1. Nithya Dhyaan - Experience Bliss
ಅಸ್ತವ್ಯಸ್ತ ಉಸಿರಾಡುವಿಕೆ (ಸಮಯದ ಅವಧಿ : 7 ನಿಮಿಷಗಳು)
ಮೊದಲ 7 ನಿಮಿಷಗಳ ಕಾಲ ನೀವು ವಜ್ರಾಸನದಲ್ಲಿ ಕುಳಿತು ಕೊಂಡು ಕಣ್ಣುಗಳನ್ನು ಮುಚ್ಚಿಕೊಂಡು ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡು ಆಸವ,ಸ್ತವಾಗಿ ಉಸಿರಾಟವನ್ನು ನಡೆಸುವಿರಿ. ಉಸಿರೆಳೆದುಕೊಳ್ಳುವುದನ್ನೂ ಮತ್ತು ಬಿಡುವುದನ್ನೂ ದೀರ್ಘವಾಗಿ ಮತ್ತು ಅಸ್ಲವ್ಯಸ್ಥವಾಗಿ ನಡೆಸಿ. ಕೇವಲ ಉಸಿರಾಟದ ಮೇಲೆ ಕೇಂದ್ರೀಕರಿಸಿ. ನಿಮ್ಮ ಇಡಿಯ ಜೀವವೇ ಉಸಿರಾಟವಾಗಬೇಕು.
ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಚೈತನ್ಯವು ಸಹಸ್ರಾರ ಚಕ್ರ (ಮೂರ್ಧ್ವ ಮಧ್ಯ ಭಾಗ) ದಿಂದ ಮೂಲಾಧಾರ ಚಕ್ರ (ಮೂಲ ಮಧ್ಯಭಾಗ)ಕ್ಕೆ ಹರಿಯುವುದು. ವಜ್ರಾಸನದ ಭಂಗಿಯು ಚೈತನ್ಯದ ಊರ್ಧ್ವ ಹರಿವಿಗೆ ಸಹಾಯ ಮಾಡುವುದು.
ಉಸಿರು ಯಾರೊಬ್ಬರಿಗೆ ಆಧ್ಯಾತ್ಮಿಕ ಅಭ್ಯಾಸಕ್ಕೆ ಉತ್ತಮ ಸ್ಥಳ. ಧ್ಯಾನ ತಂತ್ರಗಳು ಹಲವಾರಿವೆ. ಹಲವರು ಕಾಣುವುದರತ್ತ ಗಮನ ಹರಿಸುತ್ತಾರೆ, ಮತ್ತೆ ಹಲವರು ಒಂದು ಪದವನ್ನು ಅಥವಾ ಒಂದು ಮಂತ್ರವನ್ನು ಪುರ್ನರುಚ್ಚರಿಸುವುದರತ್ತ ಗಮನವನ್ನು
ಕೇಂದ್ರೀಕರಿಸಿರುತ್ತಾರೆ. ಆದರೆ ನಾನು ಉಸಿರಾಡುವಿಕೆಯು ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಪ್ರಾರಂಭಿಸಲು ಅತ್ಯುತ್ತಮ ಸ್ಥಳವೆಂದು ಹೇಳಬಲ್ಲೆನು.
ನಮ್ಮ ದೇಹದಲ್ಲಿ ಎರಡು ವಿಧದ ವ್ಯವಸ್ಥೆಗಳಿವೆ. ಒಂದು ಐಚ್ಛಿಕವಾದದ್ದು ಮತ್ತೊಂದು ಅನೈಚ್ಛಿಕವಾದದ್ದು. ನಮ್ಮ ಕೈಕಾಲುಗಳನ್ನಾಡಿಸುವುದು ಐಚ್ಛಿಕ ಕಾರ್ಯದ ಉದಾಹರಣೆ. ಯಾವಾಗ ಬೇಕೋ ಆಗ ನೀವು ನಿಮ್ಮ ಕೈ ಕಾಲುಗಳನ್ನಾಡಿಸಬಹುದು. ಆದರೆ ನೀವು ನಿಮ್ಮ ಮೆದುಳಿನ ಕಾರ್ಯವನ್ನಾಗಲೀ ಅಥವಾ ಹೃದಯದ ಬಡಿತವನಾಗಲೀ ನೇರವಾಗಿ ನಿರ್ವಹಿಸಲಾರಿರಿ. ಅವೆಲ್ಲವೂ ಅನೈಚ್ಛಿಕ ಚಲನೆಗಳು. ಆದರೆ ಉಸಿರಾಡುವಿಕೆ ಯೆಂಬುದೊಂದು ಐಚ್ಚಿಕ ಹಾಗೆಯೇ ಅನೈಚ್ಛಿಕ್ಷ ಕಾರ್ಯವಿಧಾನ. ನೀವು ಪ್ರಜ್ಞಾಪೂರಕ ವಾಗಿಲ್ಲದಿದ್ದರೂ ಸಹ, ಉಸಿರಾಡುವ ಕ್ರಿಯೆಯು ತಪ್ಪುವುದೇ ಇಲ್ಲ. ನಿಮ್ಮ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಿದರೂ ಸಹ ನೀವು ಉಸಿರಾಡುವುದನ್ನು ನಿಲ್ಲಿಸುವುದಿಲ್ಲ. ಅದೊಂದು ಅನರ್ಥವಾಗಿ ಬಿಡುವುದು. ಹಾಗೆಯೇ, ನಿಮ್ಮ ಉಸಿರಾಟವನ್ನೂ ಸಹ ನಿಯಂತ್ರಿಸಬಲ್ಲಿರಿ. ಪ್ರಾಣಾಯಾಮದ ಇಡಿಯ ವಿಜ್ಞಾನವೇ ಉಸಿರಾಟದ ನಿಯಂತ್ರಣದ ಬಗ್ಗೆ ಒತ್ತು ನೀಡುತ್ತದೆ. ನೀವು ಉಸಿರಾಟವನ್ನು ಆಳವಾಗಿಯೂ ಹಾಗೂ ನಿಧಾನವಾಗಿಯೂ ಬೇಕೆಂದಾಗ ಮಾಡಬಲ್ಲಿರಿ. ನೀವು ದೀರ್ಘಕಾಲದವರೆಗೆ ಉಸಿರನ್ನು ತಡೆಹಿಡಿಯಬಲ್ಲಿರಿ ಅಥವಾ ಕೆಲವು ನಿಮಿಷಗಳ ಕಾಲ ಉಸಿರಾಟವನ್ನೇ ನಿಲ್ಲಿಸಿಬಿಡಬಲ್ಲಿರಿ. ಆದುದರಿಂದ ಉಸಿರೆಂಬುದು ನಿಮ್ಮ ಐಚ್ಛಿಕ ಮತ್ತು ಅನೈಚ್ಛಿಕ ವ್ಯವಸ್ಥೆಗಳ ನಡುವಿನ ಕೊಂಡಿಯಾಗಿದೆ.
ಆದರೆ ನೀವು ಉಸಿರಾಡುವುದನ್ನು ನಿಲ್ಲಿಸಿ ಸಾಯಲಾರಿರಿ. ಏಕೆಂದರೆ ಆಗ ಅದು ನಿಮ್ಮ ಉಳಿವಿನ ಸಹಜ ಪ್ರವೃತ್ತಿ ಮತ್ತು ನಿಮ್ಮ ಇಚ್ಛೆಯ ನಡುವಣ ಘರ್ಷಣೆಯಾಗಿರುತ್ತದೆ.
ಮತ್ತು ನಿಮ್ಮ ಉಳಿವಿನ ಸಹಜ ಪ್ರವೃತ್ತಿಯು ನಿಮ್ಮ ಇಚ್ಚಾಶಕ್ಷಿಗಿಂತಲೂ ಬಹುವಾಗಿ ಶಕವಾಗಿರುವುದು. ನೀವು ಜೀವಿಸಬೇಕೆಂಬ ಇಚ್ಛಾ ಮಾತ್ರದಿಂದಲೇ ಜೀವಿಸಿರುವಿರಿ. ನಿಮ್ಮ ಉಸಿರಾಟವು ಸಂಭವಿಸುವುದು ನೀವು ಬದುಕಬೇಕೆಂಬ ಇಚ್ಛೆಯಿಂದ ನೀವು ಗಮನಿಸಿಲ್ಲದಿರಬಹುದು. ಆದರೆ ನಿಮ್ಮ ಉಸಿರಾಟದ ಗುಣವು ನಿಮ್ಮ ಮನಸ್ಸಿನ ಸ್ಸಿತಿಗನುಗುಣವಾಗಿ ಬದಲಾವಣೆಯಾಗುತ್ತದೆ. ನಿಮ್ಮ ಭಾವನೆಗಳು ಉಸಿರಾಟದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ನೀವು ಉದ್ವೇಗದಲ್ಲಿರುವಾಗ ನಿಮ್ಮ ಉಸಿರಾಟವು ಬದಲಾವಣೆಯಾಗುತ್ತದೆ. ನೀವು ಕೋಪಿಸಿಕೊಂಡಿರುವಾಗ ನಿಮ್ಮ ಉಸಿರಾಟವು ಬದಲಾವಣೆಯಾಗುತ್ತದೆ. ನೀವು ಲೈಂಗಿಕವಾಗಿ ಉದ್ರೇಕಗೊಂಡಾಗ ನಿಮ್ಮ ಉಸಿರಾಟವು ಬದಲಾವಣೆಯಾಗುತ್ತದೆ. ನೀವು ಪ್ರೀತಿಸುತ್ತಿರುವಾಗ ನಿಮ್ಮ ಉಸಿರಾಟದಲ್ಲಿ ಒಂದು ಗುಣಾತ್ಮಕ ಬದಲಾವಣೆಯಿರುತ್ತದೆ. ಆದುದರಿಂದ ನಿಮ್ಮ ಉಸಿರಾಟವು ನಿಮ್ಮ ಭಾವನೆಗಳೊಂದಿಗೆ ನೇರವಾಗಿ ಸಂಬಂಧಿಸಿರುತ್ತದೆ. ನಿವ್ಮ ಮನಸ್ಸಿನ ಸ್ಥಿತಿಯ ಬದಲಾವಣೆಗಳೊಂದಿಗೆ ಅದು ಬದಲಾಯಿಸುತ್ತಲೇ ಇರುತ್ತದೆ. ನೀವು ಉದ್ದೇಗದಿಂದಿದ್ದರೆ ಆಳವಾಗಿ ಉಸಿರಾಡಬೇಕೆಂಬುದು ಸಾಮಾನ್ಯವಾಗಿ ಕೊಡುವ ಸಲಹೆ ಮತ್ತು ನೀವು ಆಳವಾಗಿ ಉಸಿರಾಡಿದ ಕ್ಷಣವೇ ಇದಕ್ಷಿದಂತೆ ಹಗುರವಾದ ಭಾವನೆಯನ್ನು ಹೊಂದುವಿರಿ, ಹೆಚ್ಚು ವಿಶ್ರಮಿಸುವಿರಿ ಹಾಗೂ ನಿಮ್ಮ ಉದ್ವೇಗವು ಬಿಡುಗಡೆಯಾಗುವುದು. ಮನಸ್ಸು ಹಾಗೂ ಉಸಿರಾಡುವುದು ಪರಸ್ಪರ ನಿಕಟ ಸಂಬಂಧ ಹೊಂದಿರುವುದು. ನೀವು ಉಸಿರಾಡುವುದನ್ನು ನಿಲ್ಲಿಸಿದರೆ ಆಲೋಚಿಸುವುದು ಕಷ್ಟವಾಗುವುದೆಂಬುದನ್ನು ನೀವು ನೋಡಬಲ್ಲಿರಿ. ಉಸಿರಾಡುವುದು ನಿಮ್ಮ ಮನಸ್ಸಿಗೆ ಇಂಧನವಾಗುವುದು. ವಾಸ್ತವವಾಗಿ
ಸಂಸ್ಕೃತದಲ್ಲಿ ಪ್ರಾಣ ಎಂಬ ಪದವನ್ನು ಉಪಯೋಗಿಸುವೆವು. ಪ್ರಾಣ ಎಂದರೆ ಉಸಿರು ಎಂದು ನೇರವಾದ ಅರ್ಥವಲ್ಲ. ಉಸಿರಿನ ಮೂಲಕ ಹರಿಯುವ ಚೈತನ್ನ ಎಂದರ್ಥ. ಆ ಚ್ಛಿತನ್ನವೇ ಜೀವಬಲವಾಗಿರುವುದು. ತೈತ್ತರೀಯ ಉಪನಿಷದ್ ನಲ್ಲಿ ಐದು ಕೋಶಗಳನ್ನು (ಪಂಚ ಕೋಶಗಳು) ಉದ್ದರಿಸಲಾಗಿದೆ. ಅನ್ನಮಯ ಕೋಶ (ಭೌತಿಕ ದೇಹದ ಕೋಶ), ಪ್ರಾಣಮಯ ಕೋಶ (ಉಸಿರಿನ ಕೋಶ), ಮನೋಮಯ ಕೋಶ (ಮನಸ್ಸಿನ ಕೋಶ), ವಿಜ್ಞಾನವುಯ ಕೋಶ (ಬುದ್ದಿಯ ಕೋಶ) ಮತ್ತು ಆನಂದವುಯ ಕೋಶ (ಪರಮಾನಂದದ ಕೋಶ) ಎಂಬುವು. ಈ ಕೋಶಗಳು ಈರುಳ್ಳಿಯ ಸಿಪೆಗಳಂತಿದ್ದು, ಕೇಂದ್ರವನ್ನು ಅಂದರೆ, ಆತ್ಮವನ್ನು ಮುಚ್ಚಿರುತ್ತವೆ. ಪ್ರಾಣಾಯಾಮ ಕೋಶ ಅಥವಾ ಉಸಿರಿನ ಕೋಶದಲ್ಲಿ ನಿಮ್ಮೆಲ್ಲ ಆಸೆಗಳ ನೆನಪುಗಳನ್ನು ಸಂಗ್ರಹವಾಗಿರುತ್ತವೆ. ಹಾಗಾಗಿ ನಿಮ್ಜ ಆಸೆಗಳಿಗನುಗುಣವಾಗಿ ನಿಮ್ಮ ಪ್ರಾಣ ಅಂದರೆ ಉಸಿರಾಟವು ಮಾರ್ಪಟ್ಟಿರುತ್ತದೆ. ನಿಮ್ಮ ಉಸಿರಾಟ ಹಾಗೂ ನಿಮ್ಚ ಆಸೆಗಳು ಬಿಗಿಯಾಗಿ ಜೋಡಣೆಯಾಗಿರುತ್ತವೆ. ನಿಮಗೆ ಅತಿಯಾದ ಆಸೆಗಳಿದ್ದರೆ ನಿಮ್ಮ ಉಸಿರಾಟವು ಅತಿ ವೇಗವಾಗಿ ಮತ್ತು ಭಾರವಾಗಿ ಇರುವುದನ್ನು ನೀವು ನೋಡಿರಬಹುದು.ಅತ್ಯಲ್ಪವಾಗಿದ್ದರೆ ನಿಮ್ಮ ಉಸಿರಾಟವು ಹೆಚ್ಚು ಆರಾಮವಾಗಿ ಇರುವುದು.
ಉಸಿರಾಟ ಮತ್ತು ಮನಸ್ ಒಂದಕ್ಕೊಂದು ಸಂಬಂಧಿತವಾಗಿರುವುದರಿಂದ ಒಂದನ್ನು ಬದಲಾಯಿಸಿದರೆ ಆದು ಮತ್ತೊಂದನ್ನು ತನ್ನಷ್ಟಕ್ಕೆ ಬದಲಾಯಿಸುತ್ತದೆ. ನಾವು ಈಗಾಗಲೇ ಹೇಗೆ ನಮ್ಮ ಭಾವನೆಗಳು ನಮ್ಜ ಉಸಿರಾಟದ ಮಾದರಿಗಳ ಮೇಲೆ ಪರಿಣಾಮ ಬೀರುವುವು ಎಂದು ಚರ್ಚಿಸಿದ್ದೇವೆ. ಅದೇರೀತಿ, ನಾವು ನಮ್ಮ ಉಸಿರಾಟವನ್ನು ನಿರ್ಬಂಧಿಸುವುದಾದರೆ ಅಥವಾ ನಮ್ಮ ಉಸಿರಾಟದ ಮಾದರಿಯಲ್ಲಿ ಹಲವು ಬದಲಾವಣೆಯನ್ನು ತರುವುದಾದರೆ ಅದು ನಮ್ಮ ಭಾವನೆಗಳ ಅಂದರೆ ನಮ್ಮ ಮನಸ್ಸಿನ ಸಿತಿಯ ಮೇಲೆ ನೇರ ಪರಿಣಾಮವನ್ನು ಬೀರುವುದು.
ನಾನು ದೇಹದ ಯಾವ ಭಾಗವನ್ನಾದರೂ ಕತ್ತರಿಸಿದರೆ ದೇಹದ ಆ ಭಾಗಕ್ಕೆ ಸಂಬಧಿಸಲ್ಪಟ್ಟ ನೆನಪು ಅಂತಿಮವಾಗಿ ಕಳೆದು ಹೋಗುವುದೆಂದು ನಾನು ಬಲವಾಗಿ ನಂಬಿದ್ದೇನೆ. ನೀವು ಇದೊಂದು ಚಿಕ್ಕ ಪ್ರಯೋಗವನ್ನು ಮಾಡಬಹುದು. ನಿಮ್ಜ ಜೀವನದಲ್ಲಿ ಸಂಭವಿಸಿದ್ದ ಹಿಂದಿನ ಯಾವುದೋ ಒಂದು ಘಟನೆಯನ್ನು ನಿಮ್ಮ ಅಂದಿನ ರೂಪವನ್ನು ಜ್ಞಾಪಕಮಾಡಿಕೊಳ್ಳದೆ ಜ್ಞಾಪಿಸಿಕೊಳ್ಳಲು ಪ್ರಯತ್ತಿಸಿ. ಇದು ಅಸಾಧ್ಯ. ಯಾವುದೇ ಘಟನೆ ಜ್ಞಾಪಿಸಿಕೊಳ್ಳಲು ನಿಮ್ಮ ರೂಪದ ಅವಶ್ಯಕತೆ ಇರುವುದು ಏಕೆಂದರೆ ನಿಮ್ಮ ಎಲ್ಲ ನೆನಪುಗಳು ನಿಮ್ಮ ರೂಪದಲ್ಲಿ ಸಂಗ್ರಹವಾಗಿರುತ್ತವೆ.
ನಿಮ್ಮ ಅನೇಕ ಮನೋಭಾವನೆಗಳನ್ನು ನಿಮ್ಮ ಅಸ್ತಿತ್ವದಲ್ಲಿ ( ಇರುವಿನಲ್ಲಿ) ಆದುಮಿಟಿರುವಿರಿ ಮತ್ತು ಆ ಕಾರಣ ನೀವು ಸಹಜವಾಗಿ ಉಸಿರಾಡಲಾರಿರಿ. ನಿಮ್ಮ ಉಸಿರಾಟವು ಆಳವಿಲ್ಲದೇ ಇರುವುದು ಮತ್ತು ನಿಮ್ಜ ಸ್ವಾಯುಗಳಲ್ಲಿ ಸಂಗ್ರಹವಾಗಿರುವ ಅದುಮಿಡಲ್ಪಟ್ಟ ಮನೋಭಾವನೆಗಳನ್ನು ನೀವು ಬಿಡುಗಡೆ ಮಾಡಲಾಗುವುದೇ ಇಲ್ಲ. ಉಸಿರಾಟವು ದೇಹದ ಪ್ರತಿಯೊಂದು ಭಾಗವನ್ನೂ ಮುಟ್ಟಲಾಗುವುದೇ ಇಲ್ಲ,
ನೀವು ಯಾವಾಗಲೂ ಒಂದು ನಿರ್ದಿಷ್ಟವಾದ ಮಾದರಿಯಲ್ಲಿಯೇ ಉಸಿರಾಡುವಿರಿ. ನಮ್ಮ ಹಿಂದಿನ ಸಂಸ್ಕಾರಗಳು, ನಮ್ಮ ಅಸ್ತಿತ್ವದಲ್ಲಿ ಆದುಮಿಡಲ್ಪಟ್ಟಿರುವ
ನಮ್ಮ ಹಿಂದಿನ ನೆನಪುಗಳು ನಮ್ಮ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟವಾದ ಉಸಿರಾಟದ ಮಾದರಿಯನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ ನಾವು ಇದೇ ರೀತಿಯ ಮನೋಭಾವನೆಗಳನ್ನು ಹಾಗೂ ಸಂಸ್ಕಾರಗಳನ್ನು ಆಕರ್ಷಿಸುತ್ತೇವೆ. ನವ್ಮ ವ್ಯವಸ್ಥೆಯಲ್ಲಿರುವ ಯಾವುದೇ ಆದರೂ ಉಳಿವಿನ ಸಹಜ ಪ್ರವೃತ್ತಿಯನ್ನು ಹೊಂದಿರುತ್ತದೆ. ಆದುದರಿಂದ ನಮ್ಮ ವ್ಯವಸ್ದೆಯ ಒಳಗಡೆ ನೆಲೆಸಿ ಬೆಳೆಯಲು ಅನುಕೂಲಕರ ಸನ್ನಿವೇಶಗಳನ್ನು ಹುಟ್ಟಿಹಾಕುತ್ತದೆ. ನಿಮ್ಮ ವ್ಯವಸ್ಥೆಯಲ್ಲಿ ಕೋಪವು ಅದುಮಿಡಲ್ಪಟ್ಟಿದ್ದರೆ, ಆದು ಮೇಲಕ್ಕೆ ಬರುತ್ತಿದ್ದು ಅದರ ಉಳಿವಿಗಾಗಿ ಒಂದು ಉಸಿರಾಟದ ಮಾದರಿಯನ್ನು ಸೃಷ್ಟಿಸುತ್ತಿರುತ್ತದೆ. ಇದೊಂದು ವಿಷವರ್ತುಲ. ನಿಮ್ಮ ಉಸಿರಾಟವು ಹಿಂದಿನ ಸಂಸ್ಕಾರಗಳ ಒಟ್ಟು ಪರಿಣಾಮವಲ್ಲದೇ ಬೇರೇನಲ್ಲ.
ನೀವು ಎಷ್ಟು ಆಳವಾಗಿ ಸಾಧ್ಯವೋ ಅಷ್ಟು ಮತ್ತು ಎಷ್ಟು ಸಾಧ್ಯವೋ ಅಷ್ಟು ಅಸ್ತವ್ಯಸ್ತವಾಗಿ ಉಸಿರಾಡಬೇಕು. ನಿಮ್ಮ ಇಡಿಯ ಅಸ್ತಿತ್ವವೇ ಉಸಿರಾಟವಾಗಿಬಿಡಬೇಕು. ನಿಮ್ಮ ಉಸಿರಾಟವು ಆಳವಾಗಿರಲೇಬೇಕೆಂದು ತಿಳಿದಿರಿ. ಅಸ್ಸವ್ಯಸ್ಥ ಉಸಿರಾಟವು ಮೇಲು ಮೇಲಿನದಾಗಿರಲೇಬಾರದು. ಆಳವಾದ ಅಸ್ತವ್ಯಸ್ತ ಉಸಿರಾಟವು ನಿಮ್ಮ ಸ್ನಾಯುಗಳಿಂದ ಮತ್ತು ದೇಹದ ಭಾಗಗಳಿಂದ ಉದ್ವೇಗವನ್ನು ಮತ್ತು ಆ ಮೂಲಕ ಕೊರೆದಿಡಲಾದ ನೆನಪುಗಳನ್ನು ಬಿಡುಗಡೆ ಮಾಡಲಾರಂಭಿಸುತ್ತದೆ. ಸಾಮಾನ್ಯವಾಗಿ ನಮ್ಮ ಸ್ನಾಯುಗಳು ಸದಾ ಕಾಲವೂ ಒತ್ತಡದಲ್ಲಿರುತ್ತವೆ. ಅಸ್ತವ್ಯಸ್ತ ಉಸಿರಾಟವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಸಂಸ್ಕಾರಗಳಿಂದ ಮುಕ್ತಿಗೊಳಿಸಲಾರಂಭಿಸುತ್ತದೆ.
ಪ್ರತಿಯೊಂದು ಮನೋಭಾವನೆಯೂ ಒಂದು ನಿರ್ದಿಷ್ಠವಾದ ಉಸಿರಾಟದ ಮಾದರಿಯನ್ನುಂಟುಮಾಡುತ್ತದೆ. ಮಕ್ಕಳು ಆಳವಾಗಿಯೂ ಮತ್ತು ಆನಂದದಾಯಕ ವಾಗಿಯೂ ಉಸಿರಾಡುವುದನ್ನು ನೀವು ನೋಡಿರಬಹುದು. ಅವರು ಮೇಲೆ ಮೇಲೆ ಉಸಿರಾಡುವುದಿಲ್ಲ. ಅವರು ಬೆಳೆಯುತ್ತಿದ್ದ ಹಾಗೆ ಸಮಾಜ, ನೋವು, ನಲಿವು, ತಪಿತಸ ಮನೋಭಾವಗಳು, ನಂಬಿಕೆಗಳು, ಒತ್ತಡ ಮತ್ತು ಇತರ ಮನೋಭಾವ ಇವುಗಳಿಂದ ನಿಬಂಧನೆಗೊಳಪಡುತ್ತಾರೆ ಮತ್ತು ಅವರ ಉಸಿರಾಟದ ಗುಣವು ಸಂಪೂರ್ಣವಾಗಿ ಬದಲಾಯಿಸುತ್ತದೆ. ಈಗನೀವು ನಿಮ್ಮ ವ್ಯವಸ್ಥೆಯಲ್ಲಿ ಅನೇಕ ವರ್ಷಗಳಿಂದ ಅದುಮಿಡಲ್ಪಟ್ಟ ವುನೋಭಾವಗಳಿಂದ ಹುಟ್ಟಿದ ಯಾವುದೋ ಒಂದು ವಾದರಿಯನ್ನು ಅಲುಗಾಡಿಸಬೇಕಾದರೆ ನೀವು ಅಸ್ತವ್ಯಸ್ತ ಉಸಿರಾಟವನ್ನು ಒಳಸೇರಿಸಬೇಕು. ನೀವು ಒಂದು ತುಮುಲವನ್ನು ಹುಟುಹಾಕಬೇಕು. ಕೇವಲ ಬೇರೊಂದು ನಮೂನೆಯನ್ನು ಒಳ ಸೇರಿಸುವುದು ಪರಿಹಾರವಲ್ಲ. ನಿಮ್ಮ ವ್ಯವಸ್ಥೆಯಿಂದ ಹಿಂದಿನ ಎಲ್ಲಾ ಗುರುತುಗಳನ್ನು ಅಗೆದು ಹಾಕಬೇಕಾದರೆ ನೀವು ಸಂಪೂರ್ಣ ಅಸ್ಥವ್ಯಸತೆಯನ್ನು ಹುಟ್ಟು ಹಾಕಬೇಕು. ಆದುದರಿಂದ ಈ ಧ್ಯಾನದಲ್ಲಿ ಪ್ರಾಣಾಯಾಮದಂತಹ ಲಯಬದ್ಧವಾದ ಉಸಿರಾಟದ ಮಾದರಿಯನ್ನು ನಾನು ಶಿಫಾರಸು ಮಾಡುತ್ತಿಲ್ಲ. ಕೇವಲ ಅಸ್ಮವ್ಯಸ್ಥೆ ಉಸಿರಾಟವನ್ನಷ್ಟೇ ನಾನು ಶಿಫಾರಸ್ಸು ಮಾಡುವುದು. ಈ ಅಸ್ತವ್ಯಸ್ತ ಉಸಿರಾಟವು ನಿಮ್ಮ ಎಲ್ಲ ಹಿಂದಿನ ಸಂಸ್ಕಾರಗಳನ್ನು ನಾಶಮಾಡುತ್ತದೆ. ಇದೊಂದು ಸತ್ತ ಎಲೆಗಳುಳ್ಳ ಮರವನ್ನು ಅಲುಗಾಡಿಸಿದಂತೆ. ಸತ್ತ ಎಲೆಗಳೆಲ್ಲ ಕೆಳಗೆ ಉದುರುವುವು. ಹಾಗೆಯೇ ಅಸ್ತವ್ಯಸ್ತ ಉಸಿರಾಟವು ನಿಮ್ಹ ಅದುಮಿಡಲಟ್ಟ ವ್ಯವಸ್ಥೆಯನ್ನು ಅಲುಗಾಡಿಸಿದ ಹಾಗೆ. ಹಿಂದಿನ ಹುದುಗಿರುವ ನೆನಪುಗಳೆಲ್ಲವೂ
ಬಿಡುಗಡೆಯಾಗುವುವು. ಆಳವಾದ ಅಸ್ತವ್ಯಸ್ತ ಉಸಿರಾಟವು ದೇಹಕ್ಕೆ ಅಗಾಧವಾದ ಆಮ್ಲಜನಕವನ್ನು ತುಂಬಿಸುತ್ತದೆ ಹಾಗೂ ಅದರಿಂದ ಇಂಗಾಲದ ಡೈ ಆಕ್ಸೈಡನ್ನು ಹೊರಬಿಡುವಂತೆ ಮಾಡುತ್ತದೆ. ಅದು ತೀವ್ರವಾದ ಮುಕ್ತವಾಯು ಸಂಚಾರವನ್ನು ಸೃಷ್ಟಿಸುವುದರಿಂದ ನೀವು ಹೆಚ್ಚು ಲವಲವಿಕೆಯನ್ನೂ ಹಾಗೂ ತಾಜಾತನವನ್ನೂ ಆನುಭವಿಸುವಿರಿ. ರಕ್ತಕ್ಕೆ ಹೆಚ್ಚಿನ ಆಮ್ಲಜನಕದ ಲಭ್ಯತೆಯಿಂದ ನಿಮ್ಮ ದೇಹದ ಅಂಗಾಂಗಗಳೆಲ್ಲವೂ ತಮ್ಮಷ್ಟಕ್ಕೆ ಸಜೀವಗೊಳ್ಳುವುವು ಮತ್ತು ಆದರಿಂದ ದೇಹದ ಕೋಶಗಳಲ್ಲಿ ಹೆಚ್ಚಿನ ಜೈವಿಕ ಶಕ್ತಿಯನ್ನು ಸೃಷ್ಟಿಸುವುದು.
ಸಾಮಾನ್ಯವಾಗಿ ಯಾವಾಗಲೂ ನಾವೊಂದು ಭಾರವಾದ ಜಡವಸ್ತುವಿನಂತೆ ಭಾಸವಾಗುತ್ತದೆ. ಅದು ಏಕೆಂದರೆ ನಮ್ಮ ದೇಹವು ಯಾವತ್ತೂ ಸಜೀವವಾಗಿ ಇರಲೇ ಇಲ್ಲ. ಅದು ಸದಾಕಾಲವೂ ಒತ್ತಡ ಮತ್ತು ಉದ್ವೇಗದಲ್ಲಿಯೇ ಇರುತ್ತದೆ. ಯಾವುದೇ ವಸ್ತುವು ಉದ್ವೇಗದಲ್ಲಿ ಸಜೀವವಾಗಿರಲು ಸಾಧ್ಯವೇ ಇಲ್ಲ. ಹೆಚ್ಚಿದ ಆಮ್ಲಜನಕದ ಹರಿವಿನಿಂದ ದೇಹವು ಸಜೀವಗೊಂಡರೆ, ನೀವು ಹಗುರವಾದಂತೆ ಭಾವಿಸಲಾರಂಭಿಸುತ್ತೀರಿ. ನೀವು ಭೌತ ದ್ರವ್ಯ (matter)ದ ಬದಲು ಶಕ್ತಿಯನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಹುದುಗಿದ ನೆನಪುಗಳಿಂದಲೇ ನೀವು ಭಾರವಾದಂತೆ ಭಾಸವಾಗುವುದು.
ಅಂದ ಹಾಗೆ ಕೆಲವು ಬೌದರ ವಿಹಾರಗಳಲ್ಲಿ ವ್ಯಕ್ತಿಗಳಿಗೆ ಸಂನ್ಯಾಸ ದೀಕ್ಷೆಯನ್ನು ಕೊ ಡಲು ಇದನ್ನು ಒಂದು ತಂತ್ರವಾಗಿ ಉಪಯೋಗಿಸುತ್ತಾರೆ. ಆಧ್ಯಾತ್ಮಿಕ ಶಿಕ್ಷಣಗಳೆಲ್ಲವೂ ಮುಗಿದ ಮೇಲೆ ನಿಮ್ಮನ್ನು ಹುಲ್ಲಿನ ಮೇಲೆ ನಡೆಸಲಾಗುವುದು. ನೀವೊಂದು ಕಾಲುದಾರಿ ಮಾಡಿದರೆ (ನಮ್ಮ ಪಾದಗಳ ಕೆಳಗಿನ ಹುಲ್ಲು ಸತ್ತರೆ), ನಿಮಗೆ ಸಂನ್ಯಾಸ ದೀಕ್ಷೆಯನ್ನು
ನೀಡಲಾಗುವುದಿಲ್ಲ ಮತ್ತು ಹೆಚ್ಚಿನ ಆಧ್ಯಾತ್ಮಿಕ ಶಿಕ್ಷಣವನ್ನು ಸೂಚಿಸಲಾಗುವುದು. ಕಡಿಮೆ ಸಂಸ್ಕಾರವನ್ನು ಹೊಂದಿರುವ ವ್ಯಕ್ತಿಯು ನಡೆಯುವಾಗ ಹುಲ್ಲಿನ ಮೇಲೆ ದಾರಿಯನು ಮಾಡಲಾರನು, ಏಕೆಂದರೆ ಅವನ ವ್ಯವಸ್ದೆಯೊಳಗೆ ಅವನು ಸದಾ ಕಾಲವೂ ಹಗುರ ಭಾವವನ್ನು ಹೊಂದಿರುವನು. ಹುದುಗಿರುವ ನೆನಪುಗಳ ಹೊರೆಯು ಕಡಿಮೆಯಾಗಿರುವುದು.
ಅಸ್ತವ್ಯಸ್ಥ ಉಸಿರಾಟದಿಂದ ದೊರಕುವ ಹೆಚ್ಚಿನ ಆಮ್ಲಜನಕ ಮತ್ತು ಕಡಿಮೆಗೊಂಡ ಇಂಗಾಲದ ಡೈ ಆಕ್ಟೈಡ್‍ನಿಂದ ನೀವು ನಿಮ್ಮ ಅದುಮಿಡಲ್ಪಟ್ಟ ವ್ಯವಸ್ಥೆಯನ್ನು ಸಜೀವಗೊಳಿಸುವಿರಿ. ನಿಮ್ಜ ಉಸಿರಾಟವು ಎಷ್ಬೊಂದು ಆಳವಾಗಿ, ತೀವ್ರವಾಗಿ ಮತ್ತು ಆಸವ,ಸವಾಗಿರಬೇಕೆಂದರೆ ನೀವೇ ಇಡಿಯಾಗಿ ಉಸಿರಾಟವಾಗಿಬಿಡಬೇಕು. ಉತನವಾಗುವ ಜೈವಿಕ ಶಕ್ಕಿಯು ನಿಮ್ಮ ಸ್ವಾಯುಗಳನ್ನು ಕರಗಿಸಿ ನಿಮ್ನ ಸಂಸ್ಕಾರಗಳಿಂದ ಮುಕ್ತಿಗೊಳಿಸಲು ಆರಂಭಿಸುವುದು. ನಿವ್ಮುಲ್ಲಿ ಹಗುರು ಭಾವನೆಯನ್ನು ಉಂಟುವವಾಡಿ ನೀವು ಚೈತನ್ನದಿಂದಲೂ ಆನಂದದಿಂದಲೂ ಇರುವಂತೆ ಮಾಡುವುದು. ಈ ರೀತಿ ನಾವು ಎರಡನೆಯ ಹೆಜ್ಜೆಗೆ ಕ್ರಮಿಸುವೆವು.
ನೀವು ಅಸ್ತವ್ಯಸ ಉಸಿರಾಟದ ತಂತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚು ತಿಳಿಯಬೇಕಾದರೆ, ನೀವು ಲೈಫ್ ಬ್ಲಿಸ್ ಪ್ರೋಗ್ರಾಂ ಅಥವಾ ಆನಂದ ಸ್ಪುರಣ ಪ್ರೋಗ್ರಾಂನಲ್ಲಿ ಹೇಳಿಕೊಡಲಾಗುವ ದುಃಖ ಹರಣ ಧ್ಯಾನ ತಂತ್ರವನ್ನು ಕೂಡ ಅಭ್ಯಾಸಮಾಡಬಹುದು.
ತೀವ್ರ ಝೇಂಕರಿಸುವಿಕೆ (ಸಮಯದ ಅವಧಿ : 7 ನಿಮಿಷಗಳು)
ಎರಡನೆಯ ಹೆಜ್ಜೆಯಲ್ಲಿ ನೀವು ವಜ್ರಾಸನದಲ್ಲಿ ಕುಳಿತುಕೊಳ್ಳ ಬೇಕು. ಚಿನ್‌ಮುದ್ರ ಮಾಡಿ ನಿಮ್ಮ ಕೈಗಳನ್ನು ಮಂಡಿಯ ಮೇಲೆ ಇಟುಕೊಳ್ಳಿ. ಈ ಭಂಗಿಯಲ್ಲಿ ಸಾಧ್ಯವಾದಷ್ಟು ತೀವ್ರವಾಗಿ, ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಮತ್ತು ಸಾಧ್ಯವಾದಷ್ಟು ದೀರ್ಘವಾಗಿ ಝೇಂಕಾರವನ್ನು ಉತತ್ತಿಸಿ.
ನಿಮ್ಮ ಇಡಿಯಾದ ಪ್ರಜ್ಞೆಯನ್ನು ಝೇಂಕರಿಸುವಿಕೆಯ ಮೇಲೆ ಹಾಕಿ. ನೀವೇ ಝೇಂಕಾರವಾಗಿ. ಝೋಂಕರಿಸುವುದು ನಿಮ ಒಳ ಹರಟೆಯನ್ನು ಕಡಿಮೆ ಮಾಡುತ್ತದೆ. ನಿರಂತರವಾಗಿ ನಮ್ಮ
ಮನಸಿನಲಿ ಮಾತನಾಡುವುದು ನಡೆಯುತ್ತಿರುತ್ತದೆ. ಬಾಹ್ಯದಲ್ಲಿ ನಾವು ಯಾರೊಂದಿಗೂ ಮಾತನಾಡದೇ ಇರಬಹುದು, ಆದರೆ ಅಂತರಂಗದಲ್ಲಿ ಸದಾಕಾಲವೂ ಏನಾದರೂ ಚಟುವಟಿಕೆಯು ನಡೆಯುತ್ತಲೇ ಇರುವುದು. ಈ ಒಳಹರಟೆಯನ್ನು ಕಡಿಮೆಮಾಡಲು ಝೇಂಕರಿಸುವುದು ಒಂದು ಅತ್ತುತ್ತಮ ತಂತ್ರ.
