ಸ್ವಾಮಿ ನಿತ್ಯಾನಂದ
Ebook ISBN: 979-8-88572-476-0
Dhyanapeetam is a charitable institution that brings the benefits of meditation to the people of the world. All proceeds from the sales of this product go towards charity. Copyright 2004. All rights reserved. Unauthorised duplication, broadcasting or sale of this recording strictly prohibited. Phonography by YADAV.
Nithyananda Foundation
India ashram: DHYANAPEETAM, Nithyanandapuri, Kailugopanahalli Off Mysore Road, Bidadi 562 109, Bangalore District, Karnataka, INDIA.
Ashram : +91-80-7288033/4, 56691844 Secretary/ PRO: 9341803444/ 94480 58598 [email protected]www.dhyanapeetam.org
ಒಂದು ಸಣ್ಣ ಕಥೆ.....
ಸ್ವಾಮಿ ನಿತ್ಯಾನಂದರ ನೀತಿ ಕಥೆಗಳು
NITHYANANDA FOUNDATION
ಸತ್ಯವು
ವಾಸ್ತವಕ್ಕಿಂತ,
ಕಥೆಗಳಲ್ಲಿ ಇನ್ನೂ
ಉತ್ತಮವಾಗಿ
ಪ್ರಕಟಗೊಳ್ಳುತ್ತದೆ
ಸ್ವಾಮಿ ನಿತ್ಯಾನಂದ
Ebook ISBN: 979-8-88572-476-0
ಸ್ವಾಮೀಜಿಯವರ ಅನುಗ್ರಹದಿಂದ ರಾಜ್ ರಚಿಸಿದ ಕಾಣಿಕೆ
ಕನ್ನಡಕ್ಕೆ ಅನುವಾದ: ಮೀನಾ ನರಸಿಂಹ
All rights reserved.
No part of this book may be reproduced or transmitted in any form or by any means
electronic or by any information storage and retrieval system without permission in writing
from Dhyana Peetam.
ಒಂದು ಸಣ್ಣ ಕಥಾ .....
ಸ್ವಾಮಿ ನಿತ್ಯಾನಂದರ ನೀತಿ ಕಥೆಗಳು
ಸತ್ಯವು ವಾಸವಕ್ಕಿಂತ, ಕಥೆಗಳಲ್ಲಿ ಇನ್ನೂ ಉತ್ತಮವಾಗಿ ಪ್ರಟಗೊಳ್ಳುತ್ತದೆ - ಸ್ವಾಮಿ ನಿತ್ಯಾನಂದ
ಸ್ವಾಮೀಜಿಯವರ ಅನುಗ್ರಹದಿಂದ ರಾಜ್ ರಚಿಸಿದ ಕಾಣಿಕೆ ಕನ್ನಡಕ್ಕೆ ಅನುವಾದ : ಮೀನಾ ನರಸಿಂಹ
ಪರಮಹಂಸ ಶ್ರೀ ನಿತ್ಯಾನಂದ ಸ್ವಾಮಿಗಳು ನಿಶ್ಯಯವಾಗಿ ಈ ಶತಮಾನದ ಒಬ್ಬ ಕ್ರಾಂತಿಕಾರ ಆಧ್ಯಾತ್ಮಿಕ ಬೋಧಕರಾಗಿದ್ದಾರೆ. ಸ್ವಾಮೀಜಿ ಈ ಆಧ್ಯಾತ್ಮಿಕ ಪ್ರಯಾಣವನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಮಾಡುತ್ತ ಬಂದಿದ್ದಾರೆ. ಅವರು ವಿಶೇಷವಾದ ಉತ್ಸಾಹದಿಂದ ಬಹಳ ತೀವ್ರವಾದ ತಪಸ್ಸನ್ನು ಆಚರಿಸುತ್ತಾ ಭಾರತದ ಮತ್ತು ನೇಪಾಲಿನ ಶ್ರೇಷ್ಠ ವಿದ್ವಾಂಸರೊಂದಿಗೆ ಅಭ್ಯಾಸ ಮಾಡುತ್ತಾ, ಭಾರತದ ಉದ್ದಗಲಕ್ಕೂ ಪಾದಯಾತ್ರೆಯ ಮೂಲಕ ಸಂಚರಿಸಿದ್ದಾರೆ. ಜನವರಿ 1, 2000 ನೇ ಇಸವಿಯಲ್ಲಿ (ಅವರು ಜ್ಞಾನೋದಯವನ್ನು ಪಡೆದ ಪವಿತ್ರ ದಿನ) ಅವರು ತಮ್ಮ ಪವಿತ್ರ ಹೃದಯದ ಹಾಗ ಅರಳುವುದನ್ನು ಅನುಭವಿಸಿದರು.
ಸ್ವಾಮೀಜಿಯವರ ಜೀವನ ಮತ್ತು ಧಾರ್ಮಿಕ ವಿಚಾರ ರೀತಿಗಳು ಲೌಕಿಕವಾಗಿದ್ದರೂ, ಕರುಣೆಯಿಂದ ಸಮೃದ್ಧವಾಗಿದೆ - ಇದಲ್ಲದೆ ಮಾನವತೆಯ ಮನೋಭಾವವನ್ನು ತಮ್ಮ ಸೂಕ್ಷ್ಮ ಪರಿಜ್ಞಾನದಿಂದ, ಈ ಪ್ರಪಂಚದ ಮೂಲ ಮೊಳೆಗಳಲ್ಲಿ ಇರುವ ಜನರ ಹೃದಯವನ್ನು ತಲುಪಿದ್ದಾರೆ.
ಸ್ವಾಮೀಜಿಯವರ ಧರ್ಮಪ್ರಚಾರಕಾರ್ಯವು ಬಹಳ ಸರಳವಾದುದು - ಮನುಷ್ಯನಲ್ಲಿ ಗುಪ್ತವಾಗಿರುವ ದೈವತ್ವವನ್ನು ಎಚ್ಚರಗೊಳಿಸುವುದು. ಇದನ್ನು ಕಾರ್ಯಪ್ರವೃತ್ತಿಗೊಳಿಸಲು ಜನವರಿ 1, 2003 ರಲ್ಲಿ ಧ್ಯಾನದ ಚಳವಳಿಯಾದ ಧ್ಯಾನಪೀಠಂ ಅನ್ನು ಪ್ರಪಂಚದಾದ್ಯಂತ ಪ್ರಾರಂಭಿಸಿದರು. ಇದರ ಆಧ್ಯಾತ್ಮಿಕ ಕೇಂದ್ರವಾದ ಬಿಡದಿಯಲ್ಲಿ (ಬೆಂಗಳೂರಿನ ಸಮೀಪ) ಮತ್ತು ಪ್ರಪಂಚದ ಮೂಲ ಮೊಳೆಗಳಲ್ಲಿ ಇರುವ ಧ್ಯಾನಪೀಠವು ವ್ಯಕ್ತಿಯ ಅಂತರಂಗದ
/ ಯಾರೂ ಕರೆಯದ ಅತಿಥಿ /
ರೋಗ ಮತ್ತು ನೋವನ್ನು ನಿಮ್ಮ ವೈರಿಗಳೆಂದು ತಿಳಿದುಕೊಂಡು ಅವುಗಳನ್ನು ಏಕೆ ಆಕ್ಷೇಪಣೆ ಮಾಡುತ್ತೀರಾ ? ಅವುಗಳು ನೀವು ಗೌರವಿಸಿ, ಆಮಂತ್ರಿಸಿದ ನಿಮ್ಮ ಪ್ರೀತಿಯ ಸ್ನೇಹಿತರಲ್ಲವೆ ?
ಪನು, ನಾ ಹೇಳುವುದರಲ್ಲಿ ನಿಮಗೆ ನಂಬಿಕೆ ಇಲ್ಲವೆ ? ಕೇಳಿ :
ನಿತ್ತಿ ಮೊದಲಿಯಾರರು ಒಂದು 'ಹೋಟಲ್'ಗೆ ಹೋಗಿ ಅಧಿಕ ಪ್ರಮಾಣದಲ್ಲಿ ಭೋಜನ 'ಆರ್ಡರ್' ಮಾಡಿದರು. ಅನೇಕ 'ಪ್ಲೇಟ್'ಗಳಲ್ಲಿ ಇಡ್ಲಿ, ದೋಸೆ ಮತ್ತು ಜಿಲೇಬಿಗಳು ಅವರ ಟೇಬಲ್‌ಗೆ ತಲುಪಿತು. ಅವರು ತಿಂಡಿಗಳನ್ನು ಚಪ್ಪರಿಸಿಕೊಂಡು ತಿಂದರು. ತಿಂದನಂತರ ಅವರು ವೇಟರನ್ನು 'ಸಾಕು' ಅಂತ ಸಂಕೇತ ಮಾಡಿದರು. ಆವಾಗ ವೇಟರ್ ಬಂದು ನಿತ್ತಿಯವರಿಗೆ ಒಂದು ಬಿಳಿ ಚೀಟಿಯನ್ನು ನೀಡಿದನು.
"ಇದು ಏನು?" ಎಂದು ನಿತ್ತಿ ಮುಗ್ಗರಾಗಿ 'ಬಿಲ್' ನೋಡುತ್ತ ಕೇಳಿದರು. "ಇದನ್ನು ಏಕೆ ತಂದಿದ್ದೀರಾ? ನಾನು ಇದನ್ನು 'ಆರ್ಡರ್' ಮಾಡಿಲ್ಲವಲ್ಲ !"
/ಇದೇ ರೀತಿಯಲ್ಲಿ ನಮ್ಮ ವಿಪರೀತವಾದ ಜೀವನ ನಡತೆಯಿಂದ ನಾವು ನೋವು ಮತ್ತು ರೋಗವನ್ನು ಆಮಂತ್ರಿಸುತ್ತೇವೆ - ಅನಂತರ ಅದನ್ನು ಮರೆದು ಅವುಗಳ ನಮ್ಮ ಬಾಗಿಲು ಅತಿಥಿಗಳಾಗಿ ಬಂದಾಗ ನಾವು ಗೋಳಾಡುತ್ತೇವೆ !/
/ ಮಿಂಚಿನ ಒಂದು ಬೆಳಕು /
ಇಬ್ಬರು - ಒಬ್ಬ ಜ್ಞಾನಿ, ಇನ್ನೊಬ್ಬ ಒಂದು ಗರ್ವಿಷ್ಠ ಜಮೀನುದಾರ, ಒಂದು ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದರು. ರಾತ್ರಿ ಆಗಿತ್ತು ಮತ್ತು ಎಲ್ಲ ಕಡೆ ಅಂಧಕಾರ ಹರಡಿತು.
ಇದ್ದಕ್ಕಿದಂತೆ ಆಕಾಶದಲ್ಲಿ ಭಕ್ಕನೆ ಮಿಂಚು ಮಿಂಚಿತು.
ಜಮೀನುದಾರನು ಮುಂಬರುವ ಬಿರುಗಾಳಿಯನ್ನು ನೆನೆದು ನಡುಗಲು ಆರಂಭಿಸಿದ. ತಕ್ಷಣವೇ ಅವನ ಮನಸ್ಸಿನಲ್ಲಿ ಗೊಂದಲ ಉಂಟಾಯಿತು. ಅವನು ಮುಂದೆ ನಡೆದು ಹೋಗಬೇಕೇ ? ಅಥವಾ ಬಿರುಗಾಳಿ ನಿಲ್ಲುವವರೆಗೆ ಒಂದು ಸುರಕ್ಷಿತ ಸ್ಥಳದಲ್ಲಿ ನಿಲ್ಲಬೇಕೇ? ಈ ಪ್ರಯಾಣವನ್ನು ಆರಂಭಿಸಲೇಬಾರದಾಗಿತ್ತು ಎಂದು ಅವನು ಛೀಮಾರಿ ಹಾಕಿಸಿಕೊಂಡ. ಅವನು ಅತಿ ಮೂರ್ಖ ಮತ್ತು ದುರ್ಭಾಗ್ಯಶಾಲಿ ಎಂದು ತನ್ನ ತಾನೆ ನಿಂದಿಸಿಕೊಂಡ.
ಇದಕ್ಕೆ ವಿರುದ್ಧವಾಗಿ, ಜ್ಞಾನಿಯು ಆ ಕ್ಷಣವನ್ನು, ಮುಂದಿನ ರಸ್ತೆಯನ್ನು ಚೆನ್ನಾಗಿ ಗಮನಿಸಲು ಉಪಯೋಗ ಮಾಡಿಕೊಂಡು. ತಾನು ಸರಿಯಾದ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ನಿಶ್ಚಯ ಪಡಿಸಿ, ಮಿಂಚನ್ನು ಅದನ್ನು ನೀಡಿದ ಸಹಾಯಕ್ಕೆ ಅಭಿನಂದಿಸಿ ಮುಂದಕ್ಕೆ ನಡೆದ.
/ ನೋವು ಈ ಮಿಂಚಿನ ಸಮಾನ! ಈ ನೋವನ್ನು, ನೀವು ನಿಮ್ಮ ಪ್ರಶ್ನೆಗಳಿಗೆ ಉತ್ತರ ಶಕ್ತಿ, ಬುದ್ಧಿವಂತಿಕೆ ಇಂದ ಉಪಯೋಗಿಸಿಕೊಳ್ಳುತ್ತೀರೋ ಅಥವಾ ನೋವು ನಿಮ್ಮನ್ನು ಉಪಯೋಗ ಮಾಡಿಕೊಳ್ಳಲು ಬಿಡುತ್ತೀರೋ, ಇದು ನಿಮ್ಮ ಕೈಯಲ್ಲಿ ಇದ! /
/ 'ಡ್ರೈವರ್' ಯಾರು? /
ಒಮ್ಮೆ ನಿತ್ತಿ ಮೊದಲಿಯಾರರು. ಒಂದು 'ಕಾರು' ಕೊಂಡುಕೊಂಡು ಮೊದಲನೆಯ ಸವಾರಿ ಮಾಡಲು ಹೊರಟರು. ಊರಲ್ಲೆ ಸವಾರಿ ಮಾಡುತ್ತಿದ್ದಾಗ ಜನಗಳು ಅವರನ್ನು ಮೆಚ್ಚಿ ಕೆಯಿಂದ ನೋಡುತ್ತಾ ನಿಂತರು. ಆದರೆ ನಿಜ ಏನು ಅಂದರೆ ನಿತ್ತಿ ಬಹಳ ಗಾಬರಿಯ ಸ್ಥಿತಿಯಲ್ಲಿದ್ದರು.
ಅದು ಏಕೆ ಅಂದರೆ, ಅವರು ಕಾರನ್ನು 'ಸ್ಟಾರ್ಟ್' ಮಾಡಿದ ಕೂಡಲೆ ಭಕ್ತನೆ ಒಂದು ವಿಷಯ ಹೊಳೆಯಿತು - ಆವಯ ಕಾರನ್ನು ನಿಲ್ಲಿಸುವ ವಿಧಾನ ಒಂದು ಬಿಟ್ಟು, ಬೇರೆ ವಿಲ್ಲೆ ವಿಷಯ/ಗಳನ್ನು ತಿಳಿದಿರಲಿಲ್ಲ!
ಆದರೆ ಅಧ್ಯಾತ್ಮವಶಾತ್, ಕಾರು ಒಂದು ಮರಕ್ಕೆ ಮಾತ್ರ ಡಿಕ್ಕಿ ಹೊಡೆದು ನಿಂತಿತು! ಹಾದು ಹೋಗುವ ಒಬ್ಬ ವ್ಯಕ್ತಿ ಆಶ್ಚರ್ಯದಿಂದ ನಿತ್ತಿಯನ್ನು ವಿಚಾರಿಸಿದ, "ನಿಮಗೆ ಏನು 'ಪ್ರಾಬ್ಲೆಮ್'? ಡ್ರೈವ್ ಮಾಡುವುದಕ್ಕೆ ಬರುವದಿಲ್ಲವಾ?"
"ಖಂಡಿತ ಬರದೆ" ಎಂದು ನಿತ್ತಿ ಕೋಪದಿಂದ ಕೂಗಿದರು. "ನನಗೆ ಕೇವಲ ನಿಲ್ಲಿಸುವುದಕ್ಕೆ ಬರೋದಿಲ್ಲ!"
/ ಹಾಗಾದರೆ ನೀವು ಏನು ಹೇಳುತ್ತೀರಾ ? ನಿತ್ತಿ ಕಾರನ್ನು ಓಡಿಸುತ್ತಿದ್ದರೋ ಅಥವಾ ಕಾರು ನಿತ್ತಿಯನ್ನು ಓಡಿಸುತ್ತಿತ್ತೋ? ನೀವು ನಿತ್ತಿಯನ್ನು ತಪ್ಸ್ವಗಾರ ಎಂದು ತೀರ್ಮಾನ ಮಾಡುವುದಕ್ಕೆ ಮುಂಚೆ ಯೋಚನೆ ಮಾಡಿ ನೋಡಿ - ನೀವು ಕೂಡ, ನಿಲ್ಲಿಸುವ ವಿಧಾನ ಗೊತ್ತಿಲದೆ ಇರುವ ಒಂದು ವಾಹನವನ್ನು ಓಡಿಸುತ್ತಿದ್ದೀರಾ - ನಿಮ್ಮ ಮನಸ್ಸು!
ನಿಮ್ಮ ಒಳಗಿನ 'ಹಾರ್ಟೆ'ಯನ್ನು ಒಂದು ಕ್ಷಣಕ್ಕಾದರೂ ನಿಲ್ಲಿಸಲು ನೋಡಿ. ಸಾಧ್ಯವೇ? ಪ್ರಯತ್ನ ಮಾಡಿದರೂ ನಿಮ್ಮ ಯೋಚನೆಗಳ ಪ್ರವಾಹವನ್ನು ಕಂಟ್ರೋಲ್ ಮಾಡುವುದು ಕಷ್ಟವಲ್ಲವೆ ? ಅದು ಹೇಗೆ ಅಂದರೆ ನಿಮ್ಮನ್ನು ಒಂದು ಸಿಟಾಬ್ಲೆವ್ ಇಂದ ಕಟ್ಟಿ ಹಾಕಿ ಕಾರು ತಾನೆ ಇಷ್ಟ ಬಂದ ದಿಕ್ಕಿನಲ್ಲಿ ಓಡುತ್ತಾ ಯಿರುವ ಹಾಗೆ !
ಶಾರೀರಿಕ ಆಪತ್ತ್ರಿನಲ್ಲಾದರೆ ನಾವು ನಮ್ಮೆ ಈ ಒಂದನ್ನು ಜೀವನನ್ನು ಮಾತ್ರ ಕಳೆದುಕೊಳ್ಳಬಹುದು - ಆದರೆ ನಾವು ನಮ್ಮ ಒಳಗಿನ ಹಾರ್ಟೆಗು ಗುಲಾಮಿಗಳಾದರೆ ನಾವು ಜನ್ಮ ಜನ್ಮಾಂತರ ನಮ್ಮ ಮನಸ್ಸು ರೂಪಿ ವಾಹನದ ಹಾದಲ್ಲಿ ಇಂಬೇಕಾಗುತ್ತದೆ.
