1. Spirituality - Why Series
ಆಧ್ಯಾತ್ಮ ಏಕೆ?
'ಆಧ್ಯಾತ್ಮ' ಎಂದೊಡನೆ ಯಾವುದೋ ಅಲೌಕಿಕಿಕವಾದ ತತ್ವಜ್ಞಾನ ವೆಂದೂ, ಜಗತಿನ ಆಚೆಗಿರುವಂತಹುದೆಂದೂ ಕೆಲವರಿಗೆ ಮಾತ್ರ ಸೀಮಿತವಾದದ್ದೆಂದೂ ಭಾವಿಸುತ್ತೇವೆ. ಆಧುನಿಕ ಸಮಾಜದಲ್ಲಿ, ಅದರಲ್ಲಿಯೂ ಪಾಶ್ಚಿಮಾತ್ಯರಲ್ಲಿ ಆಧ್ಯಾತ್ಮಿಕತೆಯು ಭಾರતના ಋಷಿ ಮುನಿಗಳಿಗೋ, ಪುರಾತನ ಕ್ರೈಸ್ಕ ಸಂತರಿಗೋ, ಆಧುನಿಕ ಯುಗದ ಪ್ರವೀಣರಿಗೋ ಸೇರಿರುವಂತಹುದೆಂಬ ಭಾವನೆ.
'ಆಧ್ಯಾತ್ಕ' ಎಂದೊಡನೆ ಧರ್ಮಗಳು ಹೇಳುವ ದೇವರನ್ನು ಅಥವಾ ಆತ್ಮಜ್ಞಾನವನ್ನು ಹೊಂದಲು ತೀವ್ರ ಸಾಧನೆ ಮಾಡಿದವರನ್ನೂ ಪುರಾತನಯೋಗಿಗಳನ್ನೂ ಮತ್ತು ಸಂತರ ಕಥೆಗಳನ್ನೂ ನೆನೆಯುತ್ತೇವೆ. ದಯಾಮಯಿಯೂ ಜ್ಞಾನ ಭಂಡಾರವೂ ಆದ ಬುದ್ದನನ್ನೋ, ಕಾಳಿಮಾತೆಯ ಪರಮಭಕ್ತರಾದ ರಾಮಕೃಷ್ಣರನೋ್ನ, ದಣಿವಿಲ್ಲದೆ ನಿಸ್ನಾರ್ಥ ಸೇವೆ ಮಾಡಿದ ತೆರೆಸಾ ಮಾತೆಯನೋ್ನ ಸ್ಮರಿಸುತ್ತೇವೆ.
ಆದರೆ, ಲೌಕಿಕ ಜೀವನ ನಡೆಸುವ ಸಾಮಾನ್ಯ ಜನರಿಗೆ ಆಧ್ಯಾತ್ಮವು ಕೈಗೆಟುಕಬಹುದೆಂದು ನಾವು ಯೋಚಿಸುವುದೇ ಇಲ್ಲ.
ಹಲವರು ನನ್ನನ್ನು ಕೇಳುತ್ತಾರೆ, "ಇಂದಿನ ಕಾಲದಲ್ಲಿ ಆಧ್ಯಾತ್ಮವು ಪ್ರಸುತವೆ? ಆಧುನಿಕ ಯುಗದಲ್ಲಿ ಅದು ಬಹಳ ಅವ್ಯವಹಾರಿಕ— ವಲ್ಲವೆ? ಇಷ್ಟಕ್ಕೂ ಆಧ್ಯಾತ್ಮವೆಂದರೇನು? ನಾನು ಕೇವಲ ಸಾಮಾನ್ಯ ಮನುಷ್ಯ. ನನ್ನಲ್ಲಿ ಇದನ್ನೆಲ್ಲ ಅಭ್ಯಾಸ ಮಾಡುವ ಶಕ್ತಿಯಿಲ್ಲ" ಎಂದು.
ನಾನವರಿಗೆ ಯಾವಾಗಲೂ ಹೇಳುವುದು, "ಆಧ್ಯಾತ್ಮವು ಪ್ರಸುತ ಮಾತ್ರವೇ ಅಲ್ಲ; ಅವಶ್ಯಕವೂ ಕೂಡ! ಅದು ಬಹಳ ಯಾವುದೋ ಮೂಲೆಯಲ್ಲಿರುವ ಮಠಗಳಲ್ಲಿ ಅಭ್ಯಾಸ ವಾಡುವ ಗೂಢ ತತ್ವಜ್ಞಾನವಲ್ಲ. ಆಧ್ಯಾತ್ಮಿಕತೆಯು ಒಂದು ಜೀವನಶ್ಯೆಲಿ. ಅದು ಜೀವನವನ್ನೂ, ನಿಮ್ಮನ್ನೂ, ಇತರರನ್ನೂ ಆದರಿಸುವ ಆನಂದದ ಸರಳ ಮನೋವೃತ್ತಿ. ದೈನಂದಿನ ಕಾರ್ಯಗಳಲ್ಲಿ ತೊಡಗಿರುವಾಗ ನಿಮ್ಮನ್ನು ಚುರುಕಾಗಿಸಿ, ಅರಿವು ಮೂಡಿಸುವ ಸ್ವಭಾವಿಸಿದ್ದ ಪರಿಜ್ಞಾನ." ಎಂದು.
ಆಧ್ಯಾತ್ಮವು ಅನುಭವಾತ್ಮಕ ತಂತ್ರಗಳನ್ನು ಸೃಷ್ಟಿಸಿರುವ ವಿಜ್ಞಾನ. ಅದು ನಿಮ್ಮ ಎಲ್ಲಾ ಸಹಜವಾದ ಬುದ್ಧಿವಂತಿಕೆ, ಶಕ್ತಿ ಸಾಮರ್ಥ್ಯಗಳೂ, ಸಾಧ್ಯತೆಗಳೂ ಆತ್ಮದ ಅನುಭವಗಳೂ ಉಳಿಸಿಕೊಂಡಿರುವ ಸಹಜವಾದ ನಿಮ್ಮೆಡೆಗೆ ನಿಮ್ಮನ್ನು ಕೊಂಡೊಯ್ಯುವ ಶಕ್ತಿಯನ್ನು ಕೊಡುತ್ತದೆ.
ನಮ್ಮಲ್ಲಿ ಅಸಾಧ್ಯವಾದ ಚೈತನ್ಯವಿದೆ. ಆದರೆ ಅದನ್ನು ವ್ಯಕ್ತಪಡಿಸಲೂ, ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲೂ, ಅಸಮರ್ಥ ರಾಗಿದ್ದೇವೆ.
ಆಧ್ಯಾತ್ಮವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಈಗಿರುವುದಕ್ಕಿಂತ ಉತ್ತಮರಾಗುವಿರೆಂದು ನಾನು ಭರವಸೆ ನೀಡುತ್ತೇನೆ. ವೃತ್ತಿ, ಬಾಂಧವ್ಯಗಳಲ್ಲಿ ಪ್ರಗತಿಗಳಿಸುವುದಲ್ಲದೆ ನಿಮ್ಮ ನಿಜ ಸ್ವರೂಪವನ್ನರಿತು ಸಹಜ ಆನಂದವನ್ನು ಹೊಂದಬಹುದು.
ಜೀವನದ ಈ ಎಲ್ಲಾ ಮುಖಗಳಿಗೂ ನಿಕಟ ಸಂಬಂಧವಿದೆ. ನೀವು ಆತ್ಮ ಸಹಕಾರ ನೀಡಿದಷ್ಟೂ, ನಿಮ್ಮಲ್ಲಿ ನೀವು ಏಕೀಕೃತರಾದಷ್ಟೂ, ನಿವ್ಮು ಆತ್ಮಬಲ, ಕ್ರಿಯಾಶೀಲತೆ ಹೆಚ್ಚುತ್ತದೆ ಹಾಗೂ ನೀವು ಪ್ರೇಮಮಯರಾಗುತ್ತೀರಿ.
ಸಧ್ಯದಲ್ಲಿ ನಾವು ನಮ್ಮ ನಿಜಸಾಮರ್ಥ್ಯದ ಹೊರವಲಯದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೇವೆ. ನಮ್ಮ ಹೊರವಲಯದ ದೈನಂದಿನ ಚಟುವಟಿಕೆಗಳಲ್ಲೇ ತಲ್ಲೀನರಾಗಿದ್ದೇವೆ. ನಮ್ಮ ಮನಸ್ಸು ಪ್ರತಿನಿತ್ಯವೂ ಒಂದೇ ರೀತಿ ಯೋಚಿಸುತ್ತದೆ. ಏಕೆಂದರೆ ನಮ್ಮ ಅಭ್ಯಾಸಗಳು ಸ್ದಿರವೂ ಮನರಾವೃತ್ತಿಗೊಳ್ಳುವುವೂ ಆಗಿವೆಯಾದ್ದರಿಂದ ನಮ್ಮ ಮನೋ ರೂಢಿಯನ್ನು ಬದಲಾಯಿಸಲು ಆಂತರಿಕ ಸ್ಥಳಾವಕಾಶವೇ ಇಲ್ಲವಾಗಿದೆ. ನಮ್ಮ ಈಗಿನ ಜೀವನಶೈಲಿಯಲ್ಲಿ ನಾವು ಸಿಕ್ಕಿಕೊಂಡಿದ್ದೇವೆ. ನಮಗೆ ಉಸಿರು ಕಟ್ಟಿದಂತಾಗುತ್ತದೆ. ನಮಗೆ ಸೆರೆ ಸಿಕ್ಕಂತೆ ಭಾಸವಾಗುತ್ತದೆ.
ಪ್ರತಿದಿನ ಬೆಳಗ್ಗೆ ಎದ್ದೊಡನೆ ನಮ್ಮನ್ನು ಅದೇ ಭಾವನೆಗಳು ಆವರಿಸುತ್ತವೆ. ಎದ್ದು ಕೆಲಸಕ್ಕೆ ತೊಡಗಲು ಹಿಂದೇಟು. ನಂತರ ಕಾಫಿಯನ್ನು ಕುಡಿಯುತ್ತಾ ವಾರ್ತೆಗಳನ್ನು ಕೇಳುವಾಗ ಅದೇ ಭಾವನೆಗಳು ಮತ್ತು ಅದೇ ಜಡತ್ವವು ನಮ್ಮಲ್ಲಿ ಮತ್ತೆ ಮತ್ತೆ ಮೂಡುತ್ತವೆ. ಅಭ್ಯಾಸಬಲದಿಂದ ಯಾವುದೋ ಗ್ರಹಿಸಲಾಗದ
ಯಾಂತ್ರಿಕತೆ ನಮ್ಮನ್ನು ಅದೇ ದಾಟಿಯಲ್ಲಿ ಮತ್ತೆ ನಡೆಸುತ್ತದೆ. ಒಂದು ಸೂಕ್ಷ್ಮವಾದ ಅಸಂತುಷ್ಕಿ ಹಾಗೂ ಚಡಪಡಿಕೆ—ಎಲ್ಲವೂ ಹಳೆಯದೇ. ನಮ್ಮ ಸಂಗಾತಿಯನ್ನು ಮಾತಾಡಿಸುವ ಕಂಠಸ್ವರವೂ ಒಂದೇ ರೀತಿ! ನಿಜ! ಮತ್ತೆ ಆಫೀಸಿಗೆ ಹೋಗುವ ದಾರಿಯಲ್ಲಿ ಕಂಡು ಬರುವ ಜಾಹೀರಾತುಗಳಿಂದ ನಮ್ಮದಲ್ಲದ ಎಷ್ಟೋ ಭಾವನೆಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಏನಾದರೂ, ಅನಿವಾರ್ಯವೆಂದು ಒಪ್ಪಿಕೊಳ್ಳುವ ಮನೋಭಾವದಿಂದ ಸಮಾಜವು ನಮ್ಮನ್ನು ನಿರೀಕ್ಷಿಸುವ ರೀತಿಯಲ್ಲಿ ಜೀವನವನ್ನು ಸಾಗಿಸುತ್ತೇವೆ.
ಆದರೆ ಸದಾ ಯಾವುದೋ ಅಸಂತುಷ್ಟಿಯ ಭಾವನೆ. ಹೇಗೋ ನಮ್ಮ ಒಂದು ಭಾಗವು 'ನನ್ನಗಿನ್ನೇನೋ ಉತ್ತಮವಾದದ್ದು ಕಾದಿದೆ. ಅದೇನೆಂದು ತಿಳಿದಿಲ್ಲ. ಆದರೆ ಉತ್ತಮವಾದದ್ದೊಂದಿದೆ ಎಂದು ಗೊತ್ತಿದೆ'! ಎಂದು ಹೇಳುತ್ತಿರುತ್ತದೆ.
ನೋಡಿರಿ, ನಮ್ಮೊಳಗಿರುವ ಒಂದು ಮೌನಪ್ರಜ್ಞೆಗೆ ನಮಗೆ ಈಗ ಇರುವುದಕ್ಕಿಂತ ಉತ್ತಮವಾದ, ಹೆಚ್ಚಿನದೇನೋ ಇದೆ ಎಂಬ ಅರಿವಿದೆ. ಆ ಮೌನಪ್ರಜ್ಞೆಯ ಗುಣಮಟ್ಟವನ್ನು ನಮ್ಮ ಜೀವನದಲ್ಲಿ ಸಾಧಿಸಿಲ್ಲ ಇದು ಮೂಡಬೇಕಾಗಿದೆ.
ನಮ್ಮ ಈ ಭಾಗವನ್ನು 'ಆತ್ಮ' ಎನ್ನುವುದು.
ನಮ್ಮ 'ಆತ್ಮ' ದೊಂದಿಗೆ ಸಂಬಂಧ ಬೆಳೆಸಿದಾಗ ನಾವು ಊಹಿಸಲಾಗದ ಆನಂದ, ಶಕ್ತಿ, ಸಾಮರ್ಥ್ಯ, ಸೃಜನಶೀಲತೆ ಮತ್ತು ಸಕಾರಾತ್ಮಕ ಪ್ರವೃತ್ತಿ ನಮ್ಮಲ್ಲಿ ಅರಳುತ್ತದೆ. ಈ ಪ್ರಚಂಡ ಸಾಮರ್ಥ್ಯವನ್ನು ಬಳಸಿಕೊಂಡಾಗ
ನಮ್ಮನ್ನು ನಾವೇ ಸಂಪೂರ್ಣವಾಗಿ ನ ವೀಕರಿಸಿಕೊಳ್ಳಲು ಸಮರ್ಥರಾಗುತೇವೆ.
ಆದರೆ ನಾವು ಕ್ರಮಬದ್ದವಾಗಿ ಮಾಡುವುದಾದರೂ ಏನು? ನಮ್ತ ಅಸಂತೃಪ್ತಿಯನ್ನು ಗಮನಿಸಲು ನಿರಾಕರಿಸುತ್ತೇವೆ. ನಮ್ಮನ್ನು ನಾವೇ ಮುಚ್ಚಿಟ್ಟುಕೊಂಡು ಆಂತರಿಕ ಜಗತಿನಲ್ಲಿ ಒಡಕು ಮೂಡಿಸುತ್ತೇವೆ. ಒಂದು ಭಾಗವು ಅಸಂತುಷ್ಟಿಯಿಂದ ಕೊರಗುತ್ತಲೇ ಇರುತ್ತದೆ. ಇನ್ನೊಂದು ಭಾಗವು ಏನೂ ಆಗಿಲ್ಲವೆಂಬಂತಿರುತ್ತದೆ. ನಾವಾಗ ಖಿನ್ಸರಾಗುತ್ತೇವೆ– ಅಥವಾ ಖಿನ್ನತೆಯನ್ಸೇ ಮುಂದುವರೆಸುತ್ತೇವೆ. ಏಕೆಂದರೆ ನಾವು ಸಮಗ್ರತೆಯನ್ನು ಹೊಂದಿರುವುದಿಲ್ಲ. ಇದು ನಮ್ಮೆಲ್ಲರಿಗೂ ಆಗುವ ಅನುಭವ.
ಇಷ್ಟು ಮಾತ್ರ ಸ್ಪಷ್ಟ–ನಿಮ್ಮ ಈ ಅನಿಸಿಕೆಗಳನ್ನು, ಈ ಜೀವನಕ್ರಮವನ್ನು ಪ್ರಶ್ನಿಸಲು ನೀವು ಮೊದಲು ಮಾಡಿದ್ದರೆ, ನಿಮ್ಮಲ್ಲಿ ಆಧ್ಯಾತ್ಮವು ಅಂಕುರಿಸಿದಂತೆಯೇ! ನೀವೀಗ ನಿಮ್ಮ ಅವ್ಯಕ್ತ ಸಾಮರ್ಥ್ಯವನ್ನು ಹೊರಗೆಡವಲು ಸಿದ್ದರಾಗಿದ್ದೀರಿ. ನೀವು ಸರಿಯಾದ ಹಾದಿಗೆ ಬರಲು ಅರ್ಹರಾಗಿದ್ದೀರಿ. ನಿಮ್ಮ ಜೀವನದ ಉದ್ದೇಶವೇ ಅದು.
ಇದು ಆಧ್ಯಾತ್ಮವೇ?
ಹೌದು, ಪ್ರಶ್ನೆಗಳು ಅಂಕುರಿಸಿದರೆ ನೀವು ಆಧ್ಯಾತ್ಮಿಕತೆಯ ಹೊಸ್ತಿಲನ್ನು ಮೆಟ್ಟಿದಂತೆಯೇ. ನೀವಾಗಲೇ ಒಳನೋಡುತ್ತಿರುವಿರಿ. ಇಲ್ಲಿಂದ ನಿಮ್ಮ ಒಳಪ್ರಪಂಚವನ್ನು ಪರಿಶೋಧನೆ ಮಾಡಬಹುದು.
ಒಂದು ಸಣ್ಣ ಕಥೆ:
ಒಂದು ದಿನ ಒಂದು ಕಾಡಿನ ಅಂಚಿನಲ್ಲಿ ಒಬ್ಬನು ಮರವನ್ನು ಕಡಿಯುತ್ತಿದ್ದನು. ಆಗ ಅಲ್ಲಿಗೆ ದಿವ್ಯಜ್ಞಾನಿಗಳಾದ ಗುರುಗಳೊಬ್ಬರು ಬಂದು ಅವನನ್ನು ನೋಡಿದರು. ಅವನನ್ನು ಕಂಡು ್ಇನ್ನೂ ಒಳಗೆ ಹೋಗು' ಎಂದರು.
ಅದನ್ನು ಕೇಳಿ ಅವನು ಕಾಡಿನ ಒಳ ಹೊಕ್ಕು ಚಂದನದ ಮರವನ್ನು ಕಂಡನು. ಅದನ್ನು ಕಡಿದು ಆ ಕೂಡಲೇ ಮಾರುಕಟ್ಟೆಯಲ್ಲಿ ಮಾರಲು ಹೊರಟನು.
ಮಾರನೆಯ ದಿನ ಅವನು ಮತ್ತೆ ಹೋಗಿ ಚಂದನದ ಮರವನ್ನು ಕಡಿಯುತ್ತಿದ್ದನು. ಗುರುಗಳು ಮತ್ತೆ ಅವನನ್ನು ಭೇಟಿ ಮಾಡಿ 'ಇನ್ನೂ ಒಳಗೆ ಹೋಗು' ಎಂದರು. ಆತನು ಹಾಗೆಯೇ ಕಾಡಿನಲ್ಲಿ ಇನ್ನೂ ಮುಂದಕ್ಕೆ ಹೋದನು. ಅಲ್ಲಿ ಅವನಿಗೆ ಬೆಳ್ಳಿಯ ಗಣಿ ಸಿಕ್ಕಿತು. ಅವನು ಗಣಿ ತೋಡಿ ಬೆಳ್ಳಿಯನ್ನು ತಂದು ಮಾರತೊಡಗಿದನು.