ಸಾಮಾನ್ಯವಾಗಿ ಜನಗಳಿಗೆ ಯೋಚನೆಗಳಿಲ್ಲದೆ ಕುಳಿತುಕೊಳ್ಳುವುದು ಬಹಳ ಕಷ್ಟ. ನೀವು ನಿಮ್ಮ ಮಧ್ಯ ವಯಸ್ಸಿನಲ್ಲಿ ಧ್ಯಾನಕ್ಕೆ ಕೈ ಹಾಕಿದರೆ, ನೀವು ಮೊದಲು ಕಂಡುಕೊಳ್ಳುವುದು ನಿಮ್ಚ ಮನಸ್ಸಿನ ಪ್ರತಿರೋಧ. ಮನಸ್ಸು ತಿರುಗಿ ಬೀಳುತ್ತದೆ; ಅದು ನಿಶ್ಯಬವಾಗಿ ಕುಳಿತುಕೊಳ್ಳಲು ಬಯಸುವುದಿಲ್ಲ. ವರ್ಷಾನುಗಟ್ಟಲೆಯಿಂದ ಓಡುವುದಕ್ಕೆ ಹೊಂದಿಕೊಂಡಿರುವ ಅದನ್ನು ನಿಶ್ಯಬವಾಗಿ ಕುಳಿತುಕೊಳ್ಳುವಂತೆ ಮಾಡಿರುವುದರಿಂದ ಸಹಜವಾಗಿಯೇ ಅದು ತಿರುಗಿಬೀಳುತ್ತದೆ. ವಾಸವವಾಗಿ ಜನಗಳು ಬಹಳಷ್ಟು ಸಾರಿ ದೂರುವುದೇನೆಂದರೆ, ಆಲೋಚನಾರಹಿತ ಸ್ಥಿತಿಗಾಗಿ ಪ್ರಯತ್ನಿಸಿದಾಗ, ಅವರಿಗೆ ಇನ್ನಷ್ಟು ಆಲೋಚನೆಗಳು ಎದುರಾಗುವುವು. ಬಹಳಷ್ಟು ವರ್ಷಗಳಿಂದ ಮನಸ್ಸು ನಿಶ್ಯಬ್ದವಾಗಿರುವುದಕ್ಕೆ ರೂಢಿಯಾಗಿಲ್ಲ. ಮತ್ತು ಅದನ್ನು ನಿಶ್ಯಬ್ದವಾಗಿಸಲು ಮಾಡುವ ಯಾವುದೇ ಪ್ರಾರಂಭಿಕ ಪ್ರಯತ್ರವು ಪ್ರವಾಹದ ಎದಿರಾಗಿ ಈಜಿದಂತಿರುತ್ತದೆ. ಮತ್ತು ಸಹಜವಾಗಿಯೇ ನದಿಯು ಖಂಡಿತವಾಗಿ ಪ್ರತಿಭಟಿಸುತ್ತದೆ.
ಈ ಸಮಯದಲ್ಲಿಯೇ ಬಹಳಷ್ಟು ಜನರು ಧ್ಯಾನವನ್ನು ಕೈ ಬಿಡುವುದು. ಅವರು ನಿರುತ್ತಾಹಗೊಳ್ಳುತ್ತಾರೆ ಮತ್ತು ಧ್ಯಾನವು ಅವರಿಗೆ ಸಾಧ್ಯವೇ ಇಲ್ಲವೆಂದು ಅಂದುಕೊಳ್ಳುತ್ತಾರೆ. ಆದರೆ ಪ್ರಾರಂಭದಲ್ಲಿ ಎಲ್ಲ ಸಾಧಕರಿಗೂ ಇದೇ ರೀತಿಯ ಅನುಭವವಾಗುವುದು ಎಂದು ನಾನು ಹೇಳ ಬಯಸುತ್ತೇನೆ. ನೀವು ಪ್ರಯತ್ತ ಮಾಡಲೇ ಬೇಕು. ಈ ಪ್ರಯತ್ತವನ್ನೇ ನಾನು ತಪಸ್ಸು ಎಂದು ಹೇಳುವುದು. ಪ್ರಾರಂಭದ ಪ್ರತಿರೋಧದಿಂದ ನೀವು ನಿರುತಾಹಗೊಂಡರೆ ನೀವು ಗೆಲ್ಲಲಾಗುವುದೇ ಇಲ್ಲ
ಹೀಗೊಂದು ಪುರಾಣದ ಕತೆಯಿದೆ. ಅಲ್ಲಿ ಸುರರು ಹಾಗೂ ಅಸುರರು ಒಟ್ಟಾಗಿ ಸಮುದ್ರ ಮಂಥನ ಮಾಡಿ ಅಮೃತವನ್ನು ಹೊರತಗೆಯಲು ಪ್ರಯತ್ನಿಸುತ್ತಾರೆ. ಆದರೆ
ಅವರಿಗೆ ಆಶ್ಚರ್ಯವಾಗಿದ್ದು ಏನೆಂದರೆ ಮಂಥನದಿಂದ ಮೊದಲಿಗೆ ಬಂದದ್ದು ಕಠೋರವಾದ ವಿಷ. ನಂತರ ಮಂಥನದಿಂದ ಇನ್ನೂ ಅನೇಕ ವಸ್ತುಗಳು ಬಂದವು ಮತ್ತು ಅಂತಿಮವಾಗಿ ಬಂದದ್ದು ಅಮೃತ. ಇದೊಂದು ಲಕ್ಷಣ ರೂಪಕ ಕತೆಯಾಗಿದ್ದು ಧ್ಯಾನದ ಕ್ರಮದಲ್ಲಿ ಒಂದು ಆಳವಾದ ಅರ್ಥವನ್ನು ಹೊಂದಿದೆ. ಜ್ಞಾನೋದಯದ ಅನುಭವವನ್ನು ಹೊರತೆಗೆಯಲು ಧ್ಯಾನದ ಕಾರ್ಯವಿಧಾನದಲ್ಲಿ ಮನಸ್ಸನ್ನು ಕಡೆದರೆ, ಮೊಟ್ಟಮೊದಲು ಬರುವುದು ಯಾವಾಗಲೂ ಹಿಂದೆ ಅದುಮಿಡಲ್ಪಟ್ಟ ನಕಾರಾತ್ಮಕ ಅನುಭವಗಳು. ನಿರುತಾಹ ಭಾವವನ್ನು ಹೊಂದುವಿರಿ; ಇದು ನಕಾರಾತ್ತಕತೆಯನ್ನು ಹೊರಹಾಕಲಾಗುತ್ತಿರುವ ಪ್ರಗತಿಯ ಸೂಚನೆಯಾಗಿರುತ್ತದೆ. ಅತ್ಯುನ್ನತ ಸ್ಥಿತಿಯ ಅನುಭವವಾಗುವತನಕ ಧ್ಯಾನದಲ್ಲಿ ಪ್ರಯತವನ್ನು ಮುಂದುವರೆಸಿ. ಈ ಪ್ರಾರಂಭಿಕ ಹಂತದಲ್ಲಿ ಒಳಹರಟೆಯು ನಿಮ್ಮನ್ನು ಬಾಧಿಸುತ್ತಿದ್ದರೆ, ತೀವನವಾಗಿ ಝೇಂಕರಿಸುವುದು ಒಂದು ಬಹಳ ಉಪಯುಕ್ತವಾದ ಸಲಕರಣೆಯಾಗಬಲ್ಲದು. ಅದು ನಿಮಗೆ ಮನಸ್ಸನ್ನು ನಿಶ್ಯಬ್ಧವಾಗಿಸಲು ಸಹಾಯ ಮಾಡುವುದು. ನಮ್ಮ ಒಳಹರಟೆಯು ಮಣಿಪೂರಕ ಮತ್ತು ಸ್ವಾದಿಷ್ಠಾನ ಚಕ್ರದ ನಡುವೆ ಉತ್ಪತ್ತಿಯಾಗುವುದು. ಈ ಕ್ಷೇತ್ರಕ್ಕೆ ಹರ ಎಂದೂ ಕರೆಯುವರು, ನಾವು ನಮ್ಮ ಹೊಕ್ಕಳ ಕೆಳಗೆ ಕಂಪನಾನುಭವ ಆಗುವ ಹಾಗೆ ತೀವ್ರವಾಗಿ ಝೇಂಕರಿಸಿದರೆ, ನಾವು ಒಳ ಹರಟೆಯ ಈ ಕಾರ್ಯ ವಿಧಾನವನ್ನು ನಿಲ್ಲಿಸುತ್ತೇವೆ. ಇದು ಒಂದು ರೀತಿಯಲ್ಲಿ ಹರವನ್ನು ಅಲುಗಾಡಿಸಿದಂತೆ. ಆದುದರಿಂದ ಝೋಂಕರಿಸುವುದು ಹೊಕ್ತಳ ಕೆಳಗಿನಿಂದ ಆಗಬೇಕು. ಒಳಹರಟೆಯೇ ಮನಸಿನ ಏಕೈಕ ಕಾರಣ. ಮನಸು ಒಳಹರಟೆಯಲ್ಲದೆ ಬೇರೆನೂ ಅಲ್ಲ. ಝೇಂಕರಿಸುವಿಕೆಯಿಂದ ಒಳ ಹರಟೆಯು ಕಡಿಮೆಯಾಗುತ್ತದೆ, ಮತ್ತು ನಿಮ್ಮಷ್ಟಕ್ಕೆ ನೀವೇ
ಮನೋರಹಿತದತ್ತ ಮುಂದುವರೆಯುವಿರಿ. ಅಸ್ತಿತ್ವದ ಬೇರೆಯ ಆಯಾಮವನ್ನು ನೀವು ಅನುಭವಿಸಲು ಪ್ರಾರಂಭಿಸುವಿರಿ.
ಒಬ್ಬ ಒಳ್ಳೆಯ ಕಾರಿನ ಚಾಲಕನಿಗೆ ತನ್ನ ಕಾರಿನ ಸೂಕ್ಷ್ಮ ಸಂಗತಿಗಳೆಲ್ಲವೂ ತಿಳಿದಿರುತ್ತದೆ, ಅದು ಬೇರೆ ಬೇರೆ ವೇಗಗಳಲ್ಲಿ ಮಾಡುವ ಶಬ್ದಗಳು ಇತ್ಯಾದಿ. ಇಂಜಿನ್ಸಿನ ಶಬ್ದವು ವ್ಯತ್ಯಾಸವಾದರೆ, ಕಾರ್ಯದಲ್ಲಿ ಏನೋ ದೋಷವಿದೆಯೆಂದು ಕೂಡಲೇ ಗ್ರಹಿಸುತ್ತಾನೆ ಮತ್ತು ಸರಿಪಡಿಸುವಿಕೆಯನ್ನು ಮಾಡುತ್ತಾನೆ. ಒಳಗಿನ ಪ್ರಯಾಣಿಕರಿಗೆ ಏನೂ ತಿಳಿದಿರುವುದಿಲ್ಲ ಆದರೆ ಒಬ್ಬ ನಿಷ್ಣಾತನಾದ ಚಾಲಕರಿಗೆ ಖಂಡಿತವಾಗಿ ತಿಳಿಯುತ್ತದೆ. ಇದೇ ರೀತಿ ಈ ಧ್ಯಾನವನ್ನು ವ್ಯವಸ್ಥಿತವಾಗಿ ಮಾಡಲಾರಂಭಿಸಿದರೆ, ತೀವ್ರತೆ ಮತ್ತು ಝೇಂಕಾರದ ಗುಣಮಟ್ಟದ ಆಧಾರದ ಮೇಲೆ ನಿಮ್ಮ ದೇಹದ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲಾ ರಂಭಿಸುವಿರಿ. ಮಿತಿಮೀರಿ ಆಹಾರವನ್ನು ಸೇವಿಸಿದಾಗ, ಅಥವಾ ಯಾವುದಾದರೂ ಆಹಾರವು ನಿಮ್ಮ ದೇಹಕ್ಕೆ ಅಷ್ಟಾಗಿ ಒಗ್ಗದಿದ್ದರೆ, ನಿಮ್ಮ ಝೇಂಕಾರದ ಗುಣಮಟ್ಟದಲ್ಲಿ ವ್ಯತ್ಯಾಸವನ್ನು ಕಂಡುಕೊಳ್ಳುವರಿ. ನಿಮ್ಮಷ್ಟಕ್ಕೆ ನೇವು ನಿಮ್ಮ ದೇಹದ ಅವಶ್ಯಕತೆಗಳಿಗೆ ಸರಿಹೊಂದಿಸಿ ನಿಮ್ಮ ಝೇಂಕಾರವು ಸುಸೂತ್ರವಾಗಿರುವಂತೆ ಖಚಿತಪಡಿಸಿಕೊಳ್ಳುವಿರಿ. ನಿಮ್ಮ ದೇಹದ ಸೂಕ್ಷ್ಮ ಸಂವೇದನೆಗಳಿಗೆ ಝೇಂಕಾರವು ನಿಮಗೆ ಒಂದು ಒಳದೃಷ್ಟಿಯನ್ನು ನೀಡುತ್ತದೆ ಮತ್ತು ಅಗತ್ಯವೆನಿಸಿದರೆ ಸರಿಪಡಿಸುವ ಕಾರ್ಯಕ್ಕೆ ನಿಮಗೆ ಸಹಾಯಮಾಡುತ್ತದೆ. ಅದು ತಾನಾಗಿಯೇ ಸಂಭವಿಸುತ್ತದೆ ಮತ್ತು ಅದನ್ನು ಹೇರಬೇಕಾಗಿಲ್ಲ.
ನಮ್ಮ ದೇಹ ಮತ್ತು ಮನಸ್ಸು ಯಾವಾಗಲೂ ಲಯಬದ್ದವಾಗಿರುವುದಿಲ್ಲ. ನಿಮ್ಮ ದೇಹವು ಇಲ್ಲಿದ್ದರೆ ನೀವು ಇಲ್ಲಿಲ್ಲವೆಂಬುದು ಬಹುಪಾಲು ಖಚಿತವೆಂದು ನಾನು ಜನಗಳಿಗೆ
ಸದಾ ಹೇಳುತ್ತಿರುತ್ತೇನೆ. ನಿಮ್ಮ ಮನಸ್ಸು ಯಾವಾಗಲೂ ಬೇರೆಲ್ಲೋ ಹಾರಾಡುತ್ತಿರುತ್ತದೆ. ನಮ್ಮ ದೇಹಕ್ಕೆ ಸದಾಕಾಲವೂ ಕಾರ್ಯ ಮಾಡುತ್ತಿರುವ ಅದರದೇ ಸಹಜಸ್ರಭಾವದ ಬುದಿವಂತಿಕೆಯು ಇರುತ್ತದೆ. ಅದು ದೇಹವನ್ನು ಕೆಲವು ಕೃತ್ಯಗಳನ್ನು ಮಾಡಲು ಬಲವಂತ ಪಡಿಸುತ್ತದೆ. ಮತ್ತು ಇವು ಕಾಲಾನಂತರದಲ್ಲಿ ಅಸ್ವಸ್ಥೆಯಾಗಿ ಪ್ರಕಟಗೊಳ್ಳುತ್ತದೆ. ಅಸ್ವಸ್ಥತೆ (disease) ಎಂದರೆ ಅ–ಸ್ವಾಸ್ಥ್ಯ (dis-ease) ಎಂದರೆ ಸ್ವಾಸ್ಥ್ಯ ಇಲ್ಲದಿರುವುದು ಎಂದು. ನಮ್ಮ ದೇಹವನ್ನು ಬಲವಂತವಾಗಿ ಓಡುವಂತೆ ಮಾಡಿದರೆ, ಅದು ಒಂದಾನೊಂದು ಸಮಯದಲ್ಲಿ ತಿರುಗಿ ಬೀಳುತ್ತದೆ.
ನೀವು ಬೇಕಾದಷ್ಟು ಸಲ ಮಿತಿಮೀರಿ ತಿನ್ನುವಿರಿ. ದೇಹವು ಅದು ಭರ್ತಿಯಾಯಿತೆಂದು ಸಂಕೇತಗಳನ್ನು ನೀಡುತ್ತಿರುತ್ತದೆ. ಆದರೆ ಮನಸ್ಸಿಗೆ ತೃಪ್ತಿಯಾಗಿರುವುದಿಲ್ಲ. ಅದಕ್ಕೆ ಇನ್ನಷ್ಟು ಬೇಕಾಗಿರುವುದು. ಅದು ದೇಹದೊಳಕ್ಕೆ ತುಂಬಿಸುತ್ತಲೇ ಇದ್ದು ಹೆಚ್ಚು ಹೆಚ್ಚು ಹಾನಿಯನ್ನು ಮಾಡುತ್ತಿರುತ್ತದೆ. ಇದರ ಪ್ರತಿಕ್ರಿಯೆಯು ನಂತರದಲ್ಲಿ ಅನುಭವವಾಗುತ್ತದೆ. ಆದುದರಿಂದ ದೇಹ ಮತ್ತು ಮನಸ್ಸುಗಳ ನಡುವೆ ಸಾಮರಸ್ಯವೇರ್ಪಡಿಸಲು ಇವುಗಳನ್ನು ದಾಟಿ ಹೋಗಲು ಮುಖ್ಯವಾಗಿರುವುದು, ಇಲ್ಲದಿದ್ದರೆ ನಾವು ಮನೋಭೌತಿಕ ಆಸ್ತಿತ್ವದಲ್ಲಿ ಸಿಲುಕುವೆವು ಮತ್ತು ಹೋಗಲು ಕಷ್ಟವಾಗುವುದು. ಝೇಂಕರಿಸುವುದು ದೇಹ ಮತ್ತು ಮನಸ್ಸುಗಳ ನಡುವೆ ಸೇತುವೆಯೊಂದನ್ನು ನಿರ್ಮಿಸಲು ಇರುವ ಅತ್ಯುತ್ತಮ ತಂತ್ರಗಳಲ್ಲಿ ಒಂದಾಗಿರುವುದು.
ಝೇಂಕರಿಸುವಿಕೆಯು ನಿಮ್ಮ ದೇಹವನ್ನು ಚೈತನ್ಯದಂತೆ ಭಾವಿಸಲು ಮಾಡುತ್ತದೆ. ನೀವು ಝೋಂಕರಿಸಲು ಪ್ರಾರಂಭಿಸಿದೊಡನೆಯೇ ನೀವು ತೇಲುತ್ತಿರುವ ಹಾಗೆ
ಹಗುರವಾದಂತೆ ಭಾಸವಾಗುವುದು. ನಿಮ್ಮ ದೇಹದಲ್ಲಿ ಭಾರವಾದಂತೆ ಎನಿಸುವುದಿಲ್ಲ, ಏಕೆಂದರೆ ಝೀಂಕರಿಸುವುದು ಮನಸಿನ ಕಂಪನವನ್ನು ದೇಹದ ಕಂಪನದೊಡನೆ ಸರಹೊಂದಿಸುವುದು. ದೇಹ ಮತ್ತು ಮನಸ್ಸು ಸಾಮರಸ್ಯದಿಂದಿರುವುದು. ನೀವು ನಿಮ್ಮನ್ನೇ ಚೈತನ್ನವೆಂಬಂತೆ ಅನುಭವಹೊಂದಲು ಪ್ರಾರಂಭಿಸುತ್ತೀರಿ. ಆದುದರಿಂದ ಈ ಹೆಜ್ಜೆಯಲ್ಲಿ ನಿಮ್ಮ ತುಟಿಗಳನ್ನು ಒಟ್ಟಾಗಿಸಿ 'ಮ್ ಮ್ ….' ಎಂಬ ಶಬ್ದವನ್ನು ಮಾಡುವುದಾಗಿರುತ್ತದೆ. ಝೇಂಕರಿಸುವಿಕೆಯು ಉಸಿರುಗಳ ನಡುವೆ ಸಾಧ್ಯವಾದಷ್ಟು ದೀರ್ಘವಾಗಿರಬೇಕು. ಅದು ಸಾಧ್ಯವಾದಷ್ಟು ಆಳವಾಗಿರಬೇಕು (ನಾಭಿಯ ಮಧ್ಯಭಾಗದಿಂದ) ಮತ್ತು ಆದಷ್ಟು ಜೋರಾಗಿರಬೇಕು. ಆಳವಾಗಿ ಉಸಿರೆಳೆದುಕೊಳ್ಳಲು ಪ್ರಯತ್ತಪಡಬೇಕಾದ
ಅವಶ್ಯಕತೆಯಿಲ್ಲ. ಉದ್ರೇಕಗೊಳ್ಳಬೇಡಿ ಮತ್ತು ಅದನ್ನು ಕೇವಲ ವಿಶ್ರಾಂತಿ ರೀತಿಯಲ್ಲಿ ಮಾಡಿ. ನಿಮ್ಮ ಇಡಿಯುತವನ್ನು ಮತ್ತು ಚೈತನ್ಯವನ್ನು ಈ ಕಂಪನವನ್ನು ಉತ್ಪತ್ತಿಮಾಡಲು ಮುಳುಗಿಸಿ. ಝೇಂಕಾರದ ಶಬ್ದಗಳ ನಡುವಿನ ಸಮಯಾಂತರವನ್ನು ಕನಿಷ್ಠಗೊಳಿಸಲು ಪ್ರಯತ್ನಿಸಿ. ಸ್ವಲ್ಪ ಸಮಯದ ನಂತರ ಝೇಂಕಾರವು ನಿಮ್ಮ ಪರಿಶ್ರಮವಿಲ್ಲದೆಯೇ ಮುಂದುವರಿಯು ತ್ತಿರುವ ಭಾವನೆಯಾಗುವುದು ಮತ್ತು ನೀವು ಕೇವಲ ಒಬ್ಬ ಕೇಳುಗರಾಗಿರುವಿರಿ. ದೇಹ ಮತ್ತು ಮನಸ್ಸು ಝೇಂಕಾರದ ಕಂಪನದೊಂದಿಗೆ ಅನುನಾದಿತವಾಗಲಾರಂಭಿಸುತ್ತದೆ.
