ಲಘು ಶಬ್ದಕೋಶ
This text was machine-transcribed from the printed book and may contain errors. Select the words and choose “Report a mistake”.
| ಅಬ್ದುಲ್ಲಾ | ಹೀರೆಟ್ನ ಅಬ್ದುಲ್ಲಾ ಅನ್ಸಾರಿ, ಒಬ್ಬ ಸೂಫೀ ಗುರುಗಳು |
| ಆದಿಶಂಕರ | 8ನೆಯ ಶತಮಾನದಲ್ಲಿ ಕೇವಲ 32 ವರ್ಷಗಳು ಜೀವಿಸಿದ್ದ ಸಾಕ್ಷಾತ್ಕಾರ ಪಡೆದ ಗುರು. ಅದ್ವೈತ ವೇದಾಂತ ಅಥವ ಎರಡಿಲ್ಲವೆಂಬ ತತ್ವದ ಅತ್ಯಂತ ದೊಡ್ಡ ಪ್ರತಿಪಾದಕರು. ಆ ಕಾಲದಲ್ಲಿ ನಶಿಸಿಹೋಗುತ್ತಿದ್ದ ವೈದಿಕ ಸಂಪ್ರದಾಯ ಮತ್ತು ಹಿಂದೂ ಧರ್ಮವನ್ನು ಅವರ ಆಂದೋಲನವು ಸುಧಾರಿಸಿತು. ಶಂಕರರು ಸ್ಥಾಪಿಸಿದ ಹಿಂದೂ ಸನ್ಯಾಸಿಗಳ ಸಂಘವು ಇಂದಿಗೂ ಎಡೆಬಿಡದೆ ಮುಂದುವರೆಯುತ್ತಿದೆ. |
| ಆಗಾಮ್ಯ | ಭೂಗ್ರಹದ ಮೇಲೆ ಜನ್ಮ ತಾಳಿದ ಮೇಲೆ ಇಚ್ಛಾ ಸ್ವಾತಂತ್ರ್ಯದಿಂದ ಸತತವಾಗಿ ಮಾಡುವ ಕರ್ಮಗಳು. ಇವು ಸಹಜವಾದ ಬಯಕೆಗಳಿಂದ ಹುಟ್ಟಿದ್ದಲ್ಲ. ಆದರೆ ಸಮಾಜದಿಂದಲೂ, ಇತರರನ್ನು ನೋಡಿಯೂ ಎರವಲು ಪಡೆದ ಬಯಕೆಗಳು. |
| ಅಹಂ ಬ್ರಹ್ಮಾಸ್ಮಿ | ಅಕ್ಷರಶಃ ‘ನಾನೇ ಬ್ರಹ್ಮ ಆಗಿದ್ದೇನೆ’ ಎಂದರ್ಥ. |
| ಅಜಪ ಜಪ | ಪವಿತ್ರವಾದ ಜಪವನ್ನು ಅನೈಚ್ಛಿಕವಾಗಿ ಜಪಿಸುವುದು |
| ಆಜ್ಞಾ ಚಕ್ರ | ಹುಬ್ಬುಗಳ ಮಧ್ಯದಲ್ಲಿರುವ ಆರನೆಯ ಶಕ್ತಿಕೇಂದ್ರ. ಸಂಸ್ಕೃತದಲ್ಲಿ ‘ಆಜ್ಞೆ’ ಅಥವಾ ‘ಸಂಕಲ್ಪ’ ಎಂದರ್ಥ. ಈ ಚಕ್ರವು ಅಹಂಕಾರದಿಂದ ಮುಚ್ಚಿರುತ್ತದೆ |
| ಆಲ್ಬರ್ಟ್ ಐನ್ಸ್ಟೀನ್ | ವಿಜ್ಞಾನಿ ಹಾಗೂ ನೊಬೆಲ್ ಪಾರಿತೋಷಕ ವಿಜೇತ |
| ಅನಾಹತ ಚಕ್ರ | ಪ್ರೇಮಕ್ಕೆ ಅನ್ವಯಿಸುವ ಹೃದಯ ಪ್ರದೇಶದ ಸೂಕ್ಷ್ಮ ಶಕ್ತಿಕೇಂದ್ರ |
| ಅನಾಹತ ಧ್ವನಿ | ಓಂ ಎಂಬ ಸೃಷ್ಟಿಯ ಅನಾದಿಕಾಲದಿಂದಿರುವ ಶಬ್ದ |
| ಅನಲ್-ಹಕ್ ಮನ್ಸೂರ್ | ಸೂಫೀ ಗುರುಗಳು. ಮನ್ಸೂರ್ರವರು ನಾನೇ ಸತ್ಯವೆಂದು ನಿರಂತರವಾಗಿ ಹೇಳುತ್ತಿದ್ದದರಿಂದ ಆ ಘೋರ ಪಾಪಕ್ಕಾಗಿ ಅವರನ್ನು ನೇಣುಹಾಕಲಾಗಿತ್ತು. |
| ಆನಂದ ಅಷ್ಟಾಂಗ | ಆನಂದದ ಎಂಟು ಅಂಗಗಳ ಪಥ. ಇವುಗಳ ಎಂಟು ಸಾಧನಾಮಾರ್ಗಗಳಲ್ಲಿ ಪ್ರತಿಯೊಂದೂ ಅರಿವಿಗೊಯ್ಯುತ್ತದೆ |
| ಆನಂದದರ್ಶನ | ಆನಂದ ದರ್ಶನ ಅಥವ ಶಕ್ತಿದರ್ಶನವು ಗುರುಗಳು ತಮ್ಮ ಶಕ್ತಿಯನ್ನು ಗ್ರಹಿಸುವವನಿಗೆ ನೀಡುವ ಕೃಪೆ |
ಆನಂದ ಗಂಧ ಚಕ್ರ ಮಣಿಪೂರಕ ಚಕ್ರಕ್ಕೂ ಅನಾಹತ ಚಕ್ರಕ್ಕೂ ನಡುವೆ ಇರುವ ಆನಂದ ಗಂಧವು ಎಲ್ಲ ಚಕ್ರಗಳೂ ಒಂದಾಗಿ ಕುಸಿಯುವ ಸ್ಥಳ. ನಿತ್ಯಾನಂದರ ಉಪಶಮನದ ದೀಕ್ಷೆಯು ಶಿಷ್ಯನಲ್ಲಿ ಆನಂದ ಗಂಧವನ್ನು ಚೈತನ್ಯಗೊಳಿಸಿ, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ಗೆ ಶಿಷ್ಯನನ್ನು ದೀಕ್ಷಾಬದ್ಧನನ್ನಾಗಿ ಮಾಡುತ್ತದೆ
ಆನಂದಮಯ ಕೋಶ ಕೋಶಗಳಲ್ಲಿ ಐದನೆಯ ಮತ್ತು ಕೊನೆಯದು. ಪಂಚಕೋಶಗಳ ದ್ವಾರಾ ಕೈಗೊಳ್ಳುವ ಧ್ಯಾನದ ಪಯಣವೇ ನಿತ್ಯಾನಂದರ ಭೋದನೆಯ ಸಾರ
ಅಣಿಮಾ ಎಂಟು ಯೋಗಗಳ ಪೈಕಿ ಒಂದು. ಇದು ದೇಹವನ್ನು ಅಣುರೂಪಕ್ಕೆ ಇಳಿಸುವ ಶಕ್ತಿಯ ಬಗ್ಗೆ ತಿಳಿಸುತ್ತದೆ
ಅನ್ನಮಾಚಾರ್ಯ ದಕ್ಷಿಣ ಭಾರತದ ಸಂತಕವಿ
ಅಣ್ಣಾಮಲೈಸ್ವಾಮಿಗಳು ತಿರುವಣ್ಣಾಮಲೈ ಗುಡಿಯಲ್ಲಿದ್ದ ರಮಣ ಮಹರ್ಷಿಗಳ ಶಿಷ್ಯರು. ಇವರ ಭೋದನೆಗಳಿಂದಾಗಿ ನಿತ್ಯಾನಂದರು ತಮ್ಮ 12ನೇ ವಯಸ್ಸಿನಲ್ಲಿ ಆಧ್ಯಾತ್ಮ ಅನುಭವವನ್ನು ಪಡೆದರು.
ಅನ್ನಮಯ ಕೋಶ ಆಹಾರ ಅಥವಾ ಭೌತಿಕ ಕೋಶ. ಪಂಚಕೋಶಗಳಲ್ಲಿ ಮೊದಲನೆಯದು.
ಅನಿಬೆಸೆಂಟ್ ಥಿಯೋಸಫಿಯ ಪ್ರತಿಪಾದಕರು, ಭಾರತದ ಸ್ವಾತಂತ್ರ್ಯದ ಯೋಧರೂ, ಬರಹಗಾರರೂ ಮತ್ತು ವಾಗ್ಮಿ
ಅಪ್ಪರ್ ಸಂತರು ಹಾಗೂ ತಮಿಳು ಕವಿಗಳು. ಶಿವನನ್ನು ಹೊಗಳಿ ಬರೆದ ಭಕ್ತಿಗೀತೆಗಳಿರುವ ತೇವಾರಂ ಗ್ರಂಥದ ರಚನಾಕಾರರು ಹಾಗೂ ನಾಯನ್ಮಾರ್ ಎಂಬ 63 ಸಂತರಲ್ಲಿ ಪ್ರಮುಖರು.
ಅರಿಹಂತ ಜೈನಧರ್ಮದ ಧಾರ್ಮಿಕ ಗುರುಗಳಾದ ತೀರ್ಥಂಕಕರು
ಅರುಣಾಚಲ ಕೆಂಪನೆಯ ಚಲಿಸದ ಬೆಟ್ಟ ಎಂದರ್ಥ. ದಕ್ಷಿಣ ಭಾರತದ ತಮಿಳುನಾಡಿನ ತಿರುವಣ್ಣಾಮಲೆಯಲ್ಲಿ ಇರುವ ಈ ಧಾರ್ಮಿಕ ಬೆಟ್ಟವನ್ನು ಶಿವನ ರೂಪವೆಂದು ನಂಬುತ್ತಾರೆ.
