ನೀನು ನಿಜವಾಗಿಯೂ ಯಾರು...
This text was machine-transcribed from the printed book and may contain errors. Select the words and choose “Report a mistake”.
– ಸಿಂಹ ಮತ್ತು ಮರಿಯ ಕಥೆ
ನಿತ್ಯಾನಂದ
ನಿಜವಾಗಿಯೂ ನೀನು ಯಾರು....
- ಸಿಂಹ ಮತ್ತು ಮರಿಯ ಕಥೆ
- ನಿತ್ಯಾನಂದ
Ebook ISBN: 979-8-88572-452-4
ಲೈಫ್ ಬ್ಲಿಸ್ ಫೌಂಡೇಶನ್ ಪ್ರಕಟಣೆ

“ ಗುರುವು ಪ್ರಬಲವಾದ 'ಸಿಡಿಮದ್ದಿನಂತೆ' - 'ಚಾಲಕಶಕ್ತಿ' ಮತ್ತು 'ವಜ್ರ'! ಗುರುವಿನ ಚಲನಾತ್ಮಕ ವಜ್ರದ ಅಲಗನ್ನು ಶಿಷ್ಯನೆಂಬ ಕಲ್ಲಿನ ಸುತ್ತಲೂ ತಂದಾಗ, ಎಲ್ಲಾ ಕಲ್ಮಷಗಳೂ ಹಾಗೂ ಮಿಥ್ಯೆಯೂ ಕೆತ್ತಿ ಹಾಕಲ್ಪಡುತ್ತದೆ ಹಾಗೂ ನಂತರ ಉಳಿಯುವುದೆಲ್ಲವೂ ಶುದ್ಧವೂ ಶಾಶ್ವತವೂ ಆದ ಆನಂದ – ನಿತ್ಯ ಆನಂದ. ”
– ನಿತ್ಯಾನಂದ
ನೀನು ನಿಜವಾಗಿಯೂ ಯಾರು....
ಸಿಂಹ ಹಾಗೂ ಮರಿಯ ಕಥೆ
ನಾನು ನಿಮ್ಮೆಲ್ಲರನ್ನೂ ನನ್ನ ಪ್ರೀತಿ ಹಾಗೂ ಗೌರವಗಳಿಂದ ಸ್ವಾಗತಿಸುತ್ತೇನೆ.
ಏನನ್ನು ಹೇಳಲಾಗುವುದಿಲ್ಲವೋ ಅದನ್ನು ಹೇಳಲಾಗುವುದಿಲ್ಲ, ಏನನ್ನು ಹೇಳಲಾಗುವುದೋ ಅದು ಅಂತಿಮ ಸತ್ಯವಲ್ಲ! ಸತ್ಯವು ಚಿರಂತನ ಅನುಭವ. ಆದರೆ ಸತ್ಯವನ್ನು ಉಚ್ಚರಿಸಿದೊಡನೆ, ಅದು ಸುಳ್ಳೋ ಅಥವಾ ಅರ್ಧಸತ್ಯವೋ ಆಗುತ್ತದೆ. ಏಕೆ? ಏಕೆಂದರೆ, ಯಾವ ಮನಸ್ಸಿನ ಮೂಲಕ ಮಾತನಾಡುವಿರೋ, ಆ ಮನಸ್ಸಿನ ತರ್ಕವು ಒಂದು ರೀತಿಯದ್ದಾದರೆ, ಸತ್ಯದ ಕೆಲಸ ಮಾಡುವ ತರ್ಕವು ಬೇರೆಯ ರೀತಿಯದ್ದೇ ಆಗಿರುತ್ತದೆ.
ಯಾವ ತರ್ಕದಿಂದ ಮನಸ್ಸು ಕೆಲಸ ಮಾಡುತ್ತದೋ ಹಾಗೂ ಯಾವ ತರ್ಕದಿಂದ ಸತ್ಯಾನುಭವವಾಗುವುದೋ - ಆ ಎರಡೂ ತರ್ಕಗಳು ಬಹಳ ವಿಭಿನ್ನವೇ ಆಗಿರುತ್ತವೆ - ಆದ ಕಾರಣ ನಿಮ್ಮ ಮನಸ್ಸು ಸತ್ಯವನ್ನು ಒಂದರ್ಧ ಘಂಟೆ ಒಂದು ರೀತಿಯಾಗಿ, ಇನ್ನೊಂದರ್ಧ ಘಂಟೆ ಸಂಪೂರ್ಣವಾಗಿ ಬೇರೆಯ ರೀತಿಯಾಗಿ, ಸ್ವೀಕರಿಸುತ್ತದೆ. ಇದು ನಿಮ್ಮನ್ನು ಸದಾ ಸಂದಿಗ್ಧತೆಯಲ್ಲಿರಿಸಿ, ಅನುಮಾನ ಹಾಗೂ ಮನಸ್ಸಿನ ಹೊಯ್ದಾಟಗಳಿಂದ ನಿಮ್ಮನ್ನು ಒದ್ದಾಡುವಂತೆ ಮಾಡುತ್ತದೆ. ಹೀಗೇಕೆ ಆಗುತ್ತದೆ? ಏಕೆಂದರೆ ನಿಮ್ಮ ಮನಸ್ಸಿಗೆ ಸಂಪೂರ್ಣವಾದ ಸತ್ಯವನ್ನು ಅದು ಇರುವಂತೆಯೇ ಅರಿಯಲು ಸಾಧ್ಯವಿಲ್ಲ. "ಮನಸ್ಸು" ಎಂದರೆ ಸಂದಿಗ್ಧತೆ.
ಇದಕ್ಕೆ ಹೊರತಾಗಿ, ಜ್ಞಾನಿಗಳು ಈ ಸಂದಿಗ್ಧತೆಯಿಂದ ಸಂಪೂರ್ಣವಾಗಿ ಮುಕ್ತರಾಗಿರುತ್ತಾರೆ. ಇದು ಏಕೆಂದರೆ ಅವರು ಎಲ್ಲಾ ಸಮಯದಲ್ಲೂ ‘ಅಮನಸ್ಕ ಪರಿಧಿ’ಯಲ್ಲಿರುತ್ತಾರೆ. ಈಗ ನನ್ನ ಈ ಅಮನಸ್ಕ ಸ್ಥಿತಿಯಲ್ಲಿಯೂ ಸಹ, ನಾನು ಸಂದಿಗ್ಧದಲ್ಲಿದ್ದೇನೆ....! ನನಗೆ ಉಂಟಾಗಿರುವ ಸಂದಿಗ್ಧತೆಯು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಕಾರಣಕ್ಕಾಗಿ ಅಲ್ಲ ಆದರೆ ನಿಮಗೆ ನಾನು ಏನನ್ನು ಹೇಳಬೇಕು ಎಂಬುದಕ್ಕಾಗಿ. ಏಕೆಂದರೆ, ನಾನಾಡುವ ಮಾತುಗಳೆಲ್ಲವೂ ನೀವು ತಿಳಿದಿರುವ ನಿಘಂಟು ಮತ್ತು ಶಬ್ದಕೋಶದ ಪದಗಳಿಗಿಂತಲೂ ವಿಭಿನ್ನವೇ ಆಗಿರುತ್ತವೆ.
ನಾನು ಕೆಲವು ಪದಗಳನ್ನು ಒಂದು ನಿರ್ದಿಷ್ಟ ಅರ್ಥದಲ್ಲಿ ಆಡಿರಬಹುದು. ಆದರೆ ನೀವದನ್ನು ತದ್ವಿರುದ್ಧವಾಗಿಯೇ ತಿಳಿದುಕೊಳ್ಳುವಿರಿ - ಬರಿಯ 179 ಡಿಗ್ರಿಗಳನ್ನು ತಿರುವಿನಿಂದಷ್ಟೆ ಅಲ್ಲ, ಪೂರ್ತಿ 180 ಡಿಗ್ರಿಗಳಷ್ಟು! ನೀವು ಹೇಗಿದ್ದರೂ 180 ಡಿಗ್ರಿಗಳ ತಿರುವನ್ನು ತೆಗೆದುಕೊಳ್ಳುತ್ತೀರೆಂದು, ಒಂದು ವೇಳೆ ನಾನು ವಿರುದ್ಧವಾದ ಪದಗಳನ್ನು ಬಳಸಿದರೆ, ಆಗ ನೀವು ಆ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಿರಿ! ಈಗ ನಿಮಗೆ ಗುರುವಿನ ಸಂದಿಗ್ಧತೆಯು ತಿಳಿಯುತ್ತದೆಯಲ್ಲವೆ!
ವಾಸ್ತವವಾಗಿ ಹೇಳುವುದಾದರೆ, ಗುರು ಮತ್ತು ಶಿಷ್ಯರು ಏಕೋ ಏನೋ ಎರಡು ವಿರುದ್ಧವಾದ ಮೂಲೆಗಳಲ್ಲಿರುತ್ತಾರೆ. ಅಂತರವನ್ನು ದಾಟುವುದು ದೊಡ್ಡ ವಿಷಯವೇನಲ್ಲ. ಆದರೆ ಅವರಿಬ್ಬರ ನಡುವಿನ ಸೇತು ನಿರ್ಮಾಣವು ಅಗಾಧವಾದ ಕೆಲಸ. ನೀವು ಗಂಗಾನದಿಯನ್ನು ಸೇತುವೆಯ ಮೂಲಕ ದಾಟಲು ಕೆಲವೇ ನಿಮಿಷಗಳು ಸಾಕಾಗುತ್ತವೆ. ಆದರೆ ಆ ಸೇತುವೆಯ ನಿರ್ಮಾಣಕ್ಕೆ ಅನೇಕ ವರ್ಷಗಳೇ ಬೇಕಾಗುತ್ತವೆ. ಆದ್ದರಿಂದ, ವಿಚಾರವು ದಾಟುವುದಲ್ಲ - ನಿರ್ಮಾಣ ಮಾಡುವುದು.
ಎಲ್ಲರೂ ನನ್ನನ್ನು ಕೇಳುತ್ತಲೇ ಇರುತ್ತಾರೆ. ‘ಸ್ವಾಮೀಜಿ, ದಯವಿಟ್ಟು ನನಗೆ ಜ್ಞಾನೋದಯವನ್ನು ದಯಪಾಲಿಸಿರಿ!’ ಎಂದು. ನಾನು ನಿಮಗೆ ಜ್ಞಾನೋದಯವನ್ನು ‘ಕೊರಿಯರ್’ ಮೂಲಕ ಕಳುಹಿಸಲು ಸಾಧ್ಯವೆಂದುಕೊಂಡಿದ್ದೀರಾ? ಇಲ್ಲ! ಮೊದಲು ಸಂಯೋಗವು ನಿರ್ಮಾಣವಾಗಬೇಕು. ಅದಾದ ನಂತರ, ನಾನು ನಿಮಗೆ
ಏನನ್ನೂ ಕೊಡಬೇಕಾಗಿರುವುದಿಲ್ಲ ಮತ್ತು ನನ್ನಿಂದ ನೀವು ಏನನ್ನೂ ಪಡೆಯಬೇಕಾದ ಅವಶ್ಯಕತೆ ಇರುವುದಿಲ್ಲ. ಕೊಡುವವನು ಮತ್ತು ಪಡೆಯುವವನು ಇರುವುದೇ ಇಲ್ಲ. ಏಕೆ? ಏಕೆಂದರೆ ಇದ್ದಕ್ಕಿದ್ದಂತೆ ಒಂದು ಆಸ್ಫೋಟವು ಉಂಟಾಗಿ, ಕೊಡುವವನು ಹಾಗೂ ಪಡೆಯುವವನು ಒಂದಾಗಿ ಲೀನವಾಗುತ್ತಾರೆ.
ಪ್ರತಿ ಹಿಮಾಲಯ ಪ್ರವಾಸ 1 ದಲ್ಲಿಯೂ ನಾನು ಒಂದು ವಿಷಯವನ್ನು ತೀವ್ರವಾದ ಅಧ್ಯಯನಕ್ಕಾಗಿ ಆಯ್ದುಕೊಳ್ಳುತ್ತೇನೆ; ತಿಳಿಯಿತೇ?. ಈ ಹಿಮಾಲಯ ಪ್ರವಾಸವು ಕೇವಲ ಒಂದು ವಿನೋದದ ಪ್ರವಾಸವಲ್ಲವೆಂದು ತಿಳಿಯಿರಿ. ಒಂದು ರೀತಿಯಲ್ಲಿ ಇದೊಂದು ಪ್ರವಾಸವೂ ಹೌದು. - ನೀವಿಲ್ಲಿ ಬಹಳ ಸಂತೋಷ ಪಡುವಿರಿ, ಉತ್ಸಾಹದಿಂದ ಸಂಭ್ರಮಿಸುವಿರಿ ಹಾಗೂ ಆನಂದದಿಂದ ನರ್ತಿಸುವಿರಿ. ಇದೆಲ್ಲದರ ಜೊತೆಗೆ ಮಂತ್ರ, ಹೋಮ, ಆರತಿ ಸಹಿತ ಪೂಜೆಗಳನ್ನೂ ಮಾಡುವಿರಿ. ಹಾಗೂ ಅತಿ ಮುಖ್ಯವಾಗಿ ಮಹೋನ್ನತ ಸತ್ಯಗಳನ್ನು ಅಧ್ಯಯನ ಮಾಡುವಿರಿ.
ಇದು ಕೇವಲ ಒಂದು ಸಾಮಾನ್ಯ ಪ್ರವಾಸವಾಗಿದ್ದರೆ, ಭಕ್ತರ ಈ ಗುಂಪು ಸುಮಾರು ಮೂರು ಪಟ್ಟು ಹೆಚ್ಚಾಗಿರುತ್ತಿತ್ತು!
ಆದರೆ ನನಗದು ಬೇಡ. ನೀವು ನನ್ನೊಡನೆ ಹಿಮಾಲಯಕ್ಕೆ ಬಂದು ಈ ಪೂಜ್ಯ ಪರ್ವತಗಳಲ್ಲಿ ನಿರ್ಮಾಣವಾಗಿರುವ ಬೃಹತ್ ವಿಜ್ಞಾನದ ಅನುಭವ ಪಡೆಯದಿದ್ದಲ್ಲಿ, ನಿಮ್ಮ ಪ್ರವಾಸ ಹೆಚ್ಚು ಉಪಯುಕ್ತವಾಗುವುದಿಲ್ಲವೆಂದು ನನಗನಿಸುತ್ತದೆ. ಇದು ಹೇಗೆಂದರೆ, ನೀವು ಒಂದು ಉಪಹಾರ ಮಂದಿರಕ್ಕೆ ಹೋಗಿ ತಿನಿಸುಗಳ ಪಟ್ಟಿಯನ್ನು ಓದಿ, ಸ್ವಲ್ಪ ಕಾಲ ಅಲ್ಲಿ ಕುಳಿತು, ಏನನ್ನೂ ತಿನ್ನದೆ, ಎದ್ದು ಬಂದರೆ, ಏನು ಮಾಡಿದ ಹಾಗಾಯಿತು? ಅದು ಸಮಯ ಹಾಗೂ ಶಕ್ತಿಗಳ ಪೋಲಲ್ಲವೆ?.
ನಿತ್ಯಾನಂದರು ಪ್ರತಿವರ್ಷವೂ ಉತ್ತರ ಭಾರತದಲ್ಲಿರುವ ಹಿಮಾಲಯಕ್ಕೆ ತಮ್ಮ ಶಿಷ್ಯಂದಿರನ್ನು ಕರೆದುಕೊಂಡು ಹೋಗುತ್ತಾರೆ.
ಸರಿಯಾಗಿ ತಿಳಿಯಿರಿ: ನನ್ನೊಡನೆ ನೀವು ಹಿಮಾಲಯಕ್ಕೆ ಬಂದು, ನಿಮಗೆ ಅಂತರ್ಜ್ಞಾನದ ಅನುಭವವಾಗದೇ ಇದ್ದರೆ ಅಥವಾ ನಿಮ್ಮ ಅಂತರಾಳದ ಬೆಳವಣಿಗೆಯಾಗದಿದ್ದರೆ, ನೀವು ಉಪಾಹಾರ ಮಂದಿರಕ್ಕೆ ಭೇಟಿನೀಡಿ, ಅಲ್ಲಿ ದೊರೆಯುವ ತಿನಿಸುಗಳ ಪಟ್ಟಿಯನ್ನು ಓದಿ, ಏನನ್ನೂ ಸೇವಿಸದೆ, ಮನೆಗೆ ಹೋದ ಹಾಗೆ ಅಷ್ಟೇ. ಆದರೆ ಇಲ್ಲಿ ಹಾಗೂ ಈಗ ನೀವು ತಿನಿಸುಗಳ ಪಟ್ಟಿಯನ್ನು ಓದುವುದೊಂದನ್ನೇ ಮಾಡುವುದಿಲ್ಲ. ನೀವು ಇಲ್ಲಿ ಆಹಾರವನ್ನೂ ಸಹ ಸೇವಿಸುತ್ತೀರಿ. ನೀವು ಆಧ್ಯಾತ್ಮಿಕ ಜ್ಞಾನವನ್ನು ಸೇವಿಸುತ್ತೀರಿ!
ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ ನಾನು ಸಾಕಷ್ಟು ಕೆಲಸ ತೆಗೆಯುವವನೆಂದು ಖಂಡಿತವಾಗಿ ತಿಳಿದಿರುತ್ತದೆ! ತಿಳಿಯಿರಿ, ಗುರುಗಳು, ಮೂರು ಬಗೆಯವರಾಗಿರುತ್ತಾರೆ. ಮೊದಲನೆಯ ಬಗೆಯ ಗುರುಗಳು ಪಠ್ಯಕ್ರಮವನ್ನು ನಿಮ್ಮ ಕೈಗೆ ನೀಡಿ, ನೀವೇ ಪಾಠವನ್ನು ಓದಿಕೊಳ್ಳುವಂತೆ ಹೇಳುತ್ತಾರೆ. ಎರಡನೆಯ ಬಗೆಯ ಗುರುಗಳು, ಅವರೇ ಪಾಠವನ್ನು ಹೇಳಿಕೊಡುತ್ತಾರೆ. ಮೂರನೆ ಬಗೆಯ ಗುರುಗಳು, ನೀವು ಕಲಿಯಬೇಕಾದುದನ್ನು ಹೇಳಿಕೊಡುವುದಷ್ಟೇ ಅಲ್ಲದೆ, ನಿಮ್ಮ ಫಲಿತಾಂಶದಲ್ಲಿ ಆಸಕ್ತಿ ಹೊಂದಿದ್ದು, ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ನೋಡಿಕೊಳ್ಳುತ್ತಾರೆ. ನಿಮಗೀಗ ನಾನು ಯಾವ ಬಗೆಯ ಗುರುವೆಂದು ತಿಳಿಯಿತಲ್ಲವೆ? ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೊಂದೇ ಅಲ್ಲದೆ, ಪಠ್ಯಕ್ರಮಗಳನ್ನು ಆಮೂಲಾಗ್ರವಾಗಿ ತಿಳಿಯುವಂತೆ ನಿಮ್ಮನ್ನು ತಯಾರು ಮಾಡುತ್ತೇನೆ! ಆದ್ದರಿಂದ ಸಿದ್ಧರಾಗಿರಿ: ನಮ್ಮ ಕಾರ್ಯಕ್ರಮಗಳು ನಿರ್ಬಂಧಕರವಾಗಿದ್ದು, ನಿಮ್ಮನ್ನು ಸತತವಾಗಿ ನಿಮ್ಮ ಮಿತಿಯಂಚಿ - ನವರೆಗೂ ಕೊಂಡೊಯ್ಯುತ್ತವೆ.
ನಿಮಗೊಂದು ಮುಖ್ಯವಾದ ವಿಷಯವನ್ನು ತಿಳಿಸಲು ಇಚ್ಛಿಸುತ್ತೇನೆ. ನೀವು ನಿಮ್ಮ ಈ ಪ್ರಯಾಣವನ್ನು ಮುಗಿಸಿ, ಹರಿದ್ವಾರಕ್ಕೆ ಹಿಂದಿರುಗಿದಾಗ, ಪ್ರವಾಸವನ್ನು ಕೈಗೊಂಡಾಗಿನ ವ್ಯಕ್ತಿಗಿಂತ ಬೇರೆಯಾಗಿರುತ್ತೀರಿ ಎಂದು ಆಶ್ವಾಸನೆ ಕೊಡಬಲ್ಲೆ. ವಾಸ್ತವವಾಗಿ ನಿಮ್ಮ ವ್ಯಕ್ತಿತ್ವದಲ್ಲಿ ಬಹಳಷ್ಟು ಪರಿವರ್ತನೆ ಕಂಡು ಬರುತ್ತದೆ. ನೀವು ಅನುಭವಿಸುವ ಪ್ರಜ್ಞಾಪೂರ್ವಕ ಬೆಳವಣಿಗೆ ಹಾಗೂ ಪ್ರಜ್ಞಾಪೂರ್ವಕ ವಿಸ್ತರಣೆ ನಿಮ್ಮ ಮೂಲ ಅಸ್ತಿತ್ವದ ಒಂದು ಭಾಗವಾಗಿ, ನಿಮ್ಮಲ್ಲಿ ಜಾಗೃತವಾಗಲು ಮೊದಲಾಗುತ್ತದೆ ಎಂದು ಆಶ್ವಾಸನೆ ನೀಡುತ್ತೇನೆ.
ಪ್ರತಿಯೊಂದು ಹಿಮಾಲಯ ಪ್ರವಾಸದಲ್ಲಿಯೂ ಒಂದು ವಿಷಯವನ್ನು ಚರ್ಚೆಗೆ ಆಯ್ತು ಕೊಳ್ಳಲಾಗುತ್ತದೆ. ಮೊದಲನೆಯ ಪ್ರವಾಸದಲ್ಲಿ ನಾವು ಮೂರು ಪ್ರಮುಖವಾದ ಉಪನಿಷತ್ತುಗಳನ್ನು ಆಯ್ತು ಕೊಂಡಿದ್ದೆವು - ಈಶೋಪನಿಷತ್ತು, ಕೇನೋಪನಿಷತ್ ಹಾಗೂ ಕಠೋಪನಿಷತ್. ಉಪನಿಷತ್ ಎಂದರೇನು ? 'ಉಪನಿಷತ್' ಎಂದರೆ 'ಕುಳಿತುಕೊಳ್ಳುವುದು', ಉಪನಿಷತ್ ಎಂಬ ಪದದ ಅನುವಾದವನ್ನು ತಿಳಿಯಿರಿ. ಅದರರ್ಥ 'ಕುಳಿತುಕೊಳ್ಳುವುದು' ಎಂದಷ್ಟೇ ಹೊರತು ಬೇರೇನೂ ಅಲ್ಲ. ಕೇವಲ ಗುರುಗಳ ಬಳಿ ಕುಳಿತುಕೊಳ್ಳುವುದೇ ಎಲ್ಲಾ ಕೆಲಸವನ್ನೂ ಮಾಡುತ್ತದೆ!
ಗುರುವು ಒಂದು ಪ್ರಬಲವಾದ ಸಿಡಿಮದ್ದಿನಂತೆ - ಚಾಲಕಶಕ್ತಿ ಮತ್ತು ವಜ್ರ! ಪ್ರತಿಯೊಂದು ಕಲ್ಲಿನಲ್ಲೂ ವಜ್ರದ ಒಂದಂಶ ವಿರುತ್ತದೆ. ಕಲ್ಲು ವಜ್ರವಾಗಿ ಹೊರಬರಲು ನಾವು ಮಾಡಬೇಕಾದುದೇನೆಂದರೆ, ಕಲ್ಲನ್ನು ಚೂಪಾಗಿಸಿ, ಮೆರುಗು ನೀಡುವುದು. ಅದೇ ರೀತಿ, ಪ್ರತಿಯೊಬ್ಬರಲ್ಲೂ ಅಡಗಿದೆ ಜ್ಞಾನೋದಯ. ಪ್ರತಿಯೊಬ್ಬರಲ್ಲೂ ಅಡಗಿದೆ ನಿತ್ಯಾನಂದ - ನಿರಂತರವಾದ ಆನಂದ.
ಒಂದು ದೊಡ್ಡ ಕಲ್ಲನ್ನು ಸುತ್ತುತ್ತಿರುವ ವಜ್ರದ ಅಲಗಿನ ಕೆಳಗೆ ತಂದರೆ ಏನಾಗುತ್ತದೆ? ಆ ಕಲ್ಲು ಕತ್ತರಿಸಲ್ಪಟ್ಟು, ಕೆತ್ತಲ್ಪಟ್ಟು, ಮೆರುಗು ಹೊಂದಿ, ವಜ್ರವೇ ಆಗುವಷ್ಟರಲ್ಲಿ, ವಜ್ರದ ಭಾಗವೊಂದುಳಿದು ಮಿಕ್ಕೆಲ್ಲವೂ ತೆಗೆದುಹಾಕಲ್ಪಡುತ್ತದೆ. ನಾನು ಹೇಳುತ್ತಿರುವುದು ಸರಿ ತಾನೆ? ಅದೇ ರೀತಿ, ನೀವು ಒಬ್ಬ ದೇಹಧಾರಿಗಳಾದ ಗುರುಗಳ ಸಾನ್ನಿಧ್ಯಕ್ಕೆ ಬಂದಾಗ, ನಿಮ್ಮಲ್ಲಿರುವ ಮಿಥ್ಯತೆಯು ಸಂಪೂರ್ಣವಾಗಿ ಅದೃಶ್ಯವಾಗುತ್ತದೆ. ನಿಮ್ಮೊಳಗಿರುವ ದುರ್ಮಾಂಸದ ಗಡ್ಡೆಗಳು ತಾವಾಗಿಯೇ ಮಾಯವಾಗುತ್ತದೆ. ಕಲ್ಲು ಎಂತಹದೇ ಆದರೂ, ಶಕ್ತಿಯುತವಾದ ವಜ್ರದ ಅಲಗಿನಿಂದ ಕಲ್ಲನ್ನು ಕೆತ್ತಿದಾಗ, ವಜ್ರದ ಭಾಗವನ್ನು ಬಿಟ್ಟು ಉಳಿದೆಲ್ಲವೂ ನಿರ್ಮೂಲವಾಗುತ್ತದೆ.
ಅದೇ ರೀತಿ ಒಬ್ಬ ಸಜೀವ ಗುರುಗಳು ನಿಮ್ಮ ಬಳಿ ಬಂದಾಗ ಅಥವಾ ನೀವು ಒಬ್ಬ ಸಜೀವ ಗುರುಗಳ ಸಾನ್ನಿಧ್ಯಕ್ಕೆ ಹೋದಾಗ, ನಿಮ್ಮಲ್ಲಿರುವ ನಿತ್ಯಾನಂದ ಒಂದುಳಿದು, ಮಿಕ್ಕೆಲ್ಲವೂ ಚಿಕ್ಕ ಚೂರುಗಳಾಗಿ ಹರಿದು, ಕರಗಿ ಹೋಗುತ್ತದೆ. ಆದ್ದರಿಂದಲೇ ನಾನು ಹೇಳುವುದು - ಗುರುವು ನಿಮ್ಮಲ್ಲಿ ಯಾವ ದುರ್ಮಾಂಸವನ್ನೂ ಒಳಗಿರಲು ಬಿಡದೆ, ಎಲ್ಲವನ್ನೂ ಹೊರತೆಗೆಯುವ ಒಬ್ಬ ಮಹಾನ್ ಶಸ್ತ್ರವೈದ್ಯ ಎಂದು. ನೀವು ಏನನ್ನಾದರೂ ಮುಚ್ಚಿಟ್ಟರೆ, ಅದು ಗುರುವಿಗೆ ತಿಳಿಯುತ್ತದೆ. ಗುರುವಿನಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ನೀವು ಮುಚ್ಚಿಟ್ಟಿದ್ದನ್ನು ಅವರು ಕೂಡಲೆ ಹೊರತೆಗೆಯುತ್ತಾರೆ. ನೀವು ಒಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡರೆ, ಅವರು ನಿಮ್ಮನ್ನು ಕಂಡು ಹಿಡಿಯುತ್ತಾರಲ್ಲದೆ, ಅವರು ಹೇಗೆ ನಿಮ್ಮನ್ನು ಹಿಡಿದರೆಂಬುದೂ ನಿಮಗೆ ತಿಳಿಯುವುದಿಲ್ಲ. ನಿಮ್ಮಲ್ಲಿ ಹಾಗಾಗುವುದನ್ನು ಸುಮ್ಮನೆ ಕಾಣುತ್ತೀರಿ ಅಷ್ಟೇ.