ಇದನ್ನು ಚಿನ್‌ಮುದ್ರೆಮಾಡಿ ಕೈಗಳನ್ನು ಮಂಡಿಯ ಮೇಲಿಟ್ಟು ವಜ್ರಾಸನದ ಭಂಗಿಯಲ್ಲಿ ಮುಂದುವರಿಸಿ. ಇಲ್ಲಿ ಕಾಣಿಸಿರುವ ಚಿನ್‌ಮುದ್ರೆಯು ಕೈನ ಸಂಜ್ಞೆಯಾಗಿದ್ದು
ಮೊದಲ ಬೆರಳನ್ನು ಹೆಬ್ಬರಳಿನ ತುದಿಯಲ್ಲಿಟ್ಟು ಮಿಕ್ಕ ಮೂರು ಬೆರಳುಗಳನ್ನು ಮಡೆ ಚಿನ್ ಬದಿ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಸುತ್ತು ದಾರಿಯನ್ನು (circuit)ಉಂಟುಮಾಡುವುದರ ಮೂಲಕ ಚ್ಚೆತನ್ನವು ದೇಹದೊಳಗೇ ಇರುವಂತೆ ಮಾಡುತ್ತದೆ. ಅದು ಚೈತನ್ಯವು ದೇಹದಿಂದ ಚದುರಿ ಹೋಗುವುದನ್ನುತಪ್ಪಿಸುತ್ತದೆ.
ಮೊದಲೆರಡು ಹೆಜ್ಜೆಗಳಾದ ಅಸ್ತವ್ಯಸ್ತ ಉಸಿರಾಟ ಮತ್ತು ತೀಕ್ಷ್ಣವಾದ ಝೇಂಕಾರವನ್ನು ಕ್ರಮಿಸಿದ ನಂತರ, ನಾವು ನಮ್ಮ ಆಸ್ತಿತ್ವದ ಇನ್ನೂ ಸೂಕ್ಷ್ಮವಲಯವನ್ನು ಪ್ರವೇಶ ಮಾಡಲು ಮುಂದಿನ ಹೆಜ್ಜೆಯನ್ನಿಡೋಣ. ನಿಮಗೆ ಝೇಂಕಾರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ತಂತ್ರಗಳನ್ನು ತಿಳಿಯಬೇಕಾದರೆ, ಲೈಫ್ ಬ್ರಿಸ್ ಪ್ರೋಗ್ರಾಂ ಅಥವಾ ಆನಂದ ಸುರಣ ಪ್ರೋಗ್ರಾಂನಲ್ಲಿ ಹೇಳಿಕೊಡುವ ಮಹಾಮಂತ್ರ ಧ್ಯಾನತಂತ್ರವನ್ನು ಕೂಡ ಅಭ್ಯಾಸ ಮಾಡಬಹುದು.
ಚಕ್ರಗಳ ಅರಿವು (ಚೈತನ್ಯ ಕೇಂದ್ರಗಳು)
(ಸಮಯದ ಅವಧಿ : 7 ನಿಮಿಷಗಳು )
ಈ ಹೆಜ್ಜೆಯಲ್ಲಿ ನೀವು ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಮುಂದುವರಿಸಬಹುದು ಅಥವಾ ಬೇಕೆನಿಸಿದರೆ ಕಾಲುಗಳನ್ನು ಮಡಚಿ ಕುಳಿತುಕೊಳ್ಳಬಹುದು. ಈಗ ನಿಮ್ಮ ಅರಿವನ್ನು ಮೂಲಾಧಾರ ಚಕ್ರ (ಮೂಲಕ ಕೇಂದ್ರ) ದಿಂದ ಪ್ರಾರಂಭಿಸಿ ಸಹಸ್ಯಾರ ಚಕ್ರ (ನೆತ್ತಿಯ ಕೇಂದ) ದವರೆಗೆ ಪ್ರತಿಚಕ್ರ (ಶಕ್ತಿಯ ಕೇಂದ್ರ) ಕ್ಕೂ ಕೊಂಡೊಯ್ಲಿರಿ.
ನಮ್ಮ ದೇಹದಲ್ಲಿ ಏಳು ಶಕ್ತಿಯ ಕೇಂದ್ರಗಳಿವೆ. ನಾವು ಈ ಏಳು ಶಕ್ತಿ ಕೇಂದ್ರಗಳ ಆಧ್ಯಾತ್ಮಿಕ ಸ್ಥಾನಗಳನ್ನು ಅರ್ಥಮಾಡಿಕೊಳ್ಳ
ಬೇಕು. ನಮ್ಮ ವ್ಯಕ್ತಿತ್ವವು ಮೂರು ದೇಹ ಅಥವಾ ಶರೀರಗಳನ್ನೊಳಗೊಂಡಿದೆ. ಭೌತಿಕ ಶರೀರ (ಸ್ಥೂಲ ಶರೀರ), ಮಾನಸಿಕ ಶರೀರ (ಸೂಕ್ಷ್ಮ ಶರೀರ) ಮತ್ತು ಕಾರ್ಯಕಾರಣ (ಕಾರಣ ಶರೀರ) ಎಂದು. ಅದೇ ರೀತಿಯಲ್ಲಿ ಮೂರು ಪ್ರಜ್ಞಾವಸ್ಥೆಗಳಿವೆ : ಜಾಗೃತಾವಸ್ಥೆ ಸ್ವಪ್ನಾವಸ್ಥೆ ಮತ್ತು ದೀರ್ಘ ನಿದ್ರಾವಸ್ಥೆ ಈ ಮೂರು ದೇಹಗಳನ್ನು ಮತ್ತು ಮೂರು ಜ್ಞಾವಸ್ಥೆಗಳಿಂದಾಚೆ ನೈಜಾತ್ಮ ಅಥವಾ ಆತ್ಮ ಅಥವಾ ನೀವು ಏನು ಕರೆಯ ಬಯಸುವಿರೋ ಅದು ಇರುತ್ತದೆ. ಸಂಸ್ಕೃತದಲ್ಲಿ ನಾವು ಈ ಅತ್ಯುನ್ನತ ಅವಸ್ಥೆಯನ್ನು ಶರೀರ ತ್ರೈವಲಕ್ಷಣ ಪಂಚ ಕೋಶಾತೀತ ಮತ್ತು ಅವಸ್ಥೆ ತ್ರಯ ಸಾಕ್ಷಿ (ಮೂರು ದೇಹಗಳ ಸಾಕ್ಷ್ಮಿ, ಐದು ಕವಚಗಳನ್ನು ದಾಟಿದ ಮತ್ತು ಮೂರು ಪ್ರಜ್ಞಾವಸ್ಥೆಯ ಸಾಕ್ಷಿ) ಎಂದು ಕರೆಯುತ್ತೇವೆ.
ಭೌತಿಕ ಶರೀರವೆಂಬುದು ನಮಗೆ ತಿಳಿದಿರುವ ಜಾಗ್ಗತಾವಸ್ಥೆಯಲ್ಲಿ ಊಟ ಮಾಡುವ, ಚಲಿಸುವ, ಮುಂತಾದವನ್ನು ಮಾಡುವ ಶರೀರ. ಮಾನಸಿಕ ಶರೀರವೆಂಬುದು ನಾವು ಸ್ವಪ್ನದಲ್ಲಿ ಉಪಯೋಗಿಸುವ ಶರೀರ. ನೀವು ಭರತದಲ್ಲಿ ನಿಮ್ಮ ಮನೆಯಲ್ಲಿ ಮಲಗಿರಬಹುದು, ಆದರೆ ನಿಮ್ಮ ಮನಸ್ಸು ಬೇರೊಂದು ದೇಶದಲ್ಲಿರಬಹುದು. ಆ ಸಮಯದಲ್ಲಿ ನೀವು ನಿಮ್ಮ ಮಾನಸಿಕ ಶರೀರವನು ಉಪಯೋಗಿಸುತ್ತಿರುವಿರಿ, ಏಕೆಂದರೆ ನಿಮ್ಮ ಆಲೋಚನೆಯ ಶಾಖೆಯು ನಿರಂತರವಾಗಿ ಜಾಗೃತಾವಸ್ಥೆಯಲ್ಲಿ ನಿರತವಾಗಿರುತ್ತದೆ. ನಾವು ಆಳವಾದ ವಿಶ್ರಾಂತ ಸ್ವಪ್ತರಹಿತ ನಿದ್ರೆಯಲ್ಲಿ ನಮ್ಮ ಶರೀರವನ್ನು ಉಪಯೋಗಿಸುವೆವು. ಇಡಿಯ ನಿದ್ರೆಯ ಚಕ್ರದಲ್ಲಿ ನಮ್ಮ ಮನಸ್ಸು ಸುಪ್ತಾವಸ್ಥೆಯಲ್ಲಿ ಯಾವುದೇ ಯೋಚನೆಗಳಿರದ ಹಂತಗಳಿರುವುದು. ಈ ಸಮಯಾದಲ್ಲಿಯೇ ನೀವು ನಿಮ್ಮ ಕಾರಣಶರೀರದ ಅನುಭವವನು ಹೊಂದುವಿರಿ.
ನಾವು ತಿಳಿದಿರಬಹುದಾದ ಹಾಗೆ ಈ ಮೂರು ದೇಹಗಳು ಬೇರೆಯಲ್ಲ. ಅವುಗಳು ಬಿಗಿಯಾಗಿ ಸೇರಿಕೊಂಡಿವೆ. ಒಂದು ಕಾಗದದ ತುಂಡಿನ ಮೇಲೆ ಏಳು ಜಾಗಗಳಲ್ಲಿ ಒಂದನ್ನೊಂದು ಛೇದಿಸುವ ಎರಡು ವಕ್ಕರೇಖೆಗಳನ್ನು ಪರಿಶೀಲಿಸಿ. ಇವುಗಳಲ್ಲಿ ಒಂದು ರೇಖೆಯು ಭೌತಿಕ ಶರೀರವನ್ನು ಪ್ರತಿನಿಧಿಸಿದರೆ ಇನ್ನೊಂದು ರೇಖೆಯು ಸೂಕ್ಷ್ಮದೇಹವನ್ನು ಪ್ರತಿನಿಧಿಸುತ್ತದೆ ಮತ್ತು ಕಾಗದವು ಕಾರಣ ಶರೀರವನ್ನು ಪ್ರತಿನಿಧಿಸುತ್ತದೆ, ಹಾಗೂ ಭೌತಿಕ
ಶರೀರವು ಮತ್ತು ಸೂಕ್ಷ್ಮ ಶರೀರವು ಕಾರಣ ಶರೀರದೊಂದಿಗೆ ಸಂಧಿಸುವ ಏಳು ಶಕ್ತಿ ಕೇಂದ್ರಗಳ ಸ್ಥಳಗಳು. ಈ ಏಳು ಶಕ್ತಿ ಕೇಂದ್ರಗಳು ಭೌತಿಕ, ಸೂಕ್ಷ್ಮ ಮತ್ತು ಕಾರಣ ಶರೀರಗಳ ಛೇದನೆಯ ಜಾಗದಲ್ಲಿ ಇರುತ್ತವೆ. ಅವುಗಳು ಆಧ್ಯಾತ್ಮಿಕ ಸಮಕ್ಷೇತ್ರದಲ್ಲಿ ಇರುತ್ತವೆ. ಪ್ರಭೆಯ ಚಿತ್ರೀಕರಣದ (ಕರ್ಲಿಯನ್ ಫೋಟೋಗ್ರಾಫಿ) ಇತ್ತೀಚಿನ ಸಂಶೋಧನೆಯಲ್ಲಿ ಈ ಶಕ್ತಿ ಕೇಂದ್ರಗಳ ಚಿತ್ರೀಕರಣವನ್ನೂ ಸಹ ಮಾಡಲಾಗಿದೆ.
ಈ ಏಳು ಶಕ್ತಿಕೇಂದ್ರಗಳು ನಮ್ಮೊಳಗಿನ ನಿರ್ದಿಷ್ಟ ಮನೋಭಾವನೆಗಳೊಂದಿಗೆ ಸಂಬಂಧಿಸಿವೆ. ಈ ಮನೋಭಾವನೆಗಳು ಗತಕಾಲದಲ್ಲಿ ಸಂಗ್ರಹವಾದ ಹುದುಗಿಡಲ್ಪಟ್ಟ ನೆನಪುಗಳ ಅಥವಾ ಸಂಸ್ಕಾರಗಳ ಫಲ. ಈ ಸಂಸ್ಕಾರಗಳು ನಿರ್ದಿಷ್ಟವಾದ ಶಕ್ತಿ ಕೇಂದ್ರವನ್ನು ಪ್ರತಿಬಂಧಿಸಿ ದೈಹಿಕ ಹಾಗೂ ಮಾನಸಿಕ ಕ್ಷೋಭೆಗಳನ್ನು ಉಂಟುಮಾಡುತ್ತವೆ.
ಸಂಸ್ಕಾರಗಳು ಅರಿವಿನ ಅಭಾವದಿಂದ ನಮ್ಮೊಳಗೆ ಇರುವುವು. ಆದುದರಿಂದ ನಾವು ಈ ಶಕ್ತಿ ಕೇಂದ್ರಗಳನ್ನು ಅರಿವಿನಿಂದ ತುಂಬಿಸಿ ಬಿಟ್ಟರೆ, ಈ ಶಕ್ತಿ ಕೇಂದ್ರಗಳು ನಕಾರಾತ್ಮಕ ಮನೋಭಾವನೆಗಳ ಪ್ರತಿಬಂಧನಗಳಿಂದ ಮುಕ್ತವಾಗಲು ಪ್ರಾರಂಭವಾಗುವುವು ಮತ್ತು ನಾವು ಪ್ರೀತಿ ಮತ್ತು ಅನುಕಂಪಗಳಂತಹ ಸಕಾರಾತ್ಮಕ ಮನೋಭಾವನೆಗಳನ್ನು ಹೊರಸೂಸಲು ಪ್ರಾರಂಭಿಸುತ್ತೇವೆ.
ನಮ್ಮ ಕಾಯಿಲೆಗಳಲ್ಲಿ ಬಹಳಷ್ಟು ಮಾನಸಿಕ ಒತ್ತಡದಿಂದ ಉಂಟಾಗುವ ದೈಹಿಕ ಕಾಯಿಲೆಗಳು. ಅವುಗಳು ಮನಸ್ಸಿನಲ್ಲಿ ಬೇರುಗಳನ್ನು ಹೊಂದಿರುತ್ತವೆ. ನಾವು ನೋಡುವುದು ಕೇವಲ ಪರಿಣಾಮ ಮತ್ತು ಆದ್ದರಿಂದ ನಾವು ಮನಸ್ಸು– ದೇಹಗಳ ಸಂಬಂಧವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವುದೇ ಇಲ್ಲ. ಯಾವಾಗಲಾದರೂ
ಒಂದು ನಿರ್ದಿಷ್ಠವಾದ ಶಕ್ತಿ ಕೇಂದ್ರವು ಪ್ರತಿ ಬಂಧನಕ್ಕೊಳಗಾದರೆ ಶಕ್ತಿ ಕೇಂದ್ರದ ಸಮೀಪವಿರುವ ದೇಹದ ಭಾಗವು ಪ್ರಭಾವಕ್ಕೆ ಒಳಗಾಗುತ್ತದೆ. ನೀವು ತುಂಬಾ ಚಿಂತಿಸಿದಾಗ ನಿಮ್ಮ ಹೊಟ್ಟೆಯು ಕೆಡುವುದನ್ನು ನೀವು ನೋಡಿರಬಹುದು. ಆದುದರಿಂದ ಒಳ್ಳೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಶಕ್ತಿಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ
ಕೆಳಗೆ ನಾನು ಯಾವುದು ಶಕ್ತಿಯ ಕೇಂದ್ರವನ್ನು ಪ್ರತಿರೋಧಿಸುತ್ತದೆ ಮತ್ತು ಯಾವುದು ಶಕ್ತಿ ಕೆಂದ್ರದ ಪ್ರತಿರೋಧವನ್ನು ತೆಗೆಯುತ್ತವೆ ಎಂದು ವಿವರಿಸುತ್ತೇನೆ.
ಭ್ರಮೆಗಳು, ಕಲ್ಪನೆಗಳು, ಭಯ, ಚಿಂತೆ, ಗಮನಾಪೇಕ್ಷೆ, ಅಸೂಯೆ, ಅಹಂಭಾವ ಮತ್ತು ಅತೃಪ್ತಿ, ಈ ಮನೋಭಾವನೆಗಳೆಲ್ಲ ನಕಾರಾತ್ಮಕ ಅಸ್ತಿತ್ವವನ್ನು ಹೊಂದಿರುತ್ತವೆ. ಕೊಠಡಿಯಲ್ಲಿ ಯಾವುದಾದರೂ ವಸ್ತು ಒಂದಿದ್ದು, ನಿಮ್ಮನ್ನು ಆ ವಸ್ತುವನ್ನು ಕೊಠಡಿಯಿಂದ ಕೊಂಡೊಯ್ಯಲು ಹೇಳಿದರೆ, ನೀವು ಆ ವಸ್ತುವನ್ನು ತೆಗೆದುಕೊಂಡು ಹೊರಗೆ ಕೊಂಡೊಯ್ಯಬಲ್ಲಿರಿ, ಏಕೆಂದರೆ ಈ ಅಸ್ತಿತ್ವವಿದೆ. ಆದರೆ ಒಂದು ಕತ್ತಲಿರುವ ಕೊಠಡಿ ಇದೆ. ಮತ್ತು ನಿಮ್ಮನ್ನು ಕತ್ತಲನ್ನು ಕೊಠಡಿಯಿಂದಾಚೆ ಕೊಂಡೊಯ್ಯಲು ಕೇಳಿದ್ದಾರೆ ಎಂದುಕೊಳ್ಳೋಣ. ಅದನ್ನು ಹೊರಗೆ ಕೊಂಡೊಯ್ಯಲಾಗದು. ನೀವು ಕೇವಲ ಒಂದು ವಿದ್ಯುತ್ ಬಲ್ಗನ್ನು ಹೊತ್ತಿಸಬೇಕು ಮತ್ತು ಕತ್ತಲು ತನ್ನಷ್ಟಕ್ಕೇ ನಿವಾರಣೆಯಾಗುತ್ತದೆ.
ಈ ಮನೋಭಾವನೆಗಳೆಲ್ಲವೂ ಕೊಠಡಿಯಲ್ಲಿರುವ ಕತ್ತಲಿನಂತೆ ನಕಾರಾತ್ಮಕ ಅಸ್ತಿತ್ವವನ್ನು ಹೊಂದಿರುವುವು. ನೀವು ಮಾಡಬೇಕಾದುದಿಷ್ಟೆ – ಅರಿವಿನ ಬೆಳಕನ್ನು ನಿಮ್ಮ ಅಸ್ತಿತ್ವದಲ್ಲಿ ತರಬೇಕು ಮತ್ತು ನಕಾರಾತ್ಮಕ ಮನೋಭಾವನೆಗಳೆಲ್ಲವೂ ತಮ್ಮಷ್ಟಕ್ಕೆ ಹಾಗೆಯೇ ಮಾಯವಾಗುವುವು.