ಆದಕ್ಕೆ, ನೀವು ಪ್ರಪಂಚದ ಸಂಚಾರಕ್ಕೆ ಖಂಡಿತ ನಿಮ್ಮ ಮನಸ್ಸನ್ನು ಉಪಯೋಗಿಸಿಕೊಳ್ಳಿ ಆದರೆ - 'ಯಾರು ಡ್ರೈವರ್' ಎಂದು ಖಂಡಿತ ಮಾಡಿಕೊಳ್ಳಿ !/
/ ಹಾರುವುದನ್ನು ಕಲಿಯುವುದು /
ಇದು ಒಂದು ಆಧುನಿಕ ಕಟ್ಟುಕಥೆ! ಮೊದಲನೆಯ ವಿಶ್ವಯುದ್ಧನಾದ ನಂತರ ಏಪ್ರಿಕ್ಕಿಯಾದ ಒಂದು ಆದಿವಾಸಿಯರ ವಾಸ್ತಿಯಲ್ಲಿ ಒಂದು ಬೈಪ್ಲೇನನ್ನು (ದ್ವಿಫಲಕ ವಿಮಾನ) ತ್ಯಜಿಸಲಾಗಿತ್ತು. ಯಾವುದೇ ವಿಮಾನ ಯಂತ್ರವನ್ನು ಎಂದಿಗೂ ನೋಡದೇ ಇದ್ದ, ಅದರ ಚಕ್ರಗಳನ್ನು ನೋಡಿ, ಆದಿವಾಸಿಯರು ಅದು ಒಂದು ವಿಚಿತ್ರವಾದ ಎತ್ತಿನ ಗಾಡಿ ಎಂದು ಊಹಿಸಿದರು. ಈ ಹೊಸ ತರಹದ ಎತ್ತಿನ ಗಾಡಿಯ ವಿಷಯ ಹಳ್ಳಿಯೆಲ್ಲೆ ಹರಡಿತು. ಬೈಪ್ಲೇನನ್ನು ಎತ್ತುಗಳಿಗೆ ಕಟ್ಟಿ ಅದನ್ನು ಬಹಳ ಹೆಮ್ಮೆಯಿಂದ ವಾಸ್ತಿಯಲ್ಲಿ ಸುತ್ತಿಸಿದರು. ಹಳ್ಳಿಯ ಜನರು ಈ ದೃಶ್ಯವನ್ನು ಬಹಳ ಮೆಚ್ಚುಗೆಯಿಂದ ನೋಡಿದರು.
ಕೆಲವು ದಿನಗಳಂತರ ನಗರಕ್ಕೆ ಭೇಟಿ ಕೊಟ್ಟಿದ್ದ ವಾಸತಿಯ ಒಬ್ಬ ಯುವಕ ವಾಪಸ್ಸು ಬಂದ. ಬಹಳ ಚತುರನಾದ ಈ ಯುವಕನು ಬೈಪ್ಲೇನಿನಲ್ಲಿರುವ ಚಿಲಕಗಳು ಮತ್ತು ವತ್ತುಗುಂಡಿಗಳನ್ನು ಕಂಡು ಇವುಗಳದ್ದು ಖಂಡಿತ ಏನೋ ಉಪಯೋಗ ಇದೆ ಎಂದು ತೀರ್ಮಾನಿಸಿದ. ಏನೂ ಗೊತ್ತುಗುರಿ ಇಲ್ಲದೆ ಅವನು ಅವುಗಳನ್ನು ಹೀಗೆ ಹಾಗೆ ವತ್ತಿ, ಅಲಾಗಾಡಿಸಿ ನೋಡಿದಾಗ ಬೈಪ್ಲೇನಿನ ಚಕ್ರಗಳು ತಿರುಗಿ ಅದು ನೆಲದ ಮೇಲೆ ಸುತ್ತಲು ಶುರುವಾಯಿತು. ಇದನ್ನು ನೋಡಿ ಆದಿವಾಸಿಯರು ಬಹಳ ಆಶ್ಚರ್ಯ ಪಟ್ಟರು - ಎತ್ತಿನಗಾಡಿ ತಾನಾಗಿ ತಾನೇ ಓಡಾಡುತ್ತಾಯಿದೆ ! ದೂರದಲ್ಲಿರುವ ಹಳ್ಳಿಗಳಲ್ಲಿ ಟ್ರಾಕ್ಟರುಗಳನ್ನು ನೋಡಿದ್ದ ಯುವಕನು ಇದು ಎತ್ತಿನ ಗಾಡಿ ಅಲ್ಲ, ಹೊರತು ಇದು ಒಂದು ಟ್ರಾಕ್ಟರ್ ಎಂದು ಪ್ರತಿಜ್ಞೆ ಮಾಡಿದ! ಅರಿವಿಲ್ಲದ ಆದಿವಾಸಿಗಳು ಈ ಮಾತನ್ನು ಒಪ್ಪಿಕೊಂಡರು ಮತ್ತು ಬೈಪ್ಲೇನನ್ನು ಒಂದು ಟ್ರಾಕ್ಟರ್ ಮಾಡುವ ಕೆಲಸಕ್ಕೆ ಬಳಸಲು ಆರಂಭಿಸಿದರು. (ಬಹಳ ಅನಾನುಕೂಲದ ಟ್ರಾಕ್ಟರ್ ಆಗಿರಬಹುದು!)
ಬಹಳ ದಿನಗಳು ಕಳೆದ ಮೇಲೆ ಒಬ್ಬ ಸೈನಿಕನು ಅಕಸ್ಮಾತ್ತಾಗಿ ಈ ವಸತಿಗೆ ತಲುಪಿದ. ಯುದ್ಧಾನುಭವಿಯಾಗಿದ್ದ ಈ ವ್ಯಕ್ತಿಯು ಬೈಪ್ಲೇನಿನ 'ಇಂಜಿನ್'ನ್ನು ವೇಗವಾಗಿ ಓಡಿಸಿ, 'ಗೇರ್'ಗಳನ್ನು ಜಲಸಿ ಅದನ್ನು ಆಕಾಶಕ್ಕೆ ಹಾರಿಸಿಕೊಂಡು ಹೋದ - ಹೀಗೆ ಮಾಡಿ, ಅದನು ಬೈಪ್ಲೇನನ್ನು ನಿರ್ಮಿಸಿದ ಉದ್ದೇಶವನ್ನು ಪೂರ್ಣ ಮಾಡಿದ.
/ಇದೇ ನಿಮ್ಮ ಜೀವನದ ಕಥೆ. ನಮ್ಮಲ್ಲಿ ಹೆಚ್ಛಿನವರು ನಮ್ಮ ಜೀವನವನ್ನೂ, ನಮ್ಮ ಸಾಮರ್ಥ್ಯವನ್ನೂ ಒಂದು ಎತ್ತಿನಗಾಡಿಯಂತೆ ಬಳಸುತ್ತೇವೆ. ಕೆಲವರು ಅದನ್ನು ಟ್ರಾಕ್ಟರಿನ ಸಮಾನ ಉಪಯೋಗಿಸುತ್ತಾರೆ. ಆದರೆ ನಮ್ಮಲ್ಲಿ ಎಷ್ಟು ಜನ ತಮ್ಮ ನಾಮಧೇಯವನ್ನು ಒಂದು ವಿಮಾನಯಂತ್ರಕ್ಕೆ ಪರಿವರ್ತಿಸಬಲ್ಲವರು? ಹಾಯುವ ಶಕ್ತಿ ನಮ್ಮ ಒಳಗೆ ಇದೆ ಆದರೆ 'ಗೇರ್'ಗಳನ್ನು ನಡೆಸುವುದಕ್ಕೆ ಕಲಿಯುವವರಿಗೆ, ಈ ಶಕ್ತಿ ಆಪರೇಟಿವಾಗಿ ನಿಮ್ಮ ಒಳಗೆ ಆಡಿಕೊಳ್ಳೇ ಇರುವುದು. ಈ 'ಗೇರ್'ಗಳೇ ನಿಮ್ಮನ್ನು ಬಹಳ ತ್ವರಿತ ಸ್ತಂದಿಂದ ಬಹಳ ಎತ್ತರವಾದ ಸ್ತರಕ್ಕೆ ಏರಿಸುವ, ನಾನು ಕಲಸಿಕೊಡುವ 'ಮಡಿಟೇಷನ್' ಪದ್ಧತಿಗಳು. ನೀವು ಬಲಸಿದ ಪದ್ಧತಿ ಯಾವುದೇ ಆಗಿದ್ದರು. ಚಿಂತೆ ಇಲ್ಲ, ಇದು ನಿಮ್ಮಲ್ಲಿ ಮೇಲಕ್ಕೆ ಹಾರುವ ಸಾಧ್ಯತೆ ಇರುತ್ತದೆ. /
/ ಕುರುಡ ಮತ್ತು ಖುಷಿ /
ಒಬ್ಬ ಕುರುಡನು ಹಿಮಾಲಯದ ಬುಡದಲ್ಲಿ ಒಂದು ಚಿಕ್ಕ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದ. ಒಂದು ದಿನ ಅವನು ತನ್ನ ಮನೆಯಿಂದ ಪಕ್ಕದ ಹಳ್ಳಿಗೆ ಹೊರಟನು. ಅವನಿಗೆ ದಾರಿ ಚೆನ್ನಾಗಿ ಅಭ್ಯಾಸವಿತ್ತು - ಆದರೆ ಹಿಂದಿನ ರಾತ್ರಿ ಭಾರಿ ಹಿಮ ಬಿದ್ದದ್ದರಿಂದ ರಸ್ತೆಯ ವದ್ದೆ ಆಗಿ ಜಾರುತಿತ್ತು.
ಹೀಗೆ ನಡೆಯುತ್ತಿರುವಾಗ 'ಇದ್ದಕ್ಕಿದಂತೆ, ರಸ್ತೆಯಲ್ಲಿ ಬಿದ್ದಿರುವ ಯಾವುದೋ ವಸ್ತು ಅಡ್ಡಿ ಬಂದು ಅವನು ಎಡವಿಬಿದ್ದ. ಆ ವಸ್ತುವನ್ನು ಅವನು ಎತ್ತಿ ಸ್ಪರ್ಶಿಸಿದಾಗ ಅವನಿಗೆ ಅದು ಒಂದು ಕೋಲಿನ ಆಕಾರದಲ್ಲಿದೆ ಎಂದು ಅನಿಸಿತು. ಈ ಕೋಲನ್ನು ಅವನು ಮುಂದೆ ನಡೆಯುವುದಕ್ಕೆ ಆಧಾರವಾಗಲು ಬಳಸಬಹುದೆಂದು ಅವನಿಗೆ ಸಂತೋಷವಾಯಿತು.