ಅರುಣಗಿರಿ ಯೋಗೀಶ್ವರ ಇವರನ್ನು ಶಿವನ ಅವತಾರವೆನ್ನಲಾಗಿದೆ. ಇವರ ಸಮಾಧಿಯ ಮೇಲೆ ತಿರುವಣ್ಣಾಮಲೆಯಲ್ಲಿರುವ ಅರುಣಾಚಲೇಶ್ವರ ದೇವಾಲಯವು ನಿರ್ಮಾಣವಾಗಿದೆ.
ಅಷ್ಟಾಂಗ ನಮಸ್ಕಾರ ಗುರುಗಳು ಅಥವಾ ದೇವರ ಮುಂದೆ ದೇಹದ ಎಂಟು ಅಂಗಗಳನ್ನು ನೆಲಕ್ಕೆ ತಾಗಿಸಿ ಮಾಡುವ ನಮಸ್ಕಾರ
ಅಷ್ಟಾಂಗ ಯೋಗ ಪತಂಜಲಿ ಯೋಗದಲ್ಲಿ ಎಂಟು ಬಗೆಗಳು. ಯಮ(ಶಿಷ್ಠ), ನಿಯಮ(ಕಾನೂನುಗಳು), ಆಸನ(ಶರೀರ ಭಂಗಿಗಳು), ಪ್ರಾಣಾಯಾಮ (ಉಸಿರಾಟದ ಹಿಡಿತ), ಪ್ರತ್ಯಾಹಾರ(ಭಾವನೆಯನ್ನು ಮುದುಡಿಕೊಳ್ಳುವುದು), ಧಾರಣಾ (ಕೇಂದ್ರೀಕರಣ), ಧ್ಯಾನ(ಧ್ಯಾನ), ಸಮಾಧಿ(ಆನಂದ)
ಅಷ್ಟಾವಕ್ರ : ಎಂಟು ಸೊಟ್ಟು ಅವಯವ (ಅಂಗ)ಗಳಿಂದ ಜನಿಸಿದ ಬ್ರಹ್ಮಜ್ಞಾನಿಯಾದ ವೈದಿಕ ಸನ್ಯಾಸಿ. ಅಷ್ಟಾವಕ್ರ ಗೀತದ ಗ್ರಂಥಕರ್ತ.
ಬರ್ದೋಸ್ : ಎರಡು ವಿಷಯಗಳ ಮಧ್ಯದ ವಿರಾಮ ಎಂಬುದು ಶಬ್ದಾರ್ಥ. ಇದು ‘ಟಿಬೆಟನ್ ಬುಕ್ ಆಫ್ ದಿ ಡೆಡ್’ನಲ್ಲಿ ಆತ್ಮದ ಪಯಣದ ಬೇರೆಬೇರೆ ಹಂತಗಳನ್ನು ಸೂಚಿಸುತ್ತದೆ
ಬಯಾಝಿದ್ : ಒಂಭತ್ತನೆಯ ಶತಮಾನದ ಪರ್ಷಿಯಾದ ಸೂಫೀ ಸನ್ಯಾಸಿ
ಭಗವಾನ್ ಮಹಾವೀರ : 24ನೆಯ ಮತ್ತು ಕೊನೆಯ ತೀರ್ಥಂಕರ. ಜೈನ ಧರ್ಮದ ಸ್ಥಾಪಕ
ಭಜಗೋವಿಂದಂ : ಆದಿಶಂಕರರು ರಚಿಸಿದ 32 ಭಕ್ತಿಗೀತೆಗಳು. ಇದನ್ನು ಅದ್ವೈತ ವೇದಾಂತದ ಸಾರವೆಂದು ಪರಿಗಣಿಸಲಾಗಿದೆ
ಭುಜಂಗಾಸನ : ಯೋಗದಲ್ಲಿ ಬೋರಲುಮಲಗಿ ತಲೆಯನ್ನು ಮೇಲೆತ್ತುವ ಆಸನ
ಬಿದದಿ ಆಶ್ರಮ : ಬೆಂಗಳೂರಿಗೆ 30 ಕಿ.ಮೀ. ದೂರದಲ್ಲಿರುವ ಬಿದದಿ ಎಂಬ ಊರಿನಲ್ಲಿರುವ ಪರಮಹಂಸ ನಿತ್ಯಾನಂದರ ಆಶ್ರಮ
ಬೋಧಿ ಧರ್ಮ : ಬುದ್ಧನ ಶಿಷ್ಯ. ಝೆನ್ ಬೌದ್ಧ ಧರ್ಮವೆಂದು ಪ್ರಸಿದ್ಧವಾಗಿರುವ ಧರ್ಮವನ್ನು ಹರಡಿದವನು
ಬ್ರಹ್ಮಾಂಡಪುರಾಣ : 12,000 ಶ್ಲೋಕಗಳಿರುವ 18ನೆಯ ಪುರಾಣ. ಇದು ಬ್ರಹ್ಮನು ಜಗತ್ತನ್ನು ಸೃಷ್ಟಿಸುವ ಬಗ್ಗೆ ತಿಳಿಸುತ್ತದೆ
ಕಾರ್ಲ್ಯುಂಗ್ : 20ನೇ ಶತಮಾನದ ಅತ್ಯಂತ ಪ್ರಸಿದ್ಧ ಮನೋಶಾಸ್ತ್ರಜ್ಞನಾದ ಸ್ವಿಸ್ ಪಂಡಿತ. ಸಿಗ್ಮಂಡ್ ಫ್ರಾಯ್ಡ್ನ ಸಮಕಾಲೀನ. ‘ಕಲೆಕ್ಟಿವ್ ಅನ್ಕಾನ್ಷಿಯಸ್’ ಎಂಬ ಸುಪ್ರಸಿದ್ಧ ಗ್ರಂಥವನ್ನು ರಚಿಸಿದನು.
ಚೈತನ್ಯ ಪ್ರಹಾಪಭು : 15ನೇ ಶತಮಾನದ ಬಂಗಾಲೀ ಸಂತ. ಈತನ ಅನುಯಾಯಿಗಳನ್ನು ಗೌಡೀಯ ವೈಷ್ಣವರೆನ್ನುತ್ತಾರೆ.
ಚಕ್ರಗಳು : ದೇಹದಲ್ಲಿರುವ ಸೂಕ್ಷ್ಮಶಕ್ತಿಕೇಂದ್ರಗಳು. ಶಬ್ದಾರ್ಥ ಗಾಲಿ. ಅನುಭಾವಿಗಳು ಇದನ್ನು ಶಕ್ತಿಯ ಗಾಲಿಗಳಂತೆ ಕಂಡರು. ಬೆನ್ನೆಲುಬಿನುದ್ದಕ್ಕೂ ಏಳು ಪ್ರಮುಖ ಚಕ್ರಗಳಿವೆ. ಅವೆಂದರೆ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಮತ್ತು ಸಹಸ್ರಾರ.
ಛಾಂದೋಗ್ಯ ಉಪನಿಷತ್ತು : ಅತ್ಯಂತ ಪುರಾತನ ಉಪನಿಷತ್ತುಗಳಲ್ಲಿ ಒಂದು.
ಚಾರ್ಲ್ಸ್ ಲೆಡ್ಬೀಟರ್ : ಥಿಯಾಸಫಿ ಪಂಡಿತ
ಚಿದಂಬರಂ ದಕ್ಷಿಣ ಭಾರತದ ಒಂದು ಪವಿತ್ರ ಯಾತ್ರಾಸ್ಥಳ. ಇದು ನಟರಾಜ ಭಂಗಿಯಲ್ಲಿರುವ ಶಿವನ ದೇವಾಲಯವನ್ನು ಹೊಂದಿದೆ. ಇಲ್ಲಿ ಶಿವನನ್ನು ಆಕಾಶತತ್ತ್ವವಾಗಿ ಬಿಂಬಿಸಲಾಗಿದೆ.
ಚಿನ್ಮುದ್ರೆ ಅಂಗೈ ಮೇಲ್ಮುಖವಾಗಿದ್ದು, ಹೆಬ್ಬೆರಳನ್ನೂ, ತೋರು ಬೆರಳನ್ನೂ ಸೇರಿಸಿ, ಚಕ್ರಾಕೃತಿಯನ್ನು ನಿರ್ಮಿಸಿ ಉಳಿದ ಮೂರು ಬೆರಳುಗಳನ್ನು ಚಾಚಿರುವ ಮುದ್ರೆ.
ಚಿತ್ತಾಕಾಶ ಮೂರು ಆಕಾಶಗಳಲ್ಲಿ ನಡುವಿನದು. ಮೊದಲನೆಯದು ಘಟಾಕಾಶ ಅಥವಾ ದೈಹಿಕ ಆಕಾಶ. ಮೂರನೆಯದು ಮಹಾಕಾಶವಾಗಿದ್ದು, ಪ್ರಜ್ಞೆಯ ಆಕಾಶವನ್ನು ಸೂಚಿಸುತ್ತದೆ.
ಕ್ಲೀವ್ ಬಾಕ್ಸ್ಟರ್ ಪಾಲಿಗ್ರಾಫ್ ಪಂಡಿತರು. ಸುಳ್ಳನ್ನು ಪತ್ತೆಹಚ್ಚುವ ಯಂತ್ರದ ಮೂಲಕ ಗಿಡಗಳಿಗೆ ಪ್ರೀತಿಯನ್ನು ತೋರಿದಾಗ ಅಥವಾ ಹೆದರಿಕೆಯನ್ನು ತೋರಿದಾಗ ಅವು ತೋರುವ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡಿದವರು.
ದಾಸಭಾವ ಗುರುಶಿಷ್ಯರ ನಡುವಿನ ಐದು ಭಾವಗಳಲ್ಲಿ ಒಂದು. ಶಿಷ್ಯನು ಗುರುವಿಗೆ ದಾಸನಾಗಿ ಹನುಮಂತನಂತೆ ಶರಣಾಗತಿಯನ್ನು ತೋರುವ ಭಾವ.
ದಾಸೋಽಹಂ ನಾನು ನಿನ್ನ ದಾಸನೆಂದು ಶರಣಾಗತಿಯನ್ನು ತೋರುವುದು
ದೀಪಕ್ ಚೋಪ್ರಾ ಅಮೆರಿಕಾದಲ್ಲಿ ಆಧ್ಯಾತ್ಮವನ್ನು ಬೋಧಿಸುತ್ತಿರುವ ವೈದ್ಯರು. ಅವರ ಗ್ರಂಥಗಳು ಬಹಳ ಜನಪ್ರಿಯವಾಗಿವೆ.
ಧಮ್ಮ ಬುದ್ಧನ ಮೂರು ಬೋಧನೆಗಳಲ್ಲಿ ಒಂದು. ಉಳಿದೆರಡು ಬುದ್ಧ ಮತ್ತು ಸಂಘ.
ಧಮ್ಮ ಪದ ಬೌದ್ಧ ಧಾರ್ಮಿಕ ಗ್ರಂಥ
ಧಾರಣ ಪತಂಜಲಿಯವರ ಅಷ್ಟಾಂಗ ಯೋಗದಲ್ಲಿ ಆರನೆಯದು. ಕೇಂದ್ರೀಕರಿಸುವುದು ಎಂದರ್ಥ.
‘ಧರ್ಮೋರಕ್ಷತಿ ರಕ್ಷಿತಃ’ ಧರ್ಮವನ್ನು ರಕ್ಷಿಸಿದವನನ್ನು ಧರ್ಮವು ರಕ್ಷಿಸುತ್ತದೆ ಎಂದರ್ಥ. ಇದು ಒಂದು ವೇದವಾಕ್ಯ.
ಧೌತಿ ಕರಳನ್ನು ಶುದ್ಧೀಕರಿಸುವ ಯೋಗದ ಒಂದು ಅಭ್ಯಾಸ
ಡಿ.ಎನ್.ಎ. ಡಿಯೋಕ್ಸಿರಿಬೋನ್ಯೂಕ್ಲೈರಿಕ್ ಆಸಿಡ್. ಎಲ್ಲಾ ಪ್ರಾಣಿವರ್ಗಗಳ ನಿರ್ಮಾಣದ ವಸ್ತು. ಇದು ವಂಶಪಾರಂಪರ್ಯದ ಸಂವಹನ
ಡಾ|| ಚಾರ್ಲ್ಸ್ ಟೌನ್ಸ್ ಮೇಸರ್ ಮತ್ತು ಲೇಸರ್ಗಳ ಅಧ್ಯಯನಕ್ಕಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ವಿಜೇತರು.
ಡಾ॥ ಬ್ರೂಸ್ ಲಿಪ್ಟನ್ ದ 'ಬಯಾಲಜಿ ಆಫ್ ಬಿಲೀಫ್ಸ್' ಎಂಬ ಹೆಸರುವಾಸಿಯಾದ ಪುಸ್ತಕದ ಗ್ರಂಥಕರ್ತರು.
ಡಾ॥ ಮಸಾರು ಎಮೊಟೊ 'ದಿ ಹಿಡನ್ ಮೆಸೇಜಸ್ ಇನ್ ವಾಟರ್' ಎಂಬ ಪುಸ್ತಕದ ಗ್ರಂಥಕರ್ತರು ಮತ್ತು ಜಪಾನಿ ವಿಜ್ಞಾನಿ.
ದುಃಖ ಹರಣ 'ದುಃಖವನ್ನು ಹೋಗಲಾಡಿಸುವ' ಧ್ಯಾನ. ನಿತ್ಯಾನಂದರ ಲೈಫ್ ಬ್ಲಿಸ್ ಕಾರ್ಯಕ್ರಮದಲ್ಲಿ ಮೂಲಾಧಾರ ಚಕ್ರವನ್ನು ನಿರ್ದೇಶಿಸುವ ಒಂದು ಧ್ಯಾನ.
ಎಲೆಕ್ಟ್ರೋ ಎನ್ಸೆಫೆಲೋ ಗ್ರಾಫ್ ಮೆದುಳಿನ ತರಂಗಗಳನ್ನು ಅಳೆಯಲು ತಲೆಬುರುಡೆಗೆ ಲಗತ್ತಿಸುವ ಯಂತ್ರ
ಫ್ರಾಯ್ಡಿಯಿಯನ್ ಆಸ್ಟ್ರಿಯಾದ ಮನೋವಿಜ್ಞಾನಿಯಾದ ಫ್ರಾಯ್ಡನ ಬೋಧನೆಗಳಿಗೆ ಸಂಬಂಧಿಸಿದ ಆಧುನಿಕ ಮನೋರೋಗ ಚಿಕಿತ್ಸಾ ಪದ್ಧತಿಯ ಪಿತಾಮಹ.
ಜಾರ್ಜ್ ಗುರ್ಡೀಫ್ ಗ್ರೀಕ್-ಅರ್ಮೇನಿಯಾದ ಸಂತ. ಈತನು ಪ್ರತಿಪಾದಿಸಿದ 'ಫೋರ್ತ್ ವೇ' ತತ್ವವು ವೈದಿಕ ಸಂಪ್ರದಾಯದ ತುರೀಯಾವಸ್ಥೆಗೆ ಸಮನಾದುದು
ಗೋಮುಖಿ ಗಂಗೆಯ ಉಗಮ ಸ್ಥಾನ
ಗುರು ಗ್ರಂಥ ಸಾಹಿಬ್ ಸಿಖ್ಖರ ಧರ್ಮ ಗ್ರಂಥ
ಗುರು ನಾನಕ್ ಸಿಖ್ ಪಂಥದ ಪ್ರತಿಪಾದಕ
ಹಂಸಮಂತ್ರ ಇದಕ್ಕೆ ಸೋಹಂ ಮಂತ್ರವೆಂದೂ ಹೆಸರು. ಇದರಲ್ಲಿ ಉಚ್ಛ್ವಾಸದಲ್ಲಿ 'ಹಂ'ನ್ನೂ ನಿಶ್ವಾಸದಲ್ಲಿ 'ಸೋ'ಅನ್ನೂ ಉಚ್ಛರಿಸುವುದು.
ಹರ ಜಪಾನೀಯರ ಸಂಪ್ರದಾಯದಲ್ಲಿ ಆತ್ಮದನೆಲೆ. ಭಯದ ಕೇಂದ್ರವಾದ ಸೂಕ್ಷ್ಮ ಚೈತನ್ಯ ಚಕ್ರ. ಸ್ವಾಧಿಷ್ಠಾನ ಚಕ್ರಕ್ಕೆ ಸಂಬಂಧಿಸಿದುದು.
ಹ್ರೀಂ ಸ್ತ್ರೀ ಶಕ್ತಿಗೆ ಸಂಬಂಧಿಸಿದ ಬೀಜಾಕ್ಷರ ಮಂತ್ರ
ಇಚ್ಛಾ ಶಕ್ತಿ ಆಸೆಯ ಶಕ್ತಿ. ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳೆಂಬುವು ಇನ್ನೆರಡು ಶಕ್ತಿಗಳು
ಇಡಾನಾಡಿ ದೇಹದಲ್ಲಿರುವ ಮೂರು ಶಕ್ತಿ ಮಾರ್ಗಗಳಲ್ಲಿ ಒಂದು ಇಡಾ. ಇದು ಮೂಲಾಧಾರದಿಂದ ಮೇಲೇಳುತ್ತದೆ ಹಾಗೂ ಎಡ ಮೂಗಿನ ಹೊಳ್ಳೆಯಲ್ಲಿ ಕೊನೆಯಾಗುತ್ತದೆ.
ಇಸಾಕ್ ನ್ಯೂಟನ್ ಭೌತಶಾಸ್ತ್ರಜ್ಞ ಹಾಗೂ ಗಣಿತ ಶಾಸ್ತ್ರಜ್ಞ, ಶಾಸ್ತ್ರೀಯ ಭೌತಶಾಸ್ತ್ರದ ಪ್ರವರ್ತಕ.
ಜೆ. ಕೃಷ್ಣಮೂರ್ತಿ ಭಾರತದ ತತ್ವ ಜ್ಞಾನಿ
ಜಲಾಲುದ್ದೀನ್ ರೂಮಿ 13ನೇ ಶತಮಾನದ ಪರ್ಷಿಯಾ ದೇಶದ ಸೂಫೀ ಕವಿ ಜಠರಾಗ್ನಿ ಜೀವವನ್ನು ಕಾಪಾಡುವ ಒಳಗಿನ ಅಗ್ನಿ
ಜೀವನ್ಮುಕ್ತ ಜೀವಿತಕಾಲದಲ್ಲಿಯೇ ಜನನ ಮರಣ ಚಕ್ರದಿಂದ ಮುಕ್ತನಾದ ವ್ಯಕ್ತಿ
ಜೀವನ್ಮುಕ್ತಿ ಜೀವನ್ಮುಕ್ತನ ಸ್ಥಿತಿ
ಜಾನ್ ಸಿ. ಮ್ಯಾಕ್ಸ್ ವೆಲ್ ನೇತೃತ್ವದ ಕುಶಲರು ಮತ್ತು ಬರಹಗಾರರು
ಜಾನ್ ಗಾರ್ಡನರ್ ನೇತೃತ್ವದ ಬಗ್ಗೆ ಅನೇಕ ಪುಸ್ತಕಗಳ ಗ್ರಂಥಕರ್ತರು
ಜೂಲಿಯೆಟ್ ಆಂಗ್ಲಕವಿ ಶೇಕ್ಸ್ಪಿಯರನ 'ರೋಮಿಯೋ ಅಂಡ್ ಜೂಲಿಯೆಟ್' ನಾಟಕದ ಪ್ರಧಾನ ಸ್ತ್ರೀ ಪಾತ್ರ
ಜನಯಿದ್ 9ನೇ ಶತಮಾನದ ಸೂಫೀ ಗುರುಗಳು
ಕಾರಣ ಶರೀರ ನಮ್ಮಲ್ಲಿರುವ ಗಾಢನಿದ್ರೆಗೆ ಅನುಗುಣವಾದ ಐದನೆಯ ಕಾರಣ ಪದರ. ನಿಯಂತ್ರಿತ ನೆನಪುಗಳ ಅಥವಾ ಸಂಸ್ಕಾರದ ಕೇಂದ್ರ.