ಒಮ್ಮೆ ಬುದ್ದನು ಒಂದು ಗಂಟನ್ನು ಹಾಕಿ ತನ್ನ ಶಿಷ್ಯನೊಬ್ಬನಿಗೆ ಗಂಟನ್ನು ಬಿಡಿಸಲು ಕೇಳಿದನು. ಆ ಶಿಷ್ಯನು ಗಂಟನ್ನು ಜೋರಾಗಿ ಎಳೆದು ಬಿಡಿಸಲು ಪ್ರಯತ್ರಿಸಿದನು ಮತ್ತು ಅದನ್ನು ಇನ್ನೂ ಜಟಿಲಗೊಳಿಸಿದನು. ಆಗ ಬುದ್ದನು ಮತ್ತೊಬ್ಬ ಶಿಷ್ಯನಿಗೆ ಆ ಗಂಟನ್ನು ಬಿಡಿಸಲು ಹೇಳಿದನು. ಈ ಶಿಷ್ಯನು ಮೊದಲು ಗಂಟಿನತ್ತ ಎಚ್ಚರಿಕೆಯಿಂದ ನೋಡಿದನು, ನಂತರ ನಿಧಾನವಾಗಿ ಗಂಟನ್ನು ಬಿಡಿಸಿದನು. ಆಗ ಬುದ್ದನು ಹೀಗೆ ವಿವರಿಸಿದನು–ನೀವು ನಿಮ್ಮೊಳಗಿರುವ ಅಜ್ಞಾನವೆಂಬ ಗಂಟನ್ನು ಬಿಡಿಸಬೇಕಾದರೆ, ಮೊದಲು ಎಚ್ಚರಿಕೆಯಿಂದ ನೋಡುವುದನ್ನು ಕಲಿಯಬೇಕು. ನೀವು ನಿಮ್ಮೊಳಗೆ ಅರಿವನ್ನು ತುಂಬಿಸಿಬಿಡಬೇಕು ಮತ್ತು ಅದು ಹೇಗೆ ರೂಪಗೊಂಡಿತೆಂದು ನೋಡಿ; ಆಗ ನಕಾರಾತ್ಮಕತೆಯು ತತ್ಕಕ್ಷಣವೇ ನಿರ್ನಾಮವಾಗುವುದು.
ಆದುದರಿಂದ ಈ ಹೆಜ್ಜೆಯಲ್ಲಿ ನಾವು ನಮ್ಮ ಪೂರ್ಣ ಅರಿವನ್ನು ಮೂಲಾಧಾರ ಚಕ್ರದಿಂದ ಮೊದಲುಗೊಂಡು ಸಹಸ್ರಾರ ಚಕ್ರದತನಕ ಪ್ರತಿ ಶಕ್ತಿಕೇಂದ್ರಗಳಲ್ಲೂ ಇಡುವೆವು. ಈ ರೀತಿ ನಾವು ಹೆಜ್ಜೆ ಹೆಚ್ಚೆಯಲ್ಲಿ ಮೇಲಕ್ಕೆ ಹೋಗುತ್ತಾ ಮೂರ್ಧ್ವ (ನೆತ್ತಿ) ಕೇಂದ್ರವನ್ನು ತಲಪುವೆವು. ನಿಮ್ಮ ಅರಿವನ್ನು ಶಕ್ತಿಕೇಂದ್ರದಲ್ಲಿ ಇಡಲು ಹೇಳಿದಾಗ ನೀವು ಶಕ್ತಿ ಕೇಂದ್ರವಾಗಿಬಿಡಬೇಕು. ಶಕ್ತಿ ಕೇಂದ್ರವನ್ನು ನಿಮ್ಮ ಅಸ್ತಿತ್ವವೇ ಶಕ್ತಿಕೇಂದ್ರವಾದಂತೆ ಪೂರ್ಣವಾಗಿ ಭಾವಿಸಿ. ಈ ಹೆಜ್ಜೆಯ ನಂತರ ನೀವು ಸಚೇತನರಾದಂತೆಯೂ ಮತ್ತು ಹಗುರವಾದಂತೆಯೂ ಭಾಸವಾಗುತ್ತದೆ. ಈ ಪ್ರಕಾರ ನಾವು ಮುಂದಿನ ಹೆಜ್ಜೆಗೆ ಹೋಗೋಣ.
ಚಕ್ರದ ವಿಜ್ಞಾನದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂದು ನಿಮಗೆ ಆಸಕ್ತಿಯಿದ್ದರೆ, ನೀವು ಲೈಫ್ ಬ್ಲಿಸ್ ಪ್ರೋಗ್ರಾಂ ಅಥವಾ ಆನಂದ ಸ್ಪುರಣ ಪ್ರೋಗ್ರಾಂ ಮಾಡಬಹುದು. ಇಲ್ಲಿ
ನಿಮಗೆ ಪ್ರತಿ ಚಕ್ರವನ್ನೂ ಚರ್ಚಿಸಲಾಗುತ್ತದೆ ಹಾಗೂ ಚಕ್ರದೊಂದಿಗೆ ಸಂಬಂಧಿತವಾದ ಮನೋಭಾವನೆ ಮತ್ತು ಪ್ರತಿ ಚಕ್ರಕ್ಕೆ ಧ್ಯಾನ ತಂತ್ರವನ್ನು ಸೂಚಿಸಲಾಗುವುದು.
| ಶಕ್ತಿ ಕೇಂದ್ರ | ನಿರ್ಬಂದಿತವಾಗಿ ಅರಿತ | ನಿರ್ಬಂಧ ಮುಕ್ತವಾಗುವುದು |
|---|---|---|
| ಮೂಲಾಧಾರಚಕ್ರ | ಭ್ರಮೆಗಳು ಮತ್ತು ಕಲ್ಪನೆಗಳಿಂದ | ವಾಸ್ತವಿಕತೆಯನ್ನು ಒಪ್ಪಿಕೊಳ್ಳುವುದರಿಂದ |
| ಸ್ವಾಧಿಷ್ಠಾನ ಚಕ್ರ | ಮರಣ ಭಯದಿಂದ | ಮರಣವನ್ನು ಒಪ್ಪಿಕೊಳ್ಳುವುದರಿಂದ |
| ಮಣಿಪೂರಕ ಚಕ್ರ | ಚಿಂತೆಗಳಿಂದ | ಚಿಂತೆಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವುದರಿಂದ |
| ಅನಾಹತ ಚಕ್ರ | ಗಮನಾಪೇಕ್ಷೆಯಿಂದ | ನಿರಪೇಕ್ಷ ಪ್ರೀತಿಯಿಂದ |
| ವಿಶುದ್ಧಿ ಚಕ್ರ | ಹೋಲಿಸುವುದು ಮತ್ತು ಅಸೂಯೆಯಿಂದ | ಪ್ರತಿಯೊಬ್ಬರೂ ಅನನ್ಯರೆಂದು ಒಪ್ಪಿಕೊಳ್ಳುವುದರಿಂದ |
| ಆಜ್ಞಾ ಚಕ್ರ | ಗಂಭೀರತೆಯಿಂದ ಮತ್ತು ಅಹಂಭಾವದಿಂದ | ಸರಳತೆ ಮತ್ತು ಮುಗ್ಧತೆಯಿಂದ |
| ಸಹಸ್ರಾರ ಚಕ್ರ | ಅತೃಪ್ತಿಯಿಂದ | ಕೃತಜ್ಞತೆಯಿಂದ |
ಹಿಡಿತರಹಿತರಾಗಿರಿ
(ಸಮಯಾವಧಿ 7 ನಿಮಿಷಗಳು)
ಇಂದಿನ ಏಳು ನಿಮಿಷಗಳು ಸುಮ್ಮನೆ ಹಿಡಿತರಹಿತರಾಗಿರಿ. ಮನಸ್ಸೆಂಬುದು ಆಲೋಚನೆಗಳ ಸಂಗ್ರಹವಲ್ಲದೆ ಬೇರೇನಲ್ಲ ಒಂದು ಆಲೋಚನೆಯ ನಂತರ ಮತ್ತೊಂದು ಅನುಕ್ರಮವಾಗಿ ಬರುತ್ತಿರುವುದು. ನಮ್ಮ ಸಹಜ ಸ್ವಭಾವದಿಂದ ನಮ್ಮ ಆಲೋಚನೆಗಳು ಸಂಬಂಧಿತವಾಗಿರುವುದಿಲ್ಲ. ಅವುಗಳು ಮೀನಿನ ತೊಟ್ಟಿಯಲ್ಲಿರುವ ನೀರಿನ ಗುಳ್ಳೆಗಳಂತೆ. ಮೀನಿನ ತೊಟ್ಟಿಯಲ್ಲಿರುವ ನೀರಿನ ಗುಳ್ಳೆಗಳು ಒಂದಕ್ಕೊಂದು ಸಂಬಂಧಿತವಾಗಿರುವುದಿಲ್ಲ. ಅವು ನಿಶ್ಚಿತ ರೀತಿಯಲ್ಲಿ ಬೇರೆ
ಬೇರೆಯಾಗಿರುತ್ತವೆ, ಆದರೆ ನೋಟಕ್ಕೆ ಒಂದಕ್ಕೊಂದು ಜೋಡಣೆಯಾದಂತೆ ಕಾಣುತ್ತವೆ. ಇದೇ ರೀತಿಯಲ್ಲಿ ನಮ್ಮ ಆಲೋಚನೆಗಳು ಜೋಡಣೆಯಾದಂತೆ ಕಂಡುಬಂದರೂ ಅವುಗಳು ಸಂಬಂಧಿತವಾಗಿರುವುದಿಲ್ಲ. ನೀವು ಒಂದು ಚಿಕ್ಕ ಅಭ್ಯಾಸವನ್ನು ಮಾಡಬಹುದು. ಆಲೋಚನೆಗಳು ಬಂದ ಹಾಗೆ ಅವುಗಳೆಲ್ಲವನ್ನು ಬರೆದಿಡಿ. ಹತ್ತು ನಿಮಿಷಗಳ ಕಾಲ ನಿಶ್ಯಬ್ದವಾಗಿ ಕುಳಿತುಕೊಂಡು ಸುಮ್ಮನೆ ನಿಮ್ಮ ಆಲೋಚನೆಗಳನ್ನೆಲ್ಲಾ ದಾಖಲುಮಾಡಿಕೊಳ್ಳಲಾರಂಭಿಸಿರಿ. ನಿಯಂತ್ರಿಸುವುದಾಗಲೀ ಅಥವಾ ಯೋಚಿಸುವುದನ್ನಾಗಲೀ ಮಾಡಬೇಡಿ. ಸುಮ್ಮನೆ ನಿಶ್ಶಬ್ದವಾಗಿರಿ ಮತ್ತು ನಿಮ್ಮಲ್ಲಿ ಬರುತ್ತಿರುವ ಆಲೋಚನೆಗಳನ್ನು ಕಾಣುತ್ತೀರಿ. ಯಾವುದೇ ಆಲೋಚನೆಯು ಬಂದರೆ ಕೂಡಲೇ ಕಾಗದದ ಮೇಲೆ ಬರೆದಿಡಿ. ಇದನ್ನು ಹತ್ತು ನಿಮಿಷಗಳ ಕಾಲ ಮಾಡಿ. ಹತ್ತು ನಿಮಿಷಗಳ ನಂತರ ಬರೆದಿಟ್ಟಿರುವುದನ್ನು ಓದಿ. ಅದು ಒಂದು ತಲೆಕೆಟ್ಟವನ ದಿನಚರಿಯ ಪುಸ್ತಕವೆಂದು ನೀವು ಕಾಣುವಿರಿ ! ಅಲ್ಲಿ ಸಂಪೂರ್ಣ ಅಸ್ತವ್ಯಸ್ತತೆ ಇರುವುದು. ಅಲ್ಲಿ ಒಂದು ಆಲೋಚನೆಗೂ ಮತ್ತು ಮುಂದಿನ ಆಲೋಚನೆಗೂ ಏನೂ ಸಂಬಂಧವಿರುವುದಿಲ್ಲ. ಎಲ್ಲಾ ಆಲೋಚನೆಗಳೂ ಹಿಡಿತರಹಿತವಾಗಿದ್ದು ಸಂಬಂಧವಿಲ್ಲದೇ ಇರುವುವು. ನಿಮ್ಮ ಆಲೋಚನೆಗಳನ್ನು ಬರೆದಾಗ ಮಾತ್ರವೇ ನಿಮ್ಮ ಆಲೋಚನೆಗಳು ನಿಜವಾದ ಸಂಬಂಧವನ್ನು ಹೊಂದಿಲ್ಲವೆಂದು ನಿಮಗೆ ಗೊತ್ತಾಗುವುದು. ಒಂದು ಬಟ್ಟಲು ಕಾಫಿಯನ್ನು ಹೊಂದುವ ಬಗ್ಗೆ ನೀವು ಯೋಚಿಸುತ್ತಿರಬಹುದು ಮತ್ತು ಮುಂದಿನ ಕ್ಷಣವೇ ನಿಮ್ಮ ಕಚೇರಿಯ ಯಾವುದೋ ಉಳಿದಿರುವ ಕೆಲಸದ ಬಗ್ಗೆ ನೀವು ಯೋಚಿಸಬಹುದು. ಒಂದು ಬಟ್ಟಲು ಕಾಫಿಯನ್ನು ಹೊಂದುವುದಕ್ಕೂ ಕಚೇರಿಯ ಕೆಲಸಕ್ಕೂ ಯಾವುದೇ ನಿಜವಾದ ಸಂಬಧವಿರುವುದಿಲ್ಲ, ಎರಡೂ ಸ್ವತಂತ್ರವಾದ ಸಂಗತಿಗಳು. ಒಂದೇ ಸಂಗತಿಯ ಬಗ್ಗೆ ಅನುಕ್ರಮವಾದ ಆಲೋಚನೆಗಳಿದರೂ ಸಹ, ಆ ಆಲೋಚನೆಗಳು ಸಂಬಂಧಿತವಾಗಿರುವುದಿಲ್ಲ ಮತ್ತು ಅಲ್ಲಿ ನಿರಂತರತೆ (continuity) ಇರುವುದಿಲ್ಲ. ಈ ಆಲೋಚನೆಗಳ ಮಧ್ಯೆ ಯಾವಾಗಲೂ ಅಂತರವಿರುವುದು. ಆಲೋಚನೆಗಳ ಮಧ್ಯೆ ನಿಶ್ಯಬ್ದದ ಸಮಯವು ಇರುವುದು. ಆಲೋಚನೆಗಳು ಅವುಗಳ ಸಹಜ ಸ್ವ ಭಾವದಿಂದ ಹಿಡಿತರಹಿತವಾಗಿರುವುವು.
ಸಮಸ್ಯೆಯು ಉಂಟಾಗುವುದು ನಾವು ಈ ಆಲೋಚನೆಗಳನ್ನು ಜೋಡಿಸಿದಾಗ. ನಾವು ಈ ಸಂಬಂಧವಿಲ್ಲದ ಆಲೋಚನೆಗಳನ್ನು ಜೋಡಿಸಿ ಕಷ್ಟವನ್ನನುಭವಿಸುವೆವು. ಉದಾಹರಣೆಗೆ : ನೀವು ಐಸ್ ಕ್ರೀಂ ಅನ್ನು ಹತ್ತು ವರ್ಷಗಳ ಹಿಂದೆ ತಿಂದಿರಬಹುದು, ನೀವು ಐಸ್ ಕ್ರೀಂ ಅನ್ನು ಎರಡು ವರ್ಷಗಳ ಹಿಂದೆ ತಿಂದಿರಬಹುದು ಮತ್ತು ನೀವು ಐಸ್ ಕ್ರೀಂ ಅನ್ನು ನಿನ್ನೆ ತಿಂದಿರಬಹುದು. ಈ ಎಲ್ಲಾ ಅನುಭವಗಳೂ ನಿವುಗೆ ತುಂಬಾ ಉಲ್ಲಾಸದಾಯಕವಾಗಿರಬಹುದು. ಪ್ರತಿ ಬಾರಿ ಐಸ್‌ಕ್ರೀಂ ಅನ್ನು ತಿಂದಾಗಲೂ ನೀವು ಸಂತೋಷವನ್ನು ಅನುಭವಿಸಿರಬಹುದು. ಸಮಸ್ಯೆ ಏನೆಂದರೆ ನೀವು ಈ ಎಲ್ಲ ಅನುಭವಗಳನ್ನೂ ಜೋಡಿಸಿ ಐಸ್‌ಕ್ರೀಂ ಅನ್ನು ತಿನ್ನುವುದು ನಿಮ್ಮನ್ನು ಸಂತುಷ್ಪರನ್ನಾಗಿ ಮಾಡುವುದೆಂಬ ಒಂದು 'ಕಾಲ್ಪನಿಕ ಸ್ತಂಭ' (Imaginary shaft)ವನ್ನು ಅಥವ ಒಂದು ಗ್ರಹಿಕೆಯನ್ನು ಸೃಷ್ಟಿಸುವಿರಿ. ಆದ್ದರಿಂದ ನೀವು ಈ ಅನುಭವವನ್ನು ಭವಿಷ್ಯದಲ್ಲಿ ಪುನರಾವರ್ತಿಸಲು ಪ್ರಯತ್ತಿಸುವಿರಿ. ನೀವು ಯಾವಾಗಲೂ ಇದೇ ರೀತಿಯ ಆಲೋಚನೆಗಳನ್ನು ಜೋಡಿಸಿ ಒಂದು ಸ್ತಂಭವನ್ನು ಸೃಷ್ಟಿಸುವಿರಿ. ಹಲವು ಬಾರಿ ನೀವು ಐಸ್‌ಕ್ರೀಂ ಅನ್ನು ಕೆಲವು ದಿನಗಳ ಹಿಂದೆ ಅಥವಾ ಒಂದು ವರ್ಷದ ಹಿಂದೆ ಆಸ್ವಾದಿಸಿದಷ್ಟು ಆಸ್ವಾದಿಸಲಿಲ್ಲವೆಂಬುದು ನಿಮ್ಮ ಅನುಭವವಾಗಿರಬಹುದು. ನೀವು ಐಸ್ ಕ್ರೀಂ ಅನ್ನು ಆಸ್ವಾದಿಸದಿದ್ದರೂ ಸಹ ನೀವು ಐಸ್‌ಕ್ರೀಂ ಅನ್ನು ಇಷ್ಟಪಡುವಿರಿ ಎಂದು ನಿಮ್ಮನ್ನು ನೀವೇ ನಂಬುವಂತೆ ಮಾಡುವಿರಿ. ಆಲೋಚನೆಗಳನ್ನು ಜೋಡಿಸುವ ಅಭ್ಯಾಸಕ್ಕೆ ನೀವು ಸಿಕ್ಕಿಕೊಂಡಿರುವದರಿಂದ, ನೀವು ಪ್ರಜ್ಞೆ ಇಲ್ಲದೆಯೇ ಐಸ್ ಕ್ರೀಂ ಅನ್ನು ಆಸ್ವಾದಿಸುವಿರಿ ಎಂದು ಒಪ್ಪಿಕೊಳ್ಳಲಾರಂಭಿಸುವಿರಿ.
