1. ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ?
-ಪರಮಹಂಸ ನಿತ್ಯಾನಂದ-
ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ? ('Is Spirituality relevant in our Life?' in Kannada) ಪ್ರಪಂಚದಾದ್ಯಂತ ನಿತ್ಯಾನಂದ ಪಂಥದ ಸ್ವಾಮಿಗಳಿಗೆ ಮತ್ತು ಆನಂದ ಸಮಾಜಿಯರಿಗೆ ನೀಡಲಾದ ಪ್ರವಚನಗಳು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ.ಯ ಒಂದು ವಿಭಾಗ) ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ) © : 2007 ಮೊದಲನೇ ಆವೃತ್ತಿ : ಡಿಸೆಂಬರ್ 2007 Ebook ISBN: 979-8-88572-467-8 ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಈ ಪ್ರಕಟಣೆಯ ಯಾವುದೇ ಭಾಗವನ್ನು ನಕಲು ಮಾಡುವುದಾಗಲೀ ಅಥವಾ ಮರಳಿ ಹೊಂದುವಂತಹ ವ್ಯವಸ್ಥೆಯಲ್ಲಿ ಸಂಗ್ರಹಿಸುವುದಾಗಲೀ ಅಥವಾ ಯಾವುದೇ ರೂಪದಲ್ಲಿ ಅಥವಾ ಯಾವುದೇ ರೀತಿಯಲ್ಲಿ ಎಲೆಕ್ಟ್ರಾನಿಕ್, ಯಾಂತ್ರಿಕವಾಗಿ, ಫೋಟೋ ಕಾಪಿಯಿಂಗ್, ರಿಕಾರ್ಡಿಂಗ್ ಅಥವಾ ಇನ್ನಿತರ ವಿಧಾನದಲ್ಲಿ ರವಾನಿಸುವುದಾಗಲೀ ಪ್ರಕಾಶಕರ ಲಿಖಿತ ಅನುಮತಿ ಇಲ್ಲದೆ ಮಾಡಕೊಡದು. ಒಂದು ವೇಳೆ ನೀವು ಈ ಪ್ರಕಟಣೆಯ ಯಾವುದೇ ಮಾಹಿತಿಯನ್ನು ನಿಮಗಾಗಿ ಬಳಸಿಕೊಂಡರೆ ಲೇಖಕರಾಗಲೀ ಮತ್ತು ಪ್ರಕಾಶರಾಗಲೀ ನಿಮ್ಮ ಕೃತ್ಯಗಳಿಗೆ ಹೊಣೆಯನ್ನ ಹೊರುವುದಿಲ್ಲ. ಈ ಪುಸ್ತಕದ ಮಾರಾಟದಿಂದ ಬರುವ ಎಲ್ಲಾ ಆದಾಯವು ಉದಾರಕಾರ್ಯಗಳನ್ನು ಬೆಂಬಲಿಸುವುದಕ್ಕಾಗಿ ವಿನಿಯೋಗವಾಗುತ್ತದೆ. ಭಾರತದಲ್ಲಿ ಮುದ್ರಣ: ಆದಿತ್ಯ ಪ್ರಿಂಟರ್ಸ್, ದೂ: 2660 6776
- ಪರಮಹಂಸ ನಿತ್ಯಾನಂದ - ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ? ಪ್ರ. ಇಂದಿನ ಸಮಾಜಕ್ಕೆ ಮೆಡಿಟೇಷನ್ (ಧ್ಯಾನದ ಅಭ್ಯಾಸ) ಹೇಗೆ ಲಾಭದಾಯಕವಾಗಿರುವುದು? ಯಾವುದೇ ಕಾಲವಾಗಿರಲಿ, ಯಾವುದೇ ಯುಗವಾಗಿರಲಿ, ಜೀವನದಲ್ಲಿ ಮಾನವನಿಗೆ ಯಾವುದರ ಅವಶ್ಯಕತೆ ಇದೆ? ಶಾರೀರಕಶಕ್ತಿ, ಮಾನಸಿಕಶಕ್ತಿ, ಆತ್ಮಶಕ್ತಿ ಮತ್ತು ಕ್ಷೇಮ ಅಲ್ಲವೆ? ಶಾರೀರಕ ಕ್ಷೇಮದಿಂದ ನಮಗೆ ರೋಗಗಳಿಂದ ಬಿಡುಗಡೆ ಆಗುವುದು ಮತ್ತು ಆದರಿಂದ ನಾವು ನಮ್ಮ ದಿನಪ್ರತಿ ಚಟುವಟಿಕೆಗಳನ್ನು ಏನೂ ಸಮಸ್ಯೆ ಇಲ್ಲದೆ ಸುಲಭವಾಗಿ ನಡೆಸಿಕೊಂಡು ಹೋಗುವ ರೀತಿಯಲ್ಲಿ ನಮ್ಮ ದೇಹವನ್ನು ಕಾಪಾಡುವುದು. ಮಾನಸಿಕ ಶಕ್ತಿಯು ನಮ್ಮ ಮನಸ್ಸಿಗೆ ಶಾಂತಿ ಮತ್ತು ಸಮಚಿತ್ತವನ್ನು ನೀಡುವುದು ಮತ್ತು ನಮ್ಮ ಜೀವನವನ್ನು ಸಂಪೂರ್ಣವಾಗಿ ಮತ್ತು ಆನಂದವಾಗಿ ಜೀವಿಸಲು ಸಹಾಯ ಮಾಡುವುದು. ಆತ್ಮ ಬಲದಿಂದ ನಾವು ಇವರಡರನ್ನೂ ಮೀರಿ ಮುಂದಕ್ಕೆ ಹೋಗಬಲ್ಲೆವು. ಆತ್ಮ ಬಲದಿಂದ ನಮ್ಮಲ್ಲಿ ಒಂದು ಕರುಣೆಯ ಭಾವನೆ ಉದ್ಭವಾಗುವುದು. ಒಂದು ತ್ಯಾಗದ ಭಾವನೆ, ಒಂದು ಸಮಾಜ ಸೇವೆಯ ಭಾವನೆ. ಶಾರೀರಿಕ ಮತ್ತು ಮಾನಸಿಕ ಬಲವು ಒಬ್ಬ ವ್ಯಕ್ತಿಯ ಕ್ಷೇಮಕ್ಕೆ ಮತ್ತು ಅವನ ಜೀವನವು ಸುಲಭವಾಗಿ ಮುಂದುವರಿಯುವುದಕ್ಕೆ ಅವಶ್ಯಕವಾಗಿರಬಹುದು. ಆದರೆ ಆತ್ಮಬಲವು ಸಮಾಜದ ಮತ್ತು ಮಾನವಕುಲದ ಯೋಗಕ್ಷೇಮಕ್ಕೆ ಮತ್ತು ಮುಂದೆ ವರಿಯುವಿಕೆಗೆ ಅಗತ್ಯ. ಮಾನವನಿಗೆ ಕೇವಲ ಶಾರೀರಕ ಶಕ್ತಿ ಇದ್ದರೆ ಅವನು ಒಬ್ಬ ಲಕ್ಷಣದ ಅಥವಾ ರೌಡಿ ಆಗಿ ಸಮಾಜಕ್ಕೆ ಕಾಟ ಕೊಡಬಹುದು. ಅವನಿಗೆ ಆತ್ಮಬಲ ಇಲ್ಲದ ಕೇವಲ ಶಾರೀರಕ ಮತ್ತು ಮಾನಸಿಕ ಶಕ್ತಿ ಇದ್ದರೆ ಅವನು ಅವನ ಚಾತುರ್ಯವನ್ನು ತಪ್ಪು ಕೆಲಸಕ್ಕೆ ಉಪಯೋಗಿಸಿ, ಅಪರಾಧಿ ಆಗ ಸಮಾಜಕ್ಕೆ ಅಪಾಯಕಾರಿ ಆಗಬಹುದು. ಮನುಷ್ಯನಲ್ಲಿ ಈ ಮೂರು ಶಕ್ತಿಗಳು ಕೂಡಿಕೊಂಡಾಗ ಮಾತ್ರ ಅವನು ಒಂದು ಸಂಪೂರ್ಣ ವ್ಯಕ್ತಿಯಾಗಿ ವಿಕಾಸವಾಗುತ್ತಾನೆ. ಅವನು ಸಮಾಜದ ಮತ್ತು ಈ ಪ್ರಪಂಚದ ಒಳ್ಳೆಯದಾಗುವ ರೀತಿಯಲ್ಲಿ ಪರಿಣಮಿಸುತ್ತಾನೆ. ಧ್ಯಾನವು (ಮೆಡಿಟೇಷನ್) ಒಂದೇ ಈ ಎಲ್ಲಾ ಶಕ್ತಿಗಳನ್ನು ಬಿಡುಗಡೆ ಮಾಡುವ ಮಾಸ್ಟರ್ ಕೀ (master key - ಅನೇಕ ಬೀಗಗಳನ್ನು ತೆರೆಯುವ ಕೀಲಕೈ). ಮೆಡಿಟೇಷನ್‍ನ ಶರೀರದ ಮೇಲಿರುವ ಅದ್ಭುತವಾದ ಪ್ರಭಾವ ಈಗ ಚೆನ್ನಾಗಿ ಗೊತ್ತಿರುವ ವಿಷಯ. ಮೆಡಿಟೇಷನ್‍ನಿಂದ B.P. ಡಯಾಬಿಟೀಸ್ ಮತ್ತು ಬೇರೆ 2 ಸುಮಾರು ರೋಗಗಳನ್ನು ಗುಣಪಡಿಸಲು ಸಾಧ್ಯ. ಸುಮಾರು ಜನರು ವಿವಿಧ ತರಹದ ನೋವುಗಳನ್ನು ಮೆಡಿಟೇಷನ್ ಮೂಲಕ ಪರಿಹರಿಸಿಕೊಂಡಿದ್ದಾರೆ. ಪ್ರಪಂಚದ ಬುದ್ಧಿಜೀವಿಗಳೂ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಮೆಡಿಟೇಷನ್ ನಿಂದ ನಿಮ್ಮ ಚಕ್ರಗಳನ್ನು ಶುದ್ಧೀಕರಿಸಿಕೊಳ್ಳಬಹುದು. ಚಕ್ರಗಳ ವಿಷಯ ಕೇಳಿದ್ದೀರಾ? ನಮ್ಮ ದೇಹದಲ್ಲಿ ನಮ್ಮ ಎಲ್ಲಾ ಶಾರೀರಕ, ಮಾನಸಿಕ ಮತ್ತು ಭಾವನಾತ್ಮಕ ಚಟುವಟಿಕೆಗಳನ್ನು ಪಾಲಿಸುತ್ತಿರುವ ಏಳು ಸೂಕ್ಷ್ಮವಾದ ಎನರ್ಜಿ ಕೇಂದ್ರಗಳಿವೆ. ಈ ಚಕ್ರಗಳು ಒಂದಕ್ಕೊಂದು ಹೊಂದಿಕೊಂಡು ಕೆಲಸ ಮಾಡುತ್ತಿದ್ದರೆ ತಾನೆ, ನಮಗೆ ಶಾರೀರಕ ಯೋಗಕ್ಷೇಮದ ತಿಳಿಯುವಿಕೆಗೆ ಇರುವುದು. ಮೆಡಿಟೇಷನ್ ಮೂಲಕ ಈ ವಿವಿಧ ಚಕ್ರಗಳು ಹೊಂದಿಕೆಯಿಂದ ಕೆಲಸ ಮಾಡುವುದು, ಸ್ವಚ್ಛಗೊಳ್ಳುವುದು ಮತ್ತು ನಿಮ್ಮ ಶರೀರವನ್ನು ರೋಗಗಳಿಂದ ಮುಕ್ತ ಮಾಡುವುದು. ಮಾನಸಿಕ ಸ್ಥರದಲ್ಲಿ ಮೆಡಿಟೇಷನ್ ಮನಸ್ಸನ್ನು ಡಿಪ್ರೆಷನ್ (depression) ಅಥವಾ ಖಿನ್ನತೆಯಿಂದ ಬಿಡುಗಡೆ ಮಾಡುವುದು. ಇದರಿಂದ ನಾವು ಇನ್ನೂ ಹೆಚ್ಚಾದ ಮನಸ್ಸಿನ ಸ್ಪಷ್ಟೆಯನ್ನು ಗಳಿಸಬಹುದು. ಮತ್ತು ನಮ್ಮ ವ್ಯಕ್ತಿಗತ ಜೀವನ ಹಾಗೂ ಈ ಸಮಾಜದ ಆಂಶವಾಗಿಯೂ ಒಂದು ಸಂಪೂರ್ಣವಾದ, ಪರಿಪೂರ್ಣವಾದ ಜೀವನವನ್ನು ಜೀವಿಸುವುದಕ್ಕೆ ಮೆಡಿಟೇಷನ್ ಮಾರ್ಗದರ್ಶಿಯಾಗಿರುವುದು. ಮೆಡಿಟೇಷನ್ ನೀಡುವ ಮಾನಸಿಕ ಸ್ವಷ್ಟತೆ ಮತ್ತು ಶಾರೀರಕ ಕ್ಷೇಮದಿಂದ ನಾವು ನಮ್ಮ ಸಮಯವನ್ನು , ನಮ್ಮ ಎನರ್ಜಿಯನ್ನು ಇನ್ನೂ ಉತ್ತಮವಾಗಿ ಮತ್ತು ಸಂಪೂರ್ಣವಾಗಿ ಉಪಯೋಗ ಮಾಡಿಕೊಳ್ಳಬಹುದು. ಇದರಿಂದ ನಮ್ಮ ಭೌತಿಕ ಸೌಲಭ್ಯಗಳನ್ನೂ (material comforts) ಪಡೆಯುವ ಸಾಧ್ಯತೆಯೂ ಹೆಚ್ಚಾಗುವುದು. ಹೀಗೆ ಧ್ಯಾನವು ನಮ್ಮ ಆತ್ಮಶಕ್ತಿಯನ್ನು ಹೊರಹೊರಡಿಸಿ, ಒಂದು ಸಂಪೂರ್ಣವಾದ ಶಾಂತಿಯನ್ನು ನಮ್ಮೊಳಗೆ ಉಂಟು ಮಾಡುವುದು. ಈ ಆನಂದದ ವಿಕಸನವು ನಮ್ಮೊಳಗೆ ಆದಾಗ ನಾವು ಅದನ್ನು ಸಮಾಜದಲ್ಲಿ ಹರಡಲು ಇಚ್ಛಿಸುತ್ತೇವೆ. ಈ ಮೂರು ಶಕ್ತಿಗಳನ್ನು ನೀಡುವ ಒಂದೇ ಮಾರ್ಗ - ಮೆಡಿಟೇಷನ್! ಹೀಗೆ ಮೆಡಿಟೇಷನ್ ನಮಗೆ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥರಗಳಲ್ಲಿ ಲಾಭದಾಯಕವಾಗಿರುವುದು. ಅದು ನಮ್ಮ ಸಾಂಸಾರಿಕ ಮತ್ತು ಸಾಮಾಜಿಕ ಜೀವನದ ಸೌಖ್ಯವನ್ನು ಹೆಚ್ಚಿಸುವುದು ಮತ್ತು ಆಧ್ಯಾತ್ಮ ಜೀವನದ ಕಡೆಗೆ ಹೊರಡಿಸುವುದು. ಅನೇಕ ವರ್ಷಗಳ ಕಾಲದಿಂದ ದೊಡ್ಡ ದೊಡ್ಡ ಜ್ಞಾನಿಗಳು ತಿಳಿದುಕೊಂಡಿರುವುದು ಒಂದು ಅಮೂಲ್ಯವಾದ ಸತ್ಯ. ಪ್ರ. ಹೆಚ್ಚು ಜನರು ನಿಮ್ಮಲ್ಲಿ ‘ಹೀಲಿಂಗ್’ ಗಾಗಿ ಬರುತ್ತಾರೆ ಹೊರತು ಮೆಡಿಟೇಷನ್‌ಗಾಗಿ ಬರುತ್ತಾರೆಯಿಲ್ಲ? ನಿಜ. ‘ಹೀಲಿಂಗ್’ ನನ್ನ ‘ವಿಸಿಟಿಂಗ್ ಕಾರ್ಡ್’ (Visiting Card) ಅಂತ ಹೇಳಬಹುದು. ನನ್ನ ನಿಜವಾದ ಸಂದೇಶವು - ‘ಮೆಡಿಟೇಷನ್’. ನಿಮಗೆ, ನಾನು ಮೆಡಿಟೇಷನ್ ನಿಮ್ಮನ್ನು ಸರ್ವೋತ್ತಮೃಷ್ಟ ಸತ್ಯಕ್ಕೆ ಕರೆದುಕೊಂಡು ಹೋಗುವುದು ಎಂದು ಹೇಳಿದರೆ ನಿಮಗೆ ನಾನು ಸಾಕ್ಷಿ ಕೊಡಬೇಕು ಅಲ್ಲವೆ? ಅದಕ್ಕೆ ನಾನು ಹೀಲಿಂಗ್‌ಗೆ ಉತ್ತೇಜನ ಕೊಡುವೆನು. ಹೀಲಿಂಗ್‌ನ ಅದ್ಭುತ ಪವಾಡವು ಜನರನ್ನು ನನ್ನ ಕಡೆ ಸೆಳೆಯುವುದು ಮತ್ತು ಅವರು ಈ ಮಾರ್ಗದ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ಬಯಸುತ್ತಾರೆ. ಇಲ್ಲದಿದ್ದರೆ ಜನರನ್ನು ಆಧ್ಯಾತ್ಮದ ಮಾರ್ಗಕ್ಕೆ ಸೆಳೆಯುವುದು ಆಷ್ಟು ಸುಲಭ ಎಂದುಕೊಂಡಿದ್ದೀರಾ ? ನನ್ನ ಬಳಿ ಸಾವಿರಾರು ಜನ ಹೀಲಿಂಗ್‌ಗೆ ಬರುವವರಲ್ಲಿ ಕೇವಲ ಸ್ವಲ್ಪ ಜನ ಕೂಡ ಧ್ಯಾನ ಮತ್ತು ಆಧ್ಯಾತ್ಮದ ಮಾರ್ಗಕ್ಕೆ ಬಂದರೆ ನನ್ನ ಉದ್ದೇಶವು ಪೂರ್ಣವಾಗುವುದು. ಹೀಗೇ ಆಗುತ್ತಾ ಇದೆ. ಹೀಗೇ ಆಗುತ್ತಾ ಇದೆ. ಪ್ರಪಂಚದಲ್ಲಿ ಎಲ್ಲಾ ಕಡೆ ಮೆಲ್ಲನೆ ಹೀಗೆ ಆಗುತ್ತಾ ಇದೆ. ಪ್ರ. ಬಹಳ ಗುರುಗಳು ಮೆಡಿಟೇಷನ್‌ಗೆ ಪ್ರಾಮುಖ್ಯತೆ ಕೊಡುತ್ತಾರೆ. ನಿಮ್ಮ ಧ್ಯಾನ ಪದ್ಧತಿಗಳಲ್ಲಿ ಏನು ವಿಶೇಷವಾಗಿರುವುದು? ನನ್ನ ಅಭಿಪ್ರಾಯದಲ್ಲಿ ಯಾವುದೇ ಒಂದು ಧ್ಯಾನ ಪದ್ಧತಿಯನ್ನು ವಿಶೇಷವಾಗಿ ಉತ್ತೇಜಿಸುವ ಅವಶ್ಯಕತೆ ಇಲ್ಲ. ನಾನು ಕೇವಲ ಮೆಡಿಟೇಷನ್ ತತ್ವವನ್ನು ಪ್ರಚಾರ ಮಾಡುತ್ತೇನೆ. ನನ್ನ ಮಾತು ಕೇಳಿ ಹೆಚ್ಚು ಹೆಚ್ಚು ಜನರಿಗೆ ಧ್ಯಾನದ ಸಾಧನೆ ಮಾಡುವುದಕ್ಕೆ ಪ್ರೇರಣೆ ಆದರೆ ಅಷ್ಟೇ ಸಾಕು, ಅದು ಬಹಳ ಒಳ್ಳೆಯ ಶಕುನ. ಅವರಿಗೆ ಹಿತಕರವಾಗಿದ್ದ ಯಾವುದೇ ಪದ್ಧತಿ ಆದರೂ ಸರಿ. ಆದರೆ ನೀವು ನನ್ನ ಧ್ಯಾನ ಪದ್ಧತಿಯ ಬಗ್ಗೆ ಕೇಳಿದರೆ ನಾನು ಇಷ್ಟು ಹೇಳಬಲ್ಲೆ. ಅದು ನಮ್ಮ ಒಳಗಿನ ಎನರ್ಜಿಗಳನ್ನು ಅಥವಾ ಶಕ್ತಿಗಳನ್ನು ಸಮತೋಲನಗೊಳಿಸುವ ಒಂದು ಪದ್ಧತಿ. ವಿಶ್ವವನ್ನೇ ವ್ಯಾಪಕವಾಗಿ ಸುತ್ತುಗಟ್ಟಿರುವ, ಸೂರ್ಯನನ್ನು ಚಂದ್ರನನ್ನು ಗ್ರಹಗಳನ್ನೆಲ್ಲ ಚಲಿಸುತ್ತಿರುವ ಒಂದು ಶಕ್ತಿ ಇರುವುದು. ನಾವು ಈ ವಿಶ್ವ ಶಕ್ತಿಯ (ಎನರ್ಜಿಯ) ಅಂಶವಾಗಿರುವೆವು. ಆದರೆ ನಾವು ಅದನ್ನು ಗ್ರಹಿಸಿಲ್ಲ - ನಾವು ಅದನ್ನು ಮರೆತುಬಿಟ್ಟಿದ್ದೇವೆ. ನನ್ನ ಈ ಮೆಡಿಟೇಷನ್ ಪದ್ಧತಿಯು ನಿಮ್ಮನ್ನು ಈ ಎನರ್ಜಿ ಅಥವಾ ಶಕ್ತಿಯೊಡನೆ ಸಂಪರ್ಕಿಸಲು ಸಹಾಯ ಮಾಡುವುದು. ಪ್ರ. ಮೆಡಿಟೇಷನ್ ಪದ್ಧತಿಗಳು ಎಷ್ಟೋಂದು ಇರುವುದರಿಂದ ನಮ್ಮಲ್ಲಿ ಗಲಿಬಿಲಿ ಉಂಟಾಗಿದೆ. ಪ್ರತಿ ಒಂದು ಗುಂಪು ಅದರ ಪದ್ಧತಿಯನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತಾ ಇರುವುದು. ನಮಗೆ ಯಾವ ಪದ್ಧತಿ ಉತ್ತಮವಾದುದು ಎಂದು ಹೇಗೆ ಗೊತ್ತಾಗುವುದು? ನನ್ನಸಲಹೆ ಏನಂದರೆ ನೀವು ಕಂಡಿರುವ ಪದ್ಧತಿಗಳಲ್ಲೆಲ್ಲ ಪ್ರಯತ್ನಿಸಿ ನೋಡಿ. ಎಲ್ಲರೂ ಒಂದು 4-5 ಪದ್ಧತಿಗಳನ್ನಾದರೂ ಪ್ರಯತ್ನಿಸಿ ನೋಡಬೇಕು. ಎಲ್ಲಾ ಧರ್ಮ ಗುರುಗಳ ಬೋಧನೆಯಲ್ಲೂ ಸತ್ಯದ ಕಿಡಿ ಖಂಡಿತ ಇರುವುದುದು-ಇಲ್ಲದಿದ್ದರೆ ಅವರು ಗುರುಗಳಾಗಿ ಬರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಬೇರೆ ಬೇರೆ ಗುರುಗಳು ಒಂದು ಸತ್ಯವನ್ನು ಬೇರೆ ಬೇರೆ ರೀತಿಯಲ್ಲಿ ಪ್ರವಚನ ಮಾಡುತ್ತಾರೆ- ಹಾಗು ಒಬ್ಬೊಬ್ಬರಿಗೂ ಬೇರೆ ಬೇರೆ ಮಾನಸಿಕ ಸ್ವಭಾವ ಇರುವುದು. ಇದರ ಪ್ರಕಾರ ಒಬ್ಬೊಬ್ಬರಿಗೆ ಒಬ್ಬೊಬ್ಬ ಗುರುಗಳ ಮಾತು ಹೆಚ್ಚು ಹಿಡಿಯುತ್ತದೆ. ಅದಕ್ಕೆ ಬೇರೆ ಬೇರೆ ಮೆಡಿಟೇಷನ್ ಪದ್ಧತಿಗಳನ್ನು ಪ್ರಯತ್ನಿಸಿ ನೋಡಿ. ಯಾವ ಪದ್ಧತಿಯು ನಿಮಗೆ ಎಲ್ಲಕ್ಕಿಂತ ಹೆಚ್ಚು ಶಾಂತಿಯನ್ನು ಮತ್ತು ಸ್ವಷ್ಟ ತಿಳುವಳಿಕೆಯನ್ನು ನೀಡುವುದೋ, ಆ ಪದ್ಧತಿಯನ್ನು ಅನುಸರಿಸಿ ಬೇರೆ ಎಲ್ಲಾ ಪದ್ಧತಿಗಳನ್ನು ಮರೆತು ಬಿಡಿ. ಪ್ರ. ಈ ಪ್ರಪಂಚದಲ್ಲಿ ಇರುವ ಬಹಳ ಸಮಸ್ಯೆಗಳ ಪರಿಹಾರ ಆಗಿಲ್ಲ. ಆಧ್ಯಾತ್ಮದಿಂದ ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು? ಯಾವುದೇ ಸಮಸ್ಯೆ ಇರಲಿ ಅದನ್ನು ಪರಿಹರಿಸಲು ಪ್ರಯತ್ನಿಸುವುದಕ್ಕೆ ಪ್ರಾರಂಭ ಮಾಡಲೇಬೇಕು. ದೃಢ ಸಂಕಲ ಮತ್ತು ವಿಶ್ವಾಸ - ಇವುಗಳೇ ಮೊದಲನೆಯ ಹೆಜೆ. 8 ಪ್ರ. ಆದರೆ ನನ್ನ ಅರ್ಥ ನಮ್ಮ ವ್ಯಕ್ತಿಗತ ಸಮಸ್ಯೆಗಳಲ್ಲ. ಮೊಡ್ಡ ಮೊಡ್ಡ ಸಾಮಾಜಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು? ಆಧ್ಯಾತ್ಮ ಕೇವಲ ಒಂದು ವ್ಯಕ್ತಿಗತ ವಿಷಯವಲ್ಲ. ಸಾಮಾಜಿಕ ಸ್ತರದಲ್ಲಿಯೂ ಅದರ ಪರಿಣಾಮ ಖಂಡಿತ ಇರುವುದು. ಆಧ್ಯಾತ್ಮ ಕೇವಲ ಧ್ಯಾನವಲ್ಲ, ಅದು ಕರುಣೆ ಮತ್ತು ಸಮಾಜ ಸೇವೆಯೂ ಆಗಿರುವುದು. ವಿವೇಕಾನಂದರು ಸುಂದರವಾಗಿ ಹೇಳಿದ್ದಾರೆ “ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯಚ”, ಎಂದು. ಜ್ಞಾನೋದಯವನ್ನು ನಾವು ಪಡೆದರೂ ಅದನ್ನು ಮಾನವಕುಲದ ಸೇವೆಗೆ ಬಳಸಿದರೆ ಮಾತ್ರ ಅದು ನಿಜವಾದ ಆಧ್ಯಾತ್ಮ ಇಲ್ಲದಿದ್ದರೆ ಅದು ಕೇವಲ ಅರ್ಥ ಆಧ್ಯಾತ್ಮ - ಅದು ಹೇಗೆ ಅಂದರೆ, ಅದು ನಾಸ್ತಿಕತೆಗೆಿಂತ ಹೆಚ್ಚು ಗಲಿಬಿಲಿ ಉಂಟು ಮಾಡುವಂಥದು. 