ಅವನು ಹೀಗೆಯೇ ಕೆಲಕಾಲ ಗಣಿ ತೋಡಿ ಬೆಳ್ಳಿಂತುನ್ನು ತೆಗೆಯುತ್ತಿದ್ದನು. ಗುರುಗಳು ಮತ್ತೆ ಅವನನ್ನು ಸಂಧಿಸಿ ್ಇನ್ನೂ ಒಳಗೆ ಹೋಗು' ಎಂದರು. ಅವನು ಕಾಡಿನಲ್ಲಿ ಇನ್ನೂ ಒಳಕ್ಕೆ ಹೋಗಿ ನೋಡಲು ಅಲ್ಲಿ ಚಿನ್ನದ ಗಣಿಯನ್ನು ಕಂಡನು! ಅವ ನು ಆ ಚಿನ್ನವನ್ನು ಗಣಿತೋಡಿ, ಹೊರತೆಗೆದು ಮಾರತೊಡಗಿದನು.
ಗುರುಗಳು ಮತ್ತೆ ಅವನಿಗೆ, 'ಇನ್ನೂ ಒಳಗೆ ಹೋಗು' ಎಂದರು. ಈ ಬಾರಿ ಇನ್ನೂ ಒಳಗೆ ಹೋದನು. ಅವನಿಗೆ ವಜ್ರಗಳ ಗಣಿಯೇ ಸಿಕ್ಕಿತು.
ಕರುಣಾಳುವಾದ ಗುರುವು ಮತ್ತೆ ಅವನ ಹಿಂದೆ ನಿಂತು ್ಇನ್ನೂ ಒಳಗೆ ಹೋಗು' ಎಂದರು. ಈಗ ಅವನು ಅನುವರಾನ ಪಡತೊಡಗಿದನು. ವಜ್ರಕ್ಕಿಂತಲೂ ಅಮೂಲ್ಯವಾದದ್ದು ಈ ಕಾಡಿನಲ್ಲಿ ಏನಿರಬಹುದು? ಈ ಜೀವನದಲ್ಲಾದರೂ ವಜ್ರದ ವ್ಯಾಪಾರಕ್ಕಿಂತಲೂ ಮಿಗಿದಾದುದೇನನ್ನು ಸಾಧಿಸಲು ಸಾಧ್ಯ?
ಅವನು ಗುರುವಿನತ್ತ ಕಣ್ಣು ಹಾಯಿಸಿದನು. ಗುರುವಿನ ಬಳಿ ಚಂದನವಾಗಲಿ, ಬೆಳ್ಳಿಯಾಗಲಿ, ಚಿನ್ನವಾಗಲಿ, ವಜ್ರವಾಗಲಿ ಮಾರುಕಟ್ಟೆಯಲ್ಲಿ ಮಾರಲು ಇಲ್ಲದಿದ್ದರೂ, ಗುರುವು ಅಲೌಕಿಕ ಶಾಂತಿಯನ್ನೂ, ಅನಿರ್ವಚನೀಯವಾದ ಪ್ರೇಮವನ್ನೂ ಹೊರ ಸೂಸುತ್ತಿರುವುದನ್ನು ಕಂಡನು. ಇವರ ಬಳಿ ಇದ್ದುದೇನು? 'ಆತ್ಮ'ವೆಂಬುದೊಂದೇ………
ಇದ್ದಕ್ಷಿದ್ದಂತೆ ಅವನಿಗೆ ಹೊಳೆಯಿತು. 'ಇನ್ನೂ ಒಳಗೆ ಹೋಗು, ಒಳಗೆ ಹೋಗು, ನಿನ್ನ ಒಳ ಪ್ರಪಂಚವನ್ನು ಶೋಧಿಸಿ ನೋಡು, ನಿನ್ನ ಆತ್ಮವನ್ನು ಕಾಣು, ಅದರಲ್ಲೇ ಶಾಶ್ವತ ಸಂಪತ್ತುಗಳು ಅಡಗಿವೆ'. ಅಂದಿನಿಂತಲೂ ಇದೇ ಗುರುವಿನ ಸಂದೇಶವಾಗಿತ್ತು.
ಆಧ್ಯಾತ್ಮಿಕ ಸಾಧನೆಗಳನ್ನು ಮಾಡತೊಡಗಿದಾಗ ನಿಮ್ಮ ಒಳ ಪ್ರಪಂಚದಲ್ಲಿ ವಿವಿಧ ಸ್ಥರಗಳು ಇರುವುದನ್ನು ಕಾಣುತ್ತೀರಿ. ಪ್ರತಿ ಸ್ಥರದಲ್ಲೂ ಅಡಗಿರುವ ಶಕ್ತಿಯನ್ನು ಉಪಯೋಗಿಸಿ, ಬಾಹ್ಯ ಜಗತ್ತಿನಲ್ಲಿಯೂ, ಪ್ರತಿಯೊಂದು ಆಯಾಮದಲ್ಲಿಯೂ ಕುಶಲತೆಯನ್ನು ನೀವು ಸಾಧಿಸಬಹುದು.
ಇದರ ಕಾರ್ಯವಿಧಾನವೇನು?
ಪ್ರಾಚೀನ ಕಾಲದಿಂದಲೂ ಆಧ್ಯಾತ್ಮಿಕ ವಿಜ್ಞಾನಗಳು ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡಲು ಸರಳವಾದ ತಂತ್ರಗಳನ್ನು ರೂಪಿಸಿವೆ. ಉದಾಹರಣೆಗೆ, ಧ್ಯಾನ, ಯೋಗಗಳು ಇಂದು ವ್ಯಾಪಕವಾಗಿ ಅಭ್ಯಾಸದಲ್ಲಿವೆ. ಅಮೇರಿಕ ಒಂದರಲ್ಲಿಯೇ ತ್ರಿಕೋಟಿ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ?
ಬಹುಮುಖ ಹಾಗೂ ಸ್ಪಷ್ಟವಾದ ಲಾಭಗಳಿಂದ ಧ್ಯಾನವು ಜನಪ್ರಿಯ ವಾಗಿದೆ. ಧ್ಯಾನದಿಂದ ದೇಹ– ಮನಸ್ಸುಗಳ ಮೇಲಾಗುವ ಪ್ರಭಾವವನ್ನು ವಿಜ್ಞಾನವು ಆಳವಾಗಿ ಪರಿಶೀಲಿಸುತ್ತಾ ಇದೆ ಇಂದು ಮಾನವನಿಗೆ ಶಾರೀರಿಕ ಸೌಖ್ಯ, ಶಕ್ತಿ, ಮಾನಸಿಕ ಬಲ ಹಾಗೂ ಆತ್ಮಶಕ್ತಿಯು ಅವಶ್ಯಕವಾಗಿದೆ.
ದೈಹಿಕ ಶಕ್ತಿಯು ನಮ್ಮನ್ನು ಆರೋಗ್ಯವಂತರನ್ನಾಗಿಸಿ ದೈನಂದಿನ ಚಟುವಟಿಕೆಗಳನ್ನು ಯಾವ ತೊಂದರೆಯೂ ಇಲ್ಲದೆ ನಡೆಸುವಂತೆ ನೋಡಿಕೊಳ್ಳುತ್ತದೆ. ಧ್ಯಾನವು ದೇಹದಲ್ಲಿ ಅನೇಕ ಚಮತ್ಕಾರಗಳನ್ನು ಮಾಡಬಲ್ಲದು. ಧ್ಯಾನದಿಂದ ರಕ್ತದೊತ್ತಡ, ಮಧುಮೇಹ ಮುಂತಾದ ಅನೇಕ ಖಾಯಿಲೆಗಳನ್ನು ತಡೆಗಟ್ಟಬಹುದು.
ಪ್ರತ್ಸಕ್ಷ ಅಂಕಿ—ಅಂಶಗಳಿಂದ ಧ್ಯಾನ ಮಾಡುವವರಲ್ಲಿ ಹೃದ್ರೋಗದ ಸಂಭವವು ಶೇಕಡ 87ರಷ್ಟು ಹಾಗೂ ಕ್ಯಾಂಸರ್‌ನ ಸಂಭವವು ಶೇಕಡ 55ರಷ್ಟು ಕಡಿಮೆ ಎಂದು ರುಜುವಾತಾಗಿದೆ. ಅನೇಕರಿಗೆ ವಿವಿಧ ಖಾಯಿಲೆಗಳ ಉಪಶಮನವಾಗಿದೆ.
ಮನಃಶಕ್ಕಿಯು ಸಮಚಿತ್ತವನ್ನೂ, ಸಮಾಧಾನವನ್ನೂ ಉಂಟುಮಾಡಿ ಜೀವನವನ್ನು ಪೂರ್ಣವಾಗಿ ಸವಿಯಲು ಸಹಾಯಕವಾಗುತ್ತದೆ.
ಧ್ಯಾನವು ಖಿನ್ನತೆಯನ್ನು ತೊಡೆದುಹಾಕಬಹುದು ಎಂದು ರುಜುವಾತಾಗಿದೆ. ಖಿನ್ನ ಮನಸ್ಠಿತಿಯು ದೈಹಿಕವಾಗಿಯೂ ಭಾವನಾತ್ಮಕವಾಗಿಯೂ ಬಹಳ ಹಾನಿಯನ್ನುಂಟುವಾಡುತ್ತದೆ. ನಕಾರಾತ್ಮಕ ಆಲೋಚನೆಗಳು ನಕಾರಾತ್ಮಕ ಆರೋಗ್ಯ ಸ್ಟಿತಿಯನ್ನುಂಟು ಮಾಡುತ್ತವೆ. ಯಾವಾಗಲೂ ಸಕಾರಾತ್ಮಕ ಆಲೋಚನೆಗಳನ್ನು ಮಾಡುವುದು ಬಹಳ ಮುಖ್ಯ. ಎಲ್ಲಾ ಆಧ್ಯಾತ್ಮಿಕ ಸಾಧನೆಗಳೂ ಇದ್ದ ಕ್ಕ್ಕಾಗಿಯೇ!
ಆತ್ಮಶಕ್ತಿಯೆಂಬುದು ಆಯಾಸಗೊಳ್ಳದ ಅಂತಶ್ವಕ್ತಿ. ನೀವು ವೈಯುಕ್ತಿಕ ರೂಪಾಂತರವನ್ನು ಹೊಂದಲು ಆಧಾರವಾಗಿ ನಿಲ್ಲುವ ಅಗಾಧ ಅಸ್ತಿತ್ವ. ನಿಮ್ಮ ಜೀವನದಲ್ಲಿ ಏನೇ ಬಂದರೂ ಸ್ಥಿರವಾಗಿ ನಿಲ್ಲುವುದಕ್ಕೆ ಸಹಾಯಕವಾಗುವುದು ನಿಮ್ಮ ಅಂತಃಸತ್ವ. ಸಾಮಾನ್ಯವಾಗಿ ಕಷ್ಟಗಳು ಬಂದಾಗ ನಮ್ಮ ಗಹನವಾದ ಪೂರ್ವಾನುಭವಗಳು ನಮ್ಮನ್ನು ಕುಗ್ಗಿಸುವುದರಿಂದ, ಇದರೊಂದಿಗೆ ನಮ್ಮ ಸಂಪರ್ಕ ಅತಿ ವಿರಳ.
ನಿಮ್ಮೊಳಗಿರುವ 'ಅಂತರ್ಬೋಧೆ' ಎಂಬ ಪೂರ್ಣ ಅರಿವು ಎಷ್ಟು ಬಲಶಾಲಿಯಾದುದೆಂದರೆ, ಜೀವನದಲ್ಲಿ ಏನೇ ಬಂದರೂ ಮಾರ್ಗದರ್ಶನ ನೀಡಿ ಮೆಟ್ಟಿ ನಿಲ್ಲುವ ಧೈರ್ಯಾವನ್ನು ಅದು ನೀಡಬಲ್ಲದು. ನಿಮ್ಮ ಮನಸ್ಸು ನಿರಾಳವಾದಷ್ಟೂ, ಆಳಕ್ಕೆ ಇಳಿದಷ್ಟೂ, ಈ ಅಂತರ್ಬೋಧೆಯ ಧ್ವನಿಯು ಸ್ಪಷ್ಟವಾಗಿ ಕೇಳಿಬರುತ್ತದೆ.
ನೀವು ಅದರೊಂದಿಗೆ ಸಂಬಂಧ ಬೆಳಸಿದಂತೆ ನಿಮ್ಮ ಶರೀರ, ಆರೋಗ್ಯ, ಭಾವನೆಗಳು ಮತ್ತು ಮನಸ್ಸು ತಾವಾಗಿಯೇ ಶೃತಿಗೂಡಿಸುತ್ತವೆ ಏಕೆಂದರೆ ಈ ಶಕ್ತಿಯು ಅವೆಲ್ಲದರ ಸಾಮಾನ್ಯ ಗುಣವಾಗಿ ಅವೆಲ್ಲವನ್ನೂ
ಪೋಷಿಸುತ್ತದೆ. ಆಗ ಮಾತ್ರ ನೀವು ಸಂಪೂರ್ಣ ವ್ಯಕ್ತಿಯಾಗಿ ವಿಕಸಿಸುವಿರಿ. ಆಗ ನೀವು ಸಮಾಜಕ್ಕೂ, ಪ್ರಪಂಚಕ್ಕೂ ಅಮೂಲ್ಯ ನಿಧಿಯಾಗುವಿರಿ!
ಆಧ್ಯಾತ್ಮಿಕ ಅಭ್ಯಾಸಗಳು ಶಾರೀರಕವಾಗಿ ಗಾಢವಾದ ಸಕಾರಾತ್ಮಕ ಪ್ರಭಾವ ಬೀರಿ ಈ ಎಲ್ಲ ಶಕ್ತಿಗಳನ್ನೂ ಹೊರೆಗೆಡಹಬಲ್ಲವು.
ಆಧ್ಯಾತ್ಮಿಕ ಸಾಧನೆಗಳು ನಮ್ಮ ಮೇಲೆ ಇಂದ್ರಿಯಾತೀತವಾದ ಪ್ರಭಾವ ವನ್ನು ಕೂಡ ಹೊಂದಿವೆ. ನಮಗೆ ಭೌತಿಕ ಶರೀರವೇ ಅಲ್ಲದೆ ಸೂಕ್ಷ್ಮ ಶರೀರವೂ ಇದೆ. ಈ ಸೂಕ್ಷ್ಮ ಶರೀರವು ಪ್ರಾಣ ಅಥವ ಪ್ರಾಣಶಕ್ಕಿಯ ನೆಲೆಯಾಗಿದೆ. ಪ್ರಾಣ ಎಂಬುದು ನಾವು ಉಸಿರಿ ನೊಂದಿಗೆ ಒಳತೆಗೆದುಕೊಳ್ಳುವ ಶಕ್ತಿ. ನಮಗೆ ಪ್ರಾಣವನ್ನು ಒದಗಿಸುವ ಮಾಧ್ಯಮವೇ ಗಾಳಿ. ನಿಜವೆಂದರೆ, ನಾವು ಬದುಕಿರಲು ಗಾಳಿಯೇ ಬೇಡ. ಪ್ರಾಣವರಾತ್ರವೇ ಸಾಕು. ಈ ಪ್ರಾಣವು ನಮ್ಮನ್ನು ಆವರಿಸಿಕೊಂಡಿದೆ. ದೇಹ ಮನಸ್ಸುಗಳು ಸಮತೋಲನದಲ್ಲಿದ್ದಾಗ ಅದನ್ನು ಹೆಚ್ಚಾಗಿ ಹೀರಿಕೊಳ್ಳಬಲ್ಲೆವು.
ನಮ್ಮ ಶರೀರದಲ್ಲಿ ಚಕ್ರ ವ್ಯವಸ್ಥೆ ಎಂಬ ಶಕ್ತಿ ವ್ಯವಸ್ಥೆ ಇದೆ. ಅದು ಅತೀಂದ್ರಿಯವಾದುದು. ಅದು ಬೆನ್ನುಹುರಿಯ ಉದಕ್ಕೂ ಏಳು ಶಕ್ತಿ ಕೇಂದ್ರಗಳನ್ನೊಳಗೊಂಡಿದೆ. ಅವು ನಮ್ಮ ಶಾರೀರಕ, ಮಾನಸಿಕ ಹಾಗೂ ಭಾವನಾತ್ಮಕ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ. ಈ ಚಕ್ರಗಳು ಸುಸಂಗತವಾಗಿದ್ದಾಗ ಮಾತ್ರ ನಾವು ಶಾರೀರಕ ಸೌಖ್ಯತೆ ಹಾಗೂ ಆರೋಗ್ಯವನ್ನು ಅನುಭವಿಸಬಹುದು. ಈ ಚಕ್ರಗಳು ನಮ್ಜ ಮನಃಸ್ಥಿತಿಗನುಗುಣವಾಗಿ ತೆರೆದಿರುತ್ತವೆ ಇಲ್ಲವೇ ಮುಚ್ಚಿಕೊಂಡಿರುತ್ತವೆ.
ಅವು ತೆರೆದುಕೊಂಡಿರುವಾಗ ನಮ್ಮ ದೇಹದೊಳಕ್ಕೆ ಪ್ರಾಣವನ್ನು ಅಗಾಧವಾಗಿ ಸೆಳೆದುಕೊಳ್ಳುತ್ತವೆ. 'ನಾಡಿ' ಗಳೆಂಬ ಸೂಕ್ಷ್ಮವಾದ ಶಕ್ತಿನಾಲಗಳ ಮೂಲಕ ಈ ಅತ್ಯಗತ್ಯವಾದ ಶಕ್ತಿಯನ್ನು ನಮ್ಮ ಸೂಕ್ಷ್ಮ ಶರೀರಕ್ಕೆ ವಿತರಿಸುತ್ತವೆ. ಪ್ರಾಣಶಕ್ತಿಗೂ, ಶಾರೀರಕ ಹಾಗೂ ಮಾನಸಿಕ ಸ್ಥಿತಿಗೂ ನೇರ ಸಂಬಂಧವಿದೆ.
ಪ್ರಾಣಶಕ್ತಿಯನ್ನು ಹೀರಿಕೊಳ್ಳುವುದು ನಮ್ಮ ಮನಃಸ್ಥಿತಿಯ ಮೇಲೆ ಆಧಾರಿತವಾಗಿದೆ. ಅದು ಯಾಂತ್ರಿಕವಾದ ಪ್ರಕ್ರಿಯೆ. ಕುಗ್ಗಿದ ಸ್ಥಿತಿಯಲ್ಲಿದ್ದಾಗ ಚಕ್ರಗಳು ಮುಚ್ಚಿಕೊಂಡಿರುತ್ತವೆ. ನಿಮ್ಮ ಶಕ್ತಿಯೂ ಕಡಿಮೆಯಾಗಿ, ಅದೇ ಮನಃಸ್ಥಿತಿಯು ಮುಂದುವರೆಯುತ್ತದೆ. ನೀವು ಯೋಗ, ಧ್ಯಾನ ಅಥವ ಮಂತ್ರಜಪಗಳನ್ನು ಮಾಡಿ ಅರಿವನ್ನು ಅದರೆಡೆ ಹರಿಸಿದರೆ ಆಗಿಂದಾಗಲೇ ನಿಮ್ಮಲ್ಲಿ ಏನೋ ಅರಳಿದಂತಾ– ಗುತ್ತದೆ. ನಿರಾಂನಾಸವಾಗಿ ನಿಮ್ಮಲ್ಲಿ ಏನೋ ಕಗ್ಗ ಂಟು ಬಿಡಿಸಿದಂತಾಗಿ ನವಚೇತನವು ಈ ವ್ಯವಸ್ಥೆಯಲ್ಲಿ ಉಕ್ಕಿ ಹರಿಯುತ್ತದೆ. ಅದು ಹೇಗೆಂದರೆ, ನೀವು ಗಮನವನ್ನು ನಿಮ್ಮ ತೊಂದರೆಗಳ ಕಡೆಗಲ್ಲದೆ ನಿವ್ಮು ಅಂತರಂಗದ ಕೇಂದ್ರಬಂದುವಿನ ಕಡೆಗೆ ತಿರುಗಿಸಿರುತ್ತೀರಿ. ಕೇವಲ ಒಂದು ಕ್ಷಣ ಧ್ಯಾನ ಮಗ್ನರಾದರೂ ನಿಮ್ಮ ಮನವರಳಿ ನಿರಾಳವಾಗುವುದನ್ನು ನೀವು ಅನುಭವಿಸಬಹುದು. ಧ್ಯಾನವು ತಕ್ಷಣ ಫಲ ನೀಡುತ್ತದೆ. ಅದರ ಪ್ರಭಾವ ಎಷ್ಟು ಶಾಂತಿದಾಯಕವೆಂದರೆ ಅನತಿ ಕಾಲದಲ್ಲಿಯೇ ಎಲ್ಲ ಒತ್ತಡ, ಭಯ, ಕೋಪ ಮುಂತಾದವುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆಯ ವಿಧಾನವನ್ನು ಹೇಗೆ ಬದಲಾಯಿಸಬೇಕೆಂಬುದನ್ನು ಕಲಿಯುವಿರಿ.
