1. ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?
ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?
- ಪರಮಹಂಸ ನಿತ್ಯಾನಂದ -
ಧ್ಯಾನದ ಲಾಭಗಳು
ಪ್ರ. ಇಂದಿನ ಸಮಾಜಕ್ಕೆ ಮೆಡಿಟೇಷನ್ (ಧ್ಯಾನದ ಅಭ್ಯಾಸ) ಹೇಗೆ ಲಾಭದಾಯಕವಾಗಿರುವುದು? ಯಾವುದೇ ಕಾಲವಾಗಲಿ, ಯಾವುದೇ ಯುಗವಾಗಲಿ, ಜೀವನದಲ್ಲಿ ಮಾನವನಿಗೆ ಯಾವುದರ ಅವಶ್ಯಕತೆ ಇದೆ? ಶಾರೀರಕಶಕ್ತಿ, ಮಾನಸಿಕಶಕ್ತಿ, ಆತ್ಮಶಕ್ತಿ ಮತ್ತು ಕ್ಷೇಮ ಅಲ್ಲವೆ? ಶಾರೀರಕ ಕ್ಷೇಮದಿಂದ ನಮಗೆ ರೋಗಗಳಿಂದ ಬಿಡುಗಡೆ ಆಗುವುದು ಮತ್ತು ಅದರಿಂದ ನಾವು ನಮ್ಮ ದಿನಪ್ರತಿ ಚಟುವಟಿಕೆಗಳನ್ನು ಏನೂ ಸಮಸ್ಯೆ ಇಲ್ಲದೆ ಸುಲಭವಾಗಿ ನಡೆಸಿಕೊಂಡು ಹೋಗುವ ರೀತಿಯಲ್ಲಿ ನಮ್ಮ ದೇಹವನ್ನು ಕಾಪಾಡುವುದು. ಮಾನಸಿಕ ಶಕ್ತಿಯು ನಮ್ಮ ಮನಸ್ಸಿಗೆ ಶಾಂತಿ ಮತ್ತು ಸಮಚಿತ್ತವನ್ನು ನೀಡುವುದು ಮತ್ತು ನಮ್ಮ ಜೀವನವನ್ನು ಸಂಪೂರ್ಣವಾಗಿ ಮತ್ತು ಆನಂದವಾಗಿ ಜೀವಿಸಲು ಸಹಾಯ ಮಾಡುವುದು. ಆತ್ಮ ಬಲದಿಂದ ನಾವು ಇವರಡರನ್ನೂ ಮೀರಿ ಮುಂದಕ್ಕೆ ಹೋಗಬಲ್ಲೆವು. ಆತ್ಮ ಬಲದಿಂದ ನಮ್ಮಲ್ಲಿ ಒಂದು ಕರುಣೆಯ ಭಾವನೆ ಉದ್ಭವಾಗುವುದು. ಒಂದು ತ್ಯಾಗದ ಭಾವನೆ, ಒಂದು ಸಮಾಜ ಸೇವೆಯ ಭಾವನೆ. ಶಾರೀರಿಕ ಮತ್ತು ಮಾನಸಿಕ ಬಲವು ಒಬ್ಬ ವ್ಯಕ್ತಿಯ ಕ್ಷೇಮಕ್ಕೆ ಮತ್ತು ಅವನ ಜೀವನವು ಸುಲಭವಾಗಿ ಮುಂದುವರಿಯುವುದಕ್ಕೆ ಅವಶ್ಯಕವಾಗಿರಬಹುದು. ಆದರೆ ಆತ್ಮಬಲವು ಸಮಾಜದ ಮತ್ತು ಮಾನವಕುಲದ ಯೋಗಕ್ಷೇಮಕ್ಕೆ ಮತ್ತು ಮುಂದೆ ವರಿಯುವಿಕೆಗೆ ಆಗತ್ಯ. ಮಾನವನಿಗೆ ಕೇವಲ ಶಾರೀರಕ ಶಕ್ತಿ ಇದ್ದರೆ ಅವನು ಒಬ್ಬ ಲಕ್ಷ ಅಥವ ರೌಡಿ ಆಗಿ ಸಮಾಜಕ್ಕೆ ಕಾಟ ಕೊಡಬಹುದು. ಅವನಿಗೆ ಆತ್ಮಬಲ ಇಲ್ಲದ ಕೇವಲ ಶಾರೀರಕ ಮತ್ತು ಮಾನಸಿಕ ಶಕ್ತಿ ಇದ್ದರೆ ಅವನು ಅವನ ಚಾತುರ್ಯವನ್ನು ತಪ್ಪು ಕೆಲಸಕ್ಕೆ ಉಪಯೋಗಿಸಿ, ಅಪರಾಧಿ ಆಗ ಸಮಾಜಕ್ಕೆ ಅಪಾಯಕಾರಿ ಆಗಬಹುದು. ಮನುಷ್ಯನಲ್ಲಿ ಈ ಮೂರು ಶಕ್ತಿಗಳು ಕೂಡಿಕೊಂಡಾಗ ಮಾತ್ರ ಅವನು ಒಂದು ಸಂಪೂರ್ಣ ವ್ಯಕ್ತಿಯಾಗಿ ವಿಕಾಸವಾಗುತ್ತಾನೆ. ಅವನು ಸಮಾಜದ ಮತ್ತು ಈ ಪ್ರಪಂಚದ ಒಂದೂವರೆ ಇಂಮೂಲ್ಯವಾದ ರತ್ನವಾಗಿ ಪರಿಣಮಿಸುತ್ತಾನೆ. ಧ್ಯಾನವು (ಮೆಡಿಟೇಷನ್) ಒಂದೇ ಈ ಎಲ್ಲಾ ಶಕ್ತಿಗಳನ್ನು ಬಿಡುಗಡೆ ಮಾಡುವ ಮಾಸ್ಟರ್ ಕೀ (master key - ಅನೇಕ ಬೀಗಗಳನ್ನು ತೆರೆಯುವ ಕೀಲಕೈ). ಮೆಡಿಟೇಷನ್‍ನ ಶರೀರದ ಮೇಲಿರುವ ಅದ್ಭುತವಾದ ಪ್ರಭಾವ ಈಗ ಚೆನ್ನಾಗಿ ಗೊತ್ತಿರುವ ವಿಷಯ. ಮೆಡಿಟೇಷನ್‍ನಿಂದ B.P. ಡಯಾಬಿಟೀಸ್ ಮತ್ತು ಬೇರೆ ಸುಮಾರು ರೋಗಗಳನ್ನು ಗುಣಪಡಿಸಲು ಸಾಧ್ಯ. ಸುಮಾರು ಜನರು ವಿವಿಧ ತರಹದ ನೋವುಗಳನ್ನು ಮೆಡಿಟೇಷನ್ ಮೂಲಕ ಪರಿಹರಿಸಿಕೊಂಡಿದ್ದಾರೆ. ಪ್ರಪಂಚದ ಬುದ್ಧಿಜೀವಿಗಳೂ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಮೆಡಿಟೇಷನ್ ನಿಂದ ನಿಮ್ಮ ಚಕ್ರಗಳನ್ನು ಶುದ್ಧೀಕರಿಸಿಕೊಳ್ಳಬಹುದು. ಚಕ್ರಗಳ ವಿಷಯ ಕೇಳಿದ್ದೀರಾ? ನಮ್ಮ ದೇಹದಲ್ಲಿ ನಮ್ಮ ಎಲ್ಲಾ ಶಾರೀರಕ, ಮಾನಸಿಕ ಮತ್ತು ಭಾವನಾತ್ಮಕ ಚಟುವಟಿಕೆಗಳನ್ನು ಪಾಲಿಸುತ್ತಿರುವ ಏಳು ಸೂಕ್ಷ್ಮವಾದ ಎನರ್ಜಿ ಕೇಂದ್ರಗಳಿವೆ. ಈ ಚಕ್ರಗಳು ಒಂದಕ್ಕೊಂದು ಹೊಂದಿಕೊಂಡು ಕೆಲಸ ಮಾಡುತ್ತಿದ್ದರೆ ತಾನೆ, ನಮಗೆ ಶಾರೀರಕ ಯೋಗಕ್ಷೇಮದ ತಿಳಿಯುವಿಕೆಗೆ ಇರುವುದು. ಮೆಡಿಟೇಷನ್ ಮೂಲಕ ಈ ವಿವಿಧ ಚಕ್ರಗಳು ಹೊಂದಿಕೆಯಿಂದ ಕೆಲಸ ಮಾಡುವುದು, ಸ್ವಚ್ಛಗೊಳ್ಳುವುದು ಮತ್ತು ನಿಮ್ಮ ಶರೀರವನ್ನು ರೋಗಗಳಿಂದ ಮುಕ್ತ ಮಾಡುವುದು. ಮಾನಸಿಕ ಸ್ಥರದಲ್ಲಿ ಮೆಡಿಟೇಷನ್ ಮನಸ್ಸನ್ನು ಡಿಪ್ರೆಷನ್ (depression) ಅಥವಾ ಖಿನ್ನತೆಯಿಂದ ಬಿಡುಗಡೆ ಮಾಡುವುದು. ಇದರಿಂದ ನಾವು ಇನ್ನೂ ಹೆಚ್ಚಾದ ಮನಸ್ಸಿನ ಸ್ಪಷ್ಟೆಯನ್ನು ಗಳಿಸಬಹುದು. ಮತ್ತು ನಮ್ಮ ವ್ಯಕ್ತಿಗತ ಜೀವನ ಹಾಗೂ ಈ ಸಮಾಜದ ಆಂಶವಾಗಿಯೂ ಒಂದು ಸಂಪೂರ್ಣವಾದ, ಪರಿಪೂರ್ಣವಾದ ಜೀವನವನ್ನು ಜೀವಿಸುವುದಕ್ಕೆ ಮೆಡಿಟೇಷನ್ ಮಾರ್ಗದರ್ಶಿಯಾಗಿರುವುದು. ಮೆಡಿಟೇಷನ್ ನೀಡುವ ಮಾನಸಿಕ ಸ್ವಷ್ಟತೆ ಮತ್ತು ಶಾರೀರಕ ಕ್ಷೇಮದಿಂದ ನಾವು ನಮ್ಮ ಸಮಯವನ್ನು , ನಮ್ಮ ಎನರ್ಜಿಯನ್ನು ಇನ್ನೂ ಉತ್ತಮವಾಗಿ ಮತ್ತು ಸಂಪೂರ್ಣವಾಗಿ ಉಪಯೋಗ ಮಾಡಿಕೊಳ್ಳಬಹುದು. ಇದರಿಂದ ನಮ್ಮ ಭೌತಿಕ ಸೌಲಭ್ಯಗಳನ್ನೂ (material comforts) ಪಡೆಯುವ ಸಾಧ್ಯತೆಯೂ ಹೆಚ್ಚಾಗುವುದು. ಹೀಗೆ ಧ್ಯಾನವು ನಮ್ಮ ಆತ್ಮಶಕ್ತಿಯನ್ನು ಹೊರಹೊರಡಿಸಿ, ಒಂದು ಸಂಪೂರ್ಣವಾದ ಶಾಂತಿಯನ್ನು ನಮ್ಮೊಳಗೆ ಉಂಟು ಮಾಡುವುದು. ಈ ಆನಂದದ ವಿಕಸನವು ನಮ್ಮೊಳಗೆ ಆದಾಗ ನಾವು ಅದನ್ನು ಸಮಾಜದಲ್ಲಿ ಹರಡಲು ಇಚ್ಛಿಸುತ್ತೇವೆ. ಈ ಮೂರು ಶಕ್ತಿಗಳನ್ನು ನೀಡುವ ಒಂದೇ ಮಾರ್ಗ - ಮೆಡಿಟೇಷನ್! ಹೀಗೆ ಮೆಡಿಟೇಷನ್ ನಮಗೆ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥರಗಳಲ್ಲಿ ಲಾಭದಾಯಕವಾಗಿರುವುದು. ಅದು ನಮ್ಮ ಸಾಂಸಾರಿಕ ಮತ್ತು ಸಾಮಾಜಿಕ ಜೀವನದ ಸೌಖ್ಯವನ್ನು ಹೆಚ್ಚಿಸುವುದು ಮತ್ತು ಆಧ್ಯಾತ್ಮ ಜೀವನದ ಕಡೆಗೆ ಹೊರಡಿಸುವುದು. ಅನೇಕ ವರ್ಷಗಳ ಕಾಲದಿಂದ ದೊಡ್ಡ ದೊಡ್ಡ ಜ್ಞಾನಿಗಳು ತಿಳಿದುಕೊಂಡಿರುವುದು ಒಂದು ಅಮೂಲ್ಯವಾದ ಸತ್ಯ.
ಹೀಲಿಂಗ್ ಮತ್ತು ಮೆಡಿಟೇಷನ್
ಪ್ರ. ಬಹಳ ಜನರು ನಿಮ್ಮಲ್ಲಿ ‘ಹೀಲಿಂಗ್’ ಗಾಗಿ ಬರುತ್ತಾರೆ ಹೊರತು ಮೆಡಿಟೇಷನ್‌ಗಾಗಿ ಬರುತ್ತಾರೆಯಿಲ್ಲ? ನಿಜ. ‘ಹೀಲಿಂಗ್’ ನನ್ನ ‘ವಿಸಿಟಿಂಗ್ ಕಾರ್ಡ್’ (Visiting Card) ಅಂತ ಹೇಳಬಹುದು. ನನ್ನ ನಿಜವಾದ ಸಂದೇಶವು - ‘ಮೆಡಿಟೇಷನ್’. ನಿಮಗೆ, ನಾನು ಮೆಡಿಟೇಷನ್ ನಿಮ್ಮನ್ನು ಸರ್ವೋತ್ತಮ್ಯ ಸತ್ಯಕ್ಕೆ ಕರೆದುಕೊಂಡು ಹೋಗುವುದು ಎಂದು ಹೇಳಿದರೆ ನಿಮಗೆ ನಾನು ಸಾಕ್ಷಿ ಕೊಡಬೇಕು ಅಲ್ಲವೇ? ಅದಕ್ಕೆ ನಾನು ಹೀಲಿಂಗ್‌ಗೆ ಉತ್ತೇಜನ ಕೊಡುವೆನು. ಹೀಲಿಂಗ್‌ನ ಅದ್ಭುತ ಪವಾಡವು ಜನರನ್ನು ನನ್ನ ಕಡೆ ಸೆಳೆಯುವುದು ಮತ್ತು ಅವರು ಈ ಮಾರ್ಗದ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ಬಯಸುತ್ತಾರೆ. ಇಲ್ಲದಿದ್ದರೆ ಜನರನ್ನು ಆಧ್ಯಾತ್ಮದ ಮಾರ್ಗಕ್ಕೆ ಸೆಳೆಯುವುದು ಅಷ್ಟು ಸುಲಭ ಎಂದುಕೊಂಡಿದ್ದೀರಾ ? ನನ್ನ ಬಳಿ ಸಾವಿರಾರು ಜನ ಹೀಲಿಂಗ್‌ಗೆ ಬರುವವರಲ್ಲಿ ಕೇವಲ ಸ್ವಲ್ಪ ಜನ ಕೂಡ ಧ್ಯಾನ ಮತ್ತು ಆಧ್ಯಾತ್ಮದ ಮಾರ್ಗಕ್ಕೆ ಬಂದರೆ ನನ್ನ ಉದ್ದೇಶವು ಪೂರ್ಣವಾಗುವುದು. ಹೀಗೇ ಆಗುತ್ತಾ ಇದೆ. ಹೀಗೇ ಆಗುತ್ತಾ ಇದೆ. ಪ್ರಪಂಚದಲ್ಲಿ ಎಲ್ಲಾ ಕಡೆ ಮೆಲ್ಲನೆ ಹೀಗೆ ಆಗುತ್ತಾ ಇದೆ. ಪ್ರ. ಬಹಳ ಗುರುಗಳು ಮೆಡಿಟೇಷನ್‍ಗೆ ಪ್ರಾಮುಖ್ಯತೆ ಕೊಡುತ್ತಾರೆ. ನಿಮ್ಮ ಧ್ಯಾನ ಪದ್ಧತಿಗಳಲ್ಲಿ ಏನು ವಿಶೇಷವಾಗಿರುವುದು? ನನ್ನ ಅಭಿಪ್ರಾಯದಲ್ಲಿ ಯಾವುದೇ ಒಂದು ಧ್ಯಾನ ಪದ್ಧತಿಯನ್ನು ವಿಶೇಷವಾಗಿ ಉತೇಜಿಸುವ ಅವಶ್ಯಕತೆ ಇಲ್ಲ. ನಾನು ಕೇವಲ ಮೆಡಿಟೇಷನ್ ತತ್ವವನ್ನು ಪ್ರಚಾರ ಮಾಡುತ್ತೇನೆ. ನನ್ನ ಮಾತು ಕೇಳಿ ಹೆಚ್ಚು ಹೆಚ್ಚು ಜನರಿಗೆ ಧ್ಯಾನದ ಸಾಧನೆ ಮಾಡುವುದಕ್ಕೆ ಪ್ರೇರಣೆ ಆದರೆ ಅಷ್ಟೇ ಸಾಕು, ಅದು ಬಹಳ ಒಳ್ಳೆಯ ಶಕುನ. ಅವರಿಗೆ ಹಿತಕರವಾಗಿದ್ದ ಯಾವುದೇ ಪದ್ಧತಿ ಆದರೂ ಸರಿ. ಆದರೆ ನೀವು ನನ್ನ ಧ್ಯಾನ ಪದ್ಧತಿಯ ಬಗ್ಗೆ ಕೇಳಿದರೆ ನಾನು ಇಷ್ಟು ಹೇಳಬಲ್ಲೆ. ಅದು ನಮ್ಮ ಒಳಗಿನ ಎನರ್ಜಿಗಳನ್ನು ಅಥವಾ ಶಕ್ತಿಗಳನ್ನು ಸಮತೋಲನಗೊಳಿಸುವ ಒಂದು ಪದ್ಧತಿ. ವಿಶ್ವವನ್ನೇ ವ್ಯಾಪಕವಾಗಿ ಸುತ್ತುಗಟ್ಟಿರುವ, ಸೂರ್ಯನನ್ನು ಚಂದ್ರನನ್ನು ಗ್ರಹಗಳನ್ನೆಲ್ಲ ಚಲಿಸುತ್ತಿರುವ ಒಂದು ಶಕ್ತಿ ಇರುವುದು. ನಾವು ಈ ವಿಶ್ವ ಶಕ್ತಿಯ (ಎನರ್ಜಿಯ) ಅಂಶವಾಗಿರುವೆವು. ಆದರೆ ನಾವು ಅದನ್ನು ಗ್ರಹಿಸಿಲ್ಲ - ನಾವು ಅದನ್ನು