1. Karma - Why Series
ಪರಿವಿಡಿ
| ಕರ್ಮ ಎಂದರೇನು |
|---|
| ಪ್ರಜ್ಞಾವಂತರಾಗಿ ಬಾಳಿರಿ, ಕರ್ಮದಿಂದ ಪಾರಾಗಿ |
| ಕರ್ಮದ ಬಗ್ಗೆ ತಪ್ಪು ಕಲ್ಪನೆಗಳು |
| ದೇವರುಗಳು ಮತ್ತು ಆತ್ಮ ಸಾಕ್ಷಾತ್ಕಾರ ಹೊಂದಿದ ಗುರುಗಳು – ಕರ್ಮ ನಿವಾರಣೆಗೆ ನಿಮ್ಮ ಮಾರ್ಗ |
| ಪೂಜಾ ನಿಯಮಗಳು, ಸಂಸ್ರಾರಗಳು ಮತ್ತು ಕರ್ಮ |
| ಮೂರು ಬಗೆಯ ಕರ್ಮಗಳು ಮತ್ತು ಅವುಗಳನ್ನು ದಹಿಸುವ ದೀಕೆ |
| ಸಾಂಪ್ರದಾಯಿಕ ಮೂಜೆ – ಇಚ್ಛಾ ಪೂರ್ತಿಗೆ ಶಕ್ತಿಸ್ರೋತ ಅದರೊಂದಿಗೆ ನಿಮ್ಮ ಸಂಚಿತವನ್ನು ದಹಿಸಿರಿ |
| ಗುರುಪೂಜೆ |
| ಧ್ಯಾನ ಮತ್ತು ಪ್ರಜ್ಞೆ – ಕರ್ಮಕ್ಕೆ ಪ್ರತಿರೋಧಕಗಳು |
| ಕರ್ಮ ಎಂಬ ವಿಷಯದ ಮುಂದುವರಿಕೆ |
| ಅನುಬಂಧ |
ಕರ್ಮ ಎಂದರೇನು?
ನಾವೆಲ್ಲರೂ ಕರ್ಮ ಎಂಬ ಪದವನ್ನು ಕೇಳಿಯೇ ಇರುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಪುಸ್ತಕಗಳನ್ನೋದಿಯೋ, ಬೇರೆಯವರಿಂದ ಕೇಳಿಯೋ ಅದು ಏನೆಂಬುದನ್ನು ಸ್ವಲ್ಪಮಟ್ಟಿಗೆ ತಿಳಿದುಕೊಂಡಿರುತ್ತೇವೆ. ಅದು ಜನನ–ಮರಣಗಳ ಚಕ್ರಕ್ಕೆ ಬುನಾದಿಯಾಗಿರುವುದರಿಂದ ಅದನ್ನು ಸರಿಯಾಗಿ ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಅದು ಆನಂದಮಯ ಜೀವನಕ್ಕೆ ತಳಹದಿ.
ಕರ್ಮವು ನಮ್ಮಲ್ಲಿ ಉಳಿದಿರುವ ಪೂರೈಸದೇ ಹೋದ ಅನುಭವಗಳ ಕಂತೆ ಮತ್ತು ಅವುಗಳನ್ನು ಪೂರೈಸಿಕೊಳ್ಳುವಂತೆ ಎಡೆಬಿಡದೆ ಎಳೆದಾಡುವ ಅಂಶ. ಈ ಅಪರಿಪೂರ್ಣವಾದ ಅನುಭವಗಳು ನಮ್ಮಲ್ಲಿ ಮನೆಮಾಡಿರುವುದು ಏಕೆಂದರೆ, ನಾವು ಕೆಲವು ಕ್ರಿಯೆಗಳನ್ನು ಸಾಕಷ್ಟು ತೀವ್ರವಾಗಿಯೂ ಆಳವಾಗಿಯೂ ಮಾಡದೇ ಇರುವುದರಿಂದ. ತೀವ್ರವಾಗಿಯೂ ಆಳವಾಗಿಯೂ ಮಾಡಿದ ಯಾವುದೇ ಕ್ರಿಯೆಯು ಯಾವಾಗಲೂ ನಮ್ಮ ಜೀವನದ ಪರಿಧಿಯನ್ನು ಅತಿಕ್ರಮಿಸಿ, ನಮ್ಮನ್ನು ಮುಕ್ತವಾಗಿಸುತ್ತದೆ. ಪೂರ್ಣವಾದ ಸಂತೃಪ್ತಿಯನ್ನು ಪಡೆಯದ ನಮ್ಮ ಸಂಪೂರ್ಣ ಶಕ್ತಿ, ಗಮನ ಮತ್ತು ಅರಿವುಗಳನ್ನು ಹೊಂದದ ಯಾವುದೇ ಅಪರಿಪೂರ್ಣವಾದ ಅನುಭವಗಳು ಕರ್ಮವಾಗಿ ನಮ್ಮಲ್ಲಿ ಉಳಿಯುತ್ತದೆ.
Kí ±Üä|ìÊÜá¨Ü@ ±Üä|ìËá¨Üí ±äÜ OÝìñ… ±äÜ |ìÊáÜ á¨aÜ ÂÜ ñàæ ±Üä|ìÓÜ ±Üä|ìÊÜިݿá ±Üä|ìÊæáàÊÝÊÜÎÍÜÂñæà Kí ÍÝí£@ ÍÝí£@ ÍÝí£@
±Üä|ì©í¨Ü ±Üä|ì E©ÓÜáñܤ¨æ ±Üä|ì©í¨Ü ±Üä|ìÊÜ®Üá° PÜÙæ¨ÜÃÜã ±Üä|ìÊæà EÚ¿ááñܤ¨æ Kí ÍÝí£@ ÍÝí£@ ÍÝí£@
C¨ÜÃÜ¥ÜìÊæà®æí¨ÜÃæ, ®ÜÊÜá¾ ÓÜÖÜg ÓÜÌ»ÝÊÜÊæà ±Üä|ìñÜÌ A¥ÜÊÜ ÓÜíñÜ겤. ®ÝÊÜâ H®æà ÊÜÞw¨ÜÃÜã A¨ÜÃÜÈÉ$ ÓÜíñÜ겤¿á®Üá° AÃÜÓÜáñæ¤àÊæ. ®ÝÊÜâ ÓÜÌÆ³ PÊÜ áÜ ì樆 áÜ ° Öãæ £¤¨ªÜÃãÜ ÓÖÜ ,Ü ÊáÜ ãÆñ@Ü ®ÝÊâÜ ±äÜ |ì ÓíÜ ñêܱ¤ÜÃáÜ , ÖÝWãÜ ±äÜ |ìÃáÜ . B¨áÜ ¨ÄÜ í¨,Ü ÓíÜ ñêܲ¤Wãæ ÙÛÜ¨Ü ¿ÞÊâܨàæ PÊÜ áÜ ìÊâÜ ®ÊÜ áÜ Ⱦ É ŸÖÜÙÜ PÝÆ EÚ¿ááÊÜâ©ÆÉ.
A¨Üá ñܮܰ®Üá° ±ÜäÃæçÔPæãÙÜÛÆá Ëá£ËáàÄ¨Ü ±ÜÅ¿áñܰÊÜ®Üá° ÊÜÞvÜáñܤ¨æ. A¨Üá ñܮܰ ±ÜäÃæçPæWÝX ®ÜÊÜá¾®Üá° ±Üâ®Ü@ ±Üâ®Ü@ ÊÜÞw¨æªà PÝ¿áìWÜÙÜ®Üá° ÊÜÞvÜáÊÜíñæ ±ÜÅaæãà©ÓÜáñܤ¨æ. ®ÜÊÜá¾ ÊÜÂÊÜÓæ§¿áÈÉ ¿ÞÊÜâ¨æà BÓæ A¥ÜÊÜ A®Üá»ÜÊÜÊÜâ ±Üä|ìÊÝWÜ©¨ÜªÃÜã A¨Üá PÜÊÜáìÊÝX EÚ¿ááñܤ¨æ ÊÜáñÜᤠA¨Üá ±Üä|ìÊÝWÜáÊÜÊÜÃæËWÜã ®ÜÊÜá¾®Üá° ±Üâ®Ü@ ±Üâ®Ü@ A¨æà A®Üá»ÜÊÜWÜÚWæ ñÙÜ áÜ Ûñ¤Ü¨.æ
iàÊܮܨÜÈÉ ®ÝÊÜâ Gvæ¹vÜ¨æ ¯|ì¿áWÜÙÜ®Üá° ñæWæ¨ÜáPæãÙÜáÛñæ¤àÊæ. D ¯|ì¿áWÙÜ áÜ ®ÊÜ áÜ ¾ ià樆 ¨Ü Ü ±ÅܫݮÊÜ Ý¨Ü Zo®Wæ ÚÜ Wæ ÊÞÜ ñÅÜÊÆÜ É; ®ÝÊâÜ ÓÝ«ÝÃÜ|ÊÝX BvÜáÊÜ ÊÜÞñÜáWÜÚWÜã, ÊÜÞvÜáÊÜ BÇæãàaÜ®æWÜÚWÜã A®ÜÌÀáÓÜáñÜ¤Êæ. ®ÜÊÜá¾ GÆÉ BÇæãàaÜ®æWÜÙÜá, ®ÜáwWÜÙÜá ÊÜáñÜᤠQÅÁáWÜÙÜã
ಒಟ್ಟುಗೂಡಿ ಕರ್ಮದ ಹೊರೆಗೆ ಹೊಣೆಯಾಗುತ್ತವೆ. ಏಕೆಂದರೆ, ಅವು ಯಾವುವೂ ನಮ್ಮಲ್ಲಿ ಸಂತೃಪ್ತಿಯನ್ನುಂಟು ಮಾಡುವುದಿಲ್ಲ ಹಾಗೂ, ಅವು ಯಾವಾಗ ನಮ್ಮಲ್ಲಿ ಸಂತೃಪ್ತಿಯನ್ನುಂಟುಮಾಡುವುದಿಲ್ಲವೋ ಅವು ಕರ್ಮದ ಹೊರೆಯಾಗಿ, ಅವನ್ನು ಹೇಗಾದರೂ ಈಡೇರಿಸಿಕೊಳ್ಳಲು ಪ್ರೇರಿಸುತ್ತವೆ. ನಾವು ಅಸ್ಪವಾಗಿಯೂ, ಅತೃಪ್ತಿಯಿಂದಲೂ, ಅಜ್ಞಾನದಿಂದಲೂ, ಯೋಚಿಸುತ್ತಲೂ, ಮಾತನಾಡುತ್ತಲೂ, ಕೆಲಸಗಳನ್ನು ನಿರ್ವಹಿಸುತ್ತಿರುತ್ತೇವೆ. ಹೀಗೆ ಮಾಡುವಾಗ, ಪೂರ್ಣತ್ವವೆಂಬ ನಮ್ಮ ಸಹಜಸ್ವಭಾವವು ತೊಳಲಾಡಲು ಪ್ರಾರಂಭವಾಗುತ್ತದೆ. ಆದುದರಿಂದ ನಮ್ಮವೇ ಆದ ಆಲೋಚನೆಗಳು, ನುಡಿಗಳು ಮತ್ತು ಕಾರ್ಯ ಗಳು ನಮ್ಮ ಕರ್ಮವಾಗಿ ಹೇಗಾದರೂ ಸಂತೃಪ್ತಿಯನ್ನು ಪಡೆಯಲು ಪ್ರೇರಿಸುತ್ತವೆ.
