Books / Meditation is for You - an introduction to the science and art of meditation

1. Meditation is for You - an introduction to the science and art of meditation

ನಿಮಗಾಗಿ

ಧ್ಯಾನ ಎಂಬ ಕಲೆ ಮತ್ತು ವಿಜ್ಞಾನಕ್ಕೆ ಒಂದು ಪೀಠಿಕೆ

THE SUPREME PONTIFF OF HINDUISM BHAGAWAN SRI NITHYANANDA PARAMASHIVAM

ಿ ಮತ್ತು ನಿತ್ಯಾನಂದ ಫೌಂಡೇಷನ್

ಗುರು ಶಿಷ್ಯ ಬಾಂಧವ್ಯದ ಬಗ್ಗೆ ಉಪನ್ಯಾಸ

1ನೇ ಜನವರಿ ತಿರುವಣ್ಣಾಮಲೈಯಲ್ಲಿ ಜನಿಸಿದ ನಿತ್ಯಾನಂದ ಅವರು ಸ್ವಂತ ಸಾಕ್ಷಾತ್ಕಾರದಿಂದ ಗುರುವಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಆರಂಭಿಸಿ, ತೀವ್ರ ಪರಿಶ್ರಮದ ಸಾಧನೆಯ ವರ್ಷಗಳ ಮೂಲಕ, ಅಂತಿಮ ಸತ್ಯದ

ಸಾಕ್ಷಾತ್ಕಾರದ ಏಕಮೇವ ದೃಷ್ಟಿಯಿಂದ ದೈವಿಕ ಸಾಧನೆ ಗಳಿಸಿದ್ದಾರೆ. ಭಾರತ್ ಮತ್ತು ನೇಪಾಳಗಳಲ್ಲಿ ಮಹಾನ್ ಗುರುಗಳಲ್ಲಿ ಅಧ್ಯಯನ ಮಾಡುತ್ತ ಅವರು ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿದ್ದಾರೆ. 22ರ ವಯಸಿನಲ್ಲಿಯೇ ಶ್ರೀಯುತರು ನಿತ್ಯಾನಂದದ ಸ್ಥಿತಿಯನ್ನು ಪ್ರವೇಶಿಸಿದಾಗ, ಪ್ರಜ್ಞೆಯ ಅಂತಿಮ ಸಾಕ್ಷಾತ್ಕಾರದ ಅನುಭವ ಪಡೆದರು.

ಪ್ರತಿಯೋರ್ವ ವ್ಯಕ್ತಿಯೂ ತನ್ನಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯವನ್ನು ವಾಸವೀಕರಣಗೊಳಿಸುವಲ್ಲಿ ಸಹಕರಿಸಬೇಕೆಂಬುದೇ ಸ್ವಾಮೀಜಿಯವರ ಧ್ಯೇಯೋದೇಶವಾಗಿದೆ. ವಾಸವದ ಹಾಗೂ ಸಹಾನುಭೂತಿಪರ ದೃಷ್ಟಿಕೋನದೊಂದಿಗೆ ಹಾಗೂ ಮಾನವ ಸ್ವಭಾವದ ಆಳದೊಳಗೆ ಸಾಕ್ಷಾತ್ಕಾರಗೊಂಡ ಅಂತರ್ದೃಷ್ಟಿಯೊಂದಿಗೆ ವಿಶ್ವಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿ, ಪರಿವರ್ತಿಸಿದ್ದಾರೆ.

ಸ್ವಾಮೀಜಿಯವರ ದೈವಿಕ ಪುನರುದ್ದಾರದ ಸ್ಪರ್ಶವು, ಆಧ್ಯಾತ್ಮಿಕವಾಗಿ ಗುಣಪಡಿಸುವ ವೈಜ್ಞಾನಿಕ ವ್ಯವಸ್ಥೆಯಾದ ರೂಪವಾಗಿ ಮಾರ್ಪಟ್ಟಿದೆ. ತಮ್ಮ ನೇರ ಸ್ಪರ್ಶ ಹಾಗೂ ಅವರ ಆಶೀರ್ವಾದ ಪಡೆದ ಆನಂದ ಹೀಲರ್‌ಗಳ ಮೂಲಕ, ಮೈಗ್ರೇನ್‌ನಿಂದ ಕ್ಯಾನ್ಸರ್‌ವರೆಗಿನ ವಿಭಿನ್ನ ಖಾಯಿಲೆಗಳನ್ನು ಗುಣಪಡಿಸುವ ಮೂಲಕ ಅವರು ವಿಶ್ವಾದ್ಯಂತ ಜನರನ್ನು ಗುಣಪಡಿಸುತ್ತಾರೆ.

STATE SUBLE

నరర్ తలర్ కలిస్

ನಿತ್ಯಾನಂದ ಫೌಂಡೇಷನ್, ಇವರ ಧ್ಯಾನಕ್ಕಾಗಿನ ವಿಶ್ವಾದ್ಯಂತದ ಅಭಿಯಾನವಾಗಿದೆ. ಬೆಂಗಳೂರಿನ ಬಿಡದಿಯಲ್ಲಿರುವ 'ಧ್ಯಾನಪೀಠಂ' ಆಧ್ಯಾತಿಕ ಕೇಂದ್ರ, ಮತ್ತು ಅಮೆರಿಕದ ಲಾಸ್ ಏಂಜಲಿಸ್ ನಲ್ಲಿನ ವೆಸ್ಸರ್ನ್ ಹೆಮಿಸ್ಟಿಯರ್ ಹೆಡ್ ಕ್ವಾರ್ಟರ್ ಮೂಲಕ, ವ್ಯಕ್ತಿಯ ರೂಪಾಂತರದ ಮಾರ್ಗದಿಂದ ಮಾನವೀಯತೆಯ ಸಾಕ್ಷಾತ್ಕಾರಕ್ಕಾಗಿ ಕೆಲಸ ಮಾಡುತ್ತ ಅದು ವಿಶ್ವಾದ್ಯಂತದ 20 ದೇಶಗಳಲ್ಲಿನ 800ಕ್ಕೂ ಹೆಚ್ಚಿನ ಕೇಂದ್ರಗಳ ಮೂಲಕ ಕಾರ್ಯಾಚರಣೆ ನಡೆಸುತ್ತದೆ.

ವಾಸವಿಕ ಸಂಗತಿಗಳ ಬಗೆಗಿನ ಸ್ವಾಮೀಜಿಯವರ ಸರಳ ವಿವರಣೆಗಳು ಮತ್ತು ಸರಳ ಹಾಗೂ ಕ್ರಿಯಾಶೀಲ ಧ್ಯಾನದ ತಂತ್ರಗಳು ವ್ಯಕ್ತಿಯೋರ್ವ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಹಕರಿಸುತ್ತದೆ. ಈ ಕಾರ್ಯಸಾಧನೆಗಾಗಿ ವಿಶ್ವಾದ್ಯಂತ ಸಾವಿರಾರು ಆನಂದ ಸೇವಕರು ಕೆಲಸ ಮಾಡುತಿದ್ದಾರೆ.

ಸ್ವತಃ ತಮ್ಮನ್ನೇ ಪ್ರಯೋಗ ಶಾಲೆಯೊಂದರಂತೆ ತೊಡಗಿಸಿ ಕೊಂಡಿರುವ ಸ್ವಾಮೀಜಿಯವರು ತರ್ಕದ ಆಧುನಿಕ ಪಾಶ್ಚಾತ್ಯ ವ್ಯವಸ್ಥೆ ಮತ್ತು ಪ್ರಮಾಣೀಕರಣ ಹಾಗೂ ನಿಗೂಢತೆಯ ಪುರಾತನ ಪೌರ್ವಾತ್ಯ ವ್ಯವಸ್ಥೆಗಳನ್ನು ಜೋಡಿಸಿ, ತನ್ಮೂಲಕ ಮಾನವ ಜೀವನದ ಒಳಿತಿಗಾಗಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆಗಳನ್ನು ಬೆಸೆಯುತ್ತ ಸ್ವಾಮೀಜಿಯವರು ವಿಶ್ವಾದ್ಯಂತ ವಿಜ್ಞಾನಿಗಳೊಂದಿಗೆ ಕೆಲಸ ಮಾಡುತಿದ್ದಾರೆ.

ಜ್ಞಾನಿಯಾದ ವೃದ್ಧ ಜೆನ್ ಗುರುವೊಬ್ಬ, ಕಾಡಿನ ಒಂದು ಗುಡಿಸಿಲಿನಲ್ಲಿ ತನ್ನಷ್ಟಕ್ಕೆ ವಾಸಿಸುತ್ತಿದ್ದ.

ಒಂದು ಉರಿ ಬೇಸಿಗೆಯ ದಿನ, ದಾರಿಹೋಕನೊಬ್ಬ, ಗುರುವು ತನ್ನ ಗುಡಿಸಿಲಿನ ಹೊರಗೆ ಮರ ಕೆತ್ತುತ್ತಿರುವುದರಲ್ಲಿ ಮಗ್ನನಾಗಿರುವುದನ್ನು ಕಂಡ. ಬಿಸಿಲಿನ ಧಗೆಯಲ್ಲಿ ಬೆವೆತು ಹೋಗಿದ್ದ.

'ಗುರುವೇ, ಈ ಉರಿ ಬಿಸಿಲಿನಲ್ಲಿ ಏಕೆ ಹೊರಗೆ ಇದ್ದೀರಿ?' ಆ ಮನುಷ್ಯ ಕೇಳಿದೆ. 'ಏಕೆಂದರೆ ಸೂರ್ಯ ಇಲ್ಲಿದ್ದಾನೆ' ಸರಳವಾಗಿ ಉತ್ತರಿಸಿದ ಗುರು.

'ಸರಿ ಗುರುವೇ, ಸೂರ್ಯ ಇಲ್ಲಿದ್ದಾನೆ. ಆದರೆ ಈ ಬಿಸಿಯಲ್ಲೇಕೆ ನೀವು ಕೆಲಸ ಮಾಡುತ್ತೀರಿ?'

'ಏಕೆಂದರೆ ನಾನಿಲ್ಲಿದ್ದೀನಿ', ಉತ್ತರಿಸಿದ ಗುರು.

ಮೂಲ ಪ್ರತ್ರೆಗಳು

A BRASSES, BE THERE BEAR

ನಾನೇಕೆ ಧ್ಯಾನ ಮಾಡಬೇಕು?

ಯಾವಾಗಲೂ ನಾನು ಆನಂದವನ್ನು ಹುಡುಕುತ್ತಿರುವುದೇ ಆದರೆ, ಅದು ನನಗಿನ್ನೂ ಸಿಕ್ಕಿಲ್ಲವೇಕೆ ?

ಆನಂದದ ಸ್ಥಿತಿ ಎಂದರೇನು? ಅದರ ಅನುಭವ ಧ್ಯಾನದಿಂದ ಮಾತ್ರ ಸಾಧ್ಯವೇನು?

ಧ್ಯಾನ ಎಂದರೆ ನಿಜವಾಗಿ ಏನು?

ಎಲ್ಲರೂ ಧ್ಯಾನವನ್ನು ಕಲಿಯಲು ಸಾಧ್ಯವೇ?

ಧ್ಯಾನ ತಂತ್ರಗಳ ಅಗತ್ಯವಾದರೂ ಏಕೆ ನನಗೆ?

ಪ್ರತಿದಿನ ಎಷ್ಟು ಗಂಟೆಗಳ ಕಾಲ ನಾನು ಧ್ಯಾನ ಮಾಡಬೇಕು?

ಧ್ಯಾನದಿಂದ ನಮಗಾಗುವ ಲಾಭಗಳೇನು? ಎಂದುರಾ

ಧ್ಯಾನದ ಮೇಲಷ್ಟೆ ನಾನು ಕೇಂದ್ರೀಕರಿಸಿದರೆ, ಬೇರೆ ಕೆಲಸಗಳನ್ನು ನಾನು ಮಾಡುವುದಾದರೂ ಹೇಗೆ?

ಧ್ಯಾನವನ್ನು ತಲುಪಲು ಸರಿಯಾದ ಮಾರ್ಗವಾದರೂ ಏನು? ನನಗೆ ಸೂಕ್ತವಾದ ಧ್ಯಾನ ತಂತ್ರ ಯಾವುದು?

ಧ್ಯಾನದ ತಂತ್ರಗಳು

ಶಕ್ತಿಧಾರಣಾ

ಮೆಡಿಟೇಶನ್ ಏಕೆ? (ಧ್ಯಾನ ಏಕೆ? )

ಪ್ರಾರಂಭಿಸುವುದಕ್ಕೆ ಇದು ಸರಿಯಾದ ಪ್ರಶ್ನೆ. ನಮ್ಮ ಜೀವನದಲ್ಲಿ ನಮಗೆ ನಿಜವಾಗಿಯೂ ಧ್ಯಾನದ ಅವಶ್ಯಕತೆ ಇದೆಯೇ? ನಾನು ಕೇಳ್ತೀನಿ, - ನೀವು ಈ ಪುಸ್ತಕವನ್ನು ಏಕೆ ಓದುತ್ತಿದ್ದೀರಿ? ಓದಬಹುದಾದ ಎಷ್ಟೆಲ್ಲಾ ಪುಸ್ತಕಗಳು ಇದ್ದರೂ ಈ ಕ್ಷಣದಲ್ಲಿ ಈ ಪುಸ್ತಕವನ್ನು ಓದಲು ಆರಿಸಿಕೊಂಡಿದ್ದೀರಿ.

ನಿಮ್ಮೊಳಗೆ ಈ ಧ್ಯಾನದ ಬಗ್ಗೆ ಆಳವಾದ ಆಸಕ್ತಿ ಇದೆ ಎಂಬುದನ್ನು ನಿಮ್ಮ ಚರ್ಯೆಯೇ ತಿಳಿಸುತ್ತಾ ಇದೆ - ಹಾಗೂ ನಮ್ಮೆಲ್ಲರಲ್ಲಿಯೂ ಸಹ. ಜೀವನದಲ್ಲಿ ನಿಮ್ಮ ಅಂತಿಮ ಗುರಿ ಏನು?

ಹೆಚ್ಚು ಸಂಪಾದಿಸಲೆಂದೇ?

ಯಾವಾಗ್ಯೂ ಯುವಕರಾಗಿ, ಆರೋಗ್ಯವಾಗಿ, ಸುಂದರವಾಗಿ (ಚೆನ್ನಾಗಿ) ಇರಬೇಕು ಎಂತಲೇ?

ಶಾಶ್ವತವಾದ, ಒಳ್ಳೆಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕೆಂದೇ?

ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳ ಬೇಕೆಂದೇ?

ಈ ಪಟ್ಟಿಗೆ ಕೊನೆಯೇ ಇಲ್ಲ - ಪ್ರತಿ ವ್ಯಕ್ತಿಗೂ ತನ್ನದೇ ಆದ ನಿರ್ದಿಷ್ಟವಾದ ಗುರಿ ಇರುತ್ತೆ.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಪ್ರತಿಯೊಂದು ಗುರಿಯೂ ಅಪವಾದವೇ ಇಲ್ಲದೆ, ಒಂದನ್ನೇ ಸೂಚಿಸುತ್ತೆ ನಾವು ಆನಂದದ ಸ್ಥಿತಿಯಲ್ಲಿಯೇ ಇರಬೇಕು ಅನ್ನುವ ತೀವ್ರ ಆಸಕ್ತಿಯನ್ನು ಹೊಂದಿರುತ್ತದೆ.

ಇದನ್ನು ಒಪ್ಪದೇ ಇರುವವರು ಯಾರಾದರೂ ಇದ್ದೀರಾ?

ನನಗೆ ಆನಂದದಲ್ಲಿ ಆಸಕ್ತಿಯೇ ಇಲ್ಲ, ಸಂತೋಷವಾಗಿ, ಆನಂದವಾಗಿ ಇದ್ದು ನನಗೇನಾಗಬೇಕಾಗಿದೆ ಎಂದು ಹೇಳುವವರು ಯಾರಾದರೂ ಇದ್ದೀರಾ?

ನಾವು ಪ್ರತಿಯೊಬ್ಬರೂ ಹುಡುಕುತಿರುವುದು ಆನಂದವನ್ನಲ್ಲದೆ ಬೇರೇನನ್ನೂ ಅಲ್ಲ. ಎಷ್ಟೇ ಬುದ್ಧಿವಂತಿಕೆಯಿಂದ, ಪರ್ಯಾಯವಾಗಿ ಬೇರೆ ಯಾವ ರೀತಿ ವ್ಯಕ್ತಪಡಿಸಿದರೂ ಸಹ ನಾವೆಲ್ಲರೂ ಹುಡುಕುತಿರುವುದು ಆನಂದವನ್ನೇ.

ಆದರೆ ಹುಡುಕುತಿರುವ ದಾರಿ ಮಾತ್ರ ಬೇರೆ ಬೇರೆ.

ಹಣದ ಮೂಲಕ, ಅಧಿಕಾರದ ಮೂಲಕ, ಸಂಬಂಧಗಳ ಮೂಲಕ -ಸಂತೋಷದ, ಕಷ್ಟದ ನಮ್ಮ ದಿನನಿತ್ಯದ ಜೀವನ ನಾಟಕದ ಮೂಲಕ - ನಾವು ಹುಡುಕುತ್ತಿರುವುದು ಆನಂದವನ್ನೇ. ಇದೇ ಜೀವನದಲ್ಲಿ ತೊಡಗಿಸಿಕೊಳ್ಳುವ ಏಕೈಕ ಪ್ರೇರಣಾ ಶಕ್ತಿ.

ಈ ಆನಂದವನ್ನೇ ನಾವು ಜೀವನಪೂರ್ತಿ ಹುಡುಕುತ್ತಿದ್ದರೂ ಸಹ, ಇನ್ನೂ ಏಕೆ ನಮಗೆ ಅದು ಸಿಕ್ಕಿಲ್ಲ?

ಏಕೆಂದರೆ ಅದನ್ನು ನಾವು ಅರಿವಿಲ್ಲದೆ ಹುಡುಕುತಿದ್ದೇವೆ. ನಮ್ಮಲ್ಲಿ 99% ಜನಕ್ಕೆ ಆನಂದವೇ ನಮ್ಮ ನಿಜವಾದ ಗುರಿ ಎಂಬುದೇ ಗೊತ್ತಿಲ್ಲ.

ನಮ್ಮಲ್ಲಿ ಹೆಚ್ಚು ಜನಕ್ಕೆ ನಮ್ಮ ಜೀವನದಲ್ಲಿ ಏನೋ ಕಡಿಮೆ ಅಥವಾ ಕೊರತೆ ಇದೆ ಎಂಬುವುದು ಮಾತ್ರ ಗೊತ್ತು, ಆ ಖಾಲಿಯಾಗಿರುವದನ್ನು ನಾವು ಹಣದಿಂದ, ಸಂಬಂಧಗಳಿಂದ ಅಥವಾ ಏನನ್ನೋ ಪಡೆಯುವುದರಿಂದ ತುಂಬಲು ಆಗೊಲ್ಲ.

ಹೇಳಿ ನೋಡೋಣ, ಇಲ್ಲಿನವರೆಗೂ ನೀವು ಈ ಹೊರ ಪ್ರಪಂಚದಿಂದ ಸಂಪಾದಿಸಿರುವುದು ಶಾಶ್ವತವಾಗಿ ಬೆಲೆಯುಳ್ಳದ್ದೇ?

ಆದರೂ ಇನ್ನು ಹುಡುಕುತಲೇ ಇದ್ದೇವೆ.

ನಮಗೆ ಅದು ಗೊತ್ತಿಲ್ಲದುದರಿಂದ, ನಾವು ಅದನ್ನು ನಮ್ಮ ಹೊರಗಡೆಯೇ ಹುಡುಕುತ್ತಿದ್ದೇವೆ. ನಮ್ಮಲ್ಲೇ ಇರುವುದನ್ನು! ಈ ಪ್ರಪಂಚದಲ್ಲಿ ಎಲ್ಲಾ ಕಡೆಯೂ ಹುಡುಕುತಿದ್ದೇವೆ.

ನೀವು ನಂಬಿ ಅಥವಾ ಬಿಡಿ, ಆನಂದ ಎಂಬುವುದು ನಮ್ಮ ಜನ್ಮಸಿದ್ದ ಹಕ್ಕು! ಆನಂದವೇ ನಮ್ಮ ನಿಜವಾದ ಸ್ವಭಾವ.

ಒಂದು ಸಣ್ಣಕತೆ:

ಕನ್ನಾರ್ ಕುಲ್‌ಜೀತ್ ಎಂಬುವನು ತನ್ನ ಮನೆಯ ಮುಂದಿನ ಅಂಗಳದಲ್ಲಿ ಏನನ್ನೋ ಬಹಳ ಕಷ್ಟಪಟ್ಟು ಹುಡುಕುತ್ತಾ ಇದ್ದ. ಅವನ ಹೆಂಡತಿ ಪ್ರಶ್ನಿಸಿದ್ದಕ್ಕೆ ಅವನು ಹೇಳಾನೆ, ನಾನು ಒಂದು ಚಿನ್ನದ ನಾಣ್ಯವನ್ನು ಕಳೆದುಕೊಂಡು ಬಿಟ್ಟಿದ್ದೀನಿ ಅಂತ. ಅವನ ಹೆಂಡತಿಯೂ ಹುಡುಕುವುದಕ್ಕೆ ನೆರವಾದಳು. ಕೂಡಲೇ ಬೇರೆಯವರೂ ಬಂದು ಸೇರಿದರು. ಹೆಚ್ಚುಕಡಿಮೆ ಅಕ್ಕಪಕ್ಕದಲ್ಲಿದ್ದವರೆಲ್ಲಾ ಕಳೆದ ಆ ನಾಣ್ಯವನ್ನು ಹುಡುಕುತ್ತಾ ಇದ್ದರು. (ಅಷ್ಟರಲ್ಲಿ) ಇದ್ದಕ್ಕಿದ್ದಂತೆ ಒಬ್ಬ ಯುವಕ ಆ ಕುಲ್‌ಜೀತ್‌ನನ್ನು ಕೇಳಿದ, - ಸರಿಯಾಗಿ ಯಾವ ಜಾಗದಲ್ಲಿ ಅದನ್ನು ಕಳೆದುಕೊಂಡಿದ್ದು? ಇಷ್ಟು ಹುಡುಕಿದರೂ ಸಿಕ್ಕುತ್ತಾ ಇಲ್ವಲ್ಲಾ?

ಕುಲ್‌ಜೀತ್ ಹೇಳಾನೆ, ''ಓ ಅದೇ, ಆ ನಾಣ್ಯವನ್ನು ನಾನು ಮನೆಯ ಒಳಗೆ ಕಳೆದುಕೊಂಡೆ''.

ಆಶ್ಚರ್ಯದಿಂದ ಆ ಯುವಕ ಹೇಳಾನೆ, ಹಾಗಾದರೆ ಇಲ್ಲಿ (ಹೊರಗಡೆ) ಏಕೆ ಹುಡುಕುತ್ತಿದ್ದೀಯೆ? (ಆಗ.) ಕುಲ್ ಜೀತ್ ಹೇಳ್ತಾನೆ - ಸಮಸ್ಯೆ ಏನಂದ್ರೆ, ಮನೆ ಒಳಗೆ ಬೆಳಕೇ ಇಲ್ಲ. ಇಲ್ಲಿ ಹೊರಗಡೆ ಆದ್ರೆ ಬೀದಿದೀಪವಾದರೂ ಇದೆ. ಆ ಬೆಳಕಿನಲ್ಲಿ ನಾವು ಹುಡುಕಬಹುದಲ್ಲಾ.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಇದನ್ನೇ ನಮ್ಮ ಜೀವನದಲ್ಲಿ ನಾವು ಮಾಡುತಾ ಇರುವುದು! ನಾವೆಲ್ಲಾ, ಇಲ್ಲದೇ ಇರುವ ಜಾಗಗಳಲ್ಲೇ ಹುಡುಕುತಿರುವ ನಿಪುಣರು. ನಮ್ಮನ್ನೇ ನಾವು ಎಲ್ಲಾ ಕಡೆಯಲ್ಲೂ ಹುಡುಕುತಿದ್ದೇವೆ - ಹಣದಲ್ಲಿ, ಅಧಿಕಾರದಲ್ಲಿ, ಸಂಬಂಧಗಳಲ್ಲಿ, ಸಿದ್ದಾಂತಗಳ ಮೂಲಕ ಹೀಗೆ. ಆದರೆ, ನಮ್ಮ ಒಳಗೇ ಇರುವ ಸತ್ಯವಾದ ಒಂದು ದಿಶೆಯಲ್ಲಿ ಹುಡುಕುತಿಲ್ಲ.

ನೀವು ಕಳೆದುಕೊಂಡ ಆ ನಾಣ್ಯ ನಿಮ್ಮ ಮನೆಯ ಒಳಗಡೆಯೇ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಅರಿವಿನ (ಜ್ಞಾನದ) ದಾರಿಯಲ್ಲಿ ಮೊದಲನೇ ಹೆಜ್ಜೆ. ಆಗ ನೀವು ಹೊರಗೆ ಬೀದಿಯಲ್ಲಿ ಹುಡುಕುವುದನ್ನು ತಾವಾಗಿಯೇ ನಿಲ್ಲಿಸಿ ಬಿಡುತೀರಿ.

ಧ್ಯಾನ ಅಂದರೆ, ನಿಮ್ಮೊಳಗೇ ಇರುವ ಆನಂದವನ್ನು ಮತ್ತೆ ಹುಡುಕಿ ಪಡೆಯುವ ತಯಾರಿ.

ಆನಂದವನ್ನು ಹೊರಗಡೆ ಹುಡುಕುವುದು ವ್ಯರ್ಥ ಎನ್ನುವುದನ್ನು ನೀವು ಅರ್ಥ ಮಾಡಿಕೊಂಡ ಕ್ಷಣದಲ್ಲೇ ಧ್ಯಾನಕ್ಕೆ ನೀವು ಸಹಜವಾಗಿ ಸಕ್ತವಾಗಿದ್ದೀರಿ ಎಂದರ್ಥ.

ಆನಂದ ಎಂಬ ಅವಸ್ಥೆ ನಿಜವಾಗಿಯೂ ಯಾವುದು? ಅದನ್ನು ಧ್ಯಾನದ ಮೂಲಕ ಮಾತ್ರವೇ ನಾವು ಅನುಭವಿಸಬಹುದೇ?

ನೂರಾರು ವಿಧದಲ್ಲಿ ಆನಂದವನ್ನು ನಾನು ವಿವರಿಸಬಲ್ಲೆ. ಆದರೆ, ಅದನ್ನು ನೀವು ಅನುಭವಿಸುವುದರ ಒಂದೇ ಮಾರ್ಗದಿಂದ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ.

ಹೇಗಾದರೂ ಆಗಲಿ, ನಾನು ಯತ್ನಿಸಿ ನಿಮಗೆ ವಿವರಣೆ ನೀಡುತ್ತೇನೆ. ಜೀವನದಲ್ಲಿ, ಹೆಚ್ಚು ಸಂತೋಷವನ್ನು ನಾವೆಲ್ಲರೂ ಕೆಲವು ಘಳಿಗೆಗಳಲ್ಲಿ ಅನುಭವಿಸಿರುತ್ತೇವೆ. ಆದರೆ ಅವೆಲ್ಲಾ ಯಾವುದೋ ಒಂದು ಕಾರಣಕ್ಕಾಗಿ ಆಗಿರುತೆ.

ಅದು ನಿಜ ಅಲ್ನಾ?

ನೀವು ಸಂತೋಷಪಟ್ಟಿರಿ. ಏಕೆಂದರೆ, ನಿಮಗೆ ಒಂದು ಬಡ್ತಿ ಸಿಕ್ಕಿತು, ಯಾವುದೋ ಒಂದು ಖಾಯಿಲೆಯಿಂದ ಗುಣಮುಖವಾದಿರಿ, ಒಂದು ಹೊಸ ಕಾರನು ಖರೀದಿಸಿದಿರಿ ( ಅಥವಾ ನಿಮ್ಮ ಪಕ್ಕದ ಮನೆಯವರ ಕಾರು ತೊಂದರೆ ಕೊಡುತಿದೆ!)

ನೀವು ಸಂತೋಷ ಪಡುತಿರುವ ಸಮಯದಲ್ಲಿ, ಯಾರೂ ಅದನ್ನು ಕೆಡಿಸಲಾರರು ಅನ್ನಿಸಿರುತ್ತೆ. ಆದರೆ ಅದೇ ದಿನ ನಿಮ್ಮ ಪತಿಯ ಜೊತೆ ಅಥವಾ ಹೆಂಡತಿಯ ಜೊತೆ ಜಗಳ ಆಗಿರುತ್ತೆ, ಆಗ ನಿಮ್ಮ ಜೀವನದಲ್ಲಿ ಕೇವಲ ಕಷ್ಟಕಾರ್ಪಣ್ಯಗಳೇ ಹೊರತು ಬೇರೇನೂ ಇಲ್ಲ ಅಂತ ಯೋಚಿಸತೊಡಗುತೀರಿ! ನಿಜ ಅಂದೆ, , ಸಂತೋಷವೆಲ್ಲಾ ದುಃಖದಲ್ಲೇ ಪರ್ಯವಸಾನವಾಗುತೆ. ಸಂತೋಷದ ಸ್ಥಿತಿಯು ಯಾವಾಗಲೂ ಶಾಶ್ವತವಾಗಿ ಉಳಿಯುವುದಿಲ್ಲ - ಮತ್ತು ಅದು ಬದಲಾದರೆ ಅಥವಾ ಮುಗಿದುಹೋದರೆ, ನೀವು ನೋವನ್ನು ಅನುಭವಿಸುತ್ತೀರಿ. ಯಾವ ಆನಂದವನ್ನು ನೀವು ಯಾವ ಕಾರಣವೂ ಇಲ್ಲದೆ ಅನುಭವಿಸುತ್ತೀರೋ ಅದೇ ಶಾಶ್ವತವಾದದ್ದು, ಏಕೆಂದರೆ ಅದು ಯಾವುದನ್ನೂ ಅವಲಂಬಿಸಿಲ್ಲ.

''ಆನಂದ'' ಎಂದರೇನೇ, ''ಯಾವುದು ಕಡಿಮೆ ಆಗುವುದಿಲ್ಲವೋ, ಯಾವುದು ಕಳೆದು ಹೋಗುವುದಿಲ್ಲವೋ' (ಮುಗಿದು ಹೋಗುವುದಿಲ್ಲವೋ) ಅದು. ಸುಖ, ಸಂತೋಷ ಎನ್ನುವುದಕ್ಕೆ ಆನಂದ ಎನ್ನುವುದು ಸರಿಯಾದ ಪದ ಅಲ್ಲ! ''ಯಾವುದು ಕ್ಷೀಣವಾಗುವುದೇ ಇಲ್ಲವೋ, ನಾಶವಾಗುವುದೇ ಇಲ್ಲವೋ ಅದೇ ಆನಂದ'' ಎಂದು ತಿಳಿದರೆ ನೀವು ಆಶ್ಚರ್ಯ ಪಡುತೀರಿ.

ಆನಂದ ಎಂದರೆ ಸಂತೋಷ ಮಾತ್ರವಲ್ಲ. ಅದು ಸಂತೋಷ, ದುಃಖ ಎರಡನ್ನೂ ಮೀರಿದ ಪ್ರಶಾಂತವಾದ ಸ್ಥಿತಿ. ಅದು ಸಂತೋಷ ಮತ್ತು ದುಃಖಗಳು ನಿಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರಲಾರದ ಸ್ಥಿತಿ. ಆನಂದ ಎಂಬುದು ಶಾಶ್ವತವಾದ, ಕಾರಣವಿಲ್ಲದ ಪ್ರಶಾಂತವಾದ ಸ್ಥಿತಿ. ಅದನ್ನು ಕೇವಲ ಧ್ಯಾನದ ಮೂಲಕ ಮಾತ್ರವೇ ಅನುಭವಿಸುವುದೆಂದೂ ಅಲ್ಲ - ಆದರೆ ಧ್ಯಾನವು ಒಂದು

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಖಚಿತವಾದ ಮಾರ್ಗ. ಆಗುಹೋಗುಗಳ, (ಹಿಗ್ಗುಕುಗ್ಗುಗಳ) ಸೆಳೆತದಿಂದ ದಾಟಿಸಿ ಆಚೆಗೆ ಕರೆದೊಯ್ಯುತ್ತದೆ. ನೀವು ಧ್ಯಾನ ಮಾಡಿದಾಗ, ದೇಹ ಮನಗಳ ಹಾಗೂ ಅಹಂಕಾರದ ಸಂಕುಚಿತ ಎಲ್ಲೆಗಳನ್ನು ಮೀರಿ ಬೆಳೆಯುತ್ತೀರಿ.

ಯಾವಾಗ ಎಲ್ಲರೂ ಒಂದೇ ಎನ್ನುವ ಬರುತದೆಯೋ ಆಗ (ನಾವು) ಪ್ರತಿನಿತ್ಯದ ಈ ಸುಖ ದುಃಖಗಳೊಂದಿಗಿನ ಸಂಬಂಧದಿಂದ ಸಹಜವಾಗಿ ಬಿಡುಗಡೆ ಹೊಂದುತೀರಿ. ಈ ವಿಚಾರವನ್ನು ಬುದ್ದಿಯ ಮೂಲಕ ಅರ್ಥಮಾಡಿಕೊಳ್ಳುವುದು ಕಷ್ಟ, ಆದರೆ, ಪ್ರಾಮಾಣಿಕ ವಾಗಿ ಧ್ಯಾನ ಮಾಡಿದಾಗ, ಅದರ ಅನುಭವ ನಿಮಗಾಗುತ್ತೆ, ಆನಂದದ ಸುಳುಹು (ಕ್ಷಣಿಕ ದರ್ಶನ) ನಿಮಗೆ ಉಂಟಾಗುತ್ತೆ. ಆಗ ನಿಮಗೇ ಅರ್ಥವಾಗುತೆ.

ನಮ್ಮ ಸಾಮಾನ್ಯ ಜೀವನದಲ್ಲಿ, ನಾವು ಆನಂದವನ್ನು ಅನುಭವಿಸಿಯೇ ಇಲ್ಲ ಕಾರಣರಹಿತವಾದ ಆನಂದವು ಸಿಕ್ಕುವ ಸಾಧ್ಯತೆ ಇದೆ ಎಂಬುದೂ ನಮಗೆ ಗೊತ್ತಿಲ್ಲ! ಹೀಗಿರುವಾಗ, ಈ ಆನಂದವನ್ನು ಪಡೆಯಬೇಕೆಂಬ ಹೆಬ್ಬಯಕೆ ಹೇಗೆ ಬಂದು ಸೇರಿದೆ?

ನಿಮಗೆ ಈ ಬಯಕೆ ಬಂದಿರುವುದು ಏತಕ್ಕೆಂದರೆ, ಅದು ನಿಮ್ಮ ನಿಜವಾದ ಸ್ವಭಾವವೇ ಆಗಿದೆ!

ಅದನ್ನು ವಿವರಿಸುತ್ತೇನೆ - ತೈತ್ತರೀಯ ಉಪನಿಷತ್ತಿನಲ್ಲಿ ಈ ಸುಂದರವಾದ ಮಂತ್ರ,

ತಸ್ಮಾದ್ವಾ ಏತಸ್ಮಾದಾತ್ತನ ಆಕಾಶಸ್ತಂಭೂತಃ। ಆಕಾಶಾದ್ವಾಯುಃ । ವಾಯೋರಗ್ನಿಃ ।

ಅಗ್ನೇರಾಪಃ । ಅದ್ಭ್ಯಃ ಪೃಥಿವೀ । ಪೃಥಿವ್ಯಾ ಓಷಧಯಃ ।

ಈ ಮಂತ್ರ ಹೇಳುವುದೇನೆಂದರೆ, ಈ ಪ್ರಪಂಚವು ಪಂಚ ಮಹಾಭೂತಗಳಿಂದ ಸ್ಪಷ್ಟಿಯಾಗಿದೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ. ಮನುಷ್ಯನೂ ಸಹ ಈ ಪಂಚಭೂತಗಳಿಂದಲೇ ಸೃಷ್ಟಿಯಾಗಿದ್ದಾನೆ. ಅದಕ್ಕಾಗಿಯೇ ಅವನು ತನ್ನ ಉಗಮ ಸ್ಥಾನವಾದ ಪಂಚಭೂತಗಳೊಡನೆ ಸೇರಿ ಒಂದಾಗಲು ಹಂಬಲ ವುಳ್ಳವನಾಗಿದ್ದಾನೆ. ವಿವಿಧ ರೀತಿಯಲ್ಲಿ ಅವನು ಈ ಪಂಚಮಹಾ ಚೈತನ್ಯದ ಜೊತೆ ತಾದಾತ್ಕೃತೆಯನ್ನು ಹೊಂದಲು ಯತ್ತಿಸುತ್ತಾನೆ. ಮೂರ್ತಿ ಪೂಜೆಯ ಮೂಲಕ ಭೂಮಿ ತತ್ತ್ವದ ಚೈತನ್ಯದೊಡನೆ, ಪವಿತ್ರ ನದಿಗಳಲ್ಲಿ ತೀರ್ಥಸ್ನಾನ ಮಾಡುವುದರ ಮೂಲಕ ಜಲತತ್ತ್ವದ ಚೈತನ್ಯದೊಡನೆ, ಯಜ್ಞಯಾಗಾದಿ ಕರ್ಮಗಳ ಮೂಲಕ ಅಗ್ನಿತತ್ತ್ವದ ಚೈತನ್ಯದೊಡನೆ ಹಾಗೂ (ವೇದ) ಮಂತ್ರಗಳನ್ನು ಪಠಿಸುವುದರ ಮೂಲಕ ವಾಯುತತ್ತ್ವದ ಚೈತನ್ಯ ದೊಡನೆ, ಈ ಎಲ್ಲಾ ವಿಧದಲ್ಲೂ ಮೂಲಭೂತಗಳೊಡನೆ ಕೂಡಿ ಒಂದಾಗಲು ತಾನೇ ಯತ್ತಿಸುತ್ತಿದ್ದಾನೆ. ಆದರೆ ಇವೆಲ್ಲವೂ ಬಾಹ್ಯದಲ್ಲಿ ಮಾಡುತಿರುವ ವಿಧಾನಗಳು. (ಆದರೆ) ಬಹಳ ಸೂಕ್ಷ್ಮವಾದ, ಪೂರ್ಣ ಶುದ್ಧವಾದ ಆಕಾಶತತ್ತ್ವದ ಚೈತನ್ಯದ ಜೊತೆ ಸೇರಿ ಒಂದಾಗಲು ಹೊರಗಿನ ಸಾಧನಗಳ (ವಿಧಾನಗಳ) ಮೂಲಕ ಸಾಧ್ಯವಾಗದು, ಅದನ್ನು ಆಂತರಿಕವಾಗಿ ಅನುಭವಿಸಬೇಕು. ಧ್ಯಾನ ಅಥವಾ ಮೆಡಿಟೇಶನ್ ವಿಧಾನದ ಮೂಲಕ ಮಾತ್ರ ನಮ್ಮನ್ನು ಆಕಾಶ ಚೈತನ್ಯದ ಜೊತೆ ಒಂದಾಗಿಸಿಕೊಳ್ಳಬಹುದು.

ನಾವು ಧ್ಯಾನಕ್ಕೆ ಪ್ರವೇಶಿಸುವಾಗ (ಧ್ಯಾನದಲ್ಲಿ ಮುಳುಗಿದಾಗ) ನಾವು ಬಾಹ್ಯ ಸಂಬಂಧವನ್ನು ಕಳೆದುಕೊಳ್ಳುತ್ತೇವೆ. ನಮಗೂ, ನಮ್ಮ ಉಗಮಸ್ಥಾನಕ್ಕೂ ಮಧ್ಯೆ ಕಳಚಿಕೊಂಡಿರಬಹುದಾದ ಕೊಂಡಿಯನ್ನು ಪತ್ತೆ ಮಾಡಿಕೊಳ್ಳುತ್ತೇವೆ. ನಮ್ಮ ಮೂಲಸ್ಥಾನಕ್ಕೆ ನಾವು ಹೋಗಿ ಸೇರುತ್ತೇವೆ. ನಾವು ಪೂರ್ಣತೆಯನ್ನು ಅನುಭವಿಸುತ್ತೇವೆ, ಸುರಕ್ಷತೆಯನ್ನು ಅನುಭವಿಸುತ್ತೇವೆ. ಅದಕ್ಕಾಗಿಯೇ ಧ್ಯಾನವು

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ನಮ್ಮ ಆನಂದದ ಪರಿಧಿಯೊಳಕ್ಕೆ ಸೇರಿಸಿ ಬಿಡುತ್ತದೆ (ಕರೆದುಕೊಂಡು ಹೋಗುತದ ).

ಆದ್ದರಿಂದ ಆನಂದವನ್ನು ಬಯಸುವುದು ಎಂದರೆ ನಮ್ಮ ಸಹಜ ಸ್ಥಿತಿಗೆ ವಾಪಸಾಗಲು ಹಂಬಲಿಸುವುದು ಎಂದೇ ಅರ್ಥ. ಅದಕ್ಕೆ ನಾವು ತಿಳಿದಿರಲಿ, ತಿಳಿಯದೇ ಇರಲಿ, ನಾವು ಪ್ರತಿಯೊಬ್ಬರೂ ಒಳಗೊಳಗೇ ಧ್ಯಾನಕ್ಕಾಗಿ ಹಂಬಲಿಸುತಿರುತೇವೆ.

ಧ್ಯಾನವೆಂದರೆ ನಿಜವಾಗಿಯೂ ಏನು?

'ಧ್ಯಾನ' ಎನ್ನುವುದಕ್ಕೆ ಬೇಕಾದಷ್ಟು ವಿವರಣೆಗಳಿವೆ.

ಬೇರೆಬೇರೆ ಗುರುಗಳು ಅವರವರ ಅನುಭವಕ್ಕೆ ತಕ್ಕಂತೆ, ಅಥವಾ ನಿರ್ದಿಷ್ಟ ಅವಶ್ಯಕತೆಗಳಿಗೆ ತಕ್ಕಂತೆ ಪ್ರತಿಪಾದಿಸಿದ್ದಾರೆ.

ಧ್ಯಾನವೆಂದರೆ ಪ್ರಾರ್ಥನೆ.

ಧ್ಯಾನವೆಂದರೆ ನಮ್ಮೊಳಗೇ ಹುದುಗಿಸಲ್ಪಟ್ಟ ಅಮೂಲ್ಯನಿಧಿಯನ್ನು ಹೊರ ತೆಗೆಯಲು ಸಾಧ್ಯವಾಗುವಂತೆ ಮಾಡುವ ವಿಧಾನ.

ಧ್ಯಾನ ಅಂದರೆ ನಿಮ್ಮನ್ನು ಪರಾಶಕ್ತಿಯೊಡನೆ ಸೇರಿಸಲು ಸಹಾಯ ಮಾಡುವ ತಂತ್ರ.

ಇವೆಲ್ಲವೂ ಸರಿಯಾದವುಗಳೇ.

ನಾನು ಹೇಳುತ್ತೇನೆ - ಧ್ಯಾನ ಅಂದರೆ, "ಆನಂದದಲ್ಲೇ ಇರುವ ಕ್ಷಣ"! ಅಷ್ಟೆ (ಆನಂದಭರಿತನಾಗಿರುವುದಷ್ಟೆ) ಯಾವಾಗ ನೀವು ವರ್ತಮಾನದ ಕ್ಷಣದಲ್ಲಿ ಪ್ರಶಾಂತವಾಗಿರುತೀರೋ, ಆಗಲೇ ಧ್ಯಾನ ಸ್ಥಿತಿಯಲ್ಲಿ ಇದ್ದುಬಿಟ್ಟದ್ದೀರಿ. ನೀವು ಮತ್ತೇನನ್ನೂ ಮಾಡಬೇಕಾದದ್ದೇ ಇಲ್ಲ.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಎಲ್ಲರೂ ಧ್ಯಾನ ಮಾಡುವುದನ್ನು ಕಲಿತುಕೊಳ್ಳಬಹುದೇ?

ನೀವು ಧ್ಯಾನ ಮಾಡುವುದನ್ನು ಕಲಿತುಕೊಳ್ಳಬೇಕಾಗಿಲ್ಲ.

ನೀವು ಈಗಾಗಲೇ ಧ್ಯಾನ ಮಾಡುತಿರುವವರೇ ಆಗಿಬಿಟ್ಟಿದ್ದೀರಿ.

ನೀವು ನಿಮ್ಮ ಜೀವನದಲ್ಲಿ ಅತೀವ ಸೌಂದರ್ಯವನ್ನು ಅನುಭವಿಸಿದ ಘಳಿಗೆಯನ್ನು (ಪ್ರಸಂಗವನ್ನು) ಜ್ಞಾಪಿಸಿಕೊಳ್ಳಿರಿ.

ಸೂರ್ಯ ಇದಕ್ಕಿದ್ದಂತೆ ಬೆಟ್ಟದ ಹಿಂದಿನಿಂದ ಉದಯಿಸುತ್ತಾ ಇರುವುದನ್ನು ಅಥವಾ ಮೊದಲ ಬಾರಿಗೆ ನೀವು (ಒಳ್ಳೆಯ) (ಸುಶ್ರಾವ್ಯವಾದ) ಸಂಗೀತದ ತುಣುಕನ್ನು ಕೇಳುತಿರುವುದನ್ನು.

ಆ ಘಳಿಗೆಯಲ್ಲಿ ಕೂಡಲೇ ನೀವು ಸಂಪೂರ್ಣವಾಗಿ ಸ್ಥಬ್ದರಾಗಿ, ಮೂಕರಾಗಿ ಬಿಡುತೀರಿ.

ನಾವೆಲ್ಲರೂ ಅಂತಹ ಸನ್ನಿವೇಶವನ್ನು ಅನುಭವಿಸಿದ್ದೀವಿ ಅಲ್ವೆ ? ಅಂತಹ ಘಳಿಗೆಯಲ್ಲಿ, ಆಲೋಚಿಸಲಾರಿರಿ. ನೀವು ಶಾಂತರಾಗಿ ಬಿಡುತೀರಿ, ಸೌಂದರ್ಯ ಪ್ರಜ್ಞೆಯಲ್ಲಿದ್ದು ಬಿಡುತ್ತೀರಿ, ಅಷ್ಟೆ

ಆ ಘಳಿಗೆಯೇ ಧ್ಯಾನದ ಸ್ಥಿತಿ.

ಸ್ವಲ್ಪ ಸಮಯದ ನಂತರ, ನಿಮ್ಮ ಒಳಗಿನ ಸಂಭಾಷಣೆ (ಹರಟೆ) ಪ್ರಾರಂಭವಾಗಿಬಿಡುತ್ತೆ. ನಿಮ್ಮ ಮನಸ್ಸು ಹೇಳುತ್ತೆ, - ಅದೊಂದು ಸುಂದರವಾದ ಸೂರ್ಯೋದಯ.

ನಿಮ್ಮ ಮನಸು ಸಂಗೀತವನ್ನು, ನೀವು ಕೇಳಿದ ಮತ್ತೊಂದು ಸಂಗೀತದೊಂದಿಗೆ ಹೋಲಿಸಿ ನೋಡಲು ಪ್ರಾರಂಭಿಸುತ್ತದೆ.

ಅದರ ಅರ್ಥ - ನೀವು ಧ್ಯಾನದಿಂದ ಹೊರಬಂದಿರಿ ಎಂದು.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಧ್ಯಾನವೆಂದರೆ, ಶಾಂತವಾದ, ಆನಂದವಾದ ಸ್ಥಿತಿಯಲ್ಲೇ ಉಳಿದು ಬಿಡುವುದು (ಮುಳುಗಿ ಬಿಟ್ಟಿದ್ದೀರಿ) ಎಂದು.

ಈ ಸ್ಥಿತಿಯನ್ನು ಕಲಿತುಕೊಳ್ಳಲು ಆಗುವುದಿಲ್ಲ. ನೀವು ಅದನ್ನು ಅನುಭವಿಸ ಬಹುದು ಅಷ್ಟೆ.

ಧ್ಯಾನವೆಂದರೆ ಏನನ್ನೋ ನೀವು ಮಾಡುವುದಲ್ಲ. ಇದನ್ನು ಸ್ಪಷ್ಟವಾಗಿ ತಿಳಿಯಿರಿ. ಧ್ಯಾನವನ್ನು ನೀವು ಮಾಡಲು ಆಗುವುದೇ ಇಲ್ಲ.

ನೀವು ಹೊರಹೊಮ್ಮಿ ಸ್ಪುರಿಸುವ ಸ್ಥಿತಿಯೇ ಧ್ಯಾನ.

(ಅದು) ದೈಹಿಕ ಕ್ರಿಯೆ ಮಾತ್ರವಲ್ಲ. ಆಲೋಚಿಸುವುದೂ ಸಹ ಒಂದು ಕ್ರಿಯೆಯೇ. ಏಕಾಗ್ರತೆಯಿಂದ ಏನನ್ನಾದರೂ ಚಿಂತಿಸುವುದೂ ಒಂದು ಕ್ರಿಯೆಯೇ. (ಭಾವನೆಗಳ ಮೂಲಕ) ಅನುಭವಿಸುವುದನ್ನೆಲ್ಲಾ ನೀವು ಬಿಟ್ಟಿರ್‍ಶಿರೋ, ಆಗ ಉಳಿಯುವುದೇ ಧ್ಯಾನ.

ತನ್ನಲ್ಲಿ ತಾನು ಇರುವುದೇ ಧ್ಯಾನ.

ಜ಼ನ್ ಮಾಸ್ಟರ್ ಹೇಳುವ ತರಹ - ವರ್ತಮಾನ ಕಾಲವನ್ನು ಯಾವ ವಿರೋಧವೂ (ತಡೆಯೂ) ಇಲ್ಲದೆ ಅನುಭವಿಸುವುದೇ ಧ್ಯಾನ.

ಅದೇ ರೀತಿ, ಆನಂದ ಎಂಬುದು ನಿಮ್ಮ ಕಠಿಣ ಪರಿಶ್ರಮದಿಂದ ಬಂದ ಫಲವಲ್ಲ. ನೀವು ಆನಂದವನ್ನು ಪಡೆಯಲಾರಿರಿ! ನೀವು ಆನಂದದಲ್ಲಿ ವಿಶ್ರಮಿಸಬಲ್ಲಿರಿ ಅಷ್ಟೆ

ಹಾಗಾದರೆ ನಮಗೆ ಧ್ಯಾನದ ತಂತ್ರಗಳು ಏಕೆ ಬೇಕು?

ಧ್ಯಾನದ ತಂತ್ರಗಳು ನಿಮಗೆ ಏನನೋ (ಇಲ್ಲದುದನ್ನು) ಪಡೆಯಲು ಸಹಾಯ ಮಾಡುವುದಕ್ಕಾಗಿ ಅಲ್ಲ. ಅದಿರುವುದು, (ಇರುವುದನ್ನು) ನೆನಪು ಮಾಡಿಕೊಳ್ಳಲು ಸಹಾಯ ಮಾಡಲು ಮಾತ್ರ.

ಈ ಕೂಡಲೇ ''ನೀವು ಆನಂದದೊಳಕ್ಕೆ ಸರಿದುಹೋಗಿ ಬಿಡಿ' ಎಂದು ಹೇಳಿದರೆ ''ಅದು ಸಾಧ್ಯವಾಗುತಾ?''

ನಿಮಗೆ ಆನಂದ ಎಂಬುದು ನಿಮ್ಮ ಸಹಜ ಸ್ಥಿತಿ ಎನ್ನುವುದೇ ಗೊತ್ತಿಲ್ಲ. ಹೀಗೆ ನಿಮಗೆ ಗಲಿಬಿಲಿಯನ್ನೂ, ಹೆದರಿಕೆಯನ್ನೂ ಉಂಟುಮಾಡುತ್ತವೆ.

ಧ್ಯಾನಕ್ಕೆ ಪ್ರವೇಶಿಸುವುದು ಅಂದರೆ, ದಡವಿಲ್ಲದ ಸಮುದ್ರಕ್ಕೆ ಇಳಿದ ಹಾಗೆ. ನೀವು ಈಜುವುದನ್ನು ಈಗ ತಾನೇ ಕಲಿಯಲು ಪ್ರಾರಂಭಿಸಿರುವಾಗ ಸಮುದ್ರಕ್ಕೆ ನೇರವಾಗಿ ನೀವಾಗಿಯೇ ಇಳಿಯುತೀರಾ?

ಇಲ್ಲ! ಪಾತಿಕೆಯ ಪದ್ಧತಿಯೇ ಅಲ್ಲ!

ನಿಮಗೆ ನೀವು ಮುಳುಗದಂತೆ ನೋಡಿಕೊಳ್ಳುವ ಈಜು ಕಲಿಸುವವರು ಬೇಕು, ಹಾಗೂ ದಾರಿ ತೋರಿಸಲು ಲೈಟ್‌ಹೌಸ್ ಸಹ ಇರಬೇಕು. ಅದೇ ರೀತಿ, ನೀವು ಧ್ಯಾನ ಮಾಡಲು ಪ್ರಾರಂಭಿಸಿದಾಗ, ಏನು ಮಾಡಬೇಕು ಎಂಬ ವಿಧಾನವನ್ನು ತಿಳಿಸಿಕೊಡಲು, ಹಾಗೂ ನಿಮಗೆ ಹೆಚ್ಚು ಸಹಜವಾಗಿ ಹೊಂದುವಂತಹ ಧ್ಯಾನ ಮಾರ್ಗವನ್ನು ತೋರಿಸಿಕೊಡಲು ಯಾರಾದರೂ ಬೇಕು.

ಧ್ಯಾನದ ತಂತ್ರಗಳು ಅಂದರೆ ಆ ಈಜು ಕಲಿಸುವವರಿದ್ದಂತೆ ಅಷ್ಟೆ, ಧ್ಯಾನವೇ ನಿಮ್ಮ ಜೀವನದ ಒಂದು ಸಹಜ ದಾರಿಯಾಯಿತು ಎನಿಸಿದಾಗ, ಮೊದಲಿನ ನಿಮ್ಮ ಧ್ಯಾನತಂತ್ರಗಳನ್ನು ಸಹಜವಾಗಿ ಬಿಟ್ಟುಬಿಡುತೀರಿ.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಪ್ರತಿ ದಿವಸ ಎಷ್ಟು ಗಂಟೆಗಳ ಕಾಲ ನಾನು ಧ್ಯಾನ ಮಾಡಬೇಕು?

ಎಷ್ಟು ಗಂಟೆಗಳು ಅನ್ನುವ ಪ್ರಶ್ನೆಯೇ ಇಲ್ಲ!

ನಾನು ತಿಳಿಸಿದಂತೆ ಧ್ಯಾನ ಎನ್ನುವುದನ್ನು ನಿಮ್ಮ ಜೀವನದಲ್ಲಿ (ಹೊಸದಾಗಿ) ಸೇರಿಸಿಕೊಳ್ಳುವುದು ಎಂದಲ್ಲ. ಇದು ಪ್ರತಿನಿತ್ಯ ನಾನು ಎಷ್ಟು ಸಾರಿ ಉಸಿರಾಡಬೇಕು? ಎಂದು ಕೇಳಿದ ಹಾಗಾಗುತ್ತದೆ.

ನಾನು ಪ್ರತಿನಿತ್ಯ ಇಷ್ಟು ಗಂಟೆಗಳ ಕಾಲ ಧ್ಯಾನ ಮಾಡುತ್ತೇನೆ, ಮಿಕ್ಕ ಸಮಯದಲ್ಲಿ ಈಗ ಏನೇನು ಮಾಡುತಿದ್ದೀನೋ ಅದನ್ನು ಮುಂದುವರಿಸಿಕೊಂಡು ಹೋಗುತೇನೆ ಎಂದು ನೀವು ಹೇಳಲಾಗುವುದಿಲ್ಲ.

ಧ್ಯಾನಕ್ಕೆ ಬೇಕಾಗಿರುವುದು ನಿಮ್ಮ ಒಳಗೇ ಮಹತ್ತರವಾದ ಬದಲಾವಣೆ.

ಧ್ಯಾನವೆನ್ನುವುದು ನಿಮ್ಮ ಜೀವನಪಥದ ಸಂಪೂರ್ಣ ಪರಿವರ್ತನೆ.

ನಿಮ್ಮೊಳಗೆ ಮೊದಲೇ ಬೀಜವು ಇದ್ದು ಬಿಟ್ಟಿದೆ, ಆದರೆ, ಅದು ಮೊಳೆತು, ಮರವಾಗಿ ಬೆಳೆದು ಫಲ ಕೊಡಲು ಮೊದಲು ಆ ಬೀಜವು ಒಡೆಯಬೇಕು.

ನೀವು ನಿಮ್ಮನ್ನು ಬಿರಿದುಕೊಂಡು ಅವಕಾಶ ಮಾಡಿಕೊಳ್ಳಬೇಕು! ಯಾವಾಗ ನೀವು ಧ್ಯಾನವನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡುತ್ತೀರೋ, ಆಗ ಇದು ತನಗೆ ತಾನೇ ಆಗುತ್ತದೆ. ಆದರೆ, ಅದು ಮೊಳೆತು, ಬೆಳೆದು, ಪೂರ್ಣವಾಗಿ ಬದಲಾವಣೆಯನ್ನು ಹೊಂದಬೇಕೆಂಬ ಒಲವು ಒಪ್ಪಿಗೆ ನಿಮ್ಮೊಳಗೆ ಇರಬೇಕು.

ಧ್ಯಾನವು ಪುನರ್ಜನ್ಮಕ್ಕಿಂತ ಕಡಿಮೆಯೇನಲ್ಲ! ನಿಮಗೆ ಸಾವನ್ನು ಎದುರಿಸುವ, ನಿಮ್ಮ ಸ್ವಂತ ಸಾವನ್ನೇ ಎದುರಿಸುವ ಸಾಹಸ, ಧೈರ್ಯ ನಿಮ್ಮಲ್ಲಿರಬೇಕು ಹಾಗೂ ಪುನಃ ಹೊಸಬರಾಗಿ ಹುಟ್ಟಲು ಸಿದ್ದರಿರಬೇಕು.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಧ್ಯಾನದಿಂದ ಆಗುವ ಪ್ರಯೋಜನಗಳೇನು?

ಧ್ಯಾನವು ನಿಮ್ಮನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ, ಭಾವನಾತ್ಮಕ ವಾಗಿಯೂ ಹಾಗೂ ಆಧ್ಯಾತ್ಮಿಕವಾಗಿಯೂ ಪರಿವರ್ತಿಸುವ ಶಕ್ತಿಯುಳ್ಳದ್ದಾಗಿದೆ.

ದೈಹಿಕ ಮಟ್ಟದಲ್ಲಿ ಉಪಯೋಗವು ಚೆನ್ನಾಗಿ ಗೊತ್ತಿರುವುದೇ ಆಗಿದೆ.

ಧ್ಯಾನದ ಮೂಲಕ, ನಿಮ್ಮ ರಕ್ತದ ಸಕ್ರಮಗೊಳಿಸಬಹುದು. ನಿಮ್ಮ ಶರೀರದಲ್ಲಿ ಖಾಯಿಲೆಯನ್ನು ನಿರೋಧಿಸುವ ಶಕ್ತಿಯನ್ನು ಹೆಚ್ಚಿಸಬಹುದು. ಧ್ಯಾನದ ಮೂಲಕ ದೀರ್ಘ ಕಾಲದ ತೀವ್ರ ಸಮಸ್ಯೆಗಳನ್ನು ಅಂದರೆ ಚರ್ಮರೋಗ, ಆಸ್ತಮಾ, ಕೀಲುನೋವು ಇವುಗಳನ್ನೂ ವಾಸಿಮಾಡಲು ಸಾಧ್ಯ. ಯಾವ ಖಾಯಿಲೆಯೂ ಧ್ಯಾನದ ಶಕ್ತಿಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ! ಧ್ಯಾನವು ಔಷಧೋಪಚಾರಕ್ಕೆ ಪ್ರೋತ್ಸಾಹಕಾರಿ ಹೊರತು ಅದಕ್ಕೆ ಪರ್ಯಾಯವಲ್ಲ.

ಮಾನಸಿಕ ಸರದಲ್ಲಿ ಆಲೋಚನೆಗಳಲ್ಲಿ ಸ್ಪಷ್ಟತೆಯನ್ನೂ, ವಿಮರ್ಶಾತ್ಮಕತೆಯನ್ನೂ ಹೆಚ್ಚಿಸುತ್ತದೆ. ಆಲೋಚನೆಗಳ ಮಧ್ಯದ ಅಂತರವು ಜಾಸ್ತಿಯಾಗುತ್ತೆ, ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸುವುದಕ್ಕೆ ಧ್ಯಾನವು ಒಂದು ನಿಶ್ಚಿತ ಮಾರ್ಗವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನವು ನಿಮ್ಮನ್ನು ಬುದ್ಧಿಮತ್ತೆಯಿಂದ ಪ್ರಜ್ಞಾಶಕ್ತಿಯತ್ತ ಮಾರ್ಗದರ್ಶನವನ್ನು ಮಾಡುತ್ತದೆ. ಪ್ರಜ್ಞಾಶಕ್ತಿಯು ಯಾವ ಸಂದರ್ಭವೇ ಆಗಲಿ ಅದಕ್ಕೆ ತಕ್ಕಂತೆ ಹೆಚ್ಚು ಸೃಜನಾತ್ಮಕ ಹಾಗೂ ರಚನಾತ್ಮಕ ಸಾಮರ್ಥ್ಯದೊಂದಿಗೆ ಪ್ರತಿಕ್ರಿಯಿಸಲು ಸಾಮರ್ಥ್ಯವನ್ನು ನೀಡುತ್ತದೆ. ಈ ಕಲೆಯನ್ನು ನೀವು ಕಲಿಯಲಾರಿರಿ. ಆದರೆ ಧ್ಯಾನದಿಂದ ಇದು ತಾನಾಗಿಯೇ ಸಹಜವಾಗಿ ಅರಳುತ್ತದೆ.

ಆಧ್ಯಾತ್ಮಿಕವಾದ ಉಪಯೋಗಗಳು ಅಂದರೆ ಅದನ್ನು ಪಟ್ಟಿ ಮಾಡಲಾರದಷ್ಟಿವೆ. ಧ್ಯಾನವು ವಿಶ್ವಶಕ್ತಿಯ ಅನಂತ ಚೈತನ್ಯದೊಂದಿಗೆ ನೇರ ಸಂಪರ್ಕವನ್ನು ಪಡೆಯುವಂತೆ ನಿಮ್ಮನ್ನು ಮಾಡಿಬಿಡುತ್ತದೆ. ನಿಮ್ಮೊಳಗೇ ಪ್ರತಿಯೋರ್ವರಲ್ಲೂ

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಹುದುಗಿರುವ ದಿವ್ಯತ್ತವನ್ನು ಕಂಡುಕೊಳ್ಳಲು ನಿಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಧ್ಯಾನವು ನಿಜವಾಗಿಯೂ ಶಬ್ದಾತೀತವಾದದ್ದು. ಅದರ ಪ್ರಯೋಜನಗಳನ್ನು ಅನುಭವಿಸಿ ತಿಳಿಯಬೇಕೇ ಹೊರತು ವಿವರಿಸಲು ಆಗದು.

ಧ್ಯಾನವು 24 ಗಂಟೆಗಳ ಕಾಲವೂ ಮಾಡುವ ಪ್ರಕ್ರಿಯೆಯಾದರೆ, ನಮ್ಮ ಜೀವನ ನಡೆಯುವುದಾದರೂ ಹೇಗೆ? ಸದಾಕಾಲದಲ್ಲಿಯೂ ನಮ್ಮ ಅಸ್ತಿತ್ವದಲ್ಲಿಯೇ (ಇರುವಿಕೆಯಲ್ಲಿಯೇ) ಮನಸ್ಸನ್ನು ಕೇಂದ್ರೀಕರಿಸಿದರೆ, ಜೀವನದ ಮಿಕ್ಕ ಕೆಲಸಕಾರ್ಯಗಳನ್ನು ಹೇಗೆ ನಿಭಾಯಿಸುವುದು?

ಧ್ಯಾನವು ಕೆಲಸಕಾರ್ಯಗಳಿಗೆ ವಿರೋಧವಾದದಲ್ಲ!

ಒಮ್ಮೆ ನಿಮ್ಮ ಅಸ್ತಿತ್ವದಲ್ಲಿಯೇ ನೀವು ವಿಚಲಿತರಾಗದೆ ಉಳಿಯುವ ಕುಶಲತೆಯನ್ನು (ಕಲೆಯನ್ನು) ಕಲಿತರೆ, ನೀವು ಎಷ್ಟೇ ಕೆಲಸಕಾರ್ಯಗಳಿದ್ದರೂ ಸಹ, ಅದೇ ಸ್ಥಿತಿಯಲ್ಲಿದ್ದು ಎಲ್ಲವನ್ನೂ ಸಮರ್ಪಕವಾಗಿ ನಡೆಸಬಹುದು. ಹೊರಗಡೆ ನೀವು ಮಾಡುವ ಅಥವಾ ಮಾಡದೇ ಇರುವ ಕಾರ್ಯಗಳು ಅಪ್ರಸ್ತುತವಾದದ್ದು. (ಇದಕ್ಕೆ ಸಂಬಂಧಿಸಿದವುಗಳೇ ಅಲ್ಲ).

ಇದು ಎರಡು ಸರಳ ಪ್ರಕ್ರಿಯೆ

ಮೊದಲನೆಯದಾಗಿ ಅಂತರಾತ್ಮದ ಜೊತೆ ನೀವು ಸಂಪರ್ಕವನ್ನು ಪಡೆಯಬೇಕು. ಅಂತಹದೊಂದು ಇದೆ ಎಂಬುದನ್ನು ನೀವು ಅರಿತುಕೊಳ್ಳಬೇಕು! ಆ ಇರುವಿಕೆಯ ಸ್ಥಿತಿಯಲ್ಲಿಯೇ ಆನಂದಿಸುವುದನ್ನು ಕಲಿಯಬೇಕು. ಧ್ಯಾನಕ್ಕೆ ಕುಳಿತಾಗ ಮೊದಮೊದಲು ನೀವು ಇದನ್ನು ಅರ್ಧ ಅಥವಾ ಒಂದು ಗಂಟೆಯವರೆಗೆ ಮಾತ್ರ ಮಾಡುವಿರಿ. ಒಮ್ಮೆ ನಿಮಗೆ ಈ ಸ್ಥಿತಿಯು ಹಿತವೆನಿಸಿದರೆ, ಅದನ್ನೇ ಪ್ರಯತ್ನ ಮಾಡುತ್ತಾ ನಿಮ್ಮ ಧ್ಯಾನದ ಅವಧಿಯನ್ನು ಹೆಚ್ಚಿಸುತ್ತಾ ಹೋಗಬೇಕು.

ಪ್ರಾರಂಭದಲ್ಲಿ ಸ್ವಲ್ಪಸ್ವಲ್ಪವಾಗಿಯೇ ತೊಡಗಿಕೊಳ್ಳಿ. ಹಾಗೆಯೇ ಊಟ ಮಾಡುವಾಗಲೂ, ನಡೆಯುತ್ತಿರುವಾಗಲೂ, ಕೆಲಸ ಮಾಡುವಾಗಲೂ, ಕೇಂದ್ರೀಕರಿಸಿ ಅದೇ ಸ್ಥಿತಿಯಲ್ಲಿರಲು ಯತ್ನಿಸಿರಿ. ಒಮ್ಮೆ ನೀವು ಇದನ್ನು ಸಾಧಿಸಿದಿರಿ ತೊಡಗಬಹುದು.

ಹೊರಗಡೆ ನಿಮ್ಮ ಜೀವನ ಎಂದಿನಂತೆ ಸಾಗುತಾ ಇರುತ್ತೆ. ಸರಿಯಾಗಿ ಹೇಳುವುದಾದರೆ, ಇನ್ನೂ ಒಳ್ಳೆಯ ರೀತಿಯಲ್ಲಿ ನಡೆಯುತ್ತಿರುತ್ತೆ ಅನ್ನಬಹುದು -ಏಕೆಂದರೆ, ನೀವು ಹೆಚ್ಚಿನ ಸ್ಪಷ್ಟತೆ ಹಾಗೂ ತೀವ್ರವಾದ ಆಸಕ್ತಿಯನ್ನು ಹೊಂದಿದವರಾಗಿರುತ್ತೀರಿ. ನೀವು ಸೃಜನಾತ್ಮಕರೂ ಆಗಿರುತ್ತೀರಿ.

ಆದರೂ ಸಹ, ಆಂತರ್ಯದಲ್ಲಿ ಆಳವಾದ ಮತ್ತು ಕ್ಷೋಭೆಗೊಳ್ಳದ ಶಾಂತತೆಯನ್ನು ಅನುಭವಿಸುತ್ತೀರಿ.

ಏಕೆಂದರೆ, ನೀವು ಏನನ್ನೂ ನೋಡುತಿರುತ್ತೀರಿ.

ಇದೇ ಧ್ಯಾನದಲ್ಲಿನ ಸಂಪೂರ್ಣ ರಹಸ್ಯ - ನಿಮ್ಮ ಕಾರ್ಯಗಳಿಗೇ, ನಿಮ್ಮ ಭಾವನೆಗಳಿಗೇ ವೀಕ್ಷಕರಾಗುವಿಕೆ, ಸಾಕ್ಷಿಯಾಗುವಿಕೆ.

ನಿಮ್ಮ ಪ್ರಾರಂಭಿಸಿರುವುದರಿಂದ, ಬದಲಾಗದೇ ಇರುವವನು, ದುಃಖ ಪಡದೇ ಇರುವವನು, ಹಣಕ್ಕಾಗಲೀ, ರಕ್ಷಣೆಗಾಗಲೀ, ಯಶಸ್ತಿಗಾಗಲೀ ಲಕ್ಷಿಸದೇ ಇರುವವನು ನಿಮ್ಮೊಳಗೇ ಮತ್ತೊಬ್ಬನಿದ್ದಾನೆಂಬುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತೀರಿ.

ಮಿಕ್ಕಿದ್ದೆಲ್ಲವೂ ನಿಮ್ಮ ಸುತ್ತ ನೀವೇ ರಚಿಸಿಕೊಂಡ ಕೇವಲ ನಿಮ್ಮ ವ್ಯಕ್ತಿತ್ವ.

ಅದೇ ನಿಜವಾದ ನೀನು.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಒಮ್ಮೆ ಈ ಕೆಲಸ ಮಾಡುವವ, ಕೋಪಿಸಿಕೊಳ್ಳುವವ, ತೊಂದರೆಗೆ ಒಳಗಾಗಿರುವವ ತಿಳಿದೊಡನೆಯೇ ಅನುಭವಿಸುತ್ತೀರಿ.

ಇದು ಧ್ಯಾನದ ಮೂಲಕ ಉಂಟಾಗುತ್ತೆ.

ಧ್ಯಾನವು ನಿಮಗೆ ಅಂತಿಮ ಸ್ವಾತಂತ್ರ್ಯವನ್ನು ದಯಪಾಲಿಸುತ್ತದೆ - ನಿಮ್ಮಿಂದಲೇ ನಿಮಗೆ ಸ್ವಾತಂತ್ರ್ಯ, ನೀವೇ ರಚಿಸಿಕೊಂಡಿರುವ ನಿಮ್ಮ ವ್ಯಕ್ತಿತ್ವದ ಬಂಧನದಿಂದ ಸ್ವಾತಂತ್ರ್ಯವನ್ನು ಪಡೆಯುತೀರಿ.

ಧ್ಯಾನವನ್ನು ಸಮೀಪಿಸಲು ಸರಿಯಾದ ಮಾರ್ಗ ಯಾವುದು? ಒಳ್ಳೆಯ ಪ್ರಶ್ನೆ.

ಪ್ರಪ್ರಥಮವಾಗಿ ಪ್ರಾಮಾಣಿಕತೆಯಿಂದ ಸಮೀಪಿಸಿರಿ.

ಧ್ಯಾನವನ್ನು ನಂಬಿ ಅಥವಾ ನಂಬಬೇಡಿ ಎಂದು ನಾನು ನಿಮಗೆ ಹೇಳುತಿಲ್ಲ. ನಂಬಿಕೆಯನ್ನು ಇಡಿ ಎಂದು ನಾನು ನಿಮಗೆ ಹೇಳುತಿಲ್ಲ.

ನಾನು ಹೇಳುವುದು ಅದರಲ್ಲಿ ಶ್ರದ್ದೆಯನ್ನಿಡಿ ಎಂದು. ನಂಬಿಕೆ ಎಂಬುವುದು ಮೊದಲೇ ನಿರ್ಧರಿಸಿ ಒಪ್ಪಿಕೊಂಡಂಥದ್ದು. ಶ್ರದ್ದೆ ಎಂದರೆ ಪ್ರಯೋಗಕ್ಕೆ ತೆರೆದಿಟ್ಟಿರುವುದು.

ಆದುದರಿಂದ ಧ್ಯಾನಕ್ಕೆ ಒಂದು ಅವಕಾಶವನ್ನು ಕೊಡಿ. ತೆರೆದ ಮನಸ್ಸಿನಿಂದಿರಿ. ಸ್ಪೂರ್ತಿಯುತರಾಗಿರಿ, ಮನಸಿನಲ್ಲಿರುವ ಯಾವುದೋ ಭಾವನೆಗಳಿಗೆ ಹೊಡೆತ ಬಿದ್ದಂತಾದರೂ ಆ ಹೊಡೆತಗಳನ್ನು ಸ್ವೀಕರಿಸಲು ಮತ್ತು ಹೊಸತನ್ನ ಸ್ವೀಕರಿಸಲು ಸಿದ್ದವಾಗಿರಿ.

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ಎರಡನೆಯದಾಗಿ ಆಶಾವಾದಿಗಳಾಗಿ ಸಮೀಪಿಸಿರಿ.

ಈ ಆನಂದದ ಸ್ಥಿತಿಯು ಕೇವಲ ಯೋಗಿಗಳಿಗೆ, ಸನ್ಯಾಸಿಗಳಿಗೆ ಮಾತ್ರ ಮೀಸಲಲ್ಲ.

ಆನಂದ ಎನ್ನುವುದು ನೀವು ಪೂರ್ಣ ರೀತಿಯಲ್ಲಿ ಪಡೆಯಬಹುದಾದ ಗುರಿ -ಅದರ ಬಗ್ಗೆ ನಿಮಗೆ ಮೊದಲು ಏನೂ ತಿಳಿಯದಿದ್ದರೂ ಸಹ.

ಧ್ಯಾನಕ್ಕೆ ಯಾವುದೋ ಅರ್ಹತೆಯನ್ನು ಹೊಂದಿರಬೇಕೆಂಬುದೂ ಇಲ್ಲವೆಂದು ನಾನು ಹೇಳುತೇನೆ.

ಒಮ್ಮೆ ಮಹಾತ್ಮರಾದ ರಮಣ ಮಹರ್ಷಿಗಳ ಹತ್ತಿರ ಹೋಗಿ ಒಬ್ಬ ಮನುಷ್ಯ ಭಗವಾನ್ ನಾನು ಆಧ್ಯಾತ್ಮ ಜೀವನಕ್ಕೆ ಅರ್ಹನಾಗಿದ್ದೇನೆಯೇ? ಎಂದು ಕೇಳಿದನಂತೆ. ಅದಕ್ಕೆ ರಮಣರು, 'ನೀನು ಜೀವಂತವಾಗಿದೀಯೇನಪ್ಪಾ'? ಅಂತ ಪ್ರಶ್ನಿಸುವುದರ ಮೂಲಕ ಉತ್ತರಿಸಿದರಂತೆ. ಆಗ ಆ ಮನುಷ್ಯ ದಿಗ್ಭ್ರಮೆಗೊಂಡು ಹೌದು ಇದ್ದೇನಲ್ಲಾ ಎಂದ.

ಅಷ್ಟೇ ಸಾಕಪ್ಪಾ. ಆಧ್ಯಾತ್ಮ ವಿಷಯಕ್ಕೆ ಬೇಕಾದ ಅರ್ಹತೆ ನಿನ್ನಲ್ಲಾಗಲೇ ಇದ್ದೇಬಿಟ್ಟಿದೆ ಅಂದರಂತೆ.

ಸುಮ್ಮನೆ ಜೀವಂತವಾಗಿದ್ದರೆ ಸಾಕು - ಆಧ್ಯಾತ್ಮಕತೆಗೆ ಅರ್ಹತೆ ಇದ್ದಂತೆಯೇ.

ಯಾವಾಗ ಆ ದಿವ್ಯತ್ತವೇ ನಿಮ್ಮ ಮೇಲೆ ಯಾವ ನಿಬಂಧನೆಯನ್ನೂ ಹಾಕದಿರುವಾಗ, ನೀವೇ ಏಕೆ ಅವನ್ನು ನಿಮ್ಮ ಮೇಲೆ ಹಾಕಿಕೊಳ್ಳುತೀರಿ? ಧ್ಯಾನವನ್ನು ಪ್ರಾರಂಭಿಸುವಾಗಲೇ ಈ ಕುರಿತು ಮೊದಲೇ ಸ್ಪಷ್ಟವಾಗಿರಿ. ನಿಮಗೆ ಖಚಿತವಾದ ಒಂದು ಗುರಿ ಇದೆ, ಮತ್ತು ಆ ಗುರಿಯನ್ನು ಖಂಡಿತವಾಗಿಯೂ ನೀವು ಮುಟ್ಟುತೀರಿ.

ಮೂರನೆಯದಾಗಿ, ವಿನೋದದಿಂದ ಆಟವಾಡುವವರಂತೆ ಇರಿ!

ಧ್ಯಾನವೆನ್ನುವುದು ಒಂದು ಸಾಹಸದ ಕೆಲಸ. ನಿಜವಾಗಿಯೂ ಹೇಳಬೇಕೆಂದರೆ, ನಿಮ್ಮ ಜೀವನದಲ್ಲಿನ ಬಹು ದೊಡ್ಡ ಪ್ರಯೋಗ. ಧ್ಯಾನದ

ವಿಚಾರವಾಗಿ ಪೂರ್ಣವಾಗಿ ಬಹು ಮುಖ್ಯವಾದದನ್ನೇ ಕಳೆದುಕೊಂಡು ಬಿಡುತ್ತೀರಿ. ಆಧ್ಯಾತ್ಮಿಕತೆಯು ಧ್ಯಾನವೆನ್ನುವುದು, ಈ ಜೀವನವೆಲ್ಲಾ ಕೇವಲ ಒಂದು ಲೀಲೆ ಎಂಬುದನ್ನು ಅರ್ಥಮಾಡಿಕೊಳ್ಳುವಂಥದ್ದು, ದೈವಲೀಲೆ. ಆದ್ದರಿಂದ ಅದರಲ್ಲಿ ಗಂಭೀರವಾಗಿ ಪರಿಗಣೆಸುವುದೇನಿದೆ?

ಧ್ಯಾನವನ್ನು ಒಂದು ಹಬ್ಬದಂತೆ (ಉತ್ಸವದಂತೆ) ಆಚರಿಸಿರಿ. ಸುಮ್ಮನೆ ಆನಂದದಿಂದ ನಲಿಯಿರಿ!

ನಾಲ್ಕನೆಯದಾಗಿ, ಸಹನಶೀಲರಾಗಿರಿ.

ಮೊದಲನೇ (ಧುಮುಕಿ ಬಂದುಬಿಡುವುದಿಲ್ಲ) ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ.

ಧ್ಯಾನವನ್ನು ಪ್ರಾರಂಭಿಸುತ್ತಿದ್ದಂತೆಯೇ ಫಲದ ಬಗ್ಗೆ ಚಿಂತಿಸಲು ತೊಡಗಬೇಡಿ. ಒಂದು ಸಣ್ಣ ಕತೆ:

ಮೂರು ಕೋತಿಗಳು ಒಮ್ಮೆ ಕಳಿತ ರಸಭರಿತವಾದ ಮಾವಿನ ಹಣ್ಣನ್ನು ಕಂಡವಂತೆ. ಎಲ್ಲಾ ಕೋತಿಗಳಂತೆ ಅವೂ ಸಹ ಸ್ವಲ್ಪ ಹೊತ್ತು ಆ ಹಣ್ಣಿಗಾಗಿ ಹೊಡೆದಾಡಿದವು. ನಂತರ ಏನೋ ಕಾರಣಕ್ಕಾಗಿ ಅವುಗಳೇ ಒಂದು ಸ್ಪಷ್ಟವಾದ ಒಳ್ಳೆಯ ತೀರ್ಮಾನಕ್ಕೆ ಬಂದುವು.

ಬುದ್ದಿಪೂರ್ವಕವಾಗಿ ಏನನ್ನೋ ನಿಶ್ಚಯಿಸಿಕೊಂಡವು. ಆ ಹಣ್ಣನ್ನು ಆಗಲೇ ತಿಂದು ಮುಗಿಸುವ ಬದಲು ಆ ಹಣ್ಣನ್ನು ಹುಟ್ಟಹಾಕೋಣ. ಆ ಹಣ್ಣಿನ ಬೀಜವು ಮೊಳೆತು, ಬೆಳೆದು ಮರವಾದ ಮೇಲೆ ಆ ಮೂರು ಕೋತಿಗಳಿಗೂ ಸಾಕಾಗುವಷ್ಟು ಮತ್ತು ಇನ್ನೂ ಹೆಚ್ಚು ಹಣ್ಣುಗಳು ಸಿಕ್ಕುತ್ತವೆ ಎಂದುಕೊಂಡವು. ಒಂದೊಂದು ಕೋತಿಯೂ ಒಂದೊಂದು ಕೆಲಸದಲ್ಲಿ ಆಸಕ್ತಿ ವಹಿಸಿ ಆ ಗಿಡವನ್ನು ಗಮನವಿಟ್ಟು ಕಾಪಾಡಿ ಬೆಳೆಸಲು ನಿರ್ಧರಿಸಿದವು.

ಮೊದಲನೆಯ ಕೋತಿ, ''ಪ್ರತಿನಿತ್ಯ ಈ ಗಿಡಕ್ಕೆ ನೀರು ಹಾಕುವ ಕೆಲಸ ನನ್ನದು!'' ಎಂದಿತು.

ಎರಡನೆಯ ಕೋತಿ, ಭೂಮಿಯನ್ನು ಫಲವತ್ತಾಗಿ ಇಡಲು ಗೊಬ್ಬರ ಮುಂತಾದುವನ್ನು ಹಾಕಿ ಗಿಡವನ್ನು ಚೆನ್ನಾಗಿ ಬೆಳೆಸಲು ಭರವಸೆ ಕೊಟ್ಟತು.

ಮೂರನೇ ಕೋತಿಯು, ಕೆಟ್ಟ ಹವಾಮಾನ ಹಾಗೂ ಪ್ರಾಣಿಗಳಿಂದ ಕಾಪಾಡಿ, ಜಾಗರೂಕತೆಯಿಂದ ನೋಡಿಕೊಳ್ಳುವ ಕೆಲಸ ತನ್ನದೆಂದು ಹೇಳಿತು.

ಒಂದು ತಿಂಗಳಾಯಿತು, ಎರಡಾಯಿತು, ಮೂರು ತಿಂಗಳೂ ಮುಗಿಯಿತು. ಆ ಬೀಜದಿಂದ ಮೊಳಕೆ ಒಡೆದು, ಗಿಡ ಬೆಳೆಯುವ ಯಾವ ಕುರುಹೂ ಕಾಣಲಿಲ್ಲ. ಆದುದರಿಂದ ಆ ಮೂರು ಕೋತಿಗಳೂ ಒಂದು ತುರ್ತುಸಭೆ ಕರೆದು, ಅವುಗಳ ಒಂದೊಂದೂ ತಮ್ಮ ಪಾತ್ರವನ್ನು ಹೇಗೆ ನಿರ್ವಹಿಸಿದವು ಎಂಬುದರ ವಿಚಾರವಾಗಿ ಚರ್ಚಿಸಿದವು.

ಮೊದಲನೇ ಕೋತಿಯು, ತಾನು ಮಾತು ಕೊಟ್ಟಂತೆ ಪ್ರತಿನಿತ್ಯವೂ ಬೀಜಕ್ಕೆ ನೀರು ಹಾಕುತಿದ್ದೆ ಎಂದಿತು.

ಎರಡನೆಯ ಕೋತಿಯು ನಾನೂ ಸಹ ಮಾತು ಕೊಟ್ಟಂತೆ, ಗೊಬ್ಬರ ಹಾಕಿ ಭೂಮಿಯು ಫಲವತ್ತಾಗುವಂತೆ ನೋಡಿಕೊಂಡೆ ಎಂದಿತು.

ಮೂರನೇ ಕೋತಿಯು, ನಾನು ಮಾತು ಕೊಟ್ಟಂತೆ, ಚೆನ್ನಾಗಿ, ಜೋಪಾನವಾಗಿ ಕಾಪಾಡಿಕೊಂಡೇ ಬರುತ್ತಿದ್ದೀನಿ. ಅಷ್ಟೇ ಅಲ್ಲ, ಪ್ರತಿದಿನವೂ ಆ ಬೀಜವನ್ನು ಹೊರತೆಗೆದು ಮೊಳಕೆ ಬಂದಿದೆಯೋ ಇಲ್ಲವೋ ಎಂಬುವುದನ್ನೂ ಪರೀಕ್ಷಿಸುತ್ತಾ ಇದ್ದೇನೆ ಅಂದಿತು.

ಆದ್ದರಿಂದ, ನೀವೂ ಸಹ ಮೊದಲನೇ ಸಾರಿಯೇ ಏನೋ ಅದ್ಭುತವಾದದ್ದು ಆಗುವುದೆಂದು ನಿರೀಕ್ಷಿಸಬೇಡಿ! ಧ್ಯಾನದ ಪ್ರಕ್ರಿಯೆಯು ನಿಮ್ಮಲ್ಲಿ ಕೆಲಕಾಲ ಬೆಳೆಯಲು ಅವಕಾಶ ಕೊಡಿ. ನೀವು ಆತುರಪಟ್ಟು ಕೂಡಲೇ ಫಲವನ್ನು

ನಿರೀಕ್ಷಿಸಿದರೆ, ಆ ಧ್ಯಾನದ ಪ್ರಕ್ರಿಯೆಯು ಸ್ಥಿರವಾಗಿ ನಿಮ್ಮಲ್ಲಿಯೇ ಉಳಿಯುವುದನ್ನು ನೀವಾಗಿಯೇ ತಡೆದು ತಪಿಸಿದಂತಾಗುತದೆ. (ಅದ್ದರಿಂದ) ಸಮಾಧಾನವಾಗಿರಿ!

ಐದನೆಯದಾಗಿ, ಏಕಾಂತತೆಯ ಆನಂದವನ್ನು ಅನುಭವಿಸಿರಿ.

ಸಾಧ್ಯವಾದಷ್ಟೂ ಮನಸ್ಸನ್ನು ಒಳಮುಖವಾಗಿ ಹರಿಯುವ ಸ್ಥಿತಿಯಲ್ಲಿಯೇ ಇರುವಂತೆ ನೋಡಿಕೊಳ್ಳಿ. ಒಬ್ಬರೇ ಇರಿ, ಪ್ರತಿದಿನ ಕೆಲವು ಕಾಲ ಮೌನವಾಗಿ ಉಳಿಯಿರಿ. ನಿಮ್ಮ ಒಳಗಿನ ಪರಿಸರ (ಅಥವಾ ವಾತಾವರಣ) ದಲ್ಲಿಯೇ ಅನುಭವವನ್ನು ಪಡೆಯಲು ನಿಮಗೆ ನೀವೇ ಅವಕಾಶವನ್ನು ಕಲಿಸಿಕೊಳ್ಳಿರಿ. ಯಾವಾಗ ಧ್ಯಾನವು ನಿಮ್ಮ ಒಂದು ಭಾಗವೇ ಆದಾಗ, ಸಹಜವಾಗಿ ಆ ಸ್ಥಿತಿಯು ನಿಮ್ಮಲ್ಲಿಯೇ ವಿಕಸಿತವಾಗುತದೆ. ಆದರೆ ಈ ಸ್ಥಿತಿಯನ್ನು ಪ್ರಜ್ಞಾಪೂರ್ವಕವಾಗಿ, ಹೊಸದಾಗಿ (ಧ್ಯಾನವನ್ನು) ಪ್ರಾರಂಭಿಸುವವರು, ಉಳಿಸಿಕೊಳ್ಳಬೇಕಾಗುತದೆ.

ಧ್ಯಾನದ ತಂತ್ರಗಳಲ್ಲಿ ಬೇಕಾದಷ್ಟು ತರಹ ಇವೆ. ಅವುಗಳಲ್ಲಿ ಯಾವುದು ನನಗೆ ಸರಿಯಾದದ್ದು ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳುವುದು?

ನಿಮಗೆ ಯಾವ ತಂತ್ರವು ಸರಿ ಎನ್ನಿಸುವುದೋ, ಅದನ್ನು ಪ್ರಯತ್ತಿಸಿ. ಆ ಪ್ರಯತ್ನದಲ್ಲಿ ನಿಮ್ಮ ಶಕ್ತಿಯನ್ನು ಪೂರ್ಣವಾಗಿ ವಿನಿಯೋಗಿಸಿಕೊಳ್ಳಿ. ಪ್ರಾಮಾಣಿಕತೆಯಿಂದ, ನಿಮಗೆ ಸರಿಹೋಗುತ್ತದೆ ಎಂಬ ನಂಬಿಕೆಯಿಂದ, ಸಮಯದಲ್ಲಿಯೇ ಆ ತಂತ್ರವು ನಿಮಗೆ ಸರಿಹೋಗುವುದೋ ಹೇಗೆ ಎಂಬುವುದು ತಿಳಿದು ಬರುತದೆ.

ನನ ಸಲಹೆ ಏನೆಂದರೆ, ಪ್ರಾರಂಭದಲ್ಲಿ ಕುಳಿತಲ್ಲೇ ಮಾಡುವ ತಂತ್ರಗಳಿಗಿಂತ, ಕ್ರಿಯಾತ್ಮಕವಾದ ತಂತ್ರಗಳನ್ನು ಮೊದಲು ಅಭ್ಯಾಸ ಮಾಡಿ. ಏಕೆಂದರೆ,

ನಿಮ್ಮೊಳಗೆ ಈಗಾಗಲೇ ಬಹಳ ಗೊಂದಲ ಅಥವಾ ಅಡಚಣೆಗಳಿವೆ. ನೀವು ಸುಮ್ಮನೆ ಕುಳಿತು ಗಮನಿಸುತ್ತಿದ್ದರೆ, ಬಹಳವಾದ ಗೊಂದಲಗಳನ್ನೇ ನಿಮ್ಮೊಳಗೆ ಕಾಣುವಿರಿ. ಆದ್ದರಿಂದ ಧ್ಯಾನವನ್ನು ಪ್ರಾರಂಭಿಸುವಾಗ, ಕ್ರಿಯಾತ್ಮಕವಾದ ತಂತ್ರಗಳನೇ ಮಾಡಿರಿ. ಏಕೆಂದರೆ ಅವು ವಿರೇಚಕ ರೀತಿಯ ಶುದ್ದೀಕರಣ ತಂತ್ರಗಳು. ಈ ತಂತ್ರಗಳು ಹೊರಮುಖವಾಗಿ ಚುರುಕಾಗಿರುವವು, ಆದರೆ ನೆಮ್ಮದಿಯನ್ನು ಶಾಂತತೆಯನ್ನು ಅನುಭವಿಸುವಂತೆ ಮಾಡುತವೆ.

ಒಮ್ಮೆ ನೀವು ಧ್ಯಾನದಲ್ಲಿ ನೆಲೆಗೊಂಡಾಗ, ಹಳೆಯ ತಡೆಗಳನ್ನೆಲ್ಲಾ ಶುದ್ದೀ ಗೊಳಿಸಿದ ಮೇಲೆ ಯಾವ ತಂತ್ರವನ್ನು ಬೇಕಾದರೂ ನೀವು ಪ್ರಯತ್ತಿಸಬಹುದು. ತಂತ್ರಗಳಲ್ಲಿ ಸರಿಯಾದದ್ದು ಯಾವುದು ಎಂಬುದನ್ನು ತಿಳಿದುಕೊಳ್ಳುತೀರಿ?