ಮರೆತುಬಿಟ್ಟಿದ್ದೇವೆ. ನನ್ನ ಈ ಮೆಡಿಟೇಷನ್ ಪದ್ಧತಿಯು ನಿಮ್ಮನ್ನು ಈ ಎನರ್ಜಿ ಅಥವಾ ಶಕ್ತಿಯೊಡನೆ ಸಂಪರ್ಕಿಸಲು ಸಹಾಯ ಮಾಡುವುದು. ಪ್ರ. ಮೆಡಿಟೇಷನ್ ಪದ್ಧತಿಗಳು ಎಷ್ಟೋಂದು ಇರುವುದರಿಂದ ನಮ್ಮಲ್ಲಿ ಗಲಿಬಿಲಿ ಉಂಟಾಗಿದೆ. ಪ್ರತಿ ಒಂದು ಗುಂಪು ಅದರ ಪದ್ಧತಿಯನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತಾ ಇರುವುದು. ನಮಗೆ ಯಾವ ಪದ್ಧತಿ ಉತ್ತಮವಾದುದು ಎಂದು ಹೇಗೆ ಗೊತ್ತಾಗುವುದು? ನನ್ನಸಲಹೆ ಏನಂದರೆ ನೀವು ಕಂಡಿರುವ ಪದ್ಧತಿಗಳನಲ್ಲಪ್ರಯತ್ನಿಸಿ ನೋಡಿ. ಎಲ್ಲರೂ ಒಂದು 4-5 ಪದ್ಧತಿಗಳನ್ನಾದರೂ ಪ್ರಯತ್ನಿಸಿ ನೋಡಬೇಕು. ಎಲ್ಲಾ ಧರ್ಮ ಗುರುಗಳ ಬೋಧನೆಯಲ್ಲೂ ಸತ್ಯದ ಕಿಡಿ ಖಂಡಿತ ಇರುವುದುದು-ಇಲ್ಲದಿದ್ದರೆ ಅವರು ಗುರಿಗಳಾಗಿ ಬರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಬೇರೆ ಬೇರೆ ಗುರಿಗಳು ಒಂದು ಸತ್ಯವನ್ನು ಬೇರೆ ಬೇರೆ ರೀತಿಯಲ್ಲಿ ಪ್ರವಚನ ಮಾಡುತ್ತಾರೆ- ಹಾಗು ಒಬ್ಬೊಬ್ಬರಿಗೂ ಬೇರೆ ಬೇರೆ ಮಾನಸಿಕ ಸ್ವಭಾವ ಇರುವುದು. ಇದರ ಪ್ರಕಾರ ಒಬ್ಬೊಬ್ಬರಿಗೆ ಒಬ್ಬೊಬ್ಬ ಗುರುಗಳಮತ ಹೆಚ್ಚು ಹೊಂದಿಕೆಯಾಗುವುದು. ಅದಕ್ಕೆ ಬೇರೆ ಬೇರೆ ಮೆಡಿಟೇಷನ್ ಪದ್ಧತಿಗಳನ್ನು ಪ್ರಯತ್ನಿಸಿ ನೋಡಿ. ಯಾವ ಪದ್ಧತಿಯು ನಿಮಗೆ ಎಲ್ಲಕ್ಕಿಂತ ಹೆಚ್ಚು ಶಾಂತಿಯನ್ನು ಮತ್ತು ಸ್ವಷ್ಟ ತಿಳುವಳಿಕೆಯನ್ನು ನೀಡುವುದೋ, ಆ ಪದ್ಧತಿಯನ್ನು ಅನುಸರಿಸಿ ಬೇರೆ ಎಲ್ಲಾ ಪದ್ಧತಿಗಳನ್ನು ಮರೆತು ಬಿಡಿ.