ಹೀಗೆ ಪ್ರಯಾಣ ಮಾಡುತ್ತಿದ್ದಾಗ ಅವನು ಒಂದು ಮರದ ಹತ್ತಿರ ಬಂದ - ಆ ಮರದ ಕೆಳಗೆ ಒಬ್ಬ ಋಷಿ ಕುತಿದ್ದರು. ಅವರು ಕುರುಡನನ್ನು ನೋಡಿ ಎಚ್ಚರಿಕೆಯಿಂದ ಒಂದು ಕಲ್ಲನ್ನು ಎತ್ತಿಕೊಂಡರು 'ಹುಷಾರಾಗಿರಿ! ನೀವು ಕೈಯಲ್ಲಿ ಹಿಡಿದಿರುವುದು ಒಂದ ಗಡ್ಡೆ ಗಟ್ಟಿಯಾದ ಹಾವು!'
ಕುರುಡನು ಆಶ್ಚರ್ಯದಿಂದ ಹೇಳಿದ 'ಹಾವು? ಇಲ್ಲ. ಇದು ನನಗೆ ಬಹಳ ಉಪಯೋಗವಾದ ಒಂದ ಆಧಾರ!'
'ಇಲ್ಲ ಇಲ್ಲ, ಅದು ಒಂದು ಹಾವು! ಅದನ್ನು ಬಿಟ್ಟುಬಿಡಿ! ನಿನಗೆ ಅದು ವಿಷಯುಕ್ತ ಅಂತ ಗೊತ್ತಿಲ್ಲ. ಅದು ನಿನ್ನನ್ನು ಯಾವಾಗಂದರೇ ಆಗ ಸಾಯಿಸಬಹುದು' ಎಂದು ಋಷಿಗಳು ಒದರಿಕೊಂಡರು.
ಆಗ ಕುರುಡನಿಗೆ ಅನುಮಾನ ಉಂಟಾಯಿತು. 'ನೀವು ನನ್ನ ಬಗ್ಗೆ ಏಕೆ ಅಷ್ಟೊಂದು ಚಿಂತಿಸುತ್ತೀರಾ?' ಎಂದು ಕೋಪದಿಂದ ಕೇಳಿದ. ಪನೋ ಕಾರಣ ಇರಬೇಕು. ಆಹಾ! ಈಗ ಗೊತ್ತಾಯಿತು! ದುಷ್ಟನೇ! ಈ ಕೋಲನ್ನು ನಿನಿಂದ ಕಿತ್ತುಕೊಳ್ಳಲು ಬಯಸುತ್ತಿದ್ದೀರಾ? ನಿಮಗೆ ಬೇಕೇ ಬೇಕು ಎಂದಿಸಿದರೆ, ಬೇರೊಂದು ಕೋಲನ್ನು ಹುಡುಕಿಕೊಡಿ ಏಕೆಂದರೆ ಈ ಕೋಲನ್ನು ನಾನು ಏನಾದರೂ ಕೊಡುವದಿಲ್ಲ.'
ಋಷಿಯರು ಬಳಲಿಕೆಯಿಂದ ಹೇಳಿದರು 'ನಾನು ನೋಡಬಲ್ಲನಾಗಿರುವುದರಿಂದ, ನಿನ್ನ ಕೋಲಿನಿಂದ ನನಗೆ ಎನೂ ಉಪಯೋಗವಿಲ್ಲ. ನೀನು ಹಿಡಿದಿರುವುದು ಒಂದು ಹಾವು ಎಂದು ನಿನಗೆ ಗೊತ್ತಾಗಲಿ ಎಂದು ತಿಳಿಸಲು ಪ್ರಯತ್ನಿಸುತ್ತಿದ್ದೇನೆ. ಅಯ್ಯಾ.'
ಆದರೆ ಕುರುಡನು ಋಷಿಯ ಮಾತಿಗೆ ಬೆಲೆ ಕೊಡಲು ಸಿದ್ಧನಿರಲಿಲ್ಲ. ಋಷಿಯು ತನ್ನನ್ನು ಮೂರ್ಖನನ್ನಾಗಿ ಮಾಡಲಿಲ್ಲ, ಎಂದು ಜಂಭ ಪಡುತ್ತ ಕೋಲನ್ನು ಊರುತ್ತಾ ಅವನು ಮುಂದಕ್ಕೆ ನಡೆದ.
ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲು ಹೆಚ್ಚಾಯಿತು - ಮತ್ತು ಹಿಮವು ಕರಗಲು ಶುರುವಾಯಿತು. ಕುರುಡನ ಕೈಯಲ್ಲಿದ್ದ ಕೋಲು ಚಲಿಸಲು ಪ್ರಾರಂಭವಾಯಿತು!
ಕುರಡನಿಗೆ ಗೊಂದಲವಂಟಾಯಿತು. ಖುಷಿ ಹೇಳಿದ್ದು ಸರಿ ಇರಬಹುದೆ? ಆ ಕೋಲನ್ನು ಎಸಿಡುಬಿಡಬೇಕೆ? ಆದರೂ ಸಹ ಅವನು ಆನಮಾನಿಸಿದ. ಎಷ್ಟು ಒಳ್ಳೇ ಕೋಲು .... ಅವನು ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಆ 'ಕೋಲು' ತನ್ನ ವಿಷದ ಹಲ್ಲುಗಳನ್ನು ಅವನ ಕೈಗೆ ಉರಿಸಿತು ಮತ್ತು ಆ ಕ್ಷಣವೇ ಅವನನ್ನು ಕೊಂದು ಹಾಕಿತು.
ನೀವು ಒಬ್ಬ ಗುರುವನ್ನು ಹುಡುಕಿಕೊಂಡು ಹೊರಟಾಗ ನಿಮ್ಮನ್ನು ನೀವು ಸರಿಯಾಗಿ ಪರೀಕ್ಷಿಸಿಕೊಳ್ಳಿ. ನಿಮ್ಮ ಹೊರತಿಯವ ಕೋಲು ಯಾವುದು? ಹಣವೇ? ಅಧಿಕಾರವೇ? ಉದ್ಧಿಯೇ ? ಅಭಿಪ್ರಾಯಗಳೇ ?
ಗುರಿಗಳಿಗೆ ಇದಾವುದರ ಆಶ್ರಯ ಕಡೆಯೂ ಇಲ್ಲ. ಇವುಗಳೆಲ್ಲ ವಿಷಯಿಕ ಹಾವುಗಳು ಎಂದು ಅವರು ನಿಮ್ಮನ್ನು ಎಚ್ಚರಿಸುತ್ತಾರೆ.
ಆ 'ಕೋಲನ್ನು' ನೀವು ಗಟ್ಟಿಯಾಗಿ ಹಿಡಿದುಕೊಂಡೇ ಇರುತ್ತೀರೋ? ಅಥವಾ ಅದನ್ನು ಬಿಸಾಡಲು ನಿರ್ಧರಿಸುತ್ತೀರೋ, ಅದು ನಿಮ್ಮ ಆದ್ಯತೆಯನ್ನು ನಿರ್ಧರಿಸುತ್ತದೆ.
/ ಜೋರಾಗಿ ನಿದ್ರಿಸುತ್ತಿದ್ದ ಕುರಿ - ಸಿಂಹ /
ಒಮ್ಮೆ ಒಂದು ಕಾಡಿನಲ್ಲಿ ಒಂದು ಹೆಣ್ಣು ಸಿಂಹವು ಒಂದು ಮರಿಗೆ ಜನ್ಮ ಕೊಟ್ಟು ಸ್ವಲ್ಪ ಹೊತ್ತಿಗೆ ಪ್ರಾಣ ಬಿಟ್ಟಿತು. ಪಕ್ಕದಲ್ಲಿ ಬೆಟ್ಟದ ಹತ್ತಿರ ಹುಲ್ಲು ಮೇಯುತ್ತಿದ್ದ ಒಂದು ಕುರಿಹಿಂಡು ಈ ಸಿಂಹದ ಎಳೆಯ ಮರಿಯನ್ನು ಕಂಡಿತು. ದುರ್ಬಲ ಮತ್ತು ಹೊಕ್ಕು ಹಸಿದ ಸಿಂಹದ ಮರಿಯನ್ನು ಕುರಿಗಳು ನೋಡಿದಾಗ ಅವರೊಳಗೆ ಸಹಾನಭೂತಿ ಉಂಟಾಯಿತು. ಅದನ್ನು ಅವರು ಗುಂಪಿನಲ್ಲಿ ಸಾಕರಿಸಿ, ಉಹಹ ಮಮತೆಯಿಂದ ಆರೈಕೆ ಮಾಡಿದವು. ಸದಾಕಾಲ ಕುರಿಗಳ ಜೊತೆಯಲ್ಲಿದ್ದ ಸಿಂಹದ ಮರಿಯು ಹುಲ್ಲನ್ನು ಮೇಯುವುದು, ಬ್ಯಾ ಬ್ಯಾ ಅನ್ನೋದು ಕಲಿತುಕೊಂಡಿತು. ಅಷ್ಟೇ ಅಲ್ಲ, ಸಿಂಹಗಳನ್ನೆ ನೋಡಿದರೆ ಅದಕ್ಕೆ ಕುರಿಗಳ ತರಹ ಹೆದರಿಕೆಯೂ ಉಂಟಾಗುತ್ತಾಯಿತು.