ಗುರುಗಳು ಮಾತನಾಡಬೇಕಾದ ಅವಶ್ಯಕತೆಯೇ ಇಲ್ಲ. ಅವರ ಒಂದು ನೋಟವೇ ಸಾಕು. ಕೇವಲ ಒಂದು ನೋಟದಿಂದಲೇ ಅವರು ನಿಮ್ಮಲ್ಲಿ ಸಂಸ್ಕರಣೆಯನ್ನು ಆರಂಭಿಸಲು ಸಾಧ್ಯ. ಅವರ ಒಂದು ನೋಟದಿಂದ ನಿಮ್ಮ ಮೇಲೆ ಪ್ರೀತಿಯ ಮಳೆಗರೆದು ನೀವು ಸ್ವರ್ಗದಲ್ಲಿರುವಂತೆ ಮಾಡಬಹುದು. ತಿಳಿಯಿರಿ, ಕೇವಲ ಒಂದು ನೋಟವೇ ಸಾಕು. ಬೇರೆ ಯಾವುದರ ಅಗತ್ಯವೂ ಇಲ್ಲ. ಏಕೆಂದರೆ ಗುರುವು ಒಂದು ಅತಿಶಯವಾದ ಶಕ್ತಿ.
ನಾನು ಈಗಾಗಲೇ ವಿವರಿಸಿರುವ ಹಾಗೆ, ಉಪನಿಷತ್ ಎಂದರೆ 'ಕುಳಿತುಕೊಳ್ಳುವುದು' - ಎಂದರೆ ಕುಳಿತುಕೊಳ್ಳುವುದೇ ಹೊರತು, ಮತ್ತೇನೂ ಅಲ್ಲ. ಶಿಷ್ಯನು ಗುರುವಿನ ಬಳಿ ಕುಳಿತಾಗ, ಗುರುವಿನಲ್ಲಿ ಉಂಟಾದ ಅದೇ ಅನುಭವವು ಶಿಷ್ಯನಲ್ಲಿಯೂ ಆಗುತ್ತದೆ. ಯಾವ ಶಿಷ್ಯನು ಗುರುವಿನ ಅನುಭವಗಳನ್ನೇ ಪಡೆದಿರುವನೋ, ಯಾವ ಶಿಷ್ಯನಲ್ಲಿ ಗುರುವು ಪುನರುತ್ಪಾದಿಸಲ್ಪಟ್ಟಿರುವನೋ, ಆ ಶಿಷ್ಯನು ತನ್ನಲ್ಲಿ ಸಂಸ್ಕರಣೆಯು ಹೇಗಾಯಿತೆಂಬ ಸ್ಮರಣೆಗಳನ್ನು ಬರೆದಿಡುತ್ತಾನೆ: ತನ್ನಲ್ಲಿ ಆ ಅನುಭವವು ಹೇಗೆ ಪುನುರುತ್ಪಾದಿಸಿತೆಂದು ಬರೆದಿಡುತ್ತಾನೆ. ಸಂಸ್ಕರಣೆಯ ಪ್ರಾರಂಭದಲ್ಲಿ ಅವನಲ್ಲೇನಾಯಿತು, ಸಂಸ್ಕರಣೆಯ
ಅವನಲ್ಲಿ ಹೇಗೆ ಮುಕ್ತಾಯಗೊಂಡಿತು, ಹಾಗೂ ಅದು ಮುಕ್ತಾಯಗೊಂಡಾಗ, ಅವನಲ್ಲೇನಾಯಿತು ಎಂದು ಬರೆದಿಡುತ್ತಾನೆ. ಅವನ ಆ ವರದಿಯೇ 'ಉಪನಿಷತ್' ಎಂದು ಉಲ್ಲೇಖಿಸಲಾಗಿದೆ.
ಮೊದಲನೆಯ ಹಿಮಾಲಯ ಪ್ರವಾಸದಲ್ಲಿ, ಮೂರು ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದೆವು. ಈಶ, ಕೇನ ಹಾಗೂ ಕಠ. ಎರಡನೆಯ ಹಿಮಾಲಯ ಪ್ರವಾಸದಲ್ಲಿ ಒಂದು ಸುಂದರ ವಿಷಯವಾದ ಗುರು-ಶಿಷ್ಯರ ಸಂಬಂಧದ ಬಗ್ಗೆ ಚರ್ಚಿಸಿದೆವು. ಈ ಗುರುಶಿಷ್ಯ ಸಂಬಂಧದ ಅವಶ್ಯಕತೆಗೆ 'ನಿತ್ಯೋಪನಿಷತ್' - 'ನಿರಂತರವಾದ ಉಪನಿಷತ್' ಎಂದು ಹೆಸರಿಸಿದ್ದೇನೆ.
ಮೂರನೆಯ ಈ ಹಿಮಾಲಯ ಪ್ರವಾಸದಲ್ಲಿ ನಾನು ನನ್ನ ದೈವಿಕ ಹಾಗೂ ಆಧ್ಯಾತ್ಮಿಕ ಅನುಭವಗಳ ಬಗ್ಗೆ ಮಾತನಾಡುತ್ತೇನೆ. ತಿಳಿಯಿರಿ, ನನ್ನ ಈ ಪ್ರವಚನಗಳ ಮೂಲಕ, ನಾನು ಹುಟ್ಟಿದಾಗಿನಿಂದ ನನಗಾದ ದೈವಿಕ ಹಾಗೂ ಆಧ್ಯಾತ್ಮಿಕ ಅನುಭವಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ನೀವು ಯೋಚಿಸಬಹುದು, 'ಸ್ವಾಮೀಜಿಯವರ ಅನುಭವಗಳಿಂದ ನನಗೇನು ಪ್ರಯೋಜನ' ಎಂದು. ನಾನಿದನ್ನು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಸುಂದರವಾದ ಮಾತುಗಳಿಂದ ವಿವರಿಸುತ್ತೇನೆ. ಶ್ರೀ ಕೃಷ್ಣನು 'ನೀವು ನನ್ನ ಜೀವನವನ್ನು, ನನ್ನ ಜೀವನದ ಸ್ವಭಾವವನ್ನೂ ತಿಳಿದರೆ, ಮರಣವನ್ನು ಅನುಭವಿಸುವುದಿಲ್ಲ, ಮೋಕ್ಷವನ್ನು ಪಡೆಯುತ್ತೀರಿ' ಎಂದು ಹೇಳಿದ್ದಾನೆ. ಮುಖ್ಯವಾಗಿ ಶ್ರೀ ಕೃಷ್ಣನು 'ನನ್ನ ಸ್ವಭಾವವನ್ನು ತಿಳಿದರೆ, ಮೋಕ್ಷವನ್ನು ಪಡೆಯುತ್ತೀರಿ', ಎಂದು ಹೇಳಿದಾಗ, ನಿಮಗೆ ಆಶ್ಚರ್ಯವಾಗಬಹುದು. ನೀವಿದನ್ನು ಅನುಮಾನಿಸಿ, 'ಶ್ರೀ ಕೃಷ್ಣನು ಹೇಳುತ್ತಿರುವುದೇನು' ಎಂದೋ ಅಥವಾ 'ಶ್ರೀ ಕೃಷ್ಣನ ಸ್ವಭಾವವನ್ನು ತಿಳಿದರೆ, ನಾನು ಹೇಗೆ ಮೋಕ್ಷವನ್ನು ಪಡೆಯಬಲ್ಲೆ' ಎಂದೋ ಆಶ್ಚರ್ಯಪಡಬಹುದು. ನಿಮಗೆ ಒಂದು ಸಣ್ಣ ಕಥೆಯನ್ನು ಉದಾಹರಿಸಿ ಹೇಳುತ್ತೇನೆ.
ಒಂದು ಸಣ್ಣ ಕಥೆ
ಈ ಕಥೆಯನ್ನು ನೀವು ನನ್ನಿಂದ ಈಗಾಗಲೇ ಕೇಳಿರಬಹುದು. ಆದರೆ ನನಗೆ ಕಥೆಯನ್ನು ಹೇಳಲು ಬಹಳ ಇಷ್ಟ ಹಾಗೂ ಕಥೆ ಹೇಳುವ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಮುಖ್ಯವಾಗಿ ಈ ಕಥೆಗೆ ಅದೆಷ್ಟು ಆಧ್ಯಾತ್ಮಿಕ ಭಾವವಿದೆ ಎಂದರೆ ನಾನು ಇದನ್ನು ಪದೇ ಪದೇ ಹೇಳಲು ಸಂತೋಷಿಸುತ್ತೇನೆ.
ಈ ಕಥೆಯು ಇನ್ನು ಕೇವಲ ಸ್ವಲ್ಪ ಸಮಯದಲ್ಲೇ ಹೆರಿಗೆಯಾಗುವ ಒಂದು ಗರ್ಭಿಣಿ ಸಿಂಹಿಣಿಯ ಕುರಿತಾಗಿದೆ. ಆ ಸಿಂಹಿಣಿಯು ತನ್ನ ಆಹಾರವನ್ನು ಹುಡುಕುತ್ತಾ ಅಲೆಯುತ್ತಿತ್ತು. ಕೂಡಲೇ ಒಂದು ಮೇಕೆಯ ಹಿಂಡನ್ನು ಕಂಡಿತು. ‘ಮೇಕೆ’ ಎಂದರೆ ನಾಲ್ಕು ಕಾಲುಗಳುಳ್ಳ ಒಂದು ಬಾಲ ಹಾಗೂ ಎರಡು ಕೊಂಬುಗಳುಳ್ಳ ಬ್ಯಾ ಬ್ಯಾ ಎಂದು ಅರಚುವ ಪ್ರಾಣಿ ಎಂದು ನಿಮಗೆ ತಿಳಿದಿದೆಯಲ್ಲವೆ?
ಈಗ ನಾನು ನಿಮ್ಮಲ್ಲಿ ಮೇಕೆಯ ವೀಕ್ಷಣೆಯನ್ನು ಸರಿಯಾಗಿ ಸೃಷ್ಟಿಸಿದ್ದೇನಲ್ಲವೆ?
ನಾನು ನನ್ನ ಮನಸ್ಸಿನಲ್ಲಿನ ಚಿತ್ರವನ್ನು ನಿಮ್ಮ ಮನಸ್ಸಿನಲ್ಲಿ ಮೂಡಿಸಲು ಬೇಕಾಗುವ ಸರಿಯಾದ ಭಾಷೆಯನ್ನು ಬಳಸಿರುವೆನೆಂದು ಕೊಂಡಿದ್ದೇನೆ. ನನ್ನ ಮನದಲ್ಲಿ ಬಂದುದೆಲ್ಲವನ್ನೂ ನಿಮ್ಮ ಮನಸ್ಸಿಗೆ ವರ್ಗಾಯಿಸಿದ್ದೇನೆ.
ಯಾವನು ತನ್ನ ಮನದಲ್ಲಿನ ಚಿತ್ರವನ್ನು ಇನ್ನೊಬ್ಬನ ಮನದಲ್ಲಿ ಮೂಡಿಸುವನೋ ಅವನು ಮಹಾ ಭಾಷಣಕಾರನಾಗುತ್ತಾನೆ. ಈ ಭಾಷಣಕಾರನು ತನ್ನ ಕೆಲಸವನ್ನು ಮಾಡಲು ಬಳಸುವ ಸಾಧನವೇ ಭಾಷೆ; ಯಾವಾಗ ತನ್ನಲ್ಲಾದ ಆತ್ಮಾನubhವವನ್ನು ಮತ್ತೊಬ್ಬನಲ್ಲಿ ಪುನರುತ್ಪಾದಿಸುತ್ತಾನೆಯೋ ಅದನ್ನು
ಜ್ಞಾನೋದಯವೆನ್ನುತ್ತಾರೆ. ಈ ಅನುಭವವನ್ನು ವರ್ಗಾಯಿಸುವ ವಿಧಾನವೇ ಧ್ಯಾನ.
ಯಾರು ತನ್ನ ಯೋಚನಾಶಕ್ತಿಯಲ್ಲಿರುವ ದೃಶ್ಯವನ್ನು ಇನ್ನೊಬ್ಬರಲ್ಲಿ ಮೂಡಿಸುತ್ತಾನೆಯೋ ಅವನೇ ಆಚಾರ್ಯ. ಯಾವೊಬ್ಬನು ತನ್ನಲ್ಲಾದ ಆತ್ಮಾನುಭವವನ್ನು ಮತ್ತೊಬ್ಬನಲ್ಲಿ ಉಂಟುಮಾಡುತ್ತಾನೆಯೋ ಅವನೇ ಗುರು. ಒಬ್ಬ ಆಚಾರ್ಯನಿಗೂ ಹಾಗೂ ಒಬ್ಬ ಗುರುವಿಗೂ ಇರುವ ವ್ಯತ್ಯಾಸವೇ ಇದು. ಆಚಾರ್ಯನು ದೃಶ್ಯವನ್ನು ಪುನರುತ್ಪಾದಿಸುತ್ತಾನೆ. ಗುರುವು ತನ್ನ ಅನುಭವವನ್ನು ಪುನರುತ್ಪಾದಿಸುತ್ತಾನೆ.
ಈಗ ಕಥೆಯನ್ನು ಮುಂದುವರಿಸೋಣ. ಸಿಂಹಿಣಿಯು ಆಹಾರಕ್ಕಾಗಿ ಮೇಕೆಯ ಮಂದೆಯ ಮೇಲೆ ಆಕ್ರಮಣ ಮಾಡಿತು. ಅದು ಥಟ್ಟನೆ ಮೇಲೆರಗಿತಾದರೂ ನೆಗೆಯಲು ಸಾಧ್ಯವಾಗಲಿಲ್ಲ. ಇದರಿಂದ ದೇಹದ ಶ್ರಮವು ಅತಿಯಾಗಿ, ಆ ಕೂಡಲೆ ತನ್ನ ಮರಿಗೆ ಜನ್ಮವಿತ್ತು, ಅಸು ನೀಗಿತು.
ಪುಟ್ಟ ಸಿಂಹದ ಮರಿಗೆ ಕಣ್ಣು ಬಿಡಲೂ ಸಾಧ್ಯವಾಗದೆ, ಸಣ್ಣದಾಗಿ ಮುಲುಗುತ್ತಾ ಏನು ಮಾಡಬೇಕೆಂದು ತಿಳಿಯದೆ, ನೆಲದಲ್ಲಿ ಬಿದ್ದು ಹೊರಳಾಡತೊಡಗಿತು. ಅಲ್ಲಿದ್ದ ಮೇಕೆಗಳು ಈ ಅಸಹಾಯಕ ಸಿಂಹದ ಮರಿಯನ್ನು ಕಂಡು ಮರುಕಗೊಂಡವು. ಒಂದು ಸಿಂಹದ ಮರಿಯ ಬಗ್ಗೆ ಮೇಕೆಗಳು ಹೇಗೆ ಅನುಕಂಪ ತೋರಿಸಲು ಸಾಧ್ಯವೆಂದು ನೀವು ಯೋಚಿಸಬಹುದು. ತಿಳಿಯಿರಿ, ನಿಮ್ಮ ಶತ್ರುವು ಯಾವ ರೀತಿಯಾದ ತೊಂದರೆಯನ್ನೂ ಮಾಡದಿದ್ದಾಗ, ಇದರ ಅರ್ಥ ಹೆದರಿಕೆಯನ್ನು ಉಂಟು ಮಾಡದೇ ಇದ್ದಾಗ, ಸ್ವಭಾವತಃ ಅದು ನಿಮ್ಮ ಶತ್ರುವೇ ಆಗಿದ್ದರೂ, ಅದರ ಬಗ್ಗೆ ನಿಮಗೆ ಅನುಕಂಪ ಮೂಡುತ್ತದೆ. ಅದೇ ರೀತಿ, ಮೇಕೆಗಳಿಗೆ ಸಿಂಹದ ಮರಿಯಿಂದ ಹೆದರಿಕೆ ಆಗದಿದ್ದ ಕಾರಣ, ಅವು ಆ ಮರಿಗೆ ಪ್ರೀತಿಯನ್ನು ತೋರಿಸ ತೊಡಗಿದವು.

ಪ್ರಖ್ಯಾತ ಗುರುಗಳಾದ ಪತಂಜಲಿಯವರು ತಮ್ಮ ಶಾಸ್ತ್ರ ಗ್ರಂಥವಾದ ‘ಪತಂಜಲಿ ಯೋಗ ಸೂತ್ರ’ದಲ್ಲಿ ಹೀಗೆ ಹೇಳಿದ್ದಾರೆ: ‘ಅಹಿಂಸಾ ಪರಿಷ್ಠಾಯ ವೈರಾಗ್ಯಾಃ’ ಎಂದು. ಈ ಸಾಲಿನ ಬಗ್ಗೆ ವ್ಯಾಖ್ಯಾನಕಾರರು ನೀಡಿರುವ ವಿವರಣೆ ಏನೆಂದರೆ, ನೀವು ಅಹಿಂಸೆಯಲ್ಲಿ ನೆಲೆಗೊಂಡಿದ್ದರೆ, ಪ್ರಾಣಿಗಳೂ ಸಹ ನಿಮ್ಮ ಸಮ್ಮುಖದಲ್ಲಿ ಜಗಳವಾಡುವುದಿಲ್ಲ! ನಿಮ್ಮ ಸಾನಿಧ್ಯವು ಎಷ್ಟು ತೀವ್ರವಾಗಿ ಅಹಿಂಸೆಯನ್ನು ಹೊರಸೂಸುತ್ತದೆಂದರೆ, ನಿಮ್ಮ ಸುತ್ತಮುತ್ತ ಇರುವ ಪ್ರಾಣಿಗಳು ಒಂದಕ್ಕೊಂದು ಜಗಳವಾಡುವುದಿಲ್ಲ. ನಿಮ್ಮನ್ನು ಘಾಸಿಮಾಡುವ ನಿಮ್ಮಿಂದ ಯಾರಿಗೂ ಅಪಾಯವಿಲ್ಲದಿದ್ದರೆ, ಮತ್ತು ನಿಮ್ಮಿಂದ ಯಾರಿಗೂ ಭಯ ಉಂಟಾಗದೇ ಇದ್ದರೆ, ನಿಮಗೂ ಯಾರಿಂದಲೂ ಭಯ ಉಂಟಾಗುವುದಿಲ್ಲ.
ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ: ನೀವು ಜನರನ್ನು ಹೆದರಿಸದೆ ಇದ್ದರೆ, ಅವರೂ ನಿಮ್ಮನ್ನು ಹೆದರಿಸುವುದಿಲ್ಲ. ನಿಮಗೆ ಯಾರಿಂದಲಾದರೂ ಭಯವುಂಟಾದರೆ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಆತ್ಮ ಶೋಧನೆ. ನಿಮ್ಮಿಂದ ಅವರಿಗೆ ಏಕೆ ಭಯವುಂಟಾಯಿತೆಂಬ ಕಾರಣಗಳನ್ನು ಅವಲೋಕಿಸಿರಿ. ಹಾಗೂ ಅದು ತಿಳಿದ ನಂತರ, ಅದನ್ನು ನಿಮ್ಮ ಜೀವನದಿಂದ ತೆಗೆದುಹಾಕಿರಿ.
ಆಗ ನಿಮಗೆ ಅವರಿಂದಾಗಲೀ ಅವರಿಂದ ನಿಮಗಾಗಲೀ ಭಯವು ಇನ್ನೆಂದಿಗೂ ಆಗದು. ನಿಮಗೆ ಯಾರಿಂದಲಾದರೂ ಭಯವುಂಟಾದರೆ, ಅಥವಾ ನಿಮಗೆ ಒಬ್ಬ ಶತ್ರುವಿದ್ದರೆ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ, ನಿಮ್ಮನ್ನೇ ಅವಲೋಕಿಸುವುದು ಮತ್ತು ನೀವು ಅವನಲ್ಲಿ ಹೇಗೆ ಹೆದರಿಕೆಯನ್ನುಂಟು ಮಾಡುತ್ತಿದ್ದೀರೆಂದು, ಅವನ ಹಿತಾಸಕ್ತಿಗಳಿಗೆ ಯಾವ ರೀತಿ ತೊಂದರೆ ಪಡಿಸುತ್ತಿದ್ದೀರೆಂದು ನಿರ್ಣಯಿಸುವುದು. ಅದರ ಬಗ್ಗೆ ಚಿಂತಿಸಿ, ಅದನ್ನು ತೆಗೆದುಹಾಕಿರಿ. ಆಗ ಅವನು ನಿಮ್ಮನ್ನು ಇನ್ನೆಂದಿಗೂ ಹೆದರಿಸಲಾರ. ನಿಮ್ಮಲ್ಲಿ ಭಯವು ಸುಮ್ಮನೆ ಮಾಯವಾಗುವುದನ್ನು ಕಾಣುತ್ತೀರಿ.
ಭೂಮಿಯ ಮೇಲೆ ಎಲ್ಲಾ ಜೀವಿಗಳೂ ಸ್ವಭಾವತಃ ಅಹಿಂಸೆಯಲ್ಲಿ ನೆಲೆಸಿರುತ್ತವೆ. ನಿಮ್ಮನ್ನೇ ನೀವು ಪ್ರೀತಿಸುವುದರಿಂದ, ಇತರರನ್ನೂ ಪ್ರೀತಿಸುವುದು ನಿಮ್ಮ ಸಹಜ ಪ್ರವೃತ್ತಿಯಾಗಿರುತ್ತದೆ ಎಂದು ತಿಳಿದುಕೊಳ್ಳಿ. ಈ ಸ್ವಭಾವದಿಂದಲೇ ಆತ್ಮ ಸಂರಕ್ಷಣೆಯ ಸಹಜ ಪ್ರವೃತಿ ಹಾಗೂ ಇತರ ಜೀವಿಗಳ ಬಗ್ಗೆ ಅನುಕಂಪವು ನಿಮ್ಮಲ್ಲಿ ಇರುತ್ತದೆ.
ಆದ್ದರಿಂದ ನೋಡಿರಿ, ಈ ಕಥೆಯಲ್ಲಿ, ಮೇಕೆಗಳಿಗೆ ಸಿಂಹದ ಮರಿಯ ಬಗ್ಗೆ ಭಯವಾಗಲಿಲ್ಲ. ಸಿಂಹದ ಮರಿಯು ತಮ್ಮಮೇಲೆ ದಾಳಿ ಮಾಡುವುದಿಲ್ಲವೆಂಬ ಕಾರಣದಿಂದ, ಮೇಕೆಗಳಿಗೆ ಅದರ ಬಗ್ಗೆ ಅನುಕಂಪವನ್ನು ತೋರಲು ಸಾಧ್ಯವಾಯಿತು. ಮೇಕೆಗಳು ಆ ಸಿಂಹದ ಮರಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಂಡು, ಅವುಗಳಿಗೆ ತಿಳಿದ ರೀತಿಯಲ್ಲಿ ಆ ಮರಿಯನ್ನೂ ತಮ್ಮೊಂದಿಗೆ ಸಾಕತೊಡಗಿದವು. ಅದಕ್ಕೆ ಹುಲ್ಲುತಿನ್ನಲು ಹೇಳಿಕೊಟ್ಟು, ಮೇಕೆಯ ಹಾಲನ್ನು ಕುಡಿಯುವದನ್ನು ಕಲಿಸಿ ಅವುಗಳ ಹಾಗೆಯೇ ಬದುಕಲು ಕಲಿಸಿ , ಅವುಗಳ ಹಾಗೆಯೇ ಬ್ಯಾ ಎನ್ನುವುದನ್ನು ಕಲಿಸಿದವು !
ಆ ಸಿಂಹದ ಮರಿಯು ಮೇಕೆಗಳ ಹಾಗೆಯೇ ವರ್ತಿಸುವುದನ್ನು ಕಲಿಯಿತು. ಹುಟ್ಟಿದಂದಿನಿಂದಲೂ, ಯಾರೂ ಸಹ ಅದಕ್ಕೆ ಅದು ಒಂದು ಸಿಂಹವೆಂದು ತಿಳಿಸಿರಲಿಲ್ಲ. ಹಾಗಾಗಿ, ಆ ಮರಿಗೆ ಆ ವಿಷಯವೇ ತಿಳಿದಿರಲಿಲ್ಲ. ಅದು ಮೇಕೆಗಳ ಜೊತೆಗೆ ಅವುಗಳ ಹಾಗೆಯೇ ಬೆಳೆಯಿತು. ಮೇಕೆಗಳಿಗೂ ಸಹ ಅವುಗಳ ಮಧ್ಯೆ ಒಂದು ಸಿಂಹದ ಮರಿಯು ಇರುವುದು ಯಾವ ರೀತಿಯಲ್ಲಿಯೂ ಮುಜುಗರವಾಗಲಿಲ್ಲ.
ಸಿಂಹದ ಮರಿಯು ಬೆಳೆದಂತೆಲ್ಲಾ ತನ್ನ ಸ್ವಾಭಾವಿಕವಾದ ಶಕ್ತಿಯನ್ನು ಹೊರಪಡಿಸುತ್ತಿತ್ತು. ಇತರ ಮೇಕೆಗಳ ಜೊತೆಗೆ ಜಗಳವಾಡಿ, ಹೊಡೆದಾಗ, ಅದರ ಏಟು ಬಲವಾಗಿರುತ್ತಿತ್ತು. ಮೇಕೆ ಮರಿಗಳು ಸಿಂಹದ ಮರಿಯು ಜೋರಾಗಿ ಹೊಡೆಯುತ್ತದೆಂಬ ದೂರನ್ನು ತಾಯಿ ಮೇಕೆಯ ಬಳಿ ತಂದಾಗ, ಆ ತಾಯಿ ಮೇಕೆಯು ಅವನ್ನು ಸಮಾಧಾನ ಪಡಿಸಿ, ಅವರಾಡಿದ ಜಗಳವನ್ನು ಮರೆತು ಬಿಡಬೇಕೆಂಬ ಸಲಹೆ ನೀಡುತ್ತಿತ್ತು.
ಒಂದು ದಿನ, ಒಂದು ಸಿಂಹವು ಮೇಕೆಗಳ ಗುಂಪಿನ ಮೇಲೆ ದಾಳಿ ಮಾಡಿತು. ಹೆದರಿದ ಮೇಕೆಗಳು ದಿಕ್ಕಾಪಾಲಾಗಿ ಓಡಿಹೋದವು. ಮೇಕೆಗಳ ಜೊತೆಯಲ್ಲಿ ಒಂದು ಸಿಂಹದ ಮರಿಯೂ ಸಹ ಆ ಮೇಕೆಗಳಂತೆಯೇ ಅರಚುತ್ತಾ ಓಡಿ ಹೋಗುವುದನ್ನು ಸಿಂಹವು ನೋಡಿತು. ಸಿಂಹಕ್ಕೆ ಆ ಮರಿಯು ಮೇಕೆಗಳಂತೆಯೇ ಅರಚುತ್ತಾ ಹಾಗೇಕೆ ತನ್ನನ್ನು ಕಂಡು ಹೆದರಿ ಓಡುತ್ತಿದೆ ಎಂದು ತಿಳಿಯದಾಯಿತು.
ಸಿಂಹ ಹಾಗೂ ಮರಿಯ ಕಥೆ
ಮಾರನೆಯ ದಿನ, ಸಿಂಹವು ಮತ್ತೆ ಬಂದಿತು. ಈಗ ಅದು ಬಂದ ಕಾರಣ ಬೇಟೆಯಾಡಲು ಅಲ್ಲ; ಆ ಸಿಂಹದ ಮರಿಯನ್ನು ಹಿಡಿಯಲು. ಆ ಮರಿಯನ್ನು ಕಂಡು, ಹಿಂದಿನಿಂದ ಮೆಲ್ಲನೆ ಬಂದು ಹಿಡಿಯಿತು. ಸಿಂಹವು ಆ ಮರಿಯನ್ನು ಹಿಡಿದ ಕೂಡಲೆ ಆ ಮರಿಯು 'ನನ್ನನ್ನು ಹೋಗಲು ಬಿಡು! ನನ್ನನ್ನು ಹೋಗಲು ಬಿಡು ! ಬ್ಯಾ.... ಬ್ಯಾ....' ಎಂದು ಅರಚಲಾರಂಭಿಸಿತು.
ಸಿಂಹವು ಘರ್ಜಿಸಿತು, ‘ಏ ಮೂರ್ಖ! ಹೆದರಬೇಡ, ನಾನು ನಿನ್ನನ್ನು ಕೊಲ್ಲುವುದಿಲ್ಲ. ನೀನು ಯಾರೆಂದು ನಿನಗೆ ತಿಳಿಯದೆ?’ ಎಂದು ಕೇಳಿತು.
ಸಿಂಹದ ಮರಿಯು ಅಳುತ್ತಾ, ‘ನಾನು ಒಂದು ಮೇಕೆಯ ಮರಿ ಎಂದು ನನಗೆ ತಿಳಿದಿದೆ. ನನ್ನನ್ನು ಹೋಗಲು ಬಿಡು! ನನ್ನನ್ನು ಹೋಗಲು ಬಿಡು!’ ಎಂದಿತು.
ಸಿಂಹವು ಹೇಳಿತು, ‘ಮೂರ್ಖ! ನೀನು ಮೇಕೆಯ ಮರಿಯಲ್ಲ! ನನ್ನನ್ನು ಕಂಡು ಹೆದರದಿರು’ ಎಂದು. ಆದರೂ ಸಿಂಹದ ಮರಿಯು ಹೇಗೋ ತಪ್ಪಿಸಿಕೊಂಡು, ಓಡಿ ಹೋಯಿತು.
ಮಾರನೆಯ ದಿನ ಸಿಂಹವು ಮತ್ತೆ ಬಂದಿತು. ಈ ಬಾರಿ ಸಿಂಹಮರಿಯನ್ನು ಗಟ್ಟಿಯಾಗಿ ಹಿಡಿಯಿತು.
ತಿಳಿಯಿರಿ, ಮೊದಲ ಬಾರಿ ಸಿಂಹದ ಮರಿಯು ತಪ್ಪಿಸಿಕೊಂಡು ಓಡಿಹೋಗುವುದು ನೀವು ಲೈಫ್ ಬ್ಲಿಸ್ ಕಾರ್ಯಕ್ರಮ (1ನೇ ಮಟ್ಟ) ಅಥವಾ ಆನಂದ ಸ್ಪುರಣ ಕಾರ್ಯಕ್ರಮದ ನಂತರ ಓಡಿ ಹೋದ ಹಾಗೆ. ಮೊದಲ ಬಾರಿ, ಸಿಂಹವು ಹೇಳಿತ್ತು. 'ಏ, ಮೂಢ, ನೀನು ಮೇಕೆಯಲ್ಲ, ನೀನು ಯಾರೆಂದು ನಿನಗೆ ತಿಳಿಯದೆ?’ ಎಂದು. ಆಗ ಸಿಂಹದ ಮರಿಯು ಹೇಳಿತ್ತು; 'ಇಲ್ಲ! ಇಲ್ಲ! ನಾನು ಮೇಕೆ! ನಾನು ಮೇಕೆ!’ ಎಂದು.


ಎರಡನೆಯ ಬಾರಿ, ನಿಮಗೆ ಈ ರೀತಿಯಾಗುವುದು ಲೈಫ್ ಬ್ಲಿಸ್ ಕಾರ್ಯಕ್ರಮ (2ನೇ ಮಟ್ಟ) ಅಥವಾ ನಿತ್ಯಾನಂದ ಸ್ಪರಣ ಕಾರ್ಯಕ್ರಮದಲ್ಲಿ! ಈ ಬಾರಿ ಸಿಂಹವು 'ನೀನು ಮೇಕೆಯಲ್ಲ' ಎಂದು ಹೇಳುವುದನ್ನು ನಿಲ್ಲಿಸುವುದಿಲ್ಲ. ಸಿಂಹವು ಸಿಂಹದ ಮರಿಗೆ ಅದು ನಿಜವಾಗಿ ಯಾರೆಂದು ತಿಳಿಸುತ್ತದೆ. 'ಎಲೋ ಮೂಢ, ನೀನು ಮೇಕೆಯಲ್ಲ, ನೀನೊಂದು ಸಿಂಹವೆಂದು ತಿಳಿ!' ಎಂದು ಹೇಳಿತು.
ಈ ವೇಳೆಗೆ ನೀವು ಗುರುಗಳನ್ನು ಅನುಮಾನಿಸುತ್ತೀರಿ: ಈ ಸಿಂಹವೇ ಆದ ಗುರುಗಳು ನನ್ನ ಮನವೊಲಿಸಿ, ನಾನು ಈ ನಿತ್ಯಾನಂದ ಸ್ಪುರಣ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಯತ್ನಿಸುತ್ತಿದ್ದಾರೆ ಎಂದು. 'ಈ ಗುರುಗಳು ನನ್ನಿಂದ ನನ್ನ ಹಣವನ್ನೋ, ನನ್ನ ಜೀವವನ್ನೋ ಅಥವಾ ಮತ್ತೇನನ್ನೋ ನನ್ನಿಂದ ತೆಗೆದುಕೊಳ್ಳಲು ಹೀಗೆ ಮಾಡುತ್ತಿರಬಹುದು. ಇಲ್ಲದಿದ್ದಲ್ಲಿ ಇವರು ನನ್ನ ಮೇಲೆ ಅವರ ಅತ್ಯಮೂಲ್ಯವಾದ ಸಮಯವನ್ನು ಏಕೆ ವ್ಯಯ ಮಾಡುತ್ತಿದ್ದಾರೆ? ಎನ್.ಎಸ್.ಪಿಯನ್ನು ಇಡೀ ನಾಲ್ಕು ದಿನಗಳು ನಿರ್ವಹಿಸುತ್ತಿದ್ದಾರೆ. ಈ ಪ್ರಪಂಚದಲ್ಲಿ ಏನನ್ನೂ ಬಯಸದೆ, ಯಾರು ತಾನೇ ಇಷ್ಟು ಸಮಯವನ್ನು ನನಗಾಗಿ ಕೊಡುತ್ತಾರೆ' ಎಂದು ಯೋಚಿಸುವಿರಿ.
ಸಿಂಹವು ಹೇಳಿದುದನ್ನು ಕೇಳಿ, ಸಿಂಹದ ಮರಿಯು ಯೋಚಿಸಿತು 'ಇಲ್ಲ! ನಾನು ಹುಟ್ಟಿದಂದಿನಿಂದಲೂ, ನಾನೊಂದು ಮೇಕೆ ಎಂದು ನನಗೆ ಚೆನ್ನಾಗಿ ತಿಳಿದಿದೆ' ಎಂದು. ಅದು ಮತ್ತಷ್ಟು ಜೋರಾಗಿ ಬ್ಯಾ...! ಬ್ಯಾ...! ಎಂದು ಅರಚಿಕೊಂಡಿತು. ಸಿಂಹದ ಮರಿಯ ಮನಸ್ಸಿನಲ್ಲಿ ಒಂದೆಡೆ ತಪ್ಪಿಸಿಕೊಳ್ಳುವ ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಸಿಂಹದ ಸ್ಪರ್ಶದಿಂದ ಒಂದು ರೀತಿಯ ಸಮಾಧಾನ ಪಡೆದಂತಿತ್ತು. ಸಿಂಹದ ಹಿತವಾದ ಸ್ಪರ್ಶವು ಸಿಂಹದ ಮರಿಗೆ ಸಾಂತ್ವನ ಹಾಗೂ ಸಮಾಧಾನಗಳನ್ನು ನೀಡಿದ್ದಲ್ಲದೆ, ಆಳವಾಗಿ ಏನನ್ನೋ ಜಾಗೃತಗೊಳಿಸಿದಂತಾಯಿತು. ಸಿಂಹವು ತನ್ನ ಹಿಡಿತದಿಂದ ಮರಿಯನ್ನು ಬಿಟ್ಟು, ಹೇಳಿತು, 'ನಾನು ನಾಳೆ ಮತ್ತೆ ಬರುತ್ತೇನೆ. ಆದರೆ ಆಗ ನಾನು ನಿನ್ನನ್ನು ಹಿಡಿಯುವುದಿಲ್ಲ' ಎಂದು ಹೇಳಿ ಕಾಡಿಗೆ ಹೋಯಿತು.
ಸಿಂಹದ ಮರಿಗೆ ಇಡೀ ರಾತ್ರಿ ದ್ವಂದ್ವ ಭಾವನೆಗಳುಂಟಾಗ ತೊಡಗಿದವು. ಆ ಮರಿಗೆ ಮೊದಲು ಹೀಗೆನಿಸಿತು, 'ಸಿಂಹವು ಹೇಳಿದ್ದನ್ನು ನಾನು ಒಪ್ಪಲಾರೆ' ಎಂದು. ಆದರೆ ಮತ್ತೆ ಅದು ಯೋಚಿಸಿತು, 'ಸಿಂಹವು ಹೇಳಿದ ಮಾತುಗಳಲ್ಲಿ ಸ್ವಲ್ಪ ಸತ್ಯವಿರಬಹುದು' ಎಂದು. ಮತ್ತೆ 'ಇಲ್ಲ! ಇಲ್ಲ! ಇಲ್ಲ! ಅದು ಹೇಳಿದ್ದು ಸರಿಯಲ್ಲ. ನಾನು ಮೇಕೆ ಎಂದುನಾನು ಹುಟ್ಟಿದಂದಿನಿಂದಲೂ ನನಗೆ ತಿಳಿದಿದೆ. ಸಿಂಹವು ಹೇಳಿದ್ದು ನನಗೆ ಸರಿ ಎನಿಸುವುದಿಲ್ಲ. ತನ್ನ ಸ್ವಾರ್ಥಕ್ಕಾಗಿ ಅದು ನನಗೆ ಸುಳ್ಳು ಹೇಳುತ್ತಿರಬೇಕು!' ಎಂದು.
ತಿಳಿಯಿತೆ, ಸಿಂಹವು ಸಿಂಹದ ಮರಿಯ ತರ್ಕವನ್ನು ಬಹಳವಾಗಿ ಮೀರಿ ಅದರ ಮನಸ್ಸನ್ನು ಹೊಕ್ಕಿದೆ. ನಿಮಗೆ ಸ್ಪಷ್ಟವಾಗಿ ಹೇಳಲು ಬಯಸುವುದೇನೆಂದರೆ, ಒಂದು ವೇಳೆ ಗುರುಗಳ ಇರುವಿಕೆಯು ನಿಮ್ಮ ತರ್ಕವನ್ನು ಮೀರಿ ಪರಿಣಾಮ ಬೀರಿದ್ದರೆ, ನಿಮ್ಮೊಳಗಿರುವ ಗುರುವು ಈಗಾಗಲೇ ಜಾಗೃತನಾಗಿರುವನೆಂದು ತಿಳಿಯಿರಿ! ನಿಮ್ಮೊಳಗಿರುವ ಸಿಂಹವು ಜಾಗೃತವಾಗುವವರೆಗೂ ನೀವು ಸಿಂಹದ ಜೊತೆ ಬಾಂಧವ್ಯವನ್ನು ಅನುಭವಿಸಲು ಸಾಧ್ಯವಿಲ್ಲ. ಒಂದು ವೇಳೆ ಸಿಂಹಕ್ಕೆ ಹೋಲಿಸಿರುವ ಗುರುಗಳ ಸ್ಪರ್ಶದಿಂದ ನಿಮ್ಮಲ್ಲೇನಾದರೂ ಸ್ವಲ್ಪ ಭಾವಪರವಶತೆಯೋ ಸ್ವಲ್ಪ ಸಾಂತ್ವನವೋ ದೊರಕಿದ್ದರೆ ಹಾಗೂ, ಅವರ ವೀಕ್ಷಣೆಯಿಂದಾಗಲೀ ನೆನಪಿನಿಂದಾಗಲೀ ನಿಮ್ಮ ಭಾವನೆಗಳು ಮತ್ತೆ ಮತ್ತೆ ಉಲ್ಲಾಸಗೊಂಡರೆ - ಸ್ಪಷ್ಟವಾಗಿ ತಿಳಿಯಿರಿ, ಗುರುಗಳು ಆಳವಾಗಿ ನಿಮ್ಮ ಮನ ಮುಟ್ಟಿದ್ದಾರೆ ಎಂದು. ನಿಮ್ಮ ಒಂದು ಭಾಗವು ಈಗಾಗಲೇ ಸಾಂತ್ವನ ಪಡೆದಿದೆ. ಗುರುಗಳು ಹೇಳುವುದರಲ್ಲಿ ಏನೋ ಸತ್ಯಾಂಶವಿದೆ ಎಂದು ನಿಮಗಾಗಲೇ ಅನಿಸಿದೆ. 'ನನಗೆ ಗುರುಗಳು ಹೇಳುವ ಮಾತುಗಳು ಅರ್ಥವಾಗದಿರಬಹುದು ಅಥವಾ ನಾನದನ್ನು ಒಪ್ಪದಿರಲೂ ಬಹುದು. ಆದರೂ ಅವರು ಹೇಳುವುದರಲ್ಲಿ ಏನೋ ಸತ್ಯಾಂಶವಿದೆ' ಎಂದು ನೀವು ಆಶ್ಚರ್ಯ ಪಡುತ್ತೀರಿ, 'ನಾನು ಅವರೊಡನೆ ಇನ್ನೂ ಸ್ವಲ್ಪ ಕಾಲ ಕಳೆಯಲೆ? ಮತ್ತೊಂದು ಶಕ್ತಿ ದರ್ಶನವನ್ನು ಪಡೆಯಲೆ? ಮತ್ತೊಂದು ಶಕ್ತಿ ದರ್ಶನ¹ ಯಾವಾಗ?' ಎಂದು ಯೋಚಿಸುವಿರಿ.
1. ಶಕ್ತಿ ದರ್ಶನವೆಂಬುದು ಗುರುಗಳಿಂದ ಶಿಷ್ಯನಿಗೆ ಶಕ್ತಿಯನ್ನು ವರ್ಗಾಯಿಸುವ ಒಂದು ಸ್ಪರ್ಶ.
ಮಾರನೆಯ ದಿನ ಸಿಂಹವು ಬಂದಾಗ, ಸಿಂಹದ ಮರಿಯು ಕಾಯುತ್ತಾ ನಿಂತಿತ್ತು.
ಇದೇ ರೀತಿ ಶಿಷ್ಯರೂ ಸಹ ಹೀಲರ್ಸ್ ದೀಕ್ಷೆಯ ಸಮಯದಲ್ಲಿ ಗುರುಗಳಿಗಾಗಿ ಕಾಯುತ್ತಿರುತ್ತಾರೆ! ಆದರೆ, ಆಗಲೂ ಸಹ ಹಳೆಯ ಭಯಗಳು ನಿಮ್ಮಲ್ಲಿ ಮೇಲೇಳುವುವು., 'ಓ! ಈಗ ನಾನು ಒಂದು ಹೀಲಿಂಗ್ ಕೇಂದ್ರವನ್ನು ಆರಂಭಿಸಬೇಕಲ್ಲವೆ? 'ನನ್ನ ಜೀವನ ವಿಧಾನದಲ್ಲಿ ಬದಲಾವಣೆಯನ್ನು ಹೊಂದಬೇಕಲ್ಲವೆ?' ಈಗ ನಾನೇನು ಮಾಡಲಿ'? ಎಂದುಕೊಳ್ಳುವಿರಿ.
ಮರಿ ಸಿಂಹವು ತಾಳ್ಮೆಯಿಂದ ಕಾಡಿನ ಅಂಚಿನಲ್ಲಿ ಸಿಂಹದ ಆಗಮನಕ್ಕಾಗಿ ಕಾಯುತ್ತಾ ನಿಂತಿತ್ತು. ಸಿಂಹವು ಕಂಡು ಬಂದಾಗಲಾದರೂ ಒಂದೆರಡು ಹೆಜ್ಜೆ ಹಿಂದೆಗೆದುಕೊಳ್ಳುತ್ತಾ, ಮೇಕೆಗಳ ಗುಂಪಿನತ್ತ ನಡೆಯಲಾರಂಭಿಸಿತು. ಆದರೂ ಆಶ್ಚರ್ಯಕರವಾಗಿ ಸಿಂಹವನ್ನು ನೋಡಬೇಕೆಂಬ ಆಸೆಯಿಂದ ಅದು ಸಿಂಹದ ದಿಕ್ಕಿನಲ್ಲೇ ಮುಖ ಮಾಡಿತ್ತು. ಮತ್ತೆ ಹಿಂದಕ್ಕೆ ಹೋಗುತ್ತಾ ಸಿಂಹಕ್ಕೆ ಹೇಳಿತು’, 'ನೀನು ಇರುವಲ್ಲಿಯೇ ಇರು. ನಾನು ಇಲ್ಲಿಂದಲೇ ಮಾತನಾಡುತ್ತೇನೆ. ನಾನು ನಿನ್ನನ್ನು ಮರೆಯಲಾಗದಿರುವುದು ಸತ್ಯ. ಆದರೂ ನಮ್ಮಿಬ್ಬರ ನಡುವೆ ಸ್ವಲ್ಪ ಅಂತರವಿರಲಿ ಎಂದು. ಸಿಂಹವು ಉತ್ತರಿಸಿತು, 'ನನಗದು ಪರವಾಗಿಲ್ಲ, ನೀನಿರುವಲ್ಲಿಯೇ ಇರು. ನಾವು ಈಗ ಮಾತನಾಡೋಣ' ಎಂದು.
ಸಿಂಹವು ಹೇಳಿತು 'ತಿಳಿದುಕೋ, ನೀನು ಒಂದು ಸಿಂಹ! ನೀನು ಬೇರೇನೋ ಆಗುವ ಪ್ರಯತ್ನದಲ್ಲಿ ನಿನ್ನ ನಿಜಸ್ವಭಾವವನ್ನು ನಿರ್ಲಕ್ಷಿಸುತ್ತಿದ್ದೀಯೆ! ಗಮನವಿಟ್ಟು ನೋಡು. ನಿನಗೂ ಹಾಗೂ ಆ ಮೇಕೆಗಳಿಗೂ ಇರುವ ವ್ಯತ್ಯಾಸವು ನಿನಗೇ ತಿಳಿಯುತ್ತದೆ' ಎಂದು.
ಸಿಂಹದ ಮರಿಯು ಕಿರುಚಿಕೊಂಡಿತು 'ಇಲ್ಲ! ಇಲ್ಲ! ಅದು ಹೇಗಾಗುತ್ತದೆ? ನಾನು ಸಹ ಅವುಗಳಂತೆ ಹುಲ್ಲುತಿನ್ನುತ್ತೇನೆ. ಅವುಗಳಂತೆಯೇ ನಾನೂ ಜೀವಿಸುತ್ತಿದ್ದೇನೆ' ಎಂದು.
ಇದು ನೀವು ನನಗೆ ಹೇಳುವಂತೆ, ‘ನಾನು ಹೇಗೆ ಜ್ಞಾನೋದಯ ಹೊಂದಲಿ? ನಾನು ಗೃಹಸ್ಥ, ನನಗೆ ಮದುವೆಯಾಗಿದೆ. ನನಗೆಷ್ಟೋ ಜವಾಬ್ದಾರಿಗಳಿವೆ. ಪರಿಹರಿಸಿಕೊಳ್ಳಬೇಕಾದ ಎಷ್ಟೋ ಸಮಸ್ಯೆಗಳಿವೆ. ನನ್ನಲ್ಲಿ ಎಷ್ಟೊಂದು ಸಂಸ್ಕಾರಗಳಿವೆ. ನನ್ನಿಂದೇನು ತಾನೆ ಮಾಡಲು ಸಾಧ್ಯ?’ ಎಂದು.
ಸಿಂಹವು ಎದುರುತ್ತರಿಸಿತು, ‘ಎಲೈ ಮೂರ್ಖ! ಮೂಲಭೂತವಾದ ಈ ವಿಷಯವನ್ನು ತಿಳಿದುಕೋ, ನಿನ್ನನ್ನೇ ನೀನು ಅವಲೋಕಿಸು. ಬೇರಾವ ಮೇಕೆಗೂ ನನ್ನ ಬಗ್ಗೆ ಮಮತೆ ಇಲ್ಲ. ಬೇರಾವ ಮೇಕೆಯೂ ನನಗಾಗಿ ಕಾಯುತ್ತಿಲ್ಲ. ನೀನು ಮಾತ್ರವೇ ನನಗಾಗಿ ಕಾಯುತ್ತಿರುವುದು. ಇದೊಂದರಿಂದಲೇ ತಿಳಿದುಕೋ - ನಿನಗೆ ನನ್ನ ಬಗ್ಗೆ ಏನೋ ಆಕರ್ಷಣೆ ಉಂಟಾಗಿದೆ ಎಂದು. ನೀನು ನನಗಾಗಿ ಇಲ್ಲಿ ಕಾಯಬೇಕಾಗಿರಲಿಲ್ಲ. ಹತ್ತಿರವಿರುವ ನದಿಗೆ ನನ್ನ ಜೊತೆಯಲ್ಲಿ ಬಾ. ಹಾಗೂ, ನೀರಿನಲ್ಲಿ ನಿನ್ನ ಬಿಂಬವನ್ನು ನೋಡು. ಅಲ್ಲಿ ನೀನು ನಿನ್ನ ಮುಖವನ್ನು... ಹಾಗೂ ನನ್ನ ಮುಖವನ್ನೂ ನೋಡಬಹುದು’ ಎಂದು.
ಗುರುಗಳು ಈ ಮಾತನ್ನು ಹೀಗೆ ಹೇಳುವಂತೆ, ‘ನೀವೇಕೆ ನನ್ನ ಜೊತೆಗೆ ಹಿಮಾಲಯಕ್ಕೆ ಬರಬಾರದು? ನಾನು ನದಿಯಲ್ಲಿ ನನ್ನ ಹಾಗೂ ನಿಮ್ಮ ಮುಖಗಳು ಒಂದೇ ಎಂದು ತೋರಿಸುತ್ತೇನೆ! ಅಷ್ಟೇ ಅಲ್ಲದೆ ಇನ್ನೂ ಹೆಚ್ಚಿನದನ್ನೂ ತೋರಿಸುತ್ತೇನೆ!’ ಎಂದು.
ಆಗ ನೀವು ನಿಮಗೇ ಹೇಳಿಕೊಳ್ಳುವಿರಿ, ‘ಇಲ್ಲ! ಇಲ್ಲ! ಇಲ್ಲ! ಅಲ್ಲಿಗೆ ಹೋದರೆ ನನಗೇನಾಗುತ್ತದೋ ಯಾರಿಗೆ ಗೊತ್ತು! ಅವರು ನನ್ನನ್ನು ವಶೀಕರಣ ಮಾಡಬಹುದು. ಅವರು ನನ್ನನ್ನು ಹಿಮಾಲಯದಲ್ಲೇ ಬಿಟ್ಟು ಬರಬಹುದು. ಇಲ್ಲ! ಇಲ್ಲ! ಇಲ್ಲ! ನಾನು ಅವರೊಡನೆ ಹೋಗುವುದಿಲ್ಲ’ ಎಂದು.
ಮರಿ ಸಿಂಹವು ಸಿಂಹಕ್ಕೆ ಹೇಳಿತು, ‘ನಾವು ಇಲ್ಲೇ ನಿಂತು ಮಾತನಾಡೋಣ. ನೀನು ಎಲ್ಲಿ ನಿಂತಿದ್ದೀಯೋ ಅಲ್ಲೇ ಇರು. ನಾನು ಇಲ್ಲೇ ಕೇಳಿಸಿಕೊಳ್ಳುತ್ತೇನೆ. ಏಕೆಂದರೆ ನಿನ್ನ ಬಳಿ ಬರಲು ನನ್ನ ಅಭ್ಯಂತರವೇನಿಲ್ಲ. ಆದರೆ, ನನ್ನಮ್ಮ ಇರುವಳಲ್ಲಾ - ಅವಳು ನನ್ನನ್ನು ಇನ್ನು ಮುಂದಕ್ಕೆ ಬರಲು ಬಿಡುವುದಿಲ್ಲ!’
ಇದು ಯಾವರೀತಿ ಇದೆ ಎಂದರೆ, 'ನನ್ನ ಹೆಂಡತಿ ನನ್ನನ್ನು ಹೋಗಲು ಬಿಡುವುದಿಲ್ಲ' ಅಥವಾ 'ನನಗೆ ತುಂಬಾ ಕೆಲಸವಿದೆ' ಅಥವಾ 'ನನಗೆ ರಜಾ ಸಿಗುವುದಿಲ್ಲ' ಅಥವಾ 'ನನಗೆ ಬೆನ್ನು ನೋವಿದೆ' ಅಥವಾ 'ನನಗೆ ನಡೆಯಲು ಆಗುವುದಿಲ್ಲ' ಎಂಬುದಾಗಿ ನೀವು ಹೇಳಿದಂತೆ. ಒಟ್ಟಿನಲ್ಲಿ, ನೀವು ಸಿಂಹವೆಂದು ಒಪ್ಪಿಕೊಳ್ಳಲು ನಿಮಗೆ ಏಕೆ ಆಗುತ್ತಿಲ್ಲವೆಂದು ನೀವು ಗುರುಗಳಿಗೆ ಕೊಡುತ್ತಿರುವ ಕಾರಣಗಳಿವು.
ಆಗ ಸಿಂಹವು ಹೇಳುತ್ತದೆ, ‘ಆಯಿತು, ನಾನು ಇಷ್ಟೇ ಮಾತ್ರ ಹೇಳುತ್ತೇನೆ. ನನ್ನ ಹಾಗೂ ನಿನ್ನ ಬಿಂಬವನ್ನು ನದಿಯ ನೀರಿನಲ್ಲಿ ತೋರಿಸಿ, ನಾನು ಮತ್ತು ನೀನು ಒಂದೇ ಎಂದು ಸಾಬೀತು ಪಡಿಸುತ್ತೇನೆ. ಆದರೆ ನಿನ್ನನ್ನು ಬಲವಂತ ಮಾಡುವುದಿಲ್ಲ. ಇನ್ನೊಂದು ವಾರದಲ್ಲಿ ನಾನು ಪುನಃ ಬರುತ್ತೇನೆ. ನೀನು ತಯಾರಾಗಿದ್ದರೆ, ಇದೇ ಜಾಗಕ್ಕೆ ಬಂದು, ನನಗಾಗಿ ಕಾದಿರು. ನಾನು ನಿನ್ನನ್ನು ಕರೆದೊಯ್ಯುತ್ತೇನೆ. ಇಲ್ಲವಾದಲ್ಲಿ, ನನ್ನನ್ನು ಮರೆತು ಬಿಡು ನನ್ನ ನೆನಪನ್ನೂ ಮಾಡಿಕೊಳ್ಳಬೇಡ. ಎಲ್ಲಾದರೂ ಹಾಳಾಗಿ ಹೋಗು.’ ಎಂಬ ಕಟ್ಟಕಡೆಯ ಮಾತನ್ನಾಡಿ, ಸಿಂಹವು ಕಾಡಿಗೆ ಹೊರಟು ಹೋಯಿತು.
ಸಿಂಹದ ಮರಿಯು ಆ ಒಂದು ವಾರದಲ್ಲಿ ಯಾವ ಸ್ಥಿತಿಯಲ್ಲಿತ್ತೆಂದು ನಾನು ಹೇಳಬೇಕಾಗಿಯೇ ಇಲ್ಲ. ಅದೇ ರೀತಿ, ನೀವು ಗುರುಗಳಿಂದ ದೂರವಿದ್ದಾಗ, ನಿಮಗಾಗುವ ಬವಣೆ ಎಂತಹುದೆಂದು ನಿಮಗೆ ತಿಳಿದಿದೆಯಲ್ಲವೆ! ನೀವು ನಿಮ್ಮೊಳಗೇ ವಿಪರೀತವಾಗಿ ಕ್ಷೋಭೆಗೊಳಗಾಗುವಿರಿ. ಕೆಲವೊಮ್ಮೆ ಗುರುಗಳ ಮಾತುಗಳ ಪರವಾಗಿಯೂ, ಕೆಲವೊಮ್ಮೆ ವಿರುದ್ಧವಾಗಿಯೂ ಯೋಚಿಸಿ, ಅನಿಶ್ಚಿತತೆಯಿಂದ ಹೊಯ್ದಾಡುವಿರಿ. ಆಶ್ರಮದ ವೈಬ್ಸೈಟನ್ನು ಪದೇ ಪದೇ ಪರಿಶೀಲಿಸುವಿರಿ. ನಿಮ್ಮ ಲ್ಯಾಪ್ಟಾಪನ್ನು ತೆರೆದಾಗಲೆಲ್ಲಾ ಅಥವಾ ಕಂಪ್ಯೂಟರ್ ಬಳಿ ಹೋದಾಗಲೆಲ್ಲಾ ನೀವು ಮಾಡುವ ಮೊದಲ ಕೆಲಸವೆಂದರೆ, ಆಶ್ರಮದ ವೆಬ್ಸೈಟನ್ನು ಪರಿಶೀಲಿಸುವುದು. ಆಗ ತಕ್ಷಣವೇ ನೀವು ಯೋಚಿಸುವಿರಿ, 'ನಾನು ಈ ವಿಷಯಗಳಲ್ಲಿ ಬಹಳ ಆಸಕ್ತಿ ವಹಿಸಬಾರದು. ನಾನು ಅತಿಯಾಗಿ ಇದರಲ್ಲಿ ತೊಡಗುತ್ತಿದ್ದೇನೆ. ಗುರುಗಳು ನನಗೇನು ಮಾಡುತ್ತಿದ್ದಾರೋ ತಿಳಿಯದಾಗಿದೆ. ನಾನು ಅವರನ್ನೇ ಹಿಂಬಾಲಿಸುತ್ತಿರುವಂತಿದೆ. ನನಗೇನಾಗುತ್ತಿದೆಯೋ ನನಗೇ ತಿಳಿಯುತ್ತಿಲ್ಲ' ಎಂದು.