ಯಾವ ತಂತ್ರದಿಂದ ನಿಮಗೆ ಹೆಚ್ಚು ವಿಶ್ರಾಂತಿ ದೊರೆತು, ಹೆಚ್ಚು ಕೇಂದ್ರೀಕರಿಸಲು ಸುಲಭವಾಗುತ್ತದೆಯೋ, ಮನಸಿನ ಮೇಲೆ ಸೂಕ್ಷ್ಮವಾಗಿ ಹೆಚ್ಚು ಪ್ರಭಾವವನ್ನುಂಟು ಮಾಡಲು ಸಹಾಯ ಮಾಡುತದೆಯೋ - ಆ ತಂತ್ರವು (ನಿಮ್ಮಲ್ಲಿ) ಕೆಲಸ ಮಾಡುತಿದೆ (ಎಂದರ್ಥ). ಯಾವುದು ಹೆಚ್ಚು ಸಂತೋಷದಾಯಕವೋ, ನೀವು ವಿಕಸಿಸಲು ಸಹಾಯ ಮಾಡುವುದೋ, ಹೆಚ್ಚು ಚೈತನ್ಯವರ್ಧಕವೋ, ಅದು ನಿಮ್ಮಲ್ಲಿ ಕೆಲಸ ಮಾಡುತಿದೆ.

ಒಂದು ವೇಳೆ ಯಾವುದಾದರೂ ಒಂದು ತಂತ್ರವು ಕೆಲಸ ಮಾಡುತಿಲ್ಲವೆನಿಸಿದರೆ ಆದನ್ನು ಬಿಟ್ಟು ಬೇರೆ ತಂತ್ರದಿಂದ ಪ್ರಯತ್ತಿಸಿ.

ಆದರೆ ಸಮಾಧಾನದಿಂದಿರಿ! ಫಲದ ಬಗ್ಗೆ ಆಸೆ ಹೊಂದಿ ಆತುರ ಪಟ್ಟು ಚೆನ್ನಾಗಿ ಕೆಲಸ ಮಾಡುವ ಒಳ್ಳೆಯ ತಂತ್ರಗಳನ್ನು ಬಿಟ್ಟುಬಿಡಬೇಡಿ.

ಸಾಮಾನ್ಯವಾಗಿ ನೀವು ಆರಿಸಿದ ಮೊದಲ ಐದು ಅಥವಾ ಎಂಟು ತಂತ್ರಗಳಲ್ಲೇ ನಿಮಗೆ ಒಂದು ಸರಿಯಾದ ತಂತ್ರವು ಇರುವುದು ತಿಳಿದು ಬರುತೆ,

ಅದನ್ನು ಗುರುತಿಸಿ, ಅದನ್ನು ಮುಂದುವರಿಸಿ.

ಮನವು ನಿಮ್ಮನ್ನು ಒಳಗಡೆಗೆ ಕರೆದೊಯ್ಯುವ ಮಾರ್ಗ. ಆದರೆ ಒಳಕ್ಕೆ ಪ್ರವೇಶಿಸಲು ನೀವು ಹೊರಗಿನಿಂದಲೇ ಪ್ರಾರಂಭಿಸಬೇಕು. ಈಗ ನೀವು ಹೊರಸುತ್ತಿನ ಪರಿಧಿಯಲ್ಲಿದ್ದೀರಿ. ಸಮುದ್ರದ ನೀರಿನಲ್ಲಿ ಒಂದು ಬೆರಳನ್ನು ಮಾತ್ರ ಇಟ್ಟು, ನೀರು ಇನ್ನೂ ತಣ್ಣಗಿದೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದೀರಿ!

ಬಹಳ ಜನ ನನ್ನಲ್ಲಿಗೆ ಬಂದು ಕೇಳುತ್ತಾರೆ ನನಗೆ ಅಧ್ಯಾತ್ಮದ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ಹಿಂದೆಂದೂ ಧ್ಯಾನವನ್ನು ನಾನು ಪ್ರಯತ್ನಿಸಿಯೇ ಇಲ್ಲ. ನಾನು ಸಿದ್ಧವಿದ್ದೇನೆಯೇ? ಎಲ್ಲಿಂದ ಪ್ರಾರಂಭಿಸಲಿ?

ನಾನು ನಿಮಗೆ ಹೇಳೀನಿ: ಎಲ್ಲಿಂದ ಪ್ರಾರಂಭಿಸಬೇಕು ಅಂದ್ರೆ, ಈಗ ನೀವು ಎಲ್ಲಿದ್ದೀರೋ ಅಲ್ಲಿಂದಲೇ ಪ್ರಾರಂಭಿಸಿರಿ! ಇಲ್ಲಿಯವರೆಗೂ ನೀವು ನಿಮ್ಮನ್ನು ಕುರಿತು ಅರ್ಥಮಾಡಿಕೊಂಡಿರುವುದೆಂದರೆ ನಿಮ್ಮ ಶರೀರ, ನಿಮ್ಮ ಭಾವನೆಗಳು ಮತ್ತು ಆಲೋಚನೆಗಳು. ನೀವು ಏನೇನು ಎಂದು ನೀವು ಯೋಚಿಸುತ್ತೀರೋ ಅದೆಲ್ಲಾ ಕೇವಲ ನಿಮ್ಮ ಶರೀರ, ನಿಮ್ಮ ಭಾವನೆಗಳು, ನಿಮ್ಮ ಆಲೋಚನೆಗಳು.

ಆದುದರಿಂದ, ಅಲ್ಲಿಂದಲೇ ಪ್ರಾರಂಭಿಸಿರಿ! (ಅದು ಅಷ್ಟು) ಸರಳ.

Step-1 ಶರೀರದ ಮೇಲೆ ಕೆಲಸ ಮಾಡುವುದು (ಶರೀರವನ್ನು ಸುಧಾರಿಸುವುದು)

ನಿಮ್ಮ ಶರೀರದ ಬಗ್ಗೆ ನಿಮಗೆ ಏನನಿಸುತ್ತದೆ?

ಧ್ಯಾನಕ್ಕೆ ಪ್ರವೇಶಿಸುವುದು

ನಾವೆಲ್ಲಾ ನಮ್ಮ ನಮ್ಮ ಶರೀರವನ್ನು ಕುರಿತು ಏನೇನೋ ಅಭಿಪ್ರಾಯಗಳನ್ನು, ಭಾವನೆಗಳನ್ನು ಹೊಂದಿದ್ದೀವಿ. ಈ ಅಭಿಪ್ರಾಯಗಳೆಲ್ಲಾ ನಮ್ಮವೇ ಆಗಿಲ್ಲ. ಹೆಚ್ಚು ಕಡಿಮೆ ಅಂದುಕೊಂಡಿರುತಾರೋ ಆ ಅಭಿಮತಗಳನ್ನೇ ನಾವು ತೆಗೆದುಕೊಂಡು ಬಿಟ್ಟಿರುತೇವೆ. ನಾವೆಲ್ಲಾ ನಮ್ಮ ಶರೀರದ ವಿಷಯದಲ್ಲಿ ಬಹಳವಾಗಿ ನಕಾರಾತ್ಮಕ ಭಾವನೆಗಳನ್ನು ಹೊಂದಿದ್ದೇವೆ. ನಿಮ್ಮ ಸುಪ್ತ ಮನಸ್ಸಿನಲ್ಲಿ ನಿಮಗೇ ಗೊತ್ತಿಲ್ಲದೆ ನಿಮ್ಮ ಶರೀರದ ಬಗ್ಗೆ ನಕಾರಾತ್ಮಕ ಭಾವನೆಗಳು ತುಂಬಿಕೊಂಡಿವೆ. ಬಹಳ ಅಪರೂಪಕ್ಕೆ ಒಬ್ಬೊಬ್ಬರು ತಮ್ಮ ಶರೀರದ ಬಗ್ಗೆ ಸಮಾಧಾನವಾಗಿದ್ದಾರೆ (ತೃಪ್ತರಾಗಿದ್ದಾರೆ). ಆ ರೀತಿ ತೃಪ್ತರಾಗಿದ್ದಾರೆ ಅಂದರೆ ಎಲ್ಲವೂ ಸರಿಯಾಗಿದೆ ಎಂದು ಕಲ್ಪಿಸಿಕೊಳ್ಳುವುದಲ್ಲ. ನಿಮ್ಮ ಶರೀರವನ್ನು ಹೇಗಿದೆಯೋ ಹಾಗೆಯೇ ಒಪ್ಪಿಕೊಂಡು ಸುಮ್ಮನೆ ಆರಾಮವಾಗಿರುವುದು.

ನಿಮ್ಮ ಜೀವನದಲ್ಲೆಲ್ಲಾ ನೀವು ಕೇಳಿರುವುದೇನು? ನಿಮ್ಮ ದೇಹ ನಿಮ್ಮ ಶತ್ರು! ನಿಮ್ಮ ಶರೀರ ಕೆಟ್ಟದು ಮತ್ತು ಪಾಪಪೂರಿತವಾದದ್ದು! ಶರೀರವನ್ನು ದಂಡಿಸಬೇಕು, ತಿರಸ್ಕರಿಸಬೇಕು ಎಂದು. ಅದರಲ್ಲೂ ವಿಶೇಷವಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ನೀವು ಸಾಧನೆ ಮಾಡುವುದಕ್ಕೆ ಶರೀರವೇ ಒಂದು ದೊಡ್ಡ ಅಡ್ಡಿ ಎಂದು ಹೇಳುವುದುಂಟು.

ಹೀಗಾಗಿ ಬಂದುಬಿಟ್ಟರುತ್ತೆ. ಬೇರೂರಿಬಿಟರುತೆ. ಆಗ ನಿಮ್ಮ ಶರೀರ ನಿಮಗೆ ವಿರುದ್ಧವಾಗಿ ಕೆಲಸ ಮಾಡುತಿದೆ ಎಂದು ಯೋಚಿಸಲು ತೊಡಗುತೀರಿ. ಆದರೆ, ಸತ್ಯವೇನೆಂದರೆ, ಈ ಶರೀರವು ಈ ಸಂಸಾರ ಸಾಗರವನ್ನು ದಾಟಿಸುವ ದೋಣಿಯೇ ಆಗಿದೆ! ಈ ಪ್ರಪಂಚದಲ್ಲಿ ನೀವು ಶರೀರವಿಲ್ಲದೆ ಓಡಾಡಲು ಸಾಧ್ಯವೆ? ನಿಮ್ಮ ಶರೀರ ಒಳ್ಳೆಯ ಸ್ಥಿತಿಯಲ್ಲಿ ಇರದೇ ಹೋದರೆ ನೀವು ಧ್ಯಾನ ಅಥವಾ ಆಧ್ಯಾತ್ತ ಮಾರ್ಗದಲ್ಲಿ ಸಾಧನೆ ಮಾಡಲು ಸಾಧ್ಯವೆ? ನಿಮ್ಮ ಕಣ್ಣಿನ ಮತ್ತು ಮೆದುಳಿನ ಸಹಾಯ ಇಲ್ಲದೆ ಈ ಪುಸಕವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಆಗುತದೆಯೆ?

ಅಂತಿಮವಾಗಿ ಮನುಷ್ಯನು ತನ್ನ ಶರೀರವನ್ನು ದಾಟಿ ಮುಂದೆ ಹೋಗಬೇಕು ನಿಜ. ಆದರೆ, ಅದನ್ನು ಶರೀರದ ಜೊತೆ ಹೋರಾಡಿ ಸಾಧಿಸುವುದಲ್ಲ, ನೀವು

ಶರೀರವನ್ನು ಅರ್ಥ ಮಾಡಿಕೊಂಡು, ಒಪಿಕೊಂಡು, ಧ್ಯಾನಕ್ಕೆ ನಿಮ್ಮ ಶರೀರವು ಹೊಂದುವಂತೆ ತಯಾರು ಮಾಡಿಕೊಳ್ಳಬೇಕು.

ಜ್ಞಾಪಕದಲ್ಲಿರಲಿ, ನಿಮ್ಮ ಶರೀರವು ಶಕಿಯುತವಾದ ಒಂದು ಉಪಕರಣ. ಭೌತಿಕವಾಗಿ ಅಲ್ಲದೆ ಆಧ್ಯಾತ್ಮಿಕವಾಗಿಯೂ ಸಹ. ಆದರೆ ಅದು ಕೇವಲ ಉಪಕರಣವಾಗಿಯೇ ಇದೆ. ಅದು ಒಳ್ಳೆಯದೂ ಅಲ್ಲ ಅಥವಾ ಕೆಟ್ಟದ್ದೂ ಅಲ್ಲ. ನಿಮ್ಮ ಮಿತ್ರನೂ ಅಲ್ಲ, ಶತು,ವೂ ಅಲ್ಲ. ಯಾವ ಶರೀರದಿಂದ ನೀವು ಈ ಪ್ರಪಂಚದಲ್ಲಿ ಓಡಾಡಬಹುದೋ ಅದೇ ಹೋಗಬಹುದು. ಅದು ನಿಮ್ಮ ಕೈಯ್ಯಲ್ಲಿರುವ ಒಂದು ಆಯುಧ ಅಷ್ಟೆ

ಇದನ್ನು ಒಪ್ಪುವುದು ಒಂದು ಕಷ್ಟಕರವಾದ ಸಿದ್ದಾಂತ ಅನಿಸುತೆ! ಏಕೆಂದರೆ ಜೀವನ ಪೂರ್ತಿಯಾಗಿ ನಿಮ್ಮ ಶರೀರವೇ ನೀವು ಎಂಬ ತಾದಾತ್ಮ, ಭಾವವನ್ನು ಹೊಂದಿದೀರಿ. ಆದರೆ ನೀವು ಈ ತಾದಾತ್ತ್ಯಕತೆಯನ್ನು ಬಿಟ್ಟ ಹೊರತೂ ಶರೀರವನ್ನು ದಾಟಿ ಮುಂದೆ ಹೋಗಲಾರಿರಿ.

ಆದ್ದರಿಂದ ಮೊದಲನೇ ಹೆಜ್ಜೆ ಎಂದರೆ ನಿಮ್ಮ ಶರೀರದ ವಿಷಯವಾಗಿ ಗಮನ ಕೊಡಿ. ನಿಮ್ಮ ಶರೀರವು ಸರಿಯಾಗಿ ಕೆಲಸ ಮಾಡಿದ ಹೊರತೂ, ಖಂಡಿತವಾಗಿಯೂ ನೀವು ಧ್ಯಾನಕ್ಕೆ ಪ್ರವೇಶಿಸಲಾರಿರಿ. ಏನೇ ನಕಾರಾತ್ಮಕ ಭಾವನೆಗಳನ್ನೇ ಆಗಲಿ ಅಥವಾ ಸಕಾರಾತ್ಮಕ ಭಾವನೆಗಳನ್ನೇ ಆಗಲಿ ನಿಮ್ಮ ಶರೀರದ ವಿಷಯವಾಗಿ ಹೊಂದಿದ್ದರೆ, ಅವನ್ನು ಸುಮ್ಮನೆ ಬಿಟ್ಟುಬಿಡಿ.

ಮೊದಲಿನ ಕೆಲಸವೆಂದರೆ ಶರೀರವನ್ನು ಶುದ್ದಿಗೊಳಿಸುವುದು. ಶರೀರವನ್ನು ಶುದ್ದಿಗೊಳಿಸುವುದು ಎಂದರೆ ಏನು? – ಸಿಮಾಡ್ ಪ್ರತಿಯಾರ್ತಿ ಪ್ರಮಾಣಿಗೆ

ನಾವೆಲ್ಲಾ ಅಡಚಣೆಗಳನ್ನು ಹೊಂದಿದ್ದೇವೆ, ಚೈತನ್ಯದ ಅಡೆತಡೆಗಳು, ತೊಡಕು ತೊಂದರೆಗಳು, ಇವೆಲ್ಲವುಗಳೂ ನಮ್ಮ ಭೌತಿಕ ಶರೀರದ ಒಂದು ಭಾಗವೇ ಆಗಿದೆ. ಈ ಅಡೆತಡೆಗಳನ್ನು ತೊಡಕು ತೊಂದರೆಗಳನ್ನು ತೆಗೆಯುವುದೇ ಶರೀರವನ್ನು ಶುದ್ಗಗೊಳಿಸುವ ಮಾರ್ಗ. ಈ ಅಡೆತಡೆ ಮತ್ತು ತೊಂದರೆಗಳು

ನಮ್ಮ ಶರೀರದಲ್ಲಿ ಹೇಗೆ ಉಂಟಾಗುತವೆ? ಚಿಕ್ಕ ಮಕ್ಕಳಾಗಿದ್ದಾಗಿನಿಂದಲೂ ನಮ್ಮ ಸ್ವಾಭಾವಿಕವಾದ ಭಾವನೆಗಳನ್ನು ಮುಚ್ಚಿಡುವುದನ್ನು ಕಲಿತಿದ್ದೀವಿ. ಏಕೆಂದರೆ, ಈ ಸಮಾಜದಲ್ಲಿ ನಾವು ಯಾವಾಗಲೂ ನಮಗೆ ಬೇಕಾದ್ದನ್ನು ವ್ಯಕ್ತಪಡಿಸಲು ಆಗುವುದೇ ಇಲ್ಲ.

ಉದಾಹರಣೆಗೆ, ನಮಗೆ ಸಿಟ್ಟು ಬಂದಾಗ, ನಮ್ಮ ಶರೀರದಲ್ಲಿ ಹೋರಾಡಲು ಬೇಕಾದ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಮನುಷ್ಯನನ್ನು ಆಕ್ರಮಣ ಮಾಡಲು ಬೇಕಾದಷ್ಟು ಶಕ್ತಿಯನ್ನು ಶರೀರವು ತಯಾರು ಮಾಡುತ್ತದೆ! ಏಕೆಂದರೆ ಬದುಕಲು ಕೋಪವು ಅತ್ಯವಶ್ಯಕವಾಗಿ ಎಲ್ಲ ಪ್ರಾಣಿಗಳಿಗೂ ಬೇಕಾದ ಆಯುಧವಾದ್ದರಿಂದ, ಶರೀರವು ನಿಮ್ಮನ್ನು ಬೇರೆಯವರೊಂದಿಗೆ ಹೋರಾಡಲು ತಯಾರು ಮಾಡುತ್ತೆ. ಆದರೆ ನಮ್ಮ ಈ ನಾಗರೀಕ ಸಮಾಜದಲ್ಲಿ ಯಾವಾಗಲೂ ನಮ್ಮ ಕೋಪವನ್ನು ವ್ಯಕಪಡಿಸಲು ಆಗುವುದಿಲ್ಲ. ಕಾರಣ ಮತ್ತೊಬ್ಬರನ್ನು ಕಂಡರೆ ನಾವೇ ಹೆದರಿಕೊಳ್ಳಬೇಕಾಗಿರಬಹುದು ಉದಾಹರಣೆಗೆ: ನಿಮ್ಮ ಬಾಸ್ ಅಥವಾ ನಿಮ್ಮ ಹೆಂಡತಿ!! ಹೀಗೆ ಶರೀರದಲ್ಲಿ ಯಾವ ಯಾವ ಶಕ್ಕಿ ಉತ್ಪತ್ತಿ ಯಾಗಿರುತ್ತದೆಯೋ ಉಳಿದುಬಿಟ್ಟಿರುತ್ತೆ. ಈ ಹೆಚ್ಚಿನ ಶಕ್ತಿಯು ನಿಮ್ಮ ಶರೀರದಲ್ಲಿ ಕಟ್ಟಿಕೊಂಡು, ನಿಮ್ಮ ಶಕ್ತಿಯು ಪ್ರವಹಿಸುವಲ್ಲಿ ಅಡ್ಡಿಯನ್ನು ಉಂಟು ಮಾಡುತ್ತದೆ.

ಇದೇ ತರಹ ಎಲ್ಲಾ ಭಾವನೆಗಳ ವಿಷಯದಲ್ಲಿಯೂ ಉಂಟಾಗುತೆ ಅಂದರೆ, ಆಸೆ, ಹೆದರಿಕೆ, ದುಃಖ...

ಅನೇಕ ವೇಳೆ, ನಿಮ್ಮ ಶರೀರವು ತನಗೆ ಬೇಕಾದ ಹಾಗೆ ವರ್ತಿಸಲು ನೀವು ಬಿಡುವುದಿಲ್ಲ ಕಾರಣ ಹೆದರುತೀರಿ. ಶರೀರದ ವಿಚಾರವಾಗಿ ನಿಮಗೆ ನಂಬಿಕೆಯೂ ಇಲ್ಲದೆ ತುಂಬ ಭಯದಿಂದ ಜೀವಿಸುತಿರುತ್ತೀರಿ. ನಿಮ್ಮ ಶರೀರವು ನಾಗರೀಕತೆಯ ಯೋಚಿಸುತೀರಿ. ಅದು ಸಮಾಜದ ನಿಯಮಗಳನ್ನು ಪರಿಗಣೆಸುವುದಿಲ್ಲ. ನಿಮ್ಮ ಶರೀರವನ್ನು ಸ್ವತಂತ್ರವಾಗಿ ಬಿಟ್ಟರೆ ನಿಮ್ಮ ಶರೀರ ಏನೇನು ಮಾಡಿಬಿಡುತ್ತೋ

ಯಾರಿಗೆ ಒತಾಯದಿಂದ ತಡೆಯುತೀರಿ.

ನೀವು ಈ ತರಹ ಯಾವಾಗ ನಿಮ್ಮ ಭಾವನೆಗಳನ್ನು ಅದುಮಿಡುತ್ತೀರೋ ಅವು ನಿಮ್ಮ ಭೌತಿಕ ಶರೀರದಲ್ಲಿ ತಡೆಯನ್ನು ಉಂಟು ಮಾಡುವುದಲ್ಲದೆ, ಅದರ ಪರಿಣಾಮವಾಗಿ ಮಾನಸಿಕ ರೋಗಗಳಿಗೂ ತುತ್ತಾಗುತೀರಿ. ಉದಾಹರಣೆಗೆ ಕೋಪವನ್ನು ನಿರಂತರ ತಡೆಯುತ್ತಲೇ ಇದ್ದರೆ ತಲೆನೋವಾಗಿ ಕಾರಣವಾಗಿಬಿಡುತೆ.

ಇದೇ ತರಹ, ಮಾನಸಿಕ ತೊಂದರೆಗಳೂ ಕಾಣಿಸಿಕೊಂಡು, ಶಾರೀರಿಕ ಖಾಯಿಲೆಗಳಿಗೂ ಸಂಬಂಧಿಸಿದ ಖಾಯಿಲೆಗಳಿಗೂ ಅಲ್ಲದೆ ಚರ್ಮ ರೋಗಗಳಿಗೂ ಮತ್ತು ಹೊಟ್ಟೆಯನ್ನು ಹುಣ್ಣು (ಅಲ್ಸರ್) ಇವುಗಳಿಗೂ ಕಾರಣವಾಗುತ್ತೆ ಇವೆಲ್ಲಾ ಒತ್ತಡದಿಂದ ಉಂಟಾಗುತ್ತದೆ. ಈಚಿನ ಸಂಶೋಧನೆಯ ಪ್ರಕಾರ, ನಮ್ಮ ಖಾಯಿಲೆಗಳಲ್ಲಿ 80% ಕ್ಕಿಂತ ಹೆಚ್ಚು ಖಾಯಿಲೆಗಳು psychosomatic (ಮನಸ್ಸಿನ ಕಾರಣದಿಂದ ಶರೀರದಲ್ಲುಂಟಾಗುವ ಖಾಯಿಲೆಗಳು) ಅಂದರೆ, ಶಾರೀರಿಕ ಹಾಗೂ ಮಾನಸಿಕ ಸ್ಥಿತಿಗಳೇ ಈ ಖಾಯಿಲೆಗಳಿಗೆ ಕಾರಣವಾಗುತವೆ (ಹೊಣೆಯಾಗುತವೆ). ಮುಂದೆ ಈ ಪುಸಕದಲ್ಲಿ ತಿಳಿಸಿರುವ ಧ್ಯಾನದ ತಂತ್ರಗಳ ಮೂಲಕ ಹೇಗೆ ಈ ಎಲ್ಲಾ ತಡೆಗಳನ್ನೂ, ಒತ್ತಡಗಳನ್ನೂ ಕರಗಿಸಿಬಿಡಬಹುದು ಎಂಬುದನ್ನು ತಿಳಿಸಿಕೊಡಲಾಗುತೆ.

ಒಮ್ಮೆ ನೀವು ಈ ತಡೆಗಳಿಂದ ಮುಕ್ತರಾದರೆ, ನಿಮಗೇ ಗೊತಾಗುತ್ತೆ ನಿಮ್ಮ ಶರೀರ ಸಹಜವಾಗಿ ಎಷ್ಟರಮಟ್ಟಿಗೆ ಪ್ರಫುಲ್ಲಿತವಾಗುತ್ತದೆ ಎಂದು. ನಿಮ್ಮ ಶರೀರ ಬಹಳ ಸುಂದರವಾಗಿ ಹಾಗೂ ಹೆಚ್ಚು ದಿವ್ಯ ತೇಜಸಿನಿಂದ ಕಾಣಲು ತೊಡಗುತೆ. ನಿಮ್ಮ ಶರೀರ ನೀವಲ್ತ, ಅದು ನಿಮಗೆ ಸಹಕರಿಸಿ ಸಹಾಯ ಮಾಡುವುದಕ್ಕಾಗಿ ಇದೆ. ನಿಮ್ಮ ದೇಹದ ಜೊತೆ ಸುಂದರವಾದ, ಸ್ನೇಹಭರಿತ ಸಂಬಂಧವನ್ನು ಬೆಳೆಸಿಕೊಳ್ಳಿ.

ಧ್ಯಾನಕ್ಕೆ ಪ್ರವೇಶಿಸುವುದು

ಕೇವಲ ತಡೆ (ವ್ಯರ್ಥವಾದ) ಅಭ್ಯಾಸಗಳೂ ಸಹ ನಿಮ್ಮ ಶರೀರದಲ್ಲಿ ತೊಂದರೆಗಳನ್ನು ಉಂಟು ಮಾಡುತವೆ. ಈ ಶರೀರವು ಒಂದು ಭೌತಿಕ ಯಂತ್ರ. ಸಹಜವಾಗಿ, ನೀವು ಹೇಗೆ ಊಟ ಮಾಡುತ್ತೀರಿ, ಹೇಗೆ ನಿದ್ರಿಸುತ್ತೀರಿ, ಹೇಗೆ ವ್ಯಾಯಾಮ ಮಾಡುತೀರಿ, ಹೇಗೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತೀರಿ, ಇವೆಲ್ಲವುಗಳ ಪ್ರಭಾವವು ನಿಮ್ಮ ಶರೀರದ ಮೇಲೆ ಆಗಿರುತ್ತೆ. ನಾನು ಯಾವಾಗಲೂ ಹೇಳುವಂತೆ ನಿಮ್ಮ ಖಾಯಿಲೆಗಳೆಲ್ಲಾ ನಿಮ್ಮ ಅತಿಥಿಗಳು! ನಿಮ್ಮ ಶರೀರವನ್ನು ಸರಿಯಾಗಿ ಪೋಷಿಸಿಕೊಳ್ಳದೆ ತಾತ್ತಾರದಿಂದಿರುವುದರಿಂದ ಆ ಖಾಯಿಲೆಗಳನ್ನು ನಿಮ್ಮ ಮೇಲೆ ನೀವೇ ಆಹ್ವಾನಿಸಿಕೊಂಡುಬಿಡುತ್ತೀರಿ.

ಉದಾಹರಣೆಗೆ, ಏನೋ ಖಾರದ ಪದಾರ್ಥವನ್ನು ತಿನ್ನುತ್ತೀರಿ, ನಿಮ್ಮ ಕಣ್ಣುಗಳಲ್ಲಿ ನೀರು ಬರುತ್ತೆ. ನಿಮ್ಮ ಶರೀರ ಪ್ರತಿಭಟಿಸುತೆ, ''ನನಗೆ ಸಹಿಸಲು ಆಗುಲ್ಲ'' ಅಂತ. ಆದರೆ ನೀವು ಕೇಳೀರಾ? ಇಲ್ಲ.

ನೀವು ಮಧ್ಯರಾತ್ರಿಯವರೆಗೂ ಟಿ.ವಿ. ನೋಡುತ್ತಾ ಕುಳಿತಾಗ, ನಿಮ್ಮ ಪೂರಾ ಶರೀರ ಚೀರುತಿರುತೆ, ನನಗೆ ವಿಶ್ರಾಂತಿ ಬೇಕು! ಅಂತ. ಯಥಾಪ್ರಕಾರ ನೀವು ತಾತ್ಸಾರ ಮಾಡುತ್ತೀರಿ. ನಿಮ್ಮ ಶರೀರ ತನ್ನದೇ ಆದ ಜ್ಞಾನವನ್ನು ಹೊಂದಿರುತ್ತೆ ಇದನ್ನು ಸ್ಪಷ್ಟವಾಗಿ ತಿಳಿಯಿರಿ. ನೀವು ಸಂಪೂರ್ಣವಾಗಿ ನಿಮ್ಮ 'ಶರೀರ ಪ್ರ ಜ್ಞೆಯ' ಜೊತೆ ಕೊಡುತ್ತಾ ಇರುತ್ತೆ, ಆದರೆ, ಅದನ್ನು ಅರ್ಥ ಮಾಡಿಕೊಳ್ಳುವ ಪರಿಜ್ಞಾನ ನಿಮಗಿಲ್ಲ.

ಏತಕ್ಕಾಗಿ ನಾವು ತಿನ್ನುತ್ತೇವೆ?

ಸರಳವಾದ ಉತ್ತರ ಅಂದರೆ, ಶರೀರಕ್ಕೆ ಶಕ್ತಿ ಬರಲಿ ಅಂತ.

ಆದರೆ ನೀವು ತಿನ್ನುವ ಆಹಾರವು ನಿಜವಾಗಿಯೂ ಶಕ್ತಿಯನ್ನು ಹೆಚ್ಚಿಸುತ್ತದೆಯೇ? ಊಟದ ನಂತರ

ತೂಕಡಿಸುತೀರೋ? ನಮ್ಮಲ್ಲಿ ಸಾಕಷ್ಟು ಜನರಿಗೆ ತೂಕಡಿಕೆಯ ಅನುಭವ! ಏಕೆಂದರೆ, ನಾವು ಆರಿಸುವ ಆಹಾರ ನಿಸ್ಸಾರ, ಮತ್ತು ನಾವು ಹೊಟ್ಟೆ ತುಂಬಿದ್ದರೂ ಇನ್ನೂ ತಿನ್ನುತ್ತಲೇ ಇರುತೇವೆ. ಸಿಕ್ಕಿದ್ದನ್ನೆಲ್ಲಾ ತಿನ್ನುತಿರುತೇವೆ. ಗಾರ‍್ರೇಜ್ ಬಿನ್‍ಗೆ (ಕಸದ ಡಬ್ಬಕ್ಕೆ) ತುಂಬಿದ ಹಾಗೆ ತುಂಬುತಿರುತೇವೆ! ನಮ್ಮ ಹೊಟ್ಟೆಗಳನ್ನು ಕಸದ ಡಬ್ಬಗಳ ತರಹ ನೋಡಿಕೊಳ್ಳುತಿದ್ದೇವೆ. ನಾವು ನಮ್ಮ ಜೀರ್ಣಾಂಗಗಳಿಗೆ ಹೆಚ್ಚು ತೊಂದರೆ ಉಂಟು ಮಾಡುತಿದ್ದೇವೆ. ಹೀಗಾಗಿ ನಾವು ಊಟದ ನಂತರ ಚುರುಕಾಗಿ ಇರುವುದಿಲ್ಲ ಅನ್ನುವುದರಲ್ಲಿ ಆಶ್ಚರ್ಯವೇನಿಲ್ಲ! ·

ಯಾವಾಗ ನೀವು ಹೆಚ್ಚು ತಿಂದು ಸಾಕಷ್ಟು ವ್ಯಾಯಾಮವನ್ನು ಮಾಡುವುದಿಲ್ಲವೋ ಆಗ ಸೋಮಾರಿತನ ಇದ್ದದ್ದೇ. ಇಂತಹ ಸೋಮಾರಿತನಕ್ಕೆ ಒಳಗಾದ ಶರೀರ ಧ್ಯಾನಕ್ಕೆ ಯೋಗ್ಯವಾದದ್ದಲ್ಲ. ಅಷ್ಟೇ ಅಲ್ಲ, ಶಕ್ತಿ ಹೀನವಾದಾಗ ಖಾಯಿಲೆಗಳು ನಮ್ಮ ಶರೀರವನ್ನು ಸುಲಭವಾಗಿ ಆಕ್ರಮಿಸಿಬಿಡುತವೆ.

ವ್ಯಾಯಾಮವು ನಿಮ್ಮ ಶರೀರವನ್ನು ಬೆಳೆಯಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡಿದಾಗ ಶರೀರದ ಪ,ತಿಯೊಂದು ಜೀವ ಕಣಗಳೂ ಅರಳುತ್ತವೆ. ನಿಮ್ಮ ಶ್ವಾಸಕೋಶವು ತುಂಬಿದಾಗ, ಹೊರ ಬರುವ (carbon-dioxide) ಇಂಗಾಲಾಮ್ಲದ ಜೊತೆ ಕಶ್ಲಲಗಳೂ ಸಹ ಹೊರ ಹಾಕಲಡುತೆ.

ನಮ್ಮ ಜೀವನ ಶೈಲಿಯಲ್ಲಿ, ವ್ಯಾಯಾಮಕ್ಕಾಗಲೀ, ವಿಶ್ರಾಂತಿಗಾಗಲೀ ಸಮಯವೇ ಇಲ್ಲ. ನಾವು ಯಾವುದನ್ನು ವಿಶ್ರಾಂತಿ ಎನ್ನುತ್ತೇವೆಯೋ ಅದು ವಿಶ್ರಾಂತಿಯೇ ಅಲ್ಲ. ನಾವು ನಿದ್ದೆ,ಯಿಂದ ಎದ್ದಾಗ ಎಷ್ಟು ಜನ ಸ್ಫೂರ್ತಿಯುತರಾಗಿ, ಸಂತೋಷವಾಗಿರೀವಿ? ನೀವು ಸರಿಯಾಗಿ ನಿದ್ದೆ, ಮಾಡಿ ವಿಶ್ರಾಂತಿ ಪಡೆದಿದ್ದರೆ, (ಎದ್ದ ತಕ್ಷಣ) ಪ್ರತಿದಿನ ಬೆಳಿಗ್ಗೆ, ಬಚ್ಚಲಮನೆಗೆ ಸಂತೋಷವಾಗಿ ಕುಣಿದಾಡುತ್ತಾ ಹೋಗ್ದೀರಿ! (you should dance your way to the bathroom) ಅದರ ಬದಲು, ಅಲಾರಂ ಗಂಟೆ ಬಾರಿಸಿದರೂ, ನೀವು ಮಾಡುವುದೇನು? ಅದನ್ನು ನಿಲ್ಲಿಸಿ, ಪುನಃ ನಿದ್ರೆ ಹೋಗೀರಿ!

ಧ್ಯಾನಕ್ಕೆ ಪ್ರವೇಶಿಸುವುದು

ನಿಜವಾದ ನಿದ್ದೆ, ಅಂದರೆ, ನಿಮ್ಮ ಶರೀರ ಪೂರಾ ವಿಶ್ರಾಂತಿ ಪಡೆದು, ಒತ್ತಡ ಪೂರ್ತಿ ಹೋಗಿ, ನಿಮ್ಮ ಶರೀರ ಪ್ರಕೃತಿಯು ನಿಮ್ಮ ಶರೀರದಲ್ಲಿನ ಏರುಪೇರುಗಳನ್ನು ಸರಿಪಡಿಸಿ ಸುಸ್ಥಿತಿಯಲ್ಲಿಟ್ಟಿರುವ ಸಮಯ. ಎಷ್ಟು ಸಾರಿ ನೀವು ಕನಸೂ ಇಲ್ಲದ ಸುಖ ನಿದ್ರೆಯನ್ನು ಯಾವ ಅಡಚಣೆಯೂ ಇಲ್ಲದೆ ಮಾಡಿದೀರಿ? ಬಹಳ ಅಪರೂಪ! ಆದರೆ, ಆ ದಿವಸಗಳು ಮಾತ್ರ, ನೀವು ನಿಜವಾಗಿಯೂ ನಿದಿ,ಸಿದ್ದೀರಿ!

ನಿಮಗೆ ಆಶ್ಚರ್ಯವಾಗಬಹುದು, ಇವೆಲ್ಲಾ ಧ್ಯಾನಕ್ಕೆ ಹೇಗೆ ಸಂಬಂಧಪಟ್ಟಿದೆ? ಅಂತ. ಈ ವಿಚಾರದಲ್ಲಿ ಚರ್ಚೆ ಮಾಡುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಧ್ಯಾನವನ್ನು ಸರಿಯಾಗಿ ಮಾಡುವುದಕ್ಕೆ ಭೌತಿಕವಾದ ಈ ಶರೀರ ಸಮರ್ಥವಾಗಿದ್ದಲ್ಲಿ ಸಹಾಯ ಮಾಡುತ್ತದೆ. ಆದರೆ ಬಹು ಮುಖ್ಯವಾಗಿ ಧ್ಯಾನದ ಅಭ್ಯಾಸದಿಂದಲೇ ನಿಮ್ಮ ಶರೀರಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. ನಿಮಗೆ ಒಳ್ಳೆಯ ನಿದ್ದೆ, ಬರಲು ಸಹಾಯವಾಗುವ ತಂತ್ರಗಳನ್ನು ತಿಳಿದುಕೊಳ್ಳೋಣ. ಯಾವಾಗ ನಿಮ್ಮ ನಿಮ್ಮ ನಿದ್ರೆಯ ಗುಣ ಉತ್ತಮವಾಗುತ್ತದೆಯೋ, ಜಾಗೃತಾವಸ್ಥೆಯಲ್ಲಿನ ನಿಮ್ಮ ಕಾರ್ಯ ನಿರ್ವಹಣೆಯ ಗುಣಮಟ್ಟ, ಹಾಗೂ ಉತ್ಪಾದನೆಯೂ ಸಹಜವಾಗಿ ಹೆಚ್ಚಾಗುತ್ತದೆ. (ನೀವು ನಿದ್ರೆಯನ್ನು ಚೆನ್ನಾಗಿ ಮಾಡಿದಷ್ಟೂ, ನಿಮ್ಮ ಎಚ್ಚರದ ಕಾರ್ಯ ನಿರ್ವಹಣಾ ಶಕ್ತಿ ಸಹಜವಾಗಿ ಹೆಚ್ಚುತ್ತದೆ)

Step-2 ಆಲೋಚನೆಗಳ ಮೇಲೆ ಕೆಲಸ ಮಾಡಿ

ಆಲೋಚನೆಗಳು ನಮ್ಮ ಜೀವನದಲ್ಲಿ ಹೆಚ್ಚು ಭ್ರಾಂತಿಪೂರ್ವಕ ವಾದವುಗಳು. ಬಹಳ ಸಾರಿ ನಮಗೆ ನಮ್ಮ ಆಲೋಚನೆಗಳ ಮೇಲೆ ಹಿಡಿತವಿರುವುದಿಲ್ಲ. ನಮ್ಮ ಆಲೋಚನೆಗಳು ನಮ್ಮನ್ನು ಎಲ್ಲೆಂದರಲ್ಲಿಗೆ ಕರೆದುಕೊಂಡು ಹೋಗಿಬಿಡುತೆ. ನಿಮಗೆ ಬರುವ ಆಲೋಚನೆಗಳನ್ನೆಲ್ಲಾ ಜೋರಾಗಿ ಮಾತಿನಲ್ಲಿ ಹೇಳಲು ಹೊರಟರೆ, ನೀವೇ ನಿಮ್ಮ ಮಾತುಗಳಿಗೆ ನಾಚಿಕೆ ಪಟ್ಟುಕೊಳ್ಳುತ್ತೀರಿ! ಏಕೆಂದರೆ,

ಒಂದು ಆಲೋಚನೆಗೂ ಮತ್ತೊಂದಕ್ಕೂ ಸಂಬಂಧವೇ ಇರುವುದಿಲ್ಪ ವರ್ತಮಾನಕ್ಕೆ ಸಮಂಜಸವಾಗಿರುವುದಿಲ್ಲ ಹಾಗೂ ಸತ್ಯವಾಗಿ ಇರುವುದಿಲ್ಲ. ಆದರೂ ನಮ್ಮ ಜೀವನದಲ್ಲಿ ಈ ಆಲೋಚನೆಗಳನ್ನು ನಂಬುತ್ತೇವೆ. ಈ ಆಲೋಚನೆಗಳಿಂದಲೇ ಬದುಕುತಿದ್ದೇವೆ!

ಒಂದು ಸಣ್ಣ ಕತೆ:

ಒಂದು ರಾಜ್ಯದಲ್ಲಿ ಭವಿಷ್ಯವನ್ನು ಹೇಳುತಿದ್ದ ಒಬ್ಬ ಜ್ಯೋತಿಷಿ ಇದ್ದ. ಒಂದು ದಿನ ಅಲ್ಲಿನ ರಾಜ ಈ ಜ್ಯೋತಿಷಿಯ ಸಾಮರ್ಥ್ಯದ ವಿಚಾರವಾಗಿ ಕೇಳಿ ಅವನನ್ನು ಪರೀಕಿಸಬೇಕೆಂದು ನಿರ್ಧರಿಸಿದ. ಅವನನ್ನು ನೂರಾರು ಓಡಾಡುತಿದ್ದ ಬಂದರಿಗೆ ಕರೆದುಕೊಂಡು ಹೋದ. ಪ್ರತಿದಿನ ಅಲ್ಲಿ ಹಡಗುಗಳು ಬಂದು ಹೋಗುತಿದ್ದವು.

ಈ ದಿನ ಈ ಬಂದರಿಗೆ ಎಷ್ಟು ಹಡಗುಗಳು ಬರಲಿವೆ ಎಂದು ರಾಜನು ಆ ಜೋತಿಷಿಯನ್ನು ಕೇಳಿದ. ಅವನು ಹೇಳಿದ. ಕೇವಲ ಮೂರು ಮಹಾರಾಜರೆ, ಈದಿನ ಮಾತ್ರವಲ್ಲ, ಪ್ರತಿದಿನ ಮೂರೇ ಮೂರು ಹಡಗುಗಳು ಬರುತವೆ ಮತ್ತು ಹೊರಡುತವೆ ಎಂದ. ನಿರು

ರಾಜನು ಆಶ್ಚರ್ಯಚಕಿತನಾಗಿ ಕೇಳುತಾನೆ ಹಾಗಂದೆ, ಏನು? ಆ ಮೂರು ಹಡಗುಗಳು ಯಾವುವು?

ಹೆಣ್ಣು, ಹೊನ್ನು ಮತ್ತು ಅಧಿಕಾರ - ಈ ಹಡಗುಗಳು ಮಹಾರಾಜರೇ, ಎಲ್ಲರೂ, ನೀವೂ ಸೇರಿ ಪ,ಯಾಣಿಸುತಿರುವುದು ಈ ಮೂರು ಹಡಗುಗಳಲ್ಲಿಯೇ!

ಇದು ಸತ್ಯ. ಯಾವಾಗಲೂ ನಾವೆಲ್ಲರೂ ಯೋಚನೆ ಮಾಡುತಿರುವುದು ಹೆಣ್ಣು ಹೊನ್ನು ಅಥವಾ ಅಧಿಕಾರದ ಬಗ್ಗೆ. ನಮ್ಮ ಆಲೋಚನೆಗಳಿಗೆ ಬೇರೆ ಬೇರೆ ಹೆಸರಿಡಬಹುದು - ಆದರೆ ಅವುಗಳ ಮೂಲ ಉದ್ದಿಶ್ಯ ಈ ಮೂರೇ. ಇಲ್ಲಿ ಹೆಣ್ಣು ಎಂದರೆ ಕೇವಲ ಹೆಣ್ಣೇ ಅಲ್ಲ. ಯಾವ ತರಹದ ಸುಖದ ಗೀಳು ಬೇಕಾದರೂ ಆಗಬಹುದು.

ಧ್ಯಾನಕ್ಕೆ ಪ್ರವೇಶಿಸುವುದು

ನೀವು ಆಫೀಸ್‌ನಲ್ಲಿ ಕೆಲಸ ಮಾಡುತಿದ್ದೀರಿ ಅಂದರೆ ಅಂತಿಮವಾಗಿ ಅದು ಹಣಕ್ಕಾಗಿ ಅಥವಾ ಅಧಿಕಾರಕ್ಕಾಗಿ ಆಗಿರುತದೆ. ನೀವು ರಜ ತೆಗೆದು ಕೊಳ್ಳುತ್ತಿದ್ದೀರಿ ಅಂದರೆ ನಿಮ್ಮ ಮನಸ್ಸು ಯಾವುದೋ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಿರುತೆ.

ನೀವು ಯಾವಾಗಲೂ ಏನನ್ನು ಆಲೋಚಿಸುತ್ತಿರುತ್ತೀರಿ, ಸ್ವಲ್ಪ ವಿಚಾರ ಮಾಡಿ ಖಚಿತವಾಗಿ ಈ ಮೂರರಲ್ಲಿ ಒಂದಾಗಿರುತೆ!

ಎಷ್ಟು ಸಾರಿ ನೀವು ಸತ್ಯ, ಸೌಂದರ್ಯ, ಒಳ್ಳೆಯತನ ಇವುಗಳ ವಿಚಾರವಾಗಿ ಆಲೋಚಿಸುತೀರಿ? ಅದರ ಅವಶ್ಯಕತೆಯಾದರೂ ಏನು? ಏನು ನಮ್ಮ ಜೀವನ ಈ ಸತ್ಯ, ಸೌಂದರ್ಯಗಳ ಆಧಾರದ ಮೇಲೆ ನಡೆಯುತಿದೆಯೇ? ಅಂತ ಆಲೋಚಿಸಬಹುದು ನೀವು. ನಮ್ಮ ಜೀವನ ಎಷ್ಟು ಹಣವನ್ನು ನಾವು ಗಳಿಸುತೇವೆ ಹಾಗೂ ಎಂತಹ ಅಧಿಕಾರವನ್ನು ಸಂಪಾದಿಸಬಹುದು! ಎಂಬುದರ ಮೇಲೆಯೇ ಆಧಾರಗೊಂಡಿರುತದೆ.

ಆದರೆ ಆಲೋಚನೆಗಳು ನಿಮ್ಮ ಜೀವನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಯಾವಾಗ ನೀವು ಪದೇ ಪದೇ ಪದೇ ವಿಚಾರವನ್ನು ಕುರಿತು ಆಲೋಚಿಸತೊಡಗಿದಾಗ ಅದು ನಿಮ್ಮ ಮನಸ್ಸಿನ ಸ್ಥಿತಿಯನ್ನೇ ಮಾತ್ರವಲ್ಲ, ನಿಮ್ಮ ಜೀವನದ ಸಿತಿಯನ್ನೇ ಬದಲಿಸಬಹುದು.

ನೀವು ಸದಾ ಸೌಂದರ್ಯದ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಜೀವನ ಸುಂದರವಾಗುತ್ತೆ.

ಎಲ್ಲಕ್ಷಿಂತ ಹೆಚ್ಚಾಗಿ ಯಾವ ಆಲೋಚನೆಗಳು ನಿಮ್ಮ ಮನಸ್ಸನ್ನು ಪ್ರವೇಶಿಸುತ್ತಾ ಇವೆ ಹಾಗೂ ಬಿಟ್ಟು ಹೋಗುತಾ ಇವೆ ಎಂಬುದನ್ನು ಜಾಗರೂಕತೆಯಿಂದ ಗಮನಿಸಿ ತಿಳಿದುಕೊಳ್ಳಿ. ಈಗ ನಿಮ್ಮ ಮನಸ್ಸು ಎಲ್ಲಾ ತರಹದ ಆಲೋಚನೆಗಳನ್ನೂ ಸ್ವೀಕರಿಸಲು ಸ್ವತಂತ್ರವಾಗಿದೆ. ಯಾವ ಯೋಚನೆ ಬೇಕಾದರೂ ನಿಮ್ಮ ಮನಸ್ಸಿನೊಳಕ್ಕೆ ನುಗ್ಗಬಹುದು, ಬೇರೆ ಆಲೋಚನೆಗಳ

ಜೊತೆ ಹೋರಾಡಿ ಗರಿಷ್ಠ ಸ್ಥಾನವನ್ನು ಆಕ್ರಮಿಸಿ ತನ್ನದಾಗಿಸಿಕೊಳ್ಳಬಹುದು, ತನಗೆ ಬೇಕೆನಿಸಿದಷ್ಟು ಹೊತ್ತು ಅಲ್ಲೇ ಇರಬಹುದು, ಬೇಕೆನಿಸಿದಾಗ ಹೊರಗೂ ಹೋಗಬಹುದು. ನಿಮ್ಮ ತಲೆಯಲ್ಲಿ ಬರುವ ಆಲೋಚನೆಗಳು ತಮ್ಮ ಪ್ರಭಾವವನ್ನು ಬೀರಿ ನಿಮ್ಮ ಜೀವನವನ್ನೇ ಬದಲಾಯಿಸಿಬಿಡುತವೆ. ಅವುಗಳ ಮೇಲೆ ನಿಮ್ಮ (ಹತೋಟಿ) ಇರುವುದಿಲ್ಲ. ಸುಮ್ಮನೆ ನಿಮ್ಮ ಆಲೋಚನೆಗಳನ್ನು ಗಮನಿಸಿ.

ಕೆಲವು ತರಹದ ಆಲೋಚನೆಗಳು ಬಂದಾಗ ಒಳಗೆ ಏನಾಗುತಿದೆ ಎಂಬುದನ್ನು ಗಮನಿಸಿ. ಕೋಪಕ್ಕೆ, ಕಾಮಕ್ಕೆ ಯೋಚನೆಗಳು ನಿಮ್ಮ ತಲೆಯನ್ನು ಪ್ರವೇಶಿಸಿದಾಗ, ನಿಮ್ಮ ವ್ಯವಸ್ಥೆಯಲ್ಲಿ ಜಾಗೃತಗೊಂಡಾಗ ನಿಮ್ಮಲ್ಲಿ ಅಹಿತಕರವಾದ ಭಾವನೆ ಉಂಟಾಗುತೆ. ಯಾವ ಆಲೋಚನೆಗಳಿಂದ ನಿಮಗೆ ಸಂತೋಷ, ಶಾಂತಿ ದೊರೆಯುತ್ತದೆಯೋ ಅಂಥವುಗಳನ್ನು ಉಳಿಸಿಕೊಂಡು ಮಿಕ್ಕವುಗಳನ್ನು ಹೊರಗೆ ಹಾಕಿಬಿಡಿ!

ನೀವು ನಿಮ್ಮ ಮನಸಿನ ಕಾವಲುಗಾರರಾಗಿ. ಯೋಚನಾ ಪ,ವಾಹವನು ಗಮನಿಸಿ ನೋಡುತ್ತಿರಿ. ನೀವು ನಿಮ್ಮ ಆಲೋಚನೆಗಳೊಂದಿಗೆ ಹೇಗೆ ಗಹನವಾಗಿ ಒಂದಾಗಿಬಿಡೀರಿ ನೋಡಿ! ಅವು ನಿಮ್ಮ ಸುಪ್ತ ಮನಸ್ಸಿನ ಆಳದಿಂದ ಹೊರ ಬರುತಿರುವುದನು ಗಮನಿಸುತೀರಿ. ನೀವು ನಿಮ್ಮ ಆಲೋಚನೆಗಳನ್ನು ನಿಮ್ಮ ಸುಪ್ತ ಮನಸ್ಸಿನಲ್ಲಿಯೇ ಬದಲಾಯಿಸಬಲ್ಲಿರಾದರೆ, ನಿಮ್ಮ ಪ್ರಜ್ಞಾ ಜೀವನದ ಪ್ರವಾಹವನ್ನೂ ಬದಲಾಯಿಸಬಲ್ಲವರಾಗುತ್ತೀರಿ!

ನೀವು ನಿಮ್ಮ ಪ್ರಜ್ಞಾ ಜೀವನದ ಬದಲಾವಣೆಯನ್ನು ಬಯಸುವುದಾದರೆ ಇದನ್ನು ಪ್ರಯತ್ನಿಸಿ - ಉದಾಹರಣೆಗೆ ನಿಮ್ಮ ಕೋಪ ಅಥವಾ ಪೂರ್ವಕಲಿತ ಅಭಿಪ್ರಾಯವನ್ನು ಹೋಗಲಾಡಿಸಿ ಕೊಳ್ಳಬೇಕೆನಿಸಿದರೆ, ನೀವು ನಿದಿ,ಸುವ ಮುನ್ತ ನಿಮ್ಮ ಮನಸಿಗೆ ಬದಲಾವಣೆಗಾಗಿ ಸಲಹೆ ಕೊಡಿ.

ನೀವು ಪದೇ ಪದೇ ಈತರಹ ಕೊಡುತಿರುವ ಸಲಹೆಗಳಿಂದ ನಿಮ್ಮ ಜೀವನ ಅದರಂತೆಯೇ ಚಕಿತರಾಗುತೀರಿ!

Step - 3 ಭಾವನೆಗಳ ಮೇಲೆ ಕೆಲಸ ಮಾಡಿ.

ನಿಮ್ಮ ಭಾವನೆಗಳೇ ನಿಮ್ಮ ಪ್ರಪಂಚವನ್ನು ಸೃಷ್ಟಿಸುತ್ತವೆ.

ನೀವು ನಂಬಿ ಅಥವಾ ಬಿಡಿ, ನೀವು ಒಪ್ಪಬಹುದು ಅಥವಾ ಬಿಡಬಹುದು ಆದರೆ ನೀವೆಲ್ಲರೂ ದೇವರೇ ಆಗಿದ್ದೀರಿ.

ನಿಮ್ಮದೇ ಭಾವನೆಗಳಿಂದ ಸ್ರಾಷ್ಟಿಸುತ್ತೀರಿ.

ಸ್ಪಷ್ಟವಾಗಿ ತಿಳಿಯಿರಿ, ನಿಮ್ಮ ಅರಿವು ಯಾವ ಸ್ಥಿತಿಯಲ್ಲಿರುವುದೋ ಅದೇ ಸ್ಥಿತಿಯಲ್ಲಿ ನಿಮ್ಮ ಜೀವನವೂ ಇರುತದೆ.

ನಿಮ್ಮ ಭಾವನೆಗಳು ಸ್ಪಷ್ಟ ಮತ್ತು ಸಕಾರಾತ್ಮಕವಾಗಿದ್ದಲ್ಲಿ, ಈ ಪ್ರಪಂಚವೇ ಒಂದು ಸುಂದರವಾದ ಸ್ಥಳವಾಗಿರುತ್ತೆ.

ಆಶೀರ್ವಾದವೇ ನಿಮ್ಮ ಮೇಲೆ ಅನುಗ್ರಹದ ಮಳೆಗರೆಯುತ್ತದೆ. ನೀವು ಪ್ರೇಮಮಯರಾಗಿದ್ದಾಗ ಎಲ್ಲೆಲ್ಲೂ ಪ್ರೀತಿಯನ್ನೇ ಕಾಣುತ್ತೀರಿ. ನೀವು ದ್ವೇಷದಿಂದ ಕೂಡಿದ್ದಾಗ, ದ್ವೇಷವನ್ನೇ ಪಡೆಯುತ್ತೀರಿ. ಇದು ನೀತಿಯ ಕಥೆಯಲ್ಲ. ಇದೇ ಸತ್ಯ. ನಮ್ಮ ಸಂಕುಚಿತ ಗ್ರಹಿಸುವಿಕೆಯಿಂದ ನಾವು ಇದನ್ನು ತಿಳಿದುಕೊಳ್ಳಲು ಅಸಮರ್ಥರಾಗಿದ್ದೇವೆ. ಇದಕ್ಕೆ ಕಾರಣವನ್ನು ಎಲ್ಲಾ ಕಡೆಯಲ್ಲೂ ಹುಡುಕುತಿದ್ದೇವೆ. ಸತ್ಯವು ಏನೆಂದರೆ, ನಾವು ಪ್ರತಿಯೊಬ್ಬರೂ ನಮ್ಮ ಜೀವನದ ಪರಿಸ್ಥಿತಿಗೆ 100% ನಾವೇ ಜವಾಬ್ದಾರರು.

ನಿಮ್ಮ ಭಾವನೆಗಳ ಮೇಲೆ ಕೆಲಸ ಮಾಡಲು ನೀವು ಪಾ,ರಂಭಿಸಿದರೆ ಇದರ ಸತ್ಯತೆ ನಿಮಗೇ ತಿಳಿದು ಬರುತೆ!

ನಮ್ಮ ಭಾವನೆಗಳು ಎಷ್ಟರ ಮಟ್ಟಿಗೆ ನಮ್ಮ ಮೇಲೆಯೇ ಪ್ರ,ಭಾವ ಬೀರುತವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿಲ್ಲ. ನಮ್ಮ ಕೆಲಸ ಕಾರ್ಯಗಳು ನಮ್ಮ ಮನಸಿನಿಂದಲೇ ನಿಯಂತ್ರಿ,ಸಲ್ಪಟ್ಟಿವೆ ಎಂದು ತಿಳಿದಿರಬಹುದು, ನಮ್ಮ ಬುದ್ದಿಯಿಂದಲೇ ನಿರ್ಧಾರ ತೆಗೆದುಕೊಂಡು ಎಲ್ಲವನ್ನೂ ಮಾಡುತಿದ್ದೇವೆಂದು ಅಂದುಕೊಂಡಿರಬಹುದು. ಆದರೆ ಸತ್ಯವು ಏನೆಂದರೆ, ನಮ್ಮ ಭಾವನೆಗಳ ಫಲವೇ ನಮ್ಮ ಜೀವನವಾಗಿದೆ.

ನಿಮ್ಮ ಭಾವನೆಗಳ ಸಂಗಡ ಕೆಲಸ ಮಾಡಲು ಮೂರು ಹಂತಗಳಿವೆ.

a) ಪ್ರಬಲವಾದ ನಿಮ್ಮ ಭಾವನೆಯು ಯಾವುದೆಂಬುದನು ಗುರುತಿಸಿ.

ನಿಮ್ಮನ್ನು ಪ್ರಚೋದಿಸುವುದು ಯಾವುದು? (ಚಲಿಸುವಂತೆ ಮಾಡುವುದು -ಯಾವುದು)- ಗಿ

ಯಾವ ಮನೋಭಾವ (ಪ್ರವೃತ್ತಿ) ನಿಮ್ಮ ಕ್ರಿಯೆಯನ್ನು ನಿಯಂತ್ರಿಸುತ್ತದೆ? ನಿಮ್ಮ ಜೀವನವು ಹಗೆತನ, ಪ್ರತಿರೋಧ (ದಾಳಿ) ಮತ್ತು ಕೋಪ ಇವುಗಳಿಂದ ಸುತುವರಿದಿದೆಯೇ?

ನೀವು ವಿನಾಕಾರಣ ಪದೇ ಪದೇ ಖಿನ್ಸರಾಗುತ್ತೀರಾ?

ನಿಮಗೆ ಹೊಡೆದಾಡುವುದೋ?

ನಿಮಗೆ ನೀವು ಪ್ರಾಮಾಣಿಕರಾಗಿರಿ!

ನಿಮ್ಮ ಭಾವನೆಗಳನ್ನು ಹಾಗೇ ಸ್ವೀಕರಿಸಬೇಕು ಇಲ್ಲವಾದರೆ ಅವುಗಳನ್ನು ಪರಿವರ್ತಿಸುವುದಾದರೂ ಹೇಗೆ?

ಹೆಚ್ಚು ಸಲ, ವೈರತ್ವದ ಪರಿಸರದಲ್ಲಿರುವವರು ನಕಾರಾತ್ಮಕ ಭಾವನೆಗಳೊಂದಿಗೆ ದೃಢ ಸಂಬಂಧವನ್ನು ಬೆಳೆಸಿಕೊಂಡಿರುತಾರೆ. ಅದು ಅವರಿಗೆ ಬೇಕು. ಅವರಿಗೆ ಅದೊಂದು ಬದುಕುವ ತಂತ್ರ. ತಮಗೆ ಬೇಕಾದ ಶಕ್ತಿಯನ್ನೆಲ್ಲಾ ತಮ್ಮ ನಕಾರಾತ್ಮಕ ಭಾವನೆಗಳಿಂದಲೇ ಪಡೆಯುತಾರೆ.

ಧ್ಯಾನಕ್ಕೆ ಪ್ರವೇಶಿಸುವುದು

ಸಮಾಜದಲ್ಲಿ ಅಪರಾಧ ಸಮಯದಲ್ಲಿ ಸಂಶೋಧನೆಯಿಂದ ದೃಢಪಡಿಸಿದ್ದಾರೆ. ಏಕೆಂದರೆ, ಯುದ್ಧ ಸಮಯದಲ್ಲಿ ಅವರ ನಕಾರಾತ್ತಕ ಭಾವನೆಗಳನ್ನು ವ್ಯಕಪಡಿಸಲು ತೆರೆದ ಅವಕಾಶ ಸಿಕ್ಕಿರುವುದರಿಂದ ಗೌಪ್ಯವಾಗಿ ಅಪರಾಧಗಳನ್ನು ಮಾಡಬೇಕಾಗಿಲ್ಲ!

ಹಿಟ್ಲರನೂ ಹೇಳಿರುವುದೇನೆಂದರೆ, ಒಂದು ದೇಶವನ್ನು ಶಕ್ತಿಯುತವಾಗಿ ಮಾಡಬೇಕೆಂದರೆ, ನಿಜವಾಗಿಯೂ ಇರಬೇಕಿಲ್ಲ. ನೀವು ಶತ್ರುಗಳನ್ನು ಊಹಿಸಿಕೊಂಡರೂ ಸಾಕು. ಎಲ್ಲಿಯವರೆಗೆ ಅಲ್ಲಿಯವರೆಗೂ ಅವರು ಬಲಶಾಲಿಗಳೆಂದು ಭಾವಿಸಿಕೊಳ್ಳುತ್ತಾರೆ. ತಿರುಗಿ ಬೀಳುವಾಗ, ಬಲಶಾಲಿಗಳೆಂದೇ ತಿಳಿದುಕೊಂಡಿರುತಾರೆ. ನಮ್ಮ ಶಕಿಯೆಲ್ಲಾ ನಕಾರಾತ್ಮಕತೆಯಲ್ಲೇ ಪ್ರವಹಿಸುತ್ತದೆ.

ತಮ್ಮ ಮೇಲೆಯೇ ಸಿಟ್ಟು ತಿರುಗುವುದು ಖಿನ್ನತೆಯ ಲಕ್ಷಣ. ನೀವು ಯಾವಾಗ ಉದ್ಯೇಕ ವ್ಯಕಪಡಿಸುತೀರೋ, ಅದೇ ಕೋಪವಾಗಿ ಕಾಣುತೆ. ಅದನ್ನು ತಡೆದಾಗ ಅದೇ ಖಿನ್ನತೆಯಾಗುತ್ತದೆ. ಇವೆರಡೂ ಸಹ ನಕಾರಾತ್ಮಕವಾದ ಒಂದೇ ಶಕ್ಕಿ.

ಯಾವಾಗ ನಾವು ನಮ್ಮ ನಕಾರಾತ್ಮಕ ಭಾವನೆಗಳ ಮೇಲೆ ಕೇಂದ್ರೀಕರಿಸು ತೇವೆಯೋ, ಯಾವಾಗ ನಮ್ಮ ಪೋಷಿಸುತೇವೆಯೋ, ಯಾವಾಗ 'ನಾನು ಮತ್ತೊಬ್ಬರನ್ನು ಎದುರಿಸುವೆ' (me versus them) ಎಂಬ ಅನುಭವವನ್ನು ಸೃಷ್ಟಿಸಿಕೊಳ್ಳುತ್ತೇವೆಯೋ, ಆಗ ಅಹಂಕಾರವು ತಾನು ಹೆಚ್ಚು ಬಲಿಷ್ಠನೆಂದು ತಿಳಿದುಕೊಳ್ಳುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚು ಜನ, ನಾವು ಹೊಡೆದಾಡುವ ಪರಿಸ್ಥಿತಿಯಲ್ಲಿದ್ದಾಗ, ಆ ಸನ್ನಿವೇಶವನ್ನು ಹಿತಕರವಾಗಿ ಅನುಭವಿಸುತಿರುತೇವೆ.

ಸಕಾರಾತ್ಮಕ, ಮೃದುವಾದ ಭಾವನೆಗಳು ನಮ್ಮನ್ನು ಖಂಡನೆಗಳಿಗೆ ಒಳಗಾಗುವಂತೆ ಮಾಡಿಬಿಡುತ್ತದೆ. ಪ್ರೀತಿ, ಸಂತೋಷ, ದಯೋಇವು ಮನದ ಬಹಳ ನಾಜೂಕಾದ ಭಾವನೆಗಳು. ಅವುಗಳನ್ನು ಅಳವಡಿಸಿಕೊಂಡು ರೂಢಿಸಿಕೊಳ್ಳುತೇವೆಯೋ, ಆಗ ನಮಗೂ ನಮ್ಮ ಪ್ರಪಂಚಕ್ಕೂ ಇರುವ ಎಲ್ಲೆಯ ಶಕ್ತಿಯು ಕಡಿಮೆಯಾಗುತ್ತದೆ. ಆಗ ಅಹಂಕಾರವು ತಾನು ಅಲ್ಪ ಶಕಿಯುಳ್ಳದ್ದೆಂದು ಭಾವಿಸಿಕೊಳ್ಳುತದೆ. ಅದಕ್ಕಾಗಿಯೇ ನಾವು ಈ ಭಾವನೆಗಳ ವಿಚಾರವಾಗಿ ಹೆದರುತ್ತೇವೆ. ನಮ್ಮ ಆಳವಾದ ಸುಪ್ತ ಪ್ರಜ್ಞೆಯಲ್ಲಿ ನಮಗೇ ತಿಳಿಯದಂತೆ ನಾವೆಲ್ಲರೂ ಪ್ರೀತಿಗೆ ಹೆದರುತ್ತೇವೆ - ಏಕೆಂದರೆ, ಪ್ರೀತಿಯಲ್ಲಿ ನಾವು ಅಹಂಕಾರವನ್ನು ತ್ಯಾಗ ಮಾಡಬೇಕಾಗುತ್ತದೆ.

ಆದರೆ ಅಧ್ಯಾತ ಎಂದರೇನೇ ಅಹಂಕಾರವನ್ನು ಕಳೆದುಕೊಳ್ಳುವ ಒಂದು ಪ,ಕಿ,ಯೆ. ಅದು ಖಂಡನೆಗೆ ಅವಕಾಶ ಮಾಡಿಕೊಡುತೆಂಬ ಕಾರಣಕ್ಕಾಗಿ ನೀವು ಪ್ರೀತಿಯಿಸುವುದಕ್ಕೂ ಸಹ ಹೆದರಿದರೆ, ನೀವು ಧ್ಯಾನದಲ್ಲಿ ಇಳಿಯುವುದಾದರೂ ಹೇಗೆ? (ಧ್ಯಾನಕ್ಕೆ ಪ್ರವೇಶಿಸುವುದಾದರೂ ಹೇಗೆ?)

b) ನಿಮ್ಮ ಸಕಾರಾತ್ಮಕ ಭಾವನೆಗಳ ಮೇಲೆ ಕೇಂದ್ರೀಕರಿಸಿರಿ.

ನಿಮ್ಮ ನಿತ್ಯ ಜೀವನ ಹೇಗಿದೆ? ಸ್ವಲ್ಪ ಯೋಚಿಸಿ ನೋಡಿ.

ದಿನವಿಡೀ ಅನೇಕ ತರಹದ ಭಾವನೆಗಳು ನಿಮ್ಮಲ್ಲಿ ಪ್ರವಹಿಸುತ್ತಾ ಇರುತ್ತವೆ.

ನೀವು ಎಚ್ಚೆತಾಗ, ನೀವು ಸಂತೋಷವಾಗಿರುತೀರಿ ಅಥವಾ ಸಮಾಧಾನ ವಾಗಿಯಾದರು ಇರುತೀರಿ. ಆಗ ನಿಮ್ಮ ಹೆಂಡತಿ ಕಾಫಿಯನ್ನು ತಂದು ನಿಮ್ಮ ಮೇಜಿನ ಮೇಲೆ ಇಡುವಾಗ ಸ್ವಲ್ಪ ಚೆಲ್ಲುತ್ತೆ - ಆಗ ಕೂಡಲೇ ನಿಮಗೆ ಸಿಟ್ಟು ಬರುತೆ.

ನಂತರ ಒಳ್ಳೆಯ ತಿಂಡಿ ತಿಂದ ಮೇಲೆ ನಿಮ್ಮ ಮನಸ್ಸು ಒಳ್ಳೆಯ ಸ್ಥಿತಿಗೆ ಬಂದಿರುತ್ತೆ. ಆಮೇಲೆ ಕೆಲಸಕ್ಕೆ ಹೊರಟಾಗ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ ಆಗ ನೀವು ಯಾರನ್ನಾದರೂ ಪ್ರಾಣ ತೆಗೆದುಕೊಳ್ಳುವುದಕ್ಕೂ ಸಿದ್ದವಾದಂತೆ ಇರ್ತೀರಿ! ಆಫೀಸ್‌ನಲ್ಲಿ ಒಂದು ಪ್ರಾಜೆಕ್ಟ್ ಕೆಲಸ ಮಾಡಬೇಕಾದ್ದು ಸರಿಯಾಗಿ ಆಗುತ್ತಾ

ಇರುಳಲ್ಲಿ ಪುನಃ ನೀವು ಒತ್ತಡವನ್ನು ಅನುಭವಿಸುತ್ತೀರಿ. ಹೀಗೇ ಒಂದಾದ ಮೇಲೆ ಮತ್ತೊಂದು. ಪ್ರತಿ ನಿಮಿಷವೂ ಸಹ ನೀವು ಭಾವನೆಗಳಿಂದ ಒದ್ದಾಡುತ್ತಿರುತ್ತೀರಿ. ನಿಮ್ಮ ಜೀವನದಲ್ಲಿ ಆಗ ನಿಮ್ಮ ಮನಸ್ಸಿನ ಸ್ಥಿತಿ ಕಾದ ಬಾಂಡಲೆಯಲ್ಲಿ ಹುರಿದ ಹಾಗೆ ಅನ್ನುತ್ತಾರಲ್ಲಾ ಹಾಗಾಗಿರುತ್ತದೆ. ಎಷ್ಟು ಕಾಲದ ವರೆಗೆ ಅದನ್ನು ಸಹಿಸಿಕೊಳ್ಳುತ್ತೀರಿ ನೀವು?

ಅದೃಷ್ಟವಶಾತ್ ಭಾವನೆಗಳ ಎಲ್ಲಾ ಅನುಭವಗಳೂ ಕೆಟ್ಟವುಗಳೇನಲ್ಲ. ನಮ್ಮಲ್ಲಿ ಹೆಚ್ಚು ಜನಗಳಿಗೆ, ದಿವಸದಲ್ಲಿ ಕೆಲವು ಘಳಿಗೆಗಳು, ಶಾಂತವಾಗಿ, ಸಂತೋಷವಾಗಿ, ನಿಶ್ಚಲ ಮನಸ್ಸಿನಿಂದ ಧ್ಯಾನದಲ್ಲಿದ್ದಂತೆ ಇರುತ್ತದೆ.

ಪ್ರತಿನಿತ್ಯದ ಸರಳವಾದ (ಸಮಾಧಾನದ) ಸ್ಥಿತಿ ಇದಾಗಬಹುದು.

ನಿಮ್ಮ ಹೂದೋಟದಲ್ಲಿ ಚಹಾ ಸೇವನೆಯಲ್ಲಿರಬಹುದು.

ಸ್ನಾನ ಮಾಡುತ್ತಿರಬಹುದು (ತುಂತುರು ನೀರಿನ ಸ್ನಾನ ಮಾಡುತ್ತಿರಬಹುದು) ಸಂಗೀತವನ್ನು ಆಲಿಸುತ್ತಿರಬಹುದು.

ನಿಮ್ಮ ಮಕ್ಕಳೊಂದಿಗೆ ಆಟವಾಡುತ್ತಿರಬಹುದು. ಇಂತಹ ಸನ್ನಿವೇಶಗಳು ಪ್ರತಿದಿನ, ಪ್ರತಿಯೊಬ್ಬರಿಗೂ ಒದಗುತ್ತಿರಬಹುದು. ಆದರೆ ನಮ್ಮಲ್ಲಿ ಎಷ್ಟು ಜನ ಅದರಲ್ಲೇ ತಲ್ಲೀನರಾಗಿ ಆನಂದಿಸುತ್ತೇವೆ?

ಹೇಗಿದೆಯಪ್ಪಾ ಈ ದಿನ ಎಂದು ಯಾರಾದರೂ ಕೇಳಿದಾಗ, ನಾವು ಜ್ಞಾಪಿಸಿಕೊಳ್ಳುವುದು ( ಸಿಕ್ಕಿಕೊಂಡಿದ್ದು, ಪ್ರಾಜೆಕ್ಟ್ ಮುಗಿಯದೇ ಇದ್ದದ್ದು, ಇಂಥಹವುಗಳನ್ನೇ. ಅಪ್ಪಿತಪ್ಪಿಯಾದರೂ ನಾವೇಕೆ ಆ ನಮ್ಮ ಒಳ್ಳೆಯ ಅನುಭವಗಳನ್ನು, ಸಕಾರಾತ್ಮಕ ಭಾವನೆಗಳನ್ನು ನೆನಪಿಸಿಕೊಳ್ಳಬಾರದು?

ಇದನ್ನು ಪ್ರಯೋಗಿಸಲು ಪ್ರಯತ್ನಿಸಿರಿ.

ಸತತವಾಗಿ 24 ಗಂಟೆಗಳ ಕಾಲವೂ ಆ ದಿನದಲ್ಲಾದ ಒಳ್ಳೆಯದನ್ನೇ ನೆನಪಿಸಿಕೊಳ್ಳಿರಿ. ಚಿಕ್ಕ ಚಿಕ್ಕ ಪ್ರಸಂಗಗಳಿಗೂ ಸಹ ಕೃತಜ್ಞತೆಯನ್ನು ಸಲ್ಲಿಸಿರಿ. ನೀವು ಕೆಲಸಕ್ಕೆ ಹೊರಟಾಗ, ಮಳೆ ಬರಲಿಲ್ಲ ಎನ್ನುವುದು, ನಿಮ್ಮ ಹೂದೋಟದ ಮ್ಯಾರಿಗೋಲ್ಡ್ ಹೂವು ಅರಳಿರುವುದು, ನಿಮ್ಮ ಮನೆಯ ಕೆಲಸದ ಆಕೆ ಕೆಲಸಕ್ಕೆ ಬರುವುದನ್ನು ತಪ್ಪಿಸಲಿಲ್ಲ ಎಂಬುವುದು. ನೋಡಿ, ನಾವು ಇಂತಹವುಗಳನ್ನೆಲ್ಲಾ ಮರೆತೇ ಬಿಡುತ್ತೇವೆ! ಕೆಲಸದ ಆಕೆ ಒಂದು ದಿನ ಬರಲಿಲ್ಲವೆಂದರೆ ನಾವು ಅದನ್ನು ಮರೆಯುವುದೇ ಇಲ್ಲ - ಆದರೆ ಅವಳು ಬಂದಾಗ ನಾವು ಗಮನಿಸುತ್ತೇವೆಯೇ? ನಾವು ಅದಕ್ಕೆ ಧನ್ಯವಾದಗಳನ್ನು ಮನಸಿನಲ್ಲಿಯಾದರೂ ಸಲ್ಲಿಸುತ್ತೇವೆಯೇ?

ಆದ್ದರಿಂದ, ನಾನು ಪ್ರತಿಯೊಂದು ಸಕಾರಾತ್ಮಕವಾದ (ಒಳ್ಳೆಯ) ವಿಚಾರಗಳನ್ನು ನೆನಪಿಸಿಕೊಳ್ಳಿರಿ ಎಂದು ಹೇಳಿದಾಗ ನಿಜವಾಗಿಯೂ (ಪ್ರತ್ಯಕ್ಷವಾಗಿ) ಮಾಡಿರಿ. ಪೂರ್ಣ ಪ್ರಾಮಾಣಿಕತೆಯಿಂದ ಮಾಡಿ. ಕೇವಲ 24 ಗಂಟೆಯವರೆಗೆ ಮಾತ್ರ! ಆಗ ನಿಮ್ಮ ಜೀವನ ಹೇಗೆ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ಅನುಭವಿಸಿ ನೋಡಿ. ಒಮ್ಮೆ ನೀವು ಸಕಾರಾತ್ಮಕ ಭಾವನೆಯಲ್ಲಿ ಇರುವಾಗಿನ ಸಂತೋಷವನ್ನು ಮನಗಂಡರೆ, ನೀವು ನಿಮ್ಮನ್ನು ಪುನಃ ಖಿನ್ನತೆಗೆ ಒಳಗಾಗಲು ಬಿಡುವುದೇ ಇಲ್ಲ.

ಈ ಅಭ್ಯಾಸ ತಮಾಷೆಗಾಗಿ ಅಲ್ಲ. ಇದೊಂದು ಬದುಕಿ ಉಳಿಯುವ ತಂತ್ರ! ನೀವು ನಿಮ್ಮ ಜೀವನಕ್ಕೆ ಯಾವಾಗ ಕಲ್ಲುಗಳನ್ನು ಎಸೆಯುತ್ತೀರೋ (ಜೀವನವನ್ನು ಗೌರವದಿಂದ ಪೋಷಿಸುವುದಿಲ್ಲವೋ?}- ಆಗ ನಿಮ್ಮ ಜೀವನವೂ ಅದನ್ನೇ ಪ್ರತಿಕ್ರಿಯಿಸುತ್ತದೆ. ನೀವು ನಿಮ್ಮ ಜೀವನವನ್ನು ಪುಷ್ಪಗಳನ್ನರ್ಪಿಸಿ ಸ್ವಾಗತಿಸಿದರೆ, ನೀವು ಪ್ರತಿಯಾಗಿ ಪುಷ್ಪಗಳನ್ನೇ ಪಡೆಯುವಿರಿ. ಈ ಮುಂದೆ, (ಸಧ್ಯದಲ್ಲಿಯೇ) ನೀವು ಜೀವನವನ್ನು ಕೃತಜ್ಞತೆಗಳಿಂದ ಸ್ವಾಗತಿಸುವುದರಲ್ಲಿ ಕೇಂದ್ರೀಕರಿಸು ವಂತಹ ಧ್ಯಾನದ ತಂತ್ರಗಳನ್ನು ಪಡೆಯುವವರಿದ್ದೀರಿ.

c) ನಿಮ್ಮ ನಕಾರಾತ್ಮಕ ಭಾವನೆಗಳನ್ನು ಪರಿವರ್ತಿಸುವುದನ್ನು ಕಲಿಯಿರಿ.

ನಾವು ದಿನವೂ ಅನುಭವಿಸುವ ನಕಾರಾತ್ಮಕ ಭಾವನೆಗಳು ಏನಾಗುತ್ತವೆ? ಎಂದು ನೀವು ನನ್ನನ್ನು ಪ್ರಶ್ನಿಸಬಹುದು. ನೀವು ಸಕಾರಾತ್ಮಕ ಜ್ಞಾಪಿಸಿಕೊಳ್ಳುವುದರಲ್ಲೇ ಕೇಂದ್ರೀಕರಿಸಿದ್ದರೂ ಸಹ, ಸಹ, ನಿಮ್ಮ ನಕಾರಾತ್ಮಕ ಭಾವನೆಗಳು ನಿಮ್ಮಲ್ಲಿ ಹಾಗೆಯೇ ಉಳಿದಿರುತ್ತವೆ! ಮತ್ತು ಅವುಗಳು ಸತತವಾಗಿ ಕೂಡಿ ಹಾಕಲ್ಪಡುತ್ತಿರುತ್ತವೆ.

ನೀವು ಧ್ಯಾನದ ಮೂಲಕ ಹಳೆಯ ತಡೆಗಳನ್ನು (ಪ್ರತಿಬಂಧಕಗಳನ್ನು) ನಿಮ್ಮಲ್ಲಿಂದ ಕರಗಿಸಿ ತೆಗೆದುಬಿಡಬಹುದು - ಆದರೆ ಹೊಸ ಪ್ರತಿಬಂಧಕಗಳು ಉತ್ಪತ್ತಿಯಾಗದಂತೆ ಜಾಗರೂಕರಾಗಿರಬೇಕು! ಪ್ರತಿ ಕ್ಷಣವೂ, ನೀವು ಹೊಸ ಸನ್ನಿವೇಶಗಳನ್ನು ಎದುರಿಸುತ್ತಿದ್ದೀರಿ. ಉದಾಹರಣೆಗೆ, ಕೆಲವು ಜನ ನಿಮ್ಮನ್ನು ಪದೇ ಪದೇ ಸಿಟ್ಟಿಗೆಬ್ಬಿಸುವವರಿರುತ್ತಾರೆ. ನಿಮ್ಮಲ್ಲಿ ಹೆಚ್ಚಿನ ಶಕ್ತಿಯು ಪ್ರವಹಿಸುತ್ತಾ ಇರುವುದನ್ನು ನೀವು ಸಕಾರಾತ್ಮಕವಾಗಿ ಪರಿವರ್ತಿಸುವುದನ್ನು ಕಲಿಯಿರಿ.

ಶಕ್ತಿಯು ತಟಸ್ಥ, ಇದನ್ನು ಜ್ಞಾಪಿಸಿಕೊಳ್ಳಿ. ಕೋಪವು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಲೈಂಗಿಕತೆಯೂ ಸಹ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಇವೆಲ್ಲವೂ ಶಕ್ತಿಯ ಮಾದರಿಗಳು ವಾಗಿಯಾದರೂ ಅಥವಾ ವಿನಾಶಕರವಾಗಿ ಯಾದರೂ ಉಪಯೋಗಿಸುವುದು ನಿಮಗೇ ಬಿಟ್ಟದ್ದು. ಒಂದು ಚಾಕು ಇದ್ದಂತೆ, ಮಗುವಿನ ಕೈಯಲ್ಲಿ ವಿನಾಶಕರ ವಾಗಿಯೂ, ಶಸ್ತ್ರವೈದ್ಯರ ಕೈಯಲ್ಲಿ ಜೀವ ಪ್ರದಾನ ಮಾಡುವಂತಹ ಉಪಕರಣ ವಾಗಿಯೂ (ಇದ್ದಂತೆ). ಅದೇ ರೀತಿ ಒಂದೇ ಶಕ್ತಿಯನ್ನು ಸಂಪೂರ್ಣ ಬೇರೆ ಬೇರೆ ಫಲಿತಾಂಶಗಳನ್ನು ಪಡೆಯಲು ಉಪಯೋಗಿಸಬಹುದು.

ನೀವು ನಿಮ್ಮ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸುವುದನ್ನು ಕಲಿತರೆ, ನೀವು ಕೋಪವನ್ನು ಸೃಜನಾತ್ಮಕವಾಗಿ ಬದಲಾಯಿಸಿಕೊಳ್ಳಬಹುದು. ಸೃಜನಾತ್ಮಕವಾಗಿ ಜೀವಿಸುವುದನ್ನು ಕಲಿಯಿರಿ. ನಿಮ್ಮ ಶಕ್ತಿಯನ್ನು ಕಲೆಯ ಕಡೆಗೆ, ಸಂಗೀತದ ಕಡೆಗೆ, ಕ್ರೀಡೆಗಳ ಕಡೆಗೆ ತಿರುಗಿಸಿರಿ.

ಪೇಯಿಂಟಿಂಗ್ ಕಲಿಯಿರಿ.

ಕ್ರೀಡೆಯನ್ನು ತೆಗೆದುಕೊಳ್ಳಿ.

ಒಂದು ಹವ್ಯಾಸವನ್ನು ರೂಢಿಸಿಕೊಳ್ಳಿರಿ.

ನರ್ತಿಸಲು ಕಲಿಯಿರಿ

ಇವುಗಳೆಲ್ಲಾ ಶಕ್ತಿಯ ಬೇರೆ ಬೇರೆ ದಾರಿಗಳು, ಯಾವ ರೀತಿ ಕೋಪವೂ ಒಂದು ಶಕ್ತಿಯೋ ಹಾಗೆ.

ಒಂದು ವ್ಯತ್ಯಾಸವೆಂದರೆ ಇವು ಸೃಜನಾತ್ಮಕ ದಾರಿಗಳು. ನಿಮ್ಮ ಜೀವನದ ಪಥವನ್ನು ಬದಲಿಸಿರಿ, ನಿಮ್ಮ ಸಾಧಾರಣ ಜೀವನಕ್ಕೆ ಸೃಜನಾತ್ಮಕ ಆಯಾಮವನ್ನು ಕೊಡಿ. ಈ ರೀತಿ ನಿಮ್ಮ ವಿನಾಶಾತ್ಮಕ ಶಕ್ತಿಯು ಸಕಾರಾತ್ಮಕ ಪ್ರತಿಫಲದೊಂದಿಗೆ ಸೃಜನಾತ್ಮಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.

ಯಾವಾಗ ನೀವು ನಿಮ್ಮ ಸಕಾರಾತ್ಮಕ ಭಾವನೆಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸುತ್ತೀರೋ, ಆಗ ನಿಮ್ಮ ಜೀವನವು ತನಗೆ ತಾನೇ ಒಳ್ಳೆಯದಾಗಿ ಬದಲಾಯಿಸಲ್ಪಡುತ್ತದೆ. ನೀವು ಪ್ರೀತಿಯನ್ನು ಅನುಭವಿಸಿದಾಗ, ಪ್ರೀತಿಯನ್ನೇ ಕೊಡುತೀರಿ, ಪ್ರೀತಿಯನ್ನೇ ಪಡೆಯುತೀರಿ. ಇದೊಂದು ಸುಂದರವಾದ ಆವೃತ್ತಿ. ನೀವು ಇದನ್ನು ಅನುಭವಿಸಿದ ಹೊರತೂ, ಅದನ್ನು ನಂಬುವುದು ಅಸಾಧ್ಯ. ಆದರೆ ಇದು ನಿಜವಾಗಿಯೂ ಉಂಟಾಗುವಂಥದ್ದು.

ಮತ್ತೂ ತಿಳಿಯಿರಿ, ಈ ತರದ ಪ್ರವೃತಿಯೊಂದಿಗೇ ನೀವು ಹುಟ್ಟಬೇಕೆಂದಿಲ್ಲ, 'ಓಹ್! ಆ ಮನುಷ್ಯ ಬಹಳ ಅದೃಷ್ಟವಂತ, ಅವನು ಸದಾಕಾಲದಲ್ಲೂ ನಗು ಮುಖವನ್ನೇ ಹೊಂದಿ ಸುತಾಡುತ್ತಿರುತ್ತಾನೆ. ನಾನೊಬ್ಬನೇ ಇಷ್ಟೊಂದು ಒತ್ತಡಕ್ಕೆ ಸಿಕ್ಕಿರುವವನು', ಹೀಗೆಲ್ಲಾ ಹೇಳಬೇಡಿ.

ಸಕಾರಾತ್ಮಕವಾದ ಕೊಳ್ಳಬಹುದು. ಯಾವಾಗ ನೀವು ಸಂತೋಷದಿಂದ ತುಂಬಿರುತ್ತೀರೋ ಆವಾಗ

ಕಷ್ಟ ಕಾರ್ಪಣ್ಯಗಳು ನಿಮ್ಮನ್ನು ನೋಡಿ ಭಯಪಡುತ್ತವೆ! ಕೋಪವು ನಿಮ್ಮನ್ನು ಮುಟ್ಟಲೂ ಆಗದು. ಯಾವಾಗ ನೀವು ಒಳಗೆ ಆನಂದದಲ್ಲಿರುವುದನ್ನು ರೂಢಿಸಿಕೊಳ್ಳುವಿರೋ ಆಗ ನೀವು ಧ್ಯಾನದಲ್ಲಿ ಯಾವ ಅಭಿವೃದ್ಧಿಯನ್ನು ಬೇಕಾದರೂ ಪಡೆಯಬಹುದು.

ನಿಮ್ಮ ಜೀವನವನ್ನು ಪ್ರೀತಿಯಿಂದ, ಪರಿವರ್ತಿಸಿಕೊಳ್ಳಬಹುದು.

ಜೀವನವನ್ನು ಉತ್ಸವವನ್ನಾಗಿಸಿಕೊಳ್ಳಿ . ಆಗಮಾತ್ರ ಜೀವನವು ಧ್ಯಾನಮಯವಾಗುವುದು.

ರಿಂನರು ನನ್ನನ್ನು ಕೇಳುವುದೇನೆಂದರೆ: ತಪಸ್ಸು ಎಂದರೇನು? ಧ್ಯಾನ ಮಾಡುವುದಕ್ಕೆ ತಪಸ್ಸು ಅವಶ್ಯಕವೇ?

ನಾನು ಹೇಳುತಿರುವುದು ತಪಸ್ಸೇ ಹೊರತು ಬೇರೆ ಏನೂ ಅಲ್ಲ. ನಿಮ್ಮ ಶರೀರವನ್ನೂ, ಹಾಗೂ ಸಜ್ಜುಗೊಳಿಸುವುದು ತಪಸ್ಸಲ್ಲದೆ ಬೇರೆ ಏನು?

ತಪಸ್ಸು ಎಂದರೆ ಬೆಟ್ಟಗುಡ್ಡಗಳಲ್ಲಿದ್ದು ಎಲ್ಲಾ ತರಹದ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವುದೂ ಅಲ್ಲ ಹಾಗೂ ಎಲ್ಲಾ ತರಹದ ಧಾರ್ಮಿಕ ಕರ್ಮಗಳನ್ನು ನೆರವೇರಿಸುವುದೂ ಅಲ್ಲ!

ಧ್ಯಾನಮಯ ಜೀವನದ ಕಡೆಗೆ

ತಪಸ್ಸು ಎಂದರೆ ಆಹಾರವನ್ನು ಸೇವಿಸದೇ ಇರುವುದು, ಬಟ್ಟೆಗಳನ್ನು ಧರಿಸದಿರುವುದೂ ಅಥವಾ ಕತ್ತಲೆಯ ಗುಹೆಯಲ್ಲಿ ವಾಸಿಸುವುದು ಅಥವಾ ಶರೀರವನ್ನು ಯಾವ ತರಹದಲ್ಲಾದರೂ ಹಿಂಸಿಸುವುದೂ ಅಲ್ಲ. ಯಾವಾಗ ನೀವು ನಮ್ಮ ಶರೀರಕ್ಕೆ (ಆಗತ್ಯವಾದದ್ದನ್ನು) ಅದಕ್ಕೆ ಒದಗಿಸದೇ ತಪ್ಪಿಸಿದಲ್ಲಿ (ಕಿತುಕೊಂಡಲ್ಲಿ) ಧ್ಯಾನ ಮಾಡುವುದಕ್ಕಿಂತ ತಪ್ಪಿಸುವುದರಲ್ಲಿಯೇ ಹೆಚ್ಚು ಕೇಂದ್ರೀಕರಿಸುವಿಕೆಯ ಅಪಾಯವಿದೆ. ನಾನು ನಿಮಗೆ 24 ಗಂಟೆಗಳವರೆಗೆ ಆಹಾರವನ್ನು ನಿಲ್ಲಿಸಬಹುದು. ಆದರೆ, ಆಹಾರವನ್ನೇ ಧ್ಯಾನ ಮಾಡಲು ಪ್ರಾರಂಭಿಸುತ್ತೀರಿ! ನೀವು ಆಹಾರದ ವಿಚಾರವಾಗಿ ಯೋಚಿಸಬಲ್ಲಿರೇ ಹೊರತು ಬೇರಾವುದನ್ನೂ ಅಲ್ಲ. ನಿಜವಾದ ಉಪವಾಸವೆಂದರೆ ಆಹಾರವನ್ನು ಸಂಪೂರ್ಣವಾಗಿ ಮರೆಯುವುದೇ ಆಗಿದೆಯೇ ಹೊರತು ನೀನು ತಿನ್ನದೇ ಇರುವ ಆಹಾರವನ್ನು ಕುರಿತು ಧ್ಯಾನ ಮಾಡುವುದಲ್ಲ. ಆದರೆ ಹೆಚ್ಚು ಜನರಿಗೆ ಇದರ ವ್ಯತ್ಯಾಸವೇ

ಕಾಣುವುದಿಲ್ಲ. ಅದಕ್ಕಾಗಿಯೇ ಈ ವ್ರತ ನಿಯಮಗಳ ದಾರಿ ಎಲ್ಲರಿಗೂ ಅಲ್ಲ. ಆದರೆ, ಇವುಗಳೆಲ್ಲಾ ಶರೀರವನ್ನು ಹತೋಟಿಯಲ್ಲಿಡಬೇಕಾಗುವ ಬೇರೆ ಬೇರೆ ಮಾರ್ಗಗಳು ಸಂಯಮದಲ್ಲಿಡಲು ಕಠಿಣ ತಪಸ್ಸನ್ನು ಆಚರಿಸುತ್ತಾರೆ. ಆದರೆ ಎಲ್ಲರೂ ಅದೇ ಮಾರ್ಗವನ್ನು ಅನುಸರಿಸುವ ಅಗತ್ಯವಿಲ್ಲ.