ಒಂದು ದಿನ ಇದ್ದಕ್ಕಿದ್ದ ಹಾಗೆ ಒಂದು ಸಿಂಹ ಕುರಿಹಿಂಡಿನ ಮೇಲೆ ಬಿದ್ದು ಆಕ್ರಮಣ ಮಾಡಿತು. ಹಿಂಡಿನಲ್ಲಿ ಕುರಿಗಳ ಸಮಾನ ಸದ್ದು ಮಾಡಿಕೊಂಡು ಓಡಿಹೋಗುತ್ತಿದ್ದ ಒಂದು ಸಿಂಹದ ಮರಿಯನ್ನು ನೋಡಿ ಅದು ಬೆರಗ್ಗಾಯಿತು! ಅದು ಕೂಡಲೆ ಸಿಂಹದ ಮರಿಯ ಕಡೆಗೆ ಓಡಿ ಅದನ್ನು ಎಳೆದುಕೊಂಡು ಹೋಯಿತು.
"ದಯಾ ಮಾಡಿ! ಈ ಬಡ ಕುರಿಯನ್ನು ಬಿಟ್ಟು ಬಿಡಿ !" ಎಂದು ಸಿಂಹದ ಮರಿಯು ಬೇಡಿಕೊಂಡಿತು.
ಆ ಕ್ಷಣದಲ್ಲಿಯೇ ಸಿಂಹನಿಗೆ ಒಂದು ಮಾತು ಭಕ್ಕನೆ ಹೊಳೆಯಿತು. ಮರಿಗೆ ತಾನು ನಿಜವಾಗಿಯೂ ಯಾರು ಎಂದು ತಿಳಿದಿಲ್ಲ ! ಅದರಲ್ಲಿ ವಿಶ್ವಾಸವನ್ನು ಹುಟ್ಟಿಸುವುದಕ್ಕೆ ಒಂದೇ ದಾರಿ ಇದೆ.
"ಚಿಂತಿಸಬೇಡ, ನಾನು ನಿನ್ನನ್ನು ತಿನ್ನುವುದಿಲ್ಲ, ನಿಜ ಏನೆಂದರೆ, ನಾನೂ ಒಂದು ಕುರಿಯೇ. ನೋಡಕ್ಕೆ ಸ್ವಲ್ಪ ಬೇರೆ ತರಹ ಕಾಣಿಸುತ್ತೇನೆ, ಅಷ್ಟೆ" ಎಂದು ಸಿಂಹವು ಮೃದುವಾಗಿ ಹೇಳಿತು. ಮರಿಯ ಮನಸ್ಸಿನಲ್ಲಿ ಇನ್ನೂ ಅನುಮಾನ ಇತ್ತು - ಅದಕ್ಕೆ ಸಿಂಹವು ತನ್ನ ಮಾತನ್ನು ನಿಜವೆಂದು ಸಾಧೀತು ಪಡಿಸಲು ಮರಿಯನ್ನ ಬಿಡುಗಡೆ ಮಾಡಿತು. ಆದರೆ ಪುನಃ ಮರುದಿನ ಬಂದು ಮರಿಯನ್ನ ಮತ್ತೊಮ್ಮೆ ಎಳೆದುಕೊಂಡು ಹೋಯಿತು. ಈ ಸಾರಿ ಮರಿಯ ಭಯ ಸ್ವಲ್ಪ ಕಡಿಮೆ ಆಗಿದ್ದರಿಂದ ಸಿಂಹದ ಜೊತೆಗೆ ಇನ್ನೂ ಸ್ವಲ್ಪ ಜಾಸ್ತಿ ಹೊತ್ತು ಕಳೆಯಿತು. ಪ್ರತಿದಿವಸವೂ ಈ ನಾಟಕವು ಮುಂದುವರೆಯಿತು ಮತ್ತು ಮೆಲ್ಲನೆ ಮರಿಯು ಸಿಂಹವನ್ನು ಮೆಚ್ಚಲು ಆರಂಭಿಸಿತು. ಸ್ವಂತ ಇಚ್ಛೆಯಿಂದ ತನ್ನನ್ನು ಹೂಸ, ಮನೋರಂಜಕವಾದ ಮಿತ್ರನನ್ನು ಭೇಟಿ ಮಾಡಲು ಹೊರಡುತ್ತಾಯಿತು. ಒಂದು ದಿನ ಸಿಂಹವು ಬಹಳ ಚತುರತೆಯಿಂದ ಮೆಲ್ಲನೆ ಕೇಳಿತು, "ನಾವು ಏಕೆ ಕಾಡಿನ ಒಳಭಾಗಕ್ಕೆ ಹೋಗಬಾರದು? ಅಲ್ಲಿರುವ ನದಿಯ ನೀರನ್ನು ಏಕೆ ನಾವು ಕುಡಿಯಬಾರದು?"
"ಬೇಡ ! ನನಗೆ ಕಾಡು ಪ್ರಾಣೆಗಳನ್ನು ಕಂಡರೆ ಬಹಳ ಭಯ ! ಎಂದು ಮರಿಯು ಗಾಬರಿಯಿಂದ ಚೀರಿತು. "ಅಯ್ಯೋ ಮೂರ್ಖ ! ನಿನ್ನನ್ನು ನೋಡಿದ ಕೂಡಲೆ ನನಗೆ ಭಯದಿಂದ ತಲೆ ಅಪ್ಪಳಿಸಿ ಓಡುತ್ತವೆ" ಎಂದು ಸಿಂಹವು ಯೋಚಿಸಿತು ಆದರೆ ಗಟ್ಟಿಯಾಗಿ ಹೇಳಿತು "ಚಿಂತಿಸಬೇಡ, ನಾನು ನಿನ್ನನ್ನು ಕಾಪಾಡುತ್ತೇನೆ "
ಹೀಗೆ ಮಾತನಾಡುತ್ತಾ ಇಬ್ಬರು ನದಿ ತಲುಪಿದರು. ಮರಿಯು ನೀರನ್ನು ಕುಡಿಯುವದಕ್ಕೆ ತಯಾರಾದಾಗ, ಸಿಂಹವು ಅದರ ತಲೆಯನ್ನು ನೂಕಿ ನೀರಿನ ಮೇಲೆ ಬಗ್ಗಿಸಿತು. ಹೀಗೆ ಮಾಡಿ ಸಿಂಹವು ಮರಿಗೆ ಅದರ ಜೀವನದ ಮೊದಲನೆ ಸಾರಿ ಅದರ ಪ್ರತಿಬಿಂಬವನ್ನು ತೋರಿಸಿತು.
"ಮೂರ್ಖನೇ ! ನೀನು ಯಾರು ಅಂತ ಈಗಲಾದರೂ ಗೊತ್ತಾಯಿತೇ? ನಾನು ನೀನು ಬೇರೆ ಅಲ್ಲ! ನಾವು ಸಿಂಹಗಳು, ಕಾಡಿನ ರಾಜರು!" ಎಂದು ಸಿಂಹ ಗರ್ಜಿಸಿತು. ಒಂದೇ ಕ್ಷಣದಲ್ಲಿ ಸಿಂಹದ ಮರಿಗೆ ತನ್ನ ನಿಜವಾದ ಸ್ವರೂಪ ಗೊತ್ತಾಯಿತು. ಸಿಂಹದ ಪ್ರಕಟಣೆ ಕೇಳಿದ ಮೇಲೆ ಅದರ ಮನಸ್ಸಿನಲ್ಲಿದ್ದ ಗೊಂದಲ, ಭಯ ಎಲ್ಲಾ ದೂರವಾಯಿತು. ಅದು ಬಹಳ ಹೆಮ್ಮೆಯಿಂದ ಸಿಂಹದ ಜೊತೆ ತನ್ನ ರಾಜ್ಯಕ್ಕೆ ಹೋಯಿತು.
/ಗुरु ನಿಮ್ಮ ಅಂತರಂಗವನ್ನು ನಿಮಗೆ ಪ್ರತಿಬಿಂಬಿಸುತ್ತಾನೆ. ನಿಮಗೆ ಇಷ್ಟ ಇರಲಿ, ಬಿಡಲಿ ನಿಮ್ಮ ನಿಜವಾದ ಸ್ವಭಾವವನ್ನು ತೋರಿಸುತ್ತಾನೆ. ನಿಮ್ಮೊಳಗಿನ ಅದ್ಭುತ ದೈವತ್ವವನ್ನು ಎದುರುಬದುರು ನಿಲ್ಲಿಸುತ್ತಾನೆ. ಇದನ್ನು ನರವೇರಿಸುವುದಕ್ಕೆ ಗುರು ಬಹಳ ರಹಸ್ಯ ಮಯವಾದ ರೀತಿಗಳಲ್ಲಿ ಕೆಲಸ ಮಾಡುತ್ತಾನೆ. ನೀವು ಸತ್ಯವನ್ನು ತಿಳಿದುಕೊಳ್ಳುವುದಕ್ಕೆ ಸಿದ್ದವಾಗಿರುವ ತನಕ ಗುರು ನಿಮ್ಮನ್ನು ನೂಕಬಹುದು, ನೋಯಿಸಬಹುದು, ಪುಸಲಾಯಿಸಬಹುದು, ಮೋಸವೂ ಮಾಡಬಹುದು! ನೀವು ತಯಾರಾಗಿದ್ದೀರಾ ?/
7./ ಕಳೆದು ಹೋಗಿದ್ದ ನಾಣ್ಯ /
ಒಂದು ದಿನ ನಿತ್ತಿ ಮೊದಲಿಯಾರರು ಅವರ ಮನೆಯ ಅಂಗಳದಲ್ಲಿ ಯಾವುದೋ ವಸ್ತುವನ್ನು ಬಹಳ ಆಸಕ್ತಿಯಿಂದ ಹುಡುಕುತ್ತಿರುವಂತೆ ಕಾಣಿಸಿದರು. ಅವರ ಹೆಂಡತಿಯು ಅವರನ್ನು ಅದರ ವಿಷಯ ವಿಚಾರಿಸಿದಾಗ ತಾವು ಒಂದು ನಾಣ್ಯವನ್ನು ಕೆಳಗೆ ಬೀಳಿಸಿ ಕೊಂಡಿರುವುದಾಗಿ, ಉತ್ತರಿಸಿದರು. ಹೆಂಡತಿಯೂ ಆವಾಗ ನಾಣ್ಯವನ್ನು ಹುಡುಕಲು ಸಹಾಯ ಮಾಡಿದಳು. ಸ್ವಲ್ಪ ಹೊತ್ತಿನಲ್ಲಿ ನೆರಹೊರೆಯಲ್ಲಿರುವ ಸುಮಾರು ಎಲ್ಲ ಜನರೂ ನಾಣ್ಯವನ್ನು ಹುಡುಕಲು ಆರಂಭಿಸಿದರು. ಅದರೂ ಏನು ಪ್ರಯೋಜನವಾಗಿಲ್ಲ !