ಒಂದು ಕಥೆ ಹೇಳುವೆ:
ಚಿಕಾಗೋದ ವಿಶ್ವವಿದ್ಯಾಲಯದಲ್ಲಿ ನಡೆಸಿದ ಒಂದು ಪ್ರಯೋಗದ ಸಂಗತಿ ಹೀಗಿದೆ:
ಆರೋಗ್ಯವಂತನೂ, ಬುದ್ದಿವಂತನೂ ಆದ ಯುವಕನೊಬ್ಬನು ಬೆಳಿಗ್ಗೆ ಎದ್ದು ಆಫೀಸಿಗೆ ಹೊರಡಲು ಸಿದ್ದನಾಗುತ್ತಾನೆ. ಅವನ ಹೆಂಡತಿಯು ಅವನನ್ನು ನೋಡಿ 'ಇಂದೇಕೋ ಆಯಾಸಗೊಂಡಂತೆ ಕಾಣುತ್ತೀರಿ. ನಿಮಗೆ ಹುಷಾರಿದೆ ತಾನೇ?' ಎಂದು ಕೇಳುತ್ತಾಳೆ.
ಅವಳ ಈ ಮಾತಿನಿಂದ ಸಿಡಿಮಿಡಿಗೊಂಡು 'ಇಲ್ಲದ್ದನ್ನು ಕಲ್ಪಿಸಿಕೊಳ್ಳ ಬೇಡ' ಎಂದು ಹೇಳಿ ಆಫೀಸಿಗೆ ಹೊರಡುತ್ತಾನೆ.
ಅವನು ಗ್ಯಾರೇಜಿನಿಂದ ಕಾರನ್ನು ಹೊರತೆಗೆಯುತ್ತಿದ್ದಂತೆ ಅವನನ್ನೇ ಗಮನಿಸುತ್ತಿದ್ದ ಅವನ ಪಕ್ಕದ ಮನೆಯವನು 'ನೀನು ಚೆನ್ನಾಗಿದ್ದೀಯ ತಾನೆ? ಏನೋ ಸುಸ್ತಾದಂತೆ ಕಾಣುತ್ತೀಯೆ?' ಎನ್ನುತ್ತಾನೆ.
ಯುವಕನಿಗೆ ಆಶ್ಚರ್ಯವಾಗುತ್ತದೆ. ತನಗೇನೂ ಆಗಿಲ್ಲವೆಂದು ಹೇಳಿ ಹೊರಡುತ್ತಾನೆ. ಅವನು ಆಫೀಸಿಗೆ ತಲುಪಿದೊಡನೆ ಸ್ವಾಗತಕಾರಳು ಅವನನ್ನು ನೋಡಿ ಆತಂಕದಿಂದ, 'ನಿಮಗೆ ಹುಷಾರಿದ್ದಂತಿಲ್ಲ ಕೆಲಸಕ್ಕೇಕೆ ಬಂದಿರಿ?' ಎಂದು ಕೇಳುತಾಳೆ. ಯುವಕನು 'ನನಗೇನೂ ಹಾಗೆ ಕಾಣುತ್ತಿಲ್ಲ. ನೋಡೋಣಿ' ಎಂದು ಹೇಳಿ ತನ್ನ ಕಪಾಟಿನತ್ತ ಹೋಗುತ್ತಾನೆ.
ಅವನನ್ನು ಕಂಡ ಸಹೋದ್ಯೋಗಿಯೂ ನಿನಗೇನಾಗಿದೆ? ನೀನು ಜ್ವರ ಬಂದವನಂತೆ ಕಾಣುತ್ತಿದ್ದೀಯೆ?' ಎನ್ನುತ್ತಾನೆ.
ಇದೀಗ ಭರಿಸಲಾಗದಾಯಿತು ಮತ್ತು ಸ್ವಲ್ಪ ಆಯಾಸವಾದಂತೆ ಭಾಸವಾಯಿತು. ಅಷ್ಟು ಹೊತ್ತಿಗೆ ಸರಿಯಾಗಿ ಅವನ ಮೇಲಾಧಿಕಾರಿಗಳು ಒಳಗೆ ಕರೆಯುತ್ತಾರೆ. ಅವರೂ ಸಹ ಒಂದು ನೋಟದಲ್ಲೇ 'ನಿಮಗೆ ನಿಜವಾಗಿಯೂ ಹುಷಾರಿದ್ದಂತಿಲ್ಲ. ಇಂದು ಕೆಲಸ ವಾಡಲು ಸಾಧ್ಯವಾಗುತ್ತದೆಯೇ? ವೈದ್ಯರ ಬಳಿ ಹೋಗಬಾರದೇಕೆ?' ಎನ್ನುತ್ತಾರೆ.
ಆತನಿಗೆ ಸಾಕಾಗಿ ಹೋಗಿ, ಈಗ ನಿಜವಾಗಿಯೂ ಖಾಯಿಲೆ ಬಂದಂತಾಗಿ, ಮನೆಗೆ ಹೋಗಲು ನಿಶ್ಚಯಿಸುತ್ತಾನೆ.
ಮನೆಯ ಕಡೆಗೆ ಹೋಗುತ್ತಾ, ಅವನಿಗೆ ಜ್ವರವೇರುತ್ತಿರುವಂತೆ ಭಾಸವಾಗುತ್ತದೆ. ಮನೆಯನ್ನು ತಲುಪಿದಾಗ ಹೆಂಡತಿಗೆ ಆಶ್ಚರ್ಯವಾಗಿ, ಅವನ ಹಣೆಯನ್ನು ಮುಟ್ಟಿದಾಗ ನಿಜವಾಗಿಯೂ ಬಿಸಿಯಾಗಿರುತ್ತದೆ. ಅವನಿಗೆ ಜ್ವರ ಏರಿರುತ್ತದೆ. ಈ ಪ್ರಯೋಗವನ್ನು ಹನ್ನೊಂದು ಜನರ ಮೇಲೆ ನಡೆಸಲಾಗಿತ್ತು ಹಾಗೂ ಕೊನೆಯಲ್ಲಿ ಹನ್ನೊಂದು ಜನರಿಗೂ ಹುಷಾರು ತಪಿತ್ತು!
ಇದರಿಂದ ನಾವು ತಿಳಿಯಬೇಕಾದುದೇನೆಂದರೆ ನೀವು ಅಂತಸ್ಸತ್ವದ ಮೇಲೆ ಆಧಾರ ಪಡದಿದ್ದರೆ ಆಗುವುದೇ ಹೀಗೆ ಬಾಹ್ಯ ಪ್ರಭಾವದಿಂದಾಗಿ ನಿಮ್ಮಲ್ಲಿ ಏರಿಳಿತಗಳುಂಟಾಗುತ್ತವೆ.
ನಿಮ್ಮ ಆತ್ಮ ಕೇಂದ್ರವನ್ನು ಕಂಡುಕೊಂಡಾಗ ಅದರೆಡೆಗೆ ಜಾಗೃತರಾಗಿ ಹಿಂದಿರುಗಬಲ್ಲಿರಿ ಮತ್ತು ಪುನರ್ಜೀವನಗೊಳ್ಳುವಿರಿ. ನಿಮ್ಮಲ್ಲಿರುವ ಅಂತಃಶಕ್ತಿಯು ತೆರೆದುಕೊಂಡಂತೆ ನಿಮ್ಮಲ್ಲಿ ಹೊಸ ಉತ್ಸಾಹ, ಶಕ್ತಿ, ಧೈರ್ಯ, ಆತ್ಮಬಲ, ಮುಂದಾಳುತನದ ಗುಣಗಳು ಮೂಡಿಬರುತ್ತವೆ. ನಿಮ್ಮ ಕಾರ್ಯ ಸಾಧ್ಯತೆಯು ಪರಿಮಾಣದ ನೆಗೆತ ಹೊಂದುತ್ತದೆ. ನೀವು ಸ್ವತಃ ನಿಮ್ಮದೇ ಶಕ್ತಿಯ ಮೂಲವಾಗುತ್ತೀರಿ, ಜನಪ್ರಿಯರೂ ಆಗುತ್ತೀರಿ. ಏಕೆಂದರೆ, ನಿಮ್ಮ ವ್ಯಕ್ತಿತ್ವವೇ ಸ್ಪೂರ್ತಿದಾಯಕವಾಗಿರುತ್ತದೆ.
ನಿಮ್ಮಲ್ಲಿ ನೀವು ಸ್ಥಿರವಾಗುವುದು ಹೇಗೆ?
ನಿಮ್ಮಲ್ಲೇ ನೀವು ಸ್ಠಾಪಿತವಾಗಲು ನಿಮ್ಮೊಳಕ್ಕೆ ನೀವು ಹೆಚ್ಚು ಹೆಚ್ಚು ಆಳಕ್ಕೆ ಹೋಗಬೇಕು.
ಸಂಪೂರ್ಣ ಸವುಸ್ಲಿತಿಯನ್ನು ಹೊಂದುವವರೆಗೂ ನಿಮ್ಮ ಆಲೋಚನೆಗಳನ್ನೂ, ಭಾವನೆಗಳನ್ನೂ ಸಾಕ್ಷಿಭಾವದಿಂದ ನೋಡುವುದನ್ನು ಅಭ್ಯಾಸ ಮಾಡಿರಿ. ಅನತಿಕಾಲದಲ್ಲಿ ನಿಮ್ಮ ಯತ್ನವು ಅಪ್ರಯತ್ನವಾಗುತ್ತದೆ.
ನೀವು ನಿಮ್ಮ ನಿಜ ಅಸ್ಸಿತ್ವವನ್ನು ಹೊಂದುತ್ತೀರಿ ಎಂಬುದು ಸಾಮಾಜಿಕ ನಿಯಮಗಳಿಂದಾಗಲೀ ಪೂರ್ವಾನುಭವಗಳ ಸಮೂಹದಿಂದಾಗಲೀ ರೂಪಿಸಲ್ಪಟ್ಟಿರುವುದಿಲ್ಲ.
ಪ್ರಸ್ತುತ ನೀವು ಮೂರು ವ್ಯಕ್ತಿಗಳಾಗಿರುವಿರಿ. ಹೊರಗಿನವರ ದೃಷ್ಟಿಯಲ್ಲಿ ನೀವು, ನಿಮ್ಮ ದೃಷ್ಟಿಯಲ್ಲಿ ನೀವು, ನಿಜವಾಗಿಯೂ ಇರುವ ನೀವು.
ನೀನಾಗಿ ನೀನಿದ್ದೀಯಾ ಅಥವಾ ಸಮಾಜ ನಿನಗಾಗಿರುವುದೀಯಾ?
ನಿಮ್ಮನ್ನು ಸಮಾಜವು ಗುರುತಿಸುವುದು ಗುರುವೋ, ಪ್ರಧಾನಾಧಿಕಾರಿಯೋ, ಕಾರ್ಮಿಕನೋ, ವೈದ್ಯನೋ ಅಥವಾ ಶಾಲೆ ಬಿಟ್ಟವನೋ? ನೀವು ಜಾಣನಾದ ಪತ್ನಿಯೋ ಅಥವಾ ಗೌರವಾನ್ವಿತ ತಂದೆಯೋ/ನೀವು ಮೊದಲಸ್ಥಾನ ಪಡೆದ ವಿದ್ಯಾರ್ಥಿಯೋ ಅಥವಾ ಅಪರಾಧಿಯೋ? ನೀವು ಉದಾರ ಮನೋಭಾವದ ಗಂಡೋ, ಅಥವಾ ಮುಷ್ಠುಗಟ್ಟಿಕೊಂಡ CEOನೋ? ಅನುಕರಣೀಯ ವ್ಯಕ್ತಿಯೋ? ನೀವು ಇವುಗಳಾ ಮಾತ್ರವೇ?
ಸಮಾಜವು ಪ್ರಸ್ತುತ ನಿಮ್ಮನ್ನು ಯಾರೆಂದು ಆರೋಪಿಸಿದೆಯೋ ಅದೇ ನೀವೆಂದು ತಿಳಿದುಕೊಳ್ಳುವುದು ತಪ್ಪು. ಅದು ನಿಮ್ಮ ಗುರುತನ್ನು ಒಂದು ವ್ಯಕ್ತಿತ್ವದಲ್ಲಿ ಸಿಕ್ಕಿಸಿ ಹಾಕಿ ಆ ವ್ಯಕ್ತಿತ್ವವೇ ನಿಮ್ಮದೆಂದು ಬಗೆಯುವಂತೆ ಮಾಡುತ್ತದೆ. ಪರಿಣಾಮವಾಗಿ, ನಿಮ್ಮ ನಿಜ ಶಕ್ತಿಯು ಕುಗ್ಗುತ್ತದೆ. ಅಲ್ಲಿಂದ ಮುಂದೆ ವಿಕಸನವೂ ಸಾಧ್ಯವಿಲ್ಲ; ಏಕೆಂದರೆ ಬದಲಾವಣೆಗೆ ಅವಕಾಶವೇ ಇರುವುದಿಲ್ಲ.
ಇಷ್ಟು ಮಾತ್ರ ಸ್ಪಷ್ಟ–ನಿಮ್ಮ ಸಂಗಾತಿಯನ್ನು ಬದಲಿಸಲು ಪ್ರಯತ್ನಿಸಬೇಡಿ. ವ್ಯವಹರಿಸಲು ಹೋಗಬೇಡಿ. ಕ್ಷಮಿಸುವುದಕ್ಕಾಗಿರಲೀ, ಮಾನಸಿಕ ಚಿಕಿತ್ಸೆಯಿಂದಾಗಲೀ, ಬಾಹ್ಯ ಬದಲಾವಣೆಯಿಂದ ಏನೂ ಪ್ರಯೋಜನವಿಲ್ಲ.
ನೀವಿರುವ ಸ್ಥಿತಿಯಿಂದ ಆಂತರಿಕ ಪರಿವರ್ತನೆಯನ್ನು ಪ್ರಾರಂಭಿಸಿದಾಗ ನೀವು ನಿಮಗೇ ನೇರವಾಗುವಿರಿ. ಆಧ್ಯಾತ್ಮಿಕತೆ ಎಂದರೆ ನಿಮ್ಮ ನಿಜ ಸ್ಥಿತಿಗೆ ಮರಳುವುದು ಮತ್ತು ನಿಮ್ಮೊಂದಿಗೆ ನೀವು ಜೊತೆಗೂಡುವುದು.
ತಮ್ಮ ಅಸ್ತಿತ್ವವು ಸಾಮಾಜಿಕ ಗುರುತು ಹಾಗೂ ಭೌತಿಕ ಸಂಪತ್ತುಗಳಿಗೆ ಮೀರಿದ್ದು ಎಂದು ಅರಿತವರೇ ನಿಜವಾದ ಆಧ್ಯಾತ್ಮಿಗಳು. ಅವರು ತಾವಾಗಿಯೇ ಪೂರ್ತಿಯಾಗಿ ತಾನೇ ತಾನಾಗಲು ಸಾಮಾಜಿಕ ನಿಯಮಗಳನ್ನು ಮೀರಿ ಹೋಗುವವರು. ಆಧ್ಯಾತ್ಮಿಕತೆ ಸಂಭವಿಸಬೇಕು ಎಂದೊಡನೆ ಎಲ್ಲಾ ಬಾಧ್ಯತೆಗಳನ್ನು ತೊರೆದು ದೂರದ ಕಾಡಿಗೆ ಹೋಗಬೇಕೆಂಬ ಭಾವನೆಯನ್ನು ತೊಡೆದುಹಾಕಿರಿ.
ಮಾನಸಿಕ ವೀಕ್ಷಣೆಯಲ್ಲಿ ಸರಳವಾದ ಬದಲಾವಣೆ ಮಾತ್ರ ಸಾಕು.
ತಿಳುವಳಿಕೆಯ ರೂಪಾಂತರ
ನಿಮ್ನ ಅಸ್ತಿತ್ವದ ಇರುವಿಕೆಯು ಮೇಲಿಂದ ಮೇಲೆ ಅನುಭವವಾದಾಗ ಸಹಜವಾಗಿಯೇ ನಿಮ್ಮಲ್ಲಾಗುವ ಬದಲಾವಣೆಯೇ ತಿಳುವಳಿಕೆಯ ರೂಪಾಂತರ.
ನಾವು ಒಳಹೊಕ್ಕಿ ನೋಡುವುದನ್ನು ಅಭ್ಯಾಸ ಮಾಡಿದಂತೆ, ನಮಗೆ ತಿಳಿದಿರದ ಪ್ರಪಂಚವೊಂದು ಗೋಚರವಾಗುತ್ತದೆ.
ನಮ್ಮ ಅಸ್ತಿತ್ವವನ್ನು ತಲುಪಿದಾಗ ನಮ್ಮೊಳಗೆ ಸುಪ್ತವಾಗಿದ್ದ ಶಕ್ತಿ, ಅರಿವು, ಸಂತುಲನಾಶಕ್ಕಿ, ಸ್ವಾಭಾವಿಕತೆಗಳ ಮುಸುಕು ತೆರೆಯಲಾ— ರಂಭಿಸುತ್ತದೆ.
ನಾವು ಹಿಂದೆಂದೂ ಅನುಭವಿಸಿರದ ಶಾಂತಿ, ಪ್ರೇಮ ಮುಂತಾದ ಸುಂದರಭಾವಗಳನ್ನು ಕಾಣಲಾರಂಭಿಸುತ್ತೇವೆ. ಇನ್ನೂ ಆಳಕ್ಕೆ ಹೋದಾಗ, ನಾವು ಆನಂದವನ್ನು ಸಂಧಿಸುತ್ತೇವೆ ಮತ್ತು ಆನಂದವು ಯಾವಾಗಲೂ ಇದ್ದ ನಮ್ಮ ಸಹಜ ಸ್ಥಿತಿಯೇ ಎಂದು ಅನಿಸುತ್ತದೆ. ನಾವು 'ನಿತ್ಯ ಆನಂದ'ರು– ಅಂದರೆ ಹೊರ ಪ್ರಪಂಚಕ್ಕಿಂತ ಹೆಚ್ಚು ನಿಜವಾಗುವ ಸ್ಥಿತಿ ಎಡೆಗೆ ಬೆಳೆಯುವ ಭಾವನೆ. ಈ ಭಾವನೆಯು ಬೆಳೆದು ಹೊರಪ್ರಪಂಚಕ್ಕಿಂತಲೂ ಹೆಚ್ಚು ವಾಸ್ತವವಾಗಬೇಕು.
ಇದನ್ನು ಅನುಭವಿಸಲು, ನಮ್ಮ ಅಸ್ತಿತ್ವಕ್ಕೆ ಹಿಂದಿರುಗುವ ಅಭ್ಯಾಸ— ವೊಂದೇ ಸಾಕು. ಈ ಅನುಭವವು ಆಧ್ಯಾತ್ಮಿಕ ಅಭ್ಯಾಸಗಳಿಂದ ತಾನಾಗಿಯೇ ಮೂಡಿಬರುತ್ತದೆ. ಒತ್ತಾಯ ಬೇಕಿಲ್ಲ. ಇದು ಘಟಿಸಿದಾಗ ನಿಮ್ಮನ್ನು ನೀವು ಕಳಚಿಕೊಳ್ಳುವಿರಿ ಮತ್ತು ಬ್ರಹ್ಮಾಂಡದ ಪ್ರೇಮ– ದೊಂದಿಗೆ ಬೆರೆತು ಮೇಲೇಳುವಿರಿ.