ಒಂದು ಸಣ್ಣ ಕತೆ:

ಒಬ್ಬ ಯೋಗಿಯು ಪರ್ವತಗಳಲ್ಲೇ ವಾಸಿಸುತ್ತ ಬಹಳ ವರ್ಷಗಳ ಕಾಲ ವಿಧಿ, ನಿಯಮಗಳ ಪ್ರಯತ್ತಿಸುತ್ತಿದ್ದ. ಅವನು ವೃತ, ಹೋಮ ಮುಂತಾದ ಕರ್ಮಗಳನ್ನೂ ಮಾಡುತಾ ಮಂತ್ರಗಳನ್ನು ಕಲಿತು, ಪವಿತ, ಗ್ರಂಥಗಳನ್ನೂ ಅಧ್ಯಯನ ಮಾಡಿ, ಲೆಕ್ಕವಿಲ್ಲದಷ್ಟು ಕಾಲದವರೆಗೆ ಹದಿನೈದು ವರ್ಷಗಳ ನಂತರ, ತನ್ನ ತಪಸ್ಸು ಮುಗಿಯುವುದರಲ್ಲಿದೆ ಎಂದು ತಿಳಿದು ಪರ್ವತ ಪ್ರದೇಶದಿಂದ ಕೆಳಗಿಳಿದು ಬಂದು, ಆಧ್ಯಾತ್ಮ ವಿಚಾರವು ಜನಗಳಿಗೆ ಅವರ ಜೀವನದಲ್ಲಿ ಎಷ್ಟು ಪ್ರಾಮುಖ್ಯವಾದದ್ದು ಎಂದು ತಿಳಿಸಿ, ಅವರಿಗೆ ಶಿಕ್ಷಣವನ್ನು ಕೊಡಬೇಕೆಂದು ಅಂದುಕೊಂಡನು. ಅವನು ಪಟ್ಟಣಕ್ಕೆ ಬಂದಿರುವುದು ತಿಳಿದೊಡನೆಯೇ ಈ ಸಮಾಚಾರ ಹರಡಿ, ಅವನನ್ನು ಒಂದು ಆಧ್ಯಾತ್ಮ ಸಮಾರಂಭಕ್ಕೆ ಆಹ್ವಾನಿಸಿದರು. ಹೀಗೆ ಆಹ್ವಾನಿಸಿದವರಲ್ಲಿ ಒಬ್ಬ ಯುವಕ ಈ ಹಳೇ ಕಾಲದ ಸಾಂಪ್ರದಾಯಿಕ ತಪಸ್ಸಿನ ವಿಧಿ ನಿಯಮಗಳನ್ನು ನಂಬದವನೂ ಇದ್ದ.

ಯೋಗಿಯು ಪ್ರವೇಶಿಸುತ್ತಿದ್ದಂತೆಯೇ, ಈ ಯುವಕ ಅವರ ಕಡೆ ತಿರುಗಿ ಕೆಲವು ಕಠಿಣ ಶಬ್ದಗಳಿಂದ ಮಾತನಾಡಿದನು.

ಅದನ್ನು ಕೇಳುತಿದ್ದಂತೆಯೇ ಆ ಯೋಗಿಯು ತನ್ನಲ್ಲಿ ಒಳಗಿನಿಂದ ಕೋಪದ ಅಲೆಯು ಭುಗಿಲೆದ್ದು ಬಂದುದನ್ನು ಗಮನಿಸಿದನು. ಇಷ್ಟೆಲ್ಲಾ ವರ್ಷಗಳವರೆಗೆ ಇಷ್ಟೆಲ್ಲಾ ಪ್ರಯತ್ನ ಪಟ್ಟರೂ ಸಹ ಯಾರೋ ಹೊರಗಿನವನು ಮಾತನಾಡಿದ

ಕೆಲವೇ ಶಬ್ದಗಳಿಂದ ತನ್ನಲ್ಲಿ ಈ ಕೆಟ್ಟ ಕೋಪವು ತಲೆ ಎತ್ತಿದ್ದನ್ನು ತಿಳಿದು ಏನೂ ಮಾತನಾಡದೆ (ಉತ್ತರಿಸದೆ) ಆ ಯೋಗಿಯು ಆ ಜಾಗದಿಂದ ಮೌನವಾಗಿ ಹೊರಟು ಹೋದನು. ಆಗ ಯಾರೋ ಒಬ್ಬರು ಯೋಗಿ ಇದ್ದಲ್ಲಿಗೆ ಓಡಿಹೋಗಿ ಕ್ಷಮೆಯಾಚಿಸಿ, ಹಿಂದಿರುಗಲು ಬೇಡಿಕೊಂಡರು ಆಗ, ಆ ಯೋಗಿಯು ಹೇಳಿದ್ದೇನೆಂದರೆ, ''ನನ್ನ ತಪಸ್ಸು ಉತ್ತಮವಾಗಿ ಇನ್ನೂ ಪೂರ್ಣವಾಗಿಲ್ಲ! ನಾನಿನ್ನೂ (ಹೊಸದಾಗಿ) ಪ್ರಾರಂಭಿಸುವವನು, ನನ್ನ ಕೆಲಸವನ್ನು (ಕಲಿಕೆಯನ್ನು) ಪ್ರಾರಂಭಿಸಲು ನಾನು ಹೊರಡಲೇಬೇಕು ನಾನು ನಿಜವಾಗಿಯೂ ಪರಿಪೂರ್ಣನಾದಾಗ ಹಿಂದಿರುಗಿ ಬರುತ್ತೇನೆ.''

ಅತಿ ಕಠಿಣವಾದ ತಪಸ್ಸು ಎಂದರೆ ತನ್ನನ್ನು ತಾನು ಸರಿಯಾಗಿ ಅರ್ಥ ಮಾಡಿಕೊಂಡು ತನ್ನನ್ನೇ ಪರಿವರ್ತಿಸಿಕೊಳ್ಳಲು ಪ್ರಯತ್ತಿಸುವುದು.

ನಿಮ್ಮ ಶುದ್ಧಿಗೊಳಿಸುವುದಕ್ಕಿಂತ ಹೆಚ್ಚಿನ ತಪಸ್ಸು ಮತ್ತೊಂದಿಲ್ಲ. ಈ ತಪಸ್ಸನ್ನು ಈಗಲೇ ಎಲ್ಲಿದ್ದರಲ್ಲೇ ಮಾಡಬಹುದು. ಇದೆಲ್ಲವೂ ಧ್ಯಾನಕ್ಕೆ ಸರಿಯಾದ ತಳಹದಿಯನ್ನು ಹಾಕಲು, ಭೂಮಿಯನ್ನು ತಯಾರು ಮಾಡುವ ಕೆಲಸದ ಬಗ್ಗೆಯೇ.

ಅರಿವೇ ಬೀಗದ ಕೈಕವಾಗಿದ

ನಿಮ್ಮ ಶರೀರವನ್ನು ಗಮನಿಸಿ, ಆಲೋಚನೆಗಳನ್ನು ಗಮನಿಸಿ, ಭಾವನೆಗಳನ್ನು ಗಮನಿಸಿ ಎಂದು ನಿಮಗೆ ನಾನು ತಿಳಿಸಿದೆ.

ಬೇರೆಯ ರೀತಿಯಲ್ಲಿ ಹೇಳುವುದಾದರೆ - ಅರಿವುಳ್ಳವರಾಗಿರಿ.

ಧ್ಯಾನಕ್ಕೆ ಅರಿವೇ ತಳಹದಿ, ಕೇಂದ, ಮತ್ತು ಗುರಿ. ಅರಿವು ಎನ್ನುವುದು ನಿಮ್ಮ (Key-word) ಕೀವರ್ಡ್. ಯಾವ ತಂತ್ರವೇ ಆಗಲಿ, ಯಾವ ಮತವೇ ಆಗಲಿ, ಯಾವ ಧರ್ಮವೇ ಆಗಿರಲಿ ಪರವಾಗಿಲ್ಲ - ಬೇಕಾಗಿರುವುದು ಅರಿವಿನ

ಬಗ್ಗೆ ಕೇಂದ್ರೀಕರಿಸುವುದು. ಈ ಪುಸ್ತಕದಲ್ಲಿರುವ ಪ್ರತಿಯೊಂದು ತಂತ್ರದಲ್ಲೂ ಅಂತರ್ಗತವಾಗಿ ಸಾಮಾನ್ಯವಾಗಿ ಇದು ಅಡಕವಾಗಿದೆ.

ಯಾವಾಗ ನೀವು ಏನನ್ನಾದರೂ ಗಮನಿಸಲು ಪ್ರಾರಂಭಿಸಿದಾಗ, ನೀವು ಸಾಕ್ಷಿಯಾಗುತ್ತೀರಿ, ನೀವು ಒಬ್ಬ ಹೊರಗಿನವರಾಗುತ್ತೀರಿ. ನೀವು ಲಕ್ಷಿಸು ತ್ತಿರುವುದರೊಂದಿಗೆ ಏಕೀಭವಿಸುವುದನ್ನು ಬಿಟ್ಟುಬಿಡುತ್ತೀರಿ. ಹೀಗೇ ನಂತರ, ಅದು ನಿಮ್ಮಿಂದ ಹೊರಗಿರುವ ವಸ್ತುವೆಂದು ತಿಳಿಯತೊಡಗುತ್ತೀರಿ.

ನಿಮ್ಮ ಶರೀರ, ಮನಸು, ಭಾವನೆಗಳನ್ನು ಅರಿತ ಕೂಡಲೇ ನೀವು ಅವುಗಳಿಂದ ಸ್ವತಂತ್ರರಾಗುತೀರಿ.

ನಿಮ್ಮ ಜ್ಞಾನವನ್ನೂ, ನಿಮ್ಮ ಪ್ರಜ್ಞೆಯನ್ನೂ ಜಾಗೃತಗೊಳಿಸಿರಿ.

ನಿಮ್ಮ ಶರೀರದ ಕೃತ್ಯಗಳನ್ನು ನೀವು ಯಾರೋ ಹೊರಗಿನವರು ಎನುವಂತೆ ಅವಲೋಕಿಸಿರಿ, ಆಗ ನೀವು ನಿಮ್ಮ ಶರೀರ ಭಾವನೆಯನ್ನು ಬಿಟ್ಟುಬಿಡುತ್ತೀರಿ.

ನಿಮ್ಮಲ್ಲಿ ಓಡುತಿರುವ ಹುಚ್ಚು ಆಲೋಚನೆಗಳನ್ನು ಗಮನಿಸಿರಿ - ಆಗ ನೀವು ನಿಮ್ಮ ಮನಸ್ಸಿನ ಜೊತೆಗಿನ ತಾದಾತ್ಮೃತೆಯನ್ನು ಬಿಟ್ಟು ಬಿಡುತ್ತೀರಿ.

ನಿಮ್ಮ ಚಂಚಲವಾದ, ಬದಲಾಯಿಸುತ್ತಿರುವ ಭಾವನೆಗಳನ್ನು ಲಕ್ಷಿಸಿರಿ - ಆಗ ನೀವು ನಿಮ್ಮ ಭಾವನೆಗಳು ಅಲ್ಲವೆಂದು ಅರ್ಥ ಮಾಡಿಕೊಳ್ಳುತ್ತೀರಿ. ಸುಮ್ಮನೆ ಆಳವಾಗಿ ಅರಿಯುವುದರಿಂದಲೇ ನೀವು ಸ್ವತಂತ್ರರಾಗಿ ಬಿಡುತ್ತೀರಿ.

ಜೀವನದಲ್ಲಿ ಧ್ಯಾನ' ದಿಂದ 'ಧ್ಯಾನದಲ್ಲಿ ಜೀವನ'ದೆಡೆಗೆ

ನೀವು ಈಗಿನ್ನೂ ಪ್ರಾರಂಭದ ಸ್ಥಿತಿಯಲ್ಲಿಯೇ ಇದ್ದೀರಿ. ಇನ್ನೂ ಒಳಹೊಕ್ಕು ಪರೀಕ್ಷಿಸುವುದರಲ್ಲಿಯೇ ಇದ್ದೀರಿ.

ಅದಕ್ಕಾಗಿಯೇ, ನೀವು ಧ್ಯಾನವನ್ನು ನನ್ನ ಜೀವನ ಶೈಲಿಯಲ್ಲಿ ಹೇಗೆ

ಸೇರಿಸಿಕೊಳ್ಳಲಿ? ಎಷ್ಟು ಗಂಟೆಗಳ ಕಾಲ ನಾನು ಅಭ್ಯಾಸ ಮಾಡಬೇಕು? ಯಾವ ತಂತ್ರವು ನನಗೆ ಸೂಕವಾದುದು? ಎಂದೆಲ್ಲಾ ಕೇಳುತ್ತೀರಿ.

ಈ ಸ್ಥಿತಿಯಲ್ಲಿ ಈ ಪ್ರಶ್ನೆಗಳು ಸಂಪೂರ್ಣವಾಗಿ ಸರಿಯಾದದ್ದೇ.

ಪ್ರಾರಂಭದಲ್ಲಿ ನಿಮ್ಮ ಜೀವನದಲ್ಲಿ ನೀವು ಧ್ಯಾನವನ್ನು ಅಭ್ಯಾಸ ಮಾಡುತ್ತೀರಿ.

ನೀವು ಸೇರಿಸಿಕೊಳ್ಳಬೇಕು. ಒಂದು ತಂತ್ರವನ್ನು ಆರಿಸಿಕೊಳ್ಳಿ, ದಿನಕ್ಕೆ ಅರ್ಧಗಂಟೆ ಅಥವಾ ಒಂದು ಗಂಟೆಯವರೆಗೆ ಅಭ್ಯಾಸವನ್ನು ಮಾಡಿರಿ. ನಿಮಗೆ ಹೇಗೆ ಅನಿಸುತ್ತದೆ ತಿಳಿದು ನೋಡಿ. ನಿಮಗೆ ಒಂದು ತಂತ್ರವು ಸಂತೋಷವನ್ನುಂಟು ಮಾಡಿದರೆ ಹತ್ತು ದಿವಸಗಳವರೆಗಾದರೂ ಫಲವನ್ನು ಬಯಸದೆ (ಫಲಿತಾಂಶ ವನ್ನು ನಿರೀಕ್ಷಿಸದೆ) ಅದಕ್ಕೇ ತಂತ್ರವು ನಿಮಗೆ ಸಮರ್ಪಿತವೆನಿಸಿದರೆ (ನಿಮಗೆ ಹಿಡಿಸಿದರೆ) ಅದು ನಿಮ್ಮನ್ನು ಯಾವ ರೀತಿಯಲ್ಲಾದರೂ ಪರಿವರ್ತಿಸದೇ ಇರಲಾರದು. ಕೆಲವು ವೇಳೆ ಪರಿವರ್ತನೆಯು ಸೂಕ್ಷ್ಮವಾಗಿರಬಹುದು, ಮತ್ತು ಕೆಲವು ವೇಳೆ ಬೇರೆಯವರಿಗೆ ನಿಮಗಿಂತ ಸ್ಪಷ್ಟವಾಗಿ ತಿಳಿದುಬರಬಹುದು.

ಎಷ್ಟೋಸಾರಿ ಜನಗಳು ಬಂದು ನನ್ನನ್ನು ಕೇಳುತ್ತಾರೆ, ಸ್ನಾಮೀಜಿ, ನಾನು ಧ್ಯಾನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ನಂತರ ಬೇರೆಯವರು ನನ್ನ ಮುಖದಲ್ಲಿ ತೇಜಸ್ಸು ಪ್ರಕಾಶವು ಕಾಣಿಸುತ್ತಿದೆ ಎಂಬುದಾಗಿಯೂ, ನಾನು ಬಹಳ ಶಕ್ತಿಯುತವಾಗಿಯೂ, ಕಾಣಿಸುತ್ತಿದ್ದೇನೆಂದು ಹೇಳುತ್ತಾರೆ!

ಆದ್ದರಿಂದ, ಯಾವುದೋ ಒಂದು ಸ್ಥರದಲ್ಲಿ ಖಂಡಿತವಾಗಿಯೂ ಪರಿವರ್ತನೆ ಯು ಆಗುತ್ತಿದೆ. ನೇರವಾಗಿ ಫಲಿತಾಂಶವು ನಿಮಗೆ ದೊರೆತಿಲ್ಲವೆನಿಸಿದರೂ, ತಾಳ್ಮೆಯನ್ನು ಸಾಧಿಸಬಹುದು!

ಧ್ಯಾನಮಯ ಜೀವನದ ಕಡೆಗೆ

ಕ್ರಮೇಣವಾಗಿ ನೀವು ಹೊಸ ಹೊಸ ಹೊಸ ತಂತ್ರಗಳನ್ನು ಬೆನ್ನು ಹಂಟಿಕೊಂಡು ಹೋಗುವುದನ್ನು ನಿಲ್ಲಿಸಿಬಿಡುತ್ತೀರಿ. ಒಂದು ಅಥವಾ ಕೆಲವು ತಂತ್ರಗಳು ನಿಮಗೆ ಸರಿಹೊಂದುವುದಾಗಿ ಅನಿಸಬಹುದು, ಅವುಗಳನ್ನೇ ಅಭ್ಯಸಿಸಲು ನಿರ್ಧರಿಸಿ ಕೊಳ್ಳಿರಿ. ಈಗಲಾದರೋ ಈ ತಂತ್ರಗಳು ಇನ್ನೂ ಹೊಸದು ಮತ್ತು ನಿಮ್ಮನ್ನು ಉತ್ತೇಜಿಸುವಂಥವುಗಳು. ನಿಮ್ಮ ಮನಸಿಗೆ ಇದನ್ನೂ ಪ್ರಯತ್ತಿಸೋಣ, ಅದನ್ನೂ ಪ್ರಯತ್ನಿಸೋಣ ಅನಿಸುತ್ತಿರುತ್ತದೆ. ಅದೊಂದು ತರಹ ಕರಿದ ತಿಂಡಿಗಳ ಅಂಗಡಿಗೆ ಹೋದರೆ, ಅಲ್ಲಿನ ನಾನಾ ತರಹದ ತಿಂಡಿಗಳಲ್ಲಿ ಯಾವುದನ್ನು ನಿಜವಾಗಿಯೂ ತಿನ್ನಬೇಕು ಎಂಬುದನ್ನು ನಿರ್ಧರಿಸಲು ಆಗದಿದ್ದಂತೆ!

ಆದ್ದರಿಂದ ಯಾವ ನಿರ್ಬಂಧನೆಗೂ ಒಳಗಾಗಬೇಡಿ! ನಿಮ್ಮ ಮನಸು ಯಾವುದನ್ನು ಪ್ರಯತ್ತಿಸೋಣವೆಂದು ಹೇಳುತ್ತದೆಯೋ ಅದನ್ನೇ ಮಾಡಿ. ಮತ್ತು ನೀವು ಪ್ರಾಮಾಣಿಕತೆಯಿಂದ ಮಾಡಿರಿ. ನಿಮ್ಮ ಪೂರ್ಣ ಶಕ್ತಿಯನ್ನೂ, ಸಾಮರ್ಥ್ಯವನ್ನೂ ಉಪಯೋಗಿಸಿ ಪ್ರಯತ್ನಿಸಿರಿ. ಒಂದೊಂದು ತಂತ್ರವನ್ನೂ, ಅದೊಂದೇ ನಿಮಗೆ ಸಿಕ್ಕಿರುವುದು ಎಂಬಂತೆ ಪ್ರಯತ್ನಿಸಿರಿ. ದುರಾಸೆಯನ್ನು ಹೊಂದಬೇಡಿ, ತಾಳೆಯನ್ನು ಕಳೆದುಕೊಳ್ಳಬೇಡಿ. ಹಾಗೆ ಮಾಡದಿದ್ದರೆ ನೀವು ಸುಮ್ಮನೆ ಧ್ಯಾನದ ವಿಷಯವಾಗಿ ಚಪಲವನ್ನು ಹೊಂದಿದವರಾಗುವಿರಿ, ಧ್ಯಾನದ ಸಾರಭೂತವಾದ ನಿಜವಾದ ಅನುಭವವನ್ನು ಹೊಂದಲಾರಿರಿ.

ಕೇವಲ ಒಂದೇ ಒಂದು ಅನುಭವ ಸಾಕು!

ಆನಂದದ ಕೇವಲ ಒಂದು ಕಣಿಕ ದರ್ಶನ ನಿಮಗಾದರೆ ಸಾಕು, ನೀವು ಧ್ಯಾನವನ್ನು ಸಂಪೂರ್ಣವಾಗಿ ಪ್ರೀತಿಸತೊಡಗುತ್ತೀರಿ. ಆಗ ನೀವು ಎಷ್ಟು ಗಂಟೆಗಳ ಕಾಲ ಧ್ಯಾನ ಮಾಡಬೇಕೆಂಬುದಾಗಿ ಪ್ರಶ್ನಿಸುವುದೇ ಇಲ್ಲ. ನೀವು ಬೆಳಗಾಗಿ ಏಳುತಿದ್ದಂತೆಯೇ ನಿಮ್ಮ ಮೊದಲನೆಯ ಆಲೋಚನೆ ಧ್ಯಾನದೇ ಆಗಿರುತ್ತದೆ. ನೀವು ಸ್ನಾನ ಮಾಡುವಾಗ, ಉಡುಪು ಹಾಕಿಕೊಳ್ಳುವಾಗ, ಊಟ ಮಾಡುವಾಗ ಪ್ರತಿಯೊಂದನ್ನೂ ಮನಃಪೂರ್ವಕವಾಗಿ ತೃಪ್ತಿಯಿಂದ ಮಾಡುತ್ತಾ

ನಿಮ್ಮ ಪ್ರತಿಯೊಂದು ಕೆಲಸವೂ ಪ್ರತಿಯೊಂದು ಕಣವೂ ಧ್ಯಾನದಿಂದಲೇ ಜೀವ ಪಡೆದಂತೆ ಅನುಭವವಾಗುತ್ತದೆ. ಧ್ಯಾನಾವಸ್ಥೆಯೇ ನಿಮ್ಮ ಜೀವನದ ಸಹಜ ಸ್ಥಿತಿಯಾಗುತ್ತದೆ. ನೀವು ನಿಮ್ಮ ಜೀವನವನ್ನು ಧ್ಯಾನದಲ್ಲಿಯೇ ಜೀವಿಸುತ್ತೀರಿ. ಈ ಸ್ಥಿತಿಯನ್ನೇ ನೀವು ಅಂತಿಮವಾಗಿ ಹೊಂದಲಿ ಎಂಬುದನ್ನೇ ನಾನು ಬಯಸುತ್ತೇನೆ.

ಆದರೆ, ಇದು ಅಷ್ಟು ಸುಲಭವಲ್ಲ ಮೊದಲು ಧ್ಯಾನವೆಂದರೇನೆಂಬ ಅಭಿಪ್ರಾಯವನ್ನು ಮನಗಂಡು ಆ ಭಾವನೆಗೆ ಹೊಂದಿದವರಾಗಿರಬೇಕು. ನೀವು ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಅಭ್ಯಾಸ ಮಾಡಿ ಅದೇ ಅನುಭವವನ್ನು ದಿನದ ಉಳಿದ ಸಮಯಕ್ಕೂ ಬೆಳೆಸಿಕೊಳ್ಳಬೇಕು.

ಈ ಪುಸ್ತಕದಲ್ಲಿ ಎರಡು ತರಹದ ಧ್ಯಾನದ ತಂತ್ರಗಳ ಸಂಗ್ರಹವನ್ನು ನೀವು ಕಾಣುತೀರಿ.

  • ಕುಳಿತು ಮಾಡುವ ತಂತ್ರಗಳು: ಇವು ನಿರ್ಧಿಷ್ಟ ಕಾಲದವರೆಗೆ ಮತ್ತು ದಿನದಲ್ಲಿ ನಿರ್ಧಿಷ್ಟ ಸಾರಿ ಅಭ್ಯಾಸ ಮಾಡುವಂತಹವುಗಳು.
  • ಯಾವಾಗಲಾದರೂ - ಎಲ್ಲಿ ಬೇಕಾದರೂ ಮಾಡುವ ತಂತ್ರಗಳು: ಇವನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಅಭ್ಯಾಸ ಮಾಡುವಂತಹವುಗಳು! (ಅಂದರೆ) ನೀವು ಡ್ರೈವ್ ಮಾಡಿಕೊಂಡು ಕೆಲಸಕ್ಕೆ ಹೋಗುವಾಗ, ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ, ನಿಮ್ಮ ಮಲಗುವ ಕೊಠಡಿಯಿಂದ ಅಡಿಗೆ ಮನೆಗೆ ನಡೆಯುವಾಗ ಹೀಗೆ ನೀವು ಈ ತಂತ್ರಗಳನ್ನು ಅಭ್ಯಾಸ ಮಾಡಬಹುದು.

ನಿಮಗೆ ಬೇಕೆನಿಸಿದರೆ, ಕೆಲವು ಕುಳಿತು ಮಾಡುವ ತಂತ್ರಗಳನ್ನು ಮತ್ತು ಒಂದು ಯಾವಾಗಲಾದರೂ - ಎಲ್ಲಿ ಬೇಕಾದರೂ ಮಾಡುವ ತಂತ್ರವನ್ನು ಪ್ರತಿ ಹತ್ತು ದಿವಸಗಳಿಗೆ ಆರಿಸಿಕೊಳ್ಳಬಹುದು. ಏಕ ಕಾಲದಲ್ಲಿ ಹೆಚ್ಚು ತಂತ್ರಗಳನ್ನು ಪ್ರಯತ್ನಿಸಬೇಡಿ, ಏಕೆಂದರೆ ಯಾವುದೂ ಪೂರ ಫಲಕಾರಿಯಾಗುವುದಿಲ್ಲ. Anytime-anywhere ತಂತ್ರಗಳು ನಮ್ಮ ಜೀವನವನ್ನೇ ಧ್ಯಾನವನ್ನಾಗಿ ಬದಲಾಯಿಸುವ ಮೊದಲನೇ ಹೆಜ್ಜೆಯಾಗಿವೆ.

ಒಂದು ಎಚ್ಚರಿಕೆಯ ಮಾತು:

ನೀವು ಮೊದಲು ಧ್ಯಾನವನ್ನು ಮಾಡಲು ಪ್ರಾರಂಭಿಸಿದಾಗ, ನಿಮ್ಮ ಶರೀರದಲ್ಲಿ ಮತ್ತು ಮಾನಸಿಕ ಸ್ಥಿತಿಯಲ್ಲಿ ಅಸಹಜವಾದ ಬದಲಾವಣೆಗಳನ್ನು ಕಾಣುವಿರಿ. ಅನಿರೀಕ್ಷಿತವಾದುದಕ್ಕೆ ಸಿದ್ದವಾಗಿರಿ. ಧ್ಯಾನವೆಂಬುದು ಶುದ್ದೀಕರಿಸುವ ಒಂದು ಪ್ರಕ್ರಿಯೆ. ಜೀವನ ಪರ್ಯಂತ ಶೇಖರಿಸಲ್ಪಟ್ಟ ಅಡೆತಡೆಗಳನ್ನು ಹೊರ ಹಾಕುವಿರಿ, ಆಗ ನಿಮಗೆ ಮೊದಲು ಗೊತ್ತಿಲ್ಲದ ಚೈತನ್ಯವನ್ನು ನಿಮ್ಮ ಶರೀರದಲ್ಲಿ ಪ್ರವಹಿಸುತ್ತೀರಿ. ನೀವು ಕುಣಿದಾಡುತೀರಿ, ಗರಗರನೆ ತಿರುಗುತ್ತೀರಿ, ಕಿರಿಚುತೀರಿ, ಬಹಳ ದಿವಸಗಳಿಂದ ನೀವು ಮಾಡದಿರುವ ಇಂಥವುಗಳನ್ನು ಮಾಡುತ್ತೀರಿ! ಇವನ್ನೆಲ್ಲಾ ಅರಗಿಸಿಕೊಳ್ಳಲು ಕಾಲಾವಕಾಶ ಬೇಕು.

ಪ್ರಾರಂಭದಲ್ಲಿ, ನಿಮ್ಮ ಶರೀರದಲ್ಲಿ ಶಾಖ ಉತ್ಪತ್ತಿಯಾಗುವುದನ್ನು, ತಲೆನೋವು ಬರುವುದನ್ನು, ಕೈ ಮತ್ತು ಕಾಲು ಬೆರಳುಗಳಲ್ಲಿ ಜೋಮು ಬಂದ ತರಹ ಆಗುವುದನ್ನು ಅನುಭವಿಸುತ್ತೀರಿ. ಇವೆಲ್ಲಾ ಆಗುವುದು ಇದ್ದಕ್ಕಿದ್ದಂತೆ ಚೈತನ್ಯವು ತುಂಬಿ ಹರಿಯುವುದರಿಂದ. ನಿಮ್ಮಲ್ಲಿ ಕೆಲವರು ಯಾತನೆಯನ್ನೂ, ನಿದ್ರಾರಹಿತ ಸ್ಥಿತಿಯನ್ನೂ, ಖಿನ್ನತೆಯನ್ನೂ ಸಹ ಅನುಭವಿಸುತ್ತೀರಿ. ಇವು ತಾತ್ಕಾಲಿಕ ಮಾತ್ರ. ಧ್ಯಾನವನ್ನು ಮುಂದುವರಿಸಿದರೆ ಅವುಗಳೆಲ್ಲಾ ಮಾಯವಾಗುತ್ತವೆ.

ನೀವು ತೀವ್ರವಾದ ಯಾವುದಾದರೂ ದೇಹದ ತೊಂದರೆಯನ್ನು ಅನುಭವಿಸುತ್ತಿದ್ದರೆ ಅಥವಾ ಯಾವುದಾದರೂ ತಂತ್ರವು ನಿಮಗೆ ಏನಾದರೂ ತೊಂದರೆಯನ್ನುಂಟು ಮಾಡಿದರೆ, ನಿಮ್ಮ ವೈದ್ಯರ ಸಲಹೆ ಪಡೆಯಿರಿ ಅಥವಾ ಆ ತಂತ್ರವನ್ನು ಬಿಟ್ಟುಬಿಡಿ.

ಇವುಗಳನ್ನೆಲ್ಲಾ ಕೇಳಿ ಆತಂಕಗೊಂಡು ತಂತ್ರಗಳನ್ನು ಅಭ್ಯಾಸ ಮಾಡದೇ ಇರಬೇಡಿ!

ಸುಮ್ಮನೆ ಮುಂದುವರಿಯಿರಿ ಮತ್ತು ನಿಮಗೆ ನೀವೇ ಧ್ಯಾನದಲ್ಲಿ ಮುಳುಗಿಬಿಡಿ. ನಿಮ್ಮ ಕಣ್ಣೆದುರಿಗೇ ನಿಮ್ಮ ಜೀವನದ ಪರಿವರ್ತನೆಯನ್ನು ಕಾಣುವಿರಿ.

ನೀವು ಪರಿವರ್ತನೆಯನ್ನು ಕಾಣುವಿರಿ

ಮತ್ತೇನನ್ನು ನೀವು ಧ್ಯಾನದಿಂದ ಅವಲೋಕಿಸುತ್ತೀರಿ?

ಶರೀರದ ಮೊದಲ ಕುರುಹುಗಳು ಶಾಂತವಾದ ಮೇಲೆ, ಆಳವಾದ ಮತ್ತು ಶಾಶ್ವತವಾದ ಪರಿವರ್ತನೆ ಆಗುತಿರುವುದನ್ನು ನೀವು ಕಾಣುತೀರಿ. ಇವುಗಳೆಲ್ಲಾ ರಾಸಾಯನಿಕ ಬದಲಾಯಿಸುವುದಿಲ್ಲ.

ಒಮ್ಮೆ ಧ್ಯಾನದ ತಿರುಳನ್ನು ನೀವು ತಿಳಿದಿರಾದರೆ, (ತಲುಪಿದಿರಾದರೆ) ನಿಮ್ಮ ಜೀವನ ಮೊದಲಿನಂತೆ ಇರಲು ಸಾಧ್ಯವೇ ಇಲ್ಲ.

ನೀವು ಧ್ಯಾನದ ನಿಜವಾದ ಸ್ಥಿತಿಯನ್ನು ತಲುಪಿದ್ದೀರಿ ಎಂಬುದನ್ನು ಹೇಗೆ ತಿಳಿಯ ಬಲ್ಲಿರಿ? ಇದನ್ನು ತಿಳಿಯಲು ನಿಮ್ಮ ಜೀವನದಲ್ಲಾಗುವ ಈ ಬದಲಾವಣೆಗಳನ್ನು ಅವಲೋಕಿಸಿರಿ!

ಕೇವಲ ಸ್ವಾತಂತ್ರ್ಯ :

ಒಂದು ಅರ್ಥವತ್ತಾದ ಬದಲಾವಣೆಯನ್ನು ನೀವು ಅನುಭವಿಸುವುದೇ ಒಂದು ತರಹ ಖಚಿತವಾದ ಸ್ವಾತಂತ್ರ್ಯವನ್ನು ಪಡೆದಂತೆ. ಸ್ವಾತಂತ್ರ್ಯ ಏತಕ್ಕೆ ? ಇದಕ್ಕೂ ಸ್ವಾತಂತ್ರ್ಯಕ್ಕೂ ಏನು ಸಂಬಂಧ?

ನಮ್ಮ ಜೀವನ ಪೂರ್ತಿ ನಾವು ಸ್ವಾತಂತ್ರ್ಯವನ್ನು ಹುಡುಕುತ್ತಿದ್ದೇವೆ. ನಾವು ಅದನ್ನು ತಿಳಿದಿರಲಿ ಅಥವಾ ತಿಳಿಯದಿರಲಿ. ಧ್ಯಾನವೂ ಸಹ, ನಿರಂತರವಾಗಿ ಸ್ವಾತಂತ್ರ್ಯವನ್ನು ಹುಡುಕುವಿಕೆಯೇ. ಧ್ಯಾನವು ಸ್ವಾತಂತ್ರ್ಯವನ್ನು ಕೊಡುತ್ತದೆ ಎಂಬುದನ್ನು ನಾವು ಕೇಳಿದ್ದೇವೆ, ಅದಕ್ಕಾಗಿಯೇ ನಾವು ಸ್ವತಂತ್ರರಾಗಲು ಧ್ಯಾನದ ಕಡೆ ತಿರುಗಿರುವುದು.

ಆದರೆ ನಾವು 'ಸ್ವಾತಂತ್ರ್ಯ' ಎನ್ನುವ ಶಬ್ದದ ಅರ್ಥವನ್ನು ತಪ್ಪಾಗಿ ತಿಳಿದಿದ್ದೇವೆ. ನಮ್ಮ ಸಾಮಾನ್ಯ ಜೀವನದಲ್ಲಿ ನಾವು ಹುಡುಕುತಿರುವುದು ಸ್ವಾತಂತ್ರ್ಯ,' ಅಥವಾ 'ಯಾವುದರಿಂದ ಸ್ವಾತಂತ್ರ್ಯ ': (ಎಂಬುದನ್ನು)

ಏತಕ್ಕಾಗಿ ಸ್ವಾತಂತ್ರ್ಯ: ನಮಗೆ ಸರಿ ಎನಿಸಿದ ರೀತಿ ಏನನ್ನಾದರೂ ಮಾಡುವುದಕ್ಕೆ ಹೊಂದುವುದಕ್ಕೆ ಮತ್ತು ನಮಗೆ ಬೇಕಾದ ಹಾಗೆ ಬದುಕುವುದಕ್ಕೆ ನಾವು ಸ್ವಾತಂತ್ರ್ಯವನ್ನು ಆಶಿಸುತ್ತೇವೆ.

ಯಾವುದರಿಂದ ಸ್ವಾತಂತ್ರ್ಯ: ನಾವು ಭಯಪಡುವಂತಹ ಮತ್ತು ದ್ವೇಷಿಸುವಂತಹ ಎಲ್ಲವುಗಳಿಂದಲೂ ಅಂದರೆ ಖಾಯಿಲೆ, ಚಿಂತೆ, ಕೋಪ, ಒತ್ತಡ, ಕೀಳರಿಮೆ, ಯಾತನೆ ಇವುಗಳಿಂದ ಸ್ವಾತಂತ್ರ್ಯವನ್ನು ಬಯಸುತ್ತೇವೆ.

ನಾವು ಮಾಡುವ ಪ್ರತಿಯೊಂದು ಕೆಲಸವೂ ಸಹ ಈ ಎರಡು ಉದ್ದೇಶಗಳನ್ನು ಹೊಂದಿಯೇ ನಡೆಯುತ್ತಿರುತ್ತವೆ ಅಂದರೆ, ''ಏತಕ್ಕಾಗಿ ಮತ್ತು ಯಾವುದರಿಂದ ಸ್ವಾತಂತ್ರ್ಯ.'' ಒಳ್ಳೆಯದು ಎಂದು ತಿಳಿಯಬೇಕು ಎನಿಸುವುದು. ಕೆಟ್ಟದ್ದು ಎಂಬ ಭಯದಿಂದ ಬೇಡವೆನಿಸುವುದು.

ನಮ್ಮ ಜೀವನವೆಲ್ಲಾ ಆಸೆ ಮತ್ತು ಭಯ ಎಂಬ ಈ ಎರಡು ಲಗಾಮುಗಳಿಂದ ನಿಯಂತ್ರಿಸಲ್ಪಟ್ಟಿದೆ. ನೀವು ಈ ಎರಡು ಹಗ್ಗಗಳಿಂದ ನಿಯಂತ್ರಿಸಲ್ಪಟ್ಟಾಗ ನೀವು ಉತ್ಕಟವಾಗಿ ಆಶಿಸುತ್ತಿರುವ ಸ್ವಾತಂತ್ರ್ಯ ಹೇಗೆ ಸಿಕ್ಕ ಹಾಗಾಯಿತು? ಕೆಲವು ದಿವಸಗಳ ಹಿಂದೆ ಭಕ್ತರಲ್ಲಿ ಯಾರೋ ಒಬ್ಬ ಕಲಾವಿದ ತಾನು ಧ್ಯಾನವನ್ನು

ಏಕೆ ದ್ವೇಷಿಸುತ್ತಿದ್ದೆ ಅನ್ನುವುದನ್ನು ಹೇಳಿದ.

ಸ್ವಾಮೀಜಿ ಈ ಶಿಸ್ತು, ನಿಯಮಗಳನ್ನು ನಾನು ದ್ವೇಷಿಸುತ್ತೇನೆ. ನಾನು ನನ್ನ ಜೀವನವನ್ನು ನನಗೆ ಹೇಗೆ ಬೇಕೋ ಹಾಗೆ ಸ್ವತಂತ್ರವಾಗಿ ನಡೆಸಬೇಕು. ನೋಡಿ, ನಾನು ಬೆಳಿಗ್ಗೆ 10 ಗಂಟೆಗೆ ಏಳೇನೆ, ಮೊದಲು ಕಾಫಿ ಕುಡಿಯುತ್ತೇನೆ, ಆನಂತರ ನನಗೆ ಬೇಕಾದಾಗ ನಾನು ಈಜಲು ಹೋಗುತ್ತೇನೆ ....

ತನ್ನ ದಿನಚರಿಯನ್ನು ಪೂರ್ತಿ ಹೇಳಿದ.

ಆಗ ನಾನು ಅವನನ್ನು ಕೇಳಿದೆ - ಯಾರಾದರೂ ನಿನ್ನನ್ನು ಬೆಳಿಗ್ಗೆ 6 ಗಂಟೆಗೇ ಎಬ್ಬಿಸಿದರೆ ಏನಾಗುತ್ತೆ? ಅಥವಾ ಬೆಳಿಗ್ಗೆ ಏಳುತ್ತಿದ್ದ ಹಾಗೆಯೇ ಕಾಫಿ ಹಾಸಿಗೆಗೇ ಬರದಿದ್ದರೆ ಏನು?

ಅದಕ್ಕೆ ಅವನು ನಗುತಾ ಹೇಳಿದ - ''ಓ, ಅದು ನನ್ನನ್ನು ನಿಜವಾಗಿಯೂ ಹುಚ್ಚನನ್ನಾಗಿ ಮಾಡಿಬಿಡುತ್ತೆ.''

ನಾನು ಕೇಳಿದೆ: ಜೋರಾಗಿ ಮಳೆ ಬಂದು ನೀನು ಈಜಲು ಹೋಗುವುದಕ್ಕೆ ಆಗದೇ ಇದೆ, ಏನು ಅನ್ನಿಸುತ್ತೆ?

ಛೇ! ಅದೊಂದು ಬಹಳ ಬೇಜಾರಾಗುವ ಸಂಗತಿ. ನಾನು ಈಜಲು ಹೋಗದೇ ಇದ್ದರೆ, ಆ ದಿನವೆಲ್ಲಾ ನನಗೆ ಏನೋ ಮುಜುಗರವಾದಂತೆ ಅಂದ.

ಅವನನ್ನು ನಾನು ಮತ್ತೆ ಕೇಳಿದೆ.

ನಿನ್ನ ಸ್ವಾತಂತ್ರ್ಯ ಎಂಬುವುದು ಇಷ್ಟೆಲ್ಲಾ ನಿಬಂಧನೆಗಳಿಗೆ ಒಳಗಾಗಿದೆ, ನೀನು ನಿಜವಾಗಿಯೂ ಸ್ವತಂತ್ರನೇ?

ನಿಜವಾಗಿಯೂ ಸ್ವತಂತ್ರವಾಗಿ ಇರುವುದು ಎಂದರೆ, ಏನು ಬೇಕಾದರೂ ಆಗಲಿ ಅಥವಾ ಬಿಡಲಿ ಸ್ವತಂತ್ರವಾಗಿ ಇರಬೇಕು.

ಅದನ್ನೇ ನಾನು ಸ್ವಾತಂತ್ರ್ಯ ಎನ್ನುವುದು. ಯಾವುದಕ್ಕಾಗಿ ಅಥವಾ ಯಾವುದರಿಂದ ಎಂಬ ಪ್ರಶ್ನೆಯೇ ಇಲ್ಲ. ಕೇವಲ ಸ್ವಾತಂತ್ರ್ಯ. ಅದು ಸಂಪೂರ್ಣವಾಗಿ ವರ್ತಮಾನದಲ್ಲಿ ಜೀವಿಸುವುದರಿಂದ ಬರುವುದು. ನೀವು ಆಸೆ ಅಥವಾ ಭಯ ಇವುಗಳಿಂದ ವಿಮುಕ್ತರಾದಾಗ, ಭವಿಷ್ಯದ ನಿರೀಕ್ಷೆ ಅಥವಾ ಭೂತಕಾಲದ ದುಃಖ ಇವುಗಳನ್ನು ಹೊಂದದೇ ಇದ್ದಾಗ, ಸ್ವಾತಂತ್ರ್ಯವನ್ನು ಅನುಭವಿಸುತ್ತೀರಿ. ಇರುವುದೇ ಅದೇ ನಿಜವಾದ ಸ್ವಾತಂತ್ರ್ಯ. ಇದೇ ಸ್ವಾತಂತ್ರ್ಯವನ್ನು ನೀವು ಧ್ಯಾನ ಮಾಡುವುದರ ಮೂಲಕ ಅನುಭವಿಸುತ್ತೀರಿ.

ಕಾರಣವಿಲ್ಲದ ಪ್ರೀತಿ:

ಧ್ಯಾನದಿಂದ, ನೀವು ಪ್ರಾರಂಭಿಸುತ್ತೀರಿ, ಅದೇ ಪ್ರೀತಿ!

ಧ್ಯಾನಮಯ ಜೀವನದ ಕಡೆಗೆ

ಜನರು ಎಲ್ಲಾ ತರಹದ ಚಮತ್ಕಾರ ಅಥವಾ ಪವಾಡಗಳಿಗೆ ಸಿದ್ಧರಾಗಿದ್ದಾರೆ, ಅಂದರೆ ತಮ್ಮ ಪ್ರೀತಿ ಪಾತ್ರರಾದ ದೇವತೆಗಳ ದರ್ಶನ ಹೊಂದಲು, ಮತ್ತು ಇನ್ನೂ ಯಾವ ಯಾವುದೋ ತರಹದಕ್ಕೆ. ಆದರೆ ಅವರು ಈ ಪ್ರೀತಿಯಿಂದ ಆಗುವ ಪವಾಡವನ್ನು ತಿಳಿಯಲು ತಯಾರಿಲ್ಲ.

ಧ್ಯಾನದಲ್ಲಿ ಮುಳುಗಿದಾಗ ನಿಮ್ಮಲ್ಲಿ ಆ ಪ್ರೀತಿ ಎಂಬುವುದು ಎಷ್ಟು ಉತ್ಪತ್ತಿಯಾಗಿ, ಹೇಗೆ ತುಂಬಿ, ತುಳುಕುತ್ತದೆ ಎಂಬುದನ್ನು ತಿಳಿದು ಆಶ್ಚರ್ಯಚಕಿತರಾಗುತ್ತೀರಿ. ಧ್ಯಾನದ ಮೂಲಕ ನೀವು ಒಂದು ತರಹ ಜಾಗೃತಾವಸ್ಥೆಯನ್ನು ಅನುಭವಿಸುತ್ತೀರಿ ಮತ್ತು ಹಿಂದೆಂದೂ ಅನುಭವಿಸದೇ ಇರುವಂತಹುದನ್ನು ನಿಮ್ಮ ಅಸ್ತಿತ್ವದ ಯಾವುದೋ ಒಂದು ಮಟ್ಟದಲ್ಲಿ ಅನುಭವಿಸಲು ತೊಡಗುತ್ತೀರಿ. ನೀವು ಆ ಆನಂದದ ಅನುಭವವನ್ನು ಸಂಧಿಸಿದ ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳಲು ಇಚ್ಛೆಪಡುತ್ತೀರಿ! ಇದೇ ಸಂತೋಷವು ನಿಮ್ಮಿಂದ ಪ್ರೀತಿಯಾಗಿ ತುಂಬಿ ಹರಿಯತೊಡಗುತ್ತದೆ.

ಸ್ವಾತಂತ್ರ್ಯದಂತೆಯೇ, ಈ ಪ್ರೀತಿಯೂ ಸಹ, ನೀವು ಅನುಭವಿಸಿರುವ ಬೇರೆ ಪ್ರೀತಿಗಳಿಗಿಂತ ಭಿನ್ನವಾದುದು.

ನಮ್ಮ ಜೀವನದಲ್ಲಿ ತುಂಬಿರುವುದು ಸ್ವಾರ್ಥದಿಂದ ಕೂಡಿದ, ಕೊಟ್ಟು ತೆಗೆದುಕೊಳ್ಳುವಂತಹ ಸಣ್ಣತನದ ಪ್ರೀತಿಗಳೇ ಆಗಿವೆ. ಹಾಗೂ ನಮ್ಮ ಜೀವನದಲ್ಲಿ ಯಾವುದೋ ಕಾರಣಕ್ಕಾಗಿ ಮಾತ್ರ ಪ್ರೀತಿಸಿ ಮತ್ತು ಪ್ರೀತಿಸಲ್ಪಡುತ್ತಿದ್ದೇವೆ. ನಿಮಗೆ ತಿಳಿದೋ ಅಥವಾ ತಿಳಿಯದೆಯೋ, ನೀವು ಪ್ರೀತಿಸುವುದು ಯಾವುದೋ ಕಾರಣಕ್ಕಾಗಿ. ನಿಮಗೆ ಬಹಳ ಆಪ್ತರಾದ ಸಂಬಂಧಿಗಳೊಡನೆಯೂ ಸಹ, ಗಂಡ, ಹೆಂಡಿರ ಸಂಬಂಧದಲ್ಲಿಯೂ ಸಹ, ತಂದೆ ತಾಯಿಗಳು, ಮಕ್ಕಳು ಇವರೊಂದಿಗೂ ಸಹ ಗುಪ್ತವಾದ ಯಾವುದೋ ಕಾರಣಗಳಿಂದಲೇ ಪ್ರೀತಿಸುತ್ತೀರಿ. ನಮ್ಮ ಪ್ರೀತಿ ಎಲ್ಲವೂ ಅಸೂಯೆ ಮತ್ತು ವಶಪಡಿಸಿಕೊಳ್ಳಲು ಅಥವಾ ಸೌಮ್ಯತ್ವವನ್ನು ಹೊಂದುವ ಕಾರಣದಿಂದಾಗಿ, ಕಳಂಕಪೂರಿತವಾಗಿ ಹಾಳಾಗಿ ಹೋಗಿದೆ.

ಧ್ಯಾನದಿಂದ ಪ್ರೀತಿ ಎಂಬುದು ಕಾರಣ ರಹಿತವಾದದ್ದೆಂದು ಮೊದಲನೇಸಾರಿ ಅರ್ಥ ಮಾಡಿಕೊಳ್ಳುವಿರಿ. ಕೊಡುವುದು ಪಡೆಯುವುದಕ್ಕಾಗಿ ಅಲ್ಲ ಎಂಬುದನ್ನೂ ಮೊದಲನೇ ಸಾರಿ ತಿಳಿದುಕೊಳ್ಳುವಿರಿ. ನೀವು ಕಾರಣವಿಲ್ಲದೇ ಪ್ರೀತಿಸುತ್ತೀರಿ ಏಕೆಂದರೆ ಕೊಡಬೇಕಾದದ್ದು ಬಹಳವಾಗಿ ನಿಮ್ಮಲ್ಲಿದೆ ಎಂದು! ನೀವು ಈ ಪ್ರಪಂಚದ ವಿಷಯವಾಗಿಯೂ ಸಹ ಮೋಡವು ಮಳೆ ಸುರಿಸುವಂತೆ ಅಥವಾ ಹೂಗಳು ತನ್ನ ಸುವಾಸನೆಯನ್ನು ಸುತ್ತಲೂ ಬೀರುವಂತೆ, ನೀವು ಪ್ರೀತಿಯ ಮಳೆಗರೆಯುತ್ತೀರಿ.

ನೀವು ಪ್ರೀತಿಸದೆ ಸುಮ್ಮನಿರಲು ಆಗುವುದೇ ಇಲ್ಲ ಅದಕ್ಕೆ ಪ್ರೀತಿಸುತ್ತೀರಿ! ಎಲ್ಲೆ ಮೀರಿದ ಸಂತೋಷ:

ಧ್ಯಾನದಿಂದ ಕಾರಣವೇ ಇಲ್ಲದೆ ಜೀವನವು ಸಂತೋಷಮಯವಾಗುತ್ತದೆ. ಯಾವುದಾದರೂ ಕಾರಣಕ್ಕೆ ಸಂತೋಷ ಉಂಟಾದರೆ, ಅದು ಬೇಗಲೋ ಅಥವಾ ನಿಧಾನವಾಗಿಯೋ ಅಂತೂ ದುಃಖವನ್ನೇ ತರುತ್ತದೆ.

ನೀವು ಈಗತಾನೇ ಊಟ ಮಾಡಿದ್ದರಿಂದ ಸಂತೋಷವಾಗಿದ್ದೀರೆಂದರೆ, ನಿಮಗೆ ಹಸಿವಾದಾಗ ಪುನಃ ಆ ಬಾಧೆಯಿಂದ ಒದ್ದಾಡುತ್ತೀರಿ ಅಷ್ಟೇ! ನೀವು ಯಾರನ್ನೋ ಪ್ರೀತಿಸುವುದರಿಂದ ನೀವು ಸಂತೋಷವಾಗಿದ್ದೀರೆಂದರೆ, ನಿಮ್ಮೀರ್ವರಲ್ಲಿ ಮೊದಲನೇ ಜಗಳ ಪ್ರಾರಂಭವಾದ ಒಡನೆಯೇ ನೀವು ದುಃಖತರಾಗುತ್ತೀರಿ. ಈ ತರಹ ನಿಮಗೆ ಆಗುವುದಿಲ್ಲ ಎಂದುಕೊಳ್ಳಬೇಡಿ! ಇದು ಎಲ್ಲರಿಗೂ ಆಗುತ್ತದೆ. ಇದೇ ಜೀವನದ ನಿಯಮ.

ಎಲ್ಲಾ ಆದ್ದರಿಂದಲೇ ಪುರಾತನ ಕಾಲದಲ್ಲಿ ಸಂತೋಷ ಮತ್ತು ದುಃಖವನ್ನು ಸೂಚಿಸುವ ಒಂದೇ ಪದವನ್ನು ''ದುಃಖ''ವೆಂದೇ ಕರೆಯುತ್ತಿದ್ದರು!

ಆದರೆ ನಿಮಗೆ ಧ್ಯಾನದಿಂದ ಉಂಟಾಗುವ ಸುಖವು ಅಬಾಧಿತವಾದದ್ದು, ಬಾಧೆಗೆ ಒಳಗಾಗದಿರುವಂತಹುದು. ನೀವು ಆರೋಗ್ಯವಾಗಿರಬಹುದು, ನೀವು

ಖಾಯಿಲೆಯಿಂದಿರಬಹುದು. ಆದರೆ ಸುಖವು ಒಂದೇ ತರಹ ಇರುವುದು. ಚಳಿ, ಸೆಕೆ, ಮಳೆ ಬೀಳುವಿಕೆ, ಮಂಜು ಬೀಳುವಿಕೆ ಏನಿದ್ದರೂ ಸಂತೋಷವು ಒಂದೇ ತರಹ ಇರುತ್ತದೆ. ನಿಮ್ಮದೇ ಆಗಿರಲಿ ಅಥವಾ ಹೊರಗಿನ ಪರಿಸ್ಥಿತಿಗಳೇ ಆಗಿರಲಿ, ಸಂತೋಷದಲ್ಲಿ ವ್ಯತ್ಯಾಸವಿರುವುದಿಲ್ಲ. ಯಾವಾಗ ನೀವು ನಿರಂತರ (ಎಂದೂ ಮುಗಿಯದ) ಸಂತೋಷವನ್ನು ಅನುಭವಿಸುತ್ತಿದ್ದಾಗ ಹೊರಗಿನ ಪರಿಸ್ಥಿತಿಗಳು ನಿಮ್ಮ ಸಂತೋಷವನ್ನು ಬದಲಿಸಲು ಆಗದೇ ಇದ್ದಾಗ, ಅದರ ಅರ್ಥ ನೀವು ಆಳವಾಗಿ ನಿಮ್ಮೊಳಗೇ ಹೋಗುತ್ತಿದ್ದೀರಿ ಎಂದು.

ಪ್ರಜ್ಞೆಯು ಜಾಗೃತಗೊಳ್ಳುವಿಕೆ

ಜೀವನವು ಸತತವಾಗಿ ಬದಲಾಯಿಸುತ್ತಲೇ ಇದೆ. ಪ್ರತಿ ಕ್ಷಣದಲ್ಲೂ ಪ್ರತಿಸ್ಪಂದಿಸುವ ಸಾಮರ್ಥ್ಯ ಉಳ್ಳದ್ದಾಗಿಯೂ ಮತ್ತು ಜೀವನದಲ್ಲಿನ ಪ್ರತಿಭಟನೆಗಳಿಗೆ ಎಚ್ಚೆತ್ತುಕೊಳ್ಳುವುದಾಗಿಯೂ ಯಾವುದಿದೆಯೋ ಅದೇ ಪ್ರಜ್ಞೆ. ಪ್ರಜ್ಞೆ ಎಂದರೆ, ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದಿರಬೇಕು. ನಿಮ್ಮ ಉತ್ತರಗಳು ಸಮಯಕ್ಕೆ ತಕ್ಕಂತೆ ಬದಲಾಯಿಸಿ ನಿರೂಪಿಸುವಂತಿರಬೇಕು, ನಿಮ್ಮಲ್ಲಿ ನಿಮಗೆ ವಿಶ್ವಾಸ ಇಲ್ಲದಿದ್ದರೆ, ಸಮಾಜದ ಕಾನೂನಿನ, ಧರ್ಮಗಳ ನೀತಿ ನಿಯಮಗಳ ಆಧಾರದ ಮೇಲೆ ಇರಬೇಕು. ಪ್ರಜ್ಞಾವಂತನಾದವನು ಯಾವುದೇ ಗ್ರಂಥಗಳ ಆಧಾರದಲ್ಲಿ ಜೀವಿಸುವುದಿಲ್ಲ. ಅವನಿಗೆ ಅಂತಹುದು ಯಾವುದೂ ಬೇಕಿಲ್ಲ. ಅವನು ತನ್ನನ್ನೇ ತಾನು ಅವಲಂಬಿಸುವವನು, ತನ್ನ ಅಂತರ್ವಾಣಿಯೇ ಅವನಿಗೆ ಮಾರ್ಗದರ್ಶಿ. ನಿನ್ನ ಜವಾಬ್ದಾರಿಯನ್ನು ನೀನೇ ತೆಗೆದುಕೊಳ್ಳುವುದೇ ಪ್ರಜ್ಞೆ.

ನಾವೆಲ್ಲರೂ ಪ್ರಜ್ಞಾವಂತರಾಗಿಯೇ ಜನಿಸಿದ್ದೇವೆ - ಆದರೆ ಸಮಾಜವು ನಮಗಿಂತ ಜಾಣತನ ಉಳ್ಳದ್ದು! ನಾವು ಚಿಕ್ಕವರಾಗಿದ್ದಂದಿನಿಂದಲೂ, ತಯಾರಾಗಿಲ್ಲದಿರುವಾಗಲೇ, ಸಿದ್ದಪಡಿಸಿಬಿಡುತ್ತೆ. ನಮ್ಮ ಪ್ರಜ್ಞೆಯ ಸುತ್ತಲೂ ಗೋಡೆಗಳನ್ನು ಕಟ್ಟಲು ಯತ್ನಿಸುತ್ತದೆ. ಅದು ನಾವು ಸಹಜವಾಗಿ ನಡೆದುಕೊಳ್ಳದಂತೆ ತಡೆದುಬಿಡುತ್ತದೆ.

ಆದ್ದರಿಂದ ಅಂತಿಮವಾಗಿ ಪ್ರಜ್ಞೆ ಎಂದರೆ ಈ ಎಲ್ಲಾ ಬಂಧನಗಳನ್ನೂ ಕಡಿದು ಸ್ವಾತಂತ್ರ್ಯ ಪಡೆಯುವ ಸಾಮರ್ಥ್ಯ.

ಧ್ಯಾನವು ಪ್ರಜ್ಞೆಯನ್ನು ಎಚ್ಚರಿಸಲು ಪ್ರಜ್ಞೆಯನ್ನು ಬಂಧಿಸಿರುವ ಸರಪಣೆಗಳು ನಮ್ಮ ಮನಸ್ಸಿನಲ್ಲಿಯೇ ಇವೆ. ಧ್ಯಾನದಿಂದ ನೀವು ಮನಸ್ಸನ್ನು ದಾಟಿಹೋಗಿ ನಿಮ್ಮ ಇರುವಿಕೆಯಲ್ಲಿಗೇ ಸೇರುತ್ತೀರಿ. ನಿಮ್ಮ ಇರುವಿಕೆಯಲ್ಲಿ ಯಾವ ನಿಯಮ ಅಥವಾ ನಿಬಂಧನೆಗಳಿಲ್ಲ. ನೀವು ನಿಮ್ಮ ಸಾಧ್ಯತೆ ಸ್ವತಂತ್ರರಾಗುತ್ತೀರಿ. ಅದಕ್ಕಾಗಿಯೇ, ನೀವು ಧ್ಯಾನದಿಂದ ತತ್ ಕ್ಷಣವೇ ಸುತ್ತಲಿನ ವಾತಾವರಣದಿಂದ ನೆಮ್ಮದಿಯನ್ನು ಪಡೆದವರಂತೆ ಆಗುತ್ತೀರಿ. ನೀವು ಹೊಸ ಸನ್ನಿವೇಶಗಳಲ್ಲಿ ಸಮರ್ಥವಾಗಿ, ಸುಲಭವಾಗಿ, ನೀವಾಗಿಯೇ ಎಲ್ಲವನ್ನೂ ನಿಭಾಯಿಸುತ್ತೀರಿ. ನೀವು ಸ್ಪೂರ್ತಿಯನ್ನು ಮರು ಅನ್ವೇಷಿಸುತ್ತೀರಿ.

ಅಂತರ್ಜ್ಲಾನದ ವಿಕಾಸ: ಅಂತರ್ಜ್ಜಾನ ಎಂದರೆ ನಾವು ಸಾಮಾನ್ಯವಾಗಿ ಬಳಸುವ (ಅರಿವು, ತಿಳುವಳಿಕೆ ಎಂಬ) ಅರ್ಥದಲ್ಲಲ್ಲ. ದೈಹಿಕವಾಗಿ ನೀವು ಶೀಘ್ರಗ್ರಾಹಿಗಳಾಗಿರಬಹುದು. ದರ್ಶನ ಮುಂತಾದುವನ್ನು ಕಾಣಬಹುದು, ಇವು ಮುಖ್ಯವಲ್ಲ. ಇವು ಬೆಳವಣಿಗೆಯ ಕಾರಣ ಉಂಟಾಗುವ ಕೆಲವು ಲಕ್ಷಣಗಳು ಮಾತ್ರ. ನಿಜವಾದ ಅಂತರ್ಜ್ಞಾನವೆಂದರೆ ಸ್ಪಷ್ಟವಾಗಿ ನಿಮ್ಮನ್ನು ನೀವು ಅರ್ಥ ಮಾಡಿಕೊಂಡು ಪೂರ್ಣರಾಗಿ ಬಿಡುವುದು.

ನಾವೆಲ್ಲಾ ಜೀವನದಲ್ಲಿ ನಾನಾ ತರಹದ ಮುಖವಾಡಗಳನ್ನು ಧರಿಸಿ ವ್ಯವಹರಿಸುತ್ತೇವೆ. ಪ್ರತಿ ಪಾತ್ರಕ್ಕೂ, ಪ್ರತಿ ಸನ್ನಿವೇಶಕ್ಕೂ ನಾವು ಒಂದು ಮುಖವಾಡವನ್ನು ಹೊಂದಿರುತ್ತೇವೆ. ತಾಯಿ, ತಂದೆ, ಪತಿ, ಪತ್ನಿ, ವೈದ್ಯ, ಗೃಹಿಣಿ, ಬಾಸ್ (ಯಜಮಾನ), ಸಮಾಜದ ಗಣ್ಯವ್ಯಕ್ತಿ ಇತ್ಯಾದಿ. ಹೀಗೇ ಪಟ್ಟಿ ಮಾಡಿದರೆ ಮುಗಿಯದಂಥದ್ದು! ನಾವು ಬದುಕುವುದು, ಆಲೋಚಿಸುವುದು ಇವೆಲ್ಲಾ ಸಮಾಜವು ನಮ್ಮ ಮೇಲೆ ಹೊರಿಸಿರುವ ಪಾತ್ರದು. ಈ ಪಾತ್ರಗಳೇ ಅಂತಿಮವಾಗಿ ನಮ್ಮ ವ್ಯಕಿತ್ವವಾಗಿಬಿಡುತ್ತವೆ.

ಧ್ಯಾನದಿಂದ, ನಾವು ಒಳಹೋಗುತ್ತೇವೆ. ನಾವು ನಮ್ಮ ಅಸ್ತಿತ್ವದಂತೆ ಜೀವಿಸಲು ಪ್ರಾರಂಭಿಸುತ್ತೇವೆ. ಸಮಗ್ರತೆಯನ್ನು ಅನುಭವಿಸುವವರಾಗುತ್ತೇವೆ. ನಾವು ವ್ಯಕ್ತಿ ವೈಶಿಷ್ಟ್ಯದತ್ತ ಸಾಗುತ್ತೇವೆ.

ನಿಮ್ಮ ವ್ಯಕ್ತಿತ್ವವು ಬದಲಾಯಿಸಬಹುದು, ಆದರೆ ವ್ಯಕ್ತಿ ವೈಶಿಷ್ಟ್ಯತೆಯು ಬದಲಾಗುವುದಿಲ್ಲ. ಪ್ರತಿ ವ್ಯಕ್ತಿಯೂ ಸರಿಸಾಟಿ ಇಲ್ಲದವನು (ಅನುಪಮನು). ಧ್ಯಾನದಿಂದ ನಿಮ್ಮ ವೈಶಿಷ್ಟ್ಯತೆಯನ್ನು ತಲುಪುವಿರಿ. ನೀವು ನಿಮ್ಮ ಅಂತರ್ವಾಣಿಯ ಸ್ಪಷ್ಟೋಕ್ತಿಯಂತೆ ಸಹಜವಾಗಿ ಆ ದಿಶೆಯಲ್ಲೇ ನಡೆಯುವಿರಿ, ಅದು ಅಂತಿಮವಾಗಿ ಪೂರ್ಣತೆಯನ್ನುಂಟುಮಾಡುತ್ತದೆ. ಇದೇ ಅಂತರ್ಜ್ಞಾನವು ಕೆಲಸ ಮಾಡುವಿಕೆ.

ನಿಮ್ಮ ದಾರಿಯಲ್ಲಿನ ಮುಳ್ಳುಗಳು

ಧ್ಯಾನದ ದಾರಿಯಲ್ಲಿ ಇರುವುದು ಒಂದೇ ಒಂದು ಪ್ರತಿಬಂಧಕ (ಅಡಚಣೆ) ಅದೇ ಅಹಂಕಾರ. ಬೇರೆ ಯಾವ ತೊಡಕಿನ ವಿಚಾರಗಳು ಬಂದರೂ, ಯಾವ ಸಮಸ್ಯೆಗಳು ನಿಮಗೆ ಎದುರಾದರೂ, ಅವುಗಳೆಲ್ಲಾ ಅಹಂಕಾರದ ಬೇರೆಯ ರೂಪಗಳೇ.

ಅಹಂಕಾರವೆಂದರೇನು?

ಅಹಂಕಾರವೆಂದರೆ ನಿಮ್ಮ ಬಗ್ಗೆ ನೀವು ಹೊಂದಿರುವ ಭಾವನೆ, ನಿಮ್ಮ ಕಲ್ಪನೆಗಳ ಮತ್ತು ಅಭಿಪ್ರಾಯಗಳ ಮೊತ್ತ. ನಿಮ್ಮ ಕುರಿತು ನೀವು ಸಂಗ್ರಹಿಸಿರುವ ಅನಿಸಿಕೆಗಳು! ಇದು ಕಾಲ್ಪನಿಕವಾದದ್ದು. ಅಹಂಕಾರವು ನಿಜವಾಗಿಯೂ ಯಾವ ಅಸ್ತಿತ್ವವನ್ನೂ ಹೊಂದಿರುವುದಿಲ್ಲ. ಆದರೂ, ಇದೇ ನಿಮ್ಮ ಜೀವನವನ್ನೆಲ್ಲಾ ನಿಯಂತ್ರಿಸುತ್ತಿರುವುದು! ನಿಮ್ಮಲ್ಲಿ ಪ್ರತ್ಯೇಕತೆಯ ಭಾವವನ್ನು ಸೃಷ್ಟಿಸಿರುವುದು ಇದೇ ಅಹಂಕಾರ. ನೀವು ಹುಟ್ಟುವಾಗಲೇ ಇದು ನಿಮ್ಮನ್ನು ನಿಮ್ಮ ತಾಯಿಯಿಂದ ಬೇರ್ಪಡಿಸಿಬಿಡುತ್ತದೆ. ನೀವು ಹುಟ್ಟುವವರೆಗೂ, ಅಹಂಕಾರವಿರುವುದಿಲ್ಲ,

ಎಲ್ಲೆಯೂ ಸಹ ಇಲ್ಲ. ಮಗುವು ತಾಯಿಯ ಒಂದು ಭಾಗ ಮಾತ್ರ. ಹುಟ್ಟಿದ ಘಳಿಗೆಯಲ್ಲಿಯೇ, ಹೊಕ್ಕಳ ಬಳ್ಳಿಯನ್ನು ಬೇರ್ಪಡಿಸಿದ ತತ್ಕಕ್ಷಣವೇ ಮಗುವು ತನ್ನ ಎಲ್ಲೆಯನ್ನು ಮೊದಲನೇ ಸಾರಿಗೆ ಗುರುತಿಸಿಕೊಂಡುಬಿಡುತ್ತದೆ.

ಹುಟ್ಟಿದ ಒಂದು ವರ್ಷದೊಳಗೇ, ಅಹಂಕಾರವು ನಿಮ್ಮದೇ ಆದ ಚಿತ್ರವನ್ನೂ, ಪ್ರಪಂಚದ ಚಿತ್ರವನ್ನೂ ರೂಪಿಸಿಕೊಂಡು ಬಿಡುತ್ತದೆ.

ಅಹಂಕಾರವೇ ನಾನು, ನನ್ನದು ಎಂಬ ಭಾವನೆಗೆ ಕಾರಣ, (ಹೊಣೆ). ನಿಮ್ಮ ಜೀವನ ಪರ್ಯಂತ ಅಹಂಕಾರವು 'ನಾನು ಬೇರೆ ಅವರು ಬೇರೆ' ಎನ್ನುವ ಸ್ಥಾನದಲ್ಲಿ ನಿಮ್ಮನ್ನು ಇರಿಸುತ್ತದೆ. ಇದು ನಿಮ್ಮ ತಂದೆ ತಾಯಿಯವರಿಂದ ಸ್ನೇಹಿತರಿಂದ, ಹೊರಗಿನವರಿಂದ, ಪ್ರಕೃತಿಯಿಂದ, ಅಸ್ತಿತ್ವದ ಮಿಕ್ಕೆಲ್ಲವು ಗಳಿಂದಲೂ ಬೇರ್ಪಡಿಸುತ್ತದೆ.

ಯಾವಾಗ ನೀವು 'ನಾನು' ಎಂಬ ಪದವನ್ನು ಉಚ್ಚರಿಸುತ್ತೀರೋ ಆಗಲೇ ನೀವು ಅಸ್ತಿತ್ವದಿಂದ ಒಡೆದುಕೊಂಡು ಬೇರ್ಪಡುತ್ತೀರಿ. ನೀವು ನಿಜವಾಗಲೂ ಒಡೆದುಕೊಳ್ಳಲು ಆಗುವುದಿಲ್ಲ ಏಕೆಂದರೆ ನೀವು ಅಸ್ತಿತ್ವದ ಅಂತರಂಗದ ಭಾಗವೇ ಆಗಿದ್ದೀರ - ಆದರೆ, ನಿಮ್ಮ ಮನಸ್ಸಿನಲ್ಲಿ, (ನಿಮ್ಮ ಭಾವನೆಯಲ್ಲಿ) ಒಡೆದುಕೊಳ್ಳುತ್ತೀರಿ. ನೀವು ನಿಮಗೆ ನೀವೇ ಎಲ್ಲರಿಗಿಂತ ಬೇರೆ ಎಂಬ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತೀರಿ. ಈ ಪ್ರಪಂಚವು ನಿಮ್ಮ ಮನಸ್ಸಿನಲ್ಲಿಯೇ ಇದೆ - ಇದು ಕೇವಲ ನಿಮ್ಮ ಮನಸ್ಸಿನ ಕಲ್ಪನೆ - (ಕಲ್ಪನಾಲೋಕ) ಆದರೆ ನಾವು ಈ ಕಲ್ಪನೆಯನ್ನೇ ನಮ್ಮನ್ನು ಆಳುವಂತೆ ಬಿಟ್ಟಿದ್ದೇವೆ.

ನೀವು ಜನರು ಯಾವಾಗಲೂ ''ಅಹಂಕಾರವೇ ನಮ್ಮ ತೊಂದರೆಗಳಿಗೆ ಮೂಲ ಕಾರಣ''' -

ಏಕೆ?

ಏಕೆಂದರೆ ಅಹಂಕಾರವು ಹಗೆತನ, ಘರ್ಷಣೆ ಇವುಗಳಿಂದ ವ್ಯದಿಸುತ್ತದೆ. ಯಾವುದಾದರೂ ವಾತಾವರಣದಲ್ಲಿ ನೀವು ಪ್ರತ್ಯೇಕತೆಯನ್ನು ಸೃಷ್ಟಿಸುವುದೇ ಅಹಂಕಾರವನ್ನು ಜೀವಂತವಾಗಿ ಇಡುವ ನೆಲೆಯಾಗುವುದು.

ಅಹಂಕಾರವು ನಿಮ್ಮ ಕಲ್ಪನೆಯ ಒಂದು ವಸ್ತು, ಆದರೆ ಅದು ಒಂದು ಕಪಟ ಪ್ರಾಣಿ!

ತಾನು ಅಭಿಪ್ರಾಯವನ್ನು ಸೃಷ್ಟಿಸುತ್ತದೆ. ಅದರಲ್ಲಿ ಇರುವುದೆಲ್ಲವೂ ಸಾಮರಸ್ಯವಿಲ್ಲದವುಗಳೇ ಆಗಿರುತ್ತವೆ.

ನಿಮ್ಮ ಸ್ವಂತ ಜೀವನವನ್ನೇ ನೋಡಿಕೊಳ್ಳಿರಿ.

ಯಾವಾಗ ನೀವು ನೋವು, ಕೋಪ, ಅಸೂಯೆ ಇವನ್ನು ಅನುಭವಿಸುತ್ತೀರೋ, ಅದಕ್ಕೆ ಪ್ರತ್ಯೇಕತೆಯ ಭಾವನೆ, ಒಂಟಿತನದ ಭಾವನೆ, ನಿಮ್ಮನ್ನು ಮೋಸಗೊಳಿಸಿದ್ದಾರೆಂಬ ಭಾವನೆ ಇವುಗಳೇ ಕಾರಣ. ಕಷ್ಟದ ಸಮಯದಲ್ಲಿ ನೀವೊಬ್ಬರೇ ಯಾವಾಗಲೂ ಇದ್ದೀರೆಂಬ ಅನುಭವವಾಗುತ್ತೆ. ಸಂತೋಷ ವಾಗಿರುವ ಸಮಯದಲ್ಲಿ ಸಹಜವಾಗಿ ನೀವು ಎಲ್ಲರೊಡನೆಯೂ ಸಿತುಮುತಲಿನ ಆಗುತ್ತದೆ. ಯಾವಾಗ ನೀವು ಸಂತೋಷದಿಂದ, ಹರ್ಷದಿಂದ, ನಗು ನಗುತ್ತಿರುತ್ತೀರೋ ದುರ್ಬಲವಾಗಿರುತ್ತೆ.

ನಿಮ್ಮ ಈಗಿನ ಜೀವನದಲ್ಲಿ ಇಂತಹ ಸಂದರ್ಭಗಳನ್ನು ತಾತ್ಕಾಲಿಕವಾಗಿ ಅನುಭವಿಸಬಹುದು. ಆದರೆ ಧ್ಯಾನವು ನಿಮ್ಮನ್ನು ಶಾಶ್ವತವಾದ ಆನಂದದ ಸ್ಥಿತಿಗೇ ಕೊಂಡೊಯ್ಯುತ್ತದೆ. ಧ್ಯಾನವು ಪೂರ್ಣ ಪೂರ್ಣ ಅಸ್ತಿತ್ವದೊಡನೆ ಶೃತಿಗೂಡಿದಂತೆ ಏಕೀಭವಿಸಲು (ತಾದಾತ್ಮ್ಯತೆಯನ್ನು ಹೊಂದಲು) ಮಾಡುವ ಒಂದು ಪ್ರಕ್ರಿಯೆ (ವಿಧಾನ). ಧ್ಯಾನದಲ್ಲಿ, ಪ್ರತ್ಯೇಕತೆಗಾಗಲಿ, ಅಹಂಕಾರ-ಕ್ಕಾಗಲೀ ಸ್ಥಳವೇ ಇಲ್ಲ.

ಒಮ್ಮೆ ಅನುಭವಿಸುತ್ತೀರೋ, ಅಸ್ತಿತ್ವದೊಡನೆ

ಇರುವುದನ್ನು ಅನುಭವಿಸುತ್ತೀರೋ ಆಗ, ಅಹಂಕಾರವನ್ನು ಕಾಪಾಡುವ ಅಗತ್ಯವಾದರೂ ಏಕೆ ಬೇಕಾಗುತ್ತದೆ? ಅಹಂಕಾರವು ಪ್ರಪಂಚದ ವಿರುದ್ಧ ನಿಮ್ಮ ಒಂದು ಯುದ್ಧ ಕವಚವಿದ್ದಂತೆ. ಅಹಂಕಾರವು ಯುದ್ಧ ಸಮಯದಲ್ಲಿ ಕವಚ ವಿದ್ದಂತೆ. ಪ್ರತಿಯೊಂದೂ ಶಾಂತಿಯಿಂದ ಕೂಡಿದ್ದರೆ, ಎಲ್ಲವೂ ಸಮರಸವಾಗಿ ಹೊಂದಿಕೊಂಡಿದ್ದರೆ - ಆಗ ಈ ಕವಚದ, ಈ ಗುರಾಣಿಯ ಅಗತ್ಯವೇನು?

ಅದಕ್ಕಾಗಿಯೇ ಧ್ಯಾನ ಮಾಡುವುದು ನಿಮಗೆ ಕಷ್ಟಕರವಾಗಿ ಕಾಣುತ್ತದೆ. ಧ್ಯಾನವು ಬಹಳ ಸರಳವಾದದ್ದು! ಕೇವಲ ಮೌನವಾಗಿ ಕುಳಿತು ನೀವು ಉಸಿರಾಡುವುದನ್ನು ಗಮನಿಸುವುದಷ್ಟೇ ಆಗಿದೆ. ನಿಜವಾಗಿಯೂ ಧ್ಯಾನವನ್ನು ಕಲಿಸುವ ಅಥವಾ ಕಲಿತುಕೊಳ್ಳುವ ಉಂಟಾಗಬೇಕು.

ಆದರೆ, ಕೆಲವು ನಿಮಿಷಗಳ ಹೊತ್ತು ಸುಮ್ಮನೆ ಕುಳಿತುಕೊಳ್ಳುವುದೂ ಸಹ ಸತ್ಯತೆಯ ಕ್ಷಣಿಕ ಅನುಭವವನ್ನು ಪಡೆಯುವುದಕ್ಕಾಗಿಯೇ. ಕೆಲವು ಕ್ಷಣ ಮಾತ್ರ ನೀವು ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಾದರೆ, ಓಡುತ್ತಿರುವ ಆಲೋಚನೆಗಳನ್ನು ಶಾಂತಗೊಳಿಸಲು ಸಾಧ್ಯವಾದರೆ ಅಷ್ಟೇ ಸಾಕು, ನಿಮಗೆ ಸತ್ಯದ ವಿಚಾರವಾಗಿ ಮನದಟ್ಟು ಮಾಡಿಕೊಡಬಹುದು. ಮತ್ತು ಒಮ್ಮೆ ಸತ್ಯದ ಅರಿವು ಆಯಿತೆಂದರೆ ನಿಮ್ಮ ಅಹಂಕಾರಕ್ಕೆ ಸ್ಥಳವೆಲ್ಲಿದೆ? ಅಹಂಕಾರವು ಬಿದ್ದು ಹೋಗಬೇಕಾಗುತ್ತದೆ. ನೀವು ಅದನ್ನು ಬಿಟ್ಟೇ ಬಿಡುತ್ತೀರಿ.

ಅದಕ್ಕಾಗಿಯೇ ಅಹಂಕಾರವು ಧ್ಯಾನದೊಂದಿಗೆ ಕಾಠಿಣ್ಯತೆಯಿಂದ ಹೊಡೆದಾಡುತ್ತದೆ. ಧ್ಯಾನವು ಅಹಂಕಾರದ ಮರಣವೇ ಹೊರತು ಮತ್ತೇನೂ ಅಲ್ಲ!

ಆದ್ದರಿಂದ ಅಹಂಕಾರದ ಶಕ್ತಿಯುತವಾದ ಪ್ರತಿಭಟನೆಯನ್ನು (ನಿರೋಧ ಶಕ್ತಿಯನ್ನು) ನಿಲ್ಲಿಸುವುದೇ ಅತಿದೊಡ್ಡ ಸಮಸ್ಯೆಯಾಗಿದೆ. ನೀವು ಧ್ಯಾನ ಮಾಡುತ್ತಿದ್ದಾಗ, ಅಹಂಕಾರವು ಸಾವಿರಾರು ಪ್ರಶ್ನೆಗಳೊಂದಿಗೆ ಹೊರ ಬರುತ್ತದೆ. ಸಂಶಯ ಎಂಬುದು ಅಹಂಕಾರವು ಹೊಂದಿರುವ ಮಾರಕ ಅಸ್ತ್ರ. ಅಹಂಕಾರವು ನಿಮ್ಮ ಮನಸ್ಸಿನಲ್ಲಿ ಸತತವಾಗಿ ಸಂಶಯಗಳನ್ನೂ, ಪ್ರಶ್ನೆಗಳನ್ನೂ ಸೃಷ್ಟಿಸುತ್ತಿರುತ್ತೆ.

ಪ್ರಾರಂಭದಲ್ಲಿ ನಿಮ್ಮನ್ನು ಚಿಂತೆಗೆ ಒಳಗಾಗಿಸುತ್ತೆ.

ನಾನು ನಿಜವಾಗಿಯೂ ಧ್ಯಾನ ಮಾಡಬಲ್ಲೆನೇ?

ನನಗೆ ಗಂಟೆಗಳ ಕಾಲ ಬೆನ್ನು ನೋವಿನಿಂದ ಕುಳಿತು ಕೊಳ್ಳಲು ಸಾಧ್ಯವಾಗುವುದೇ?

ಈ ದಾರಿಯು ನನಗೆ ಸರಿಯಾದುದೇ? ಇದರಲ್ಲಿ ಆಳವಾಗಿ ಸೆಳೆಯಲ್ಪಟ್ಟರೆ ನನ್ನ ಗತಿ? - - -

ನನ್ನ ಸಂಸಾರಕ್ಕೆ ಏನಾಗುವುದೋ? ಏನೋ? ನನ್ನ ಸ್ನೇಹಿತರು ನನ್ನನ್ನು ಹುಚ್ಚನೆಂದು ಕರೆಯುತ್ತಾರೆಯೋ ಏನೋ? ನಾನು ನಿಜವಾಗಿಯೂ ಹುಚ್ಚನೇ? ನೀವು ವಿಚಾರವಾಗಿಯೇ ಸಂಶಯಗಳು ತಲೆ ಎತ್ತುತ್ತವೆ!

ನಿಜವಾಗಿಯೂ ಗುರುವು ಅಧಿಕೃತನೇ? ಸಮರ್ಥನೇ? ನನಗೆ ಸರಿಹೊಂದುವ ತಂತ್ರವು ಯಾವುದೆಂಬುದು ಗುರುವಿಗೆ ಗೊತ್ತಿದೆಯೇ? ಅವರು ನನಗೆ ಈ ಧ್ಯಾನವನ್ನು ಕಲಿಸುತ್ತಿರುವ ಉದ್ದೇಶವೇನು? ಇದೇನು ಒಂದು ತರಹದ ವಶೀಕರಣವೇ?

ಆದ್ದರಿಂದ ಈ ತರಹದ ಪ್ರಶ್ನೆಗಳು ನಿಮ್ಮಲ್ಲಿ ಬರುತ್ತಿದ್ದರೆ, ಚಿಂತಿಸಬೇಡಿ. ಸುಮ್ಮನೆ ಪ್ರಶ್ನೆಗಳನ್ನು ಹಾಗೆಯೇ ಬಿಟ್ಟುಬಿಡಿ ಮತ್ತು ಧ್ಯಾನವನ್ನು ಮುಂದುವರಿಸಿ. ಈ ಪ್ರಶ್ನೆಗಳು ಮನಸ್ಸಿನಲ್ಲಿ ಬರುತ್ತಿರುವುದಕ್ಕಾಗಿ ತಪಿತಸ್ಥ ಮನೋಭಾವನೆಯನ್ನು (ಅಪರಾಧಿ ಮನೋಭಾವನೆಯನ್ನು) ಹೊಂದಬೇಡಿರಿ! ಈ ಪ್ರಶ್ನೆಗಳೆಲ್ಲಾ ಸಹಜವಾಗಿ ಎಲ್ಲರ ಮನಸ್ಸಿನಲ್ಲಿಯೂ ಬರುವಂತಹವುಗಳೇ

ಮತ್ತು ಈ ಪ್ರಶ್ನೆಗಳೊಂದಿಗೆ ಹೋರಾಡಬೇಡಿರಿ. ಅಹಂಕಾರದ ಜೊತೆ ಸೆಣಸಾಡುವ ತಪ್ಪು ಮಾಡಲೇಬೇಡಿ! ಏಕೆಂದರೆ ಅಹಂಕಾರವು ಒಂದು ತರಹ ಕಲ್ಪನೆ ಮಾತ್ರ, ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ. ಅಹಂಕಾರವೆಂದರೆ ಕೇವಲ ತಿಳುವಳಿಕೆ ಇಲ್ಲದಿರುವುದೇ ಹೊರತು ಮತ್ತೇನೂ ಅಲ್ಲ.

ಕತ್ತಲು ಎಂದರೆ ಬೆಳಕಿಲ್ಲದ ಒಂದು ಸ್ಥಿತಿ ಇದ್ದಂತೆ, ಅಹಂಕಾರವು ತಿಳುವಳಿಕೆ ಇಲ್ಲದ ಒಂದು ಸ್ಥಿತಿಯೇ.

ನೀವು ಕತ್ತಲಿನ ಕೊಠಡಿಯಲ್ಲಿದ್ದಾಗ, ನೀವು ಕತ್ತಲಿನ ಜೊತೆ ಹೊಡೆದಾಡಿ ಕೊಠಡಿಯಲ್ಲಿ ಬೆಳಕನ್ನು ತರಲು ಕತ್ತಲನ್ನು ಹೊರ ಹಾಕಬಲ್ಲಿರಾ ? ಕತ್ತಲಿನ ಜೊತೆ ಹೊಡೆದಾಡುವುದರಲ್ಲಿ ಏನಾದರೂ ಅರ್ಥವಿದೆಯೇ? ನಿಜವಾಗಿ ಹೇಳ ಬೇಕೆಂದರೆ, ನಿಮ್ಮ ಪರಿಹಾರ ಕತ್ತಲಿನ ಜೊತೆ ಹೊಡೆದಾಡುವುದಲ್ಲ. ನೀವು ಕತ್ತಲನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ದೀಪವನ್ನು ತರುವುದು ಅಷ್ಟೆ. ಕತ್ತಲೆಯು ತನಗೆ ತಾನೇ ಅದ್ವಶ್ಯವಾಗುತ್ತದೆ! ಅದೇ ರೀತಿಯಲ್ಲಿ ಅಹಂಕಾರದ ಜೊತೆ ಹೊಡೆದಾಡಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನಿಮ್ಮ ಧ್ಯಾನದಲ್ಲಿ ಅರಿವನ್ನು ತರಲು ಕೇಂದ್ರೀಕರಿಸಿರಿ. ಅಂದಹಾಗೆ, ನಿಮ್ಮ ಪ್ರಶ್ನೆಗಳು ತಮಗೆ ತಾವೇ ಕರಗಿ ಹೋಗುತ್ತವೆ.

ಅಹಂಕಾರದ ಬಹುದೊಡ್ಡ ಮಾತಿನ ಮಲ್ಲ ಮನಸ್ಸೇ.

ಶರೀರದಂತೆಯೇ ಮನಸೂ ಕೂಡ ನಿಮ್ಮ ಕೈಯಲ್ಲಿನ ಉಪಕರಣವಾಗಬೇಕು.

ಮನಸ್ಸು ಒಂದು ವಿಚಿತ್ರವಾದ ಉಪಕರಣ, ಅತ್ಯಧಿಕ ಶಕ್ತಿಯುಳ್ಳದ್ದು, ಅದ್ಭುತವಾದ ಸ್ವಜನಶಕ್ತಿ ಉಳ್ಳದು. ಅದು ಸ್ಥೂಲ ಕಲ್ಪನೆಯ ಅನುಪಮ ಕೃತಿ. ಮನಸ್ಸು ಸಮಾಜದ ಅವಶ್ಯಕತೆಯಾಗಿದೆ - ಮನಸ್ಸಿಲ್ಲದಿದ್ದರೆ ನಾವು ಪ್ರಪಂಚದಲ್ಲಿ ಬದುಕಲು ಸಾಧ್ಯವಿಲ್ಲ.

ಆದರೆ ನಾವು ಮನಸ್ಸು ಕೇವಲ ಒಂದು ಉಪಕರಣವೆಂಬುದನ್ನು ಮರೆತು ಬಿಡುತ್ತೇವೆ - ನಾವೇ ಮನಸ್ಸಿನ ಉಪಕರಣವಾಗಿ ಬಿಡುತ್ತೇವೆ! ನಾವು ಸಂಪೂರ್ಣವಾಗಿ ಮನಸ್ಸಿನಿಂದಲೇ ನಿಯಂತ್ರಿಸಲ್ಪಡುತ್ತಿದ್ದೇವೆ.

ಸತ್ಯತೆಯಿಂದ ನಮ್ಮನ್ನು ಬೇರೆ ಮಾಡಲು ಮನಸ್ಸು ಮಾಡುವ ಕುಯುಕ್ತಿ ಎಂದರೆ ಭಾಷೆಯನ್ನು ಉಪಯೋಗಿಸುವುದು.

ಪದಗಳು ನಮ್ಮನ್ನು ಸತ್ಯದಿಂದ ಬೇರೆ ಮಾಡುವುದು. ನಾವು ಯಾವಾಗ ಏನನ್ನಾದರೂ ಕಂಡರೆ ಅದನ್ನು ನಾವು ಶಬ್ದಗಳಲ್ಲಿ ವ್ಯಕ್ತಪಡಿಸುತ್ತೇವೆ. ನೀವು

ಧ್ಯಾನಮಯ ಜೀವನದ ಕಡೆಗೆ

ಒಂದು ಹೂವನ್ನು ನೋಡಿದರೆ, ನೀವು ನಿಮಗೇ ಹೇಳಿಕೊಳ್ಳುತ್ತೀರಿ, ಇದೊಂದು ಹೂ. ನಾವು ಜೀವನದ ಎಲ್ಲವನ್ನೂ ಪದಗಳ ಮೂಲಕ (ಮಾತಿನ ಮೂಲಕ) ಹೀರಿಕೊಳ್ಳುತ್ತೇವೆ (ಗ್ರಹಿಸುತ್ತೇವೆ), ಕಣ್ಣಿಗೆ ಗೋಚರವಾಗದ ಅಭಿಪ್ರಾಯಗಳ ಆಧಾರದಿಂದ. ಆದರೆ ಶಬ್ದಗಳು ಅನುಭವವಲ್ಲ! 'ಹೂ' ಎನ್ನುವ ಶಬ್ದ ಹೂ ಅಲ್ಲ, ಪ್ರೀತಿ ಎನ್ನುವ ಪದ ಪ್ರೀತಿಯಲ್ಲ, ಜ್ಞಾನೋದಯ ಎಂಬ ಪದ ಜ್ಞಾನೋದಯವಲ್ಲ. ಪದಗಳು, ನಿಮಗೂ ಸತ್ಯಕ್ಕೂ ಮಧ್ಯೆ ಇರುವ ಬೇಲಿ (ತಡೆ).

ಧ್ಯಾನಕ್ಕೆ ಪದಗಳ ಅವಶ್ಯಕತೆ ಇಲ್ಲ. ಧ್ಯಾನವು ಸತ್ಯ ವಸ್ತುವಿನ ನೇರವಾದ ಅನುಭವ.

ಆದರೆ ಮನಸ್ಸು ತನ್ನ ಜೊತೆ ಸದಾ ಪದ (ಶಬ್ದ)ಗಳ ಹರಟೆಯನ್ನು ತೆಗೆದುಕೊಂಡೇ ಹೋಗುತ್ತಿರುತ್ತದೆ. ಮನಸ್ಸು ನಿಮ್ಮನ್ನು ಒಂದು ಕ್ಷಣ ಕಾಲವೂ ಸಹ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ. ಮನಸ್ಸು ಬಿಡುವಿಲ್ಲದೆ ನಿಮಗಾಗಿ ಭಾವನೆಗಳನ್ನೂ, ಅಭಿಪ್ರಾಯಗಳನ್ನೂ, ಕಲ್ಪನೆಗಳನ್ನೂ ಸೃಷ್ಟಿಸುತ್ತಿರುತ್ತದೆ. ಅದು ಸತ್ಯವನ್ನು ವಿರೂಪಗೊಳಿಸಲು ಶಬ್ದಗಳನ್ನು ಉಪಯೋಗಿಸುತ್ತದೆ. ಮನಸ್ಸನ್ನು ಹೇಗೆ ವ್ಯವಸ್ಥೆಗೊಳಿಸುತ್ತೀಯೆ?

