ಮಂತ್ರಗಳನ್ನು ಆಲಿಸಿ
This text was machine-transcribed from the printed book and may contain errors. Select the words and choose “Report a mistake”.
(ಸಮಯದ ಅವಧಿ: 10 ನಿಮಿಷಗಳು)
ಈ ಕೊನೆಯ ಹೆಜ್ಜೆಯಲ್ಲಿ, ಸುಮ್ಮನೆ ಆನಂದದ ಮನೋಭಾವನೆಯಲ್ಲಿ ನಿಶ್ಯಬ್ಧವಾಗಿ ಕುಳಿತುಕೊಂಡು ಪಠಿಸುತ್ತಿರುವ ಮಂತ್ರವನ್ನು ಆಲಿಸಿ. ವಿಶ್ವಶಕ್ತಿಯೊಂದಿಗೆ ಸಂಬಂಧ ಹೊಂದಿದ ಹಾಗೆ ಸುಮ್ಮನೆ ಅನುಭವಿಸಿ ಮತ್ತು ಶಕ್ತಿಶಾಲಿಯಾದ ಮಂತ್ರಗಳಿಂದ ನಿಮ್ಮ ಅಂತರಂಗದಲ್ಲಿ ಆಗುವ ಕಂಪಗಳನ್ನು ಅನುಭವಿಸಿ. ಮಂತ್ರಗಳು ವಿಶ್ವಶಕ್ತಿಗೆ ಅಥವಾ ಗುರುಗಳಿಗೆ ನಮ್ಮನ್ನು ಅಜ್ಞಾನದಿಂದ ಬಿಡುಗಡೆಗೊಳಿಸಿ ನಿರಂತರವಾದ ಆನಂದವನ್ನು ಅಂದರೆ ನಿತ್ಯಾನಂದವನ್ನು ಹೊಂದಲು ಸಹಾಯ ಮಾಡುವ ಈ ಮಹತ್ತರ ಪ್ರಜ್ಞೆಯನ್ನು ನಮಗೆ ದಯಪಾಲಿಸಿದ್ದಕ್ಕಾಗಿ ನಮ್ಮ ಕೃತಜ್ಞತೆಗಳನ್ನು ಅರ್ಪಿಸುವ ಒಂದು ವಿಧಾನ.
ನೀವು ವಿಧಿ ವಿಧಾನಗಳಲ್ಲಿ ಆಸಕ್ತರಾಗಿದ್ದರೆ, ನೀವು ಗುರುಪೂಜಾವನ್ನು (ಗುರುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುವುದು) ಈ ನಡಿಗೆಯಲ್ಲಿ ಮಂತ್ರಗಳನ್ನು ಉಚ್ಚರಿಸುತ್ತಾ ವಿಧಿಗಳನ್ನು ಮಾಡಬಹುದು.
ನೀವು ವಿಧಿಗಳಲ್ಲಿ ಆಸಕ್ತರಾಗಿಲ್ಲದಿದ್ದರೆ, ಸುಮ್ಮನೆ ನಿಶ್ಯಬ್ಧವಾಗಿ ಕುಳಿತು ಮಂತ್ರಗಳನ್ನು ಆಲಿಸಬಹುದು. ಕೇವಲ ಮಂತ್ರಗಳನ್ನು ಆಲಿಸುವುದರಿಂದ ಕೂಡ ನಿಮಗೆ ತುಂಬಾ ಒಳಿತನ್ನು ಮಾಡುವುದು. ಮಂತ್ರಗಳು ಕಂಪನಗಳಿಂದ ಕೂಡಿದ್ದು ನಿಮ್ಮನ್ನು ಹೆಚ್ಚು ಪವಿತ್ರವಾಗಿಯೂ ಮತ್ತು ಆನಂದದಾಯಕವಾಗಿಯೂ ಇರಲು ನಿಮ್ಮನ್ನು ಪರಿವರ್ತಿಸುತ್ತದೆ.
ಆದುದರಿಂದ ದೈನಂದಿಕವಾಗಿ ಈ ಧ್ಯಾನತಂತ್ರವನ್ನು ದಿನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಮಾಡಿ ಮತ್ತು ನಿಮ್ಮಲ್ಲಿ ಒಂದು ಹೊಸ ಆಯಾಮವನ್ನು ಅನುಭವಿಸಲು ಪ್ರಾರಂಭಿಸಿ. ಈ ತಂತ್ರವು ನಿಮ್ಮ ಪರಿಶುದ್ಧ ಅರಿವನ್ನು ಮತ್ತು ನಿತ್ಯಾನಂದದ ಸ್ಥಿತಿಯನ್ನು ಅನುಭವಿಸಲು ಮನಸ್ಸು ಮತ್ತು ದೇಹವನ್ನು ತಯಾರು ಮಾಡಲು ಸಹಾಯ ಮಾಡುತ್ತದೆ.