"ನೀವು ನಾಣ್ಯವನ್ನು ಬೀಳಿಸಿದ ಸರಿಯಾದ ಸ್ಥಳ ಯಾವುದು ?" ಎಂದು ಭಕ್ತನೆ ಆ ಗುಂಪಿನಲ್ಲಿದ್ದ ಒಬ್ಬ ಯುವಕನು ನಿತ್ತಿಯನ್ನು ಕೇಳಿದ. "ಅರ್ಧ ಗಂಟೆ ಕಾಲ ಹುಡುಕಿದ ಮೇಲೆಯೂ ಏನೂ ಪರಿಣಾಮವಾಗಿಲ್ಲವಲ್ಲ !"
"ನಾನು ನಾಣ್ಯವನ್ನು ಮನೆಯ ಒಳಗೆ ಕಳೆದುಕೊಂಡೆ" ಎಂದು ನಿತ್ತಿ ಉತ್ತರಿಸಿದರು.
"ಹಾಗಾದರೆ ನಾವು ಇಲ್ಲಿ ಏಕೆ ಹುಡುಕುತ್ತಿದ್ದೇವೆ?" ಎಂದು ಗುಂಪಿನಲ್ಲಿದ್ದ ಒಬ್ಬ ಆಶ್ಚರ್ಯದಿಂದ ಕೇಳಿದ.
"ಅದೇನು ಸಮಸ್ಯೆ ಎಂದರೆ ನಮ್ಮ ಮನೆಯೊಳಗೆ ದೀಪ ಇಲ್ಲ. ಇಲ್ಲಾದರೆ ಬೀದಿಯ ದೀಪವು ಇದೆ. ಇದರ ಬೆಳಕಿನಲ್ಲಿ ನಾವು ನಾಣ್ಯವನ್ನು ಹುಡುಕಬಹುದು"
/ ನಿತ್ತಿಯನ್ನೂ ನೋಡಿ ನೀವು ನಗುವುದಕ್ಕೆ ಮುಂಚೆ ಒಂದು ಮಾತು ನೆನಪು ಇಟ್ಟುಕೊಳ್ಳಿ - ನಾವೆಲ್ಲರೂ ತಪ್ಪು ಜಾಗದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದರಿಂದ ಪ್ರವೀಣರಾಗಿದ್ದೇವೆ. ನಮ್ಮನ್ನು ನಾವು ಹಣದಲ್ಲ, ಪದವಿಯಲ್ಲ, ವಿಚಾರಗಳಲ್ಲ, ಸಂಬಂಧಗಳಲ್ಲಿ ಹುಡುಕುತ್ತೇವೆ - ಆದರೆ ನಮ್ಮ ಅಂತರಂಗದ ಕಡ ತಿರುಗಿ ಮರೆತುಬಿಡುತ್ತೇವೆ. ನಿಮ್ಮ ಕಳೆದುಹೋದ ನಾಣ್ಯವು ನಿಮ್ಮ ಮನೆಯಲ್ಲಿಯೇ ಇದೆ ಎಂದು ತಿಳಿಯಕೊಲ್ಲುವುದೇ ನಿಮ್ಮಲ್ಲಿ ಜಾಗೃತಿ ಉಂಟಾಗುವುದಕ್ಕೆ ಒಂದು ದಾರಿ. ಆವಾಗ ತಾನಾಗಿ ತಾನೇ ನೀವು ನಾಣ್ಯವನ್ನು ಮನೆಯ ಹೊರಗೆ ಹುಡುಕಲು ನಿಲ್ಲಿಸಿ ಬಿಡುವಿರಿ!
/ ನದಿಯನ್ನು ಹೇಗೆ ದಾಟುವುದು /
ಇದು ಒಂದು ಝೆನ್ ಭೌದ್ಧಧರ್ಮದ ಕಥೆ.
ಒಬ್ಬ ಗುರು ಮತ್ತು ಅವನ ಶಿಷ್ಯನು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. ಎರಡು ಹಳ್ಳಿಗಳ ನಡುವೆ, ಆಳವಿಲ್ಲದ ಒಂದು ಹೊಳೆ ಹರಿಯುತ್ತಿತ್ತು. ಸಾಮಾನ್ಯವಾಗಿ ನೀರಿನಲ್ಲಿ ನಡೆದು ಅವರು ಈ ಹೊಳೆಯನ್ನು ದಾಟುತ್ತಿದ್ದರು. ಆದರೆ ಈ ಸಾರಿ, ಭಾರಿ ಮಳೆ ಬಿದ್ದದ್ದರಿಂದ ಹೊಳೆಯು ಒಂದು ಚಿಕ್ಕ ನದಿಯಂತೆ ಕಾಣುತ್ತಿತ್ತು. ನೀಳ ಜಟಾಧಾರಿಯಾದ ಅವನಿಗೆ ನೀರಿನಲ್ಲಿ ನಡೆಯುವುದಕ್ಕೆ ಸಾಧ್ಯವಾಗಲಿಲ್ಲ.
ಶಿಷ್ಯನ ಮನಸ್ಸಿನಲ್ಲಿ ಗಾಬರಿಯು ಉಂಟಾಗಿ ಅವನು ಗುರುವನ್ನು ಕೇಳಿದ, "ಗುರುಗಳೇ, ಈ ನದಿಯನ್ನು ದಾಟುವುದಕ್ಕೆ ನಾವು ಪ್ರಯತ್ನ ಪಡಬೇಕೆ ?"
ಕಣ್ಣುಗಳು ವಿನೋದದಿಂದ ವಿಮುಗುತ್ತಾ ಗುರುಗಳು ಉತ್ತರ ಕೊಟ್ಟರು. "ಮಗನೇ ಖಂಡಿತ ನದಿಯನ್ನು ದಾಟಬೇಕು. ಆದರೆ ಒಂದು ಮಾತು ಜ್ಞಾಪಕ ಇಟ್ಟಿಕೋ. ನಿನ್ನ ಪಾದಗಳು ವದ್ದೆ ಆಗದಂತೆ ನೋಡಿಕೋ !"
ಇದೇ ಸನ್ಯಾಸತ್ವದ ನಿಜವಾದ ಅರ್ಥ
/ ಸಂ ಸಾರದ ನದಿಯನ್ನು ನಿಮಗೆ ಸಂಸಾರದಿಂದ ವದ್ದೆ ಮಾಡಿಕೊಳ್ಳದ ದಾಟುವುದಕ್ಕೆ ಸಾಧ್ಯವಾದರೆ, ನೀವು ಸನ್ಯಾಸತ್ವವನ್ನು ಪಡಿದಿದ್ದೀರಾ ! /
/ ಕತ್ತೆಯಂತಿರಬೇಡ /
ದಕ್ಷಿಣ ಭಾರತದಲ್ಲಿ ಪ್ರಸಿದ್ಧ ದೇವಸ್ಥಾನಗಳಿರುವ ಹಲವಾರು ಊರುಗಳಿವೆ. ಅಂಥ ಒಂದು ಊರಿನಲ್ಲಿ ಒಂದು ದೇವಸ್ಥಾನದ ಹೊರಗೆ ಒಂದು ಕತ್ತೆಯು ಆರಾಮಕರ ಜೀವನ ಜೀವಿಸುತ್ತಿತ್ತು. ದೇವರ ದರ್ಶನಕ್ಕೆ ಬಂದ ಜನರೆಲ್ಲಾ ಸಾಮಾನ್ಯವಾಗಿ ಕತ್ತೆಗೆ ತಿನ್ನಲು ಚೂರು ಪಾರು ತಿಂಡಿಗಳನ್ನು ಕೊಡುತ್ತಿದ್ದರು. ಇದಲ್ಲದೆ ದೇವಸ್ಥಾನದಲ್ಲಿ ನಿತ್ಯ ದಾನಮಾಡಿದ ಭೋಜನದ ಮಿಕ್ಕಿದ್ದನ್ನು ತಿನ್ನುವ ಹಕ್ಕು ಅದಕ್ಕೆ ಇತ್ತು.