9 ಪ್ರ. ಏನೂ ಅಪೇಕ್ಷೆ ಇಲ್ಲದೆ ಇರುವುದೇ ನಿಜವಾದ ಆಧ್ಯಾತ್ಮದ ಅರ್ಥವೇ? ಇಲ್ಲ-ಹಾಗೆ ಅಂದುಕೊಳ್ಳುವುದು ಆಧ್ಯಾತ್ಮವನ್ನು ತಪ್ಪು ದೃಷ್ಟಿಯಿಂದ ನೋಡುವುದು. ಅಪೇಕ್ಷೆಗಳನ್ನು ಕಮ್ಮಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಒಳಗಿನ ಚೈತನ್ಯವನ್ನು ಅಪೇಕ್ಷೆಗಳನ್ನು ಪೂರೈಸುವುದಕ್ಕೆ ಉಪಯೋಗ ಮಾಡಿಕೊಳ್ಳುವುದು ಇನ್ನೂ ಲಾಭದ ವಿಷಯ. ೧೦ ಪ್ರ. ಆದರೆ ಆಧುನಿಕ ಜೀವನದಲ್ಲಿ ಅಪೇಕ್ಷೆಗಳು ಮತ್ತು ನಿರೀಕ್ಷಣೆಗಳು ತುಂಬ ಇರುವುದು. ಇದನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು? ಅಪೇಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವುದು ಜೀವನದ ಸಂಪತ್ತನ್ನು, ಜೀವನದ ರಂಗು ರಂಗನ್ನು ಕಡಿಮೆ ಮಾಡುವ ಹಾಗೆ. ನಾನು ಹೇಳಿದಂತೆ ನಿಮ್ಮ ಅಪೇಕ್ಷೆಗಳನ್ನು ಪೂರೈಸುವ ಶಕ್ತಿ ನಿಮ್ಮೊಳಗೆ ನಿರ್ಮಿಸುವುದು ಇನ್ನೂ ಮುಖ್ಯವಾದ ವಿಷಯ. ಅಪೇಕ್ಷೆ ಪಡುವುದು ತಪ್ಪಲ್ಲ, ಆದರೆ ಅದನ್ನು ಪೂರೈಕೆ ಮಾಡುವುದಕ್ಕೆ ನೀವು ಕೆಲಸ ಮಾಡಬೇಕು. ನಿಮ್ಮ ಇಚ್ಛೆಯು ಭೌತಿಕವೇ ಆಗಿರಲಿ, ನೀವು ಒಂದು ಬೆಂಝ್ (Benz) ಕಾರನ್ನೇ ಪಡೆಯುವುದಕ್ಕೆ ಆಸೆಪಟ್ಟರೂ ತಪ್ಪಿಲ್ಲ. ನಿಮ್ಮ ಭೌತಿಕವಾದ ಇಚ್ಛೆಗಳನ್ನೂ ಕೂಡ ಪೂರೈಸುವುದಕ್ಕೆ ಧ್ಯಾನವು ನಿಮಗೆ ಶಕ್ತಿಯನ್ನು ನೀಡುವುದು. ಪ್ರ. ಒಂದು ತೃಪ್ತಿಕರ ಮತ್ತು ಇಚ್ಛಾರಹಿತ ಜೀವನ ಜೀವಿಸುವ ಬದಲು ನಾವು ನಮ್ಮ ಇಚ್ಛೆಗಳನ್ನು ಬೆಳೆಸಿಕೊಂಡೇ ಹೋಗುತ್ತಾ ಇರುವುದು ಸರಿಯೇ? ಆಧ್ಯಾತ್ಮ ಜೀವನವೂ ಮತ್ತು ತೃಪ್ತಿಕರ ಜೀವನವೂ ಒಂದೇ ಎಂದು ಎಂದಿಗೂ ತಿಳಿದುಕೊಳ್ಳಬೇಕು. ಸತ್ವ ಮತ್ತು ತಮಸ್ಸು ಹೊರಗಿನಿಂದ ಒಂದೇ ರೀತಿ ಕಾಣಿಸುವುದು. ಸಾದಾರಣವಾದ ಬಟ್ಟೆ ಧರಿಸಿ ಚಾಪೆಯ ಮೇಲೆ ಕುಳಿತವರು ಬಹಳ ತುಷ್ಣನಾಗಿ ಮತ್ತು ಸಾತ್ವಿಕರಾಗಿ ಇರುವರು ಎಂದು ಅಂದೂಂದಿದ್ದೀರಾ ? ಅದು ಅವರು ಕೇವಲ ಹೊರನೋಟಕ್ಕೆ ತೋರಿಸಿಕೊಳ್ಳುತ್ತಾ ಇರಬಹುದು. ಅಥವಾ ಅವರಿಗೆ ಸಾಕಷ್ಟು ಚೈತನ್ಯ ಇಲ್ಲದೆ ಇರುವುದರಿಂದ, ಇರುವುದನ್ನೇ ಸರಿ ಹೊಂದಿಸಿಕೊಂಡು ಇರಬಹುದು. ಕೇವಲ ಸರಿ ಹೊಂದಿಸಿಕೊಳ್ಳುವುದು ಮತ್ತು ಸಂತುಷ್ಟವಾಗಿರುವುದು, ನೋಡುವುದಕ್ಕೆ ಒಂದೇ ರೀತಿ ಕಾಣಿಸುವುದು. ಆದರೆ ಖಂಡಿತ ಇವರದೂ ಒಂದೇ ಅಲ್ಲ. ೧೨ ಪ್ರ. ಎಷ್ಟು ಇದೆಯೋ ಆಷ್ಟರಲ್ಲಿ ಸಂತೋಷವಾಗಿರುವುದು ಮನಸ್ಸಿನ ಸ್ವಭಾವವಾಗಿದ್ದರೆ? ಈ ರೀತಿಯ ಮನಸ್ಸು ಆಧ್ಯಾತ್ಮದಿಂದ ಪರಿಣಾಮವಾಗಿರುವ ಒಳ ಬೆಳೆ ಅಥವಾ ಉಪಪದಾರ್ಥಗಳಾಗಿರುವುದೇ ಹೊರತು, ಅದು ನಿಮ್ಮನ್ನು ಆಧ್ಯಾತ್ಮದ ಕಡೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಸಂತುಷ್ಟ ಮನೋಭಾವವನ್ನು ಕಲಿತುಕೊಂಡು ಅದನ್ನು ಆಧ್ಯಾತ್ಮದ ಕಡೆಗೆ ಹೋಗುವುದಕ್ಕೆ ಮೆಟ್ಟುಕಲ್ಲಾಗಿ ಬಳಸಲು ಸಾಧ್ಯವಿಲ್ಲ. ಜನರು ನಿಮಗೆ ಸಂತುಷ್ಟರಾಗಿ ಇರುವುದನ್ನು ಕಲಿತುಕೊಳ್ಳುವುದಕ್ಕೆ ಉಪದೇಶ ಕೊಡುತ್ತಾರೆ. ಚೆನ್ನಾಗಿ ತಿಳಿದುಕೊಳ್ಳಿ, ನೀವು ಸಂತುಷ್ಟರಾಗಿ ಇರುವುದನ್ನು ಕಲಿತುಕೊಳ್ಳುವುದಕ್ಕೆ ಆಗುವುದಿಲ್ಲ, ನೀವು ಆ ಮನೋಭಾವವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ ಕೇವಲ ಆಧ್ಯಾತ್ಮ ಮತ್ತು ಧ್ಯಾನದ ಸಹಜವಾದ ಪರಿಣಾಮವಾಗಿ ಮಾತ್ರ, ನಿಮ್ಮೊಳಗೆ ಸಂತುಷ್ಟ ವಿಕಸನ ಆಗುವುದು. ಮೆಡಿಟೇಷನ್‍ನ ಮೂಲಕ ನಿಮ್ಮೊಳಗೆ ಒಂದು ಆಗಾಥವಾದ ತೃಪ್ತಿಯ ಅನುಭವಾಗುವುದು - ಇದರ ಪರಿಣಾಮವಾಗಿ ಮಾತ್ರ. ನೀವು ಎಷ್ಟು ಇದೆಯೋ ಆಷ್ಟರಲ್ಲೇ ಸಂತೋಷವಾಗಿರುವ ಮನೋಭಾವವನ್ನು ಹೊಂದುವಿರಿ. ಪ್ರ. ಇತರ ಸಮಕಾಲಿಕ ಸ್ವಾಮಿಗಳ ಜೊತೆ ಹೋಲಿಸಿದರೆ ನೀವು ಹೆಚ್ಚಾಗಿ ಕಾಣುವಿರಿ. ನೀವು ಇದನ್ನು ಒಂದು ಅನಾನುಕೂಲವಾಗಿ ತಿಳಿಯುವಿರಾ? ಯಾವು ವಿಷಯವೂ ಅನುಕೂಲವಾಗಿ ಅಥವಾ ಅನಾನುಕೂಲವಾಗಿ ಇರುವುದಿಲ್ಲ. ಜನರು ಈ ಸಣ್ಣ ಸಣ್ಣ ವಿಷಯಗಳನ್ನು ಲಕ್ಷಿಸುವುದಿಲ್ಲ. ಕೆಟ್ಟದೆಯದಾಗಿ ಅವರಿಗೆ ನನಿಂದ ಯಾವ ರೀತಿ ಅನುಕೂಲ ಅಥವಾ ಅಭಿವೃದ್ಧಿ ಆಗುವುದು ಎಂದು ನೋಡುವರು. ಅಲ್ಲದೇ ಆಧ್ಯಾತ್ಮದಲ್ಲಿ “ಸಾಮಾನ್ಯ ಜೀವನದ ಅನುಭವಕ್ಕೆ” ಏನೂ ಪ್ರಾಮುಖ್ಯತೆ ಇಲ್ಲ. ಚೆನ್ನಾಗಿ ತಿಳಿದುಕೊಳ್ಳಿ, ಈ ಪ್ರಪಂಚದಲ್ಲಿ ಎರಡು ತರಹ ಅನುಭವಗಳು ಇರುವುದು ಒಂದು ಸಾಮಾನ್ಯ ಅನುಭವ, ಇನ್ನೊಂದು ಅನುಭೂತಿ. ಅನುಭವವು ನಮ್ಮ ಜೀವಮಾನದಲ್ಲಿ ಗಳಿಸಿಕೊಳ್ಳುವಂಥದು. ಅದು ಹೇಗೆ ಎಂದರೆ ವಿವಿಧ ರೀತಿ ಬೆಂಕಿಗಳನ್ನು ಪರಿಶೀಲಿಸಿ ನೋಡಿದ ಮೇಲೆ ಬೆಂಕಿ ಸುಡುವುದು ಎಂದು ಗೊತ್ತಾಗುವುದರ ಹಾಗೆ. ಇದು ಅನುಭವ. ಮೊದಲು ಒಂದು ಮರದ ತೊಲೆಯ ಬೆಂಕಿಯನ್ನು ಮುಟ್ಟುವುದು ಸುಡುವುದು ಎಂದು ಗೊತ್ತಾದಮೇಲೆ ಒಂದು ಎಣ್ಣೆಯ ದೀಪವನ್ನು ಮುಟ್ಟುವುದು, ಆಮೇಲೆ ಬೆಂಕಿ ಕಡ್ಡಿಯನ್ನು ಮುಟ್ಟುವುದು. ಇವುಗಳನ್ನೆಲ್ಲ ಪರೀಕ್ಷಿಸಿ ಬೆಂಕಿ ಸುಡುವುದು ಎಂದು ತಿಳಿಯುವವರಲ್ಲಿ ನಮಗೆ ಸ್ಮಶಾನಕ್ಕೆ ಹೋಗುವ ಸಮಯ ಬರುವುದು. ಇದೇ ಅನುಭವ. ನನ್ನ ಅನುಭವವು, ಅನುಭೂತಿ ಎನ್ನಿಸುವುದು. ಮೊದಲನೆಯ ಬೆಂಕಿಯನ್ನು ಪರೀಕ್ಷಿಸಿದಾಗಲೇ ತಿಳುವಳಿಕೆಯು ಆಗುವುದು ಅನುಭೂತಿ - ಎಲ್ಲಾ ಬೆಂಕಿಗಳು ಹೀಗೆ, ಎಲ್ಲಾ ಅಪೇಕ್ಷೆಗಳು ಹೀಗೆ ಎಂದು ಗೊತ್ತಾಗುವುದೇ ಅನುಭೂತಿ. ಈ ಜ್ಞಾನದೃಷ್ಟಿಯೇ ಆಧ್ಯಾತ್ಮ. ಅನುಭವದ ಮಾರ್ಗದಲ್ಲಿ ಹೋದರೆ ನಿಮ್ಮೊಳಗಿನ ವಿವೇಕವು ಅರಳುವುದಕ್ಕೆ ಇಡೀ ಜೀವಮಾನ ಹಿಡಿಸುತ್ತದೆ. ಇದಕ್ಕೆ ವಿರುದ್ಧವಾಗಿ ಅನುಭೂತಿಯಲ್ಲಿ ಕೇವಲ ಅರಿವಿನ ಅವಶ್ಯಕತೆ ಇರುವುದು. ವಯಸ್ಸಿನ ಅವಶ್ಯಕತೆ ಅಲ್ಲ. ಹೀಗೆ, ನನ್ನ ವಯಸ್ಸುನನಗೆ ಅನುಕೂಲವೂ ಅಲ್ಲ ಅನಾನುಕೂಲವೂ ಅಲ್ಲ. ಅದು ಕೇವಲ ಒಂದು ಮಹತ್ವವಿಲ್ಲದ ವಿಷಯ ಅಷ್ಟೆ - ಅದರಲ್ಲಿ ಏನೂ ವಿಶೇಷಇಲ್ಲ. ಪ್ರ. ಪ್ರಪಂಚದಾದ್ಯಂತ ಸೆರೆಮನೆಗಳಲ್ಲಿ ಮೆಡಿಟೇಷನ್‍ನ ಮೂಲಕ ಅಪರಾಧಿಗಳ ಮನಃಪರಿವರ್ತನೆಯನ್ನು ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ನೀವು ಈ ಪ್ರಯತ್ನಗಳನ್ನು ಒಪ್ಪಿಕೊಳ್ಳುವಿರಾ? ಅವಶ್ಯವಾಗಿ, ಖಂಡಿತ ನಾವು ಈ ಪ್ರಯತ್ನಗಳನ್ನು ಮಾಡಬೇಕು. ಈಗಿನ ಜೈಲುಗಳ ಸ್ಥಿತಿ ಹೇಗಿದೆ ಎಂದರೆ ಒಬ್ಬ ಮನುಷ್ಯನು ನೂರು ರೂಪಾಯಿ ಕಳ್ಳತನಕ್ಕೋಸ್ಕರ ಜೈಲಿಗೆ ಹೋಗಿದ್ದರೆ, ಜೈಲಿನಲ್ಲಿ ೧೦ ಲಕ್ಷ ರೂಪಾಯಿಗಳನ್ನು ಕಳ್ಳತನ ಮಾಡುವ ಶಿಕ್ಷಣವನ್ನು ಪಡೆದುಕೊಂಡು ಹೊರಗೆ ಬರುವನು. ಸೆರೆಮನೆಗಳು ನಕಾರಾತ್ಮಕ (negative) ಮನೋಭಾವಗಳ ಕೇಂದ್ರಗಳಾಗಿ ಹೋಗಿವೆ. ಹೇಗೆ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಪದವೀಧರರಾಗಿ ಹೊರಗೆ ಬರುತ್ತಾರೋ, ಹೇಗೆ ಮಠಗಳಿಂದ ಜನರು ಆಧ್ಯಾತ್ಮಿಕರಾಗಿ ಹೊರಗೆ ಬರುತ್ತಾರೋ, ಅದೇ ರೀತಿಯಲ್ಲಿ ಸೆರೆಮನೆಗಳು ಅಪರಾಧಿಗಳನ್ನು ಸನ್ಮಾರ್ಗಕ್ಕೆ ತರುವುದಕ್ಕಿಂತ ಹೆಚ್ಚಾಗಿ ಅವರಿಗೆ ಇನ್ನೂ ಹೆಚ್ಚು ಅಪರಾಧಗಳನ್ನು ಮಾಡುವ ತರಬೇತು ನೀಡುವ ಮಂದಿರಗಳಾಗಿ ಹೋಗಿವೆ. ಖಂಡಿತ ಈ ವಿಷಯದಲ್ಲಿ ಮೆಡಿಟೇಷನ್ ಬಹಳ ಪ್ರಯೋಜನಕರ ವಾಗಿರುವುದು. ಅದು ಏಕೆ ಎಂದರೆ ಕಟ್ಟಕಡೆಯದಾಗಿ ಮನುಷ್ಯನಲ್ಲಿ ಪರಿವರ್ತನೆಯು ಆವನ ಒಳಗಿನಿಂದ ಆಗಬೇಕು. ಸಮಾಜದಲ್ಲಿ ನೀವು ಪರಿವರ್ತನೆಯನ್ನು ಕಾಣುವ ಮುಂಚೆ ಒಬ್ಬೊಬ್ಬ ವ್ಯಕ್ತಿಯಲ್ಲಿಯೂ ಪರಿವರ್ತನೆಯಾಗಬೇಕು. ಅಷ್ಟೇ ಅಲ್ಲ ಮನುಷ್ಯನಲ್ಲಿ ಪಾಪದ ಬೀಜ ಇದ್ದರೆ, ಮೆಡಿಟೇಷನ್ ಅವನಲ್ಲಿ ಪರಿವರ್ತನೆ ಉಂಟು ಮಾಡುವುದು. ಹೀಗೆ ಆಗಿ ಸಮಾಜದಲ್ಲಿ ಅಪರಾಧದ ಪ್ರಮಾಣವೇ ಕಡಿಮೆಯಾಗಿ ಹೋಗುವುದು. ಪ್ರ. 'ಪಾಪ' ಮತ್ತು 'ಪುಣ್ಯ' - ಇವುಗಳ ಅರ್ಥವೇನು? ಯಾವುದು ನಿಮೊಳಿಗೆ ಪ್ರೀತಿ ಮತ್ತು ಆನಂದ ನೀಡುವುದೋ, ಯಾವುದು ನಿಮ್ಮ ವ್ಯಕ್ತಿತ್ವವನ್ನು ವಿಸ್ತರಿಸುವುದೋ, ಯಾವುದರಿಂದ ನಿಮೊಳಗೆ ಬೇರೆಯವರ ಮೇಲೆ ಪ್ರೀತಿ ಮತ್ತು ಕರುಣೆಯ ಭಾವನೆಗಳು ಉಂಟಾಗುವುದೋ, ಅದೇ ಪುಣ್ಯ'. ಯಾವುದು ನಿಮ್ಮನ್ನು ಬೇರೆಯವರಿಂದ ಹಿಮ್ಮೆಟ್ಟಿಸುವುದೋ, ಯಾವುದು ನಿಮ್ಮಲ್ಲಿ ದುಃಖ ಮತ್ತು ಕೊರಗು ಉಂಟು ಮಾಡುವುದೋ, ಅದು 'ಪಾಪ'. 'ಆನಂದ' ನಿಮಗೆ ಸಹಜವಾದದ್ದು. ಯಾವುದು ನಿಮ್ಮನ್ನು ಆನಂದದಿಂದ ದೂರ ಎಳೆದುಕೊಂಡು ಹೋಗುವುದೋ, ಯಾವುದು ನಿಮ್ಮನ್ನು ದುಃಖದಲ್ಲಿ ಸಂಪೂರ್ಣವಾಗಿ ಮುಳುಗಿಸುವುದೋ ಯಾವುದು ನಿಮ್ಮನ್ನು ಬೇರೆಯವರಿಗೆ ನೋವು ಉಂಟು ಮಾಡುವುದರಲ್ಲಿ ಸುಖಿಸುವುದೋ (Sadism), ಯಾವುದರಿಂದನೀವು ನಿಮ್ಮನೇ ಕನಿಕರಿಸುತ್ತೀರೋ ಅದೇ 'ಪಾಪ'. ಪ್ರ. ಆಧ್ಯಾತ್ಮದ ವಿಷಯದಲ್ಲಿ ನಾವು ಬೇರೆಯವರ ಅಭಿಪ್ರಾಯಗಳ ಬಗ್ಗೆ ಯೋಚನೆ ಮಾಡಬೇಕೋ-ಇಲ್ಲವೋ? ನಾವು ಬೇರೆಯವರಿಗೆ ಏನೂ ತೊಂದರೆ ಕೊಡದೆ, ಅವರ ಜೀವನದಲ್ಲಿ ಅವರ ಕೆಲಸದಲ್ಲಿ ಆಡ್ಡ ಬರದೆ ಇದ್ದರೆ ಸರಿ, ನಾವು ಅವರ ಅಭಿಪ್ರಾಯದ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರ. ಜ್ಞಾನೋದಯ ಪಡೆದವರು ಏಕೆ ಸಂಸ್ಥೆಗಳನ್ನು ಸ್ಥಾಪಿಸುತ್ತಾರೆ? ಒಂದು ಕಾಲದಲ್ಲಿ ಈ ಮಾರ್ಗವನ್ನು ಏಕಾಂತದಲ್ಲಿ ಪ್ರಯಾಣ ಮಾಡಲಾಗುತ್ತಿತ್ತು. ಆದರೆ ಇಂದು ಜ್ಞಾನೋದಯದ ಆನಂದವು ಮತ್ತು ಲಾಭವು ಬೇರೆಯವರಲ್ಲೂ ಹರಡುವುದು ನನ್ನ ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ. ನೀವು ಇದು ನಿಜವಾದ ಆಧ್ಯಾತ್ಮ ಅಲ್ಲ ಎಂದು ಹೇಳಬಹುದು - ಆದರೆ ನನ್ನ ಅಗಾಧವಾದ ವ್ಯಕ್ತಿಗತ ಅನುಭವದಿಂದ ವಿವೇಕಾನಂದರು ಉಪದೇಶಿಸಿದಂತೆ ನಿಜವಾದ ಆಧ್ಯಾತ್ಮದ ಗುರಿ ಕೇವಲ ಜ್ಞಾನೋದಯ ಪಡೆಯುವುದಕ್ಕಲ್ಲದೆ ಹೊರತು ಅದರ ಲಾಭಗಳನ್ನು ಬೇರೆಯವರಿಗೂ ಹರಡಬೇಕಾಗಿರುವುದು ಎಂದು ನಾನು ತಿಳಿದಿದ್ದೇನೆ. ಇದಕ್ಕಾಗಿಯೇ ನಾನು ಈ ಜನ್ಮವನ್ನು ಪಡೆದಿದ್ದೇನೆ. ಇದಕ್ಕೋಸ್ಕರ ಏನೇನು ಅವಶ್ಯಕತೆ ಇದೆಯೋ, ಅದು ಸಂಸ್ಥೆಯೇ ಆಗರಲಿ, ನನಗೆ ಅದನ್ನು ಸ್ಥಾಪಿಸಿ ಪಾಲಿಸುವ ಅವಶ್ಯಕತೆ ಇದೆ. ಅರ್ಥವಾಯಿತೇ? ೩೩೩ 20 ಪ್ರ. ಇಂದಿನ ಕಾಲದಲ್ಲಿ ಆಧ್ಯಾತ್ಮ ಸಂಪ್ರದಾಯದ ಪ್ರಾಮುಖ್ಯತೆ ಇಡೆಯೇ? ಖಂಡಿತ ಸದಾಕಾಲಕ್ಕೂ ಆಧ್ಯಾತ್ಮ ಸಂಪ್ರದಾಯದ ಸಂಬಂಧವು ಇರುವುದು - ಎಂದೆಂದಿಗೂ ಇರುವುದು. ಆಧ್ಯಾತ್ಮ ಸಂಪ್ರದಾಯವಿಲ್ಲದೆ ಇವತ್ತು ನಮ್ಮ ದೇಶದ ಸ್ಥಿತಿ ಏನಾಗಿರುವುದು? ನೂರಾರು ವರ್ಷಗಳಿಂದ ಇದು ನಮ್ಮ ಸಂಸ್ಕೃತಿಯನ್ನು ಕಾಪಾಡುತ್ತಾ ಬಂದಿದೆ - ಸಂಸ್ಕೃತಿ ಮತ್ತು ಧರ್ಮಗ್ರಂಥಗಳಿಂದ ಹಿಡಿದು, ಭರತನಾಟ್ಯ ಮತ್ತು ಕಲಾಚಾರ, ಆಯುರ್ವೇದ ಮತ್ತು ಸಿದ್ಧ ಧರ್ಮ ಮತ್ತು ಆಧ್ಯಾತ್ಮದವರೆಗೆ ಕೆಲವು ಪರಮಾತ್ಮರು ಕಾಪಾಡಿಕೊಂಡು ಬಂದಿರುವ ಈ ಸಂಸ್ಕೃತಿಯೇನಾವು ಪಡೆದಿರುವ ಅಸ್ತಿ. ಭಾಗವತದಲ್ಲಿ ಹೇಳಿದಂತೆ ಜ್ಞಾನಿಗಳು, ಬೋಧಕರ ಉಪಕಾರದಿಂದಲೇ ಈ ಭೂಮಿಯು ನಿಂತಿರುವುದು. ಜ್ಞಾನಿಗಳು, ಆಧ್ಯಾತ್ಮ ಬೋಧಕರು ಅವರ ಜೀವಮಾನವನ್ನು ಒತ್ತೆಇಟ್ಟು ಈ ಕಲೆಗಳನ್ನು ಮತ್ತು ವಿಜ್ಞಾನ ಶಾಸ್ತ್ರಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಂದಿನ ಈ ನಾಗರಿಕತೆ, ನೀವು ಎಲ್ಲರೂ ಹೊಂದಿಕೊಂಡಿರುವ, ಆನಂದಿಸುತ್ತಿರುವ ಸಂಸ್ಕೃತಿಯೇ ಈ ಆಸ್ತಿ ಆ ಮಹಾತ್ಮರ ಕಾಣಿಕೆ. ಈ ಶತಮಾನದಲ್ಲಿಯೂ ಈ ಕಲೆ ವಿದ್ಯೆಗಳನೆಲ್ಲ ಆಶುದ್ಧವಾಗದಂತೆ ಕಾಪಾಡಿಕೊಂಡು, ಮುಂದುವರಿಸುತ್ತಾ ಇರುವುದು ಈ ಜ್ಞಾನಿಗಳೇ. ಇದು ಬಹಳ ಮುಖ್ಯವಾದ ವಿಷಯ. ಪ್ರ. ಆದರೆ ಕಾಮಿ ಧರಿಸಿದ ಕೆಲವು ದುರಾಚಾರಿಗಳ ಕಾರಣದಿಂದ ಜ್ಞಾನಿಗಳಿಗೆ ಕೆಟ್ಟ ಹೆಸರು ಬಂದಿದೆ. ಹ್ಞ್ಹ್ಹ್ಹ್ಹಾ! ಸರಿ, ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ. ನಿಮಗೆ ಹರ್ಷದ ಮೆಹತಾ ಜ್ಞಾಪಕ ಇದೆಯೇ - ಅದೇ ಮುಂಬಯಿ ಸ್ಟಾಕ್ ಮಾರ್ಕೆಟ್ ಹಣ ಹಗರಣದ ಸಂದರ್ಭದಲ್ಲಿ? ಇವನು ನಮ್ಮ ದೇಶಕ್ಕೆ ಲಕ್ಷಾಂತರ ರೂಪಾಯಿಗಳನ್ನು ಮಾಡಿದಾಗ ಅವನು ಪ್ಯಾಂಟು, ಶರ್ಟು ಧರಿಸಿದ್ದ. ಹಾಗಾದರೆ ಪ್ಯಾಂಟು, ಶರ್ಟು ಧರಿಸಿದವರೆಲ್ಲ ಈ ರೀತಿ ಮೋಸ ಮಾಡುವರು ಎಂದು ಹೇಳುತ್ತೀರಾ? ನೀವು ಹಾಗೆ ಯೋಚಿಸಿದರೆ ಆ ಬಟ್ಟೆ ಧರಿಸಿದವರದೇ ತಪ್ಪು ಎನ್ನುತ್ತೀರೋ ಅಥವಾ ನಿಮ್ಮ ಗ್ರಹಿಕೆಯಲ್ಲಿ ತಪ್ಪು ಆಗಿದೆಯೋ? ಜನತೆಯನ್ನು ಮೋಸ ಮಾಡಿದಕ್ಕೆ ನೂರಾರು ಡಾಕ್ಟರ್‌ಗಳನ್ನು ಪೊಲೀಸ್ ಹಿಡಿದು ಬಂಧಿಸುವಸಂಗತಿಯನ್ನುನೀವು ಕೇಳಿರಬೇಕು? ಹಾಗಾದರೆ ನೀವು ಎಲ್ಲಾ ಡಾಕ್ಟರ್‌ಗಳನ್ನು ಅನುಮಾನದ ದೃಷ್ಟಿಯಿಂದ ನೋಡುತ್ತೀರಾ? ಡಾಕ್ಟರ್ ಹತ್ತಿರಹೋಗುವುದೇ ಬೇಡವೆಂದು ಹೇಳುತ್ತೀರಾ? ಹೊರಗೆ ಬನ್ನಿ! ಈ ಅಪಿಚಾರಗಳಿಂದ ಹೊರಗೆ ಬನ್ನಿ! ಈ ಹಳೆ ವಾದಸರಣಿಗಳನ್ನು ಮರೇತು ಬಿಡಿ. ಅದೇಲ್ಲ ಕೇವಲ ನಿಮಗೆ ಆಧ್ಯಾತ್ಮದಿಂದ ಹಿಂದೆ ಸರಿಯಲು ಒಂದು ದಾರಿ. ಆಧ್ಯಾತ್ಮ ಬೋಧಕರಿಗೆ ನಿಮ್ಮ ಅಜ್ಞಾನದಿಂದ ಏನೂ ನಷ್ಟವಾಗುವುದಿಲ್ಲ. ನೀವು ನನನ್ನು ಕಳೆದುಕೊಂಡರೆ ನಿಮಗೆ ಲಾಭವಾಗುವುದಿಲ್ಲ. ಅಷ್ಟೇ ಎಲ್ಲಾ ಕ್ಷೇತ್ರಗಳಲ್ಲಿಯೂ ಮೋಸಗಾರರು ಇರುತ್ತಾರೆ. ನಿಮ್ಮ ಬುದ್ಧಿಯನ್ನು ಉಪಯೋಗಿಸಿ ಬೇರೆ ಬೇರೆ ಆಧ್ಯಾತ್ಮದ ದಾರಿಗಳನ್ನು ಪರಿಶೀಲಿಸಿ, ನಿಮಗೆ ಹೊಂದಿಕೆ ಆಗಿದ್ದನ್ನು ಆಯ್ಕೆ ಮಾಡಿ - ಹೊರತು, ಕಾಪಿ ಧರಿಸಿದ ಬೋಧಕರ ಜಾತಿಯನ್ನೇ ಮೋಸಗಾರರೆಂದು ಅಪಾದಿಸಬೇಡಿ. ಈ ತಪ್ಪು ಕಲ್ಪನೆಗಳಿಂದ ಪ್ರಾಮಾಣಿಕವಾದ ಅಸಲು ಬೋಧಕರನ್ನೂ ಜನರು ಗುರುತಿಸಲಾರರು. ಈಗ ನೋಡಿ - ನಾನು ನಿಮಗೆಲ್ಲ ಆಧ್ಯಾತ್ಮನಾಮದ ಒಂದು ಹೊಸ ಧರ್ಮವನ್ನು ಕೊಡುವುದಕ್ಕೆ ಮುಂಚೆ ನಾನು ಎಷ್ಟುಂದು ಕೆಲಸ ಮಾಡಬೇಕು - ನಿಮ್ಮ ಮನಸ್ಸಿನಲ್ಲಿದ್ದ ತಪ್ಪು ಕಲ್ಪನೆಗಳನ್ನು ತೊಲಗಿಸಲು, ನಾನು ಸಾಕ್ಷಿ ನೀಡಬೇಕು, ನನ್ನ ವಿಶ್ವಾಸನೀಯತೆಯನ್ನು ಸ್ಥಾಪಿಸಬೇಕು ! ಆದರೆ ಜನರಲ್ಲಿ ಪರಿವರ್ತನೆ ಆಗುವುದು. ನಿಧಾನವಾಗಿ ಆಗುತ್ತಾ ಯಿದೆ, ಆಗಲೇಬೇಕು. ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಬದಲಾಯಿಸಲೇಬೇಕು. ಇಲ್ಲದಿದ್ದರೆ ನಿಮ್ಮ ಅವಿಚಾರ ಮತ್ತು ದುರ್ಣಿಯಿಂದ ಈ ಬೋಧಕರನ್ನು ಹೊರಗಿನ ದೇಶಗಳಲ್ಲಿರುವ ತೆರೆದ ಮನಸ್ಸಿರುವ ಜನಗಳ ಕಡೆಗೆ ತಮ್ಮ ಗಮನವನ್ನು ತಿರುಗಿಸಲು ಬಲವಂತ ಮಾಡುವಿರಿ. ಈ ಸ್ಥಿತಿಯು ಭಾರತ ಸಮಾಜದ ಅವನತಿಯನ್ನು ಸೂಚಿಸುವುದು! ನೋಡಿ, ನೀವು ಪತ್ರಕಾರರು, ನೀವು ಈ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಮುಂಚೆ ನಾನು ಹೇಳುತ್ತಿರುವ ಮಾತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ನನ್ನ ಮಾತಲ್ಲಿ ನಿಮಗೆ ನಂಬಿಕೆ ಇದೆಯೋ ಇಲ್ಲವೋ ಎಂದು ನನಗೆ ಗೊತ್ತಾಗಬೇಕು. ಸಂದೇಹವಿದ್ದರೆ ನನ್ನನ್ನು ಪ್ರಶ್ನಿಸಿ, ದಯವಿಟ್ಟು ವಿಚಾರಿಸಿಕೊಳ್ಳಿ. ಆದರೆ ಒಂದು ವಿಷಯ ಜ್ಞಾಪಕ ಇಟುಕೊಳ್ಳಿ - ನಿಮ್ಮ ಮನಸ್ಸನ್ನು ತೆರೆದಿಟ್ಟುಕೊಳ್ಳಿ. ಮನಸ್ಸಿನಲ್ಲಿ ಪೂರ್ವಾಗ್ರಹಗಳು ಇಲ್ಲದೆ, ಮೊದಲೇ ನಿಶ್ಚಯಿಸಿದ ವಿಚಾರಗಳಿಲ್ಲದೆ, ನನ್ನ ಬಳಿಗೆ ಬನ್ನಿ ಸರಿ, ನಂಬಿಕೆ ಬಂತೆ ? ಪ್ರ. ಒಬ್ಬ ಪತ್ರಕಾರ : ಇಲ್ಲ, ನಾನು ಒಂದು ಸಾರಿ ಒಂದು ಗುರುಗಳಿಗೆ ಶರಣಾದೆ. ಆದರೆ ನನಗೆ ಏನು ಪ್ರಯೋಜನವಾಗಲಿಲ್ಲ. ನೀವು ನಿಜವಾಗಲು ಸಂಪೂರ್ಣವಾಗಿ ಶರಣಾದಿರಾ ? ಪ್ರ. ಅಂದರೆ..... ನಾನು ಶರಣಾಗುವುದಕ್ಕೆ ಬಹಳ ಪ್ರಯತ್ನಪಟ್ಟೆ. ಚೆನ್ನಾಗಿ ತಿಳಿದುಕೊಳ್ಳಿ. ನೀವು ನಾನು ಶರಣಾಗುವುದಕ್ಕೆ ಪ್ರಯತ್ನ ಪಟ್ಟೆ ಅಂತ ಹೇಳುವುದರಲ್ಲೆ, ನೀವು ಸಂಪೂರ್ಣವಾಗಿ ಶರಣಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ನೀವು ಸಂಪೂರ್ಣವಾಗಿ ಶರಣಾಗಿದ್ರೆ ನಿಮ್ಮ ಮನಸ್ಸಿನಲ್ಲಿ ಆ ಸಂಶಯವೇ ಇರುವುದಿಲ್ಲ. ಇದು ಕೇವಲ ನಿಮ್ಮ ಮನಸ್ಸಿನ ಗೊಂದಲ ಮತ್ತು ವಂಚನೆಯನ್ನು ಮುಚ್ಚಿಟ್ಟುಕೊಳ್ಳುವ ಒಂದು ರೀತಿ ಅಷ್ಟೆ. ನಾವೆಲ್ಲರು ಧರ್ಮದ ಬಗ್ಗೆ ನಮ್ಮ ಮನಸ್ಸಿನಲ್ಲಿ ಒಂದು ಸುಂದರವಾದ ಕಲ್ಪನೆಯನ್ನು ಇಟ್ಟುಕೊಂಡಿರುತ್ತೇವೆ. ಆದರೆ ನಮ್ಮ ಜೀವನದ ಕಾರ್ಯಗಳನ್ನು ನಮಗೆ ಇಷ್ಟಬಂದ ರೀತಿಯಲ್ಲಿ ನೆರವೇರಿಸಿಕೊಳ್ಳುತ್ತೇವೆ. ಧಾರ್ಮಿಕ ಜೀವನವು ನಮ್ಮ ಇಡೀ ಬಾಳುವೆಯೊಂದಿಗೆ ಮೇಳೈಸಬೇಕೇ ಹೊರತು, ಜೀವನದ ಆಥವಾ ಬಾಳುವೆಯ ತಾತ್ಕಾಲಿಕ ಮನೋರಂಜನೆಯಾಗಬಾರದು. ನಿಜ ಏನೆಂದರೆ ನೀವು ಯಾವ ತತ್ವದ ಆಧಾರದ ಮೇಲೆ ನಿಮ್ಮ ಜೀವನವನ್ನು ನಡೆಸುತ್ತಿದ್ದೀರೋ, ಅದೇ ನಿಮ್ಮ ಧರ್ಮ ಎನಿಸುವುದು - ಅದು ಐಶ್ವರ್ಯವೇ ಆಗಿರಬಹುದು, ಅಧಿಕಾರವಾಗಿರಬಹುದು ಅಥವಾ ಸೆಕ್ಸ್ (sex) ಆಗಿರಬಹುದು. ಅದೇ ನಿಮ್ಮ ಧರ್ಮ - ಅದೇ ಕಾರಣವಾಗಿ ನೀವು ನಿಮ್ಮ ಜೀವನವನ್ನು ಆ ತತ್ವದ ಆಧಾರದ ಮೇಲೆ ನಡೆಸಿ ಕೊಳ್ಳುತ್ತಾ ಇದ್ದೀರಾ. ಅರ್ಥವಾಯಿತೇ ? ನಿಮ್ಮ ಧರ್ಮ ಏನು ಎಂದು ಕಂಡು ಹಿಡಿಯಲು ಪ್ರಯತ್ನಿಸಿ. - ನಿಮ್ಮ ಧರ್ಮ ಮತ್ತು ನಿಮ್ಮ ತತ್ವಶಾಸ್ತ್ರವನ್ನು ಬೇರೆಯಾಗಿಟ್ಟುಕೊಳ್ಳುವುದು, ನಿಮ್ಮನ್ನು ನೀವೇ ವಂಚಿಸುತ್ತಿರುವುದಕ್ಕೆ ಸಮಾನ. ನೀವು ಯಾವುದನ್ನು ನಿಮ್ಮ ಧರ್ಮವೆನ್ನುತ್ತೀರೋ, ನೀವು ಅದನ್ನು ನಿಮ್ಮ ಜೀವನದಲ್ಲಿ ಸಂಪೂರ್ಣವಾಗಿ ಆಚರಣೆ ಮಾಡಲು ಸಿದ್ಧರಾಗಿರಬೇಕು. ಪ್ರ. ಪತ್ರಕಾರ-ಆದರೆ ಈ ಗುರುವಿನ ತತ್ವ ಶಾಸ್ತ್ರದಲ್ಲಿ ನನಗೆ ವಿಶೇಷವಾದ ನಂಬಿಕೆ ಇತ್ತು. ಆದರೂ.... ನೋಡಿ, ನಾನು ಹೇಳಿದಂತೆ ಧರ್ಮವು ಕೇವಲ ಒಂದು ನಂಬಿಕೆಯಾಗಿ ಉಳಿದುಕೊಂಡಿರುವಂಥದ್ದು ಅಲ್ಲ. ಅದೇ ನಿಮ್ಮ ಜೀವನವಾಗಿರಬೇಕು. ಧರ್ಮವನ್ನು ಮತ್ತು ಜೀವನವನ್ನು ಬೇರೆಯಾಗಿಟುಕೊಂಡಿರುವುದು ಒಂದು ವಿಧವಾದ ಸಿಜೋಫ್ರೇನಿಯಾ (schizophrenia - ತನ್ನ ವ್ಯಕ್ತಿತ್ವದ ಬಗ್ಗೆ ಗೊಂದಲ ಇರುವ ಒಂದು ಮಾನಸಿಕ ರೋಗ) ನಮ್ಮ ಆಂತರಂಗವೇ ವಂಚನೆಯ ಕೈವಶದಲ್ಲಿ ಬರುವುದು. ನಿಮಗೆ ಯಾವುದಾದರೂ ಒಂದು ತತ್ವಶಾಸ್ತ್ರವು ಸರಿ ಎನಿಸಿದರೆ ನೀವು ನಿಮ್ಮ ಇಡೀ ಜೀವನವನ್ನು ಸಂತೋಷವಾಗಿಯ ಆ ರೀತಿಯ ಜೀವನಕ್ಕೆ ಪರಿವರ್ತಿಸಿಕೊಳ್ಳಲು ಸಿದ್ಧರಾಗಬೇಕು. ಇಲ್ಲದಿದ್ದರೆ ನಿಮಗೆ ಯಾವುದು ಸತ್ಯ ಎನಿಸುವುದೋ ಅದರ ಅನ್ವೇಷಣೆಯನ್ನು ಮಾಡಿ. ಆದರೆ, ಯಾವುದು ನಿಮ್ಮ ಜೀವನವನ್ನು ಪರಿವರ್ತಿಸಲಿಲ್ಲವೋ ಅದು ಸತ್ಯವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಯಾವುದಾದರೂ ಸತ್ಯವಾಗಿದ್ದರೆ ಕೇವಲ ಅದರ ಹುಡುಕಾಟವೇ ನಿಮ್ಮ ಸ್ವರ್ಶವೇ ನಿಮ್ಮ ಜೀವನವನ್ನು ಪರಿವರ್ತಿಸಬಹುದು. ನಿಮ್ಮನ್ನು ಯಾವುದೇ ನಿಮ್ಮ ಒಳಗಿನಿಂದ ಪರಿವರ್ತಿಸಲಾರದೋ ಅದನ್ನು ಒಡನೆ ತ್ಯಜಿಸಿ. ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡು ಆಕೇಪಣೆ ಮಾಡಬೇಡಿ. ಆ ತತ್ವಶಾಸ್ತ್ರವು ನಿಮಗೆ ಅಲ್ಲ ಎಂದು ತೀರ್ಮಾನಿಸಿ, ಅದನ್ನು ಬಿಟ್ಟುಬಿಡಿ. ಪ್ರ. 1970ರವರೆಗೆ ಹಲವರು ಆಧ್ಯಾತ್ಮಿಕ ಸಂಸ್ಥೆಗಳು- ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳನ್ನು ದೇವಸ್ಥಾನಗಳನ್ನು ಮತ್ತು ಪವಿತ್ರ ಗ್ರಂಥಗಳನ್ನು ಕಾಪಾಡಿಕೊಂಡು ಬಹಳ ಉತ್ತಮವಾದ ಸೇವೆಯನ್ನು ಮಾಡುತ್ತಿದ್ದವು. ಆದರೆ ಇಂದು ಈ ಸೇವೆಗಳಲ್ಲಿ ಬಹಳ ಕೊರತೆ ಉಂಟಾಗಿದೆ. ಈ ಪರಿಸ್ಥಿತಿಗೆ ಹೊರಗಿನ ಅಧಿಕಾರದ ಹಸ್ತಕ್ಷೇಪವೇ ಕಾರಣವೇ? ಈ ದಿನ ಸಮಾಜವು ಬಹುಮಟ್ಟಿಗೆ ನಾಸ್ತಿಕತೆಯನ್ನು ಹೊಂದಿಕೊಂಡಿರುವುದರಿಂದ ಈ ಸೇವೆ ಮಾಡಲು ಮುಂದೆ ಬರುವ ಜನರ ತೀವ್ರ ಕೊರತೆ ಉಂಟಾಗಿದೆ. ಈ ಪದ್ಧತಿಯಲ್ಲಿ ಇರುವ ಕೊರತೆಗಳನ್ನು ತಿದ್ದಿಕೊಳ್ಳುವ ಬದಲು ಈ ಪದ್ಧತಿಯೇ ನಾಶ ಆಗಿ ಹೋಗಿದೆ. ಕಟ್ಟಕಡೆಯಲ್ಲ ಸಮಾಜಕ್ಕೇ ಇದು ಬಹಳ ನಿರಾಶಾದಾಯಕವಾದ ಪರಿಸ್ಥಿತಿ ಎಂದು ಸಮಾಜವೇ ತಿಳಿದುಕೊಂಡಿಲ್ಲ. ನಾನು ಹೇಳುತ್ತಿರುವ ನಿಜವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಈ ವಿಚಾರಗಳನ್ನು ನೀವು ನಿಮ್ಮ ಲೇಖನಗಳಲ್ಲಿ ಉಪಯೋಗಿಸುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ- ಆದರೆ ಮುಖ್ಯವಾಗಿ ನೀವು ನಿಮ್ಮ ಜೀವನದಲ್ಲಿ ಈ ವಿಚಾರಗಳನ್ನು ಅನುಸರಿಸಲು ಖಂಡಿತ ಪ್ರಯತ್ನ ಮಾಡಬೇಕು. ನಿಮ್ಮ ಲೇಖನಿಯನ್ನು ಈ ವಿಚಾರಗಳನ್ನು ಜನರಲ್ಲಿ ಹರಡಲು ಉಪಯೋಗಿಸಿ. ಅದು ನಿಮ್ಮ ಹಕ್ಕು ಮತ್ತು ನಿಮ್ಮ ಕರ್ತವ್ಯ. ಪ್ರ. ನಾವು ಬೇರೆ ಬೇರೆ ಗುರಿಗಳು ಪ್ರದರ್ಶಿಸಿದ ಚಮತ್ಕಾರಗಳ ಬಗ್ಗೆ ಬಹಳ ಕೇಳಿದ್ದೇವೆ. ಉದಾಹರಣೆಗೆ ಭವಿಷ್ಯ ನುಡಿ ಹೇಳುವುದು. ಇದು ಹೇಗೆ ಆಗುವುದು? ನಾನು ನಿಮಗೆ ಒಂದು ಉದಾಹರಣೆ ಕೊಡುತ್ತೇನೆ. ನೀವು ಬಹಳ ಗಲಾಟೆಯಿರುವ ಒಂದು ಬೀದಿಯಲ್ಲಿ ಒಂದು ಕಡೆಗೆ ನಿಂತಿರುವಿರಿ ಅಂದುಕೊಳ್ಳಿ. ಎರಡು ಕಡೆಗೂ ನೋಡಿ. ನೀವು ‘ಟ್ರಾಫಿಕ್’ ಅನ್ನು ಸುಮಾರು 200 ಮೀಟರ್ ದೂರದವರೆಗೆ ಕಾಣುವಿರಿ. ಈಗ ನೀವು ಒಂದು ಮನೆಯ ಮಹಡಿ ಮೇಲೆ ಹತ್ತಿ ನೋಡಿ - ಈಗ ನಿಮಗೆ ಟ್ರಾಫಿಕ್ ಚಲನವು ಇನ್ನಷ್ಟು ದೂರದವರೆಗೆ ಕಾಣಿಸುವುದು ಅಲ್ಲವೆ? ಇದೇ ರೀತಿಯಲ್ಲಿ ಸಾಮಾನ್ಯವಾಗಿ ನಮ್ಮ ಮನಸ್ಸು ಗತಕಾಲವನ್ನು ಮತ್ತು ಭವಿಷ್ಯವನ್ನು ಕೇವಲ ಸೀಮಿತವಾದ ದೃಷ್ಟಿಯಿಂದ ಗ್ರಹಿಸಬಹುದು. ಆದರೆ ಜ್ಞಾನಿಗಳ ಬಹಳ ಎತ್ತರದ ವಿಸ್ತರಿಸಿದ ಪ್ರಜ್ಞೆಯ ದೃಷ್ಟಿಯಿಂದ ಅವರಿಗೆ ಗತಕಾಲ ಮತ್ತು ಭವಿಷ್ಯವು ಮಿತಿಮಿಲ್ಲದ ದೂರದವರೆಗೂ ಕಾಣುವುದು ಅಷ್ಟೆ ! ಬಹಳ ಸರಳವಲ್ಲವೆ? ಸತ್ಯವು ಯಾವಾಗಲೂ ಸರಳವಾಗಿರುವುದು. ಆದರೆ ಸಾಮಾನ್ಯ ಮನಸ್ಸಿಗೆ ಇದರ ತಿಳುವಳಿಕೆ ಆಗದು - ಅದಕ್ಕೆ ನಿಮಗೆ ಅದು ಚಮತ್ಕಾರವಾಗಿ ಕಾಣುವುದು. 30 ಕಾಣುವುದು. ಜ್ಞಾನಿಗಳಿಗೆ ಮತ್ತು ಜ್ಞಾನ ಶಕ್ತಿಗೆ ಕಾಲದ ಮತ್ತು ವಿಶ್ವ ವಿಸ್ತಾರದ ಪರಿಮಿತಿಯಿರುವುದಿಲ್ಲ. ಇದೇ ಕಾರಣವಾಗಿ ನಾನು ಎಂದಿಗೂ ಭೇಟಿ ಕೊಟ್ಟರದೇ ಇರುವ ದೂರ ದೂರ ದೇಶಗಳಲ್ಲಿರುವ ರೋಗಿಗಳನ್ನು ಗುಣಪಡಿಸಿದ್ದೇನೆ. ಈ ಇಡೀ ಪ್ರಪಂಚದಲ್ಲಿ ನನ್ನನ್ನು ಎಂದಿಗೂ ನೋಡಿಯೇ ಇರದಿದ್ದ ಜನರು, ಅವರು ಧ್ಯಾನ ಮಾಡುತ್ತಿರುವಾಗನ ದರ್ಶನವನ್ನು ಪಡೆದಿದ್ದಾರೆ. ಪ್ರ. ಜ್ಞಾನಿಗಳು, ಬೋಧಕರು - ಇವರೂ ಏಕೆ ಅನುಷ್ಠಾನಕ್ಕೆ ಉತ್ತೇಜನ ಕೊಡುತ್ತಾರೆ? ಬಹಳ ದುಃಖಕರವಾದ ವಿಷಯವೇಂದರೆ ಪರಮಾಥ ಸತ್ಯವನ್ನು ಸರಳವಾದ ರೀತಿಯಲ್ಲಿ ಹೇಳಿದರೆ ಅದನ್ನು ಸ್ವೀಕರಿಸುವುದಕ್ಕೆ ಯಾರೂ ತಯಾರಾಗಿರುವುದಿಲ್ಲ ಮನುಷ್ಯನ ಮನಸ್ಸು ಬಹಳ ತೊಡಕಾಗಿರುವುದರಿಂದ, ಮನಸ್ಸು ಕೇವಲ ತೊಡಕಾಗಿರುವ ಪದ್ಧತಿಗಳನ್ನೇ ಇಷ್ಟಪಡುವುದು. ನಾನು ಜನಗಳಿಗೆ ಕೇವಲ ಅರ್ಥಗಂಟೆ ಕಾಲ ಮೌನವಾಗಿ ಕುಳಿತುಕೊಂಡು ಧ್ಯಾನ ಮಾಡಿ ಅಂದರೆ ಅವರಿಗೆ ಆದು ಸಾಧ್ಯವಿಲ್ಲ. ಆದರೆ ನಾನು ಅವರನ್ನು ಒಂದು ದೇವಸ್ಥಾನದ ಸುತ್ತಲು 108 ಬಾರಿ ಪ್ರದಕ್ಷಿಣೆ ಹಾಕುವುದಕ್ಕೆ ಸಲಹೆ ಕೊಟ್ಟರೆ, ಅವರು ಅದನ್ನು ಸಂತೋಷವಾಗಿ ಮಾಡುತ್ತಾರೆ. ಅದು ಏಕೆ ಅಂದರೆ ತೊಡಕಾದ ಕೆಲಸಗಳನ್ನು ಮಾಡುವುದರಲ್ಲಿ ಅವರ ಪ್ರತಿಷ್ಠೆಯು ಇರುವುದು. ಆದರೆ ಬೋಧಕರು ಪದ್ಧತಿಗಳಿಗಿಂತ ಹೆಚ್ಚು ಪ್ರಾಮುಖ್ಯತೆ ಪದ್ಧತಿಗಳ ಪರಿಣಾಮಕ್ಕೆ ಕೊಡುತ್ತಾರೆ. ನಿಮ್ಮ ಗಮನ ನೀವು ಆಚರಿಸುತ್ತಿದ್ದ ಪದ್ಧತಿಯ ಮೇಲಿರುವಾಗ ನಿಮ್ಮ ಅಂತರಂಗವು ನನ್ನ ಸಂದೇಶ, ನನ್ನ ಉಪದೇಶವನ್ನು ಪಡೆಯುವುದಕ್ಕೆ ತೆರದಿರುವುದು. ಇದು ಬಹಳ ಸೂಕ್ಷ್ಮವಾದ ಒಂದು ವಿಧಾನ. ವಿರೋಧಿಸುತ್ತಿರುವ, ಸಂದೇಹ ಪಡುತ್ತಿರುವ ನಿಮ್ಮ ಮನಸ್ಸಿನ ಗಮನ ಅನುಷ್ಠಾನದ ಚಟುವಟಿಕೆಯ ಮೇಲೆ ತಿರುಗಿಸಲಾಗುವುದು. ಆಗ ನನ್ನ ನಿಜವಾದ ಸಂದೇಶ ನಿಮಗೆ ತಲುಪಿಸಲಾಗುವುದು. ಅನುಷ್ಠಾನದ ಮೂಲಕವಾದರೂ ನನ್ನ ಸಂದೇಶವು ಹೆಚ್ಚು ಜನಗಳಿಗೆ ತಲುಪಿಸಲಾದರೆ, ಹೆಚ್ಚು ಸಂಖ್ಯೆಯ ಜನಗಳಿಗೆ ಉಪಯೋಗವಾದರೆ, ಅದೇನರಿ, ಹಾಗೇ ಆಗಲಿ. ಕೇವಲ ಧ್ಯಾನಕೋಸ್ಕರ ಧ್ಯಾನದ ದಾರಿಗೆ, ಆಧ್ಯಾತ್ಮದ ದಾರಿಗೆ ಪ್ರವೇಶಿಸುವುದಕ್ಕೆ ಹೆಚ್ಚು ಪರಿಪಕ್ವವಾದ ಮನಸ್ಸು