KAILASA Library/ವರಗಳನ್ನು ನೀಡುವ ದಕ್ಷಿಣಾಮೂರ್ತಿ/Sign in
ವರಗಳನ್ನು ನೀಡುವ ದಕ್ಷಿಣಾಮೂರ್ತಿ

ವರಗಳನ್ನು ನೀಡುವ ದಕ್ಷಿಣಾಮೂರ್ತಿ

This text was machine-transcribed from the printed book and may contain errors. Select the words and choose “Report a mistake”.

Dakshinamurti line drawing

Gurum Bhaje गुरुं भजे

ವರಗಳನ್ನು ನೀಡುವ ದಕ್ಷಿಣಾಮೂರ್ತಿ

ದಕ್ಷಿಣಾಮೂರ್ತಿ ಸ್ತೋತ್ರಗಳು

ವರಗಳನ್ನು ನೀಡುವ ದಕ್ಷಿಣಾಮೂರ್ತಿ

Ebook ISBN: 979-8-88572-475-3

ಪವಿತ್ರ ಆಲದ ಮರದಡಿ ಪ್ರಭು ದಕ್ಷಿಣಾಮೂರ್ತಿ

ಪವಿತ್ರ ಆಲದ ಮರದಡಿ ಪ್ರಭು ದಕ್ಷಿಣಾಮೂರ್ತಿ, ಬೆಂಗಳೂರು ಆಶ್ರಮ, ಭಾರತ - ನಮ್ಮೊಂದಿಗಿರುವ ಜ್ಞಾನೋದಯ ಹೊಂದಿದ ಗುರುಗಳಾದ ಪರಮಹಂಸ ನಿತ್ಯಾನಂದರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ.

ದಕ್ಷಿಣಾಮೂರ್ತಿ

ಆದಿ ಗುರು

ದಕ್ಷಿಣಾಮೂರ್ತಿಯನ್ನು ಕುರಿತು ಶಂಕರಾಚಾರ್ಯರು ಹಾಡಿರುವ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ:

ಚಿತ್ರಂ ವಟತರೋರ್ಮೂಲೇ
ವೃದ್ಧಾಃ ಶಿಷ್ಯಾ ಗುರುರ್ಯುವಾ |
ಗುರೋಸ್ತು ಮೌನಂ ವ್ಯಾಖ್ಯಾನಂ
ಶಿಷ್ಯಾಸ್ತು ಛಿನ್ನಸಂಶಯಾಃ ॥

ಆಲದ ಮರದಡಿ ಕುಳಿತಿರುವರು ವಯಸ್ಕರಾದ ಶಿಷ್ಯರು ಗುರುವಾದರೋ ಕೇವಲ ಒಬ್ಬ ಯುವಕ! ಗುರು ನಿಶ್ಯಬ್ದತೆಯ ಮೂಲಕ ಮಾತ್ರ ಮಾತನಾಡುತ್ತಾನೆ ಆದರೆ ಅದೇನಾಶ್ಚರ್ಯ! ಶಿಷ್ಯರ ಪ್ರಶ್ನೆಗಳೆಲ್ಲ ತಮ್ಮಷ್ಟಕ್ಕೇ ಕರಗಿ ಹೋಗುತ್ತಿವೆ!

ದಕ್ಷಿಣಾಭಿಮುಖವಾಗಿ ಕುಳಿತಿರುವ ಏಕೈಕ ಹಿಂದುಗಳ ಮೂರ್ತಿ ಎಂದರೆ ಬಹುಶಃ ದಕ್ಷಿಣಾಮೂರ್ತಿಯೊಬ್ಬನೇ

ವಾಸ್ತವಿಕವಾಗಿ ದಕ್ಷಿಣಾಮೂರ್ತಿಯು ಪರಮಶ್ರೇಷ್ಠ ಆದಿ ಗುರುವಾಗಿ ಕುಳಿತಿರುವ ಶಿವನೇ. ಭೂಗ್ರಹದ ಮೇಲೆ ಅವತರಿಸಿದ ಪ್ರಪ್ರಥಮ ಜ್ಞಾನೋದಯ ಹೊಂದಿದ ಗುರುವೇ ಇವನು. ಬೋಧಕನಾಗಿ ಅವನ ಅನನ್ಯತೆಯು ನಿಶ್ಯಬ್ದತೆಯ ಮೂಲಕ, ತನ್ನ ಸರ್ವಾಂತರ್ಯಾಮಿ ಪ್ರಜ್ಞೆಯ ಮೂಲಕ ತಾನು ಬೋಧಿ ಸುವುದರಲ್ಲಿದೆ. ಪ್ರಜ್ಞೆಯ ಸಂಕೇತವನ್ನು ಪ್ರದರ್ಶಿಸುವವನೂ, ಆನಂದದ ಸ್ವರೂಪನಾದವನೂ, ಪರಮ ಸತ್ಯದಲ್ಲಿ ಸ್ಥಾಪಿತರಾದ ಋಷಿಮುನಿಗಳ ಸಮೂಹ ಗಳಿಂದ ಸುತ್ತುವರಿದಿರುವವನೂ, ಎಳೆಯ ವಯಸ್ಸಿನವನೂ, ನಿಶ್ಯಬ್ದತೆಯ ಮೂಲಕ ಸತ್ಯಗಳನ್ನು ವ್ಯಾಖ್ಯಾನಿಸುತ್ತಿರುವವನೂ, ಹಾಗೂ ನಿಜವಾಗಿಯೂ ಉತ್ತಮ ವಾಕ್ಪಟುತ್ವವುಳ್ಳವನಾದವನೂ ಅವನೇ....

ಜ್ಞಾನೋದಯ ಹೊಂದಿದ ಗುರುಗಳು ಮಾತ್ರವೇ ಭೂಗ್ರಹದ ಮೇಲಿನ ಜೀವಂತ ಗುರುಗಳು ಹಾಗೂ ದೇವರುಗಳು.

ಜ್ಞಾನೋದಯ ಹೊಂದಿದ ಗುರುಗಳೊಂದಿಗೆ ಕೇವಲ ಉಪಸ್ಥಿತರಾಗಿ ರುವುದಷ್ಟೇ ಯಾರೊಬ್ಬರ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೇರಿಸಲು ಸಾಕಾಗಿದೆ. – ಪರಮಹಂಸ ನಿತ್ಯಾನಂದ