ಆ ದೇವಸ್ಥಾನದಲ್ಲಿ ನಿತ್ಯವೂ ದೇವತೆಯ ಜೊತೆಯಲ್ಲಿ ದಿನವೂ ಊರಿನಲ್ಲಿ ಪ್ರತಿವರ್ಷ ಒಳ್ಳೆ ವೈಭವದಿಂದ ಆಚರಿಸಲಾಗುತ್ತಿತ್ತು. ಆ ದಿನ ದೇವತೆಯ ಪ್ರತಿಮೆಯನ್ನು ಊರಿನಲ್ಲೆಲ್ಲ ಮೆರವಣಿಗೆ ಮಾಡುವ ಪದ್ಧತಿ ಇತ್ತು. ಊರಿನ ಜನರೆಲ್ಲಾ ಪ್ರತಿಮೆಗೆ ಭಕ್ತಿಯಿಂದ ನಮಸ್ಕರಿಸುತ್ತಿದ್ದರು. ಒಂದು ವರ್ಷ ಊರಿನ ಪ್ರಜೆಗಳು ದೇವತೆಯ ಪ್ರತಿಮೆಯನ್ನು ಹೊರಲು ಕತ್ತೆಯನ್ನು ಆಯ್ಕೆ ಮಾಡಿದರು. ಸಂದರ್ಭಕ್ಕೆ ತಕ್ಕಂತೆ ಕತ್ತೆಯನ್ನು ಸ್ವಾನ ಮಾಡಿಸಿ, ಒಳ್ಳೆ ರೇಷ್ಮೆ ಬಟ್ಟೆಗಳನ್ನು ಧರಿಸಿ ತಯಾರು ಮಾಡಿದರು. ಮೆರವಣಿಗೆಯು ಊರನ್ನು ಸುತ್ತುತ್ತಿದ್ದಾಗ ಜನಗಳು ಅದರ ಮುಂದೆ ನಿಂತು ನಮಸ್ಕರಿಸಿ, ಪೂಜೆ ಮಾಡಿ, ಆರತಿ ಎತ್ತಿ ಮತ್ತು ಸಿಹಿ ತಿಂಡಿಗಳನ್ನು ನೀಡುವುದನ್ನು ನೋಡಿ ಕತ್ತೆಗೆ ಬಹಳ ಆಶ್ಚರ್ಯವಾಯಿತು.
ಕತ್ತೆಗೆ ಸಂದರ್ಭವೇನು ಎಂದು ಸ್ವಲ್ಪ ಕೂಡ ತಿಳುವಳಿಕೆ ಇರಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಅದಕ್ಕೆ ತಾನು ಒಂದೇ ದಿನದಲ್ಲಿ ಮಹಾತ್ಮನಾಗಿದ್ದೇನೆ ಎಂದು ವಿಶ್ವಾಸ ಆಯಿತು.
ಒಂದು ವೇಳೕ ನಾನು ದೊಡ್ಡ ಜ್ಞಾನಿ ಆಗಿರಬಹುದು ಎಂದು ಯೋಚಿಸಿತು. ಈ ರೀತಿ ಯೋಚಿಸುತ್ತಾ ಅದನ್ನು ಬಹಳ ಹೆಮ್ಮೆಯಿಂದ ನಡೆಯಲು ಆರಂಭಿಸಿತು. ಬೀದಿಯಲ್ಲಿ ರುವ ಪ್ರಾಣಿಗಳೆಲ್ಲ ದುರಹಂಕಾರದ ಭಾವನೆಯಿಂದ ನೋಡಿತು. ಸಂಜೆಯಾಗುತ್ತಿದ್ದಂತೆ ಕತ್ತೆಗೆ ತನ್ನ ಬೆನ್ನು ಮೇಲೆ ಇದ್ದ ಹೊರೆಯಿಂದ ಸುಸ್ತು ಉಂಟಾಯಿತು. ಈ ಹೊರೆಯನ್ನು ಎತ್ತಿ ನಾನು ಏಕೆ ಒದ್ದಾಡಬೇಕು ? ಹೇಗಿದ್ದರೂ ನಾನು ಈಗ ಮಹಾತ್ಮನಾಗಿದ್ದೇನೆ ಯಾರಿಗೂ ಮರ್ಯಾದೆಯನ್ನು ತೋರಿಸುವ ಅವಶ್ಯಕತೆ ನನಗೆ ಇಲ್ಲ ! ಎಂದು ಯೋಚಿಸಿತು.
ಹೀಗೆ ಯೋಚಿಸಿ ಕತ್ತೆಯು ಮೇಲಕ್ಕೆ ಹಾರಿ ತನ್ನ ಬೆನ್ನು ಮೇಲಿದ್ದ ದೇವತೆಯ ಪ್ರತಿಮೆಯನ್ನು ಕೆಳಗೆ ಬೀಳಿಸಿತು. ಈ ದೃಶ್ಯವನ್ನು ಆಲಿಲ್ಲದ ಜನರೆಲ್ಲ ಭಯದಿಂದ ನೋಡಿದರು. ಇದರ ಮುಂದಕ್ಕೆ ಏನು ನಡೆಯುತ್ತು ಅಂತ ನೀವೇ ಕಲ್ಪನೆ ಮಾಡಬಹುದು - ನಾನು ಹೇಳಬೇಕಾಗಿಲ್ಲ !
ನೀವು ದೈವ ಶಕ್ತಿಯ ಒಂದು ಉಪಕಾರಣವೆಂದು ನಿಮ್ಮಲ್ಲಿ ಪ್ರತಿ ಕ್ಷಣ ಜಾಗೃತಿ ಇರಬೇಕು ನಿಮ್ಮ ಅಹಂಕಾರವನ್ನು ಎಂದೂ ಆಡಲು ಬಿಡಬೇಡಿ. ನಿಮ್ಮ ಅಹಂಕಾರವನ್ನು ತ್ಯಜಿಸಿದರೆ ವಿಶ್ವಶಕ್ತಿಯು ನಿಮ್ಮನ್ನು ಕಾಪಾಡುತ್ತದೆ. ಮಸಿ ಆಗಿದ್ದ ನಿಮ್ಮ ದೀಪವನ್ನು ಅರಿಶಿಟ್ಟು ಬತ್ತಿಯನ್ನು ತಯಾರಿಸಿ , ದೈವ ಶಕ್ತಿಯು ನಿಮ್ಮ ಮನಯಲ್ಲಿ ಹಂಡಲಿ !
/ ಚಿಂತೆ ಬದಲಾಯಿಸುವ ಬೇಡಿಕೆ /
ಒಂದು ದೇಶದ ರಾಜನಿಗೆ ತನ್ನ ಪ್ರಜೆಗಳು ಸಂತೋಷವಾಗಿಲ್ಲ ಎಂದು ಗಮನಕ್ಕೆ ಬಂತು. ಇದಕ್ಕೆ ಕಾರಣವೇನು ಎಂದು ಪ್ರತಿ ಒಬ್ಬರಿಗೂ ತಾವು ಅನುಭವಿಸುತ್ತಿರುವ ದುಃಖ ಚಿಂತೆಗಳು ಮಾತ್ರ ದೊಡ್ಡದ್ದು, ಅದರ ಮತ್ತೊಬ್ಬರ ತೊಂದರೆಗಳು ಬಹಳ ಸಣ್ಣ ಪುಟ್ಟದ್ದು ಅಂತ ಮನಸ್ಸಿಗೆ ಹಚ್ಚಿಕೊಂಡಿದ್ದರು.
ಈ ಸಮಸ್ಯೆಯನ್ನು ಪರಿಹರಿಸುವುದಕ್ಕ ರಾಜನು ಒಂದು ಮಹಾ 'ಚಿಂತೆ ಬದಲಾಯಿಸುವ ಬೇಡಿಕೆ' ಎಂಬ ಕಾರ್ಯಕ್ರಮವನ್ನು ಘೋಷಣೆ ಮಾಡಿದನು. ಇದರ ಪ್ರಕಾರ ಜನರು ತಮ್ಮ ತಮ್ಮ ದೊಡ್ಡ ಚಿಂತೆಗಳನ್ನು ಬೇರೆಯವರಿಗೆ ಕೊಟ್ಟು ಅವರ ಸಣ್ಣ ಪುಟ್ಟ ಚಿಂತೆಗಳನ್ನು ತಾವು ತೆಗೆದುಕೊಳ್ಳಬಹುದಾಗಿತ್ತು. ವಿಶಾಲವಾದ ಒಂದು ಸ್ಥಳವನ್ನು ತಯಾರು ಮಾಡಲಾಗಿತ್ತು - ಅದರ ಮಧ್ಯದಲ್ಲಿ ಒಂದು ಬಹು ದೊಡ್ಡ ಮಡಿಕೆಯನ್ನು ಇರಿಸಲಾಗಿತ್ತು. ಮಡಿಕೆಯೊಳಗೆ ಸಂತೋಷವಾಗಿ ಒಬ್ಬೊಬ್ಬರು ತಮ್ಮ ಚಿಂತೆಗಳನ್ನು ಬಿಸಾಡಿ ಬೇರೆ ಯಾರದ್ದಾರು ಚಿಂತೆಗಳನ್ನು ಆಯ್ಕೆ ಮಾಡಬಹುದಾಗಿತ್ತು.
ಈ ಕಾರ್ಯಕ್ರಮಕ್ಕೆ ಇಡಿ ರಾಜ್ಯದ ಜನರು ಸೇರಿಕೊಂಡಿದ್ದರು. ಜನಗಳು ತಮ್ಮ ಅತ್ಯಂತ ಕೆಟ್ಟ ಕಾಟಗಳನ್ನು ಅಡಲು ಬದಲು ಮಾಡುವುದಕ್ಕೆ ಜೊತೆಗೆ ತಂದಿದ್ದರು - ಏಕೆಂದರೆ ನಿಶ್ಚಿತವಾಗಿ ಮತ್ತೊಬ್ಬರ ಚಿಕ್ಕ ಪುಟ್ಟ ತೊಂದರೆಗಳನ್ನು ಸಹಿಸುವುದು ಬಹಳ ಸುಲಭ ! ಅಪರಿಚಿತರು ಸೇರಿ ತಮ್ಮ ಜೊತೆಗೆ ತಂದಿದ್ದ ಚಿಂತೆಗಳ ಬಗ್ಗೆ ಚರ್ಚೆ ಮಾಡಲು ಆರಂಭಿಸಿದರು.
