All Books
ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?
Kannada

ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?

SPH Nithyananda Paramashivam

KAILASA's Nithyananda Hindu University

1 Chapter4 SectionsISBN 979-8-88572-467-8

ಪ್ರ. ಇಂದಿನ ಸಮಾಜಕ್ಕೆ ಮೆಡಿಟೇಷನ್ (ಧ್ಯಾನದ ಅಭ್ಯಾಸ) ಹೇಗೆ ಲಾಭದಾಯಕವಾಗಿರುವುದು? ಯಾವುದೇ ಕಾಲವಾಗಲಿ, ಯಾವುದೇ ಯುಗವಾಗಲಿ, ಜೀವನದಲ್ಲಿ ಮಾನವನಿಗೆ ಯಾವುದರ ಅವಶ್ಯಕತೆ ಇದೆ? ಶಾರೀರಕಶಕ್ತಿ, ಮಾನಸಿಕಶಕ್ತಿ, ಆತ್ಮಶಕ್ತಿ ಮತ್ತು ಕ್ಷೇಮ ಅಲ್ಲವೆ? ಶಾರೀರಕ ಕ್ಷೇಮದಿಂದ ನಮಗೆ ರೋಗಗಳಿಂದ ಬಿಡುಗಡೆ ಆಗುವುದು ಮತ್ತು ಅದರಿಂದ ನಾವು ನಮ್ಮ ದಿನಪ್ರತಿ ಚಟುವಟಿಕೆಗಳನ್ನು ಏನೂ ಸಮಸ್ಯೆ ಇಲ್ಲದೆ ಸುಲಭವಾಗಿ ನಡೆಸಿಕೊಂಡು ಹೋಗುವ ರೀತಿಯಲ್ಲಿ ನಮ್ಮ ದೇಹವನ್ನು ಕಾಪಾಡುವುದು. ಮಾನಸಿಕ ಶಕ್ತಿಯು ನಮ್ಮ ಮನಸ್ಸಿಗೆ ಶಾಂತಿ ಮತ್ತು ಸಮಚಿತ್ತವನ್ನು ನೀಡುವುದು ಮತ್ತು ನಮ್ಮ ಜೀವನವನ್ನು ಸಂಪೂರ್ಣವಾಗಿ ಮತ್ತು ಆನಂದವಾಗಿ ಜೀವಿಸಲು ಸಹಾಯ ಮಾ