ಲೈಫ್ ಬ್ಲಿಸ್ ಫೌಂಡೇಶನ್ ಕುರಿತು (LBF)
This text was machine-transcribed from the printed book and may contain errors. Select the words and choose “Report a mistake”.
ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸ ನಿತ್ಯಾನಂದರ ಜಾಗತಿಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1300 ಕೇಂದ್ರಗಳಷ್ಟು ಹಬ್ಬಿದೆ. ಅದರ ತೆಕ್ಕೆಯಲ್ಲಿ ಇಂಟರ್ ನ್ಯಾಶನಲ್ ವೇದಿಕ್ ಹಿಂದೂ ಯೂನಿವರ್ಸಿಟಿ (IVHU) ಯುಎಸ್ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್ಎ, ಇವುಗಳನ್ನು ಹೊಂದಿದೆ.
ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ ಅಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ ಬೆಳವಣಿಗೆಯು ಅಗಾಧವಾಗಿದ್ದು ಬಾಹ್ಯಬೆಳವಣಿಗೆಯು ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದಂತಹ ವಿವಿಧ ಚಟುವಟಿಕೆಗಳಿಂದ ಅನ್ವೇಷಿಸಲು ಮತ್ತು ವಿಸ್ಫೋಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡು ಪರಮಾನಂದದ ಜೀವಿತವನ್ನು ಸೃಷ್ಟಿಸುವಂತಹ ಪರಿಮಾಣಿತ ಆಧ್ಯಾತ್ಮಿಕತೆ (Quantum Spirituality)ಯನ್ನು ಅವು ಪೋಷಿಸುತ್ತವೆ. ಅವು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. IVHU ಮುಖಾಂತರ ಪ್ರಪಂಚದಾದ್ಯಂತ ವೈರುಧ್ಯ ಶ್ರೇಣಿಯ ಧ್ಯಾನತಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ,
ಭಾರತದಲ್ಲಿ ಒಂದು ವರ್ಷ ಅವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ.
ನಿತ್ಯಾನಂದ ಧೀರ ಸೇವಾ ಸೇನಾ (NDSS)ದ ಆನಂದ ಸೇವಕ್ಸ್ ಎಂಬ ಸ್ವಯಂ ಸೇವಕರು - ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡಿದ್ದು ಅತ್ಯುತ್ಸಾಹದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.
ಲೈಫ್ ಬ್ಲಿಸ್ ಫೌಂಡೇಶನ್ (LBF)ನ ಕೊಡುಗೆ:
ದೇಹ, ಮನಸ್ಸು ಮತ್ತು ಆತ್ಮದ ಹಂತದಲ್ಲಿ ಲಕ್ಷಗಟ್ಟಲೆ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವೈಶಿಷ್ಟ್ಯಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು:
LBP ಹಂತ 1 - ಲೈಫ್ ಬ್ಲಿಸ್ ಪ್ರೋಗ್ರಾಂ ನಿಮ್ಮನ್ನು ನೀವೇ ಸಚೇತನಗೊಳಿಸಿಕೊಳ್ಳಿ
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಿಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಅದು ನಿಮ್ಮ ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ಧಿಕ ತಿಳವಳಿಕೆಯನ್ನು ನೀಡುವುದು. ಅದು ಬೌದ್ಧಿಕ ಹಂತದಲ್ಲಿ ಆಧ್ಯಾತ್ಮಿಕತೆಯ ಪರಿಣಾಮವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮದೇ ಆತ್ಮಾನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನಗಳಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದ ಕಾರ್ಯಾಗಾರವಾಗಿದೆ. ಆತ್ಮಾನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನಗಳಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದ ಕಾರ್ಯಾಗಾರವಾಗಿದೆ.
LBP ಹಂತ 2 - ನಿತ್ಯಾನಂದ ಸ್ಫುರಣ ಪ್ರೋಗ್ರಾಂ ಸಾವಿನ ರಹಸ್ಯ ದ ಭೇದನೆ
ಸಾವಿನ ಕಲ್ಪನೆಯ ಗಹನತೆಯನ್ನು ನಿವಾರಿಸಿ ಜೀವನದ ಕಲೆಯನ್ನು ಬಿಡುಗಡೆ ಗೊಳಿಸುವ ಒಂದು ಕಾರ್ಯಕ್ರಮ. ಸಾವಿನ ಉದ್ದೇಶ ಹಾಗೂ ಕ್ರಮವು ನಿಮಗೆ ತಿಳಿದಿದ್ದರೆ, ನಿಮ್ಮ ಜೀವನವನ್ನು ಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಜೀವಿಸುವಿರಿ ! ಅದು ಆಳವಾಗಿ ಬೇರೂರಿದ ಮತ್ತು ಪ್ರಜ್ಞಾರಹಿತ ಮನೋಭಾವನೆಗಳಿಂದ ಬೇರ್ಪಡಿಸಲು ಜಾಗವನ್ನು ಸೃಷ್ಟಿಸುತ್ತದೆ. ಇವೆಲ್ಲವೂ ಅಂತಿಮವಾದ ಸಾವಿನ ಭಯದಿಂದ ಹುಟ್ಟಿರುವಂತಹವು. ಸ್ವಾಭಾವಿಕ ಬುದ್ಧಿ ಮತ್ತು ಸ್ವಯಂ ಸ್ಪೂರ್ತಿದಾಯಕವಾದ ಉತ್ಸಾಹದಿಂದ ನಡೆಸಲ್ಪಡುವ ಒಂದು ನವ ಜೀವನಕ್ಕೆ ಇದು ಹೆಬ್ಬಾಗಿಲು.
