KAILASA Library/ತೆರೆ ಬಾಗಿಲು/Sign in
ತೆರೆ ಬಾಗಿಲು

ತೆರೆ ಬಾಗಿಲು

This text was machine-transcribed from the printed book and may contain errors. Select the words and choose “Report a mistake”.

NITHYANANDA FOUNDATION

ತೆರೆ ಬಾಗಿಲು...

ತಂಗಾಳಿ ಒಳಗೆ ಬೀಸಲಿ!

(ಆನಂದಭರಿತ ಜೀವನಕ್ಕೆ ಬೇಕಾದ ಉಪಕರಣಗಳು)

Nithyananda

ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿ

Swami Nithyananda

ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿ

ನಿಮ್ಮನ್ನು ನೀವು ಕೇಳಿಕೊಳ್ಳುತ್ತಿದ್ದೀರೇನು ?
ಕೆಲಸದಿಂದ ಯಾವಾಗ ನೀವು ಮನೆಗೆ ಹೋಗುವಿರೋ, ನೀವು ಬಾಗಿಲನ್ನು ಗಟ್ಟಿಯಾಗಿ ಬಡಿಯುವುದನ್ನು
ನೀವೇ ಕೇಳಿಕೊಳ್ಳಿ. ಅದೇ ಸಿನಿಮಾ ಒಂದನ್ನು ನೋಡಿ ಮನೆಗೆ ಹೋದಾಗ ಹಾಗೇ ಮಾಡುವಿರೇನು ?

ನೀವು ಬಡಿಯುವ ಶಬ್ದ ನಿಮ್ಮ ಕೆಲಸದ ಬಗ್ಗೆ ನಿಮಗಿರುವ ಅನಿಸಿಕೆಗಳ ಬಗ್ಗೆ ಸಾಕಷ್ಟು ಮಾತನಾಡುತ್ತದೆ.
ಅದನ್ನು ಹೇಗೆ ಬದಲಾಯಿಸಬಲ್ಲಿರಿ ?
-ಸ್ವಾಮೀಜಿ

ಸ್ವಾಮೀಜಿ: ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವಿನ ಕಂದರಕ್ಕೆ ಸೇತುವೆ.

ಸ್ವಾಮೀಜಿಯವರನ್ನು ಆಳವಾದ ಧ್ಯಾನದ ಸ್ಥಿತಿಗೆ ಹೋಗುವಂತೆ ನಾವು ಕೇಳಿದೆವು... (ಕಂಡಿದ್ದೇನು?)

ಅವರ ಮೆದುಳು ಶೇ.90ಕ್ಕಿಂತ ಹೆಚ್ಚಾಗಿ ಮುಚ್ಚಿಕೊಂಡಿತ್ತು ! ಅದು ನೆಮ್ಮದಿಯಾಗಿ ಮತ್ತು ಅಚಲವಾಗಿ ಸಂಪೂರ್ಣ
ಶಾಂತವಾಗಿತ್ತು... ಸ್ವಾಮೀಜಿ ಅವರು ಸಂಕಲ್ಪ ಮಾತ್ರದಿಂದಲೇ ಅದನ್ನು ಸಾಧಿಸಿದ್ದರು.

ಸ್ವಾಮೀಜಿ ಅವರ ಕ್ಯೂಇಇಜಿಯಿಂದ ಅವರು ಮೆದುಳಿನ ತರಂಗಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದು
ಗೊತ್ತಾಯಿತು. ನುರಿತ ಪಿಯಾನೋ ವಾದಕನಂತೆ, ಆಳವಾದ ಧ್ಯಾನದ ಸ್ಥಿತಿಯಲ್ಲಿ ಅವರ ಮೆದುಳು ಒಂದರಿಂದ
ಮತ್ತೊಂದು ಹಂತಕ್ಕೆ ಸರಾಗವಾಗಿ ಹರಿದು ಹೋಯಿತು.

ಸ್ವಾಮೀಜಿ ಅವರ ಮೆದುಳಿನ ಮುಂಭಾಗದ ಚಟುವಟಿಕೆಗಳು ಗಮನಾರ್ಹವಾಗಿ ಹೆಚ್ಚಿದ್ದವು. ಯಾವುದೇ ಸಂದರ್ಭದಲ್ಲಿ
ಸಾಮಾನ್ಯ ಮಾನವನ ಮೆದುಳಿನ ಚಟುವಟಿಕೆ ಇರುವುದಕ್ಕಿಂತಲೂ ಹಲವಾರು ಪಟ್ಟು ಅದು ಹೆಚ್ಚಿತ್ತು. ಬುದ್ಧಿವಂತಿಕೆ,
ಎಚ್ಚರಿಕೆ, ವಿವೇಕ, ತೀರ್ಮಾನಗಳ ಕಾರ್ಯಗಳೆಲ್ಲವೂ ಮುಂಭಾಗದ ಪ್ರದೇಶದಲ್ಲಿ ಸಂಬಂಧಿಸಿದ್ದು.