ನೋವಿನ ಅನುಭವಗಳೂ ಇದೇ ರೀತಿಯಲ್ಲಿರುತ್ತವೆ. ಹತ್ತು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು, ಏಳು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು, ಮೂರು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು ಮತ್ತು ನೀವು ನಿನ್ನೆ ಅನುಭವಿಸಿದ ನೋವು ಎಲ್ಲವೂ ಸ್ವತಂತ್ರವಾದ ಘಟನೆಗಳು ; ಈ ಘಟನೆಗಳ ಮಧ್ಯೆ ಏನೂ ಸಂಬಂಧವಿಲ್ಲ. ಆದರೆ ನೀವು ಈ ಕಾಲ್ಪನಿಕ ಸ್ತಂಭವನ್ನು ನಿರ್ಮಿಸಿ 'ನನ್ನ ಬದುಕು ಒಂದು ನೋವು', ಎಂದು ಚಿಂತಿಸಲಾರಂಭಿಸುತ್ತೀರಿ. ನಿಜ ಜೀವನದಲ್ಲಿ ಬಹಳ ಸಂತಸದಾಯಕವಾದ ಅನುಭವಗಳಿದ್ದರೆ ನೀವು 'ನನ್ನ ಬದುಕು ಸಂತಸದಾಯಕ', ಎನ್ನುವಿರಿ. ಆದರೆ ಇದು ಯಾವುದೂ ನಿಜವಲ್ಲ. ನಿಮ್ಮ ಬದುಕು ಸಂತಸದಾಯಕವಾಗಲೀ ಅಥವಾ ನೋವಾಗಲೀ ಅಲ್ಲ, ಏಕೆಂದರೆ ಈ ಘಟನೆಗಳನ್ನು ಜೋಡಿಸುವ ಕಾರ್ಯವಿಧಾನವೇ ತಪ್ಪು ಆಲೋಚನೆಗಳು ಸಂಬಂಧ ಹೊಂದಿರುತ್ತವೆ ಎಂಬ ಕಲನೆಯು ಒಂದು ತಪ್ಪು ತಿಳುವಳಿಕೆ. ಅದೂ ನಾವು ಎಲ್ಲ ಆಲೋಚನೆಗಳನ್ನೂ ಜೋಡಿಸುವುದಿಲ್ಲ. ನಾವು ಜೋಡಿಸುವ ಆಲೋಚನೆಗಳು ಕೇವಲ ನಾವು ಜ್ಞಾಪಿಸಿಕೊಂಡಿದ್ದಾಗಿರುವುದು ಮತ್ತು ಅದರಿಂದ ಒಂದು ಸ್ತಂಭವನ್ನು ಸೃಷ್ಟಿಸುವೆವು. ಒಂದು ಹೂಗಳ ಗೊಂಚಲಿನಿಂದ ಕೆಲವು ಹೂಗಳನ್ನು ಕಿತ್ತು ಕೊಂಡು ಒಂದು ಹಾರವನ್ನು ತಯಾರಿಸುವಂತೆ, ನಮ್ಮಲ್ಲಿರುವ ಲಕ್ಕಾಂತರ ಆಲೋಚನೆಗಳಿಂದ ನಾವು ಜ್ಞಾಪಕಕ್ಕೆ ಬರುವ ಕೆಲವು ಆಲೋಚನೆಗಳನ್ನು ಜೋಡಿಸಿ ಒಂದು ಸ್ತಂಭವನ್ನು ಸೃಷ್ಟಿಸುತ್ತೇವೆ. ಸ್ತಂಭವನ್ನು ಸೃಷ್ಟಿಸುವುದೇ ಮೊದಲ ಪಾಪ. ನಾವು ಸ್ತಂಭವನ್ನು ಸೃಷ್ಟಿಸಿದಾಗ ಕಷ್ಟವನ್ನು ಅನುಭವಿಸುತ್ತೇವೆ. ನೀವು ಒಂದು ಸಂತಸದ ಸ್ತಂಭವನ್ನು ನಿರ್ಮಿಸಿದರೆ, ಆಗ ನೀವು ಅದೇ ಸಂತಸದ ಅನುಭವವನ್ನು ಮತ್ತೊಮ್ಮೆ ಹೊಂದಲು, ಆ ಸ್ತಂಭವನ್ನು ವಿಸ್ತೃತಗೊಳಿಸಲು ಪ್ರಯತ್ನಿಸುತ್ತೀರಿ. ಅದೇ ನೀವು ನೋವಿನ ಸ್ತಂಭವನ್ನು ನಿರ್ಮಿಸಿದರೆ, ಆ ನೋವನ್ನು ತಪ್ಪಿಸಿಕೊಳ್ಳಲು, ಆ ಸ್ತಂಭವನ್ನು ಮುರಿಯಲು ಪ್ರಯತ್ನಿಸುವಿರಿ. ನೀವು
ಸಂಭವನ್ನು ವಿಸ್ತರಿಸುವುದಾಗಲೀ, ಇಲ್ಲವೇ ಮುರಿಯುವುದಾಗಲೀ ಮಾಡಲಾಗುವುದಿಲ್ಲ ಏಕೆಂದರೆ ಆ ಸ್ತಂಭವು ಅಸ್ತಿತ್ವದಲ್ಲಿಯೇ ಇಲ್ಲ. ಆ ಸ್ತಂಭವೇ ಒಂದು ಮಿಥ್ಯ. ಆ ಸ್ತಂಭದ ಸೃಷ್ಟಿಯೇ ನಿಮಗೆ ಇನ್ನೊಂದು ಸ್ತಂಭವಾಗಿದೆ. ನಿಮ್ಮ ಎಲ್ಲ ಅನುಭವಗಳೂ ಸ್ವತಂತ್ರ ಅನುಭವಗಳು. ನೀವು ಈ ಅನುಭವಗಳನ್ನು ಜೋಡಿಸಿದ ಕ್ಷಣವೇ ನಿಮಗಾಗಿ ನರಕವನ್ನು ಸೃಷ್ಟಿಸಿಕೊಳ್ಳುವಿರಿ ; ನೀವು ಕಷ್ಟವನ್ನು ಸೃಷ್ಟಿಸಿಕೊಳ್ಳುವಿರಿ; ಕಷ್ಟವೂ ಕೂಡ ಕಾಲ್ಪನಿಕ ಎಂದು ನಿಮಗೆ ಈಗ ಅರ್ಥವಾಗುತ್ತದೆ. ಅದು ಯಾವುದೋ ಕಲ್ಪನೆಯ ಮೇಲೆ ಆಧಾರಿತವಾಗಿದೆ. ಅದು ಯಾವುದೋ ನಿಜವಲ್ಲದರ ಮೇಲೆ ಅವಲಂಬಿತವಾಗಿದೆ. ಅದು ಕೇವಲ ಒಂದು ತೋರಿಕೆ. ಸ್ತಂಭವು ನಿಜವಲ್ಲ ; ಅದು ಅಸ್ತಿತ್ವದಲ್ಲಿ ಇಲ್ಲ. ಆದುದರಿಂದ ಸ್ತಂಭದಿಂದ ಸೃಷ್ಟಿಯಾದ ಕಷ್ಟವೂ ಕೂಡ ನಿಜವಲ್ಲ. ಒಮ್ಮೆ ಇದನ್ನು ನೀವು ಅರಿತುಕೊಂಡರೆ ನೀವು ಮುಕ್ತರಾಗುವಿರಿ.
ನಮ್ಮ ಆಲೋಚನೆಗಳು ಅಷ್ಟೊಂದು ಶಕ್ತಿಶಾಲಿಯಾಗಿರುವುದರಿಂದ, ಅವುಗಳು ಇತರ ಆಲೋಚನೆಗಳೊಂದಿಗೆ ಹಿಡಿತವನ್ನು ಸಾಧಿಸಿ ಒಂದು ಕಾಲ್ಪನಿಕ ಸ್ತಂಭವನ್ನು ಸೃಷ್ಟಿಸುತ್ತದೆ. ಕಾಲ್ಪನಿಕ ಸ್ತಂಭದ ನಿರ್ಮಾಣದ ಈ ರೀತಿಯ ಕಾರ್ಯವಿಧಾನವು ಅಹಂಭಾವದ ಕಾರ್ಯ. ಅಹಂಭಾವವು ಆಲೋಚನೆಗಳಿಂದ ಬೇರೇನಲ್ಲ. ಬದಲು, ಸ್ತಂಭವನ್ನು ನಿರ್ಮಿಸುವ ಆಲೋಚನೆಗಳ ವಿಶೇಷ ಗುಣ. ನಿಜವಾಗಿಯೂ ಹೇಳಬೇಕೆಂದರೆ ಅಹಂಭಾವವು ಅಸ್ತಿತ್ವದಲ್ಲಿಯೇ ಇರುವುದಿಲ್ಲ, ಏಕೆಂದರೆ ಸ್ತಂಭವು ಅಸ್ತಿತ್ವದಲ್ಲಿಯೇ ಇಲ್ಲ, ಸ್ತಂಭವು ಕಾಲ್ಪನಿಕ. ಅಹಂಭಾವ ಎಂಬುದು ಸ್ತಂಭವನ್ನು ನಿರ್ಮಿಸುವ ಈ ಕಾರ್ಯವಿಧಾನಕ್ಕೆ ನಾವು ಕೊಡುವ ಒಂದು ಹೆಸರಷ್ಟೆ ಈ ಸ್ತಂಭದಿಂದ ನಿರಂತರತೆಯ ಅನಿಸಿಕೆಯುಂಟಾಗುತ್ತದೆ. ಇದು ನಮಗೆ ಅಹಂಭಾವದ ಭ್ರಾಂತಿಯನ್ನುಂಟುಮಾಡುತ್ತದೆ.
ಇದೀಗ ನಮ್ಮ ಎಲ್ಲ ಆಲೋಚನೆಗಳೂ ಗಟ್ಟಿಯಾಗಿ ಹಿಡಿದುಕೊಳ್ಳುವುದರಿಂದ, ನಮಗೊಂದು ಅಹಂಭಾವವು ಇದೆಯೆಂದುಕೊಳ್ಳುತ್ತೇವೆ. ಆದರೆ ನಮ್ಮೆಲ್ಲ ಆಲೋಚನೆಗಳು ಅವುಗಳ ಸ್ವಭಾವದಿಂದಲೇ ಸ್ವತಂತ್ರವಾಗಿರುವುದು.
ಈ ಅಹಂಭಾವದ ಊಹೆಯೇ ಕಲ್ಪನೆಯಾಗಿರುವುದು. ಆದುದರಿಂದ ನಮ್ಮ ಸ್ವಭಾವದಿಂದಲೇ ನಾವು ಹಿಡಿತರಹಿತರಾಗಿರುವೆವು. ನಾವು ಜ್ಞಾನೋದಯವನ್ನು ಹೊಂದಿದವರಾಗಿದ್ದು ಕೇವಲ ನಾವು ಅದನ್ನು ಗ್ರಹಿಸಿಕೊಳ್ಳ ಬೇಕಷ್ಟೆ
ಒಮ್ಮೆ ಒಬ್ಬ ಶಿಷ್ಯನು ಜೈನ್ ಗುರುಗಳ ಬಳಿ ಹೋಗಿ, 'ನಾನು ಹೇಗೆ ಬುದ್ಧನಾಗಬಹುದು ?' ಎಂದು ಕೇಳಿದನು. ಗುರುಗಳು ಅವನ ಮುಖಕ್ಕೆ ಒಂದು ಬಿಗಿದು, 'ನೀನು ಈಗಾಗಲೇ ಬುದ್ಧನಾಗಿರುವೆ' ಎಂದು ಹೇಳಿದರು. ಬುದ್ಧನು ಬಂದು ಅವನು ಹೇಗೆ ಬುದ್ಧನಾಗಬೇಕೆಂದು ನಿಮ್ಮನ್ನು ಕೇಳಿದರೆ ನಿಮ್ಮ ಪ್ರತಿಕ್ರಿಯೆ ಏನಿರಬಹುದು ? ಜೈನ್ ಗುರುಗಳ ಪ್ರತಿಕ್ರಿಯೆಯೂ ಹಾಗೆಯೇ ಇರುವುದು. ಆದರಿಂದಲೇ ನಾವು ನಮ್ಮ ಸ್ವಭಾವದಿಂದಲೇ ಹಿಡಿತರಹಿತರಾಗಿರುವವು. ಕೇವಲ ಇದನ್ನು ಅರ್ಥಮಾಡಿಕೊಳ್ಳಬೇಕಷ್ಟೆ
ಒಬ್ಬ ವ್ಯಕ್ತಿಯು ತನ್ನ ವಿಧಿಯ ಮೇಲೆ ಅವಲಂಬಿತನಾಗಿದ್ದರೆ ನಲಿವನ್ನೂ ಮತ್ತು ನೋವನ್ನೂ ಅನುಭವಿಸುವನು. ನಿಮಗೆ ಬೇರೆ ಆಯ್ಕೆಯೇ ಇಲ್ಲ. ನಿಮಗೆ ನಲಿವನ್ನಾಗಲೀ ಅಥವಾ ನೋವನ್ನಾಗಲೀ ಆಯ್ಕೆ ಮಾಡಲಾಗುವುದಿಲ್ಲ ಆದರೆ ಈ ಅನುಭವಗಳನ್ನು ಜೋಡಿಸಿ ಕಾಲ್ಪನಿಕ ಸ್ತಂಭಗಳನ್ನು ನಿರ್ಮಿಸದೇ ಇರುವಂತಹ ಆಯ್ಕೆಯು ನಿಮಗಿದೆ. ನೀವು ಒಬ್ಬ ವ್ಯಕ್ತಿಗೆ ಅಥವಾ ಒಂದು ವಸ್ತುವಿಗೆ ಹಚ್ಚಿಕೊಳ್ಳುವಿರಿ, ಏಕೆಂದರೆ ನೀವು ಸ್ತಂಭಗಳನ್ನು
ನಿರ್ಮಿಸುವಿರಿ. ನೀವು ಮೂರು ವರ್ಷಗಳ ಹಿಂದೆ ಅನುಭವಿಸಿದ ಸಂಬಂಧ, ಒಂದು ವರ್ಷದ ಹಿಂದೆ ನೀವು ಅನುಭವಿಸಿದ ಸಂಬಂಧ, ಮತ್ತು ನೀವು ಈಗ ಅನುಭವಿಸುತ್ತಿರುವ ಸಂಬಂಧ, ಎಲ್ಲವೂ ಸ್ವತಂತ್ರವಾದ ಘಟನೆಗಳು. ನೀವು ಈ ಘಟನೆಗಳನ್ನು ಜೋಡಿಸಿದ ಕ್ಷಣವೇ, ನೀವು ಸ್ತಂಭವನ್ನು ವಿಸ್ತೃತಗೊಳಿಸುವುದಾಗಲೀ ಇಲ್ಲವೇ ಮುರಿಯುವುದಾಗಲೀ ಪ್ರಯತ್ನಿಸುವಿರಿ. ನಿಮ್ಮ ಸಂಬಂಧವು ಸಂತಸದಾಯಕವಾಗಿದ್ದರೆ ನೀವು ಆ ಸಂಬಂಧವು ಮುಂದೆಯೂ ಸಂತಸದಾಯಕವಾಗಿರುವುದೆಂದು ಭಾವಿಸುವಿರಿ. ಆ ಸಂಬಂಧವು ನೋವಿನಿಂದಿದ್ದರೆ ನೀವು ಆ ಸಂಬಂಧವನ್ನು ಮುರಿಯಲು ಪ್ರಯತ್ನಿಸುವಿರಿ ಅಥವಾ ಆ ಸಂಬಂಧವು ನಿಮಗೆ ಸರಿಯಲ್ಲವೆಂಬ ಊಹೆಯನ್ನು ಸೃಷ್ಟಿಸುತ್ತೀರಿ. ಪ್ರತಿ ಗಳಿಗೆಯೂ ನೀವೊಂದು ಹೊಸ ಸಂಬಂಧವನ್ನು ಅನುಭವಿಸುತ್ತಿರುವಿರೆಂಬುದನ್ನು ಗ್ರಹಿಸುವುದಿಲ್ಲ, ಏಕೆಂದರೆ ನಮ್ಮ ಸಹಜ ಪ್ರವೃತ್ತಿಯಿಂದಲೇ ನಾವು ಹಿಡಿತರಹಿತರಾಗಿರುವುದರಿಂದ ಪ್ರತಿ ಗಳಿಗೆಯೂ ಇಬ್ಬರು ಹೊಸಬರು ಜೊತೆಗೂಡಿರುತ್ತಾರೆ.
ನಿಜವಾದ ಸಮಸ್ಯೆಯು ನಲಿವು ಅಥವಾ ನೋವಿನಿಂದ ಆಗುವುದಿಲ್ಲ. ನಿಜವಾದ ಸಮಸ್ಯೆಯು ಉಂಟಾಗುವುದು ಅವೆರಡರ ಬಗ್ಗೆ ನಮಗಿರುವ ತಪ್ಪು ತಿಳುವಳಿಕೆಯಿಂದ ಹಾಗೂ ಅಂತಿಮವಾಗಿ ನಿರ್ಮಾಣವಾಗುವ ಕಾಲ್ಪನಿಕ ಸ್ತಂಭಗಳಿಂದ. ಒಬ್ಬ ಋಷಿಯ ವಿಚಾರದಲ್ಲಿಯಾದರೋ, ನಲಿವು ಇದ್ದರೆ ಅವನು ಅದನ್ನು ಸಂತೋಷದಿಂದ ಅನುಭವಿಸಿ ಮರೆತುಬಿಡುತ್ತಾನೆ. ನೋವಿದ್ದರೆ ಅವನು ನೋವನ್ನು ಅನುಭವಿಸಿ ಮರೆತುಬಿಡುತ್ತಾನೆ. ಅವನು ಆ ಅನುಭವಗಳನ್ನು ಸಮಯದ ಮಟ್ಟದಲ್ಲಿ ಕೊಂಡೊಯ್ಯುವುದಿಲ್ಲ. ಒಂದು ಅನುಭವವನ್ನು ನಾವು ಸಮಯದ ಮಟ್ಟದಲ್ಲಿ ಕೊಂಡೊಯ್ದ ಕ್ಷಣವೇ ನಾವು ಕಷ್ಟಪಡುತ್ತೇವೆ.
ನಾವು ಈ ಪ್ರಪಂಚದಲ್ಲಿ ಬದುಕಿದ್ದು ಜೀವನವನ್ನು ಅನುಭವಿಸಿದ್ದರೂ ಶಾಂತಿ ಮತ್ತು ಸಮಾನತೆಯಲ್ಲಿ ಕೇಂದ್ರೀಕೃತರಾಗಿರಬಹುದು. ಹೊರಗಿನ ಯಾವುದನ್ನೂ ತ್ಯಜಿಸುವ ಅವಶ್ಯಕತೆಯೇ ಇಲ್ಲ. ಸ್ತಂಭವನ್ನು ನಿರ್ಮಿಸುವುದನ್ನು ಒಮ್ಮೆ ನಿಲ್ಲಿಸಿದರೆ, ನಾವು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವ ಗುರುತೇ (identity) ಕಷ್ಟದ ಅದೇ ಕಾರಣವಾಗಿರುವುದು. ನಾವು ಆ ಗುರುತನ್ನು ಬಿಟ್ಟಕ್ಷಣವೇ, ನಿತ್ಯಾನಂದದೊಳಗೆ ಬರುವೆವು. ಆಗ ಹೊರಗಿನ ಘಟನೆಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ನೀವು ಈ ಘಟನೆಗಳನ್ನು ಜೋಡಿಸುವ ಅಭ್ಯಾಸವನ್ನು ಬಿಟ್ಟು ಬಿಟ್ಟಿರುತ್ತೀರಿ. ಆದ್ದರಿಂದ, ಪ್ರತಿಘಟನೆಯೂ ನಿಮಗೆ ಹೊಸ ಘಟನೆಯಾಗಿರುತ್ತದೆ. ನೀವು ಜೀವನವನ್ನು ಇನ್ನೂ ಹೆಚ್ಚು ಸುಂದರವಾಗಿ ನೋಡಲಾರಂಭಿಸುವಿರಿ. ಪ್ರತಿಯೊಂದೂ ಸಂತಸದಾಯವಾಗಿಯೂ ಮತ್ತು ಆನಂದದಾಯಕವಾಗಿಯೂ ಕಾಣುತ್ತದೆ. ನೀವು ಸಂಗತಿಗಳನ್ನು ಬೇಕಾದ ಹಾಗೆ ಅಂದುಕೊಳ್ಳುವುದನ್ನು ನಿಲ್ಲಿಸುವಿರಿ.