ಕಬೀರ್ ಭಾರತದ ದೈವ ಭಕ್ತ ಕವಿಯಾದ ಯೋಗಿ
ಕಲ್ಪತರು ವರ ನೀಡುವ ವೃಕ್ಷ
ಕಲ್ಪತರು ದರ್ಶನ ಪರಮಹಂಸ ನಿತ್ಯಾನಂದರ ಒಂದು ಧ್ಯಾನ ಹಾಗೂ ದರ್ಶನದ ಕಾರ್ಯಕ್ರಮ
ಈಶಾವಾಸ್ಯ ಉಪನಿಷತ್ ವೈದಿಕ ಗ್ರಂಥಗಳ ಪೈಕಿ ಅತ್ಯಂತ ಪ್ರಮುಖವಾದ ಹಾಗೂ ಪುರಾತನವಾದ ಉಪನಿಷತ್ತು
ಕಪಿಲವಸ್ತು ಭಗವಾನ್ ಬುದ್ಧನ ಜನ್ಮಸ್ಥಾನ
ಕರೂರರ್ ಇವರ ಮೃತದೇಹದ ಮೇಲೆ ತಂಜಾವೂರಿನ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬು ನಂಬಲಾಗಿದೆ
ಕಠೋಪನಿಷತ್ ಪ್ರಮುಖವಾದ ಉಪನಿಷತ್ತುಗಳಲ್ಲಿ ಒಂದು. ಯಮನಿಗೂ, ನಚಿಕೇತನಿಗೂ ನಡೆದ ಸಂವಾದವನ್ನು ಪ್ರತಿಪಾದಿಸುವ ಗ್ರಂಥ.
ಕಾಯಕಲ್ಪ ದೇಹದ ಪುನರುಜ್ಜೀವನ ಹಾಗೂ ಆಯುರ್ವೇದದಲ್ಲಿ ವೃದ್ಧಾಪ್ಯವನ್ನು ತಡೆಗಟ್ಟುವ ತಂತ್ರ
ಖಲೀಲ್ ಗಿಬ್ರಾನ್ 20ನೆ ಶತಮಾನದ ಲೆಬನೀಸ್ ಅಮೆರಿಕನ್ ಕವಿ. 'ದಿ ಪ್ರಾಫೆಟ್' ಎಂಬ ಗ್ರಂಥಕ್ಕಾಗಿ ಹೆಸರುವಾಸಿಯಾದವರು.
ಕಿರ್ಲಿಯಾನ್ ಫೋಟೋಗ್ರಫಿ ಬದುಕಿರುವ ಪ್ರಾಣಿಗಳ ಪ್ರಭಾವಲಯವನ್ನು ದಾಖಲು ಮಾಡಲು ಉಪಯೋಗಿಸುವ ಹೈ ವೋಲ್ಟೇಜ್ ಫೋಟೋಗ್ರಾಮ್ಸ್.
ಕೊಂಗನವರ್ ಹಿಂದು ಸಂತರು ಹಾಗೂ ಬೋಗಾರ್ ಎಂಬುವರ ಶಿಷ್ಯರು. ತಿರುಪತಿ ದೇವಾಲಯವನ್ನು ಬೋಗಾರ್ರವರ ಮೃತದೇಹದ ಮೇಲೆ ಕಟ್ಟಲಾಗಿದೆ.
ಕೋಶಗಳು ಭೌತ ಶರೀರದ ಸುತ್ತಲೂ ಇರುವ ಐದು ಚೈತನ್ಯ ವಲಯಗಳ ವೈದಿಕ ಗ್ರಂಥವಾದ ತೈತ್ತರೀಯ ಉಪನಿಷತ್ತಿನಲ್ಲಿ ಸಾಂಗವಾಗಿ ವಿವರಿಸಲಾಗಿದೆ.
ಕ್ರಿಯಾಶಕ್ತಿ ಕ್ರಿಯೆಯ ಶಕ್ತಿ. ಇನ್ನೆರಡು ಶಕ್ತಿಗಳು ಯಾವುವೆಂದರೆ ಇಚ್ಛಾಶಕ್ತಿ ಮತ್ತು ಜ್ಞಾನ ಶಕ್ತಿ.
ಕ್ಷಣ ಎರಡು ಆಲೋಚನೆಗಳ ನಡುವಣ ಕಾಲ
ಕುಲಾರ್ಣವ ತಂತ್ರ ಆತ್ಮಜ್ಞಾನಿಯಾದ ಶಿವನಿಂದ ರಚಿಸಲ್ಪಟ್ಟ ಪುರಾತನ ಗ್ರಂಥ
ಕುಂಭಮೇಳ ಪ್ರಯಾಗ, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್ಗಳಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಆಧ್ಯಾತ್ಮಿಕ ಸಮಾರಂಭ.
ಕುಂಡಲಿನೀ ಶಕ್ತಿ ಪ್ರತಿಯೊಬ್ಬ ಮಾನವನಲ್ಲಿಯೂ ಅಡಗಿರುವ ಅಸಾಧಾರಣ ಪ್ರಭಾವ ಪೂರ್ಣ ಶಕ್ತಿ. ಅದನ್ನು ಜಾಗೃತಗೊಳಿಸಿದರೆ ಬೇರೆ ಪ್ರಜ್ಞಾಸ್ತರಕ್ಕೆ ಅಥವಾ ಅಸ್ತಿತ್ವದ ಸ್ತರಕ್ಕೆ ಕೊಂಡೊಯ್ಯುತ್ತದೆ.
ಲಾಮಾಗಳು ಬೌದ್ಧ ಸನ್ಯಾಸಿಗಳು
ಮಧುರಭಾವ ಗುರು ಶಿಷ್ಯರ ನಡುವಿನ ಪ್ರೇಮ ಸಂಬಂಧ
ಮಧ್ಯಪಂಥ ಮಧ್ಯಮಮಾರ್ಗ ಬುದ್ಧನು ಬೋಧಿಸಿದ ಮಧ್ಯಮ ಮಾರ್ಗ
ಮಹಾಭಾವ ಗುರು-ಶಿಷ್ಯರ ಸಂಬಂಧದಲ್ಲಿ ಸಾಮಾನ್ಯವಾದ ಎಲ್ಲ ಸಂಬಂಧಗಳನ್ನೂ ಮೀರಿರುವ ಅಂತಿಮ ವ್ಯಕ್ತರೂಪ
ಮಹಾಕಾಶ ಅನಂತದಾಚೆಗಿನ ಮೂರನೆಯ ಸ್ಥಾನ
ಮಹಾಮಂತ್ರ ಅನಾಹತ ಚಕ್ರವನ್ನು ಚೈತನ್ಯಗೊಳಿಸುವ ಹೂಂಕಾರ ಧ್ಯಾನ. ನಿತ್ಯಾನಂದರ ಲೈಫ್ ಬ್ಲಿಸ್ ಕಾರ್ಯಕ್ರಮಗಳಲ್ಲಿ ಕಲಿಸುವಂತಹುದು.
ಮಹರ್ಷಿ ಮಹೇಶ್ ಯೋಗಿ 20ನೇ ಶತಮಾನದ ಭಾರತದ ಆಧ್ಯಾತ್ಮಿಕ ಗುರು ಹಾಗೂ ಟ್ರಾನ್ಸೆಂಡೆಂಟಲ್ ಮೆಡಿಟೇಶನ್ನ ಪ್ರವರ್ತಕರು
ಮಹಾವಾಕ್ಯ ಉಪನಿಷತ್ತಿನಲ್ಲಿ ಕಂಡುಬರುವ ಪವಿತ್ರ ಸೂಕ್ತಿಗಳು. ಅಹಂಬ್ರಹ್ಮಾಸ್ಮಿ, ತತ್ತ್ವಂಅಸಿ, ಅಯಂಆತ್ಮಬ್ರಹ್ಮ ಮತ್ತು ಪ್ರಜ್ಞಾನಾಂಬ್ರಹ್ಮ ಎಂಬ ನಾಲ್ಕು ಸೂಕ್ತಿಗಳಿವೆ. ಈ ನಾಲ್ಕೂ ‘ನೀನೇ ದೇವರು’ ಎಂದರ್ಥ.