ಸ್ವಾಮೀಜಿ - ಅದೃಶ್ಯವಾದ, ನಿಗೂಢವಾದ ಪ್ರಾಚೀನ ಪ್ರಪಂಚ ಹಾಗೂ ಸಾಕ್ಷಾತ್ ನೋಡಬಹುದಾದ ವಿಜ್ಞಾನದ
ಆಧುನಿಕ ಪ್ರಪಂಚಗಳ ನಡುವಣ ಒಂದು ಸೇತುವೆಯಂತೆ.

(ಸ್ವಾಮೀಜಿಯವರ - ನರಮಂಡಲ ವ್ಯವಸ್ಥೆಯನ್ನು ವಿರೋಧಿಸುವ ವಿಜ್ಞಾನವನ್ನು ಇತ್ತೀಚೆಗೆ ಒಕ್ಲಹಾಮಾ
(ಯು.ಎಸ್.ಎ.)ದ ನರಶಾಸ್ತ್ರಜ್ಞರ ತಂಡವೊಂದು ಆಳವಾಗಿ ಅಧ್ಯಯನ ನಡೆಸಿ ಸಂಶೋಧಿಸಿ ಮಂಡಿಸಿದ ವಿವರವಾದ
ವರದಿಯ ತುಣುಕುಗಳು (ಮಾರ್ಚ್-2004))

Ebook ISBN: 979-8-88572-542-2

Nithyananda Foundation

India ashram: DHYANAPEETAM, Nithyanandapuri, Kallugopahalli,
Off Mysore Road, Bidadi 562 109, Bangalore District, Karnataka, INDIA.
Ashram : +91-80-7288033/4, 56691844 Secretary/ PRO: 9341803444/ 94480 58598
[email protected] www.dhyanapeetam.org

ತೆರೆ ಬಾಗಿಲು.... ತಂಗಾಳಿ ಒಳಗೆ
ಬೀಸಲಿ ! ಇದೊಂದು ಸಮಕಾಲೀನ
ಸಮಾಜದಲ್ಲಿ ಅಂತಃ
ಪರಿವರ್ತನೆಯ ವಿಜ್ಞಾನವನ್ನು
ಕೇಂದ್ರೀಕರಿಸಿದ ಚಿಂತನ ಧಾರೆ.

ಸಂಗ್ರಹ: ದೇಶ-ವಿದೇಶಗಳಲ್ಲಿ ಪ್ರೇಕ್ಷಕ
ಸಮೂಹವನ್ನುದ್ದೇಶಿಸಿ ನೀಡಿದ
ಸ್ವಾಮೀಜಿಯವರ ವಿಚಾರ ಧಾರೆ
ಮತ್ತು ಬಹಳ ಪ್ರಮುಖವಾಗಿ ನಮ್ಮ
ಸಮಕಾಲೀನ ವಿವಾದಗಳ ಮೇಲೆ
ಬೀಳುವ ಬೆಳಕು, ಈ ಲೇಖನಗಳು
ನಿಮ್ಮನ್ನು ಬಹಳ ಆನಂದದಿಂದ
ಜೀವಿಸಲು ಬೇಕಾದ ಚುರುಕಾದ,
ಕಾರ್ಯರೂಪಕ್ಕೆ ಬರುವಂತಹ
ಸಲಕರಣೆಗಳೊಂದಿಗೆ
ಸಜ್ಜುಗೊಳಿಸುತ್ತವೆ.

Portrait of Nithyananda

ತೆರೆ ಬಾಗಿಲು........ ತಂಗಾಳಿ ಒಳಗೆ ಬೀಸಲಿ!

(ಆನಂದಭರಿತ ಜೀವನಕ್ಕೆ ಬೇಕಾದ ಉಪಕರಣಗಳು)

ಯಾರೀ ಸ್ವಾಮೀಜಿ ? ಯಾರು ?

ಪರಮಹಂಸ ಶ್ರೀ ನಿತ್ಯಾನಂದ ಸ್ವಾಮೀಜಿ ನಮ್ಮ ಶತಮಾನದ ನಿಜವಾದ ಕ್ರಾಂತಿಕಾರಿಯಾದ ಆಧ್ಯಾತ್ಮಿಕ ಸದ್ಗುರು.