ನಾನು ಹೋರಾಡಬೇಡಿ. ನೀವು ಮನಸ್ಸಿನ ಜೊತೆ ಹೊಡೆದಾಡಿ ಏನನ್ನೂ ಪಡೆಯಲಾಗುವುದಿಲ್ಲ. ನೀವು ಅದರ ಜೊತೆ ಹೋರಾಡಲೂ ಸಹ ಆಗುವುದಿಲ್ಲ - ಏಕೆಂದರೆ ಹೋರಾಡುವುದೂ ಸಹ ಮನಸ್ಸಿನ ಕೆಲಸವೇ! ಆದ್ದರಿಂದ ಅದೂ ಮನಸ್ಸಿನ ಒಂದು ಭಾಗವೇ ಮತ್ತೊಂದು ಭಾಗದ ಜೊತೆ ಹೊಡೆದಾಡಿದಂತೆ. ಅದರ ಬದಲು ಸುಮ್ಮನೆ ಮನಸ್ಸಿನ ಕೆಲಸಗಳಿಗೆಲ್ಲಾ ಸಾಕ್ಷಿಯಾಗಿ.

ಇದೇನು ಸುಲಭವಾಗಿ ಆಗುವುದಲ್ಲ. ಅದರಲ್ಲೂ ಈ ಹಾದಿಯಲ್ಲಿ, ಮನಸ್ಸು ಬಹಳ ಅಪಾಯಕಾರಿಯಾದ ಸಂಗಡಿಗ! ಮೊದಲನೆಯದಾಗಿ ಅದು ಎಲ್ಲಾ ತರಹದ ಭಯವನ್ನೂ ಸಂಶಯಗಳನ್ನೂ ಸೃಷ್ಟಿಸುತ್ತದೆ. ಯಾವಾಗ ನೀವು ಅದನ್ನು

(ಆಲೋಚನೆಗಳನ್ನು) ಸಾಕ್ಷೀ ಭಾವದಲ್ಲಿ ನೋಡಲು ಪ್ರಾರಂಭಿಸುತ್ತೀರೋ ಆಗಲೇ ಅದು ನಿಜವಾಗಿಯೂ ಸಾಕ್ಷೀಭಾವದಿಂದ ನೋಡುತ್ತಲೇ ಇದ್ದೀರೆಂದು ನಂಬಿಸಿ ಬಿಡುತ್ತದೆ. ಆದರೆ ನಿಮ್ಮ ಮನಸ್ಸು ಆ ರೀತಿ ಹೇಳಿದರೆ, ಆಗ ಮನಸ್ಸು ಕೆಲಸ ಮಾಡುತ್ತಿದೆ ಎಂದರ್ಥ. ನೀವು ನಿಜವಾಗಿಯೂ ಸಾಕ್ಷಿಯೇ ಆಗಿದ್ದಲ್ಲಿ ಆಗ ಯಾವ ಅಭಿಪ್ರಾಯವೂ ಯಾವ ತೀರ್ಮಾನವೂ, ಭಾವನೆಯೂ ಕೂಡ ಅಲ್ಲಿರುವುದಿಲ್ಲ.

ಇವೆಲ್ಲಾ ಆಲೋಚನೆಗಳು. ನಾನು ಅವುಗಳನ್ನು ಸಾಕ್ಷಿಯಾಗಿ ನೋಡುತ್ತಿದ್ದೇನೆ ಆದರೆ ಸ್ಪಷ್ಟವಾಗಿ ತಿಳಿಯಿರಿ; ಮನಸ್ಸು ನಿಮ್ಮ ಶತ್ರುವಲ್ಲ. ಆಲೋಚಿಸುವುದರಲ್ಲಿ ತಪ್ಪಿಲ್ಲ. ಇದೂ ಸಹ ಎಲ್ಲದರಂತೆ ಒಂದು ಕಾರ್ಯ ವಿಧಾನ. ನೀವು ಹೋರಾಡುವವರಾಗಬೇಡಿ. ಕೇವಲ ಮನಸ್ಸನ್ನು ಗಮನಿಸುವವರಾಗಿರಿ, ಆಲೋಚನೆಗಳನ್ನು ಗಮನಿಸುವವರಾಗಿರಿ. ಮನಸ್ಸಿನ ಆಟವನ್ನು ನೋಡಿ ಸಂತೋಷಪಡಿ!

ಆಲೋಚನೆಗಳನ್ನು ಗಮನಿಸಲು ಪ್ರಾರಂಭಿಸುತ್ತಿದ್ದಂತೆ, ನಿಧಾನವಾಗಿ ಅವು ಹೆಚ್ಚು ಹೆಚ್ಚು ಬರಲು ತೊಡಗುತ್ತವೆ. ನಿಮ್ಮ ಪ್ರಜ್ಞೆ ಆಳವಾದಂತೆಲ್ಲಾ, ನೀವು ಒಳಬರುವ ಆಲೋಚನೆಗಳ ಮಧ್ಯದ ವಿರಾಮವನ್ನು ಗುರುತಿಸತೊಡಗುತ್ತೀರಿ. ಆ ವಿರಾಮವು ಒಂದು ಪ್ರಕಾಶದಂತೆ ನಿಮಗೆ ಅನುಭವಕ್ಕೆ ಬರುತ್ತೆ, ಕ್ಷಣಕ ದರ್ಶನದಂತೆ ಕಂಡು, ಕಾಣದಂತಾಗುತ್ತದೆ. ಯಾವ ಅಂತಹ ವಿರಾಮದಲ್ಲಿ ಒಂದು ಮಧುರವಾದ ಮೌನವನ್ನು ಅನುಭವಿಸುತ್ತೀರಿ. ನಂತರದಲ್ಲಿ ಆ ವಿರಾಮವು ಆಗಾಗ್ಯೆ ಆಗಲು ಪ್ರಾರಂಭಿಸುತ್ತೆ. ಈ ಅನುಭವಕ್ಕೂ ಸಹ ಅಂಟಿಕೊಳ್ಳಬೇಡಿ! ಆ ವಿರಾಮಗಳಲ್ಲಿ ಕಾಯಬೇಡಿ. ಆ ವಿರಾಮದ ಕಾಲವು ಹೆಚ್ಚಾದಂತೆ, ನೀವು ಎಲ್ಲವನ್ನೂ ತೀವ್ರ ಸ್ಪಷ್ಟತೆಯಿಂದ ತಿಳಿಯಲು ಸಮರ್ಥರಾಗುತ್ತೀರಿ - ಕೇವಲ ಹೊರ ಪ್ರಪಂಚವನ್ನಷ್ಟೇ ಅಲ್ಲ ಒಳ ಪ್ರಪಂಚವನ್ನೂ ಸಹ.

ಇದೇ ಮನಸ್ಸಿಲ್ಲದ ಸ್ಥಿತಿಯ ಅನುಭವ.

ಇದು ನಿಮಗೆ ಬಹಳ ಹೆಚ್ಚಾಯ್ತು ಎಂದು ಭಾವಿಸಬೇಡಿ! ಯಾವಾಗ ನೀವು ಪ್ರಾಮಾಣಿಕತೆಯಿಂದ ಪೂರ್ಣವಾಗಿ ಅಭ್ಯಾಸ ಮಾಡುತೀರೋ ಆಗ ಇದು ಆಗುತ್ತದೆ.

ಧ್ಯಾನವನ್ನು ಹೇಗೆ ಆಸ್ಪಾದಿಸುವುದು (ಆನಂದಿಸುವುದು) ಸಮಯ ಮಾಡಿಕೊಳ್ಳಿ

ಪ್ರತಿದಿನ ಅರ್ಧಗಂಟೆ ಖಚಿತವಾಗಿ ಧ್ಯಾನಕ್ಕಾಗಿ ಸಮಯವನ್ನು ಮೀಸಲಿಡಿ. ನೀವು ಯಾವಾಗ ಎಲ್ಲಿ ಬೇಕಾದರೂ ಮಾಡುವ ಧ್ಯಾನವನ್ನು ಅಭ್ಯಾಸ ಮಾಡಲು ಯೋಚಿಸಿದ್ದರೂ ಸಹ ಅರ್ಧ ಗಂಟೆಯ ಕುಳಿತು ಮಾಡುವ ಧ್ಯಾನವನ್ನೂ ಸಹ ಸೇರಿಸಿಕೊಳ್ಳಿ. ಪ್ರಾರಂಭದಲ್ಲಿ ನೀವು ಶಿಸ್ತನ್ನು ನಿಮ್ಮ ಧ್ಯಾನದಲ್ಲಿ ಪಾಲಿಸಬೇಕು ಮತ್ತು ನೀವು ಪ್ರಜ್ಞಾಪೂರ್ವಕ ಅಭ್ಯಾಸ ಮಾಡಬೇಕು. ಅದಕ್ಕಾಗಿ ಒಳ್ಳೆಯ ವಾತಾವರಣವನ್ನು ಕಲ್ಪಿಸಿ ಧ್ಯಾನಾಭ್ಯಾಸಕ್ಕಾಗಿ ಸ್ಥಳವನ್ನು ಮಾಡಿಕೊಳ್ಳಿ. ಆ ಸಮಯದಲ್ಲಿ ನಿಮಗೆ ಅಡಚಣೆಗಳು ಬಾರದಂತೆ ನೋಡಿಕೊಳ್ಳಿ. ಯಾವ ಕಾರ್ಯಕ್ರಮಗಳಿಗೂ ಒಪ್ಪಿಕೊಳ್ಳಬೇಡಿ. ನಿಮ್ಮ ಕುಟುಂಬದವರು, ಸ್ನೇಹಿತರು ಆ ಸಮಯವೆಂದೂ ಅವರಿಗೆ ತಿಳಿಯಪಡಿಸಿರಿ. ಪ್ರತಿದಿನ ಒಂದೇ ಸಮಯದಲ್ಲಿ ಮಾಡುವುದು ಯೋಗ್ಯವಾದದ್ದು. ಹಾಗೆ ಮಾಡಿದರೆ ಶರೀರ ಮತ್ತು ಮನಸುಗಳು ಅದಕ್ಕೆ ಬಹುಬೇಗ ರೂಢಿಸಿಕೊಂಡು ಬಿಡುತ್ತದೆ. ಪ್ರತಿದಿನ ಒಂದೇ ಸಮಯಕ್ಕೆ ನೀವು ಅಭ್ಯಾಸ ಮಾಡುವುದಾದರೆ ಆ ಸಮಯದಲ್ಲಿ ನೀವು ಧ್ಯಾನದ ಸ್ಥಿತಿಗೆ ಬೇಗ ಮತ್ತು ಸುಲಭವಾಗಿ ತಲುಪಿಬಿಡಬಹುದು.

ಸ್ಥಳವನ್ನು ಮಾಡಿಕೊಳ್ಳಿ :

ಒಳ್ಳೆಯ ಶುಭ್ರವಾದ, ಶಾಂತವಾದ ಜಾಗವನ್ನು ಧ್ಯಾನಕ್ಕಾಗಿ ಆರಿಸಿಕೊಳ್ಳಿ. ಸಾಧ್ಯವಾದರೆ ಅದಕ್ಕೆ ನಿಮ್ಮ ಮನೆಯಲ್ಲಿ ಒಂದು ಕೊಠಡಿಯನ್ನೇ ಧ್ಯಾನದ ಕೊಠಡಿ ಎಂದೇ ಮಾಡಿಕೊಳ್ಳಿ. ದೇವರ ಮನೆ ಈಗಾಗಲೇ ಇದ್ದರೆ ಅದು ಆದರ್ಶ ಜಾಗವೇ ಹೌದು. ಯಾವ ಜಾಗದಲ್ಲಿ ಪೂಜೆ ಮತ್ತು ಧ್ಯಾನ ಇವುಗಳು ನಡೆಯುತ್ತವೆಯೋ ಅಲ್ಲಿ ಹೆಚ್ಚಿನ ಚೈತನ್ಯವು ಇರುವುದರಿಂದ ನಿಮ್ಮ ಧ್ಯಾನಕ್ಕೆ ಹೆಚ್ಚು ಉಪಯೋಗಕಾರಿಯಾಗಿರುತ್ತೆ. ಒಂದೇ ಸ್ಥಳದಲ್ಲಿ ಪ್ರತಿನಿತ್ಯ ಧ್ಯಾನ ಮಾಡುವುದು ಒಳ್ಳೆಯದು. ಆ ಜಾಗವು ಮನೆಯೊಳಗಡೆಯಾದರೆ ಸಾಕಷ್ಟು ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ. ನೀವು ಮನೆಯ ಹೊರಗಡೆ ಅಂದರೆ ಗಾರ್ಡನ್ ತರಹದ ಸ್ಥಳವಾದರೆ, ಯಾರಿಂದಲೂ ಅಡಚಣೆಯಾಗದ, ಗಲಾಟೆಯಾಗದ ಪ್ರತ್ಯೇಕ ಸ್ಥಳದಲ್ಲಿ ಅಭ್ಯಾಸ ಮಾಡಿರಿ.

ನೆಮ್ಮದಿಯಿಂದಿರಿ:

ನೀವು ದೈಹಿಕವಾಗಿ ಅಡಚಣೆ ಇಲ್ಲದೆ ನೆಮ್ಮದಿಯಿಂದಿರದಿದ್ದರೆ ನೀವು ಧ್ಯಾನವನ್ನು ಮಾಡಲಾರಿರಿ! ಧ್ಯಾನಕ್ಕೆ ನೀವು ಶರೀರವನ್ನು ಮರೆಯಲೇಬೇಕು, ಶರೀರವು ತೊಂದರೆ ಕೊಡುತ್ತಿದ್ದರೆ ನೀವು ಶರೀರವನ್ನು ಮರೆತು ಅದರಿಂದಾಚೆಗೆ ಹೋಗುವುದೆಂತು?

ಎಷ್ಟೋ ತಂತ್ರಗಳು ನೀವು ನೆಲದ ಮೇಲೆ ಕುಳಿತು ಮಾಡುವಂತಹು)ಇವೆ. ನೀವು ಅದಕ್ಕೆ ಒಗ್ಗಿಕೊಂಡಿರದೇ ಇದ್ದರೆ, ಕುರ್ಚಿಯನ್ನು ಉಪಯೋಗಿಸಿರಿ. ಆದರೂ ಪ್ರಯತ್ನ ಪಡುತಿರಿ. ನಿಮಗೆ ಬೇಕಾದರೆ ಒಂದು ಮೆತ್ತೆಯನ್ನು ಆಸನದ ರೀತಿ ಹಾಕಿಕೊಳ್ಳಿರಿ. ಮಲಗಿ ಮಾಡುವಂತಹ ತಂತ್ರಗಳಿಗೆ ಖಾಲಿ ನೆಲದ ಮೇಲೆ ಮಲಗಬೇಡಿ. ಜನಖಾನ ಅಥವಾ ಹುಲ್ಲಿನ ಚಾಪೆಯನ್ನು ಉಪಯೋಗಿಸಿರಿ.

ನೀವು ಊಟ ಮಾಡಿ ಎರಡು ಗಂಟೆಗಳು ಕಳೆದ ನಂತರ ಧ್ಯಾನಕ್ಕೆ ಕುಳಿತುಕೊಳ್ಳಿರಿ.

ಮೊದ ಮೊದಲು ಧ್ಯಾನಕ್ಕೆ ಕುಳಿತಾಗ ನಿದ್ರೆ ಬರುವಂತಾಗಬಹುದು. ಇದು ತಾಮಸ ಅದು ನಿಮ್ಮ ಪ್ರಕೃತಿಗೆ ಭಾರವೆನಿಸಬಹುದು. ನಿಮ್ಮ ನಿದ್ರೆಯ ಜೊತೆ ಹೋರಾಡದಿರಿ - ಕಡೆಗೆ ನೀವು ನಿದ್ರೆಯನ್ನೂ ಮಾಡಲಾರಿರಿ, ಧ್ಯಾನವನ್ನೂ ಮಾಡಲಾರಿರಿ! ನಿದೆ, ಬರುವುದರ ವಿಷಯವಾಗಿ ತಪ್ಪಿತಸ್ಥ ಭಾವನೆಯನ್ನು ಹೊಂದಬೇಡಿರಿ. ನಿಮಗೆ ನಿದ್ರೆ, ಬರುವಂತಿದ್ದರೆ ಹೋಗಿ ನಿದೆ, ಮಾಡಿರಿ. ನೀವು ನಿದ್ರೆಯನ್ನು ಮಾಡಿದ ನಂತರ ಧ್ಯಾನ ಮಾಡಬಹುದು ಅಷ್ಟೆ.

ಧ್ಯಾನವೂ ಸಹ ಮಾಡುವಂತಹ ಒಂದು ಕೆಲಸವಲ್ಲವೇ?

ಪ್ರಾರಂಭದಲ್ಲಿ ಹೌದು. ಸುಮ್ಮನೆ ಕುಳಿತುಕೊಳ್ಳುವುದೂ ಸಹ ಒಂದು ಕೆಲಸವೇ. ನಿಮ್ಮ ಉಸಿರನ್ನು ಹೇಳುವುದಾದರೆ, ಧ್ಯಾನವೂ ಸಹ ಮೊದ ಮೊದಲು ಹೆಚ್ಚು ಕಡಿಮೆ ಮಾಡುವ ಕೆಲಸದಂತೆಯೇ ಅನ್ನಿಸಿಬಿಡುತ್ತದೆ - ಏಕೆಂದರೆ ನೀವು ನಿಮಗೆ ಸಹಜವಾದದ್ದನ್ನು ಮಾಡುತ್ತಿಲ್ಲವಾದ್ದರಿಂದ ಹಾಗೆ ಅನ್ನಿಸುತ್ತದೆ.

ನೀವು ಸಹಜವಾಗಿ ಚೆನ್ನಾಗಿ (ಸರಿಯಾಗಿ) ಏನನ್ನಾದರೂ ಮಾಡುತ್ತಿದ್ದರೂ ಸಹ ಅಂದರೆ ಸುಮ್ಮನೆ ಕುಳಿತುಕೊಳ್ಳುವುದು, ಅದನ್ನು ಮಾಡಬೇಕೆಂದು ವಿಧಿಸಿದಾಗ ಅದು ಒಂದು ಪ್ರಯತ್ನದ ಕೆಲಸವೆಂದೇ ಕಾಣುತ್ತದೆ.

ನಿಮಗೆ ಗೊತ್ತಾ? ಜ಼ಿನ್ ಧ್ಯಾನದ ತಂತ್ರದಲ್ಲಿ ಸುಮ್ಮನೆ ಕುಳಿತುಕೊಳ್ಳುವುದೇ ಒಂದಿದೆ. ಆದರೆ ಅಲ್ಲಿಯೂ ಸಹ, ಅದರಲ್ಲಿ ಭಾಗವಹಿಸುವವರು, ಅದನ್ನು ಸಾಧಿಸಲು ಕಷ್ಟಪಡುತ್ತಾರೆ! ಹೌದು, ಪ್ರಾರಂಭದಲ್ಲಿ ಆದು ಒಂದು ಪ್ರಯತ್ನವೇ ಆಗಿರುತ್ತದೆ. ಆದರೆ ಆಳವಾದ ಅರ್ಥದಲ್ಲಿ ಧ್ಯಾನವು ಒಂದು ಮಾಡುವ ಕೆಲಸವಲ್ಲ - ಏಕೆಂದರೆ ನೀವು ಸರಿಯಾದ ರೀತಿಯಲ್ಲಿ ಮಾಡಿದಾಗ ಮತ್ತು ಅದರಲ್ಲಿ ಜಯಗಳಿಸಿದಾಗ, ಎಲ್ಲಾ ಪ್ರಯತ್ನಗಳೂ ಮಾಯವಾಗಿಬಿಡುತ್ತವೆ. ನೀವು ಪೂರ್ಣವಾಗಿ ವಿಶ್ರಾಂತಿ ಪಡೆದಾಗ, ನೀವು ಫಲವನ್ನು ಪಡೆಯುವ ಪ್ರಯತ್ವವನ್ನು ನಿಲ್ಲಿಸಿದಾಗ, ನೀವು ಸುಮ್ಮನೇ ಧ್ಯಾನವನ್ನು ಸಂತೋಷದಿಂದ ಅನುಭವಿಸಿದಾಗ, ನೀವು ನಿಧಾನವಾಗಿ, ನೀವು ಧ್ಯಾನ ಮಾಡುತ್ತಿದ್ದೇವೆನ್ನುವುದನ್ನೇ ಮರೆತುಬಿಟ್ಟಿರುತ್ತೀರಿ. ಆಗ ಅದು ಮಾಡುವುದು ಎಂದು ಅನಿಸಿಕೊಳ್ಳುವುದಿಲ್ಲ.

ಮುಂದಿನ ಪುಟಗಳಲ್ಲಿ ತಿಳಿಸಲಾಗಿರುವ ಧ್ಯಾನದ ತಂತ್ರಗಳೆಲ್ಲವೂ ನನ್ನಿಂದಲೇ ಸೃಷ್ಟಿಸಲ್ಪಟ್ಟವುಗಳಲ್ಲ. ಅವೆಲ್ಲವನ್ನೂ ಪುರಾತನ ಗ್ರಂಥಗಳಿಂದ, ಹಾಗೂ ಆಧ್ಯಾತ್ಮಿಕ ಸಂಪ್ರದಾಯವನ್ನು ಪ್ರಪಂಚದಾದ್ಯಂತ ಸಾರಿರುವ ಆಧ್ಯಾತ್ಮಿಕ ಗುರುಗಳು ಪ್ರತಿಪಾದಿಸಿರುವ ಬೋಧನೆಗಳಿಂದ ತೆಗೆದುಕೊಳ್ಳಲಾಗಿದೆ.

ಹೆಚ್ಚು ತಂತ್ರಗಳನ್ನು ನಾನು ನನ್ನ ಸ್ವಂತ ಅನುಭವದ ತಳಹದಿಯ ಮೇಲೆ ಮಾರ್ಪಾಟು ಮಾಡಿದ್ದೇನೆ. ಕೆಲವು ನನ್ನಿಂದ ಸೃಷ್ಟಿಸಲ್ಪಟ್ಟಿವೆ, ಮತ್ತೆ ಕೆಲವನ್ನು ಬೇರೆಯವರು ಪ್ರತಿಪಾದಿಸಿದಂತೆಯೇ ಅದನ್ನು ತಿಳಿಯಪಡಿಸಿದ್ದೇನೆ.

ಹೆಚ್ಚು ತಂತ್ರಗಳ ಮೂಲ ಸ್ವರೂಪವು ಪ್ರಸಿದ್ಧಿ ಪಡೆಯದೆ, ಅಸ್ಪಷ್ಟತೆಯಿಂದ ಕಳೆದು ಹೋಗಿವೆ. ಅವುಗಳು ಯಾರ ಸ್ವತ್ತೂ ಅಲ್ಲ, ಅವು ತನ್ನವೇ ಎಂದು ಯಾರೂ ಸ್ವಾಮ್ಯತ್ವವನ್ನು ಪ್ರತಿಪಾದಿಸಲಾಗುವುದಿಲ್ಲ.

ಸತ್ಯವೇನೆಂದರೆ, ಈ ತಂತ್ರಗಳ ಹೆಸರುಗಳ ಬಗ್ಗೆ ನಿಜವಾದ ಯಾವ ಗುರುಗಳೂ ಸಂಬಂಧಿಸಿಲ್ಲ. ಅವರಿಗೆ ಬೇಕಾದದ್ದು - ಇದು ನಿಮಗೆ ಸಹಾಯವಾಗುತ್ತೋ ಅಥವಾ ಇಲ್ಲವೋ ಎಂಬುದಷ್ಟೇ. ಆದ್ದರಿಂದ ಸುಮ್ಮನೆ ತಂತ್ರಗಳನ್ನು ಉಪಯೋಗಿಸಿ ಆನಂದಿಸಿರಿ, ಮತ್ತು ಅದನ್ನು ಬೇರೆ ಉಪಯೋಗಿಸಿ ಆನಂದ ಪಡುವುದಾದರೆ ಅವರಿಗೂ ಇದನ್ನು ತಲುಪಿಸಿರಿ.

ಧ್ಯಾನದ ಮಹತ್ವದ ಸುವಾಸನೆಯನ್ನು ಹರಡಿರಿ!

ಧ್ಯಾನದ ತಂತ್ರಗಳು

ಧ್ಯಾನದ ತಂತ್ರಗಳು

ಧ್ಯಾನದ ತಂತ್ರಗಳು

ಆನಂದ ನಟನ

ತಂತ್ರದ ಬಗ್ಗೆ

ನರ್ತಿಸುವುದು ಒಂದು ಪ್ರಭಾವಪೂರಿತ ವಾದ ಧ್ಯಾನ! ಕ್ರಮಬದ್ದ ಸಾಂಪ್ರದಾಯಿಕ ನರ್ತನ ಮತ್ತು ಸ್ವತಂತ್ರವಾದ ಸರಳ ನರ್ತನ ಇವೆರಡೂ ಸಹ ಧ್ಯಾನದ ತಂತ್ರಗಳಾಗಬಹುದು. ಸರಳ ನರ್ತನವೂ ಸಹ ಹೆಚ್ಚಿನ ವಿರೇಚಕವಾದ ತಂತ್ರ, ಇದರ ಉದ್ದೇಶವೇನೆಂದರೆ, ನೀವು ನಿಮ್ಮನ್ನೇ ಮರೆತುಬಿಡುವುದು. ನರ್ತನದಲ್ಲಿ ಚೆನ್ನಾಗಿ ಪಳಗಿದ ನರ್ತನಕಾರನು ಇದನ್ನು ತನ್ನ ಕ್ರಮಬದ್ದ ನರ್ತನದಲ್ಲಿಯೂ ಸಹ ಮಾಡಬಲ್ಲನು, ಏಕೆಂದರೆ ನಿಯಮಗಳ ಪರಿವೆಯೇ ಅವನಿಗಿರುವುದಿಲ್ಲ. ನಾವು ಹೇಗೆ ವ್ಯಾಕರಣದ ಬಗ್ಗೆ ಚಿಂತೆ ಮಾಡದೆ ಸರಿಯಾಗಿ ಮಾತನಾಡಬಲ್ಲೆವೋ ಹಾಗೆ, ಪಳಗಿದ ನರ್ತನಕಾರನು ಕ್ರಮಬದ್ಧ ನರ್ತನ ವನ್ನೂ ಸಹ ಸಹಜವಾಗಿ ನರ್ತಿಸುತ್ತಾನೆ. ಆದರೆ ನೀವು ಪಳಗಿದವರಲ್ಲವಾದರೆ (ಹವ್ಯಾಸಿ ನರ್ತನಕಾರನಾದರೆ) ಆಗ ಸರಳ ನರ್ತನವನ್ನು ನೀವು ಬಹಳವಾಗಿ ಸಂತೋಷಪೂರಿತವಾಗಿ ಮಾಡಬಲ್ಲಿರಿ, (ಇಲ್ಲವಾದರೆ ) ಸರಳ ನರ್ತನವನು ಮಾಡದೆ ಕ್ರಮಬದ್ದ ನರ್ತನವನ್ನು ಮಾಡ ಹೊರಟರೆ) ನೀವು ನಿಯಮಗಳಿಂದ ನಿರ್ಬಂಧಕ್ಕೊಳಗಾಗಿರುವಂತೆ ಅನಿಸುತ್ತದೆ.

ಸೂಚನೆಗಳು:

ಸರಳ ನರ್ತನ (ಫ್ರೀ ಡಾನ್ಸ್) ಎಂದರೆ ಅದರಲ್ಲಿ ಹೆಜ್ಜೆ ಹಾಕುವ, ವಿಧಿ ನಿಯಮಗಳು ಏನೂ ಇಲ್ಲ. ನಿಮ್ಮ ಶರೀರ ಹೇಗೆ ಬೇಕಾದರೂ ಚಲಿಸಲಿ. ನರ್ತನವು ಸುಲಭವಾಗಿ ಸರಳವಾಗಿ ಸಾಗಲಿ. ಕ್ರೀಡೆಯ ಭಾವದಿಂದಿರಿ. ನಿಮಗೆ ನೀವೇ ಆನಂದಿಸಿರಿ. ನರ್ತನದ ಪ್ರಚಂಡ ಶಕ್ತಿಯ ಒಂದು ಭಾಗವಾಗಿರಿ.

ಮುಕ್ತ ನರ್ತನದಲ್ಲಿ ಎರಡು ವಿಭಾಗಗಳಿವೆ.

(21 ನಿಮಿಷಗಳ ನರ್ತನ)

ಕಣ್ಣು ಮುಚ್ಚಿಕೊಂಡು ನರ್ತಿಸಿ, ಹೆಜ್ಜೆ ಹಾಕುವುದರ ಬಗ್ಗೆ ಚಿಂತಿಸಬೇಡಿ, ಶರೀರವನ್ನು ಸಡಿಲಗೊಳಿಸಿರಿ.

ನಿಮ್ಮ ಸುಪ್ತಮನಸು ನರ್ತಿಸಲು ಆದೇಶ ಕೊಡಲಿ! ನೀವು ಹೇಗೆ ಕಾಣಿಸುತ್ತಿದ್ದೀರಿ ನಿಮ್ಮ ಬಟ್ಟೆ, ನೋಟ, ಎಂಬವುಗಳ ಬಗ್ಗೆ ಗಮನ ಹರಿಸಬೇಡಿ. ಯಾರೂ ನಿಮ್ಮನ್ನು ಗಮನಿಸುತ್ತಿಲ್ಲ, ಅದೊಂದು ಪ್ರದರ್ಶನವಲ್ಲ.

ನೀವು ನರ್ತಿಸುತ್ತಾ ಇದ್ದರೆ ನಿಮಗೆ ಆಯಾಸವೇ ಆಗುವುದಿಲ್ಲ. ಹೆಚ್ಚು ಶಕ್ತಿಯು ನಿಮ್ಮೊಳಗೇ ಉಕ್ಕಿ ಬರುತ್ತಿರುತೆ, ಹಾಗೆಯೇ ನರ್ತಿಸುವಂತೆ ಮಾಡುತ್ತದೆ. ನೀವು ನರ್ತಿಸಿದಷ್ಟೂ ಹೆಚ್ಚು ಚೈತನ್ಯ ಯುಕ್ತರಾಗುತ್ತೀರಿ!

ಬೇರೆ ಧ್ಯಾನಗಳ ತರಹ ಧ್ಯಾನದ ವಿಷಯವಾಗಿ ನರ್ತಿಸುವುದಕ್ಕಾಗಲೀ, ನರ್ತನ ಮಾಡುತಿರುವವರ ವಿಚಾರಕ್ಕಾಗಲಿ ಗಮನ ಕೊಡಬೇಡಿರಿ. ಸಾಧ್ಯವಾದಷ್ಟೂ ವೇಗವಾಗಿ ಸ್ವತಂತ್ರವಾಗಿ ನರ್ತಿಸಿರಿ. ನಿಮ್ಮನ್ನು ನೀವು ಪೂರ್ಣವಾಗಿ ಮರೆತುಬಿಡಿ ನೀವೇ ನರ್ತನವಾಗಿಬಿಡಿ! ನರ್ತನವೇ ನೀವಾಗಲು ಬಿಡಿ.

(10 ನಿಮಿಷಗಳ ಸಬ್ಗತೆ)

45 ನಿಮಿಷಗಳ ಕೊನೆಯಲ್ಲಿ ಜೋರಾದ ಜಾಗಟೆ ಶಬ್ದವು ಕೇಳಿಸುವುದು. ಎಲ್ಲಿ ಯಾವ ಸ್ಥಿತಿಯಲ್ಲಿ ಇದ್ದರೂ ಹಾಗೆಯೇ ನೆಲದ ಮೇಲೆ ಕುಳಿತುಕೊಳ್ಳಿ! ಹಾಗೆಯೇ ಮಲಗಿಕೊಳ್ಳಿ. ಮೌನ ಮತ್ತು ಅಚಲರಾಗಿ ಮಲಗಿರಿ. ಮೈಮರೆತ ಉನ್ನತ ಸ್ಥಿತಿಯಿಂದ ಸ್ಥಗಿತ ಸ್ಥಿತಿಗೆ ಬಂದೊಡನೆಯೇ, ನೀವು ಒಂದು ತರಹ ಖಾಲಿ ಖಾಲಿಯಾದ ಘಳಿಗೆಯನ್ನು ಅನುಭವಿಸುತ್ತೀರಿ. ನಿಮ್ಮ ತಲೆಯಲ್ಲಿ ಯಾವ ಆಲೋಚನೆಗಳು ಇರುವುದಿಲ್ಲ, ಕೇವಲ ಮೌನ. ಸ್ವಲ್ಪ ಹೊತ್ತಿನಲ್ಲಿಯೇ, ಆಲೋಚನೆಗಳು ಹಿಂದಿರುಗಿ ಬರಲು ಪ್ರಾರಂಭ ವಾಗುತ್ತದೆ.

ಧ್ಯಾನದ ತಂತ್ರಗಳು

ಆಲೋಚನೆಗಳನ್ನು ಶಾಂತವಾಗಿ (ಸುಮ್ಮನೆ) ಗಮನಿಸಿರಿ. ಅವುಗಳ ಜೊತೆ ಘರ್ಷಣೆ ಬೇಡ, ಅವುಗಳಲ್ಲೇ ಮುಳುಗಿಬಿಡಬೇಡಿ. ಸುಮ್ಮನೆ ಹಾಗೆಯೇ ಎಚ್ಚತ್ತಿರಿ. ನೀವು ಶಾಶ್ವತವಾದ ಶಾಂತಿಯು ನಿಮ್ಮ ಒಳಗೇ ಇರುವುದನ್ನು ಗಮನಿಸುವಿರಿ, ಆಲೋಚನೆಗಳು ಹಿಂದಿರುಗಿದ ನಂತರವೂ ಸಹ ನಿಮ್ಮಲ್ಲಿ ಹೆಚ್ಚಿನ ಶಾಂತಿಯು ಉಳಿದಿರುತದೆ. ಈ ಶಾಂತತೆಯನ್ನು ಮೌನವನ್ನು ಹಾಗೆಯೇ ದಿನಪೂರ್ತಿ ಹೊಂದಿರಿ. ನಿಮ್ಮ ನಿದ್ರೆಯೊಳಕ್ಕೂ ತೆಗೆದುಕೊಂಡು ಹೋಗಿ. ನೀವು ಎದ್ದಾಗ ಹೊಸಬರಾಗಿ, ಉಲ್ಲಾಸಗೊಂಡವರಾಗಿರುತ್ತೀರಿ.

ಈ ಧ್ಯಾನದ ವಿಷಯವಾಗಿ:

ಇದೊಂದು ಕಷ್ಕಕರವಾದ ಆದರೆ ಸುಂದರವಾದ (ಒಳ್ಳೆಯ) ಧ್ಯಾನ. ಎಲ್ಲವನ್ನೂ ಒಳಗೊಂಡಿರುವ ಧ್ಯಾನ ಇದು. ಸಾಮಾನ್ಯವಾಗಿ ನಮ್ಮ ಎಲ್ಲಾ ಧ್ಯಾನ-ತಂತ್ರಗಳು ನಿರಾಕರಣೆಯ ಆಧಾರದ ಮೇಲಿನವು - ನಾನು ದೇಹವಲ್ಲ, ನಾನು ಮನಸ್ಸಲ್ಲ ಹೀಗೆ. ಇಲ್ಲಿ ನಾವು ಅದಕ್ಕೆ ವಿರೋಧವಾದ ಎಲ್ಲವನ್ನೂ ಒಳಗೊಂಡು 'ನಾನೇ ಎಲ್ಲವೂ ಆಗಿದ್ದೇನೆ' ಎಂಬ ಒಂದು ನಿರ್ಧಾರಕ್ಕೆ ಬರುತ್ತೇವೆ.

ಆದೇಶಗಳು (ಸೂಚನೆಗಳು):

ಕಣ್ಣುಮುಚ್ಚಿ ಹೊರಗಿರುವುದನ್ನೆಲ್ಲಾ ಮನಸ್ಸಿನಲ್ಲಿಯೇ ಅವಲೋಕಿಸಿರಿ. ನಿಮ್ಮಿಂದಲೇ ಪ್ರಾರಂಭಿಸಿರಿ. ನಿಮ್ಮ ಶರೀರವನ್ನು ಗಮನಿಸಿ, ಮನಸ್ಸನ್ನೂ, ಆಲೋಚನೆಗಳನ್ನೂ, ನೀವು ಉಸಿರಾಡುವುದನ್ನೂ, ನಿಮ್ಮ ಭಾವನೆಗಳನ್ನೂ ಗಮನಿಸಿರಿ. ಅವೆಲ್ಲವನ್ನೂ ನಿಮ್ಮಲ್ಲಿಯೇ ಐಕ್ಯಗೊಳಿಸಿರಿ. ಯಾವುದನ್ನೂ ಕೇಂದ್ರೀಕರಿಸದೆ ಸುಮ್ಮನೆ ಹರಿಯುತ್ತಿರಿ. ನಿಮ್ಮ ಉಸಿರಾಟವನ್ನು ಗಮನಿಸಿರಿ. ನಿಮ್ಮ ಶರೀರದಲ್ಲಿನ ದ್ರವ ರೂಪವನ್ನು ಗಮನಿಸಿ. ನಿಮ್ಮ ಶರೀರವು ನೀವು ತಿಳಿದಂತೆ ಕಠಿಣವಾದದ್ದಲ್ಲ!

ಕಣ್ಣುಗಳನ್ನು ಮುಚ್ಚಿದಾಗ, ಶರೀರವು ಸೂಕ್ಷವಾಗಿ, ಆಕಾರದಲ್ಲಿ, ರೂಪದಲ್ಲಿ, ಬದಲಾಗುತ್ತಿರುವುದನ್ನು, ಹಿಗ್ಗುವುದನ್ನು, ಕುಗ್ಗುವುದನ್ನು ಗಮನಿಸುತ್ತೀರಿ. ಅದರ ವಿಷಯವಾಗಿ ನಮ್ಮ ಭಾವನೆ ಮಾತ್ರ ಒಂದೇ ಸಮ ಇರುತದೆ. ಅದಕ್ಕಾಗಿಯೇ ನಾವು ಈ ಬದಲಾವಣೆಗಳನ್ನು ತಿಳಿಯುವುದೇ ಇಲ್ಲ. ಆಗಾಗ್ಯೆ ಇದು ಒಂದು ನಮಗೇ ತಿಳಿಯದಂತೆ ಆಗುವಂಥದ್ದು. ನಿಮಗೆ ವಿರೋಧವಾದ ವಾತಾವರಣದಲ್ಲಿದ್ದಾಗ, ನೀವು ಭಯದಿಂದ ಕೂಡಿದಾಗ, ಒಂಟಿತನ ಅನುಭವಿಸಿದಾಗ ನಿಮಗೆ ಒಂದು ತರಹ ಕುಗ್ಗಿದ ಅನುಭವವಾಗುತ್ತೆ, ನೀವು ಸಂತೋಷವಾಗಿದ್ದಾಗ, ಪ್ರೀತಿಯಿಂದ ಕೂಡಿದಾಗ, ಶಾಂತತೆಯಿಂದಿದ್ದಾಗ ನೀವು ವಿಕಸಿಸುತಿರುವ, ವಿಶಾಲತೆಯಿಂದ ತುಂಬಿಕೊಳ್ಳುವ ಅನುಭವವು ನಿಮಗಾಗುತ್ತದೆ. ನೀವು ಎಲ್ಲವನ್ನೂ ಒಳಗೊಂಡಾಗ, ನೀವು ಅರಳುತ್ತಿರುವ ಅನುಭವವನ್ನು ಪಡೆಯುತೀರಿ.

ಸರ್ವಸ್ತವನ್ನೂ ನಿಮ್ಮ ಇರುವಿಕೆಯಲ್ಲಿ ತುಂಬಿಕೊಳ್ಳಿ. ನಾನಲ್ಲ ಅನ್ನಬೇಡಿ. ಅದರ ಬದಲು 'ನಾನೇ' ಎನ್ನಿ. ನಿಧಾನವಾಗಿ ನಿಮ್ಮಲ್ಲಿ ಕೇಂದ್ರವೆಂಬುದೇ ಇಲ್ಲವೆನಿಸುವುದು ಪ್ರಾರಂಭವಾಗುತ್ತದೆ. ಕೇಂದ್ರವೇ ಇಲ್ಲದೆ, ಅಹಂಕಾರವು ಸ್ಥಗಿತವಾಗಿ ನಿಲ್ಲಲು ಸ್ಥಳವೆಲ್ಲಿ? ಅಹಂಕಾರಕ್ಕೆ ಪ್ರತ್ಯೇಕತೆಯ ಮನೋಭಾವ ಬೇಕೇ ಬೇಕು. ಎಲ್ಲವನ್ನು ಒಳಗೊಂಡು ಒಂದಾಗಿರುವಾಗ ಅಹಂಕಾರಕ್ಕೆ ಬೇರೆ ಸ್ದಳವೆಲ್ಲಿ?

ಅಹಂಕಾರವು ಹೊರಟು ಹೋದಾಗ ಅಲ್ಲಿ ಪ್ರಜ್ಞೆಯು ಮಾತ್ರ, ಉಳಿದಿರುತ್ತದೆ. ಪ,ಜ್ಞೆಯು ಆಕಾಶವನ್ನೂ ಸೇರಿಸಿಕೊಳ್ಳುವಷ್ಟು ವಿಸ್ತೀರ್ಣವಾದಾಗ ಅದು ನಿಮ್ಮ ಒಂದು ಸೇರಿಸಿಕೊಳ್ಳುತದೆ, ಅದೇ ನಿಮ್ಮೊಳಗೆ ಆಗುತ್ತಿರುವುದು. ಬೆಳಗಿನ ಸುಗಂಧಿತ ಕಂಪೂ ಸಹ ನೀವೇ. ತಂಗಾಳಿಯು ನಿಮ್ಮೊಳಗೇ ಬೀಸುತ್ತಿದೆ ಎನ್ನಿಸುತ್ತದೆ. ಮರಗಳು, ಬಂಡೆಗಳು, ನೀವು ನೋಡಲು ಆಗದ ನಕ್ಷತ್ರಗಳೂ ಸಹ ನಿಮ್ಮೊಳಗೇ ಇವೆ!

ಧ್ಯಾನದ ತಂತ್ರಗಳು

ಇದೊಂದು ಅದ್ಬುತವಾದ ಅನುಭವ. ನೀವು ಅದನ್ನು ಅನುಭವಿಸದ ಹೊರತು ಎಲ್ಲವೂ ತಿಳಿದೀತು? ನಿಮ್ಮ ಎಲ್ಲೆಯು ಯಾವಾಗಲೂ ಕಿರಿದಾಗಿಯೇ ಇತ್ತು - ಈಗ ಅದು ಅಸಿತ್ವವನ್ನೆಲ್ಲಾ ಸೇರಿಸಿಕೊಳ್ಳುವಷ್ಟು ಬೆಳೆಯುತ್ತದೆ.

ತಂತ್ರದ ವಿಷಯವಾಗಿ:

ತಲತಲಾಂತರದಿಂದ ಹೇಳಿದೆ ಕಣ್ಣು ಮುಚ್ಚಿಕೊಂಡು, ನಿಮ್ಮ ನಿಜವಾದ ಸ್ವರೂಪವನ್ನು ಒಳಗೇ ಕಂಡುಕೊಳ್ಳಿ. ಪುರಾತನ ಕಾಲದ ಧ್ಯಾನ ತಂತ್ರಗಳ ನಿಧಿಯ ಸಂಗ್ರಹವಾಗಿದ್ದ ವಿಜ್ಞಾನ ಭೈರವ ತಂತ್ರದಲ್ಲಿ ತಿಳಿಸಿರುವುದು ಇದನ್ನೇ. ಇದನ್ನೇ ಶಿವನು ದೇವಿಗೆ ಉಪದೇಶಿಸಿದ್ದು.

ಕಣ್ಣುಗಳು ಎರಡು ಕೆಲಸಗಳನ್ನು ಮಾಡುತವೆ. ಅವು ತೆರೆಯಲ್ಪಟ್ಟಾಗ ಪ್ರಪಂಚಕ್ಕೆ ಸಂಬಂಧಿಸಿದ ಎಲ್ಲಾ ಸಮಾಚಾರಗಳನ್ನೂ ನಿಮಗೆ ಒದಗಿಸುವ ದೂತ. ನೀವು ಅವನ್ನು ಮುಚ್ಚಿಕೊಂಡಾಗ, ಅವು ನಿಮ್ಮ ಒಳ ಪ್ರಪಂಚದ ದರ್ಶನವನ್ನು ಮಾಡಿಸುತ್ತವೆ. ಆದರೆ ಕಣ್ಣುಗಳನ್ನು ಮುಚ್ಚುವುದು ಎಂದ ಮಾತ್ರಕ್ಕೆ ಸುಮ್ಮನೆ ಕಣ್ಣು ರೆಪ್ಪೆಗಳನ್ನು ಮುಚ್ಚುವುದಲ್ಲ. ನಿಮ್ಮ ಕಣ್ಣುಗಳನ್ನು ಮುಚ್ಚಿರಿ ಎಂದರೆ, ನಾವು ಸಾಮಾನ್ಯವಾಗಿ ರೆಪ್ಪೆಗಳನ್ನು ಮಾತ್ರ ಮುಚ್ಚುವವರು. ಮುಚ್ಚಿದ ಕಣ್ಣು ರೆಪ್ಪೆಗಳ ಹಿಂದೆ, ನಾವು ಹೊರ ಪ್ರಪಂಚದ ಚಿತ್ರಗಳನ್ನು ನೋಡುತ್ತಲೇ ಇರುತ್ತೇವೆ, ಅಂದರೆ ಒಳಗಿನ ಟಿ.ವಿ. ಸ್ವಿಚ್ಚನ್ನು ಹಾಕಿಯೇ ಇರುತ್ತೇವೆ! ನಮ್ಮ ಕಣ್ಣುಗಳನ್ನು ನಿಜವಾಗಿಯೂ ಮುಚ್ಚಿರುವುದೇ ಇಲ್ಲ. ಕಣ್ಣುಗಳು ಚಲಿಸದಂತೆ ಮಾಡಲು ಬಹಳ ಪರಿಣಾಮಕಾರಿಯಾದ ಒಂದು ದಾರಿ ಇದೆ. ನಿಮ್ಮ ಕಣ್ಣು ಗುಡ್ಡೆಗಳು ಕಲ್ಲುಗಳಾಗಿ ಬದಲಾಗಿವೆ ಎಂದು ಭಾವಿಸಿಕೊಳ್ಳಿರಿ ಅಷ್ಟೆ! ನಿಮ್ಮ ಕಣ್ಣು ಗುಡ್ಡೆಗಳ ಜಾಗದಲ್ಲಿ ಈಗ ನೀವು ನುಣುಪಾದ ದುಂಡಗಿನ ಕಲ್ಲುಗಳ ಗುಪ್ಪೆಗಳನ್ನು ಹೊಂದಿದ್ದೀರಿ! ಅದನ್ನು ಸ್ಪಷ್ಟವಾಗಿ ನಿಜವಾಗಿಯೂ ಕಾಣುತಿರುವಂತೆ ಕಲ್ಪಿಸಿ, ಮನಸ್ಸಿನಲ್ಲಿಯೇ ಅನಭವಿಸಿ ತಿಳಿಯಿರಿ. ನೀವು ಹಾಗೆ ಮಾಡಿದ ಕೂಡಲೇ, ಕೇವಲ ನಿಮ್ಮ ಕಣ್ಣುಗಳ ಚಲನೆ ನಿಲ್ಲುವುದು ಮಾತ್ರವಲ್ಲದೆ, ನಿಮ್ಮ ಆಲೋಚನೆಗಳೂ ಸಹ ನಿಂತೊಡನೆಯೇ, ನಿಮ್ಮ ಆಲೋಚನೆಗಳೂ ನಿಧಾನವಾಗಿ ಮಹತ್ತರವಾಗಿ ಕಡಿಮೆಯಾಗಿಬಿಡುತವೆ.

(ಸೂಚನೆಗಳು)

ಕಣ್ಣುಗಳನ್ನು ಮುಚ್ಚಿ, ನಿಮ್ಮ ಕಣ್ಣು ಗುಡ್ಡೆಗಳು ಕಲ್ಲುಗಳಾಗಿ ಮಾರ್ಪಟ್ಟಿದೆ ಎಂದು ಕಲಿಸಿಕೊಳ್ಳಿರಿ.

ಮತ್ತೇನನ್ನೂ ಮಾಡಬೇಡಿರಿ. ಸುಮ್ಮನೆ ಅದೇ ಸ್ಥಿತಿಯಲ್ಲಿರಲು ಯತ್ನಿಸಿ. ಅದು ಅಷ್ಟು ಸುಲಭವೂ ಆಗುಲ್ಲ. ಕೆಲವು ಕ್ಷಣಗಳ ಕಾಲ ನೀವು ಆ ಸ್ಥಿತಿಯಲ್ಲಿ ನಿಲ್ಲಬೇಕಾದರೂ ನೀವು ವಾರಗಟ್ಟಲೆ ಅಭ್ಯಾಸ ಮಾಡಬೇಕಾಗಬಹುದು. ಆದರೆ ಅದಕ್ಕಾಗಿ ಪ್ರಯತ್ತಿಸುವುದು ಸಾರ್ಥಕವೇ ಸರಿ. ಏಕೆಂದರೆ, ಮೊದಲ ಸಾರಿ ನೀವು ನಿಮ್ಮೊಳಗೇ ಹುಡುಕುತಿದ್ದೀರಿ (ವೀಕ್ಷಿಸುತ್ತಿದ್ದೀರಿ).

ನೀವು ನಿಮ್ಮ ಶರೀರವನ್ನು ಆಂತರ್ಯದಿಂದ ನೋಡಿರಲಿಲ್ಲ. ಈಗ, ನೀವು ನಿಮ್ಮ ಅಂಗಾಂಗಗಳನ್ನು ಒಳಗಿನಿಂದಲೇ ನೋಡಲು ಯತ್ತಿಸಿರಿ. ನೀವು ನಿಮ್ಮ ತೋಳನ್ನು ಚಲಿಸಿದಾಗ, ನೀವು ಅದನ್ನು ಹೊರಗಿನಿಂದ ಮಾತ್ರ ಗಮನಿಸುತ್ತಿದ್ದಿರಿ. ಈಗ ಅದನ್ನು ಒಳಗಿನಿಂದಲೇ ಗಮನಿಸಿರಿ. ನಿಮ್ಮ ಶರೀರದಲ್ಲೆಲ್ಲಾ ಒಳಗಿನಿಂದಲೇ ಸಂಚರಿಸಿರಿ.

ನಿಮ್ಮ ಒಂದು ಬೆರಳಿನ ತುದಿಯಿಂದ ಪ್ರಾರಂಭಿಸಿರಿ. ತೀವ್ರವಾಗಿ ಅದನ್ನು ಅರಿತುಕೊಳ್ಳಿರಿ. ಬೆರಳಿನ ತುದಿಯನ್ನು ಹೊರತು ಮತ್ತೇನನ್ನೂ ಗಮನಿಸದಿರಿ!

ನಂತರ ನಿಧಾನವಾಗಿ, ಮೇಲಕ್ಕೆ ಚಲಿಸಿರಿ, ತೋಳಿನವರೆಗೂ, ಕೈಕಾಲುಗಳಿಗೆ ನಿಮ್ಮ ಗಮನ ಹೋಗಲಿ, ಪ್ರತಿ ಭಾಗಕ್ಕೂ ಪೂರ್ಣವಾಗಿ ಹೋಗಿ. ತೀವ್ರವಾದ ಮನಸಿನ ಸೂಕ್ಷತೆಯಿಂದ ಶರೀರದ ಪ,ತಿ ಭಾಗವನ್ನೂ ಗಮನಿಸಿದ ಅನುಭವವು ನಿಮ್ಮಲ್ಲಿ ಉಂಟಾಗುತ್ತದೆ.

ಒಳಗಿನಿಂದಲೇ ನಿಮ್ಮ ಶರೀರವನ್ನು ಅನುಭವಿಸಿದ ಮೇಲೆ, ನಿಮಗೇ ತಿಳಿಯದಂತೆ ನೀವು ನಿಮ್ಮ ಶರೀರವು ಅಲ್ಲವೆನ್ನುವೆಂಬುದನ್ನು ಮಾಡಿಕೊಳ್ಳುವಿರಿ. ನೀವು ನಿಮ್ಮ ಶರೀರವನ್ನು ಸಾಕ್ಷಿಯಾಗಿ ನೋಡುತ್ತೀರಿ, ಆಗ ನಿಮ್ಮ ಶರೀರವೇ ನೀವಾಗಲು ಹೇಗೆ ಸಾಧ್ಯ? ನೀವು ನಿಮ್ಮ ಶರೀರ ಎನ್ನುವ ಭ್ರಮೆಯಿಂದ ದೂರಾಗುತ್ತೀರಿ. ನಿಮ್ಮನ್ನು ಶರೀರದೊಂದಿಗೆ ಗುರುತಿಸುವುದನ್ನು ಬಿಟ್ಟುಬಿಡುತೀರಿ.

ಈಗ ನೀವು ಆಳವಾಗಿ ಒಳಹೋಗಲು ಅಂತರಾಳಕ್ಕಿಳಿಯಲು ಸ್ವತಂತ್ರರಿದ್ದೀರಿ. ನಿಮ್ಮ ಮನಸ್ಸನ್ನು ಒಳಗಿನಿಂದ ನೋಡಲು ತೊಡಗುತೀರಿ. ಇದು ಸುಲಭವಲ್ಲ. ಪ್ರಾರಂಭದಲ್ಲಿ ನೀವೆಲ್ಲಾ ನೋಡುತಿರುವುದು, ನಿಮ್ಮ ತಲೆಯ ಒಳಗಡೆ ಮಾತ್ರ. ಆದರೆ ಅದು ನಿಮ್ಮ ಮನಸ್ಸಲ್ಲ. ನಿಮ್ಮ ಮನಸ್ಸು ನಿಮ್ಮ ಮೆದುಳಿಗಿಂತ ಬೇರೆ. ಸ್ವಲ್ಪ ಯೋಚಿಸಿ ನೋಡಿ, ಸಾಮಾನ್ಯವಾಗಿ ನಿಮ್ಮ ಮನಸ್ಸು ಏನೆಂದು ನೀವು ಕಲ್ಪಿಸಿಕೊಳ್ಳುತೀರಿ. ನೀವು ಹೊರಗಿನಿಂದ ನೋಡುತಿದ್ದೀರಿ. ಈಗ ಅದನ್ನು ತಲೆ ಕೆಳಗು ಮಾಡಿ ಅಂದರೆ, ಒಳಗಿನಿಂದ ನೋಡಿ. ಮನಸ್ಸನ್ನು ಪ್ರವೇಶಿಸಿ, ಅದನ್ನು ಒಳಗಿನಿಂದ ನೋಡಲು ಯತ್ನಿಸಿರಿ.

ಅಭ್ಯಾಸದಿಂದ ಅದು ಸಾಧ್ಯವಾಗುತ್ತದೆ. ನಿಮ್ಮ ಶರೀರವನ್ನು ನಿಮ್ಮಿಂದ ಬೇರೆ ಎಂದು ನೋಡಿದಂತೆಯೇ, ನಿಮ್ಮ ಮನಸ್ಸನ್ನೂ ನಿಮ್ಮಿಂದ ಬೇರೆ ಎಂದು ನೋಡುತೀರಿ. ನೀವು ಸಾಕ್ಷಿ ಮಾತ್ರರು.

ನೀವು ನಿಮ್ಮ ಶರೀರವು ಅಲ್ಲ, ನಿಮ್ಮ ಮನಸ್ಸೂ ಅಲ್ಲ, ಹಾಗಾದರೆ ನೀವಾರು? ನೀವು ಅವೆರಡನ್ನೂ ಸಾಕ್ಷೀಭಾವದಿಂದ ನೋಡುತಿರುವವರು. ಅದೇ ನಿಮ್ಮ ನಿಜವಾದ ನೀವು. ನಿಮ್ಮ ನಿಜವಾದ ಆತ್ಮವನ್ನು ಸಾಕ್ಷೀಭಾವದಿಂದ ನೋಡಲಾರಿರಿ, ಕಾರಣ ನೀವು ಅದರಿಂದ ಬೇರೆ ಅಲ್ಲ. ಯಾವುದನ್ನು ಸಾಕ್ಷೀಭಾವದಿಂದ ನೀವು ನೋಡಲಾಗುವುದಿಲ್ಲವೋ ಅದೇ ನೀವು.

ಈ ತಂತ್ರಗಳ ವಿಷಯವಾಗಿ ತಾಳ್ಮೆಯಿಂದಿರಿ, ಶೀಘ್ರ ಪ್ರತಿಫಲವನ್ನು ನಿರೀಕ್ಷಿಸಬೇಡಿರಿ. ಪವಾಡಗಳು, (ಅದ್ಭುತ ಚಮತ್ಕಾರಗಳು) ಮೊದಲಿನ ದಿವಸವೇ ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ! ಎದೆಗುಂದಬೇಡಿರಿ.

ನಿಮಗೆ ಅನುಭವವಾಗ, ನೀವು ಮಾಡಿದ ಪ್ರಯತ್ನಗಳಿಗೆಲ್ಲಾ ಯೋಗ್ಯ (ಶ್ರೇಷ್ಠ) ಬೆಲೆ ಸಿಕ್ಕಂತೆ ಆಗುತದೆ. (ಸಾರ್ಥಕವಾದಂತಾಗುತದೆ) ಅದು ನಿಮ್ಮ ಒಳಗಡೆಯೇ ಒಂದು ಶಾಶ್ವತವಾದ ಬದಲಾವಣೆಯನ್ನು ಉಂಟು ಮಾಡುತ್ತದೆ. ಸಿದ್ದರಾಗಿರಿ!

ತಂತ್ರದ ವಿಷಯ:

ಪ್ರತಿ ಕ್ಷಣದಲ್ಲೂ ಪ್ರತಿ ಕಾರ್ಯದಲ್ಲಿಯೂ ಸಹ ನಾವು ನಮ್ಮ ಬಗ್ಗೆ ಅರಿವುಳ್ಳವರಾಗಿರಬೇಕೆಂಬುದನ್ನು ಈ ತಂತ್ರವು ತಿಳಿಸುವುದು. ಪಶ್ಚಿಮ ದೇಶದಲ್ಲಿನ ಹೆಸರಾಂತ ಗುರು ಗುರ್ ಜಿಎಫ್ (Gurdjieff) ಎಂಬುವವರು ಪ,ಸಿದ್ದಿಪಡಿಸಿದ ಈ ತಂತ್ರವು ಮೂಲತಃ ವಿಜ್ಞಾನ ಭೈರವ ತಂತ್ರದಿಂದ ತೆಗೆದುಕೊಂಡಂಥದ್ದು.

ಸೂಚನೆಗಳು (Instructions) :

ನೀವೆಲ್ಲಾ ಮಾಡಬೇಕಾದ್ದು ಏನೆಂದರೆ, ನಿಮ್ಮನ್ನು ನೀವು ನೆನಪಿಸಿಕೊಳ್ಳಿರಿ, ಭುಜಿಸುವಾಗ, ಕುಡಿಯುವಾಗ, ನಡೆಯುವಾಗ, ಮಾತನಾಡುವಾಗ (ಸದಾ) ನಾನು ಇದ್ದೇನೆ ಎಂಬುದನ್ನು ನೆನಪಿಸಿಕೊಳ್ಳಿರಿ. ನೀವಿದ್ದೀರಿ ಎಂಬುದನ್ನು ಅರಿತಿರಿ, ಹಾಗೂ ನೀವು ಯಾವಾಗ್ಯೂ ಶಾಶ್ವತವಾಗಿ ನಿಮ್ಮೊಳಗೇ ಇರುವ ಚೈತನ್ಯವೆಂಬುದನ್ನು ಕಂಡುಕೊಳ್ಳಿ. ಇದು ಸರಳವಾದದ್ದೆಂದು ಕಲ್ಪಿಸಿಕೊಳ್ಳಬೇಡಿ. ನಮ್ಮ ಅರಿವನ್ನು ನಮ್ಮ ಮೇಲೆಯೇ ಇಟ್ಟು ಕಾಪಾಡಿಕೊಳ್ಳುವುದು ಕೆಲವು ಕ್ಷಣಗಳಿಗಿಂತ ಹೆಚ್ಚು ಸಮಯ ಸಾಧ್ಯವಾಗುವುದಿಲ್ಲ. ಆಗ ನಾವು ಮರೆತುಬಿಡುತ್ತೇವೆ. ನೀವು ನೆನಪಿಸಿಕೊಳ್ಳುತ್ತಿದ್ದೀರೆಂದು ಭಾವಿಸಿರುವಿರಿ ಅಷ್ಟೆ ಆದರೆ ನಿಮ್ಮ ಮನಸ್ಸು ಬೇರೆಯ ಆಲೋಚನೆಯ ಕಡೆಗೆ ಹಾರಿ ಹೋಗಿ ಬಿಟ್ಟಿರುತ್ತದೆ!

ತನ್ನನ್ನು ತಾನು ನೆನಪಿಸಿಕೊಳ್ಳುವುದೆಂದರೆ, ಆಲೋಚಿಸುವುದು ಅಲ್ಲ. ಅದು ಕೇವಲ ಮೂಲಾಂಶವನ್ನು ಬಿಟ್ಟಂತೆ. ಇದೇ ರೀತಿ, ನಾವು ಸಾಧಾರಣವಾಗಿ ಮುಖಾಯಗೊಳಿಸುವುದು (ಅದೇ) ಪದಗಳನ್ನು ಪುನರುಚ್ಚರಿಸುವಿಕೆ, ನಾನಿದ್ದೇನೆ, ನಾನಿದ್ದೇನೆ. ಪದಗಳೇ ಅನುಭವವಲ್ಲ. ಅದನ್ನು ಶಬ್ದೀಕರಿಸಬೇಡಿರಿ. ಸುಮ್ಮನೆ ಅನುಭವಿಸಿ, ನಾನಿದ್ದೇನೆ. ಅದರ ವಿಷಯವಾಗಿ ಆಲೋಚಿಸಬೇಡಿರಿ.

ನೀವು ನಡೆಯುವಾಗ, ಕೆಲವು ಕ್ಷಣ ನಿಂತು, ನೀವಿದ್ದೀರೆಂಬುದನ್ನು ಗಮನಿಸಿರಿ. ಈ ಅರಿವನ್ನು ಕೊಂಡೊಯ್ಯಿರಿ. ನೀವು ನಿಮ್ಮ ಮುಖದ ಮೇಲೆ ಸೂರ್ಯನನ್ನು ಅನುಭವಿಸುತ್ತಿದ್ದೀರೆಂದೂ, ಅನುಭವಿಸುತಿದ್ದೀರೆಂದೂ ಅರಿಯಿರಿ. ಇವನ್ನೆಲ್ಲಾ ಅನುಭವಿಸುತ್ತಿರುವವನನ್ನು ಅರಿತುಕೊಳ್ಳಿ. ಸುಮ್ಮನೆ ತಿಳಿಯಿರಿ, ನಾನು ಇದ್ದೇನೆ (ಎಂದು). ಕೆಲವೇ ಕ್ಷಣ, ನೀವು ನಿಮ್ಮಲ್ಲಿಯೇ ಎಸೆಯಲ್ಪಟ್ಟವರಾಗುತ್ತೀರಿ (ಸೇರಲ್ಪಟ್ಟವರಾಗುತ್ತೀರಿ)! ನೀವು ಶಾಂತಿಯ ಸತ್ಯತೆಯ ದರ್ಶನವನ್ನು ಒಂದು ಕ್ಷಣ ಪಡೆದವರಾಗುತ್ತೀರಿ. ಇದನ್ನು ಸುಮ್ಮನೆ ಪದಗಳಲ್ಲಿ (ಶಬ್ದಗಳಲ್ಲಿ) ವರ್ಣಿಸಲು ಅಸಾಧ್ಯ, ಅದನ್ನು ನೀವು (ಕೇವಲ) ಅನುಭವಿಸಬಹುದು ಅಷ್ಟೆ. ನೀವು ಏನನ್ನಾದರೂ ಸ್ಪರ್ಶಿಸಿದಾಗ, ಆ ಸ್ಪರ್ಶವನ್ನು ಮುಟ್ಟುವಿಕೆಯನ್ನು ಅನುಭವಿಸಿರಿ. ಯಾರು ಮುಟ್ಟಲ್ಪಡುತ್ತಿದ್ದಾರೆ ಎಂಬುವುದನ್ನು ಅನುಭವಿಸಿ. ನಿಮ್ಮ ಪ್ರಜ್ಞೆಯು ಇನ್ನೂ ಚುರುಕಾಗುತ್ತದೆ. ಈ ಪ್ರಜ್ಞೆಯನ್ನು ಸದಾಕಾಲದಲ್ಲಿಯೂ ನಿಮ್ಮೊಂದಿಗೇ ಇಟ್ಟುಕೊಳ್ಳಿರಿ. ಇದೊಂದು ಯಾವಾಗ-ಎಲ್ಲಿ ಬೇಕಾದರೂ ಮಾಡುವ ತಂತ್ರ. ಸರಿಯಾಗಿ ಹೇಳಬೇಕೆಂದರೆ ಅದನ್ನು ಸದಾಕಾಲ ಧ್ಯಾನವೆಂದು ಮಾಡಿಕೊಳ್ಳಿರಿ.

ಚಿತ್ತಾಕಾಶ ಧ್ಯಾನ

ಧ್ಯಾನದ ವಿಚಾರ:

ಆಕಾಶದ ಮೇಲೆ ಧ್ಯಾನವೆಂದರೆ ಶೂನ್ಯತ್ವದ ಮೇಲೆ ಧ್ಯಾನ. ಸ್ವಚ್ಛ ನೀಲಿ ಬಣ್ಣದ ಆಕಾಶವೆಂದರೆ ಸಂಪೂರ್ಣ ಖಾಲಿ. ಅದನ್ನು ಕುರಿತು ಧ್ಯಾನ ಮಾಡುವುದೆಂದರೆ ಸಷ್ಠತೆಯೊಳಗೆ ಪ್ರವೇಶಿಸಿದಂತೆಯೇ.

ಸೂಚನೆಗಳು (Instructions) :

ಮೋಡಗಳಿಲ್ಲದ ವಿಶಾಲವಾದ ಆಕಾಶವು ಪೂರ್ಣ ಸ್ವಚ್ಛ ನೀಲಿಯಾಗಿರುವ ದಿನವನ್ನು ಆರಿಸಿಕೊಳ್ಳಿ. ಶಾಂತವಾದ ಜಾಗದಲ್ಲಿ ಮೇಲ್ಮುಖವಾಗಿ ಮಲಗಿ ಆಕಾಶವನ್ನು ನೋಡುತ್ತಾ ಇರಿ.

ಕಣ್ಣಿನಲ್ಲಿ ನೀರು ಬಂದರೂ ಸಹ ಕಣ್ಣು ಮಿಟುಕಿಸಬೇಡಿರಿ. ಹಾಗೆಯೇ ದೃಷ್ಟಿಸಿ ನೋಡುತ್ತೀರಿ. ನಿಮ್ಮ ಕಣ್ಣುಗಳು ಒತಿದಂತಾಗಿ ನೋವಾಗಬಹುದು; ನೋವನ್ನು ನಿರ್ಲಕ್ಷ್ಯ ಮಾಡಿರಿ. ಒಮ್ಮೆ ಕಣ್ಣೇರು ಕಣ್ಣುಗಳನ್ನು ಶುದ್ಧಗೊಳಿಸಿದ ನಂತರ, ನೀವು ದೃಷ್ಟಿಸಿ ನೋಡಲು ಸುಲಭವಾಗುತ್ತದೆ. ಆಕಾಶದ ವಿಚಾರವಾಗಿ ಚಿಂತಿಸತೊಡಗಬೇಡಿ! ಆಕಾಶವು ಎಷ್ಟು ಆಶ್ಚರ್ಯಕರವಾಗಿ ಮತ್ತು ನೀಲಿ ಬಣ್ಣದಿಂದ ಕೂಡಿ ಕಾಣುತಲಿದೆ ಎಂದೂ ಆಲೋಚಿಸದಿರಿ. ನೀವು ಅದರ ವಿಚಾರ ಚಿಂತಿಸುತ್ತಿದ್ದಂತೆಯೇ ನೀವು ಆಕಾಶದಿಂದ ಬೇರ್ಪಡುತ್ತೀರಿ. ನಿಮ್ಮ ಕೆಲಸ ಪ್ರವೇಶಿಸಬೇಕು. ಗುರಿಯೇ ಇಲ್ಲ

ಕೇವಲ ನೋಡುವುದರಿಂದ, ಆಕಾಶದ ಸ್ಪಷ್ಟತೆಯನ್ನು ಅನುಭವಿಸಿರಿ. ನೀಲಿ ಆಕಾಶದ ಪರಿಶುದ್ದತೆಯನ್ನು ಗಮನಿಸಿರಿ. ಆ ಸ್ಪಷ್ಟತೆಯಲ್ಲಿ ಸೇರಿ ಹೋಗಿರಿ.

Part 2: Meditation is for You

ಆಕಾಶದೊಳಗೆ ಇನ್ನೂ ಆಳವಾಗಿ ಪ್ರವೇಶಿಸಿರಿ. ಇನ್ನೂ ಆಳವಾಗಿ ಮತ್ತೂ ಆಳ ವಾಗಿ ಆಕಾಶವನ್ನೇ ವೀಕ್ಷಿಸುತ್ತಿರಿ, ಏನನ್ನೋ ಇನ್ನೂ ಮತ್ತೂ ಹುಡುಕುವವರಂತೆ.

ಹಾಗೆಯೇ ಅದರೊಂದಿಗೆ ಒಂದಾಗುವವರೆಗೆ ದೃಷ್ಟಿಸುತ್ತಲೇ ಇರಿ. ನೀವು ಅದರೊಂದಿಗೆ ಅದರೊಂದಿಗೆ ಒಂದಾದಾಗ, ನಿಮಗೇ ತಿಳಿದುಬಿಡುತ್ತದೆ. ಅದಕ್ಕೆ ಒಂದು ಗಂಟೆ ಅಥವಾ ಅದಕ್ಕೂ ಹೆಚ್ಚು ಕಾಲ ಬೇಕಾಗುತ್ತೆ. (ಅಷ್ಟಕ್ಷೇ) ನಿಲ್ಲಿಸಿಬಿಡಬೇಡಿ. ನಿಮ್ಮ ಗಮನವು ಬೇರೆಡೆಗೆ ಹೋಗಗೊಡಬೇಡಿ. ಕಣ್ಣುಗಳನ್ನು ಆಕಾಶದಿಂದ ಹೊರ ತೆಗೆಯಬೇಡಿ.

ಇಷ್ಟಾದ ನಂತರ, ಕಣ್ಣುಗಳನ್ನು ಮುಚ್ಚಿಕೊಳ್ಳಿ. ಐಕ್ಯತೆಯು ನಿಜವಾಗಿಯೂ ಆಗಿದ್ದಲ್ಲಿ ನೀವು ಆಕಾಶವನ್ನು ನಿಮ್ಮೊಳಗೇ ಇರುವುದಾಗಿ ಅನುಭವಿಸುತ್ತೀರಿ. ಆ ಆಕಾಶವು ನಿಜವಾಗಿಯೂ ನಿಮ್ದೊಳಗೆ ಪ್ರವೇಶಿಸಿರುವುದಾಗಿ ಅನುಭವಿಸುತ್ತೀರಿ! ನಿಮ್ಜ ಮನಸ್ಸು ಇಲ್ಲದಂತಾಗುತ್ತದೆ, ನಿಮ್ಮ ಆಲೋಚನೆಗಳೂ ಇಲ್ಲದಂತಾಗುತ್ತದೆ. ಆ ಆಕಾಶದಲ್ಲೇ ಉಳಿಯಿರಿ (ಸ್ಥಿತರಾಗಿರಿ)

ಪ್ರಾರಂಭದಲ್ಲಿ (ಹಾಗಾಗುವುದು) - ಕೇವಲ ಕೆಲವು ಕ್ಷಣಗಳ ಕಾಲ ಮಾತ್ರ. ಆದರೆ, ಅಭ್ಯಾಸ ಮಾಡಿದಂತೆಲ್ಲಾ ಈ ಸ್ಥಿತಿಯನ್ನು ಬಹಳ ಕಾಲದವರೆಗೆ ಅನುಭವಿಸುತ್ತೀರಿ. ನಿಮ್ಮೊಳಗೆ ಪೂರ್ಣ ಸ್ವಚ್ಛ ಆಕಾಶದೊಂದಿಗೆ ನೀವು ಮನಸ್ಸೇ ಇಲ್ಲದ ಸ್ಥಿತಿಯನ್ನು ಅನುಭವಿಸುತ್ತೀರಿ.

ಹೃದಯ ಕಮಲ

ತಂತ್ರದ ವಿಚಾರ

ಇದು ನಿಮ್ಮ ಹೃದಯ ಕೇಂದ್ರವನ್ನು ತೆರೆಯಿಸುವಂತಹ ಒಂದು ಹೃದಯವು ಸತ್ಯತೆಯನ್ನು ಪ್ರವೇಶಿಸಲು ಹೆಬ್ಬಾಗಿಲು ಇದ್ದ ಹಾಗೆ. ಈ ಧ್ಯಾನವು

ನೀವು ಒಬ್ಬ ವಿಚಾರಶೀಲರಾದ ವ್ಯಕ್ತಿಯಾಗಿದ್ದರೆ (ಬುದ್ದಿ ಪ್ರಾಧಾನ್ಯದವ ರಾಗಿದ್ದರೆ) (Head Oriented Person), ನೀವು ಭಾವನೆಗಳಿಗಿಂತ, ಬುದ್ದಿಯನ್ನೇ ಉಪಯುಕ್ತವಾಗುತ್ತದೆ. ನಿಜವಾಗಿಯೂ ನಾವೆಲ್ಲರೂ ಹೆಚ್ಚೂ ಕಡಿಮೆ ಬುದ್ದಿ ಪಾ,ಧಾನ್ಯವಾಗಿಟ್ಟುಕೊಂಡವರೇ. ಈಗಿನ ಪ್ರಪಂಚದಲ್ಲಿ ಹೃದಯ ಪ್ರಾಧಾನ್ಯ ವಾಗಿಟ್ಟುಕೊಂಡವರು ಬಹಳ ಕಾಲ ಬದುಕಲು ಸಾಧ್ಯವಿಲ್ಲ. ಆದ್ದರಿಂದಲೇ ನಾವೆಲ್ಲಾ ಗಟ್ಟಿ ಮನಸ್ಸಿನವರಾಗಿದ್ದೇವೆ. ನಾವು ಸಾಕಷ್ಟು ಕೆಲಸವನ್ನು ನಮ್ಮ ಹೃದಯಕ್ಕೆ ಕೊಡುತ್ತಿಲ್ಲವಾಗಿ, ನಮ್ಮ ಹೃದಯಕೇಂದ್ರ ಬಲಹೀನವಾಗಿದೆ. ನಾವು ಹೃದಯದಿಂದ ಕಾರ್ಯ ನಡೆಸುತ್ತಿಲ್ಲ. ಹೃದಯದಿಂದ ನಮ್ಮ ಕೆಲಸ ಮಾಡುತ್ತಿಲ್ಲ. ಹೃದಯದ ಮುಖಾಂತರ ಪ್ರಪಂಚವನ್ನು ನೀವು ನೋಡಿದಿರಾದರೆ, ಪ್ರಪಂಚದಲ್ಲಿ ಐಕ್ಯತೆ ಇರುವುದನ್ನು ಕಾಣುತೀರಿ, ಮನಸ್ಸು ತಡೆ ಬೇಲಿಯನ್ನು ಹಾಕಿದರೆ ಹೃದಯವು ಅದನ್ನು ಇಲ್ಲದಂತೆ ಮಾಡುತ್ತದೆ. ಹ್ಬದಯ ಕೇಂದ್ರವನ್ನು ಕಾರ್ಯೋನ್ನುಖವನ್ನಾಗಿ ಮಾಡಿದರೆ, ಸಹಜವಾಗಿ ಪ್ರೀತಿಯು ರಭಸವಾಗಿ ನಿಮ್ಮ ಜೀವನದಲ್ಲಿ ಹರಿಯುವುದನ್ನು ಕಾಣುವಿರಿ.

ಸೋಜಿಗವೆನಿಸಿದರೂ ಸುಲಭವೇ!

ನೀವು ಮಾಡಬೇಕಾದ ಒಂದೇ ಒಂದು ಕೆಲಸವೆಂದರೆ ನಿಮ್ಮ ಶಿರ (ತಲೆ) ಇಲ್ಲವೆಂದು ಕಲ್ಪಿಸಿಕೊಳ್ಳಿರಿ! ಇದು ತಮಾಷೆಯಲ್ಲ; ಕಷ್ಟಕರವಾದ ತಂತ್ರವೇ. ನೀವು ಶಿರವಿಲ್ಲದವರೆಂದುಕೊಂಡೇ, ನಡೆಯಿರಿ, ಕುಳಿತುಕೊಳ್ಳಿ. ನಿಮ್ಮ ತಲೆ ಮಾಯವಾದಂತೆ ಭಾವಿಸಿಕೊಳ್ಳಿರಿ. ಕೇವಲ ನಿಮ್ಜ ಕೇಂದ್ರೀಕರಿಸಿ. ಪ್ರಾರಂಭದಲ್ಲಿ ಅದೊಂದು ನಾಟಕೀಯವಾಗಿರುತದೆ. ವಿಲಕ್ಷಣವಾಗಿಯೂ, ಗುರಿಯೇ ಇಲ್ಲದ್ದು (ಆರ್ಥವಿಲ್ಲದ್ದು) ಎನಿಸುತ್ತದೆ.

ನನ್ನ ಇಂದ್ರಿಯಗಳಿಗೆಲ್ಲಾ ಏನಾಗಿಹೋಗಿದೆ? ನಾನು ಹೇಗೆ ನೋಡಲಿ; ಹೇಗೆ ಕೇಳಲಿ, ಹೇಗೆ ಮಾತನಾಡಲಿ (ಹೀಗೆಲ್ಲಾ) ಕೇಳುವಿರಿ.

ನಿಮ್ಜ ಇಂದ್ರಿಯಗಳು ಮಾಯವಾಗಿ ಹೋಗಿಲ್ಲ. ಅವೆಲ್ಲವೂ ಹೃದಯ ಪ್ರವೇಶಕ್ಕೆ ಜಾರಿಕೊಂಡಿವೆ ಅಷೆ!

ಕುರುಡರು ತಮ್ಮ ಕೈಗಳ ಸಹಾಯದಿಂದ ಹೇಗೆ 'ನೋಡುತಾರೋ' ಹಾಗೆ, ನೀವು ಹೃದಯವನ್ನು ಉಪಯೋಗಿಸಿಕೊಳ್ಳುತ್ತೀರಿ. ನೀವು ಹೃದಯ ಪೂರ್ವಕವಾಗಿ ಹೃದಯದಿಂದಲೇ ನೋಡುತೀರಿ. ಇದನ್ನು ಪ್ರಯತ್ನಿಸಿ. ನೀವು ಮಾಡಬಲ್ಲಿರಿ. ಒಂದು ಕನ್ನಡಿಯ ಮುಂದೆ ನಿಂತು ನಿಮ್ಮ ಕಣ್ಣುಗಳನ್ನು ಆಳವಾಗಿ ನೋಡಿ. ನೀವು ಹೃದಯದಿಂದ ನೋಡುತಿರುವಂತೆ ಭಾವಿಸಿಕೊಳ್ಳಿ .

ಪ್ರತಿಯೊಂದು ಕೃತಿಯನ್ನು ನಿಮ್ಜ ಹೃದಯವು ನಿಯಂತ್ರಿಸಲು ಬಿಡಿ. ನಿಮ್ಮ ಕೆಲಸಗಳಲ್ಲಿ ಪ್ರೀತಿಯು ತುಂಬಿರುವುದನ್ನು ಅನುಭವಿಸಿ.

ಆಗ ನಿಮ್ಮ ಹೃದಯವು ಅರಳುತ್ತಿರುವುದನ್ನು ಅನುಭವಿಸುತ್ತೀರಿ, ನಿಜವಾಗಿಯೂ ಅರಳುತಿದೆ. ನೀವು ಒಳಗಿನಿಂದಲೇ ವಿಕಸಿಸುತಿರುವುದನ್ನು ಅನುಭವಿಸುತ್ತೀರಿ. ಅನಂತರ ಪ್ರೀತಿಯು ಉಕ್ಕಿ ಬದುತ್ತಿರುವುದನ್ನೂ ಕಾಣುವಿರಿ. ನಿಮ್ಮ ಪ,ತಿಯೊಂದು ಕೆಲಸವೂ ಪ್ರೇಮಮಯವಾಗುತಿರುವುದನ್ನು ಕಾಣುವಿರಿ. ಅದಕ್ಕಾಗಿಯೇ ಯಾರಾದರೂ ಪ್ರೀತಿಯಲ್ಲಿ ಮುಳುಗಿದ್ದಾಗ, ಅವನ ತಲೆ ಕೆಲಸ ಮಾಡುತಿಲ್ಲವೆಂದು ಹೇಳುತ್ತೇವೆ! (ಅವನಿಗೆ ಯಾವಾಗ ನೀವು ಪ್ರೀತಿಯಿಂದ ತುಂಬಿ ಹರಿಯುತ್ತೀರೋ, ಯಾವಾಗ ನಿಮ್ಮ ಹೃದಯವು ಪ್ರೀತಿಯಿಂದ ಉಕ್ಕಿ ಹರಿಯುತ್ತಿರುತದೆಯೋ, ಆಗ ನೀವು ಬುದ್ಧಿಯನ್ನು ಕಳೆದುಕೊಂಡವರಾಗುತ್ತೀರಿ. ನಿಮ್ಮ ಕಾರ್ಯಗಳು ತಲೆಯಿಂದ ನಿಯಂತಿ,ಸಲ್ಪಟ್ಟಿರುವುದಿಲ್ಲ.

ಈ ಧ್ಯಾನಕ್ಕೆ ಕಾಲದ ಇತಿಮಿತಿ ಇಲ್ಲ. ನಿಮಗೆ ಮಾಡಲೇಬೇಕೆನಿಸಿದಾಗ ಸುಮ್ಮನೆ ಮಾಡುತಿರಿ. ನೀವು ಬಲವಂತವಾಗಿ ಮಾಡುತಲೇ ಇರುತ್ತೀರಿ, ಹಾಗೂ ನೀವು ಹೆಚ್ಚು ಹೆಚ್ಚು ಪ್ರೀತಿಯುತರಾಗಿ ವೃದ್ದಿಸುತ್ತಿರುವುದನ್ನು ಕಾಣುವಿರಿ. ನಿಮ್ಮ ಸಂಬಂಧಗಳು ನಾಟಕೀಯವಾಗಿ ಸುಧಾರಿಸತೊಡಗುತ್ತವೆ. ನೀವು ಪ್ರಪಂಚದಲ್ಲಿ ಎಲ್ಲೆಲ್ಲೂ ಸಾಮರಸ್ಯ ಇರುವುದನ್ನು ಕಾಣುತ್ತೀರಿ. ನೀವು ದೇವರ ಕಡೆಗೆ ಮತ್ತೊಂದು ಹೆಜ್ಜೆ ಹತ್ತಿರವಾಗುತ್ತೀರಿ.

ಧ್ಯಾನದ ಬಗ್ಗೆ

ಈ ತಂತ್ರವು ವಿಜ್ಜಾನ ಭೈರವ ತಂತ್ರದ್ದು. ನಿಮ್ಮ ಮೂಲ ಸತ್ವವು ಕೇಂದ್ರದಿಂದ ಕೇಂದ್ರಕ್ಕೆ (ಉನ್ನತಿಯಿಂದ) ಮೇಲೇರುತ್ತಿದೆ, ಬೆನ್ನು ಹುರಿಯ ಎತ್ತರಕ್ಕೆ ಮತ್ತು ಹಾಗೆಯೇ ನಿಮ್ಮಲ್ಲಿಯ 'ಜೀವ ಚೈತನ್ಯ'ವೂ ವೃದ್ಧಿಸುತ್ತದೆ.

ಬೆನ್ನು ಹುರಿಯೇ ನಿಮ್ಮ ಶರೀರ ಹಾಗೂ ಮನಸ್ಸಿಗೆ ಆಧಾರ, ಬೇರು (ಮೂಲಾಧಾರ). ನಿಮ್ಮ ವಯಸ್ಸು ಬೆನ್ನುಹುರಿಯ ಆಧಾರದ ಮೇಲೆ ಅವಲಂಬಿಸಿದೆ. ನಿಮ್ಮ ಬೆನ್ನು ಹುರಿಯು ಮೆದುವಾಗಿದ್ದರೆ, ನೀವು ತರುಣರು (ಚಿಕ್ಕ ವಯಸ್ಸಿನವರು), ನಿಮ್ಮ ಬೆನ್ನು ಹುರಿಯು ಗಡುಸಾಗಿದ್ದರೆ, ನೀವು ವೃದ್ದರು. ಏಳು ಶರೀರದುದ್ದಕ್ಕೂ ನೆಲೆಗೊಂಡಿವೆ (ಸ್ಥಾಪಿಸಲ್ಪಟ್ಟವೆ). ಬೆನ್ನು ಹುರಿಯ ಭಾಗದಲ್ಲಿ ಮೂಲಾಧಾರ ಚಕ್ರ, ಲಿಂಗ ಸಂಬಂಧ ಕೇಂದ್ರವು ಇದೆ. ನೆತ್ತಿಯ ಮೇಲೆ ಸಹಸ್ರಾರ ಚಕ್ರ, ನಮ್ಮನ್ನು ದೈವತ್ತಕ್ಕೆ ತೆರೆದುಕೊಳ್ಳುವಂತೆ ಮಾಡುವ ಕೇಂದ್ರ. ಆ ಬೆನ್ನುಹುರಿಯ (Column) ಕೊಳವೆಯೇ ಚೈತನ್ಯವು ಹರಿಯುವ ದಾರಿ. ಈ ಧ್ಯಾನದಲ್ಲಿ ನೀವು ನಿಮ್ಮ ಚೈತನ್ಯವನ್ನು ಮೂಲಾಧಾರದಿಂದ ಮೇಲಿಂದ ಮೇಲೆ ಚಲಿಸುತ್ತಾ, ಸಹಸ್ರಾರದ ವರೆಗೂ ತಲುಪಿಸುತ್ತೀರಿ.

ಈ ಚಲನೆಯು ಅಷ್ಟು ಸುಲಭವಾಗಿ ಆಗುವುದಿಲ್ಲ. ಏಕೆಂದರೆ ಇದು ಗುರುತ್ವಾಕರ್ಷಣೆಗೆ ವಿರುದ್ದ! ನಿಮ್ಮ ಚೈತನ್ಯವು ಕೆಳಮುಖವಾಗಿ ಬಹಳ ಸುಲಭವಾಗಿ ಚಲಿಸುತದೆ. ಸರಿಯಾಗಿ ಹೇಳಬೇಕೆಂದರೆ, ನಮ್ಮ ಚೈತನ್ಯದ 80% ಭಾಗ ಮೂಲಾಧಾರದಲ್ಲಿ ತಡೆ ಹಿಡಿಯಲ್ಪಟ್ಟಿದೆ. ಅದು ಹೇಗಿದೆ ಎಂದರೆ,

ಧ್ಯಾನದ ತಂತ್ರಗಳು

ಭಾರವಾದದ್ದು ಭೂಮಿಯ ಕಡೆಗೆ ಕೆಳಕ್ಕೆ ಎಳೆಯಲಟ್ಟಂತೆ. ಯಾವಾಗಲೂ ನಿಮ್ಮ ಬೆನ್ನಿನ ಹಿಂಭಾಗ ಭಾರವಾಗಿದ್ದಂತೆ ಅನ್ನಿಸುವುದನ್ನು ನೀವು ಗಮನಿಸಿಲ್ಲವೇನು? ಈ ಚೈತನ್ಯವು ಮೇಲಕ್ಕೆ ಎಳೆಯಲಟ್ಟು, ಸಹಸ್ರಾರದಿಂದ ಬಿಡುಗಡೆಯಾದಾಗ ನೀವು ಅನುಭವಿಸುತೀರಿ. ನೀವು ಆನಂದದ ಸವಿಯನ್ನು ಅನುಭವಿಸುತೀರಿ.

ಸೂಚನೆಗಳು:

ಹಿತಕರವಾದ ಆಸನದಲ್ಲಿ ಬೆನ್ನು ನೆಟ್ಟಗೆ ಕುಳಿತುಕೊಳ್ಳಿ.

ಈಗ ನೀವು ಒಂದು ಜ್ಯೋತಿಯ ಇರುವಿಕೆ ಎಂಬಂತೆ (ನೀವೇ ಒಂದು ಜ್ಯೋತಿ ಎನ್ನುವಂತೆ) ಕಲಿಸಿಕೊಳ್ಳಿ. ಇದು ಕೇವಲ ಕಲನೆಯಲ್ಲ. ನೀವೇ ಜ್ಯೋತಿ, ಎಲ್ಲವೂ ಜ್ಯೋತಿ ಸ್ವರೂಪ. ನೀವೇ ಚೈತನ್ಯವೆಂದು ತಿಳಿದುಕೊಳ್ಳುವ ಅಭ್ಯಾಸ ನಿಮಗಿನ್ನೂ ಆಗಿಲ್ಲ ಅಷ್ಟೆ. ನಿಮಗೆ ಅಭ್ಯಾಸವಾಗಿರುವುದು ನಿಮ್ಮನ್ನು ನೀವು ವಸ್ತು ಎಂದು ತಿಳಿದಿದೀರಿ.

ನೀವು ಒಂದು ಜ್ಯೋತಿಯ ಕಂಬ (ಜ್ಯೋತಿಸ್ತಂಭ) ಎಂದು ಕಲ್ಪಿಸಿಕೊಳ್ಳಿ.

ಈಗ ನೀವು ನಿಮ ಗಮನವನ್ನು ಲಿಂಗದ ಕೇಂದ,ದಲ್ಲಿಡಿ. ಆ ಕೇಂದ,ವು ಪ್ರಕಾಶಮಾನವಾಗಿಯೂ, ಜೀವಂತವಾಗಿಯೂ ಇರುವ ಒಂದು ಬೆಳಕಿನ ಚೆಂಡಿನಂತೆ ಇರುವುದಾಗಿ ಭಾವಿಸಿಕೊಳ್ಳಿ, ಈಗ ಆ ಜ್ಯೋತಿಯು ಮೇಲಕ್ಕೆ ಹೊಕ್ಕಳಿನ ಕೇಂದ್ರಕ್ಕೆ ಚಲಿಸುತ್ತಿದೆ ಎಂದು ಕಲಿಸಿಕೊಳ್ಳಿ. ಒಳಗೆ ಶಾಖವು ಉತ್ಪತಿಯಾಗುತಿದೆ ಎಂಬುದನ್ನು ಗಮನಿಸುವಿರಿ. ಇದು ನಿಜವಾದ ಕಾವು! ಹೊಕ್ಕಳಿನ ಕೇಂದ,ವೂ ಪ್ರಕಾಶಮಾನವಾದ ಒಂದು ಜ್ಯೋತಿಯ ಚೆಂಡಿ ನಂತಾದಾಗ, ಆ ಬೆಳಕು ಮೇಲಕ್ಕೆ ಚಲಿಸಲು ಪ್ರಾರಂಭಿಸುವುದು.

ಆ ಬೆಳಕು ಮೇಲು ಮೇಲಕ್ಕೆ ನಿಮ್ಮ ಹೃದಯ ಕೇಂದ್ರಕ್ಕೆ ಚಲಿಸುತ್ತಿದೆ ಎಂದು ಭಾವಿಸಿರಿ. ನಿಮ್ಮ ಹೃದಯದಲ್ಲಿ ಬೆಳಕು ಹಾಗೂ ಶಾಖವನ್ನು ಅನುಭವಿಸಿರಿ. ನಿಮ್ಮ

ಉಸಿರಾಡುವಿಕೆಯು ಆಳವಾಗುತ್ತಿದೆ ಎನ್ನುವಂತೆಯೂ ನಿಮ್ಮ ಹೃದಯ ಬಡಿತವು ಬಹಳ ಅನುಭವಿಸಿರಿ. ಚೈತನ್ನವು ನಿಮ್ಮ ಭ್ರೂಮಧ್ಯ ಚಕ್ರಕ್ಕೆ ಚಲಿಸುತ್ತಿದೆ ಎಂಬಂತೆ ಚಿತ್ರಿಸಿಕೊಳ್ಳಿ. ಆ ಪ್ರದೇಶವು ಜ್ಯೋತಿಯಿಂದ (ಬೆಳಕಿನಿಂದ) ಆವರಿಸಲ್ಪಟ್ಟಿದೆ ಎಂದು ಭಾವಿಸಿಕೊಳ್ಳಿ. ನಿಧಾನವಾಗಿ, ನಿಮ್ಮ ನೆತ್ತಿಯ ಭಾಗದ ಚೈತನ್ಯ ವಲಯವಾದ ಸಹಸ್ರಾರ ಚಕ್ರಕ್ಕೆ (ಆ ಚೈತನ್ಯವು) ಚಲಿಸುತ್ತದೆ.