ಕ್ರಮೇಣ ಆ ಅಸ್ತಿತ್ವದಿಂದ ಕೆಲಸ ಮಾಡಲಾರಂಭಿಸುತ್ತೀರಿ ಮತ್ತು ನೀವು ಆಧ್ಯಾತ್ಮಿಕ ಗುಣಗಳನ್ನು ವ್ಯಕ್ತಪಡಿಸಲಾರಂಭಿಸುತ್ತೀರಿ. ನೀವು ಪ್ರಪಂಚವನ್ನು ನೋಡುವ ದೃಷ್ಟಿಯೇ ಬದಲಾಗಿ ಎಲ್ಲೆಡೆಯಲ್ಲೂ ಸೂಕ್ಷ್ಮವಾದ ಸೌಂದರ್ಯ, ಮಂಗಳತ್ವ, ಪರಿಪೂರ್ಣ ಮೌನ ಹಾಗೂ ಸಾಮರಸ್ಯಗಳೇ ಕಂಡುಬರುತ್ತವೆ. ಸೃಷ್ಟಿಯಲ್ಲಿ ಎಂದೂ, ಎಲ್ಲೂ, ಯಾವ ಅಪಸ್ವರವೂ ಇರಲಾರದೆಂದು ಆಗ ಮಾತ್ರ ಅರಿವಾಗುತ್ತದೆ.
ಆಗ ಕರೆಯುತ್ತಾರೆಯೋ ಅದರೊಂದಿಗೆ ಮುಖಾಮುಖಿಯಾಗುತ್ತೀರಿ.
ಒಂದು ಸಣ್ಣ ಕಥೆ:
ಒಂದಾನೊಂದು ಕಾಲದಲ್ಲಿ ಒಬ್ಬ ಬಾಲಕನು ದೇವರನ್ನು ಸಂಧಿಸಬೇಕೆಂಬ ಬಯಕೆ ಹೊಂದಿದ್ದನು. ಅಲ್ಲಿಗೆ ಬಹಳ ದೂರ ಪ್ರಯಾಣ ವಾಡಬೇಕಾಗುವುದೆಂದು ಅವನು ದಾರಿಗೆ ತಿಂಡಿ ತೀರ್ಥಗಳನ್ನೂ, ಚೀಲವನ್ನೂ ತೆಗೆದುಕೊಂಡು ಹೊರಟನು.
ಕೊಂಚ ದೂರ ಹೋದ ನಂತರ ಅವನು ಒಬ್ಬ ಮುದುಕಿಯನ್ನು ಕಂಡನು. ಆಕೆಯು ಉದ್ಯಾನದಲ್ಲಿ ಪಾರಿವಾಳಗಳನ್ನು ನೋಡುತ್ತಾ ಕುಳಿತಿದ್ದಳು. ಹುಡುಗನು ಅವಳ ಸಮೀಪದಲ್ಲಿ ಕುಳಿತು ತನ್ನ ಚೀಲವನ್ನು ತೆಗೆದನು. ಅವನು ಪಾನೀಯವನ್ನು ಕುಡಿಯುವುದರಲ್ಲಿದ್ದಾಗ ಆಕೆಯು ಹಸಿದಿರುವಳೆಂಬುದನ್ನು ಗಮನಿಸಿ, ಅವಳಿಗೂ ಸ್ವಲ್ಪ ತಿಂಡಿಯನ್ನು ಕೊಟ್ಟನು.
ಆಕೆಯು ಅದನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿ, ಮುಗುಳ್ಳಕ್ಕಳು. ಆಕೆಯ ನಗೆಯು ಎಷ್ಟು ಮನಮೋಹಕವಾಗಿತ್ತೆಂದರೆ, ಹುಡುಗನು ಅದನ್ನು ಮತ್ತೆ ನೋಡಬಯಸಿದನು. ಆದ್ದರಿಂದ ಅವನು ಆಕೆಗೆ ಪಾನೀಯವನ್ನು ನೀಡಿದನು.
ಆಕೆಯು ಮತ್ತೆ ಅವನನ್ನು ನೋಡಿ ಮುಗುಳ್ನಕ್ಕಳು. ಹುಡುಗನಿಗೆ ಅತ್ಯಾನಂದವಾಯಿತು. ಅವರಿಬ್ಬರೂ ಮಧ್ಯಾಹ್ನವೆಲ್ಲಾ ಅಲ್ಲಿಯೇ ತಿಂಡಿ ತಿನ್ನುತ್ತಾ ನಗುನಗುತ್ತಾ ಕಾಲ ಕಳೆದರು. ಆದರೆ ಇಬ್ಬರೂ ಮಾತನಾಡಲಿಲ್ಲ. ಕತ್ತಲಾದಾಗ ಹುಡುಗನಿಗೆ ಆಯಾಸವಾಗಿ ಅಲ್ಲಿಂದ ಹೊರಡಲು ಅನುವಾದನು. ಎರಡು ಹೆಜ್ಜೆ ಮುಂದೆ ಹೋದವನು ಹಿಂದಿರುಗಿ ಓಡಿಬಂದು ಮುದುಕಿಯನ್ನು ಅಪ್ಪಿಕೊಂಡನು.
ಮುದುಕಿ ಅವನೆಡೆಗೆ ಹಿಂದೆಂದಿಗಿಂತಲೂ ದೊಡ್ಡ ನಗೆಯನ್ನು ಬೀರಿದಳು. ಹುಡುಗನು ತನ್ನ ಮನೆಗೆ ಹೋಗಿ ಬಾಗಿಲನ್ನು ತೆರೆದನು. ಅವನ ತಾಯಿಯು ಅವನ ಮುಖದಲ್ಲಿದ್ದ ಆನಂದವನ್ನು ನೋಡಿ ಆಶ್ಚರ್ಯಗೊಂಡಳು. "ಇಂದು ಇಷ್ಟು ಆನಂದವಾಗುವಂತಹದ್ದೇನನ್ನು ಮಾಡಿದೆ"? ಎಂದು ಕೇಳಿದಳು. "ನಾನು ದೇವರೊಡನೆ ಊಟ ಮಾಡಿದೆ" ಎಂದು ಹೇಳಿ, ತಾಯಿಯು ಏನಾದರೂ ಹೇಳುವ ಮೊದಲೇ ಮುಂದುವರಿಸಿದನು, "ನಿನಗೆ ಗೊತ್ತೆ? ಅವಳ
ಮುಗುಳ್ನಗೆಯು ನಾನೀವರೆವಿಗೂ ಎಲ್ಲೂ ಕಂಡಿರದಷ್ಟು ಸುಂದರವಾಗಿತ್ತು!."
ಅತ್ತ ಮುದುಕಿಯೂ ತನ್ನ ಮನೆಗೆ ಅತ್ಯಾನಂದದಿಂದ ಹಿಂದಿರುಗಿ ದಳು, ಆಕೆಯ ಮಗನು ಅವಳ ಮುಖದಲ್ಲಿದ್ದ ಪ್ರಸನ್ನತೆಯನ್ನು ಕಂಡು ದಿಗ್ಭಮೆಗೊಂಡು "ಅವ್ವಾ ಇಷ್ಟು ಸಂತೋಷವಾಗುವಂತಹುದೇನು ನಡೆಯಿತು?" ಎಂದು ಕೇಳಿದನು. "ನಾನು ಉದ್ಯಾನವನದಲ್ಲಿ ದೇವರೊಡನೆ ಊಟ ಮಾಡಿದೆ." ಮಗನು ಏನಾದರೂ ಹೇಳುವ ಮೊದಲೇ ಆಕೆಯು 'ದೇವರು ನಾನು ಎಣಿಸಿದುದಕ್ಕಿಂತಾ ಎಳೆವಯಸ್ಸಿನವನು!'. ಎಂದಳು.
ನೀವು ಆಧ್ಯಾತ್ಮದೆಡೆಗೆ ತಿರುಗಿದಾಗ ಇಂತಹ ರಮ್ಯ ಅನುಭವಗಳಾ– ಗುತ್ತವೆ. ಇಂತಹ ಸುಂದರ ಸರಳತೆ ಮೂಡಿಬರುತ್ತದೆ! ಅನುಕಂಪ, ಸಹಾನುಭೂತಿ, ಉದಾರತೆ ಮುಂತಾದ ಉದಾರ ಗುಣಗಳು ಮಧುರನಾದದಂತೆ ಮೂಡಿ ಬರುತ್ತವೆ. ಈ ಭಾವನೆಗಳಿಗನು– ಸಾರವಾಗಿ ನಡೆದಾಗ ನಮ್ಮ ಹಿಂದಿನ ವರ್ತನೆಯೇ ಬದಲಾಗುತ್ತದೆ.
ತಿಳುವಳಿಕೆಯ ಈ ರೂಪಾಂತರವು ನಿಮ್ಮಲ್ಲಿ ತಾನಾಗಿಯೇ ಮೂಡಿ ಬರುತ್ತದೆ. ನಿಮ್ಮ ಅಸ್ತಿತ್ವದಿಂದ ಕಾರ್ಯೋನ್ಮುಖರಾಗುತ್ತೀರಿ. ನೀವು ಹೆಚ್ಚು ಹೆಚ್ಚಾಗಿ ಹೃದಯದಿಂದ ಸ್ಪಂದಿಸುತ್ತೀರಿ. ಕಾಲಕ್ರಮದಲ್ಲಿ ಮನಸ್ಸಿನಿಂದ ನಿರ್ಮನಸ್ಕ ಸ್ಥಿತಿಯನ್ನು ಹೊಂದುತ್ತೀರಿ. ಮನಸ್ಸೆಂಬುದು ನಿಮ್ಮ ಜೀವನದಲ್ಲಿ ಉಂಟುಮಾಡುತ್ತಿರುವ ಅಲ್ಲೋಲ ಕಲ್ಲೋಲವನ್ನು ಗ್ರಹಿಸಿ ಅದರಿಂದ ಬಿಡಿಸಿಕೊಳ್ಳುತ್ತೀರಿ– ನಿಮ್ಮ ಮೇಲಿನ ಅದರ ಹಿಡಿತವು ಕ್ರಮವಾಗಿ ಸಡಿಲಗೊಳ್ಳುತ್ತದೆ.
ಮನಶ್ಚಕ್ಕಿ
ಕಳೆದ ಶತಮಾನದಲ್ಲಿ ನಡೆಸಿದ ಒಂದು ಪ್ರಯೋಗದ ಸಂಗತಿ ಹೇಳುತೇನೆ:
ಒಬ್ಬನಿಗೆ ಅವನ ಅಪರಾಧಕ್ಕಾಗಿ ಮರಣದಂಡನೆಯ ಶಿಕ್ಷೆ ವಿಧಿಸ ಲಾಗಿತ್ತು, ಕೆಲ ವಿಜ್ಞಾನಿಗಳು ಅವನನ್ನು ಸಂಧಿಸಿ 'ನಿಗದಿತ ದಿನದಂದು ನಿನಗೆ ಮರಣದಂಡನೆ ಉಂಟಾಗುತ್ತದೆ ಎಂಬುದು ನಿನಗೆ ತಿಳಿದಿದೆಯೆ?' ಎಂದು ಕೇಳಿದರು. ಅವನು ಅದು ನಿಜವೆಂದೂ, ಅದನ್ನು ತಪ್ಪಿಸಲು ಸಾಧ್ಯವಿಲ್ಲವೆಂದೂ ಹೇಳಿದನು. ಆಗ ವಿಜ್ಞಾನಿಗಳು ಮರಣಕ್ಕೆ ಮೊದಲೇ ತನ್ನ ದೇಹವನ್ನು ಮಾನವಹಿತಕ್ಕಾಗಿ ಮಾಡುವ ಪ್ರಯೋಗಕ್ಕಾಗಿ ನೀಡಲು ಕೇಳಿದರು. ಅವನು ಒಪ್ಪಿಕೊಂಡನು.
ವಿಜ್ಞಾನಿಗಳು ನ್ಯಾಯಾಲಯದ ಲಿಖಿತ ಸಮ್ಮತಿಯನ್ನು ಪಡೆದರು. ವಿದ್ಯುತಿನಿಂದ ಪ್ರಾಣ ತೆಗೆಯುವ ನಿಶ್ಚಿತ ದಿನದಂದು ವಿಜ್ಞಾನಿಗಳೂ, ಮಾನಸಿಕ ತಜ್ಞರೂ ಹಾಗೂ ವೈದ್ಯರುಗಳು ತಯಾರಾಗಿ ಅಲ್ಲಿಗೆ ಬಂದರು. ತಮ್ಮ ಪ್ರಯೋಗಗಳನ್ನು ಆರಂಭಿಸಿದರು.
ಹೇಗಾದರೂ ಸಾವು ನಿಶ್ಚಿತವಾದುದರಿಂದ ವಿದ್ಯುದ್ಭಾತದ ಬದಲು, ಹಾವು ಕಡಿತದಿಂದ ಸಾವಾದರೆ ಹೇಗೆ ಎಂದು ಕೇಳಿದರು. ವಿಷವು ಹೇಗೆ ಹರಡುತ್ತದೆ, ಮನುಷ್ಯನು ಹಾವಿನ ಕಡಿತದಿಂದ ಹೇಗೆ ಸಾಯುತ್ತಾನೆ ಎಂಬುದನ್ನು ಅವರು ಪರೀಕ್ಷಿಸಬೇಕೆಂದರು. ಅವರು ಹಾವು ಕಡಿತದ ಮದ್ದು ಮನುಷ್ಯನನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ಪರೀಕ್ಷಿಸಲು ಬಯಸಿದರು. ಇದಕ್ಕೆ ಅವನ ಅನುಮತಿಯನ್ನು ಕೇಳಿದರು. ಅವನು ಈ ಪ್ರಯೋಗಕ್ಕೆ ಸಮ್ಮತಿಸಿದನು.
ವಿಜ್ಞಾನಿಗಳು ಒಂದು ಕುದುರೆಯ ಮೇಲೆ ಹಾವಿನ ವಿಷದ ಪರಿಣಾಮವನ್ನು ಅವನೆದುರಿಗೆ ಸಜೀವವಾಗಿ ಪ್ರದರ್ಶಿಸಿದರು. ಹಾವು ಕಡಿದ ಕೆಲವು ಕ್ಷಣಗಳಲ್ಲಿ ಕುದುರೆಯು ಕೆಳಗೆ ಬಿದ್ದು, ನರಳಿ ಮರಣ ಹೊಂದಿತು.
ವಿಜ್ಞಾನಿಗಳು ಇದೇ ಪ್ರಯೋಗವನ್ನು ಅವನ ಮೇಲೆ ಮಾಡುವು ದಾಗಿಯೂ, ಅವನ ಸಾವೂ ಇದೇ ರೀತಿಯಾಗಿರುತ್ತದೆಂದೂ ಹೇಳಿದರು.
ಅವನ ಕಣ್ಣಿಗೆ ಬಟ್ಟೆ ಕಟ್ಟಿ ಅವನು ನೋಡಲಾರದಂತೆ ಮುಸುಕನ್ನೂ ಹಾಕಿದರು. ಇನ್ನೆರಡು ನಿಮಿಷದಲ್ಲಿ ಹಾವು ಕಡಿಯುವುದೆಂದು ಹೇಳಿದರು.
ಆದರೆ ಪ್ರಯೋಗದಲ್ಲಿ ಅವರು ಹಾವಿನ ಬದಲು ಇಲಿಯನ್ನು ಉಪಯೋಗಿಸಿದರು. ಆದರೆ ಅವನಿಗೆ ಹಾವೇ ಕಡಿಯಿತೆಂದೂ, ಅವನಿನ್ನೇನು ಸಾಯುತ್ತಾನೆಂದೂ ಹೇಳಿದರು.
ಅವನ ಮನಸ್ಸಿಗೆ ಹಾವೇ ಕಡಿಯಿತೆಂಬುದು ಖಚಿತವಾಗಿ, ತಾನೂ ಆ ಕುದುರೆಯಂತೆಯೇ ಸಾಯುವೆನೆಂಬ ಗಾಢ ನಂಬಿಕೆಯುಂಟಾ ಗಿತ್ತು. ಆ 'ಹಾವು' ಕಡಿದೊಡನೆಯೇ ಅವನ ಮನಃಶಕ್ಕಿಯು ದೇಹದಲ್ಲಿ ಕಂಪನ ಉಂಟುಮಾಡಿತು, ಆ ಕುದುರೆಯು ನರಳಿದಂತೆಯೇ ನರಳಿ ಅವನು ಪ್ರಾಣ ಬಿಟ್ಟನು.
ವಿಜ್ಞಾನಿಗಳು ಅವನ ರಕ್ತವನ್ನು ಪರೀಕ್ಷಿಸಿದಾಗ ಅದರಲ್ಲಿ ಹಾವಿನ ವಿಷವಿತ್ತು!
ಮನಸ್ಸಿಗೆ ಸಕಾರಾತ್ಮಕವಾದುನ್ನಾಗಲೀ, ನಕಾರಾತ್ಮಕವಾದುದನ್ನಾಗಲೀ, ಸೃಷ್ಟಿಸುವ ಸಾಮರ್ಥ್ಯವಿದೆ; ಅದು ನಿಮ್ಮ ಜೀವನವನ್ನು ಬಲಿತೆಗೆದು– ಕೊಳ್ಳಬಹುದು, ಉಳಿಸಲೂಬಹುದು! ರೋಗಗಳನ್ನು ಅದು ನಿಮ್ಮಲ್ಲಿ ಸೃಷ್ಟಿಸಬಲ್ಲದು, ಅದು ವಾಸಿ ಮಾಡಬಲ್ಲದು. ಇಹಲೋಕದಲ್ಲೇ ಸ್ವರ್ಗವನ್ನೋ, ನರಕವನ್ನೋ ಸೃಷ್ಟಿಸಬಲ್ಲದು. ಅದು ನಿಮ್ಮನ್ನು ಒಂದೇ ಸಂದರ್ಭದಲ್ಲಿ ಸಂತೃಪ್ತರನ್ನಾಗಿಯೋ ಸಂತಪ್ತರನ್ನಾಗಿಯೋ ಮಾಡಬಲ್ಲದು.
ಮನಸ್ಸು ಮಾಯೆಯ ವಿಷವನ್ನು ನಿಮ್ಮಲ್ಲಿ ಉಂಟುಮಾಡುತ್ತದೆ.
ಈ ಮನಸ್ಸು ಮಾಯೆಯಲ್ಲದೆ ಬೇರಲ್ಲ. ಸಂಸ್ಕೃತದಲ್ಲಿ ಹೇಳುವಂತೆ 'ಯ ಮಾ ಇತಿ ಮಾಯ;' ಯಾವುದು ಇಲ್ಲವೊ ಅದೇ ಮಾಯೆ. ತಾನಿಲ್ಲದೆಯೇ ಸತತವಾಗಿ ಮನಸ್ಸನ್ನು ಕಲಕುತ್ತದೆ. ಹಿಂದೆ ಹೇಳಿದ ಪ್ರಯೋಗದಲ್ಲಿ ಆ ವ್ಯಕ್ತಿಯು ಹಾವು ಕಡಿತವಾಗದೆಯೇ ಸಾವನ್ನಪ್ಪಿದನು! ಇದೇ ರೀತಿ ಪ್ರತಿನಿತ್ಯವೂ ನಿಜವಲ್ಲದ ಚಿಂತೆಗಳ ಭಾರದಿಂದ ಕುಗ್ಗುತ್ತಿದ್ದೇವೆ.
ನಿಮ್ಮ ಚಿಂತೆಗಳಲ್ಲಿ ಶೇಕಡ 99ರಷ್ಟು ನಿಜವಾಗುವುದೇ ಇಲ್ಲವೆಂದು ನಿಮಗೆ ಗೊತ್ತೆ?
ಈ ಚಿಂತೆಗಳು ಕೇವಲ ಮನಸ್ಸು ಉಂಟುಮಾಡಿದವುಗಳೆಂದು ನಿಮಗೆ ತಿಳಿದಿದೆಯೇ?