ಸ್ವಾಮೀಜಿ ಆಧ್ಯಾತ್ಮ ಯಾತ್ರೆಯ ಸಾಹಸವನ್ನು ಬಹಳ ಚಿಕ್ಕವಯಸ್ಸಿನಲ್ಲಿಯೇ ಕೈಗೊಂಡರು. ಅವರು ಬರಿಗಾಲಿನಲ್ಲೇ ಭಾರತ ದೇಶದ ಉದ್ದಗಲಕ್ಕೂ ಅಡ್ಡಹಾಯ್ದು, ಭಾರತ ಮತ್ತು ನೇಪಾಳದಲ್ಲಿ ಶ್ರೇಷ್ಠ ಗುರುಗಳೊಂದಿಗೆ ಅಧ್ಯಯನ ಮಾಡುತ್ತಾ, ಅಸಾಧಾರಣ ತೇಜಸ್ಸಿನಿಂದೊಡಗೂಡಿ ಉಗ್ರ ತಪಸ್ಸನ್ನಾಚರಿಸಿದರು. ಅವರು 2000 ದ ಇಸವಿ ಜನವರಿ 1 ರಂದು ಅಂತಿಮ ಅರಿವಿನ ವಿಕಾಸವನ್ನು ಅನುಭವಿಸಿದರು ಹಾಗೂ ಪರಮಾನಂದದ ಅವಸ್ಥೆಯಾದ 'ನಿತ್ಯಾನಂದ' ಸ್ಥಿತಿಯನ್ನು ಹೊಂದಿದರು. ಆಧ್ಯಾತ್ಮಿಕತೆ ಹಾಗೂ ಜೀವನದ ಬಗ್ಗೆ ಅಧಿಕಾರಯುತವಾದ ಆದರೂ ಕರುಣೆಯಿಂದೊಡಗೂಡಿ ಮತ್ತು ಮಾನವ ಸ್ವಭಾವದೆಡೆ ಅಂತಃಚಕ್ಷುವನ್ನು ಬೀರುತ್ತಾ ಸ್ವಾಮೀಜಿ ಪ್ರಪಂಚದ ಕೋಟಿ ಕೋಟಿ ಹೃದಯಗಳನ್ನು ಸೇರಲು ಆಗಮಿಸಿದ್ದಾರೆ.

ಸ್ವಾಮೀಜಿಯವರ ಕಾರ್ಯ ಸಂದೇಶ ಬಹಳ ಸರಳವಾದದ್ದು - ಮನುಷ್ಯನಲ್ಲಿ ಅಗೋಚರವಾಗಿ - ಗುಪ್ತವಾಗಿ ಅಡಗಿರುವ ದೈವೀಕತೆಯನ್ನು ಜಾಗೃತಗೊಳಿಸುವುದು. ಈ ನಿಟ್ಟಿನಲ್ಲಿ ಅವರು ವಿಶ್ವದಾದ್ಯಂತ ಧ್ಯಾನದ ಮಹತ್ವವನ್ನು ತಿಳಿಸಲು ಜನವರಿ - 1-2003 ರಂದು 'ಧ್ಯಾನಪೀಠಂ' ಅನ್ನು ಅನಾವರಣಗೊಳಿಸಿದರು. ಬಿದದಿ (ಭಾರತದಲ್ಲಿನ - ಬೆಂಗಳೂರು ಬಳಿ) ಯಲ್ಲಿ ತನ್ನ ಮೂಲ ಆಧ್ಯಾತ್ಮಿಕ ಕೇಂದ್ರಸ್ಥಾನದ ಜೊತೆ ವಿಶ್ವದಾದ್ಯಂತ ಸುಮಾರು 300 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ

ಸ್ವಾಮೀಜಿ

ಧ್ಯಾನಪೀಠವು ಮನುಕುಲದ ರೂಪಾಂತರವನ್ನು ವ್ಯಕ್ತಿಗತವಾಗಿ ಅಂತಃಸತ್ವವನ್ನು ರೂಪಾಂತರ ಗೊಳಿಸುವ ಮೂಲಕ ಕೆಲಸ ಮಾಡುತ್ತಿದೆ. ಸ್ವಾಮೀಜಿಯವರ ದೈವೀಕವಾಗಿ ಗುಣಪಡಿಸುವ ಶಕ್ತಿ ಮತ್ತು ಅವರ ಸರಳ, ಕಾರ್ಯರೂಪಕ್ಕೆ ಬರುವಂತಹ ಧ್ಯಾನದ ತಾಂತ್ರಿಕತೆಗಳು, ನಿಮ್ಮ ಜೀವನ, ದೈಹಿಕವಾಗಿರಲಿ, ಭಾವನಾತ್ಮಕವಾಗಿರಲಿ ಅಥವಾ ಆಧ್ಯಾತ್ಮಿಕವಾಗಿರಲಿ - ಎಲ್ಲಾ ನಿಟ್ಟಿನಲ್ಲೂ ವಿಕಾಸಗೊಳ್ಳುವಂತೆ ಮಾಡುತ್ತವೆ.