ಸ್ಪಷ್ಟವಾಗಿ ತಿಳಿದುಕೊಳ್ಳಿರಿ–ಈಗ ನೀವು ಇಲ್ಲಿರುವುದು, ನನ್ನ ಪ್ರವಚನವನ್ನು ಕೇಳುತ್ತಿರುವುದು, ನೀವು ಹಿಂದೆ ಮಾಡಿದ ತೀರ್ಮಾನಗಳಿಂದಲೇ. ನೀವು ಕಂಡ ಪ್ರಕಟಣೆಗೆ ಗಮನ ಕೊಡಲು ನಿರ್ಧರಿಸಿದ್ದಿರಿ. ಇನ್ನೂ ಹೆಚ್ಚಿನ ವಿಷಯವನ್ನು ತಿಳಿಯುವ ನಿರ್ಧಾರಮಾಡಿದಿರಿ. ನಿಮ್ಮ ಕಾರಿನಲ್ಲಿ ಕುಳಿತು ಅದನ್ನು ನಡೆಸುವ ನಿರ್ಧಾರಮಾಡಿದ್ದಿರಿ. ನಿಮ್ಮ ಕಾರನ್ನು ಇಲ್ಲಿ ನಿಲ್ಲಿಸುವ ನಿರ್ಧಾರ ಮಾಡಿದ್ದಿರಿ. ಒಳಗೆ ಬಂದು ಕುಳಿತುಕೊಳ್ಳುವ ನಿರ್ಧಾರ ಮಾಡಿದ್ದಿರಿ. ಇದುವರೆವಿಗೂ ಕುಳಿತಿರುವ ನಿರ್ಧಾರವನ್ನು ಮಾಡಿದ್ದಿರಿ. ಈ ಎಲ್ಲಾ ನಿರ್ಧಾರಗಳ ಒಟ್ಟು ಮೊತ್ತವು ನೀವು ಇಲ್ಲಿ ಕುಳಿತಿರುವುದಕ್ಕೆ ನೆರವಾಗಿವೆ. ಈ ಎಲ್ಲಾ ಹಿಂದಿನ ನಿರ್ಧಾರಗಳಿಂದ, ನಿಮ್ಮ ವರ್ತಮಾನವಾಗಿದೆ. ಈಗ, ಇದೇ ತರ್ಕದ ಅನ್ವಯದಿಂದ, ಈಗಿನ ತೀರ್ಮಾನಗಳ ಮೊತ್ತವೇ ನಿಮ್ಮ ಭವಿಷ್ಯವಾಗುತ್ತದೆ.
ಕರ್ಮದ ಸಿದ್ದಾಂತವೆಂಬುದೆಲ್ಲವೂ ಇದೇ : ನಿಮ್ಮ ಗತಕಾಲದ ಒಟ್ಟುಮೊತ್ತವೇ ವರ್ತಮಾನ, ಹಾಗೂ ವರ್ತಮಾನದ ಒಟ್ಟುಮೊತ್ತವೇ ಭವಿಷ್ಯತ್ತು.
ಪ್ರಜ್ಞಾವಂತರಾಗಿ ಬಾಳಿರಿ, ಕರ್ಮದಿಂದ ಪಾರಾಗಿ
ಪ್ರತಿ ಕ್ಷಣದ ನಮ್ಮ ತೀರ್ಮಾನಗಳನ್ನೂ ಬಹುಶಃ ಪ್ರಜ್ಜೆ ಇಲ್ಲದೆಯೇ ತೆಗೆದುಕೊಳ್ಳುತ್ತಿರುವುದೇ ಸಮಸ್ಯೆ. ಒಂದು ದಿನದಲ್ಲಿ ಸಾವಿರಗಟ್ಪಲೆ ತೀರ್ಮಾನಗಳನ್ನು ಮೈಮರೆತುಕೊಂಡೇ ತೆಗೆದುಕೊಳ್ಳುತ್ಗೇವೆ. ಯೋಚಿಸುವುದಾಗಲೀ, ಮಾತನಾಡುವುದಾಗಲೀ, ಏನನ್ನೇ ಮಾಡು ವುದೇ ಆಗಲಿ, ಅರಿವಿಲ್ಲದೆಯೇ ಅಪ್ರಯತ್ತ ವಾಗಿ ಮಾಡುತ್ತೇವೆ.
ನಮ್ಮ ಜೀವನದ ಅನೇಕ ಆಗುಹೋಗುಗಳ ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ಕಲ್ಲಿಸಲಾಗದಿರುವುದೇ ಇದಕ್ಕೆ ಕಾರಣ. ಯಾವಾಗಲೂ ನಮಗೇನೋ ಆಗಬಾರದ್ದು ಆಗಿದೆ ಎಂದುಕೊಳ್ಳುತ್ತೇವೆ. ಈ ಪರಿಣಾಮಗಳಿಗೆ ನಾವೇ ಕಾರಣವೆಂಬುದನ್ನು ಹಾಯಾಗಿ ಮರೆತಿದ್ದೇವೆ. ಪ್ರಜ್ಞಾಹೀನ ಜೀವನದಿಂದ ನಾವೇ ಹಾಗಾಗುವಂತೆ ಮಾಡಿಕೊಂಡು, ಇನ್ನೂ ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳುವುದರಲ್ಲಿ ಪರ್ಯವಸಾನಗೊಳ್ಳುತ್ತೇವೆ.
ನಿಮ್ಜು ಆಲೋಚನಾಪರತೆಗೆ ಹೆಚ್ಚು ಅರಿವನ್ನೂ ಬುದ್ಧಿಯನ್ನೂ ಪ್ರವಹಿಸಿರಿ. ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಹೆಚ್ಚಾಗಿ ಚೈತನ್ಯವನ್ನು ಪ್ರವಹಿಸಿರಿ. ನೀವದನ್ನು ನಂಬುತ್ತೀರೋ ಇಲ್ಲವೋ ನೇರವಾಗಿಯಾದರೂ, ಸುತ್ತುಬಳಸಿ ಯಾದರೂ, ನಿಮ್ಮ ಜೀವನದ ಎಲ್ಲವನ್ನೂ ನೀವೇ ಆಯ್ದುಕೊಳ್ಳುತ್ತಿದ್ದೀರಿ. ನಿಮ್ಮ ಜೀವನದಲ್ಲಿ ಬೇರೆ ಯಾರೂ ನಿಮಗಾಗಿ ಆಯ್ಕೆಮಾಡುವುದಿಲ್ಲ. ನೀವೇ ಆಯ್ಕೆ ಮಾಡುವುದು. ಸತತವಾಗಿ ಅದು ನಿಮ್ಮದೇ ಆಯ್ಕೆ ಮತ್ತು ನಿಮ್ಮದೇ ನಿರ್ಧಾರ. ನಿಮ್ಮ ಜೀವನವನ್ನು ಬೇರೆಯಾರೋ ನಿರ್ಧರಿಸುವರೆಂದು ನಿಮಗನಿಸಬಹುದು. ಇಲ್ಲ ! ಅದನ್ನು ಯಾವಾಗಲೂ ನೀವೇ ನಿರ್ಧರಿಸುವುದು.
ಒಂದು ಚಿಕ್ಕ ಉದಾಹರಣೆಯು ಈ ಮೂಲಭೂತ ಸತ್ಯವನ್ನು ಅರಿಯುವಂತೆ ಮಾಡುತ್ತದೆ.
ಯಾರಾದರೂ ನಿಮ್ಮನ್ನು ಆಕ್ಷೇಪಿಸಿದರೆ ನೊಂದುಕೊಳ್ಳುವಿರಿ. ಯಾರಾದರೂ ಹೊಗಳಿದರೆ ಉಬ್ಬಿಹೋಗುವಿರಿ. ನಿಮ್ಮ ಅಭ್ಯಾಸಬಲದಿಂದ ನೀವು ಈ ರೀತಿ ಅಪ್ರಯತ್ನವಾಗಿ ಸ್ಪಂದಿಸುತ್ತೀರಿ. ನಿಮಗಿದನ್ನು ಬೇರೆ ಯಾರಾದರೂ ಹೇಳಿ ಕೊಟ್ಟರೆ? ಇಲ್ಲ! ಅದು ನೀವಾಗಿಯೇ ಆರಿಸಿಕೊಂಡದ್ದು. ಅದು ಅಭ್ಯಾಸವಾಗಿ ಹೋಗಿರುವುದರಿಂದ ನೀವೇ ಆರಿಸಿಕೊಂಡದ್ದೆಂಬುದನ್ನು ಮರೆತಿದ್ದೀರಿ. ಯಾರಿಂದಲಾದರೂ ಆಕ್ಷೇಪಣೆಗೊಳಗಾದಾಗಲೆಲ್ಲವೂ ಕುಗ್ಗಿಹೋಗುವುದನ್ನು ನೀವೇ ಆರಿಸಿಕೊಳ್ಳುವಿರಿ. ಯಾರಾದರೂ ನಿಮ್ಮನ್ನು ಹೊಗಳಿದಾಗಲೆಲ್ಲವೂ ಉಬ್ಬಿಹೋಗುವುದನ್ನೂ ನೀವೇ ಆರಿಸಿಕೊಳ್ಳುವುದು. ನೀವು ಬೇರೆ ರೀತಿಯಲ್ಲಿ ಸ್ಪಂದಿಸಬಹುದೆಂಬುದನ್ನು ತಿಳಿದುಕೊಳ್ಳಿರಿ. ಉದಾಹರಣೆಗೆ, ಯಾರಾದರೂ ಆಕ್ಷೇಪಿಸಿದಾಗ, ಕುಗ್ಗಿಹೋಗದೇ ಇರುವುದನ್ನು ಆಯ್ದುಕೊಳ್ಳಲು ಸಾಧ್ಯ. ಶಾಂತ ವಾಗಿಯೂ, ಆರಾಮವಾಗಿಯೂ ಹಾಗೂ ಸ್ಥಿಮಿತವಾಗಿಯೂ ಇರುವುದನ್ನು
ಆಯುಕೊಳ್ಳಲು ಸಾಧ್ಯ. ನೊಂದುಕೊಳ್ಳುವುದು ನಿಮ್ಮದೇ ಆಯ್ಕೆ. ನಿಮ್ಮನ್ನೇ ನೀವು ನಿಯಂತ್ರಿಸಿಕೊಳ್ಳುವ ಪ್ರಯತ್ನದಲ್ಲಿ ಮುಜುಗರ ಮಾಡಿಕೊಳ್ಳುವಿರಿ. ನಿಮ್ಮ ಜನ್ಮವು ನಿಮ್ಮ ಆಯ್ಕೆಯೆಂದು ತಿಳಿಯುವವರೆವಿಗೂ ನಿಮ್ಮ ಜೀವನವು ಒಂದು ರೀತಿಯ ಪಾರ್ಶ್ವವಾಯುವಿನಂತೆ–ಸರಾಗವಾದ ಪರಿಚಲನೆ ಇರುವುದಿಲ್ಲ. ಜೀವನದ ಎಲ್ಲವೂ ನಿಮ್ಮದೇ ಆಯ್ಕೆ ಎಂದು ತಿಳಿದಾಗ ಮಾತ್ರವೇ ಸರಾಗವಾದ ಸಂಚಲನೆಯಾಗುವುದು.
ಜನರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ನಮ್ಮ ಜನ್ಮವು ಹೇಗಾಗುತ್ತದೆ? ನಮ್ಮ ಹುಟ್ಟು ಮತ್ತು ಬಾಳನ್ನು ನಿರ್ಧರಿಸುವವರಾರು?' ಎಂದು. ನಿಮ್ಮ ಹುಟ್ಟು , ಬಾಳು ಮತ್ತು ಮುಂದಿನ ಜನ್ಮವನ್ನೂ ಸಹ ನೀರ್ವೆರಿಸುವುದೆಂದು ನಾನು ಹೇಳುತ್ತೇನೆ. ಮುಂದಿನ ಜನ್ಮದ ದೇಹವನ್ನೂ ಸಹ ನೀವೇ ನಿರ್ಧರಿಸುವವರು.