ಒಮ್ಮೆ ಜೀವನವನ್ನು ಕ್ಷಣದಿಂದ ಕ್ಷಣಕ್ಕೆ ಒಪ್ಪಿಕೊಳ್ಳಲಾರಂಭಿಸಿದರೆ, ನಿತ್ಯಾನಂದವು ಸಹಜವಾಗಿಯೇ ನಿಮಗೆ ಸಂಭವಿಸುತ್ತದೆ. ಹೊರಗಿನ ಸಂದರ್ಭಗಳು ನಿಮ್ಮ ಮೇಲೆ ಪರಿಣಾಮವನ್ನು ನೀವು ಅವುಗಳನ್ನು ಅನುಮತಿಸಿದರೆ ಮಾತ್ರ ಮಾಡಬಲ್ಲದು. ಯಾರೂ ನಿಮ್ಮ ಮೌನ ಅನುಮತಿಯಿಲ್ಲದೆ ನಿಮ್ಮನ್ನು ತೊಂದರೆಪಡಿಸಲಾರರು. ಜನಗಳು ಅವರ ಜೀವನವನ್ನು ಆ ಕ್ಷಣದಲ್ಲಿ ಜೀವಿಸಬಲ್ಲರೆಂದೂ, ಆದರೆ ಅವರ ಸುತ್ತಲಿರುವ ಜನರು ಮಾಡದಿದ್ದರೆ, ಆಗ ಅವರ ದುರ್ಲಾಭವನ್ನು ಪಡೆಯುವರೆಂದೂ ದೂರುವರು. ತುಂಬಾ ಸ್ಪಷ್ಟವಾಗಿ ತಿಳಿದಿರಿ, ಯಾರೂ ನಿಮ್ಮ ಮೌನ ಅನುಮತಿಯಿಲ್ಲದೆ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವುದಾಗಲೀ ಅಥವಾ ನಿಮಗೆ ತೊಂದರೆ ಕೊಡುವುದಾಗಲೀ
ಮಾಡಲಾರರು. ಒಮ್ಮೆ ನೀವು ಹಿಡಿತರಹಿತರೆಂದು ಅರ್ಥಮಾಡಿಕೊಂಡರೆ ಸಹಜವಾಗಿಯೇ ನಿತ್ಯಾನಂದವು ಹಿಂಬಾಲಿಸಿ ಬರುತ್ತದೆ.
ನಿರ್ವಾಣಾಷ್ಟಕಂ ನಲ್ಲಿ ಶಂಕರರು ಹೇಳುತ್ತಾರೆ, ''ಸದಾ ಮೇ ಸಮತ್ವಂ ನ ಮುಕ್ತಿಃ ನ ಬಂಧಾಃ, ಚಿದಾನಂದ ರೂಪಾ ಶಿವೋಹಂ ಶಿವೋಹಂ' ಎಂದು. ಅಂದರೆ, ನಾನು ಬಂಧನದಲ್ಲಿಯೂ ಇಲ್ಲ ಅಥವಾ ಮುಕ್ತನೂ ಅಲ್ಲ, ನಾನು ಸದಾಕಾಲವೂ ಸಮತೋಲನ ಸ್ಥಿತಿಯಲ್ಲಿರುವೆನು, ನಾನು ಶಿವಶಕ್ತಿಯ ಪರಿಶುದ್ದ ಪವಿತ್ರತೆಯ ಸ್ವಭಾವದವನು, ಎಂದು. ಬಂಧನ ಮತ್ತು ಮುಕ್ತಿ ಎರಡೂ ಮನಸ್ಸು ಸೃಷ್ಟಿಸಿದ ಕಲ್ಪನೆಗಳು. ಮುಕ್ತಿ ಎನ್ನುವುದು ಬಂಧನ ಎನ್ನುವುದು ಅಸ್ತಿತ್ವದಲ್ಲಿರುವ ತನಕವೂ ಇರುವುದು. ಆದರೆ ಬಂಧನ ಎನ್ನುವುದು ಇಲ್ಲವಾದರೆ ಮುಕ್ತಿ ಎನ್ನುವುದೂ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದನ್ನೆ ಶಂಕರರು ಉಲ್ಲೇಖಿಸುತ್ತಿರುವುದು.
ನೀವು ಒಳಮುಖವಾಗಿಯೋ ಅಥವಾ ಹೊರಮುಖವಾಗಿಯೋ ಹೋಗಲು ಪ್ರಯತ್ನಿಸುತ್ತಿದ್ದರೆ, ನೀವು ಎಲ್ಲಿಗಾದರೂ ಹೋಗುತ್ತಿರುವಷ್ಟು ಸಮಯವೂ ನೀವು ಸತ್ಯವನ್ನು ಕಳೆದುಕೊಳ್ಳುತ್ತಿರುತ್ತೀರ. ಪಯಣಿಸುತ್ತಿರುವ ಅಥವಾ ಹೋಗುತ್ತಿರುವ ಕಾರ್ಯವಿಧಾನವೇ ನಿಮ್ಮನ್ನು ಸತ್ಯ ದಿಂದ ದೂರ ಕೊಂಡೊಯ್ಯುತ್ತದೆ. ನಿಜವು ಇಲ್ಲಿಯೇ ಮತ್ತು ಈಗಲೇ ಇದೆ.
ಬೇರೆಲ್ಲಿಗೋ ಹೋಗುವ ಅವಶ್ಯಕತೆಯಿಲ್ಲ ಪುನಃ ನೀವು ಪ್ರಯತ್ನಿಸುತ್ತಿರುವ ಕಾರ್ಯ ವಿಧಾನವೇ ನೀವು ಸ್ತಂಭವೊಂದನ್ನು ನಿರ್ಮಿಸಿರುವುದನ್ನು ತೋರಿಸುತ್ತದೆ. ನಾವು ಸ್ವಲ್ಪ ಪ್ರಗತಿಯನ್ನು ನೋಡುತ್ತೇವೆ. ಯಾವ ಪ್ರಗತಿಯೂ ಇರುವುದಿಲ್ಲ, ಏಕೆಂದರೆ ಪ್ರಗತಿಯನ್ನು ಹೊಂದುತ್ತಿರುವ ಯಾರೂ ಇಲ್ಲ. ವ್ಯಕ್ತಿಯು ಪ್ರತಿ ಕ್ಷಣವೂ ಸಾಯುತ್ತಿರುತ್ತಾನೆ.
ಆಗ ಯಾರು ಮುಂದುವರಿಯುತ್ತಾರೆ? ನೀವು ಹಿಡಿತರಹಿತರಾದರೆ ನೀವು ಹಾಗೆಯೇ 360" ಯಷ್ಟು ವಿಸ್ಕೋಟಿಸುವಿರಿ. ಆಗ ಭೌತಿಕವಾದಿಯೋ ಅಥವಾ ಆಧ್ಯಾತ್ಮಿಕವಾದಿಯೋ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದಲೇ ಶಂಕರರು ಹೇಳುತ್ತಾರೆ, ಅವರು ಬಂಧನದಲ್ಲಿಯಾಗಲೀ ಇಲ್ಲವೇ ಮುಕ್ತರಾಗಲೀ ಇಲ್ಲ, ಎಂದು. ಅವರು ಎರಡನ್ನೂ ದಾಟಿ ಹೋದವರು. ಎರಡೂ ಕೇವಲ ಕಲ್ಪನೆಗಳು.
ಉದ್ದಾರವಾಗಬೇಕಿರುವ ಆತ್ಮವೆಂಬುದು ಇದೆಯೇ ? ಹಿಡಿತರಹಿತ ಆಲೋಚನೆಗಳ ಸರಣಿ ಮಾತ್ರವೇ ನೀವಾಗಿರುವುದು. ನೀವು ಆತ್ಮದ ಉದ್ದಾರಕ್ಕೆ ಪ್ರಯತ್ನಿಸಿದರೆ ಕೊನೆಯಲ್ಲಿ ಆಗುವುದು ನನ್ನ ಆತ್ಮವು ಉದ್ದಾರವಾಯಿತೆಂಬ ಕಲ್ಪನೆಯ ಸ್ತಂಭದ ನಿರ್ಮಾಣ ಮಾತ್ರ. ಅದು ನಿಮಗೆ ಒಳ್ಳೆಯ ಭಾವನೆಯನ್ನು ಭಾವಿಸುವುದನ್ನು ಕೊಡುತ್ತದೆ. ಒಂದು ಆಲೋಚನೆಯು ಆತ್ಮವು ಉದ್ದಾರವಾಗಿದೆಯೆಂದು ಯೋಚಿಸಬಹುದು, ಆದರೆ ಅದು ಕೇವಲ ಒಳ್ಳೆಯ ಭಾವನೆಯನ್ನು ಭಾವಿಸುವುದು ಮಾತ್ರ. ವಾಸ್ತವವಾಗಿ ಹೇಳಬೇಕೆಂದರೆ ಆತ್ಮವನ್ನು ಉದ್ದಾರಮಾಡಲಾಗದು, ಕಾಲ್ಪನಿಕ ಆತ್ಮವನ್ನು ಕೇವಲ ನಿರ್ಮೂಲ ಮಾಡಬಹುದಷ್ಟೆ ನೀವು ಆತ್ಮೋದ್ದಾರಕ್ಕೆ ಪ್ರಯತ್ನಿಸುತ್ತಿರುವ ತನಕವೂ, ನೀವು ಸ್ತಂಭವೊಂದನ್ನು ಸೃಷ್ಟಿಸುತ್ತಿರುವಿರಿ.
ಮನಸ್ಸು ಇರುವ ತನಕವೂ, ಅಸತ್ಯವನ್ನು ಗುರುತಿಸುವುದು ಮುಂದುವರಿಯುತ್ತದೆ. ಶಂಕರರು ಹೇಳುತ್ತಾರೆ, ''ಬ್ರಹ್ಮ ಸತ್ಯ ಜಗತ್ ಮಿಥ್ಯ, ಜೀವ ಬ್ರಹ್ಮೈವ ನ ಅಪರಃ'', ಎಂದರೆ
ಬ್ರಹ್ಮವೇನಿಜವಾಗಿದ್ದು, ಪ್ರಪಂಚವು ಅಸತ್ಯವೆಂದು ಮತ್ತು ಪ್ರತಿಯೊಬ್ಬನ ಆತ್ಮವೂ ಬ್ರಹ್ಮಗಿಂತ ವ್ಯತ್ಯಾಸವಿಲ್ಲವೆಂದೂ ಅರ್ಥ. ಅವರು ಇಲ್ಲಿ ಏನನ್ನು ಅರ್ಥೈಸುತ್ತಾರೆಂದರೆ ಮನಸ್ಸು ಇರುವುದು ಸ್ಥಗಿತಗೊಂಡರೆ, ಬ್ರಹ್ಮ ಹೊಳೆಯಲಾರಂಭಿಸುತ್ತದೆ, ಎಂದು. ವಾಸ್ತವಿಕತೆಯು ಅದರದೇ ಭವ್ಯತೆಯಲ್ಲಿ ಹೊಳೆಯಲಾರಂಭಿಸುತ್ತದೆ. ಮನಸ್ಸು ಇರುವ ತನಕವೂ, ಆಲೋಚನೆಗಳು ಇರುತ್ತವೆ. ಆಲೋಚನೆಗಳು ಯಾವಾಗಲೂ ಭೂತ ಮತ್ತು ಭವಿಷ್ಯತ್ ನಲ್ಲಿ ಹಾರಾಡುತ್ತಿರುತ್ತವೆ. ಪ್ರಸಕ್ತತೆಯ ಬಗ್ಗೆ ಯಾವೊಂದು ಆಲೋಚನೆಯೂ ಇರುವುದಿಲ್ಲ. ಪ್ರಸಕ್ತತೆಯಲ್ಲಿ ಕೇವಲ ಅರಿವು ಮಾತ್ರ ಇರಬಲ್ಲದು. ಆಲೋಚನೆಗಳು ಇರುವ ತನಕವೂ ನಾವು ಸ್ತಂಭಗಳ ಸೃಷ್ಟಿಯನ್ನು ಮಾಡುತ್ತಿರುತ್ತೇವೆ. ನಾವು ಈ ಆಲೋಚನೆಗಳನ್ನು ಜೋಡಿಸಿ ನಲಿವಿನ ಇಲ್ಲವೇ ನೋವಿನ ಕಾಲ್ಪನಿಕ ಸ್ತಂಭಗಳನ್ನು ಸೃಷ್ಟಿಸುತ್ತೇವೆ. ಸ್ತಂಭದ ನಿರ್ಮಾಣವಾದ ಕ್ಷಣವೇ ಅಸತ್ಯದ ಗುರುತಿಸುವಿಕೆಯು ಆಗುತ್ತದೆ. ಕಾರಣವೇನೆಂದರೆ ನಾವು ಈ ಸಂಬಂಧಗಳಿಲ್ಲದ ಆಲೋಚನೆಗಳನ್ನು ಜೋಡಿಸುತ್ತೇವೆ. ಆಲೋಚನೆಗಳನ್ನು ಜೋಡಿಸುವ ಕಾರ್ಯ ವಿಧಾನವೇ ಈ ಸಂಸಾರ ಸಾಗರ (ಪ್ರಪಂಚ) ದ ಕೋಟಲೆಗಳಿಗೆ ಕಾರಣ. ನಾವು ಆಲೋಚನೆಗಳನ್ನು ಜೋಡಿಸುವ ಕಾರಣ ಕಾಲ್ಪನಿಕ ಗುರುತು (Identity) (ಅದನ್ನು ಶಂಕರರು ಜೀವ ಎಂದು ಕರೆಯುತ್ತಾರೆ) ಇರುವಿಕೆಗೆ ಬರುತ್ತದೆ. ಜೀವವು ಕಾಣಿಸಿಕೊಳ್ಳುತ್ತಲೇ ಮಿಥ್ಯಾಲೋಕ (ಅಸತ್ಯದಿಂದ ಕೂಡಿರುವುದು) ಕಾಣಿಸಿಕೊಳ್ಳುತ್ತದೆ. ನಾವು ಹಿಡಿತರಹಿತರಾದರೆ ಅಸತ್ಯದ ಗುರುತು ತಾನಾಗಿಯೇ ಮಾಯವಾಗುವುದು ಮತ್ತು ಬ್ರಹ್ಮ ಪ್ರಜ್ಞೆಯು ಪ್ರಕಟಗೊಳ್ಳುವುದು. ನಮಗೆ ಎರಡು ವಿಧದ ಗುರುತಗಳಿರುವುವು. ಒಂದು ಗುರುತು ನಾವು ಹೊರ ಪ್ರಪಂಚಕ್ಕಾಗಿ ತೋರಿಸುವ ಗುರುತು ಮತ್ತು ಇನ್ನೊಂದು ಒಳಪ್ರಪಂಚಕ್ಕಾಗಿ ನಾವು ತೋರಿಸುವ ಗುರುತು. ಹೊರ ಪ್ರಪಂಚಕ್ಕಾಗಿ ನಾವು ತೋರಿಸುವ ಗುರುತನ್ನು ಅಹಂಕಾರ ಎಂದು ಕರೆಯಲಾಗುತ್ತದೆ. ಒಳ ಪ್ರಪಂಚಕ್ಕಾಗಿ ನಾವು ತೋರಿಸುವ ಗುರುತನ್ನು ಮಮಕಾರ ಎಂದು ಕರೆಯಲಾಗುತ್ತದೆ. ಈ ಎರಡೂ ಗುರುತುಗಳು ಪರಸ್ಪರ ತಿಕ್ಕಾಟದಲ್ಲಿರುತ್ತವೆ. ಉದಾಹರಣೆಗೆ, ಹೊರಗಡೆಗೆ ನಾವು ಇಂತಿಂತಹ ವ್ಯಕ್ತಿಯೆಂದು ಬಿಂಬಿಸಬಹುದು, ಆದರೆ ನಾವು ಒಂದಲ್ಲ ಒಂದು ರೀತಿಯಲ್ಲಿ ಕೊರತೆಯಲ್ಲಿದ್ದೇವೆ ಎಂದು ಒಳಗೆ ನಮಗೆ ಗೊತ್ತು. ಯಾವಾಗಲೂ ಈ ಎರಡೂ ಗುರುತುಗಳ ನಡುವೆ ಒಂದು ಹೆಚ್ಚು ಕಡಿಮೆ ಇರುವುದು. ಹೊರಪ್ರಪಂಚಕ್ಕಾಗಿ ನಾವು ಬಿಂಬಿಸುವ ಗುರುತು ಯಾವಾಗಲೂ ನಾವು ವಾಸ್ತವವಾಗಿ ಇರುವುದಕ್ಕಿಂತ ಹೆಚ್ಚಾಗಿರುತ್ತದೆ. ಒಬ್ಬ ವ್ಯಕ್ತಿಯು ಸದಾಕಾಲವೂ ತಾನು ಮಿಕ್ಕವರಿಗಿಂತ ಮಿಗಿಲು ಎಂದು ರುಜುವಾತು ಮಾಡಲು ಪ್ರಯತ್ನಿಸುತ್ತಾನೆ. ನಮ್ಮ ಮೇಲೆ ನಾವು ಬಿಂಬಿಸಿಕೊಳ್ಳುವ ಗುರುತು ಸದಾಕಾಲವೂ ವಾಸ್ತವವಾಗಿ ನಾವಿರುವುದಕ್ಕಿಂತಲೂ ಕಡಿಮೆ ಇರುತ್ತದೆ. ನಮ್ಮ ಬಗ್ಗೆಯೇ ನಾವು ಸಂತೃಪ್ತರಾಗಿಲ್ಲದಿರುವುದನ್ನು ನೀವು ಗಮನಿಸಿರಬಹುದು. ಒಂದೇ ಸಮನೆ ನಾವು ನಮ್ಮನ್ನು ಉತ್ತಮಪಡಿಸಿಕೊಳ್ಳಲು ಒಂದಲ್ಲ ಒಂದು ವಿಧದಲ್ಲಿ ಪ್ರಯತ್ನಿಸುತ್ತಿರುತ್ತೇವೆ. ಆಧ್ಯಾತ್ಮಿಕವಾಗಿ ನಾವು ಅಸಂತೃಪ್ತರಾಗಿರುವೆವೋ ಅಥವಾ ಭೌತಿಕವಾಗಿಯೋ ನಾವು ಅಸಂತೃಪ್ತರಾಗಿರುತ್ತೇವೆ. ನಾವು ಹೊತ್ತಿರುವ ಈ ಒಳಗುರುತು ಯಾವಾಗಲೂ ಯಾವುದಾದರೂ ಕೊರತೆಯಿಂದಿರುತ್ತದೆ ಮತ್ತು ಹೊರ ಗುರುತು ಯಾವಾಗಲೂ ಸಾಮಾನ್ಯಕ್ಕಿಂತಲೂ ಮೀರಿರುತ್ತದೆ. ಆದ್ದರಿಂದ ಈ ಎರಡೂ ಗುರುತುಗಳು ಯಾವಾಗಲೂ ಪರಸ್ಪರ ತಿಕ್ಕಾಟದಲ್ಲಿರುತ್ತವೆ. ಈ ಕಾರಣಕ್ಕಾಗಿಯೇ ನಾವು ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು, ಏಕೆಂದರೆ ನಾವು ಏನನ್ನು ಯೋಚಿಸುವೆವೋ ಅದನ್ನು ಮಾತನಾಡುವುದು ಅಪರೂಪ. ನಾವೇನಾದರೂ ನಮ್ಮ ಆಲೋಚನೆಗಳನ್ನು ನೇರವಾಗಿ ಶಬ್ದಗಳಾಗಿ ಉತ್ಪತ್ತಿಮಾಡಿದರೆ ನಮ್ಮ ಸುತ್ತಲಿರುವ ಜನರು
ನಮ್ಮಿಂದ ದೂರ ಓಡಿಹೋಗಲು ಪ್ರಾರಂಭಿಸುತ್ತಾರೆ. ರಾಮಕೃಷ್ಣರು ಹೇಳುತ್ತಿರುತ್ತಿದ್ದ ಹಾಗೆ ನಿಮ್ಮ ಆಲೋಚನೆಗಳನ್ನು ಮತ್ತು ಶಬ್ದಗಳನ್ನು ಒಟ್ಟಿಗೆ ತರುವುದೇ ನಿಜವಾದ ಆಧ್ಯಾತ್ಮಿಕತೆ. ಇದು ಈ ಎರಡೂ ಗುರುತುಗಳನ್ನು ಮೀರಿ ನಡೆದರೆ ಸಂಭವಿಸುವುದು.
