿಂದ, ಅವನ ತಂದೆ ತಾಯಿ ಬೆರಗಾದರು, ಆದರೆ ಆ ಧ್ಯಾನವಿಧಾನವು ಸಫಲವಾಯಿತು - ಹುಡುಗನು ಮೂರು ದಿನಗಳಲ್ಲಿಯೇ ಅವನ ಕಣ್ಣಿನ ದೃಷ್ಟಿಯನ್ನು ತಿರುಗಿ ಸಂಪೂರ್ಣವಾಗಿ ಪಡೆದುಕೊಂಡನು. ಹೀಗೆ ಏಕೆ ಆಯಿತು? ಹುಡುಗನು ಯಾವುದನ್ನು ಎಲಕ್ಕಿಂತ ಹೆಚ್ಚು ನೋಡಲು ಇಚ್ಛಿಸಿದನೋ ಅದನ್ನು ನೋಡದೆ ಇರುವುದಕ್ಕೆ ಅವನನ್ನು ಬಲವಂತ ಮಾಡಿದಾಗ ಅವನ ವಿವೇಕವು ಏನೂ ನೋಡುವುದೇ ಬೇಡ ಎಂದು ನಿರ್ಧರಿಸಿತು. ಅವನ ಮಾನಸಿಕ ಸ್ಥಿತಿಯೇ ಅವನ ದೃಷ್ಟಿ ಹೀನತೆಗೆ ಕಾರಣವಾಗಿತ್ತು. ನಮ್ಮ ಜ್ಞಾನೇಂದ್ರಿಯಗಳ ಮೇಲೆ ಪ್ರಚಂಡವಾದ ಮನಸ್ಸಿನ ಶಕ್ತಿಯು ಏಷ್ಪರಮಟ್ಟಿಗೆ ಇದೆ ! ನಮ್ಮ ಮನಸ್ಸೇ ಎಲಕ್ಕಿಂತ ಹೆಚ್ಚಿನದು. ಭಾಗವತ ಪುರಾಣದಲ್ಲಿ ರಾಧೆ ಹುಟ್ಟಿದ ಕೆಲವು ಕ್ಷಣದಲ್ಲಿಯೇ ಕೃಷ್ಣನ ಜನ್ಮವಾಯಿತು ಎಂದು ತಿಳಿಸಲಾಗಿದೆ. ಪುಟ್ಟ ರಾಧೆಯು ಬಹಳ ಕ್ಷೇಮದಲ್ಲಿದ್ದಳು. ಆದರೆ ಅವಳ ಒಂದು ವಿಷಯ ಬಹಳ ಅಸಾಧಾರಣವಾಗಿತ್ತು - ಅವಳು ತನ್ನ ಕಣ್ಣುಗಳನ್ನು ತೆಗೆಯುತ್ತಾ ಇರಲಿಲ್ಲ. ಸ್ವಲ್ಪ ದಿನಗಳ ನಂತರ ರಾಧೆಯನ್ನು ಕರೆದುಕೊಂಡು ಅವಳ ತಾಯಿಯು ಪುಟ್ಟ ಕೃಷ್ಣನನ್ನು ನೋಡಲು ಅವನ ಮನೆಗೆ ಹೋದಳು ಕೃಷ್ಣ ಸಾನ್ನಿಧ್ಯಕ್ಕೆ ನಮ್ಮ ಶರೀರದೊಂದಿಗೆ ಬಂದ ತಕ್ಷಣವೇ ರಾಧೆಯು ಅವಳ ಕಣ್ಣುಗಳನ್ನು ತೆರೆದು ಕೃಷ್ಣ ದರ್ಶನವನ್ನು ಪಡೆದಳು. ಬಹಳ ವರ್ಷಗಳು ಕಳೆದ ಮೇಲೆ ಅವಳ ಗೆಳತಿಯು ರಾಧೆಯನ್ನು ಇದರ ವಿಷಯ ಕೇಳಿದಾಗ ರಾಧೆಯ ವ್ಯಾಖ್ಯಾನಿಸಿದಳು. ಇನ್ನೇನಿತು ? ಕೃಷ್ಣನಿಗಾಗಿಯೇ ನಾನು ಈ ಜನ್ಮವನ್ನು ತೆಗದುಕೊಂಡಿರುವುದು. ಈ ಕಾರಣದಿಂದಲೇ ನಾನು ಕೃಷ್ಣನ ಸಾನ್ನಿಧ್ಯಕ್ಕೆ ಬರುವವರೆಗೆ ನನ್ನ ಕಣ್ಣನ್ನು ತೆರೆಯಲಿಲ್ಲ. ಇದು ಕೇವಲ ಒಂದು ಕಥೆಯಾಗಿರಬಹುದು. ಆದರೆ ನಮ್ಮ ದೇಹದ ಮೇಲಿರುವ ಮನಸ್ಸಿನ ಪ್ರಚಂಡವಾದ ಶಕ್ತಿಯನ್ನು ತೋರ್ಪಡಿಸುತ್ತದೆ. ಇಷ್ಟೇ ಅಲ್ಲ, ದೇಹವು ಮನಸಿಗೆ ಬರೆದ ಪ್ರಾರ್ಥನಾ ಪತ್ರವೇ ನೋವು ಎಂದು ಹೇಳಬಹುದು. ನನಗೆ ಸ್ವಲ್ಪ ಗಮನ ಕೊಡು ಎಂದು ದೇಹ ಪ್ರಾರ್ಥಿಸುತ್ತದೆ. ಇದು ಏಕೆ ಆದರೆ ನಿಮ್ಮ ಗಮನವೇ ನಿಮ್ಮ ಶಕ್ತಿ, ನಿಮ್ಮ ಚೈತನ್ಯ. ನೀವು ನಿಮ್ಮ ಗಮನವನ್ನು ಎಲ್ಲೆಲ್ಲಿ ಗುರಿಯಿಡುತ್ತೀರೋ ನಿಮ್ಮ ಚೈತನ್ಯವೂ ಅಲ್ಲಲ್ಲೇ ಹೋಗಿ ತಲುಪುವುದು ಮತ್ತು ನೀವು ಆದೇ ದಾರಿಯಲ್ಲಿ ನಿಮ್ಮ ಬೆಳವಣಿಗೆ ಕಾಣುವಿರಿ. ನೀವು ನಿಮ್ಮ ಮೇಲೆಯೇ ನೋವನ್ನು ಆಹ್ವಾನಿಸುತ್ತಿರಿವಿ ನೋವನ್ನು ಅವರೇ ಗೌರವಿಸಿ, ಆಮಂತ್ರಿಸಿದ ಅತಿಥಿ ಎಂದು ಹೇಳಿದರೆ, ಬಹಳ ಜನರು ನಂಬುವುದಿಲ್ಲ. ಆದರೆ ಇದು ನಿಜ ! ಒಂದು ಸಣ್ಣ ಕಥೆ ನಿತ್ತಿ ಮೊದಲಿಯಾರರು ಒಂದು ಹೋಟೆಲ್‌ಗೆ ಹೋಗಿ ಅಧಿಕ ಪ್ರಮಾಣದಲ್ಲಿ ಭೋಜನವನ್ನು ಆರ್ಡರ್ ಮಾಡಿದರು. ಅನೇಕ ತಟ್ಟೆಗಳಲ್ಲಿ ಬಿಸಿ ಬಿಸಿ ಇಡ್ಲಿ, ದೋಸೆ ಮತ್ತು ಜಿಲೇಬಿಗಳು ಅವರ ಟೇಬಲ್‌ಗೆ ತಲುಪಿತು. ಅವರು ತಿಂಡಿಗಳನ್ನು ಚಪ್ಪರಿಸಿಕೊಂಡು ತಿಂದರು. ಹೊಟ್ಟೆ ತುಂಬ ತಿಂದ ನಂತರ ಅವರು ವೇಟರನ್ನು ಸಾಕು ಅಂತ ಸಂಕೇತ ಮಾಡಿದರು. ಆವಾಗ ವೇಟರ್ ನಿತ್ತಿಯವರಿಗೆ ಒಂದು ಬಿಳಿ ಚೀಟಿಯನ್ನು ನೀಡಿದ.