ಈ ಮನೋಭಾವಗಳನ್ನಿಟುಕೊಂಡು, ಸಂಪೂರ್ಣ ಅರಿವಿನಿಂದ ಆಲೋಚಿಸಿ, ನುಡಿದು ಮತ್ತು ವರ್ತಿಸಿದರೆ, ಆಗ ಈ ಜನ್ಮದಲ್ಲಿ ಈಗಾಗಲೇ ಇರುವ ಏನೇ ಕರ್ಮವನ್ನು ತೀರಿಸಿಕೊಳ್ಳಲು ಏನು ಮಾಡಬೇಕೋ ಅಷ್ಟನ್ನು ಮಾತ್ರ ಮಾಡುವಿರಿ. ಹೊಸ ಕರ್ಮವನ್ನು ಸೃಷ್ಟಿಸಿಕೊಳ್ಳುವುದಿಲ್ಲ. ಕರ್ಮದ ಬಗ್ಗೆ ಮಾತನಾಡುವಾಗ, ಹೊಸ ಕರ್ಮವನ್ನು ಹೊಸೆದುಕೊಳ್ಳದೇ ಇರಲು ಸೋಮಾರಿಗಳಾಗಬೇಕೆಂದುಕೊಳ್ಳುತ್ತಾರೆ. ಆಧ್ಯಾತ್ಮಿಕತೆಯು ಕರ್ಮಫಲತ್ಯಾಗ ವನ್ನು ಕುರಿತದ್ದು. ಕಾರ್ಯ ಮಾಡಿದುದರ ಫಲವನ್ನು ತ್ಯಜಿಸುವುದು–ಕರ್ಮದ ತ್ಯಾಗವನ್ನಲ್ಲ– ಕಾರ್ಯವನ್ನೇ ಮಾಡದಿರುವುದನ್ನಲ್ಲ.
ಕಾರ್ಯಗಳ ಫಲಗಳನ್ನು ತ್ಯಜಿಸಬೇಕು, ಕಾರ್ಯವನ್ನೇ ಅಲ್ಲ. ಇದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಕಾರ್ಯದಲ್ಲಿ ಮುಳುಗಿಹೋಗಲು ಸಿದ್ಧರಾಗಿರಬೇಕೇ
ವಿನಃ ಹೊಸ ಕರ್ಮವನ್ನು ಗಂಟುಹಾಕಿಕೊಳ್ಳಬಾರದು. ಅದನ್ನೇ ಆಧ್ಯಾತ್ಮಿಕತೆ ಎಂದು ಕರೆಯುವುದು. ತೊಡಗಿಕೊಂಡಿದ್ದರೂ ಅದರ ಲೇಪವಿಲ್ಲದೆ ಪ್ರತಿ ನಿಮಿಷವೂ ಆಂತರ್ಯದ ಸಂತೃಪ್ತಿಯಿಂದಿರುವುದಕ್ಕೆ ಸಿದ್ದರಾಗಿರಬೇಕು.
ಕರ್ಮದ ಬಗ್ಗೆ ತಪ್ಪು ಕಲ್ಪನೆಗಳು
ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕರ್ಮವನ್ನು ತೀರಿಸಿಕೊಳ್ಳ ಬಹುದೆಂದು ಕೆಲವರೆಂದುಕೊಳ್ಳುತ್ತಾರೆ.
ಇಲ್ಲ, ಸಾಧ್ಯವಿಲ್ಲ. ಕರ್ಮವನ್ನು ಆಳವಾದ ತಿಳುವಳಿಕೆಯಿಂದ, ಅರಿವಿನಿಂದ ಹಾಗೂ ಏನಿಲ್ಲವೆಂದರೂ ಪ್ರಜ್ಞೆಯ ಒಂದೇ ಒಂದೇ ಇಣುಕುನೋಟದಿಂದ ಮಾತ್ರವೇ ತೀರಿಸಿಕೊಳ್ಳಲು ಸಾಧ್ಯ. ಮನುಕುಲವೆಲ್ಲವೊ ಪ್ರತಿಫಲಾಪೇಕ್ಷೆಯ ಸುಳಿಯಲ್ಲಿ ಸಿಲುಕಿದೆ. ಇದು ಸೇವೆಗೂ ವ್ಯಾಪಿಸಿದೆ ! ಸೇವೆಯಲ್ಲಾದರೂ ಡಾಲರುಗಳನ್ನೋ ಪ್ರಖ್ಯಾತಿಯನ್ನೋ ಇಚ್ಛಿಸಬೇಡಿರಿ. ಪ್ರಭಾವ ಬೀರೋಣವೆಂಬ ಯೋಜನೆಯನ್ನು ಹಾಕಬೇಡಿರಿ. ನಿಮ್ಮ ಇರುವಿಕೆಯನ್ನು ಗೊತ್ತಾಗುವಂತೆ ಮಾಡುವ ಯೋಜನೆಯೂ ಬೇಡ. ಕೆಲಸವನ್ನು ಕೆಲಸಕ್ಕಾಗಿಯೇ ಮಾಡಿರಿ. ಯಾವುದಕ್ಕೂ ಯೋಜನೆಯೇ ಬೇಡ. ಎಲ್ಲೆಂದರಲ್ಲಿ ಯಾವುದೆಂದರೆ ಆ ಸೇವೆಯನ್ನು ಮಾಡಿಬಿಡಿ. ಇಂತಹ ಸೇವೆಯು ನಿಮ್ಮ ವ್ಯಕ್ತಿತ್ವಕ್ಕೆ ಅಪರಿಮಿತ ಶಕ್ತಿಯನ್ನು ನೀಡುತ್ತದೆ. ದಿನಕ್ಕೆ ಒಂದರ್ಧಗಂಟೆಯಾದರೂ ಯಾವ ಪ್ರತಿಫಲಾಪೇಕ್ಷೆಯ ಕಡೆಗೂ ಗಮನವನ್ನು ಹಾಯಿಸದೆಯೇ ನಿಸ್ವಾರ್ಥಸೇವೆಯನ್ನು ಮಾಡಿರಿ. ಈ ಸೇವೆಯೇ ನಿಮ್ಮ ಧ್ಯಾನವಾಗುವುದು. ಇದು ನಿಮ್ಮಲ್ಲಿ ಸಂಪ್ರಜ್ಞೆಯ ಚೈತನ್ಯವನ್ನುಂಟುಮಾಡಿ,
ಸೇವೆಯಲ್ಲಡಗಿರುವ ದೈವತವನ್ನರಿಯುವ ಮಾರ್ಗವಾಗುತ್ತದೆ.
ನಿಸ್ವಾರ್ಥಸೇವೆಯನ್ನು ಮಾಡುತ್ತಿರುವಾಗಲೂ ಸಹ ನಮ್ಮ ಕಾರ್ಯಗಳ ಪರಿಣಾಮಗಳಿಗೆ ಬಂಧಿತರಾಗದಂತೆ ಎಚ್ಚರವಹಿಸಬೇಕು. ಸೇವೆಯನ್ನು ಮಾಡುವ ಬಹುಶಃ ಎಲ್ಲರೂ ಸುಮ್ಮನಿರಲಾಗದೆಯೋ ಅಥವ ಜೀವನ್ಜರಣ ಚಕ್ರದಲ್ಲಿ ಸೇವೆಯು ಲಾಭಾಂಶವನ್ನು ಹೆಚ್ಚಿಸುವುದೆಂದು ಚಿಕ್ಕಂದಿ ನಿಂದಲೂ ಕಲಿತಿರುವುದರಿಂದಲೋ, ಮಾಡುತ್ತಾರೆ. ಪುನರ್ಜನ್ಮವನ್ನು ನಂಬು ತ್ತೇವೆಯೋ ಇಲ್ಲವೋ, ಮರಣಾನಂತರದಲ್ಲಿ ಒಳ್ಳೆಯದಾಗುತ್ತದೆ ಎಂಬ ಆಧಾರದ ಮೇಲೆ ಧಾರ್ಮಿಕ ಕಾರ್ಯಗಳನ್ನು ಮಾಡುತ್ತೇವೆ. ಪತ್ರಿಕೆಯಲ್ಲಿ ನಮ್ಮ ಚಿತ್ರವನ್ನು ಛಾಪಿಸಿದಾಗಲೋ, ಟಿ.ವಿ.ಯಲ್ಲಿ ನಮ್ಮ ಚಿತ್ರವನ್ನು ತೋರಿಸಿದಾಗಲೋ ಸಂತೋಷಪಡಲಿಚ್ಛಿಸುತ್ತೇವೆ. ಅದು ಈ ಜಗತ್ತಿನಲ್ಲಿ ಅಥವ ಮರಣಾನಂತರದ ಇನ್ನೊಂದು ಜಗತ್ತಿನಲ್ಲಿ ಗಮನ ಸೆಳೆಸಿಕೊಳ್ಳುವ ಅವಶ್ಯಕತೆಯ ಪೂರೈಕೆ ಯಾಗಿರುತ್ತದೆ.
ಜನರು ಕೆಲವು ಸಲ ಕೇಳುತ್ತಾರೆ, 'ನಿಮ್ಮನ್ನುಳಿದು, ಪ್ರಪಂಚವೆಲ್ಲವೂ ಕಷ್ಟದಲ್ಲಿರುವಾಗ ಧ್ಯಾನ ಮಾಡುವುದರಲ್ಲೇನಿದೆ? ಧ್ಯಾನಮಾಡುವ ಬದಲು ಏನಾದರೂ ಸೇವೆಯನ್ನು ಮಾಡಬಹುದಲ್ಲಾ?' ಎಂದು. ಉಳಿದ ಮಾನವತೆಯ ಕಷ್ಟಗಳನ್ನು ಪ್ರಾಮಾಣಿಕವಾಗಿ ಅರಿತು, ಅವರ ಮೇಲಿನ ಅನುಕಂಪದಿಂದ ಅವರ ಕಷ್ಟ ನಿವಾರಣೆಗಾಗಿ ದುಡಿದರೆ, ಬಹಳ ಒಳ್ಳೆಯದು. ಆದರೆ ಇಂತಹ ಅನುಕಂಪವನ್ನನುಭವಿಸಲು ವ್ಯಾಪಕವಾದ ಪ್ರಜ್ಞೆ ಇರಬೇಕು. ಅಷ್ಟೇ ಅಲ್ಲ, ಮನುಕುಲಕ್ಕೆ ನೀವು ಮಾಡಬಹುದಾದ ಮಹತ್ತಾದ ಸೇವೆ ಎಂದರೆ ನೀವೇ ದೇವ–ಮಾನವರಾಗುವುದು. ಅದಕ್ಕೆ ಧ್ಯಾನವೇ ಮೊದಲ ಹೆಜ್ಜೆ
ಪಾಪ ಮಾಡಿದರೆ ನರಕ್ಕೂ, ಪುಣ್ಯಮಾಡಿದರೆ ಸ್ವರ್ಗಕ್ಕೂ ಹೋಗುವಿರೆಂದು ನಿಮಗೆ ಹೇಳಲಾಗಿರುವುದೇ ಸಮಸ್ಯೆ. ನಿಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಮಾಜವು ಈ ಕಲ್ಪನೆಗಳನ್ನುಪಯೋಗಿಸುತ್ತದೆ. ಈ ಚಿಂತನಾರೂಪಗಳ ಸಹಾಯ ದಿಂದಲೇ ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳಲು ಅದು ಪ್ರಯತ್ನಿಸುವುದು. ಅದು ನಿಮ್ಮನ್ನು ನರಕದ ಭಯ ಮತ್ತು ಸ್ವರ್ಗದ ದುರಾಸೆಗಳ ಮೂಲಕ ಹಿಡಿತದಲ್ಲಿಟುಕೊಳ್ಳಲು ಯತ್ನಿಸುತ್ತದೆ.