| ಮಹಾವೀರ | ವರ್ಧಮಾನ ಮಹಾವೀರ. ಈತನು 24ನೆಯ ಹಾಗೂ ಕೊನೆಯ ತೀರ್ಥಂಕರ. ಜಿನ ಧರ್ಮ ಸೂಕ್ತಿಗಳನ್ನು ಸ್ಥಾಪಿಸಿದವನು. ಇದು ಭಾರತದಲ್ಲಿ ಮೊದಲಾದರೂ ಇಂದು ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನರಿಂದ ಆಚರಿಸಲ್ಪಡುತ್ತಿದೆ. |
| ಮಾಣಿಕ್ಯ ವಾಸ್ಗರ್ | 63 ನಾಯನ್ಮಾರ್ಗಳಲ್ಲಿ ಒಬ್ಬರು. ತಮಿಳುನಾಡಿನ ಶಿವನೆಂಬ ಜ್ಞಾನಿಯ ಭಕ್ತರು. |
| ಮಣಿಪೂರಕ ಚಕ್ರ | ಚಿಂತೆಗೆ ಸಂಬಂಧಿಸಿದ ನಾಭಿ ಪ್ರದೇಶದಲ್ಲಿ ನೆಲೆಸಿರುವ ಸೂಕ್ಷ್ಮ ಚೈತನ್ಯ ಕೇಂದ್ರ. |
| ಮನೋಮಯ ಕೋಶ | ಪಂಚ ಕೋಶಗಳು ಅಥವಾ ಚೈತನ್ಯ ಪದರಗಳಲ್ಲಿ ಮೂರನೆಯದಾದ ಚೈತನ್ಯ ಪದರ |
| ಮಾರ | ಬೌದ್ಧ ಸಂಪ್ರದಾಯದಲ್ಲಿ ದುಷ್ಟರಾಕ್ಷಸ |
| ಮಾಸ್ಲೋ | ಅವಶ್ಯಕತೆಯ ಐದು ಪದರಗಳ ಶ್ರೇಣಿಯ ಕಲ್ಪನೆಗೆ ಹೆಸರುವಾಸಿಯಾದ ಅಮೆರಿಕಾದ ಮನೋಶಾಸ್ತ್ರಜ್ಞ |
| ಮಾತೃ ಭಾವ | ಗುರು-ಶಿಷ್ಯ ಸಂಬಂಧದಲ್ಲಿ ತಾಯಿಮಗುವಿನ ಸಂಬಂಧ |
| ಮಾಯೆ | ಅಕ್ಷರಶಃ ‘ಇಲ್ಲದ್ದು’ ಎಂದರ್ಥ. ಅನುಭವಿಸುತ್ತಿರುವಾಗ ಎಷ್ಟೇ ನಿಜವೆನಿಸಿದರೂ ಜೀವನವೂ ಕೇವಲ ಒಂದು ಕನಸು ಎಂಬ ಭಾವನೆ. |
| ಮೀನಾಕ್ಷಿ | ದಕ್ಷಿಣಭಾರತದ ಮಧುರೈಯಲ್ಲಿರುವ ದೇವಿ. ಆಕೆಯೊಬ್ಬ ಸಂತಳೆಂದೂ, ಆ ದೇವಾಲಯವನ್ನು ಆಕೆಯ ಮೃತದೇಹದ ಮೇಲೆ ನಿರ್ಮಿಸಲಾಗಿದೆಯೆಂದೂ ಪ್ರತೀತಿ. |
| ಮೀರಾಬಾಯಿ | ಚಿತ್ತೂರಿನ ರಾಜಕುಮಾರಿ. ಕೃಷ್ಣನ ಭಕ್ತೆ. ಯೋಗಿಕ ಕವಿಯಿತ್ರಿ ಹಾಗೂ ಹಾಡುಗಾರಳು. ಕೃಷ್ಣನ ಮೇಲಿನ ಭಕ್ತಿಯಿಂದಾಗಿ ಪತಿಯಿಂದ ತಿರಸ್ಕೃತಳಾಗಿದ್ದವಳು. |
| ಮಿಲೇರಪ | ಟಿಬೆಟನ್ ಯೋಗಿ ಹಾಗೂ ಟಿಬೆಟ್ಟಿನ ಬೌದ್ಧ ಗುರುಗಳಾದ ಮಾರರವರ ಶಿಷ್ಯರು. |
| ಮೃತ್ಯುಂಜಯ | ಮರಣವನ್ನು ಗೆದ್ದವನು |
| ಮೂಲಾಧಾರ ಚಕ್ರ | ಬೆನ್ನು ಹುರಿಯ ಕೆಳಗಡೆ ಇರುವ ಸೂಕ್ಷ್ಮಶಕ್ತಿ ಕೇಂದ್ರ. ದುರಾಸೆ ಹಾಗೂ ಕಾಮ ಭಾವಗಳಿಗೆ ಸಂಬಂಧಿಸಿದುದು. |
| ಮುರುಗನಾರ್ | ರಮಣಮಹರ್ಷಿಗಳ ಶಿಷ್ಯರು ಮಾತ್ರವಲ್ಲದೆ, ರಮಣರ ಬಗ್ಗೆ ಹಲವಾರು ಸ್ತೋತ್ರಗಳನ್ನು ರಚಿಸಿದ ತಮಿಳುಕವಿ. |
| ನಮೋ ಅರಿಹಂತ | ಜಿನ ಗುರು ಮತ್ತು ದೇವತೆಯಾದ ‘ಅರಿಹಂತನಿಗೆ ಶಿರಬಾಗುತ್ತೇನೆ’ ಎಂದರ್ಥ. |
| ನಾಯನ್ ಮಾರರು | ತಮಿಳುನಾಡಿನ 63 ಶಿವ ಭಕ್ತರು. ಪೆರಿಯಪುರಾಣಂ ಎಂಬ ಗ್ರಂಥದಲ್ಲಿ ಅವರ ಜೀವನ ಚರಿತ್ರೆಗಳನ್ನು ಉಲ್ಲೇಖಿಸಲಾಗಿದೆ. | | ನೇತಿ | ಯೋಗದ, ಮೂಗಿನ ಶುದ್ಧೀಕರಣ ತಂತ್ರ. | | ನೈಲ್ | ಆಫ್ರಿಕಾದ ಸೂಡಾನ್, ಈಜಿಪ್ಟ್ ಮುಂತಾದ ಪ್ರದೇಶಗಳಲ್ಲಿ ಹರಿಯುವ ಪ್ರಪಂಚದಲ್ಲೇ ಅತ್ಯಂತ ಉದ್ದವಾದ ನದಿ. | | ನಿರ್ವಾಣ | ಆತ್ಮಜ್ಞಾನದ ಮೂಲಕ ಮುಕ್ತಿ. | | ನಿರ್ವಾಣ ಶತಕ | ಗುರು ಗೋವಿಂದಪಾದರಿಗೆ ಆದಿ ಶಂಕರರು ತಮ್ಮ ಎಂಟನೇ ವಯಸ್ಸಿನಲ್ಲಿ ಆರು ಶ್ಲೋಕಗಳನ್ನು ಹಾಡುವ ಮೂಲಕ ತಮ್ಮನ್ನು ಪರಿಚಯಿಸಿಕೊಂಡ ಸಂಗ್ರಹ | | ನಿತ್ಯಧ್ಯಾನ | ಪರಮಹಂಸ ನಿತ್ಯಾನಂದರು ತಮ್ಮ ಅನುಯಾಯಿಗಳಿಗೆ ದಿನನಿತ್ಯದ ಧ್ಯಾನವಾಗಿ ನಿರ್ಮಿಸಿರುವ ಧ್ಯಾನ | | ನಿತ್ಯಮುಕ್ತ | ಶಾಶ್ವತ ಮುಕ್ತಿ ಪಡೆದವನು | | ನಿತ್ಯ ಸೂರ್ಯ ನಮಸ್ಕಾರ | ಪರಮಹಂಸ ನಿತ್ಯಾನಂದರಿಂದ ದೀಕ್ಷೆ ಪಡೆದ ಆಚಾರ್ಯರು ಕಲಿಸುವ ನಿತ್ಯಯೋಗದ ತಂತ್ರಗಳಲ್ಲೊಂದು | | ನಿತ್ಯಯೋಗ | ಪತಂಜಲಿಯವರ ದೇಹಭಾಷೆಗಳ ಆಥರದ ಮೇಲೆ ಪರಮಹಂಸ ನಿತ್ಯಾನಂದರು ನೀಡಿರುವ ಬೋಧನೆಗಳು | | ನಿತ್ಯಾನಂದ ಸ್ಫುರಣ | ಶಾಶ್ವತಾನಂದದ ವಿಕಸನ | | ಓಡಿಪಸ್ ಹಾಗೂ ಎಲೆಕ್ಟ್ರಾ ಕಾಂಪ್ಲೆಕ್ಸಸ್ | ಫ್ರಾಯ್ಡ್ರವರ ನಿರೂಪಣೆಯಂತೆ ತಂದೆ-ಮಗಳ, ತಾಯಿ-ಮಗನ ಕಾಮಾಸಕ್ತಿ | | ಓಂ | ಹಿಂದೂ ಧರ್ಮದ ಪ್ರಕಾರ ಸೃಷ್ಟಿಯನ್ನು ಪ್ರತಿನಿಧಿಸುವ ಪವಿತ್ರವಾದ ನಾದ | | ಪಿ.ಡಿ. ಓಸ್ಪೆನ್ಸ್ಕಿ | ರಷ್ಯಾದೇಶದ ತತ್ವಜ್ಞಾನಿ, ಗಣಿತ ಶಾಸ್ತ್ರಜ್ಞ ಮತ್ತು ಜ್ಞಾನಿಗಳಾಗಿದ್ದ ಜಾರ್ಜ್ ಗುರ್ಡೀಫ್ರವರ ಶಿಷ್ಯರು. | | ಪಂಚಕ್ರಿಯೆಗಳು | ದೇವಮಾನವನೊಬ್ಬನ ಐದು ಚಟುವಟಿಕೆಗಳು: ಯಾವುವೆಂದರೆ ಸೃಷ್ಟಿ, ಸ್ಥಿತಿ, ಪುನರುಜ್ಜೀವನ, ಮಾಯೆಯ ಸೃಷ್ಟಿ, ಭ್ರಮೆಯ ಪರಿಹಾರ. | | ಪರಮಹಂಸ | ಶಬ್ದಾರ್ಥವು ಶ್ರೇಷ್ಠವಾದ ಹಂಸ ಎಂದು. ಇದು ಜ್ಞಾನಿಗಳಿಗೆ ನೀಡುವ ಪದವಿ. |
ಪರಮಹಂಸ ಯೋಗಾನಂದ 'ಆಟೋಬಯೋಗ್ರಫಿ ಆಫ್ ಎ ಯೋಗಿ' ಎಂಬ ಪುಸ್ತಕಕ್ಕಾಗಿ ಹೆಸರುವಾಸಿಯಾಗಿರುವ ಜ್ಞಾನಿಗಳು. 1920ರಲ್ಲಿ ಸೆಲ್ಫ್ ರಿಯಲೈಜೇಷನ್ ಫೆಲೋಶಿಪ್ ಎಂಬ ಪರಂಪರೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದವರು.