ಯಾವಾಗಲೂ ಚಿಂತೆಗಳು ಬಾಹ್ಯವಿಚಾರಗಳಿಂದ ಉಂಟಾಗುತ್ತವೆಂದು ನೀವು ಭಾವಿಸುತ್ತೀರಿ. ನೀವು ಯಾವಾಗಲೂ ಹೊರಪ್ರಪಂಚ ವನ್ನು, ನಿಮ್ಮ ಸುತ್ತಲಿನವರನ್ನೂ, ನಿಮ್ಮ ಚಿಂತೆಗೆ ಕಾರಣವೆಂದು ದೂಷಿಸುತ್ತೀರಿ. ಚಿಂತೆಗೆ ಕಾರಣವು ಹೊರಗಿನದೇ ಆಗಿದ್ದರೆ, ಈ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯಾದರೂ ಎಲ್ಲವನ್ನೂ ಜಯಿಸಿ ಚಿಂತೆಗಳಿಂದ ಮುಕ್ತನಾಗಿರಬೇಕಿತ್ತು! ಆದರೆ ಅದರೆ ಹಾಗಿದೆಯೆ? ನೀವು ಸಂಧಿಸುವ ಪ್ರತಿಯೊಬ್ಬರಿಗೂ ಏನಾದರೂ ಚಿಂತೆಗಳಿದ್ದೇ ಇರುತ್ತವೆ. ಸಿರಿವಂತರೂ, ಬಡವರೂ, ಮದುವೆಯಾದವರೂ, ಆಗಿಲ್ಲದವರೂ, ಮಕ್ಕಳಿದ್ದವರೂ, ಇಲ್ಲದವರೂ, ನೌಕರಿಯಲ್ಲಿರುವವರೂ, ಸ್ವಂತ ವ್ಯಾಪಾರ ಮಾಡುವವರೂ – ಪ್ರತಿಯೊಬ್ಬರಿಗೂ ಚಿಂತೆಗಳಂತೂ ಇರುತ್ತವೆ.
ತಿಳಿಯಿರಿ, ಚಿಂತೆಗಳ ಮೂಲವು ಹೊರಗೆಲ್ಲೂ ಇಲ್ಲ; ನಮ್ಮೊಳಗೇ ಇರುವುದು. ಇದೇ ಸತ್ಯ. ಗಮನವಿಟ್ಟು ನೋಡಿದರೆ ನಿಮ್ಮ ಚಿಂತೆಯು ಯಾವುದೋ ಒಂದು ಘಟನೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯಲ್ಲದೆ ಬೇರಲ್ಲ ಎಂದು ನಿಮಗೆ ತಿಳಿಯುತ್ತದೆ. ನೀವು ಆಯ್ದುಕೊಳ್ಳುವ ಪ್ರತಿಕ್ರಿಯೆಯು ಆ ವಿಷಯವು ಚಿಂತೆಯೋ ಅಲ್ಲವೋ ಎಂಬುದನ್ನು ನಿರ್ಧರಿಸುತ್ತದೆ.
ಉದಾಹರಣೆಗೆ:
ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಏನೋ ಬಿಕ್ಕಟ್ಟಿನ ಪರಿಸ್ಥಿತಿಯಿದೆ ಎಂದು ಭಾವಿಸೋಣ. ಕೆಲವರನ್ನು ಕೆಲಸದಿಂದ ತೆಗೆಯುತ್ತಿದ್ದಾರೆಂದೂ ಭಾವಿಸೋಣ. ನಿಮ್ಮ ಕೆಲಸವೂ ಹೋಗುವ ಸಂಭವವೂ ಇದೆ. ಈ ವಿಷಯವನ್ನು ಕೇಳಿದೊಡನೆಯೇ ನೀವು ಆಳವಾದ ಚಿಂತೆಗೊಳಗಾಗುತ್ತೀರಿ. ಚಿಂತೆಗಳು ನಿಮ್ಮನ್ನು ಆವರಿಸುತ್ತವೆ. "ಏನಾಗುವುದೋ? ನನ್ನ ಮಡದಿ ಏನೆನ್ನುವಳೊ? ಮಕ್ಕಳಿಗೆ ಅವಮಾನವಾಗುತ್ತದೆ! ಹೊಸ ಕಾರಿನ ಸಾಲವನ್ನು ಹೇಗೆ ತೀರಿಸಲಿ?" ಎಂದು ಮುಂತಾಗಿ ನಿಮ್ಮ ಆಂತರ್ಯದ ಭಯಗಳೆಲ್ಲ ಮೇಲೆದ್ದು, ನೀವು ಬೀದಿಯ ಭಿಕಾರಿಯಾದಂತೆಯೂ ಅನಿಸಿಬಿಡಬಹುದು!
ಈ ರೀತಿ ಚಿಂತಿಸುವುದರಿಂದೇನೂ ಪ್ರಯೋಜನವಾಗದು. ನಿಮ್ಮ ತೊಂದರೆಗಳಿಗೆ ಪರಿಹಾರವೂ ದೊರಕುವುದಿಲ್ಲ. ದುರದೃಷ್ಟವಶಾತ್ ನಿಮ್ಮ ಕೆಲಸ ಹೋದರೂ ಹೋಗಬಹುದು, ಹೋಗದೆಯೂ ಇರಬಹುದಲ್ಲವೆ! ಅಂತ್ಯವಿಲ್ಲದಷ್ಟು ಸಾಧ್ಯತೆಗಳಿವೆ. ಯಾವುದು ನಿಶ್ಚಿತವಲ್ಲದಿದ್ದರೂ – ಈ ವೃಥಾಚಿಂತೆಯಿಂದ ನಿಮ್ಮ ಹೊಟ್ಟೆಯಲ್ಲಿ ಹುಣ್ಣಾಗುವ ಸಾಧ್ಯತೆ ಇದೆ.
ಆದ್ದರಿಂದ, ಇರುವ ತೊಂದರೆಗಳೊಂದಿಗೆ ಇನ್ನಷ್ಟನ್ನು ಏಕೆ ಸೇರಿಸಬೇಕು? ನಿಮ್ಮ ದೃಷ್ಟಿಗೆ ಮೀರಿದ ವಿಷಯಗಳ ಬಗ್ಗೆ ಚಿಂತಿಸುವುದನ್ನು ಕೈಬಿಡಿ.
ಚಿಂತೆಗಳ ಬಗ್ಗೆ ಚಿಂತಿಸುವುದನ್ನು ಬಿಡಿ. ಚಿಂತೆಗಳ ಬಗ್ಗೆ ಚಿಂತಿಸಿದಾಗ ಸತತವಾಗಿ ನಿಮ್ಮೊಳಗೆ ವಟಗುಟ್ಟುವಿಕೆ ಉಂಟಾಗುತ್ತದೆ. ಆಗ ಚಿಂತೆಗಳನ್ನು ಹುಟ್ಟಿಸುವ ಈ ಸತತ ವಟಗುಟ್ಟುವಿಕೆಯು ನಿಮ್ಮ ಒಡೆಯನಾಗುತ್ತದೆ.
ನಿಮ್ಮ ಶಕ್ತಿಯನ್ನು ನಕಾರದಕಡೆಗಲ್ಲದೆ, ಸಕಾರಾತ್ಮಕವಾಗಿ ಬಳಸಿಕೊಳ್ಳುವ ವಿವೇಕವನ್ನು ಹೊಂದಿರಿ. ಜೀವನದಲ್ಲಿ ಅಂತಹ ಭಯವುಂಟಾದಾಗ, ತಣ್ಣಗೆ ಕುಳಿತು, ನಿಮ್ಮ ಮನಸ್ಸು ಹೇಗೆ ಗೊಂದಲವೆಬ್ಬಿಸುತ್ತಿದೆಯೆಂದು ಗಮನಿಸಿ.
ಈ ಸಣ್ಣ ತಂತ್ರವನ್ನು ಪ್ರಯತ್ನಿಸಿ:
ಒಂದು ಪ್ರಶಾಂತವಾದ ಸ್ಥಳದಲ್ಲಿ ಕೆಲ ನಿಮಿಷಗಳು ಏಕಾಂತವಾಗಿ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಒಂದು ಕಾಗದವನ್ನೂ, ಲೇಖನಿಯನ್ನೂ ಪಕ್ಕದಲ್ಲಿ ಇಟ್ಟುಕೊಳ್ಳಿ. ಮನಸ್ಸನ್ನು ಯಾವ ವಿಷಯದ ಮೇಲೂ ಕೇಂದ್ರಿಕರಿಸಬೇಡಿರಿ. ಸಾಕ್ಷೀಭಾವದಿಂದ ಆಲೋಚನೆಗಳನ್ನು ಗಮನಿಸಿ. ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ. ಯೋಚನೆಗಳ ಸಾಲು ನಿಮ್ಮ ಮನಸ್ಸನ್ನು ಹಾಯುವುದನ್ನು ನೋಡುತ್ತೀರಿ. ನಿಮ್ಮೊಳಗೆ ಉದ್ಭವಿಸುತ್ತಿರುವ ಸತತ ವಟಗಟ್ಟುವಿಕೆಯನ್ನು ನೋಡುವಿರಿ.
ಈಗ ಲೇಖನಿಯಿಂದ ನಿಮ್ಮ ಎಲ್ಲ ಆಲೋಚನೆಗಳನ್ನು ಒಂದಾದ ಮೇಲೊಂದರಂತೆ ನಿಸ್ಪೃಹರಾಗಿ ಬರೆಯಿರಿ. ಇದನ್ನು 5 ನಿಮಿಷ ಮಾಡಿ!
ಈಗ ಓದಿ–
ನಿಮಗೆ ಗಾಬರಿಯಾಗುತ್ತದೆ. ನಿಮ್ಮ ಆಲೋಚನೆಗಳು ಎಷ್ಟು ಅಸಂಬದ್ಧ ವಾಗಿವೆ! ಎಷ್ಟು ಅಪ್ರಸ್ತುತ! ಒಂದು ಯೋಚನೆಯು ಒಂದು ವಿಚಾರದ ಬಗ್ಗೆಯಾದರೆ, ಅದರ ನಂತರದ ಯೋಚನೆಯು ಅದಕ್ಕೆ ಸಂಬಂಧವೇ ಇಲ್ಲದ ಇತ್ಯರ್ಥಕ್ಕೆ ಬಂದಿರುತ್ತದೆ! ನೀವು ಕೆಲಸ ಕಳೆದುಕೊಂಡಂತೆ, ಮನೆಗೆ ಹೋಗಿ ಹೆಂಡತಿಗೆ ಹೇಳಿದಾಗ ಅವಳು ನಿಮ್ಮನ್ನು ವಿಚ್ಚೇದಿಸಿ ನಿಮ್ಮ ಮಕ್ಕಳನ್ನೂ ಕರೆದುಕೊಂಡು ಮನೆ ಬಿಟ್ಟು ಹೊರಟುಹೋದಂತೆ, ನೀವು ಉದ್ಯೋಗಕ್ಕಾಗಿ ಅಲೆಯುತ್ತಿರುವಂತೆ, ಎಲ್ಲೂ ಕೆಲಸ ಸಿಕ್ಕದೆ, ನಿರುತ್ಸಾಹಿಯಾಗಿ ಎಲ್ಲವನ್ನೂ ಕಳೆದುಕೊಂಡಂತೆ ಭಾವಿಸುವಿರಿ.
ನಿಮ್ಮ ಎಲ್ಲಾ ಶಕ್ತಿಯೂ ಭವಿಷ್ಯದ ಬಗ್ಗೆ ನಕಾರಾತ್ಮಕ ಚಿತ್ರಣ ಮೂಡಿಸುವ ಎಡೆಗೇ ಮುನ್ನುಗ್ಗುತ್ತದೆ.
ಆದರೆ, ಮುಂದೆ ಹೀಗೆಯೇ ಆಗುವುದೆಂದು ನೀವು ಖಚಿತವಾಗಿ ಹೇಳಬಲ್ಲಿರಾ? ಅಲ್ಲದೆ, ಹೀಗೆಯೇ ಆಗಬೇಕೆಂಬುದು ನಿಶ್ಚಿತವಾಗಿದ್ದರೆ ಅದರಲ್ಲಿ ನೀವು ನಿಯಂತ್ರಿಸುವುದೇನಿದೆ? ಏನಾಗಬೇಕೋ ಅದೇ ಆಗುತ್ತದೆ. ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆಯು ಮಾತ್ರ ನಿಮ್ಮ ಕೈಲಿದೆ: ನೀವು ಯಾವ ರೀತಿ ಪ್ರತಿಕ್ರಿಯೆ ಮಾಡುವಿರೆಂಬುದು ಮಾತ್ರ ನಿಮ್ಮ ಇಚ್ಛೆಗೆ ಬಿಟ್ಟದ್ದು.
ಈ ವಿಷಯಗಳು ನಿಮ್ಮ ಈಗಿನ ಜೀವನದಲ್ಲಿ ಬಹಳ ಮುಖ್ಯವಾದವು, ಆದುದರಿಂದ ಅದರ ಕಡೆಗೆ ಹೆಚ್ಚಾದ ಆವೇಗವಿರುವುದು ಸಹಜವೇ. ಆದರೆ ಭವಿಷ್ಯತ್ತಿನ ಅನೇಕ ಹೆಜ್ಜೆಗಳನ್ನು ಈಗಲೇ ನೋಡುವುದು ನಿರರ್ಥಕವೆಂಬುದನ್ನು ಮರೆಯಲೇಬೇಡಿರಿ. ಅಲ್ಲದೆ, ನೀವು ಸಾಮಾಜಿಕ ಗುರುತುಗಳನ್ನು ಮೀರಿದವರೆಂಬುದನ್ನೂ ನೆನೆಪಿನಲ್ಲಿಡಿ! ಆದುದರಿಂದ ಅವುಗಳ ಬಗ್ಗೆ ವಿಪರೀತವಾಗಿ ಚಿಂತಿಸುವ ಅವಶ್ಯಕತೆಯಿಲ್ಲ.
ನಿಮ್ಮೊಳಗೆ ಅಗಾಧವಾದ ಸೃಜನಶೀಲತೆಯು ಅಡಗಿದೆ. ಅದನ್ನು ಹೊರತರಲು ವಿಳಂಬ ಮಾಡದೆ, ನಿಮ್ಮೊಳಗೆ ವಿಷವನ್ನು ಸೇರಿಸದೆ, ನಿಮ್ಮ ತೊಂದರೆಗಳಿಗೆ ಸಕಾರಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಿರಿ. ನಿಮ್ಮ ಸೃಜನಶೀಲತೆಯಲ್ಲಿ ಭರವಸೆಯಿಡುವ ಮೂಲಕ ನಿಮ್ಮೆಡೆಗೆ ಮಂಗಳತ್ವವನ್ನು ಆಕರ್ಷಿಸಿ ಕಾರ್ಯೋನ್ಮುಖರಾಗಿರಿ.
ಚಿಂತೆಯು ಶ್ರಮಕ್ಕಿಂತಲೂ ಹೆಚ್ಚಾಗಿ ಜನರನ್ನು ಬಲಿತೆಗೆದುಕೊಂಡಿದೆ— ಏಕೆಂದರೆ ಜನರು ಶ್ರಮಪಡುವುದಕ್ಕಿಂತ ಚಿಂತಿಸುವುದೇ ಹೆಚ್ಚು!
ಈ ಪ್ರಯೋಗವನ್ನು ಒಮ್ಮೆ ಮಾಡಿದರೆ ಸಾಕು. ಮನಸ್ಸಿನ ಸ್ವಭಾವದ ಅರಿವುಂಟಾಗಿ, ನಿಮ್ಮಲ್ಲಿ ವೈಚಾರಿಕ ಸ್ಥಿತ್ಯಂತರವುಂಟಾಗುವುದು.
ನನ್ನ ಅನುಭವದಿಂದ ಆಶ್ವಾಸನೆ ನೀಡುತ್ತೇನೆ— ಸೃಷ್ಟಿಯು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಅವಶ್ಯಕತೆಯನ್ನು ಪ್ರತಿಕ್ಷಣವೂ ಪೂರೈಸುತ್ತಿದೆ. ಆದರೆ ಲೌಕಿಕ ವಸ್ತುಗಳಿಗಾಗಿ ಪೈಪೋಟಿ ಪಡುವುದರಲ್ಲಿ ನೀವು ವಿಶ್ವಶಕ್ತಿಯಲ್ಲಿ ನಂಬಿಕೆಯನ್ನು ಕಳೆದುಕೊಂಡಿರುವಿರಿ. ನಂಬಿಕೆ ಹಾಗೂ ಕಾಕತಾಳೀಯತೆಯ ಶಕ್ತಿಯ ಸೊಗಸನ್ನು ಕಳೆದುಕೊಂಡಿದ್ದೀರಿ. ಆದುದರಿಂದಲೇ ಅನಿರೀಕ್ಷಿತ ವಾದುದು ಸಂಭವಿಸಿದಾಗ ನಿರುತ್ಸಾಹಕ್ಕೆ ಬಲಿಯಾಗುತ್ತೀರಿ.
ನೋಡಿರಿ, ಜೀವನದಲ್ಲಿ ಬದಲಾವಣೆಗಳು ಅನಿವಾರ್ಯ. ಜೀವನವು ನೀವು ಬಯಸುವ ಸ್ಥಿರವಾದ ಆಧಾರವಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ವಿಶ್ವಕ್ಕೆ ತನ್ನದೇ ಆದ ಬುದ್ಧಿಶಕ್ತಿ ಇದೆ; ಅದು ಯಾರ ನಿಯುಂತ್ರಣದಲ್ಲೂ ಇಲ್ಲ. ನೀವಿಂದು ನಡೆಸುತ್ತಿರುವ ಜೀವನವು ಸದಾ ಹೀಗೆಯೇ ಇರುವುದಿಲ್ಲ. ಇದೆಲ್ಲವೂ ಆಶ್ಚರ್ಯಕರವಾದ ವಾದ್ಯಮೇಳ. ಆದುದರಿಂದ ಮುಂದೂಡುವ ಬದಲು ಅದನ್ನು ಸ್ವಾಗತಿಸಿರಿ.
ಕಾಕತಾಳೀಯದ ಬಲವೇನು?
ನೀವು ಯಾವಾಗಲಾದರೂ ಹಳೆಯ ಸ್ನೇಹಿತನನ್ನು ಇದ್ದಕ್ಕಿದ್ದಂತೆ ನೆನೆದಿದ್ದೀರ? ಅವನನ್ನು ನೆನೆಯುತ್ತಿರುವಂತೆಯೇ ದೂರವಾಣಿಯಲ್ಲಿ ಅವನದೇ ಕರೆ ಬಂದರೆ?
ಬ್ರಹ್ಮಾಂಡದೆಡೆಗೆ ಮನತೆರೆದಂತೆಲ್ಲ ಇಂತಹ ಚಮತ್ಕಾರಗಳು ನಡೆಯುವುದನ್ನು ಕಾಣುವಿರಿ. ಇಂತಹ ಪವಾಡಸದೃಶವಾದ ಕಾಕತಾಳೀಯವನ್ನು 'ಕಾಕತಾಳೀಯ ಬಲ' ಎನ್ನುವುದು. ಆಧ್ಯಾತ್ಮಿಕತೆಯು ನೀವಿರುವ ಎಡೆಗೂ, ನಿಮ್ಮ ಪರಿಸರಕ್ಕೂ ನಿಮ್ಮನ್ನು ಹೆಚ್ಚು ಸೂಕ್ಷ್ಮಗ್ರಾಹಿಯನ್ನಾಗಿ ಮಾಡುತ್ತದೆ ಪರಿಪೂರ್ಣತೆಯೊಡನೆ ಸಂಬಂಧವೇರ್ಪಟ್ಟಿರುವುದನ್ನು ನೀವು ಒಪ್ಪಿಕೊಳ್ಳುವಿರಿ.
ಕೆಲವೊಮ್ಮೆ ನಿಮ್ಮ ಪ್ರಾಮಾಣಿಕ ಪ್ರಶ್ನೆಗೆ ಯಾರೋ ಅಪರಿಚಿತರು ಉತ್ತರ ನೀಡುತ್ತಾರೆ. ಅಥವಾ, ಬಯಸಿದ ಸಿಹಿ ತಿಂಡಿಯನ್ನೇ ಯಾರೋ ನಿಮಗೆ ತಂದು ಕೊಡುತ್ತಾರೆ ಅಥವಾ ನೀವು ಸಿಂಧೂರ ಬಣ್ಣದ ಉಡುಪನ್ನು ಧರಿಸಿದವರನ್ನು ನೆನೆದಾಗ ಅದೇ ಉಡುಪನ್ನು ಧರಿಸಿದ ಮತ್ತೊಬ್ಬರು ಥಟ್ಟನೆ ನಿಮ್ಮೆದುರು ಹಾದು ಹೋಗುತ್ತಾರೆ.