ಮರು ಕ್ಷಣವೇ ಈ ರೀತಿ ಯೋಚಿಸುವಿರಿ 'ಇಲ್ಲ! ಇಲ್ಲ! ಇಲ್ಲ! ಅವರು ನಿಜವಾಗಿಯೂ ಅದ್ಭುತವಾದ, ಆನಂದ ಪರವಶರಾದ ವ್ಯಕ್ತಿ' ಎಂದು. ಆದರೆ ಪುನಃ ಈ ರೀತಿ ಯೋಚಿಸುವಿರಿ, 'ಅವರು ಹೇಳುತ್ತಿರುವುದನ್ನು ನನ್ನಿಂದ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನಾನಿದನ್ನೆಲ್ಲಾ ನಿಭಾಯಿಸಲಾರೆ. ಇದೆಲ್ಲಾ ನನಗಲ್ಲ. ನಾನು ಸಾಕಷ್ಟು ದೂರ ಮುಂದುವರೆದ ಹಾಗಾಗಿದೆ. ನಾನೀಗ ನನ್ನ ಕಾರು, ನನ್ನ ಹೆಂಡತಿ, ನನ್ನ ಮನೆ, ನನ್ನ ಕೆಲಸ ಇವೆಲ್ಲ ದರಿಂದ ತೃಪ್ತ ನಾಗಿದ್ದೇ ನೆ' ಎಂದು.
ಮತ್ತೆ ಈ ರೀತಿ ಯೋಚಿಸುತ್ತೀರಿ, 'ಇದೊಂದು ಬಾರಿ ವೆಬ್ಸೈಟ್ನ್ನು ಪರಿಶೀಲಿಸೋಣ' ಎಂದು. ಕಂಪ್ಯೂಟರ್ ಮುಂದೆ ಕುಳಿತು, ವೆಬ್ಸೈಟನ್ನು ನೋಡುತ್ತಾ ಯೋಚಿಸುತ್ತೀರಿ, 'ಇದೇನು, ಈ ಆಶ್ರಮದವರು ವೆಬ್ಸೈಟನ್ನು ನವೀಕರಣಗೊಳಿಸೇ ಇಲ್ಲವಲ್ಲ. ಎಷ್ಟು ದಿನಗಳಾದರೂ ಒಂದು ಹೊಸ ದಾಖಲೆಯನ್ನು ಹಾಕಿಲ್ಲವಲ್ಲ. ಇಷ್ಟು ದಿನಗಳಾದರೂ ಇವರೇನು ಮಾಡುತ್ತಿರುವರು?' ಎಂದು. ಹಾಗೂ ಆ ದಿನ ಬಹಳಷ್ಟು ಬಾರಿ ವೆಬ್ಸೈಟನ್ನು ಪರಿಶೀಲಿಸುವಿರಿ.
ಆಶ್ರಮದ ವೆಬ್ಸೈಟ್ನ್ನು ನವೀಕರಣಗೊಳಿಸದಿದ್ದಾಗ, ಅದೆಷ್ಟು ಜನರಿಗೆ ಒಮ್ಮೆ ಯಾದರೂ ನಿರಾಸೆಯಾಗಿರಬಹುದು – ಅಲ್ಲವೆ? ಸರಿಯಾಗಿ ತಿಳಿಯಿರಿ, ವೆಬ್ಸೈಟನ್ನು ನವೀಕರಣಗೊಳಿಸದೇ ಬಹಳ ದಿನಗಳೇನೂ ಕಳೆದಿಲ್ಲ. ನೀವು ಕೆಲವೇ ಘಂಟೆಗಳಲ್ಲಿ ಅನೇಕ ಬಾರಿ ಪರಿಶೀಲಿಸಿದ್ದೀರಿ ಅಷ್ಟೇ. ತೀಕ್ಷ್ಣವಾಗಿ ಅವಲೋಕಿಸಿದಲ್ಲಿ, ಆ ಮರಿ ಸಿಂಹಕ್ಕೆ ಏನಾಯಿತೋ, ನಿಮಗೂ ಸಹ ಅದೇ ಆಗುತ್ತಿರುವುದು.
ಕಥೆಗೆ ಹಿಂದಿರುಗೋಣ. ಒಂದು ವಾರದ ಗಡುವು ಮುಗಿಯಿತು. ಕಡೆಯ ದಿನವು ಬಂದೇ ಬಿಟ್ಟಿತು. ಆಶ್ವಾಸನೆ ನೀಡಿದಂತೆ, ಆ ಬೆಳಗ್ಗೆ ಸಿಂಹವು ಕಾಯುತ್ತಿತ್ತು. ಮರಿ ಹಾಗೂ ಸಿಂಹದ ಭೇಟಿಯ ಸಮಯಕ್ಕೆ ಇನ್ನೊಂದು ಘಂಟೆಯಿರುವದಂತೆಯೇ ಸಿಂಹದ ಮರಿಯ ಮನಸ್ಸು ಡೋಲಾಯಮಾನವಾಗ ತೊಡಗಿತು.
ನಿಮ್ಮ ವಿಷಯದಲ್ಲಿ ಹೇಳುವುದಾದರೆ, ನೀವು ಹಿಮಾಲಯ ಪ್ರವಾಸದ ಟಿಕೆಟನ್ನು ಖರೀದಿಸಬಹುದು ಅಥವಾ ಖರೀದಿಸದೆ, ಪ್ರವಾಸಕ್ಕೆ ಹೋಗಬೇಕೆಂಬ ನಿಮ್ಮ ನಿರ್ಣಯವನ್ನು ಮುಂದೂಡಬಹುದು. ಒಂದು ವೇಳೆ ಹೋಗುವುದಾಗಿ ನಿರ್ಧರಿಸಿದರೂ ಸಹ, ನಂತರ ರದ್ದುಪಡಿಸುವ ಸಾಧ್ಯತೆ ಇರುವಂತಿದೆ, ನಿಮ್ಮ ಮನಃ ಸ್ಥಿತಿ! ಒಂದು ನಿರ್ಧಾರದಿಂದ ಇನ್ನೊಂದು ನಿರ್ಧಾರಕ್ಕೆ ನಿಮ್ಮ ಮನಸ್ಸು ಓಲಾಡುತ್ತದೆ. ಒಂದೆಡೆ ನಿಮ್ಮ ಸಾಮಾಜಿಕ ಜವಾಬ್ದಾರಿಗಳ ಒತ್ತಡವಾದರೆ, ಮತ್ತೊಂದೆಡೆ ಹಿಂದೊಮ್ಮೆ ಮುಗಾದ ಸಾಂತ್ವನದ ಸುಂದರವಾದ ಅನುಭವದಿಂದ ಸೆಳೆಯಲ್ಪಡುತ್ತೀರಿ.
ಈ ಎರಡು ಹತಾಶ ಭಾವನೆಗಳ ನಡುವೆ ಸಿಲುಕಿ, ನಿಮ್ಮ ಮನಸ್ಸು ಆಕಡೆಯಿಂದ ಈ ಕಡೆಗೆ ಹೊಯ್ದಾಡುತ್ತದೆ. ಈಗೇನು ಮಾಡುವಿರಿ? ಒಂದು ಕಡೆ ನಿಮ್ಮ ವ್ಯಕ್ತಿತ್ವ, ಮತ್ತೊಂದೆಡೆ ಆನಂದದ ಅನುಭವ - ಈ ಎರಡೂ ಸಹ ನಿಮ್ಮನ್ನು ವಿರುದ್ಧವಾದ ದಿಕ್ಕಿನಲ್ಲಿ ಸೆಳೆಯುತ್ತವೆ. ನೀವು ಒತ್ತಡಕ್ಕೊಳಗಾಗುವಿರಿ. ಕೊನೆಯಲ್ಲಿ ನಿಮ್ಮ ಮನಸ್ಸಿಗೆ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ, ಕೂಡಲೇ ಪ್ರವಾಸಕ್ಕೆ ಹೋಗುವುದಾಗಿ ನಿರ್ಧರಿಸಿ, ದೆಹಲಿಯ ವಿಮಾನವನ್ನು ಕೊನೆಯ ಗಳಿಗೆಯಲ್ಲಿ ಹತ್ತೇ ಬಿಡುತ್ತೀರಿ (ದೆಹಲಿಯು ಹಿಮಾಲಯ ಯಾತ್ರೆಯನ್ನು ಆರಂಭಿಸುವ ಸ್ಥಳ).
'ಸಿಂಹ'ವೆಂಬ ಗುರುವು ಕೈಯಲ್ಲಿ ತ್ರಿಶೂಲವನ್ನು ಹಿಡಿದು ಅಲ್ಲಿ ನಿಂತಿರುತ್ತಾರೆ. ಇಷ್ಟೂ ದಿನಗಳೂ ಸಿಂಹವು ನಮಸ್ಕರಿಸುತ್ತಿತ್ತು (ಎರಡೂ ಕೈ ಜೋಡಿಸಿ ಅಭಿನಂದಿಸುವಂತೆ) ಈಗ ಸಿಂಹವು ನಿಮ್ಮನ್ನು ಕಂಡು, 'ಓ, ನೀನು ಬಂದೆಯಾ? ಬಾ! ಬಾ!' ಎಂದು ಸ್ವಾಗತಿಸಿ, ಎಲ್ಲರೊಡನೆ ಅತಿ ವಿನಯದಿಂದ ಮಾತನಾಡಲು ಆರಂಭಿಸುತ್ತಾರೆ, 'ನಾನು ನಿಮ್ಮನ್ನು ನನ್ನ ಪ್ರೀತಿ ಹಾಗೂ ಗೌರವಗಳಿಂದ ಸ್ವಾಗತಿಸುತ್ತೇನೆ....' ಎನ್ನುತ್ತಾರೆ.
ಕಥೆಗೆ ಹಿಂದಿರುಗೋಣ. ಸಿಂಹವು ಮತ್ತು ಮರಿಯು ನದಿಯತ್ತ ಜೊತೆಯಲ್ಲಿ ಹತ್ತಿರ ಹತ್ತಿರವಾಗಿ ನಡೆಯಲಾರಂಭಿಸಿದವು. ಸಿಂಹವು ಹತ್ತಿರ ಬಂದಾಗ, ಮರಿಯು ಹೆದರಿ ನುಡಿಯಿತು, 'ಇಲ್ಲ! ಇಲ್ಲ! ನೀನು ಸ್ವಲ್ಪ ದೂರದಲ್ಲಿಯೇ ಇದ್ದು, ನನಗೆ ನದಿಗೆ ಹೋಗುವ ದಾರಿಯನ್ನು ತಿಳಿಸು. ದಯವಿಟ್ಟು ನನ್ನ ಸಮೀಪಕ್ಕೆ ಬರಬೇಡ. ನದಿಯ ಬಳಿಗೆ ನಾನೇ ನಡೆದು ಬರುತ್ತೇನೆ' ಎಂದು.
ಸಿಂಹ ಹಾಗೂ ಮರಿಯ ಕಥೆ
ನಿಧಾನವಾಗಿ, ಬಲು ನಿಧಾನವಾಗಿ, ಸಿಂಹವು ತಾನು ಮರಿಯಾದಾಗಿನಿಂದ ದೊಡ್ಡ ಸಿಂಹವಾಗುವವರೆಗಿನ ತನ್ನ ಕಥೆಗಳನ್ನು ಹೇಳುತ್ತಾ ಸಿಂಹದ ಮರಿಯ ಜೊತೆ ನಡೆಯಲಾರಂಭಿಸಿತು. ಅದು ಹೇಳುತ್ತಿರುವ ಕಥೆಯನ್ನು ಕೇಳುತ್ತಾ ಮೈ ಮರೆತು ಮರಿಯು ತಮ್ಮಿಬ್ಬರ ಅಂತರವನ್ನು ಮರೆತು ಹತ್ತಿರ ಬರಲಾರಂಭಿಸಿತು. ‘ನಿನಗೂ ಹಾಗಾಯಿತೆ? ನಿನಗೂ ಅಂತಹ ಸಮಸ್ಯೆಗಳಿದ್ದವೇ?’ ಎಂದು ಬಾಯಿಹಾಕುತ್ತಿತ್ತು.
ಸಿಂಹದ ಮರಿಯ ಅರಿವಿಲ್ಲದಂತೆಯೇ ಸಿಂಹವು ಅದರ ಕೈಯನ್ನು ಹಿಡಿದು ನಡೆಯುತ್ತಿತ್ತು! ಮರಿಗೆ ಇದು ತಿಳಿದರೂ, ಹೆಚ್ಚು ಕ್ಲೇಶವಾಗಲಿಲ್ಲ- ಆ ಹಿಡಿತವು ಹಿತವಾಗಿದ್ದುದರಿಂದ ಅದು ಆ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಸಿಂಹವು ಮಾತನಾಡುತ್ತಲೇ ಇತ್ತು. ಮರಿಯು ಕಥೆಯನ್ನು ಆಸಕ್ತಿಯಿಂದ ‘ಓ ಎಷ್ಟು ಚೆನ್ನಾಗಿದೆ; ಕುತೂಹಲಕಾರಿಯಾಗಿದೆ’ ಎಂದು ಉದ್ಗರಿಸುತ್ತಾ ನಡೆದಾಗ, ಸಿಂಹದ ಕೈಯ ಹಿಡಿತವು ಸ್ವಲ್ಪ ಬಿಗಿಯಾಗಿರುವುದನ್ನು ಗಮನಿಸಲೇ ಇಲ್ಲ. ಆ ಮರಿಯು ಸಿಂಹದ ಬಾಲ್ಯದ ಕಥೆಗಳನ್ನು ಕೇಳುವುದರಲ್ಲಿ ಅಷ್ಟೊಂದು ತಲ್ಲೀನವಾಗಿ ಬಿಟ್ಟಿತ್ತು.
ಅವೆರಡೂ ನದಿಯ ತೀರವನ್ನು ತಲುಪಿದವು. ಸಿಂಹವು ಇದ್ದಕ್ಕಿದ್ದಂತೆಯೇ ಮರಿಯ ಕೈಯನ್ನು ಬಿಟ್ಟು, ಅದರ ಮೇಲೆರಗಿ ಅದರ ಕತ್ತನ್ನು ಗಟ್ಟಿಯಾಗಿ ಹಿಡಿದುಬಿಟ್ಟಿತು. ತಾನು ಇನ್ನು ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ಮರಿಯು ಅರಿಯಿತು. ವಿಚಿತ್ರವೆಂದರೆ, ಆ ಮರಿಗೆ ತಪ್ಪಿಸಿಕೊಳ್ಳಬೇಕೆಂಬ ಆಸೆಯೇ ಇಲ್ಲವೆಂದು ತಿಳಿದು, ತನ್ನ ಬಗ್ಗೆ ತನಗೇ ದಿಗ್ಧಮೆಯುಂಟಾಯಿತು. ತಿಳಿಯಿರಿ; ಸಿಂಹದ ಮರಿಗೆ ತಾನು ತಪ್ಪಿಸಿಕೊಳ್ಳಲಾಗುವುದಿಲ್ಲವೆಂದು ತಿಳಿದಿದ್ದರೂ ತಪ್ಪಿಸಿಕೊಳ್ಳಬೇಕೆಂಬ ಆಸೆ, ಸ್ವಲ್ಪವೂ ಇರಲಿಲ್ಲ! ಆದರೆ ಒಂದು ಸಣ್ಣದಾದ ಅಹಂಕಾರವು ಯಾವುದೋ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದ್ದು, ಸಿಂಹದ ಮರಿಯ ಮನಸ್ಸನ್ನು ಹಿಂಸಿಸಿ, ಈ ರೀತಿ ಹೇಳುವಂತೆ ಮಾಡಿತು. ‘ಇಲ್ಲ! ಇಲ್ಲ! ನನ್ನನ್ನು ಬಿಟ್ಟು ಬಿಡು. ನೀನು ನನಗೇನು ಮಾಡುತ್ತಿರುವೆ? ನನ್ನನ್ನೇಕೆ ಹಿಡಿದಿರುವೆ?’ ಎಂದು.
ಈಗ ನೀವು 'ನಿತ್ಯಾನಂದಂ' ಕಾರ್ಯಕ್ರಮಕ್ಕೆ ಬಂದರೆ, ಏನಾಗುವುದೆಂದು ತಿಳಿದಿರಲ್ಲವೇ !
ಮರಿ ಸಿಂಹಕ್ಕೆ ಇನ್ನೂ ಸ್ವಲ್ಪ ಭಯವಿದ್ದುದರಿಂದ ಅದು ಕೇಳಿತು ‘ನೀನು ನನಗೇನು ಮಾಡುತ್ತಿರುವೆ ? ದಯಮಾಡಿ ತಿಳಿಸು , ಏನನ್ನು ಮಾಡುತ್ತಿರುವೆ ?’ ಎಂದು.
ಸಿಂಹವು ಉತ್ತರಿಸಿತು, ‘ನಾನು ನಿನಗೇನನ್ನೂ ಮಾಡುತ್ತಿಲ್ಲ. ಸುಮ್ಮನೆ ನೀರಿನಲ್ಲಿ ನೋಡು’ ಎಂದು.
ಮರಿಯು ನೀರಿನಲ್ಲಿ ನೋಡುತ್ತಾ ಹೇಳಿತು’, ಆಯಿತು, ನಾನು ನೀರಿನಲ್ಲಿ ನೋಡುತ್ತಿದ್ದೇನೆ’ ಎಂದು.
ಆಗ ಸಿಂಹವು ಕೇಳಿತು, ‘ನೀರಿನಲ್ಲಿ ಏನು ಕಾಣುತ್ತಿದೆ? ನಿನಗೆ ಎರಡು ಬಿಂಬಗಳು ಕಾಣುತ್ತಿದೆಯೇ?’ ಎಂದು.
ಮರಿಯು ‘ಹೌದು’ ಎಂದಿತು.
ಸಿಂಹವು ಹೇಳಿತು, ‘ಹಾಗಾದರೆ, ಅದರಲ್ಲಿ ಒಂದು ಬಿಂಬವು ನಾನು, ಮತ್ತೊಂದು ನೀನು’ ಎಂದು.
ಮರಿಯು ನುಡಿಯಿತು, ‘ಹೌದು, ಎರಡು ಬಿಂಬಗಳು : ಒಂದು ನಾನು ಮತ್ತೊಂದು ನೀನು’, ಎಂದು. ಆದರೆ, ವಿರೋಧಾಭಾಸವಾಗಿ ಮರುಕ್ಷಣವೇ ಅನುಮಾನಿಸುತ್ತಾ ಹೇಳಿತು. ಇಲ್ಲ ! ಇಲ್ಲ! ಇಲ್ಲ! ಆ ಎರಡೂ ಬಿಂಬಗಳೂ ನಿನ್ನದೇ ಇರಬೇಕು’ ಎಂದು.
ಒಂದು ತೀವ್ರವಾದ ಆಧ್ಯಾತ್ಮಿಕ ಶುದ್ಧೀಕರಣದ ಕಾರ್ಯಕ್ರಮ.

ಸಿಂಹವು 'ಎಲ್ಲವೋ ಮೂರ್ಖ! ಈಗ ನೋಡು, ನಾನು ನನ್ನ ಕೈಯನ್ನು ಎತ್ತಿದ್ದೇನೆ. ಯಾವ ಬಿಂಬವು ಕೈ ಎತ್ತುತ್ತಿದೆ ಎಂದು ನೋಡು' ಎಂದಿತು.
ಮರಿಯು ಒಂದು ಬಿಂಬದೆಡೆಗೆ ಕೈ ತೋರಿಸುತ್ತಾ ಹೇಳಿತು, 'ಆ ಬಿಂಬವು ಮಾತ್ರವೇ ಕೈಯನ್ನು ಎತ್ತುತ್ತಿರುವುದು' ಎಂದು. ಸಿಂಹವು 'ಹಾಗಾದರೆ ಈಗ ನಿನ್ನ ಕೈ ಎತ್ತು' ಎಂದಿತು.
ದೊಡ್ಡ ಸಿಂಹವು ಮರಿ ಸಿಂಹಕ್ಕೆ ಕೈ ಎತ್ತುವಂತೆ ಹೇಳುವುದು ನಾನು ನಿಮಗೆ 'ಅನ್ಕ್ಲಚ್' ಆಗಿರಿ ಎಂದು ಹೇಳುವಂತೆ.
ಮರಿಯು ತನ್ನ ಕೈಯನ್ನು ಎತ್ತಿ ಬಿಂಬವನ್ನು ನೋಡಿ ಕಿರುಚಿತು, 'ಹೌದು! ಹೌದು! ಹೌದು! ನಾನು ನೋಡಿದೆ! ನಾನು ನೋಡಿದೆ!' ಎಂದು. ಆದರೆ ಏನೋ ಗೊಂದಲದಿಂದ ಕ್ಷೀಣಸ್ವರದಲ್ಲಿ ಹೇಳಿತು, 'ಆದರೆ..... ನಾನು ಸಿಂಹವಲ್ಲ! ನಾನು ಮೇಕೆಯಲ್ಲವೆ?' ಎಂದು.
ಈ ಮಾತನ್ನು ಹೀಗೆ ಅರ್ಥೈಸಬಹುದು. ನೀವು ನನ್ನ 'ಅನ್ಕ್ಲಚ್' ಆಜ್ಞೆಗೆ ಈ ರೀತಿ ಉತ್ತರಿಸುವಿರಿ, 'ಅನ್ಕ್ಲಚ್' ಆಗುವುದು ಹೇಗೆ? ಅದು ಯಾರು ಮಾಡುವ ಕೆಲಸ! ಗುರುಗಳೇ, ಇದು ಸಾಧ್ಯವಿಲ್ಲ. ಇಲ್ಲ! ಇಲ್ಲ! ಇಲ್ಲ! ನನಗೆ ಎಲ್.ಬಿ.ಪಿ.ಯ 2ನೇ ಮಟ್ಟದ ಕಾರ್ಯಕ್ರಮವೇ ಸಾಕು. ದಯವಿಟ್ಟು ಇನ್ನೂ ಹೆಚ್ಚಿನದು ಬೇಡ!' ಎಂದು.
ಆಗ ಸಿಂಹವು ಹೇಳುತ್ತದೆ, 'ನಾನುಬನಿನೊಡನೆ ಆಟವಾಡಲು ಇಲ್ಲಿಲ್ಲ' ಎಂದು. ಸಿಂಹವು ಹೀಗೆ ಹೇಳಿದಾಗ, ಮರಿ ಸಿಂಹದ ಮನಸ್ಸಿನಲ್ಲಿ ಹರ್ಷೋನ್ಮಾದ ಉತ್ಕಹೆಂದು ಆಶ್ಚರ್ಯಕರವಾದುದೇನೋ ನಡೆಯಲಿದೆ ಎಂದೆನಿಸಿತು.
ಸಿಂಹದ ಮರಿಯ ಭಾವನೆಗಳು ಏರುಪೇರಾಗಿ, ಮತ್ತೆ ತನಗುಂಟಾದ ಆನಂದವನ್ನು ಅಲ್ಲಗಳೆಯುತ್ತಾ ಹೀಗೆ ಯೋಚಿಸಿತು. 'ನನಗೆ ವಶೀಕರಣ ಮಾಡಲಾಗಿದೆ ಎನಿಸುತ್ತಿದೆ. ಇದು ನನ್ನ ನಿಜ ಸ್ವಭಾವವಲ್ಲ! ನನಗೇನೋ ಆಗಿದೆ. ಇದು ನಾನಲ್ಲ, ನಾನು ಇಷ್ಟೊಂದು ಆನಂದವಾಗಿ ಇಷ್ಟೊಂದು ಸಂತೋಷವಾಗಿ, ಹಿಂದೆಂದು ಇರಲಿಲ್ಲ! ಇದು ನಾನಲ್ಲವೆಂಬಂತಿದೆ! ಸಿಂಹವು ನನಗೇನೋ ಮಾಡುತ್ತಿದೆ. ಈಗಾಗಲೇ ನನಗೇನನ್ನೋ ಮಾಡಿಬಿಟ್ಟಿದೆ' ಎಂದು.
ಸಿಂಹದ ಮರಿಯ ಮನಸ್ಸಿನಲ್ಲಿ ಇನ್ನೂ ಪ್ರತಿಭಟನೆ ಇದ್ದಿತು. ಓಡಿ ಹೋಗಲು ತೀವ್ರವಾಗಿ ಪ್ರಯತ್ನಿಸಿದರೂ, ಆ ಪ್ರಯತ್ನವು ಅರೆ ಮನಸ್ಸಿನದ್ದಾಗಿ, ತಪ್ಪಿಸಿಕೊಳ್ಳುವ ನಿಜವಾದ ಆಸೆ ಮರಿಗೆ ಇರಲಿಲ್ಲ. 'ಇಲ್ಲ! ಇಲ್ಲ ! ಇಲ್ಲ ' ಎಂದು ಕಿರುಚಿ ನುಡಿಯಿತು, 'ನನ್ನನ್ನು ಹೋಗಲು ಬಿಡು! ನನ್ನನ್ನು ಹೋಗಲು ಬಿಡು! ನೀನೊಂದು ಸಿಂಹವೆಂದು ನನಗೆ ತಿಳಿದಿದೆ. ನೀನೊಬ್ಬ ಮಹಾವ್ಯಕ್ತಿ, ಎಂತಹ ಆಕರ್ಷಕ ವ್ಯಕ್ತಿ! ಬೆರಗುಗೊಳಿಸುವಂತಹ ವ್ಯಕ್ತಿ! ನಾನು ನಿತ್ಯವೂ ನಿನ್ನನ್ನು ಆರಾಧಿಸಿ, ನಿನಗೆ ಮಂತ್ರ ಸಹಿತ ಪೂಜೆ ಸಲ್ಲಿಸುತ್ತೇನೆ. ನಾನು ಪ್ರತಿ ದಿನವೂ ತಿನ್ನುವ ಹುಲ್ಲನ್ನು ನಿನಗೆ ತಂದುಕೊಡುತ್ತೇನೆ. ನಾನು ಪ್ರತಿ ದಿನವೂ ಕುಡಿಯುವ ಹಾಲನ್ನು ನಿನಗೆ ನಿವೇದಿಸುತ್ತೇನೆ. ನನ್ನ ಸಮಯವನ್ನು ನಿನ್ನ ಸೇವೆಗೆ ಮುಡಿಪಾಗಿಡುತ್ತೇನೆ' ಎಂಬುದಾಗಿ ನುಡಿಯಿತು.
ಇದು ನೀವು ನನಗೆ ಹೇಳುವಂತೆ, 'ನಾನು ಒಂದು ಹೀಲಿಂಗ್ ಕೇಂದ್ರವನ್ನು ಆರಂಭಿಸುತ್ತೇನೆ. ನಿಮ್ಮ ಹೆಸರಿನಲ್ಲಿ ಹೀಲಿಂಗ್ ಕೊಡುತ್ತೇನೆ. ನಾನೊಂದು ಆಶ್ರಮವನ್ನು ನಡೆಸುತ್ತೇನೆ. ನಾನೇನು ಮಾಡಬೇಕೆಂದು ನೀವು ಅಪೇಕ್ಷಿಸುವಿರೋ ಅದನ್ನೆಲ್ಲಾ ಮಾಡುತ್ತೇನೆ. ಆದರೆ ದಯವಿಟ್ಟು ನನ್ನನ್ನು 'ಅನ್ಕ್ಲಚ್' ಆಗಿರು ಎಂದು ಮಾತ್ರ ಹೇಳಬೇಡಿರಿ! ನನ್ನನ್ನು ಹೀಗೆಯೇ ಇರಲು ಬಿಡಿರಿ ' ಎಂದು.
