All Books

Kannada
ನೋವಿನಿಂದ ಆನಂದಕ್ಕೆ
SPH Nithyananda Paramashivam
KAILASA's Nithyananda Hindu University
1 Chapter5 SectionsISBN 979-8-88572-472-2
ಈ ಪ್ರಪಂಚದಲ್ಲಿ ನೋವು ಅಥವಾ ದುಃಖ ಎಲ್ಲಕ್ಕಿಂತ ಹೆದರಿಸುವಂತಹ ವಿಷಯ. ಈ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಒಂದೇ ವಿಷಯದ ಭಯ. ನೋವಿನ ಭಯ ! ನೀವು ಸ್ವಲ್ಪ ಆಳವಾಗಿ ನೋಡಿದರೆ ಮಾನವನು ಸಾವಿಗಿಂತ ಹೆಚ್ಚಾಗಿ ಅಂತಿಮ ಕಾಲದಲ್ಲಿ ಆಗುವ ನೋವು ಮತ್ತು ಪ್ರಾಣ ಸಂಕಟಕ್ಕೆ ಹೆದರುತ್ತಾನೆ. ಬಹಳ ಜನ ಬಡತನಕ್ಕೆ ಹೆದರುತ್ತಾರೆ. ಕೆಲವರು ಸಂಬಂಧಗಳಿಗೆ ಹೆದರುತ್ತಾರೆ - ಇನ್ನೂ ಕೆಲವರು ರೋಗಕ್ಕೆ - ಆದರೆ ಮನುಷ್ಯನ ಎಲ್ಲಾ ಭಯಗಳು ಕಡೆಗೆ ನೋವಿನ ಭಯಕ್ಕೆ ಪರಿಣಮಿಸುತ್ತವೆ. ಇದೇ ಕಾರಣದಿಂದ ಜನರು ನೋವು ಉಂಟು ಮಾಡದೆ ಇರುವ ದೊಡ್ಡ ಕಾಯಿಲೆಯನ್ನಾದರೂ ಅನುಭವಿಸಲು ತಯಾರಾಗಿರುವರು. ಆದರೆ ಒಂದು ಸಣ್ಣ ತಲೆ ನೋವನ್ನು ಅನುಭವಿಸಲು ಸಿದ್ದರಾಗ