ನೀವು ಆಧ್ಯಾತ್ಮದ ವಲಯದಲ್ಲಿ ಪ್ರವೇಶ ಮಾಡಿದರೆ ಇಂತಹ ಅನೇಕ ಸುಂದರ ಆಕಸ್ಮಿಕಗಳು ನಿಮ್ಮ ಸುತ್ತಲೂ ನಡೆಯುತ್ತವೆ. ನಿಮ್ಮನ್ನು ಆವರಿಸಿರುವ ಸೃಷ್ಟಿಯು ನಿಮ್ಮ ಭಾವನೆಗಳಿಗೆ ಪ್ರತಿಸ್ಪಂದಿಸುವ ಸಜೀವ ಚೈತನ್ಯವೆಂದು ತಿಳಿದುಬರುತ್ತದೆ. ಆಗ ದೇವರು, ಸೃಷ್ಟಿ ಅಥವಾ ಗುರುವಿನೊಡನೆ ಬಾಂಧವ್ಯ ಬೆಳೆಯುತ್ತದೆ. ಜೀವನದಲ್ಲಿ ಹೊಸ ಸ್ವಾದವಿರುತ್ತದೆ. ಸೃಷ್ಟಿಂರು ಆನಂತ ಸೌಂದರ್ಯದ ಅನುಭವವಾಗುತ್ತದೆ.
ನೀವು ನಿಮ್ಮ ಕೇಂದ್ರದೆಡೆಗೆ ಸಾಗಿದಷ್ಟೂ ನಿಮ್ಮ ಜೀವನದಲ್ಲಿ ನಡೆಯುವ ಸುಂದರ ಸಮ್ಮಿಳನತೆಗಳನ್ನು ಗಮನಿಸುತ್ತೀರಿ. ವಿಶ್ವಚೈತನ್ಯವು ನಿಮ್ಮೊಡನೆ ಸಹಕರಿಸಿ ನಿಮ್ಮನ್ನು ಹೆಚ್ಚು ಪ್ರಜ್ಞಾವಂತರನ್ನಾಗಿಸುತ್ತದೆ.
ಹೇಳುವೆನು ಕೇಳಿ – ಸೃಷ್ಟಿಯು ನಿಮ್ಮನ್ನು ಆಧ್ಯಾತ್ಮ ಜೀವಿಯಾಗಲು ಆಹ್ವಾನಿಸುತ್ತಿದೆ, ಅದರೆಡೆಗೆ ಮನತೆರೆಯಿರೆಂದು ಕರೆಯುತ್ತಿದೆ. ಅದರ ಬುದ್ದಿವಂತಿಕೆಯಲ್ಲಿ ನಂಬಿಕೆ ಇಡಬಹುದೆಂದು ಸಹನೆಯಿಂದ ರುಜುವಾತು ಪಡಿಸುತ್ತಿದೆ. ಅದು ನಿಮ್ಮ ಜೀವನವನ್ನು ನಡೆಸುವ ಭರವಸೆ ನೀಡುತ್ತದೆ, ಮನಸ್ಸು ಹಾಗೂ ಭೀತಿಗಳನ್ನು ಕೈಬಿಟ್ಟಷ್ಟೂ ನಿಮಗೆ ನನ್ನ ಮಾತಿನ ಅರ್ಥ ತಿಳಿಯುತ್ತಾಹೋಗುತ್ತದೆ.
ನಿಮ್ಮ ಸಕಾರಾತ್ಮಕ ಉದ್ದೇಶಗಳು ಈಡೇರಲಾರಂಭಿಸುತ್ತವೆ. ನಿಮ್ಮ ಹಾಗೂ ಇತರರ ಏಳಿಗೆಗೆ ಪೂರಕವಾದ ಸಕಾರಾತ್ಮಕ ಕಾರ್ಯಗಳು ಕೈಗೂಡುತ್ತವೆ. ಏಕೆಂದರೆ ನೀವು ನಿಮ್ಮ ಕೇಂದ್ರದೊಂದಿಗೆ ಹಾಗೂ ವಿಶ್ವಶಕ್ತಿಯ ಜೊತೆ ಶೃತಿಗೂಡಿಸಿ ಕೆಲಸ ಮಾಡುತ್ತೀರಿ. ನೀವು 'ನಿಮ್ಮ' ಒಡನೆ ಕೈಗೂಡಿಸುತ್ತೀರಿ ನೀವು ನಿಮ್ಮ ಸಹಭಾಗಿಯಾಗುವಿರಿ, ನೀವು ದನಿಗೂಡಿಸುತ್ತೀರಿ. ಆದ್ದರಿಂದ ನಿಮ್ಮೆಡೆಗೆ ಮಂಗಳತ್ವವನ್ನು ಸೆಳೆದುಕೊಳ್ಳುತ್ತೀರಿ. ಸೃಷ್ಟಿಯು ನಿಮ್ಮ ಆಲೋಚನೆಗಳಿಗೆ ಪ್ರತಿಸ್ಪಂದಿಸುತ್ತದೆ.
ಸೃಷ್ಟಿಯ ಮಧುರವಾದ ಗಾನಲೀಲೆಯಲ್ಲಿ ನಿಮ್ಮ ಶೃತಿ ಸೇರಿಸಿದರೆ ಸಾಕು; ಆನಂದವು ನಿಮ್ಮನ್ನು ಆವರಿಸುತ್ತದೆ. ಈ ಸಹಜ ಪಥದಲ್ಲಿ ಮುನ್ನಡೆದಂತೆ ನೀವು ಸ್ವಯಂಪ್ರೇರಿತರಾಗುತ್ತೀರಿ ಹಾಗೂ ನಿಮ್ಮ ಜೀವನದಲ್ಲಿ ಏನೇ ಬಂದರೂ ಧನ್ಯತಾಭಾವದಿಂದ ಸ್ವೀಕರಿಸುತ್ತೀರಿ.
ಒಂದು ಸುಂದರ ಕಥೆ:
ಎಲ್ಲವೂ ಬರಡಾದ ಒಂದು ಮರಳುಗಾಡಿನಲ್ಲಿ ಒಂದು ಮೊಗ್ಗು ಅರಳಿತ್ತು. ಅದು ಪ್ರತಿದಿನವನ್ನೂ ಸವಿಯುತ್ತಾ ಬೆಳೆಯುತ್ತಾ ಸೂರ್ಯನನ್ನು ಕುರಿತು "ನಾನೆಂದು ದೊಡ್ಡದಾಗಿ ಅರಳುತ್ತೇನೆ?" ಎಂದು ಕೇಳುತ್ತಿತ್ತು. ಸೂರ್ಯ ದೇವನು "ತಾಳ್ಮೆಯಿಂದಿರು. ನಾನು ನಿನ್ನನ್ನು ಸ್ಪರ್ಶಿಸಿದಂತೆಲ್ಲಾ ನೀನು ಸ್ವಲ್ಪ ಸ್ವಲ್ಪವಾಗಿ ಬೆಳೆಯುತ್ತಿರು ತ್ತೀಯೇ" ಎಂದನು. ಇದನ್ನು ಕೇಳಿ ಹೂವಿಗೆ ಆನಂದವಾಯಿತು. ತಾನಿರುವ ಮರಳುಗಾಡಿನ ಭಾಗಕ್ಕೆ ಸೌಂದಂರ್ಯವನ್ನು ನೀಡಬಹುದೆಂಬ ಭಾವನೆಯಿಂದ ನಲಿಯಿತು. ಅದಕ್ಕೆ ಬೇಕಾದುದೂ ಅಷ್ಟೇ– ಮರುಗಾಡಿನ ಆ ಭಾಗಕ್ಕೆ ಸ್ವಲ್ಪ ಸೌಂದರ್ಯವನ್ನು ತುಂಬುವುದು.
ಒಂದು ದಿನ ಒಬ್ಬ ಬೇಡನು ಅಲ್ಲಿಗೆ ಬಂದು ಆ ಹೂವನ್ನು ತುಳಿದನು. ಆ ಹೂವು ಸಾಯುವಂತಾಗಿ ಅದಕ್ಕೆ ಬಹಳ ದುಃಖವಾಯಿತು. ತಾನು ನಶಿಸುವೆನೆಂಬುದಕ್ಕಿಂತ ಮರಳುಗಾಡಿನ ಈ ಭಾಗಕ್ಕೆ ಸೌಂದರ್ಯ ತುಂಬುವ ಅವಕಾಶ ಸಿಗಲಿಲ್ಲವಲ್ಲ ಎಂದು.
ದೇವರು ಈ ಹೂವನ್ನು ಗಮನಿಸುತ್ತಿದ್ದನು, ಅದರ ದನಿಯನ್ನು ಆಲಿಸುತ್ತಿದ್ದನು. 'ಇದು ಬದುಕಿರಬೇಕು' ಎಂದವನೇ ಅದನ್ನು ಮುಟ್ಟಿ ಅದಕ್ಕೆ ಜೀವಕೊಟ್ಟನು.
ಅದು ಬೆಳೆದು ಸುಂದರ ಹೂವಾಗಿ ಅರಳಿತು. ಬೆಂಗಾಡಿನ ಆ ಭಾಗವೇ ಅದರಿಂದಾಗಿ ಸುಂದರವಾಯಿತು.
ನೀವೆಲ್ಲೇ ಇದ್ದರೂ ಈ ಹೂವಿನಂತೆ ಅರಳಲು ಸಿದ್ಧವಿದ್ದರೆ ಆ ಸ್ಥಳಕ್ಕೆ ನೀವೊಂದು ನಿಧಿಯಾಗಬಲ್ಲಿರಿ. ನಿಮ್ಮ ಸುತ್ತಲಿನ ಪರಿಸರವನ್ನೇ ಬದಲಾಯಿಸಬಹುದು. ಸಾಕ್ಷಾತ್ ಭಗವಂತನನ್ನೇ ಧರೆಗಿಳಿಸಬಹುದು.
ಸಾಕ್ಷಾತ್ಕಾರ ಹೊಂದಿದ ಮಹಾತ್ಮರು ಸಹ ಹೀಗೆಯೇ. ತಮ್ಮ ಪರಿಸರದಲ್ಲಿರುವ ಸಕಲವನ್ನೂ ವೃದ್ದಿಗೊಳಿಸುವ ಸುಂದರ ಪುಷ್ಪಗಳು. ತಮ್ಮ ಸರಳ ಸಹಜತೆಯಿಂದ ಸಹಜ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಅವರ ಜೊತೆಯವರಿಗೆ ಅವರು ಪ್ರೇಮ, ನಿಸ್ಪ್ರಾರ್ಥ ಸೇವೆಗಳ ಅವತಾರ. ಅವರು ಮೂರ್ತೀಭವಿಸಿದ ಆಧ್ಯಾತ್ಮಿಕತೆ!
ಆಧ್ಯಾತ್ಮಿಕತೆ ಹಾಗೂ ಸೇವೆ
ಆಧ್ಯಾತ್ಮಿಕತೆಯು ಕೇವಲ ವೈಯಕ್ತಿಕವಾದುದಲ್ಲ. ಅದು ಸಮಾಜದ ಮೇಲೆಯೂ ಗಾಢವಾದ ಪರಿಣಾಮ ಬೀರಬಲ್ಲದು. ಆಧ್ಯಾತ್ಮಿಕತೆಯು ಕೇವಲ ಆಚಾರವಲ್ಲ, ಅನುಕಂಪವೂ ಹೌದು. ಅದು ಸಮಾಜದ ಸೇವೆ; ಅದು ಮಾನವಕುಲದ ಸುಖಕ್ಕಾಗಿ ಇರುವ ಗಾಢವಾದ ಪ್ರೇಮ ಮತ್ತು ಅನುಕಂಪ.
ಬಂಗಾಳದ ಸಂತರಾದ, ರಾಮಕೃಷ್ಣ ಪರಮಹಂಸರ ಶಿಷ್ಯರಾದ ವಿವೇಕಾನಂದರು ಸುಂದರವಾಗಿ ಹೇಳಿದ್ದಾರೆ– 'ಆತ್ಮನೊ ಮೋಕ್ಷಾರ್ಥಂ ಜಗತ್ ಹಿತಾಯಚೆ' – ಆತ್ಮ ಸಾಕ್ಷಾತ್ಕಾರಕ್ಕಾಗಿಯೂ ಜಗತ್ತಿನ ಹಿತಕ್ಕಾಗಿಯೂ ಇರುವುದೇ ಆಧ್ಯಾತ್ಮ.
ಸಮಾಜಕ್ಕೆ ಮಾಡುವ ನಿಸ್ನಾರ್ಥ ಸೇವೆಯು ವ್ಯಕ್ತಿಯನ್ನು ಉನ್ಯತ ಮಟ್ಟದ ಪ್ರಜ್ಞೆಯನ್ನು ತಲುಪಲು ಉತ್ತೇಜಿಸುತ್ತದೆ. ನಮ್ಮಲ್ಲಿ ಸುಪ್ತವಾಗಿರುವ ದೈವೀಕತೆಯನ್ನು ಜಾಗೃತಗೊಳಿಸುವ ಶಕ್ತಿ ಮತ್ತು ಧೈರ್ಯಗಳನ್ನು ನೀಡುತ್ತದೆ. ನಿಸ್ಪಾರ್ಥ ಸೇವೆಯ ಪ್ರತಿ ಅವಕಾಶವೂ ಭಗವಂತನ ಕೊಡುಗೆಯೇ. ಧನ್ಯತಾಭಾವದಿಂದ ಮಾಡುವ ನಿಸ್ವಾರ್ಥ ಸೇವೆಯು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ. ಹೇಗೆಂದರೆ ಇದು ಅಹಂಕಾರವನ್ನಳಿಸಿ, ಪ್ರೇಮ ತಾಳ್ಮೆಗಳನ್ನು ಮೂಡಿಸಿ ನಮಗೂ ಇತರರಿಗೂ ಆನಂದವನ್ನು ನೀಡುವ ಸಾಮರ್ಥ್ಯ ಹೊಂದಿದೆ. ನಿಜವಾಗಿಯೂ ಆಧ್ಯಾತ್ಮಿಕತೆಯ ಹಾದಿಯಲ್ಲಿ ನಿಸ್ವಾರ್ಥ ಸೇವೆಯೇ ಮೊದಲ ಹಾಗೂ ಕೊನೆಯ ಹೆಜ್ಜೆ.
ನವಯುಗದ ಮಾನವನನ್ನು ಸೃಷ್ಟಿಸುವ ಪರಿಕಲ್ಪನೆಯೇನೆಂದರೆ — ಯಾರು ತಾನೇ ಆನಂದವೆಂಬ ಅರಿವಿರುವವನೋ ಪ್ರಾಪಂಚಿಕ ಜೀವನದಲ್ಲಿ ಆಧ್ಯಾತ್ಮಿಕತೆಯ ಸಾರವನ್ನು ಹೊಂದಿರುವನೋ, ಕೇವಲ ಪಾರಂಗತನಲ್ಲದೆ ಪರಿಪೂರ್ಣನಾಗಿರುವನೋ, ಈ ವಿಶ್ವವು ಅಸ್ತವ್ಯಸ್ತವಾಗಿ ತೋರಿದರೂ, ಇದರಲ್ಲಿ ವಿಸ್ಮಯಕರವಾದ ವ್ಯವಸ್ಥೆ ಇದೆಯೆಂದು ಅರಿತವನೋ. ಎಲ್ಲವನ್ನೂ ಸಾಕ್ಷೀಭಾವದಿಂದ ಸ್ತೀಕರಿಸುವನೋ ಅವನು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅಥವಾ ಆತ್ಮಜ್ಞಾನಿಯಂತೆಯೂ ಜೀವನ ನಡೆಸುವನು. ಆತನ ಜೀವನವೇ ಧ್ಯಾನಮಯವಾಗಿರುತ್ತದೆ. ವಿಶ್ವಚೈತನ್ಯದಲ್ಲಿ ಆಳವಾಗಿ ಬೇರೂರಿ, ತನಗೂ ಇತರರಿಗೂ ಆಶ್ರಯ ನೀಡಬಲ್ಲ ವೃಕ್ಷದಂತೆ, ದೈವ ಘಟನೆಯ ಬಲದಿಂದ ನಿಸ್ವಾರ್ಥ ಸೇವೆಂುನ್ನು ವಾಡುತ್ತ ನಿರಂತರವಾಗಿ ಪರಿಣಾವುವನ್ನು ಕೊಡುವಂತಹ ಚೈತನ್ಯವಾಗಿರುತ್ತಾನೆ.
ಇಂತಹ ವ್ಯಕ್ತಿಯು ಸಹಜವಾಗಿಯೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾನೆ. ಜವಾಬ್ದಾರಿಯೆಂದರೆ, ಯಾವುದೇ ಪರಿಸ್ಥಿತಿಗೆ ಸ್ವಯಂಪ್ರೇರಿತವಾಗಿ ಸ್ಪಂದಿಸುವಂತಹ ಗುಣ. ಜವಾಬ್ದಾರಿಯೇ ಮುನ್ನೋಟದ ಸಂಕೇತ. ನೀವು ಜವಾಬ್ದಾರಿಯನ್ನು ಹೊತ್ತರೆ ಸ್ವಯಂ ಪ್ರೇರಣೆ ಉಂಟಾಗುತ್ತದೆ. ಚೈತನ್ಯ ವೃದ್ಧಿಯಾಗುತ್ತದೆ.
ನೀವು ಸರೀಯಾಗಿ ದುಡಿಯುತ್ತೀರಾವೆ ಎಂದರೆ ನಿಮ್ಮಲ್ಲಿ ಜವಾಬ್ದಾರಿ ಇಲ್ಲವೆಂದರ್ಥ! ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದಾಗ ನೀವು ಮುನ್ನಡೆಯುತ್ತೀರಿ. ನಿಮ್ಮ ಅಂತರಾತ್ಮವು ವಿಶಾಲವಾದಾಗ ಇಡೀ ಜಗತ್ತಿನ ಜವಾಬ್ದಾರಿಯನ್ನು ಹೊರಬಲ್ಲಿರಿ! ಆಗ ದಿವ್ಯಶಕ್ತಿಯು ಸಹಜವಾಗಿಯೇ ನಿಮ್ಮ ಮೂಲಕ ಹೊರಹರಿಯಲಾರಂಭಿಸುತ್ತದೆ.
ನಿಮ್ಮ ಸುತ್ತಲಿನ ಪರಿಸರದಲ್ಲ್ಲಿ ನಡೆಯುತ್ತಿರುವ ಎಲ್ಲ ವಿಷಯಗಳ ಬಗ್ಗೆ ಉನ್ನತ ಮಟ್ಟದಲ್ಲಿ ಜವಾಬ್ದಾರಿಯನ್ನು ನೀವು ನಿಮ್ಮಲ್ಲಿ ಹೊಂದಿದ್ದರೆ ಸಹಜವಾಗಿಯೇ ಸಾಮಾಜಿಕ ಜವಾಬ್ದಾರಿಯೂ ಉಂಟಾಗುತ್ತದೆ. ನೀವಾಗ ಉನ್ನತ CEO ಆಗುತ್ತೀರಿ! ಜ್ಞಾನಿಯಾದ CEO ಆಗಿ ನೀವು ಮೊದಲಿಗೆ ಮಾಡುವ ಎಲ್ಲ ಸಂಸ್ಥೆಗಳೂ ಸಹಜವಾಗಿಯೇ ಸಾಮಾಜಿಕ ಜವಾಬ್ದಾರಿಯುಳ್ಳ ಉಪ ಉತ್ಪನ್ನಗಳಾಗುತ್ತವೆ. ಕೇವಲ ಲಾಭ-ನಷ್ಟಗಳನ್ನು ಮುಂದಿಟ್ಟುಕೊಂಡು ಮಾನವನನ್ನೂ, ಭೂಮಿಯನ್ನೂ, ಪ್ರಕೃತಿಯನ್ನೂ ನಿರಾಧಾರಗೊಳಿಸುವ ಸಂಸ್ಥೆಗಳಲ್ಲ. ನಿರ್ಧನಗರನ್ನು ಪೀಡಿಸಿದರೂ ಧನಗಳಿಸುವ ಬಯಕೆ ಇರುವುದಿಲ್ಲ. ಸಾಮಾಜಿಕ, ಪರಿಸರ ಅಥವಾ ಆರ್ಥಿಕ ತೊಂದರೆಗಳನ್ನು ಸೃಷ್ಟಿಸುವುದರ ಬದಲು ಸಮಾಜಕ್ಕೆ ಉಪಕಾರಾತ್ಮಕ ಪ್ರಭಾವವನ್ನು ಬೀರಿ, ವಿಶ್ವವನ್ನು ಎಲ್ಲರಿಗೂ ಇನ್ನೂ ಉತ್ತಮ ಸ್ಥಾನವನ್ನಾಗಿ ಮಾಡುತ್ತವೆ.