ನೀವು ಮಾಡಿದ ಒಳ್ಳೆಯ ಕಾರ್ಯಗಳಾಗಲಿ, ಕೆಟ್ಟ ಕಾರ್ಯಗಳಾಗಲಿ ನಿಮ್ಮ ಮರಣದ ಸಮಯದಲ್ಲಿ ನಿಮಗೆ ಆಸರೆಯಾಗುವುದಿಲ್ಲವೆಂಬುದನ್ನು ತಿಳಿಯಿರಿ. ಸ್ವರ್ಗವೆಂಬುದಾಗಲೀ ನರಕವೆಂಬುದಾಗಲೀ ಇಲ್ಲ ಸ್ವರ್ಗ, ನರಕಗಳೆರಡೂ ನಿಮ್ಮ ಮನಃಸ್ಥಿತಿಗಳೇ ವಿನಃ ಭಗವಂತನ ತಾಣದಲ್ಲೆಲ್ಲೋ ಇರುವ ಸ್ಥಳಗಳಲ್ಲ,
ನೀವು ಒಳ್ಳೆಯ ಆಲೋಚನೆಗಳನ್ನು ಮಾಡಿದಾಗಲೂ, ಒಳ್ಳೆಯ ಕಾರ್ಯ ಗಳನ್ನೂ ಮಾಡಿದಾಗಲೂ ನಿಮಗೆ ಹಿತವೆನಿಸುತ್ತದೆ, ಆಗ ನೀವು ಸ್ವರ್ಗದಲ್ಲಿ ರುತ್ತೀರಿ. ನೀವು ದುರಾಲೋಚನೆಗಳನ್ನು ಮಾಡಿದಾಗಲೂ, ದುಷ್ತರ್ಮಗಳನ್ನು ಮಾಡಿದಾಗಲೂ ನಿಮಗೆ ಕೆಡುಕೆನಿಸುತ್ತದೆ, ಆಗ ನೀವು ನರಕದಲ್ಲಿರುತ್ತೀರಿ, ಅಷ್ಟೇ. ಕರ್ಮಕ್ಕೆ ಇರುವುದೆಲ್ಲಾ ಅದೇ. ಇದು ವಿಶ್ವದ ಕಾರ್ಯ ಮತ್ತು ಕಾರಣ ಸಿದ್ದಾಂತ. ನಿಮ್ಮ ಉದ್ದೇಶವೇನೋ ಅದೇ ನೀವಾಗಿರುವುದು. ನಿಮ್ಮ ಉದ್ದೇಶವೇ ನೀವಾಗುತ್ತೀರಿ. ಆಳವಾದ ಅರಿವಿನಿಂದಲ್ಲದೆ, ತೋರಿಕೆಯ ಸ್ವರದಿಂದ ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕಾರ್ಯಗಳನ್ನು ಮಾಡಿದರೆ, ಆ ತೋರಿಕೆಯ ಆಲೋಚನೆಗಳನ್ನು ಮಾತುಗಳನ್ನು ಮತ್ತು ಕಾರ್ಯಗಳನ್ನು ನೆರವೇರಿಸಿಕೊಳ್ಳಲು ಕರ್ಮಗಳನ್ನು ಸೃಷ್ಟಿಸಿಕೊಳ್ಳುವಿರಿ.
ದೇವರುಗಳು ಮತ್ತು ಆತ್ಮ ಸಾಕ್ಷಾತ್ಕಾರ ಹೊಂದಿದ ಗುರುಗಳು–ಕರ್ಮ ನಿವಾರಣೆಗೆ ನಿಮ್ಮ ಮಾರ್ಗ
ಕರ್ಮಗಳನ್ನು ಕೂಡಿಟ್ಟುಕೊಳ್ಳದೆಯೇ, ಹಿಂದೆ ಮಾಡಿದ ಕರ್ಮಗಳ ಪ್ರಭಾವ ವಿಲ್ಲದಂತೆ ಜೀವಿಸುವುದನ್ನು ಮತ್ಗೆಮತ್ತೆ ಮನಸ್ಸಿಗೆ ತಂದುಕೊಳ್ಳಲು ಒಂದು ಮಾರ್ಗವಿದೆ. ಉನ್ನತವಾದ ಪ್ರಜ್ಞೆಯ ಸಾನಿಧ್ಯದಲ್ಲಿ ಕರ್ಮವು ಶಕ್ಕಿಹೀನ ವಾಗುತ್ತದೆ. ಒಮ್ಮೆ ಇದು ಅರ್ಥವಾಯಿ ತೆಂದರೆ, ನಾವು ಮಾಡುವ ಕೇವಲ ದೈನಂದಿನ ದೇವತಾಕಾರ್ಯಗಳೇ ಕರ್ಮವನ್ನು ತೊಡೆದು ಹಾಕಲು ಸಾಧ್ಯ. ಹೇಗೆಂದು ನೋಡೋಣ.
ಜನಸಾಮಾನ್ಯರಿಗೂ ಜ್ಞಾನಿಗಳಾದ ಗುರುಗಳಿಗೂ ಮುಖ್ಯವಾದ ಒಂದು ವ್ಯತ್ಯಾಸವಿದೆ. ಸಾಮಾನ್ಯ ಮನುಷ್ಯನು ತನ್ನಿಚ್ಛೆಯಿಂದ ತನ್ನ ದೇಹವನ್ನು ಸಜೀವವಾಗಿಟುಕೊಳ್ಳಲಾರನು. ಆತನ ದೇಹವು ಸಜೀವವಾಗಿಯೋ ಅಥವಾ ನಿರ್ಜೀವವಾಗಿಯೋ ಇರುತ್ತದೆ. ಅಷ್ಟೆ ಅದು ಆತನ ಕೈಯಲ್ಲಿರುವುದಿಲ್ಲ. ಆದರೆ ಒಬ್ಬ ಜ್ಞಾನಿಗೆ ಅದು ಆತನ ಕೈಯಲ್ಲಿರುತ್ತದೆ. ಆತನು ತನ್ನ ದೇಹವನ್ನು ಸಜೀವಗೊಳಿಸಬಲ್ಲ. ಅಥವಾ ಸಡಿಲಬಿಡಬಲ್ಲ. ಈ ಸಾಮರ್ಥ್ಯದಿಂದಾಗಿ, ಆತನು ಬೇರೊಂದು ದೇಹವನ್ನು ಸಹ ಸಜೀವವಾಗಿಸಬಲ್ಲನು ! ಆತನು ಒಂದು ಶಿಲೆಯನ್ನಾಗಲೀ, ಲೋಹವನ್ನಾಗಲೀ, ಸಜೀವಗೊಳಿಸಬೇಕೆಂದುಕೊಂಡಾಗ, ಆ ಶಿಲೆಯಾಗಲೀ, ಲೋಹವಾಗಲೀ ಆತನ ಪ್ರತಿರೂಪವೇ ಆಗಿಬಿಡುತ್ತದೆ.
ನಮ್ಮ ಸುಪ್ರಸಿದ್ದವಾದ ಸಾಂಪ್ರದಾಯಿಕ ದೇವಾಲಯಗಳೆಲ್ಲವೂ ಆತ್ಮಜ್ಞಾನಿಗಳಾದ ಗುರುಗಳಿಂದ ಚೈತನಪೂರ್ಣವಾದುವುಗಳು. ತಿರುವಣ್ಣಾಮಲೆಯ ಅರುಣಗಿರಿ ಯೋಗೀಶ್ವರರು, ಚಿದಂಬರಂನ ಪತಂಜಲಿಯವರು, ತಂಜಾವೂರಿನ ಕರೂರರು, ತಿರುಪತಿಯ ಕೊಂಗನವರು ಮತ್ತು ಮಧುರೆಯ ಮೀನಾಕ್ಷಿ ಇವರುಗಳು ಈ ಕೆಲವು ದೇವಾಲಯಗಳ ಮೂರ್ತಿಗಳಿಗೆ ಚೈತನ್ಯವನ್ನು ತುಂಬಿದ್ದಾರೆ. ಆದುದರಿಂದಲೇ ದೇವತಾಮೂರ್ತಿಗಳನ್ನು ಆತ್ಮಜ್ಞಾನಿಗಳಾದ ಗುರುಗಳ ದೇಹವೆಂದೇ ಪರಿಗಣಿಸುತ್ತಾರೆ. ಗುರುಗಳು ತಮ್ಮ ಶರೀರವನ್ನು ತ್ಯಾಗಮಾಡಿದ ನಂತರವೂ ಶಿಷ್ಠರು ಮೂರ್ತಿಗಳಿಗೆ ಸೇವೆ ಸಲ್ಲಿಸುತ್ತಾ ಇರುತ್ತಾರೆ. ದೇವತಾ ಮೂರ್ತಿಗಳೇ ಆತ್ಮಜ್ಞಾನ ಹೊಂದಿದ ಗುರುಗಳೆಂದು ಪರಿಗಣಿಸುತ್ತಾರೆ. ಗುರುಗಳು ದೇಹತ್ಯಾಗ ಮಾಡಿದ ನಂತರ ಮುಂದುವರೆಸುತ್ತಾರೆ. ದೇವತಾಮೂರ್ತಿಯ ದೇಹವನ್ನು ಗುರುಗಳ ದೇಹವೆಂದೇ ಪರಿಗಣಿಸುತ್ತಾರೆ. ಸಾಕ್ಷಾತ್ಕಾರ ಹೊಂದಿದ ಗುರುಗಳಿಗೆ ಅರ್ಪಿಸುವ ಗೌರವವನ್ನೇ ದೇವತಾಮೂರ್ತಿಗಳಿಗೂ ಅರ್ಪಿಸುವ ಕಾರಣವೂ ಸಹ ಇದೇ ಆಗಿದೆ.
ಉದಾಹರಣೆಗೆ, ಅರುಣಗಿರಿ ಯೋಗೀಶ್ವರರಿಂದ ದೀಕ್ಷೆಪಡೆದ ಶಿಷ್ಯರೆಲ್ಲರೂ ಅರುಣಾಚಲೇಶ್ವರನ್ನು ತಲೆಮಾರುಗಳಿಂದಲೂ ಆರಾಧಿಸುತ್ತಾರೆ. ಗುರುಗಳಿಗೆ
ಅರ್ಪಿಸುವುದೆಲ್ಲವನ್ನೂ ಬಹುದು.
ಗುರುಗಳು ದೇಹತ್ಯಾಗಮಾಡಿದ ನಂತರವೂ ತಾವು ಚೈತನ್ಯಗೊಳಿಸಿದ ಮೂರ್ತಿಗಳ ಮೂಲಕ ತಮ್ಮ ಶಿಷ್ಯರುಗಳಿಗೆ ದೊರಕುತ್ತಾರೆ. ಉದಾಹರಣೆಗೆ ನಾನು ಜೀವಿಸಿರುವಾಗಲೇ ಏಕಕಾಲದಲ್ಲಿ ನನ್ನ ದೈಹಿಕ ಸಾನ್ನಿಧ್ಯವು ಎಲ್ಲೆಲ್ಲಿಯೂ ದೊರಕುವುದು ಅಸಾಧ್ಯ. ಆದುದರಿಂದ, ನಾನು ದೈಹಿಕವಾಗಿ ಎಲ್ಲಿರು ವುದಿಲ್ಲವೋ ಅಲ್ಲಿ ನನ್ನ ಕಾರ್ಯಭಾರವನ್ನು ನಡೆಸಲು ಈ ದೇವತಾ ಮೂರ್ತಿಗಳನ್ನು ನಿಯೋಜಿಸಲಾಗಿದೆ. ಅವು ನನ್ನ ಪ್ರತಿನಿಧಿಗಳು !