ಕೊನೆಗೆ ಸಿಂಹವು ಯೋಚಿಸುತ್ತದೆ, ‘ಇದನ್ನು ಈಗ ಬಿಟ್ಟುಬಿಡಬೇಕು. ಇದಕ್ಕೆ ಈಗ ಇಷ್ಟು ಮಾತ್ರವೇ ಮಾಡಲು ಸಾಧ್ಯ’ ಹೀಗೆಂದುಕೊಂಡು, ಸಿಂಹವು ಹೇಳಿತು ‘ಆಗಲಿ, ಸರಿಯಾಗಿ ತಿಳಿ ; ನಾಳೆ ನಿನ್ನನ್ನು ಕರೆದೊಯ್ಯಲು ಕಾಡಿನಿಂದ ನಾನು ಬರುವುದಿಲ್ಲ. ನಾನಿರುವ ವಾಸ ಸ್ಥಾನದಲ್ಲಿಯೇ ಇರುತ್ತೇನೆ. ನಿನಗೆ ನನ್ನನ್ನು ನೋಡುವ ಮನಸ್ಸಾದರೆ, ನನ್ನ ವಿಳಾಸವನ್ನು ತಿಳಿದು, ನೀನಾಗಿಯೇ ಅಲ್ಲಿಗೆ ಬಾ. ಕಾಡಿನಿಂದ ನಿನ್ನ ಹುಲ್ಲುಗಾವಲಿಗೆ ಬಂದು, ನಿನ್ನನ್ನು ಬೆಂಗಾವಲಾಗಿ ಅಲ್ಲಿಂದ ಕರೆದೊಯ್ಯಲು ನನಗೆ ಸಮಯವಿಲ್ಲ. ನಿನ್ನ ಪ್ರಯತ್ನದಿಂದಲೇ ನನ್ನನ್ನು ಕಾಣುವ ಇಚ್ಛೆ ನಿನಗಿಲ್ಲದಿದ್ದರೆ, ಸುಮ್ಮನೆ ತೊಲಗು!’ ಹೀಗೆ ಹೇಳಿ ಸಿಂಹವು ಹೊರಟು ಹೋಯಿತು.
ಈ ಬಾರಿ ಮರಿಸಿಂಹವು ಓಡಿಹೋಗಲಿಲ್ಲ. ಅದು ಬಹಳ ನಿಧಾನವಾಗಿ ಹಿಂದಿರುಗಿತು. ಹುಲ್ಲುಗಾವಲಿಗೆ ಹಿಂದಿರುಗುವ ಮನಸ್ಸಿರಲಿಲ್ಲವಾದರೂ, ಏನೋ ಬೇಕಿಲ್ಲದಂತೆ ನಡೆಯಲಾರಂಭಿಸಿತು. ಮರಿಸಿಂಹದ ಮೂರು ಕಾಲುಗಳು ಹೆಜ್ಜೆ ಹಾಕಲಿಲ್ಲ. ಒಂದು ಕಾಲು ಮಾತ್ರವೇ ಅಲುಗಾಡಿದ್ದು. ವಿದಾಯದ ಈ ಘಳಿಗೆಯ ದುಃಖವು ಆ ಮರಿಯ ಕಣ್ಣಳಲ್ಲಿ ನೀರು ತರಿಸಿತ್ತು.
ಇದು ಹೇಗೆಂದರೆ, ಗುರುಗಳು ವಿಮಾನವೇರಲು ಹೊರಟಾಗ ನಿಮಗೆ ವಿದಾಯ ಹೇಳುವ ಇಚ್ಛೆಯಿಲ್ಲದಂತೆ. ನೀವು ಆಗ ನಿಮ್ಮನ್ನೇ ಸಮಾಧಾನ ಪಡಿಸಿಕೊಂಡು, ಹೀಗೆ ಯೋಚಿಸುವಿರಿ, ‘ನಾನು ಹಿಂದಿರುಗಿ ಹೋಗುವುದನ್ನು ಒಪ್ಪಿಕೊಳ್ಳಲೇ ಬೇಕು. ನನ್ನ ಕರ್ತವ್ಯವನ್ನು ಮಾಡಬೇಕು. ನನ್ನ ತಾಯಿಮೇಕೆಯನ್ನು ನೋಡಿಕೊಳ್ಳಬೇಕು. ಅವಳೇ ನನ್ನನ್ನು ಬೆಳೆಸಿದವಳು. ನಾನವಳಿಗೆ ಋಣಿಯಾಗಿರಬೇಕು. ನಾನು ಇನ್ನೇನು ಮಾಡಲಿ? ನಾನು ಅಲ್ಲಿಯೇ ಇದ್ದು, ಪ್ರತಿದಿನ ಸಿಂಹಕ್ಕೆ ಹುಲ್ಲನ್ನು ತಂದುಕೊಡುತ್ತೇನೆ. ಈ ರೀತಿ ಮಾಡಿದರೆ, ನನಗೆ ಸಿಂಹ ಹಾಗೂ ನನ್ನ ತಾಯಿ - ಇಬ್ಬರೂ ಸಿಗುತ್ತಾರೆ. ಆಗ ನನ್ನಲ್ಲಿ ತಪಿತಸ್ಥ ಭಾವನೆ ಇರುವುದಿಲ್ಲ’ ಎಂದು.
ಸಿಂಹ ಹಾಗೂ ಮರಿಯ ಕಥೆ
ಮಾರನೆಯ ದಿನ ಸಿಂಹವು ತನ್ನ ನಿವಾಸದಲ್ಲಿ ಠೀವಿಯಿಂದ ಕುಳಿತಿತ್ತು. ನಿಧಾನವಾಗಿ, ಬಲು ನಿಧಾನವಾಗಿ, ಮರಿ ಸಿಂಹವು ಸಿಂಹವನ್ನು ಸಮೀಪಿಸಿ, ತಾನು ಅದಕ್ಕಾಗಿ ತಂದಿದ್ದ ತಾಜಾಹುಲ್ಲಿನ ಬಗ್ಗೆ, ಈ ರೀತಿಯಾಗಿ ಯೋಚಿಸಿತು, 'ಈ ಹುಲ್ಲು ತುಂಬಾ ಉತ್ಕೃಷ್ಟವಾದುದು. ಇಲ್ಲೆಲ್ಲೂ ಇಷ್ಟು ಒಳ್ಳೆಯ ಹುಲ್ಲುಸಿಗುವುದಿಲ್ಲ!' ಎಂದುಕೊಂಡು, ಸಿಂಹದ ಮುಂದೆ ಅದನ್ನಿಟ್ಟು ಹೇಳಿತು, 'ದಯವಿಟ್ಟು ಈ ನನ್ನ ಕಾಣಿಕೆಯನ್ನು ಸ್ವೀಕರಿಸು'.
ಸಿಂಹವು ಇದನ್ನು ಗಮನಿಸಿ ಮನಸ್ಸಿನೊಳಗೆ ಅಂದುಕೊಂಡಿತು, 'ಆಗಲಿ, ಈ ಹುಲ್ಲನ್ನು ನಾನು ಸ್ವೀಕರಿಸಿದರೆ ನನ್ನೊಡನೆ ಸಂಬಂಧ ವಿರುದಂತೆ ಭಾವಿಸುತ್ತದೆ. ಈ ನಮ್ಮ ಸಂಬಂಧವು ಈ ಹುಲ್ಲನ್ನು ಸ್ವೀಕರಿಸುವುದರಿಂದ ಮತ್ತಷ್ಟು ಬಲಗೊಳ್ಳುತ್ತದೆ. ಇದರಿಂದ ನನ್ನೊಡನೆ ಮರಿಯ ಬಾಂಧವ್ಯವು ಹೆಚ್ಚಾಗುತ್ತದೆ' ಎಂದುಕೊಂಡು, ಸಿಂಹವು ಎಂದೂ ಹುಲ್ಲನ್ನು ತಿನ್ನದಿದ್ದರೂ ಸಹ, ಒಂದಿಷ್ಟು ಹುಲ್ಲನ್ನು ತನ್ನ ಬಾಯಿಗಿಟ್ಟುಕೊಂಡು ತಿನ್ನ ತೊಡಗಿತು. ಸಿಂಹವು ಮರಿಯನ್ನು ಹೊಗಳಿ ಹೇಳಿತು, 'ನೀನು ನನಗಾಗಿ ತಂದಿರುವ ಈ ಹುಲ್ಲು ತುಂಬಾ ರುಚಿಯಾಗಿದೆ!' ಎಂದು.
ಸಿಂಹವು ಹುಲ್ಲನ್ನು ತಿಂದಿದ್ದರಿಂದ, ಅವರಿಬ್ಬರ ಸಂಬಂಧವು ಮತ್ತೂಷ್ಟು ಗಾಢವಾಯಿತು. ತಿಳಿಯಿರಿ - ಸಿಂಹವು ಹುಲ್ಲನ್ನು ತಿಂದದ್ದು, ಸಿಂಹದ ಹಾಗೂ ಮರಿಸಿಂಹದ ನಡುವಿನ ಅಂತರವನ್ನು ಬೆಸೆಯಲು ಮಾತ್ರ. ಸಿಂಹವು ನಿಜವಾಗಿ ಎಂದೂ ಹುಲ್ಲನ್ನು ತಿನ್ನದಿದ್ದರೂ, ಹುಲ್ಲನ್ನು ತಿನ್ನುವಂತೆಯೂ, ಅದರ ರುಚಿಯನ್ನು ಇಷ್ಟ ಪಟ್ಟಂತೆಯೂ ನಟಿಸಿತು.
ಗುರುಗಳು ನಿಮ್ಮನ್ನು ಪ್ರೋತ್ಸಾಹಿಸಿ ಹೇಳುತ್ತಾರೆ, "ಚೆನ್ನಾಗಿದೆ! ನೀನು ಘನ ಕಾರ್ಯ ಮಾಡಿರುವೆ. ಎಂತಹ ಸುಂದರವಾದ ಕೇಂದ್ರವನ್ನು ನಡೆಸುತ್ತಿದ್ದೀಯೆ! ಸಂಸ್ಥೆಗಾಗಿ ಎಷ್ಟೊಂದು ಕೆಲಸವನ್ನು ಮಾಡುತ್ತಿದ್ದೀಯೆ! ಚೆನ್ನಾಗಿದೆ! ಚೆನ್ನಾಗಿದೆ! ಹೀಗೆಯೇ ಮುಂದುವರೆಸು!" ಎಂದು.
ನಿಧಾನವಾಗಿ ಆ ಸಂಬಂಧವು ಬೆಳೆಯುತ್ತಾ ಹೋಯಿತು. ಒಮ್ಮೊಮ್ಮೆ ಸಿಂಹವು ಮರಿಯು ತಂದ ಹುಲ್ಲನ್ನು ತಿಂದು, ಬೈದು ಹೇಳುತ್ತದೆ. 'ಮೂರ್ಖ! ನನಗೆ ಎಂತಹ ಹುಲ್ಲನ್ನು ತರಬೇಕೆಂದು ನಿನಗೆ ತಿಳಿಯದೆ? ಮೂಢ! ಇದು ಎಂತಹ ಹುಲ್ಲು? ಈ ವೇಳೆಗೆ ನಾನೇನು ತಿನ್ನುತ್ತೇನೆಂದು ನಿನಗೆ ತಿಳಿದಿರಬೇಕಾಗಿತ್ತು, ಇನ್ನೊಮ್ಮೆ ಬರುವಾಗ, ನನಗೆ ಒಳ್ಳೆಯ ಹುಲ್ಲನ್ನು ತೆಗೆದುಕೊಂಡು ಬಾ' ಎಂದು.
ಸಿಂಹದ ಮರಿಯು ಯೋಚಿಸಿತು 'ಸಿಂಹಕ್ಕೆ ಸಿಟ್ಟು ಬರುತ್ತಿದೆ. ನನಗೂ ಒಮ್ಮೊಮ್ಮೆ ಸಿಟ್ಟು ಬರುತ್ತದೆ. ಓ! ನಾನೀಗ ಸಿಂಹದೊಡನೆ ಸಂಬಂಧಿಸಬಹುದು. ಅದು ನನ್ನ ಭಾಷೆಯಲ್ಲಿ ಮಾತನಾಡುತ್ತದೆ. ಹಾಗೂ ನಾನು ಅದರ ಭಾಷೆಯಲ್ಲಿ ಮಾತನಾಡುತ್ತೇನೆ. ಅದು ನನ್ನಂತೆಯೇ ಇದೆ!' ಎಂದು.
ಸಿಂಹವು 'ನೀನು ಮೇಕೆಯಲ್ಲ' ಎಂದು ಹೇಳಿದಾಗ ಅವನು ಒಬ್ಬ ಗುರುವಿನ ಪಾತ್ರವಹಿಸಿದಂತೆ ಹಾಗೂ 'ನಾನೊಂದು ಸಿಂಹ, ನೀನೂ ಒಂದು ಸಿಂಹ, ನೀನು ಸಹ ನನ್ನಂತೆಯೇ' ಎಂದು ಹೇಳಿದಾಗ, ಒಬ್ಬ ಆಚಾರ್ಯನ ಪಾತ್ರವಹಿಸಿದಂತೆ ಹಾಗೂ ಅವರಿಗಾಗಿ ನಿವೇದಿಸಿದ ಹುಲ್ಲನ್ನು ತಿಂದಾಗ, ಅವರೊಬ್ಬ ಅವತಾರ ಪುರುಷನಂತೆ ಎಂದು ತಿಳಿಯಿರಿ. ಇತರ ಸಿಂಹಗಳು ನೆಮ್ಮದಿಯಿಂದಿರುವಂತೆ ಮಾಡಲು ಅವರು ಇಳಿದು ಬಂದು, ಸರಳ, ಮುಗ್ಧ ಸ್ವಭಾವವನ್ನು ತಳೆದಾಗ, ಅವರೊಬ್ಬ ಅವತಾರ ಪುರುಷರು.
ನಾನು ಯಾವಾಗಲೂ ಜನರಿಗೆ ಹೇಳುವುದೇನೆಂದರೆ, ನನ್ನ ಭಾವಚಿತ್ರದಿಂದ ವಿಭೂತಿ ಸುರಿಯುವುದು ನನ್ನ ಮಹಿಮೆಯಲ್ಲ ಅಲ್ಲ! ಅದು ನನ್ನ ಮಹಿಮೆಯಲ್ಲವೇ ಅಲ್ಲ. ಬದಲಿಗೆ ನಿಮ್ಮ ಹಣೆಗೆ ನಾನು ವಿಭೂತಿಯನ್ನಿಡುವುದು ಹಾಗೂ ನಾನು ನಿಮ್ಮೊಡನೆ ಆಟವಾಡುವುದು ನನ್ನ ಮಹಿಮೆ!
ಸಿಂಹವು ಹುಲ್ಲನ್ನು ತಿಂದಾಗ, ಅದು ಮರಿಯೊಡನೆ ಸಂಬಂಧವನ್ನು ಕಲ್ಪಿಸಲು ತನ್ನ ಸ್ಥಿತಿಯಿಂದ, ತನ್ನ ಸ್ತರದಿಂದ, ತನ್ನ ಪ್ರಜ್ಞಾವಸ್ಥೆಯಿಂದ, ಕೆಳಗಿಳಿದು ಬರುತ್ತದೆ. ಇದರಿಂದ ಮರಿಗೆ ಬಹಳ ನೆಮ್ಮದಿಯಾಗುತ್ತದೆ. ಈಗ ಆ ಮರಿಗೆ ಸಿಂಹದ ಜೊತೆ ಸಂಬಂಧಿಸಲು ಸಾಧ್ಯವಾಗುತ್ತದೆ.
ಈಗ ಮರಿಯು ನಿರ್ಧರಿಸುತ್ತದೆ, 'ನಾನು ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ನಾನು ಮುಂದಿನ ಬಾರಿ ಬರುವಾಗ, ಸರಿಯಾದ ಹುಲ್ಲು ಹಾಗೂ ತಾಜಾ ಹಾಲನ್ನು ತರಬೇಕು. ನಾನು ಹಾಲನ್ನು ಬಿಸಿ ಮಾಡಿ, ಫ್ಲಾಸ್ಕ್ನಲ್ಲಿ ಹಾಕಿ ತರಬೇಕು'. ತನ್ನ ಕೆಲಸವನ್ನು ಸರಿಯಾಗಿ ಮಾಡದಿದ್ದ ಕಾರಣ, ಸಿಂಹವು ತನ್ನನ್ನು ವಜಾ ಮಾಡಿತೆಂದು ಭಾವಿಸಿ, ಮರಿಯು ಈ ಸಿದ್ಧತೆಗಳನ್ನು ಮಾಡಬೇಕೆಂದು ಯೋಚಿಸಿತು.
ಮೂರ್ಖರು! ಕೆಲಸವನ್ನು ಸರಿಯಾಗಿ ಮಾಡಿದರೂ, ಗುರುಗಳು ತೆಗಳುತ್ತಾರೆಂದು ಅವರಿಗೆ ತಿಳಿದಿಲ್ಲ! ಗುರುಗಳ ಬಳಿ ಇರುವವರ್ಯಾರೂ ಅವರಿಂದ ವಜಾ ಮಾಡಿಸಿಕೊಳ್ಳದಿರಲು ಸಾಧ್ಯವಿಲ್ಲ. ನೀವು ಕೆಲಸವನ್ನು ಮಾಡಿದರೂ ಬಿಟ್ಟರೂ, ವಜಾ ಆಗಲೇ ಬೇಕು! ಇದೇ ನಿಜಸ್ಥಿತಿ.
ನಾನು ನಿಮಗೆ ಸ್ಪಷ್ಟವಾಗಿ ಹೇಳುವುದೇನೆಂದರೆ, ನಿಮಗೆ ದಕ್ಷತೆಯಿದ್ದರೆ, ನಿಮ್ಮನ್ನು ವಜಾ ಮಾಡುವುದಿಲ್ಲವೆಂದು ಭಾವಿಸಬೇಡಿ. ನಿಮಗೆ ಹೆದರಿಕೆಯಿದ್ದಾಗ ಮಾತ್ರ, ನಾನು ವಜಾ ಮಾಡುವುದಿಲ್ಲ. ನಾನು ಹೆದರಿಕೆ ಇದ್ದವರಿಗೆ ಇನ್ನೂ ಸ್ವಲ್ಪ ಮನದೆರೆಯಲು ಕಾಲಾವಕಾಶವನ್ನು ಕೊಡುತ್ತೇನೆ. ನೀವು ದಕ್ಷರೋ ಅಲ್ಲವೋ ಎಂಬುದು ಗಣನೆಗೆ ಇಲ್ಲ. ನಿಮ್ಮನ್ನು ವಜಾ ಮಾಡಲಾಗುವುದು.
ಸಿಂಹ ಮತ್ತು ಸಿಂಹದ ಮರಿಯ ನಡುವಿನ ಸಂಬಂಧವು ಈ ರೀತಿಯಾಗಿ ಸಾಗುತ್ತಾ ಬಂದಿತು. ಈಗ ಮರಿಸಿಂಹದ ಮನಸ್ಸಿಗೆ ಸಿಂಹದ ಬಗ್ಗೆ ನಿರಾಳವಾದಂತೆನಿಸಿ, ಸಿಂಹವನ್ನು ನೋಡ ಬಯಸಿದಾಗಲೆಲ್ಲಾ, ಕಾಡಿಗೆ ಬರತೊಡಗಿತು. ಮರಿ ಸಿಂಹಕ್ಕೆ ಸಿಂಹದ ಜೊತೆಯಲ್ಲಿರುವುದು ಈಗ ಸಮಾಧಾನ ಹಾಗೂ ನೆಮ್ಮದಿಯನ್ನು ನೀಡಿತು. ಆ ಮರಿಗೆ ಸಿಂಹದ 'ಬೃಹತ್ ಯೋಜನೆ'ಯ ಬಗ್ಗೆ ತಿಳಿದಿರಲಿಲ್ಲ.
ಒಂದು ದಿನ, ಎಂದಿನಂತೆ ಮರಿಸಿಂಹವು ಹುಲ್ಲು ಹಾಗೂ ಹಾಲಿನೊಡನೆ ಬಂದಾಗ, ಸಿಂಹವು ಒಂದು ಮೇಜಿನ ಮೇಲೆ ಒಂದು ದೊಡ್ಡ ತಟ್ಟೆಯಲ್ಲಿ ಆಹಾರವನ್ನಿಟ್ಟುಕೊಂಡು ಕುಳಿತಿರುವುದನ್ನು ನೋಡಿತು. ಆ ಆಹಾರವನ್ನು ನೋಡಿ, ಸಿಂಹದ ಮರಿಯು ಹೆದರಿ, ಕಿರುಚಲಾರಂಭಿಸಿತು. 'ಇದೇಕ್ಕೆ ನಿನ್ನ ತಟ್ಟೆಯಲ್ಲಿ ಮಾಂಸವನ್ನು ಇಟ್ಟುಕೊಂಡಿದ್ದೀಯೆ? ಇದೇನು? ನೀನು ಮಾಂಸಾಹಾರಿಯೀ? ನನಗೆ ನೀನು ಮಾಂಸಾಹಾರಿಯೆಂದು ತಿಳಿದಿರಲಿಲ್ಲ. ನೀನು ಎಷ್ಟು ಪ್ರೀತಿಯ ಹಾಗೂ ಆಕರ್ಷಕವಾದ ವ್ಯಕ್ತಿ . ನೀನು ಮಾಂಸಾಹಾರಿ ಯಾಗಿರಲು ಸಾಧ್ಯವಿಲ್ಲ!. ನೀನು ಇಂತಹ ಘೋರವಾದ ಆಹಾರವನ್ನು ತಿನ್ನುವೆಯಾ ? ನಾನಾದರೋ ಸಸ್ಯಾಹಾರಿ! ನನಗಿದನ್ನು ಜೀರ್ಣಿಸಿಕೊಳ್ಳಲಾಗದು'! ಎಂದು.
ತಿಳಿಯಿರಿ, ಇದೇ ರೀತಿ, ನೀವು ಗುರುಗಳ ಮಾತನ್ನು ವಿರೋಧಿಸಿದಾಗ ಅವರು ನಿಮಗೆ ಬೇಕಿಲ್ಲದ ಅಥವಾ ನಿಮ್ಮ ತರ್ಕಕ್ಕೆ ತಿಳಿಯದ ರೀತಿಯಲ್ಲಿ ನಿಮಗೇನನ್ನೋ ಮಾಡಿದ್ದಾರೆ ಎಂದು ಭಾವಿಸುತ್ತೀರಿ ಎಂದರ್ಥ.
ಈಗ ಸಿಂಹವು ಮರಿಗೆ ವಿವರಿಸಲು ಸಮಯವನ್ನೋ ಅಥವಾ ಶಕ್ತಿಯನ್ನೋ ವ್ಯರ್ಥಗೊಳಿಸಲಿಲ್ಲ. ಮರಿಯ ಕತ್ತನ್ನು ಸುಮ್ಮನೆ ಹಿಡಿದು, ಮಾಂಸದ ಚೂರುಗಳನ್ನು ಅದರ ಬಾಯೊಳಗೆ ಬಲವಂತಾಗಿ ತುರುಕಿತು. ಯಾವಾಗ ಮಾಂಸವು ಮರಿಯ ಬಾಯನ್ನು ಸೇರಿ, ಪ್ರಾಣಿಯ ರಕ್ತವನ್ನು ರುಚಿನೋಡಿತೋ ಆಗ ಆ ಮರಿಗೆ ಇದ್ದಕ್ಕಿದ್ದಂತೆ ಒಂದು ಹೊಸ ಅನುಭವವಾಯಿತು. ಮರಿಗೆ ಏನು ಆಗುತ್ತಿದೆ ಎಂದು ತಿಳಿಯದಾಯಿತು. ಸಿಂಹವು ತನ್ನ ಕತ್ತನ್ನು ಹಿಡಿದಿರುವುದನ್ನು ಮರಿಯು ಕನ್ನಡಿಯಲ್ಲಿ ನೋಡಿತು. ತನ್ನ ಬಾಯಿಯಲ್ಲೇ ರಕ್ತ ಸೋರುತ್ತಿರುವ ಮಾಂಸವಿರುವುದನ್ನು ನೋಡಿತು. ಮರಿಯು ಮೊಟ್ಟ ಮೊದಲ ಬಾರಿಗೆ ಮಾಂಸದ ರುಚಿ ಕಂಡಿತ್ತು! ನಿಮಗೂ ಸಹ 'ಸತೋರಿ' ಅಥವಾ ಪರಮಾನಂದದ ಮೊದಲ ಅನುಭವದಲ್ಲಿ ಹೀಗೆಯೇ ಆಗುವುದು! ಅದನ್ನು ನೀವು ಅನುಭವಿಸಿದಾಗ, ನಿಮಗೇ ತಿಳಿಯುತ್ತದೆ!
ಮಾಂಸವನ್ನು ತಿಂದ ಮರಿಯು, ಸಿಂಹದಂತೆಯೇ ಘರ್ಜಿಸಿತು! ಅದು ಘರ್ಜಿಸಿ, ತನ್ನ ನಿಜಸ್ವರೂಪವನ್ನು ಪ್ರಕಟಿಸಿತು. ಸಿಂಹವು ಅದರ ಕಣ್ಣುಗಳನ್ನು ನೋಡಿ ಹೇಳಿತು, ‘ತತ್ ತ್ವಂ ಅಸಿ’ - ‘ನೀನೂ ಅದೇ’ ಎಂದು ದೀಕ್ಷೆಯು ಆಯಿತು. ಸಿಂಹವು ಸಿಂಹವೇ ಆಯಿತು ಅಷ್ಟೇ. ತಾನು ಮೇಕೆ ಎಂದು ತಿಳಿದಿದ್ದ ಸಿಂಹದ ಮರಿಯು ಸಿಂಹವೇ ಆಯಿತು.
ನೀವು ಒಂದು ಸಿಂಹ, ಮೇಕೆಯಲ್ಲ!
ತಿಳಿಯಿರಿ, ನೀವು ಭಾವಿಸಿರುವ ಹಾಗೆ, ನೀವು ಒಬ್ಬ ಮನುಷ್ಯನೋ ಅಥವಾ ನಿಮ್ಮ ಗುರುತನ್ನು ಏನೆಂದು ಭಾವಿಸಿರುವಿರೋ ಅದು ನೀವಲ್ಲ, ನೀವು ಬಹಳಷ್ಟು ಮೇಕೆಯಂತೆಯೇ ಇದ್ದೀರಿ. ವಾಸ್ತವವಾಗಿ ನೀವು ಮೇಕೆಯೇ . ನನ್ನನ್ನು ನೋಡಿ ತಿಳಿಯಿರಿ: ನಾನೂ ಒಂದು ಮೇಕೆ ಎಂದು ಭಾವಿಸಿದ್ದೆ, ನಾನು ಸಿಂಹವಾದುದು ಹೇಗೆಂದು ನೋಡಿರಿ. ನನ್ನ ಜೀವನವನ್ನು ಹತ್ತಿರದಿಂದ ಸೂಕ್ಷ್ಮವಾಗಿ ನೋಡಿದಲ್ಲಿ ನಿಮಗೇ ತಿಳಿಯುತ್ತದೆ. ನಿಮ್ಮನ್ನು ನೀವು ಮೇಕೆ ಎಂದು ತಿಳಿದಿರುವುದು ಎಷ್ಟು ದಡ್ಡತನವೆಂದು ಅರಿಯುವಿರಿ, ಆಗ ನೀವು ಅಪ್ರಯತ್ನವಾಗಿಯೇ ಸಿಂಹವಾಗುತ್ತೀರಿ.
ಶ್ರೀ ಕೃಷ್ಣನು, ‘ನನ್ನ ಜೀವನವನ್ನು ತಿಳಿದರೆ, ಮುಕ್ತಿಯನ್ನು ಹೊಂದುತ್ತೀರಿ’ ಎಂದು ಹೇಳಿರುವುದು ಇದೇ ಅರ್ಥದಲ್ಲಿ. ಒಬ್ಬ ಮುಕ್ತಾತ್ಮನ ಜೀವನವು ನಿಮ್ಮನ್ನು ಮುಕ್ತನನ್ನಾಗಿಸುತ್ತದೆ. ಏಕೆಂದರೆ ನೀವು ಯಾವ ಸ್ತರದಲ್ಲಿದ್ದೀರೆಂದು ಅದು ನಿಮಗೆ ತಿಳಿಯಪಡಿಸುತ್ತದೆ. ಒಬ್ಬ ಮುಕ್ತಾತ್ಮನೂ ಸಹ ಹಿಂದೊಮ್ಮೆ ಈಗ ನೀವಿರುವಂತೆಯೇ ಅಜ್ಞಾನದಲ್ಲಿದ್ದ. ಹಸೀ ಮಾಂಸವನ್ನು ನುಂಗಲು ಬೇಕಾದ ಧೈರ್ಯವನ್ನು ಇದು ನಿಮಗೆ ತಂದು ಕೊಡುತ್ತದೆ. ನಿಮ್ಮ ನಿಜ ಸ್ವರೂಪವಾದ ಬ್ರಹ್ಮಾನಂದವನ್ನು ಅರಿಯಲು ಮೇಕೆಯಂತೆ ಅರಚುವುದನ್ನು ಬಿಟ್ಟು ಸಿಂಹದಂತೆ ಘರ್ಜಿಸಲು ಶಕ್ತಿಯನ್ನು ಕೊಡುತ್ತದೆ. ನಿಮಗೆ ಈ ಅನುಭವವಾದಾಗ ಅರಚುವುದನ್ನು ಬಿಟ್ಟು ನೀವು ಘರ್ಜಿಸಲಾರಂಭಿಸುವಿರಿ.