ನಿಮಗೆ ಅನುಭವವಾಗಲಿ ಮತ್ತು ನಿರಂತರ ಆನಂದವಾದ ನಿತ್ಯಾನಂದನಲ್ಲಿ ಒಂದಾಗಿರಿ.

ಪರಮಹಂಸ ನಿತ್ಯಾನಂದರನ್ನು ಕುರಿತು
ಜೀವನದ ಉದ್ದೇಶವನ್ನು ಅರಿಯುವ ಮಾನವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ. ಆನಂದವು ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೊಂದಿದ ಮತ್ತು ಆಧುನಿಕ ಆಧ್ಯಾತ್ಮಿಕ ಗುರುಗಳಾದ ಪರಮಹಂಸ ನಿತ್ಯಾನಂದರ ಅನುಭವ ಮತ್ತು ಬೋಧನೆ.
ಅವರ ಜೀವನ ಧ್ವೀಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ - ಅಂದರೆ ದಿನದ 24 ಗಂಟೆಗಳೂ ಆನಂದದಲ್ಲಿ ಬದುಕುವುದು! ಎಂದು ಅನುಭವದಿಂದ ಅರಿಯುವುದನ್ನು ಮೊದಲು ನೀಡುವುದು. ನಮ್ಮದೇ ಆಂತರ್ಯದ ಮಾರ್ಗದಲ್ಲಿ ಕೆಲಸ ಮಾಡುವ ಮುಖಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದು ಸಾಧ್ಯವೆಂಬ ಅರಿವನ್ನು ನಮ್ಮಲ್ಲಿ ತರುತ್ತಾರೆ.
ಪರಮಹಂಸರು ಹುಟ್ಟಿದ್ದು ತಿರುವಣ್ಣಾಮಲೈ-ದಕ್ಷಿಣ ಭಾರತದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ, ತೀವ್ರವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮಾನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಫೋಟಿಸಲು ಮತ್ತು ಆಧ್ಯಾತ್ಮಿಕವಾಗಿ ಬಲಾಢ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಂತ್ರಜ್ಞಾನವೊಂದನ್ನು ರೂಪಿಸಿದರು. ರೂಪಿಸಿರುವ ಅಸಂಖ್ಯಾತ ಕಾರ್ಯಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು ಬೀಳುವಂತೆ ಮಾಡುತ್ತವೆ. ಅವರು ಹೇಳುತ್ತಾರೆ, ಭೌತಿಕ ಜಗತ್ತಿನಲ್ಲಿ ಯಶಸ್ಸನ್ನು ಮತ್ತು ನಿಮ್ಮ ಅಂತರಂಗದಲ್ಲಿ ಆಳವಾದ ಸಾಫಲ್ಯತೆಯನ್ನು ತರಲು ಧ್ಯಾನವು ಅನುಪಮ ಕೀಲಿಕೈ.
ಲೈಫ್ ಬ್ಲಿಸ್ ಫೌಂಡೇಶನ್ ಕುರಿತು (LBF)
ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1000 ಕೇಂದ್ರಗಳಷ್ಟು ಹಬ್ಬಿದೆ. ಅದರ ತೆಕ್ಕೆಯಲ್ಲಿ ಇಂಟರ್ ನ್ಯಾಶನಲ್ ವೇದಿಕ್ ಹಿಂದೂ ಯೂನಿವರ್ಸಿಟಿ (IVHU) ಯುಎಸ್ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್ಎ, ಇವುಗಳನ್ನು ಹೊಂದಿದೆ.
ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ್ ಅಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ ಬೆಳವಣಿಗೆಯು ಅಗಾಧವಾಗಿದ್ದು ಬಾಹ್ಯ ಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದಂತಹ ವಿವಿಧ ಚಟುವಟಿಕೆಗಳಿಂದ ಅನ್ವೇಷಿಸಲು ಮತ್ತು ವಿಸ್ಫೋಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡು ಪರಮಾನಂದದ ಜೀವನವನ್ನು ಸೃಷ್ಟಿಸುವಂತಹ ಪರಿಮಾಣಿತ ಆಧ್ಯಾತ್ಮಿಕತೆ (Quantum Spirituality) ಯನ್ನು ಅವು ಪೋಷಿಸುತ್ತವೆ. ಅವು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. IVHU ಮುಖಾಂತರ ಪ್ರಪಂಚದಾದ್ಯಂತ ವೈರುಧ್ಯ ಶ್ರೇಣಿಯ ಧ್ಯಾನತಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭಾರತದಲ್ಲಿ ಒಂದು ವರ್ಷ ಅವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ.