ಸಹಸ್ರಾರವನ್ನು ಚೈತನ್ಯವು ತಲುಪಿದಾಗ, ನೀವು ಅದ್ಯುತವಾದ ಹೊಸ ಅನುಭವವನ್ನು ಹೊಂದಬಹುದು. ನಿಮಗೆ ತಲೆ ತಿರುಗಿದಂತಾಗಬಹುದು, ಓಕರಿಕೆ ಬಂದಂತಾಗಬಹುದು. ನಿಮ್ಮ ತಲೆಗೆ ಇಷ್ಟು ಹೆಚ್ಚಿನ ಚೈತನ್ಯವನ್ನು ನಿಭಾಯಿಸಲು ಅಭ್ಯಾಸವಿರುವುದಿಲ್ಲ. ಕೆಲವು ವೇಳೆ ನಿಮ್ಮ ತಲೆಗೆ ಅತಿಯಾದ ಚೈತನ್ನವು ಸೇರುವುದರಿಂದ ತಲೆಯು ಸ್ಪೋಟಿಸಿದಂತೆಯೂ ಆಗಬಹುದು. ಭಯಪಡಬೇಡಿರಿ. ಒಂದು ವೇಳೆ ನಿಮಗೆ ತಲೆ ತಿರುಗಿದಂತಾದರೆ, ನಿಮ್ಮ ನೀವು ಮಲಗಲು ಅವಕಾಶ ಕೊಡಿ (ನೀವು ಮಲಗಿಕೊಂಡುಬಿಡಿ) ನಿಮಗೆ ತಲೆ ಸುತಿದಂತಾದರೂ ಸಹ ಚಿಂತಿಸಬೇಡಿ. ಇದು ಒಂದು ಆಳವಾದ (ಗಾಢವಾದ) ನಿದ್ರಾಸ್ಥಿತಿ. ಅದನ್ನು ಯೋಗ ತಂತ್ರ ಎಂದು ಹೇಳುತಾರೆ. ಧ್ಯಾನ ಮಾಡುವವರಲ್ಲಿ ಬಹಳ ಜನ ಈ ಸ್ಥಿತಿಯನ್ನು ಅನುಭವಿಸುತಾರೆ, ಅದಕ್ಕೆ ಗಾಬರಿ ಪಡಬೇಕಾಗಿಲ್ಲ. ಅರ್ಧ ಗಂಟೆಯ ಸಮಯದಲ್ಲೇ ನೀವು ಸಹಜ ಸ್ಥಿತಿಗೆ ಬಂದುಬಿಡುತೀರಿ.

ನಿಮ್ಮ ತಲೆಯೊಳಕ್ಕೆ ಚೈತನ್ಯವು ತುಂಬಿಕೊಂಡಾಗ, ನಮ್ಮ ಪೂರ್ತಿ ತಲೆಯೇ ಬಿಸಿಯಾದಂತಾಗುತ್ತದೆ. ನಿಮ್ಮ ತಲೆಯು ಬೆಳಕಿನ ಒಂದು ಚೆಂಡಿನಂತಾಗುತ್ತದೆ.

ಈಗ ನೀವು ಆ ಚೈತನ್ಯವನ್ನು ಮಹದಾಕಾಶಕ್ಕೆ (ಬ್ರಹ್ಮಾಂಡಕ್ಕೆ) ಬಿಟ್ಟುಬಿಡಿ. ನಿಮ್ಮ ತಲೆಯು ಒಂದು ಪುಷ್ಪವಾಗಿ ಒಂದು ಸುಂದರ ಕಮಲ ಪುಷ್ಪವಾಗಿ ಪರಿಣಮಿಸಿದೆ ಎಂದುಕೊಳ್ಳಿ, ಆ ಪುಷ್ಪವು ನಿಧಾನವಾಗಿ ಅರಳಲು ಬಿಡಿ ಮತ್ತು ಅದರ ಚೈತನ್ಯವನ್ನು ಬ್ರಹ್ಮಾಂಡಕ್ಕೆ ಸೇರಲು ಬಿಡಿ.

ಒಂದು ಎಚ್ಚರಿಕೆಯ ಮಾತು:

ಈ ಧ್ಯಾನವನ್ನು ಎಂದೂ ಪೂರ್ಣಗೊಳಿಸದೆ ಬಿಡಬೇಡಿ. ನೀವು ಪಾ,ರಂಭಿಸುವಾಗಲೇ ಕಡಿಮೆ ಪಕ್ಷ ಎರಡು ಗಂಟೆಗಳ ಕಾಲವಾದರೂ ಯಾವ ಅಡೆತಡೆಗಳಿಲ್ಲದೆ ಧ್ಯಾನವನ್ನು ಮಾಡುತೇನೆಂದು ಖಚಿತಪಡಿಸಿಕೊಳ್ಳಿ. ಧ್ಯಾನ ಮಾಡುವ ವೇಳೆಯಲ್ಲಿ ಆಗಬಹುದಾದ ಬೇರೆಯ ಎಲ್ಲಾ ತೊಂದರೆಗಳನ್ನೂ, ಆತಂಕಗಳನ್ನೂ ಅಲಕ್ಷಿಸಿರಿ. ನೀವು ಮಧ್ಯದಲ್ಲೆದ್ದು ಅರ್ಧಕ್ಕೇ ಧ್ಯಾನವನ್ನು ನಿಲ್ಲಿಸಿದರೆ, ಚೈತನ್ಯವು ಆ ನಿಗದಿತ ಕೇಂದ್ರದಲ್ಲಿ ಗಟ್ಟಿಯಾಗಿ ಕಟ್ಟಿಕೊಂಡು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ಧ್ಯಾನವು ನಿಮ್ಮ ಲೈಂಗಿಕ ಚೈತನ್ಯವನ್ನು ಆಧ್ಯಾತ್ಮಿಕ ಚೈತನ್ಯವನ್ನಾಗಿ ಪರಿವರ್ತಿಸಲು ಒಂದು ಸುಂದರವಾದ (ಒಳ್ಳೆಯ) ಮಾರ್ಗ. ನೀವು ಈ ಧ್ಯಾನವನ್ನು ಕ್ರಮವಾಗಿ ಅಭ್ಯಾಸ ಮಾಡಿದರೆ, ನಿಮ್ಮ ಲೈಂಗಿಕ ಆಸಕ್ಕಿಗಳು ಕ್ರಮೇಣ ನಿಂತುಹೋಗುವುದನ್ನು ಗಮನಿಸುತೀರಿ) ನೀವು ಹೆಚ್ಚು ಹೆಚ್ಚು ದಿನಪೂರ್ತಿ ಪಾ,ರ್ಥನಾಸಕರಾಗುವುದನ್ನು ಅನುಭವಿಸುತೀರಿ. ಅಷ್ಟೊಂದು ಚೈತನ್ಯವು ನಿಮ್ಮ ತಲೆಗೆ ಹೋಗುವುದರಿಂದ, ನೀವು ಬಹಳ ಚೈತನ್ಯಪೂರ್ಣವಾಗಿ, ಉತ್ತಾಹ ಜೀವಿಗಳಾಗಿ, ಸಮರ್ಥರಾಗಿ ಕಾರ್ಯ ನಿರ್ವಹಣೆ ಮಾಡುತ್ತೀರೆಂಬ ಅನುಭವವು ನಿಮಗೆ ಉಂಟಾಗುತ್ತದೆ ಮುಖ್ಯವಾದದ್ದೆಂದರೆ, ನೀವು ಶಾಶ್ವತವಾದ ಆನಂದದ ಸ್ಥಿತಿಯಲ್ಲಿರುತೀರಿ.

ಧ್ಯಾನದ ವಿಚಾರ

ನಮ್ಮ ಜೀವನವೆಲ್ಲಾ ಮಾಡುವುದು, ಹೊಂದುವುದು ಮತ್ತು ಇರುವುದು ಈ ಧ್ರುವಗಳ ಮಧ್ಯೆ ತೂಗಾಡುವುದೇ ಆಗಿದೆ. ನಾವು ಯಾವಾಗಲೂ > 'ಮಾಡುವುದು' ಎಂಬುದರಲ್ಲೇ ಕೇಂದ್ರೀಕರಿಸುತಿದ್ದೇವೆ (ನಮ್ಮ ಧ್ಯೇಯವೇ ಅದಾಗಿದೆ). ನಾವು ಬಿಡುವೇ ಇಲ್ಲದೆ, ಒಂದು ಕೆಲಸದಿಂದ ಮತ್ತೊಂದಕ್ಕೆ

ತೊಡಗಿಕೊಳ್ಳುತ್ತಲೇ ಇದ್ದೇವೆ. ನಮ್ಮ ಜೀವನವೆಲ್ಲಾ ಕೇವಲ ಮಾಡುವುದು, ಮಾಡುವುದು, ಮಾಡುವುದು. ನಾವು ಕೆಲಸ ಮಾಡುತಿದ್ದೇವೆ, ಮಾತನಾಡುತಿದ್ದೇವೆ, ನಾವು ಸಂಬಂಧಗಳಲ್ಲಿ ತೊಡಗಿಕೊಳ್ಳುತಿದ್ದೇವೆ, ನಾವು ಚಲಿಸುತಿದ್ದೇವೆ, ನಾವು ಯೋಜನೆಗಳನ್ನು ಹಾಕುತಿದ್ದೇವೆ. ಶಾರೀರಿಕವಾಗಿಯೂ ಮತ್ತು ಮಾನಸಿಕವಾಗಿಯೂ ನಾವು ಸತತವಾಗಿ ಏನಾದರೊಂದು ಮಾಡುತ್ತೇ ಇದ್ದೇವೆ.

ಏತಕ್ಕಾಗಿ ಮಾಡುತಿದ್ದೇವೆ? ನಾವು ಪಡೆಯುವುದರಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ನಾವು ಪ,ಯತ್ತಿಸುತಿದ್ದೇವೆ. ಹೊಂದುವುದು ಎಂಬುದು ಶಕ್ತಿಶಾಲಿಗಳೆಂದು ಭಾವಿಸಿಕೊಳ್ಳಲು ಅನುವಾಗುತ್ತಿದೆ. ಆದ್ದರಿಂದ ನಾವು ಹೆಚ್ಚು ಹಣ, ಹೆಚ್ಚು ಗೌರವ, ಹೆಚ್ಚು ಸ್ನೇಹಿತರು, ಹೆಚ್ಚು ಹುಡುಗಿಯರ ಸ್ನೇಹ, ಹೆಚ್ಚು ಯೋಗ್ಯತಾ ಪತ್ರಗಳು, ಹೆಚ್ಚಿನ ಆರೋಗ್ಯ, ಹೆಚ್ಚಿನ ಸೌಂದರ್ಯ, ಹೆಚ್ಚಿನ ಜ್ಞಾನ ಇವುಗಳನ್ನು ಸಂಪಾದಿಸಲು ಯತಿಸುತಿದ್ದೇವೆ.

– ಈ ಮಾಡುವುದು ಮತ್ತು ಹೊಂದುವುದು ಇವುಗಳ ಮಧ್ಯೆ (ನಾವು ಸಿಕ್ಕಿ) ನಾವು ಹೇಗೆ ಇರಬೇಕೆಂಬುದನ್ನು ಮರೆತಿದ್ದೇವೆಂಬುದನ್ನೇ ಅರ್ಥ ಮಾಡಿಕೊಂಡಿಲ್ಲ. ಸತ್ಯವಾದದ್ದು ಏನೆಂದರೆ, ಇರುವುದು ಎಂಬುದು, ಮಾಡುವುದು ಮತ್ತು ಹೊಂದುವುದಕ್ಕಿಂತ ಮುಂಚಿತವಾಗಿ ಬರಬೇಕಾದದ್ದು. ಆದರೆ ಎಷ್ಟೋ ಕಾಲಗಳಿಂದ, ನಾವು ಆ ಮೂಲ ತತ್ವವನ್ನೇ ಮರೆತಿದ್ದೇವೆ. (ಆ ಮಟ್ಟವನ್ನು ಮುಟ್ಟಿಯೇ ಇಲ್ಲ) - ದುರ್ದಾಗಿ ಮರಾಯಿಯ

(Stop!) 'ನಿಲ್ಲಿಸು'! ಎಂಬುವುದು ವಿಜ್ಞಾನ ಭೈರವ ತಂತ್ರದ ಮತ್ತೊಂದು ತಂತ್ರ ಕೌಶಲ್ಯ ಇದೂ ಸಹ ಗುರ್ ಜಿಎಫ್ ನಿಂದ ಪ್ರಸಿದ್ಧಿ ಪಡೆದಂಥದ್ದು.

ಈ ತಂತ್ರವು ಬಹಳ ಸರಳವಾದದ್ದು: ಇದು ಒಳಗೊಂಡಿರುವುದೇನೆಂದರೆ, ನೀವು ಏನನ್ನೇ ಮಾಡುತಿದ್ದರೂ ಮಧ್ಯದಲ್ಲಿಯೇ ಇದ್ದಕ್ಕಿದ್ದಂತೆ ಕೂಡಲೇ ನಿಲ್ಲಿಸಿ ಬಿಡುವುದು! ಆದರೆ, ನೀವು ಆ ರೀತಿ ನಿಲ್ಲಿಸುತ್ತಿದ್ದೀರೆಂಬುದು ನಿಮಗೇ

ಗೊತಾಗಿರಬಾರದು. ಆದ್ದರಿಂದ ಬೇರೆ ಯಾರೋ ನಿಮ್ಮನ್ನು ನೋಡುತಿದ್ದವರು, ಸುಮ್ಮನೆ 'ನಿಲ್ಲಿಸು'! (Stop) ಎನ್ನುತಾ ಕಿರುಚಬೇಕು! ಇದು ಒಂದು ತರಹ "statue' ಆಟ ಆಡಿದಂತೆ! ನೀವು ಯಾವಾಗ ಇದ್ದಕ್ಕಿದ್ದಂತೆ ಪೂರ್ಣವಾಗಿ ತೊಡಗಿಕೊಂಡು ಮಾಡುತಿರುವ ಕೆಲವನ್ನು ನಿಲ್ಲಿಸಿದಾಗ, ನೀವು ಗಾಬರಿಯಿಂದ ಸ್ಥಗಿತಗೊಳ್ಳುತೀರಿ. ಆ ಘಳಿಗೆಯಲ್ಲಿ ನೀವು ನಿಮ್ಮ ಅಸ್ತಿತ್ವದೊಳಕ್ಕೆ ಎಸೆಯಲ್ಪಟ್ಟವರಾಗಿರುತೀರಿ. (ನೂಕಲ್ಪಟ್ಟವರಾಗುತ್ತೀರಿ). ಸೂಚನೆಗಳು:

ಈ ಧ್ಯಾನವನ್ನು ಒಬ್ಬೊಬ್ಬರೇ (ಒಂಟಿಯಾಗಿ) ಮಾಡಬಹುದು, ಅಥವಾ ಗುಂಪಿನಲ್ಲಿಯೂ ಮಾಡಬಹುದು. ಯಾರನ್ನಾದರೂ ಒಬ್ಬರನ್ನು (Stop!) ನಿಲ್ಲಿಸಿ! ಎಂದು ಹೇಳುವವರನ್ನು ಆರಿಸಿಕೊಳ್ಳಬಹುದು. ಆದರೆ ಆ ರೀತಿ ಪದೇ ಪದೇ ಆಜ್ಲಾಪಿಸಬಾರದು, ಅಥವಾ ನೀವು ಅದಕ್ಕೆ ಸದಾ ಸಿದ್ದವಿರಬೇಕು. ನಡೆಯುತ್ತಿರಿ, ಮಾತನಾಡುತಿರಿ, ಕೆಲಸ ಮಾಡುತಿರಿ, ನರ್ತಿಸುತಿರಿ, ನೀವು ಆ ಆಜ್ಞೆಯನ್ನು ಕೇಳಿದ ಕೂಡಲೇ ಕಲ್ಲಿನಂತೆ ನಿಂತುಬಿಡಿ. ಸುಮ್ಮನೆ ಮಾಡುತಿದ್ದ ಕೆಲಸ ನಿಲ್ಲಿಸಿ ವಿಗ್ರಹವಾಗಿ ಬಿಡಿ. ನಿಮ್ಮ ಒಂದು ಕೈ ಮೇಲಿದ್ದರೂ ಅಥವಾ ಬಾಯಿ ಬಿಟ್ಟಿದ್ದರೂ, ಪರವಾಗಿಲ್ಲ. ಪೂರ್ಣ ಪ್ರಾಮಾಣಿಕತೆಯಿಂದ ಅಷ್ಟಕ್ಷೇ ನಿಲ್ಲಿಸಿ. ಹಾಗೆಯೇ ಇರಿ. ಆರಾಮವಾದ ಸ್ಥಿತಿಗೆ (ಭಂಗಿಗೆ) ಬದಲಾಯಿಸಿ ಕೊಳ್ಳಲು ಯತ್ನಿಸಬೇಡಿ. ಒಂದು ಕ್ಷಣ ನೀವು ನಿಧಾನಿಸಿದರೂ ಅದು ಬಹಳ ನಿಧಾನವಾದಂತೆಯೇ.

ಈ ಆಟದಲ್ಲಿ ನಿಮಗೆ ನೀವೇ ತೊಡಗಿಕೊಳ್ಳಬಹುದು. ನೀವು ಓಡುವಾಗ, ಸ್ನಾನ ಮಾಡುವಾಗ, ಚಹಾ ಕುಡಿಯುವಾಗ, ನಿಮಗೆ ನೀವೇ ಆಜ್ಞೆ ಮಾಡಿಕೊಳ್ಳಿರಿ (Stop!) 'ನಿಲ್ಲು'! ನಿಲ್ಲಿಸಲು ಯತ್ನಿಸಬೇಡಿ, ಸುಮ್ಮನೆ ನಿಲ್ಲಿಸಿ.

ಯಾವಾಗ ನೀವು ಕೆಲಸದಲ್ಲಿ ಸಂಪೂರ್ಣ ಮುಳುಗಿರುತೀರೋ, ಆಗ ತಕ್ಷಣ ನಿಲ್ಲಿಸಿಬಿಟ್ಟರೆ, ಆ ನಿಲ್ಲಿಸುವಿಕೆಯೇ ನಿಮ್ಮ ಸಮತೋಲನವನ್ನು ಕೆಡಿಸಿಬಿಡುತದೆ. ನೀವು ನಿಮ್ಮ ಕೇಂದ್ರಕ್ಕೆ ಎಸೆಯಲ್ಪಡುತೀರಿ, ನೀವು ಶಾಂತಿಯ ಕ್ಷಣವನ್ನು ಧ್ಯಾನದ ಕ್ಷಣವನ್ನು ಅನುಭವಿಸುತ್ತೀರಿ.

ಧ್ಯಾನ ಮತ್ತು ಅದರ ಸೂಚನೆಗಳು:

ನಿಲ್ಲಿಸುವುದು ಎಂದರೆ ಕೇವಲ ಶಾರೀರಿಕ ಕೃತಿಗಳನ್ನು ನಿಲ್ಲಿಸುವುದು ಮಾತ್ರವಲ್ಲ, ನೀವು ಒಂದು ಆವೇಗ, ಒಂದು ಆಸೆ, ಒಂದು ಸ್ವಪ್ರಯತ್ನವಿಲ್ಲದ ಕೃತಿ ಅಥವಾ ಭಾವನೆಯನ್ನೂ ಹಾಗೆಯೇ ಸುಮ್ಮನೆ ನಿಲ್ಲಿಸಿಬಿಡಬಹು.

ಏನನ್ನೋ ಮಾಡಬೇಕೆಂಬ ಪ್ರಚೋದನೆ ಅಥವಾ ಆವೇಗ ಉಂಟಾದ ಕೂಡಲೇ ನಿಲ್ಲಿಸಿಬಿಡಿ. ಯಾವಾಗ ನೀವು ತೊಂದರೆಗೆ ಈಡಾಗುತ್ತೀರೋ (ಕಷ್ಟವನ್ನನುಭವಿಸುತಿದ್ದೀರೋ) ಆಗ, ನಿಮಗೆ ಅಳುವು ಬಂದಾಗ - ಮಧ್ಯದಲ್ಲೇ ನಿಮಗೆ ನೀವೇ (Stop!) ನಿಲ್ಲಿಸು! ಎಂಬ ಆಜ್ಞೆ ಮಾಡಿಕೊಳ್ಳಿ! ನೀವು ಎಷ್ಟು ಸುಲಭವಾಗಿ ಆಶ್ಚರ್ಯಚಕಿತರಾಗುತೀರಿ. ನೀವು ಸುಮ್ಮನೆ ನಿಲ್ಲಿಸಿಬಿಡುತ್ತೀರಿ ಅಷ್ಟೆ,

ತಡೆಯಲಾಗದ ಸೀನು ಬರುತ್ತಿದೆ ಎನ್ನುವಾಗಲೂ ಸಹ, ತಕ್ಷಣ ಅಷ್ಟರಲ್ಲೇ ಹಾಗೆಯೇ ನಿಲ್ಲಿಸಿಬಿಡಬಹುದು.

ಯಾವಾಗ ನಿಮಗೆ ಸಿಟ್ಟು ಉದ್ಯುಕರಾಗಿದ್ದರೂ ಸಹ, ಅಥವಾ ಏನನ್ನಾದರೂ ಒಡೆಯಲು ಸಿದ್ದರಿದ್ದಾಗ, ಸುಮ್ಮನೆ ನಿಲ್ಲಿಸಿಬಿಡಿ.

ಅಕಸ್ಮಾತ್ ನಿಮಗೆ ನಿಮ್ಮ ಮಗುವನ್ನೋ, ಹೆಂಡತಿಯನ್ನೋ, ಸ್ನೇಹಿತರನ್ನೋ ಕಂಡು ಕೂಡಲೇ ಅಪ್ಪಿಕೊಳ್ಳಬೇಕೆನಿಸಿದಾಗ - ಕೂಡಲೇ ನಿಲ್ಲಿಸಿಬಿಡಿ.

ಧ್ಯಾನದ ತಂತ್ರಗಳು

ಹಾಗೆ ನಿಲ್ಲಿಸಿದಾಗ ನಿಮಗೆ ಏನಾಗುತದೆ? ಆವಾಗ ನಿಮ್ಮಿಂದ ಒಂದು ಶಕ್ತಿಯು (ಚೈತನ್ಯವು) ನಿಮ್ಮ ಗಮನದಲ್ಲಿ ಇರುವ ಪದಾರ್ಥದ ಕಡೆ ಹೊರ ಹರಿಯುತ್ತದೆ. ನಾವು ಮಾತನಾಡುವಾಗ, ನಡೆಯುವಾಗ, ಆಗಲೂ ಸಹ ನಿಮ್ಮಿಂದ ಚೈತನ್ಯವು ಹೊರ ಪದಾರ್ಥ, ವ್ಯಕ್ತಿ ಕಡೆಗೆ ಹೋಗುತಿರುತದೆ. ನಿಮ್(ಗಮನವೇ) ನಿಮ್ಮ ಚೈತನ್ಯ. ನೀವು ಕೂಡಲೇ ಹೊರ ಹೋಗುವ ಚೈತನ್ಯವನ್ನು ನಿಲ್ಲಿಸಿದಾಗ, ಆ ಚೈತನ್ಯಕ್ಕೆ ಏನಾಗುತದೆ? ಅದು ನಿಮ್ಮ ಒಳಕ್ಕೇ ಹಿಂತಿರುಗುತ್ತದೆ. ನಿಮ್ಮ ಚೈತನ್ಯ ನಿಮ್ಮ ಗಮನ, ಕೂಡಲೇ ಒಳಕ್ಕೇ ಹರಿಯುತ್ತದೆ. ಮತ್ತೊಮ್ಮೆ ನೀವು ನಿಮ್ಮ ಶಾಂತಿಯ ಕೇಂದ್ರಕ್ಕೆ ಎಸೆಯಲ್ಪಡುತ್ತೀರಿ.

ಒಮ್ಮೆ ನಿಮಗೆ ಅದರ ಕ್ಷಣ ಕಾಲದ ಅನುಭವವು ಉಂಟಾದರೆ ನಿಮ್ಮ ಕೆಲಸಗಳಲ್ಲಿ ತೊಡಗಿ ನಿಮ್ಮನ್ನು ನೀವು ಕಳೆದುಕೊಳ್ಳುವುದಿಲ್ಲ. ನೀವು ಏನನ್ನಾದರೂ ಮಾಡುತಿರುವಾಗಲೂ ಸಹ ನೀವು ಇರುವಿಕೆಯ ಪ್ರಜ್ಞೆಯಲ್ಲಿಯೇ ಇರುತೀರಿ. ನೀವು ನಿಮ್ಮ ಆಂತರ್ಯದ ಶಾಂತಿಯನ್ನು ತಲುಪುತೀರಿ ಮತ್ತು ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳೂ ಸಹ ಕೇವಲ ಮೇಲಿನ ಸಣ್ಣ ಸಣ್ಣ ಅಲೆಗಳು ಎಂದು ಪರಿಗಣಿಸುತೀರಿ. ಇದೇ ಶಾಶ್ವತವಾದ ಧ್ಯಾನದ ಮನೋಭಾವ.

ಲುಕಾಮ ಹರಣ

ಧ್ಯಾನ ಮತ್ತು ಸೂಚನೆಗಳು:

ಇದೂ ಕೂಡ ಒಂದು "Stop'! (ನಿಲ್ಲಿಸು!) ತಂತ್ರ. ಆದರೆ, ಇದ್ದಕ್ಕಿದ್ದಂತೆ ಕೂಡಲೇ ನಿಲ್ಲಿಸುವ ಕಾರ್ಯವಾಗಲೀ, ಆವೇಶವಾಗಲೀ ಅಲ್ಲ. ಇಲ್ಲಿ ನೀವು ನಿಧಾನವಾಗಿ ನಿಮ್ಮ ಆಸೆಗಳನ್ನೂ, ಆವೇಶಗಳನ್ನೂ ನಿಯಂತ್ರಿಸಿ ನಿಲ್ಲಿಸುತ್ತೀರಿ.

ಏನಾದರೂ ಆಸೆಯು ಬಂದಾಗ, ಅದನ್ನು ಸರಿಯಾಗಿ ಪರ್ಯಾಲೋಚಿಸಿರಿ. ಬುದ್ದಿಪೂರ್ವಕವಾಗಿ ತೀರ್ಮಾನಿಸಿರಿ. ಆ ಆಸೆಯನ್ನು ಪೂರ್ಣ ಬಲವತರವಾಗಿ ಎದುರಿಸಿರಿ. ನೀವು ಈ ಆವೇಗವನ್ನು, ಈ ಆಸೆಯನ್ನು ಹೊಂದಿದ್ದೀರೆಂಬ

ಭಾವನೆಯ ಬಗ್ಗೆ ತಿಳಿದುಕೊಂಡಿರಿ. ಆಗ ಕೂಡಲೇ ಬಿಟ್ಟುಬಿಡಿ, ಸುಮ್ಮನೆ ಕೈಬಿಡಿ. ನೀವು ಒಂದು ಸುಂದರವಾದ ಹೆಣ್ಣನ್ನು ನೋಡಿದಿರೆಂದು ಇಟ್ಟುಕೊಳ್ಳೋಣ. ಆಗ ಆಸೆ ನಿಮ್ಮಲ್ಲಿ ಉಂಟಾಗುತ್ತದೆ, ಆಗ ನಿಮ್ಮ ಆಸೆಯನ್ನು ಪರೀಕ್ಷಿಸಿರಿ. ಆ ಘಳಿಗೆಯಲ್ಲಿ ನಿಮಗೆ ಏನಾಗುತಿದೆ ಎಂಬುದರ ವಿಷಯವಾಗಿ ಗಮನವಿಡಿ. ನಿಮ್ಮ ಶರೀರವು ಹೇಗೆ ಜ್ವರ ಬಂದಂತೆ, ನಡುಕ ಬರುತಿರುವಂತೆ ಆಗುತಿದೆ ಎಂಬುದನ್ನೂ ಗಮನಿಸಿ. ನಿಮ್ಮ ನಾಡಿ ಮಿಡಿತ ಜೋರಾಗುತಿರುವುದನ್ನು ನೀವು ಸರಿಯಾಗಿ ಆಲೋಚಿಸಲಾರಿರೆಂಬುದನ್ನೂ ಗಮನಿಸಿರಿ. ಆ ಆಸೆಯು ನಿಮ್ಮನ್ನೇ ಹೇಗೆ ನಿಯಂತ್ರಿಸುತಿದೆ ಎಂಬುದನ್ನೂ ಅವಲೋಕಿಸಿರಿ.

ನೀವು ನಿಮ್ಮನ್ನೇ ಆಗಲಿ ನಿಮ್ಮ ಆಸೆಯ ಬಗ್ಗೇ ಆಗಲಿ ತೀರ್ಮಾನಿಸಬೇಡಿ. ನಿಮಗೆ ನೀವೇ ಇದೊಂದು ಕೆಟ್ಟ ಆಸೆ ಎಂದು ಹೇಳಿಕೊಳ್ಳಬೇಡಿ. ಯಾವ ಅಭಿಪ್ರಾಯವನ್ನೂ ತಾಳಬೇಡಿರಿ, ಸುಮ್ಮನೆ ಸಾಕ್ಷಿಯಾಗಿ ಅದನ್ನು ನೋಡಿ. ಆಗ ಕೂಡಲೇ ಆಸೆಯನ್ನು ಬಿಟ್ಟುಬಿಡಿ.

ಇದು ಸಾಧ್ಯ!

ನೀವು ಸುಮ್ಮನೇ ಬಿಟ್ಟುಬಿಡಬಹುದು.

ಸ್ಪಷ್ಟವಾಗಿರಿ: ನೀವು ಆಸೆಯನ್ನು ಬಲವಂತವಾಗಿ ತಡೆಹಿಡಿಯುತಿಲ್ಲ ಆ ರೀತಿ ತಡೆಯಬೇಡಿ. ಆ ತಡೆಯುವಿಕೆಯೇ ನಮ್ಮ ಮನೋ ವೈಜ್ಞಾನಿಕವಾದ ಸಮಸ್ಯೆಗಳಿಗೆ ಮೂಲ ಕಾರಣವಾಗಿಬಿಡುತ್ತದೆ.

ಅದನ್ನು ನಾನು ಹೇಗೆ ಬಿಡಲಿ? ಎಂದು ಯೋಚಿಸಬೇಡಿ.

ಯಾವಾಗ ನೀವು ಮನಸಿನ ಆವೇಗದೊಡನೆ ಹೋರಾಡುತ್ತೀರೋ, ತಡೆಹಿಡಿಯುತೀರೋ ಆಗ ಅದು ಹೆಚ್ಚು ಬಲಗೊಳ್ಳುತ್ತದೆ.

ಯಾವುದನ್ನೂ ನೀವು ಸರಿಯಾಗಿ ಪೂರ್ಣವಾಗಿ ಸಮಾಲೋಚಿಸಿದಾಗ ಅದನ್ನು ಬಿಡಲು ಸುಲಭವಾಗುತದೆ.

ಯಾವ ಘಳಿಗೆಯಲ್ಲಿ ನಾನು ಬಿಟ್ಟೆ, ಎಂದು ಹೇಳುತೀರೋ ಆಗಲೇ ನೀವು ಬೇರೆಯಾಗಿಬಿಡುತೀರಿ, ನೀವು ನೋಡುವವರಾಗುತ್ತೀರಿ. ನೀವು ನಿಮ್ಮ ಶರೀರವು ಆಸೆಗಳಿಂದ ತುಂಬಿರುವುದನ್ನು ನೋಡುತೀರಿ, ನಿಮ್ಮ ಮನಸು ಆಸೆಗಳಿಂದ ತುಂಬಿರುವುದನ್ನು ನೋಡುತೀರಿ - ಆದರೆ ಅವು ನೀವಲ್ಲ. ಆ ಕ್ಷಣದಲ್ಲಿ, ನೀವು ಅವುಗಳಲ್ಲಿ ಯಾವುವೂ ನೀವಲ್ಲವೆಂಬುದನ್ನು ಮನಗಾಣುತ್ತೀರಿ (ಅರ್ಥ ಮಾಡಿಕೊಳ್ಳುತೀರಿ) ಆಗಲೂ ಕೂಡ, ನೀವು ಮಗದೊಮ್ಮೆ ನಿಮ್ಮ ಇರುವಿಕೆಯಲ್ಲಿಗೇ ಹೋಗಿ ಸೇರುತ್ತೀರಿ.

ಈ ಧ್ಯಾನವು ವ್ಯಸನಾಸಕಿಗಳಿಗೆ ಅಂಟಿಕೊಂಡಿರುವ ಪ್ರವೃತಿಯಿಂದ ಹೊರಗೆ ಬರಲು (ದುಶ್ಚಟಗಳನ್ನು ಬಿಡಲು) ಅತಿ ಉತ್ತಮವಾದ ಧ್ಯಾನ. ನಾವು ಚೈನ್ ಸ್ಮೋಕರ್, ಆಲ್ಕೋಹಾಲಿಕ್, ವುಮನೈಸರ್, (ನಿರಂತರ ಧೂಮಪಾನ ಮಾಡುವವರು, ಮದ್ಯಪಾನ ಮಾಡುವವರು, ಸ್ತ್ರೀಲೋಲರು) ಇವರುಗಳು ಇದ್ದಕ್ಕಿದ್ದಂತೆ ಒಂದು ದಿನ ಅವರ ದುರಭ್ಯಾಸಗಳನ್ನು ಬಿಟ್ಟು ಪುನಃ ಅವುಗಳ ಕಡೆಗೆ ತಿರುಗದೇ ಇರುವವರ ವಿಷಯವಾಗಿ ತಿಳಿದಿದ್ದೇವೆ. ಅವುಗಳೆಲ್ಲರೂ ಅದನ್ನು ಬಿಡಲು ಪ್ರಯತ್ನಿಸಿದವರಲ್ಲ - ಸುಮ್ಮನೆ ಬಿಟ್ಟವರು, ಅಷ್ಟೆ! ಈ ಧ್ಯಾನದಿಂದ ಕೇವಲ ಅವರ ಆ ನಡತೆ ಬಿಟ್ಟು ಹೋಗುವುದ್ ಮಾತ್ರವಲ್ಲ, ಆ ಸೆಳೆತವೂ (ಪ್ರವೃತಿಯೂ) ಬಿಟ್ಟು ಹೋಗುತ್ತದೆ. ನೀವು ನಿಮ್ಮ ದುರಭ್ಯಾಸಗಳ ಜೊತೆ ಹೋರಾಡಬೇಕಿಲ್ಲ, ಏಕೆಂದರೆ ಅದರ ಆಸಕ್ತಿಯೇ ಬಿಟ್ಟು ಹೋಗಿರುತ್ತದೆ.

ಧ್ಯಾನ ಮತ್ತು ಸೂಚನೆಗಳು:

ಇದೊಂದು ಸೊಗಸಾದ 'ಶೂನ್ಯತೆಯ ಧ್ಯಾನ'. ನೀವು ವಿಶ್ವದಲ್ಲಿನ ಚೈತನ್ಯವನ್ನು ನಿಮ್ಮ ಆಂತರ್ಯಕ್ಕೆ ಸ್ವಾಗತಿಸುವುದಕ್ಕೆ (ನಿಮ್ಮಲ್ಲಿಗೆ ಸೇರಿಸಿಕೊಳ್ಳಲು), ನಿಮ್ಮೊಳಗೆ ಈಗಾಗಲೇ (ಉಪಯುಕ್ತವಾದ) ತಂತ್ರ.

ನಿಶ್ಶಬ್ದವಾದ, ಶಾಂತವಾದ ಸ್ಥಳದಲ್ಲಿ ನಿಶ್ಚಲರಾಗಿ ಕುಳಿತುಕೊಳ್ಳಿ. ನಿಮ್ಮ ಶರೀರದ ಬಗ್ಗೆ ಗಮನವಿರಿಸಿ. ನಿಮ್ಮ ಶರೀರದೊಡನೆ ಸಡಿಲವಾಗಿ ಪೂರ್ಣ ಆರಾಮವಾಗಿ ಇದ್ದೀರೆಂದು ಭಾವಿಸಿಕೊಳ್ಳಿ.

ಈಗ, ನೀವೊಂದು ಬಿದುರಿನ ಬೊಂಬು ಆಗಿದ್ದೀರೆಂದು ಕಲ್ಪಿಸಿಕೊಳ್ಳಿ! ಖಾಲಿ ಬೊಂಬು ಆಗಿರಿ. ಸಂಪೂರ್ಣ ವಿಶ್ರಾಂತಿ ಪಡೆದವರಾಗಿ. ನಿಮ್ಮ ಪೂರ್ತಿ ಶರೀರ, ನಿಮ್ಮ ಚರ್ಮ, ನಿಮ್ಮ ಮಾಂಸ ಖಂಡ, ನಿಮ್ಮ ಮೂಳೆಗಳು ಎಲ್ಲವೂ ಬೊಂಬಿನ ಭಾಗಗಳು. ಇದರ ಒಳಗಡೆ ಖಾಲಿಜಾಗ, ಶೂನ್ಯತ್ವ-(ನಿಶ್ಶಬ್ದ)-ವನ್ನು ಬಿಟ್ಟು ಮತ್ತೇನೂ ಇಲ್ಲ. ನಿಮ್ಮ ಮನಸ್ಸಿಗೂ ಸಹ ನಿಶ್ಯಬ್ದ. ಯಾವ ಅನುಭವಕ್ಕೂ ಕಾಯಬೇಡಿ; ಸುಮ್ಮನೆ ಇರಿ.

ಇದ್ದಕ್ಕಿದ್ದಂತೆ ಚೈತನ್ಯವು ನಿಮ್ಮ ಒಳಕ್ಕೆ ತುಂಬಿಕೊಳ್ಳುತ್ತಿರುವುದನ್ನು ಗಮನಿಸುತ್ತೀರಿ. ಇವೆಲ್ಲಾ ಗೌಪ್ಯವಾದ, ಅಥವಾ ಖಾಸಗಿಯಾದ ಭಾವನೆಗಳಲ್ಲ! ಅವುಗಳೆಲ್ಲಾ ಸ್ವಯಂವಾದ ಪ್ರಾಯೋಗಿಕ ತಂತ್ರಗಳು. ಅವುಗಳು ವಿಲಕ್ಷಣವಾಗಿ ಅಥವಾ ವಿರುದ್ಧವಾಗಿ ಕಾಣಬಹುದು. ಕಾರಣ ಮುಂಚಿತವಾಗಿ ನೀವು ಈ ಸ್ವರದಲ್ಲಿ ಒಳಹೊಕ್ಕು ಪರೀಕ್ಷಿಸಿರುವುದಿಲ್ಲ. ಸುಮ್ಮನೆ ಹಾಗೆಯೇ ನಿಮಗೆ ನೀವೇ ಯತ್ನಿಸಿ ನೋಡಿ. ಯಾವಾಗ ನಿಮ್ಮನ್ನೇ ನೀವು ಖಾಲಿ ಮಾಡಿಕೊಂಡು ಮತ್ತು ಅದನ್ನು ಪ್ರತಿಭಟಿಸದಿದ್ದಾಗ, ವಾಗುತ್ತದೆ. ನೀವು ದಿವ್ಯ ಸಂಗೀತಕ್ಕೆ ಒಂದು ಕೊಳಲಾಗಿ ಮಾರ್ಪಡುತ್ತೀರಿ.

ನೀವು ಮತ್ತೇನನ್ನೂ ಮಾಡಬೇಕಾಗಿಲ್ಲ, ಸುಮ್ಮನೇ ಖಾಲಿಯಾಗಿಬಿಡಿ. ಇದು ಅಷ್ಟು ಸುಲಭವಲ್ಲ. ನೀವು ಯಾವಾಗಲೂ ಯಾರೋ ಆಗಿ ಅಥವಾ ಯಾವುದೋ ಆಗಿ ಅಭ್ಯಾಸವಾಗಿಬಿಟ್ಟಿದೆ. ಮಹತ್ತರವಾದ ಹೆಚ್ಚಿನ ಪ್ರೀತಿ, ಹೆಚ್ಚಿನ ಶ್ರದ್ಧೆ ಬೇಕು. ನೀವು ಗುರುಗಳ ಬಳಿ ಆಭ್ಯಾಸದಲ್ಲಿ ತೊಡಗಿದ್ದರೆ, ನಿಮ್ಮ ಗುರುವು ಉಪಯೋಗಿಸಬಹುದಾದ (ನುಡಿಸಬಹುದಾದ) ಖಾಲಿ ಕೊಳಲು ಆಗಿಬಿಡಿ. ಪ್ರೀತಿಯಲ್ಲಿ ನಿಮ್ಮನ್ನು ನೀವು

ಧ್ಯಾನದ ತಂತ್ರಗಳು

ಕೊಡುವುದರಷ್ಟು, ಸುಲಭವಾಗಿ ಅದ್ಭುತವಾದ ದೈವೀ ಶಕ್ತಿಯಲ್ಲಿ ನಿಮ್ಮನ್ನು ಸುಲಭವಾಗಿ ಸಮರ್ಪಿಸಿಕೊಳ್ಳಲಾರಿರಿ.

ಮೊದಲಿಗೆ ನೀವು ಖಾಲಿಯಾದ (ಟೊಳ್ಳಾದ) ಬಿದುರಿನ ಬೊಂಬಾಗಿರುತ್ತೀರಿ, ಆನಂತರ ಆ ಬೊಂಬೇ ಇಲ್ಲದಂತಾಗುವ ಸಮಯ ಬರುತ್ತದೆ. ಆಗ ''ನೀನು'' ಎಂಬುದೇ ಇರುವುದಿಲ್ಲ.

ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುತ್ತದೆ, ಆದರೆ ಫಲಿತಾಂಶಗಳು ವಿಸ್ತಾರಕಾರಿ. ನಿಮ್ಮನ್ನು ನೀವು ಕಳೆದುಕೊಳ್ಳುತ್ತಿದ್ದಂತೆಯೇ, ಸರ್ವತ ವ್ಯಾಪಿಸಿರುವ ಚೈತನ್ಯದೊಂದಿಗೆ ಒಂದಾಗುವುದು ನಿಮಗೆ ತಾನೇ ತಾನಾಗಿ ಅನುಭವಕ್ಕೆ ಬರುತ್ತದೆ.

ತಂತ್ರದ ವಿಚಾರವಾಗಿ

ಈ ತಂತ್ರವು ವಿಪಾಸನದಿಂದ ಬಂದುದು.

ಉಸಿರನ್ನು ಸತತವಾಗಿ ಗಮನಿಸುವುದೇ ಧ್ಯಾನದ ನಿಜವಾದ ಸಾರವಾಗಿದೆ. ಇದೇ ಮಿಕ್ಕೆಲ್ಲಾ ಧ್ಯಾನಗಳಿಗಿಂತ ಹೆಚ್ಚು ಜನರನ್ನು ಜ್ಞಾನೋದಯದ ಕಡೆಗೆ ಸೆಳೆಯಿತು. ಉಪಾಸನವು ಅತಿ ಸರಳವಾಗಿದ್ದರೂ ಸಹ ಅರಿವನ್ನು ಹೆಚ್ಚಿಸುವುದರಲ್ಲಿ ಬಹಳ ಕಷ್ಟಕರವಾದ ತಂತ್ರವಾಗಿದೆ.

ಸೂಚನೆಗಳು:

ಉಪಾಸನ ಧ್ಯಾನವನ್ನು ಮಾಡಲು ಮೂರು ಮಾರ್ಗಗಳಿವೆ.

a) ನಿಮ್ಮ ಶರೀರ, ನಿಮ್ಮ ಕೃತ್ಯ, ನಿಮ್ಮ ಮನಸ್ಸು ಮತ್ತು ನಿಮ್ಮ ಹೃದಯ ಇವುಗಳ ವಿಚಾರವಾಗಿ ಆಳವಾದ ಅರಿವು ಇರಬೇಕಾದ್ದು

ನೀವು ನಡೆಯುವಾಗ, ನಿಮ್ಮ ಕೈಗಳನ್ನು ಚಲಿಸುವಾಗ, ನೀವು ಮುಗುಳ್ನಕ್ಕಾಗ, ಅದನ್ನು ಪೂರ್ಣ ಗಮನಿಸಿ ಅರಿವಿನಿಂದ ಮಾಡುವುದು. ಆ ಕೆಲಸಗಳನ್ನು ನೀವೇ ಸ್ವತಃ ಸಂಪೂರ್ಣವಾಗಿ ಚೆನ್ನಾಗಿ ಮಾಡುತ್ತಿದ್ದೀರೆಂಬುದನ್ನು ತಿಳಿದು ಮಾಡಿ. ಜಾಗರೂಕರಾಗಿರಿ. ಒಂದು ಕ್ಷಣಕಾಲವೂ ಸಹ ನೀವು ಮೈಮರೆತಿರಬಾರದು. ನಿಮಗೆ ತಿಳಿಯದಂತೆ ಯಾವ ಕೆಲಸವೂ ಸಹ ನಡೆಯಬಾರದು.

ನಿಮ್ಮ ಶರೀರವನ್ನು ಗಮನಿಸುವಂತೆಯೇ, ನಿಮ್ಮ ಹೃದಯವನ್ನೂ, ಮನಸ್ಸನ್ನೂ ಗಮನಿಸಿರಿ. ಭಾವನೆಗಳನ್ನೂ ಪ್ರತಿಯೊಂದು ಆಲೋಚನೆಗಳನ್ನೂ ಗಮನಿಸಿರಿ. ನೀವು ಯಾವ ಅಭಿಪ್ರಾಯಗಳನ್ನೂ ಹೊಂದದಿರಿ ಹಾಗೂ ಯಾವ ವಿಚಾರವಾಗಿಯೂ ಮೌಲ್ಯಮಾಪನ ಮಾಡಬೇಡಿರಿ - ಕೇವಲ ಸಾಕ್ಷೀಭಾವದಿಂದಿರಿ.

b) ಎರಡನೇ ವಿಧವೆಂದರೆ ನಿಮ್ಮ ಉಸಿರನ್ನು ಗಮನಿಸಿರಿ. ನಿಮ್ಮ ಹೊಟ್ಟೆಯು ಉಸಿರು ಎಳೆದುಕೊಂಡಾಗ (ಮೇಲೆ ಬರುವುದು) ದೊಡ್ಡದಾಗುವುದು ಮತ್ತು ಉಸಿರನ್ನು ಬಿಟ್ಟಾಗ ಒಳಕ್ಕೆ ಹೋಗುವುದು. ನಿಮ್ಮ ಜೀವ ಚೈತನ್ಯದ ಉಗಮ ಸ್ಥಾನವೇ ಹೊಕ್ಕಳು. ಆದ್ದರಿಂದ ನೀವು ಹೊಕ್ಕಳಿನ ಕುರಿತು ಗಮನ ಹರಿಸಿದಾಗ, ನೀವು ನಿಮ್ಮ ಜೀವ ಚೈತನ್ಯವು ನಿಮ್ಮ ದೇಹದಲ್ಲಿ ಹರಿಯುವುದನ್ನು ಅರಿಯುವವರಾಗುತ್ತೀರಿ. ನೀವು ಹೆಚ್ಚು ಹೆಚ್ಚು ಹೊಟ್ಟೆಯನ್ನು ಗಮನಿಸಿದಷ್ಟೂ, ನಿಮ್ಮ ಹೃದಯವು ಮತ್ತು ಮನಸ್ಸು ಶಾಂತವಾಗುವುದನ್ನು ತಿಳಿಯುತ್ತೀರಿ.

ಇದೇ ಸಹಜವಾದ ಮತ್ತು ವಿಶ್ರಮಿಸಿಕೊಳ್ಳುವ ರೀತಿಯ ಹೊಟ್ಟೆಯಿಂದಾಗುವ ಉಸಿರಾಟ. ನಾವು ಈ ರೀತಿ ಉಸಿರಾಡುವುದನ್ನು ಮರೆತಿದ್ದೇವೆ. ಮಕ್ಕಳು ಹೊಟ್ಟೆಯಿಂದ ಉಸಿರಾಡುತ್ತವೆ. ಕೆಲವು ವೇಳೆ ಗಾಢ ನಿದ್ರೆಯಲ್ಲಿ ನಾವೂ ಸಹ ಹೊಟ್ಟೆಯಿಂದ ಉಸಿರಾಡುತ್ತೇವೆ.

c) ಮೂರನೇ ತರಹದ ಉಪಾಸನವೆಂದರೆ ಮೂಗಿನಿಂದ ನಿಮ್ಮ ಶರೀರದೊಳಕ್ಕೆ ಉಸಿರು ಹೋಗುವುದನ್ನು ಗಮನಿಸುವುದು. ಮೂಗಿನ

ಧ್ಯಾನದ ತಂತ್ರಗಳು

ಮೂಲಕ ಒಳ ಹೋಗುವ ತಂಗಾಳಿಯನ್ನು ಗಮನಿಸಿರಿ. ನಿಮ್ಮ ಮೂಗಿನೊಳಕ್ಕೆ ಹೋಗುವ ಮತ್ತು ಹೊರ ಬರುವ ಉಸಿರಿನ ಸುಖಾನುಭವವನ್ನು ಗಮನಿಸಿರಿ.

ನೀವು ಎರಡು ತರಹದ ಅಥವಾ ಮೂರೂ ರೀತಿಯ ಉಸಿರಾಟವನ್ನು ಸೇರಿಸಲೂ ಬಹುದು. ಆದರೆ ನಿಮಗೆ ಯತ್ನವಿಲ್ಲದೆ ಸುಲಭವಾಗುವುದನ್ನು ಮಾತ್ರ ಮಾಡಿರಿ.

ಉಪಾಸನ (ಧ್ಯಾನ)ವನ್ನು ಕುಳಿತು ಮತ್ತು ಓಡಾಡುತ್ತಲೂ ಸಹ ಅಭ್ಯಾಸ ಮಾಡಬಹುದು.

ಕುಳಿತು ಮಾಡುವುದು:

45 ನಿಮಿಷಗಳ ಕಾಲ ನಂತರ 15 ನಿಮಿಷ ವಿರಾಮ.

ನಿಮಗೆ ಅನುಕೂಲವಾಗುವ ಆಸನದಲ್ಲಿ ಕುಳಿತುಕೊಳ್ಳಿ, ಬೆನ್ನು ನೆಟ್ಟಗೆ ಮಾಡಿ ಮುಂದೆ ನೋಡುತಾ ಇರಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಸಹಜವಾಗಿ ಉಸಿರಾಡಿರಿ. ಕದಲದೆ (ಜಾಗ ಬದಲಾಯಿಸದೆ) ಸುಮ್ಮನೆ ಕುಳಿತುಕೊಳ್ಳಿರಿ.

ನೀವು ಉಸಿರು ತೆಗೆದುಕೊಂಡಾಗ, ಬಿಟ್ಟಾಗ ನಿಮ್ಮ ಹೊಟ್ಟೆಯು ಮೇಲೆ ಕೆಳಗೆ ಹೋಗುವುದನ್ನು ಗಮನಿಸಿರಿ. ಉಸಿರಾಟದ ಮೇಲೆ ಏಕಾಗ್ರ ಚಿತ್ತರಾಗಬೇಡಿ, ಹಾಗೇ ಸುಮ್ಮನೆ ಗಮನಿಸಿರಿ. ನೀವು ಏನಾದರೂ ಆಲೋಚನೆಗಳಾಗಲೀ, ಭಾವನೆಗಳಾಗಲೀ ಅಥವಾ ಶಾರೀರಿಕ ಸಂವೇದನೆಗಳಾಗಲೀ ಬರುವುದನ್ನು ಗಮನಿಸಿದರೆ, ಬರಲಿ ಬಿಡಿ (ತಡೆಯಬೇಡಿ). ಅವುಗಳನ್ನೂ ಸಾಕ್ಷೀಭಾವದಿಂದ ನೋಡುತ್ತಾ, ನಿಮ್ಮ ಉಸಿರಾಟವನ್ನು ಗಮನಿಸಿರಿ. ನೀವು ಏನನ್ನು ಗಮನಿಸುತ್ತಿದ್ದೀರೆಂಬುದಕ್ಕಿಂತ, ಗಮನಿಸುವ ವಿಧಾನ ಬಹಳ ಮುಖ್ಯ. ಎಲ್ಲವನ್ನೂ ಗಮನಿಸಿ.

45 ನಿಮಿಷಗಳ ನಂತರ ಗಮನಿಸುವುದನ್ನೂ ಬಿಟ್ಟುಬಿಡಿ. ಸುಮ್ಮನೆ ಎಲ್ಲವನ್ನೂ ಬಿಟ್ಟುಬಿಡಿ. ಬಿಟ್ಟುಬಿಡಿ, ಸುಮ್ಮನೆ ವಿಶ್ರಮಿಸಿ.

ಓಡಾಡುವಿಕೆ :

ಸಮಯ: 20 ನಿಮಿಷಗಳ ಕಾಲ ನಂತರ 10 ನಿಮಿಷ ವಿಶ್ರಾಂತಿ.

ಈ ಧ್ಯಾನದಲ್ಲಿ ನಿಮ್ಮ ಗಮನವು ನಿಮ್ಮ ಪಾದಗಳು ಭೂಮಿಯನ್ನು ಸ್ಪರ್ಶಿಸುತ್ತಿರುವುದರ ಕಡೆಗೇ ಇರಲಿ.

ನೀವು ವೃತ್ತಾಕಾರವಾಗಿಯಾದರೂ ಅಥವಾ ನೇರವಾಗಿಯಾದರೂ ಸುಮಾರು 15 ಹೆಜ್ಜೆಯನ್ನು ಹಿಂದಕ್ಕೂ ಮುಂದಕ್ಕೂ ನಡೆಯಬೇಕು. ಈ ಧ್ಯಾನವನ್ನು ನಿಮ್ಮ ಮನೆಯಲ್ಲಿ ಒಂದು ರೂಮಿನಿಂದ ಇನ್ನೊಂದು ರೂಮಿಗೆ ಚಲಿಸುತ್ತಾ ಅಥವಾ ನಿಮ್ಮ ತೋಟ (ಅಂಗಳ)ದಲ್ಲಿ ಓಡಾಡುತ್ತಾ ಅಭ್ಯಾಸ ಮಾಡಬಹುದು.

ಈ ರೀತಿ ನಡೆಯುವಾಗ ನಿಮ್ಮ ಕಣ್ಣುಗಳು ಕೆಲವು ಹೆಜ್ಜೆಗಳ ಅಂತರ ಭೂಮಿಯನ್ನು ಮುಂದೆ ನೋಡುತ್ತಾ ಓಡಾಡಿರಿ. ನೀವು ಕುಳಿತು ಮಾಡುವ ಹೊಟ್ಟಿಯ ಧ್ಯಾನದಂತೆಯೇ ಇದರಲ್ಲಿಯೂ ಪ್ರತಿ ಹೆಜ್ಜೆಗಳೂ ಭೂಮಿಯನ್ನು ಸ್ಪರ್ಶಿಸುವ ಸಂವೇದನೆಯನ್ನೂ ಗಮನಿಸುತ್ತಾ ನಡೆಯಿರಿ. ಏನಾದರೂ ಬೇರೆ ಆಲೋಚನೆಗಳು, ಸಂವೇದನೆಗಳು ಬಂದರೆ, ಅವುಗಳನ್ನೂ ಸುಮ್ಮನೆ ಬಿಡಿ (ಬಂದರೆ ಬರಲಿ) ನಿಮ್ಮ ಗಮನವನ್ನು (ಬೇರೆಡೆಗೆ) ಸೆಳೆಯುವಂತಹದೇನಿದ್ದರೂ ಅದು ನಿಮಗೆ (ಧ್ಯಾನದಲ್ಲಿ) ಅಡ್ಡಿ ಅಥವಾ ತಡೆ ಆಯಿತೆಂದು ಭಾವಿಸಬೇಡಿರಿ. ನೀವು ಸಂವೇದನೆಯನ್ನಾಗಲೀ, ಆಲೋಚನೆಗಳನ್ನಾಗಲೀ ಸಾಕ್ಷಿಯಾಗಿ ನೋಡಿದ್ದು ಮುಗಿದ ನಂತರ ಪುನಃ ನಿಮ್ಮ ಪಾದಗಳನ್ನು ಗಮನಿಸಿರಿ.

ಧ್ಯಾನವನ್ನು ಕುರಿತು

ಈ ತಂತ್ರವು ಉಸಿರನ್ನು ಆಳವಾಗಿ, ಪೂರ್ಣವಾಗಿ ಹೊರಗೆ ಬಿಡುವುದರ ಮೇಲೆ ಕೇಂದ್ರೀಕರಿಸಲ್ಪಟ್ಟಿದೆ. ನಮ್ಮ ಜೀವನವೆಲ್ಲಾ ಉಸಿರನ್ನು ತೆಗೆದುಕೊಳ್ಳುವುದರಲ್ಲಿಯೇ ತೆಗೆದು

ಧ್ಯಾನದ ತಂತ್ರಗಳು

ಕೊಳ್ಳುವುದು ಜೀವನ, ಉಸಿರನ್ನು ಬಿಡುವುದು ಮರಣ. ಜೀವಿಸುವುದು ಒತ್ತಡ, ಪ್ರಯತ್ನ ಮರಣ ಹೊಂದುವುದು ವಿಶ್ರಾಂತಿ.

ನಮ್ಮ ಮರಣ–ಭಯದ ಕಾರಣ ನಾವು ಉಸಿರನ್ನು ಹೊರಗೆ ಬಿಡಲು ಭಯ ಪಡುತ್ತೇವೆ! ನಮ್ಮ ಪ್ರಾಧಾನ್ಯತೆಯನ್ನು ಯಾವಾಗಲೂ ಉಸಿರು ತೆಗೆದು ಕೊಳ್ಳುವುದರಲ್ಲೇ (ಇಟ್ಟಿರುತ್ತೇವೆ), ಏಕೆಂದರೆ ಉಸಿರು ಹೊರಗೆ ಬಿಡುವುದು ಅನಿವಾರ್ಯ (ತನಗೇ ತಾನೇ ಆಗಿಬಿಡುತೆ).

ನಾವು ಸಾಕಷ್ಟು ಉಸಿರನ್ನು ಹೊರ ಬಿಡುವುದಿಲ್ಲವೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ನಿಮ್ಮ ಶ್ವಾಸಕೋಶಗಳಲ್ಲಿರುವ (ಸಣ್ಣ ಸಣ್ಣ) ಆರು ಸಾವಿರ ಕೋಶಗಳಲ್ಲಿ (ಚೀಲಗಳಲ್ಲಿ) ನೀವು ಉಸಿರು ಬಿಟ್ಟಾಗ ಕೇವಲ ಎರಡು ಸಾವಿರ ಕೋಶಗಳು ಮಾತ್ರ ಖಾಲಿ ಮಾಡಲ್ಪಡುತ್ತವೆ. ಮಿಕ್ಕ ನಾಲ್ಕು ಸಾವಿರ ಕೋಶಗಳಲ್ಲಿ ಹಳೆಯ ಉಳಿದಿರುತ್ತದೆ. ಆ ವಿಷಪೂರಿತ ಗಾಳಿಯು ನಮ್ಮ ಎದೆಯಲ್ಲಿ ಹಾಗೆಯೇ ಉಳಿದು ಖಾಯಿಲೆಗಳಿಗೂ, ಉದ್ವೇಗಕ್ಕೂ ಕಾರಣವಾಗಿ ಬಿಡುತ್ತದೆ. ಈ ಧ್ಯಾನದಲ್ಲಿ ನೀವು ಉಸಿರನ್ನು ಒಳಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ, ಉಸಿರನ್ನು ಹೊರಗೆ ಬಿಡುವುದರಲ್ಲಿಯೇ ಕೇಂದ್ರೀಕರಿಸುತ್ತೀರಿ. ನೀವು ವಿರುದ್ಧ ಆಯಾಮದ ಅನುಭವವನ್ನು ಪಡೆಯುತ್ತೀರಿ. ನೀವು ಸಂಪೂರ್ಣವಾಗಿ ಉಸಿರನ್ನು ಹೊರ ಬಿಟ್ಟು ಪೂರ ಖಾಲಿಯಾಗುವ ಅನುಭವವನ್ನು ಪಡೆಯುತ್ತೀರಿ.

ಈ ತಂತ್ರದಲ್ಲಿ ನೀವು 'ಹಾ' ಅಥವಾ 'ಆ' ಎನ್ನುವ ಅಕ್ಷರವನ್ನು ಶಾಂತತೆಯಿಂದ ಉಚ್ಚರಿಸುತಾ ಮುಗಿಸುತ್ತೀರಿ. ಅದು ಯಾವ ಪದ (ಶಬ್ದ) ಬೇಕಾದರೂ ಆಗಬಹುದು. ಶಾಂತತೆಯಿಂದ ಮುಗಿಸುವುದರಲ್ಲಿ ಕೇಂದ್ರೀಕರಿಸಿರಿ. 'ಹಾ' ಎನ್ನುವುದರಿಂದ ನೀವು ಸಂಪೂರ್ಣವಾಗಿ ಖಾಲಿಯಾಗುತ್ತೀರಿ. ನಿಮ್ಮ ಶ್ವಾಸವು ಪೂರ್ಣವಾಗಿ ಹೊರ ಹೋಗುತ್ತದೆ. ಒಂದು ಕ್ಷಣದಲ್ಲಿ ನೀವು ಉಸಿರನ್ನೇ

ಆಡದವರಾಗುತ್ತೀರಿ. ನೀವು ಸಾವಿನ ಒಂದು ಕ್ಷಣದ ಅನುಭವವನ್ನು ಪಡೆಯುತ್ತೀರಿ. ನಮ್ಮ ಜೀವನಾರಂಭ್ಯ, ನಾವು ಉಸಿರನ್ನು ತೆಗೆದುಕೊಳ್ಳುವುದು, ಬಿಡುವುದು ಇವನ್ನು ಮಾಡುತ್ತಲೇ ಇದ್ದರೂ ಸಹ ನಾವು ಇವೆರಡರ ಮಧ್ಯದ ಬಿಡುವನ್ನು (ಅಂತರವನ್ನು) ಗಮನಿಸಿಯೇ ಇಲ್ಲ. ಯಾವಾಗ ನೀವು ಅದನ್ನು ಗಮನಿಸಿ ಅರಿತಿರೋ ಆಗಲೇ ನೀವು ಮರಣದ ಸಾಕ್ಷಿಯಾಗುತ್ತೀರಿ. ಹಾಗೂ ನೀವು ನಿಮ್ಮ ಉಸಿರಾಟಕ್ಕಿಂತ (ಪ್ರಾಣಕ್ಕಿಂತ) ಆಚೆಗೆ ಹೋಗಬಲ್ಲಿರಿ ಎಂಬುದನ್ನು ಅರ್ಥಮಾಡಿಕೊಳ್ಳುತ್ತೀರಿ.

ನಾವು ಇಲ್ಲಿಯವರೆಗೂ ಸಾವಿನ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ - ಆದರೆ ನಮಗೂ ಸಾವು ಬರುವುದೆಂದು ಅಂದುಕೊಂಡೇ ಇರುವುದಿಲ್ಲ. ಆದರೂ ನಾವು ಪ್ರತಿ ಕ್ಷಣವೂ ಉಸಿರನ್ನು ಹೊರಗೆ ಬಿಡುತ್ತಲೇ ಇದ್ದೇವೆ, ಅಂದರೆ ಮೌನವಾಗಿ ನಮ್ಮ ಶರೀರವು ಮರಣಕ್ಕೆ ತಯಾರಿ ನಡೆಸುತ್ತಲೇ ಇದೆ! ನಮ್ಮ ಶರೀರವು ಸಾವಿನ ಸ್ಥಿತಿಯನ್ನು ಒಪ್ಪಿಕೊಳ್ಳುತ್ತಲೇ ಇದೆ.

ನೀವು ಉಸಿರನ್ನು ಖಾಲಿ ಮಾಡಿದಾಗಲೆಲ್ಲಾ, ನೀವು ನಿಮ್ಮ ಜೀವನವನ್ನೂ ಒತ್ತಡಗಳಿಂದ, ತೊಂದರೆಗಳಿಂದ, ಭಾವನೆಗಳಿಂದ, ಆಸೆ ಆಕಾಂಕ್ಷೆಗಳಿಂದ ಖಾಲಿ ಮಾಡುತ್ತಿರುತ್ತೀರಿ. ಆ ಘಳಿಗೆಯು ಒಂದು ಪರಮ ಶ್ರೇಷ್ಠವಾದ ವಿಶ್ರಾಂತಿ. ಕೆಲವು ವೇಳೆ ಅದನ್ನು ನಮಗೇ ತಿಳಿಯದಂತೆ ಮಾಡುತ್ತಿರುತ್ತೇವೆ. ನಾವು ಒತ್ತಡದಿಂದ ಇದ್ದಾಗ ಅಥವಾ ಗೊಂದಲದಲ್ಲಿ ಸಿಕ್ಕಾಗ, ನಾವು ವಿಶ್ರಾಂತಿ ಪಡೆಯಬೇಕೆಂದರೆ, ಅದು ಆಗಲಾರದೆ ಬಹಳವಾಗಿ ನಿಟ್ಟುಸಿರು ಬಿಡುತ್ತೇವೆ. –ಹಾಗೆ ನಿಟ್ಟುಸಿರು ಬಿಟ್ಟ ನಂತರ (ಏನೂ ತಿಳಿಯದಂತಾಗಿ) ಉಸಿರಾಡುವುದನ್ನೂ ಒಂದು ಕ್ಷಣ ಕಾಲ ನಿಲ್ಲಿಸಿಬಿಟ್ಟಿರುತ್ತೇವೆ, ಅಂದರೆ ಸುಮ್ಮನೆ ಇದ್ದು ಬಿಡುತ್ತೇವೆ. ಆ ಘಳಿಗೆಯಲ್ಲಿ ಹೆಚ್ಚಿನ ಶಾಂತಿಯಿಂದ ಇರುವ ಅನುಭವವಾಗುತ್ತದೆ.

ಆ ಘಳಿಗೆಯಲ್ಲಿ, ನೀವು ಏನನ್ನಾದರೂ ಮಾಡುವುದು, ಹೊಂದುವುದು, ಇರುವುದು ಇವುಗಳಲ್ಲಿ ತೊಡಗದೇ ಇದ್ದಾಗ ತನಗೆ ತಾನೇ ಆ ಶಾಂತಿಯು

ವೇದ್ಯವಾಗುವುದು. ನೀವು ಅದರ ಕ್ಷಣಿಕ ಅನುಭವವನ್ನು ಪಡೆಯುತ್ತೀರಿ. ಒಮ್ಮೆ ನೀವು ಅದನ್ನು ಅನುಭವಿಸಿದರೆ, ಅದನ್ನು ನೀವು ಎಂದೂ ಮರೆಯಲಾರಿರಿ. ಅದು ಅಷ್ಟು ಸರಳವಾದ ಅಭ್ಯಾಸವಾದರೂ ಸಹ ಅದೊಂದು ಪರಿಣಾಮ ಉಳ್ಳದಾಗಿರುತ್ತದೆ! ಈ ಧ್ಯಾನವನ್ನು ನೀವು ಮುಂದುವರಿಸುತಿದ್ದರೆ, ನೀವು ಪಡೆದವರಾಗುತ್ತೀರಿ. ದುಗುಡ, (ಉದ್ವೇಗ)ಗಳು ಸುಲಭವಾಗಿ ನಿಮ್ಮನ್ನು ಸಮೀಪಿಸಲಾರವು. ಹೊರಗಿನ ಪರಿಸ್ಥಿತಿಗಳು ಎಂತಹುದೇ ಬರಲಿ, ಅವುಗಳನ್ನು ಬಹಳ ಸುಲಭವಾಗಿ ಎದುರಿಸಬಲ್ಲೆವೆಂಬುದು ನಿಮಗೇ ತಿಳಿದು ಬರುತ್ತದೆ. ಒಂದು ಸಾರಿ ನೀವು ಸಾವಿನ ಕ್ಷಣವನ್ನು ಆಳವಾದ ಅರಿವಿನಿಂದ ಅನುಭವಿಸಿದವರಾದರೆ, ಈ ಹೊರಗಿನ ಜೀವನದ (ಆಗುಹೋಗುಗಳು)

ತಂತ್ರದ ಬಗ್ಗೆ

ನೀವು ಸದಾಕಾಲವೂ ಹೊರಗಡೆಯೇ ಮಗ್ನರಾಗಿರುತ್ತೀರಿ. ನಿಮ್ಮ ಚೈತನ್ಯವು ಯಾವಾಗಲೂ ಹೊರಗಿನ ಪ್ರಪಂಚದದತ್ತಲೇ ಕೇಂದ್ರೀಕೃತವಾಗಿರುತ್ತದೆ. ಏನನ್ನಾದರೂ ನೀವು ನೋಡಿದರೆಂದರೆ, ನಿಮ್ಮ ಅರಿವು (ಗಮನವು) ಆ ಕಡೆಗೆ ಹರಿಯುತ್ತದೆ. ನಿಮ್ಮ ಗಮನ ನಿಮ್ಮ ಮೇಲಿಲ್ಲದೆ, ಸದಾ ಹೊರಗಿನ ವಸ್ತುಗಳ ಮೇಲೆಯೇ ಇರುತ್ತದೆ. ಎಲ್ಲಾ ಸಮಯದಲ್ಲೂ ಸಹ ನಮ್ಮನ್ನು ಬಿಟ್ಟು ಬೇರೆ ಯಾವುದರ ಮೇಲಾದರೂ ನಮ್ಮ ಗಮನವಿರುತ್ತದೆ. ತೀವ್ರವಾಗಿ ಯಾವುದರ ಮೇಲಾದರೂ ನಮ್ಮ ಗಮನ ಹರಿದಾಗ (ಅಂದರೆ) ಸುಂದರವಾದ ಸೂರ್ಯ ಮುಳುಗುವ ದೃಶ್ಯ, ಸುಶ್ರಾವ್ಯವಾದ ಸಂಗೀತ (ಹೀಗೆ), ಆಗ ನಮ್ಮನ್ನೇ ನಾವು ಸಂಪೂರ್ಣವಾಗಿ ಮರೆತು ಅದರಲ್ಲಿಯೇ ತಲ್ಲೀನರಾಗಿರುತ್ತೇವೆ. ಇದೊಂದು ಅತಿಶಯದ ಅನುಭವ

ಮನೋಲಯದ ಸ್ಥಿತಿ. ಅರಿವು ಇರುವ ಸ್ಥಿತಿಯಲ್ಲಿ ಬೇರೆಯದರ ಪರಿಜ್ಞಾನ ಇರುವುದು ಮಾತ್ರವಲ್ಲ, ವಿಷಯದ ಅರಿವೂ ಇರುತ್ತದೆ. ಅಂದರೆ ನೀವು ಬೇರೆಯದನ್ನೆಲ್ಲಾ (ಕರ್ತೃವನ್ನೂ) ನಿಮ್ಮನ್ನೂ ನೋಡಬಲ್ಲವರಾಗುತ್ತೀರಿ. ಸಾಧಾರಣವಾಗಿ, ನಿಮ್ಮ ಶಕ್ತಿಯು (ಚೈತನ್ಯವು) ಯಾವಾಗಲೂ ಹೊರಮುಖವಾಗಿಯೇ, ಹೊರಗಿನ ಘಟನೆಗಳಲ್ಲಿಯೇ ಹರಿಯುತ್ತಿರುತ್ತದೆ. (ಟಾಯೋಯಿಸ್ ) Taoist ಅನುಭವದ ಪ್ರಕಾರ ಹೊರಕ್ಕೆ ಹರಿಯಗೊಡದೆ, ಈ ಚೈತನ್ಯವು ಹರಿಯುವುದನ್ನು ಹಿಂದಕ್ಕೆ ನಿಮ್ಮ ಒಳಕ್ಕೇ (ನಿಮ್ಮ ಕಡೆಗೇ) ತಿರುಗಿಸಿಕೊಂಡು ಬಿಡಬಹುದು.

ಸೂಚನೆಗಳು:

ಒಂದು ದೊಡ್ಡ ನಿಲುವುಗನ್ನಡಿಯ ಮುಂದೆ ನಿಂತು ನಿಮ್ಮನ್ನೇ ನೋಡಿಕೊಳ್ಳಿರಿ. ಹೊರಗಿನಿಂದಲೂ ನಿಮ್ಮನ್ನು ನೀವು ಒಮ್ಮೆ ಚೆನ್ನಾಗಿ ನೋಡಿಕೊಳ್ಳಿರಿ.

ಹೊರಗಿನ ನೀವು ಕರ್ತೃ; ಕನ್ನಡಿಯ ಒಳಗಿನ ಪ್ರತಿಬಿಂಬವು ನೀವು ಗಮನಿಸುತ್ತಿರುವ ಹೊರಗಿನ ವಸ್ತು. ನಿಮ್ಮ ಚೈತನ್ಯವು ಆ ಹೊರಗಿನ ವಸ್ತುವಿನ ಕಡೆ ಹರಿಯುತ್ತಿರುವುದನ್ನು ಕಾಣುವಿರಿ. ನಿಮ್ಮ ಕಣ್ಣುಗಳನ್ನು ಹೊರಗಿನಿಂದಲೇ ನೋಡಿರಿ. ನೀವು ನೋಡುತ್ತಿದ್ದೀರಿ, ಮತ್ತು ಆ ಪ್ರತಿಬಿಂಬವು ನೋಡಲ್ಪಡುತ್ತಿದೆ.

ಈಗ ಇದು ಅದಲು ಬದಲಾದಂತೆ ಕಲ್ಪಿಸಿಕೊಳ್ಳಿರಿ! (ಅಂದರೆ) ಪ್ರತಿಬಿಂಬವು ಎದ್ದು ನಿಮ್ಮನ್ನು ನೋಡುತ್ತಿದೆ ಎಂದು ಕಲ್ಪಿಸಿಕೊಳ್ಳಿರಿ. ಇದು ಮೊದಲು ನಿಮಗೆ ಭಯವನ್ನು ಕಲ್ಪಿಸಿಕೊಳ್ಳುವುದು ಅಂದರೆ ಅದೇ ನಿಮ್ಮನ್ನು ಗಮನಿಸುತ್ತಿದೆ ಎನ್ನುವುದು ನಿಮಗೆ ಅಭ್ಯಾಸವಿಲ್ಲ.

ಈ ಕಲ್ಪನೆಯ ಅನುಭವವು (ಹೊಸದಾಗಿಯೂ, ವಿಲಕ್ಷಣವಾಗಿಯೂ, ಭಯಾನಕ ವಾಗಿಯೂ)ಕಂಡರೂ ಅದನ್ನೇ ಮುಂದುವರಿಸಿರಿ. ಕೆಲವೇ ಕ್ಷಣಗಳಲ್ಲಿ, ಒಂದು

ದೊಡ್ಡ ಬದಲಾವಣೆಯನ್ನು ನೀವು ಕಾಣುವಿರಿ. ಆ ಪ್ರತಿಬಿಂಬದಿಂದ ಚೈತನ್ಯವು ನಿಮ್ಮ ಕಡೆಗೆ ಹರಿಯಲು ಪ್ರಾರಂಭಿಸಿರುವುದನ್ನು ಗಮನಿಸುತ್ತೀರಿ! ಇದು ನಿಜವಾಗಿಯೂ ಭಯಾನಕವಾದುದು. ಗಾಬರಿ ಹಿಡಿಸುವಂತಹದು. ನಿಮ್ಮ ಜೀವನದಲ್ಲೆಲ್ಲಾ ಹೊರಮುಖವಾಗಿಯೇ ನೋಡುತ್ತಾ, ನಿಮ್ಮ ಚೈತನ್ಯವೂ ಸಹ ಹೊರಗಡೆಗೇ ಹರಿಯುವುದನ್ನು ನೋಡಿ ಅಭ್ಯಾಸವಾಗಿಬಿಟ್ಟಿದೆ. ಇದ್ದಕ್ಕಿದ್ದಂತೆ ಈ ಅನುಭವವು ಆಘಾತಗೊಳಿಸಿದಂತಾಗಬಹುದು. ಆದರೆ ಖಂಡಿತವಾಗಿಯೂ ಈಗ ಆ ಚೈತನ್ಯದ ಹರಿಯುವಿಕೆಯು ನಿಮಗೆ ಅನುಭವಕ್ಕೆ ಬರುತ್ತದೆ, ಕಾರಣ, ಈಗ ಆ ಚಲಿಸುವ ಮಾರ್ಗವನ್ನೇ ನೀವು ಮುಚ್ಚಿಬಿಟ್ಟಿದ್ದೀರಿ. ಈ ರೀತಿ ಚೈತನ್ಯವು ಹರಿಯುವ ಮಾರ್ಗವನ್ನೇ ಮುಚ್ಚಿದಾಗ, ಆ ಚೈತನ್ಯವು ವ್ಯರ್ಥವಾಗದಂತೆ ಜಾಗರೂಕತೆ ವಹಿಸಿದ್ದೀರಿ ಎಂದರ್ಥ. ಆದ್ದರಿಂದ ಅದು ಹಿಂದಕ್ಕೆ ತಿರುಗಿ ನಿಮ್ಮ ಕಡೆಗೇ ಹರಿದು ಬರುತ್ತದೆ. ನಿಮ್ಮ ಆ ಚೈತನ್ಯವನ್ನು ನಿಮಗಾಗಿಯೇ ಕಾಯ್ದು ಶೇಖರಿಸಿಕೊಳ್ಳುತ್ತೀರಿ.

ಈ ತಂತ್ರವನ್ನು ಕೆಲವು ದಿವಸಗಳವರೆಗೆ ಅಭ್ಯಾಸ ಮಾಡಿರಿ, ತಪ್ಪದೇ ನೀವು ಬದಲಾವಣೆಯನ್ನು ಕಾಣುತ್ತೀರಿ. ನೀವು ಹೆಚ್ಚು ಕೇಂದ್ರೀಕೃತರಾಗಿ, ಶಕ್ತಿಯುತರಾಗಿ, ಮಹತ್ತರವಾದ ಶಾಂತಿಯನ್ನು ಅನುಭವಿಸುತ್ತೀರಿ.

ಇದನ್ನು ಕೇಂದ್ರೀಕರಿಸುವದಷ್ಟೇ ಅಲ್ಲ. ಯಾವುದರ ಕುರಿತು ಬೇಕಾದರೂ ಕೇಂದ್ರೀಕರಿಸಬಹುದು. ನೀವು ನಿಮ್ಮ ಚೈತನ್ಯವನ್ನು ಯಾವುದರ ಮೇಲಾದರೂ ಹರಿಸಿದರೆ, ಅದು ಪುನಃ ಹಿಂದಿರುಗಿ ನಿಮಗೇ ಬರುತ್ತಿದೆ ಎಂದು ಕಲ್ಪಿಸಿಕೊಳ್ಳಿರಿ. ಅದು ನಿರ್ಜೀವ ವಸ್ತು ಬೇಕಾದರೂ ಆಗಿರಬಹುದು. ಪರವಾಗಿಲ್ಲ (ಅದಕ್ಕೆ ಚಿಂತಿಸಬೇಕಾಗಿಲ್ಲ) - ಆ ಚೈತನ್ಯವು ನಿಮಗೇ ಹರಿದು ಬಂದು ನಿಮ್ಮನ್ನು ನವೋತ್ಸಾಹಭರಿತರನ್ನಾಗಿಯೂ, ಪುನಶ್ಚೇತನ ಪಡೆದವರನ್ನಾಗಿಯೂ ಮಾಡಿದ ಆ ಅನುಭವವನ್ನು ನೀವು ಹೊಂದುತ್ತೀರಿ.

ಧ್ಯಾನದ ತಂತ್ರಗಳು

ಧ್ಯಾನವನ್ನು ಕುರಿತು

ಮಾತಿನಲ್ಲಿ ವಿವರಿಸಲಾಗದಂತಹ ಮಧುರವಾದ ಧ್ಯಾನ. ಇದನ್ನು ಧ್ಯಾನ ಎನ್ನುವುದಕ್ಕಿಂತ ಪ್ರಾರ್ಥನೆ ಎನ್ನಬಹುದು.

ಈ ಧ್ಯಾನವು ಅಸ್ತಿತ್ವದ ಸಂಪೂರ್ಣ ಚೈತನ್ಯದೊಂದಿಗೆ ನಿಮ್ಮನ್ನು ಸೇರಿಸಲು ನೇರವಾದ ದಾರಿಯಾಗಿದೆ. ಇದನ್ನು ನೀವು ರಾತ್ರಿ ಮಲಗುವ ಮುನ್ನ (ನಿದ್ರೆ ಹೋಗುವ ಮುನ್ನ) ಚೆನ್ನಾಗಿ ಅಭ್ಯಾಸ ಮಾಡಬಹುದು. ಇದನ್ನು ಹಗಲು ಹೊತ್ತು ನೀವು ಮಾಡಿದಲ್ಲಿ ಚೈತನ್ಯವನ್ನು ಹೀರಿಕೊಳ್ಳಲು, ಧ್ಯಾನಾನಂತರ ಹದಿನೈದು ನಿಮಿಷಗಳ ಕಾಲ ತಪ್ಪದೇ ವಿಶ್ರಾಂತಿಯನ್ನು ಪಡೆಯಲೇ ಬೇಕು. ಇಲ್ಲವಾದರೆ, ಕೆಲವು ಗಂಟೆಗಳ ಕಾಲ ನೀವು ಮಂಕು ಕವಿದಂತೆ ಇರುತ್ತೀರಿ! ( ನಿಮ್ಮಲ್ಲಿ ಚುರುಕುತನವು ಇರುವುದಿಲ್ಲಿ !

ಸೂಚನೆಗಳು:

ಧ್ಯಾನಕ್ಕೆ ತಂಪಾದ, ಕತ್ತಲೆಯ, ಸಾಕಷ್ಟು ಗಾಳಿ ಸಂಚಾರವಿರುವ ಒಂದು ಕೊಠಡಿಯನ್ನು ಆರಿಸಿಕೊಳ್ಳಿ. ಮನೆಯ ಹೊರಗಡೆ ಧ್ಯಾನವನ್ನು ಮಾಡಬೇಕೆನಿಸಿದರೆ, ಅದನ್ನು ಸ್ವಂತ ಅಥವಾ ಗೌಪ್ಯವಾದ ಸ್ಥಳದಲ್ಲಿ ಅಭ್ಯಾಸ ಮಾಡಬಹುದು. ಮಂಡಿಯೂರಿ ಕುಳಿತುಕೊಳ್ಳಿರಿ. ನಿಮಗೆ ಅನುಕೂಲ ವಾಗುವುದಾದರೆ ಕುಳಿತುಕೊಳ್ಳಲು ಒಂದು ಚಾಪೆಯನ್ನು ಉಪಯೋಗಿಸಿ ಕೊಳ್ಳಿರಿ. ನಿಮ್ಮ ಮಂಡಿಯೂರಿಕೊಂಡೇ ಹಾಗೆಯೇ ಎದ್ದು ನಿಲ್ಲಿ, ನಿಮ್ಮ

ತೋಳುಗಳನ್ನು ಆಕಾಶದತ್ತ ಮೇಲಕ್ಕೆ ಎತ್ತಿರಿ. ನಿಮ್ಮ ಮುಖವನ್ನು ಆಕಾಶದ ಕಡೆಗೆ ಎತ್ತುತ್ತಾ ಸ್ಥಿರ ಹೊತ್ತು ಹಾಗೆಯೇ ಇರಿ. ಕೆಲವು ಕ್ಷಣದಲ್ಲೇ ಅಸ್ತಿತ್ವದ ಚೈತನ್ಯವು ನಿಮ್ಮ ಮೈಯೊಳಕ್ಕೆ ಹರಿಯುವುದನ್ನು ಅನುಭವಿಸುತ್ತೀರಿ. ಅದನ್ನು ತಡೆಯಬೇಡಿರಿ. ಆ ಚೈತನ್ಯವು ನಿಮ್ಮೊಳಗೆ ಪ್ರವೇಶಿಸಲು ಬಿಡಿ. ನಿಮ್ಮ ಕೈಗಳು ನಡುಗುತ್ತಿರುವುದನ್ನು ಕಾಣುವಿರಿ; ಹಾಗೆಯೇ ನಿಮ್ಮ ಪೂರ್ತಿ ಶರೀರವೂ ಚೈತನ್ಯದಿಂದ ನಡುಗುವುದು ಮತ್ತು ತೂಗಾಡುವುದನ್ನು ಅನುಭವಿಸುತ್ತೀರಿ. ಹಾಗೆ ದೇಹವು ಚಲಿಸಲು ಅವಕಾಶವನ್ನು ಕೊಡಿ.

ನೀವು ಈ ಚೈತನ್ಯವನ್ನು ಕುಡಿದು (ಮೈಗೂಡಿಸಿಕೊಂಡ ಮೇಲೆ) ಭೂಮಿ ಮತ್ತು ಸ್ವರ್ಗವು ಸೇರಿ ಒಂದಾಗುವ ಸ್ಥಳವೇ ನೀವಾಗಿಬಿಡುತ್ತೀರಿ. ಆಗ ನೀವು ತೇಲುತಿರುವಿರಿ, ನಿಮಗೆ ಶರೀರವೇ ಇಲ್ಲ ಎನ್ನುವ ಅನುಭವವನ್ನು ಹೊಂದುತೀರಿ.

ನೀವು ಪೂರ್ಣವಾಗಿ - (ಚೈತನ್ಯದಿಂದ) - ತುಂಬಿ ತುಳುಕಿದಂತಾದಾಗ, ಬಗ್ಗಿ ಭೂಮಿಯನ್ನು ಚುಂಬಿಸಿರಿ. ಕೈಗಳನ್ನು ಕೆಳಗೆ ಮಾಡಿ ಹಸ್ತಗಳನ್ನು ಭೂಮಿಯ ಮೇಲಿಡಿ (ಹಸ್ತಗಳಿಂದ ಭೂಮಿಯನ್ನು ಸ್ಪರ್ಶಿಸಿರಿ). ನಿಮ್ಮ ಎಲ್ಲಾ ಪ್ರೀತಿಯನ್ನೂ ಭೂಮಿಗೆ ಸಮರ್ಪಿಸಿರಿ. ಆ ಪ್ರೀತಿಯು ನಿಮ್ಮ ತುಟಿಗಳಿಂದಲೂ, ಹಸ್ತಗಳಿಂದಲೂ ಹರಿಯುತ್ತಿರುವಂತೆ ಭಾವಿಸಿರಿ. ದಿವ್ಯ ಚೈತನ್ಯವನ್ನು ಭೂಮಿಗೆ ತಲುಪಿಸುವ ಒಂದು ಉಪಕರಣ ಮಾತ್ರವಾಗಿ ಬಿಡಿರಿ.

ಇದನ್ನು ನೀವು ಏಳುಸಾರಿ ಮಾಡಿರಿ. ಪ್ರತಿಸಲವೂ, ಪ್ರತಿ ಏಳು ಪ್ರಮುಖ ಚಕ್ರಗಳೂ ಸಹ ಚೈತನ್ಯಭರಿತವಾಗುತ್ತವೆ. ಇದನ್ನು ಏಳು ಸಾರಿಗಿಂತಲೂ ಹೆಚ್ಚು ಮಾಡಿದರೆ, ನೀವು ಎಲ್ಲೆ ಮೀರಿದಷ್ಟು ಶಕ್ತಿಯುತರಾಗಿ ಆಯಾಸಗೊಳ್ಳಬಹುದು. ನೀವು ನಿಮ್ಮ ಪ್ರಾರ್ಥನೆಯು ಮುಗಿದ ಕೂಡಲೇ ಅದೇ ಪ್ರಾರ್ಥನಾ ಸ್ಥಿತಿಯಲ್ಲಿಯೇ ನಿದ್ರೆ ಹೋಗಿರಿ. ಆ ಚೈತನ್ಯದೊಳಕ್ಕೇ ಸೇರಿಬಿಡಿ, ಅದರಲ್ಲೇ ನಿದ್ರಿಸಿರಿ. ನೀವು ಎಚ್ಚರಗೊಂಡಾಗ, ಬಹಳ ಉಲ್ಲಾಸಗೊಂಡವರಾಗಿಯೂ, ಪುನಶ್ಚೇತನಗೊಂಡವರಾಗಿಯೂ ಆಗುತ್ತೀರಿ.

ಧ್ಯಾನದ ತಂತ್ರಗಳು

ತಂತ್ರದ ವಿಚಾರ:

ಒಂದು ಪುರಾತನವಾದ ಮತ್ತು ಶಕ್ತಿಯುತವಾದ, ಇಸ್ಲಾಂ ಧರ್ಮದ ಒಂದು ಭಾಗವಾದ ಸೂಫಿಯಿಸಮ್‌ನಿಂದ ತೆಗೆದುಕೊಂಡಿರುವ ತಂತ್ರವಿದು.

ಇದು ತಂತ್ರಗಳಲ್ಲೆಲ್ಲಾ ಬಹಳ ಸರಳವಾದದ್ದು. ನೀವು ಮಾಡಬೇಕಾದ್ದು ಎಂದರೆ ನಿಮ್ಮ ಸುತ್ತ ನೀವೇ ಮಕ್ಕಳು ಸುತ್ತುತ್ತಾರಲ್ಲ ಹಾಗೆ ಸುತ್ತುವುದು (ಅಪ್ಪಾಲೆ ಸುತ್ತುವುದು).

ಈ ಸುತ್ತುವುದು ಕೇಂದ್ರೀಕರಿಸಲು ಬಹಳ ಪ್ರಭಾವಶಾಲಿ ತಂತ್ರ.

ಇದರ ಒಂದು ಸುಂದರವಾದ ಮತ್ತು ವಿಶಿಷ್ಟವಾದ ಸಂಗತಿ ಏನೆಂದರೆ, ನಿಮ್ಮ ಶರೀರವು ಮತ್ತೆ ಮತ್ತೆ ಮತ್ತೆ ವೃತ್ತಾಕಾರವಾಗಿ ತನ್ನ ಸುತ್ತುತ್ತಿದ್ದರೂ, ನಿಮ್ಮ ಇರುವಿಕೆಯು ಮಾತ್ರ ಕೇಂದ್ರದಲ್ಲಿ ಅಚಲವಾಗಿ ಚಲಿಸುವ ಚಕ್ರದ ಮಧ್ಯದ, ಚಲಿಸದ ಚಕ್ರನಾಭಿ ಇದ್ದಂತೆ ಸ್ಥಿರವಾಗಿ ಇರುತ್ತದೆ.

ಸೂಚನೆಗಳು:

ನೀವು ಗಂಟೆಗಳಿಗೂ ಮೊದಲೇ ಸೇವಿಸಿರಬೇಕು (ಆಹಾರ ಪಾನೀಯಗಳನ್ನು ಸೇವಿಸಿ, ಮೂರು ಗಂಟೆಗಳು ಕಳೆದಾದ ಮೇಲೆಯೇ ಈ ಧ್ಯಾನವನ್ನು ಮಾಡಬೇಕು) ಈ ಧ್ಯಾನವು ಎರಡು ಮೆಟ್ಟಿಲು ಅಥವಾ ಭಾಗಗಳಾಗಿ ತಿಳಿಸಲ್ಪಟ್ಟಿದೆ. ಅವು ಸುತ್ತುವುದು ಮತ್ತು ವಿಶ್ರಮಿಸುವುದು.

ಸುತ್ತುವುದು (ತಿರುಗುವುದು)

ತಿರುಗುವುದು ಸಾಮಾನ್ಯವಾಗಿ ಮೇಲಕ್ಕೆ ಎತ್ತಿ, ಹಸ್ತವನ್ನು ಮೇಲ್ಮುಖ ಮಾಡಿ, ಎಡಗೈಯನ್ನು ಕೆಳಮುಖವಾಗಿ ಮಾಡಿಕೊಂಡು ಸುತ್ತಬೇಕು.

ಧ್ಯಾನದ ತಂತ್ರಗಳು

ಒಂದು ವೇಳೆ ಅಪ್ರದಕ್ಷಣವಾಗಿ ತಿರುಗುವುದು ನಿಮಗೆ ಅಹಿತವಾದರೆ, ಪ್ರದಕ್ಷಿಣ ಮಾಡುವ ರೀತಿಯಲ್ಲಿಯೇ ತಿರುಗಿರಿ.