ಪತಂಜಲಿ ಪ್ರಾಚೀನ ಭಾರತದ ಋಷಿವರೆಣ್ಯರು. ಯೋಗ ಪದ್ಧತಿಯ ತಳಪಾಯವೆಂದು ಪರಿಗಣಿಸಲ್ಪಟ್ಟ 'ಯೋಗ ಸೂತ್ರ'ಗಳ ಗ್ರಂಥಕರ್ತರು.
ಪೆರಿಯ ಪುರಾಣಂ ಜ್ಞಾನಿಯಾದ ಶಿವಭಕ್ತರಾದ 63 ನಾಯನ್ಮಾರರುಗಳ ಚರಿತ್ರೆಯನ್ನು ಬರೆದ ಸೆಕ್ಕಿಳರ್ರವರ ತಮಿಳಿನ ಶ್ರೇಷ್ಠವಾದ ಗ್ರಂಥ.
ಪೀಟರ್ ಡ್ರಕ್ಕರ್ ಆಧುನಿಕ ಮ್ಯಾನೇಜ್ಮೆಂಟ್ ಪಿತಾಮಹನೆನಿಸಿದ ಮ್ಯಾನೇಜ್ಮೆಂಟ್ ಗುರು.
ಪಿಂಡಾಂಡ ಬ್ರಹ್ಮಾಂಡಕ್ಕೆ ವಿರುದ್ಧವಾಗಿ ವೈಯಕ್ತಿಕವಾದ ಸಂಕ್ಷೇಪಾಕೃತಿ.
ಪಿಂಗಳಾನಾಡಿ ದೇಹದಲ್ಲಿರುವ ಮೂರು ಶಕ್ತಿ ಮಾರ್ಗಗಳಲ್ಲಿ ಪಿಂಗಳವೂ ಒಂದು. ಪಿಂಗಳವು ಮೂಗಿನ ಬಲಹೊಳ್ಳೆಯಲ್ಲಿ ಅಂತ್ಯವಾಗಿ, ಬಿಸಿಯಾಗಿಯೂ ಪೌರುಷೇಯವಾಗಿಯೂ ಇದ್ದು, ಸೂರ್ಯನನ್ನು ಪ್ರತಿಬಿಂಬಿಸುತ್ತದೆ.
ಪ್ಲಾಸಿಬೋ ಔಷಧವೆಂದು ನೀಡಲಾಗುವ ವಸ್ತು. ಆದರೆ ಅದಕ್ಕೆ ಯಾವ ಪ್ರಭಾವವೂ ಇರುವುದಿಲ್ಲ.
ಪ್ಲಾಸಿಬೋ ಎಫೆಕ್ಟ್ ಖಾಯಿಲೆಗಳನ್ನು ಗುಣಪಡಿಸುವಲ್ಲಿ ಪ್ಲಾಸಿಬೋಗಳ ಪ್ರಭಾವ
ಪಾಲಿಗ್ರಾಫ್ ಸುಳ್ಳನ್ನು ಪತ್ತೆಹಚ್ಚುವ ಯಂತ್ರ
ಪ್ರಾಣಶರೀರ ಸಪ್ತ ಸ್ತರಗಳ ವ್ಯವಸ್ಥೆಯಲ್ಲಿರುವ ಚೈತನ್ಯ ಶರೀರದ ಎರಡನೇ ಸ್ತರ
ಪ್ರಾಣಮಯಕೋಶ ಐದುಕೋಶಗಳ ವ್ಯವಸ್ಥೆಯಲ್ಲಿ ಎರಡನೇ ಸ್ತರದ ಚೈತನ್ಯ.
ಪ್ರಾಣಾಯಾಮ ಉಸಿರಿನ ನಿಯಂತ್ರಣ. ಪತಂಜಲಿಯವರ ಅಷ್ಟಾಂಗಯೋಗದ ಎಂಟು ಅಂಗಗಳಲ್ಲೊಂದು
ಪ್ರಾರಬ್ಧ ನಾವು ಹುಟ್ಟುವಾಗ ಈ ಜಗತ್ತಿಗೆ ತರುವ ಮನಃಸ್ಥಿತಿ ಮತ್ತು ಆಸೆಗಳು
ಪ್ರತ್ಯಾಹಾರ ಪತಂಜಲಿಯವರ ಅಷ್ಟಾಂಗಯೋಗದ ಐದನೆಯ ಅಂಗ
ಪುರಶ್ಚರಣ ಮಂತ್ರದ ಪುನರಾವೃತ್ತಿ
ಪುರುಷ ಸಾಂಖ್ಯ ತತ್ವಶಾಸ್ತ್ರದಲ್ಲಿ ಪುರುಷತತ್ತ್ವ. ಇದು ಪ್ರಕೃತಿ ಸ್ತ್ರೀ ತತ್ವಕ್ಕೆ ವಿರುದ್ಧವಾದುದು.
ಪುರುಷಸೂಕ್ತ ಪುರುಷ ಅಥವಾ ಅತ್ಯುಚ್ಛವಾದುದಕ್ಕೆ ಸಮರ್ಪಿಸುವ ವೈದಿಕ ಮಂತ್ರ ಅಥವಾ ಅತ್ಯುಚ್ಛವಾದುದು.
ಕ್ವಾಂಟಿಲೇಟಿವ್ ಎಲೆಕ್ಟ್ರೋ ಎನ್ಸೆಫಲೋಗ್ರಫಿ ಮೆದುಳಿನ ತರಂಗಗಳ ಅಧ್ಯಯನ
ರಾಜ ಸನ್ಯಾಸಿ ಸನ್ಯಾಸಿಗಳ ಪೈಕಿ ರಾಜ
ರಜಸ್ ಸ್ವಭಾವದ ತ್ರಿಗುಣಗಳಲ್ಲಿ ಅಥವಾ ಲಕ್ಷಣಗಳಲ್ಲಿ ಒಂದು. ಆಕ್ರಮಣಕಾರೀ ಲಕ್ಷಣ
ರಾಮಕೃಷ್ಣ ಪರಮಹಂಸರು ಪಶ್ಚಿಮ ಬಂಗಾಳದ ಜ್ಞಾನಿಗಳು. ಸ್ವಾಮಿ ವಿವೇಕಾನಂದರು ಅವರ ಪಟ್ಟ ಶಿಷ್ಯರು.
ರಮಣ ಮಹರ್ಷಿಗಳು ತಿರುವಣ್ಣಾಮಲೈಯಲ್ಲಿದ್ದ ಜ್ಞಾನಿಗಳು. ‘ನಾನು ಯಾರು?’ ಎಂದು ತಮ್ಮನ್ನೇ ಕೇಳಿಕೊಳ್ಳುವ ಆತ್ಮಸಂಶೋಧನೆಯನ್ನು ಆತ್ಮಸಾಕ್ಷಾತ್ಕಾರಕ್ಕೆ ಮಾರ್ಗವಾಗಿ ಉಪದೇಶಿಸಿದರು.
ರಮಣಪುರಾಣ ರಮಣ ಮಹರ್ಷಿಗಳ ಬಗ್ಗೆ ಕಥೆಗಳು
ರಾಮಾನುಜ ವಿಶಿಷ್ಟಾದ್ವೈತ ಅಥವಾ ದ್ವೈತ ತತ್ವದ ಸ್ಥಾಪಕರು. ಹಿಂದೂ ತತ್ವಶಾಸ್ತ್ರದ ಮಹಾ ಆಚಾರ್ಯತ್ರಯರಲ್ಲಿ ಆದಿಶಂಕರರು ಮತ್ತು ಮಧ್ವಾಚಾರ್ಯರೊಂದಿಗೆ ಒಬ್ಬರೆಂದು ಪರಿಗಣಿಸಲಾಗಿದೆ.
ರೇಣೆ ಡಿಕಾರ್ಟ್ 'ಐ ಥಿಂಕ್ ದೇರ್ಫೋರ್ ಐ ಆಮ್’ ಎಂಬ ಸೂಕ್ತಿಗಾಗಿ ಹೆಸರುವಾಸಿಯಾದ ಫ್ರೆಂಚ್ ತತ್ವಜ್ಞಾನದ ವಿಜ್ಞಾನಿ.
ರೋಮಿಯೋ ಆಂಗ್ಲ ಕವಿಯ ‘ರೋಮಿಯೋ ಆಂಡ್ ಜೂಲಿಯಟ್’ ನಾಟಕದ ಪ್ರಧಾನ ಪುರುಷ ಪಾತ್ರಧಾರಿ
ಸದಾಶಿವ ಬ್ರಹ್ಮೇಂದ್ರ 18ನೇ ಶತಮಾನದ ತಮಿಳು ಸಂತರು ಹಾಗೂ ಸಂಗೀತ ರಚನಾಕಾರರು.
ಸಹಸ್ರಾರ ಚಕ್ರ ಶಿರಸ್ಸಿನಲ್ಲಿರುವ ಏಳನೆಯ ಹಾಗೂ ಕಡೆಯ ಚೈತನ್ಯ ಕೇಂದ್ರ.