ಈ ಎರಡೂ ಗುರುತುಗಳು ಅಸತ್ಯವಾದ ಗುರುತುಗಳು. ಈ ಗುರುತುಗಳು ನಾವು ಸೃಷ್ಟಿಸುವ ಸ್ತಂಭದ ಫಲಿತಾಂಶ. ವಾಸ್ತವತೆಯಲ್ಲಿ ಅವು ಅಸ್ತಿತ್ವದಲ್ಲಿಲ್ಲ. ಈ ಗುರುತುಗಳೊಂದಿಗೆ ನಾವು ಜೊತೆಗೂಡಿರುವ ತನಕವೂ ಸಂಸಾರದಲ್ಲಿ ಸಿಕ್ಕಿಕೊಂಡಿರುತ್ತೇವೆ. ಒಮ್ಮೆ ನಾವು ಈ ಗುರುತುಗಳನ್ನು ಮೀರಿ ನಡೆದರೆ, ನಾವು ಪರಮ ಜ್ಞಾನಿಗಳಾಗುತ್ತೇವೆ. ಸೃಷ್ಟಿ (ಬ್ರಹ್ಮ), ಸ್ಥಿತಿ (ವಿಷ್ಣು) ಮತ್ತು ಲಯ (ಮಹೇಶ್ವರ), ಈ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಾವು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ನಿಲ್ಲಿಸಿದರೆ, ನಾವು ಈ ಮೂರನ್ನೂ ಮೀರಿ ಪರಬ್ರಹ್ಮಸ್ಥಿತಿಯನ್ನು ತಲಪುತ್ತೇವೆ.
ಈ ನಡಿಗೆಯಲ್ಲಿ, ನಿಮ್ಮ ಯೋಚನೆಗಳು ಸಂಬಂಧ ಹೊಂದಿಲ್ಲದ, ಅಸಂಬದ್ದವಾದ ಮತ್ತು ಹಿಡಿತ ರಹಿತವಾದದ್ದೆಂಬ ಅರಿವನ್ನು ಕೊಂಡೊಯ್ಯಿರಿ. ನಿಮ್ಮ ಆಲೋಚನೆಗಳ ನಡುವೆ ಸಾರೂಪ್ಯವಾದ ಸಂಬಂಧವಿರುವುದಿಲ್ಲ. ಆಲೋಚನೆಗಳಿದ್ದರೂ ಅವುಗಳನ್ನು ಅದುಮಿಡುವುದಾಗಲೀ ಇಲ್ಲವೇ ಪ್ರತಿಕ್ರಿಯಿಸುವುದಾಗಲೀ ಮಾಡಬೇಡಿ. ಅವುಗಳು ಹಿಡಿತರಹಿತವೆಂಬ ತಿಳುವಳಿಕೆಯಿಂದ ಸುಮ್ಮನೆ ಅವುಗಳನ್ನು ಗಮನಿಸಿ. ತಾನಷಕ್ಕೇ ಗಮನಿಸುವ ಪ್ರಜ್ಞೆಯು ನಿಮ್ಮೊಳಗೆ ಆಗಲು ಪ್ರಾರಂಭವಾಗುತ್ತದೆ ; ನೀವು ಈ ಎರಡೂ ಗುರುತುಗಳನ್ನು ದಾಟಿ ಹೋಗುವಿರಿ.
ನೀವು ನಲಿವಿನ ಸ್ತಂಭವೋ ಇಲ್ಲವೇ ನೋವಿನ ಸ್ತಂಭವೋ ಅಲ್ಲದೆ, ನೀವು ಈ ಸ್ತಂಭಗಳನ್ನು ಬರೆದ ಹಿನ್ನೆಲೆ ಎಂದು ಅರಿತುಕೊಳ್ಳುವಿರಿ. ನೀವು ಅರಿತುಕೊಂಡಿರಿ ಇಲ್ಲವೇ ಬಿಡಿ, ಒಪ್ಪಿಕೊಳ್ಳಿ ಇಲ್ಲವೇ ಬಿಡಿ, ನೀವು ಈಗಾಗಲೇ ಜ್ಞಾನೋದಯವನ್ನು ಹೊಂದಿದವರು ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ಸಹಜ ಸ್ವಭಾವದಿಂದಲೇ ನೀವು ಹಿಡಿತರಹಿತರು. ಆದರಿಂದ ಈ ತಿಳುವಳಿಕೆಯೊಂದಿಗೆ ಮುಂದಿನ ಏಳು ನಿಮಿಷಗಳ ಕಾಲ ನಿಶ್ಯಬ್ಲವಾಗಿ ಕುಳಿತುಕೊಂಡು ಹಿಡಿತರಹಿತದ ಸ್ಥಿತಿಯನ್ನು ಪವಿತ್ರವಾದ ಆತ್ಮದ ಮತ್ತು ನಿತ್ಯಾನಂದದ ಅನುಭವವನ್ನು ಹೊಂದಿರಿ. ಜ್ಞಾನೋದಯದ ಸ್ಥಿತಿಯ ಅನುಭವವನ್ನು ಹೊಂದಲು ಇದೇ ಪರಮ ತಂತ್ರ.
ಈ ಸತ್ಯದಿಂದ ನೀವು ಪ್ರೇರಿತರಾದಂತೆ ಭಾವಿಸಿದರೆ, ಈ ಹಿಡಿತ ರಹಿತದ ಕಲನೆಯ ಬಗ್ಗೆ ವಿಶದವಾಗಿ ಮಾತನಾಡುವ 'ಧ್ಯಾನ'ಸ್ಪುರಣ ಪ್ರೋಗ್ರಾಂ' ನಲ್ಲಿಯೂ ಸಹ ಭಾಗವಹಿಸಬಹುದು.
'ಧ್ಯಾನ ಸ್ಪುರಣ ಪ್ರೋಗ್ರಾಂ' ಎಂಬುದು 2 ದಿನದ ಧ್ಯಾನದ ಕಾರ್ಯಕ್ರಮವಾಗಿದ್ದು ನಮ್ಮನ್ನು ನಮ್ಮೊಳಗೆ ಕೇಂದ್ರೀಕೃತಗೊಳಿಸಿ ಮತ್ತು ನಮ್ಮ ನಿಜವಾದ ಧ್ಯಾನದ ಸ್ವಭಾವದೊಂದಿಗೆ ನಮ್ಮನ್ನು ಪುನರ್ ಜೋಡಣೆಗಾಗಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಮನಸ್ಸಿನ ಉಪ ಉತ್ಪನ್ನಗಳಾದ ನಮ್ಮ ಮನಸ್ಸಿನ ಹಿಡಿತದಿಂದ, ನಮ್ಮ ಮನೋಭಾವನೆಗಳಿಂದ ನಮ್ಮನ್ನು ಬಿಡುಗಡೆ ಮಾಡಿಸಿಕೊಳ್ಳಲು ಈ ಕಾರ್ಯಕ್ರಮವು ರೂಪಿತವಾಗಿದೆ. ನಮ್ಮ ಮಿಥ್ಯೆಯಾದ ಮನಸ್ಸಿನಲ್ಲಿ ರೂಪಿತವಾಗಿರುವ ನೋವು ಮತ್ತು ನಲಿವುಗಳನ್ನು ತೊಡೆದು ಧ್ಯಾನವು ವಿಕಸಿತಗೊಳ್ಳಲು ನಮ್ಮೊಳಗೆ ಸ್ಥಳವನ್ನು ಕಲ್ಪಿಸುವ ಉದ್ದೇಶವನ್ನು ಇದು ಹೊಂದಿದೆ.
ಮಂತ್ರಗಳನ್ನು ಆಲಿಸಿ (ಸಮಯದ ಅವಧಿ : 10 ನಿಮಿಷಗಳು)
ಈ ಕೊನೆಯ ಹೆಜ್ಜೆಯಲ್ಲಿ , ಸುಮ್ಮನೆ ಆನಂದದ ಮನೋಭಾವನೆಯಲ್ಲಿ ನಿಶ್ಶಬ್ದವಾಗಿ ಕುಳಿತುಕೊಂಡು ಪಠಿಸುತ್ತಿರುವ ಮಂತ್ರವನ್ನು ಆಲಿಸಿ. ವಿಶ್ವಶಕ್ತಿಯೊಂದಿಗೆ ಸಂಬಂಧ ಹೊಂದಿದ ಹಾಗೆ ಸುಮ್ಮನೆ ಅನುಭವಿಸಿ ಮತ್ತು ಶಕ್ತಿಶಾಲಿಯಾದ ಮಂತ್ರಗಳಿಂದ ನಿಮ್ಮ ಅಂತರಂಗದಲ್ಲಿ ಆಗುವ ಕಂಪಗಳನ್ನು ಅನುಭವಿಸಿ. ಮಂತ್ರಗಳು ವಿಶ್ವಶಕ್ತಿಗೆ ಅಥವಾ ಗುರುಗಳಿಗೆ ನಮ್ಮನ್ನು ಅಜ್ಞಾನದಿಂದ ಬಿಡುಗಡೆಗೊಳಿಸಿ ನಿರಂತರವಾದ ಆನಂದವನ್ನು, ಅಂದರೆ ನಿತ್ಯಾನಂದವನ್ನು ಹೊಂದಲು ಸಹಾಯ ಮಾಡುವ ಈ ಮಹತ್ತರ ಪ್ರಜ್ಞೆಯನ್ನು ನಮಗೆ ದಯಪಾಲಿಸಿದ್ದಕ್ಕಾಗಿ ನಮ್ಮ ಕೃತಜ್ಞತೆಗಳನ್ನು ಅರ್ಪಿಸುವ ಒಂದು ವಿಧಾನ.
ನೀವು ವಿಧಿ ವಿಧಾನಗಳಲ್ಲಿ ಆಸಕ್ತರಾಗಿದ್ದರೆ, ನೀವು ಗುರುಪೂಜಾವನ್ನು ( ಗುರುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುವುದು) ಈ ನಡಿಗೆಯಲ್ಲಿ ಮಂತ್ರಗಳನ್ನು ಉಚ್ಚರಿಸುತ್ತಾ ವಿಧಿಗಳನ್ನು ಮಾಡಬಹುದು.
ನೀವು ವಿಧಿಗಳಲ್ಲಿ ಆಸಕ್ತರಾಗಿಲ್ಲದಿದ್ದರೆ, ಸುಮ್ಮನೆ ನಿಶ್ಶಬ್ದವಾಗಿ ಕುಳಿತು ಮಂತ್ರಗಳನ್ನು ಆಲಿಸಬಹುದು. ಕೇವಲ ಮಂತ್ರಗಳನ್ನು ಆಲಿಸುವುದರಿಂದ ಕೂಡ ನಿಮಗೆ ತುಂಬಾ ಒಳಿತನ್ನು
ಮಾಡುವುದು. ಮಂತ್ರಗಳು ಕಂಪನಗಳಿಂದ ಕೂಡಿದ್ದು ನಿಮ್ಮನ್ನು ಹೆಚ್ಚು ಪವಿತ್ರವಾಗಿಯೂ ಮತ್ತು ಆನಂದದಾಯಕವಾಗಿಯೂ ಇರಲು ನಿಮ್ಮನ್ನು ಪರಿವರ್ತಿಸುತ್ತದೆ.
ಆದುದರಿಂದ ದೈನಂದಿಕವಾಗಿ ಈ ಧ್ಯಾನತಂತ್ರವನ್ನು ದಿನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಮಾಡಿ ಮತ್ತು ನಿಮ್ಮಲ್ಲಿ ಒಂದು ಹೊಸ ಆಯಾಮವನ್ನು ಅನುಭವಿಸಲು ಪ್ರಾರಂಭಿಸಿ. ಈ ತಂತ್ರವು ನಿಮ್ಮ ಪರಿಶುದ್ದ ಅರಿವನ್ನು ಮತ್ತು ನಿತ್ಯಾನಂದದ ಸ್ಥಿತಿಯನ್ನು ಅನುಭವಿಸಲು ಮನಸ್ಸು ಮತ್ತು ದೇಹವನ್ನು ತಯಾರುಮಾಡಲು ಸಹಾಯಮಾಡುತ್ತದೆ. ನಿಮಗೆ ಅನುಭವವಾಗಲಿ ಮತ್ತು ನಿರಂತರ ಆನಂದವಾದ ನಿತ್ಯಾನಂದನಲ್ಲಿ ಒಂದಾಗಿರಿ.
The Supreme Pontiff Of Hinduism Bhagawan Sri Nithyananda Paramashivam ರನ್ನು ಕುರಿತು
ಜೀವನದ ಉದ್ದೇಶವನ್ನು ಅರಿಯುವ ಮಾನವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯ ದೊಂದಿಗೆ ಕೊನೆಗೊಳ್ಳುತ್ತದೆ. ಆನಂದವು ಮಾರ್ಗ ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೊಂದಿದ ಮತ್ತು ಆಧುನಿಕ ಆಧ್ಯಾತ್ಮಿಕ ಗುರುಗಳಾದ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಅನುಭವ ಮತ್ತು ಬೋಧನೆ.
ಅವರ ಜೀವನ ಧ್ಯೇಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ – ಅಂದರೆ ದಿನದ 24
ಗಂಟೆಗಳೂ ಆನಂದದಲ್ಲಿ ಬದುಕುವುದು! ಎಂದು ಅನುಭವದಿಂದ ಅರಿಯುವುದನ್ನು ಮೊದಲು ನೀಡುವುದು. ನಮ್ಮದೇ ಆಂತರ್ಯದ ಮಾರ್ಗದಲ್ಲಿ ಕೆಲಸ ಮಾಡುವ ಮುಖಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದು ಸಾಧ್ಯವೆಂಬ ಅರಿವನ್ನು ನಮ್ಮಲ್ಲಿ ತರುತ್ತಾರೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಹುಟ್ಟಿದ್ದು ತಿರುವಣ್ಣಾಮಲೈ–ದಕ್ಷಿಣ ಭಾರರದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ, ತೀವ್ರವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮಾನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಫೋಟಿಸಲು ಮತ್ತು
ಆಧ್ಯಾತ್ಮಿಕವಾಗಿ ಬಲಾಢ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಂತ್ರಜ್ಞಾನವೊಂದನ್ನು ರೂಪಿಸಿದರು. ರೂಪಿಸಿರುವ ಅಸಂಖ್ಯಾತ ಕಾರ್ಯಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು ಬೀಳುವಂತೆ ಮಾಡುತ್ತವೆ. ಅವರು ಹೇಳುತ್ತಾರೆ, ಭೌತಿಕ ಜಗತ್ತಿನಲ್ಲಿ ಯಶಸ್ಸನ್ನು ಮತ್ತು ನಿಮ್ಮ ಅಂತರಂಗದಲ್ಲಿ ಆಳವಾದ ಸಾಫಲ್ಯತೆಯನ್ನು ತರಲು ಧ್ಯಾನವು ಅನುಪಮ ಕೀಲಿ ಕೈ.
ಲೈಫ್ ಬ್ಲಿಸ್ ಫೌಂಡೇಶನ್ ಕುರಿತು (Lbf)
ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರ ಜಾಗತೀಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1000 ಕೇಂದ್ರಗಳಷ್ಟು ಹಬ್ಬಿದೆ. ಅದರ ತೆಕ್ಕೆಯಲ್ಲಿ ಇಂಟರ್ ನ್ಯಾಶನಲ್ ವೇದಿಕ್ ಹಿಂದೂ ಯೂನಿವರ್ಸಿಟ (IVHU) ಯುಎಸ್ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್ ಎ, ಇವುಗಳನ್ನು ಹೊಂದಿದೆ.
ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ ಅಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ ಬೆಳವಣಿಗೆಯು ಅಗಾಧವಾಗಿದ್ದು ಬಾಹ್ಯ ಬೆಳವಣೆಗೆಯು ಸ್ವಾ ಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದಂತಹ ವಿವಿಧ ಚಟುವಟೆಕೆಗಳಿಂದ ಅನ್ವೇಷಿಸಲು ಮತ್ತು ವಿಸ್ಪೋಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡು
ಪರಮಾನಂದದ ಜೀವನವನ್ನು ಸೃಷ್ಟಿಸುವಂತಹ ಪರಿಮಾಣಿತ ಆಧ್ಯಾತ್ಮಿಕತೆ (Quantum Spirituality)ಯನ್ನು ಅವು ಪೋಷಿಸುತ್ತವೆ. ಅವು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. ವೈರುಧ್ಯ ಶ್ರೇಣಿಯ ಧ್ಯಾನತಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಚ್ಯುಯಲ್ ಹೀಲಿಂಗ್ ಸಿಸ್ತಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭರತದಲ್ಲಿ ಒಂದು ವರ್ಷ ಅವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ದತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಧೀರ ಸೇವಾ ಸೇನಾ (NDSS)ದ ಆನಂದ ಸೇವಕ್ಸ್ ಎಂಬ ಸ್ವಯಂ ಸೇವಕರು ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡಿದ್ದು ಅತ್ಯುತ್ತಾಹದಿಂದ ಪ್ರಚಾರವನ್ನು ಬೆಂಬಲಿಸುತ್ತಿದೆ.
ಲೈಫ್ ಬ್ಲಿಸ್ ಫೌಂಡೇಶನ್ (Lbf) ನ ಕೊಡುಗೆ
ದೇಹ, ಮನಸ್ಸು ಮತ್ತು ಆತ್ಮದ ಹಂತದಲ್ಲಿ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವೈಶಿಷ್ಟ್ಯ ಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು :
Lbp ಹಂತ 1 – ಲೈಫ್ ಬ್ಲಿಸ್ ಪ್ರೋಗ್ರಾಂ
ನಿಮ್ಮನೇ ನೀವು ಸಚೇತನಗೊಳಿಸಿಕೊಳ್ಳಿ
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಅದು ನಿಮ್ಚು ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳುವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ದಿಕ ತಿಳುವಳಿಕೆಯನ್ನು ನೀಡುವುದು. ಅದು ಬೌದ್ದಿಕ ಹಂತದಲ್ಲಿ ಆಧ್ಯಾತ್ಮಿಕತೆಯ ಪರಿಣಾವುವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮದೇ ಆತ್ಮಾನಂದದ ವಾಸ್ತವಿಕತೆಯನ್ನು ಅನುಭವಿಸಲು ಇರುವ ಒಂದು ಖಿಚಿತವಾದ ಜೀವನ ಪರಿಹಾರ. ಆದೊಂದು ಪ್ರಪಂಚದಾದ್ಯಂತ ಜನರಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದ ಕಾರ್ಯಾಗಾರವಾಗಿದೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAMರ ಪುಸ್ತಕಗಳು 23 ಭಾಷೆಗಳಲ್ಲಿ ಲಭ್ಯವಾಗಿವೆ.
Part 2: Nithya Dhyaan - Experience Bliss_Kannada_part_2.md
ಮನೋಭಾವನೆಗಳು ಮತ್ತು ಆಲೋಚನೆಗಳು ನಮ್ಮ ಮನಸ್ಸಿನ ಸಿತಿಗೆ ಮತ್ತು ಮನೋವೃತ್ತಿಗೆ ಹುಟ್ಟು ನೀಡುತ್ತವೆ. ಮನೋಭಾವನೆಗಳು ಮತ್ತು ಆಲೋಚನೆಗಳ ಆಟವನ್ನು ಅರ್ಥಮಾಡಿಕೊಳ್ಳುವುದೇ ಅದನ್ನು ದಾಟಿ ಹೋಗಲು ಮೊದಲ ಹಾಗೂ ಕೊನೆಯ ಹೆಜ್ಜೆಯಾಗಿರುವುದು. ನಿತ್ಯ ಧ್ಯಾನವು 35– ನಿಮಿಷಗಳ ಧ್ಯಾನವಾಗಿದ್ದು ವುನಸ್ಸಿನಿಂದ ಹಿಡಿತರಹಿತರಾಗಿ ಅದನ್ನು ದಾಟಿ ಮುಂದೆಹೋಗಲು THE SUPREME PONTIFF OF HINDUISM BHAGAWAN SRI NITHYANANDA PARAMASHIVAMರಿಂದ ವಿನ್ಯಾಸಗೊಳಿಸಲ್ಪಟ್ಟಿದೆ