ಸರಿಯಾದ ಸಮಯಕ್ಕೆ ಕಾರ್ಯಕ್ರಮದ ಆರಂಭವನ್ನು ಪ್ರಕಟಣೆ ಮಾಡಲಾಯಿತು. ತಮ್ಮ ಚಿಂತೆಗಳನ್ನು ಅದಲು ಬದಲು ಮಾಡುವ ಇಚ್ಛೆ ಇದ್ದವರೆಲ್ಲ ಮುಂದಕ್ಕೆ ಬಂದು ಅವರ ಚಿಂತೆಗಳನ್ನು ಮಡಿಕೆಯಲ್ಲ ಹಾಕಬಹುದು ಎಂದು ಒಂದು ನಿವೇದನೆ ಮಾಡಲಾಯಿತು. ಆದರೆ ಒಂದೇ ಶರತ್ತು ವಿನು ಅಂದರೆ ಅವರು ಎಷ್ಟು ಚಿಂತೆಗಳನ್ನು ಮಡಿಕೆಯಲ್ಲಿ ಹಾಕುತ್ತಾರೋ, ಅಷ್ಟೇ ಸಂಖ್ಯೆಯಲ್ಲ ಚಿಂತೆಗಳನ್ನು ಅರಿಸಿಕೊಳ್ಳಬೇಕು. ಆಶ್ಚರ್ಯವಾದ ವಿಷಯ (ಅಥವಾ ಆಶ್ಚರ್ಯವಿಲ್ಲದ ವಿಷಯ) ಏನೆಂದರೆ ತನ್ನ ಚಿಂತೆಗಳನ್ನು ಅದಲು ಬದಲು ಮಾಡುವುದಕ್ಕೆ ಒಬ್ಬ ಕೂಡ ಮುಂದೆ ಬರಲಿಲ್ಲ ! ಜನರ ಈ ಹೆಂಡತಿನಿಂದ ಕಾರ್ಯಕ್ರಮದ ಸಮಾಪ್ತಿಯನ್ನು ಬೇಗನೇ ಪ್ರಕಟಣೆ ಮಾಡಲಾಯಿತು.
/ ನೀವು ಎಷ್ಟು ದಿನ ಹೀಗೆ ನಿಮ್ಮ ಸ್ವಂತ ಚಿಂತೆಗಳ ಮೇಲೆ ಮಾತ್ರ ಏಕಾಗ್ರ ಗುರಿಯನ್ನಿಟ್ಟುಕೊಳ್ಳುತ್ತೀರಾ? ನಿಮ್ಮ ದೃಷ್ಟಿಯನ್ನು ಸ್ವಲ್ಪ ಹೊರಗೂ ತಿರುಗಿಸಿ ನೋಡಿ!
ಸಕಲ ಸೃಷ್ಟಿಯನ್ನು ಸುತ್ತುಗಟ್ಟಿರುವ ವಿಶ್ವಶಕ್ತಿಯ ಅದೃಷ್ಟ ಪ್ರವಾಹದಲ್ಲಿ ನಿಮ್ಮನ್ನು ನೀವು ಒಂದು ಆংশವೆಂದು ತಿಳಿದುಕೊಂಡಾಗ ನಿಮ್ಮ ವ್ಯಕ್ತಿಗತ ಲಾಭ - ನಷ್ಟಗಳಿಂದ ಉಂಟಾಗುವ ಗರ್ವ ಮತ್ತು ದುಃಖ ತಾನಾಗಿ ತಾನೇ ಮಾಯವಾಗುತ್ತದೆ. ಬೇರೆಯವರ ದುಃಖಗಳನ್ನು ಗ್ರಹಿಸಲು ನೀವು ನಿಮ್ಮ ಮನಸ್ಸನ್ನು ತರದಟ್ಟುಕೊಂಡಿದ್ದರೆ ನಿಮ್ಮ ಆತ್ಮಗೌರವ ಹುಸಿಯೆಂದು ಅರಿತು ಅಹಂಕಾರದ ಆತ್ಮಜ್ಞಾನವನ್ನು ಪಡೆಯುವಿರಿ!
ಜ್ಞೇನ ಭಾದ್ಧರ್ಮದ ಗುರುವಾಗಲ ತಮ್ಮ ಶಿಷ್ಯರಿಗೆ ಬಹಳ ಅಭೂತಪೂರ್ವಕವಾದ ಪದ್ಧತಿಗಳನ್ನು ಬಳಸಿ ಶಿಕ್ಷಣ ನೀಡುವುದರಲ್ಲಿ ಪ್ರಸಿದ್ದರು.
ಒಬ್ಬ ಜ್ಞೇನ ಗುರುವಿನ ಒಬ್ಬ ಶಿಷ್ಯನು ಬಹಳ ಬುದ್ಧಿವಂತನು, ಪರಿಶ್ರಮಿ ಮತ್ತು ಪ್ರಾಮಾಣಿಕನಾಗಿದ್ದನು. ಆದರೆ ಅವನ ಸಮಸ್ಯೆ ಏನೆಂದರೆ ಜ್ಞಾನೋದಯವನ್ನು ಪಡೆಯುವುದಕ್ಕೆ ನಿಧಾನವಾದ ಮತ್ತು ಪ್ರಯಾಸವುಳ್ಳ ಪದ್ಧತಿಗಳನ್ನು ಸಾಧನೆ ಮಾಡುವುದಕ್ಕೆ ಬೇರೊಬ್ಬರ ಸಹನಶೀಲತೆ ಅವನಲ್ಲಿ ಇರಲಿಲ್ಲ.
ಈ ಕಾರಣದಿಂದ ಅವನು ಪ್ರತಿ ದಿವಸ ಗುರುವನ್ನು ಒಂದೇ ಪ್ರಶ್ನೆ ಕೇಳುತ್ತಿದ್ದನು. "ಹೇಳಿ ಗುರುವೇಳೀ, ನಾನು ಯಾವಾಗ ಬುದ್ಧಿವಂತೆ ಆಗುತ್ತೇನೆ ?" ಗುರುವಾಗಲೀ ಏನು ಮಾತನಾಡದೆ ಕೇವಲ ಒಂದು ಮುಗುಳು ನಗೆ ನಗುತ್ತಿದ್ದರು.
ಹಾಗಳು ಇರಳು ಗುರುವಿನ ಒಪ್ಪಣೆ ಪ್ರಕಾರ ಸಾಧನೆ ಮಾಡಿದ ಮೇಲೆಯೂ ಏನೂ ಪರಿಣಾಮ ಗಳಿಸದಾಗ ಶಿಷ್ಯನಿಗೆ ನೈರಾಶ್ಯ ಉಂಟಾಯಿತು. ಈ ಕಾರಣದಿಂದ ಅವನು ಜ್ಞಾನೋದಯವನ್ನು ಪಡೆಯುವ ಬಯಕೆಯು ಅವನನ್ನು ಮರಳು ಮಾಡಿತು.
ಕೊನೆಗೆ ಒಂದು ದಿನ ಅವನು ಇದು ಒಂದು ಅಯೋಗ್ಯವಾದ ಅನ್ವೇಷಣೆ ಎಂದು ನಿಶ್ಚಯಿಸಿ ಅವನ ಗುರುವಿನ ಬಳಿಗೆ ಹೋಗಿ ಆಗ್ರಹಪಡಿಸಿದ "ನಾ ನಿಮ್ಮನ್ನು ಬಿಟ್ಟು ಹೋಗುವುದಕ್ಕೆ ಮುಂಚೆ ಒಂದು ಮಾತು ಹೇಳು. ನಾನು ಯಾವಾಗಾದರೂ ಬುದ್ಧನಂತೆ ಆಗುತ್ತೇನಾ ?"
ಶಿಷ್ಯನ ಕಪಾಳಕ್ಕೆ ಒಂದು ಜೋರು ಪಟೇ ಗುರುವಿನ ಉತ್ತರ ! ಏಟು ಬಿದ್ದಿದ್ದ ತತ್‌ಕ್ಷಣವೇ ಶಿಷ್ಯನು ತನ್ನ ನಿಜವಾದ ಸ್ವಭಾವವೇಂದು ಜಾಗೃತಿಗೊಳಿಸಿದ. / ಗುರುಗಳು ನೀಡಿದ ಏಟಿನ ಅರ್ಥವೇನು ? ಶಿಷ್ಯನಿಗ್ ಆತಿ ಆಸೆ ಎಂದು ಎಚ್ಚರಿಸುವುದಕ್ಕಾಗಿಯೇ ? ಎಂದಿತ್ ಅಲ್ಲ. ಶಿಷ್ಯನು ಮುಂಚಿತವಾಗಿಯೇ ಬುದ್ಧ ನಾಗಿದ್ರಾನ್ ಎಂಬ ಜಾಗ್ರತಿ ಉಂಟುಮಾಡುವುದಕ್ಕೆ ಗುರುಗಳು ಪೆಟ್ಟು ಕೊಡಬೇಕಾಗಿತ್ತು. ನೀವು ಮುಂಚಿತವಾಗಿಯೇ ಆಗಿರುವುದನ್ನು ಪುನಃ ಆಗಬೇಕೆಂದು ಹೇಗೆ ಇಚ್ಛೆ ಪಡಲು ಸಾಧ್ಯ ?
ನಮ್ಮ ಅಂತರಂಗದ ದೈವತ್ವವನ್ನು ಗ್ರಹಿಸದೆ, ನಾವು ಎಚ್ಚತ್ತಿಲ್ಲದಿರ ಒಂದು ನಿದ್ರಿಸುತ್ತಿರುವ ಬುದ್ಧನಂತೆ ನಮ್ಮ ಜೀವಮಾನವನ್ನು ಕಳೆಯುತ್ತೇವೆ. ಸಿಧ ಮತ್ತು ಕುರಿಯ ಕಥೆಯಲ್ಲಾದ ರೀತಿಯಲ್ಲಿ ನಿಮ್ಮ ನಿಜವಾದ ಸ್ವಭಾವವನ್ನು ಗುರುವೇ ತೋರಾಡಿಸಬೇಕು !/