ದೇವತಾಮೂರ್ತಿಗಳು ಪ್ರತ್ಯೇಕವಾದ ಬುದ್ಧಿಶಕ್ತಿಯನ್ನು ಹೊಂದಿರುತ್ತವೆ. ದೇವತಾಮೂರ್ತಿಗಳಿಗೆ ಚೈತನ್ಯವನ್ನು ತುಂಬುವುದು ಒಂದು ಮಹತ್ಕಾರ್ಯ. ಅದು ಒಂದು ಶಿಶುವಿಗೆ ಜನ್ಮಕೊಟ್ಟಂತೆ. ಈ ಚೈತನ್ಯಪೂರಿತ ಆರಾಧ್ಯದೈವಗಳು ನಿಮ್ಮ ಪ್ರಾರ್ಥನೆಗೆ ನೇರವಾಗಿ ಓಗೊಡುತ್ತವೆ. ನೀವು ಮುಕ್ತವಾಗಿ ಅವುಗಳೊಡನೆ ವರ್ತಿಸಿದರೆ ಅವೂ ನಿಮ್ಮೊಡನೆ ನೇರವಾಗಿ ವರ್ತಿಸುತ್ತವೆ.
ನೀವು ನಮ್ಮ ಪೂಜೆಯನ್ನೂ, ಆಶ್ರಮದ ದಿನಚರಿಯನ್ನೂ ಗಮನಿಸಿದರೆ, ಪ್ರಾತಃಕಾಲದಲ್ಲಿ ಆರಾಧ್ಯದೈವವನ್ನು ಎಬ್ಬಿಸಲು ಸೂಕ್ತವಾದ ಸುಪ್ರಭಾತದ ಹಾಡನ್ನು ಕೇಳುವಿರಿ. ನಂತರ ಕೂದಲಿಗೆ ಲೇಪಿಸಲು ಒಂದು ಬಟ್ಟಲು ಎಣ್ಣೆಯನ್ನೂ ಹಲ್ಲುಜ್ಜಲು ಹಲ್ಲುಪುಡಿಯನ್ನೂ ನೀಡುತ್ತಾರೆ! ಅದಾದಮೇಲೆ ಮಂಗಳಸ್ನಾನವನ್ನು ಮಾಡಿಸಿ, ಹೊಸದಾಗಿ ಇಸ್ತ್ರಿಮಾಡಿದ ಉಡುಪನ್ನು ಗುರುಗಳಿಗೆ ಕೊಡುವಂತೆಯೇ ಕೊಡುತ್ತಾರೆ. ಆಹಾರವನ್ನು ನಿವೇದಿಸಿ ಮಂಗಳಾರತಿಯನ್ನು ಮಾಡುತ್ತಾರೆ. ದಿನಕ್ಕೆ ಐದು ಸಲ ಪೂಜೆಯನ್ನು ಮಾಡುತ್ತಾರೆ. ರಾತ್ರಿ ಆರಾಧ್ಯದೈವಕ್ಕೆ ವಿಧಿಬದ್ಧವಾಗಿ ಶಯನೋತ್ಸವವನ್ನು ಮಾಡುತ್ತಾರೆ.
ಇದೆಲ್ಲದರಿಂದ ಆರಾಧ್ಯದೈವಕ್ಕಾಗಲೀ ಗುರುಗಳಿಗಾಗಲೀ ಯಾವ ಲಾಭವೂ ಇಲ್ಲವೆಂಬುದನ್ನು ತಿಳಿಯಿರಿ. ಅದು ನಿಮಗೇ ಲಾಭ! ದೇವೆರೊಂದಿಗೆ ಜೀವಿಸುವುದೆಂದರೆ ಇದೇ. ದೇವರ ಸಾನ್ನಿಧ್ಯವನ್ನು ಅಭ್ಯಾಸಮಾಡುವುದೆಂದರೆ ಇದೇ. ಗುರುಗಳ ಸಾನ್ನಿಧ್ಯದ ಅಭ್ಯಾಸವೇ ಪೂಜೆ. ದೇವರ ಇರುವಿಕೆಯನ್ನು ಪ್ರತಿದಿನವೂ ಸ್ಮರಿಸುವುದಕ್ಕಾಗಿಯೇ ಪೂಜೆಯನ್ನು ಪ್ರತಿದಿನವೂ ಮಾಡುವುದು.
ನಿಮಗೆ ಒದಗಿದ ಎಲ್ಲ ಅದೃಷ್ಟಗಳನ್ನು ಅಥವ ದೀಕ್ಷೆಗಳನ್ನೂ ಎಲ್ಲ ವಾಸ್ತವಾಂಶಗಳನ್ನೂ ಕಲ್ಪನೆಗಳನ್ನೂ ಉಚ್ಚರಿಸಿದಾಗ ನಿಮ್ಮಲ್ಲಿ ಉಂಟಾದ ಬಾಂಧವ್ಯವನ್ನು ನೀವಾಗಿಯೇ ಸ್ಮರಿಸಿಕೊಳ್ಳುವುದೇ ನಿಮ್ಮ ಸಂಸ್ಕಾರ. ಆದು ಸಂಸ್ಕಾರವೆಂಬುದಾಗಿ ಹೇಗಾಗುತ್ತದೆಯೆಂದರೆ ನೀವು ಅದರಲ್ಲಿ ತೊಡಗಿದ್ದಾಗ ನೀವಾಗಿಯೇ ಉನ್ನತವಾದ ಪ್ರಜ್ಞಾಪ್ಟಿತಿಗೆ ಏರುವಿರಿ. ಕೆಲವು ನಿರ್ದಿಷ್ಟವಾದ ಪದಗಳನ್ನು ಕೇಳಿದಾಗ ಅಥವ ಸ್ಮರಿಸಿಕೊಂಡಾಗ ಆಗುವ ತಕ್ಷಣದ ಅರಿವನ್ನು ಕ್ಲಿಕ್ ಅಥವ ಕೈಗೂಡುವಿಕೆ ಎನ್ನುವುದು. ಕ್ಲಿಕ್ ಗಳು ನಿಮಗೆ ದೀಕ್ಷೆಯಂತೆ. ಕ್ಲಿಕ್ ಗಳನ್ನು ಸ್ಮರಿಸಿಕೊಂಡಾಗಲೆಲ್ಲವೂ ಅವು ನಿಮ್ಮನ್ನು ನಿರುತ್ಸಾಹ, ಕೀಳೆನಿಸುವ ಅಥವ ನಕಾರಾತ್ಮಕ ಭಾವನೆಗಳಿಂದ ಹೊರತಾಗಿಸುತ್ತವೆ.
ಯಾವಾಗಲೇ ಆಗಲಿ, ನೀವು ಕುಗ್ಗಿದಾಗ ಅಥವ ನಿರುತ್ಸಾಹಗೊಂಡಾಗ ಅದಕ್ಕೆ ಸರಿಯಾದ ದೀಕ್ಷೆಯನ್ನು ಸ್ಮರಿಸಿಕೊಳ್ಳುವುದೇ ನಿಮಗೆ ನೀವೇ ಮಾಡಿಕೊಳ್ಳುವ ಮಹತ್ತರವಾದ ಉಪಚಾರ. ನಿಮಗೆ ಕೊಟ್ಟ ದೀಕ್ಷೆಯನ್ನು ಸ್ಮರಿಸಿದಾಕ್ಷಣವೇ ಸಹಜವಾಗಿ ಹೀನಭಾವದಿಂದ ಹೊರಬರುವಿರಿ.
ಪೂಜಾನಿಯಮಗಳು, ಸಂಸ್ಕಾರಗಳು ಮತ್ತು ಕರ್ಮ–ಸುಂದರವಾದ ಸಂಬಂಧ
ಕರ್ಮ ಮತ್ತು ಸಂಸ್ಕಾರಗಳು ಯಾವ ರೀತಿ ನೇರವಾಗಿ ಸಂಬಂಧಿಸಿವೆ ಎಂಬುದನ್ನು ನಾನೀಗ ವಿವರಿಸುತ್ತೇನೆ.
ಕರ್ಮದಲ್ಲಿ ಮೂರು ಬಗೆ. ಈ ಮೂರು ಕರ್ಮಗಳ ಬಗ್ಗೆಯೂ, ಈ ಕರ್ಮಗಳ ನಕಾರಾತ್ಮಕ ಪ್ರಭಾವವನ್ನು ಸಂಸ್ಕಾರಗಳನ್ನು ಮಾಡುವ ಮೂಲಕ ಹೇಗೆ ನಿವಾರಿಸಿಕೊಳ್ಳಬಹುದೆಂಬುದನ್ನೂ ಹೇಳುತ್ತೇನೆ. ನಾನೀಗ ಹೇಳಲಿರುವುದನ್ನು ಅರ್ಥಮಾಡಿಕೊಂಡಮಾತ್ರದಲ್ಲಿ ನೀವು ಅವುಗಳಿಂದ ಪಾರಾಗಬಹುದು.
ವೈದಿಕ ನಿಯಮಾಚರಣೆಗಳು ಬಹಳ ಪ್ರಭಾವಶಾಲೀ ಸಾಧನಗಳು. ಅವು ಪ್ರಭಾವಪೂರ್ಣವಾದ ತಂತ್ರಗಳು. ಅನೇಕರು ನನ್ನನ್ನು ಕೇಳುತ್ತಾರೆ. 'ನೀವು ಆತ್ಮಜ್ಞಾನಿಗಳು. ನೀವೇಕೆ ವೈದಿಕವಿಧಿಗಳನ್ನು ಆಚರಿಸಬೇಕು?' ಎಂದು ನಾನವರಿಗೆ ಹೇಳುತ್ತೇನೆ. 'ನಾನು ಆತ್ಮಜ್ಞಾನವನ್ನು ಪಡೆದಿರುವುದರಿಂದಲೇ ಜನರಿಗೆ ಏಕೆ ಮತ್ತು ಹೇಗೆ ವೈದಿಕವಿಧಿಗಳನ್ನು ಆಚರಿಸಬೇಕೆಂಬುದನ್ನು ಸರಿಯಾಗಿ ಹೇಳುತ್ತೇನೆ!' ಆತ್ಮಜ್ಞಾನಿಗಳಿಗೆ ತಮಗಾಗಿ ಯಾವ ಸಂಸ್ಕಾರಗಳನ್ನೂ ಮಾಡಬೇಕಾದ ಅವಶ್ಯಕತೆ ಇಲ್ಲ. ನಿಮಗೊಂದು ಸಣ್ಣ ಕಥೆಯನ್ನು ಹೇಳುತ್ತೇನೆ:
ಒಬ್ಬನು ಒಂದು ಹೋಟೆಲಿಗೆ ಹೋಗಿ ಇಡ್ಲಿಗಳನ್ನು ತಿನ್ನಲು ಮೊದಲು ಮಾಡಿದನು. ಆತನು ಎಂಟು ಇಡ್ಲಿಗಳನ್ನು ತಿಂದು, ಒಂಭತ್ತನೆಯದನ್ನು ತಿಂದ ನಂತರ ಆತನ ಹಸಿವು ನೀಗಿತು. ಮಾಣಿಯು ಬಂದು ಒಂಭತ್ತು ಇಡ್ಲಿಗಳ ಬಿಲ್ ಕೊಟ್ಟನು. ಆತನು 'ಇದೇನು? ನಾನು ನನ್ನ ಹಸಿವನ್ನು ಹಿಂಗಿಸಿದ ಆ ಒಂಬತ್ತನೇ ಇಡ್ಲಿಗೆ ಮಾತ್ರವೇ ಹಣಕೊಡುವುದು. ಮೊದಲ ಎಂಟು ಇಡ್ಲಿಗಳಿಂದೇನೂ ಆಗಲಿಲ್ಲ. ಒಂಬತ್ತನೆಯ ಇಡ್ಲಿಯಿಂದ ಮಾತ್ರವೇ. ನನ್ನ ಹಸಿವು ಹಿಂಗಿದುದು. ಆದುದರಿಂದ ನಾನು ಆ ಇಡ್ಲಿಗೆ ಮಾತ್ರವೇ ಹಣಕೊಡುವುದು!
ಈ ಮನುಷ್ಯನ ಸಂಭಾಷಣೆ ವಿಚಿತ್ರವೆನಿಸುವುದಿಲ್ಲವೆ? ನಾವೂ ಸಹ ಜೀವನದಲ್ಲಿ ಇದನ್ನೇ ಮಾಡುವುದು. ಶಾಸ್ತ್ರವಿಧಿಗಳನ್ನು ತಿರಸ್ಕರಿಸುವವರೇ ಮೊದಲ ಎಂಟು ಇಡ್ಲಿಗಳನ್ನು ತಿರಸ್ಕರಿಸುವವರು. ವೈದಿಕ ನಿಯಮಾಚರಣೆ ಅಪ್ರಯೋಜಕ, ನಾವು ನೇರವಾಗಿ ಧ್ಯಾನಕ್ಕೂ, ಆಧ್ಯಾತ್ಮಿಕ ಅನುಭವಗಳನ್ನು ಪಡಯಲೂ ಹೋಗುತ್ತೇವೆ ಎನ್ನುವವರು ಮೊದಲನೆ ಎಂಟು ಇಡ್ಲಿಗಳನ್ನು ತಿರಸ್ಕರಿಸುವುದಲ್ಲದೆ ಬೇರೇನನ್ನೂ ಮಾಡುತ್ತಿಲ್ಲ.
ಮೊದಲನೆ ಎಂಟು ಇಡ್ಲಿಗಳಿಂದಲೇ ಒಂಬತ್ತನೆಯ ಇಡ್ಡಿಯು ಕೆಲಸಮಾಡಿದುದು ಎಂಬುದನ್ನು ತಿಳಿಯಿರಿ. ಆತನು ಮೊದಲನೆ ಎಂಟು ಇಡ್ಲಿಗಳನ್ನು ತಿಂದಿರದಿದ್ದರೆ, ಒಂಬತ್ತನೆಯ ಇಡ್ಲಿಯು ಆತನ ಹಸಿವನ್ನು ಶಮನಗೊಳಿಸುತ್ತಿರಲಿಲ್ಲ. ಹಾಗೆಯೇ, ನೀವು ವಿಧಿನಿಯಮಗಳಿಂದ ಪೂಜೆಯನ್ನು ನಿಷ್ಟೆಯಿಂದ ಮಾಡಿದ್ದರೆ, ಧ್ಯಾನವು ಸಿದ್ಧಿಸುವುದು. ಪೂರ್ವಭಾವಿಯಾದ ಇವುಗಳನ್ನೆಲ್ಲವನ್ನೂ ಬಿಟ್ಟು ನೇರವಾಗಿ ಒಂಬತ್ತನೆಯ ಇಡ್ಲಿಯನ್ನು ತಿನ್ನುತ್ತೇನೆಂದರೆ ಎಂದಿಗಾದರೂ ಸಾಧ್ಯವೆ? ನಿಮ್ಮ ಹಸಿವು ಎಂದಿಗಾದರೂ ಶಮನವಾದೀತೆ?
ಒಂಬತ್ತನೆಯ ಇಡ್ಲಿಯನ್ನು ನೇರವಾಗಿ ತಿನ್ನಲು ಸಾಧ್ಯವೆನ್ನುವ ಯಾರೇ ಆಗಲಿ, ಅವರು ಸಂಪೂರ್ಣ ಅನುಭವವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಾರೆ. ಅವರು ಬರೀ ಒಂಬತ್ತನೇ ಇಡ್ಲಿಯನ್ನು ಮಾತ್ರವೇ ತಿಂದು, ಹಸಿವಿನಿಂದ ಕುಳಿತಿರುತ್ತಾರೆ. ಅಷ್ಟೇ ಅಲ್ಲ, ಅವರು ಸರಿಯಾದ ರೀತಿಯಲ್ಲಿ ಸಾಧನೆ ಮಾಡದೇ ಇರುವುದರಿಂದ ಏನನ್ನು ಅನುಭವಿಸಬಹುದಾಗಿದ್ದಿತೋ ಅದನ್ನು ಅನುಭವಿಸುವುದಿಲ್ಲ ಅಲ್ಲದೆ, 'ಅನುಭವವೆಂದರೆ ಇಷ್ಟೇ ತಾನೇ?' ಎಂದುಕೊಳ್ಳುತ್ತಾರೆ. ಧ್ಯಾನ–ಮಾಡುವ ವರೆನ್ನಿಸಿಕೊಳ್ಳುವ ಇಂತಹವರನ್ನು ವೇದಾಂತಿಗಳು ಎನ್ನುತ್ತಾರೆ. ಅವರನ್ನು ಅವಲೋಕಿಸಿದ್ದೇ ಆದರೆ, ಅವರ ಮುಖಗಳಲ್ಲಿ ಸಂತೋಷದ ಛಾಯೆಯೇ ಇರುವುದಿಲ್ಲ. ಏನ್ನನ್ನೋ ಕಳೆದುಕೊಂಡಿರುವಂತೆ ಆಜೀವ ನಿರುತ್ಸಾಹಿಗಳಂತೆ ಕಾಣುತ್ತಾರೆ.
ರಾಮಕೃಷ್ಣಪರಮಹಂಸರು ಸುಂದರವಾಗಿ ಹೇಳುತ್ತಾರೆ, 'ನಿಮಗೆ ದೇಹಪ್ರಜ್ಜೆ ಇರುವವರೆವಿಗೂ ವಿಶ್ವಶಕ್ತಿಯನ್ನು ಸಂಪರ್ಕಿಸುವುದು ಮತ್ತೊಂದು ದೇಹದ ಮೂಲಕವೇ ಸಾಧ್ಯ' ಎಂದು. ದೇಹಪ್ರಜ್ಞೆಯನ್ನು ಕಳೆದುಕೊಂಡಾಗ ಮಾತ್ರವೇ ದೈವವನ್ನು ನಿರಾಕಾರವಾಗಿ ಕಾಣಬಲ್ಲಿರಿ. ಅದಾಗುವವರೆವಿಗೂ, ಒಂದು ರೂಪ, ಸ್ಮರಣೆಗೆ ತರುವಂತಹ ಸಂಸ್ಕಾರಗಳು ಹಾಗೂ ಪೂಜಿಸಲು ಕೆಲವು ಆರಾಧ್ಯದೈವಗಳ ಅವಶ್ಯಕತೆ ನಿಮಗಿರುತ್ತದೆ.
ನೋಡಿರಿ: ನಮ್ಮ ಸಂಸ್ಥೆಯ ಮೊದಲ 3 ವರ್ಷಗಳಲ್ಲಿ ಎಂದರೆ 2003 ರಿಂದ 2006 ರವರೆವಿಗೆ, ನಾನು ಧ್ಯಾನದೊಂದಿಗೆ ಯಾವ ವೈದಿಕ ನಿಯಮವನ್ನೂ ಹಾಕಿರಲೇ ಇಲ್ಲ. 2006 ರಲ್ಲಿ ಮಾತ್ರವೇ ಪ್ರತಿದಿನದ 'ನಿತ್ಯಧ್ಯಾನ್' ಧ್ಯಾನದೊಂದಿಗೆ ಗುರುಪೂಜೆಯನ್ನು ಸೇರಿಸಿದೆ.
2003 ರಿಂದ 2005ರ ವರೆವಿಗೂ ಧ್ಯಾನದೀಕ್ಷೆಯನ್ನು ಪಡೆದ ಶೇಕಡಾ 20 ರಿಂದ 30 ರಷ್ಟು ಜನರು ಮಾತ್ರವೇ ಮೂರು ತಿಂಗಳಾದರೂ ಧ್ಯಾನವನ್ನು ಮುಂದುವರೆಸಿದರು. ಮೂರು ತಿಂಗಳಾದಮೇಲೆ ಅವರೂ ಧ್ಯಾನವನ್ನು ನಿಲ್ಲಿಸಿ ಬಿಟ್ಟರು!
ಹೇಗಾದರೂ, ಈಗ, ನಾನು 'ನಿತ್ಯಧ್ಯಾನ್'ದೊಂದಿಗೆ ಗುರುಪೂಜೆಯನ್ನು ಸೇರಿಸಿದ ಮೇಲೆ, ಅದೂ ಒಂದು ವಿಧಿ ನಿಯಮದಂತಾದ ಮೇಲೆ, ದೀಕ್ಷೆಯನ್ನು ಪಡೆದ ಶೇಕಡ ೮೦ ರಷ್ಟು ಜನರು ಅನುಸರಿಸುತ್ತಿದ್ದಾರೆ! ನಾನು ಅಂಕಿ ಅಂಶಗಳ ಅಧ್ಯಯನವನ್ನು ಮಾಡಿ ಇದನ್ನು ಕಂಡು ಹಿಡಿದೆ. ಆದುದರಿಂದ ಧ್ಯಾನದ ಜೊತೆಗೆ ವಿಧಿನಿಯಮವನ್ನೂ ನಿಯತವಾಗಿ ಕುಳಿತುಕೊಳ್ಳುವ ಹವ್ಯಾಸವನ್ನು ಮತ್ತು ಏನಾದರೂ ಸಾಧನೆಯನ್ನೂ ಬೆಳೆಸಿಕೊಳ್ಳುವುದು ಒಳ್ಳೆಯದು.
ಹಾಗಿಲ್ಲದಿದ್ದರೆ ನೀವು ಯಾವ ಸಾಧನೆಯನ್ನೂ ಕ್ರಮವಾಗಿ ಮಾಡುವುದಿಲ್ಲ. ಮೊದಲನೆಯ ದಿನ 'ಇವತ್ತು ನಮ್ಮ ಅತ್ತೆಯವರು ಇದ್ದಾರೆ,' ಎಂದೋ, 'ನನಗೆ ತುಂಬಾ ಕೆಲಸವಿದೆ ' ಎಂದೋ ಬಿಟ್ಟುಬಿಡುತ್ತೀರಿ. ಎರಡು ದಿನ ಕಳೆದು ನಿಮ್ಮ ಅತ್ತೆಯವರು ಹೋದನಂತರ ಅಥವ ನಿಮ್ಮ ಕೆಲಸ ಮುಗಿದನಂತರ 'ಅತ್ತೆಯವರನ್ನು ಕಳಿಸಿದ ಬಿಡುವಿನಲ್ಲಿ ಸ್ವಲ್ಪ ಆರಾಮವಾಗಿರೋಣ, ಈ ದಿನ ಮಾಡುವುದು ಬೇಡ' ಎಂದುಕೊಳ್ಳುತ್ತೀರಿ ಅಥವ ನೀವು ಸಂತೋಷವಾಗಿದ್ದರೆ, 'ಈ ದಿನ ಸಂತೋಷವಾಗಿದ್ದೀನಲ್ಲಾ, ಇನ್ನು ಧ್ಯಾನವೇಕೆಮಾಡಬೇಕು?' ಎಂದುಕೊಳ್ಳುತ್ತೀರಿ ಅಥವ ನೀವು ನಿರುತ್ಸಾಹಿಯಾಗಿದ್ದರೆ, 'ಈ ದಿನ ಯಾಕೋ ಉತ್ಸಾಹವಿಲ್ಲ, ಧ್ಯಾನಕ್ಕೆ ಹೇಗೆ ತಾನೇ ತೊಡಗಲಿ?' ಎಂದುಕೊಳ್ಳುತ್ತೀರಿ. ಧ್ಯಾನವನ್ನು ತಪ್ಪಿಸಿಕೊಳ್ಳಲು ನಿಮ್ಮ ಮನಸ್ಸು ಏನಾದರೊಂದು ತರ್ಕವನ್ನು ಹುಡುಕುತ್ತದೆ. ಆದರೆ ಅದನ್ನು ಒಂದು ಸಂಸ್ಕಾರದಂತೆ ಮಾಡಿದರೆ
ತಪ್ಪಿಸಿಕೊಳ್ಳಲು ಯಾವ ತರ್ಕವೂ ಸಿಗುವುದಿಲ್ಲ. ಸುಮ್ಮನೆ ಮಾಡುತ್ತೀರಿ.
ಈಗ, ಜನನ ಮರಣಗಳ ಚಕ್ರದ ಮೂಲಕ ಹೇಗೆ ಹೋಗುವೆವು ಮತ್ತು ಈ ದೀಕ್ಷೆಗಳು ಮತ್ತು ಸಂಸ್ಕಾರಗಳು ಯಾವ ರೀತಿಯಲ್ಲಿ ಅದರಿಂದ ಮುಕ್ತಗೊಳಿಸುವುವು ಎಂಬುದನ್ನೂ, ಮತ್ತು ಈ ಚಕ್ರದಿಂದ ಅವು ನಮ್ಮನ್ನು ಯಾವ ರೀತಿ ಪಾರುಮಾಡುತ್ತವೆ ಎಂಬುದನ್ನೂ ನೋಡೋಣ.
ಮೂರು ಬಗೆಯ ಕರ್ಮಗಳು ಮತ್ತು ಅವುಗಳನ್ನು ದಹಿಸುವ 'ದೀಕ್ಷೆ
ಮೂಲತಃ ನಾವು ಮೂರು ಪದರಗಳ ಕರ್ಮಗಳನ್ನು ಹೊಂದಿದ್ದೇವೆ, ಸಂಚಿತ, ಪ್ರಾರಬ್ಗ ಮತ್ತು ಆಗಾಮ್ಯ.
ಸಂಚಿತಕರ್ಮವು ಒಂದು ರಿಸರ್ವ್ ಬ್ಯಾಂಕಿನಂತೆ. ನೀವು ದೇಹವನ್ನು ಧರಿಸಿ ಭೂಗ್ರಹಕ್ಕೆ ಬಂದಿರುವುದು ಇದೇ ಮೊದಲ ಬಾರಿ ಅಲ್ಲದಿರಬಹುದೆಂದು ತಿಳಿಯಿರಿ. ಇದಕ್ಕೆ ಮುಂಚಿತವಾಗಿ ಲಕ್ಷಾಂತರ ದೇಹಗಳನ್ನು ಧರಿಸಿರಬಹುದು. ಆ ಲಕ್ಷಾಂತರ ದೇಹಗಳಲ್ಲಿ ನಿಮಗೆ ಪೂರೈಸಲಾಗಿರದ ಏನೇನು ಆಲೋಚನೆ ಗಳಿದ್ದವೋ ಏನೇನು ನುಡಿದಿದ್ದಿರೋ, ಏನೇನು ಮಾಡಿದ್ದಿರೋ ಆ ಎಲ್ಲಾ ಅನುಭವಗಳೂ ನಿಮ್ಮ ಸ್ಟೃತಿಯಲ್ಲಿ ನೆನಪಿನ ಗುರುತಾಗಿ ಉಳಿದಿರುತ್ತದೆ. ಅವೆಲ್ಲವನ್ನೂ ಸೇರಿಸಿ ಸಂಚಿತ ಕರ್ಮವೆನ್ನುತ್ತಾರೆ. ಇದಕ್ಕೆ ಸಂಸ್ಕೃತದಲ್ಲಿ ಸಮೂಚಿತವೆಂಬ ಇನ್ನೊಂದು ಪದವೂ ಇದೆ. ನಾನು 'ಬ್ಯಾಂಕ'' ಎನ್ನುವಾಗ ಅದು ಕೂಡಿಹಾಕಿದ ಅಥವ ಉಳಿತಾಯದ ಕುರಿತಲ್ಲ, ಅದು ಸಾಲ! ಆ ಸಾಲವನ್ನೆಲ್ಲವನ್ನೂ ತೀರಿಸಬೇಕು !
ಮುಂದಿನದು ಪ್ರಾರಬ್ಧಕರ್ಮ. ಪ್ರಾರಬ್ಧ ಎಂದರೆ, ಸಂಚಿತಕರ್ಮದ ಬ್ಯಾಂಕಿನಿಂದ ಸ್ವಲ್ಪ ಕರ್ಮವನ್ನು ತೆಗೆದುಕೊಂಡು ಅದರಿಂದ ನಿಮ್ಮ ದೇಹವನ್ನು ಸೃಷ್ಟಿಸಿಕೊಂಡು, ಹುಟ್ಟುವಾಗ ಆ ಕರ್ಮಗಳನ್ನು ಆ ದೇಹದಮೂಲಕ ಭೋಗಿ ಸಲು ಮತ್ತು ನೀಗಿಸಲು ನಿರ್ಧರಿಸುವಿರಿ. ಆದುದರಿಂದ, ಪ್ರಾರಬ್ಧವೆಂದರೆ, ಈ ಜೀವನದಲ್ಲಿ ನಿಮ್ಮ ಈ ದೇಹದ ಮೂಲಕ ಭೋಗಿಸಲು ಅಥವ ನೀಗಿಸಲು ಸಂಚಿತದಿಂದ ತಂದಿರುವ ಒಂದು ತುಣುಕು ಮಾತ್ರ.
ಮೂರನೆಯ ರೀತಿಯ ಕರ್ಮವು ಅತ್ಯಂತ ಕೆಟ್ಟದ್ದು. ಅದು ಆಗಾಮ್ಯ ಕರ್ಮ. ಈ ಲೋಕಕ್ಕೆ ಬಂದಮೇಲೆ ಮಾಡುವ ಹೊಸ ಆಲೋಚನೆಗಳು, ಆಡುವ ಮಾತುಗಳು ಮತ್ತು ಮಾಡುವ ಕೆಲಸಗಳಿಂದ ಸೇರಿಸಿಕೊಳ್ಳುವ ಕರ್ಮ.
ಭೂಲೋಕಕ್ಕೆ ಬಂದ ಯಾರೇ ಆಗಲೀ, ಅವರು ಮರಣ ಹೊಂದುವ ಮುನ್ನ ಪ್ರಾರಬ್ದಕರ್ಮವನ್ನು ತೀರಿಸಲೇಬೇಕು. ಉದಾಹರಣೆಗೆ ನಿಮ್ಮ ಸಂಚಿತ ಬ್ಯಾಂಕಿನಲ್ಲಿ 1000 ಕರ್ಮಗಳಿವೆ ಎಂದಿಟ್ಟುಕೊಳ್ಳೋಣ. ನೀವು ದೇಹವನ್ನು ಧರಿಸಿ ಬರುವಾಗ ಈ 1000 ಕರ್ಮಗಳಲ್ಲಿ ಕೇವಲ 10 ಕರ್ಮಗಳನ್ನು ತೆಗೆದುಕೊಂಡು, 'ಈ ಬಾರಿಗೆ ಈ ಹತ್ತು ಕರ್ಮಗಳನ್ನು ತೀರಿಸೋಣ' ಎಂದುಕೊಂಡು ಬರುತ್ತೀರಿ, ಎಂದಿಟುಕೊಳ್ಳೋಣ. ಏನೇ ಆಗಲಿ, ಬಂದನಂತರ ನಿಮ್ಮ ಕರ್ಮವನ್ನು ತೀರಿಸುವ ಬದಲು, ಬೇರೆಯವರನ್ನು ಗಮನಿಸಲು ಪ್ರಾರಂಭಿಸುತ್ತೀರಿ ಹಾಗೂ ಅವರ ಆಸೆಗಳ ಮೇಲೆ ಆಧಾರಿತವಾಗಿ ಕರ್ಮವನ್ನು ಕಟ್ಟಿಕೊಳ್ಳುತ್ತೀರಿ. ಇದಕ್ಕೆ ಎರವಲು ತೆಗೆದುಕೊಂಡ ಆಸೆಗಳೆಂದು ಹೆಸರು. ಈ ಎರವಲು ಪಡೆದ ಆಸೆಗಳ ಕಾರಣದಿಂದ ನೀವು ಕೆಲವು ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕಾರ್ಯಗಳನ್ನು ಸೃಷ್ಟಿಸುತ್ತೀರಿ.
ಉದಾಹರಣೆಗೆ, ನೀವು ನಿಮಗಿಂತಲೂ ಸುಂದರವಾಗಿರುವವರನ್ನು ನೋಡಿದರೆ, ಮಾಡಿಕೊಳ್ಳುವ ಹೋಲಿಕೆಯಿಂದಲೂ, ಅಸೂಯೆಯಿಂದಲೂ, ನಿಮ್ಮ ಯೋಚನೆಗಳು ಹೆಚ್ಚಾಗುತ್ತವೆ. ಯೋಚನೆಗಳ ಆಧಾರಿತವಾಗಿ ಕರ್ಮವನ್ನು ಸೃಷ್ಟಿಸಿಕೊಳ್ಳುತ್ತೀರಿ. ಕೆಲವು ವೇಳೆ ನಿಜಸ್ಥಿತಿಯನ್ನರಿಯದೆಯೇ ಯಾರನ್ನಾದರೂ ದೂಷಿಸುತ್ತೀರಿ. ಹೀಗೆ ಮಾಡಿದಾಗ ನುಡಿಗಳ ಆಧಾರಿತವಾಗಿ ಕರ್ಮವನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮ ಎಲ್ಲ ಕಾರ್ಯಗಳೂ ಚಾಲನೆಗೊಂಡಿರುವುದರಿಂದ ದುರಾಸೆ ಅಥವ ಭಯದಿಂದ ಅವು ತೋರಿಕೆಯ ಕ್ರಿಯೆಗಳಾಗಿ ಕೊನೆಗೊಂಡು ನಿಮ್ಮ ಕರ್ಮಕ್ಕೆ ಸೇರುತ್ತವೆ. ಈ ರೀತಿ, 200 ಕರ್ಮಗಳು ಸೇರಿದವು ಎಂದಿಟ್ಟು ಕೊಳ್ಳೋಣ. ನೀವು ಹಿಂದಿರುಗುವಷ್ಟರಲ್ಲಿ ಏನಾಗುತ್ತದೆ? ನಿಮ್ಮ ಬ್ಯಾಂಕಿನ ಸಾಲವು 200 ರಷ್ಟು ಹೆಚ್ಚಾಗಿರುತ್ತದೆ! ನೀವು ಬಂದಾಗ ತಂದಿದ್ದ 10 ಕರ್ಮಗಳನ್ನು ಬಗೆಹರಿಸಿಕೊಳ್ಳುವ ಬದಲು ಜೊತೆಗೆ 200ನ್ನು ಕಟ್ಟಿಕೊಂಡಿರಿ.
ಮುಂದಿನ ಸಲ ಜನ್ಮಧಾರಣೆ ಮಾಡಿದಾಗ ಏನಾಗುತ್ತದೆ? ನಿಮ್ಮ ಸಂಚಿತವು 990 + 210 ಈಗಿನದು. ಒಟ್ಟಿನಲ್ಲಿ ಹಿಂದಿನ ಜನ್ಮಕ್ಕಿಂತಲೂ 200 ಕರ್ಮಗಳು ಹೆಚ್ಚಾದುವು, ಪುನಃ ಅದರಲ್ಲಿ 10ನ್ನು ತೆಗೆದುಕೊಂಡು ಇನ್ನೊಂದು ದೇಹವನ್ನು ಧರಿಸಿ ಬರುವಿರಿ. ಆದರೆ ಇನ್ನೂ ಹೆಚ್ಚಾಗಿ ಸೇರಿಸಿಕೊಂಡು ಹಿಂದಿರುಗುವಿರಿ. ಇದೊಂದು ವಿಷಮ ಚಕ್ರವಾಗುತ್ತದೆ. ಎಡೆಬಿಡದೆ ದೇಹಧರಿಸುವುದು, ಪುನಃ ಪುನಃ ಮರಣ ಹೊಂದುವುದು. ಇದನ್ನೇ ನಾವು ಜನನ ಮರಣ ಚಕ್ರ ಎನ್ನುವುದು.