ಸಂಬಂಧ, ಮನಸ್ಸು ಮತ್ತು ನೋವು

ನೋವಿನಿಂದ ಆನಂದಕ್ಕೆ ಇದು ಏನು? ಎಂದು ನಿತ್ತಿ ಏನೂ ತಿಳಿಯದವರಂತೆ ಬಿಲ್ ನೋಡುತ್ತಾ ಕೇಳಿದರು. ಇದನ್ನು ಏಕೆ ತಂದಿದ್ದೀರಾ? ನಾನು ಇದನ್ನು ಆರ್ಜರ್ ಮಾಡರಲಿಲ್ಲವಲ್ಲ! ಇದೇ ರೀತಿಯಲ್ಲಿ ನಾವು ನಮ್ಮ ಹಿಡಿತವಿಲ್ಲದ ಅಭ್ಯಾಸಗಳಿಂದ ಮತ್ತು ಆಯಾಸಕರ ಜೀವನ ನಡತೆಯಿಂದ ನೋವು ಮತ್ತು ರೋಗವನ್ನು ಆಮಂತ್ರಿಸುತ್ತೇವೆ - ಆನಂತರ ಅದನ್ನು ಮರೆತು ರೋಗವು ನಮ್ಮ ಬಾಗಿಲಿಗೆ ಬಂದಾಗ ನಾವು ಗೊಣಗುತ್ತೇವೆ. ಈ ಮಾತನ್ನು ಎಂದಿಗೂ ಯಾರೂ ಒಪ್ಪಿಕೊಳ್ಳುವುದಿಲ್ಲ. ಆದರೆ ನಿಜವೇಂದರೆ ಕೆಲವೊಮ್ಮೆ ನಾವು ನಮಗೆ ಬಂದ ರೋಗದಿಂದ ಸುಖಿಸುತ್ತೇವೆ. ಹೇಗೆ ಶರೀರದ ಒಂದು ಭಾಗ ನಿಮ್ಮ ಗಮನವನ್ನು ಪಡೆಯುವುದಕ್ಕೆ ಕಾಯಿಲೆ ಬಿಳುವುದೆ ಅದೇ ರೀತಿಯಲ್ಲಿ ನೀವೂ ಬೇರೆಯವರ ಗಮನ ಸೆಳೆಯಲು ಕಾಯಿಲೆ ಬೇಳುವಿರಿ. ಈ ತೋರುವಿಕೆಯಲ್ಲಿ ಆಶ್ವಯಪಡಬೇಕಾಗಿರತಕ್ಕದ್ದು ಏನೂ ಇಲ್ಲ. ಏಕೆಂದರೆ ಇಂದಿನ ಶ್ರಮದಾಯಕ ಜೀವನಗತಿಯಲ್ಲಿ ಅವರವರು ಅವರವರ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ - ಒಬ್ಬರು ಕಾಯಿಲೆ ಬೀಳುವ ತನಕ ಬೇರೆಯವರಿಗೆ ಅವರ ಕಡೆ ಗಮನ ಕೊಡಲು ಪುರಸತ್ತು ಇರುವುದಿಲ್ಲ. ಬೇರೆಯವರಿಂದ ಗಮನಿಸಲ್ಪಡುವುದು ಮಾನಸನ ಮೂಲಭೂತ ಅವಶ್ಯಕತೆ ! ಮಾನವನು ಊಟವಿಲ್ಲದೆ 90 ದಿನ ಬದುಕಬಲ್ಲನು. ಆದರೆ ಬೇರೆಯವರಿಂದ ಗಮನಿಸಲ್ಪಡದೆ 14 ದಿನಗಳಲ್ಲಿಯೇ ಅವನಿಗೆ ಹುಚ್ಚು ಹಿಡಿಯಬಲ್ಲದು ಎಂದು ಮನೋವೈಜ್ಞಾನಿಕ ಪರಿಶೋಧನೆಯು ತಿಳಿಸುತ್ತದೆ. ಇದು ಏಕೆಂದರೆ ಈ ಗಮನವೇ ಒಂದು ಎನರ್ಜಿ, ಒಂದು ಪ್ರಾಣದಾನ. ನಮಗೆ ಗೊತ್ತಿಲ್ಲದೆಯೇ ನಮ್ಮೊಳಗೆ ಬೇರೆಯವರ ಗಮನವನ್ನು ಪಡೆಯುವುದಕ್ಕೆ ಆತ್ಯಂತ ಕೊರಗು ಇದೆ. ಈ ಗಮನವನ್ನು ಪಡೆಯುವುದಕ್ಕೆ ನಮ್ಮಲ್ಲಿನಾವು ಒಂದು ಕಡಿಮೆ ಎನರ್ಜಿಯ ರಾಶಿಯನ್ನು (low energy pool) ನಿರ್ಮಿಸುತ್ತೇವೆ ಮತ್ತು ನೆಗಡಿಯಿಂದ ಹಿಡಿದು ಕ್ಯಾನ್ಸರ್ ವರೆಗೆ ಎಲ್ಲಾ ರೋಗಗಳನ್ನು ಸಂತೋಷವಾಗಿ ಅನುಭವಿಸುತ್ತೇವೆ. ನೀವು ಯಾರದಾರೂ ಇಬ್ಬರ ಸಂಬಂಧವನ್ನು ಸಮೀಪದಿಂದ ವೀಕ್ಷಿಸಿದರೆ, ಭಿಕ್ಷೆಪಾತ್ರೆ ಹಿಡಿದು ಕೈ ಚಾಚಿ ಒಬ್ಬರನೊಬ್ಬರು ಗವನದ ಭಿಕ್ಷೆಯನ್ನು ಬೇಡುವುದನ್ನು ಕಾಣಇರಿ. ಇಬ್ಬರು ಭಿಕ್ಷುಕರ ನಡುವೆ ಒಂದು ಸಕಾರಾತ್ಮಕ ಮತ್ತು ತ್ರಿಪ್ತಿಕರವಾದ ಬಾಂಧವ್ಯ ಎಂದಾದರೂ ಸಾಧ್ಯವೆ? ರೋಗಗಳಿಂದ ಮುಕ್ತಿ ಪಡೆಯುವುದಕ್ಕೆ ಗಮನದೆ ಭಿಕ್ಷೆ ಬೇಡುವುದನ್ನು ಬಿಟ್ಟು ಬಿಡಿ. ನಮ್ಮ ಸಂಪೂರ್ಣ ಜಾಗ್ರತೆ ಇಲ್ಲದೆ ನಡೆಯುವ ಈ ಸೂಕ್ಷ್ಮವಾದ ಮಾನಸಿಕ ಭಿಕ್ಷಾಟನೆಯು ಕಡೆಗೆ ಮಾಮೂಲಿ ಶಾರೀರಿಕ ಭಿಕ್ಷಾಟನೆಗಿಂತ ಅತ್ಯಂತ ಅಪಾಯಕಾರಿ. ಜೀವನವು ಅನೇಕ ಬಗೆಯ ವಿದ್ಯೆಗಳನ್ನು ಕಲಿಸುತ್ತದೆ. ಅವುಗಳನ್ನು ತಿಳಸದುಕೊಳ್ಳುವುದು ನಮ್ಮ ಜವಾಬ್ದಾರಿ - ಆದರೆ ನಾವು ಸದಾ ನಿದ್ರಾಸಂಚಾರದ ಸ್ಥಿತಿಯಲ್ಲಿ ಜೀವಿಸುತ್ತಿರುವುದರಿಂದ ನಾವು ಎಂತಹ ತಾಪತ್ರಯಗಳನ್ನು ಆಮಂತ್ರಿಸುತ್ತಿದ್ದೇವೆ ಎಂಬುದು ನಮಗೆಗೊತ್ತಿರುವುದೇ ಇಲ್ಲ. ಈ ಮಾತನ್ನು ಉದಾಹರಿಸುವ ಒಂದು ಚಿಕ್ಕ ಕಥೆ: ಒಂದು ಚಿಕ್ಕ ಕಥೆ ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಇಂಜಿನಿಯರ್ ಪ್ರತಿ ದಿನವು ಊಟಕ್ಕೆ ಒಂದೇ ತಿಂಡಿಯನ್ನು ತೆಗೆದುಕೊಂಡು ಬರುತ್ತಿದ್ದನು ಮತ್ತು ಪ್ರತಿದಿನ ಅದು ತನಗೆ ಸೇರದ ತಿಂಡಿ ಎಂದು ಗೊಣಗುತ್ತಾ ಇದ್ದನು. ಅವನ ಕರುಣಾಳು ಸ್ನೇಹಿತರು ತಮ್ಮ ಊಟವನ್ನು ಅವನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವನು ಪಾಡು ನೋಡಲಾರದೆ ಸ್ನೇಹಿತರು ಬಹಳ ಕರುಣೆಯಿಂದ ಸಲಹೆ ಕೊಟ್ಟರು. ನಿನ್ನ ಹೆಂಡತಿಯನ್ನು ಬೇರೆ ಯಾವುದಾದರೂ ನಿನಗೆ ಇಷ್ಟವಿದ್ದ ತಿಂಡಿಯನ್ನು ಮಾಡಿ ಕೊಡುವುದಕ್ಕೆ ಹೇಳಬಹುದಲ್ಲ? ನಿನಗೆ ಈ ತಿಂಡಿ ಇಷ್ಟವಿಲ್ಲ ಎಂದು ಅವಳಿಗೆ ಗೊತ್ತಿಲ್ಲವೆ? 'ಎಂತಹ ಹೆಂಡತಿ ?' ಎಂದು ಇಂಜಿನಿಯರು ಆಶ್ಚರ್ಯದಿಂದ ಕೇಳಿದ, 'ನಾನು ಒಬ್ಬ ಬ್ರಹ್ಮಚಾರಿ. ನನ್ನ ಅಡಿಗೆಯನ್ನು ನಾನೇ ಮಾಡಿಕೊಳ್ಳುತ್ತೇನೆ!' ನೋವಿನಿಂದ ಆನಂದಕ್ಕೆ ಈ ಕಥೆಯು ಬಹಳ ತಮಾಷೆಯಾಗಿರಬಹುದು. ಆದರೆ ನಿಜವೇನೆಂದರೆ ನಾವೂ ಕೂಡ ನಮ್ಮ ಜೀವನವನ್ನು ಇದೇ ರೀತಿಯಲ್ಲಿ ನಡೆಸಿಕೊಳ್ಳುತ್ತೇವೆ. ಎಚ್ಚರವಿಲ್ಲದೆ ನಾವು ಮೊದಲು ನೋವನ್ನು ದುಃಖವನ್ನ ಆಮಂತ್ರಿಸುತ್ತೇವೆ ಮತ್ತು ನೋವು ಉಂಟಾದಾಗ ಗೋಳಾಡುತ್ತೇವೆ ಮತ್ತು ಆ ನೋವನ್ನು ನಾಶ ಮಾಡುವ ಮಾತ್ರೆಗಳನ್ನು ಆಶ್ರಯಿಸುತ್ತೇವೆ. ಇದಲ್ಲದೆ ನಿಜವಾಗಿ ಅವಮಾನ ಪಡುವಂತಹ ಮಾತು ಏನಂದರೆ ನಾವು ನಮ್ಮ ರೋಗದ ಮೂಲ ಕಾರಣ ನಾವೇ ಎಂದು ಗುರತಿಸದೆ, ಮೇಲಿಂದ ಮೇಲೆ ಅದೇ ಪೀಡೆಯನ್ನು ಅನುಭವಿಸಲು ಸಿದ್ಧರಾಗುತ್ತೇವೆ. ನಮ್ಮ ದುಃಖಕ್ಕೆ ಕಾರಣ ನಾವೇ ಎಂದು ಗ್ರಹಿಸದೆ, ಸದಾ ಬೇರೆಯವರನ್ನು ಹೊಣೆ ಮಾಡುತ್ತೇವೆ. ನೋವಿನ ಪರಿಹಾರವೇನು ? ನೋವನ್ನು ನಿಮ್ಮ ಗಮನದ ಅನುಪಸ್ಥಿತಿ ಎಂದು ಗ್ರಹಿಸಿದರೆ, ಖಂಡಿತ ನಿಮ್ಮ ಏಕಚಿತ್ತ ಗಮನವೇ ಅದರ ಪರಿಹಾರವನ್ನೂ ನೀಡುವುದು. ನಿಮ್ಮ ಇರುವಿಕೆಯನ್ನು ನಿಮ್ಮ ರೋಗವಿದ್ದ ಭಾಗಕ್ಕೆ ತಲುಪಿಸಿ, ನಿಮಗೆ ನೀಡುವ ಹೇಲಿಂಗ್ (ಗುಣಪಡಿಸುವಿಕೆ) ಅನ್ನು ನೀಡುವ ಬದಲು ಧ್ಯಾನ ಪದ್ಧತಿಯ (meditation technique) ಇರುವುದು, ನೀವು ಮುಂದಿನ ಸಾರಿ ನೋವನ್ನು ಅನುಭವಿಸಿದಾಗ (ಉದಾಹರಣೆಗೆ ಕಾಲು ನೋವು) ಈ 'ಮೆಡಿಟೇಷನ್' ಅನ್ನು ಪ್ರಯತ್ನಿಸಬಹುದು. ನೋವನ್ನು ನಾಶ ಮಾಡುವ ಆದರೆ ಬೇರೆ ತರಹದ ಅತ್ಯಂತ ಕೆಟ್ಟ ಹಾನಿಯನ್ನು ನೀಡುವ (side effects) ಮಾತ್ರೆಗಳನ್ನು ಬಳಸುವುದಕ್ಕಿಂತ ಈ ಗುಣಪಡಿಸುವ ಮೆಡಿಟೇಷನ್ ಅನ್ನು ಮಾಡುವುದು ಖಂಡಿತ ಇನ್ನೂ ಉತ್ತಮ. ಧ್ಯಾನದ ವಿಧಾನ : ಒಂದು ಕತ್ತಲು ಕೋಣೆಯಲ್ಲಿ ಮಲಗಿರಿ. ನೀವು ಪೂರ್ಣ ಎಚ್ಚರಿಕೆಯಿಂದ ನಿಮ್ಮ ಸಂಪೂರ್ಣ ದೇಹವನ್ನು ಮರೆಯಲು ಪ್ರಯತ್ನಿಸಿ. ನೋವಿರುವ ಭಾಗದ ಮೇಲೆ ಮಾತ್ರ

ನೋವನ್ನು ಮೀರಿ ಆನಂದಕ್ಕೆ

ಏಕಾಗ್ರತೆಯಿಂದ ಗಮನಿಸಿ. ನೀವು ನೋವನ್ನು ಅನುಭವಿಸಲು ಆರಂಭಿಸಿದಾಗ, ಉದ್ದೇಶಪೂರ್ವಕವಾಗಿ ನೋವು ಎನ್ನುವ ಪದವನ್ನು ನಿಮ್ಮ ಮನಸ್ಸಿನಿಂದ ತೆಗೆದು ಬಿಡಿ. ನಿಮ್ಮ ಮಾನಸಿಕ ಹರಟೆಯು ನೀವು ನೋವನ್ನು ಅನುಭವಿಸುತ್ತಿದ್ದೀರಾ ಎಂದು ನಿರಂತರ ತಿಳಿಸುತ್ತಾ ಇರುತ್ತದೆ. ಆ ಹರಟೆಯ ಸ್ಪೀಚ್ ಅನ್ನು ಆಫ್ ಮಾಡಿ ಬಿಡಿ. ಮನಸ್ಸನ್ನು ತೆರದಿಟ್ಟುಕೊಂಡು ಬಹಳ ಆಗಾಧವಾಗಿ ನೀವು ಮನಸ್ಸಿನೊಳಗೆ ವಿಳೀಕ್ಷಿಸಿ. ಆಗ ನಿಮ್ಮ ನೋವು, ನಿಮ್ಮ ಮನಸ್ಸು ಮಾಡಿದ अतिशಯ ಎಂದು ನಿಮಗೆ ತಿಳಿಯುವುದು. ನಿಮ್ಮ ಸಂಪೂರ್ಣ ಎಚ್ಚರಿಕೆಯನ್ನು ನಿಮ್ಮ ನೋವಿನ ಮಧ್ಯಬಿಂದುವಿನ ಮೇಲೆ ಗುರಿ ಇಡಿ, ಆಗ ಆ ನೋವು ಹಾಗೆ ಮುದುರಿ ಹೋಗುತ್ತಾ ಒಂದು ಚಿಕ್ಕ ಬಿಂದುವಿನಂತೆ ಆಗುವುದು. ಈ ಬಿಂದುವಿನ ಮೇಲೆ ನೀವು ಏಕಾಗ್ರ ಗುರಿಯನ್ನು ಇಟ್ಟುಕೊಳ್ಳಿ, ಆಗ ಭಕ್ತರಿಗೆ ಒಂದು ಕ್ಷಣದಲ್ಲಿ ನಿಮ್ಮ ನೋವು ಮಾಯವಾಗುವುದನ್ನು ನೀವು ಕಂಡುಹಿಡಿಯುವಿರಿ ಮತ್ತು ಅದರ ಜಾಗದಲ್ಲಿ ಸುಖವನ್ನು ಅನುಭವಿಸುವಿರಿ. ಇದು ಏಕೆಂದರೆ ನೋವು ಮತ್ತು ಸುಖದ ಮೂಲ ಒಂದೇ, ಇವೆರಡು ಬೇರೆ ಹೆಸರಿನ ಒಂದೇ ರೀತಿಯ ಭಾವನೆಗಳು ಉದಾಹರಣೆಗೆ ನೀವು ನಿಮ್ಮ ಸ್ನೇಹಿತರಿಂದ ಅಥವಾ ಅಂಗಮರ್ದನದಿಂದ ನಿಮ್ಮ ಮೈಯನ್ನು ನೀವಿಸಿಕೊಂಡಿದ್ದರೆ ನಿಮಗೆ ಆರಾಮದ ಅನುಭವ ಆಗಿರಬಹುದು. ಆದರೆ ಇದೇ ಅಂಗಮರ್ದನವನ್ನು ಅಪರಿಚತರಿಂದ ಮಾಡಿಸಿಕೊಂಡಿದ್ದರೆ ನಿಮಗೆ ಅದು ಬಹಳ ಚಿತ್ರಹಿಂಸೆ ಎಂದು ತಿಳಿದುಕೊಳ್ಳುವಿರಿ. ನಿಮ್ಮ ಅನುಭವದ ಸತ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ನೋವಿಗೆ ತನ್ನದೆ ಒಂದು ಆಸಿತ್ವ ಇಲ್ಲ, ಒಂದು ಜೀವ ಇಲ್ಲ ಎಂದು ತಿಳಿಯುವಿರಿ. ನೋವಿಗೆ ಕೇವಲ ಒಂದು ನಕಾರಾತ್ಮಕ (ನೆಗೆಟಿವ್) ಆಸಿತ್ವ ಇದೆ. ಅಂದರೆ ಕತ್ತಲೆಯ ಸಮಾನ ಅದು ಕೇವಲ ಒಂದು ಅನುಪಸ್ಥಿತಿ - ಎಚ್ಚರಿಕೆಯ ಅನುಪಸ್ಥಿತಿ, ಬೆಳಕನ್ನು ನೀಡಿದಾಗ ಹೇಗೆ ಕತ್ತಲೆ ತಾನಾಗಿ ಮಾಯವಾಗುವುದೋ, ಅದೇ ರೀತಿಯಲ್ಲಿ ನಿಮ್ಮ ಎಚ್ಚರಿಕೆಯ ಶಕ್ತಿಯನ್ನು ನೋವಿನ ಮೇಲೆ ಗುರಿ ಇಟ್ಟಾಗ, ಅದು ತಾನಾಗಿ ತಾನೇ ಕರಗಿ ಹೋಗುವುದು. ಈ ಮೆಡಿಟೇಶನ್‌ನಿಂದ ಎಂತಹ ನೋವಾದರೂ ಸಹ ಅದನ್ನು ದಾಟಿ ಮುಂದೆ ಹೋಗಿ ನಿವಾರಿಸಿಕೊಳ್ಳಬಹುದು. ನಿಮ್ಮ ನೋವನ್ನು ಧ್ಯಾನದ ಮಾರ್ಗಕ್ಕೆ ತಿರುಗಿಸಿ, ಅದನ್ನು ಒಂದು ಉಪಕರಣವಾಗಿ ಬಳಸಿ, ನಿಮ್ಮ ಅಂತರಂಗವನ್ನು ಸಂಪರ್ಕಿಸುವ ಅನುಭವವನ್ನು ಪಡೆಯಲು