LBP ಹಂತ 3 - ಆತ್ಮ ಸ್ಫುರಣ ಪ್ರೋಗ್ರಾಂ / ಧ್ಯಾನ ಸ್ಫುರಣ ಪ್ರೋಗ್ರಾಂ ನೀವು ನಿಮ್ಮೊಂದಿಗೆ ಸಂಪರ್ಕವನ್ನು ಹೊಂದಿ ರಿ
ಇದೊಂದು ರಹಸ್ಯಗಳನ್ನು ಭೇದಿಸಬಲ್ಲಂತಹ ಕಾರ್ಯಕ್ರಮವಾಗಿದ್ದು ಮನಸ್ಸಿನ ಕಾರ್ಯಗಳನ್ನು ಬುದ್ಧಿವಂತಿಕೆ ಮತ್ತು ಅಂತಿಮವಾಗಿ ಪರಮಾನಂದಕ್ಕೆ ನಿಮ್ಮನ್ನು ಮೇಲೆತ್ತಲು ಒಂದು ಖಚಿತವಾದ ಪರಿಹಾರ.
ಲೈಫ್ ಬ್ಲಿಸ್ ಟೆಕ್ನಾಲಜಿ (LBT)
LBT ಯು 18 ರಿಂದ 30 ವರ್ಷದೊಳಗಿನ ಯುವಜನಾಂಗಕ್ಕಾಗಿ ಇರುವ ಒಂದು ವರ್ಷದ ಅವಧಿಯ ನಿವಾಸಿತ ಕಾರ್ಯಕ್ರಮ. ಪೌರಾತ್ಯ ವ್ಯವಸ್ಥೆಯಾದ ವೇದೀಯ ಶಿಕ್ಷಣದಲ್ಲಿ ಅದರ ಬೇರುಗಳು ಇದ್ದು ಈ ಕಾರ್ಯಕ್ರಮವು ಆಧುನಿಕ ಯುವಜನಾಂಗಕ್ಕೆ ಒಳ್ಳೆಯ ದೈಹಿಕ, ಮಾನಸಿಕ ಮತ್ತು ಮನೋಭಾವನೆಗಳ ಆರೋಗ್ಯದಿಂದ ಶಕ್ತೀಕರಿಸಲು ವಿನ್ಯಾಸಗೊಳಿಸಲಾಗಿದೆ.
ಅವರ ಸೃಜನಾತ್ಮಕ ಬುದ್ಧಿವಂತಿಕೆ ಮತ್ತು ಸ್ವಯಂ ಸ್ಫೂರ್ತಿಯನ್ನು ಪೋಷಿಸುವುದರ ಮೂಲಕ, ಮತ್ತು ವೃತ್ತಿಯ ಕೌಶಲ್ಯವನ್ನು ನೀಡುವ ಮೂಲಕ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸ್ವಯಂ ಪೂರ್ಣರಾದ ಯುವಕರನ್ನು ಸೃಷ್ಟಿಸುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ ಇದು ಜ್ಞಾನೋದಯ ಹೊಂದಿದ ಗುರುಗಳೊಬ್ಬರ ಪಾಲನೆಯಲ್ಲಿ ಇದ್ದು ಕಲಿಯಬಹುದಾದಂತಹ ಜೀವಿತಕಾಲದ ಒಂದು ಸದವಕಾಶವನ್ನು ನೀಡುತ್ತದೆ.
ನಮ್ಮನ್ನು ಸಂಪರ್ಕಿಸಲು:
USA
ನಿತ್ಯಾನಂದ ಧ್ಯಾನ ಪೀಠಂ
ಮಾಂಟ್ಕ್ಲೇರ್
CA 91763
USA
ಫೋನ್ : 626 531 6065
E-mail : [email protected].
URL : www.lifebliss.org
ಭಾರತ : ನಿತ್ಯಾನಂದ ಧ್ಯಾನ ಪೀಠಂ ನಿತ್ಯಾನಂದ ಪುರಿ, ಕಲ್ಲುಗೋಪ ಹಳ್ಳಿ ಮೈಸೂರು ರಸ್ತೆ, ಬಿದದಿ, ಬೆಂಗಳೂರು – 562 109. ಕರ್ನಾಟಕ. ಭಾರತ ಆಶ್ರಮ : 91-80-65591844, 27202084 Fax: 91 +80 27288207 Email: [email protected] URL: www.dhyanapeetam.org
ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ, www.dhyanapeetam.org ಗೆ ಭೇಟಿ ಕೊಡಿ.