ಸಿಂಹದ ಮರಿಗೆ ತಾನು ಸಿಂಹವೆಂದು ಅರಿಯಲು ಎಷ್ಟು ಸಮಯ ಬೇಕಾಯಿತು? ಕ್ಷಣ ಮಾತ್ರ! ಯಾವ ಕ್ಷಣದಲ್ಲಿ ಸಿಂಹದ ಮರಿಯ ಬಾಯಿಗೆ ರಕ್ತ ಸಹಿತವಾದ ಮಾಂಸವು ಹೋಯಿತೋ, ಆ ಕ್ಷಣದಲ್ಲಿಯೇ ಅದು ಘರ್ಜಿಸಲು ಆರಂಭಿಸಿತು. ಆದರೆ ಮರಿಯ ಬಾಯಿಗೆ ಮಾಂಸ ಹೋಗಿಸಲು ಸಿಂಹಕ್ಕೆ ಎಷ್ಟು ಕಾಲ ಬೇಕಾಯಿತೆಂದು ನೆನಪಿಡಿರಿ.
ನನ್ನೊಡನೆ ಸಂಬಂಧವನ್ನು ಕಲ್ಪಿಸಲು , ನನ್ನ ಗುಹೆಗೆ ಬರಲು ಸಮಯ ಬೇಕಾಗುತ್ತದೆ. 'ಆನಂದ ಗಂಧ'1ವೇ ನನ್ನ ಗುಹೆ, ನನ್ನ 'ಹೃದಯ ಗುಹೆ', ಹೃದಯದಲ್ಲಿರುವ ಗುಹೆ. ನೀವಲ್ಲಿಗೆ ಬರಲು ಬಾಂಧವ್ಯದ ನಿರ್ಮಾಣವಾಗಬೇಕು. ಇದಾಗಲು ಒಂದಿಷ್ಟು ಸಮಯ ಬೇಕಾಗುತ್ತದೆ. ಜ್ಞಾನೋದಯವಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಸಂವಹನೆಗೆ ಬೇಕಾದ ನಂಬಿಕೆಗೆ, ಸೇತುವೆಗೆ ಆ ಅನುಭವಕ್ಕೆ, ಕಾಲಾವಕಾಶ ಬೇಕು.
ಇಲ್ಲಿಯವರೆಗೂ, ನೀವು ನಿಮ್ಮ ಇಂದ್ರಿಯಗಳನ್ನು ನಂಬಿದ್ದೀರಿ. ನಾನೀಗ ಮೂರು ಬಗೆಯ ಶರಣಾಗತಿಯನ್ನು ವಿವರಿಸುತ್ತೇನೆ. ಬುದ್ಧಿಯ ಶರಣಾಗತಿ, ಭಾವನೆಗಳ ಶರಣಾಗತಿ ಹಾಗೂ ನಿಮ್ಮ ಇಡೀ ಅಸ್ತಿತ್ವದ ಶರಣಾಗತಿ.
ಮೊದಲನೆಯದು : ಬುದ್ಧಿಯ ಶರಣಾಗತಿ ಎಂದರೆ ಗುರುವಿನ ಬುದ್ಧಿಯು ನಿಮ್ಮ ಬುದ್ಧಿ ಗಿಂತ ಮಿಗಿಲಾದುದು ಎಂದು ನಂಬುವುದು. ಇದು ಕೇವಲ ಬುದ್ಧಿಯ ಶರಣಾಗತಿ. ಈ ಹಂತದಲ್ಲಿ, ನೀವು ಗುರುಗಳು ತೋರಿಸಿಕೊಟ್ಟ ಜೀವನ ವಿಧಾನವನ್ನು ಅನುಸರಿಸುತ್ತೀರಿ.
ಎರಡನೆಯದು: ನಿಮ್ಮ ಭಾವನೆಗಳಿಗಿಂತ ಗುರುಗಳ ಭಾವನೆಗಳ ಮೇಲೆ ಹೆಚ್ಚಿನ ನಂಬಿಕೆ ಇಡುವುದು. ಅಂದರೆ ಗುರುಗಳೊಡನೆ ಇರುವ ಸಂಬಂಧವು ಮಿಕ್ಕೆಲ್ಲಾ ಸಂಬಂಧಗಳಿಗಿಂತ ಮಿಗಿಲಾದುದೆಂದು ನಂಬುವುದು. ಒಂದು ವೇಳೆ ಭಗವಂತನು ನಿಮ್ಮ ಮುಂದೆ ಪ್ರತ್ಯಕ್ಷನಾಗಿ, ಈ ಭೂ ಗ್ರಹದ ಮೇಲೆ
ರೂಪರಹಿತವಾದದ್ದು ರೂಪದಲ್ಲಿ ಐಕ್ಯವಾಗುವ ಸನ್ನಿವೇಶ.
ನಿಮ್ಮನ್ನುಳಿದು, ಜೀವಂತವಾಗಿರಬಹುದಾದ ಇನ್ನೊಬ್ಬ ವ್ಯಕ್ತಿಯನ್ನು ಮಾತ್ರ ಆಯ್ದು ಕೊಳ್ಳಲು ಹೇಳಿದರೆ, ನೀವು ಯಾರನ್ನು ಆಯ್ಕೆ ಮಾಡುವಿರಿ? ಒಂದು ವೇಳೆ ನೀವು ನಿಮ್ಮ ಗುರುಗಳನ್ನು ಆಯ್ಕೆ ಮಾಡಿದಲ್ಲಿ, ನಿಮ್ಮಲ್ಲಿ ಭಾವನೆಗಳ ಶರಣಾಗತಿ ಉಂಟಾಗಿದೆ ಎಂದರ್ಥ. ನಿಜವಾಗಿ, ಗುರುಗಳನ್ನು ನಾಶಪಡಿಸು ವುದು ಸಾಧ್ಯವೇ ಇಲ್ಲ, ಆದರೆ ಅದು ಬೇರೆಯ ವಿಷಯ! ನೀವು ಅವರನ್ನು ಆಯ್ಕೆ ಮಾಡಿದ್ದೀರೆಂಬ ಕಾರಣದಿಂದ, ಅವರು ಜೀವಂತವಾಗಿರುವರೆಂದು ಎಂದಿಗೂ ತಿಳಿಯದಿರಿ. ನೀವು ಅವರನ್ನು ಆಯ್ಕೆ ಮಾಡಿಕೊಂಡರೂ, ಆಯ್ಕೆ ಮಾಡಿಕೊಳ್ಳದಿದ್ದರೂ ಅವರು ಜೀವಂತವಾಗಿರುತ್ತಾರೆ. ನಿಮಗೇನಾದರೂ ಮಿಕ್ಕೆಲ್ಲಾ ಭಾವನೆಗಳಿಗಿಂತಲೂ, ಗುರುಗಳ ಬಗ್ಗೆ ಇರುವ ಭಾವನೆಯು ಅಧಿಕವಾಗಿದ್ದಲ್ಲಿ, ನಿಮಗೆ ಭಾವನೆಗಳ ಶರಣಾಗತಿ ಉಂಟಾಗಿದೆ ಎಂದರ್ಥ. ಸರಿಯಾಗಿ ತಿಳಿಯಿರಿ, ಶೇಕಡ 99 ರಷ್ಟು ಜನರು ಮೊದಲ ಹಂತದಲ್ಲಿಯೇ ಉಳಿಯುತ್ತಾರೆ. ಇವರಲ್ಲಿ 20 ರಿಂದ 40 ರಷ್ಟು ಜನರು ಮಾತ್ರವೇ ಇನ್ನೂ ಆಳವಾದ ಎರಡನೆಯ ಹಂತವನ್ನು ತಲುಪುತ್ತಾರೆ. ಮಿಕ್ಕವರು ಎಲ್ಲಿ ರುವರೋ ಅಲ್ಲಿಯೇ ಉಳಿದುಬಿಡುತ್ತಾರೆ.
ಮೂರನೆಯದಾದ ಮತ್ತೊಂದು ಬಗೆಯ ಶರಣಾಗತಿ ಎಂದರೆ, ಇಂದ್ರಿಯಗಳ ಶರಣಾಗತಿ. ಶ್ರೀಕೃಷ್ಣನ ಜೀವನದಲ್ಲಿ ಒಂದು ಸುಂದರವಾದ ಘಟನೆಯಿದೆ. ಮಹಾಭಾರತ ಯುದ್ಧದ ನಂತರ, ಕೃಷ್ಣಾರ್ಜುನರು ವಿಶ್ರಮಿಸುತ್ತಿದ್ದಾಗ, ಶ್ರೀಕೃಷ್ಣನು ಹೇಳಿದನು, ‘ಎಲೈ ಅರ್ಜುನ', ಅಲ್ಲಿ ನೋಡು, ಅಲ್ಲೊಂದು ಹಸಿರು ಕಾಗೆ ಇದೆ!' ಎಂದು.
ಅರ್ಜುನನು ಉದ್ಗರಿಸಿದನು, ‘ಆಹಾ! ಎಂತಹ ಸುಂದರ ಹಸಿರು ಕಾಗೆ!' ಎಂದು.
ಶ್ರೀಕೃಷ್ಣನು ಹೇಳಿದನು, 'ಮೂಢನೆ, ಅದು ಕಪ್ಪಾಗಿದೆ, ಹಸಿರಾಗಿಲ್ಲ' ಎಂದು.
1. ಶ್ರೀಕೃಷ್ಣನ ನಿರ್ದೇಶನದಲ್ಲಿ ದುಷ್ಟತೆಯ ವಿರುದ್ಧ ಯುದ್ಧ ಮಾಡಿದ ಪಾಂಡವರ ಸಹೋದರರಲ್ಲಿ ಒಬ್ಬನು.

ಅರ್ಜುನನೆಂದನು, 'ಹೌದು ಕೃಷ್ಣ! ಅದು ಕಪ್ಪಗಿದೆ, ಹಸಿರಲ್ಲ!' ಎಂದು.
ಶ್ರೀ ಕೃಷ್ಣನು ಕೇಳುತ್ತಾನೆ, 'ನಿನಗೇನಾಗಿದೆ? ನಾನು ಹಸಿರು ಎಂದಾಗ ನೀನು ಹಸಿರು ಎನ್ನುವೆ. ನಾನು ಕಪ್ಪು ಎಂದಾಗ ನೀನು ಕಪ್ಪು ಎನ್ನುತ್ತೀಯೆ, ನಿನಗೇನಾಗುತ್ತಿದೆ?' ಎಂದು.
ಆಗ ಅರ್ಜುನನು ಹೇಳುತ್ತಾನೆ, 'ಕೃಷ್ಣ, ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ - ಕಾಗೆಯ ಬಣ್ಣವೇನೆಂದು ನಿಜವಾಗಿ ನನಗೆ ತಿಳಿಯದು. ಆದರೆ ನೀನು ಅದು ಹಸಿರು ಬಣ್ಣವೆಂದಾಗ, ನನಗದು ಹಸಿರಾಗಿಯೇ ಕಂಡಿತು, ನೀನದನ್ನು ಕಪ್ಪೆಂದಾಗ, ನನಗೂ ಕಪ್ಪು ಬಣ್ಣದ್ದಾಗಿಯೇ ಕಂಡಿತು. ನನಗಿನ್ನೇನೂ ತಿಳಿಯದು'! ಎಂದು.
ಅರ್ಜುನನು ಶ್ರೀ ಕೃಷ್ಣನ ಇಂದ್ರಿಯಗಳನ್ನು ನಂಬಿದ್ದನು. ಅವನು ಗುರುಗಳ ಇಂದ್ರಿಯಗಳನ್ನು ತನ್ನ ಸ್ವಂತ ಇಂದ್ರಿಯಗಳಿಗಿಂತಲೂ ಅಧಿಕವಾಗಿ ನಂಬಿದ್ದನು !
ಈಗಿನ ಸ್ಥಿತಿಯೆಂದರೆ, ನಿಮ್ಮ ಇಂದ್ರಿಯಗಳನ್ನು ನೀವು ನಂಬಿದ್ದೀರಿ. ನಿಮ್ಮ ಇಂದ್ರಿಯಗಳ ಪ್ರಕಾರ ನೀವು ಯಾರು? ಗಂಡಸೋ, ಹೆಂಗಸೋ? ನೀವು ಒಂದು ನಿರ್ದಿಷ್ಟ ಸಮಯಕ್ಕೆ ಉಣ್ಣಬೇಕು. ಬೇರೊಂದು ಹೊತ್ತಿಗೆ ನಿದ್ರಿಸಬೇಕು. ಕೆಲವು ಕೆಲಸಗಳನ್ನು ಆಯಾ ನಿರ್ದಿಷ್ಟ ಸಮಯಗಳಲ್ಲಿ ಮಾಡಬೇಕು. ಇದು ಅಭ್ಯಾಸಬಲ. ನಿಮಗೆ ನಿಮ್ಮದಾದ 'ಈ ದೇಶ', 'ಈ ಊರು' ಮುಂತಾದ ಅನೇಕ ಗುರುತುಗಳಿವೆ. ನಿಮ್ಮ ಇಂದ್ರಿಯಗಳ ಪ್ರಕಾರ, ಇದೇ ನೀವು. ನೀವು ನಿಮ್ಮ ಅಸ್ತಿತ್ವವಲ್ಲದೇ, ಮತ್ತೇನೂ ಅಲ್ಲವೆಂದು ತಿಳಿದಿದ್ದೀರಿ.
ನೀನು ನಿಜವಾಗಿಯೂ ಯಾರು....
ಆದರೆ ಗುರುಗಳ ಪ್ರಕಾರ, ನೀವು ಭಗವಂತ! ನಿಮ್ಮ ಇಂದ್ರಿಯಗಳ ಪ್ರಕಾರ, ನೀವು ಒಬ್ಬ ಮನುಷ್ಯ, ಆದರೆ ಗುರುಗಳ ಪ್ರಕಾರ, ನೀವು ಒಬ್ಬ ಆಧ್ಯಾತ್ಮ ಜೀವಿ! ನಿಮ್ಮ ಇಂದ್ರಿಯಗಳನ್ನು ಎಲ್ಲಿಯವರೆಗೆ ನಂಬುತ್ತೀರೋ ಅಲ್ಲಿಯವರೆಗೂ ನೀವು ಮನುಷ್ಯರಾಗಿಯೇ ಉಳಿಯುತ್ತೀರಿ. ನೀವು ಆ ಗುರುತನ್ನೇ ನಂಬುತ್ತೀರಿ. ನೀವು ಗುರುಗಳನ್ನು ನಿಮ್ಮ ಇಂದ್ರಿಯಗಳಿಗಿಂತ ಹೆಚ್ಚಾಗಿ ನಂಬಿದಾಗ, ಇದ್ದಕ್ಕಿದ್ದಂತೆ ನಿಮಗೆ ಅವರ ಮಾತುಗಳು ತಿಳಿಯತೊಡಗುತ್ತವೆ.
ನಿಮ್ಮ ಇಂದ್ರಿಯಗಳು ನೀವು ಒಬ್ಬ ಮನುಷ್ಯನೆಂದು ಹೇಳುತ್ತವೆ. ಆದರೆ ನಾನು ನಿಮ್ಮನ್ನು ಒಬ್ಬ 'ಆಧ್ಯಾತ್ಮಿಕ ಜೀವಿ' ಎನ್ನುತ್ತೇನೆ. ನೀವು ನಿಮ್ಮ ಇಂದ್ರಿಯಗಳನ್ನು ನಂಬಿದರೆ, ನೀವು ನಿಮ್ಮನ್ನು ಒಬ್ಬ ಮಾನವನೆಂದು ನಂಬುತ್ತೀರಿ. ನೀವು ನಿಮ್ಮ ಗುರಗಳನ್ನು ನಂಬಿದರೆ, ನೀವು ಒಬ್ಬ ಆಧ್ಯಾತ್ಮಿಕ ಜೀವಿ ಎಂಬ ಅನುಭವವುಂಟಾಗುತ್ತದೆ. ಈ ಬದಲಾವಣೆಯನ್ನೇ ನಾನು 'ಅರಿವಿನ ಭಾವಾಂತರ' ಎನ್ನುತ್ತೇನೆ. ಈ ಸ್ಥಿತಿಯುಂಟಾಗಲು, ಮಾಂಸವನ್ನು ಹಿಡಿಯಿರಿ - ಸುಮ್ಮನೆ ನುಂಗಿರಿ ಹಾಗೂ ಘರ್ಜಿಸಿರಿ ಅಷ್ಟೇ! ಕ್ಷಣ ಮಾತ್ರದಲ್ಲಿ ಅರಚುವುದು ಘರ್ಜನೆಯಾಗಿ ಮಾರ್ಪಡುತ್ತದೆ. ಆ ಬದಲಾವಣೆಯ ಕ್ಷಣವೇ 'ಅರಿವಿನ ಭಾವಾಂತರ'ದ ಕ್ಷಣ.
ಶ್ರೀ ಕೃಷ್ಣನು, 'ನನ್ನ ಜೀವನವನ್ನು ತಿಳಿದರೆ, ಮೋಕ್ಷವನ್ನು ಪಡೆಯುತ್ತೀರಿ', ಎಂದು ಹೇಳಿರುವುದೇಕೆಂದರೆ, ಅವನ ಜೀವನದ ಕಥೆಯನ್ನು ಕೇಳಿದಾಗ, ನಿಮ್ಮಲ್ಲಿ ಅರಿವಿನ ಭಾವಾಂತರವಾಗಲು ಪ್ರಾರಂಭವಾಗುತ್ತದೆ. ಆ ಕಾರಣದಿಂದಲೇ ನಾನು ಈ ಬಾರಿ, ನನ್ನ ಹುಟ್ಟಿನಿಂದಲೂ, ನನಗಾದ ದೈವಿಕ ಅನುಭವಗಳನ್ನು ನಿಮಗೆ ತಿಳಿಸಬೇಕೆಂದುಕೊಂಡಿರುವುದು.
ಈಗ ನೀವು ಕೆಲವು ರೀತಿಗಳಲ್ಲಿ ಸಿದ್ಧರಾಗಬೇಕು. ಮೊದಲನೆಯದಾಗಿ, ನೀವು ಸಂಪೂರ್ಣವಾಗಿ ತೆರೆದ ಮನಸ್ಕರಾಗಿರಿ. ಜಡವಾಗದಿರಿ. ಜೀವನವು ಬರಿಯ ತರ್ಕಕ್ಕಿಂತ ಮಿಗಿಲಾದುದೆಂದು ತಿಳಿಯಿರಿ. ನೀವೆಲ್ಲರೂ ಸಂಪೂರ್ಣವಾಗಿ ತೆರೆದ ಮನಸ್ಕರಾಗು ವಂತಾಗಲಿ, ಹಾಗೂ ಅರಿವಿನಿಂದ ಇರುವವರಂತಾಗಲಿ.
ಎರಡನೆಯದಾಗಿ - ಇದು ಒಂದು ಮುಖ್ಯವಾದ ಅಂಶ. ಇಲ್ಲಿ ಗೆ ನೀವು ಮುಚ್ಚಲ್ಪಟ್ಟ ಮೂಲಾಧಾರ ಚಕ್ರದೊಡನೆ ಬರಬೇಡಿರಿ. ಇದರರ್ಥ ಏನೆಂದರೆ, ನೀವು ನಿರೀಕ್ಷೆಗಳಿಂದಲೋ ಅಥವಾ ಅವಾಸ್ತವವಾದ ಕಲ್ಪನೆಗಳಿಂದಲೋ ಗುರುಗಳ ಬಳಿ ಬರಬೇಡಿರಿ. ನೀವು ನನ್ನ ಬಳಿ ಬಂದಾಗ, ನನ್ನ ಬಗ್ಗೆ ನಿಮಗೇನಾದರೂ ಕಲ್ಪನೆಗಳಿದ್ದರೆ, ಅದನ್ನು ಮುರಿಯಲು ನಾನೇ ಮೊದಲಿಗನಾಗುತ್ತೇನೆ!
ಈ ದಿನ ಬೆಳಿಗ್ಗೆ ನಾನು ಇಲ್ಲಿ ಬಂದವರಿಗೆಲ್ಲಾ ತಿಂಡಿ ಬಡಿಸುತ್ತಿರುವುದನ್ನು ನೀವು ನೋಡಿರಬಹುದು. ಜನರು ನನ್ನ ಈ ನಡವಳಿಕೆಯಿಂದ ಆಶ್ಚರ್ಯಚಕಿತರಾದರು! ನಾನು ಬಿಸಿ ಒಲೆಯ ಮುಂದೆ ಕುಳಿತು ಎಲ್ಲ ರಿಗೂ ಬಡಿಸುತ್ತಿದ್ದೆ. ಕೆಲವರಿಗೆ ಆಶ್ಚರ್ಯವಾಗಿದುದು ಏಕೆಂದರೆ, ಕೇವಲ ಹತ್ತು ನಿಮಿಷಗಳ ಕೆಳಗಷ್ಟೇ ನಾನು ಅವರನ್ನು ಅವರು ಮಾಡಬೇಕಾಗಿದ್ದ ಕೆಲಸವನ್ನು ಇನ್ನೂ ಮುಗಿಸದಿದ್ದ ಕಾರಣ, ಅವರನ್ನು ಭೇಮಾರಿ ಮಾಡಿದ್ದೆ. ಆಗಳಿಗೆಯಲ್ಲಿ ನಾನವರಿಗೆ ಒಬ್ಬ ಗುರುವಾಗಿ ಕಂಡಿದ್ದೆ. ಹತ್ತು ನಿಮಿಷಗಳ ಹಿಂದೆ ಅವರ ಮೇಲೆ ಕೂಗಾಡಿದ್ದ ನಿಜವಾದ ವ್ಯಕ್ತಿಯೇ ಈಗ ಬಿಸಿಲಿನಲ್ಲಿ ಕುಳಿತು ಅವರಿಗೆ ತಿಂಡಿಯನ್ನು ಬಡಿಸುತ್ತಿದ್ದಾರೆ! ಗುರುಗಳ ವಿವಿಧ ಆಯಾಮಗಳ ಭಾವಗಳನ್ನು ಜೀರ್ಣಿಸಿಕೊಳ್ಳಲು ನಿಮ್ಮ ಮನಸ್ಸು ಬೆಚ್ಚುತ್ತದೆ.
ನಾನು ಯಾವಾಗಲೂ ಜನರಿಗೆ ಹೇಳುವುದೇನೆಂದರೆ, ಗುರುಗಳ ಬಳಿ ಹೋಗುವ ಮೊದಲು ನಿಮ್ಮನ್ನೇ ನೀವು ಸಿದ್ಧ -ಮಾಡಿಕೊಳ್ಳಿರಿ! ಗುರುಗಳ ಅಂತರಂಗವು ಮನಸ್ಸನ್ನು ಬೆಚ್ಚಿಸುವಂಥದ್ದಾಗಿರುತ್ತದೆ. ಅವರು ಅದೆಷ್ಟು ಉತ್ಸಾಹಭರಿತರಾಗಿ, ಹುರುಪಿನಿಂದ ಕೂಡಿದವರಾಗಿ, ತೀವ್ರತೆಯಿಂದ ಕೂಡಿದವರಾಗಿರುತ್ತಾರೆಂದರೆ, ನೀವು ನಿಮ್ಮ ಗುರುತನ್ನೇ ಕಳೆದುಕೊಳ್ಳುವಿರಿ ಹಾಗೂ ಹಿಂದೊಮ್ಮೆ ನಿಮಗೊಂದು ಗುರುತು ಇತ್ತೆಂದೂ ಸಹ ಮರೆತುಬಿಡುವಿರಿ.
ಮರಿಯು ಸಿಂಹವಾದಾಗ, ಈ ಅನುಭವವೇ ಆದದ್ದು. ಆ ಮರಿಗೆ ತಾನು ಹುಲ್ಲು ತಿನ್ನುತ್ತಿದ್ದುದು, ಮೇಕೆಯ ಹಾಲು ಕುಡಿಯುತ್ತಿದ್ದದ್ದು, ಮೇಕೆಗಳೊಡನೆ ಆಟವಾಡುತ್ತಿದ್ದದ್ದೆಲ್ಲದರ ನೆನಪೂ ಸಹ ಮಸುಕಾಯಿತು. ಅದೇ ರೀತಿ, ನೀವು ಗುರುಗಳ ಸಾನ್ನಿಧ್ಯಕ್ಕೆ ಬಂದಾಗ, ನಿಮ್ಮ ಹಳೆಯ ಗುರುತು ಉಳಿಯುವುದು ನಿಮ್ಮ ದಾಖಲೆಯಲ್ಲಿ ಮಾತ್ರ. ಈ ಪತ್ತಾಗಾರದಲ್ಲಿಯೇ ನಿಮ್ಮ ಗುರುತು ಇರುತ್ತದೆ. ಹಾಗೂ ನಿಮಗೊಂದು ಗುರುತು ಇತ್ತೆಂದೂ ಸಹ ನಿಮಗೆ ಮರೆತು ಹೋಗುತ್ತದೆ.
ಆದ್ದರಿಂದ ಸರಿಯಾಗಿ ತಿಳಿಯಿರಿ, ಗುರುವು ಎಂತಹ ಸಜೀವ ಶಕ್ತಿ ಎಂದರೆ, ನೀವು ಪರಿವರ್ತನೆಯನ್ನು ಖಂಡಿತವಾಗಿ ಹೊಂದುತ್ತೀರಿ. ನೀವು ಒಬ್ಬ ಹೊಸ ವ್ಯಕ್ತಿಯಾಗುತ್ತೀರಿ, ನಿಮ್ಮಲ್ಲಿ ಒಂದು ಹೊಸದಾದ ಶಕ್ತಿಯನ್ನು ಪಡೆಯುತ್ತೀರಿ ಹಾಗೂ ಒಂದು ಹೊಸ ಪ್ರಜ್ಞೆಯಿಂದ ಕೂಡಿದವರಾಗುತ್ತೀರಿ.
ಒಂದು ವಾಕ್ಯದಲ್ಲಿಯೇ ನಾನಿದನ್ನು ಹೇಳುತ್ತೇನೆ: ನೀವು ಹೊಸ ವ್ಯಕ್ತಿಯಾಗುತ್ತೀರಿ! ನೀವು ಹೊಸತನದಿಂದಲೂ, ಸ್ವಚ್ಛತೆಯಿಂದಲೂ ಕೂಡಿದವರಾಗುತ್ತೀರಿ, ಶಕ್ತಿಯುತವಾದ ವಜ್ರವು ನಿಮಗೆ ಸಂಪೂರ್ಣವಾಗಿ ಮೆರುಗು ನೀಡಿ, ಹೊಳೆಯುವಂತೆ ಮಾಡಿ, ನೀವೂ ವಜ್ರವೇ ಎಂಬ ಅನುಭವವಾಗುವಂತೆ ಮಾಡುತ್ತದೆ. ವಜ್ರದ ಭಾಗವೊಂದನ್ನು ಬಿಟ್ಟು, ಮಿಕ್ಕೆಲ್ಲವೂ ನಿಮ್ಮಿಂದ ಹೊರತೆಗೆಯಲ್ಪಡುತ್ತದೆ. ಮಿಕ್ಕೆಲ್ಲವೂ ನಿಮ್ಮಿಂದ ಕಣ್ಮರೆಯಾದಾಗ, ನಿಮಗೆ ಹಗುರವಾದಂತೆ ಭಾಸವಾಗುತ್ತದೆ. ನಿಮ್ಮ ಮೈ ಭಾರವೂ ಕಡಿಮೆಯಾದಂತೆ ಭಾಸವಾಗುತ್ತದೆ.