ನಿತ್ಯಾನಂದ ಧೀರ ಸೇವಾ ಸೇನಾ (NDSS) ದ ಆನಂದ ಸೇವಕ್ಸ್ ಎಂಬ ಸ್ವಯಂ ಸೇವಕರು ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡಿದ್ದು ಅತ್ಯುತ್ಸಾಹದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.
ಲೈಫ್ ಬ್ಲಿಸ್ ಫೌಂಡೇಶನ್ (LBF) ನ ಕೊಡುಗೆ
ದೇಹ, ಮನಸ್ಸು ಮತ್ತು ಆತ್ಮದ ಹಂತದಲ್ಲಿ ಲಕ್ಷಗಟ್ಟಲೆ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವೈಶಿಷ್ಟ್ಯ ಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು:
LBP ಹಂತ 1 - ಲೈಫ್ ಬ್ಲಿಸ್ ಪ್ರೋಗ್ರಾಂ
ನಿಮ್ಮನ್ನೇ ನೀವು ಸಚೇತನಗೊಳಿಸಿಕೊಳ್ಳಿ
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಅದು ನಿಮ್ಮ ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳುವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ಧಿಕ ತಿಳುವಳಿಕೆಯನ್ನು ನೀಡುವುದು. ಅದು ಬೌದ್ಧಿಕ ಹಂತದಲ್ಲಿ ಆಧ್ಯಾತ್ಮಿಕತೆಯ ಪರಿಣಾಮವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮದೇ ಆತ್ಮನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನಗಳಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದ ಕಾರ್ಯಾಗಾರವಾಗಿದೆ.
ಪರಮಹಂಸ ನಿತ್ಯಾನಂದರ ಪುಸ್ತಕಗಳು 23 ಭಾಷೆಗಳಲ್ಲಿ ಲಭ್ಯವಾಗಿವೆ.
ಲೈಫ್ ಬ್ಲಿಸ್ ಗೆಲೇರಿಯಾನಿಂದ DVDಗಳು, CDಗಳು, ‘ಮೆಡಿಟೇಶನ್ ಕಿಟ್’ ಮತ್ತು ಇತರ ಪದಾರ್ಥಗಳಿಗಾಗಿ www.lifeblissgalleria.com ಅನ್ನು ವೀಕ್ಷಿಸಿ ಅಥವಾ ನಮ್ಮನ್ನು ಸಂಪರ್ಕಿಸಿ.
ಮನೋಭಾವನೆಗಳು ಮತ್ತು ಆಲೋಚನೆಗಳು ನಮ್ಮ ಮನಸ್ಸಿನ ಸ್ಥಿತಿಗೆ ಮತ್ತು ಮನೋವೃತ್ತಿಗೆ ಹುಟ್ಟು ನೀಡುತ್ತವೆ. ಮನೋಭಾವನೆಗಳು ಮತ್ತು ಆಲೋಚನೆಗಳ ಆಟವನ್ನು ಅರ್ಥಮಾಡಿಕೊಳ್ಳುವುದೇ ಅದನ್ನು ದಾಟಿ ಹೋಗಲು ಮೊದಲ ಹಾಗೂ ಕೊನೆಯ ಹೆಜ್ಜೆಯಾಗಿರುವುದು. ನಿತ್ಯಧ್ಯಾನವು 35-ನಿಮಿಷಗಳ ಧ್ಯಾನವಾಗಿದ್ದು ಮನಸ್ಸಿನಿಂದ ಹಿಡಿತರಹಿತರಾಗಿ ಅದನ್ನು ದಾಟಿ ಮುಂದೆಹೋಗಲು ಪರಮಹಂಸ ನಿತ್ಯಾನಂದರಿಂದ ವಿನ್ಯಾಸಗೊಳಿಸಲ್ಪಟ್ಟಿದೆ.
Ebook ISBN: 979-8-88572-464-7
www.lifebliss.org (R) & (C) 2007
ಲೈಫ್ ಬ್ಲಿಸ್ ಫೌಂಡೇಶನ್, 9720 ಸೆಂಟ್ರಲ್ ಅವೆನ್ಯೂ, ಮಾಂಟ್ಕ್ಲೇರ್, CA 91763, USA. ಫೋನ್ : 626 531 6065 E-mail : [email protected], [email protected] URL : www.lifebliss.org ನಿತ್ಯಾನಂದ ಧ್ಯಾನ ಪೀಠಂ, ನಿತ್ಯಾನಂದ ಪುರಿ, ಕಲ್ಲುಗೋಪ ಹಳ್ಳಿ, ಮೈಸೂರು ರಸ್ತೆ, ಬಿಡದಿ ಬೆಂಗಳೂರು – 562 109. ಕರ್ನಾಟಕ. ಭಾರತ ಆಶ್ರಮ : 91-80-65591844, 27202084 Email: [email protected] URL: www.dhyanapeetam.org, www.nithyananda.org