ಆಗತ್ಯ. ಅಷ್ಟೇ ಅಲ್ಲ - ಇಡೀ ಸಮಾಜದ ಮನೋಭಾವದಲ್ಲಿ ಒಂದು ಎತ್ತರ ಮಟ್ಟದ ಪರಿಪಕ್ವತೆಯ ಅವಶ್ಯವಿದೆ. ಆ ದಿನ ಬಹಳ ದೂರ ಇಲ್ಲ! ಎಲ್ಲಾ ಕಡೆ ಬದಲಾವಣೆ ಆಗುತ್ತಾ ಇದೆ! ಪ್ರಪಂಚದಾದ್ಯಂತ ಮೆಲ್ಲನೆ, ಆದರೆ ಖಂಡಿತವಾಗಿ ಹಗುರವಾಗಿ, ಸೂಕ್ಷ್ಮವಾಗಿ ಪರಿವರ್ತನೆಯು ಆಗುತ್ತಾ ಇದೆ. ಸರಿ, ಬಹಳ ಸಮಯವಾಗಿದೆ. ಕಡೆಯ ಪ್ರಶ್ನೆ? ಪ್ರ. ಈಗಿನ ಕಾಲದ ಯುವಕ ಯುವತಿಯರಿಗೆ ಮೆಡಿಟೇಷನ್ ಒಂದು ಪ್ರಯೋಗಶೀಲ ಆಭ್ಯಾಸವೇ ? ಅವಶ್ಯವಾಗಿ. ವಿಶೇಷವಾಗಿ ಇಂದಿನ ಸಮಾಜದಲ್ಲಿ ಇದು ಬಹಳ ಆಗತ್ಯ. ಇಂದಿನ ಶ್ರಮದಾಯಕ ಜೀವನಕ್ಕೆ, ಮನೇತನಗಳಲ್ಲಿ ಕೆಟ್ಟು ಹೋಗುತ್ತಿರುವ ಪರಸ್ಪರ ಸಂಬಂಧಗಳಿಗೆ, ಖಂಡಿತ ಇದು ಒಂದು ಪರಿಹಾರ ಮತ್ತು ಇದಕ್ಕೆ ಹೆಚ್ಚು ಸಮಯ ಮತ್ತು ಪ್ರಯತ್ನದ ಅವಶ್ಯಕತೆ ಇಲ್ಲ. ಈ ಕಾಲದಲ್ಲಿ ಆಧ್ಯಾತ್ಮದ ಕಡೆ ಗಮನಕೊಡುವುದಕ್ಕೆ ಯಾರಿಗೂ ಸಮಯವಿಲ್ಲ. ಒಪ್ಪಿಕೊಳ್ಳುತ್ತೇನೆ. ಆದರೆ ದಿನದಲ್ಲಿ ಒಂದು ಅರ್ಧಗಂಟೆ ಕಾಲ ಧ್ಯಾನಕ್ಕಾಗಿ ಇಟ್ಟುಕೊಳ್ಳಿ, ಯಾವುದೇ ಮೆಡಿಟೇಷನ್ ಆಗಲಿ. ನಾನು ಹೇಳಿದ ಮೆಡಿಟೇಷನ್ ಪದ್ಧತಿಯನ್ನೇ ಅನುಸರಿಸಬೇಕು ಅಂತ ನಾನು ಹೇಳುತ್ತಾ ಇಲ್ಲ. ನಿಮಗೆ ಯಾವ ಮೆಡಿಟೇಷನ್ ಪದ್ಧತಿಯೊಂದಿಗೆ ಎಳಕಿಂತ ಹೆಚ್ಚು ಹೊಂದಿಕೆ ಇದೆಯೋ, ಅದರ ಸಾಧನೆಯನ್ನು ಮಾಡಿ. ಆಗ ನೀವು ನಿಮ್ಮೊಳಗೆ ಪರಿವರ್ತನೆಯನ್ನು ಅನುಭವಿಸುವುದಲ್ಲದೆ ನಿಮ್ಮ ಪರಿವರ್ತನೆಯ ಪ್ರಭಾವ ಬೇರೆಯವರ ಮೇಲೆ ಆಗುವುದನ್ನೂ ಕಾಣುವಿರಿ. ಹೀಗೆ ಸಮಾಜದಲ್ಲಿಯೇ ಒಂದು ಬದಲಾವಣೆಯು ಆಗುವುದನ್ನು ಕಾಣುವಿರಿ. 34 ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯು ಸಮಂಜಸವೇ? Sri Swami Satchidananda ಪರಮಹಂಸ ನಿತ್ಯಾನಂದರನ್ನು ಕುರಿತು ಜೀವನದ ಉದ್ದೇಶವನ್ನು ಅರಿಯುವ ಮಾನವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ. ಆನಂದವು ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೊಂದಿದ ಮತ್ತು ಆಧುನಿಕ ಆಧ್ಯಾತ್ಮಿಕ ಗುರುಗಳಾದ ಪರಮಹಂಸ ನಿತ್ಯಾನಂದರ ಅನುಭವ ಮತ್ತು ಬೋಧನೆ. ಅವರ ಜೀವನ ಧ್ಯೇಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ - ಅಂದರೆ ದಿನದ 24 ಗಂಟೆಗಳೂ ಆನಂದದಲ್ಲಿ ಬದುಕುವುದು! ಎಂದು ಅನುಭವದಿಂದ ಅರಿವುದನ್ನು ಮೊದಲು ನೀಡುವುದು. ನಮ್ಮದೇ ಆಂತರ್ಯದ ಮಾರ್ಗದಲ್ಲಿ ಕೆಲಸ ಮಾಡುವ ಮುಖಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದ್ಯ ಸಾಧ್ಯವೆಂಬ ಅರಿವನ್ನು ನಮ್ಮಲ್ಲಿ ತರುತ್ತಾರೆ. ಪರಮಹಂಸರು ಹುಟ್ಟಿದ್ದು ತಿರುವಣ್ಣಾಮಲೈ-ದಕ್ಷಿಣ ಭಾರತದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ. ತೀವ್ರವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮ ಆನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಫೋಟಿಸಲು ಮತ್ತು ಆಧ್ಯಾತ್ಮಿಕವಾಗಿ ಬಲಾಧ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಂತ್ರಜ್ಞಾನವೊಂದನ್ನು ರೂಪಿಸಿದರು. ರೂಪಿಸಿರುವ ಅಸಂಖ್ಯಾತ ಕಾರ್ಯ 36 ಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು ಬೀಳುವಂತೆ ಮಾಡುತ್ತವೆ. ಅವರು ಹೇಳುತ್ತಾರೆ, ಭೌತಿಕ ಜಗತ್ತಿನಲ್ಲಿ ಯಶಸ್ಸನ್ನು ಮತ್ತು ನಿಮ್ಮ ಅಂತರಂಗದಲ್ಲಿ ೌಳವಾದ ಸಾಫಲ್ಯತೆಯನ್ನು ಉಂಟರಲು ಧ್ಯಾನವು ಅನುಪಮ ಕೀಲಿಕೈ. ಲೈಫ್ ಬ್ಲಿಸ್ ಫೌಂಡೇಶನ್ ಕುರಿತು (LBF) ಲೈಫ್ ಬ್ಲಿಸ್ ಫೌಂಡೇಶನ್ ಎಂಬುದು ಅಂತರಂಗದ ಆನಂದಕ್ಕಾಗಿ ಪರಮಹಂಸರ ಜಾಗತೀಕ ಆಂದೋಲನ. 2003ನೇ ಇಸವಿಯಲ್ಲಿ ಸ್ಥಾಪನೆಗೊಂಡ ಇದು ಈಗ 33 ದೇಶಗಳಲ್ಲಿ 1300 ಕೇಂದ್ರಗಳಷ್ಟು ಹಬ್ಬಿದೆ. ಅದರ ತೆಕ್ಕೆಯಲ್ಲಿ ಇಂಟರ್ ನ್ಯಾಷನಲ್ ವೇದಿಕ್ ಹಿಂದೂ ಯೂನಿವರ್ಸಿಟಿ (IVHU) ಯುಎಸ್‌ಎ ಮತ್ತು ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯುಎಸ್‌ಎ, ಇವುಗಳನ್ನು ಹೊಂದಿದೆ. ಪ್ರಪಂಚದಾದ್ಯಂತ ನಿತ್ಯಾನಂದ ಮೆಡಿಟೇಶನ್ ಅಕಾಡಮೀಸ್ (NMAS) ಎಂಬ ಸಮಾವೇಶಗಳು ಇದರ ಆಧ್ಯಾತ್ಮಿಕ ಪ್ರಯೋಗಾಲಯಗಳಾಗಿ ಸೇವೆ ಮಾಡುತ್ತಿವೆ. ಇಲ್ಲಿ ಆಂತರಿಕ ಬೆಳವಣಿಗೆ ಮತ್ತು ಬಾಹ್ಯ ಬೆಳವಣಿಗೆ ಎರಡೂ ಸ್ವಾಭಾವಿಕ ಪರಿಣಾಮವಾಗಿರುತ್ತದೆ. ಈ ಸಮಾವೇಶಗಳು ಧ್ಯಾನದಿಂದ ವಿಜ್ಞಾನದಂತಹ ವಿವಿಧ ಚಟುವಟಕೆಗಳಿಂದ ಆನ್ವೇಷಿಸಲು ಮತ್ತು ವಿಸ್ಫೋಟನೆಗೊಳ್ಳಲು ಅನುವಾಗಲು ಒಂದು ಸ್ಥಳ ಮತ್ತು ಜಾಗವನ್ನು ನೀಡುತ್ತಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ವಿಲೀನಗೊಂಡು ಪರಮಾನಂದದ ಜೀವನವನ್ನು ಸೃಷ್ಟಿಸುವಂತಹ ಪರಿಮಾಣಿತ ಆಧ್ಯಾತ್ಮಿಕತೆ (Quantum Spirituality)ಯನ್ನು ಅವರು ಪೋಷಿಸುತ್ತವೆ. ಅವರು ಶೀಘ್ರವಾಗಿ ಮತ್ತು ಪರಿವರ್ತನಕಾರಿಯಾಗಿ ಜೀವನದ ಬದಲಾವಣೆಯನ್ನು ಕೊಡುವಂತಹ ಖಚಿತವಾದ ಜೀವನದ ಪರಿಹಾರಗಳನ್ನು ನೀಡುತ್ತಿವೆ. IVHU ಮುಖಾಂತರ ಪ್ರಪಂಚದಾದ್ಯಂತ ವೈರುಧ್ಯ ಶ್ರೇಣಿಯ ಧ್ಯಾನಂತ್ರಗಳನ್ನು ನೀಡಲಾಗುತ್ತಿದೆ. ಹಾಗೆಯೇ ನಿತ್ಯಾ ಸ್ಪಿರಿಚ್ಯುಯಲ್ ಹೀಲಿಂಗ್ ಸಿಸ್ಟಮ್ ಮುಖೇನ ಉಚಿತ ಗುಣಮಾಡುವಿಕೆ, ಯುವ ಜನರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕøತಿಗೆ ಉತ್ತೇಜನ, ಸಾಮುದಾಯಿಕ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಉಚಿತ ಭೋಜನ, ಭಾರತದಲ್ಲಿ ಒಂದು ವರ್ಷ ಅವಧಿಯ ನಿವಾಸಿತ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮ, ಮಕ್ಕಳಿಗಾಗಿ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣ, ಮುಂತಾದ ಇದೇ ರೀತಿಯ ಇನ್ನೂ ಅನೇಕ ಸೇವೆಗಳನ್ನು ಪ್ರಪಂಚದಾದ್ಯಂತ ನೀಡಲಾಗುತ್ತಿವೆ. ನಿತ್ಯಾನಂದ ಧೀರ ಸೇವಾ ಸೇವಾ (NDSS)ದ ಆಶ್ರಯ ಸೇವಕ್ ಎಂಬ ಸ್ವಯಂ ಸೇವಕರು ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡಿದ್ದು ಆತ್ಯಂತಾಫದಿಂದ ಪ್ರಚಾರವನ್ನು ಬಂಬಲಿಸುತ್ತಿದೆ. 