ಈ ಸುತುವಿಕೆಯನ್ನು ಗಂಟೆಗಟ್ಪಲೆ ಅಭ್ಯಾಸ ಮಾಡಬಹುದು - ಅಂದರೆ ನಿಮಗೆ ಹಿತವಾಗಿರುವ ತನಕ ತಿರುಗುತಿರಬಹುದು. ಆದರೆ ಕನಿಷ್ಣ ಪಕ್ಷ ನೀವು ಒಂದು ಗಂಟೆಯ ಕಾಲವಾದರೂ ಸುತಿದರೆ ಸುತುವಿಕೆಯಿಂದಾಗುವ ಚೈತನ್ಯದ ಅನುಭವ ನಿಮಗುಂಟಾಗುತದೆ.

ಸುತಲು ನಿಧಾನವಾಗಿ ಪಾ,ರಂಭಿಸಿರಿ. ನಿಮ್ಮ ಪೂರಾ ಶರೀರವು ಮೃದುವಾಗಿ ಪ,ತಿಭಟಿಸದಂತಿರಲಿ.

ನೀವು ತಿರುಗಲು ಪಾ,ರಂಭಿಸಿದ ನಂತರ, 30 ನಿಮಿಷಗಳವರೆಗೆ ವೇಗವನ್ನು ಹೆಚ್ಚಿಸುತಾ ಹೋಗಿ. 45 ನಿಮಿಷಗಳ ನಂತರ ಆ ಸುತುವಿಕೆಯು ನಿಮನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಂತೆ ಅನಿಸುತ್ತದೆ.

ವೃತ್ತದ ಹೊರ ಪರಿಧಿಯಲ್ಲಿ ಮಾತ್ರ ನಿಮ್ ಸುತುವರಿಯುವಿಕೆಯ ಕೆಲಸ ನಡೆಯುತಿದ್ದರೂ, ಕೇಂದ್ರದಲ್ಲಿ ಖಂಡಿತವಾಗಿಯೂ ನೀವು ಸ್ಥಿರವಾಗಿರುವಿರಿ. ನೀವು ಈ ಎಲ್ಲಾ ಕೃತ್ಯಗಳಿಗೂ ಸಾಕ್ಷಿಯಾಗಿ ಮಾತ್ರ, ಉಳಿದಿದ್ದೀರಿ ಎಂಬ ಅನುಭವವು ಉಂಟಾಗುತದೆ, ಅದರಲ್ಲಿ ಪಾತ್ರಧಾರಿಯಂತಲ್ಲ.

ವಿಶ,ಮಿಸುವಿಕೆ

ನೀವು ಅಷ್ಟು ವೇಗವಾಗಿ ಸುತುತಾ ಇನ್ನು ಮುಂದೆ ಸುತಲಾರದೆನಿಸಿದಾಗ ನಿಮ ದೇಹವು ತನಗೆ ತಾನೇ ಬಿದ್ದು ಬಿಡುತ್ತದೆ. ನೀವಾಗಿಯೇ ಬೀಳಲು ಯೋಜಿಸಬೇಡಿ. ನಿಮ್ಮ ಶರೀರವು ಮೃದು ಮತ್ತು ಮಣಿಯುವ ಸ್ಥಿತಿಯಲ್ಲಿದ್ದರೆ, ನಿಮಗೆ ಪೆಟ್ಟು ಬೀಳುವುದಿಲ್ಲ.

ನೀವು ಬೀಳುತಿದ್ದಂತೆಯೇ, ನಿಮ್ಮ ಹೊಕ್ಕಳು ನೆಲಕ್ಕೆ ಸಂಪರ್ಕ ಹೊಂದುವಂತೆ ಬೋರಲಾಗಿ ಮಲಗಿಕೊಳ್ಳಿ (ಹೊಟ್ಟೆಯನ್ನು ಕೆಳಗೆ ಮಾಡಿ ಮಲಗಿರಿ). ನಿಮ್ಮ ಶರೀರವು ಭೂಮಿಯೊಂದಿಗೆ ಸೇರಿಬಿಟ್ಟಿದೆ ಎಂದು ಅನುಭವಿಸಿರಿಂದಿಕೆಟಿಯ

ನಿಮ್ಮ ಕಣ್ಣುಗಳನ್ನು ಮುಚ್ಚಿರಿ. ಅದೇ ಸ್ಥಿತಿಯಲ್ಲಿ 15 ನಿಮಿಷಗಳ ಕಾಲ ಹಾಗೆಯೇ ಇರಿ, ಅಚಲ ಮತು ಮತನವಾಗಿ.

ಈ ಧ್ಯಾನವು ಮುಗಿದ ನಂತರ, ಮೌನವಾಗಿ ಮತ್ತು ಧ್ಯಾನಾಸಕರಾಗಿ ಕೆಲವು ಗಂಟೆಗಳ ಕಾಲ ಹಾಗೆಯೇ ಉಳಿಯಿರಿ.

ಕೆಲವು ಜನರು ಹೊಟ್ಟೆ ತೊಳಸುವಿಕೆಯನ್ನು ಅನುಭವಿಸಬಹುದು ಕೆಲವು ದಿವಸಗಳಲ್ಲಿ ಅದು ನಿಂತುಬಿಡುತದೆ. ಇನ್ನೂ ಅದು (ಹೊಟ್ಟೆ ತೊಳೆಸುವಿಕೆಯು) ನಿಲ್ಲದೆ ಮುಂದುವರಿದರೆ, ಈ ಧ್ಯಾನವನ್ನು ಅಲ್ಲಿಗೆ ಬಿಟ್ಟುಬಿಡಿ.

ಧ್ಯಾನದ ವಿಚಾರ

ಈ ಧ್ಯಾನವು ನಿಮ್ಮ ಸೂಕ್ಷ್ಮ ಶರೀರದ (ಆಕಾಶ ಶರೀರದ) ಇರುವಿಕೆಯನ್ನು ನಿಮ್ಮ ್ಕ್ ಗಮಕ್ಕೆ ತರುವ ಒಂದು ವಿಧಾನ. ನೀವು palming (ಹಸ್ಮ ಸ್ಪರ್ಶ ಧ್ಯಾನ) ಹಸ್ ಧ್ಯಾನವನ್ನು ಮಾಡುವ ರೂಢಿ ಇದ್ದರೆ ಈ ಸೂಕ್ಷ್ಮ ಶರೀರ ಧ್ಯಾನವನ್ನು ಸುಲಭವಾಗಿ ಮಾಡಬಹುದು.

ನಾವು ಏಳು ಶರೀರಗಳನ್ನು ಹೊಂದಿದ್ದೇವೆ, ಮತ್ತು ಪ್ರತಿಯೊಂದು ಶರೀರವನ್ನೂ ದಿವ್ಯತ್ತವನ್ನು ತಲುಪಲು ಒಂದು ಬಾಗಿಲು ಎಂಬಂತೆ ಉಪಯೋಗಿಸಿ ಕೊಳ್ಳಬಹುದು. ಭೌತಿಕ ಶರೀರದ ನಂತರ, ಆಕಾಶ ಶರೀರವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತದೆ, ಕಾರಣವೇನೆಂದರೆ, ಭೌತಿಕ ಶರೀರಕ್ಕೆ ಬಹಳ ಹತಿರವಾದದ್ದು ಈ ಸೂಕ್ಷ್ಮ ಶರೀರ (ಆಕಾಶ ಶರೀರ) ಇದು ಭೌತಿಕ ಶರೀರದ ತಕ್ಷಣ ಹೊರಗಡೆ ಇರುವಂತಹುದು.

ಈ ಆಕಾಶ ಶರೀರವು ಭೌತಿಕ ಶರೀರವನ್ನು ಒಳಹೊಕ್ಕು ಅದರ ಎಲ್ಲೆಯನ್ನು ಒಂದು ಕವಚದೋಪಾದಿಯಲ್ಲಿ ವ್ಯದ್ದಿಸಿಬಿಡುತ್ತದೆ.

ಸೂಚನೆಗಳು:

ನೀವು ಹಸ ಧ್ಯಾನವನ್ನು ಅಭ್ಯಾಸ ಮಾಡಿದಾಗ, ಕೆಲವು ವೇಳೆ ನಿಮ್ಮ ಭಾರವು ಕಡಿಮೆಯಾದಂತೆ ಅನ್ವಿಸಿ. ಮೇಲಕ್ಕೆ ಹಾರಿ ಬಿಡಲು ಸಿದ್ದರಿರುವಿರಿ ಎಂಬ ಅನುಭವವು ಆಗುತದೆ. ಈ ಅನುಭವವು ನಿಮಗೆ ಬೇರೆ ಸಮಯಗಳಲ್ಲೂ ಸಹ ಅಂದರೆ ಬೇರೆಯ ಧ್ಯಾನಾಭ್ಯಾಸ ಮಾಡುವಾಗಲೂ ಬರಬಹುದು. ಈ ರೀತಿ ನಿಮಗಾಗುತ್ತಿದ್ದಾಗ, ಕಣ್ಣುಗಳನ್ನು ಹಾಗೆಯೇ ಮುಚ್ಚಿಕೊಂಡು ನಿಮ್ಮ ಶರೀರದ ಕಡೆಗೆ ಗಮನಿಸಿರಿ. ಇತರಾ ಗ

ನಿಮ್ಮ ಆಕಾರದ ಕಡೆಗೆ ಗಮನ ಹರಿಸಿರಿ. ಕಣ್ಣುಗಳನ್ನು ಮುಚ್ಚಿಕೊಂಡು, ನಿಮ್ಮ ಶರೀರದ ಪ್ರತಿಯೊಂದು ಭಾಗವನ್ನೂ ಒಂದೊಂದಾಗಿ ಗಮನಿಸಿ ಅದರ ಇರುವಿಕೆಯನ್ನು ಅನುಭವಿಸಿರಿ. ನಿಮ್ಮ ಬೆರಳುಗಳ, ಕೈಗಳ, ತೋಳುಗಳ ಆಕಾರ ಇವನ್ನು ಅನುಭವಿಸಿ ತಿಳಿಯಿರಿ. ಹಾಗೆಯೇ, ಕಾಲುಗಳು, ಮುಂಡ (ಶರೀರದ ಮಧ್ಯಭಾಗ) ತಲೆ ಇವುಗಳನ್ನೂ ಅನುಭವಿಸಿ ತಿಳಿಯಿರಿ. ನಿಮ್ಮ ಪೂರ್ಣ ಶರೀರದ ಆಕಾರದ ಇರುವಿಕೆಯನ್ನು ಅನುಭವದಿಂದ ತಿಳಿಯಿರಿ.

ಯಾವಾಗ ನೀವು ನಿಮ್ಮ ಶರೀರದ ಆಕಾರವನ್ನೇ ನೀವು ಅನುಭವಿಸಿ ತಿಳಿಯತೊಡಗಿದಾಗ, ಅದು ನಿಮ್ಜೆದುರಿಗೇ ಪ್ರತ್ಯಕ್ತವಾಗಿ ಬಂದುಬಿಡುತ್ತದೆ. ಹಾಗೆಯೇ, ಮುಂದೆ ನೀಲಿ ಬಣ್ಣದ ಬೆಳಕು ನಿಮ್ಮ ಶರೀರದ ಸುತ್ತಲೂ ಇರುವುದನ್ನು ನೀವು ಗಮನಿಸುತೀರಿ. ಈ ಬೆಳಕು ಹರಡುತಾ, ನಿಮ್ಮ ಭೌತಿಕ ಶರೀರದ ಸುತಲೂ ಪ್ರಭಾವಳಿಯಂತೆ ಪ್ರಭೆಯು (ತೇಜಸ್ಸು) ಬೆಳೆಯುತಾ ಹೋಗುತದೆ.

ಮೊದ ಮೊದಲು ಇದನ್ನು ಕಣ್ಣುಗಳನ್ನು ಮುಚ್ಚಿಕೊಂಡು ಅಭ್ಯಾಸ ಮಾಡಿರಿ. ನೀವು ಆ ಪ್ರಭೆಯನ್ನು ಚೆನ್ನಾಗಿ ಕಾಣುವಂತಾದಾಗ, ನೀವು ಕಣ್ಣುಗಳನ್ನು ತೆರೆದು ಬೇಕಾದರೂ ಪ್ರಯತ್ನಿಸಬಹುದು.

ಪೂರ್ಣ ಕತಲೆಯ ಕೊಠಡಿಯನ್ನು ಆರಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿಯ ವೇಳೆ ಅಭ್ಯಾಸ ಮಾಡಿರಿ. ನೀವು ಕಣ್ಣು ಮುಚ್ಚಿರುವಾಗಲೂ ಆ ಪ್ರಭೆಯನ್ನು ಕಾಣುವಂತಾದಾಗ ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ.

ನೀವು ಅದೇ ನೀಲಿ ಬಣ್ಣದ ಪ್ರಭೆಯನ್ನು ನಿಮ್ಮ ಶರೀರದ ಸುತ್ತಲೂ ಕಾಣುವಿರಿ! ಮೊದಲನೇ ಸಾರಿ ನೀವು ಆ ಆಕಾಶ ಶರೀರವನ್ನು (ಸೂಕ್ಷ್ಮ ಶರೀರವನ್ನು) ಕಾಣಲು ಸಮರ್ಥರಾಗುತೀರಿ. ಈ ಶರೀರದ ಅನುಭವವನ್ನು ನಮ್ಮ ಜೀವನದಲ್ಲಿ ಅನೇಕ ಸಾರಿ ಅನುಭವಿಸಿದ್ದರೂ, ಅದು ನಮಗೆ ತಿಳಿದೇ ಇಲ್ಲ. ತುಂಬಾ ಹೊರಗಿನವರೇ ಅಥವಾ ಸ್ನೇಹಿತರುಗಳೇ ತುಂಬಿರುವ ಕೊಠಡಿಯೊಳಕ್ಕೆ ನೀವು ಪ್ರವೇಶಿಸಿದಾಗ, ನೀವು ಕಣ್ಣು ಮುಚ್ಚಿಕೊಂಡಿದ್ದರೂ (ಕಣ್ಣೆಗೆ ಬಟ್ಟಿ ಕಟ್ಟಿಕೊಂಡಿದ್ದರೂ) ಸುಲಭವಾಗಿ ವ್ಯತ್ಯಾಸವನ್ನು ತಿಳಿಸಬಲ್ಲಿರಿ. ನಮ್ಮನ್ನು ಕುರಿತು ಯಾರಾದರೂ ದ್ವೇಷಿಸುತಿದ್ದರೆ, ಆತನ ಸೂಕ್ಷ್ಮ ಶರೀರವು ನಿಮ್ಮೆದುರಿಗೆ ಕುಗ್ಗಿ ಹೋಗುತ್ತದೆ. ನೀವೇ ಯಾವಾಗ ಕೋಪಗೊಂಡಿರುವಿರೋ, ದುಗುಡ ಅಥವಾ ದುಃಖದಿಂದ ತುಂಬಿರುವಿರೋ, ಆಗ ನೀವೇ ಕುಗ್ಗುತ್ತಿರುವಿರಿ ಎಂಬ ಅನುಭವ ನಿಮಗೇ ಆಗುತ್ತದೆ. ಇದೇ ನಿಮ್ಮ ಸೂಕ್ಷ್ಮ ಶರೀರದ ಕುಗ್ಗುವಿಕೆ. ನೀವು ಪ್ರೀತಿ ಪಾತ್ರರಾದವರನ್ನು ಸಂಧಿಸಿದಾಗ, ನೀವೀರ್ವರೂ ಪರಸ್ಪರ ಹತಿರವಾಗುತ್ತಿದ್ದೀ ರೆಂಬ ಅನುಭವವು ಉಂಟಾಗುತ್ತದೆ. ಇದೇ ನಿಮ್ಮ ಸೂಕ್ಷ್ಮ. ಶರೀರದ ವಿಸರಿಸುವಿಕೆ. ಇದನ್ನು ಅರಿಯದ ನಾವು, ನಮ್ಮ ಸೂಕ್ಷ್ಮ ಶರೀರದ ಸಂಕೇತವನ್ನು ಬಳಸಿಕೊಂಡು ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತೇವೆ ಅಥವಾ ಪರಸ್ಪರ ವ್ಯವಹರಿಸುತ್ತೇವೆ. ನೀವು ನಿಮ್ಮ ಪ್ರಭೆಯನ್ನು ಕಂಡಾಗ, ಏನನ್ನೂ ಮಾಡಬೇಡಿ. ಸುಮ್ಜನೆ ಕುಳಿತು ಗಮನಿಸಿ. ನೀವು ಗಮನಿಸ ತೊಡಗುತ್ತಲೇ ನಿಮ್ಜ ಪ್ರಭೆಯು ಬೆಳೆಯುತ್ತಾ ಹರಡಲು ಪ್ರಾರಂಭವಾಗುತ್ತದೆ. ಅದು ದೊಡ್ಡದಾಗುತ್ತಾ ಹೋಗುತ್ತದೆ. ನೀವು ಏನನ್ನೂ ಮಾಡದಿದ್ದಾಗ, ನಿಮ್ಮ ಚೈತನ್ಯವು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಅದು ನಿಮ್ಮ ಸೂಕ್ಷ್ಮ ಶೇಖರಿಸಲ್ಪಡುತ್ತದೆ.

ಧ್ಯಾನದ ತಂತ,ಗಳು

ನಿಮ್ಮ ಪ್ರಭೆಯು ಬಲಗೊಂಡಂತೆಲ್ಲಾ, ನೀವು ಆಳವಾದ ಶಾಂತ ಮನೋಭಾವವನ್ನು ಅನುಭವಿಸಲು ತೊಡಗುತ್ತೀರಿ. ನೀವು ಮೌನತೆಯನ್ನು ಅನುಭವಿಸುತೀರಿ. ನೀವು ಈ ಧ್ಯಾನವನ್ನು ಪದೇ ಪದೇ ಅಭ್ಯಾಸ ಮಾಡಿದರೆ, ಶಾಂತತೆಯು ನಿಮ್ಮಲ್ಲಿ ಶಾಶ್ವತವಾಗಿ ಉಳಿದ ಅನುಭವವು ಉಂಟಾಗುತದೆ.

ಧ್ಯಾನದ ವಿಚಾರ ಮು ಒಡಿಚಂಡಿ ೨೪೫ರುಕಹೆಚ್ಚಿ ಡ

ಜ್ಯೋತಿ ಧ್ಯಾನವು ಕೆಲವು ಸುಂದರವಾದ ಧ್ಯಾನದ ಅನುಭವಗಳನ್ನು ನಿಮಗೆ ಉಂಟು ಸರ್ವವ್ಯಾಪಿಯಾದ, ಶಕ್ತಿಯುತವಾದ ಹೊಂದುವವರಾಗುತ್ತೀರಿ. ನೀವು ನಿಮ್ಮ ಅಸಿತ್ವಕ್ಕೇ (ಜೀವನಕ್ಕೇ) ಆಧಾರವಾಗಿರುವ ಆ ಪ್ರವಾಹದ ಒಂದು ಅಂಶವೇ ಆಗಿಬಿಡುತೀರಿ.

ಸೂಚನೆಗಳು: --

ಇದಕ್ಕೆ ಕಾಲಾವಧಿ 21 ನಿಮಿಷಗಳು

ಈ ಧ್ಯಾನವನ್ನು ಬೆಳಗಿನ ಹೊತು ಅಭ್ಯಾಸ ಮಾಡಿರಿ. ಸೂರ್ಯೋದಯ ವಾದೊಡನೆಯೇ ಪ್ರತಿಯೊಂದು ಜೀವರಾಶಿಯೂ ಸೂರ್ಯನೆಡೆಗೆ ಚೈತನ್ನವನ್ನು ಹೊಂದಲು ತಿರುಗುತವೆ. ಈ ಮಹತರವಾದ ಅಲೆಯ ಒಂದು ಭಾಗವೇ ಆಗಿಬಿಡುತವೆ.

ಬೆಳಿಗ್ಗೆ ಎದ್ದ ಕೂಡಲೇ ನೀವು ಇದನ್ನು ಅಭ್ಯಾಸ ಮಾಡಿರಿ. ಇನ್ನೂ ಹಾಸಿಗೆಯಲ್ಲಿ ಮಲಗಿರುವಾಗಲೇ, ಕಣ್ಣು ಮುಚ್ಚಿಕೊಂಡು ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿ. ನೀವು ಉಸಿರು ತೆಗೆದುಕೊಳ್ಳುವಾಗಲೇ ನಿಮ್ಮ ನೆತ್ತಿಯಿಂದ ಬಂಗಾರದ ಬೆಳಕು

ನಿಮ್ಮ ಒಳಕ್ಕೆ ಹರಿದು ಬರುತಿದೆ ಎಂದು ಭಾವಿಸಿಕೊಳ್ಳಿರಿ. ಆ ಬೆಳಕು ನಿಮ್ಮ ಕಾಲ್ಬೆರಳುಗಳವರೆಗೂ ಮೇಲಿನಿಂದ ನಿಮ್ಮ ಒಳಕ್ಕೆ ಸುರಿಯಲ್ಪಡುತ್ತಿದೆ ಅದು ನಿಮ್ಮ ಕಾಲ್ಬೆರಳುಗಳಿಂದಲೂ ಹೊರಕ್ಕೆ ಹೋಗುತ್ತಿದೆ! ಇದು ಕೇವಲ ನೀವು ಮಾಡಿಕೊಂಡ ಒಂದು ಕಲನೆ ಮಾತ,ವೆಂದು ತಿಳಿಯಬೇಡಿ. ನೀವು ಕಲನೆ ಮಾಡಿದಂತೆಯೇ ಅದು ಸಂಭವಿಸುತ್ತದೆ. ಆ ಚೈತನ್ಯವು ನಿಜವಾಗಿಯೂ ನಿಮ್ಮೊಳಕ್ಕೆ ಹರಿಯುತ್ತಿದೆ.

ನೀವು ಉಸಿರು ಬಿಟ್ಟಾಗ, ಇದಕ್ಕೆ ವ್ಯತಿರಿಕವಾಗಿ ಕಲ್ಪಿಸಿಕೊಳ್ಳಿರಿ. ನಿಮ್ಮ ಕಾಲ್ಬೆರಳುಗಳಿಂದ, ಮಹಾ ಅಂಧಕಾರವು ನಿಮ್ಮ ಒಳಕ್ಕೆ ಹತ್ತುತ್ತಿದೆ ಎಂದು ಕಲ್ಪಿಸಿಕೊಳ್ಳಿರಿ, ಹಾಗೂ ಮೇಲು ಮೇಲಕ್ಕೆ ಸಾಗುತ್ತಾ ನಿಮ್ಜ ತಲೆಯವರೆಗೂ ಹೋಗುತ್ತಿದೆ ಎಂದು ಭಾವಿಸಿ. ಆ ಅಂಧಕಾರವು ನಿಮ್ಮ ತಲೆಯಿಂದ ಮೇಲಕ್ಕೆ ಹೊರಹೋಗುತ್ತಿದೆ. ಬಂಗಾರ ಬಣ್ಣದ ಬೆಳಕು ಪುರುಷ ಶಕ್ತಿ ಅದು ಬಲಪಡಿಸುತ್ತದೆ ಮತ್ತು ಸಂರಕ್ಷಿಸುತ್ತದೆ. ಅಂಧಕಾರವು ಸ್ತ್ರೀಶಕ್ತಿ ಅದು ಪ,ಶಾಂತತೆಯನ್ನುಂಟು ಮಾಡುತದೆ.

ಇದನ್ನು ರಾತ್ರಿಯ ವೇಳೆಯಲ್ಲೂ ಮಲಗಿ ನಿದ್ರಿಸುವ ಮುನ್ನ ಅಭ್ಯಾಸ ಮಾಡಬಹುದು. ಒಂದು ವೇಳೆ ಇದನ್ನು ಮಾಡುತ್ತಿದ್ದಾಗಲೇ ನಿಮಗೆ ನಿದ್ರೆ ಬಂದಿತೆಂದರೆ, ಅದೊಂದು ಸುಂದರ (ಅಪೂರ್ವ) ಅನುಭವ. ಇದನ್ನು ಎರಡು, ಮೂರು ತಿಂಗಳುಗಳವರೆಗೆ ಮುಂದುವರಿಸಿದರೆ, ನಿಮ್ಮಲ್ಲಿ ಹೆಚ್ಚಿನ ಬದಲಾವಣೆ ಆಗಿರುವುದನ್ನು ತಿಳಿಯುತೀರಿ. ಈ ತಂತ್ರವು ನಿಮ್ಮ ಲೈಂಗಿಕ ಶಕ್ತಿಯನ್ನು (ಮೂಲಾಧಾರದ ಶಕ್ತಿಯನ್ನು) ಊರ್ಧ್ಯಗಾಮಿಯಾಗಿ ಮಾಡಲು ಪ್ರಶಸ್ತವಾದದ್ದು. ಯಾವಾಗಲೂ ನಿಮ್ಮ ಬೆನ್ನಿನ ಕೆಳಭಾಗವು ಬಾರವಾಗಿರುವುದು ಸಹಜ. ಅದು ನಿವಾರಣೆಯಾದ ಅನುಭವ ನಿಮಗೆ ಉಂಟಾಗುತ್ತದೆ ಹಾಗೂ ನಿಮ್ಮ ಚೈತನ್ನವು ಮೇಲಿನ ಚಕ,ಗಳತ ಸಾಗುತದೆ.

ಧ್ಯಾನದ ವಿಚಾರ:

ಯಾವುದಾದರೂ ವಸುವನ್ನು ಕುರಿತು ನೀವು ಧ್ಯಾನಿಸುವಾಗ, ನಿಧಾನವಾಗಿ ಒಂದು ಚೈತನ್ಯದ ಸೈಕಲ್ (ಅಂದರೆ ಒಂದು ಆವರ್ತನ ಚಕ್ರವು) ನಿಮಗೂ ಮತ್ತು ಆ ವಸುವಿಗೂ ಮಧ್ಯೆ ಬೆಳೆಯತೊಡಗುತ್ತದೆ.

ಯಂತ್ರಗಳು ಅಥವಾ ಚೈತನ್ಯ ನಕ್ಷೆಗಳು ಎಂದರೆ ರೇಖಾ ಚಿತ್ರಗಳು ಅವಶ್ಯವಾಗಿ ಲೋಹದ ತಗಡುಗಳ ಮೇಲೆ ಮರದ ಅಥವಾ ಕಾಗದದ ಮೇಲೆ ಕೆತ್ತಲ್ಪಟ್ಟಿರುತವೆ (ಬರೆಯಲ್ಪಟ್ಟಿರುತವೆ). ಬಹು ಹಿಂದಿನ ಕಾಲದ ಯಂತ್ರಗಳು ಸ್ವಯಂ ಸ್ಸೂರ್ತಿಯಿಂದ, ಧ್ಯಾನಾವಸ್ಥೆಯ ಉತ್ತುಂಗ ಸ್ಥಿತಿಯಲ್ಲಿ, ಆಧ್ಯಾತ್ಮಿಕ ಗುರುಗಳಿಂದ ನಿರ್ಮಿಸಲ್ಪಟ್ಟವು. ಧ್ಯಾನದ ವಿಚಾರವಾಗಿ ಬರೆಯಲ್ಪಟ್ಟ ಬಹಳ ಹಿಂದಿನ ಪುಸ್ತಕಗಳಲ್ಲಿ ಯಂತ್ರಗಳನ್ನು ಜಗತ್ತಿನ ರಚನೆಯನ್ನು ಪ್ರತಿನಿಧಿಸುವ ರೇಖಾ ನಕ್ಷೆ ಎಂದು ವಿವರಿಸಲಾಗಿದೆ. ಪಿರಮಿಡ್ ಗಳಂತಹ ಕಟ್ಟಡಗಳಲ್ಲಿ ಚೈತನ್ಯವನ್ನು ಹೀರಿ, ಸಂರಕ್ಷಿಸುವ ಸಾಮರ್ಥ್ಯವು ಇದೆ ಎಂದು ಪರಿಗಣೆಸುವಂತೆಯೇ, ಯಂತ್ರಗಳೂ ಸಹ ನಿರ್ಧಿಷ್ಟ ರೇಖಾ ನಕ್ಷೆಯಿಂದ ಅಂತಹ ಚೈತನ್ಯವನ್ನು ಬಹಳ ಕಾಲದವರೆಗೆ ಸಂರಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ.

ಯಾವಾಗ ಮಾಡುತ್ತಾರೋ ಆಗ ಅವರು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು (ಹೀಲಿಂಗ್ ಎನರ್ಜಿಯನ್ನು) ಆ ಯಂತ್ರಕ್ಕೆ ವರ್ಗಾಯಿಸುತ್ತಾರೆ. ಆಗ ಆ ಯಂತ್ರವು ಒಂದು ಬ್ಯಾಟರಿ ತರಹ ಆ ಶಕ್ತಿಯನ್ನು (ಹೀಲಿಂಗ್ ಎನರ್ಜಿಯನ್ನು) ಶೇಖರಿಸಿಕೊಳ್ಳುತದೆ. ರೋಗಪೀಡಿತ ವ್ಯಕ್ತಿಯು ಈ ಯಂತ್ರವನ್ನು ಕುರಿತು ಧ್ಯಾನಿಸಿದಾಗ ಶೇಖರಿಸಲ್ಪಟ್ಟ ಆ ಹೀಲಿಂಗ್ ಶಕ್ತಿಯು ಆ ವ್ಯಕ್ತಿಗೆ ವರ್ಗಾಯಿಸಲ್ಪಡುತ್ತದೆ. ಮತ್ತು ಅವನು ಯಂತ್ರ, ರಚನೆಯ ಸಂದರ್ಭದಲ್ಲಾದ ಆಧ್ಯಾತ್ಮಿಕ ಆನಂದ ಪರವಶತೆಯ ಕ್ಷಣಾನುಭವವನ್ನು ಅನುಭವಿಸುತ್ತಾನೆ.

ಸೂಚನೆಗಳು:

ಕಾಲಾವಧಿ 21 ನಿಮಿಷಗಳು ಬಿಡುತಡ, ಇದು ಕೇವಲ ಕಾಲ

ಶರೀರಕ್ಕೆ ಚಕ್ರಗಳು ಚೈತನ್ಯದ ಮಹಾದ್ವಾರಗಳಿದ್ದಂತೆ ಇರುವುದರಿಂದ ನಾವು ಅತಿ ಶೀಘ,ವಾಗಿ ಪರಿಣಾಮಕಾರಿಯಾಗಿ ಚೈತನ್ನವನ್ನು ಚಕ,ಗಳ ಮೂಲಕ ಹೀರಿಕೊಳ್ಳುತೇವೆ. ಈ ಧ್ಯಾನವು ಹೀಲಿಂಗ್ (ಗುಣಪಡಿಸುವ) ಯಂತ್ರವನ್ನು, ಚಕ,ವನ್ನು ಹೀಲ್ ಮಾಡುವ (ಗುಣಪಡಿಸುವ) ಸಲುವಾಗಿ, ಉಪಯೋಗಿಸಿಕೊಳ್ಳುತದೆ.

ನಿಮಗೆ ತೊಂದರೆಯಾಗುತಿರುವ ಅಥವಾ ಸಮಸ್ಯೆಯಾಗಿರುವ ಸ್ಥಳಕ್ರ ಸಂಬಂಧಪಟ ಚಕ್ರದ ಮೇಲೆ ಕೇಂದಿ,ಕರಿಸಿ. ಹೀಲಿಂಗ್ ಯಂತ,ವನು ಸತತವಾಗಿ ದೃಷ್ಟಿಸುತ್ತ, ಆ ಚಕ್ರದಿಂದ ನೀವು ಆ ಯಂತ,ವನು ನೋಡುತಿದ್ದೀರೆಂದು ಕಲ್ಪಿಸಿಕೊಳ್ಳಿರಿ. ಆ ಚಕ್ರದಿಂದ ನಿಮ್ಮ ಗಮನವನ್ನು ಯಂತ್ರದ ಕಡೆಗೆ ಕೇಂದ್ರೀಕರಿಸಿರಿ. ಆ ಯಂತ್ರದಿಂದ ನಿಮಗೆ ಚೈತನ್ನವು ಹರಿದು ಬರುತಿದೆ ಎಂದು ಕಲಿಸಿಕೊಳ್ಳಿರಿ, ನಿಮಗೂ ಆ ಯಂತ್ರಕ್ಕೂ ಒಂದು ಚೈತನ್ಯದ ಸೈಕಲ್‌ನ್ನು (ಆವರ್ತನ ಚಕ್ರವನ್ನು) ನಿರ್ಮಿಸಿಕೊಳ್ಳಿರಿ.

ಚೈತನ್ಯದ ಹರಿಯುವಿಕೆಯನ್ನು ತಿಳಿದು ಅನುಭವಿಸಿರಿ. ಇದನ್ನು 11 ನಿಮಿಷಗಳ ಕಾಲ ಮಾಡಿರಿ.

ಆಮೇಲೆ ಕಣ್ಣುಗಳನ್ನು ಮುಚ್ಚಿಕೊಂಡು ನಿಮ್ಮ ಆ ನಿಗದಿತ ಚಕ್ರಕ್ಕೆ ನಿಮ್ಮ ಶರೀರದ ಮೂಲಕ, ಆ ಯಂತ್ರವು ಪ್ರವೇಶಿಸಿದೆ ಎಂದು ಕಲ್ಪಿಸಿಕೊಳ್ಳಿರಿ. ಪ್ರಾ

ಆ ಯಂತ್ರವನ್ನು ಅದೇ ಸ್ಥಳದಲ್ಲಿ ನಿಲ್ಲಿಸಿರಿ. ಅದರ ಚೈತನ್ಯವು ನಿಮ್ಮ ಶರೀರದಲ್ಲೇಲ್ಲಾ (ಗುಣಪಡಿಸುವ ಆ ಚೈತನ್ಯವು) ತೊಂದರೆಗೊಳಗಾದ ದೇಹದ ಭಾಗಗಳಿಗೆ (ಅವಯವಗಳಿಗೆ) ಹರಿಯುತಿರುವುದನ್ನು ಅನುಭವಿಸಿರಿ.

ಇದನ್ನು 10 ನಿಮಿಷಗಳ ವರೆಗೆ ಮಾಡಿರಿ. ನಿಮಗೆ ಬೇಕೆನಿಸಿದರೆ ಪುನರಾವರ್ತಿಸಿರಿ. ಈ ಧ್ಯಾನವನ್ನು 21 ದಿನಗಳವರೆಗೆ ಮಾಡಿರಿ.

ಯಾವಾಗಲಾದರೂ – ಎಲ್ಲಿ ಬೇಕಾದರೂ ಮಾಡುವ ಧ್ಯಾನಗಳು

ಊಟ ಮಾಡುವುದು, ನಿದಿ,ಸುವುದು, ನಡೆಯುವುದು, ಕೆಲಸ ಮಾಡುವುದು -ಪ್ರತಿ ಕೃತಿಯಲ್ಲಿಯೂ ಆಧ್ಯಾತ್ಮಿಕವಾಗಿ ದೈನಂದಿನ ಜೀವನದಲ್ಲಿ ನಿಮ್ಮನ್ನ ರೂಪಿಸಿಕೊಳ್ಳುವ ಅಥವಾ (ಪರಿವರ್ತಿಸಿಕೊಳ್ಳುವ) ಅವಕಾಶಗಳು ನಿಮಗೆ ಇವೆ.

ಡ್ನೆವಿಂಗ್, ಸಂಗೀತವನ್ನು ಆಲಿಸುವುದು, ಆಟವಾಡುವುದು, ತೋಟಗಾರಿಕೆ, ಇವುಗಳೂ ಸಹ ನೀವು ಅರಿವಿನಿಂದ ಮಾಡಿದರೆ, ಧ್ಯಾನದ ಶಕಿಯುತವಾದ ತಂತ್ರಗಳಾಗಬಹುದು. ನಾವು ಪ್ರತಿನಿತ್ಯ ಮಾಡುತಿರುವ ಪ್ರತಿಯೊಂದು ಸರಳವಾದ ಕೆಲಸಗಳನ್ನೂ, ಅವುಗಳನ್ನು ಸುಲಭವಾಗಿ ಮತ್ತು ಸಫಲವಾಗುವ ರೀತಿ ನಿತ್ಯದ ಧ್ಯಾನವನ್ನಾಗಿ ಪರಿವರ್ತಿಸಲು ಬೇಕಾದ ಸಲಹಾ ಟಪ್ಪಣಿಗಳನ್ನೂ ಇಲ್ಲಿ ಉಲ್ಲೇಖಿಸಲಾಗಿದೆ.

ಧ್ಯಾನದ ವಿಷಯ:

ಜ಼ೆನ್‌ನಿಂದ ಈ ಧ್ಯಾನವನ್ನು ತೆಗೆದುಕೊಳ್ಳಲಾಗಿದೆ. ಜ಼ೆನ್ ಅಂದರೆ ಜಾಜೆನ್ ಅರ್ಥಾತ್ ಸುಮ್ಮನೆ ಕುಳಿತುಕೊಳ್ಳುವುದು, ಇದು ಕಷ್ಟಕರವಾದ ಧ್ಯಾನ. ಬಹಳ ಕಷ್ಟಕರವಾದ ಧ್ಯಾನವೆಂದರೆ ಏನೂ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು. ಸುಮ್ಮನೆ ಕುಳಿತುಕೊಳ್ಳುವುದೆಂದರೆ, ನಿಮ್ಮ ಮನಸನ್ನು ಹೇಗೆ ಬೇಕಾದರೆ ಹಾಗೆ ಆಡಲಿ ಎಂದಂತೆ. ನಿಮ್ಮ ಮನಸ್ಸು, ಎಲ್ಲಾ ತರಹದ ವಾದ ವಿವಾದಗಳೊಂದಿಗೆ,

ಕಾರಣಗಳೊಂದಿಗೆ, ನೆನಪುಗಳೊಂದಿಗೆ ಈ ತಂತ,ದ ವಿರುದ್ದವಾಗಿ ಹೊಂಗಡಲು (ಹೋರಾಡುವ) ಬಂದು ಬಿಡುತ್ತದೆ. ಇದು ಕೇವಲ ಕಾಲವನ್ನು ವ್ಯರ್ಥ ಮಾಡಿದಂತೆ, ಎಂಬುದನ್ನು ಪ್ರಯತ್ತ ಪೂರ್ವಕವಾಗಿ ಅದು ನಿಮ ಮನ ಒಪ್ಪಿಸಲು ಪ್ರಯತ್ತ ಮಾಡುತ್ತದೆ (ನಿಮಗೆ ಮನದಟ್ಟು ಮಾಡಲು ಪ,ಯತ್ತಿಸುತದೆ). ನೀವು ಪಟ್ಟು ಹಿಡಿದು ಮಾಡಲು ಹೊರಟರೆ, ಮನಸು ನಿದೆ,ಗೆ ಒಳಗಾಗುತ್ತದೆ, ಹಾಗೂ ಹಗಲುಗನಸು ಕಾಣಲಾರಂಭಿಸುತ್ತದೆ, ಮತ್ತು ಇದೊಂದು ಭ್ರಮೆ ಅಥವಾ ಮನೋವಿಕಲ್ಲ ಎಂಬ ಭಾವನೆಯನ್ನು ಮೂಡಿಸಿ ಬಿಡುತ್ತದೆ.

ಈ ಧ್ಯಾನದ ಮೂಲ ಉದ್ದಿಶ್ಯ (ಮುಖ್ಯ ಉದ್ದಿಶ್ಯ)ವು ಮನಸ್ಸು ತನ್ನ ಆಟಗಳನ್ನೆಲ್ದಾ ಆಡಲಿ, ತನ್ನ ಕುತಂತ,ಗಳನ್ನೆಲ್ಲಾ ಉಪಯೋಗಿಸಲಿ ಎಂದು ಸ್ರತಂತ,ವಾಗಿ ಬಿಡುವುದೇ ಆಗಿದೆ. ಏಕೆಂದರೆ ಒಂದು ದಿನ ಈ ಮನಸು ನಿಮ್ಮೊಡನೆ ಈ ಆಟಗಳನ್ನೆಲ್ಲಾ ಆಡಿ ಬೇಸತು ಹೋಗುವುದಿದೆ. ಒಂದು ದಿನ ಅದು ನಿಮೊಡನೆ ತನ್ನ ಆಟಗಳಾವುವೂ ನಡೆಯದು, ನಿಮ್ಮನ್ನು ಎಷ್ಟು ಮಾತ್ರವೂ ಅಧೀನಗೊಳಿಸಿಕೊಳ್ಳಲಾಗದು ಎಂಬುದನ್ನು ಅರ್ಥಮಾಡಿಕೊಂಡು ಬಿಡುತ್ತೆ.

ಆಗ ಮನಸು ತನಗೆ ತಾನೇ ಸುಮ್ಮನಾಗಿಬಿಡುತ್ತೆ.

ಸೂಚನೆಗಳು:

ನೀವು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು, ಆದರೆ ಮೊದಲು ಯಾವ ಅಡಚಣೆಯೂ, (ತೊಂದರೆಯೂ) - ಅಲ್ಲಿ ಆಗುವುದಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು. ಹೆಚ್ಚು ಚಲನೆ ಉಂಟಾದಾಗ, ತೊಂದರೆಯಾಗಿ, ಮನಸು ಬೇರೆಡೆಗೆ ಹೋಗುತ್ತದೆ. ಪ್ರಕೃತಿಯನ್ನು ಗಮನಿಸುವುದು ಒಂದು ಒಳ್ಳೆಯ ಕೆಲಸ. ಮನೆಯೊಳಗಿದ್ದರೂ, ಕಿಟಿಕಿಗಳ ಮೂಲಕವಾದರೂ ನೀವು ಆಕಾಶವನ್ನು ಗಮನಿಸಬಹುದು. ನೀವು ಬಿಳಿಯ ಸಾದಾ ಗೋಡೆಯ ಎದುರಿಗೆ ಕುಳಿತು (ನೋಡುತಿರಬಹುದು) ಅಥವಾ ಕೊಠಡಿಯ ಒಂದು ಮೂಲೆಯ ಎದುರು ಕುಳಿತು ಆದನ್ನು ವೀಕ್ಷಿಸುತಿರಬಹುದು.

ನಿಮ್ಮ ಗಮನವನ್ನು ಯಾವುದರ ಮೇಲೆಯೂ ಕೇಂದ್ರೀಕರಿಸಬೇಡಿ. ನಿಮ್ಮ ಕಣ್ಣುಗಳು ಆರ್ಧ ತೆರೆದಿರಲಿ, ದೃಷ್ಟಿಯನ್ನು ಕೇಂದ್ರೀಕರಿಸದಿರಿ, ಗಮನವು ಚೆದುರಿರಲಿ. ನಿಮ್ಮ ದೃಷ್ಟಿಯು ಹಗುರವಾಗಿ ದೂರದಲ್ಲಿ ನೋಡುತಿರಲಿ. (ಇದು ಬ್ಯಾನೆಯ ಸ ಸೀಲ್ ) (ನಿಮ್ಮನ್ನು)ವಿಶ್ರಮಿಸಲು ಅನುಕೂಲವಾಗುತ್ತದೆ.

ನಿಮ್ಮ ಉಸಿರಾಟವು ನಿಧಾನವಾಗಿ ಸಹಜವಾಗಿರಲಿ.

ಅರ್ಧ ಗಂಟೆಯವರೆಗೆ ನೀವು ಯಾವ ತೊಂದರೆಯೂ ಇಲ್ಲದೆ ಚಲಿಸದೆ ಇರಬಲ್ಲೆವೆಂದು ಖಾತಿ, ಮಾಡಿಕೊಂಡು ಅಂತಹ ಅನುಕೂಲವಾದ ಭಂಗಿಯಲ್ಲಿ ಕುಳಿತುಕೊಳ್ಳಿರಿ. ಒಂದು ಚಾಪೆ ಉಪಯೋಗಿಸಿಕೊಳ್ಳಿ. ಶರೀರವು ಅಚಲವಾದಾಗ ಮನಸ್ಸೂ ಸ್ಥಿರವಾಗಿರುತ್ತದೆ. ಬೆನ್ನು ನೆಟ್ಟಗೆ ಮಾಡಿ ಕುಳಿತುಕೊಳ್ಳಿ, ಬೇಕಾದರೆ ಒರಗಲು ಏನನ್ನಾದರೂ ಇಟ್ಟುಕೊಳ್ಳಿರಿ, ಆದರೆ ಅದಿಲ್ಲದೆ ಮಾಡಲು ಯತ್ನಿಸಿ.

ಕೈಗಳನ್ನು ಒಂದರೊಳಗೊಂದನ್ನು ಇಟ್ಟುಕೊಂಡು, ಹೆಬ್ಬೆಟ್ಟುಗಳು ಸೇರಿ ಒಂದು ವೃತವಾದಂತಾಗಲಿ.

ಚುರುಕಾಗಿ ಮತ್ತು ಜಾಗರೂಕತೆಯಿಂದಿರಿ, ಸ್ವೀಕರಿಸಲು ತಯಾರಿರಿ, ಬೇರೆ ಯಾವುದರ ಮೇಲೂ ಗಮನ ಹರಿಯದಂತೆ ಇರಿ. ಪ್ರತಿ ಕ್ಷಣದಲ್ಲೂ ಇರುವುದನ್ನು ಅಭ್ಯಸಿಸಿರಿ .

ಏನನ್ನೂ ಮಾಡದೆ ಸುಮ್ದನೆ ಕುಳಿತುಕೊಳ್ಳುವುದು ಮೊದಲು ಕಷ್ಟವಾಗುತ್ತದೆ. ಆದರೆ ಕೆಲವು ದಿವಸಗಳಲ್ಲಿ ಇದನ್ನು ಬಹಳ ಸಂತೋಷವಾಗಿ ಅನುಭವಿಸಲು ಪಾ,ರಂಭಿಸುತೀರಿ. ಪದರ ಪದರವಾಗಿ - ಮನಸ್ತು ಇಲ್ಲದಂತಾಗುವುದನ್ನು ನೀವು ಅನುಭವಿಸಲು ತೊಡಗುತ್ತೀರಿ, ಮನಸ್ತು ಸಂಪೂರ್ಣವಾಗಿ, ನಿಜವಾಗಿಯೂ ಇಲ್ಲವಾಗುವುದನ್ನು ಅನುಭವಿಸುತ್ತೀರಿ. ಕಡೆಗೆ ಒಂದು ದಿನ ಮನಸ್ಸು ಪೂರ್ತಿಯಾಗಿ ಮಾಯವಾಗುವ ಘಳಿಗೆಯು ಬರುತ್ತದೆ. ನೀವು ಮನಸ್ಸೇ ಇಲ್ಲದ ಸ್ಥಿತಿಯನ್ನು ಕೆಲವು ಕ್ಷಣ ಅನುಭವಿಸುತ್ತೀರಿ.

ಆನಂದ ಧ್ಯಾನ

ಧ್ಯಾನದ ವಿಚಾರ

ಈ ಧ್ಯಾನವನ್ನು ಅಬ್ದುಲ್ಲಾ ಎಂಬ ಸೂಫಿ ಮಿಸ್ಸಿಕ್ ರವರಿಂದ ತೆಗೆದುಕೊಳ್ಳಲಾಗಿದೆ. ಅಬ್ದುಲ್ಲ ಎಂಬುವನು ಯಾವಾಗಲೂ ನಗುಮುಖವನ್ನೇ ಹೊಂದಿರುತಿದ್ದನಂತೆ. ಅದಕ್ಕಾಗಿಯೇ ಅವನು ಅಷ್ಟು ಹೆಸರುವಾಸಿಯಾಗಿದ್ದ. ತನ್ನ ಮರಣ ಶಯ್ಯೆಯಲ್ಲಿಯೂ ಸಹ ಅಬ್ದುಲ್ಲಾ ನಗುತಿದ್ದನೆಂದು ಹೇಳುತಾರೆ. ಕಡೆಗೆ ಅವನ ಕೆಲವು ಶಿಷ್ಠರು ಇವನ ಈ ಚರ್ಯೆಯನ್ನು ಅರ್ಥ ಮಾಡಿಕೊಳ್ಳದೆ ಅವನನ್ನು ಈ ಸಾಯುವುದರಲ್ಲಿ ಅಂತಹ ತಮಾಷೆ ಏನಿದೆ? (ಏಕೆ ಹಾಗೆ ಈಗಲೂ ನಗುತಿದ್ದೀರ?) ಎಂದು ಕೇಳಿದರಂತೆ.

ಆಗ ಅಬ್ದುಲ್ಲಾ ತನ್ನ ಗುರುವು ಇದರ ಮರ್ಮವನ್ನು ತನಗೆ ತಿಳಿಸಿಕೊಟ್ಟಿದ್ದನ್ನು ಅವರಿಗೂ ತಿಳಿಸಿದನಂತೆ. ''ನಿಮ್ಜ ಸಂತೋಷ ನಿಮ್ಮ ಕೈಗಳಲ್ಲೇ ಇದೆ, ನಿಮ್ಮ ಸಂತೋಷದ 100% ನ್ನೂ ನೀವೇ ಆರಿಸಿಕೊಳ್ಳುವಂಥಾದ್ದು. ಪ್ರತಿದಿನವೂ ಸಹ ಜೀವನವು ನೀವು ಸಂತೋಷವಾಗಿರಬೇಕೋ, ತೊಂದರೆಗೆ ಈಡಾಗಬೇಕೋ ಎಂಬ ಆರಿಸಿಕೊಳ್ಳುತೀರೋ ಅದು ನಿಮಗೇ ಬಿಟ್ಟಿದ್ದು!

ಸೂಚನೆಗಳು:

ಇದರಷ್ಟು ಸರಳವಾದ ಧ್ಯಾನ ತಂತ್ರವು ಮತ್ತೊಂದಿಲ್ಡ! ಆದರೆ ಅದರ ಸರಳತೆಯಿಂದ ಮೋಸ ಹೋಗಬೇಡಿರಿ, ಇದರಲ್ಲಿರುವ ಮೂಲಭೂತ ಸರಳ ತಂತ್ರವೇ ನಿಜವಾಗಿ ಕೆಲಸ ಮಾಡುವುದು.

ಧ್ಯಾನದ ತಂತ್ರಗಳು

ಪ್ರತಿದಿನ ಬೆಳಿಗ್ಗೆ ನೀವು ಎಚ್ಚರಗೊಂಡಾಗ ಏಳುತ್ತಿದ್ದಂತೆಯೇ, ಕಣ್ಣುಗಳನ್ನು ತೆರೆಯುವುದಕ್ಕೂ ಮುಂಚಿತವಾಗಿಯೇ ನಿಮ್ಮ ಹಾಸಿಗೆಯ ಮೇಲೆ ಕುಳಿತುಕೊಳ್ಳಿ. ನಿಮ್ಮನೇ ನೀವು ಹೆಸರು ಹೆಸರು ಕರೆಯಿರಿ.

ನಿಮ್ದನ್ನೇ ನೀವು ಕೇಳಿಕೊಳ್ಳಿರಿ ''ಈ ದಿನ ನೀನು ಏನನ್ನು ಆರಿಸಿಕೊಳ್ಳುತ್ತೀಯೆ? ಸಂತೋಷವಾಗಿರಬೇಕೋ ಅಥವಾ ತೊಂದರೆಗಳಿಗೆ ಒಳಗಾಗಬೇಕೋ?'' (ಎಂದು) -----------------------------------------------------------------------------------------------------------------------------------------------------------------------

ಸಹಜವಾಗಿ ಕೇಳಿಕೊಳ್ಳುವುದಿಲ್ಲ! ನಿಮ್ಮ ಮನಸ್ಸು ನಾನು ಸಂತೋಷವನ್ನು ಆರಿಸುತ್ತೀನೆಂದು ಹೇಳುತ್ತದೆ, ಆಗ ಅದನ್ನೇ ಆರಿಸುತ್ತೇನೆಂದು ಉತ್ತರಿಸಿ, ಸಂತೋಷವಾಗಿರಿ, ಅಷ್ಟೇ!! ಇದು ಸರಳಾತಿಸರಳವಾದದ್ದು! ಪ,ತಿ ದಿನವೂ ಯಾವಾಗ ನೀವು ಈ ಸಂತೋಷವಾಗಿರುವುದು ಮತ್ತು ಎಂಬುದು ಸಂಪೂರ್ಣವಾಗಿ ನಿಮ್ಮ ಕೈಯ್ಯಲ್ಲೇ ಇದೆ ಎಂಬ ಸತ್ಯವನ್ನು ಅರಿಯುತ್ತೀರೋ, ಆಗ ಹೊರಗಿನ ಪರಿಸ್ಥಿತಿಗಳ ಬಗ್ಗೆ ದೂರುವುದನ್ನು ನೀವಾಗಿಯೇ ಬಿಟ್ಟುಬಿಡುತೀರಿ. ನೀವು ಸಂತೋಷವಾಗಿರುವ ಬೆಳೆಸಿಕೊಳ್ಳುತೀರಿ, ಹೊರಗಿನ ಪರಿಸ್ಥಿತಿಗಳ ಕಾರಣದಿಂದಲ್ಲ, ಅವನ್ನು ತಿರಸ್ಕರಿಸುವುದರಿಂದಲೂ ಅಲ್ಲ, ಅವುಗಳು ಹೇಗಾದರೂ ಇರಲಿ, ಅವಕ್ಕೆ ಸಂಬಂಧವೇ ಇಲ್ಲದಂತೆ ಸಂತೋಷವಾಗಿರುತೀರಿ. ನೀವು ಸಂತೋಷ ವಾಗಿರುವುದಕ್ಕೆ ಕಾರಣ ನೀವು ಸಂತೋಷವಾಗಿರುತೀರಿ ಅಷ್ಟೆ,

ಅಣಿಮಾ ಧ್ಯಾನ

ಧ್ಯಾನದ ಬಗ್ಗೆ

ನೀವು ಈ ದಿನ ಬೇರೆ ದಿನಗಳಿಗಿಂತ ಏಕೋ ಮೈ ಭಾರವಾಗಿದೆ ಎಂಬ ಅನುಭವವನ್ನು ಕೆಲವು ದಿನ ಹೊಂದಿರುತೀರಿ, ಇದನ್ನು ಗಮನಿಸಿದ್ದೀರಾ ? ನೀವು

ಅನುಭವಿಸುವ ಭಾರವು ನಿಮ್ಜ ಶರೀರದ್ದು, ನಿಮ್ಮದಲ್ಲ. ನೀವು ತೂಕವೇ ಇಲ್ಲದವರು. ಸದಾಕಾಲವೂ ನಿಮ್ಮ ಶರೀರದೊಡನೆ ನೀವು ತಾದಾತ್ತ್ಯತೆಯನ್ನು ಹೊಂದುವುದರಿಂದ ನೀವು ಸಹಜವಾಗಿಬಿಡುತ್ತೆ.

ನಿಮ್ಮ ಶರೀರವು ಹೊಂದಿರಲೇಬೇಕು.

ಒಬ್ಬ ಮನುಷ್ಠ ನಿದೆ, ಮಾಡುತಿದ್ದಾಗ, ಅಥವಾ ಜ್ಞಾನ ತಪ್ಪಿದಾಗ ಅವನು ಎಚ್ಚರವಾಗಿರುವಾಗಿಗಿಂತ ಭಾರವಾಗಿರುತಾನೆಂಬುದನ್ನು ನೀವು ಬಹುದು. ನಿಮ್ಮ ಪ್ರಜ್ಞೆಯು ಎಚ್ಚರವಾಗಿದ್ದಾಗ ನೀವು ಹಗುರವೇ ಆಗಿರುತ್ತೀರಿ. ಇದನ್ನು ನೀವು ಅಂದುಕೊಳ್ಳುವುದಲ್ಲ. (ಇದು ಒಂದು. ಭಾವನೆಯಲ್ಲ) ನೀವೇ ಹಗುರವಾಗಿ ಬಿಡುತೀರಿ.

ನೀವು ನಿಮ್ಜ ನಿಜವಾದ ಅಸಿತ್ವದ ಹಗುರತೆಯನ್ನು (ಭಾರವಿಲ್ಲದಿರುವಿಕೆಯನ್ನು) ಅನುಭವಿಸಿ ತಿಳಿಯಬೇಕೆಂದರೆ, ನೀವು ಶರೀರವನ್ನು ಬಿಟ್ಟು ದಾಟುವುದಷ್ಟೇ ಅಲ್ಲ, ಮನಸ್ಗನ್ನೂ ದಾಟಿ ಆಚೆಗೆ ಹೋಗಬೇಕು ಏಕೆಂದರೆ, ಆ ಮನಸೂ ಕೂಡ ಸ್ವಲ್ಪ ತೂಕವನ್ನು ಹೊಂದಿರುತೆ. ಯಾವಾಗ ನೀವು ದುಃಖತಪರಾಗಿರುತೀರೋ ಆವಾಗ ನೀವು ಭೌತಿಕವಾಗಿ ಭಾರವಾಗಿದ್ದೀರೆಂಬ ಅನುಭವ ಬರುತ್ತದೆ. ಏನೋ ನಿಮ್ದನ್ನು ಕೆಳಕ್ಕೆ ಜಗುತಿದೆ ಎನಿಸಿ ಬಿಟ್ಟಿರುತೆ. ನೀವು ಸಂತೋಷವಾಗಿದ್ದಾಗ, ನೀವು ಹಗುರತೆಯನ್ನು ಅನುಭವಿಸುತ್ತೀರಿ, ನೀವು ಗಾಳಿಯಲ್ಲಿ ತೇಲುತಿದ್ದೀರೆಂಬ ಭಾವನೆಯಿಂದಿರುತೀರಿ! ಇದಕ್ಕೆ ಕಾರಣ, ನೀವು ಸಂತೋಷವಾಗಿದ್ದಾಗ, ನೀವು ನಿಮ್ ಶರೀರವನ್ನು ಮರೆತೇ ಬಿಟ್ಟರುತೀರಿ, ಮನಸನ್ನೂ ಮರೆತುಬಿಟ್ಟಿರುತ್ತೀರಿ. ಪ್ರಯತ್ನವೇ ಇಲ್ಲದಿದ್ದರೂ ನೀವು ಭಾರವಿಲ್ಲದಿರುವಿಕೆಯನ್ನು ಅನುಭವಿಸುತ್ತೀರಿ. ಆದರೆ ನಿಮ್ಮ ಸಹಜ ಜೀವನದಲ್ಲಿ, ನೀವು ಹೊರಗಿನ ಪರಿಸ್ಥಿತಿಗಳಿಂದ ನಿಯಂತ್ರಿಸಲ್ಪಡುತಾ ಇರುತೀರಿ. ಈ ಧ್ಯಾನದಲ್ಲಿ, ನಾವು ಭಾರವೇ ಇಲ್ಲದವರು ಎಂಬ ಭಾವನೆಯನ್ನು ಆತ್ಮ ಬಲದಿಂದ ಸೃಷ್ಟಿಸಿಕೊಳ್ಳುತ್ತೇವೆ.

ಸೂಚನೆಗಳು:

ಸುಮ್ಮನೆ ಎಲ್ಲಿಯಾದರೂ ಕುಳಿತು, ನಿಮಗೆ ನೀವೇ ಭಾರವಿಲ್ಲದವರು ಎಂದು ಆಲೋಚಿಸಲು ತೊಡಗಿರಿ.

ನಿಮ್ಮ ಬೆನ್ನನ್ನು ನೇರವಾಗಿಟ್ಟುಕೊಂಡು, ಕಣ್ಣುಗಳನ್ನು ಮುಚ್ಚಿರಿ. ನಿಮ್ಮ ಬೆನ್ನು ನೆಟ್ಟಗಿದ್ದಾಗಲೇ (ನೇರವಾಗಿದ್ದಾಗಲೇ) ನೀವು ತೂಕ ರಹಿತರು ಎಂಬ ಭಾವನೆಯನ್ನು ಹೊಂದಲು ಪ್ರಾರಂಭಿಸುತ್ತೀರಿ. ನೀವು ನಿಮ್ಮ ಬೆನ್ನು ಹುರಿಯು ಸಂಪೂರ್ಣವಾಗಿ ನೇರವಾಗಿದೆ ಎಂದು ಯಾವಾಗ ಖಾತ್ರಿ ಮಾಡಿಕೊಳ್ಳುತ್ತೀರಿ?

ನೆಟ್ಟಗೆ ಕುಳಿತು ನಿಮ್ಮ ಪೂರ್ತಿ ಬೆನ್ನನ್ನು ಹಿಂದಕ್ಕೂ ಮುಂದಕ್ಕೂ ಚಲಿಸಿರಿ. ಹಗುರವಾಗಿ, ಸ್ವಲ್ಪವೇ ತೂಗಾಡಿ ತಿಳಿದುಕೊಳ್ಳಿ. ಯಾವುದೋ ಒಂದು ಜಾಗದಲ್ಲಿ, ಬಹಳ ಹಿತವಾಗಿ ಸರಿಯಾಗಿದೆ ಅನ್ನಿಸುತ್ತದೆ. ಆ ಜಾಗವನ್ನೇ ನೀವು ಕೇಂದ್ರವಾಗಿಟ್ಟುಕೊಂಡು, ಅಕ್ಕ ಪಕ್ಕಕ್ಕೂ ಹಾಗೆಯೇ ತೂಗಾಡಿರಿ. ಕೂಡಲೇ ಯಾವುದೋ ಒಂದು ಜಾಗದಲ್ಲಿ (ಇರುವಿಕೆಯಲ್ಲಿ) ನೀವು ಹಗುರವಾಗಿ, ತೂಕವೇ ಇಲ್ಲದಂತೆ ಅನುಭವವು ಬರುತ್ತೆ. ಆ ಜಾಗವೇ, ನಿಮ್ಮ ಗುರುತ್ವಾಕರ್ಷಣ ಕೇಂದ್ರ. ಆ ನಿಲುವಿನಲ್ಲಿ (ಇರುವಿಕೆಯಲ್ಲಿ) ನಿಮ್ಮ ಬೆನ್ನು ಹುರಿಯು ನೇರವಾಗಿರುತದೆ.

ಈಗ ನೀವು ತೂಕವೇ ಇಲ್ಲದವರು ಎಂಬುದನ್ನು ಕಲಿಸಿಕೊಳ್ಳಿರಿ.

ಪ್ರಾರಂಭದಲ್ಲಿ ಅದು ಅಷ್ಟು ಸುಲಭ ಎನಿಸುವುದಿಲ್ಲ (ಏಕೆಂದರೆ) ನೀವು ನಿಮ್ಮ ಭಾರವನ್ನು ಭಾವಿಸುತ್ತಿರುತ್ತೀರಿ. ಆದರೆ, ನಿಮಗೆ ನೀವೇ ಹೇಳಿಕೊಳ್ಳುತ್ತೀರಿ 'ನೀವು ತೂಕವೇ ಇಲ್ಲದವರು' ಎಂದು; ಆ ತೂಕವಿಲ್ಲದಿರುವಿಕೆಯನ್ನು ಅನುಭವಿಸಿ ತಿಳಿಯುತಿರಿ. ಇದ್ದಕ್ಕಿದ್ದಂತೆ, ನೀವು ಭಾರವೇ ಇಲ್ಲದವರು ಎಂಬ ಅನುಭವ ನಿಮಗೆ ಉಂಟಾದುದನ್ನು ಅರ್ಥ ಮಾಡಿಕೊಳ್ಳುತ್ತೀರಿ. ಇದೇ ಸತ್ಯ!

ಇದು ನಿಮ್ಮನ್ನೇ ನೀವು ವಶೀಕರಿಸಿಕೊಳ್ಳುವುದಲ್ಲ (ಅಥವಾ ಸಮ್ಮೋಹಿತರನ್ನಾಗಿಸಿ ಕೊಳ್ಳುವುದಲ್ಲ). ನಿಜವಾಗಿ ಹೇಳಬೇಕೆಂದರೆ, ನಿಮ್ಮ ಜೀವನ ಪೂರ್ತಿ ನೀವು ತೂಕ ಉಳ್ಳವರೆಂಬ ಭ್ರಮೆಯಲ್ಲಿಯೇ ಜೀವಿಸುತ್ತಿದ್ದೀರಿ. ನೀವು ನಿಮ್ಮ ಶರೀರದ

ಭಾರವನ್ನು ನಿಮ್ಮ ಭಾರವೆಂದೇ ನಿವಾರಿಸಿಕೊಳ್ಳುವುದೇ (de-hypnotizing process) ಸಮ್ಮೋಹಿತ ರಹಿತರನ್ನಾಗಿಸಿಕೊಳ್ಳುವಿಕೆ. ತೂಕವೇ ಇಲ್ಲದವರೆಂದು ಭಾವಿಸಿಕೊಳ್ಳುತ್ತಾ ಅದನ್ನು ಅನುಭವಿಸುತ್ತಾ ಇರಿ.

ನೀವು ಆಳವಾಗಿ ಧ್ಯಾನದಲ್ಲಿ ಮುಳುಗಿದಾಗ, ನಿಮ್ಮ ಶರೀರದೊಂದಿಗಿನ ತಾದಾತ್ಮ ಭಾವನೆಯನ್ನು ಪೂರ್ಣವಾಗಿ ಕಳೆದುಕೊಳ್ಳುತೀರಿ. ನಿಮ್ಮ ಶರೀರದ ಎಲ್ಲೆಯನ್ನು ಮೀರಿ ಮುನ್ನಡೆಯುತೀರಿ. ನಿಮ್ಮಲ್ಲಿ ಅಪರಿಮಿತವಾದ ಶಕ್ತಿ ಇದೆ. ನೀವು ಅನಂತಾಕಾಶವನೇ ವ್ಯಾಪಿಸಿಬಿಡಬಹುದು. ಆದರೆ, ನಿಮ್ಮನ್ನು ನೀವೇ ಸಂಕುಚಿತಗೊಳಿಸಿಕೊಂಡು ಶರೀರದ ಗಾತ್ರಕ್ಕೆ ತಂದುಕೊಂಡಿದ್ದೀರಿ! ಇದೇ ನಿಮ್ಮ ನೋವಿಗೆ, ನಿಮ್ಮ ಕಷ್ಟಕ್ಕೆ, ನಿಮ್ಮ ಭಾರಕ್ಕೆ ಮೂಲ ಕಾರಣವಾಗಿದೆ. ಇದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡು ತಿಳಿದರೆ, ನಿಮಗೆ ನೀವೇ ಸಹಜವಾಗಿ ತೂಕವೇ ಇಲ್ಲದವರೆಂಬುದನ್ನು ಅನುಭವಿಸುತ್ತೀರಿ.

ನೀವು ಆಳವಾಗಿ ಧ್ಯಾನದಲ್ಲಿ ಮುಳುಗಿದಾಗ, ನಿಮ್ಮ ಶರೀರವನ್ನೂ ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ನಿಮ್ಮ ಪ್ರಜ್ಞಾ ಶಕ್ತಿಯಿಂದಲೇ ನಿಮ್ಮ ಶರೀರವು ಎತ್ತಲ್ಪಡುತ್ತದೆ. ಶರೀರವು ಗುರುತ್ವಾಕರ್ಷಣ ಶಕ್ತಿಯನ್ನು ಕಳೆದುಕೊಂಡು ಗಾಳಿಯಲ್ಲಿ ತೇಲಲು ಉಪಕ್ರಮಿಸುತ್ತದೆ. ಇದನ್ನೇ ಗಾಳಿಯಲ್ಲಿ ತೇಲಾಡುವಿಕೆ ಎಂದು ಹೇಳುವುದು. ಈ ರೀತಿ ಗಾಳಿಯಲ್ಲಿ ತೇಲಾಡುವುದನ್ನು ಬಹಳ ಜನ ಯೋಗಿಗಳು, ಯೋಗಿನಿಯರು, ಮಾಡಿ ತೋರಿಸುತ್ತಾರೆ.

ತೂಕವೇ ಇಲ್ಲದಿರುವ ಅನುಭವವನ್ನು ಪಡೆಯುವುದು ಎಂದರೆ, ಶರೀರ ಮತ್ತು ಮನಸ್ಸಿನಿಂದ ರಹಿತವಾಗುವುದೆಂದರೆ ಸ್ವಲ್ಪ ಕಾಲವಾದರೂ ಪೂರ್ಣವಾಗಿ ಶುದ್ಧ ಪ್ರಜ್ಞೆಯೇ ಆಗಿಬಿಡುವುದು, ಈ ತಂತ್ರವು ಸಂಪೂರ್ಣ ವಿಶ್ರಮಿಸುವಿಕೆ ಮತ್ತು ಪೂರ್ವೋತ್ಸಾಹವನ್ನು ಪಡೆಯುವಿಕೆಯಾಗಿದೆ.

ತಂತ್ರದ ವಿಚಾರ

ಎಷ್ಟು ಸಾರಿ ನೀವು ನಗುತ್ತೀರಿ? ನಾವು ನಗುವಾಗ, ನಾವು ಒಂದು ಮಹತ್ತರವಾದ ಆಧ್ಯಾತ್ಮ ಸಾಧನೆಯನ್ನು ಮಾಡುತ್ತಿದ್ದೇವೆನ್ನುವ ಪರಿಜ್ಞಾನವೇ ನಮಗಿರುವುದಿಲ್ಲ! ನಗು ಎನ್ನುವುದು ನಿಮ್ಮ ಮೂಲ ಅಸ್ತಿತ್ವದೊಡನೆ ಸೇರಿಸುವ ಬಹಳ ನಿಕಟವಾದ ದಾರಿ. ಅಷ್ಟು ಸುಲಭವಾದದ್ದು, ಮತ್ತು ಅಷ್ಟು ಪ್ರಭಾವಪೂರಿತ ಶಕ್ತಿಯುಳ್ಳದ್ದು. ಈ ಒಂದು ಧ್ಯಾನವನ್ನು ತಮ್ಮ ಜೀವನದಲ್ಲಿ ಎಂದಾದರೂ ಒಮ್ಮೆ ಪ್ರತಿಯೊಬ್ಬರೂ, ಅಭ್ಯಾಸ ಮಾಡಿಯೇ ಇರುತ್ತಾರೆ. ನಗುವುದು ಚೈತನ್ಯಕ್ಕೆ ಮಹಾದ್ಬುತವಾದ ಮೂಲ ಕಾರಣ. ಸುಮ್ಮನೆ ನಕ್ಕುಬಿಡಿ. ಆಗ ಆ ಚೈತನ್ಯವು ಹೇಗೆ ಮೂಲ ಸ್ಥಾನದಿಂದ ಉಕ್ಕಿ ಬಂದು ನಿಮ್ಮನ್ನು ಅದರಲ್ಲಿ ಮುಳುಗಿಸಿ ಬಿಡುತ್ತೆ ಎಂಬುದನ್ನು ಅನುಭವಿಸುತ್ತೀರಿ.

ನೀವು ನಕ್ಕಾಗ ನಿಮ್ಮ ಎಲ್ಲೆಯನ್ನು ಮೀರಿ ಬಿಡುತ್ತೀರಿ, ನೀವು ನಿಮ್ಮತನದ ಭಾವನೆಯನ್ನೂ ಕಳೆದುಕೊಳ್ಳುತ್ತೀರಿ. ನೀವು ನಿಮ್ಮ ನಗುವಿನ ಸ್ವಾಧೀನಕ್ಕೇ ಸೇರಿಬಿಡುತ್ತೀರಿ.

ಒಂದೇ ಸಮಯದಲ್ಲಿ, ಆಲೋಚಿಸುವುದು ಮತ್ತು ನಗುವುದು ಎರಡೂ ಸಾಧ್ಯವಾಗುವುದಿಲ್ಲವೆಂಬುದನ್ನು ಗಮನಿಸಿದ್ದೀರಾ ? ನೀವು ನಗುತ್ತಿರುವಾಗ, ಇದ್ದಕ್ಕಿದ್ದಂತೆ ನಗುವಾಗ, ಆಲೋಚನೆ ಮಾಡುವುದು ಸಾಧ್ಯವೇ ಇಲ್ಲ ಎಂಬ ಅನುಭವವನ್ನು ಪಡೆಯುತ್ತೀರಿ. ನೀವು ಮನಸ್ಸೇ ಇಲ್ಲದ ಸ್ಥಿತಿಯನ್ನು ಅನುಭವಿಸುತ್ತೀರಿ.

ನಗುವುದು ಎಂದರೆ, ಕಿಸಿ ಕಿಸಿ ನಗುವುದಲ್ಲ. ಮಾರ್ಮಿಕವಾದ ಮುಗುಳ್ನಗೆಯೂ ಅಲ್ಲ, ಅರ್ಧ ನಗುವೂ ಅಲ್ಲ. ಅದೊಂದು ಸುಂದರವಾದ, ವಿಶಾಲತೆಯ ನಗು,

ನಿಮ್ಮ ಅಸ್ತಿತ್ವವನ್ನು ತುಂಬಿ ನಿಮ್ಮಿಂದಲೇ ತುಳುಕಿ, ಹರಿಯುವಂತಹ ನಗು. ಈ ನಗುವಿಗೆ ಯಾವ ಕಾರಣವೂ ಇಲ್ಲ. ವಾಸ್ತವವಾಗಿ ನೀವು ನಗುವುದು ಯಾವುದೋ ಕಾರಣಕ್ಕಾಗಿ ಇರುತ್ತೆ - ಆದರೆ ಒಮ್ಮೆ ನೀವು ನಗುವುದಕ್ಕೆ ಪ್ರಾರಂಭಿಸಿದರೆ, ಆ ನಗುವೇ ನಿಮ್ಮನ್ನು ಅಧೀನ ಪಡಿಸಿಕೊಂಡು ಬಿಡುತ್ತದೆ! ಆಗ ನೀವು ಸುಮ್ಮ ಸುಮ್ಮನೇ ನಗಲು ಯತ್ನಿಸುತ್ತೀರಿ, ಕಾರಣ ನೀವು ನಗಲು ತೊಡಗಿದ್ದೀರಿ, ಅಷ್ಟೇ. ಕೇವಲ ಆ ನಗುವಿನ ಸಂತೋಷ, ನಿಮ್ಮನ್ನು ನಗಿಸುತ್ತಿರುತ್ತೆ. ನಿಮಗೆ ಅದರ ಪರಿವೆಯೇ ಇರುವುದಿಲ್ಲ.

ಜಪಾನಿನ ಸನ್ಯಾಸಿ ಹೊಟ್ಕೆ ಎಂಬುವರು ಲಾಫಿಂಗ್ ಬುದ್ಧ (ನಗುತಿರುವ ಬುದ್ಧ) ಎಂದೇ ಕರೆಯಲ್ಪಡುತ್ತಿದ್ದರು. ಅವರ ಸಂಪೂರ್ಣ ಆಧ್ಯಾತ್ಮಿಕ ಸಂದೇಶವನ್ನೆಲ್ಲಾ ಏಕೈಕ ಕೃತಿಯಾಗಿ ಸಂಕ್ಷೇಪಿಸಿದರೆ ಅದು -ನಗುವುದು! ಅವರು ಸಂಚರಿಸುತ್ತಿದ್ದಾಗಲೂ, ಒಂದು ಜನ ಸಂದಣೆಯ ಜಾಗದಲ್ಲಿ ನಿಂತು ನಗುವುದಕ್ಕೆ ಪ್ರಾರಂಭಿಸುತ್ತಿದ್ದರು - ಜೋರಾಗಿ, ಅಬ್ಬರದಿಂದ, ಹೊಟ್ಟೆ ತುಂಬ ನಗುತ್ತಿದ್ದರು ಅವರ ಪೂರ್ತಿ ಶರೀರವನ್ನು ಕುಲುಕಿಸಿಕೊಂಡು ನಗುತ್ತಿದ್ದರು. ಅವರ ನಗುವು ಅವರಿಂದ ಹೊರಬಂದು ಅದರ ಮಹಾ ಚೈತನ್ಯವು ಸುತ್ತಲೆಲ್ಲಾ ಅಲೆ ಅಲೆಯಾಗಿ ಪಸರಿಸುತ್ತಿತು. ಮತ್ತು ಅವರ ನಗುವು ಸಾಂಕ್ರಾಮಿಕ ಸೋಂಕಿನ ತರಹ ಆಗಿ ಆ ಪೂರಾ ಊರಿಗೆ ಊರೇ ಅವರೊಂದಿಗೆ ನಗಲು ಪ್ರಾರಂಭಿಸುತ್ತಿತ್ತು. ನಗುವಿನ ತಂತ್ರಗಳಾಗಲೀ, ಅದಕ್ಕೆ ಪ್ರಯತ್ನವಾಗಲೀ, ಇಲ್ಲದೆ ಮತ್ತು ಅವರು ನಗುತಿರುವುದು ಅವರಿಗೇ ಗೊತ್ತಿರದಂತೆ, ಇಡೀ ಊರಿಗೆ ಊರೇ (ಆ ನಗುವಿನ ಸಂಭ್ರಮದಲ್ಲಿ) ಮನಸ್ಸೇ ಇಲ್ಲದ ಸ್ಥಿತಿಯ ಕ್ಷಣಿಕ ದರ್ಶನವನ್ನು ಪಡೆಯುತ್ತಿದ್ದರು. ನಗುವು ಎಂತಹ ಒಂದು ದಿವ್ಯವಾದ ತಂತ್ರವಾಗಿದೆ ನೋಡಿ!

ಸೂಚನೆಗಳು:

ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಶರೀರವನ್ನು ಚಾಚಿ ಮಲಗಿರಿ. ಮಗುವು ಚಾಚಿಕೊಂಡು ಮಲಗುವ ತರಹ. ಮಕ್ಕಳು ನಿದ್ರೆಯ ನಂತರ ಆ ರೀತಿ ಚಾಚಿ

ಮಲಗುವುದನ್ನು ಗಮನಿಸಿದ್ದೀರಾ? ಶರೀರವನ್ನು ಹೀಗೆ, ಹಾಗೆ ಬಗಿಸಿ, ಚಾಚಿಕೊಳ್ಳಿ (ಮೈಮುರಿಯುವುದು ಎನ್ನುತ್ತೇವಲ್ಲಾ ಹಾಗೆ) ಪ್ರತಿಯೊಂದು ಮಾಂಸ ಖಂಡವೂ ಎಳೆಯಲ್ಪಟ್ಟು, ಹಿಗ್ಗಿಸಿದಂತಾಗುವುದನ್ನು ಅನುಭವಿಸಿರಿ!

ಆಗ ಕಣ್ಣುಗಳು ತೆರೆಯದೆ ನಗುವುದಕ್ಕೆ ಪ್ರಾರಂಭಿಸಿರಿ.

ಮೊದಲಿಗೆ ಅದು ಸ್ವಲ್ಪ ಪ್ರಯತ್ನ ಪೂರ್ವಕವಾಗಿಯೇ ನಡೆಯುತ್ತದೆ. ಆದರೆ ಬಹು ಬೇಗ ನಿಜವಾದ ನಗುವು ಒಳಗಿಂದೊಳಗೇ ಉಕ್ಕಿ ಶುರುವಾಗುತ್ತದೆ. ಇನ್ನು ಏನಿಲ್ಲದೇ ಹೋದರೂ, ನಗುವುದಕ್ಕಾಗಿ ನೀವು ಮಾಡುವ ಹಾಸ್ಯದ ಪ್ರಯತ್ತಗಳೇ ಸಾಕು, ನೀವು ನಿಜವಾಗಿಯೂ ನಗುವಂತೆ ಮಾಡಿಬಿಡುತ್ತವೆ!

ಒಮ್ಮೆ ನಿಮ್ಮನ್ನು ನಗುವು ಆವರಿಸಿದರೆ, ನಗಲು ಹಾಗೆಯೇ ಬಿಟ್ಟುಬಿಡಿ. ನಗುವುದಕ್ಕೆ ಸಮಯದ ಕಾಲಾವಧಿ ಇಲ್ಲ. ನೀವು ನಕ್ಕು ನಕ್ಕು ಸುಸ್ತಾಗುವವರೆಗೂ ನಕ್ಕುಬಿಡಿ. ಹಾಗೆಯೇ ಮುಂದುವರಿದಾಗ, ನೀವು ನಗುವನ್ನು ಬಹಳ ಕಾಲ ಉಳಿಸಿ, ಬೆಳೆಸಲು ಸಾಧ್ಯ ಎಂಬುದನ್ನು ಅರಿಯುತ್ತೀರಿ.

ಬುದ್ಧನು ಹೇಳಿರುವುದೇನೆಂದರೆ, ಸತತವಾಗಿ ಯಾರಿಗಾದರೂ 45 ನಿಮಿಷಗಳ ಕಾಲ ಉಂಟಾಗುತ್ತದೆ! ಕೇವಲ 45 ನಿಮಿಷಗಳು ನಗುವುದರಿಂದ!

ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ನಕ್ಕುಬಿಡಿ. ನಿಮ್ಮೊಳಗೇ ಆ ಚೈತನ್ಯವು ನಿಮ್ಮನ್ನು ನಗಿಸುತ್ತಾ ಅದರಲ್ಲೇ ಮುಳುಗುವಂತೆ ಮಾಡಿಬಿಡುತ್ತೆ.

ನೀವು ನಗುವುದನ್ನು ಮುಗಿಸಿದ ನಂತರವೂ ಬಹಳ ಕಾಲ ಆ ನಗುವಿನ ಅಲೆಗಳು ಆಳದಲ್ಲಿ, ಇನ್ನೂ ನಿಮ್ಮಲ್ಲಿ ಉಳಿದಿರುವುದನ್ನು ಕಾಣುತ್ತೀರಿ. ಕೇವಲ ಕೆಲವೇ ನಿಮಿಷಗಳ ಬೆಳಗಿನ ನಗುವು ನಿಮ್ಮ ಪೂರ್ತಿ ದಿವಸವನ್ನೇ ಪರಿವರ್ತಿಸಬಹುದು!

ತಂತ್ರದ ವಿಷಯ:

ಇದೊಂದು 'ಆಲಿಸುವ'ಧ್ಯಾನ'

ಆಲಿಸುವ ಧ್ಯಾನಗಳು ನಿಷ್ಠೆಯ ಧ್ಯಾನಗಳಾಗಿರುತ್ತವೆ. ನೀವು ಏನನ್ನೂ ಮಾಡಬೇಕಾದ್ದಿಲ್ಲ - ಸುಮ್ಮನೆ ಕೇಳುವುದು. ಆದರೆ ಕೇವಲ ಕೇಳುವುದರಿಂದ ಬಹಳವಾದದ್ದು ಆಗಿ ಬಿಡಬಹುದು!

ನಾವು ಯಾವಾಗಲೂ ಶಬ್ದಗಳ ಬಿರುಗಾಳಿಯ ಮಧ್ಯದಲ್ಲೇ ವಾಸಿಸುತ್ತಿದ್ದೇವೆ. ಶಬ್ದಗಳು ಯಾವಾಗಲೂ ನಮ್ಮ ಕಡೆಗೆ ಬರುತ್ತಲಿವೆ, ನಮ್ಮ ಮೇಲೆ ಅಪ್ಪಳಿಸುತ್ತಿವೆ, ನಮ್ಮನ್ನು ಸುತ್ತುವರಿದು ಅದರಲ್ಲಿಯೇ ಬಿರುಗಾಳಿಯಲ್ಲಿ ಕಳೆದು ಹೋಗಿದ್ದೇವೆ. ಆದರೆ ಆ ಬಿರುಗಾಳಿಯ ಮಧ್ಯದಲ್ಲೂ ನಾವು ಕೇಳದೇ ಅರಿಯದೇ ಇರುವ ಒಂದು ನಿಶ್ಶಬ್ದತೆ ಇದೆ. ಈ ಧ್ಯಾನವು ಆ ಶಬ್ದಗಳನ್ನು ಅರಿಯುವಂತೆ ಮಾಡುತ್ತದೆ.

ಸೂಚನೆಗಳು:

ಯಾವುದೋ ಒಂದು ಸ್ಥಳದಲ್ಲಿ ಸುಮ್ಮನೆ ಕುಳಿತುಕೊಳ್ಳಿರಿ. ಶಬ್ದಗಳು ಹೆಚ್ಚು ಹೆಚ್ಚು ಇದ್ದಷ್ಟೂ ಒಳ್ಳೆಯದು! ಹೆಚ್ಚು ಗಲಾಟೆ ಅಥವಾ ಸತತವಾಗಿ ಶಬ್ದಗಳು ಇರುವ ಜಾಗವನ್ನೇ ನೋಡಿಕೊಳ್ಳಿರಿ. ಅದು ಸಹಜವಾದ ಶಬ್ದವಾಗಿರಬಹುದು, ಅಂದರೆ ನದಿ ಅಥವಾ ಜಲಪಾತವು ರಭಸದಿಂದ ಹರಿಯುವ ಶಬ್ದದಂತಹವು ಅಥವಾ ರೈಲ್ವೆ ಸ್ಟೇಷನ್ ಆಗಿರಬಹುದು, ಮಾರ್ಕೆಟ್ ಜಾಗವಾಗಿರಬಹುದು.

ಸುಮ್ಮನೇ ಕುಳಿತುಕೊಳ್ಳಿರಿ. ಅಲೆ ಅಲೆಯಾಗಿ ಎಲ್ಲಾ ದಿಕ್ಕುಗಳಿಂದಲೂ ಶಬ್ದಗಳು ನಿಮ್ಮ ಕಡೆಗೆ ಹರಿಯುತ್ತಿರುವುದನ್ನು ಗಮನಿಸಿ ನೀವು ಆ ಶಬ್ದಗಳ ಬಿರುಗಾಳಿಯ ಮಧ್ಯದಲ್ಲಿರುವುದಾಗಿ ಭಾವಿಸಿಕೊಳ್ಳಿರಿ. ನೀವು ಮಧ್ಯದಲ್ಲಿದ್ದೀರಿ, ಶಬ್ದಗಳೆಲ್ಲಾ ನಿಮ್ಮ ಕಡೆಗೆ ಹರಿದು ಬರುತ್ತಿವೆ.

ಮಧ್ಯದಲ್ಲಿ ನೀವೆಲ್ಲಿದ್ದೀರೋ ಅಲ್ಲಿ ಶಬ್ದಗಳೇ ಇಲ್ಲ ಇದನ್ನು ಅನುಭವಿಸಿ ತಿಳಿಯಿರಿ! ಮಧ್ಯದಲ್ಲಿ ಪೂರ್ಣ ಪ್ರಶಾಂತತೆ ಇದೆ. ಒಂದು ವೇಳೆ ಆ ಮಧ್ಯದಲ್ಲಿ ಏನಾದರೂ ಶಬ್ದವು ಇದ್ದರೆ, ನೀವು ಹೊರಗಿನ ಶಬ್ದಗಳಾವುದನ್ನೂ ಕೇಳಲು ಸಾಧ್ಯವಾಗುವುದಿಲ್ಲ. ಆ ಶಬ್ದಗಳು ನಿಮ್ಮನ್ನು ಪ್ರವೇಶಿಸುತ್ತಿವೆ, ಭೇದಿಸಿಕೊಂಡು ಒಳ ಹೋಗುತ್ತಿವೆ, ಆದರೂ ಅವು ಮಧ್ಯದಲ್ಲಿ ನಿಂತುಬಿಡುತ್ತವೆ. ನಿಮ್ಮೊಳಗೆ (ಮಧ್ಯದಲ್ಲಿ) ಒಂದು ಸ್ಥಳವಿದೆ, ಆ ಸ್ಥಳದಲ್ಲಿ ಎಲ್ಲಾ ಶಬ್ದಗಳೂ ನಿಂತುಬಿಡುತ್ತವೆ. ಆ ಸ್ಥಳದಿಂದಲೇ ನೀವು ಪ್ರತಿಯೊಂದು ಶಬ್ದವನ್ನೂ ಕೇಳಿಸಿಕೊಳ್ಳುತ್ತಿದ್ದೀರಿ. ಆ ಮಧ್ಯದ ಜಾಗವನ್ನು ಗುರುತಿಸಲು ಯತ್ನಿಸಿರಿ.

ಇದ್ದಕ್ಕಿದ್ದಂತೆಯೇ, ನೀವು ಅದನ್ನು ಗುರುತಿಸುತ್ತೀರಿ.

ಕೂಡಲೇ ನಿಮ್ಮ ಪ್ರಜ್ಞೆಯು ಒಳ ಮುಖವಾಗಿ ತಿರುಗಿ ಬಿಡುತ್ತದೆ.

ನಿಮ್ಮ ಪ್ರಜ್ಞೆಯು ಹೊರಗಿನ ಶಬ್ದ ಪ್ರಪಂಚದಿಂದ ಬದಲಾಯಿಸಿಕೊಂಡು ಬಿಡುತ್ತದೆ. ನೀವು ಎಲ್ಲಿ ಶಬ್ದವೇ ಇಲ್ಲವೋ ಅಂತಹ, ನಿಶ್ಶಬ್ದ ಕೇಂದ್ರದಲ್ಲಿ ಇದ್ದು ಬಿಡುತ್ತೀರಿ. ಆ ಸ್ಥಳಕ್ಕೆ ಶಬ್ದವು ಪ್ರವೇಶಿಸಲಾರದು, ಆ ಬಿಂದುವೇ ನೀವು.

ಒಮ್ಮೆ ಆ ವಿಚಲಿತರಾಗುವುದಿಲ್ಲ, ಶಬ್ದಗಳು ನಿಮ್ಮನ್ನು ಮುಟ್ಟಲಾರವು.

ನಾವು ಯಾವಾಗಲೂ, ನಮ್ಮ ಕಿವಿಗಳಿಂದ ಶಬ್ದಗಳನ್ನು ಕೇಳುತ್ತಿದ್ದೇವೆಂದು ಭಾವಿಸಿದ್ದೇವೆ. ಈ ಕೇಳಲ್ಪಡುವುದಿಲ್ಲ, ತಲೆಯಿಂದಲೂ - (ಮನಸ್ಸಿನಿಂದಲೂ) ಕೇಳಲಾಗುವುದಿಲ್ಲ ಎಂಬುದನ್ನು ಕೇಂದ್ರಬಿಂದುವಿನಿಂದ ಕೇಳಲ್ಪಡುತ್ತದೆ! ಅದೇ ಶಬ್ದದ ಕೇಂದ್ರ. ಗಲಾಟೆಯ (ಗದ್ದಲದ) ಮೇಲೆಯೇ ಏಕೆ ಪ್ರಾಮುಖ್ಯತೆ ಎಂದರೆ? ಏಕೆಂದರೆ ಮಿತಿ ಮೀರಿದ ಗಲಾಟೆಯು, ನಿಮ್ಮ ಕಿವಿಗಳನ್ನು ಮುಚ್ಚಿದ ಅನುಭವವನ್ನೇ ಉಂಟು ಮಾಡುತ್ತದೆ! ಶಬ್ದವು ಅಸ್ಪಷ್ಟತೆಯಿಂದ ತಿಳಿಯಲಾಗದೇ ಹೋದಾಗ, ಅದು ಹಾಗೆಯೇ ಸತತವಾಗಿ ವಿಂಗಡಿಸಲಾಗದಿದ್ದಾಗ, ಅದೇ ಶಬ್ದವು ತಡೆ ಅಥವಾ ಅಡ್ಡಿಯಾಗಿ ಬಿಡುತ್ತದೆ. ಈ ತಂತ್ರವನ್ನು ಹಾಡುಗಳು ಅಥವಾ ಸಂಗೀತಗಳ ವಿಚಾರದಲ್ಲಿ ಪ್ರಯತ್ನಿಸಲಾರಿರಿ, ಏಕೆಂದರೆ ಭಾಷೆಯು (ಸಾಹಿತ್ಯವು) ಸ್ಪಷ್ಟವಾಗಿರುವುದರಿಂದ, ಅರ್ಥವನ್ನು ಕುರಿತು ಮನಸು ಏಕಾಗ್ರಗೊಳ್ಳುವುದರಿಂದ, ಕೂಡಲೇ ನೀವು ನಿಮ್ಮ ತಲೆಯನ್ನೂ ಉಪಯೋಗಿಸುತ್ತೀರಿ. ಅದು ಕೇವಲ ಗದ್ದಲ ಅಥವಾ ಗಲಾಟೆಯಾಗಿರಬೇಕು.

ಗಲಾಟೆಯ ಮಧ್ಯದಲ್ಲಿ, ನಿಮ್ಮ ಕಿವಿಗಳನ್ನು ನಿಮ್ಮ ಬೆರಳುಗಳಿಂದ ಮುಚ್ಚಲು ಯತ್ನಿಸಿರಿ. ತಕ್ಷಣ ನೀವೊಂದು ಹೊಸ ಶಬ್ದವನ್ನು ಆಲಿಸತೊಡಗುತ್ತೀರಿ, ನಿಶ್ಶಬ್ದತೆಯ ಧ್ವನಿ (ಶಬ್ದ). ಈ ಹೊಸ ಶಬ್ದವೇ ನಿಶ್ಶಬ್ದತೆಯು. ಅಂತಹದೊಂದು ಶಬ್ದವಿದೆ, ಮತ್ತು ಅದನ್ನು ನೀವು ಸುಲಭವಾಗಿ ಕೇಳಬಲ್ಲಿರಿ! ಶಬ್ದದಿಂದ, ನಾವು ಶಬ್ದದ ಮೂಲ ಸ್ಥಾನಕ್ಕೆ ಸೇರಲು ಪ್ರಾರಂಭಿಸುತ್ತೇವೆ. ನಿಶ್ಶಬ್ದತೆಯಿಂದ, ನಾವು ಒಳಗೆ ಹರಿಯಲು ಪ್ರಾರಂಭಿಸುತ್ತೇವೆ. ಅಂದರೆ ನಿಮ್ಮ ಸ್ವಂತ ಕೇಂದ್ರಕ್ಕೇ ಹರಿಯುತ್ತೇವೆ. ಪ್ರಪಂಚದ ಹೊರಗಿನ ಶಬ್ದ ಮತ್ತು ಕೇಂದ್ರದ ನಿಶ್ಶಬ್ದತೆಯ ಶಬ್ದ ಇವೆರಡನ್ನೂ ಕೇಳಿಸಿಕೊಳ್ಳುವುದನ್ನು ಕಲಿಯಿರಿ. ಒಂದರಿಂದ ಮತ್ತೊಂದಕ್ಕೆ ಚಲಿಸಿರಿ. ಹೊರಗಿನ ಶಬ್ದಗಳಿಂದ, ಒಳಗಿನ ನಿಶ್ಶಬ್ದತೆಯ ಶಬ್ದದ ಕಡೆಗೆ ಮತ್ತು ಪುನಃ ಅದೇ ರೀತಿ ಇದರಿಂದ ಅದಕ್ಕೆ. ಪ್ರತಿ ಸಾರಿಯೂ, ನಿಮ್ಮ ಗ್ರಹಿಕೆಯ - ಸಾಮರ್ಥ್ಯವು ಹೆಚ್ಚುತ್ತಾ ಹೋಗುತ್ತದೆ (ಈ ರೀತಿ) ಒಳಗಿನದು ಮತ್ತು ಹೊರಗಿನದು ಇವೆರಡರ ಮಧ್ಯೆ ಒಂದರಿಂದ ಮಧ್ಯೆ ಮತ್ತೊಂದಕ್ಕೆ ಚಲಿಸಲು ಕಲಿಯಿರಿ, ಆಗ ನೀವು ಇವೆಲ್ಲವೂ ಒಂದು ಆಟವೇ ಆಗಿದೆ ಎಂಬುದನ್ನು ಅರಿತುಕೊಳ್ಳುತ್ತೀರಿ!

ಧ್ಯಾನದ ತಂತ್ರಗಳು

ಧ್ಯಾನದ ವಿಚಾರ

ಈ ತಂತ್ರವು ಹೊರ ಪ್ರಪಂಚದಿಂದ ಬರುವ ಸಂಕೇತಗಳನ್ನು ಮುಚ್ಚಿ ಬಿಡುತ್ತದೆ. ನೀವು ಪ್ರಪಂಚದಿಂದ ಗ್ರಹಿಸುವುದೆಲ್ಲವೂ ನಿಮ್ಮ ಪಂಚೇಂದ್ರಿಯ ಗಳ ಮೂಲಕ ಅಂದರೆ ನೋಟದಿಂದ, ಶಬ್ದದಿಂದ, ರುಚಿಯಿಂದ, ವಾಸನೆ ಯಿಂದ ಮತ್ತು ಸ್ಪರ್ಶದಿಂದ ಬರುವ ಸಮಾಚಾರಗಳೇ ಆಗಿರುತ್ತವೆ.

ಈ ಧ್ಯಾನವು ಇಂದ್ರಿಯಗಳಿಂದ ಬರುವ ಎಲ್ಲಾ ಅನುಭವಗಳನ್ನೂ ನಿರಾಕರಿಸುತ್ತದೆ. ನೀವು ಪ್ರಪಂಚಕ್ಕೆ ನಿಮ್ಮನ್ನು ತೆರೆದುಕೊಳ್ಳದೇ ಇದ್ದಾಗ (ಸ್ಪಂದಿಸದಿದ್ದಾಗ) ನೀವು ನಿಮ್ಮ ಶರೀರಕ್ಕೂ ನಿಮ್ಮನ್ನು ಮುಚ್ಚಿಕೊಂಡಂತೆಯೇ. ನಿಮ್ಮ ಚೈತನ್ಯವು ನಿಮ್ಮ ಒಳಗಡೆಗೇ ಹಿಂದಿರುಗುತ್ತದೆ.

(ಸೂಚನೆಗಳು)

ಈ ಧ್ಯಾನವನ್ನು ಎಲ್ಲಿ ಬೇಕಾದರೂ, ಯಾವ ಸಮಯದಲ್ಲಾದರೂ ಮಾಡಬಹುದು.

ಈ ಘಳಿಗೆಯಲ್ಲಿ ನೀವು ಎಲ್ಲಿದ್ದೀರೋ ಅಲ್ಲಿಂದಲೇ, ನಿಮ್ಮ ಇಂದ್ರಿಯ ಗಳಿಂದ ಬರುವ ಸಂಕೇತಗಳನ್ನು ಗುರುತಿಸಿಕೊಳ್ಳಿರಿ. ನೀವು ತೋಟದಲ್ಲಿನ ಹೂವುಗಳನ್ನು ನೋಡಬಹುದು. ನೀವು ಆಲಿಸಬಹುದು, ನಿಮ್ಮ ಕಾಲಿನ ಮೇಲೆ ಒಂದು ಇರುವೆಯ ಹರಿದಾಡುವಿಕೆ ಯನ್ನು ಅನುಭವಿಸಿ ತಿಳಿಯಬಹುದು.

ಸುಮ್ಮನೆ ಇಂದ್ರಿಯಗಳನ್ನು ಮುಚ್ಚಿಬಿಡಿ.

ನೀವು ಕುರುಡರಾಗಿದ್ದೀರೆಂದು ಕಲ್ಲಿಸಿಕೊಳ್ಳಿರಿ. ನೀವು ಆ ಹಕ್ಕಿಗಳ ಗಾನವನ್ನು ಕೇಳಲಾರಿರಿ ಎಂದು ಕಲ್ಲಿಸಿಕೊಳ್ಳಿರಿ, ಇರುವೆಯ ಓಡಾಡುವಿಕೆ ಯನ್ನೂ ತಿಳಿಯಲಾರಿರಿ ಎಂದು ಕಲ್ಲಿಸಿಕೊಳ್ಳಿರಿ. ನೀವು ಒಂದು ವಿಗ್ರಹವಾಗಿ ಬಿಟ್ಟಿದ್ದೀರಿ ಎಂದು ಕಲ್ಲಿಸಿಕೊಳ್ಳಿರಿ, ನೀವು ಕಲ್ಲಿನಂತೆ ಗಟ್ಟಿಯಾಗಿದ್ದೀರಿ ಎಂದು ಕಲ್ಪಿಸಿಕೊಳ್ಳಿರಿ. ನೀವು ಸ್ವಲ್ಪವೂ ಚಲಿಸಲಾರಿರಿ ಎಂದು ಕಲ್ಲಿಸಿಕೊಳ್ಳಿರಿ.

ಈ ಕಲ್ಪಿಸಿದ ಅನುಭವದೊಳಕ್ಕೆ ಆಳವಾಗಿ ಹೋಗಿರಿ. (ಈ ಭಾವನೆಯನ್ನು ತೀವ್ರವಾಗಿ ಆಳವಾಗಿ ಅನುಭವಿಸಿರಿ)

ನೀವು ಇದನ್ನು ಮಾಡಬಲ್ಲಿರಿ!

ಹೇಗೆ?

ಉಸಿರಾಡುವುದನ್ನು ಕ್ಷಣಕಾಲ ಹಾಗೆಯೇ ನಿಲ್ಲಿಸಿ ಬಿಡಿ, ಆಗ ನಿಮ್ಮ ಇಂದ್ರಿಯಗಳು ತಮಗೆ ತಾವೇ ಸುಮ್ಮನಾಗಿ ಕೆಲಸ ಮಾಡದವುಗಳಾಗುತ್ತವೆ.

ಯಾವಾಗ ಉಸಿರು ನಿಲ್ಲುತ್ತದೆಯೋ, ಆಗ ಇಂದ್ರಿಯ ಸಂವೇದನೆಯೂ ನಿಂತು ಬಿಡುತ್ತದೆ. ಉಸಿರನ್ನು ಬಿಗಿ ಹಿಡಿಯಿರಿ ಮತ್ತು ನೀವೇ ನೋಡಿ. ಆಗ ನೀವು ನಿಮ್ಮ ಚರ್ಮದ ಮೇಲಾಗುವ ಮುಜುಗರವನ್ನು (ಕೆರಳಿಸುವಿಕೆಯನ್ನು) ಅನುಭವಿಸುತ್ತೀರಾ? ಶಬ್ದಗಳೂ ಸಹ ಹಿಂದಕ್ಕೆ ಹೋಗಿ ದೂರದಲ್ಲಿ ಮಾಯವಾಗಿ ಬಿಡುತ್ತದೆ. ನಿಮ್ಮ ಶರೀರವು ನಿಜವಾಗಿಯೂ ಘನೀಭೂತ ವಾದಂತಾಗುತ್ತದೆ. ನೀವು(ನಿಮ್ಮ)ಕೈಯನ್ನು ಮೇಲೆತ್ತಲಾರಿರಿ!

ಇದೊಂದು ವಿಶ್ರಾಂತಿ ಪಡೆಯುವುದಕ್ಕೆ ಅತ್ಯುತ್ತಮವಾದ ತಂತ್ರ.

ಯಾವಾಗ ನೀವು ಹೊರಗಡೆಗೆ ಹರಿದು ಹೋಗಲಾರಿರೋ, ಯಾವಾಗ ನೀವು ಇಂದ್ರಿಯಗಳಿಂದ ವಿಷಯಗಳನ್ನು ಗ್ರಹಿಸಲಾರಿರೋ, ಆಗ ನೀವು ನಿಮಗೇ ಎಸೆಯಲ್ಪಡುತ್ತೀರಿ, ನೀವು ಮೌನಶಾಂತಿಯ ಒಂದು ದ್ವೀಪವೇ ಆಗಿಬಿಡುತ್ತೀರಿ. ಆ ಮೌನದಲ್ಲಿ ನಿಮ್ಮ ಕೇಂದ್ರವನ್ನೇ ನೀವು ತಿಳಿಯುತ್ತೀರಿ.

ಧ್ಯಾನದ ತಂತ್ರಗಳು

ಈಗ, ಈಗ, ನೀವು ಹೊರಗೆ ನೋಡಿದಾಗಲೂ, ಕೇಳಿದಾಗಲೂ, (ಅವೆಲ್ಲವನ್ನೂ) - ನೀವು ನಿಮ್ಮ ಆ ಶಾಂತಿಯ ಕೇಂದ್ರ ಬಿಂದುವಿನಿಂದಲೇ ಮಾಡುತ್ತೀರಿ. ಒಮ್ಮೆ ಈ ಕೇಂದ್ರಬಿಂದುವನ್ನು ಕಂಡುಕೊಂಡಾಗ, ನೀವು ಪುನಃ ನಿಮ್ಮ ಇಂದ್ರಿಯಗಳ ಕೂಗಾಟಕ್ಕೆ (ಘರ್ಜನೆಗೆ) ಸಿಕ್ಕಿ, ನಿಮ್ಮನ್ನು ನೀವು ಕಳೆದುಕೊಳ್ಳುವುದಿಲ್ಲ. ಯಾವಾಗ ಬೇಕಾದರೂ (ಮನೋಬಲದಿಂದ) ನಿಮ್ಮ ಇಂದ್ರಿಯಗಳನ್ನು ಕೆಲಸ ಮಾಡದಂತೆ ಮುಚ್ಚಬಿಡಬಲ್ಲವರಾಗುತ್ತೀರಿ, ನೀವು ನಿಮ್ಮ ಇಂದ್ರಿಯಗಳಿಗೆ ಸಾಕ್ಷಿಯಾಗಬಲ್ಲಿರಿ.

ತಂತ್ರದ ವಿಚಾರ

ಧ್ಯಾನಗಳಲ್ಲಿ ಏನನ್ನಾದರೂ ಮಾಡುವ ಧ್ಯಾನವು, ಧ್ಯಾನವನ್ನು ಪ್ರಾರಂಭಿಸುವವರಿಗೆ ಒಳ್ಳೆಯದು. ಸುಮ್ಮನೆ ಕುಳಿತು ಮಾಡುವ ಧ್ಯಾನಕ್ಕಿಂತ ಏನನ್ನಾದರೂ ಮಾಡುವ ಧ್ಯಾನವು ಅರಿವನ್ನು ಉಳಿಸಿ, ಸಂರಕ್ಷಿಸಿಕೊಳ್ಳಲು ಸುಲಭವಾಗುತ್ತದೆ.

ಈ ಧ್ಯಾನ, 'ಓಡುತ್ತಾ ಮಾಡುವ ಧ್ಯಾನ'.

ಏಕೆ ಓಡಬೇಕು?

ನೀವು ಓಡುವಾಗ, ಸಹಜವಾಗಿ ನೀವು ಚುರುಕಾಗಿರುತ್ತೀರಿ ಹಾಗೂ ಜಾಗರೂಕರಾಗಿರುತ್ತೀರಿ, ಅರಿವುಳ್ಳವರೂ ಆಗಿರುತ್ತೀರಿ. ಓಡುವಾಗ ನೀವು ಶರೀರ, ಮನಸ್ಸು ಹಾಗೂ ಚೈತನ್ಯದ ಒಂದು ಸುಂದರ ಸಂಗಮವನ್ನು (ಐಕ್ಯತೆಯನ್ನು) ಅನುಭವಿಸುತ್ತೀರಿ. ನಿಮ್ಮಲ್ಲಿರುವ ಎಲ್ಲವೂ ಒಂದೇ ಎನ್ನುವಂತೆ ಕೆಲಸ ಮಾಡುತ್ತವೆ ಹಾಗೂ ಒಂದೇ ಗುರಿಯನ್ನು ಹೊಂದಿರುತ್ತದೆ. ನೀವು ಸ್ತಬ್ಧವಾಗಿ ಕುಳಿತಾಗ, ನಿಮ್ಮ ಶರೀರವು ಮಾತ್ರ ಸುಮ್ಮನೆ ಕೆಲಸ ಮಾಡದೇ

ಇರುತ್ತದೆ, ಆದರೆ ಮನಸ್ಸು ಓಡುತ್ತಲೇ ಇರುತ್ತೆ, ದೇಹ ಮತ್ತು ಮನಸ್ಸು ಬೇರೆಯಾಗಿ ಬಿಟ್ಟಿರುತ್ತವೆ. ನಿಮ್ಮ ದೇಹ ಕುಳಿತಿರುತ್ತೆ, ಮನಸ್ಸು ಎಲ್ಲಲ್ಲೋ ಸುತ್ತಲು ಹೋಗುತ್ತಿರುತ್ತೆ!

ಯಾವಾಗ ನಿಮ್ಮ ಶರೀರವು ಓಡುತ್ತದೆಯೋ ಆಗ, ಅದಕ್ಕೆ ವ್ಯತಿರಿಕ್ತವಾದದ್ದು ಆಗುತ್ತದೆ. ನೀವು ಇದ್ದುಬಿಡುತ್ತದೆ. ನಿಮ್ಮ ಮನಸ್ಸು ಮಾತನಾಡುವುದನ್ನು ನಿಲ್ಲಿಸಿಬಿಡುತ್ತದೆ. ಮತ್ತೆ ನೀವು ಓಡುವುದನ್ನು ಮುಂದುವರಿಸಿದಾಗ, ಸ್ವಲ್ಪ ಹೊತ್ತಾದ ಮೇಲೆ, ಆ ಓಡುವಿಕೆಯೇ ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ಆಗ ಶರೀರವೂ, ಮನಸ್ಸು, ನಿಮ್ಮದಾಗಿ ಇರುವುದಿಲ್ಲ. ನೀವು ಓಡುವುದಕ್ಕೇ ಸೇರಿದವರಾಗುತ್ತೀರಿ. ನೀವೇ ಓಟವಾಗಿ ಬಿಡುತ್ತೀರಿ.

ಸೂಚನೆಗಳು:

ನೀವು ಓಡಲು ಒಂದು ಸಮಯವನ್ನು ಗೊತ್ತುಪಡಿಸಿಕೊಳ್ಳಿ. ಬೆಳಗಿನ ಜಾವವು ಅತ್ಯುತ್ತಮ, ಮತ್ತೊಂದು ಅಂದರೆ ಸಾಯಂಕಾಲ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನಿಮ್ಮ ಶರೀರವು ಬಹಳವಾಗಿ ತೆರೆದುಕೊಂಡು, ಪ್ರಕೃತಿಯ ಚೈತನ್ಯವನ್ನು ಪಡೆದುಕೊಳ್ಳುವಲ್ಲಿ ಯೋಗ್ಯವಾಗಿರುತ್ತದೆ.

ನೇರವಾಗಿ ಚೆನ್ನಾಗಿ ಓಡಲು ಸುಲಭವಾದ ಸಾಕಷ್ಟು ಶಾಂತವಾಗಿ ಹೆಚ್ಚು ಜನರಿಲ್ಲದ, ನೀವು ಸಂಭಾವ್ಯತೆಗಳಿಲ್ಲದ, ಸಂಚಾರಿ ವಾಹನಗಳ ಭಯವಿಲ್ಲದೆ ಇರುವ ಸುರಕ್ಷಿತವಾದ ಒಂದು ದಾರಿಯನ್ನು ಓಡುವ ಸಲುವಾಗಿ ಆರಿಸಿಕೊಳ್ಳಿರಿ.

ನೀವು ಓಡುವ ಅಭ್ಯಾಸವಿಲ್ಲದವರಾದರೆ, ಕಡಿಮೆ ದೂರದ ಓಟವನ್ನು ಪ್ರಾರಂಭಿಸಿರಿ - ಅಂದರೆ ಅರ್ಧ ಮೈಲಿ. ಆನಂತರ ನಿಧಾನವಾಗಿ ಓಡುವ ದೂರವನ್ನು ಹೆಚ್ಚಿಸಿಕೊಳ್ಳಿರಿ.

ಧ್ಯಾನದ ತಂತ್ರಗಳು

ಅದಾದನಂತರ ಸುಮ್ಮನೆ ಓಡಿರಿ! ಹೊಟ್ಟೆಯಿಂದ ಆಳವಾಗಿ ಉಸಿರಾಡಿರಿ, (Run with every limb) ಕೈಕಾಲುಗಳನ್ನು ಚೆನ್ನಾಗಿ ಉಪಯೋಗಿಸಿ ಓಡಿರಿ. ನೀವು ಓಡಿ ಆಯಾಸಗೊಂಡಾಗ ಬಲವಂತವಾಗಿ ಓಡಬೇಡಿರಿ. ವಿಶ್ರಮಿಸಿರಿ ಮತ್ತು ಆ ಕಾಲವನ್ನು ಚೆನ್ನಾಗಿ ಅನುಭವಿಸಿ ಆನಂದಿಸಿರಿ. ನಿಮ್ಮ ಪಾದರಕ್ಷೆಗಳನ್ನು (ಷೂಗಳನ್ನು) ಅನುಭವವನ್ನು ಪಡೆಯಿರಿ. ನಾವು ಮೂಲ ಚೈತನ್ಯದ ಒಂದು ಭಾಗದಿಂದ ಸಂಪರ್ಕವನ್ನು ಕಳೆದುಕೊಂಡಿರುವೆವು ಅಂದರೆ ಅದು ಭೂಮಿಯಿಂದ ಬರುವ ಚೈತನ್ಯವನ್ನು ಸಜ್ಜುಗೊಳಿಸುತ್ತಿದ್ದೇವೆ (artificial flooring), ಮತ್ತು ನಾವು ಬರಿಗಾಲಿನಲ್ಲಿ ನಡೆವ ಸುಖಾನುಭವವನ್ನು ನಾವೇ ನಿಲ್ಲಿಸಿಬಿಟ್ಟಿದ್ದೇವೆ.

ಹಿಂದೂಸ್ಥಾನದಲ್ಲಿ ಬರಿಗಾಲಿನಲ್ಲಿ ನಡೆಯುವುದು ಒಂದು ಪವಿತ್ರ ವ್ಯಾಯಾಮವೇ ಎಂದು ಪರಿಗಣಿಸಲಾಗಿದೆ. ಅದೇ ಕಾರಣದಿಂದಾಗಿ ಎಷ್ಟೋ ಪೂಜಾಸ್ಥಾನಗಳಲ್ಲಿ ಪಾದರಕ್ಷೆಗಳನ್ನು ಉಪಯೋಗಿಸುವುದು ನಿಷೇಧಿಸಲಾಗಿದೆ. ಆ ಸ್ಥಳಗಳಲ್ಲಿ ಚೈತನ್ಯದ ಪ್ರಮಾಣ ಬಹಳ ಹೆಚ್ಚಾಗಿರುತ್ತದೆ ಮತ್ತು ನಿಮ್ಮ ಎಲ್ಲಾ ಇಂದ್ರಿಯಗಳಿಗೂ ಆ ಚೈತನ್ಯವನ್ನು ಸ್ವೀಕರಿಸಲು ತೆರೆದ ವಾತಾವರಣ ಬಹಳ ಒಳ್ಳೆಯದು.

ನೀವು ಓಡುವ ದಾರಿಯು ಸುಗಮವಾಗಿದ್ದರೆ, ಬರಿಗಾಲಿನಲ್ಲಿ ಓಡುವುದು ಒಂದು ಮಹತ್ತರವಾದ ಅನುಭವವನ್ನುಂಟು ಮಾಡುತ್ತದೆ. ಇದನ್ನು ಹುಲ್ಲಿನ ಮೇಲೆ ಆಥವಾ ಸಮುದ್ರದ ತೀರದಲ್ಲಿ ಪ್ರಯತ್ನಿಸಿರಿ. ಕೇವಲ ಭೂಮಿಯ ಸಂಪರ್ಕವು ಜೀವನದ ಮೂಲ ಹೊಂದಿದಂತೆ.

ಇದೊಂದು ಕೇಂದ್ರೀಕರಿಸಿ ಅದರಲ್ಲೇ ಉಳಿಯಲು ಸೊಗಸಾದ ಮಾರ್ಗ. ಕುಳಿತಾಗ.

ಓಡುವುದರಿಂದಾಗುವ ಹೆಚ್ಚಿನ ಅನುಕೂಲಗಳ ವಿಷಯವಾಗಿ ತಲೆ ಕೆಡಿಸಿಕೊಳ್ಳಬೇಡಿ. ಇಷ್ಟೇ ಸಮಯವೆಂದು ಸಮಯಕ್ಕೂ ಹೆಚ್ಚು ಪ್ರಾಧಾನ್ಯತೆ ಕೊಡಬೇಡಿ. ನಿಮ್ಮ ಓಟದ ನಿರ್ವಹಣೆಯ ವಿಷಯವಾಗಿಯೂ ಚಿಂತಿಸಬೇಡಿ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಓಡಬೇಡಿ! ತೂಕ ಕಡಿಮೆಯಾದರೆ ಒಳ್ಳೆಯದೇ, ಆದರೆ ಯಾವುದಾದರೂ ಕಾರಣಕ್ಕೆ ಓಡಬೇಡಿ. ಸುಮ್ಮನೆ ಓಡಿರಿ.

ಬಹಳ ದಿವಸಗಳವರೆಗೆ ಓಡಿದರೂ, ಆ ಓಟವು ಬೇಸರವನ್ನು ತರುವುದಾದರೆ, ಅದನ್ನು ಬಿಟ್ಟುಬಿಡಿ ಮತ್ತು ಮತ್ತೊಂದು ಧ್ಯಾನವನ್ನು ಮಾಡಲು ಪ್ರಾರಂಭಿಸಿರಿ. ಈಜಲು ಯತ್ನಿಸಿ, ನರ್ತಿಸಲು ಯತ್ನಿಸಿ. ನಿಮಗೆ ಓಡಬೇಕೆಂದೆನಿಸಿದರೆ ಪುನಃ ಮಾಡತೊಡಗಿರಿ.

ಮೂಲಸೂಚನೆಗಳ ಹೊರತು ಬೇರೆಯ ಸೂಚನೆಗಳೇನೆಂದರೆ: ನಿಮಗೆ ನೀವೇ ನಿಯಮಗಳನ್ನು ಸ್ಪಷ್ಟಿಸಿಕೊಳ್ಳಬೇಡಿ. ಈ ನಿಯಮಗಳು ಧ್ಯಾನದ ನಿಜವಾದ ಆನಂದವನ್ನೇ ಹಾಳು ಮಾಡಿಬಿಡುತ್ತದೆ (ನಾಶ ಮಾಡಿಬಿಡುತ್ತದೆ).

ಐದು ನಿಮಿಷದ ಪುನಶ್ಚೇತನ ಕ್ರಿಯೆಗಳು

ನೀವು ಸಾಮಾನ್ಯವಾಗಿ ಕೆಲಸ ಮಾಡುವ ವೇಳೆಯಲ್ಲಿ ಒತ್ತಡದಿಂದ ಬಳಲಿದಾಗ ಏನು ಮಾಡುವಿರಿ? ಅಥವಾ ದಿನವೆಲ್ಲಾ ಕೆಲಸ ಮಾಡಿದ ನಂತರ ಆಯಾಸಗೊಂಡರೆ? ಆಗ, ಸಿಗರೇಟಿಗೆ ಮೊರೆ ಹೋಗುವುದಾಗಲೀ ಅಥವಾ ಟಿ.ವಿ.ಯನ್ನು ಆನ್ ಮಾಡುವುದಾಗಲೀ ದಯವಿಟ್ಟು ಮಾಡಬೇಡಿರಿ! ಒಂದು ಸಣ್ಣ ಧ್ಯಾನದ ಕ್ರಿಯೆಯು ನಿಮ್ಮನ್ನು ಕೆಲವೇ ನಿಮಷಗಳಲ್ಲಿ ಪುನಶ್ಚೇತನಗೊಳಿಸುತ್ತದೆ. ಇಲ್ಲಿ ಕೆಲವು ಸುಲಭವಾದ ಐದು ನಿಮಿಷದ ಪುನಶ್ಚೇತನ ಕ್ರಿಯೆಗಳನ್ನು ತಿಳಿಸಲಾಗಿದೆ. ಅವನ್ನು ನೀವು ಕೆಲಸದ ಸಮಯದಲ್ಲಿ ಅಥವಾ ಮನೆಯಲ್ಲಿ ಪ್ರಯತ್ನಿಸಬಹುದು.

ವಿಪರೀತವಾಗಿ ಉಸಿರು ಬಿಡುವಿಕೆ (ಉತ್ತಟ ನಿಶ್ವಾಸ)

ಧ್ಯಾನ ಮತ್ತು ಸೂಚನೆಗಳು

ಈ ಧ್ಯಾನವು ನೀವು ಒತ್ತಡದಲ್ಲಿದ್ದಾಗ ಆಶ್ಚರ್ಯಕರವಾಗಿ ಕೆಲಸ ಮಾಡುತ್ತದೆ. ಆಳವಾಗಿ ಉಸಿರು ಬಿಡುವುದರಿಂದ ಪ್ರಾರಂಭಿಸಿರಿ.

ಯಾವಾಗಲೂ ಉಸಿರು ಬಿಡುವುದರಿಂದ ಪ್ರಾರಂಭಿಸಿರಿ. ನಿಶ್ಚಾಸದ ಮೇಲೆಯೇ ಕೇಂದ್ರೀಕರಿಸಿರಿ, ಆಳವಾಗಿ ಹಾಗೂ ಶಕ್ತಿಪೂರ್ವಕವಾಗಿ ನೀವು ಪೂರ್ಣವಾಗಿ ಉಸಿರು ಬಿಟ್ಟಾಗ, ಹೊಟ್ಟೆಯನ್ನು ಒಳಕ್ಕೆ ಸೆಳೆದುಕೊಂಡು, ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವ ಮುಂಚಿತವಾಗಿ 3 ಸೆಕೆಂಡ್ ಗಳು ಹಾಗೆಯೇ ಕಾಯ್ದಿರಿ. ನಂತರ ಎಷ್ಟು ಸಾಧ್ಯವೋ ಅಷ್ಟು ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿರಿ. 3 ಸೆಕೆಂಡ್‌ಗಳು ಹಾಗೇ ಕಾಯ್ದಿರಿ. ನಂತರ ಉಸಿರನ್ನು ಹೊರಗೆ ಬಿಡಿ. ಮತ್ತೆ ಉಸಿರಾಡಿ, ಹೊರಗೆ ಬಿಡಿ. ಲಯಬದ್ದವಾಗಿ ಉಸಿರಾಡುವ ಒಂದು ಕ್ರಮವನ್ನು ರಚಿಸಿಕೊಳ್ಳಿರಿ. ನಿಧಾನವಾಗಿ ಮಾಡಿರಿ, ಉಸಿರು ನಿಮ್ಮ ದೇಹದೊಳಕ್ಕೆ ಪೂರ್ಣವಾಗಿ ಹೋಗಿ ಹಾಗೆಯೇ ಪೂರ್ಣವಾಗಿ ಹೊರಬರಲಿ.

ನೀವು ಪೂರ್ಣವಾಗಿ ಉಸಿರನ್ನು ಹೊರಗೆ ಬಿಟ್ಟಾಗ, ನೀವು ನಿಮ್ಮ ದೇಹದೊಳಗಿನ ಟಾಕ್ಸಿನ್‌ಗಳನ್ನೂ ಹೊರಹಾಕುವಿರಿ. ನೀವು ನಿಮ್ಮ ಒತ್ತಡವನ್ನೂ ಹೊರಗೆ ಹಾಕುವಿರಿ. 10-12 ಆವರ್ತ ಉಸಿರಾಡಿದ ನಂತರ, ನಿಮ್ಮ ಒತ್ತಡವೆಲ್ಲಾ ಹೋಗಿರುವುದನ್ನೂ, ಬಿರುಸುತನವು ಬಿಡುಗಡೆಯಾಗಿರುವುದನ್ನೂ ನೀವು ತಿಳಿಯುತೀರಿ.

ಪಾಮಿಂಗ್

ಧ್ಯಾನದ ವಿಚಾರ

ಈ ತಂತ್ರವು, ನಿಮ್ಮ ಎರಡು ಹುಬ್ಬುಗಳ ಮಧ್ಯದಲ್ಲಿರುವ ಆಜ್ಞಾ ಚಕ್ರವನ್ನು ಶಕ್ತಿಯುತವನ್ನಾಗಿ ಮಾಡುವುದು. ಈ ಚಕ್ರದ ಹೆಸರು 'ಆಜ್ಞಾ'. ಅಕ್ಷರಶಃ ಆಜ್ಞೆ ಮಾಡು (ಆಜ್ಞಾಪಿಸು) (ಅಪ್ಪಣೆ ಮಾಡು) ಎಂದೇ ಅರ್ಥ.

ಇದೇ ಮಾಸ್ಟರ್ ಚಕ್ರ (ಪ್ರಧಾನ ಚಕ್ರ) ಈ ಚಕ್ರವು ಇಚ್ಛಾಶಕ್ತಿಯ ನಿಲುವಿನ ಸ್ಥಾನ (ಆಸನ). ಇದು ಚೇತನಗೊಂಡಾಗ (ಕ್ರಿಯಾಶೀಲತೆಯನ್ನು ಹೊಂದಿದಾಗ) ತಿಳುವಳಿಕೆಯಲ್ಲಿ ಸ್ಪಷ್ಟತೆಯನ್ನು ಅನುಭವಿಸುತ್ತೀರಿ. ನಿಮ್ಮ ವಿವೇಚನಾಶಕ್ತಿ ಮತ್ತು ನಿರ್ಣಾಯಾತ್ಮಕ ಸಾಮರ್ಥ್ಯ ಇವುಗಳು ವರ್ಧಿಸುತ್ತವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಇದು ಮೂರನೇ ಕಣ್ಣು ಎಂದೇ ಪರಿಗಣಿಸಿದ್ದಾರೆ. ಇದರಿಂದಲೇ ನೀವು ಒಳನೋಟ ಹರಿಸಬಲ್ಲಿರಿ. ಮೊದಲ ಬಾರಿಗೆ ನೀವು ಇದರಿಂದ ಒಳನೋಡಲು ಪ್ರಾರಂಭಿಸುತ್ತೀರಿ.

ಸೂಚನೆಗಳು

ಕಣ್ಣುಗಳನ್ನು ಮುಚ್ಚಿಕೊಳ್ಳಿರಿ. ನಿಮ್ಮ ಎರಡೂ ಹಸ್ತಗಳನ್ನು ಕಣ್ಣುಗಳ ಹತ್ತಿರ ತಂದು, ಕಣ್ಣುಗುಡ್ಡೆಗಳ ಮೇಲೆ ಹಗುರವಾಗಿ ಇಟ್ಟುಕೊಳ್ಳಿರಿ. ನಿಮ್ಮ ಸ್ಪರ್ಶವು ಹಕ್ಕಿಯ ಪುಕ್ಕದೋಪಾದಿಯಲ್ಲಿ ಮೃದುವಾಗಿರಲಿ. ಯಾವ ತರಹದ ಒತ್ತಡವನ್ನೂ ಹಾಕಬೇಡಿರಿ. ಮೊದಮೊದಲು, ನಿಮಗೆ ತಿಳಿಯದೆ ಕಣ್ಣುಗಳನ್ನು ಒತ್ತಿ ಹಿಡಿಯಬಹುದು. ನಿಧಾನವಾಗಿ, ಆದಷ್ಟೂ ಹಗುರವಾಗಿ ಕಣ್ಣುಗುಡ್ಡೆಗಳನ್ನು ಮುಚ್ಚಿರಿ.

ಕಣ್ಣುಗಳ ಮೂಲಕ ಚೈತನ್ಯವು ಹೊರಗಡೆಗೆ ಹರಿಯುತಿದೆ. ಇದೊಂದು ಬಹಳ ಸೂಕ್ಷ್ಮವಾದ ಚೈತನ್ಯ. ಆ ಚೈತನ್ಯವು ಕಣ್ಣುಗಳಿಂದ ನಿಮ್ಮ ಒಳಕ್ಕೇ ಹರಿಯಲೆಂದು ನೀವು ನಿಮ್ಮ ಕಣ್ಣುಗುಡ್ಡೆಗಳನ್ನು ಕೈಗಳಿಂದ ಮುಚ್ಚಿಕೊಳ್ಳುತ್ತೀರಿ. ನೀವು ಕಣ್ಣುಗುಡ್ಡೆಗಳನ್ನು ಅದುಮಿದಾಗ (ಒತ್ತಿದಾಗ) ಕಣ್ಣುಗಳು ಅದನ್ನು ವಿರೋಧಿಸಲು ಯತ್ನಿಸುತ್ತದೆ. ಮುಟ್ಟಿದರೂ ಮುಟ್ಟದಂತೆ ( ಹಗುರವಾಗಿ) ಮುಚ್ಚಬೇಕು. ನೀವು ಹಗುರವಾಗಿ ಮುಟ್ಟಿದಾಗ, ನಿಮ್ಮ ಆಲೋಚನೆಗಳೂ ಸಹ ನಿಂತು ಬಿಡುತ್ತವೆ. ನಿಮ್ಮ ಕಣ್ಣುಗಳ ಆಲೋಚನೆಗಳೂ ಸಹ ಓಡುತ್ತಿರುತವೆ. ನಿಮ್ಮ ಕಣ್ಣುಗಳು ಸ್ಥಗಿತಗೊಂಡಾಗ ಆಲೋಚನೆಗಳೂ ಸಹ ಘನೀಭೂತವಾಗುತ್ತದೆ. ಇದನ್ನು ಗಮನಿಸಿದ್ದೀರಾ?

ಹಗುರ ಸ್ಪರ್ಶದಿಂದ, ಚೈತನ್ಯವು ಒಳಮುಖವಾಗಿ ನಿಮ್ಮ ಒಳಕ್ಕೇ ಹರಿಯಲು ಪ್ರಾರಂಭವಾಗುವುದನ್ನು ಅರಿಯುತ್ತೀರಿ. ಚೈತನ್ಯವು ಹಿಂದಕ್ಕೇ ಹೋದಾಗ, ನೀವು ಕೂಡಲೇ ನಿಮ್ಮಲ್ಲಿ ಉಲ್ಲಾಸವನ್ನೂ, ಹಗುರತೆಯನ್ನೂ ಕಾಣುವಿರಿ. ಅದು ನಿಮ್ಮ ಮುಖ ಮತ್ತು ತಲೆ ಹೀಗೆ ಎಲ್ಲಾ ಕಡೆಗೆ ಪಸರಿಸುವುದನ್ನೂ ತಿಳಿಯುವಿರಿ. ಆ ಚೈತನ್ಯವು ನಿಮ್ಮ ಆಜ್ಞಾಚಕ್ರವನ್ನು ಬಡಿಯುತ್ತದೆ. ಕೆಲವೇ ಘಳಿಗೆಯಲ್ಲಿ ನೀವು ಸ್ಪಷ್ಟ ಮತ್ತು ಪುನಃಶ್ಚೇತನ ಪಡೆದವರಾಗುತ್ತೀರಿ.

ಇದೇ ಧ್ಯಾನವನ್ನು ಅರ್ಧ ಗಂಟೆಯವರೆಗೆ ಮುಂದುವರಿಸಿದಾಗ, ಆ ಚೈತನ್ಯವು ಕೆಳಗಡೆ ನಿಮ್ಮ ಹೃದಯಕ್ಕೆ ಹರಿಯುತ್ತದೆ. ನಿಮ್ಮ ಹೃದಯದ ಬಡಿತವು ನಿಧಾನ ವಾಗುವುದು. ನಿಮ್ಮ ಪೂರ್ಣ ಶರೀರವೇ ವಿಶ್ರಾಂತಿಯನ್ನು ಅನುಭವಿಸುವುದು. ಇದೊಂದು ತಕ್ಷಣವೇ ವಿಶ್ರಾಂತಿ ಪಡೆಯಲು ಅತ್ಯುತ್ತಮವಾದ ತಂತ್ರ. ನೀವು ಧ್ಯಾನಕ್ಕೆ ಪ್ರವೇಶಿಸಲೂ ಸಹ ಬೇಕಿಲ್ಲ. ಸುಮ್ಮನೆ ನಿಮ್ಮ ಹಸ್ತಗಳನ್ನು ಹಗುರವಾಗಿ ಕಣ್ಣುಗುಡ್ಡೆಗಳ ದೊರಕಿಸಿಕೊಡಬಹುದು. ನಿಮ್ಮ ಕಣ್ಣುಗಳು ಆಯಾಸಗೊಂಡಂತಿದ್ದರೆ, ನೀವು

ಧ್ಯಾನದ ತಂತ್ರಗಳು

ಕಂಪ್ಯೂಟರ್, ಟಿ.ವಿ.ಗಳ ಮುಂದೆ ಗಂಟೆಗಳ ಕಾಲ ಕಳೆದಿದ್ದರೆ, ಈ ತಂತ್ರವನ್ನು ಮಾಡಿ ನೋಡಿ.

ನೀವು ಈ ಧ್ಯಾನವನ್ನು ತಿಂಗಳುಗಟ್ಟಲೆ ಅಭ್ಯಾಸ ಮಾಡಿದರೆ ನಿಮ್ಮ ಆಜ್ಞಾ ಮತ್ತು ಹೃದಯದ ಮೊದಮೊದಲು ಒಂದು ಹನಿಯಷ್ಟು ಚೈತನ್ಯವು ಬಂದಂತಾದರೂ, ಒಂದು ವರ್ಷದಲ್ಲಿ ಆ ಚೈತನ್ಯದ ಪ್ರವಾಹವೇ ನಿಮ್ಮಲ್ಲೇ ಯಾವಾಗಲೂ ಹರಿಯುವದನ್ನು ಕಾಣುವಿರಿ (ಅನುಭವಿಸುವಿರಿ).

ಆಜ್ಞಾ ಚಕ್ರವು ಎಚ್ಚರಗೊಂಡಾಗ, ನೀವು ನಿಮ್ಮ ಉದ್ದಿಶ್ಯಗಳ ಸ್ಪಷ್ಟತೆಯನ್ನು ಅನುಭವಿಸುತ್ತೀರಿ. ನೀವು ನಿಮ್ಮ ಸ್ವಂತ ಅಸ್ತಿತ್ವವನ್ನು (ಸತ್ಯಸ್ಥಿತಿಯನ್ನು) ಕಾಣಲು ತೊಡಗಿರುತ್ತೀರಿ ಕಾರ್ಯೋನ್ಮುಖವಾಗುವುದರಿಂದ, ನಿಮ್ಮಿಂದ ಹರಿಯುವುದನ್ನು ಅನುಭವಿಸುತ್ತೀರಿ. ನೀವು ಅಸ್ತಿತ್ವದೊಡನೆ ಸೇರಿಹೋದ (ಸಂಬಂಧ ಪಡೆದ) ಅನುಭವವು ಉಂಟಾಗುತ್ತದೆ.

ಅಂಗಾಂಗಗಳ ವಿಶ್ರಾಂತಿ

(ಸೂಚನೆಗಳು)

ಇದು ಬಹಳ ಬೇಗ, ವೇಗವಾಗಿ ಮಾಡುವ ಮತ್ತು ಬಹಳ ಪ್ರಸಿದ್ಧಿ ಪಡೆದಿರುವ ಶೀಘ್ರ, ವಿಶ್ರಾಂತಿ ಪಡೆಯಲು ಮಾಡುವ ತಂತ್ರಗಳಲ್ಲೆಲ್ಲಾ ಪ್ರಮುಖವಾದ ತಂತ್ರ. ನಿಮಗೆ, ನಿಮ್ಮದೇ ಆದ ಸ್ವಂತ ಸ್ಥಳ ಧ್ಯಾನಕ್ಕಾಗಿ ಇರುವುದಾದರೆ, ಮಲಗಿಕೊಂಡು ಈ ತಂತ್ರವನ್ನು ಅಭ್ಯಾಸ ಮಾಡಿರಿ.

ಕಣುಗಳನ್ನು ಮುಚ್ಚಿರಿ.

ನಿಮ್ಮ ಹೊಟ್ಟೆಯಿಂದ (ನಾಭಿಯಿಂದ) ಆಳವಾದ ಉಸಿರನ್ನು ತೆಗೆದುಕೊಳ್ಳಿರಿ. ಅದನ್ನು ಒಳಗಡೆಯೇ ಹಿಡಿದಿಟ್ಟುಕೊಂಡಿರಬೇಕಾಗುತ್ತದೆ, ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಆಳವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಿರಿ. ಉಸಿರನ್ನು — ಒಳಗಡೆಯೇ ಹಿಡಿದಿಟ್ಟು ನಿಮ್ಮ ಕೈಕಾಲು (ಅಂಗಾಂಗ) ಗಳನ್ನು ಒಂದೊಂದಾಗಿ ಒತ್ತಿ ಭದ್ರವಾಗಿ ಗಟ್ಟಿಮಾಡಿಕೊಳ್ಳಿರಿ.

ಕಾಲ್ಬೆರಳುಗಳಿಂದ ಪ್ರಾರಂಭಿಸಿರಿ. ಕಾಲುಬೆರಳುಗಳನ್ನು ಸಾಧ್ಯವಾದಷ್ಟೂ ಗಟ್ಟಿಯಾಗಿ (ಮಾಂಸಖಂಡಗಳನ್ನು ಬಿಗಿ ಮಾಡಿಕೊಳ್ಳಿರಿ) ಅದಕ್ಕೆ ವಿಶ್ರಾಂತಿ ಯನ್ನು ಕೊಡಬೇಡಿ. ಹಾಗೆಯೇ ಹೆಜ್ಜೆಯವರೆಗೂ ಬನ್ನಿ, ಹೆಜ್ಜೆಯ ಕೀಲುಭಾಗಕ್ಕೆ ಬನ್ನಿ, ಹಾಗೆಯೇ ಮೇಲಕ್ಕೆ ಮೀನಖಂಡಗಳು, ಮಂಡಿ, ಪೃಷ್ಣಭಾಗ, ಹೀಗೇ ಬೇಗಬೇಗ ಮೇಲಕ್ಕೆ ಬನ್ನಿ. ಏಕೆಂದರೆ ನೀವು ಉಸಿರನ್ನು ಕಡೆಯ ಪಕ್ಷ ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಹಾಗೆಯೇ ಸೊಂಟಕ್ಕೆ ಬನ್ನಿ, ಹೊಟ್ಟಿಗೆ ಬನ್ನಿ. ನಿಮ್ಮ ಹೊಟ್ಟೆಯ ಮಾಂಸಖಂಡಗಳನ್ನು ಬಿಗಿಮಾಡಿ, ಸಾಧ್ಯವಾದಷ್ಟೂ ಗಟ್ಟಿಯಾಗಿ ಮಾಡಿ. ತನಗೆ ತಾನೇ ನಿಮ್ಮ ತೊಡೆಯ ಸಂದಿನ ಮಾಂಸಖಂಡಗಳೂ ಸಹ ಬಿಗಿಯಾಗುತ್ತವೆ.

ಹಾಗೆಯೇ ಪ್ರತಿಯೊಂದು ಭಾಗಕ್ಕೂ ಬನ್ನಿ. ನಿಮ್ಮ ತೋಳುಗಳನ್ನು ಬಿಗಿಮಾಡಿ, ಬೆರಳು ಗಳಿಂದ ಹಿಡಿದು ಮೇಲಿನವರೆಗೂ, ಮೊಣಕೈ ಮೇಲ್ಬಾಗದವರೆಗೂ ಬನ್ನಿ, ನಿಮ್ಮ ತೋಳುಗಳ ಮೂಳೆಗಳು, ಕುತ್ತಿಗೆ, ಗಂಟಲು ಇವುಗಳನ್ನೂ ಬಿಗಿ ಮಾಡಿರಿ, ವಿಶೇಷವಾಗಿ ಕುತ್ತಿಗೆಯ ಮಾಂಸಖಂಡಗಳನ್ನು ಬಿಗಿ ಹಿಡಿಯಲು ಯತ್ನಿಸಿರಿ.

ಮುಖಕ್ಕೂ ಬನ್ನಿ.

ನಿಮ್ಮ ಮುಖದಲ್ಲಿ ನೀವು ತಿಳಿದಿರುವುದಕ್ಕಿಂತ (ಹೆಚ್ಚು) ಮಾಂಸಖಂಡಗಳಿವೆ.

ನಿಮ್ಮ ಬಾಯೊಳಗಿನ ಮಾಂಸಖಂಡ, ಮೂಗಿನ ಹೊಳ್ಳೆಗಳು, ಕಣ್ಣುಗಳು, ಹುಬ್ಬುಗಳು, ಹಣೆ ಮತ್ತು ಕೆನ್ನೆಗಳು. ನಿಮ್ಮ ಕಣ್ಣುಗುಡ್ಡೆಗಳನ್ನು ಹಿಂಡಿದಂತೆ ಮಾಡಿ ರೆಪ್ಪೆಗಳನ್ನು ಮುಚ್ಚಿರಿ. ಹಲ್ಲುಗಳನ್ನು ಕಚ್ಚಿ ಬಿಗಿಹಿಡಿಯಿರಿ. ನಿಮ್ಮ ಮುಖವನ್ನು ಒಂದು ಬಿಗಿಯಾದ ಚೆಂಡಿನ ಒಳಕ್ಕೆ ತುರುಕುವಂತೆ ಬಿಗಿ ಮಾಡಿಕೊಳ್ಳಿ. ಈ ಸಮಯದಲ್ಲಿ ನಿಮ್ಮ ಯಾವುದೇ ಭಾಗವನ್ನು ವಿಶ್ರಾಂತಿಗೆ ಒಳಪಡಿಸಬೇಡಿ.

ಇದೇ ಬಿಗುವಿನ ಸ್ಥಿತಿಯಲ್ಲಿ ಸಾಧ್ಯವಾದಷ್ಟು ಕಾಲ ಹಾಗೆಯೇ ಇರಿ. ಯಾವಾಗ ಇನ್ನು ಮುಂದೆ ಉಸಿರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎನಿಸಿದಾಗ, ಉಸಿರನ್ನು ಒಮ್ಮೆಲೇ ರಭಸದಿಂದ ಹೊರಕ್ಕೆ ಬಿಡಿ, ಅದರ ಜೊತೆಯಲ್ಲಿಯೇ ನಿಮ್ಮ ವಿಶ್ರಾಂತಿಯನ್ನು ಹೊಂದಲು ಬಿಡಿ. ಈ ಸ್ಥಿತಿಯಲ್ಲಿ ಅಂದರೆ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯಲ್ಲಿ ಒಂದು ನಿಮಿಷದವರೆಗೂ ಹಾಗೆಯೇ ಇರಿ.

ಈ ತಂತ್ರವು ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತಿಯನ್ನು ದೊರಕಿಸಿ ಕೊಟ್ಟು ಮತ್ತು ಈ ಎರಡೇ ನಿಮಿಷಗಳಲ್ಲಿ ನಿಮ್ಮನ್ನು ಉತ್ಸಾಹಿತರನ್ನಾಗಿಸುವುದು. ನಿಮಗೆ ಸಾಕಷ್ಟು ಸಮಯಾವಕಾಶವಿದ್ದಲ್ಲಿ, ಈ ಪ್ರಕ್ರಿಯೆಯನ್ನು ಮೂರಾವರ್ತಿ ಪುನಃ ಮಾಡಿರಿ.

ಚಕ್ರಗಳು ಎಂದರೆ ಏನು?

ಏಳು ದಿವಸದ ಚಕ್ರ ಪ್ರಕ್ರಿಯೆ

ಆನಂದ ಸ್ಪುರಣ ಧ್ಯಾನಗಳು

ಚಕ್ರಗಳು ಎಂದರೆ ನಮ್ಮ ಶರೀರದ ಸೂಕ್ಷ್ಮ ಚೈತನ್ಯದ ಚಕ್ರನಾಭಿಯಂತಿರುವ ಕೇಂದ್ರಗಳು. ಏಳು ಪ್ರಮುಖ ಚಕ್ರಗಳು ಯಾವುವೆಂದರೆ: ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಮತ್ತು ಸಹಸ್ರಾರ. ಅವುಗಳಿಗೆ ಭೌತಿಕವಾದ ನಿರ್ದಿಷ್ಟ ಸ್ಥಾನಗಳಿಲ್ಲದಿದ್ದರೂ ನಮ್ಮ ಶರೀರದುದ್ದಕ್ಕೂ ಈ ಚೈತನ್ಯ ಕೇಂದ್ರಗಳು ಇವೆ. ಹೆಚ್ಚುಕಡಿಮೆ ನಮ್ಮ ಶರೀರದಲ್ಲಿರುವ ಜೀವಕಣಗಳ ಗ್ರಂಥಿಗಳಿಗೆ (glands) ಅನುಗುಣವಾಗಿ ಮತ್ತು ಆ ಗ್ರಂಥಿಗಳ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಪ್ರಭಾವ ಬೀರುವ ಕೆಲಸವನ್ನು ಈ ಚಕ್ರಗಳು ನಿರ್ವಹಿಸುತ್ತಿವೆ. ಈ ಚಕ್ರಗಳು ನಮ್ಮ ಭೌತಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಆಳವಾಗಿ ಪ್ರಭಾವ ಬೀರುತ್ತವೆ ಹಾಗೂ ಆ ಚಕ್ರಗಳು ನಮ್ಮ ಆಲೋಚನೆಗಳು ಮತ್ತು ಭಾವನೆಗಳಿಂದ ತೊಂದರೆಗೊಳಗಾಗುತ್ತವೆ.

ಈ ಚಕ್ರಗಳು ಅಪಾರವಾದ ವಿಶ್ವಶಕ್ತಿಯ ನೇರವಾದ ಕಾಲುವೆಗಳಿದ್ದಂತೆ ನಮ್ಮ ಶರೀರದಲ್ಲಿವೆ. ಆದರೆ ನಮ್ಮ ಅತಿರೇಕದ ಜೀವನಶೈಲಿಗಳೂ, ಒತ್ತಡ ಮತ್ತು ನಕಾರಾತ್ಮಕ ಭಾವನೆಗಳು ಈ ಚಕ್ರಗಳನ್ನು ಬಂಧಿಸಿಬಿಡುತ್ತವೆ ಅಥವಾ ಆ ಚಕ್ರಗಳು ಸಮರ್ಪಕವಾಗಿ ಕೆಲಸ ಮಾಡುವುದಕ್ಕೆ ಕಾರಣವಾಗಿ ಬಿಡುತ್ತದೆ.

ನಮಗೆ ಇದರ ವಿಚಾರವಾಗಿ ತಿಳುವಳಕೆ ಇಲ್ಲದಿರುವುದರಿಂದ, ನಾವು ಚೈತನ್ಯಕ್ಕೆ ಪ್ರಮುಖ ಉಗಮಸ್ಥಾನವಾದ ಈ ಚಕ್ರಗಳನ್ನು ಬಂಧಿಸುತ್ತಿದ್ದೇವೆ (ಚಕ್ರಗಳಿಗೆ ಪ್ರತಿಬಂಧಕಗಳನ್ನು ಅಥವಾ ಅಡ್ಡಿಗಳನ್ನು ಉಂಟುಮಾಡುತಿದ್ದೇವೆ). ಚೈತನ್ಯವೇ ಆರೋಗ್ಯ. ಅದಕ್ಕಾಗಿಯೇ ಹೆಚ್ಚುಕಡಿಮೆ ಎಲ್ಲಾ ದೈಹಿಕ ಹಾಗೂ ಮಾನಸಿಕ ಕುಂದುಕೊರತೆಗಳನ್ನೂ, ಖಾಯಿಲೆಗಳನ್ನೂ ಅಂಶತಃ ಅಥವಾ ಪೂರ್ಣವಾಗಿ ಸಂಬಂಧಪಟ್ಟ ಈ ಚಕ್ರಗಳನ್ನು ಕೇವಲ ಶುದ್ಧಿಗೊಳಿಸಿ, ಶಕ್ತಿಯುತವನ್ನಾಗಿ ಮಾಡುವುದರಿಂದ ಗುಣಪಡಿಸಬಹುದು.

ಏಳು ದಿವಸದ ಚಕ್ರ ಪ್ರಕ್ರಿಯೆ

ಆನಂದ ಸ್ಪುರಣ ಪ್ರೋಗ್ರಾಂನಲ್ಲಿ ಏನು ಮಾಡುತಾರೆ? (Asp)

ಆನಂದ ಸ್ಪುರಣ ಪ್ರೋಗ್ರಾಂ (ASP) ಇದು ಧ್ಯಾನದ ಮೂಲಕ ಚಕ್ರಗಳಿಂದ ಗುಣಪಡಿಸುವ ಎರಡು ದಿವಸದ ಪರಿಶ್ರಮ ಪೂರ್ಣವಾದ ಶಿಬಿರ. ಈ ಶಿಬಿರದಲ್ಲಿ, ಪ್ರತಿಯೊಂದು ಚಕ್ರದ ಸ್ವಭಾವ ಮತ್ತು ಅದರ ಪಾತ್ರ ಏನು ಎಂಬುದನ್ನು ನಿಮಗೆ ತಿಳಿಸಿಕೊಡಲಾಗುತ್ತದೆ ಮತ್ತು ಈ ಏಳು ಚಕ್ರಗಳನ್ನೂ ಶುದ್ಧೀಕರಿಸಿ, ಪುನಶ್ಚೇತನಗೊಳಿಸುವ ಶಕ್ತಿಯುತವಾದ ಹಾಗೂ ಸಹಜವಾಗಿ ಮಾಡಬಹುದಾದ ಏಳು ಧ್ಯಾನದ ತಂತ್ರಗಳನ್ನು ಕಲಿಸಿಕೊಡಲಾಗುತದೆ.

ಸ್ವಾಧಿಷ್ಠಾನ ಚಕ್ರದ ನಿರ್ಭಯ ಧ್ಯಾನವನ್ನು ಹೊರತುಪಡಿಸಿ ಮಿಕ್ಕಲ್ಲಾ ಧ್ಯಾನಗಳನ್ನು ಸುಲಭವಾಗಿ ವಾರಕ್ಕೆ ಒಂದಾವರ್ತಿ ಅಭ್ಯಾಸ ಮಾಡಬಹುದು. ಅಥವಾ, ನಿಮಗೆ ಸರಿಕಾಣುವ (ಸೂಕ್ತವಾದ) ಯಾವುದಾದರೂ ಒಂದು ತಂತ್ರವನ್ನು ಆರಿಸಿಕೊಂಡು 21 ದಿವಸಗಳವರಗೆ ಬಿಡದೆ ಅಭ್ಯಾಸವನ್ನು ಮುಂದುವರಿಸಿರಿ. (ಮಹಾಮಂತ್ರ, ದುಃಖಹರಣ ಅಥವಾ ಮಣಿಪೂರಕ ಶುದ್ಧಿಕ್ರಿಯ - ಇವುಗಳು ಹೊಸದಾಗಿ ಅಭ್ಯಾಸ ಮಾಡುವವರಿಗೆ ಬಹಳ ಉಪಯುಕ್ತವಾದವುಗಳು) -- ಆನಂತರ - ನೀವು -- ಹೊಸತಂತ್ರವನ್ನು ಆರಿಸಿಕೊಳ್ಳಬಹುದು. ಪ್ರಾಮಾಣಿಕವಾಗಿ, ಅಭ್ಯಾಸ ಮಾಡಿದರೆ, ಈ ತಂತ್ರಗಳು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪವಾಡಸದೃಶವಾದ ಪರಿಣಾಮವನ್ನುಂಟುಮಾಡುತವೆ.

ಏಳು ತಂತ್ರಗಳ - ಧ್ಯಾನ ವಿಧಾನವನ್ನು ಕಲಿಸುವ ಧ್ವನಿ ಸುರುಳಿಗಳು ಲಭ್ಯವಿವೆ.

ದಿನ 1

ದುಃಖಹರಣ ಧ್ಯಾನ

ಗುಣಪಡಿಸುವ ಚಕ್ರ : ಮೂಲಾಧಾರ

ಚಕ್ರವಿರುವ ಸ್ಥಳ : ಬೆನ್ನುಮೂಳೆಯ ಮೂಲ (ತಳಭಾಗ) ಚಕ್ರವು ಬಂಧಿಸಲ್ಪಡುವುದು : ಭ್ರಾಂತಿ (ಕಲ್ಪನೆ) ಮತ್ತು ನಿರೀಕ್ಷಣೆ ಯಿಂದ ಚಕ್ರದ ಬಂಧನ ಬಿಡುಗಡೆ : ವಾಸ್ತವಿಕತೆಯನ್ನು ಸ್ವೀಕರಿಸುವಿಕೆಯಿಂದ ಧ್ಯಾನ ತಂತ್ರ ಬಂದಿರುವುದು : ಶಿವತಂತ್ರದಿಂದ ಕಾಲಾವಧಿ : 30 ನಿಮಿಷಗಳು

ದುಃಖಹರಣಕ್ಕೆ ಸೂಚನೆಗಳು

ದುಃಖಹರಣವು 30 ನಿಮಿಷಗಳ ಧ್ಯಾನ. 10 ನಿಮಿಷಗಳ 3 ಭಾಗಗಳಿವೆ. ASP ಸೂಚನೆಗಳ ಧ್ವನಿಸುರುಳಿ (Instruction Tape) ಇದ್ದರೆ ಉಪಯೋಗಿಸಿಕೊಳ್ಳಿ, ಇಲ್ಲವಾದರೆ ಅಲಾರಂ ಗಡಿಯಾರ ಅಥವಾ ಯಾರಾದರೂ ವೇಳೆ ಗಮನಿಸಿ ತಿಳಿಸುವವರಿದರೂ ಸರಿ.

ಮೊದಲ 10 ನಿಮಿಷ ಉಸಿರಾಡುವ ಕ್ರಿಯೆ.

ಆಳವಾಗಿ ಅವ್ಯವಸ್ಥಿತವಾಗಿ ಉಸಿರಾಡಲು ಪ್ರಾರಂಭಿಸಿರಿ.

Chaotic breathing (ಅವ್ಯವಸ್ಥಿತ, ಕ್ರಮವಿಲ್ಲದ ಉಸಿರಾಟ) ಎಂದರೇನು?

ಏಳು ದಿವಸದ ಚಕ್ರ ಪ್ರಕ್ರಿಯೆ

ಈ ಕ್ರಮವಿಲ್ಲದ ಉಸಿರಾಟದಲ್ಲಿ ನಿಗದಿತ ಲಯಬದ್ದತೆ ಇಲ್ಲ. ಸುಮ್ಮನೆ ಎಷ್ಟು ಸಾಧ್ಯವೋ ಅಷ್ಟು ಅಳವಾಗಿ ಉಸಿರಾಡುವುದು ಮತೆಲ್ಲವನ್ನೂ ಮರೆತು ಆಳವಾಗಿ ಉಸಿರಾಡುವುದೊಂದೇ. ನೀವೇ ಉಸಿರಾಟವಾಗಿ ಬಿಡುವುದು.

ಈ ಅವ್ಯವಸ್ಥಿತ ಉಸಿರಾಡುವ ಸಮಯದಲ್ಲಿ, ಶರೀರ ಪ್ರಜ್ಞೆಯು ತನ್ನ ವಶಕ್ಕೆ ಶರೀರವನ್ನು ತೆಗೆದುಕೊಳ್ಳುವುದರಿಂದ, ತನಗೆ ಬೇಕಾದಷ್ಟು ಆಮ್ಲಜನಕವನ್ನು (oxygen) ನಿಯಂತ್ರಣದಲ್ಲಿಡಬೇಕಾಗಿಲ್ಲ. ಇದು ಪ್ರಾಣಾಯಾಮವಲ್ಲ,

ನೀವೇನಾದರೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಉಳ್ಳವರಾದರೆ, ಸಾಧ್ಯವಾದಷ್ಟು ಮಾತ್ರ, ನಿಮಗೆ ತೊಂದರೆ ಮಾಡಿಕೊಳ್ಳದೆ ಉಸಿರಾಡಿರಿ. ಯಾವ ಸಮಸ್ಯೆಯೂ ಉಸಿರಾಡಿರಿ.

ಈ 10 ನಿಮಿಷಗಳಲ್ಲಿ ಉತ್ಪತ್ತಿಯಾದ ಶಾಖವು ಎಲ್ಲಾ ಘನೀಭೂತವಾದ ನಕಾರಾತ್ಮಕ ಚೇತನಗೊಳ್ಳಲ್ಪಡುತ್ತದೆ. ನಿಗದಿತವಾದ ಉಸಿರಾಟದ ಯಾವ ಪ್ರಯೋಗವೂ ಇಲ್ಲ. ನಿಮ್ಮ ಶರೀರವು ತನಗೆ ಹೇಗೆ ಬೇಕೋ ಹಾಗೆ ವರ್ತಿಸಲಿ. ನೀವು ನಿಂತಿರಬೇಕು ಅಷ್ಟೆ,

ಮುಂದಿನ 10 ನಿಮಿಷಗಳು ವಿರೇಚನ ಶುದ್ಧೀಕರಣ

ವಿರೇಚನ ಎಂದರೆ: ನಿಮ್ಮ ಶರೀರದೊಳಗೆ ಬೀಜರೂಪವಾಗಿ ಇರುವ ಮತ್ತೊಂದು ವಿರೇಚನದ ಸಮಯದಲ್ಲಿ (ನಿಯಂತ್ರಿಸಲ್ಪಟ್ಟ ವಾತಾವರಣದಲ್ಲಿ) ನೀವು ತಡೆಹಿಡಿಯಲ್ಪಟ್ಟ ಭಾವನೆಗಳನ್ನು, ಮತ್ತೊಬ್ಬರಿಗೆ ತೊಂದರೆಯಾಗದಂತೆ, ಮತ್ತು ಅದನ್ನು ಒಂದು ಖಾಯಿಲೆ ಎಂದು ಪರಿಗಣಿಸಿಕೊಳ್ಳದೆ, ಹೊರಕ್ಕೆ ಎಸೆಯುವ (ಹೊರಗೆ ಹಾಕುವ) ವಿಧಾನ ಅಥವಾ ಒಂದು ಪ್ರಕ್ರಿಯೆ. ಎಷ್ಟು ಸಾಧ್ಯವೋ ಅಷ್ಟು ನಮ್ಮ ಶರೀರವನ್ನು ಗಟ್ಟಿಯಾಗಿ ಒಳಗೇ ಬಿಗಿ ಹಿಡಿಯಿರಿ. ನಿಮ್ಮ ಕೈಕಾಲುಗಳನ್ನು ಹೊರಗೆ ಸುತ್ತಲೂ ಝಾಡಿಸಿರಿ. ಹಲ್ಲು ಕಚ್ಚಿ ಬಿಗಿಗೊಳಿಸಿರಿ. ತಲೆಯನ್ನು ಸುತಲೂ ತಿರುಗಿಸಿರಿ. ನಿಮ್ಮ ಶರೀರ ಏನೇನು ಮಾಡಬೇಕೆನಿಸುತೋ ಮಾಡಲಿ. ಮಾಡಲು ಬಿಟ್ಟುಬಿಡಿ. ಆದರೆ ಕೈಕಾಲುಗಳನ್ನೂ, ಅಂಗಾಂಗಗಳನ್ನೂ ಗಟ್ಟಿಯಾಗಿ ಬಿಗಿ ಮಾಡಿಕೊಳ್ಳಿರಿ. ಈ ಮೂಲಕ ನಿಮ್ಮ ದುಃಖವನ್ನೆಲ್ಲಾ ಹೊರಕ್ಕೆ ಎಸೆಯಿರಿ. ನಿಮಗೆ ಅಳಬೇಕೆನಿಸಿದರೆ ಅತ್ತು ಬಿಡಿ, ಕಿರಿಚಿರಿ, ನಕ್ಕುಬಿಡಿ, -ಸುಮ್ಮನೆ ಮಾಡಿಬಿಡಿ. ಈ 10 ನಿಮಿಷಗಳ ಕಾಲ ನಿಮ್ಮ ಶರೀರವನ್ನು ನಿಯಂತ್ರಣದಲ್ಲಿಡಬೇಡಿ. ಉನ್ಮತ್ತರಂತೆ ವರ್ತಿಸಿರಿ.

ಚಿಂತಿಸಬೇಡಿ, ಈ ತಂತ್ರವು ನಿಮ್ಮನ್ನು ಹುಚ್ಚರನ್ನಾಗಿ ಮಾಡುವುದಿಲ್ಲ - ಸರಿಯಾಗಿ ಹೇಳಬೇಕೆಂದರೆ, ನಿಮ್ಮಲ್ಲಿ ಈಗಾಗಲೆ ಇರುವ ಹುಚ್ಚುತನವನ್ನೆಲ್ಲಾ ಹೊರಗೆ ಹಾಕಿಬಿಡುತೆ, ಅಷ್ಟೆ!

ನಿಮ್ಮ ಶರೀರದಲ್ಲಿ ಏಳುತ್ತಿರುವ ಹಿಂಸಾತ್ಮಕ ಆವೇಶಗಳ ವಿಚಾರವಾಗಿ ಭಯ ಪಡಬೇಡಿ. ಈ ಆವೇಶಗಳನ್ನೆಲ್ಲಾ ಉಪಯೋಗಿಸಿ, ಖರ್ಚು ಮಾಡಿದ ಮೇಲೆ, ಶಾಂತಿಯು ಅರಳಿ ನಿಮ್ಮಲ್ಲಿ ನೆಲೆಸಲು ಪ್ರಾರಂಭಿಸುತ್ತದೆ. ನಿಮಗೇ ತಿಳಿಯದೇ ನಿಮ್ಮ ಒಳಗೆ ಪ್ರಜ್ಞೆಯ ಆಳದಿಂದ, ಸ್ಥಿರತೆಯೂ ಮನಶಾಂತಿಯೂ ಉದಯಿಸುತಿರುವ ಅನುಭವವನ್ನು ನೀವು ಪಡೆಯುತ್ತೀರಿ.

10 ನಿಮಿಷಗಳ ನಂತರ (ನೀವು ಧ್ವನಿಸುರುಳಿ ಉಪಯೋಗಿಸುತ್ತಿದ್ದಲ್ಲಿ), ನೀವು Stop (ಸ್ಟಾಪ್) ನಿಲ್ಲಿಸಿ! ಎಂಬ ಶಬ್ದವನ್ನು ಕೇಳುವಿರಿ.

ಆ ಕ್ಷಣವೇ, ಸುಮ್ಮನೆ ನಿಲ್ಲಿಸಿಬಿಡಿ - ನೀವು ಯಾವ ಭಂಗಿಯಲ್ಲೇ ಇರಬಹುದು, ಅದೇ ಭಂಗಿಯಲ್ಲಿ ಸುಮ್ಮನೆ ನಿಲ್ಲಿಸಿ - ಜಡವಾದ ಒಂದು ವಿಗ್ರಹದಂತೆ ಇದ್ದುಬಿಡಿ.

ನೀವು ಯಾವಾಗ ಆ ಉದ್ಯೇಕಗೊಂಡ, ಹತೋಟಿ ಮೀರಿದ ಕ್ರಿಯೆಯಿಂದ ಇದ್ದಕ್ಕಿದ್ದಂತೆ ಕೂಡಲೇ ಶಾಂತ ಸ್ಥಿತಿಗೆ ಬಂದುಬಿಡುತ್ತೀರೋ ಆವಾಗ, ನಿಮ್ಮ ಮನಸ್ಸು ಪೂರ್ಣವಾಗಿ ನಿಂತುಬಿಡುತ್ತದೆ, ಒಂದು ಕ್ಷಣ ಸ್ಥಗಿತಗೊಳ್ಳುತ್ತದೆ. ಆ

ಏಳು ದಿವಸದ ಚಕ್ರ ಪ್ರಕ್ರಿಯೆ

ಘಳಿಗೆಯಲ್ಲಿ ನೀವು ಸಮಾಧಿಯನ್ನು ಬೇಕಾದರೂ ಅನುಭವಿಸಬಹುದು. ಇದು ಗುರುಗಳ ಸನ್ನಿಧಿಯಲ್ಲಿ ವಿಶೇಷವಾಗಿ ಸಾಧ್ಯವಾಗಬಹುದು. ಯಾವ ಘಳಿಗೆಯಲ್ಲಿ ನಿಮ್ಮ ಮನಸ್ಸು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೋ, ಆಗ ನೀವು ಮಹತ್ತರವಾದ ಚೈತನ್ಯವು ನಿಮ್ಮ ಒಳಕ್ಕೇ ನುಗ್ಗಿದಂತಾದ ಅನುಭವವನ್ನು ಪಡೆಯುತೀರಿ.

ಕೆಲವು ಘಳಿಗೆಯ ನಂತರ, ಆಲೋಚನೆಗಳು ಪುನಃ ನಿಮ್ಮಲ್ಲಿ ಬರುವುದನ್ನು ಕಾಣುವಿರಿ (ತಿಳಿಯುವಿರಿ). ಆಗ, ಒಳ್ಳೆಯ ಮನೋಭಾವದಿಂದ ಸುಮ್ಮನೆ ಕುಳಿತುಕೊಳ್ಳಿರಿ ಮತ್ತು ನಿಧಾನವಾಗಿ ನಿಮ್ಮ ಆಲೋಚನೆಗಳನ್ನು ಸಾಕ್ಷೀಭಾವದಿಂದ ನೋಡಿ. ಸಹಜವಾಗಿ ಉಸಿರಾಡಿ.

ಯಾವುದರ ಮೇಲೂ ಏಕಾಗ್ರಚಿತ್ತರಾಗಬೇಡಿ. ಧ್ಯಾನವೆಂದರೆ ಏಕಾಗ್ರತೆಯಲ್ಲ, ಧ್ಯಾನವೆಂದರೆ ಅರಿವು (ಪ್ರಜ್ಞ).

ಆದ್ದರಿಂದ, ನಿಮ್ಮ ಆಲೋಚನೆಗಳ ಅರಿವನ್ನು ಹೊಂದಿರಿ, ನಿಮ್ಮ ಶರೀರದಲ್ಲಿ ಮತ್ತು ಶರೀರದ ಹೊರಗಡೆ ಏನಾಗುತದೆ ಎಂಬುದನ್ನು ಸಾಕ್ಷಿಯಾಗಿ ನೋಡಿ. ನೀವು ಈ ತಂತ್ರದ ಕಾರ್ಯಸಾಮರ್ಥ್ಯತೆಯನ್ನು ಪರೀಕ್ಷಿಸಬೇಕೆನಿಸಿದರೆ, ಹೋಗಿ, ನಿಮ್ಮ ಭಾವಚಿತ್ರವನ್ನು (Photo) ಇದೇ ದಿನ ತೆಗೆಸಿ ನೋಡಿಕೊಳ್ಳಿ. ಈ ತಂತ್ರವನ್ನು ಅಭ್ಯಾಸ ಮಾಡಿದ 15 ದಿವಸಗಳ ನಂತರ, ಇನ್ನೊಂದು ಫೋಟೋ ತೆಗೆಸಿ ಎರಡನ್ನೂ ಹೊಂದಿಸಿ ನೋಡಿ. ನಾನು ಭರವಸೆ ಕೊಡುತ್ತೇನೆ, ನಿಮ್ಮ ಮುಖವು ಪೂರ್ತಿಯಾಗಿ ಬೇರೆಯಾಗಿಯೇ ಕಾಣುತದೆ. ನಿಮ್ಮ ಕಣ್ಣುಗಳು ಬಹಳ ಹೊಳಪಿನಿಂದ ಸುಂದರವಾಗಿ ಕಾಣುತ್ತವೆ. ನೀವು (ತೇಜಸ್ಸಿನಿಂದ) ಅರಳಿರುತ್ತೀರಿ.

ದಿನ 2

ನಿರ್ಭಯ ಧ್ಯಾನ (ಭಯವಿಲ್ಲದಿರುವ ಮಾರ್ಗ)

ಗುಣಪಡಿಸುವ ಚಕ್ರ : ಸ್ವಾಧಿಷ್ಠಾನ

ಚಕ್ರವಿರುವ ಸ್ಥಳ : 2 ಅಂಗುಲ ಹೊಕ್ಕಳಿನ ಕೆಳಗೆ ಚಕ್ರವು ಬಂಧಿಸಲಡುವುದು : ಭಯ, ವಿಶೇಷವಾಗಿ ಸಾವಿನ ಭಯ ಚಕ್ರದ ಬಂಧನ ಬಿಡುಗಡೆ : ಸಾವನ್ನು ಸ್ವೀಕರಿಸುವುದರಿಂದ ಧ್ಯಾನ ತಂತ್ರ ಬಂದಿರುವುದು : ವೇದಾಂತದಿಂದ ಕಾಲಾವಧಿ : 20 ನಿಮಿಷಗಳು

ಎಚ್ಚರಿಕೆ : ಈ ಧ್ಯಾನವು ಬಹಳ ಶಕ್ತಿಯುತವಾದದ್ದು. ಇದನ್ನು ಗುರುಗಳ ಸಮ್ಮುಖದಲ್ಲಿಯೇ ಅಭ್ಯಾಸ ಮಾಡುವುದು ಅತ್ಯುತ್ತಮ. ನೀವು ASP ತರಗತಿಗೆ ಹಾಜರಾಗಲು ಆಗದಿದ್ದರೆ, ASP ಸುರುಳಿಯನ್ನು ಉಪಯೋಗಿಸಿರಿ. ಈ ಧ್ಯಾನವನ್ನು ಮಾಡುವಾಗ ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಬಂಧುಗಳು ಯಾರಾದರೂ ನಿಮ್ಮ ಬಳಿ ಇರುತ್ತಾರೆಂಬುದನ್ನು ಖಚಿತ ಪಡಿಸಿಕೊಳ್ಳಿರಿ. ನೀವು ನಿಮ್ಮ ನಿದ್ರೆಯಿಂದ ನಿಗದಿತ ಸಮಯದಲ್ಲಿ ಎಚ್ಚರಾಗದಿದ್ದಲ್ಲಿ, ಅವರನ್ನು ನಿಮ್ಮ ಹೆಸರು ಹಗುರವಾಗಿ ಮತ್ತು ಖಾತರಿಯಾಗಿ ಎಬ್ಬಿಸಲು ತಿಳಿಸಿರಿ.

ಏಳು ದಿವಸದ ಚಕ್ರ ಪ್ರಕ್ರಿಯೆ

ನಿರ್ಭಯ ಧ್ಯಾನಕ್ಕೆ ಆರಂಭದ (ಪೂರ್ವಭಾವಿ) ಸೂಚನೆಗಳು

ಈ ಧ್ಯಾನದಲ್ಲಿ (visualise) ನೀವು ನಿಮ್ಮ ಸಾವನ್ನೇ ಕಾಣುತ್ತೀರಿ. ನೀವೇ ಶರೀರವನ್ನು ಕಲನೆಯ ಮೂಲಕ ನಿಜವಾಗಿಯೂ ಆದಂತೆ ಪ್ರಯತ್ನ ಪೂರ್ವಕವಾಗಿ ಬಿಟ್ಟುಹೋಗುವುದನ್ನು ಕಾಣುತ್ತೀರಿ.

ನೀವು ಆರಂಭಿಸುವುದಕ್ಕೆ ಮುಂಚಿನ ಸೂಚನೆಗಳು

ನಿಮ್ಮಿಂದ ಏನೇನಾಗಬೇಕು? (ನಾವು) ಏನೇನು ಮಾಡಬೇಕು? ನೀವು ನಿಮ್ಮನ್ನು ವಿಜುವಲೈಸ್ ಮಾಡಲು ಬೇಕಾದ ಸಾಮರ್ಥ್ಯವನ್ನು ತಂದುಕೊಳ್ಳಬೇಕು.

ನಿಮ್ಮ ಸಾವಿನ ಪೂರ್ಣ ವಿಧಾನವನ್ನು (ಪ್ರಕ್ರಿಯೆಯನ್ನು) ಕಣ್ಣಿನಿಂದ ಪ್ರತ್ಯಕ್ಷವಾಗಿ ಕಂಡಂತೆ ವಿಜುವಲೈಸ್ ಮಾಡಿಕೊಳ್ಳಿ.

ಗುರುಗಳ ಕಡೆಯಿಂದ, ಮಹತ್ತರವಾದ ಚೈತನ್ಯವನ್ನು ನಿಮ್ಮ ಪ್ರಕ್ರಿಯೆಗೆ ಕೊಟ್ಟು ಬೆಂಬಲಿಸುತ್ತಾರೆ.

ಮೊದಲನೆಯದಾಗಿ, ಭಯವನ್ನು ಮರಣೆಸುತ್ತೀರೆಂದು ನಿಜವೆನಿಸುವಂತೆಯೇ ಕೆಲವು ಕಾಲ ಅನಿಸಿದರೂ, ನೀವು ಖಂಡಿತಾ ಸಾಯುವುದಿಲ್ಲ. ನಿಮಗೆ ಏನೇನೂ ಆಗುವುದಿಲ್ಲ. ನೀವು ಗುರುಗಳ ಆಶ್ವಾಸನೆ ಮತ್ತು ಬೆಂಬಲವನ್ನು ಹೊಂದಿದ್ದೀರಿ. ಗುರುಗಳಲ್ಲಿ ವಿಶ್ವಾಸ ಇಡಿ ಸಾಕು.

ಎರಡನೆಯದಾಗಿ, ಅತ್ಯಾಸೆಯನ್ನು ಬಿಡಿ. ಈ ರೀತಿ ಕಲಿಸಿಕೊಂಡ ಮಾತ್ರಕ್ಕೇ ಏನಾಗಿ ಬಿಡುತೆ? ಎಂದು ನಿಮ್ಮನ್ನೇ ನೀವು ಕೇಳಿಕೊಳ್ಳಬೇಡಿ, ಹೇಗಾದರೂ ನಿಮ್ಮ ಪೂರ್ತಿ ಜೀವನವೆಲ್ಲಾ ನಿಮ್ಮ ಕಲ್ಪನೆಯೇ - ಆದ್ದರಿಂದ, ಇನ್ನೂ ಸ್ವಲ್ಪ ಕಾಲ ಕಲನೆಯಲ್ಲೇ ನೀವು ಸಮಯ ಕಳೆದರೂ ಏನೂ ನಷ್ಟವಿಲ್ಲ.

ನಿಜವಾಗಿಯೂ, ನೀವು ಯಾವುದನ್ನು ವಾಸ್ತವವಾಗಿ ಸತ್ಯವಾಗಿ ಇರುವುದಾಗಿ ಭಾವಿಸಿದ್ದೀರೋ, ಅದಕ್ಕಿಂತ ಹೆಚ್ಚು ಸತ್ಯವಾಗಿರುವುದು ಈ ಧ್ಯಾನವೇ! ನೀವು ಕಲಿಸಿದ ಬಹಳಷ್ಟು ವಿಚಾರಗಳು ನಡೆಯುವುದೇ ಇಲ್ಲ, ಆದರೆ ಸಾವು ಮಾತ್ರ, ನಿಶ್ಚಿತ!

ಸಾವನ್ನು ನೀವು ಸರಿಯಾಗಿ ಕಲಿಸಲು ಆಗುತದೋ ಇಲ್ಲವೋ ಎಂಬುದನ್ನು ಕುರಿತು ಚಿಂತೆ ಮಾಡುವುದು ಬೇಡ. ಯಾರೂ ಸಾವನ್ನು ಸರಿಯಾಗಿ ಕಲ್ಪನೆ ಮಾಡಲು ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮದೇ ಆದ ರೀತಿಯಲ್ಲಿ (ಅರ್ಥದಲ್ಲಿ) ವಿಜುವಲೈಸ್ ಮಾಡಲು ಪ್ರಯತ್ನಿಸಿರಿ.

ನೀವು ಅಕ್ಕಪಕ್ಕದಲ್ಲಿರುವವರಿಗೂ ಸಾಕಷ್ಟು ಜಾಗ ಇರುವುದನ್ನು ಖಚಿತ ಪಡಿಸಿಕೊಳ್ಳಿರಿ - ಕಡೆಯ ಪಕ್ಷ ಒಂದು ಅಡಿ ಎರಡೂ ಕಡೆ. ನಿಮ್ಮ ಆಕಾಶತತ್ವದ ಶರೀರವು (ಸೂಕ್ಷ್ಣ ಶರೀರವು) ವಿಸ್ತರಿಸುವುದಿದೆ ಮತ್ತು ನೀವುಗಳು ಒಬ್ಬರಿಗೊಬ್ಬರು ಬಹಳ ಹತ್ತಿರವಿದ್ದರೆ, ನೀವು ಏನೋ ಒಂದು ತರಹ ಮುಜುಗರವನ್ನು ಅನುಭವಿಸುತ್ತೀರಿ. ಆದರೆ ಅದನ್ನು ಸಮಾಧಾನವಾಗಿ ಶಾಂತಿಯಿಂದ ಮಾಡಿರಿ -ಸತ್ತವರು ಜಾಗಕ್ಕೆ ಹೊಡೆದಾಡುವುದಿಲ್ಲ!

ಆದ್ದರಿಂದ, ಈಗ ನೀವು ಸಾಯಲು ಸಿದ್ಧವಿದ್ದೀರಾ? (ಹೆಚ್ಚಿನ ಸೂಚನೆಗಳು ASP ಧ್ವನಿ ಸುರುಳಿಯಲ್ಲಿವೆ)

ದಿನ 3

ಮಣಿಪೂರಕ ಶುದ್ದಿ ಕ್ರಿಯೆ (ಒತ್ತಡದ ಬಿಡುಗಡೆ)

ಗುಣಪಡಿಸುವ ಚಕ್ರ : ಮಣಿಪೂರಕ ಚಕ್ರವಿರುವ ಸ್ಥಳ : ನಾಭಿ ಪ್ರದೇಶದಲ್ಲಿ ಚಕ್ರವು ಬಂಧಿಸಲಡುವುದು : ಚಿಂತೆಯಿಂದ ಚಕ್ರದ ಬಂಧನ ಬಿಡುಗಡೆ : ಸಕಾರಾತ್ಮಕತೆಯಿಂದ ಧ್ಯಾನ ತಂತ್ರ ಬಂದಿರುವುದು : ಸೂಫಿಇಸಮ್ ಮತ್ತು ಕ್ರಿಶ್ಚಿಯಾನಿಟಿ ಕಾಲಾವಧಿ : 30 ನಿಮಿಷಗಳು

ಮಣಿಪೂರಕ ಶುದ್ದಿಕ್ರಿಯೆಯು ಒಂದು ವಿರೇಚಕ ತಂತ್ರ ಇದು ಮನಸ್ಸಿನ ಕ್ರಿಯೆಯನ್ನು ಬಿಟ್ಟು, ನಕಾರಾತ್ಮಕವಾದ ಚಿಂತೆಗಳನ್ನು ಅದರ ಸ್ವಾ ಭಾವಿಕ ಕಾರಣಗಳೊಂದಿಗೆ ಬುಡ ಸಹಿತ ಹೊರದೂಡುವ ತಂತ್ರ.

ಮಣಿಪೂರಕ ಶುದ್ದೀಕ್ರಿಯೆಯ ಸೂಚನೆಗಳು:

ನಿಮ್ಮ ಎಲ್ಲಾ ಚಿಂತೆಗಳೂ ಸಹ ಕೇವಲ ಪದಗಳೇ ಹೊರತು ಮತ್ತೇನೂ ಅಲ್ಲ! ಅದು ನಿಮಗೆ ತಿಳಿದಿರುವ ಎಲ್ಲಾ ಭಾಷೆಗಳ ಮೊತ್ತವೇ ಆಗಿದೆ. ನಿಮ್ಮ ಜೀವನವೆಲ್ಲಾ, ನಿಮ್ಮ ಚಿಂತೆಗಳನ್ನು ಶಬ್ದಮುಖೇನ ವ್ಯಕ್ತಪಡಿಸುತ್ತೀರಿ. ಅವುಗಳನ್ನು ನಿಮಗೆ ತಿಳಿದಿರುವ ಯಾವುದಾದರೂ ಭಾಷೆಗಳಲ್ಲಿ ಮಾತನಾಡಿ ತಿಳಿಸುತ್ತೀರಿ.

ಈಗ ನೀವು ನಿಮಗೆ ಗೊತ್ತಿಲ್ಲದೇ ಇರುವ ಭಾಷೆಯಲ್ಲಿ ಮಾತನಾಡುತೀರಿ.

ನಿಮ್ಮ ಚಿಂತೆಗಳು, ನಕಾರಾತ್ಮಕ ಅನಿಸಿಕೆಗಳು, ತಡೆ ಹಿಡಿಯಲ್ಪಟ್ಟ ಭಾವನೆಗಳು ಇವನ್ನೆಲ್ಲಾ ನೀವು ನಿಮ್ಮ ನಾಭಿ ಪ್ರದೇಶದಲ್ಲಿ ಒಂದು ಹೊರೆಯಂತೆ ಹಿಡಿದಿಟ್ಟುಕೊಂಡಿದ್ದೀರಿ. ಇದರಿಂದ, ಆ ಭಾಗವು ಎಷ್ಟೊಂದು ಭಾರವಾಗಿದೆ ಎನ್ನುವುದು ಗೊತ್ತಾ ನಿಮಗೆ?

ಈಗ, ಈ ರೀತಿ ತಡೆಹಿಡಿಯಲ್ಪಟ್ಟ ಎಲ್ಲವನ್ನೂ, ಶಬ್ದಗಳ ಮೂಲಕ, ಗಟ್ಟಿಯಾಗಿ ಕೂಗಾಡುವುದರ ಮೂಲಕ ಮತ್ತು ಕೃತಿಯಲ್ಲಿ ವ್ಯಕ್ತಪಡಿಸುವುದರ ಮೂಲಕ ಹೊರತರುತೀರಿ. ಯಾವ ಪದಗಳನ್ನೂ ಉಪಯೋಗಿಸಬಾರದು, ಜ್ಞಾಪಕದಲ್ಲಿಡಿ. ನೀವು ಪದಗಳನ್ನು ಅಥವಾ ಶಬ್ದಗಳನ್ನು ಉಪಯೋಗಿಸಿದಿ ರೆಂದರೆ, ನಿಮ್ಮ ಮನದೊಳಗಿನ ಹರಟೆ ಪ್ರಾರಂಭವಾಗಿ ಬಿಡುತ್ತದೆ. ಈ ಧ್ಯಾನದ ಸಮಯದಲ್ಲಿ ನಿಮ್ಮ ಆಂತರಿಕ ಹರಟೆಗೆ ಅವಕಾಶ ಕೊಡಬೇಡಿರಿ. ನಿಮ್ಮ ಮನಸ್ಸಿನ ಆಳದಲ್ಲಿ, ಮೂಲದಲ್ಲಿ ತಡೆಹಿಡಿಯಲ್ಪಟ್ಟ ಅನಿಸಿಕೆ, ಭಾವನೆ, ವೇದನೆ, ಚಿಂತೆ ಎಲ್ಲವನ್ನೂ ಕಿತ್ತು, ಝಾಡಿಸಿ ನಿಮ್ಮಿಂದ ಹೊರ ದೂಡಿಬಿಡಿ! ಶಬ್ದಗಳ ಮೂಲಕ ವಾಂತಿ ಮಾಡಿಬಿರಿ.

ಮೊದಲು ಒಂದು ನಿಮಿಷ, ನಿಮ್ಮ ಮಣಿಪೂರಕ ಭಾಗದ ಕಡೆ ಮನಸ್ಸನ್ನು ಕೇಂದ್ರೀಕರಿಸಿರಿ. ನಿಮ್ಮ ಎಲ್ಲಾ ಚಿಂತೆಗಳೂ ಮತ್ತು ತಡೆಹಿಡಿಯಲ್ಪಟ್ಟ ನಕಾರಾತ್ಮಕವಾದ, ಎಲ್ಲವೂ ನಿಮ್ಮ ಮನಸ್ಸಿನಲ್ಲಿ ಏಳಲು ಆರಂಭವಾಗಿ ಬಿಡುತ್ತೆ.

ಈಗ, ನೀವು ಒಂದು ಘರ್ಷಣೆಯಲ್ಲಿ ಅಥವಾ ತಿಕ್ಕಾಟದಲ್ಲಿ ಸಿಕ್ಕಿಕೊಂಡಿದ್ದೀರೆಂದು ಕಲ್ಪಿಸಿಕೊಳ್ಳಿರಿ. ನೀವು ಯಾರೊಂದಿಗೋ ತೀವ್ರವಾಗಿ ಹೊಡೆದಾಡುತಿದ್ದೀರೆಂದು ಅಂದುಕೊಳ್ಳಿ. ಅವರೊಂದಿಗೆ ಮಕ್ಕಳು ಅಸ್ಪಷ್ಟವಾಗಿ ಮಾತನಾಡುವಂತೆ, ನಿಮಗೆ ಗೊತ್ತಿಲ್ಲದ ಭಾಷೆಯಲ್ಲಿ, ಅರ್ಥರಹಿತ ಶಬ್ದಗಳಿಂದ, ಮಾತನಾಡಲು ಪ್ರಾರಂಭಿಸಿರಿ. ನಿಮ್ಮ ಸಮಸ್ಯೆಯನ್ನೂ, ನೋವನ್ನೂ, ಆ ಮತ್ತೊಬ್ಬರೊಂದಿಗೆ ವ್ಯಕ್ತಪಡಿಸಲು ಯತ್ನಿಸಿರಿ.

ಆದರೆ, ಆ ಮನುಷ್ಯ ನೀವು ವ್ಯಕ್ತಪಡಿಸುತ್ತಿರುವುದನ್ನು ಒಪ್ಪಿಕೊಳ್ಳುತ್ತಿಲ್ಲವೆಂದು ತಿಳಿದಾಗ! ನಿಮಗೆ ಏನನಿಸುತ್ತದೆ? ಕೋಪ ಬರುತ್ತೆ? ಆ ಸಿಟ್ಟನ್ನು ಅವನ ಮೇಲೆ ಕಾರಿಬಿಡಿ! ದುಃಖದಿಂದ ಕಣ್ಣೀರು ಬಂದರೂ ಬರಲಿ! ಯಾವುದನ್ನೂ ತಡೆಯಬೇಡಿ. ಕಿರುಚಿಬಿಡಿ, ಕೂಗಾಡಿ, ಗೋಳಾಡಿ, ಅಳುಬಿಡಿ, ಕೈಕಾಲುಗಳನ್ನು ರುಭಾಡಿಸಿರಿ, ಸಾಧ್ಯವಿದ್ದಷ್ಟೂ ದೌರ್ಜನ್ಯದಿಂದ ವರ್ತಿಸಿರಿ! ಇದನ್ನು ಪ್ರಾಮಾಣಿಕವಾಗಿ ಮಾಡಿ - ಇದೊಂದು ನಿಮ್ಮ ಜೀವನಪರ್ಯಂತ ನೀವು ಶೇಖರಿಸಿಕೊಂಡಿರುವ ಈ ತಡೆಹಿಡಿಯಲ್ಪಟ್ಟ ಎಲ್ಲವನ್ನೂ ಹೊರದೂಡುವ ಒಂದು ಅವಕಾಶವಾಗಿದೆ! ಈ ಧ್ಯಾನಕ್ಕೆ ನೀವು ಸಂಪೂರ್ಣವಾಗಿ ತೊಡಗಿಕೊಳ್ಳಿರಿ.