ವಿಶ್ವಶಾಂತಿ
ಪಾಶ್ಚಿವಾತ್ಯ ದೇಶಗಳಲ್ಲಿ ಯಾವುದಾದರೂ ಒಂದು ಗುಂಪು ಪ್ರಪಂಚದಲ್ಲಿ ಎಲ್ಲಿಯೋ ನಡೆಯುತ್ತಿರುವ ಯುದ್ದದ ಬಗ್ಗೆ ಅಸಮ್ಮತಿಯನ್ನು ಸೂಚಿಸಲು ಬೀದಿಗಿಳಿದು ಪ್ರದರ್ಶನ ಮಾಡುತ್ತಾರೆ. ಇಂತಹ ಪ್ರದರ್ಶನಗಳು ಹಿಂಸೆ, ಧ್ವಂಸಗಳಲ್ಲಿ ಕೊನೆಯಾಗುತ್ತವೆ. ಹೀಗೇಕೆ? ಅಹಿಂಸಾಪರ ಸಂಸ್ಥೆಗಳೂ ಕೂಡ ಹಿಂಸಾತ್ಮಕ ಭಾಷೆಯನ್ನು ಬಳಸುತ್ತವೆ.
'ಅಹಿಂಸಾ' ಎಂಬುದು ನಿಮ್ಮೊಳಗೆಯೇ ಆರಂಭವಾಗುತ್ತದೆ. ಸಂಯಮದಲ್ಲಿರುವ ವ್ಯಕ್ತಿಯಲ್ಲಿ ಹಿಂಸೆಯು ತಾನಾಗಿಯೇ ಸಹಜವಾಗಿ ಕಳಚಿ ಬೀಳುತ್ತದೆ. ತನಗೆ ತಾನೇ ಘಾಸಿ ಮಾಡಿಕೊಳ್ಳುವುದನ್ನು ಪ್ರಯತ್ನ ಪೂರ್ವಕವಾಗಿ ನಿಲ್ಲಿಸಿರುತ್ತಾನೆ. ತನ್ನಲ್ಲಿ ಶಾಂತಿಯನ್ನು ಬೆಳೆಸುವುದರ ಮೂಲಕ ವಿಶ್ವಕ್ಕೆ ಸಕಾರಾತ್ಮಕ ಶಾಂತಿಯನ್ನು ನೀಡುತ್ತಾನೆ.
ಅಮೇರಿಕದ ವಾಷಿಂಗ್ಟನ್‌ನಲ್ಲಿ ನಡೆದ ಸ್ವಾರಸ್ಯಕರವಾದ ಪ್ರಯೋಗ ಶ್ರೇಣಿ ಹೀಗಿದೆ:
ಒಂದು ಗುಂಪು ಜನರನ್ನು ಏಕಕಾಲದಲ್ಲಿ ಧ್ಯಾನಮಾಡುವಂತೆ ಹೇಳಲಾಯಿತು. ಆ ಊರಿನಲ್ಲಿ ಈ ಧ್ಯಾನ ಮಾಡುವ ಮುಂಚೆ, ಧ್ಯಾನ ನಡೆಯುತ್ತಿರುವಾಗ ಮತ್ತು ಧ್ಯಾನದ ನಂತರ ಹಿಂಸಾಪ್ರಕರಣಗಳ ಅಂಕಿ–ಅಂಶಗಳನ್ನು ದಾಖಲಿಸಲಾಯಿತು. ಆಶ್ಚರ್ಯವೆಂದರೆ, ಧ್ಯಾನವನ್ನು ಮಾಡುತ್ತಿದ್ದಾಗ ಆ ಊರಿನ ಹಿಂಸಾಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು!
ಈ ಪ್ರಯೋಗಗಳನ್ನು ಅನೇಕ ವಿಶ್ವವಿದ್ಯಾಲಯಗಳಲ್ಲಿ, ಬೇರೆ ಬೇರೆ ನಗರಗಳಲ್ಲಿಯೂ ನಡೆಸಲಾಯಿತು. ಇದು ಧ್ಯಾನದ ಸಕಾರಾತ್ಮಕ ಪರಿಣಾಮವು ಕೇವಲ ಆಕಸ್ಮಿಕವಲ್ಲವೆಂಬುದನ್ನು ನಿರೂಪಿಸಿತು.
ನಮ್ಮ ನಡುವೆ ಇರುವ ಸಂಬಂಧ ಕೇವಲ ಸಾಮಾಜಿಕ ಮಾತ್ರವಲ್ಲ– ನಾವೆಲ್ಲರೂ ಆ ಪರಿಪೂರ್ಣತೆಯ ಅಂಶಗಳು. ನಾವುಗಳು ಒಂದು ಸಮಗ್ರ ಅರಿವು.
ನಾವೆಂದುಕೊಂಡಂತೆ ನಾವು ಒಂಟಿ ದ್ವೀಪಗಳಲ್ಲ. ನಮ್ಮ ಆಲೋಚನೆ— ಗಳು, ರಾಗ—ಭಾವಗಳು, ಅನಿಸಿಕೆಗಳು, ನಮ್ಮನ್ನು ಮಾತ್ರವಲ್ಲದೆ ಇಡೀ ವಿಶ್ವವನ್ನೇ ನಾಟುತ್ತವೆ. ನಾವೆಲ್ಲರೂ ಶಾಂತಿಯನ್ನು ಅನುಭವಿಸಿ ಹೊರಸೂಸಿದರೆ ಸುಂದರವಾದ ವಿಶ್ವಶಾಂತಿಯು ತಾನಾಗಿಯೇ ಮೂಡುತ್ತದೆ. ಹಾಗೆಯೆ, ಒಬ್ಬ ವ್ಯಕ್ತಿಯು ಸ್ವತಃ ಬದಲಾಗುವುದರ ಮೂಲಕ ಇತರರಲ್ಲೂ ಪರಿವರ್ತನೆಯನ್ನು ತರಬಲ್ಲನು!
ನವ್ಮು ದಿವ್ಯತೆಯನ್ನು ನಾವು ಅರಿತಾಗ, ನಮ್ಮನ್ನು ನಾವು ಗೌರವಿಸುವುದಲ್ಲದೆ ಇಂತಹ ಅದ್ಭುತವಾದ ದೇಹ–ಮನಸ್ಸುಗಳ ರಚನೆ ಹಾಗೂ ಜೀವನವೆಂಬ ಕೊಡುಗೆಯ ಬಗ್ಗೆ ವಿಸ್ಮಂಯ ಮತ್ತು ಧನ್ಯತಾಭಾವವನ್ನು ಹೊಂದುತ್ತೇವೆ.
ನಮ್ಮ ಶರೀರವೇ ದೇವಾಲಯ ಎಂಬುದನ್ನು ಎಂದಿಗೂ 'ಮರೆಯಬೇಡಿ'.
ದುರದೃಷ್ಟವಶಾತ್ ನಾವು ನಮ್ಮ ಅದ್ಭುತ ಚೈತನ್ಯವನ್ನು ತಿರಸ್ಕರಿಸಿ ತೊಂದರೆಗಳನ್ನು ಸೃಷ್ಟಿಸಿ ಜೀವನದ ನಿಯಮಗಳಿಗೆ ಅಡ್ಡಿಮಾಡುತ್ತೇವೆ..
ಆಗ ವಿಶ್ವದ ಸಾಮೂಹಿಕ ನಕಾರಾತ್ಮಕತೆಯಲ್ಲಿ ನಾವೂ ನಮ್ಮ ಕೊಡುಗೆಯನ್ನು ಸೇರಿಸುತ್ತೇವೆ. ಪ್ರಕೃತಿಯಲ್ಲುಂಟಾಗುವ ಪ್ರಕೋಪಗಳು ಈ ಸಾಮೂಹಿಕ ನಕಾರಾತ್ಮಕತೆಯ ಭೌತಿಕ ಅಭಿವ್ಯಕ್ತಿಗಳು. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ವಿಶ್ವಶಾಂತಿಯ ಕಲ್ಪನೆಯನ್ನು ಸಾಕಾರ– ಗೊಳಿಸುವ ಸಕಾರಾತ್ಮಕ ಚೈತನ್ಯವನ್ನು ಬೆಳೆಸಿ ನಾವೂ ಬೆಳೆಯುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದು ಘಟಿಸಲು ನಾವೆಲ್ಲರೂ ವೈಯುಕ್ತಿಕವಾಗಿ ಇದಕ್ಕೆ ಹೊಣೆಗಾರರು. ಇದನ್ನು ದೊಡ್ಡ ಪ್ರಮಾಣದಲ್ಲಿ ಸಾಕಾರಗೊಳಿಸುವ ಹೊಣೆ ನಮ್ಮ ಕೈಲಿದೆ.
ಪರಿಹಾರಗಳನ್ನು ಹೊರ ಪ್ರಪಂಚದಲ್ಲಿ ಹುಡುಕುತ್ತಾ ಅಲೆಯುವುದು ನಿಲ್ಲಿಸುವ ಕಾಲ ಬಂದಿದೆ. ನಮ್ಮ ಅಂತರಾಳದ ಒಳಹೊಕ್ಕು ಜೀವನವನ್ನು ಆಧ್ಯಾತ್ಮಿಕಗೊಳಿಸುವ ಕಾಲ ಬಂದಿದೆ. ವೈಯುಕ್ತಿಕ ಬದಲಾವಣೆಯಿಂದ ಮಾತ್ರ ವಿಶ್ವವನ್ನು ಪರಿವರ್ತಿಸಲು ಸಾಧ್ಯ
ಆತ್ಮ ಸಾಕ್ಷಾತ್ಕಾರ ಹೊಂದಿದ ಮಹಾತ್ಮರು ಪದೇ ಪದೇ ಇದೇ ಸಂದೇಶವನ್ನು ಸಾರಿದ್ದಾರೆ.
ನಿಮ್ಮ ಅಂತರಾಳಕ್ಕೆ ಹತ್ತಿರ ಹತ್ತಿರ ಹೋದಂತೆ ಮಹಾತ್ಮರು ಉಪದೇಶಿಸಿರುವ ಎಲ್ಲ ಸತ್ಯಗಳು ನಿಮಗೆ ಗೋಚರವಾಗುತ್ತವೆ.
ಒಂದು ಸಣ್ಣ ಕಥೆ:
ಒಂದು ನರಿಗೆ ಬಹಳ ದಾಹವಾಗಿತ್ತು. ಬಾಯಾರಿ ಬಳಲಿದ ಆ ನರಿಯು ಒಂದು ನದಿಯ ಅಂಚಿಗೆ ಹೋದ ಕೂಡಲೇ ನೀರನ್ನು ಕುಡಿಯಲಾರಂಭಿಸಿತು.
ನೀರಿನಲ್ಲಿದ್ದ ಮೀನೊಂದು ನರಿಯ ಈ ಕಾತರತೆಯನ್ನು ನೋಡಿ "ಈ ನೀರು ನಿನಗೆ ಇಷ್ಟೇಕೆ ರುಚಿಸುತ್ತದೆ? ನನಗೆ ಅಷ್ಟೇನೂ ರುಚಿಸುವುದಿಲ್ಲವಲ್ಲಾ" ಎಂದಿತು.
ನರಿಯು "ನಾನು ನೀರಿಗಾಗಿ ಅಷ್ಟೇಕೆ ಹಂಬಲಿಸುತ್ತೇನೆಂದು ತಿಳಿಯಬೇಕೇ?" ಎಂದು ಕೇಳಿತು. ಮೀನು "ಹೌದು" ಎಂದಿತು.
ತಕ್ಷಣವೇ ನರಿಯು ಮೀನನ್ನು ಹಿಡಿದು ಕಾದ ಮರಳಿನ ಮೇಲೆ ಹಾಕಿತು. ಆ ಮೀನು ನೀರಿಲ್ಲದೆ ಚಡಪಡಿಸಿತು. ಅದು ಇನ್ನೇನು ಸಾಯುವ ಸ್ಥಿತಿಯಲ್ಲಿದ್ದಾಗ ನರಿಯು ಅದನ್ನು ನೀರಿಗೆ ಹಾಕಿ 'ಈಗ ತಿಳಿಯಿತೆ, ನೀರಿಗಾಗಿ ಅಷ್ಟೇಕೆ ಹಂಬಲಿಸುವೆನೆಂದು?" ಎಂದಿತು. ಮೀನು 'ಹೌದು – ಕಾ ನೀರೇ ನನಗೆ ಜೀವವೆಂದೂ, ಅದಿಲ್ಲದೆ ನಾನು ಬದುಕುಲಾರೆನೆಂದೂ ಈಗ ತಿಳಿಯಿತು!" ಎಂದಿತು.
ಪ್ರಾಪಂಚಿಕ ಜೀವನದ ಚಕ್ರಬಿಂಬನ ಕೋಟೆಯಲ್ಲಿ ಸಿಲುಕಿದ ವ್ಯಕ್ಕಿಯ ಚಡಪಡಿಕೆಯು ಅನ್ವೇಷಣೆಯಾಗಿ, ಅನ್ವೇಷಣೆಯು ಕಾತರತೆಯಾಗಿ, ಕಾತರತೆ ಅನ್ವೇಷಣೆಯಾದಾಗ, ಆಧ್ಯಾತ್ಮಿಕತೆಯು ಜೀವಜಲವಾಗುತ್ತದೆ,
Part 2: Spirituality - Why Series_Kannada_part_2.md
ಮಾರ್ಗದರ್ಶಿಯೂ, ಪರಿಹಾರವೂ, ಜೀವನದ ಗುರಿಯೂ ಅದೇ ಆಗುತ್ತದೆ. ಆಧ್ಯಾತ್ಮಿಕತೆಯೇ ಅಂತಿಮ ವಿಜ್ಞಾನ– ಮಾಯೆಯು ನಶಿಸಿ ಶಾಶ್ವತ ಜೀವನವು ಆರಂಭವಾಗುವ ವಿಜ್ಞಾನ. ಅದು ಜೀವನ್ನುಕ್ತಿಯ ವಿಜ್ಞಾನವೇ!.
ನಿರಂತರ ಆನಂದವಾದ 'ನಿತ್ಯಾನಂದ'ವು ನೀವಾಗಿ, ಅದನ್ನು ಪ್ರಕಾಶಿಸಿ, ವ್ಯಕ್ತಪಡಿಸುವಂತಾಗಲೀ! ಧನ್ಯವಾದಗಳು.
The Supreme Pontiff Of Hinduism Bhagawan Sri Nithyananda Paramashivamರ ಬಗ್ಗೆ
ಮಾನವನ ಜೀವನದುದ್ದೇಶದ ಕೊನೆ ಯಿಲ್ಲದ ಅನ್ವೇಷಣೆಯು ಈ ಸಾಲಿ ನಿಂದ ಕೊನೆಗೊಳ್ಳುತ್ತದೆ. ಪರವಾಾ ನಂದವೇ ಹಾದಿ ಹಾಗೂ ಗುರಿ. ಇದು THE SUPREME PONTIFF OF HINDUISM BHAGAWAN SRI NITHYANANDA PARAMASHIVAMರ ಅನುಭವ ಹಾಗೂ ಬೋಧನೆ. THE SUPREME PONTIFF OF HINDUISM BHAGAWAN SRI NITHYANANDA PARAMASHIVAMರು ನ ಮ್ಮೊಡ ನೆ ಈಗಿರುವ ಒಬ್ಬ
ಜ್ಞಾನೋದಯ ಹೊಂದಿದ ಗುರು ಹಾಗೂ ನವಕಾಲೀನ ಅತೀಂದ್ರಿಯವಾದಿ.
ಪರಮಾನಂದವು ಕೊನೆಯಲ್ಲಿ ಸಿಗುವಂತಹುದಲ್ಲ., ಆದರೆ ಅದರ ಹಾದಿಯೇ ಪರಮಾನಂದವೆಂಬ ಅವರ ಅನುಭವ ಸಹಿತ ಜ್ಞಾನವನ್ನು ಮೊದಲು ನೀಡುವುದೇ ಅವರ ಜೀವಿತದ ಧ್ಯೇಯವಾಗಿದೆ. ಎಂದರೆ ದಿನದ 24 ಗಂಟೆಗಳಲ್ಲಿಯೂ ಪರವಾನಂದದಲ್ಲಿ ಇರಲು ಸಾಧ್ಯವಾಗುವಂತಹ ಸ್ಥಿತಿ! ನಾವು ನಮ್ಮ ಚಿದಾವಕಾಶದಲ್ಲಿ ಶ್ರಮಿಸುವುದರ ಮೂಲಕ ಈ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದು ಅವರು ತಿಳಿಯಪಡಿಸುತ್ತಾರೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAMರು ದಕ್ಷಿಣ ಭಾರતના ಒಂದು ಪ್ರಮುಖವಾದ ಆಧ್ಯಾತ್ಮಿಕ ಕೇಂದ್ರವಾದ ತಿರುವಣ್ಣಾಮಲೈ, ಎಂಬ ಊರಿನಲ್ಲಿ ಜನಿಸಿದರು. ತೀವ್ರ ಧ್ಯಾನ, ಹಾಗೂ ಯೋಗ, ತಂತ್ರ ಮತ್ತು ಇತರ ಪೌರಾತ್ಯ ಅತೀಂದ್ರಿಯ ಜ್ಞಾನಗಳ ಅಧ್ಯಯನದ ಮೂಲಕ ಆಂತರ್ಯದ ಪರಮಾನಂದ ಸ್ಥಿತಿಯನ್ನು ಹೊಂದಿದರು. ವೈಯಕ್ತಿಕ ಅರಿವನ್ನು ಸೋ್ಫಟಗೊಳಿಸಿ ಆಧ್ಯಾತ್ಮಿಕವಾಗಿ ಬಲಶಾಲಿಗಳಾದ ವ್ಯಕ್ತಿಗಳನ್ನು ಸೃಷ್ಟಿಸಲು ಅವರು ಸ್ವಾನುಭವದಿಂದ ಪರಮಾನಂದದ ತಂತ್ರಶಾಸ್ತ್ರವನ್ನು ನಿರೂಪಿಸಿದ್ದಾರೆ.
ನಮ್ಮ ಸಹಜಸ್ಥಿತಿಯಾದ ಧ್ಯಾನದಲ್ಲಿ ಮುಳುಗಲು ಅವರು ಅಸಂಖ್ಯಾತ ಕ್ರಮವಿಧಾನಗಳನ್ನು ನಿರ್ಮಿಸಿದ್ದಾರೆ. ಅವರು, ವಾಸ್ತವ ಪ್ರಪಂಚದಲ್ಲಿ ಯಶಸ್ಸನ್ನು ಗಳಿಸಲು ಹಾಗೂ ಆಂತರ್ಯದಲ್ಲಿ ಆಳವಾದ ಪೂರ್ಣತೆಯನ್ನು ಪಡೆಯಲು, ಧ್ಯಾನವೊಂದೇ ಇಂತಹ ಬೀಗಗಳನ್ನು ತೆಗೆಯಬಲ್ಲ ಕೀಲಿಕೈ' ಎಂದು ಹೇಳುತ್ತಾರೆ.
The Supreme Pontiff Of Hinduism Bhagawan Sri Nithyananda Paramashivam ಸಂಸ್ಥೆ
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂಸ್ಥೆಯು ಆಂತರಿಕ ಆನಂದಕ್ಕಾಗಿ ಪ್ರಪಂಚದಾದ್ಯಂತ ನಿಯೋಜಿಸಿರುವ ಆಂದೋಲನ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAMರ ಅವತಾರವು, ವೈಯಕ್ಕಿಕ ಪ್ರಜ್ಞೆಯನ್ನು ಸಮಗ್ರ ಪ್ರಜ್ಞೆಯನ್ನಾಗಿಸಿ, ವರಿಷ್ಠ ಪ್ರಜ್ಞಾ ಪರಿಧಿಯನ್ನು ಪ್ರವೇಶಿಸುವ ನೂತನ ಆವರ್ತವನ್ನು ನಿರ್ಮಿಸುವುದಾಗಿದೆ.