ಸರಿಯಾಗಿ ತಿಳಿಯಿರಿ: ನೀವು ನಿಮ್ಮ ದೇಹದ ತೂಕವನ್ನೇನೂ ಕಳೆದು ಕೊಂಡಿರುವುದಿಲ್ಲ. ಆದರೆ ನೀವು ನಿಮ್ಮ ಭಾಗವಲ್ಲದ, ನಿಮಗೆ ತೊಂದರೆ ಕೊಡುತ್ತಿದ್ದ ದುರ್ಮಾಂಸದ ಗಂಟುಗಳನ್ನು ಕಳೆದುಕೊಂಡಿರುತ್ತೀರಿ. ಯಾವುದು ನಿಮ್ಮ ಅಂತರ್ಗತವಾದ ಭಾಗವೋ ಅದು ನಿಮಗೆ ತೊಂದರೆ ಕೊಡಲಾರದು. ಒಂದು ವೇಳೆ ಅದು ತೊಂದರೆ ಎನಿಸಿದರೆ, ಅದು ನಿಮ್ಮ ಒಂದು ಭಾಗವಲ್ಲವೆಂದು ತಿಳಿಯಿರಿ. ಅದು ನಿಮ್ಮ ಭಾಗವಾಗಿ ಇರಲೂ ಬಾರದು.
ಎಲ್ಲಾ ಕ್ಷೋಭೆಗಳೂ ದುರ್ಮಾಂಸಗಳೇ. ಈ ಕೆಲವು ದಿನಗಳಲ್ಲಿ, ಶಸ್ತ್ರವೈದ್ಯರಾದ ಗುರುವು ನಿಮ್ಮ ಮೇಲೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಿದ್ದಾರೆ! ಆದ್ದರಿಂದ ಸಂಪೂರ್ಣವಾಗಿ ತೆರೆದ ಮನಸ್ಸಿನಿಂದ ಬನ್ನಿರಿ.
ಗುರುಗಳ ಬಗ್ಗೆ ಜನರ ಮನೋಭಾವ ಹೇಗಿರಬೇಕು ಎಂಬುದರ ಬಗ್ಗೆ ನಾನು ಜನರಿಗೆ ಹೇಳುತ್ತಿರುತ್ತೇನೆ. ಭಾಗವತದಲ್ಲಿ ಗುರುಗಳೊಡನೆ ಸಂಬಂಧಿಸಬಹುದಾದ ಐದು ಮನೋಭಾವಗಳಿವೆ. ಒಂದು - ತಾಯಿಗೆ ತನ್ನ ಮಗುವಿನ ಬಗ್ಗೆ ಇರುವ ಭಾವನೆ. ಇದಕ್ಕೆ ವಾತ್ಸಲ್ಯ ಭಾವ ಎನ್ನುತ್ತಾರೆ. - ಸಾಕುತಾಯಿಯಾದ ಯಶೋದೆಯು ಶ್ರೀ ಕೃಷ್ಣನ ಜೊತೆಗೆ ಸಂಬಂಧಿಸಿದ ಹಾಗೆ.
ಮತ್ತೊಂದು ಭಾವವು, ಮಗುವು ತನ್ನ ತಂದೆ ಅಥವಾ ತಾಯಿಯ ಬಗ್ಗೆ ಹೊಂದಿರುವ ಭಾವ. ಇದಕ್ಕೆ ಮಾತೃ ಭಾವವೆನ್ನುತ್ತಾರೆ. ಶ್ರೀ ರಾಮಕೃಷ್ಣರು ಕಾಳಿದೇವಿಯನ್ನು ಕಾಣುತ್ತಿದ್ದ ಹಾಗೆ - ಗುರುವನ್ನು ತಾಯಿ ಅಥವಾ ತಂದೆಯಂತೆ ಕಾಣುವುದು.
ಮೂರನೆಯದು, ಒಬ್ಬ ಮಿತ್ರನೊಡನೆ ಇರುವ ಭಾವ - ಇದಕ್ಕೆ 'ಸಖಿಭಾವ' ಎನ್ನುತ್ತಾರೆ. ಕುಚೇಲ ಹಾಗೂಅರ್ಜುನರು ಶ್ರೀ ಕೃಷ್ಣನೊಡನೆ ಸಂಬಂಧಿಸಿದ ಹಾಗೆ.
ಮತ್ತೊಂದು ಭಾವವು ಸೇವಕನ ಭಾವ. ಇದಕ್ಕೆ 'ದಾಸಭಾವ' ಎನ್ನುತ್ತಾರೆ. ಈ ಭಾವದಲ್ಲಿ ಗುರುಶಿಷ್ಯರ ಸಂಬಂಧದಲ್ಲಿ ಶಿಷ್ಯನು ಗುರುವಿನ ಒಬ್ಬನಿಷ್ಠಾವಂತ ಸೇವಕನಂತಿರುತ್ತಾನೆ. ರಾಮಾಯಣದಲ್ಲಿ ಹನುಮಂತನು ಶ್ರೀರಾಮನೊಡನೆ ಸಂಬಂಧಿಸಿದ ಹಾಗೆ. ಹನುಮಂತನು ಶ್ರೀರಾಮನ ಬಗ್ಗೆ ಈ ರೀತಿ ಭಾವಿಸಿದ್ದನು, 'ನೀನು ನನ್ನ ಪ್ರಭು, ನನಗೆ ತಿಳಿದಿರುವುದೆಲ್ಲಾ ಇಷ್ಟೇ. ನೀನೇನು ಹೇಳುವೆಯೋ, ಅದನ್ನು ಸುಮ್ಮನೆ ಮಾಡಿಬಿಡುವುದು' ಎಂದು. ದಾಸಭಾವದ ಶಕ್ತಿಯನ್ನು
ತಿಳಿಯಿರಿ. ರಾಮನಾಮ ಸ್ಮರಣೆ ಮಾತ್ರದಿಂದಲೇ ಹನುಮಂತನಿಗೆ ಸಮುದ್ರವನ್ನು ದಾಟಿ, ಶ್ರೀಲಂಕೆಯನ್ನು ತಲುಪಲು ಸಾಧ್ಯವಾಯಿತು! ಆದರೆ ರಾಮನು ತಾನೇ ಸಮುದ್ರವನ್ನು ದಾಟಬೇಕಾದಾಗ ಆತನಿಗೆ ಒಂದು ಸೇತುವೆಯು ಬೇಕಾಯಿತು!
ರಾಮನಾಮವು ರಾಮನಿಗಿಂತಲೂ ಶಕ್ತಿ ಶಾಲಿಯಾದುದೆಂದು ತಿಳಿಯಿರಿ! ಹನುಮಂತನು ರಾಮನ ಬಗ್ಗೆ ಇಟ್ಟಿದ್ದ ನಂಬಿಕೆಯು ರಾಮನಿಗಿಂತಲೂ ಶಕ್ತಿಯುತವಾಗಿದ್ದಿತು. ನಾನು ಯಾವಾಗಲೂ ಜನರಿಗೆ ಹೇಳುವುದೇನೆಂದರೆ, ನೀವು ಯಾರನ್ನು ನಂಬುತ್ತೀರೆಂಬುದರ ಬಗ್ಗೆ ಚಿಂತಿಸದಿರಿ. ಕೇವಲ ನಿಮ್ಮ ನಂಬಿಕೆಯೇ ನಿಮ್ಮನ್ನು ಶಕ್ತಿವಂತರನ್ನಾಗಿ ಮಾಡುತ್ತದೆ. ನಂಬಿಕೆಯು ನಿಮ್ಮನ್ನು ಪರಿವರ್ತಿಸಬಲ್ಲದು.
ನೀವು ಯೋಚಿಸಬಹುದು, ‘ಈ ಹಿಮಾಲಯ ಯಾತ್ರೆಯಲ್ಲಿ ನನಗೆ ಹೆಚ್ಚು ನಡೆಯಲಾಗುವುದಿಲ್ಲವೇನೊ’ ಎಂದು, ನೀವು ನನ್ನ ಬಗ್ಗೆ ಯೋಚಿಸಬಹುದು ‘ಗುರುಗಳು ನಿಧಾನವಾಗಿ ನಡೆಯುತ್ತಿದ್ದಾರೆ’ ಎಂದು. ಆದರೆ ನಾನು ಹೇಳುವುದೇನೆಂದರೆ, ನನ್ನನ್ನು ನಂಬುವುದರಿಂದ ನೀವು ಹಾರುವಿರಿ. ತಿಳಿಯಿರಿ, ನಾನು ನಿಧಾನವಾಗಿ ನಡೆಯುತ್ತಿರುವುದು ಏಕೆಂದರೆ ನಾನು ಸಾಕಷ್ಟು ಹಾರಿದ್ದಾಗಿದೆ. ನಾನು ಧರೆಗಿಳಿದಿರುವುದು ನಿಮಗೆ ಹಾರುವುದನ್ನು ಕಲಿಸಲು. ನಾನು ಸತತವಾಗಿ ಹಾರುತ್ತಿದ್ದರೆ, ನಿಮಗೆ ಹಾರುವುದು ಹೇಗೆಂದು
ಕಲಿಸಲಾಗುವುದಿಲ್ಲ. ನಾನು ನಿಮಗೆ ಹಾರಲು ಕಲಿಸಬೇಕಾದರೆ, ಮೊದಲು ನಾನು ಧರೆಗಿಳಿದು ಬಂದು, ನಿಧಾನವಾಗಿ ನಡೆಯುತ್ತಾ, ಹಾರುವ ಚಲನೆಗಳನ್ನು ತೋರಿಸಬೇಕು. ಆಗಲೇ ನೀವೂ ಸಹ ಈ ಚಲನವಲನಗಳನ್ನು ಕಲಿಯುವಿರಿ. ಆದ್ದರಿಂದ ನಾನು ನಿಧಾನವಾಗಿ ನಡೆಯುವುದರ ಬಗ್ಗೆ ನೀವು ಯೋಚಿಸ ಬೇಡಿರಿ, ಸುಮ್ಮನೆ ಹಾರಿರಿ ಅಷ್ಟೇ! ತಿಳಿಯಿರಿ, ರಾಮನಿಗಿಂತ ಅವನಲ್ಲಿ ನಂಬಿಕೆ ಹೆಚ್ಚು ಶಕ್ತಿಯುತ. ಇದೆ ದಾಸಭಾವಶಕ್ತಿ - ಪ್ರಭು ಹಾಗೂ ಶಿಷ್ಯ ಭಾವ.
ಕೊನೆಯದಾದ ಭಾವವು ಕಡು ಪ್ರೇಮದ ಭಾವ. ಇದಕ್ಕೆ ‘ಮಧುರ ಭಾವ’ ಎನ್ನುತ್ತಾರೆ. ರಾಧೆಯು ಶ್ರೀಕೃಷ್ಣನನ್ನು ಕಾಣುತ್ತಿದ್ದ ಹಾಗೆ ರಾಧೆಗೆ ಶ್ರೀಕೃಷ್ಣನ ಬಗ್ಗೆ ಇದ್ದ ಭಾವನೆ - ಪ್ರಿಯತಮನ ಭಾವನೆ. ನಾನು ನಿಮಗೆ ಸ್ಪಷ್ಟಪಡಿಸಲು ಇಚ್ಛಿಸುವುದೇನೆಂದರೆ, ಈ ಭಾವವು ನೀವು ಹೆಣ್ಣೋ ಅಥವಾ ಗಂಡೋ ಎಂಬುದರ ಬಗ್ಗೆ ಸಂಬಂಧಿಸಿಲ್ಲ. ಅದು ಶರೀರಕ್ಕೆ ಸಂಬಂಧಿಸಿದುದಲ್ಲ. ಅದು ದೇಹಾತೀತವಾದುದು. ಅದು ಆತ್ಮಕ್ಕೆ ಸಂಬಂಧಿಸಿದ್ದು.
ಗುರುವು ಹೆಣ್ಣಾಗಿ, ನೀವು ಗಂಡಾಗಿದ್ದರೆ ಮಾತ್ರವೇ ಮಧುರ ಭಾವವು ಉಂಟಾಗಬಲ್ಲದು ಎಂದು ತಿಳಿಯಬೇಡಿರಿ. ಅಲ್ಲ! ಗುರುವು ಗಂಡಾಗಿ, ನೀವೂ ಗಂಡಾಗಿದ್ದರೂ ಮಧುರಭಾವವು ಉಂಟಾಗುತ್ತದೆ. ಅಥವಾ ನೀವು ಹೆಣ್ಣಾಗಿ, ಗುರುವು ಹೆಣ್ಣಾಗಿದ್ದರೂ, ಮಧುರ ಭಾವವು ಉಂಟಾಗಬಹುದು. ಮಧುರ ಭಾವಕ್ಕೂ ದೈಹಿಕ ಸಂಬಂಧಕ್ಕೂ ಯಾವ ಸಂಬಂಧವೂ ಇಲ್ಲ. ಅದು ದೇಹಾತೀತವಾದುದು. ಅದು ದೇಹಕ್ಕೆ ಸಂಬಂಧಿಸಿರುವಂಥದ್ದಲ್ಲ. ಅದೊಂದು ಗಾಢವಾದ ಸಂಬಂಧದ ಭಾವನೆ. ನೀವು ಹೆಣ್ಣಾದರೂ ಆಗಿರಬಹುದು ಅಥವಾ ಗಂಡಾದರೂ ಆಗಿರಬಹುದು. ಅದು ಯಾವ ರೀತಿಯಲ್ಲಿಯೂ ಮಧುರಭಾವಕ್ಕೆ ಸಂಬಂಧಿಸಿಲ್ಲ.
ಕಡೆಯ ಭಾವವು ಮಹಾಭಾವ, ಇದು ಮಿಕ್ಕ ಐದು ಭಾವಗಳೂ ಸೇರಿರುವಂಥದ್ದು ಹಾಗೂ ಇನ್ನೂ ಹೆಚ್ಚಿನದು! ಗುರುಶಿಷ್ಯ ಸಂಬಂಧವೆಲ್ಲವೂ ಇದೇ ರೀತಿಯದ್ದೇ. ಒಮ್ಮೊಮ್ಮೆ ನೀವು ಗುರುವನ್ನು ನಿಮ್ಮ ಮಗನಂತೆ ಕಂಡರೆ, ಮತ್ತೊಮ್ಮೆ ನಿಮ್ಮ ತಂದೆಯಂತೆ ಭಾವಿಸುವಿರಿ. ಒಮ್ಮೆ ಅವರು ನಿಮ್ಮ ಪ್ರಭುವೆಂದು ಭಾವಿಸಿದರೆ, ಮತ್ತೊಮ್ಮೆ, ನಿಮ್ಮ ಸ್ನೇಹಿತನಂತೆ ಭಾವಿಸುವಿರಿ. ಒಮ್ಮೊಮ್ಮೆ ಅವರು ನಿಮಗೆ ಸಾಂತ್ವನ ನೀಡುವ ಪ್ರಿಯತಮನಾಗಿ, ನಿಮ್ಮನ್ನು ಸಂತೈಸಿ, ನೀವೂ ಪ್ರೀತಿಗೆ ಅರ್ಹರು ಎಂಬಂತೆ ವರ್ತಿಸುತ್ತಾರೆ. ಗುರುಗಳ ಸಂಬಂಧವು ಈ ಐದೂ ಭಾವಗಳ ಮೊತ್ತವಷ್ಟೇ ಅಲ್ಲದೆ, ಇನ್ನೂ ಮಿಗಿಲಾದುದು.
ನೀವು ಗುರುಗಳೊಡನೆ ಈ ಐದು ಭಾವಗಳಲ್ಲಿ ಯಾವುದಾದರೂ ಒಂದು ಭಾವದಿಂದ ಸಂಬಂಧಿಸಬಹುದು ಅಥವಾ ಈ ಐದು ಭಾವಗಳಿಂದಲೂ ಸಂಬಂಧಿಸಬಹುದು. ಮಹಾನ್ ಶಸ್ತ್ರ ವೈದ್ಯನಾದ ಗುರುವು ನಿಮ್ಮ ಮೇಲೆ ಮಾಡುವ ಶಸ್ತ್ರ ಚಿಕಿತ್ಸೆಯನ್ನು ಸಹಿಸಿಕೊಳ್ಳಲು ಆಗಲೇ ನಿಮಗೆ ಸಾಧ್ಯ. ನೀವು ಗುರುಗಳೊಡನೆ ಸಂಬಂಧ ಕಲ್ಪಿಸದೇ ಇದ್ದರೆ, ನಿಮ್ಮಲ್ಲಿ ಗುರುಗಳೊಡನೆ ಭಾವನಾತ್ಮಕವಾಗಿ ಬಾಂಧವ್ಯದ ನಿರ್ಮಾಣವಾಗದಿದ್ದರೆ, ತಿಳಿಯಿರಿ, ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ನೀವು ತಪ್ಪಿಸಿಕೊಳ್ಳುವಿರಿ. ಏಕೆಂದರೆ, ನಾನು ಗಾಯವನ್ನು ತೆರೆದಾಗ, ನಿಮಗೆ ಕೊಳಕೆನಿಸುತ್ತದೆ ಮತ್ತು ನೀವು ಹೇಳುವಿರಿ, 'ನನಗೆ ಬಹಳ ಅಸಹ್ಯವಾಗುತ್ತಿದೆ' ಎಂದು ನಾನು ಕೀವನ್ನು ಹೊರತೆಗೆಯುತ್ತಿರುತ್ತೇನೆ. ಆ ಕಾರಣ ನಿಮಗೆ ಕೊಳಕೆನಿಸುತ್ತದೆ. ದಯವಿಟ್ಟು ತಾಳ್ಮೆಯಿಂದಿರಿ ಮತ್ತು ನಾನು ಕೊಳಕನ್ನು ಸ್ವಚ್ಛಗೊಳಿಸಲು ಬಿಡಿರಿ. ಅದು ಸಂಪೂರ್ಣವಾಗಿ ಸ್ವಚ್ಛಗೊಂಡ ನಂತರ, ಅದನ್ನು ಜಾಗರೂಕವಾಗಿ ಪುನಃ ಸೇರಿಸಿ ಹೊಲಿಯುತ್ತೇನೆ.
ಅಂದ ಹಾಗೆ, ಈಗಿನ ಹೊಚ್ಚ ಹೊಸ ತಂತ್ರವಾದ ಲೇಜ್ಜರ್ ಶಸ್ತ್ರ ಚಿಕಿತ್ಸೆಯನ್ನು ನನ್ನೊಂದಿಗೆ ತಂದಿದ್ದೇನೆ! ಒಂದು ವೇಳೆ ದುರ್ಮಾಂಸ ಬಹಳ ದೊಡ್ಡದಾಗಿದ್ದರೆ. ನಾನು ಕೊಯ್ದು ತೆರೆಯಬೇಕಾಗುತ್ತದೆ. ಆದರೆ ಕೆಲವೊಮ್ಮೆ ಕೊಯ್ಯುವ ಅಗತ್ಯವಿರುವುದಿಲ್ಲ. ಅದು ಹೆಚ್ಚು ದೊಡ್ಡದಲ್ಲದಿದ್ದರೆ, ಲೇಜ್ಜರ್ ಚಿಕಿತ್ಸೆಯೇ ಕೆಲಸವನ್ನು ಸುಂದರವಾಗಿ ಮಾಡುತ್ತದೆ!
ನಿಮಗೆ ಕೊಳಕೆನಿಸಿದರೂ, ನಿಮಗೆ ಅಸಹ್ಯವಾದರೂ ಸಹ, ತಿಳಿಯಿರಿ, ದುರ್ಮಾಂಸವನ್ನು ತೆಗೆಯಲೇ ಬೇಕು ಹಾಗೂ ಅದರಲ್ಲಿರುವ ಕೀವು ನಿಮ್ಮ ದೇಹದಿಂದ ಆಚೆಗೆ ಹೋಗಲೇಬೇಕು. ನಿಮ್ಮಲ್ಲಿ ಸತತವಾಗಿ ಶಸ್ತ್ರ ಚಿಕಿತ್ಸೆಯು ನಡೆದೇ ಇರುತ್ತದೆ. ಕೆಲವೊಮ್ಮೆ ನಾನು ನೇರವಾಗಿ ತೊಡಗಿರುವುದೂ ಇಲ್ಲ. ನಾನು ಹೇಳಬೇಕಾದುದು ಒಂದೇ, ನೀವು ಸಂಪೂರ್ಣವಾಗಿ ವಿಚಲಿತರಾಗುತ್ತೀರಿ!
ಶಸ್ತ್ರ ಚಿಕಿತ್ಸೆಯು ಎಷ್ಟೋ ರೀತಿಗಳಲ್ಲಿ ಕೆಲವೊಮ್ಮೆ ಪರೋಕ್ಷ ರೀತಿಗಳಲ್ಲೂ ಸಹ, ನಡೆಯುತ್ತದೆ. ಅದು ಹಾಗೆಯೇ ಆಗಲು ಸುಮ್ಮನೆ ಬಿಡಿರಿ ಮತ್ತು ನೀವು ಒಂದು ಹೊಸ ವ್ಯಕ್ತಿಯಾಗಿ ಅರಳುವುದನ್ನು ಗಮನಿಸಿ. ನೀವು 'ಹೊಸ' ಹಾಗೂ 'ಸ್ವಚ್ಛ'ವಾದ ವ್ಯಕ್ತಿಯಾಗುವಿರಿ. ಸ್ವಚ್ಛಾತ್ಮರಾಗುವಿರಿ. ನೀವು ನಿಮ್ಮ ಮನೆಗೆ ಹಿಂದಿರುಗಿದಾಗ, ನೀವು ಹೊಸದಾದ ಹಾಗೂ ಸ್ವಚ್ಛವಾದ ವ್ಯಕ್ತಿಯಾಗಿರುತ್ತೀರಿ ಏಕೆಂದರೆ ನಿಮ್ಮಲ್ಲಿದ್ದ ದುರ್ಮಾಂಸ ಹಾಗೂ ಕೀವು ತೆಗೆಯಲ್ಪಟ್ಟಿರುತ್ತದೆ.
ಆದ್ದರಿಂದ ತಿಳಿಯಿರಿ ಶ್ರೀಕೃಷ್ಣನು, ‘ನನ್ನ ಜೀವನವನ್ನು ತಿಳಿದರೆ, ನೀವು ವಿಮುಕ್ತರಾಗುತ್ತೀರಿ' ಎಂದು ಹೇಳಿದಾಗ, ಆ ಮಾತನ್ನಾಡಿರುವುದು ಆತನ ಅಹಂಕಾರದಿಂದಲ್ಲ. ಆತನು ಹೇಳುತ್ತಿರುವುದು ನಿಮ್ಮ ಮೇಲಿನ ಕರುಣೆಯಿಂದ.
ನಾನು ಜನರನ್ನು ಹೇಗೆ ಹರಸುತ್ತೇನೆಂದು ನನ್ನ ಸುತ್ತಮುತ್ತಲಿರುವ ಜನರಿಗೆ ಗೊತ್ತು. ನಾನು ಒಂದು ವೇಳೆ, 'ನಾನು ನಿಮ್ಮನ್ನು ಕಾಪಾಡುತ್ತೇನೆ' ಎಂದರೆ, ಅದು ಆಗಿಯೇ ಆಗುತ್ತದೆಂದು ನನ್ನ ಅರ್ಥ. ಒಂದು ವೇಳೆ ನಾನು, 'ನಾನು ನಿಮಗಾಗಿ ಧ್ಯಾನ ಮಾಡುತ್ತೇನೆ, ಆನಂದೇಶ್ವರ ದೇವನಲ್ಲಿ ದಯವಿಟ್ಟು ಪ್ರಾರ್ಥನೆ ಸಲ್ಲಿಸಿರಿ ಹಾಗೂ ಆಲದ ಮರದಡಿಯಲ್ಲಿ ಕುಳಿತು ಧ್ಯಾನ ಮಾಡಿರಿ' ಎಂದು ಹೇಳಿದರೆ, ಅದು ಕೇವಲ ಒಂದು ಸಾಂತ್ವನದ ಮಾತು. ಜನರು ನನ್ನನ್ನು ಕೇಳುತ್ತಾರೆ, 'ಕೆಲವರಿಗೆ ನೀವೇ ನೋಡಿಕೊಳ್ಳುವುದು - ದಾಗಿಯೂ ಕೆಲವರಿಗೆ ಧ್ಯಾನ ಮಾಡುವುದಾಗಿಯೂ ಹೇಳುವಿರಲ್ಲ, ಅದು ಏಕೆ?'ಎಂದು. ಇದಕ್ಕೆ ನಾನು ಹೇಳುವುದೇನೆಂದರೆ, 'ನಾನು ನಿಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತೇನೆ' ಎಂದರೆ, ಅದನ್ನು ಸ್ವೀಕರಿಸಲು ಬೇಕಾದ ಸರಳತೆ ಅವರಲ್ಲಿರುವುದಿಲ್ಲ. ಆದ್ದರಿಂದ ಅವರಿಗೆ ಸ್ವಲ್ಪ ಕ್ಲಿಷ್ಟ ಮಾಡುತ್ತೇನೆ.
ಒಂದು ಸೊಗಸಾದ, ಸುಂದರವಾದ ಕಥೆ:
ಒಮ್ಮೆ ಒಬ್ಬ ಶಿಷ್ಯನು ಗಂಗಾನದಿಯಲ್ಲಿ ಬಿದ್ದು ಬಿಟ್ಟನು. ಅವನ ಗುರುಗಳು ನದಿಯ ದಡದಲ್ಲಿ ಕುಳಿತಿದ್ದರು .ಅವರನ್ನು ನೋಡಿದ ಕೂಡಲೇ ಶಿಷ್ಯನು ಕೂಗಿಕೊಂಡನು 'ಕಾಪಾಡಿರಿ! ಕಾಪಾಡಿರಿ! ಓ ದೇವರೇ ಕಾಪಾಡರಿ! ಗುರುಗಳೇ ಕಾಪಾಡಿರಿ!ಎಂದು.
ಗುರುಗಳು ಉತ್ತ ರಿಸಿದರು, 'ಮೂಢ! ಎದ್ದು ನಿಲ್ಲು. ನಿನ್ನನ್ನು ನೀನೇ ಕಾಪಾಡಿಕೊ' ಎಂದು.
ಶಿಷ್ಯನು ಪುನ: ಕೂಗಿಕೊಂಡನು, 'ನಿಮ್ಮ ವೇದಾಂತವನ್ನು ನಂತರ ಬೋಧಿಸುವಿರಂತೆ. ಮೊದಲು ನನ್ನನ್ನು ಕಾಪಾಡಿ. ನನ್ನ ಜೀವವು ಆಪತ್ತಿ ನಲ್ಲಿದೆ. ನಾನು ದಡಕ್ಕೆ ಬಂದ ನಂತರ, ನಿಮ್ಮ ವೇದಾಂತವನ್ನೆಲ್ಲಾ ಉಪದೇಶಿಸಿರಿ, ಈಗ ನನ್ನನ್ನು ಸುಮ್ಮ ನೆ ಕಾಪಾಡಿರಿ' ಎಂದು.
ಗುರುಗಳು ಅಲುಗಾಡಲಿಲ್ಲ. ಅವರು ಹೇಳಿದ್ದನ್ನೇ ಪುನರುಚ್ಛ ರಿಸಿದರು. 'ಮೂಢ, ನಿನ್ನನ್ನು ನೀನೇ ಕಾಪಾಡಿಕೋ! ಎದ್ದು ನಿಲ್ಲು', ಎಂದು.
ಶಿಷ್ಯನು ಮೊರೆಯಿಟ್ಟನು. 'ನೀವು ನನ್ನ ಗುರುವಲ್ಲವೇ? ನನ್ನನ್ನು ಕಾಪಾಡಿರಿ, ನನ್ನನ್ನು ಕಾಪಾಡಿರಿ' ಶಿಷ್ಯನು ಹೀಗೆಯೇ ಕೂಗಿಕೊಳ್ಳುತ್ತಿರಲು, ಗುರುಗಳು ಬೇಸತ್ತು ಗಡುಸಾದ ಧ್ವನಿಯಲ್ಲಿ ಹೇಳಿದರು, 'ಮೂರ್ಖ, ಎದ್ದು ನಿಲ್ಲು'!ಎಂದು.
ಶಿಷ್ಯನು ಹೆದರಿ, ಎದ್ದು ನಿಂತ.... ನೀರು ಅವನ ಸೊಂಟಮಟ್ಟ ಮಾತ್ರ ಇರುವುದನ್ನು ಕಂಡ!