ಸಖಿಭಾವ ಅರ್ಜುನನಿಗೂ ಕೃಷ್ಣನಿಗೂ ಇದ್ದಂತಹ ಗುರು-ಶಿಷ್ಯ ಸ್ನೇಹಭಾವ
ಸಮಾಧಿ ಅಷ್ಟಾಂಗ ಯೋಗದ ಎಂಟನೆಯ ಮತ್ತು ಕಡೆಯದಾದ ಅಂಗ. ವೈಯಕ್ತಿಕ ಪ್ರಜ್ಞೆಯನ್ನು ವಿಶ್ವ ಪ್ರಜ್ಞೆಯೊಂದಿಗೆ ಜೊತೆಗೂಡಿಸುವುದಕ್ಕೆ ಅನ್ವಯಿಸುತ್ತದೆ.
ಸಂಸ್ಕಾರ ಆಳವಾಗಿ ಕೊರೆಯಲ್ಪಟ್ಟ ನೆನಪುಗಳು
ಸಂಚಿತ ಬ್ಯಾಂಕಿನಲ್ಲಿ ಕೂಡಿಟ್ಟುಕೊಂಡ ಕರ್ಮಗಳು. ಅವುಗಳಲ್ಲಿ ಕೆಲವನ್ನು ಆಯ್ಕೆಮಾಡಿಕೊಂಡು ಈ ಜನ್ಮಕ್ಕೆ ಪ್ರಾರಬ್ಧಕರ್ಮಗಳಾಗಿ ತರುವೆವು.
ಸತೋರಿ ಪ್ರಜ್ಞೆಯ ಉಚ್ಚ ಸ್ಥಿತಿ
ಸತ್ವ ತ್ರಿಗುಣ ಅಥವಾ ಸಹಜ ಗುಣಗಳಲ್ಲಿ ಒಂದು. ಶಾಂತ ಕ್ರಿಯೆಯ ಲಕ್ಷಣ.
ಆತ್ಮಜ್ಞಾನ ನಾನೇ ವಿಶ್ವಚೈತನ್ಯವೆಂಬ ಅರಿವು
ಶಕ್ತಿ ದರ್ಶನ ನಿತ್ಯಾ ಸ್ಪಿರಿಚುಯಲ್ ಹೀಲರುಗಳಿಗೆ ಪರಮಹಂಸ ನಿತ್ಯಾನಂದರು ನೀಡುವ ವಿಶೇಷ ದರ್ಶನ
ಷಣ್ಮುಖಿ ಮುದ್ರ ಧ್ಯಾನದ ಸಮಯದಲ್ಲಿ ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು ಮತ್ತು ಬಾಯಿಯನ್ನು ಮುಚ್ಚಿಕೊಂಡಿರುವ ಮುದ್ರೆ.
ಶಿರಡಿ ಸಾಯಿಬಾಬಾ ಹಿಂದೂ-ಮುಸ್ಲಿಮರಿಂದ ಸಮನಾಗಿ ಗೌರವಿಸಲ್ಪಟ್ಟ ಜ್ಞಾನಿ. ನಾಸಿಕ್ ಬಳಿ ಇರುವ ಶಿರಡಿಯಲ್ಲಿ ವಾಸಿಸುತ್ತಿದ್ದರು.
ಶಿವ ಭಾರತದ ಜ್ಞಾನಿ. ಶಿವ ಎಂಬುದರ ಶಬ್ದಾರ್ಥ 'ಕಾರಣವಿಲ್ಲದ ಮಂಗಳತ್ವ'ವೆಂದು.
ಶಿವಲಿಂಗ ಶಿವನೆಂಬ ಜ್ಞಾನಿಗಳ ಪ್ರತಿರೂಪ. ಸ್ತ್ರೀ ಮತ್ತು ಪುರುಷತತ್ತ್ವಗಳ ಪುನರುಜ್ಜೀವನದ ಸಂಕೇತ.
ಶಿವಸೂತ್ರಗಳು ಶಿವನ ಬೋಧನೆಗಳ ತಂತ್ರಗಳನ್ನೊಳಗೊಂಡ ಚುಟುಕುನುಡಿಗಳ ಸಂಗ್ರಹ. ವಿಜ್ಞಾನ ಭೈರವ ತಂತ್ರ, ಗುರುಗೀತ, ತಿರು ಮಂದಿರಗಳನ್ನೊಳಗೊಂಡಿದೆ.
ಶ್ರದ್ಧಾ ಸಬೂರಿ ಪ್ರಾಮಾಣಿಕ ಸಮರ್ಪಣೆ ಹಾಗೂ ಗ್ರಹಿಕೆ. ಶಿರಡಿ ಸಾಯಿಬಾಬಾರವರ ಬೋಧನೆಗಳ ಸಾರ.
ಸಿಸ್ಟರ್ ನಿವೇದಿತಾ ಸ್ವಾಮಿ ವಿವೇಕಾನಂದರ ಆಂಗ್ಲೋ ಐರಿಷ್ ಶಿಷ್ಯೆ.
ಸಾಕ್ರಟೀಸ್ ಗ್ರೀಕ್ ತತ್ತ್ವಜ್ಞಾನಿ. ಪ್ಲೇಟೋವಿನ ಸಮಕಾಲೀನರು.
ಸೂಫಿ ಇಸ್ಲಾಂ ಮತದ ಯೋಗಿಕ ಆಯಾಮ
ಸೂಫಿಗಳು ಸೂಫೀ ಮತದ ಅನುಯಾಯಿಗಳು
ಸುಷುಮ್ನಾನಾಡಿ ದೇಹದಲ್ಲಿನ ಮೂರು ಪ್ರಮುಖ ಶಕ್ತಿ ಪಥಗಳಲ್ಲಿ ಸುಷುಮ್ನವೂ ಒಂದು. ಮೂಲ ಚೈತನ್ಯ ಕೇಂದ್ರವಾದ ಮೂಲಾಧಾರದಿಂದ ಮೇಲೇಳುತ್ತದೆ. ಕುಂಡಲಿನೀ ಶಕ್ತಿಯ ಮಧ್ಯದ ಹಾದಿಯಾಗಿದ್ದು, ಸಹಸ್ರಾರದಲ್ಲಿ ಸಮಾಪ್ತಿಯಾಗುತ್ತದೆ.
ಸುಷುಪ್ತಿ ಗಾಢ ನಿದ್ರೆ
ಸ್ವಾಧಿಷ್ಠಾನ ಚಕ್ರ ಬೆನ್ನುಹುರಿಯ ತಳ ಮತ್ತು ನಾಭಿಪ್ರದೇಶಗಳ ಮಧ್ಯದಲ್ಲಿರುವ ಗುಲ್ಮದ ಚೈತನ್ಯ
ಸ್ವಾಮಿ ಶ್ರೀ ಯುಕ್ತೇಶ್ವರ್ ಗಿರಿ ಪರಮಹಂಸ ಯೋಗಾನಂದರ ಗುರುಗಳು
ತೈತ್ತರೀಯ ಉಪನಿಷತ್ತು ಪಂಚಭೂತಗಳ, ಪಂಚ ಕೋಶಗಳ ಹಾಗೂ ಪಂಚ ಶಕ್ತಿವಲಯಗಳ ವಿವರಣೆಯನ್ನು ಹೊಂದಿರುವ ಪ್ರಮುಖವಾದ ಉಪನಿಷತ್ತುಗಳಲ್ಲೊಂದು.
ತಕ್ಷಶಿಲೆ ರಾಮಾಯಣ ಮಹಾಭಾರತ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವ ಕಲಿಕೆಯ ಕೇಂದ್ರ. ಈಚೆಗೆ ಈಶಾನ್ಯ ಪಾಕಿಸ್ತಾನದಲ್ಲಿ ಜಗತ್ತಿನ ಯುನ್ಯೆಟೆಡ್ ನೇಷನ್ಸ್ನವರ ವಂಶಪಾರಂಪರ್ಯದ ವಿಷಯದ ಕ್ಷೇತ್ರ.
ತತ್ ತ್ವಂ ಅಸಿ ಮಹಾಸತ್ಯಗಳಲ್ಲೊಂದಾದ 'ಅದು ನೀನೇ ಆಗಿದ್ದೀಯೇ' ಎಂಬ ಅರ್ಥವುಳ್ಳದ್ದು.
ಪ್ರತ್ಯಕಾತ್ಮ ಚೈತನ್ಯ ಜಗತ್ ಪ್ರಜ್ಞೆಯ ಹಾಗೂ ಅಂತರಾತ್ಮದ ಜಾಗೃತಿ
ತಿರುವಣ್ಣಾಮಲೈ ಪರಮಹಂಸ ನಿತ್ಯಾನಂದರು ಜನಿಸಿ, ಪೂರ್ವಾಶ್ರಮದಲ್ಲಿದ್ದ ದೇವನಗರಿ.
ತುರೀಯಾ ಪ್ರಜ್ಞೆಯ ನಾಲ್ಕನೆಯ ಸ್ಥಿತಿ. ಅದರಲ್ಲಿ ಯಾವ ಆಲೋಚನೆಗಳು ಇರುವುದಿಲ್ಲ. ಕೇವಲ ಅರಿವು ಮಾತ್ರವೇ ಇರುವುದು.
ಉಪನಿಷತ್ತು ವೇದಗಳ ಸಾರಸಂಗ್ರಹವಾದ ಗ್ರಂಥಗಳು. 'ಗುರುಗಳೊಂದಿಗೆ ಕುಳಿತುಕೊಳ್ಳುವುದು' ಎಂದು ಶಬ್ದಾರ್ಥ.
ವಜ್ರಾಸನ ಮೊಣಕಾಲುಗಳನ್ನು ಮಡಚಿ, ಪಾದಗಳನ್ನು ಕೆಳಗಡೆ ಇರಿಸಿಕೊಂಡು, ಹಿಮ್ಮಡಿಯ ಮೇಲೆ ಪೃಷ್ಠವನ್ನಿಟ್ಟುಕೊಂಡು ಕುಳಿತುಕೊಳ್ಳುವ ಯೋಗಾಸನದ ಭಂಗಿ.