20 ನಿಮಿಷಗಳ ನಂತರ, ನಿಲ್ಲಿಸಿಬಿಡಿ.

ಮತ್ತೆ 10 ನಿಮಿಷಗಳ ವರೆಗೆ ಸುಮ್ಮನೆ, ನಿಶ್ಶಬತೆಯಿಂದ ಕುಳಿತುಕೊಳ್ಳಿರಿ. ನಿಮ್ಮ ಮಣಿಪೂರಕ ಚಕ್ರದ ಮೇಲೆಯೇ ಕೇಂದ್ರೀಕರಿಸಿರಿ. ಆ ಸ್ಥಳದಲ್ಲಿ ಒಂದು ತರಹದ ಮಹತ್ತರವಾದ ಹಗುರತೆಯನ್ನು ಅನುಭವಿಸುತೀರಿ! ಅರ್ಥಾತ್, ನೀವು ಮನಸ್ಸಿನ ಕಶ್ಮಲಗಳನ್ನೆಲ್ಲಾ ಮನಸ್ಸಿನವರಾಗುತೀರಿ!

ಈ ಧ್ಯಾನವನ್ನು ನೀವು ಪ್ರತಿದಿನ 21 ದಿವಸಗಳವರೆಗೆ ಮಾಡಿರಿ, ಅಥವಾ ನಿಮ್ಮ ಮನಸ್ಸಿನಿಂದ ಧ್ಯಾನದ ವೇಳೆಯಲ್ಲಿ ಇನ್ನು ಹೊರಹಾಕಲು ಏನೇನೂ ಉಳಿದಿಲ್ಲ ಎನ್ನಿಸುವವರೆಗೂ ನೀವು ಧ್ಯಾನವನ್ನು ಮುಂದುವರಿಸಿರಿ.

ಮೊದಲ ಹೊಸತನವನ್ನು ಕಂಡುಕೊಳ್ಳುತೀರಿ.

ಆ ಶಾಂತಿಯನ್ನು ಅನುಭವಿಸಿ ಆನಂದಿಸಿರಿ.

ದಿನ 4

ಮಹಾಮಂತ್ರ ಧ್ಯಾನ (ಸೃಷ್ಟಿಪೂರ್ವದ ಮೂಲನಾದವನ್ನು ಪಠಿಸುವುದು)

ಗುಣಪಡಿಸುವ ಚಕ್ರ : ಅನಾಹತ ಚಕ್ರವಿರುವ ಸ್ಥಳ : ಹೃದಯ ಪ್ರದೇಶದಲ್ಲಿ ಚಕ್ರವು ಬಂಧಿಸಲ್ಪಡುವುದು : ಅನ್ಯರು ಗಮನಿಸಬೇಕೆಂದು ಕೇಳುವುದು. ಚಕ್ರದ ಬಂಧನ ಬಿಡುಗಡೆ : ನಿಸ್ವಾರ್ಥ ಪ್ರೇಮ ಧ್ಯಾನ ತಂತ್ರ ಬಂದಿರುವುದು : ಟಿಬೆಟಿಯನ್ ರ ತಂತ್ರ ಕಾಲಾವಧಿ : 30 ನಿಮಿಷಗಳು

ಮಹಾಮಂತ್ರ ಧ್ಯಾನವು ಮನಸ್ಸನ್ನು ಕೇಂದ್ರೀಕರಿಸಿ, ಸ್ಥಿರಗೊಳಿಸುವುದಾಗಿದೆ. (ಮನಸಸ್ಯ ಸ್ಥಿರಃ ಇತಿ - ಮಂತ್ರ ಃ) (ಮನಸ್ಸನ್ನು ಸ್ಥಿರಗೊಳಿಸುವುದೇ - ಮಂತ್ರ)

ಈ ಧ್ಯಾನವನ್ನು ಮಾಡುವುದರಿಂದ ನಿಮ್ಮ ಸಂಪೂರ್ಣ ಚೈತನ್ಯವು ನಿಮ್ಮಲ್ಲಿಯೇ ನಿರ್ಲಿಪ್ತತ್ವದಲ್ಲಿಯೇ ಕೇಂದ್ರೀಕರಿಸಲ್ಪಡುತ್ತದೆ. ಈ ತಂತ್ರವು ನಿಮ್ಮ ಪೂರ್ಣ ಶರೀರವನ್ನು ಕಂಪನವನ್ನುಂಟು ಮಾಡಲು ರಚಿಸಲ್ಪಟ್ಟಿದೆ. ಇದು ನಿಮ್ಮನ್ನು ಉತ್ಪನ್ನವಾದ 'ಅಜಪ'ದ ಸ್ಥಿತಿಗೆ ಕೊಂಡೊಯ್ಯುವುದಾಗಿದೆ. ಅಂದರೆ, ನೀವು ಜಪವನ್ನು ಮಾಡುವ ಅವಶ್ಯಕತೆಯೇ ಇಲ್ಲದ ಹಾಗೂ ಆ ಜಪವು ತಾನೇತಾನಾಗಿ ಉಂಟಾಗುವ ಸ್ಥಿತಿಗೆ ಕೊಂಡೊಯ್ಯುತ್ತದೆ. ನೀವು ಜಪವೇ ಆಗಿಬಿಡುತ್ತೀರಿ.

ಏಳು ದಿವಸದ ಚಕ್ರ ಪ್ರಕ್ರಿಯೆ

ನೀವು ಮಂತ್ರವನ್ನು ಪುನರುಚ್ಚರಿಸಬೇಕಾಗಿಲ್ಲ. ಆ ಮಂತ್ರವೇ ನಿಮ್ಮನ್ನು ಉಚ್ಚರಿಸುತ್ತದೆ ಅಂದರೆ ನೀವೇ ಮಂತ್ರದ ಅಧೀನವಾಗಿಬಿಡುತೀರಿ.

ಮಹಾಮಂತ್ರ ಧ್ಯಾನಕ್ಕೆ ಸೂಚನೆಗಳು

ವಿಶಾಂತಿಪೂರ್ವಕವಾಗಿ, ಸುಖಾಸನದಲ್ಲಿ ಕುಳಿತುಕೊಂಡು, ಹಸ್ತಗಳನ್ನು ಮೇಲ್ಮುಖವನ್ನಾಗಿಸಿ ಮಂಡಿಯ ಮೇಲೆ ಕೈಗಳನ್ನು ಇಟ್ಟುಕೊಳ್ಳಿರಿ. ನಿಮ್ಮ ಕೈಗಡಿಯಾರ, ಆಭರಣ ಇವುಗಳು ಚೈತನ್ಯದ ಹರಿವನ್ನು ತಡೆಯುವುದರಿಂದ, ಅವುಗಳನ್ನು ತೆಗೆದಿಟ್ಟುಬಿಡಿ.

ನಿಮ್ಮ ಬೆನ್ನುಹುರಿಯು ನೇರವಾಗಿರಲಿ. ನಿಮ್ಮ ತಲೆ, ಕುತ್ತಿಗೆ ಮತ್ತು ಬೆನ್ನು ಒಂದೇ ಸರಳರೇಖೆಯಲ್ಲಿರಲಿ.

ಕಣ್ಣುಗಳನ್ನು ಮುಚ್ಚಿರಿ. ಸಂಪೂರ್ಣವಾಗಿ ಸರಿಯಾಗಿ ಮುಚ್ಚಿಕೊಳ್ಳಿರಿ. ಸಾಮಾನ್ಯವಾಗಿ, ನೀವು ಕಣ್ಣುಗಳನ್ನು ಮುಚ್ಚಿದಾಗ, ಹೊರಗಿನ ದೃಶ್ಯಜಗತ್ತನ್ನು ಮುಚ್ಚಿ, ಒಳಗಿನ ದೃಶ್ಯಜಗತ್ತನ್ನು ತೆರೆದಂತೆ ಆಗುತ್ತದೆ.

ಆದ್ದರಿಂದ ಕೇವಲ ನಿಮ್ಮ ಕಣ್ಣುರೆಪ್ಪೆಗಳನ್ನು ಮಾತ್ರ ಮುಚ್ಚದೆ - ಸರಿಯಾದ ರೀತಿಯಲ್ಲಿ ಕಣ್ಣುಗಳನ್ನು ಮುಚ್ಚಿರಿ! ಇದಕ್ಕೊಂದು ಒಳ್ಳೆಯ ವಿಧಾನವೆಂದರೆ, ಕ್ಷಣಕಾಲ ನಿಮ್ಮ ಕಣ್ಣುಗುಡ್ಡೆಗಳು ಕಲ್ಲುಗಳಾಗಿವೆ ಎಂದು ಕಲ್ಪಿಸಿಕೊಳ್ಳಿ ಅಷ್ಟೆ. ಆ ಕೂಡಲೇ ನಿಮ್ಮ ಆಲೋಚನೆಗಳೂ ಸಹ ನಿಂತುಬಿಡುತ್ತದೆ ಅಥವಾ ಕಡಿಮೆಯಾಗಿಬಿಡುತವೆ. ಈಗ ನಿಮ್ಮ ಬಾಯನ್ನು ಮುಚ್ಚಿಕೊಂಡು ಮ್ … ಶಬ್ದವನ್ನು ಪ್ರಾರಂಭಿಸಿರಿ. ಮ್ ... ಎನ್ನುವ ಧ್ವನಿತರಂಗವನ್ನು ಮಾತ್ರ (ಬಾಯಿ ಮುಚ್ಚಿಕೊಂಡೇ) ಉಂಟುಮಾಡುತಿರಿ. ಬೇರೆ ಯಾವ ಮಂತ್ರವನ್ನೂ ಉಚ್ಚರಿಸದಿರಿ, 'ಓಂ' ಎಂತಲೂ ಸಹ ಉಚ್ಚರಿಸಬೇಡಿ.

ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತೂ ಉಚ್ಚರಿಸಿರಿ. ನಿಮ್ಮ ಶರೀರವನ್ನು ತೂಗಾಡಲು ಬಿಡಿ. ನಿಮ್ಮ ನಾಭಿಕಮಲದಿಂದ ಹೊರಹೊಮ್ಮುವಂತೆ ಉಚ್ಚರಿಸಿರಿ, ಅಂದರೆ ಕಟಿ ಪ್ರದೇಶದಿಂದ.

ನಿಮ್ಮ ಶರೀರವು ಒಂದು ಖಾಲಿ ಪಾತ್ರೆಯೆಂದು ಕಲ್ಪಿಸಿಕೊಳ್ಳಿರಿ. ಆ ಪಾತ್ರೆಯೊಳಕ್ಕೆ ನಿಮ್ಮ ಬಾಯನ್ನು ಇಟ್ಟು ಮ್ ... ಶಬ್ದ ಮಾಡಿದರೆ ಯಾವ ತರಹ ಧ್ವನಿಯು ನಿಮಗೆ ಕೇಳುತ್ತದೆಯೋ, ಆ ರೀತಿಯ ಧ್ವನಿಯ ಕಂಪನದ ಶಬ್ದವನ್ನು ನಿಮ್ಮೊಳಗಿಂದಲೇ ಉಂಟುಮಾಡಿರಿ.

ಎಷ್ಟು ಗಟ್ಟಿಯಾಗಿ ಸಾಧ್ಯವೋ ಅಷ್ಟು ಗಟ್ಟಿಯಾಗಿ, ಎಷ್ಟು ಆಳವಾಗಿ ಸಾಧ್ಯವೋ ಅಷ್ಟು ಆಳವಾಗಿ, ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಮಾಡುತಿರಿ. ಈ ರೀತಿ ಹಮ್ ಮಾಡಲು ನೀವು ಸಂಪೂರ್ಣವಾಗಿ ಪ್ರಯತ್ನಿಸಿರಿ.

ಇದನ್ನು 30 ನಿಮಿಷಗಳ ಕಾಲ ಮಾಡಿರಿ. ನೀವು ASP ಟೇವನ್ನು ಉಪಯೋಗಿಸುತ್ತಿದ್ದರೆ, ನಿಮ್ಮ ಹಮ್ಮಿಂಗ್ ಜೊತೆಜೊತೆಯಲ್ಲೇ ಸಂಗೀತವೂ ಇರುತ್ತದೆ. ಇಲ್ಲವಾದರೆ ನೀವು ಸುಮ್ಮನೇ ಹಮ್ಮಿಂಗ್ ಮಾಡಬಹುದು.

ಯಾವ ತರಹದಲ್ಲೂ ಉಸಿರನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ. ಉಸಿರಾಟವು ತನಗೆ ತಾನೇ ತನಗೆ ಬೇಕಾದಂತೆ ಎಚ್ಚರಿಕೆ ವಹಿಸಿಕೊಳ್ಳುತ್ತದೆ.

ಇದನ್ನೇ ಮಹಾಮಂತ್ರದ ಉಚ್ಚಾರಣೆ ಎನ್ನುತ್ತಾರೆ - ಕೂಗಿ ಹೇಳಲಾಗದ, ಮಾತಿನಲ್ಲಾಗಲೀ, ಬರಹದ ಮೂಲಕವಾಗಲೀ,ಯಾವ ರೀತಿಯೂ ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸಲಾಗದ ಉಚ್ಚಾರಣೆ ಇದು. ಇದನ್ನು ಅನಾಹತ ಧ್ವನಿ ಎನ್ನುತಾರೆ. ಈ ಮಹಾಮಂತ್ರವು ಅವಶ್ಯವಾದ ಕಂಪನಗಳಿಂದ ಕೇವಲ ನಿಮ್ಮ ಇರುವಿಕೆಯನ್ನು ಮಾತ್ರವಲ್ಲದೆ, ಸಂಪೂರ್ಣ ಅಸ್ತಿತ್ವವನ್ನೇ ಪ್ರತಿಧ್ವನಿಸುತ್ತದೆ. ಯಾವಾಗ ಅನುಭವಿಸುತ್ತೀರೋ ಆಗ, ನಿಮಗೆ ಈ ಅನಾಹತ ಧ್ವನಿಯೇ ಆಧಾರವೆಂಬುದು ಅರ್ಥವಾಗುತ್ತದೆ (ಈ ಅನಾಹತ ಧ್ವನಿಯಿಂದಲೇ ನೀವು ಉದ್ಭವಿಸಿರುವುದು ಎಂಬುದು ಅರ್ಥವಾಗುತ್ತದೆ).

ಏನೇನು ಆಗುತ್ತದೆಯೋ ಆಗಲು ಬಿಡಿ. ದುಃಖದಿಂದ ಕಣ್ಣೀರು ಬಂದರೆ ಬರಲಿ ಬಿಡಿ, ನಗು, ಕೆಮ್ಮುವಿಕೆ, ಛಲ - ಬರಲಿ ಬಿಡಿ. ಏನು ಬೇಕಾದರೂ ಆಗಲಿ, ಆಗಲು ಬಿಡಿ, ಹೋಗಲು ಬಿಡಿ, ಯಾವುದನ್ನೂ ಹಿಡಿದಿಟ್ಟುಕೊಳ್ಳಬೇಡಿ.

ಏನೇನು ಆಲೋಚನೆಗಳು ಬರುತ್ತವೆಯೋ ಅವುಗಳನ್ನು ನಿಮ್ಮ ಹಮ್ಜಿಂಗ್‍ನಲ್ಲಿ ಸೇರಿಸಿ ಹೊರಹೋಗಲು ಬಿಡಿ. ನಿಧಾನವಾಗಿ, ಅವುಗಳೆಲ್ಲವೂ ಮಾಯವಾಗಿ ಬಿಡುತವೆ.

30 ನಿಮಿಷಗಳ ನಂತರ ಸಂಗೀತವು ನಿಲ್ಲುತ್ತದೆ ಹಾಗೂ ಜಾಗಟೆಯ ಧ್ವನಿ ಕೇಳಿಬರುತ್ತದೆ.

ಆ ಕೂಡಲೇ ಹಮ್ಜಿಂಗ್ ನ್ನು ನಿಲ್ಲಿಸಿಬಿಡಿ.

ಮಹತ್ತರವಾದ ಒಂದು ಮೌನಶಾಂತಿಯು ನಿಮ್ಮನ್ನು ಆವರಿಸಿಬಿಡುತ್ತದೆ. ಒಂದು ಕ್ಷಣ ಕಾಲವೇ ನಿಂತುಬಿಡುತ್ತದೆ. ಈ ಮೌನವನ್ನು ಸಾಕ್ಷೀಭಾವದಿಂದ ನೋಡಿ.

ಅತಿಶಯವಾದ ಶಾಂತತೆಯು ನಿಮ್ಮ ಒಳಗೂ, ಹೊರಗೂ, ಸುತ್ತಲೂ, ಎಲ್ಲೆಲ್ಲೂ ಇರುವುದನ್ನುಅನುಭವಿಸಿರಿ.

ಸ್ವಲ್ಪ ಹೊತ್ತಾದ ನಂತರ, ಆಲೋಚನೆಗಳು ನಿಧಾನವಾಗಿ ಈ ಶಾಂತತೆಯಲ್ಲಿ ತಲೆ ಎತ್ತಲು ಪ್ರಾರಂಭಿಸುತ್ತವೆ. ಅವುಗಳನ್ನು ತಡೆಯಬೇಡಿ, ಅವುಗಳಲ್ಲಿ ತೊಡಗಬೇಡಿ. ಸುಮ್ಮನೆ ಆ ಆಲೋಚನೆಗಳನ್ನು ಗಮನಿಸುತ್ತಿರಿ ಅಷ್ಟೆ

ನೀವು ಕೇಂದ್ರದಲ್ಲಿರುವ ಒಂದು ಅರಿವು ಮಾತ್ರವಾಗಿರಿ. ನಿಮ್ಮ ಅನಾಹತ ಚಕ್ರದಲ್ಲಿಯೇ ಇರಿ. ನೀವು ಸಂಪೂರ್ಣವಾಗಿ ಕೇಂದ್ರೀಕರಿಸಿ, ಶಾಂತತೆಯಲ್ಲಿರುವ ಅನುಭವವನ್ನು ಪಡೆಯುತ್ತೀರಿ.

ಈ ಧ್ಯಾನವನ್ನು ಬೆಳಗಿನ ಜಾವ ಅಭ್ಯಾಸ ಮಾಡುವುದು ಅತ್ಯುತ್ತಮ. ಇದು ಅತಿಶಯವಾದ ಚೈತನ್ಯವನ್ನು ನಿಮ್ಮ ಶರೀರದಲ್ಲಿ ಉತ್ಪತ್ತಿ ಮಾಡುತ್ತದೆ. ಇದನ್ನು ರಾತ್ರಿ ವೇಳೆಯಲ್ಲಿ ಅಭ್ಯಾಸ ಮಾಡಿದರೆ, ನಿಮ್ಮ ನಿದ್ರೆಗೆ ತೊಡಕಾಗಬಹುದು.

ದಿನ 5

ಶಕ್ತಿಸಾಗರ ಧ್ಯಾನ (ಶಕ್ತಿಯ ಸಾಗರ)

ಗುಣಪಡಿಸುವ ಚಕ್ರ : ವಿಶುದ್ಧಿ ಚಕ್ರವಿರುವ ಸ್ಥಳ : ಗಂಟಲಿನ ಪ್ರದೇಶದಲ್ಲಿ ಚಕ್ರವು ಬಂಧಿಸಲ್ಪಡವುದು : ಹೋಲಿಸಿಕೊಳ್ಳುವಿಕೆ ಮತ್ತು ಅಸೂಯೆ ಚಕ್ರದ ಬಂಧನ ಬಿಡುಗಡೆ : ನಿಮ್ಮ ಸರಿಸಾಟಿಯಿಲ್ಲದಿರುವಿಕೆಯನ್ನು ಅರ್ಥ ಮಾಡಿಕೊಳ್ಳುವುದರಿಂದ ಧ್ಯಾನ ತಂತ್ರ ಬಂದಿರುವುದು : ಜ಼ೆನ್ ಬುದ್ಧಿಸಮ್‌ನಿಂದ ಕಾಲಾವಧಿ : 30 ನಿಮಿಷಗಳು

ನಮ್ಮಲ್ಲಿ ಬಹಳ ಜನಗಳಿಗೆ ನಾವು ಹೊಂದಿದ್ದೇವೆಂಬುದೇ ತಿಳಿದಿಲ್ಲ. ಅವು ಯಾವುವೆಂದರೆ - ಸಾಮಾನ್ಯ ಪದರ, ತುರ್ತು ಆವಶ್ಯಕತೆಯ ಪದರ ಮತ್ತು ಪ್ರಜ್ಞಾಪದರ.

ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಮೊದಲ ಸಾಮಾನ್ಯ ಪದರವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತೇವೆ. ಅಷ್ಟೇ ಚೈತನ್ಯದಿಂದ ಸಂತೋಷವಾಗಿರುತ್ತೇವೆ. ಬಹಳ ಅಪರೂಪವಾಗಿ, ನಮ್ಮನ್ನೇ ನಾವು ಸೆಳೆದುಕೊಂಡಾಗ ಎರಡನೇ ಪದರವು ತೆರೆದುಕೊಳ್ಳುತ್ತದೆ. ಆದರೆ, ಈ ಮೂರನೇ ಪದರವನ್ನು ಉಪಯೋಗಿಸಿಯೇ ಸಾಗಿ ಇಲ್ಲ. ಅದೊಂದು ಇದೆ ಎಂಬುದೇ ನಮಗೆ ಗೊತ್ತಿಲ್ಲ. ಅತ್ಯುತ್ಕೃಷ್ಟ ಸ್ಥಿತಿಯಲ್ಲಿ ಕೆಲಸ ಮಾಡುವಂತಹ ಚೈತನ್ಯವೇ ನಮಗೆ ದೊರೆತಿರುವ ಈ ಪ್ರಜ್ಞೆ.

ಏಳು ದಿವಸದ ಚಕ್ರ ಪ್ರಕ್ರಿಯೆ

ಶಕ್ತಿ ಸಾಗರ ಧ್ಯಾನ ಮಾಡುವಾಗ ಈ ಪ್ರಜ್ಞೆಯ ಸಂಪನ್ಮೂಲವನ್ನು ಹೊರತೆಗೆಯುತೇವೆ.

ಶಕ್ತಿ ಸಾಗರ ಧ್ಯಾನಕ್ಕೆ ಸೂಚನೆಗಳು:

ನಿಮ್ಮ ಜೀವನದಲ್ಲಿ ಯಾವಾಗ್ಯೂ ಮತ್ತೊಬ್ಬರೊಂದಿಗೆ ಪೈಪೋಟಿಯನ್ನು ರೂಢಿಸಿಕೊಂಡು ಬಿಟ್ಟಿದ್ದೀರಿ. ಈಗ ನಿಮ್ಮ ವಿರುದ್ಧ ನೀವೇ ಪೈಪೋಟಿ ನಡೆಸುವಿರಿ! ನಿಮ್ಮ ಜೀವನದಲ್ಲಿನ ನಿಮ್ಮ ನಕಾರಾತ್ಮಕ ಪ್ರವೃತ್ತಿಗಳೊಡನೆ ನೀವೇ ಸ್ಪರ್ಧಿಸಿ ಜಯವನ್ನು ಹೊಂದುವಿರಿ.

ಇದೊಂದು 30 ನಿಮಿಷಗಳ ಧ್ಯಾನ, ಇದರಲ್ಲಿ 30 ನಿಮಿಷಗಳ ಒಂದು ಭಾಗ ಮತ್ತೊಂದು 10 ನಿಮಿಷಗಳ ಭಾಗ.

ಮೊದಲು ಕಣ್ಣುಗಳನ್ನು ಮುಚ್ಚಿಕೊಂಡು ಮೌನವಾಗಿ ನಿಂತುಕೊಳ್ಳಿರಿ. ನಿಮ್ಮ ಸಂಪೂರ್ಣ ಗಮನವನ್ನು ನಿಮ್ಮ ಗಂಟಲಿನ ಪ್ರದೇಶದಲ್ಲಿರುವ ವಿಶುದ್ಧಿ ಚಕ್ರದ ಮೇಲೆ ಕೇಂದ್ರೀಕರಿಸಿರಿ.

ಈಗ, ಒಂದು ಸ್ಥಳದಲ್ಲಿ ನಿಂತು, ನಿಧಾನವಾಗಿ ಜಾಗ್ ಮಾಡಲು ಪ್ರಾರಂಭಿಸಿರಿ. ಬಹಳ ನಿಧಾನವಾಗಿ ಪ್ರಾರಂಭಿಸಿರಿ, ನಂತರ ವೇಗವನ್ನು ಹೆಚ್ಚಿಸಿರಿ. ಸ್ವಲ್ಪಸ್ವಲ್ಪವಾಗಿ ಹೆಚ್ಚಿಸುತ್ತಿರಿ ಏಕೆಂದರೆ ಒಮ್ಮೆ ನೀವು ವೇಗವನ್ನು ಹೆಚ್ಚಿಸಿದರೆ ಮತ್ತೆ ಕಡಿಮೆ ಮಾಡುವಂತಿಲ್ಲ! ಆದ್ದರಿಂದ ಸ್ವಲ್ಪಸ್ವಲ್ಪವಾಗಿ ವೇಗವನ್ನೂ ಹೆಚ್ಚಿಸುತ್ತಾ ಇರಿ. ನಿಮ್ಮ ಮನಸ್ಸು ಬಹಳ ಆಯಾಸವಾಗುತ್ತಿದೆ ಎಂದು ಹೇಳಬಹುದು - ಅದರ ಮಾತನ್ನು ಕೇಳಬೇಡಿ!

ನಿಮ್ಮ ಸಾಮರ್ಥ್ಯವನ್ನು ಸಾಮರ್ಥ್ಯವನ್ನು ಹೊಂದಿದೆ, ಅದನ್ನು ನೀವು ಉಪಯೋಗಿಸಿಯೇ ಇಲ್ಲ, ಯಾವಾಗ ನೀವು ಸಂಪೂರ್ಣವಾಗಿ ಈ ಧ್ಯಾನದಲ್ಲಿ ತೊಡಗಿಕೊಳ್ಳುತ್ತೀರೋ ಆಗ, ಉತ್ಕೃಷ್ಟವಾದ ಮಟ್ಟದಲ್ಲಿ ಚೈತನ್ಯವು ಪ್ರವಹಿಸುವುದನ್ನು ಕಾಣುತ್ತೀರಿ.

ಆದ್ದರಿಂದ ಜಾಗ್ ಮಾಡುತ್ತಲೇ ಇರಿ. ಚೈತನ್ಯವು ಇನ್ನೂ ವೃದ್ದಿಸಲಿ! 30 ನಿಮಿಷಗಳ ನಂತರ, ನಿಲ್ಲಿಸಿಬಿಡಿ.

ಮುಂದಿನ 10 ನಿಮಿಷಗಳ ಕಾಲ, ನೀವು ಎಲ್ಲೆಲ್ಲಿ ಇರುವಿರೋ ಅಲ್ಲಿಯೇ ಶಾಂತವಾಗಿ ಸುಮ್ಮನೇ ಕುಳಿತುಕೊಂಡು ಬಿಡಿ. ಕಣ್ಣುಗಳು ಮುಚ್ಚಿಯೇ ಇರಲಿ. ನಿಮ್ಮ ಗಮನವನ್ನೆಲ್ಲಾ ವಿಶುದ್ಧಿ ಚಕ್ರದ ಮೇಲೆಯೇ ಕೇಂದ್ರೀಕರಿಸಿರಿ. ಈ ಪರಿಸ್ಥಿತಿಯಲ್ಲಿ, ನೀವು ಜಾಗ್ ಮಾಡುವಾಗ ಬಿಡುಗಡೆಯಾದ ಚೈತನ್ಯವನೆಲ್ಲಾ ನೀವೇ ಹೀರಿಕೊಳ್ಳುತೀರಿ.

ರೇಷ್ಮೆ, ಬಂಗಾರ ಮತ್ತು ವಜ್ರ ಇವುಗಳು ಚೈತನ್ಯವನ್ನು ಸಂಗ್ರಹಿಸುವ ಉತ್ತಮ ಉಗ್ರಾಣಗಳಿದ್ದಂತೆ. ಈ ಧ್ಯಾನವನ್ನು ಮಾಡುವ ಸಮಯದಲ್ಲಿ ಇವುಗಳನ್ನು ಧರಿಸಿದ್ದರೆ ಅವುಗಳು ನಿಮ್ಮಿಂದ ಬಿಡಲ್ಪಟ್ಟ ಚೈತನ್ಯವನ್ನು ಹೀರಿಕೊಂಡು ಬಹಳ ಕಾಲದ ವರೆಗೆ ಉಳಿಸಿಕೊಂಡಿರಲು ಸಾಧ್ಯವಾಗುತದೆ.

ದಿನ 6

ದಿವ್ಯನೇತ್ರ ಧ್ಯಾನ

ಗುಣಪಡಿಸುವ ಚಕ್ರ : ಆಜ್ಞಾ ಚಕ್ರವಿರುವ ಸ್ಥಳ : ಭ್ರೂಮಧ್ಯ ಚಕ್ರವು ಬಂಧಿಸಲ್ಪಡವುದು : ಗಂಭೀರತೆ (ತೀವ್ರತೆಯಿಂದ ಪರಿಗಣಿಸುವಿಕೆ Seriousness) ಚಕ್ರದ ಬಂಧನ ಬಿಡುಗಡೆ : ಮುಗ್ದತೆ ಮತ್ತು ಸರಳತೆ ಧ್ಯಾನ ತಂತ್ರ ಬಂದಿರುವುದು : ಕ್ರಿಶ್ಚಿಯಾನಿಟಿ ಕಾಲಾವಧಿ : 30 ನಿಮಿಷಗಳು

ಆಜ್ಞಾ ಚಕ್ರವನ್ನು ಚಕ್ರಗಳ ರಾಜ ಎಂದು ಪರಿಗಣೆಸಲಾಗಿದೆ - ಮಾಸ್ಟರ್ ಚಕ್ರ. ಇದು ಎಷ್ಟು ಪ್ರಾಮುಖ್ಯವಾದ ಚಕ್ರವೆಂದರೆ, ಯಾವ ಧರ್ಮದವರೂ ಈ ಚಕ್ರವನ್ನು ಕಾರ್ಯಗತಗೊಳಿಸದೇ ಬಿಟ್ಟಲ್ಲ. ಆಜ್ಞಾ ಚಕ್ರವು ಎಚ್ಚರಗೊಂಡಾಗ - ಪೂರ್ಣ ಅಸ್ತಿತ್ವವೇ ಬೇರೆಬೇರೆಯ ಕ್ಷೇತ್ರಗಳಲ್ಲಿ ಪ್ರವೇಶಿಸುತ್ತದೆ. ಸಮಸ್ತ ಸಾಮರ್ಥ್ಯದ ಪದರಗಳು ತೆರೆಯಲ್ಪಡುತ್ತವೆ.

ದಿವ್ಯ ನೇತ್ರ ಧ್ಯಾನವು, ಗುರುವಿನ ಚೈತನ್ಯದೊಡನೆ ನೇರ ಸಂಪರ್ಕವನ್ನು ಪ್ರತಿಷ್ಠಾಪಿಸುವ, ಅತೀವ ಶಕ್ತಿಯುತವಾದ ತಂತ್ರ. ಈ ಧ್ಯಾನವನ್ನು ಗುರುಗಳ ಸನ್ನಿಧಿಯಲ್ಲಿಯೇ ಅಭ್ಯಾಸ ಮಾಡಿದರೆ ಅತ್ಯಂತ ಪ್ರಭಾವಶಾಲಿಯಾದ ಪರಿಣಾಮ ಉಂಟಾಗುವುದು. ಇದು ಸಾಧ್ಯವಾಗದಿದ್ದಾಗ, THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರ ಕಣ್ಣುಗಳ ಭಾವಚಿತ್ರವನ್ನು ಉಪಯೋಗಿಸಿ ಧ್ಯಾನಾಭ್ಯಾಸ ಮಾಡಬಹುದು. ಈ ಧ್ಯಾನಕ್ಕೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರ ಯಾವುದೋ ಭಾವಚಿತ್ರವನ್ನು ಉಪಯೋಗಿಸದೆ, ಆಜ್ಞಾಧ್ಯಾನದ ತರಗತಿಯ ವೇಳೆಯಲ್ಲಿ ಧ್ಯಾನ ಮಾಡುತಿದ್ದಾಗಲೇ ತೆಗೆದ ಭಾವಚಿತ್ರವನ್ನು ಇದಕ್ಕಾಗಿಯೇ ಶಿಫಾರಸು ಮಾಡಿರುವುದರಿಂದ ಅದು ನಿರೀಕ್ಷಿತ ಪರಿಣಾಮಕಾರಿಯಾದದ್ದು.

ದಿವ್ಯ ನೇತ್ರ ಧ್ಯಾನಕ್ಕೆ ಸೂಚನೆಗಳು:

ಈ ಧ್ಯಾನವು ಎರಡು ಬೇರೆ ಬೇರೆಯ ತಂತ್ರಗಳನ್ನು ಒಳಗೊಂಡಿದೆ. ಮೊದಲನೆಯದು ಆಜ್ಞಾಚಕ್ರವನ್ನು ಶುದ್ದಿಗೊಳಿಸುವಿಕೆ ಮತ್ತು ಮತ್ತೊಂದು ಎಂದರೆ ಚೈತನ್ಯ ಗೊಳಿಸುವಿಕೆ.

ನಮ್ಮ ಕೆಳಗಿನ ಚಕ್ರಗಳಿಗೆ, ಶುದ್ದಿಗೊಳಿಸುವುದು ಮತ್ತು ಪ್ರವಹಿಸಲು ಮಾರ್ಗ ನಿರ್ಮಿಸುವುದು ಇಷ್ಟು ಮಾತ್ರ ಸಾಕು. ಮೇಲಿನ ಚಕ್ರಗಳಿಗಾದರೋ ಚೈತನ್ಯಗೊಳಿಸುವಿಕೆಯ ಅವಶ್ಯಕತೆಯೂ ಇದೆ ಅಂದರೆ ಚಕ್ರಗಳಿಗೆ ಚೈತನ್ಯವನ್ನು ನುಗ್ಗಿಸಿ ತುಂಬುವ ಕೆಲಸವೂ ಇದೆ.

ಈ ಎರಡು ಹಂತಗಳಲ್ಲಿ, ನೀವು ಸರದಿಯ ಪ್ರಕಾರ, ಕಣ್ಣುಗಳನ್ನು ಮುಚ್ಚುವುದು ಹಾಗೂ ತೆರೆಯುವುದು, ಈ ರೀತಿ ಮಾಡಬೇಕಾಗುತದೆ.

ನಿಮ್ಮ ಕಣ್ಣುಗಳು ಮುಚ್ಚಲ್ಪಟ್ಟಾಗ, ನಿಮ್ಮ ''ಮೂರನೇ ಕಣ್ಣಿನ'' ಮೇಲೆ ಕೇಂದ್ರೀಕರಿಸಿರಿ. (ಭ್ರೂಮಧ್ಯ ಪ್ರದೇಶದಲ್ಲಿ ಕೇಂದ್ರೀಕರಿಸಿರಿ).

ಮುಂದಿನ ಹಂತದಲ್ಲಿ, ನೀವು ಕಣ್ಣುಗಳನ್ನು ತೆರೆದಿರುತ್ತೀರಿ - ಆದರೂ ನೀವು ಸಾಮಾನ್ಯವಾಗಿ ಎರಡು ಕಣ್ಣುಗಳಿಂದ ನೋಡುವಂತೆ ನೋಡದೆ, ನಿಮ್ಮ ಮೂರನೇ ಕಣ್ಣಿನಿಂದಲೇ ನೋಡಲು ಪ್ರಯತ್ನಿಸಿರಿ! ನಿಮ್ಮ ಮೂರನೇ ಕಣ್ಣಿನಿಂದ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರ ಮೂರನೇ ಕಣ್ಣನ್ನೇ ಗಾಢವಾಗಿ ವೀಕ್ಷಿಸಿರಿ.

ಕಣ್ಣುಗಳನ್ನು ಮಿಟುಕಿಸದಂತೆ ಇರಲು ಪ್ರಯತ್ರಿಸಿರಿ. ಮೊದಮೊದಲು ಸ್ವಲ್ಪ ತೊಂದರೆಯಾಗಬಹುದು. ಕಣ್ಣುಗಳು ಉರಿಯಬಹುದು, ಕಣ್ಣಿನಲ್ಲಿ ನೀರು ಬರಬಹುದು. ಆಗಲಿ ಬಿಡಿ. ಇದೆಲ್ಲಾ ಶುದ್ದೀಕರಿಸುವ ಕ್ರಿಯೆಯ ಒಂದು ಭಾಗ. ಆ ಸಾಮಾನ್ಯವಾದ ಅನುಭವವನ್ನು ಈ ಧ್ಯಾನದ ವೇಳೆಯಲ್ಲಿ ಪಡೆಯಲು ಸಿದ್ದವಿರಿ. ಹಿಂದೆ ಇಲ್ಲಿನವರೆಗೂ ನಿಮ್ಮ ಆಜ್ಞಾಚಕ್ರವನ್ನು ಸಕ್ರಿಯ ಗೊಳಿಸಿರುವುದಿಲ್ಲ.ಆಜ್ಞಾಚಕ್ರವನ್ನು ತೆರೆಯುವುದು ಅಂದರೆ ನಿಮಗೆ ಒಂದು ಹೊಸ ಕ್ಷೇತ್ರದ ಅನುಭವವೇ ದೊರಕಿದಂತೆ. ನೀವು ನಿಮ್ಮ ಇಷ್ಟದೇವತೆಗನ್ನು, ಗುರುಗಳನ್ನು ಕಾಣಬಹುದು ಅಥವಾ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರ ರೂಪವು ಮಾಯವಾಗಿ ಒಂದು ಬೆಳಕಿನ ಕಿರಣವಾಗಿ, ಪ್ರಭೆಯಾಗಿ ಪರಿವರ್ತಿಸಬಹುದು. ಕೆಲವು ವೇಳೆ ಆ ರೂಪ ಅಥವಾ ಚಿತ್ರವಿರುವ ಸ್ಥಳದಲ್ಲಿ ಪೂರ್ಣವಾಗಿ ಏನೂ ಇಲ್ಲದಿರುವಿಕೆಯನ್ನು ನೋಡ ಬಹುದು.

ಈ ಸಂದರ್ಭದಲ್ಲಿ ಭಯಪಡಬೇಡಿ ಅಥವಾ ಸ್ಪಷ್ಟತೆಯನ್ನು ಕಳೆದುಕೊಳ್ಳಬೇಡಿ. ನೀವು ವಶೀಕರಿಸಲ್ಪಡುತಿಲ್ಲ! ಸರಿಯಾಗಿ ಹೇಳಬೇಕೆಂದರೆ, ಈಗ ನೀವು ವಶೀಕರಣದಿಂದ ವಿಮುಕ್ತರಾಗುತಿದ್ದೀರಿ. ಈಗ ನಿಮ್ಮ ದೈವೀಪ್ರಜ್ಞೆಯು ಎಚ್ಚರಗೊಂಡಿದೆ. ನೀವು ಕೇವಲ ಜ್ಯೋತಿಯನ್ನೋ, ಶೂನ್ಯತ್ವವನ್ನೋ ವೀಕ್ಷಿಸಿದ್ದರೆ, ಅದು, ನೀವು ಧ್ಯಾನವನ್ನು ಅತಿ ಪ್ರಾಮಾಣಿಕವಾಗಿ ಮಾಡಿದ್ದೀರೆಂಬ ಕುರುಹು. ಏಕೆಂದರೆ ಅದೇ ನಮ್ಮ ಸ್ವಾಭಾವಿಕ ಸತ್ಯ. ನಾವೆಲ್ಲರೂ ಚೈತನ್ಯವಲ್ಲದೆ ಮತ್ತೇನೂ ಅಲ್ಲ. ನಮ್ಮದೆಂದು ತಿಳಿದುಕೊಂಡಿರುವ ಅನುಭವಿಸುತ್ತಿರುವ ಈ ಭೌತಿಕ ದೇಹ ಮತ್ತು ನಮ್ಮ ಸುತ್ತಲೂ ಇರುವ ಭೌತಿಕ ಅಸ್ತಿತ್ವವೆಲ್ಲವೂ ಕೇವಲ ಮಾಯೆಯೇ ಆಗಿದೆ.

ಅದಕ್ಕಾಗಿಯೇ ಈ ಈ ಆಜ್ಞಾಚಕ್ರವು ''ಮಾಯಾಹರಣ'' ಎನಿಸಿಕೊಂಡಿದೆ (ಮಾಯಾ ಲಯಕಾರಕ).

ದಿನ 7

ಸಹಸ್ರಾರ ಧ್ಯಾನ (ಪ್ರಾರ್ಥನಾ ರೂಪದಲ್ಲಿ ಕೃತಜ್ಞತೆ)

ಗುಣಪಡಿಸುವ ಚಕ್ರ : ಸಹಸ್ರಾರ ಚಕ್ರವಿರುವ ಸ್ಥಳ : ತಲೆಯ ಮೇಲ್ಬಾಗ (ನೆತ್ತಿ) ಚಕ್ರವು ಬಂಧಿಸಲ್ಪಡುವುದು : ಅತೃಪ್ತಿಯಿಂದ ಚಕ್ರದ ಬಂಧನ ಬಿಡುಗಡೆ : ಕೃತಜ್ಞತೆ ಮತ್ತು ಆನಂದ ಧ್ಯಾನ ತಂತ್ರ ಬಂದಿರುವುದು : ಸೂಫಿಇಸಮ್ ಕಾಲಾವಧಿ : 30 ನಿಮಿಷಗಳು

ಸಹಸ್ರಾರ ಚಕ್ರಧ್ಯಾನವು ಅತ್ಯಂತ ಸುಲಭಸಾಧ್ಯವಾದ ಧ್ಯಾನತಂತ್ರ.

ಜೀವನದಲ್ಲಿ ನಾವು ಪಡೆದಿರುವ ಸರ್ವಸ್ವಕ್ಕೂ ಮತ್ತು ಪ್ರಕೃತಿಯ ಸಕಲ ಸೌಲಭ್ಯಗಳು ಇರುವುದು ನಮಗಾಗಿಯೇ ಎಂಬ ಧೋರಣೆಯಿಂದ ಇಲ್ಲಿನವರೆಗೂ ಏನೇನನ್ನು ಪಡೆದಿದ್ದೇವೆಯೋ, ಇವೆಲ್ಲಾ ಕಾರಣಕ್ಕಾಗಿ ನಾವು ಈ ಅಸ್ತಿತ್ವಕ್ಕೆ ಕೃತಜ್ಞತೆಯನ್ನು ಅರ್ಪಿಸುವ, ಪರಿಶ್ರಮವೇ ಇಲ್ಲದ ಸುಲಭ ಪ್ರಕ್ರಿಯೆಯನ್ನು ಒಳಗೊಂಡಿರುವ ಈ ತಂತ್ರವೇ ಸಹಸ್ರಾರ ಧ್ಯಾನ ತಂತ್ರ. ಈ ತಂತ್ರವು ಕೃತ್ರಿಮವಾಗಿ, ಸರಳವಾಗಿ ಕಂಡರೂ ಸಹ ಇದು ನಮ್ಮ ಎಚ್ಚರದ ಹಾಗೂ ಆಂತರಿಕ ಸುಪ್ತ ಪ್ರಜ್ಞೆಯ ಮೇಲೆ ಅಗಾಧವಾದ ಪರಿಣಾಮವನ್ನುಂಟು ಮಾಡುತದೆ.

ಸಹಸ್ರಾರ ಚಕ್ರಕ್ಕೆ ಸೂಚನೆಗಳು

ನೀವು ASP ಸಹಸ್ರಾರಕ್ಕಾಗಿಯೇ ರಚಿಸಿರುವ ಸಂಗೀತವನ್ನು ಆಲಿಸಿರಿ. ಇಲ್ಲವಾದರೆ, ಸಮಾಧಾನಿಸುವಂತಹ, ನಿಮಗೆ ಹಿತವಾದ, ಸಂಗೀತವನ್ನು ಹಾಕಿಕೊಳ್ಳಿರಿ. ಆ ಸಂಗೀತವು ನಿಮ್ಮಿಂದಲೇ ಹರಿದು ಬರುತ್ತಾ ನಿಮ್ಮನ್ನು ಪ್ರಫುಲ್ಲಗೊಳಿಸಲು ಬಿಡಿ. ನಿಮಗೆ ನಿಂತಿರಬೇಕು ಎನಿಸಿದರೆ ಎದ್ದು ನಿಂತು, ಸಂಗೀತಕ್ಕೆ ಅನುಗುಣವಾಗಿ ತೂಗಾಡುತಾ ನರ್ತಿಸಿರಿ. ಕುಳಿತುಕೊಂಡೇ ಇರಬೇಕೆನಿಸಿದರೆ ಹಾಗೆಯೇ ಮಾಡಿ. ಆದರೆ, ಆ ಸಂಗೀತವು ನಿಮ್ಮ ಒಂದು ಭಾಗವೇ ಆಗಲು ಬಿಡಿ. ಅದು ನಿಮ್ಮ ಹೊಂದುವವರಾಗಿರಿ. ನಿಮಗೆ ಪ್ರೀತಿಪಾತ್ರರಾದ ಯಾರನ್ನಾದರೂ ಸ್ಮರಿಸಿಕೊಳ್ಳಿ - ದೇವರು, ನಿಮ್ಮ ಅಚ್ಚುಮೆಚ್ಚಿನ ಸಾಧುಸಂತರು, ಇಷ್ಟದೇವತೆ. ರೂಪವು ಮುಖ್ಯವಲ್ಲ. ಆದರೆ ಅಸ್ತಿತ್ವಕ್ಕೆ, ನಿಮಗೆ ಜೀವನವೆಂಬ ಈ ಉಡುಗೊರೆಯನ್ನು ದಯಪಾಲಿಸಿದುದಕ್ಕಾಗಿ ನಿಮ್ಮ ಕೃತಜ್ಞತೆಗಳನ್ನು ಅರ್ಪಿಸಿರಿ.

ಈ ಜೀವನವೇ ಅತ್ಯುತಮವಾದ ಅಸ್ತಿತ್ವದಿಂದ ಕೊಡಲ್ಪಟ್ಟ ಮಹತ್ತರವಾದ ಕೊಡುಗೆ.

ನಾವು ಏನನ್ನಾದರೂ ಮಾಡಿದ್ದೇವೆಯೋ? ಇಲ್ಲ! ಆದ್ದರಿಂದ ಬದುಕಿರುವುದೊಂದೇ ನಾವು ಕೃತಜ್ಞತೆ ಅರ್ಪಿಸಲು ಸಾಕಷ್ಟು ಕಾರಣವಾಗಿದೆ. ನೀವು ಅಸ್ತಿತ್ವಕ್ಕೆ ಕೃತಜ್ಞತೆಗಳನ್ನು ಪರಿಸ್ಥಿತಿಯಲ್ಲಿರಲು ಸಹಾಯ ಮಾಡಿದ, ನೆರವಾದ ಸಕಲ ಜನಗಳನ್ನೂ ಸ್ಮರಿಸಿಕೊಳ್ಳಿರಿ.

ನಿಮ್ಮ ಜನ್ಮದಾತರಾದ ನಿಮ್ಮ ತಾಯಿತಂದೆಯವರಿಂದ ಪ್ರಾರಂಭಿಸಿ. ನಿಮ್ಮ ಹೃದಯಪೂರ್ವಕ ಸಂಪೂರ್ಣ ಕೃತಜ್ಞತೆಯನ್ನು ಅರ್ಪಿಸಿರಿ.

ನೀವು ಮಾಡಿದ ತಪ್ಪುಗಳಿಗಾಗಿ ಅವರಿಂದ ಕ್ಷಮೆಯನ್ನು ಯಾಚಿಸಿರಿ. ಅದೇ ರೀತಿ, ಅವರು ಯಾವ ರೀತಿಯಲ್ಲಾದರೂ ಮನ ನೋಯಿಸಿದ್ದಲ್ಲಿ ನೀವು ಕ್ಷಮಿಸಿರಿ.

ಪೂರ್ತಿಯಾಗಿ ಕ್ಷಮಿಸಿ ಮರೆತು ಬಿಡಿ. ಕೇವಲ ಕೃತಜ್ಞತೆಯನ್ನು ಮಾತ್ರ ಅನುಭವಿಸಿರಿ.

ಜೀವನದಲ್ಲಿ ನಿಮಗೆ ಸಹಾಯ ಮಾಡಿದ ಪ್ರತಿಯೊಬ್ಬರನ್ನೂ ಜ್ಞಾಪಿಸಿಕೊಳ್ಳಿರಿ -ಆಸ್ಪತ್ರೆಯಲ್ಲಿ ನೀವು ಹುಟ್ಟಿದಾಗ ಇದ್ದ ವೈದ್ಯರು, ನಿಮ್ಮ ಸ್ಕೂಲಿನ, ಕಾಲೇಜಿನ ಉಪಾಧ್ಯಾಯರುಗಳು, ಉಪನ್ಯಾಸಕರು, ನಿಮ್ಮ ಸ್ನೇಹಿತರು, ಬಂಧುಗಳು -ಹೀಗೆ ಎಲ್ಲರನ್ನೂ ಸ್ಮರಿಸಿಕೊಳ್ಳಿರಿ. ಅವರೆಲ್ಲರಿಗೂ ನಿಮ್ಮ ಕೃತಜ್ಞತೆಯನ್ನು ಅರ್ಪಿಸಿರಿ.

ನಿಮಗೆ ಸಹಾಯ ಮಾಡಿದ ಹೊರಗಿನವರು, ನಿಮಗೆ ಗೊತಿಲ್ಲದವರನ್ನೂ ಸಹ, ನಿಮಗೆ ಆಹಾರವನ್ನು ಬೆಳೆದುಕೊಡುವ ರೈತರು, ನಿಮ್ಮ ಬಟ್ಟೆಗಳನ್ನು ನೇಯುವ ನೇಯ್ಗೆಯವರು. ಇವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿರಿ.

ನಿಮ್ಮ ಜೀವನದಲ್ಲಿ ಪಾತ್ರ ವಹಿಸಿ, ನಿಮಗೆ ಪಾಠ ಕಲಿಸಿದ ನಿಮ್ಮ ಶತ್ರುಗಳಿಗೂ ಸಹ ಧನ್ಯವಾದಗಳನ್ನು ಸಲ್ಲಿಸಿರಿ.

ಕೋಪವನ್ನು ತ್ಯಜಿಸಿ ಬಿಡಿ. ಶತ್ರುತ್ವವನ್ನು ಮರೆತು ಬಿಡಿ. ಕ್ಷಮಿಸಿ ಮತ್ತು ಕ್ಷಮೆಯನ್ನು ಬೇಡಿರಿ, ಇವೆಲ್ಲವನ್ನೂ ಪೂರ್ತಿ ಪ್ರಾಮಾಣಿಕತೆಯಿಂದ, ಹೃದಯಪೂರ್ವಕವಾಗಿ ಮಾಡಿ!

ಪಕೃತಿಗೆ ಧನ್ಯವಾದಗಳನ್ನು ಅರ್ಪಿಸಿದ್ದೀರಾ?

ಸೂರ್ಯನು ಪ್ರತಿದಿನ ಬೆಳಿಗ್ಗೆ ನಿಮಗೆ ಶಾಖವನ್ನು ನೀಡಿದ ಕಾರಣಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದೀರಾ?

ಏಳು ದಿವಸದ ಚಕ್ರ ಪ್ರಕ್ರಿಯೆ

ನೀವು ಕುಡಿಯುತಿರುವ ನೀರಿಗಾಗಿ ಧನ್ಯವಾದಗಳನ್ನು ಸಲ್ಲಿಸಿದ್ದೀರಾ? ನಾವು ಕೃತಜ್ಞತೆ ಅರ್ಪಿಸುವುದರಲ್ಲಿ ಎಷ್ಟೋ ಸಂಗತಿಗಳನ್ನು ಮರೆತ್ತಿದ್ದೇವೆ! ಈಗ ಆ ಕೆಲಸ ಮಾಡಬಹುದು.

ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಿರಿ.

ನೀವು ಅಸ್ತಿತ್ವದ ಎಲ್ಲಕ್ಕೂ ಧನ್ಯವಾದಗಳನ್ನು ಸಲ್ಲಿಸುವಾಗ, ಈ ಧನ್ಯವಾದದ ಸಂತೋಷದ ಬಗ್ಗೆ ನಮ್ಮನ್ನು ಎಚ್ಚರಿಸಿದ ಜ್ಞಾನಸಂಪನ್ನರಾದ ಗುರುಗಳನ್ನೂ ಜ್ಞಾಪಿಸಿಕೊಳ್ಳಿರಿ.

ತಲತಲಾಂತರದಿಂದ ನಿಮ್ಮನ್ನು ಎಚ್ಚರಿಸಿ ಆನಂದದತ್ತ ಕೊಂಡೊಯ್ದು ಉದ್ದರಿಸಿ ಆನಂದವನ್ನು ಕರುಣಿಸುವ ಉದ್ದಿಶ್ಯವೇ ಎಲ್ಲಾ ಜ್ಞಾನಿಬೋಧಕರುಗಳದ್ದಾಗಿತ್ತು. ಆದ್ದರಿಂದ ದಾರಿಯೆಂದರೆ - ನೀವು ಸಹಜವಾಗಿ ಆನಂದಭರಿತರಾಗಿರಿ.

ನಿಮ್ಮ ಕೃತಜ್ಞತೆಗಳನ್ನು ನಿಮ್ಮ ಸದ್ಗುರುವಿಗೆ, ಬೋಧಕ ಗುರುವಿಗೆ ಅರ್ಪಿಸಿರಿ.

ಸಂಗೀತವು ನಿಂತೊಡನೆಯೇ, ಕೆಲಹೊತ್ತು ಮೌನವಾಗಿ ಹಾಗೆಯೇ ಉಳಿಯಿರಿ.

ಕೃತಜ್ಞತಾಭಾವವನ್ನರ್ಪಿಸುವ ಹಾಗೂ ಆನಂದಭರಿತವಾದ ಆ ಭಾವಪೂರಿತ ಸ್ಥಿತಿಯಲ್ಲಿ ಹಾಗೆಯೇ ಉಳಿಯಿರಿ. ಸಾಧ್ಯವಾದಷ್ಟು ಹೊತ್ತು ಮೌನವಾಗಿರಿ. ನಿಮ್ಮಗಮನವನ್ನು ಒಳಮುಖವಾಗಿಸಿ, ಆಂತರ್ಯದ ಶಾಂತಿ ಮತ್ತು ತೃಪ್ತಿ ಇವುಗಳನ್ನು ಅನುಭವಿಸಿ ಆನಂದಿಸಿರಿ.

ಸಹಸ್ರಾರ ಧ್ಯಾನವನ್ನು 'ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ' ಮಾಡುವ ಧ್ಯಾನವನ್ನಾಗಿ ಕೃತಜ್ಞತಾಭಾವದ ಪ್ರವೃತ್ತಿಯನ್ನು ಸಕಾರಾತ್ಮಕ ಭಾವನೆಯನ್ನೂ ರೂಢಿಸಿಕೊಂಡರೆ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ವಿಚಾರವಾಗಿ ಅತ್ಯದ್ಭುತವಾದದ್ದನ್ನೂ, ಆಶ್ಚರ್ಯಕರವಾದದ್ದನ್ನೂ ಸಾಧಿಸಬಹುದು.

ಕೃತಜ್ಞತೆ ಅರ್ಜಿಸುವುದರಲ್ಲಿ ಎ

ದಾರಿಯಿಂದರೆ - ನೀವು ಸಹಜವ

ನಿಮಗಮನವನ್ನು ಒಳಮುಖವಾಗಿಸಿ, ಇವುಗಳನ್ನು ಅನುಭವಿಸಿ ಆನಂದಿಸಿರಿ

ನೀವು ಅಸ್ತಿತ್ವದ ಎಲ್ಲಕ್ಕೂ ಧನ್ಯವಾದಗಳನ್ನು ಸಂತೋಷದ ಬಗ್ಗೆ ನಮ್ಮನ್ನು ಎಚ್ಚರಿಸಿದ ಜ್ಞಾಪಿಸಿಕೊಳ್ಳಿರಿ.

''ಆಧ್ಯಾತ್ಮ ರೂಪಾರ್ಥವುಳ್ಳವನೊಬ್ಬನ ಮನಸ್ಸು''

(ನರಮಂಡಲ ವ್ಯವಸ್ಥೆಯನ್ನೇ ವಿರೋಧಿಸಿದ ಸ್ವಾಮೀಜಿಯವರ ವಿಜ್ಞಾನವನ್ನು ಅಧ್ಯಯನ ಮಾಡಿದ ಅಮೇರಿಕದ ನರರೋಗ ಶಾಸ್ತಜ್ಞರ ಸಂಶೋಧನಾ ವರದಿ)

ತಮಾ ರ ಧ್ರಾನವನ್ನು 'ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ' ಮಾಡುವ ದ್ದಾನವನ್ನಾಗಿ ಕೃತಜ್ಞತಾಭಾವದ ಪ್ರವೃತ್ತಿಯನ್ನು ಸಕಾರಾತ್ಮಕ ಭಾವನೆಯನ್ನೂ ರೂಢಿಸಿಕೊಂಡರೆ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ವಿಚಾರವಾಗಿ ಅತ್ಯದ್ಭು

ಕ್ಷತಜ್ಞತಾಭಾವವನ್ನರ್ಪಿಸುವ ಹಾಗೂ *ಆನಂದಭರಿತವಾದ ಆ

ಒಂದೇ ವಿಶ್ವಮೂಲದಿಂದ ಎಲ್ಲ ಪ್ರಾಣಗಳೂ ಉದಯಿಸಿವೆಯೇ? ಆಳವಾಗಿ ನಾವೆಲ್ಲಾ ಪರಸ್ಪರ ಸಂಪರ್ಕ ಹೊಂದಿದ್ದೇವೆಯೇ? ಕೆಮ ಮನಸ್ಸೇ ಇಲ್ಲದಂತಹ ಒಂದು ಸ್ಥಿತಿ ನಿಜವಾಗಿಯೂ ಉಂಟೇ?

ಲಾಲಿನವ ಜಾತಿಗೆ ನಿರಂತರವಾಗಿ ಮಹತ್ವವುಳ್ಳ ಈ ವಿವಾದದ ಬಗ್ಗೆ ಶತಶತಮಾನಗಳಿಂದಲೂ ವಿಜ್ಞಾನ ಹಾಗೂ ಆಧ್ಯಾತ್ಮಿಕತೆಗಳು ಸಂಘರ್ಷ ನಡೆಸುತ್ತಲೇ ಇವೆ.

ಮನಸ್ಸೇ ಇಲ್ಲದ ಸ್ಥಿತಿ ಎಂಬುದು ''ನಿಜವಾದ'' ವಿದ್ಯಮಾನ ಮತ್ತು ನಾವೆಲ್ವರೂ ಸಾಧಿಸಲೇ ಬೇಕಾದ ಗುರಿ ಅದೇ ಎಂದು ಆಧ್ಯಾತ್ಮಿಕ ಗುರುಗಳು ಹೇಳಿದಾಗ್ಯೂ, ಗಟ್ಟಿ ಪುರಾವೆ ಇಲ್ಲದೆ ಅದನ್ನು ಒಪ್ಪಿಕೊಳ್ಳಲು ವಿಜ್ಞಾನಿಗಳು ಸ್ವಾಭಾವಿಕವಾಗಿ ಸಿದ್ದರಿಲ್ಲ.

ಆಧ್ಯಾತ್ಮಿಕ ಗುರುಗಳೂ, ನಾವೆಲ್ಲಾ ಹಗಲುಗನಸು ಕಾಣುವಂಥ ಅತೀಂದ್ರಿಯ ಶಕ್ತಿಗಳಿಂದ ಹೇಗೆ ಸಂಪನ್ವರಾಗಿರುತ್ತಾರೆ ಎಂಬುದಕ್ಕೆ ಇದೇ ಮೊದಲ ಬಾರಿಗೆ ನಮ್ಮ ಶತಮಾನದಲ್ಲಿ ವಿಜ್ಞಾನಿಗಳಿಗೆ ಗಟ್ಟಿಯಾದ ಪುರಾವೆ ಸಿಕ್ಕಿದೆ.

ಈ ವರ್ಷದ (2004) ಮಾರ್ಚ್‌ನಲ್ಲಿ ಈ ಮಹತ್ವದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಓಕ್ಲಾಹಾಮ (ಅಮೇರಿಕಾ)ದ ಖ್ಯಾತ ನರರೋಗ ಶಾಸ್ತಜ್ಞರ ತಂಡ, THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜೀಯವರ ನರಮಂಡಲದ ವ್ಯವಸ್ಥೆಯನ್ನೇ ವಿರೋಧಿಸುವ ವಿಜ್ಞಾನದ ಬಗ್ಗೆ ವ್ಯಾಪಕವಾದ ಅಧ್ಯಯನ ನಡೆಸಿತು.

ಆ ತಂಡದ ಪೂರ್ವಭಾವೀ ವರದಿ ಇಲ್ಲಿ ನೀಡಲಾಗಿದ್ದು, ಅದು ಜಾಗತಿಕ ವೈದ್ಯಕೀಯ ಸಮುದಾಯಕ್ಕೆ ತುಂಬಾ ಪ್ರಸ್ತುತವಾಗಿದೆ. ಮೌನವಾಗಿ ಇದೇ ಪ್ರಶ್ನೆಗಳನ್ನು ಕೇಳುತ್ತಿರುವ ಪ್ರತಿಯೊಬ್ಬರಿಗೂ ನಂಬಿಯೂ ನಂಬದ, ತಿಳಿದೂ ತಿಳಿಯದ, ದಾರಿಯೇ ಅಲ್ಲದ ಜೀವನ ದಾರಿಯಲ್ಲಿ ಸಾಗುತ್ತಿರುವ ಸಕಲ ಮಾನವ ಕುಲಕ್ಕೂ, ಸಹ ಸಾಹಸಿಗರ ಪ್ರಶ್ನೆಗಳಿಗೂ ಅದು ಉತ್ತರ ನೀಡುತ್ತದೆ.

''ಆಧ್ಯಾತ್ತ ರೂಪಾರ್ಥವುಳ್ಳವನೊಬ್ಬನ ಮನಸು'' ಆರ್. ಮುರಳೀಕಷ್ಣ ಎಂ.ಡಿ. ಸಿ.ಓ.ಓ., ಅಧ್ಯಕರು ಇಂಟೆಗ್ರಿಸ್ ಮೆಂಟಲ್ ಹೆಲ್ ಅಂಡ್ ಜೇಮ್ಸ್ ಎಲ್. ಹಾಲ್, ಜ್ಯೂನಿಯರ್ ಸೆಂಟರ್ ಫಾರ್ ಮೈಂಡ್, ಬಾಡಿ ಅಂಡ್ ಸಿರಿಟ್ ರವರಿಂದ ''ಒಂದು ಮನಸ್ಸು - ಪ್ರಕೃತಿ'' ಆಯ್ದ ಪುಟಗಳಿಂದ… ಬುದ್ದಿ - ಪ್ರಕೃತಿ

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಒಬ್ಬ ತಾಗುವಂಥ ಕಪ್ಪಾದ ಕೂದಲಿನ ಆರೋಗ್ಯವಂತ ತರುಣ. ಚೆಲುವ ಮತ್ತು ಸುಸಂಸ್ಕೃತ, ಮುಕ್ತಮನಸ್ಸಿನ ರೂಪದ ಸಂಪನ್ನ. ಜಿಜ್ಞಾಸುವಾದ ಈತ ನೋಡಲು ಅಮೇರಿಕಾದ ಕಾಲೇಜಿನ ಬೇರೆ ಯಾವುದೇ ಸಾಮಾನ್ಯ ವಿದ್ಯಾರ್ಥಿಯಂತೆ ಕಾಣುತಾರೆ.

ಆದರೆ, ಅಮೇರಿಕಾದ ಸಾಮಾನ್ಯ ಕಾಲೇಜು ವಿದ್ಯಾರ್ಥಿಗಳು ಕಾವಿ ಧರಿಸುವುದಿಲ್ಲ, ಜ್ಞಾನೋದಯವಾಗಿರುವುದಿಲ್ಲ. ಅವರನ್ನು ಯಾರೂ ಗುರು, ಮಾರ್ಗದರ್ಶಕ ಆಧ್ಯಾತ್ಮ ರೂಪಕ ಎಂದು ವಿಶ್ವದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಜನ ಪರಿಗಣೆಸುವುದಿಲ್ಲ ಎಂಬುದೇ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜೀಗೂ, ಅಮೇರಿಕಾದ ಕಾಲೇಜಿನ ಸಾಮಾನ್ಯ ವಿದ್ಯಾರ್ಥಿಗೂ ಇರುವ ವ್ಯತ್ಯಾಸ.

ಆಧ್ಯಾತ್ಮ ರೂಪಾರ್ಥವುಳ್ಳವನೊಬ್ಬನ ಮನಸು

ಒಬ್ಬ ಆಧ್ಯಾತ್ಮಿಕ ರೂಪಾಂತರನೇ? ಅವರೇ ಪ್ರಸಿದ್ದರಾಗಿರುವಂತೆ ಈ ಪದ ''THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜಿ''ಗೆ ಸೂಕವಲ್ಲ ಎಂದೇನೂ ಅಲ್ಲ. ಆಧ್ಯಾತ್ಮಿಕ ರೂಪಾಂತರರ ಜನಪ್ರಿಯ ಸಂಸ್ಕೃತಿಗಳು ನಮಗೆ ತಿಳಿಸುವಂತೆ, ಅವರಿಗೆ ದೇವರೊಡನೆ ನೇರ ಸಂಪರ್ಕವಿರುತ್ತದೆ. ಅಳೆಯಲಾಗದ ಅಥವಾ ಅರಿಯಲಾಗದ ಹಾದಿಯಲ್ಲಿ, ಅಂತಿಮ ಸತ್ಯಗಳ ಅಥವಾ ವಾಸವಿಕತೆಗಳಿಗೆ ಪ್ರವೇಶ ಅವರಿಗೆ ಲಭ್ಯ ಎಂಬುದು ಅಭಿಪ್ರಾಯವಾಗಿದೆ. ಅವರನ್ನು ಚಿತ್ರೀಕರಿಸಿದಲ್ಲಿ, ನೀವು ಬಹುಶಃ ನಮ್ಮಲ್ಲಿ ಯಾರೂ ಹೊಂದಿರದಂತಹ, ಯಾರೋ ಪರಮಾನಂದ ಭರಿತ, ಯಾರೋ ಗಂಭೀರ ಚಿಂತನೆಗಳ ಮತ್ತು ಅಂತರ್ ದೃಷ್ಟಿಯ ಕೊಡುಗೆಗಳುಳ್ಳ ಚಿತ್ರವೊಂದನ್ನು ಚಿತ್ತ,ಸುತ್ತೀರಿ. ಅವರ ಬರಿಯ ಉಪಸ್ಥಿತಿ ಒಂದೇ ಸಾಕು, ಬೇರೆಯವರಿಗೆ ಶಾಂತಿ ಮತ್ತು ಉಪಶಮನತೆಯನ್ನು ಭಾವಿಸಲಾಗಿದೆ.

ದಕ್ಷಿಣ ಭಾರದಿಂದ ಬಂದಿರುವ, 27 ವರ್ಷದ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜಿಯವರ ಸಮರ್ಪಕ ಚಿತ್ರಣ ಇದು. ವೈದ್ಯಕೀಯ ಕಾಯಿಲೆಗಳಿರುವ ಸಹಸ್ರಾರು ಜನ ಪರಿಹಾರಕ್ಕಾಗಿ ಪ್ರತಿವರ್ಷ ಅವರ ಬಳಿಗೆ ಬರುತ್ತಾರೆ. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜಿಯವರ ಹಿನ್ನೆಲೆ ಕೂಡ ಅವರನ್ನು ಅನುಭಾವಿಯಾಗಿ ಮಾಡಿದೆ. ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿ, ಭಾರದಾದ್ಯಂತ ಇರುವ ಆಶ್ರಮಗಳಿಗೆ ಭೇಟಿ ಇತ್ತು, ತತ್ವಶಾಸ್ತ್ರದಲ್ಲಿ ಮಿಂದು, ವ್ಯಾಪಕವಾಗಿ ಅಧ್ಯಯನ ಮಾಡಿರುವ ಅವರು ಧ್ಯಾನದ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ.

ಪ್ರಪಂಚ ಪರ್ಯಟನೆಯ ಮಾರ್ಗದಲ್ಲಿ ಅವರು ಇತೀಚೆಗೆ ಓಕ್ಲಾಹಾಮ ನಗರಕ್ಕೆ ಬಂದಿದ್ದಾಗ, ಧ್ಯಾನ ಮಾಡುತ್ತಿದ್ದಾಗ ಅವರ ಮೆದುಳಿನ ಸ್ಥಿತಿಯನ್ನು ಅಧ್ಯಯನ ಮಾಡಲು ನಾನು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಬಹುದೇ ಎಂದು ಅನುಮತಿ ಕೋರಿದೆ. ಆ ಧ್ಯಾನದ ಸ್ಥಿತಿಯಲ್ಲಿ ಏನಾಗುತ್ತದೆ ಎಂಬುದನ್ನು

ಅರಿಯುವುದು, ಅಳೆಯುವುದು ಮತ್ತು ಅದರ ರಹಸ್ಯವನ್ನು ಭೇದಿಸುವುದೇ ನನ್ನ ಗುರಿಯಾಗಿತ್ತು. ಧ್ಯಾನಕ್ಕೆ ಒಂದು ವೈಜ್ಞಾನಿಕ ನೆಲೆ ಎಂದು ಭಾವಿಸಿರುವ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂತೋಷವಾಗಿಯೇ ಒಪ್ಪಿದರು.

ಓಕ್ಲಾ ಹಾಮಾ ನಗರದ ಪ್ರಖ್ಯಾತರಾದ, ಅತ್ಯಂತ ಅನುಭವಿಗಳಾದ ವೈದ್ಯರೂ, ನರರೋಗ ಶಾಸ್ತಜ್ಞರೂ, ಸಂಶೋಧಕರೂ ಆದ ಜಿಮ್ ಥಾರ್ಪೆ ಪುನರ್ವಸತಿ ಕೇಂದ್ರದ ವೈದ್ಯರುಗಳಾದ ಫಾರ್ಡಿಸ್, ರೂವೇ, ಹಿಗ್ಗಿನ್ಸ್ ಹಾಗೂ ಪಿ.ಇ.ಟಿ. ಕೇಂದ್ರದ ಡಾ। ಒಳಪಡಿಸಿದರು. ಈ ವೈದ್ಯರುಗಳು ರೋಗಿಗಳ ಮೇಲೆ ಸಾಮಾನ್ಯವಾಗಿ ಪ್ರಯೋಗಿಸುವ ತಂತ್ರಗಳನ್ನು ಬಳಸಿದರು. ತಮ್ಮ ತಂತ್ರಜ್ಞಾನದಿಂದ ಬಂದ ಪ್ರತಿಬಿಂಬಗಳನ್ನು ಗಮನಿಸಿದಾಗ ಅವರಿಗೆ ಯಾವುದು ಸಾಮಾನ್ಯ, ಯಾವುದು ಅಸಾಮಾನ್ಯ ಎಂಬುದು ಗೊತಾಯಿತು.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಪರೀಕ್ಷೆಯ ಫಲಿತಾಂಶ? ನಿಜಕ್ಕೂ ಸಾಮಾನ್ಯವಾಗಿರಲಿಲ್ಲ! ಮೆದುಳಿನ ಚಟುವಟಿಕೆಯನ್ನು ಪ್ರತಿಬಿಂಬಿಸುವಿಕೆ, ಪಿ.ಇ.ಟಿ. (ಪೊಸಿಟ್ರಾನ್ ಎಮಿಶನ್ ಟೋಮೋಗ್ರಾಫಿ) ಉಪಕರಣದಿಂದ ಮೊದಲಿಗೆ ನಾವು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜಿಯವರ ಮೆದುಳನ್ನು ನೋಡಿದೆವು.

ಕ್ಷ-ಕಿರಣಗಳು, ಸಿ.ಟಿ. ಸ್ಕ್ಯಾನ್‌ಗಳು ಅಥವಾ ಎಂ.ಆರ್.ಐ. ನಂತಹ ದೇಹ ರಚನೆ ಅಥವಾ ಶರೀರ ರಚನೆಯ ಪ್ರತಿಬಿಂಬಗಳನ್ನು, ಸಾಂಪ್ರದಾಯಿಕ ರೋಗ ಲಕ್ಷಣವನ್ನು ಮೂಡಿಸುವಂತಹ ತಾಂತ್ರಿಕತೆಗಳಲ್ಲದೆ, ಪಿ.ಇ.ಟ. ಎಂಬುದು, ಮೆದುಳಿನ ಮಾರ್ಪಡಿಸುವ ಜೀವಕೋಶಗಳ ಪ್ರತಿಬಿಂಬಗಳನ್ನು ಮೂಡಿಸುತ್ತದೆ. ವಿಕಿರಣದ ಮೂಲಕ ಕೆಲಸ ಮಾಡುವ ಪಿ.ಇ.ಟಿ. ಟ್ರೇಸರ್ ಗೆ ಗ್ಲೂಕೋಸ್ ನಂತಹದ್ದನ್ನು ಸೇರಿಸಲಾಗುತ್ತದೆ.

ಆಮೇಲೆ ಆಹಾರವನ್ನು ಜೀವಿಯ ದೇಹ ಭಾಗವನ್ನಾಗಿ ಮಾರ್ಪಡಿಸುವ ಮೆದುಳಿನ ಚಟುವಟಿಕೆಯ ಪ್ರದೇಶಗಳನ್ನು, ಪಿ.ಇ.ಟ. ಸ್ಕ್ಯಾನರ್ ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಪ್ರತಿಬಿಂಬಿಸುತ್ತದೆ.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಪ್ರಕರಣದಲ್ಲಿ ಜಾಗೃತವಾಗಿ, ಪ್ರಜ್ಞಾಪೂರ್ವಕವಾಗಿ ಇರುವ ಧ್ಯಾನದ ಆರಂಭಿಕ ಹಂತ ಹಾಗೂ ಆಳವಾದ ಧ್ಯಾನದ ಹಂತಗಳಲ್ಲಿ ತುಂಬಾ ಸಕ್ರಿಯವಾಗಿರುವ ಮೆದುಳಿನ ಭಾಗಗಳನ್ನು ಗುರುತಿಸುವುದು ಔಷಧಿಯ ಉದ್ದೇಶವಾಗಿತು.

ಪಿ.ಇ.ಟಿ. ಸ್ಕ್ಯಾನ್ ಪರೀಕ್ಷೆಯ ಫಲಿತಾಂಶ ದಿಗ್ಭ್ರಮೆಗೊಳಿಸುವಂತಿತ್ತು. ಪ್ರಾರಂಭಿಸುತ್ತಿದ್ದಂತೆ ಧ್ಯಾನದ ಆರಂಭಿಕ ಹಂತದಲ್ಲೇ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೆದುಳಿನ ಮುಂಭಾಗದ ಚಟುವಟಿಕೆಗಳು ಗಮನಾರ್ಹವಾಗಿ ಹೆಚ್ಚಿದ್ದವು. ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಮಾನವನ ಮೆದುಳಿನ ಚಟುವಟಿಕೆ ಇರುವುದಕ್ಕಿಂತಲೂ ಹಲವಾರು ಪಟ್ಟು ಅದು ಹೆಚ್ಚಿತ್ತು. ಬುದ್ಧಿವಂತಿಕೆ, ಎಚ್ಚರಿಕೆ, ವಿವೇಕ, ತೀರ್ಮಾನಗಳ ಕಾರ್ಯಗಳೆಲ್ಲವೂ ಮುಂಭಾಗದ ಪ್ರದೇಶದಲ್ಲಿ ಸಂಬಂಧಿಸಿದ್ದು.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರನ್ನು ಆಳವಾದ ಧ್ಯಾನದ ಸ್ಥಿತಿಗೆ ಇಳಿಯುವಂತೆ ಕೋರಿದಾಗ ಇನ್ನೂ ಎರಡು ಗಮನಾರ್ಹವಾದ ಅಂಶಗಳು ಬೆಳಕಿಗೆ ಬಂದವು.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೆದುಳಿನ ಪ್ರಮುಖವಾದ ಅರ್ಧ ಗೋಳ, ಶೇ. 90 ರಷ್ಟು ಮುಚ್ಚಿಕೊಂಡುಬಿಟ್ಟತ್ತು. ಮೆದುಳು ಗಂಟುಮೂಟೆ ಕಟ್ಟಿಕೊಂಡು ವಿಶ್ರಾಂತಿಗೆ ತೆರಳಿದಂತಿತು. ಅದು ನೆಮ್ಮದಿಯಾಗಿ, ಅಚಲವಾಗಿ, ಸಂಪೂರ್ಣ ಶಾಂತ ವಾಗಿತ್ತು. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಸಂಕಲ್ಪ ಮಾತ್ರದಿಂದಲೇ ಅದನ್ನು ಸಾಧಿಸಿದ್ದರು. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜಿಯವರ ಆಳವಾದ ಧ್ಯಾನದ ಸ್ಥಿತಿಯ ಇನ್ನೊಂದು ವಿಸ್ಟಯಕಾರೀ ಅಂಶವೆಂದರೆ, ಮೆದುಳಿನ ಮುಂಭಾಗದ ಕೆಳಗಿನ ಭಾಗ ಗಮನಾರ್ಹವಾಗಿ

ಪ್ರಕಾಶಮಾನವಾಗಿತು. ಈ ''ಮೂರನೇ ಕಣ್ಣಿನ'' ನೆಲೆಗೆ ಹೊಂದುತ್ತದೆ.

ಮುಂಭಾಗದ ಪ್ರದೇಶದ ಕೆಳಗಿನ ಭಾಗ ಪ್ರಕಾಶಮಾನವಾಗಿದ್ದಾಗ, "ನೀವೇನು ಮಾಡುತ್ತಿದ್ದೀರಿ'' ಎಂದು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜಿಯವರನ್ನು ನಂತರ ನಾವು ಪ್ರಶ್ನಿಸಿದಾಗ ''ಮೂರನೇ ಕಣ್ಣನ್ನು ತೆರೆಯುತಿದ್ದೆ'' ಎಂಬ ಉತ್ತರ ಬಂತು.

ಸ್ಪಷ್ಟತೆ ಮತ್ತು ಶಾಂತಿಯ ಸ್ಥಾನವೆಂದೇ ತಿಳಿದಿರುವ ಮತ್ತು ವಿಶ್ವದ ಹಾಗೂ ಆಂತರಿಕ ಜ್ಞಾನ ಎರಡರೊಡನೆ ಸಂಬಂಧ ಹೊಂದಿರುವ, ''ಮೂರನೇ ಕಣ್ಣು'' ಇದನ್ನು ಆತ್ಮದ ಸ್ಥಾನವೆಂದೇ ಭಾವಿಸಲಾಗಿದೆ.

ಸೃಷ್ಟಿಯ ಅಥವಾ ಆತ್ಮದ ಚಮತ್ತಾರಗಳನ್ನು ಆಳವಾಗಿ ನೋಡಲು, ಆಳವಾದ ಧ್ಯಾನ, ದೈವದ ಸಂಗಡ ಸಂಪರ್ಕ ಸಾಧಿಸಲು ಕಾರಣವಾದ ಮೆದುಳಿನ ಭಾಗವನ್ನು ತೆರೆಯುವುದಕ್ಕೆ ಸಾಧ್ಯ ಎಂಬ ಸೂಚನೆ ನಮಗೆ ಕಾಣುತಿದೆಯೇ?

ಪಿ.ಇ.ಟಿ. ಸ್ಕ್ಯಾನ್ ಮೆದುಳಿನ "ಡಿ" ಸ್ಫಾಟ್ ಎಂದು ನಾನು ಕರೆಯುವುದನ್ನು ತೆರೆದು ತೋರಿಸಿತು. ''ಡಿ' ಸ್ಫಾಟ್‌ನಲ್ಲಿರುವ 'ಡಿ' ಅನ್ನು ನೀವು ಡಿಲೈಟ್ -ಸಂತೋಷ, ಡಿವೈನ್ - ದೈವಿಕ ಅಥವಾ ಡೋಪಾಮೈನ್ (ಈ ರಾಸಾಯನಿಕದ ಮುಖಾಂತರ ನಮ್ಮ ಶರೀರ ಸಂತೋಷವನ್ನು ಅನುಭವಿಸುತ್ತದೆ) - ಏನಾದರೂ ಅನ್ನಿ, ಧ್ಯಾನ ಅದನ್ನು ಪ್ರಚೋದಿಸುತ್ತದೆ.

ಮೆದುಳಿನ ತರಂಗಗಳನ್ನು ಅಳೆಯುವುದು:

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೆದುಳನ್ನು ನೋಡಲು ಉಪಯೋಗಿಸಿದ್ದು ಕ್ಯೂಇಇಜಿ ಪ್ರಯೋಗ ಎಂಬುದನ್ನು. ಕ್ವಾಂಟಿಟೇಟಿವ್ ಎಲೆಕ್ಟೋ ಎನ್ಫ್‌ಫಲೋಗ್ರಫಿ ಅಥವಾ ಕ್ಯೂಇಇಜಿ. ಇದು ಮೆದುಳಿನ ತರಂಗಗಳಲ್ಲಿರುವ ವಿದ್ಯುತ್ ಮಾದರಿಗಳನ್ನು ಅಳೆಯುತ್ತದೆ. ಈ ಮಾದರಿಗಳನ್ನು ಸಾಧಾರಣವಾಗಿ ಮೆದುಳಿನ ತರಂಗಗಳು ಎಂದು ಉಲ್ಲೇಖಿಸುತ್ತೇವೆ.

Part 3: Meditation is for You - an introduction to the science and art of meditation_Kannada_part_3.md

ಆಧ್ಯಾತ್ತ ರೂಪಾರ್ಥವುಳ್ಳವನೊಬ್ಬನ ಮನಸು

ಆಧ್ಯಾತ್ತ ರೂಪಾರ್ಥವುಳ್ಳವನೊಬ್ಬನ ಮನಸು

ಆ ಮೆದುಳಿನ ತರಂಗಗಳಲ್ಲಿ ಬೇರೆ ಬೇರೆ ವೇಗ, ಬೇರೆ ಬೇರೆ ಮನಃಸ್ಥಿತಿಯೊಂದಿಗೆ ಉದಾಹರಣೆಗೆ ವೇಗವಾಗಿಯೂ ಇದ್ದು, ಎಚ್ಚರಿತ್ತ ಜಾಗೃತ ಮನಃಸ್ಥಿತಿಯೊಂದಿಗೆ ಸಂಪರ್ಕ ಹೊಂದಿರುತ್ತವೆ. ಆಲ್ಬಾ ಮೆದುಳಿನ ತರಂಗಗಳು ದೊಡ್ಡದಾಗಿದ್ದು, ನಿಧಾನ ಗತಿಯಿಂದಿದ್ದು, ಜೀವಿಯ ಚೆನ್ನಾಗಿರುವ ಭಾವನೆಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. ತೀಟಾ ತರಂಗಗಳು, ನಿದ್ರೆಗೆ ಹತ್ತಿರವಾದ ಒಂದು ರೀತಿಯ ಜಾಗೃತ ರೀತಿಯ ಆಲೋಚನೆಗಳಿಲ್ಲದೆ, ಶಾಂತ ಹಾಗೂ ಪ್ರಸನ್ನ ಭಾವವಿರುತ್ತದೆ.

ಒಂದು ದಿನದ ಅವಧಿಯಲ್ಲಿ ಹೆಚ್ಚಿನ ಜನಕ್ಕೆ ಈ ನಾಲ್ಕೂ ಮೆದುಳಿನ ತರಂಗಗಳ ಅನುಭವವಾಗುತ್ತದೆ. ಒಂದು ಗುಂಪಿನ ವಿಸ್ತಾರದಿಂದ ಇನ್ನೊಂದಕ್ಕೆ ವೃದ್ಧಿ ಇದ್ದಾಗ್ಯೂ, ಅಷ್ಟು ಸುಲಭವಾಗಿ ಅವರ ನಿಯಂತ್ರಣದಲ್ಲಿರುವುದಿಲ್ಲ.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಕ್ಯೂಇಇಜಿ ಯಿಂದ ಅವರು ಮೆದುಳಿನ ತರಂಗಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದು ಗೊತಾಯಿತು. ನುರಿತ ಪಿಯಾನೋ ವಾದಕನಂತೆ, ಆಳವಾದ ಧ್ಯಾನದ ಸ್ಥಿತಿಯಲ್ಲಿ ಅವರ ಮೆದುಳು ಒಂದರಿಂದ ಮತ್ತೊಂದು ಹಂತಕ್ಕೆ ಸರಾಗವಾಗಿ ಹರಿದು ಹೋಯಿತು. ಅಲ್ಲಿ ಯಾವುದೇ ರೀತಿಯ ಹಿಂಜರಿಕೆ, ಹಿಮ್ಚೆಟ್ಟು ಇರಲಿಲ್ಲ. ಒಂದು ವಿಧದ ಮೆದುಳಿನ ತರಂಗಗಳಿಂದ ಮತ್ತೊಂದಕ್ಕೆ ನಿರಂತರ ಪ್ರವಾಹ ಇತ್ತು. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಕಾಮನ ಬಿಲ್ಲಿನಲ್ಲಿ ಬಣ್ಣದಿಂದ ಬಣ್ಣಕ್ಕೆ ತೇಲುತ್ತಿರುವಂತಿತ್ತು. ಕ್ಯೂಇಇಜಿ, ಐದು ಮೆದುಳಿನ ತರಂಗಗಳ ಗುಂಪಿನ ವಿಸ್ತಾರವನ್ನು ಪ್ರತಿನಿಧಿಸುತ್ತದೆ.

ಮುಕ್ತಾಯ

ಮೆದುಳು ಶರೀರದ ಅತ್ಯಂತ ಸಂಕೀರ್ಣವಾದ ಅಂಗ. ನ್ಯೂರಾನ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 10,000 ಬೇರೆ ನ್ಯೂರಾನ್‌ಗಳ ಯಲ್ಲಿರುತ್ತವೆ. ಮಾಹಿತಿಯನ್ನು ಬರಿಯ ಸಾಗಣೆ ಮಾಡುವ ಅದರ ಸಾಮರ್ಥ್ಯ ನಿಜಕ್ಕೂ ವಿಸ್ಮಯಗೊಳಿಸುವಂಥದು.

ವಿಶೇಷವಾಗಿ, ಈ ಸಂಕೀರ್ಣತೆಯೇ ತಮ್ಮ ಮೆದುಳಿನ ಚಟುವಟಿಕೆಯನ್ನು ನಿಭಾಯಿಸಲು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರಿಗೆ ಸ್ವಲ್ಪ ಕಷ್ಟ ನೀಡುವುದು. ಅವರ ಮನಸ್ಸು -ಆಲೋಚನೆ, ಭಾವನೆ ಹಾಗೂ ಬುದ್ಧಿ ಮತ್ತು ಅವರ ಮೆದುಳಿನ ಕೆಲಸ ಕಾರ್ಯಗಳನ್ನು ತಿದ್ದಿ, ಮೆದುಳಿನ ತರಂಗಗಳನ್ನು ಬದಲಿಸಬಲ್ಲದು.

ಈ ಅನುಭಾವಿಯ ಮೇಲೆ ನಾವು ನಡೆಸಿದ ಅಧ್ಯಯನ, ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಬದಲು ಅಭ್ಯಸಿಸಲು ಹೊಸ ಪ್ರಶ್ನೆಗಳನ್ನು ಮೂಡಿಸಿತು.

ಜನರ ಜೀವನದಲ್ಲಿ ಶಾಂತಿ ಹಾಗೂ ಸಮತೋಲನವನ್ನು ಮೂಡಿಸುವಂತಹ ತಂತ್ರಗಳನ್ನು ನಾವೇನಾದರೂ ಕಲಿತು, ಇತರರಿಗೂ ಕಲಿಸಬಹುದೇ?

ನಿರ್ದಿಷ್ಟ ತರಬೇತಿಯ ಮೂಲಕ ಪ್ರತಿಕ್ರಿಯೆಯನ್ನು ಉಂಟು ಮಾಡಬಹುದೇ? ಅಥವಾ ಉಪಶಮನವನ್ನು ಚುರುಕುಗೊಳಿಸಬಹುದೇ? ನೋವನ್ನು ನಿಯಂತ್ರಿಸುವ ಅಥವಾ ಕಾಯಿಲೆಯ ದಿಕ್ಕನ್ನು ಬದಲಿಸುವ ತಂತ್ರಗಳನ್ನೇನಾದರೂ ನಾವು ಕಲಿಯಬಹುದೇ?

ಡಿ - ಸ್ಟಾಟ್ ಅನ್ನು ಚುರುಕುಗೊಳಿಸುವ, ತನ್ಮೂಲಕ ಆನಂದದೊಂದಿಗೆ -ದೈವದೊಂದಿಗೆ ಹಠಾತ್ ಸಂಪರ್ಕ ಸಾಧಿಸುವುದನ್ನು ನಾವು ಕಲಿಯಬಹುದೇ?

ಆಧ್ಯಾತ್ತ ರೂಪಾರ್ಥವುಳ್ಳವನೊಬ್ಬನ ಮನಸು

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೇಲೆ ನಾವು ಮಾಡಿದ ಅಧ್ಯಯನದ ಫಲಿತಾಂಶ, ವಿಶ್ವದಾದ್ಯಂತ ನಡೆಯುತ್ತಲೇ ಇರುವ ಮೆದುಳಿನ ಕುರಿತಾದ ಸಂಶೋಧನಾ ಹೊತ್ತಿಗೆಯ ಹೊಸ ಪುಟಗಳಿದ್ದಂತೆ. ಶರೀರವನ್ನು ಉಪಶಮನಗೊಳಿಸುವ ಸಾಮರ್ಥ್ಯ ಮಾನವನ ಮನಸ್ಸಿಗಿದೆ ಎಂಬುದಕ್ಕೆ ಅಲ್ಲಿ ಸ್ಪಷ್ಟ ಸೂಚನೆಗಳಿವೆ. ಮಾನವ ಜಾತಿಗೆ ಅತ್ಯಂತ ಉಪಯುಕ್ತವಾದ ಈ ಉಪಶಮನ ಸಾಮರ್ಥ್ಯವನ್ನು ಜನ ಕಲಿತು, ತಮ್ಮದಾಗಿಸಿಕೊಳ್ಳುವ ಸಾಧ್ಯತೆಯತ್ತ ನಾವೀಗ ನೋಡುತ್ತಿದ್ದೇವೆ. ಹೃದ್ರೋಗ, ಕ್ಯಾನ್ಸರ್, ಸಂಧಿವಾತ ರೋಗ, ಕುಡಿತ, ಇನ್ನೂ ಎಷ್ಟೋ ಕಾಯಿಲೆಗಳ ತೀವ್ರತೆಯನ್ನು ಬದಲಿಸುವ ಮತ್ತು ಹತ್ತಿಕ್ಕುವ ಸಾಮರ್ಥ್ಯ ಈಗ ಕಾರ್ಯ ಸಾಧ್ಯ ಎನಿಸುತ್ತದೆ.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM - ಅದೃಶ್ಯವಾದ, ನಿಗೂಢವಾದ ಪ್ರಾಚೀನ ಪ್ರಪಂಚ ಹಾಗೂ ಸಾಕ್ಷಾತ್ ನೋಡಬಹುದಾದ ವಿಜ್ಞಾನದ ಆಧುನಿಕ ಪ್ರಪಂಚಗಳ ನಡುವಣ ಒಂದು ಸೇತುವೆಯಂತೆ. ವ್ಯಾಪಕ ನೆಲೆಗಟ್ಟಿನ ಮೇಲೆ ಮೆದುಳನ್ನು ಕುರಿತಾದ ಸಂಶೋಧನೆಗಳು ವಿದ್ಯಮಾನಗಳನ್ನೆಲ್ಲ ವಿಜ್ಞಾನದ ತೆಕ್ಕೆಗೆ ಮುಂದಿನ ಅಭ್ಯಾಸಕ್ಕೆ ಉಚಿತ ರೀತಿಯಲ್ಲಿ ತಂದಾಗ, ಆರೋಗ್ಯ ಹಾಗೂ ಭರವಸೆಯ ದಾರಿಯತ್ತ ನಾವು ದಾಪುಗಾಲು ಹಾಕುವುದು ಖಂಡಿತ.