38 ಲೈಫ್ ಬ್ಲಿಸ್ ಫೌಂಡೇಶನ್ (LBF) ನ ಕೊಡುಗೆ ದೇಹ, ಮನಸ್ಸು ಮತ್ತು ಆತ್ಮದ ಹಂತದಲ್ಲಿ ಲಕ್ಷಗಟ್ಟಲೆ ಜನರಿಗೆ ಉಪಯೋಗವಾಗಲು ಪ್ರಪಂಚದಾದ್ಯಂತ LBF ವಿಶಿಷ್ಟ ಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು: LBP ಹಂತ 1 - ಲೈಫ್ ಬ್ಲಿಸ್ ಪ್ರೋಗ್ರಾಂ ನಿಮ್ಮನ್ನೇ ನೀವು ಸಚೇತನಗೊಳಿಸಿಕೊಳ್ಳಿ ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿಶ್ರಾಂತಗೊಳಿಸಿ ಸಚೇತನಗೊಳಿಸುವ ಚಕ್ರದ ಮೇಲೆ ನಡೆಸುವ ಕಾರ್ಯಕ್ರಮ. ಇದು ನಿಮ್ಮ ವಿವಿಧ ಮನೋಭಾವನೆಗಳ ನೇರ ಪ್ರಯೋಗಾತ್ಮಕ ತಿಳುವಳಿಕೆಗಳಿಂದ ಬೆಂಬಲಿತವಾದ ಸ್ಪಷ್ಟವಾದ ಬೌದ್ಧಿಕ ತಿಳುವಳಿಕೆಯನ್ನು ನೀಡುವುದು. ಅದು ಬೌದ್ಧಿಕ ಹಂತದಲ್ಲಿ ಆಧ್ಯಾತ್ಮಿಕತೆಯ ಪರಿಣಾಮವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮದೇ ಆತ್ಮಾನಂದದ ವಾಸ್ತವಿಕೆಯನ್ನು ಅನುಭವಿಸಲು ಇರುವ ಒಂದೇ ಖಚಿತವಾದ ಜೀವನ ಪರಿಹಾರ. ಅದೊಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಂದ ಸಾಕ್ಷೀಕರಿಸಲ್ಪಟ್ಟ ಉನ್ನತವಾದ ಕಾರ್ಯಾಗಾರವಾಗಿದೆ. LBP ಹಂತ 2 - ನಿತ್ಯಾನಂದ ಸುರುಣ ಪ್ರೋಗ್ರಾಂ ಸಾವಿನ ರಹಸ್ಯದ ಭೇದನೆ ಸಾವಿನ ಕಲ್ಪನೆಯ ಗಹನತೆಯನ್ನು ನಿವಾರಿಸಿ ಜೀವನದ ಕಲೆಯನ್ನು ಬಿಡುಗಡೆಗೊಳಿಸುವ ಒಂದು ಕಾರ್ಯಕ್ರಮ. ಸಾವಿನ ಉದ್ದೇಶ ಹಾಗೂ ಕ್ರಮವು ನಿಮಗೆ ತಿಳಿದಿದ್ದರೆ, ನಿಮ್ಮ ಜೀವನವನ್ನು ಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಜೀವಿಸುವಿರಿ ! ಇದು ಆಳವಾಗಿ ಬೇರೂರಿದ ಮತ್ತು ಪ್ರಜ್ಞಾರಹಿತ ಮನೋಭಾವನೆಗಳಿಂದ ಬೇರ್ಪಡಿಸಲು ಜಾಗವನ್ನು ಸೃಷ್ಟಿಸುತ್ತದೆ. ಇವೆಲ್ಲವೂ ಅಂತಿಮವಾದ ಸಾವಿನ ಭಯದಿಂದ ಹುಟ್ಟಿರುವಂತಹವು. ಸ್ವಾಭಾವಿಕ ಬುದ್ಧಿ ಮತ್ತು ಸ್ವಯಂ ಸ್ಪೂರ್ತಿದಾಯಕವಾದ ಉತ್ಸಾಹದಿಂದ ನಡೆಸಲ್ಪಡುವ ಒಂದು ನವ ಜೀವನಕ್ಕೆ ಇದು ಹೆಬ್ಬಾಗಿಲು. LBP ಹಂತ 3 - ಆತ್ಮ ಸುರುಣ ಪ್ರೋಗ್ರಾಂ / ಧ್ಯಾನ ಸುರುಣ ಪ್ರೋಗ್ರಾಂ ನಿಮ್ಮೊಂದಿಗೆನೀವು ಸಂಪರ್ಕವನ್ನುಹೊಂದಿರಿ ಇದೊಂದು ರಹಸ್ಯಗಳನ್ನು ಭೇದಿಸುವಂತಹ ಕಾರ್ಯಕ್ರಮವಾಗಿದ್ದು ಮನಸ್ಸಿನ ಕಾರ್ಯಗಳನ್ನು ಸ್ಪಷ್ಟವಾಗಿ ವಿಶ್ಲೇಷಿಸಿ ಅದು ನಿಮ್ಮನ್ನು ಆಳುವ ಬದಲು ನೀವೇ ಅದರ ಯಜಮಾನರು ಹೇಗೆ ಆಗಬಹುದೆಂದು ಅನುಭವ ಪೂರಕವಾಗಿ ತೋರಿಸುವುದು. ನಿಮ್ಮನ್ನು ಮೂಲ ಮನೋಭಾವನೆಗಳಾದ ಕಾಮ, ದುರಾಸೆ, ಭಯ ಮತ್ತು ಕೋಪಗಳಿಂದ ತರ್ಕದ ಸೂಕ್ಷ್ಮ ಸತ್ಯಗಳು ಬುದ್ಧಿವಂತಿಕೆ ಮತ್ತು ಅಂತಿಮವಾಗಿ ಪರಮಾತ್ಮನಡೆಗೆ ನಿಮ್ಮನ್ನುಮೇಲೆತ್ತಲು ಒಂದು ಖಚಿತವಾದ ಪರಿಹಾರ. ಲೈಫ್ ಬ್ಲಿಸ್ ಟೆಕ್ನಾಲಜಿ (LBT) LBT ಯು 18 ರಿಂದ 30 ವರ್ಷದೊಳಗಿನ ಯುವಜನಾಂಗಕ್ಕಾಗಿ ಇರುವ ಒಂದು ವರ್ಷದ ಅವಧಿಯ ನಿವಾಸಿತ ಕಾರ್ಯಕ್ರಮ. ಪೌರಾಣಿಕ ವ್ಯವಸ್ಥೆಯೊಂದಿಗೆ ವೇದೀಯ ಶಿಕ್ಷಣದಲ್ಲಿ ಅವರ ಬೇರುಗಳು ಇದ್ದು ಈ ಕಾರ್ಯಕ್ರಮವು ಆಧುನಿಕ ಯುವಜನಾಂಗಕ್ಕೆ ಒಳ್ಳೆಯ ಡೈಹಿಕ, ಮಾನಸಿಕ ಮತ್ತು ಮನೋಭಾವನೆಗಳ ಆರೋಗ್ಯದಿಂದ ಶಕ್ತೀಕರಿಸಲು ವಿನ್ಯಾಸಗೊಳಿಸಲಾಗಿದೆ. ಅವರ ಸೃಜನಾತ್ಮಕ ಬುದ್ಧಿವಂತಿಕೆ ಮತ್ತು ಸ್ವಯಂ ಸ್ಫೂರ್ತಿಯನ್ನು ಪೋಷಿಸುವುದರ ಮೂಲಕ, ಮತ್ತು ವೃತ್ತಿಯ ಕೌಶಲ್ಯವನ್ನು ನೀಡುವ ಮೂಲಕ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿಸ್ಪಯಂ ಪೂರ್ಣರಾದ ಯುವಕರನ್ನು ಸೃಷ್ಟಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಜ್ಞಾನೋದಯ ಹೊಂದಿದ ಗುರುಗಳೊಬ್ಬರ ಪಾಲನೆಯಲ್ಲಿ ಇದ್ದು ಕಲಿಯಬಹುದಾದಂತಹ ಜೀವಿತಕಾಲದ ಒಂದು ಸದವಕಾಶವನ್ನು ನೀಡುತ್ತದೆ. 41 ನಮ್ಮನು ಸಂಪರ್ಕಿಸಲು: USA ಲೈಫ್ ಬ್ಲಿಸ್ ಫೌಂಡೇಶನ್ ಮಾಂಟ್‌ಕ್ಲೇರ್ CA 91763, USA ಫೋನ್ : 626 531 6065 E-mail : [email protected]. URL : www.lifebliss.org ಭಾರತ : ನಿತ್ಯಾನಂದ ಧ್ಯಾನ ಪೀಠಂ ನಿತ್ಯಾನಂದ ಪುರಿ, ಕಲ್ಲುಗೋಪ ಹಳ್ಳಿ, ಮೈಸೂರು ರಸ್ತೆ ಬಿಡದಿ, ಬೆಂಗಳೂರು - 562 109. ಕರ್ನಾಟಕ. ಭಾರತ ಆಶ್ರಮ : 91-80-65591844,27202084 Fax : 91 +8027288207 Email: [email protected] URL: www.dhyanapeetam.org www.nithyananda.org ಪ್ರಪಂಚದ ಇತರ ಆಶ್ರಮಗಳು ಮತ್ತು ಕೇಂದ್ರಗಳಿಗಾಗಿ, www.dhyanapeetam.org ಗೆ ಭೇಟಿ ಕೊಡಿ. 42 ಓದನ್ನು ಮುಂದುವರಿಸಲು ಸೂಚಿತ ಪುಸ್ತಕಗಳು ನೋವಿನಿಂದ ಆನಂದಕ್ಕೆ ಸರಳವಾದ ಸತ್ಯ ನೇರವಾಗಿ! ಚಿಂತೆಯಿಂದ ಚಿಂತನೆಗೆ ತೆರೆಬಾಗಿಲು ತಂಗಾಳಿ ಒಳಗೆ ಬೀಸಲಿ! ಪ್ರೀತಿಯ ಆನ್ವೇಷಣೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಖಚಿತ ಪರಿಹಾರಗಳು ನಿತ್ಯಧ್ಯಾನ ಅವರ ಹೆಸರು ನಿತ್ಯಾನಂದ ಪರಮಹಂಸ ನಿತ್ಯಾನಂದರ ಪುಸ್ತಕಗಳು 23 ಭಾಷೆಗಳಲ್ಲಿ ಲಭ್ಯವಾಗಿವೆ. ಲೈಫ್ ಬ್ಲಿಸ್ ಗೆಲೇರಿಯಯಿಂದ DVDsಗಳು, CDsಗಳು, 'ಮೆಡಿಟೇಶನ್ ಕಿಟ್' ಮತ್ತು ಇತರ ಪದಾರ್ಥಗಳಾಗಿ www.lifeblissgalleria.com ಅನ್ನು ವೀಕ್ಷಿಸಿ ಅಥವಾ ನಮ್ಮನ್ನು ಸಂಪರ್ಕಿಸಿ. 43 ‘ಆಧ್ಯಾತ್ಮಿಕತೆಯು ಸ್ವಾಭಾವಿಕ ಬುದ್ಧಿವಂತಿಕೆಯಾಗಿದ್ದು, ನೀವು ನಿಮ್ಮ ದೈನಂದಿನ ಕಾರ್ಯಗಳನ್ನು ಮಾಡುವಾಗ ನಿಮ್ಮನ್ನು ಅರಿವಿನಿಂದಲೂ ಮತ್ತು ಚುರುಕಾಗಿಯೂ ಇಡುತ್ತದೆ.’ -ಪರಮಹಂಸ ನಿತ್ಯಾನಂದ Ebook ISBN: 979-8-88572-467-8 ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ ಮುದ್ರಣಾಲಯದಿಂದ ಪ್ರಕಟಿತ (ನಿತ್ಯಾನಂದ ವೇದಿಕ್ ಸೈನ್ಸ್ ಯೂನಿವರ್ಸಿಟಿ, ಯು.ಎಸ್.ಎ. ಯ ಒಂದು ವಿಭಾಗ)