ಇದನ್ನು ಸಾಧಿಸಲು ಸಂಸ್ದೆಯು ಒಂದು ಕೋಟಿ ಜನರಿಗೆ 'ನಿತ್ವಧ್ಯಾನ್' ಎಂಬ ವಿಶಿಷ್ಟವಾದ ಧ್ಯಾನ ದೀಕ್ಷೆಯನ್ನೂ, ಒಂದು ಲಕ್ಷ ಜನರಿಗೆ ಜೀವನ್ನುಕ್ತ ದೀಕ್ಷೆಯನ್ನೂ ನೀಡಬೇಕೆಂದು ಉದ್ದೇಶಿಸಿದೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂಸ್ಥೆಯ ಕೇಂದ್ರಗಳು ಹಾಗೂ ಆಶ್ರಮಗಳು ಪ್ರಪಂಚ— ದಾದ್ಯಂತ ಆಂತರಿಕ ಬೆಳವಣಿಗೆಯು ಮಹತ್ತರವಾಗಿಯೂ, ಬಾಹ್ಯದ ಬೆಳವಣಿಗೆಯು ಸಹಜ ಪರಿಣಾಮವಾದಂತೆಯೂ ಮಾಡುವ ಆಧ್ಯಾ– ತ್ಮಿಕ ಪ್ರಯೋಗಾಲಯಗಳಂತೆ ನಡೆಯುತ್ತವೆ. ಈ ವಿದ್ಯಾಸಂಸ್ಥೆಗಳು ಧ್ಯಾನದಿಂದ ವಿಜ್ಞಾನದವರೆಗೆ ಅನೇಕ ಚಟುವಟಿಕೆಗಳ ಮೂಲಕ ಸಂಶೋಧನೆಯನ್ನು ಬಯಲು ಮಾಡುವಿಕೆಗೆ ಸ್ಥಳ ಮತ್ತು ಅವಕಾಶ– ಗಳಾಗಿ ರೂಪಿಸಲ್ಪಟ್ಟಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ಮಿಲನವಾಗಿ ಆನಂದವಾದ ಜೀವನವನ್ನು ಸೃಷ್ಟಿಸುವಲ್ಲಿ, ಅವು ಪರಿಮಾಣ ಆಧ್ಯಾತ್ಮಿಕತೆಯನ್ನು ಬೆಳೆಸುತ್ತವೆ.
ಅವು ಶೀಘ್ರವಾಗಿ ಪರಿಣಾಮಕಾರಿಯಾಗಿ ಬದಲಾವಣೆಗಳನ್ನು ಕೊಡುವಂತಹ ಖಚಿತ ಜೀವನ ಪರಿಹಾರಗಳನ್ನು ನೀಡುತ್ತಿವೆ. ಅಂತರರಾಷ್ಟ್ರೀಯ ವೇದಿಕ್ ಹಾಗೂ ವಿಶ್ವವಿದ್ಯಾಲಯದ ಮೂಲಕ ವೈರುಧ್ಯ ಶ್ರೇಣಿಯ ಧ್ಯಾನ–ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ ಸಿಸ್ಟಂ ಮೂಲಕ ಉಚಿತ ಶಕ್ತಿ ಉಪಶಮನವನ್ನೂ, ಉಚಿತ ಯುವ ಶಿಕ್ಷಣವನ್ನೂ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನವನ್ನೂ ಸಾಮುದಾಯಿಕ ಕಾರ್ಯಕ್ರಮಗಳನ್ನೂ, ಉಚಿತ ವೈದ್ಯಕೀಯ ಶಿಬಿರಗಳನ್ನೂ ಉಚಿತ ಭೋಜನಗಳನ್ನೂ, ಭಾರತ್ದಲ್ಲಿ ಲೈಫ಼್ ಬ್ಲಿಸ್ ಟೆಕ್ನಾಲಜಿಯೆಂಬ ಉಚಿತವಾದ ಒಂದು ವರ್ಷದ ವಸತಿಯುತ ತರಬೇತಿ ಕಾರ್ಯಕ್ರಮ– ವನ್ನೂ, ಮಕ್ಕಳಿಗೆ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣವನ್ನೂ, ಹಾಗೂ ಇಂತಹ ಇನ್ನೂ ಅನೇಕ ಸೇವೆಗಳನ್ನೂ ಜಗತ್ತಿನಾದ್ಯಂತ ನೀಡಲಾಗುತ್ತಿದೆ.
ನಿತ್ಯ ಧೀರ ಸೇನಾದ ಆನಂದ ಸೇವಕರು – ಎಂಬ ಸ್ವಯಂ ಸೇವಕರು – ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡು ಅತ್ಯುತ್ಸಾಹದಿಂದ ಸಂಸ್ಥೆಯನ್ನು ಬೆಂಬಲಿ ಸುತ್ತಿದ್ದಾರೆ.
ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂಸ್ಥೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹಂತಗಳಲ್ಲಿ ವೈಶಿಷ್ಟ್ಯಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ನಮೂದಿಸಲಾಗಿದೆ.
ಲ್ಸೆಫ಼್ ಬ್ಲಿಸ್ ಪ್ರೋಗ್ರಾಂ ಹಂತ 1: ಆನಂದ ಸ್ಫುರಣ ಪ್ಫೋಗ್ರಾಂ (LBP ಹಂತ 1 – ASP) ನಿಮ್ಮನ್ನು ಶಕ್ತಿಯುತವಾಗಿಸುತ್ತದೆ.
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿರಮಿಸುವ ಮತ್ತು ಶಕ್ತಿಯುತಗೊಳಿಸುವ ಚಕ್ರ ಅಭ್ಯಾಸದ ಕಾರ್ಯಕ್ರಮ, ದುರಾಸ, ಭಯ, ಚಿಂತೆ, ಗೊಂದಲದ ಕೊರತೆ, ಶ್ರಮ, ಹೊಟ್ಟೆಕಿಚ್ಚು, ಸ್ವಾಭಿಮಾನ, ಅತಿಯು, ಮುಂತಾದ ನಿಮ್ಮ ವಿವಿದ ರೀತಿಯ ಭಾವನೆಗಳಿಗೆ ಅದು ಸ್ಪಷ್ಟವಾದ ಬೌದ್ಧಿಕ ಮತ್ತು ಅನುಭಾವಿಕ ಅರ್ಥವನ್ನು ನೀಡುತ್ತದೆ. ಅದನ್ನು ದೈಹಿಕ ಮಟ್ಟದಲ್ಲಿ ಆಧ್ಯಾತ್ಮಿಕ ಪರಿಣಾಮವನ್ನುಂಟು ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅದು ನಿಮ್ಮ ಆನಂದದ ಸತ್ಯತೆಯನ್ನು ಅನುಭವಿಸಲು ಇರುವ ಖಚಿತ ಜೀವನ ಪರಿಹಾರ. ಅದು ಈ ಭೂಗೋಳದಲ್ಲಿ ಲಕ್ಷಾಂತರ ಜನರಿಂದ ಪ್ರಮಾಣೀಕರಿಸಲ್ಪಟ್ಟ ಬಹಳ ಪ್ರಯೋಜನಕಾರಿಯಾದ ಕಾರ್ಯಗಾರ.
ಲೈಫ಼್ ಬ್ಲಿಸ್ ಪ್ರೋಗ್ರಾಮ್ ಹಂತ 2: ನಿತ್ಯಾನಂದ ಸ್ಯುರಾಣಾ ಪ್ರೋಗ್ರಾಮ್ (lBP ಹಂತ-2 NSP) ಮರೆತದ ರಹಸ್ಯವನ್ನು ಕಳೆಚುವುದು.
ಮರೆತದ ನಿಗೂಢತೆಯನ್ನು ಕಳೆಚಿ ಜೀವಿಸುವ ಕಲೆಯ, ಹಿರಿಮೆಯನ್ನು ಸಡಿಲಿಸುವ ಒಂದು ಕಾರ್ಯಕ್ರಮ. ನಿಮಗೆ ಮರೆತದ ಪ್ರಕ್ರಿಯೆ ಮತ್ತು ಉದ್ದೇಶ ತಿಳಿದಿದ್ದರೆ, ನೀವು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಜೀವಿಸುತ್ತೀರಿ. ಮನುಷ್ಯನ ಅಂತರಂಗದ ಭಯದಿಂದ ಬೇರೂರಿರುವ ಮತ್ತು ಪ್ರಜ್ಞಾ ರಹಿತ ಭಾವನೆಗಳಾದ ತಪ್ಪುತಿಳುವಳಿಕೆ ಮನೋಭಾವ, ಸುಖ ದುಃಖಗಳಿಂದ ವಿವೇಚನೆಯನ್ನು ಹೊಂದುವ ಅವಕಾಶವನ್ನುಂಟು ಮಾಡುತ್ತದೆ. ಅದು ಸ್ವಾಭಾವಿಕ ಬುದ್ಧಿ ಶಕ್ತಿ ಮತ್ತು ಇದ್ದಕ್ಕಿದ್ದಾಂತೆ ಆಗುವ ಅನುಭವದಿಂದ ಪ್ರೇರಿಪಲ್ಟಟ್ಟ ಹೊಸ ಜೀವನಕ್ಕೆ ದ್ವಾರವಾಗಿದೆ.
ಲೈಫ಼್ ಬ್ಲಿಸ್ ಪ್ರೋಗ್ರಾಂ ಹಂತ – 3: ಆತ್ಮ ಸ್ಪುರಣ ಪ್ರೋಗ್ರಾಂ (Lbp ಹಂತ 3 Atsp) ಇದು ಅಡ್ಡಿ, ಆತಂಕಗಳನ್ನು ಪರಿಹರಿಸುತ್ತದೆ.
ಮನಸ್ಸಿನ ಚಟುವಟಿಕೆಯನ್ನು ಸ್ಪಷ್ಟವಾಗಿ ಪರಿಶೀಲಿಸುವ ಮತ್ತು ಮನಸ್ಸು ನಿಮ್ಮನ್ನು ಆಳುವುದಕ್ಕಿಂತ ಮನಸ್ಸಿನ ಒಡೆತನ ಗಳಿಸುವುದು ಹೇಗೆಂಬುದನ್ನು ಆನುಭಾವಿಕವಾಗಿ ತೋರಿಸುವ ಕಾರ್ಯಕ್ರಮ. ತಕ್ಷಣವೇ ಆನುಭಾವಿಕ ತಿಳುವಳಿಕೆಯನ್ನುಂಟುವಾಡಲು ಅದು ಅಪೂರ್ವ ಧ್ಯಾನಗಳೊಡನೆ ಮಿಳಿತವಾದ ಸಂಪೂರ್ಣ ಮಹತ್ತರ ಬೌದ್ಧಿಕ ಗ್ರಹಿಕೆಯನ್ನು ಒಳಗೊಂಡಿದೆ.
ಲೈಫ಼್ ಬ್ಲಿಸ್ ಟೆಕ್ನಾಲಜಿ (Lbt)
ಲೈಫ಼್ ಬ್ಲಿಸ್ ಟೆಕ್ನಾಲಜಿಯು 18 ರಿಂದ 30 ವರ್ಷದೊಳಗಿನ ತರುಣರಿಗಾಗಿ ಪ್ರಾಯೋಗಿಕ ಜೀವನ ಚಾತುರ್ಯದ ಒಂದು ವರ್ಷದ ಉಚಿತ ವಸತಿಯುತ ಕಾರ್ಯಕ್ರಮ. ಕಾರ್ಯಕ್ರಮದ ಮೂಲವು ಪೌರಾತ್ಯ ಪದ್ದತಿಯ ವೈದಿಕ ವಿದ್ಯಾಭ್ಯಾಸವಾಗಿದ್ದು, ಈಗಿನ ಕಾಲದ ಯುವಕರಿಗೆ ಒಳ್ಳೆಯ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸುವಂತ ವಿನ್ಯಾಸಗೊಳಿಸಲಾಗಿದೆ. ಸೃಜನಾತ್ಮಕ ಬುದ್ದಿ ಮತ್ತು ಸ್ವಾವಲಂಬನೆಗಳ ಶಿಕ್ಷಣವನ್ನು ಕೊಟ್ಟು ವೃತ್ತಿಪರ ಅಭಿರುಚಿಗಳನ್ನು ನೀಡುವುದರ ಮೂಲಕ ಆರ್ಥಿಕವಾಗಿಯೂ, ಆಧ್ಯಾತ್ಮಿಕವಾಗಿಯೂ, ಸ್ವಾವಲಂಬಿಗಳಾದ ಯುವ ಜನಾಂಗವನ್ನು ನಿರ್ಮಾಣ ಮಾಡುತ್ತದೆ.
ಇದೆಲ್ಲದಕ್ಕಿಂತಲೂ ಮಿಗಿಲಾಗಿ, ಒಬ್ಬ ಆತ್ಮಜ್ಞಾನಿಯ ರಕ್ಷಣೆಯಲ್ಲಿ ಕಲಿಯುವ ಸದವಕಾಶವನ್ನು ಜೀವನದಲ್ಲೊಮ್ಮೆಯೇ ದೊರಕುವಂತಹ ಸದವಕಾಶವನ್ನು ನೀಡುತ್ತದೆ.
ನಿತ್ಯ ಸ್ಪಿರಿಚುಯಲ್ ಹೀಲಿಂಗ್ – ವಿಶ್ವಶಕ್ತಿಯ ಮೂಲಕ ಉಪಶಮನ ಇದು ಉಪಶವನಕಾರರಿಗೆ ಧ್ಯಾನವಾಗಿಯೂ, ಉಪಶವುನ ಹೊಂದುವವರಿಗೆ ಉಪಶಮನಕಾರಿಯಾಗಿಯೂ ಪರಿಣಾಮ ವಾಗುವಂತಹ ವಿಶ್ವಶಕ್ಕಿಯ ಮೂಲಕ ಉಪಶಮನ ಮಾಡುವ ವಿಶೇಷವಾದ ಮತ್ತು ಶಕ್ತಿಶಾಲಿಯಾದ ಧ್ಯಾನ ವಿಧಾನ. THE SUPREME PONTIFF OF HINDUISM BHAGAWAN SRI NITHYANANDA PARAMASHIVAMರು ಮೈಗ್ರೇನ್‌ನಿಂದ ಕ್ಯಾನ್ಸರ್‌ವರೆಗೂ ಲಕ್ಷಾಂತರ ಜನರಿಗೆ ಇರುವ ರೋಗಗಳನ್ನು ಗುಣಪಡಿಸುವ ಈ ವೈಜ್ಞಾನಿಕ 'ನಿತ್ಯ ಸ್ಪಿರಿಚುಯಲ್ ಹೀಲಿಂಗ್'ನ ದೀಕ್ಷೆಯನ್ನು ಸಾವಿರಗಟ್ಟಲೆ ಜನರಿಗೆ ದಂದು ಪಾಲಿಸುತ್ತಿದ್ದಾರೆ.
ನಿತ್ಯ ಧ್ಯಾನ್ – ಜೀವನಾನಂದದ ಧ್ಯಾನ (ಲೈಫ಼್ ಬ್ಲಿಸ್ ಧ್ಯಾನ)
ಈ ಭೂಗ್ರಹದ ಮೇಲೆ ನಲಿದಾಡುತ್ತಿರುವ ಲಕ್ಷಾಂತರ ಜನರ ಪೈಕಿ ನೀವೂ ಒಬ್ಬರಾಗಿರಿ. 'ಅನ್ ಕ್ಲಬ್ ಆಗಿರಿ' ಆನ್ ಲೈನ್‌ನಲ್ಲಿ ನೋಂದಾಯಿಸಿಕೊಂಡು ದೀಕ್ಷೆ ಪಡೆಯಿರಿ.
ನಿತ್ಯಧ್ಯಾನ್ ಎಂಬುದು THE SUPREME PONTIFF OF HINDUISM BHAGAWAN SRI NITHYANANDA PARAMASHIVAMರು
ಮಾನವತೆಗೆ ನೀಡಿರುವ ಪ್ರಭಾವಶಾಲಿಯಾದ ದೈನಂದಿನ ಧ್ಯಾನ. ಅದು ಒಂದು ಸೂತ್ರ ಅಥವ ತಂತ್ರ–ಸಮಗ್ರವಾದುದು ಹಾಗೂ ಪರಿಪೂರ್ಣವಾದುದು. ಅದು ಪೂರ್ಣ ವ್ಯಕ್ತಿತ್ವದ ಮೇಲೆ ಪರಿಣಮಿಸಿ ಪರಿವರ್ತನೆಯನ್ನುಂಟು ಮಾಡುತ್ತದೆ ಮತ್ತು ಆತ್ಮಜ್ಞಾನದ ಕೊನೆಯ ಅನುಭವವು ಉದಯಿಸಲು ತಯಾರು ಮಾಡುತ್ತದೆ. ಈ ತಂತ್ರದ ಪ್ರತಿಯೊಂದು ಭಾಗವೂ ಉಳಿದ ಭಾಗಗಳಿಗೆ ನೆರವಾಗಿದ್ದು, ವ್ಯಕ್ತಿ ಪ್ರಜ್ಞೆಯನ್ನು ಏರಿಸುತ್ತದೆ. ನಿಮ್ಮ ಮನಸ್ಸಿಗೆ 'ಅನ್ ಕ್ಲಬ್' ತರಬೇತಿಯನ್ನು ನೀಡುತ್ತದೆ ಮತ್ತು ಆನಂದವಾದ ಜೀವನವನ್ನು ನಡೆಸುವಂತಾಗುತ್ತದೆ. ಅದು ಶಾಶ್ವತಾನಂದಕ್ಕಾಗಿ ಮಾಡುವ ಧ್ಯಾನ.
Spirituality' In Kannada
ಆಧ್ಯಾತ್ಮವೆಂದರೆ ನಿತ್ಯಾನಂದ.
ಮಾನವನೆಂದರೆ ಒಂದು ನಿಗೂಢ ಸಾಮರ್ಥ್ಯ. ಇಂದು ನಿಮ್ಮನ್ನು ನಿಮ್ಮ ದೇಹದಾಗಿಯೂ ಒಂದು ವ್ಯಕ್ತಿತ್ವವೆಂದಾಗಿಯೂ ಕಾಣುವಿರಿ. ಸಮಾಜದಲ್ಲಿನ ಅಸ್ತಿತ್ವವೆಂದೂ, ಕುಟುಂಬದ ಸದಸ್ಯ ಮುಂತಾದ ವಿವಿಧ ಪಾತ್ರಗಳಿಂದೂ ನೀವು ನಟಿಸುವಿರಿ.
ನೀವು ಅದು. ಆದರೆ ಇನ್ನೂ ಹೆಚ್ಚು ಸಹ. ಮಹತ್ತರವಾದ ಸಾಧ್ಯತೆಗಳು ನಿಮ್ಮಲ್ಲಿ ಸುಪ್ತವಾಗಿವೆ. ಒಮ್ಮೆ ನೀವು ನಿಮ್ಮ ನಿಜ ಸಾಮರ್ಥ್ಯವನ್ನು ಹೊರತೆಗೆದಾಗ ಮತ್ತು ನಿಜ ಅಸ್ತಿತ್ವಕ್ಕೆ ಎಚ್ಚರಗೊಳಿಸಲ್ಪಟ್ಟಾಗ ನಿಮ್ಮ ಎಲ್ಲ ಭಾವನೆಗಳನ್ನೂ ಪ್ರದರ್ಶಿಸಬಲ್ಲಿರಿ.
ಆದರೆ ಆದು ಸಂಭವಿಸಲು ನೀವು ಒಳಹೊಕ್ಕು ನಿಮ್ಮನ್ನು ಸ್ನೇಹಮಯವಾಗಿಸಿಕೊಂಡು ಒಂದು ಸುಭದ್ರವಾದ ಒಮ್ಮತವನ್ನು ನಿಮ್ನಲ್ಲಿ ಪ್ರಾರಂಭಿಸಬೇಕು. ನಿಮ್ಮ ಜೀವನದ ಪ್ರತಿಯೊಂದು ದೃಷ್ಟಿಕೋನದಲ್ಲಿಯೂ ಅತ್ಯುತ್ತಮ ಸ್ವೇಹಿತರೂ ಜೊತೆಗಾರರೂ ಅಗುವಂತೆ ರೂಪಿಸುವ ವಿಜ್ಞಾನವೇ ಆಧ್ಯಾತ್ಮ!