ವಾನಪ್ರಸ್ಥ ಸನ್ಯಾಸ ವೈದಿಕ ಸಂಪ್ರದಾಯದ ಮೂರನೆಯ ಹಂತ. ಇದರಲ್ಲಿ ಪತಿ-ಪತ್ನಿಯರು ವೈವಾಹಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿರತರಾಗಿ ಅಂತಿಮ ಸತ್ಯವನ್ನರಸುತ್ತಾರೆ.
ವೇದಗಳು ಆಳವಾದ ಆಧ್ಯಾತ್ಮಿಕ ಸತ್ಯಗಳನ್ನು ವಿವರಿಸುವ ಪುರಾತನ ಗ್ರಂಥಗಳು. ಪ್ರಮುಖವಾದ ನಾಲ್ಕು ವೇದಗಳಿವೆ: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ. ಈ ಗ್ರಂಥಗಳಲ್ಲಿ ಯಾಗಗಳ ಬಗ್ಗೆ ವಿವರಣೆ ಇದೆ. ಇವುಗಳಲ್ಲಿ ಕಥೆಗಳೂ ಪಠನಗಳೂ ಇವೆ.
ವಿಪಾಸನ ಉಸಿರಾಟವನ್ನು ಗಮನಿಸಿಕೊಂಡು ಅಂತರ್ಮುಖಿಯಾಗಲು ಭಗವಾನ್ ಬುದ್ಧನು ನೀಡಿದ ಉಪದೇಶ.
ವಿಶುದ್ಧಿ ಚಕ್ರ ಕಂಠಪ್ರದೇಶದಲ್ಲಿರುವ ಚಕ್ರ ಅಥವಾ ಸೂಕ್ಷ್ಮ ಚೈತನ್ಯ ಕೇಂದ್ರ. ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದರಿಂದ ಮುಚ್ಚಲ್ಪಟ್ಟಿರುತ್ತದೆ.
ವಿವೇಕ ಚೂಡಾಮಣಿ ಆದಿಶಂಕರರ ತತ್ವಶಾಸ್ತ್ರದ ಗ್ರಂಥ.
ವಿವೇಕಾನಂದರು ರಾಮಕೃಷ್ಣಪರಮಹಂಸರ ಪಟ್ಟ ಶಿಷ್ಯರು ಹಾಗೂ ರಾಮಕೃಷ್ಣಮಠದ ಸ್ಥಾಪಕರು. ಹಿಂದೂ ಮತ ಮತ್ತು ಯೋಗದ ಅರಿವನ್ನು ಯೂರೋಪು ಹಾಗೂ ಅಮೆರಿಕಾಗಳಲ್ಲಿ ಹರಡಿದ ಪ್ರಮುಖರಾದ 19ನೇ ಶತಮಾನದ ಪೌರ್ವಾತ್ಯ ಯೋಗಿ. ವಾರೇನ್ ಬೆನ್ನಿಸ್ ಮೇನೇಜ್ಮೆಂಟ್ ಮತ್ತು ಲೀಡರ್ಶಿಪ್ಗಳ ಸಲಹೆಗಾರರು.
ಯಂತ್ರ ಒಂದು ಸಲಕರಣೆ, ಸಾಮಾನ್ಯವಾಗಿ ಆಧ್ಯಾತ್ಮಿಕ ಸಾಧನೆಗೆ ಬಳಸುವ ಒಂದು ಲೋಹದ ತಟ್ಟೆ.
ಯೋಗ ದೇಹ-ಮನಸ್ಸು-ಆತ್ಮಗಳನ್ನು ಒಂದುಗೂಡಿಸುವುದು ಎಂದು ಶಬ್ದಾರ್ಥ.
ಯೋಗ ಸೂತ್ರಗಳು ಯೋಗದ ಬಗ್ಗೆ ಪತಂಜಲಿಯವರು ಬರೆದ ಗ್ರಂಥ
ಝಾ/ಝೆನ್ ಜಪಾನೀ ಬೌದ್ಧ ಸಾಧನೆ. 'ಧ್ಯಾನ' ಎಂಬ ಪದದಿಂದ ಉದ್ಭವಿಸಿದುದು.
ಝೆನ್ಕೊಆನ್ಗಳು ಆತ್ಮಸಾಕ್ಷಾತ್ಕಾರಕ್ಕೆ ಸಹಕಾರಿಯಾದ ಒಗಟುಗಳ ರೂಪದ ಝೆನ್ ತಂತ್ರಗಳು
ಜೀವನ್ಮುಕ್ತಿ
(ಪರಮಹಂಸ ನಿತ್ಯಾನಂದರ ವಚನವೇದ)
"ನಾನು ಹೇಳಿರುವುದನ್ನು, ಹೇಳುತ್ತಿರುವುದನ್ನು, ಹೇಳಬೇಕೆಂದಿರುವುದನ್ನು, ಹೇಳಬೇಕೆಂದಿರುವ ಆದರೆ ಹೇಳಲಾಗದುದನ್ನು, ಇವೆಲ್ಲವುಗಳ ಸಾರಾಂಶವನ್ನೂ ಈ ಗ್ರಂಥವು ಒಳಗೊಂಡಿದೆ."
'ಪ್ರತಿಯೊಬ್ಬ ಮಾನವನಲ್ಲಿಯೂ ಅಸಾಧಾರಣ ಶಕ್ತಿಯು ಅಡಗಿದೆ. ಅದನ್ನು ಜಾಗೃತಗೊಳಿಸಿದರೆ, ಅದು ದೇಹಮನಸ್ಸುಗಳನ್ನು ಮೀರಿದ ಬಹಳ ಉನ್ನತವಾದ ಪ್ರಜ್ಞಾಸ್ತರಕ್ಕೆ ನಿಮ್ಮನ್ನು ಒಯ್ಯುತ್ತದೆ. ಈ ಉನ್ನತ ಪ್ರಜ್ಞೆಯ ಅನುಭವವು ನಿಮ್ಮ ನಿಜ ಸಾಮರ್ಥ್ಯವನ್ನು ವಾಸ್ತವೀಕರಿಸುತ್ತದೆ. ಇದೇ ಮಾನವ ಜೀವನದ ಪರಮೋದ್ದೇಶ – ಜೀವನ್ಮುಕ್ತಿಯ ಪರಮಸುಖವನ್ನು ಸವಿಯುವುದು.'
– ಪರಮಹಂಸ ನಿತ್ಯಾನಂದ, 21ನೇ ಶತಮಾನದ ಜೀವಂತ ಜ್ಞಾನಿಗಳು.
ಈ ಗ್ರಂಥದಲ್ಲಿ ಅಡಕವಾಗಿರುವ ವಿಷಯಗಳು:
ಜೀವನದ ಸಮಸ್ಯೆಗಳಿಗೆ ಸ್ಪಷ್ಟ, ಸರಳ ಮತ್ತು ಸಂಪೂರ್ಣ ಪರಿಹಾರಗಳು ಅಪರಾಧ ಪ್ರಜ್ಞೆಯನ್ನು ಜಯಿಸುವುದು ಹೇಗೆ? ನಿಜವಾದ ಪ್ರೇಮವೆಂದರೇನು?
ದಿನನಿತ್ಯದ ಆನಂದಕ್ಕೆ ನೇರಹಾದಿ ಪ್ರತಿದಿನದ ಸರಳವಾದ ಧ್ಯಾನ ಮತ್ತು ಯೋಗಗಳ ಆನಂದಮಯ ಜೀವನಶೈಲಿ. 30ಕ್ಕೂ ಹೆಚ್ಚಾದ ಪ್ರಭಾವಶಾಲೀ ಧ್ಯಾನ ತಂತ್ರಗಳು ಹಾಗೂ ದಿನನಿತ್ಯದ ಅರಿವಿನ ಸಾಧನೆಗಳು
ಕಾಲಾತೀತ ಜೀವನ ಸತ್ಯಗಳ ಅಪರೂಪದ ಇಣುಕುನೋಟ
ಕರ್ಮ ಎಂದರೇನು?
ಜೀವನೋದ್ದೇಶವೇನು?
ಗುರುವಿನ ಆಯಾಮಗಳು ಗುರುವೆಂದರೆ ಯಾರು? ಅಂತಿಮವಾದುದನ್ನು ಅರಿಯಲು ಗುರು ಹೇಗೆ ಸಹಾಯಕನಾಗುತ್ತಾನೆ? . . . ಇತ್ಯಾದಿ!
ಗ್ರಂಥಕರ್ತರ ಬಗ್ಗೆ
ಪರಮಹಂಸ ನಿತ್ಯಾನಂದರು 21ನೇ ಶತಮಾನದ ಜೀವಂತ ಜ್ಞಾನಿಗಳು. ಅವರ ಬೋಧನೆಗಳು ಮಾನವನು ತನ್ನ ನಿಜ ಸಾಮರ್ಥ್ಯವನ್ನು ಅರಿತುಕೊಳ್ಳಲು – ಎಂದರೆ ಮಾನವನಿಂದ ದೇವನಾಗಲು ಸಾಧನಗಳಾದ ಧ್ಯಾನ, ಯೋಗ ಮತ್ತು ಸೇವೆಗಳನ್ನು ಒಳಗೊಂಡಿವೆ. ನಿತ್ಯಾನಂದ ಸಂಸ್ಥೆಯು ಪ್ರಪಂಚದಾದ್ಯಂತವೂ ಶಾಶ್ವತ ಆನಂದ – ನಿತ್ಯ ಆನಂದದ ಸಂದೇಶವನ್ನು ಸಾರುವ ಮೂಲಕ ಪ್ರಜ್ಞಾವಂತ ಮಾನವಕುಲವನ್ನು ನಿರ್ಮಿಸುವ ಧೈಯವನ್ನು ಹೊಂದಿದೆ.
Ebook ISBN: 979-8-88572-173-8 ಪ್ರಕಾಶನ : ಲೈಫ್ ಬ್ಲಿಸ್ ಫೌಂಡೇಷನ್