ತಿಳಿಯಿರಿ, ನೀವು ಕಷ್ಟಪಡುತ್ತಿರುವುದು 'ನೀರಿನಲ್ಲಿ ಬಿದ್ದಿರುವುದಕ್ಕಾಗಿ' ಆದರೆ, ನೀರು ಕೇವಲ ನಿಮ್ಮ ಸೊಂಟಮಟ್ಟ ಮಾತ್ರ ಎಂದು ಗೊತ್ತಿಲ್ಲ. ನೀವು ಎದ್ದು ನಿಂತಾಗ ಮಾತ್ರವೇ ನೀರು ಸೊಂಟಮಟ್ಟ ಇರುವುದೆಂದು ತಿಳಿಯುವಿರಿ. ತಿಳಿಯಿರಿ, ನಾನು,'ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದು ಹೇಳಿದಾಗ, ನಿಮಗೆ ನಾನು ಎದ್ದು ನಿಲ್ಲಲು ಒಂದು ಊರೆಗೋಲನ್ನು ಕೊಟ್ಟು ಕಾಪಾಡುತ್ತೇನೆ. 'ನಾನು ನಿಮ್ಮನ್ನು ಕಾಪಾಡುತ್ತೇನೆ' ಎಂದು ಗುರುಗಳು ಹೇಳಿದಾಗ, ನೀವದನ್ನು ಅನುಮಾನಿಸಿದರೆ, ಆಗ ಸಂಬಂಧವು ಆ ಕ್ಷಣವೇ ಅಲ್ಲಿಯೇ ಕಡಿದು ಹೋಗುತ್ತದೆ.
ಒಮ್ಮೆ ಒಬ್ಬರು ನನ್ನನ್ನು ಕೇಳಿದರು, 'ಗುರುಗಳೇ, ನಾವು 'ನಿತ್ಯಾನಂದ' ಎಂಬ ನಿಮ್ಮ ಹೆಸರನ್ನು ಹಾಡಿ ಆನಂದ ಪಡುತ್ತೇವೆ. ನಮಗದು ತಿಳಿಯುತ್ತದೆ. ಆದರೆ ನೀವೂ ಸಹ ನಿಮ್ಮ ಹೆಸರನ್ನು ನಮ್ಮೊಂದಿಗೆ ಹಾಡಿ, ಕುಣಿದು, ಆನಂದಿಸುವಿರಲ್ಲ, ಅದು ಹೇಗೆ?' ಎಂದು.
ಇದೇ ಪ್ರಶ್ನೆಯನ್ನು ರಮಣ ಮಹರ್ಷಿಗಳಿಗೆ ಕೇಳಲಾಗಿತ್ತು. ಒಬ್ಬರು ಅವರ ಬಳಿ ಹೋಗಿ, ಕೇಳಿದರು, 'ಭಗವಾನ್, ಇದೇನು? ನಾವು ರಮಣ ಸದ್ಗುರು, ರಮಣ ಸದ್ಗುರು ಎಂದು ಜಪಿಸುತ್ತೇವೆ. ಆದರೆ ನೀವೂ ಸಹ ಅದೇ ಮಂತ್ರವನ್ನು ಜಪಿಸುವಿರಲ್ಲಾ, ನೀವು ಹೀಗೇಕೆ ಮಾಡುವಿರಿ? ಎಂದು. ಅಷ್ಟೇ ಅಲ್ಲದೆ, ರಮಣರು ತಮ್ಮ ಮೇಲೆಯೇ ದೊಡ್ಡದಾದ ಹಾಗೂ ಒಂದು ಸುಂದರವಾದ ಪದ್ಯವನ್ನೂ ಬರೆದಿದ್ದರು!
ರಮಣರ ಮಹಿಮೆಯನ್ನು ಕುರಿತ 'ರಮಣ ಪುರಾಣ'ವನ್ನು ಅವರ ಶಿಷ್ಯರೊಬ್ಬರು ಬರೆಯುತ್ತಿದ್ದರು. ಆದರೆ ಅವರಿಗೆ 'ಬರಹಗಾರರ ತಡೆ' ಉಂಟಾಯಿತು. ನೀವು ಅಹಂಕಾರದಿಂದ ಏನನ್ನಾದರೂ ಬರೆದರೆ, ನಿಮ್ಮಲ್ಲಿ 'ಬರಹಗಾರರ ತಡೆ' ಉಂಟಾಗುತ್ತದೆ. ಆ ಶಿಷ್ಯರು ಭಗವಾನರ ಬಳಿಬಂದು 'ಭಗವಾನ್, ನನಗೆ ಈ ಬರವಣಿಗೆಯನ್ನು ಮುಂದುವರಿಸಲಾಗುತ್ತಿಲ್ಲ. ನನಗೆ ಸಹಾಯ ಮಾಡಿರಿ' ಎಂದು ಕೇಳಿದರು. ಭಗವಾನರು ಹೇಳಿದರು, 'ಆ ಕಾಗದವನ್ನು ಅಲ್ಲಿಯೇ ಇಟ್ಟು ಹೋಗು. ನಾನು ನಿನ್ನೊಡನೆ ನಂತರ ಮಾತನಾಡುವೆ' ಎಂದು.
ಆ ಶಿಷ್ಯನು ಕಾಗದವನ್ನು ಅಲ್ಲಿಯೇ ಇಟ್ಟು ಹೋದನು. ಮಾರನೆಯ ದಿನ, ಆತ ಬಂದಾಗ, ಆ ಪದ್ಯವು ಪೂರ್ತಿಯಾಗಿ ಮುಗಿದಿತ್ತು! ರಮಣ ಮಹರ್ಷಿಗಳು 300 ಪಂಕ್ತಿಗಳನ್ನು ತಾವೇ ಬರೆದಿದ್ದರು. ಪುಸ್ತಕವು ಮುದ್ರಣವಾದಾಗ, ಬರಹಗಾರರು 'ಈ 300 ಪಂಕ್ತಿಗಳನ್ನು ಭಗವಾನರೇ ಬರೆದಿದ್ದಾರೆ' ಎಂದು ಉದ್ಧರಣ ಚಿಹ್ನೆಗಳಲ್ಲಿ ಉಲ್ಲೇಖಿಸಿ, ಅಡಿ ಟಿಪ್ಪಣಿ ಬರೆದಿದ್ದನು.
ಭಗವಾನರು ಪುಸ್ತಕವನ್ನು ನೋಡಿ ಕೇಳಿದರು. 'ಓ! ಹಾಗಿದ್ದರೆ, ಉಳಿದ ಪಂಕ್ತಿಗಳು ನಿನ್ನಿಂದ ಬರೆಯಲ್ಪಟ್ಟಿವೆಯಾ ? ಅವರ ಈ ಒಂದು ಟೀಕೆಯೋ ಶಿಷ್ಯನಿಗೆ ಜ್ಞಾನೋದಯವಾಗಲು ಸಾಕಾಯಿತು.
ಮುರುಗನಾರ್ ಎಂಬ ಆ ಶಿಷ್ಯರು ಭಗವಾನರು ದೇಹದಲ್ಲಿದ್ದಾಗಲೇ ಜ್ಞಾನೋದಯ ಹೊಂದಿದ ನಾಲ್ಕು ಶಿಷ್ಯರಲ್ಲಿ ಒಬ್ಬರು. ರಮಣರ ಮೇಲೆ ಅವರು ಬರೆದ 16000 ಶ್ಲೋಕಗಳು 25 ಸಂಪುಟಗಳಲ್ಲಿ ಪ್ರಕಟವಾದವು.
ಮುರುಗನಾರ್ರವರು ತಮ್ಮ ಆತ್ಮ ಕಥೆಯಲ್ಲಿ ಈ ರೀತಿ ಬರೆದಿದ್ದಾರೆ. 'ನನ್ನಲ್ಲಿ ಒಂದೇ ಒಂದು ಅಹಂಕಾರವಿತ್ತು, ಅದೇನೆಂದರೆ, ನಾನೊಬ್ಬ ಶ್ರೇಷ್ಠ ಸಂಗೀತಗಾರ ಹಾಗೂ ಕವಿ ಎಂದು. ಮಿಕ್ಕೆಲ್ಲಾ ಅಹಂಕಾರಗಳೂ ನನ್ನಿಂದ ದೂರವಾಗಿದ್ದವು. ಅದೊಂದೇ ಸಂಸ್ಕಾರವು ಅಥವಾ ಸೂಕ್ಷ್ಮವಾದ ವಾಸನೆಯು, ನನ್ನಲ್ಲಿ ಅಡಗಿತ್ತು. ಆ ವಾಸನೆಯು ನನ್ನಲ್ಲಿದೆ ಎಂದೂ ಸಹ ನನಗೆ ತಿಳಿದಿರಲಿಲ್ಲ' ಎಂದು.
ಒಂದು ದೊಡ್ಡ ಸಮಸ್ಯೆಯೆಂದರೆ, ಒಂದು ಸಂಸ್ಕಾರವು ನಿಮ್ಮಲ್ಲಿದ್ದರೆ ನಿಮ್ಮಲ್ಲಿ ಅದು ಇದೆ ಎಂದು ತಿಳಿಯಲೂ ಅದು ಬಿಡುವುದಿಲ್ಲ. ಅದು ತನ್ನ ಅಸ್ತಿತ್ವದ ಪ್ರಶ್ನೆಯಾದ್ದರಿಂದ ತನ್ನನ್ನೇ ತಾನು ಸಮರ್ಥಿಸಿಕೊಳ್ಳುತ್ತದೆ. ಆದ್ದರಿಂದಲೇ ನಾನು ಜನರಿಗೆ ಯಾವಾಗಲೂ ಹೇಳುವುದು', ನೀವು ವಾಸನೆಯಲ್ಲಿ ಸಿಲುಕಿದಾಗ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ' ಎಂದು ಗುರುಗಳ ಸನ್ನಿಧಾನದಲ್ಲಿದ್ದು ಬಿಡಿ. ಇದನ್ನು ಕಳೆದುಕೊಳ್ಳದಿರಿ. ಇದೊಂದು ಅದ್ಭುತವಾದ ಅವಕಾಶ, ನೀವು ಸಂಪೂರ್ಣವಾಗಿ ಉಪಶಮನ ಹೊಂದುವಿರಿ ಹಾಗೂ ಆ ವಾಸನೆಯಿಂದ ಹೊರಬರುವಿರಿ. ನೀವು ವಾಸನೆಯ ಹಿಡಿತದಲ್ಲಿ ದ್ದಾಗ, ಎಂದೂ ಸಹ ಗುರುಗಳಿಂದ ತಪ್ಪಿಸಿಕೊಂಡು ಹೋಗದಿರಿ.
ಯಾರಾದರೂ ಖಿನ್ನರಾಗಿ ನನ್ನನ್ನು ಬಿಟ್ಟು ಹೋದರೆ, ನಾನು ಅವರಿಗಾಗಿ ಬಹಳಷ್ಟು ಮರುಗುತ್ತೇನೆ. ನಮ್ಮ ಸಂಸ್ಥೆಯಲ್ಲಿ ಒಬ್ಬರು ಕಡಿಮೆಯಾದರಲ್ಲಾ ಎಂಬ ಕಾರಣದಿಂದಲ್ಲ! ಅಲ್ಲ! ವಾಸ್ತವಿಕವಾಗಿ ಹೇಳುವುದಾದರೆ, ಒಬ್ಬರು ಕಡಿಮೆಯಾದರೆ, ನನಗೆ ಅಷ್ಟು ಸಮಸ್ಯೆಯು ಕಡಿಮೆಯಾಗುತ್ತದೆ. ಆದರೆ ಅದೇ ವ್ಯಕ್ತಿ ಸಂತೋಷವಾಗಿ ನನ್ನಿಂದ ದೂರ ಸರಿದರೆ, ಅದು ಸರಿ. ಅದು ನಿಖರವಾಗಿ ಸರಿಯಾಗಿರುತ್ತದೆ, ಅದು ಚೆನ್ನಾಗಿರುತ್ತದೆ. ಅದು ಒಂದು ಸಹಜವಾದ ಸಂಬಂಧವಾಗುತ್ತದೆ. ಅವನು ಹೋದಲ್ಲೆಲ್ಲಾ ನನ್ನನ್ನೇ ನೆನೆಯುತ್ತಿರುತ್ತಾನೆ. ಆದರೆ, ಅವನು ವಿಷಣ್ಣನಾದಾಗ, ಅವನು ಬೆಳೆಯದೇ ಇರುವುದಲ್ಲದೆ, ಎಂದಿಗೂ ಆ ವಾಸನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅವನಲ್ಲಿ ಅದೊಂದು ದೊಡ್ಡ ಗಾಯವಾಗಿ ಉಳಿದು ಬಿಡುತ್ತದೆ. ಒಂದು ಬೆಕ್ಕು ಬಿಸಿಹಾಲನ್ನು ಕುಡಿದು, ಬಾಯಿ ಸುಟ್ಟುಕೊಂಡು, ಹಾಲಿನ ಬಳಿ ಎಂದೂ ಹೋಗದಂತೆ.
ನಾನು ಯಾವಾಗಲೂ ಜನರಿಗೆ ಹೇಳುತ್ತೇನೆ: 'ನೀವು ಖಿನ್ನರಾದಾಗ, ನನ್ನನ್ನು ಬಿಟ್ಟು ಹೋಗಬೇಡಿರಿ. ನನ್ನೊಡನಿರಲು ಅದೇ ಸರಿಯಾದ ಸಮಯ ? ಅಂತಹ ಸಮಯದಲ್ಲಿ ನನ್ನಿಂದ ದೂರಸರಿಯುವುದು ಹೇಗೆಂದರೆ, ನೀವು ರೋಗಗ್ರಸ್ತರಾದಾಗ, ಆಸ್ಪತ್ರೆಯಲ್ಲಿರಲು ಇಷ್ಟಪಡದಂತೆ. ಆಸ್ಪತ್ರೆಯಲ್ಲಿರಲು ಅದೇ ಸರಿಯಾದ ಸಮಯ. ನೀವು ವಿಷಣ್ಣರಾಗಿ, ವಾಸನೆಗಳಿಂದ ಹಿಡಿಯಲ್ಪಟ್ಟಿದ್ದಾಗ, ನೀವು ಆಸ್ಪತ್ರೆಯಲ್ಲಿರಬೇಕು.
ಮುರುಗನಾರ್ ರವರು ತಮ್ಮ ಆತ್ಮಕಥೆಯಲ್ಲಿ ತಮ್ಮಲ್ಲಿ ಒಂದೇ ಒಂದು ವಾಸನೆ ಇದ್ದಿತೆಂದು ಬರೆದಿದ್ದಾರೆ. ಯಾವಾಗ ಭಗವಾನರು, 'ಓ! ಉಳಿದ ಪಂಕ್ತಿಗಳು ನಿನ್ನಿಂದ ಬರೆಯಲ್ಪಟ್ಟವೆಯಾ?' ಎಂದು ಕೇಳಿದಾಗ ನನ್ನೊಳಗೇನೋ ಒಂದು ಮುರಿದು ಬಿದ್ದಿತು. ಏನೋ ಒಡೆದಂತೆ ಆಯಿತು. ಕಣ್ಣೀರು ಧಾರೆಯಾಗಿ ಬರಲು, ನಾನು ಭಗವಾನರ ಪಾದಗಳ ಮೇಲೆ ಬಿದ್ದೆ! ನಾನು ಮತ್ತೆ ಮೇಲೇಳಲೇ ಇಲ್ಲ! ಎಂದು ಬರೆದಿದ್ದಾರೆ.
ಭಗವಾನರು ತಮ್ಮ ಹೆಸರಿದ್ದ ಹಾಡನ್ನು ಹಾಡುತ್ತಿದ್ದರು. ಒಬ್ಬರು ಭಗವಾನರನ್ನು ಕೇಳಿದರು, 'ನಿಮ್ಮ ಹೆಸರನ್ನೇ ನೀವು ಏಕೆ ಹಾಡುತ್ತೀರಿ?' ಎಂದು .
ಭಗವಾನರು ಉತ್ತರಿಸಿದರು, 'ನೀವೇಕೆ ರಮಣ ಎಂಬ ಹೆಸರನ್ನು ಈ ಆರಡಿ ದೇಹಕ್ಕೆ ಕುಗ್ಗಿಸುತ್ತಿದ್ದೀರಿ? ರಮಣ ಎಂಬುದು ಈ ದೇಹವನ್ನು ಬಳಸಿಕೊಳ್ಳುತ್ತಿರುವ ಶಕ್ತಿ, ಈ ದೇಹವಲ್ಲ. ಆದ್ದರಿಂದ, ನೀವು ಈ ದೇಹವನ್ನು ಬಳಸಿ ಆನಂದಿಸುವಂತೆ ನಾನೂ ಆನಂದಿಸುತ್ತೇನೆ' ಎಂದು.
ಅದೇ ರೀತಿ ನಿತ್ಯಾನಂದ ಈ ದೇಹವಲ್ಲ - ನಿತ್ಯಾನಂದ ಎಂಬುದು ಈ ದೇಹವನ್ನು ಬಳಸಿಕೊಳ್ಳುತ್ತಿರುವ ಶಕ್ತಿ, ಈ ಕಾರಣದಿಂದಲೇ ನಾನು ಜನರಿಗೆ ಹೇಳುವುದು. ನಾನು ಹಾಡುವುದೊಂದೇ ಅಲ್ಲ, ನನ್ನ ಭಾವಚಿತ್ರಗಳನ್ನು ನೋಡುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ! ನನ್ನ ಭಾವಚಿತ್ರಗಳ ಸಂಪುಟವನ್ನು ನನಗೆ ತೋರಿಸಿದಾಗ, ಮುಂದಿನ ಎರಡು ದಿನಗಳು ಆ ಸಂಪುಟವು ನನ್ನ ಹಾಸಿಗೆಯ ಮೇಲಿರುತ್ತದೆ. ನಾನು ಕುಳಿತು, ಸಂಪುಟದಲ್ಲಿರುವ ಎಲ್ಲಾ ಭಾವಚಿತ್ರಗಳನ್ನೂ ನೋಡಿ ಆನಂದಿಸುತ್ತೇನೆ. ಎರಡು ದಿನಗಳ ಬಳಿಕವೇ ನಾನು ಆ ಸಂಪುಟವನ್ನು ಪ್ರಾಚೀನ ಪತ್ರಾಗಾರಕ್ಕೆ ಕಳುಹಿಸುವುದು.
ಕೆಲವೊಮ್ಮೆ ಜನರು ನನ್ನನ್ನು ಕೇಳುತ್ತಾರೆ. 'ಇದೇನು ಗುರುಗಳೇ, ನಿಮ್ಮ ಭಾವಚಿತ್ರಗಳನ್ನು ನೋಡಿ ಇಷ್ಟೊಂದು ಸಂತೋಷ ಪಡುತ್ತೀರಿ?' ಎಂದು. ನನ್ನನ್ನೇ ನಾನು ಭಾಸದಿರುವುದರಿಂದ ನಾನು ಹಾಗೆ ಮಾಡಲು ಸಾಧ್ಯ.
ನಾನು ಈ ದೇಹವೆಂಬ ಭಾವನೆಯು ನನಗಿಲ್ಲ. ನನಗೆ ಆ ಭಾವನೆ ಇದ್ದಿದ್ದರೆ, ಆ ಚಿತ್ರಗಳನ್ನು ನೋಡಿ ಆನಂದ ಪಡಲಾಗುತ್ತಿರಲಿಲ್ಲ. ನಾನು ಈ ದೇಹವೆಂದು ನನಗಿಸುವುದೇ ಇಲ್ಲ. ನೀವು ನನ್ನ ಆಕೃತಿಯನ್ನು ನೋಡಿ ಆನಂದಿಸುವಂತೆ ನಾನೂ ಸಹ ಆನಂದಿಸುತ್ತೇನೆ. ನೀವು ಆನಂದಿಸಬಹುದಾದರೆ, ನಾನು ಏಕೆ ಕೂಡದು?
ಹಾಗೆಯೇ ನಾನು ‘ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದಾಗ ಹಾಗೆ ಹೇಳುವುದು ನನ್ನ ಅಹಂಕಾರದಿಂದಲ್ಲ ನೀವು ಸ್ವಪ್ರತಿಷ್ಠೆಯಿಂದ ಜೀವನ ಮಾಡುವುದರಿಂದ, ನಾನೂ ಸಹ ಅಹಂಕಾರದಿಂದ ಹೇಳುತ್ತಿ ದ್ದೇನೆಂದು ತಿಳಿದುಕೊಳ್ಳುವಿರಿ. ಆದ್ದರಿಂದಲೇ, ನಾನು ಜನರಿಗೆ ಯಾವಾಗಲೂ ಹೇಳುವುದು ‘ನಾನು ದೇವರು’ ಎಂದಾಗ, ಅದು ನನಗೊಂದು ಸತ್ಯವಾದ ಅನುಭವ
ಆದರೆ ನಾನು ‘ನಾನು’ ಎಂದಾಗ ಅದೊಂದು ಖಾಲಿ ಪದ. ನಿಮ್ಮ ವಿಚಾರದಲ್ಲಿ, ನೀವು ‘ದೇವರು’ ಎಂದಾಗ, ನಿಮಗೆ ಅದೊಂದು ಖಾಲಿ ಪದವಾಗುತ್ತ ದೆ. ನೀವು ‘ನಾನು’ ಎಂದಾಗ, ನಿಮಗೆ ಅದೊಂದು ಪ್ರಬಲವಾದ ಅನುಭವವಾಗಿರುತ್ತದೆ. ನೀವು ದೇವರ ಬಗ್ಗೆ ಏನು ತಿಳಿದುಕೊಂಡಿರುವಿರಿ ಎಂದುಕೊಳ್ಳುವಿರೋ ಅದು ದೇವರ ಬಗೆಗಿನ ನಿಮ್ಮ ಭಾವನೆ ಮಾತ್ರ. ನೀವು ತಿಳಿದು -ಕೊಂಡಿರುವುದು ದೇವರನ್ನೇ ಅಲ್ಲ. ಸರಿಯಾಗಿ ತಿಳಿಯಿರಿ, ನೀವು ‘ದೇವರು’ ಎಂದಾಗ ಅದೊಂದು ಟೊಳ್ಳು ಪದವಾಗಿರುತ್ತದೆ. ನೀವು ‘ನಾನು’ ಎಂದಾಗ ಮಾತ್ರ ಅದು ಗಟ್ಟಿಯಾದ ಅನುಭವವಾಗಿರುತ್ತದೆ. ಅದೇ ರೀತಿ, ನಾನು ‘ದೇವರು’ ಎಂದಾಗ, ಅದು ನನಗೆ ಗಟ್ಟಿಯಾದ ಅನುಭವವಾಗಿರುತ್ತದೆ. ನಾನು ‘ನಾನು’ ಎಂದಾಗ, ಅದೊಂದು ಟೊಳ್ಳುಪದವಷ್ಟೇ.
ನೀವು ‘ಭಗವಂತ’ಎಂದಾಗ, ನಿಮ್ಮ ಅಹಂಕಾರವು ಪ್ರತಿಬಿಂಬಿತವಾಗಿರುತ್ತದೆ. ನೀವು ಏನನ್ನು ದೇವರೆಂದು ಭಾವಿಸಿರುತ್ತೀರೋ, ಅದು ನಿಮ್ಮ ಅಹಂಕಾರವಲ್ಲದೆ ಮತ್ತೇನೂ ಅಲ್ಲ. ಆದ್ದ ರಿಂದಲೇ ಒಬ್ಬ ಬಡವನು ಯಾವಾಗಲೂ ಸಂಪತ್ತಿ ನ ದೇವತೆಯಾದ ಲಕ್ಷ್ಮಿ ಗೆ ಆಕರ್ಷಿತನಾಗುತ್ತಾನೆ. ಅವನಿಗೆ ಏನಿಲ್ಲವೊ ಅದನ್ನು ಕಲ್ಪಿಸಿಕೊಂಡು ತೃಪ್ತಿ ಪಡುತ್ತಾನೆ. ಅವನಿಗೆ ಹಣವಿಲ್ಲ ದ ಕಾರಣ, ಅವನು ಯಾವಾಗಲೂ ಲಕ್ಷ್ಮಿಯ ಬಗ್ಗೆ ಚಿಂತಿಸುತ್ತಾನೆ. ಅದೇ ರೀತಿ, ಮಂದಮತಿಯಾದವನು ವಿದ್ಯಾದೇವತೆಯಾದ ಸರಸ್ವತಿಗೆ ಆಕರ್ಷಿತನಾಗುತ್ತಾನೆ. ಏಕೆಂದರೆ ಅವನಿಗೆ ಬೇಕಾಗಿರುವುದು ಜ್ಞಾನ. ಯಾವನಲ್ಲಿ ಆತ್ಮವಿಶ್ವಾಸ ಇರುವುದಿಲ್ಲವೊ ಅವನು ಕಾಳೀದೇವಿಗೆ ಆಕರ್ಷಿತನಾಗುತ್ತಾನೆ. ಏಕೆಂದರೆ ಅವನು ತೃಪ್ತನಾಗಲು, ಅವನಿಗೆ ಆಕೆಯಿಂದ ಧೈರ್ಯದ ಅವಶ್ಯಕತೆ ಇರುತ್ತದೆ. ಈ ರೀತಿ, ನಿಮಗೇನಿಲ್ಲವೊ ಅದನ್ನು ಪೂರೈಸಿಕೊಳ್ಳಲು ನೀವು ಪ್ರಯತ್ನಿಸುವಿರಿ. ಸ್ಪಷ್ಟವಾಗಿ ತಿಳಿಯಿರಿ, ನಿಮ್ಮ ದೇವ ದೇವತೆಗಳೂ ಸಹ ನಿಮ್ಮ ಅಹಂಕಾರದ ಪ್ರಕ್ಷೇಪಣೆ. ಆದ್ದರಿಂದಲೇ ನೀವು 'ಭಗವಂತ' ಎಂದಾಗ, ಅದು ನಿಮ್ಮ ಅಹಂಕಾರವೇ ಆಗಿರುತ್ತದೆ. ನನ್ನ ವಿಷಯದಲ್ಲಿ ನಾನು 'ನಾನು' ಎಂದಾಗ, ಅದು ದೇವರ ಪ್ರಕ್ಷೇಪಣೆಯೇ ಆಗಿರುತ್ತದೆ. ಆದ್ದರಿಂದ, ನಾನು 'ನಾನು' ಎಂದಾಗ ಅದು ದೈವೀಶಕ್ತಿಯೇ ಆಗಿರುತ್ತದೆ. ಆದ್ದರಿಂದ ನಾನು 'ನಾನು' ಎಂದಾಗಲೆಲ್ಲಾ ತಿಳಿಯಿರಿ, ಅದು ನನ್ನ ಆರಡಿ ದೇಹವನ್ನು ಕುರಿತದ್ದಾಗಿರುವುದಿಲ್ಲ, ಆದರೆ ಅದರ ಹಿಂದಿರುವ ಶಕ್ತಿಯನ್ನು ಕುರಿತದ್ದಾಗಿರುತ್ತದೆ.
ಶ್ರೀಕೃಷ್ಣನು 'ನನ್ನ ಜೀವನವನ್ನು ತಿಳಿಯಿರಿ ಮತ್ತು ಅದರಿಂದ ಮುಕ್ತಿಯನ್ನು ಪಡೆಯಿರಿ' ಎಂದು ಹೇಳುವುದು ಇದೇ ಅರ್ಥದಲ್ಲಿ.
ಈಗ ನನ್ನ ಜೀವನವನ್ನು ತಿಳಿದು, ವಿಮುಕ್ತರಾಗಿರಿ, ನಿಮಗೆಲ್ಲಾ ನನ್ನ ಜೀವನವು ತಿಳಿಯುವಂತಾಗಲಿ ಹಾಗೂ ನೀವು ಅದರಿಂದ ಮುಕ್ತರಾಗುವಂತಾಗಲಿ. ನಿಮಗೆ ನಿತ್ಯಾನಂದವು ತಿಳಿಯುವಂತಾಗಲಿ, ನಿಮಗೆ ನಿತ್ಯಾನಂದರ ಜೀವನ ತಿಳಿಯುವಂತಾಗಲಿ ಹಾಗೂ ನಿತ್ಯಾನಂದರ ಜೀವನವನ್ನು ಬಾಳುವಂತಾಗಲಿ - ನಿತ್ಯಾನಂದ ಎಂದರೆ ನಿರಂತರವಾದ ಮಹದಾನಂದ.
ಈ ಇಡೀ ಅನುಭವವು ನಿಮ್ಮಲ್ಲಿ ಪರಿವರ್ತನೆಯನ್ನುಂಟುಮಾಡಲಿ ಹಾಗೂ ನಿಮಗೆ ವಿಶೇಷವಾದ ದೈವಾನುಗ್ರಹವಾಗಲಿ, ನೀವು ಗುರುಗಳೊಡನೆ ಸಂಬಂಧಿಸುವಂತಾಗಲಿ, ನಿಮ್ಮ ಆತ್ಮ ಪರಿವರ್ತಿಸಲಿ, ನೀವು ನಿರಂತರವಾದ ಮಹದಾನಂದ ನಿತ್ಯಾನಂದವನ್ನು ಪಡೆದು ಪ್ರಸರಿಸುವಂತಾಗಲಿ.
ಧನ್ಯವಾದಗಳು.