ಸಾಮಾಜಿಕ ಸಮಸ್ಯೆಗಳು ಮತ್ತು ಆಧ್ಯಾತ್ಮ
ಪ್ರ. ಈ ಪ್ರಪಂಚದಲ್ಲಿ ಇರುವ ಬಹಳ ಸಮಸ್ಯೆಗಳ ಪರಿಹಾರ ಆಗಿಲ್ಲ. ಆಧ್ಯಾತ್ಮದಿಂದ ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಲ್ಲದು? ಯಾವುದೇ ಸಮಸ್ಯೆ ಇರಲಿ ಅದನ್ನು ಪರಿಹರಿಸಲು ಪ್ರಯತ್ನಿಸುವುದಕ್ಕೆ ಪ್ರಾರಂಭ ಮಾಡಲೇಬೇಕು. ದೃಢಸಂಕಲ ಮತ್ತು ವಿಶ್ವಾಸ - ಇವುಗಳೇ ಮೊದಲನೆಯ ಹೆಜೆ. ಪ್ರ. ಆದರೆ ನನ್ನ ಅರ್ಥ ನಮ್ಮ ವ್ಯಕ್ತಿಗತ ಸಮಸ್ಯೆಗಳಲ್ಲ. ಮೊಡ್ಡ ಮೊಡ್ಡ ಸಾಮಾಜಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು? ಆಧ್ಯಾತ್ಮ ಕೇವಲ ಒಂದು ವ್ಯಕ್ತಿಗತ ವಿಷಯವಲ್ಲ. ಸಾಮಾಜಿಕ ಸ್ತರದಲ್ಲಿಯೂ ಅದರ ಪರಿಣಾಮ ಖಂಡಿತ ಇರುವುದು. ಆಧ್ಯಾತ್ಮ ಕೇವಲ ಧ್ಯಾನವಲ್ಲ. ಅದು ಕರುಣೆ ಮತ್ತು ಸಮಾಜ ಸೇವೆಯೂ ಆಗಿರುವುದು. ವಿವೇಕಾನಂದರು ಸುಂದರವಾಗಿ ಹೇಳಿದ್ದಾರೆ “ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯಚ”, ಎಂದು. ಜ್ಞಾನೋದಯವನ್ನು ನಾವು ಪಡೆದರೂ ಅದನ್ನು ಮಾನವಕುಲದ ಸೇವೆಗೆ ಬಳಸಿದರೆ ಮಾತ್ರ ಅದು ನಿಜವಾದ ಆಧ್ಯಾತ್ಮ. ಇಲ್ಲದಿದ್ದರೆ ಅದು ಕೇವಲ ಅರ್ಥ ಆಧ್ಯಾತ್ಮ - ಅದು ಹೇಗೆ ಅಂದರೆ, ಅದು ನಾಸ್ತಿಕತೆಗೆಿಂತ ಹೆಚ್ಚು ಗಲಿಬಿಲಿ ಉಂಟು ಮಾಡುವಂಥದು. ಪ್ರ. ಏನೂ ಅಪೇಕ್ಷೆ ಇಲ್ಲದೆ ಇರುವುದೇ ನಿಜವಾದ ಆಧ್ಯಾತ್ಮದ ಅರ್ಥವೇ? ಇಲ್ಲ-ಹಾಗೆ ಅಂದುಕೊಳ್ಳುವುದು ಆಧ್ಯಾತ್ಮವನ್ನು ತಪ್ಪು ದೃಷ್ಟಿಯಿಂದ ನೋಡುವುದು. ಅಪೇಕ್ಷೆಗಳನ್ನು ಕಮ್ಮಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಒಳಗಿನ ಚೈತನ್ಯವನ್ನು ಅಪೇಕ್ಷೆಗಳನ್ನು ಪೂರೈಸುವುದಕ್ಕೆ ಉಪಯೋಗ ಮಾಡಿಕೊಳ್ಳುವುದು ಇನ್ನೂ ಲಾಭದ ವಿಷಯ. ನ ಮ ಜೀ ವ ನ ದ ಲ್ಲಿ ಆ ಧ್ಯಾ ತ್ಮಿ ಕ ತೆ ಯು ಸಮಂ ಜಸ ವೇ?