ಅದರ ಬದಲು, ನೀವು ಜೀವಿಸಿರುವಾಗ, ಯಾರಾದರೂ ನೀವು ದೇಹವಲ್ಲ ಮನಸಲ್ಪ, ಎಂತಲೂ ಇದು ಕರ್ಮದ ಪರಿಣಾಮ ಎಂತಲೂ ತಿಳಿಯಪಡಿಸಿದರೆ, ಆಗ ನಿಮ್ಮ ಮೇಲಿನ ಕರ್ಮದ ಪ್ರಭಾವವು ಕಡಿಮೆಯಾಗುತ್ತಾ ಬರುತ್ತದೆ. ಹಾಗೂ, ನೀವು ಹೊತ್ತು ತಂದ ಪ್ರಾರಬ್ಧ ಕರ್ಮವು ನಶಿಸಲಾರಂಭಿಸುತ್ತದೆ.
ನೀವು ದೇಹಧರಿಸಿ ಬಂದಾಗ 10 ಕರ್ಮಗಳನ್ನು ಹೊತ್ತು ಬಂದಿದ್ದೀರಿ ಎಂದಿಟುಕೊಳ್ಳೋಣ. ಈ ಕರ್ಮಗಳಲ್ಲಿ 3 ಕರ್ಮಗಳು ನಿಮ್ಮನ್ನು ನಿರುತ್ತಾಹ ಗೊಳಿಸುವಂತಹ ಕರ್ಮಗಳು ಎಂದರೆ, ನಿಮ್ಹನ್ನು ನಿರುತ್ತಾಹಗೊಳಿಸುವ ಶಕ್ತಿಯನ್ನು ಪಡೆದಿರುವ 3 ಸಂಸ್ಕಾರಗಳು ಎನ್ನೋಣ. ಈ ಸಂಸ್ಕಾರಗಳಿಗೆ ಶರಣಾಗಿ ನೀವು ನಿರುತ್ಸಾಹಿಗಳಾದರೆ, ಅವು ಕೇವಲ ಮೂರಾಗಿ ಉಳಿಯುವು ದಿಲ್ಲ, ಬಹುಶಃ 10 ಆಗುತ್ತದೆ. ಹಾಗೆ ಸೇರಿದ 7 ಕರ್ಮಗಳೇ ಆಗಾಮ್ಲ ಕರ್ಮಗಳು. ಪ್ರಾರಬ್ದವನ್ನು ತೊರೆದುಕೊಳ್ಳುವುದನ್ನು ಬಿಟ್ಟು ಅದರೊಂದಿಗೇ ಇರಲು ನಿಶ್ಚಯಿಸಿದರೆ ಆಗಾಮ್ಯವನ್ನು ಸೇರಿಸಿಕೊಳ್ಳುವಿರಿ. ಇದಕ್ಕೆ ಬದಲಾಗಿ, ಈ ಸಂಸ್ಕಾರಗಳು ನಿಮ್ಮನ್ನು ನಿರುತ್ಸಾಹಗೊಳಿಸಿದಾಗ, ದೀಕ್ಷೆಯ ಸಹಾಯದಿಂದ ಖಿನ್ನತೆಯಿಂದ ಹೊರಬರುವುದನ್ನು ಕಲಿತಿದ್ದರೆ, ಆಗ ಈ ಕರ್ಮಗಳು ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲಾರವು. ಆದುದರಿಂದ, ಕಾಲಕಳೆದಂತೆ 10 ಕರ್ಮಗಳಲ್ಲಿ ನಿಮ್ಮನ್ನು ಬಿಟ್ಟುಹೋಗುತ್ತವೆ. ಪ್ರಾರಬ್ಗ ಕರ್ಮದ ಪ್ರಭಾವವನ್ನು ನೀವು ಕಡಿಮೆ ಮಾಡಿಕೊಂಡಂತೆಲ್ಲಾ ಪ್ರಾರಬಗಳು ದಹಿಸಿಹೋಗುವುದೇ ಅಲ್ಲದೆ ಹೊಸ ಕರ್ಮಗಳು ಎಂದರೆ ಆಗಾಮ್ಯ ಕರ್ಮಗಳು ಬಂದು ಸೇರುವುದೂ ಕಡಿಮೆಯಾಗುತ್ತದೆ.
ಹೇಗೆಂದು ನೋಡೋಣ?
ಪ್ರಾರಬ್ಗ ಕರ್ಮವು ನಿಮ್ಮ ಮೇಲೆ ಪ್ರಭಾವವನ್ನು ಬೀರದಿದ್ದಾಗ ಆಗಾಮ್ಯದ ಸೇರ್ಪಡೆ ನಿಂತುಹೋಗುತ್ತದೆ. ಆದುದರಿಂದ ಯಾವಾಗ ಈ 10 ಸಂಸ್ಕಾರಗಳ ಪ್ರಭಾವವು ನಿಮ್ಮ ಮೇಲೆ ಬೀರುವುದು ನಿಲ್ಲುತ್ತ ದೆಯೋ, ಆಗ, ಆಗಾಮ್ಯದ ಸೇರುವಿಕೆಯೂ ನಿಲ್ಲುತ್ತದೆ, ಏಕೆಂದರೆ, ಈ 10 ಸಂಸ್ಕಾರಗಳೇ ಮುಂದಿನ ಸಂಸ್ಕಾರಗಳ ಸೇರುವಿಕೆಗೆ ಕಾರಣ.
ಕೇವಲ ದೀಕ್ಷೆಗಳ ಸಹಾಯದಿಂದಲೇ ನೀವು ಪ್ರಾರಬ್ದದ ಪ್ರಭಾವವನ್ನು ತಗ್ಗಿಸಿಕೊಳ್ಳಬಹುದು ಹಾಗೂ ಪಾರಂಪರ್ಯವಾದ ಆನಂದದ ಸ್ಥಿತಿಯೆಡೆಗೆ ಹೋಗಬಹುದು. ಶುದ್ದವಾದ ಮತ್ತು ಜಂಜಾಟವಿಲ್ಲದ ಆಂತರ್ಯವನ್ನು ಪುನಃ ಪಡೆಯಬಹುದು. ಆಗಾಮ್ಯಕರ್ಮದ ಸೇರುವಿಕೆಯನ್ನು ಸಹ ತಡೆಯಬಹುದು.
ದೀಕ್ಷೆ ಎಂದರೆ ನಿಮ್ಮ ಪ್ರಾರಬ್ದದಿಂದುಂಟಾದ ನಿರುತ್ಸಾಹದಿಂದ ಹೊರತು ಪಡಿಸುವ ಮನೋಭಾವ, ಜ್ಞಾನ ಅಥವ ಕ್ಲಿಕ್ ಗಳು.
ಸಾಂಪ್ರದಾಯಿಕ ಪೂಜೆ–ಇಚ್ಛ್ಸಾಪೂರ್ತಿಗೆ ಶಕ್ತಿಸೋತ ಅದರೊಂದಿಗೆ ನಿಮ್ಮ ಸಂಚಿತವನ್ನು ದಹಿಸಿರಿ….
ಪೂಜೆ ಎಂಬುದು ಒಂದು ಸಂಪ್ರದಾಯದ ಆಚರಣೆ. ನಿಮಗೆ ಯಾವಾಗಲೇ ಆಗಲಿ, ಕಷ್ಟ ಬಂದಾಗ, ಅವಶ್ಯಕವಾದ 'ಕ್ಲಿಕ್' (ಸಾಫಲ್ಯ) ತಾನೇ ತಾನಾಗಿ ಬರಲು, ಇಂದಿನವರೆವಿಗೂ ನಿಮ್ಮಲ್ಲಿ ಉಂಟಾದ ಎಲ್ಲ 'ಕ್ಲಿಕ್'ಗಳನ್ನೂ ಪ್ರತಿದಿನವೂ ಸ್ಮರಿಸಿಕೊಳ್ಳುವುದೇ ಪೂಜೆಯಲ್ಲದೆ, ಇನ್ನೇನೂ ಅಲ್ಲ,
ಗುರುಗಳು ಬೋಧಿಸುವಾಗ ಅದು ಬೋಧನೆಯೊಂದೇ ಆಗಿರುವುದಿಲ್ಲ, ಅದೊಂದು ಗುರುತರವಾದ ಅನುಭವವಾಗಿರುತ್ತದೆ. ನೀವು ಅವರಿಂದ ಪಡೆದ ದೀಕ್ಷೆಯನ್ನು ಪ್ರಯೋಗಿಸದಿದ್ದರೆ, ಹಾಗೂ ಅವರಿಂದ ಪಡೆದ ಆ ಶಾಸ್ತ್ರ-ಶಸ್ತ್ರವನ್ನು ಮತ್ತೆ ಮತ್ತೆ ಉಪಯೋಗಿಸದಿದ್ದರೆ ಅವುಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ ಅವುಗಳನ್ನು ಮತ್ತೆ ಸ್ಮರಿಸಿಕೊಳ್ಳಲೂ ಆಗಲಾರದು. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಇದು.
ಉದಾಹರಣೆಗೆ, ನಿಮ್ಮ ಬಳಿ ಒಂದು ಮಂಚವಿದೆ ಎನ್ನೋಣ. ನೀವು ಅದನ್ನು ಎರಡು ವರ್ಷ ಉಪಯೋಗಿಸದಿದ್ದರೆ, ಮಂಚವು ಉಪಯೋಗಕ್ಕೆ ಬಾರದೇ ಹೋಗುವುದಿಲ್ಲ ಅಥವ ಅದೃಶ್ಯವಾಗುವುದಿಲ್ಲ. ಆದರೆ, ನಿಮಗೆ ಅನುಗ್ರಹಿಸಿದ ಜ್ಞಾನ ಹಾಗೂ ದೀಕ್ಷೆಗಳನ್ನು ನೀವು ಉಪಯೋಗಿಸದೇ ಹೋದರೆ ಅವು ನಿಮ್ಮ ಮಲಗುವ ಕೋಣೆಯಲ್ಲಿ ನಿಮ್ಮ ಉಪಯೋಗಕ್ಕಾಗಿ ಕುಳಿತಿರುವುದಿಲ್ಲ. ಇಲ್ಲ! ಅವು ಸುಮ್ಮನೆ ಮಾಯವಾಗುವುವು, ಅಷ್ಟೆ
ಹಾಗಾದರೆ, ನಿಮ್ಮಲ್ಲಾದ ಎಲ್ಲಾ ಕ್ಲಿಕ್ ಗಳನ್ನೂ ನೀವು ಪ್ರತಿದಿನವೂ ಹೇಗೆ ಸ್ಮರಿಸಿಕೊಳ್ಳುವಿರಿ? ಪ್ರತಿದಿನವೂ ಕುಳಿತುಕೊಂಡು, ನಿಮ್ಮಲ್ಲಾದ ಎಲ್ಲಾ ಕ್ಲಿಕ್‌ಗಳನ್ನೂ ಸ್ಮರಿಸಿಕೊಳ್ಳುವುದೇ ಪೂಜೆ ಅಥವ ಸಂಪ್ರದಾಯ ಎನ್ನುವುದು. ಈ ಲಕ್ಷ್ಯವನ್ನಿಟ್ಟುಗೊಂಡೇ ಪೂಜೆಗಳನ್ನು ರೂಪಿಸಿರುವುದು.
ಅಪ್ರಯತ್ತವಾಗಿ, ಪ್ರತಿದಿನವೂ, ನಿಮಗೆ ಬೇಕೋ ಬೇಡವೋ ನೀವು ಸಾಂಪ್ರದಾಯಿಕವಾಗಿ ಕುಳಿತಾಗ, ದೀಕ್ಷೆಯ, ಹಾಗೂ ಗುರುಗಳೊಂದಿಗಾದ ಅನುಭವಗಳನ್ನು ಸ್ಮರಿಸಿಕೊಳ್ಳುವಿರಿ. ಪ್ರತಿದಿನದ ಸಂಪ್ರದಾಯವು ನಿಮ್ಮನ್ನು ಪರಿಶುದ್ದವಾದ ಪ್ರಜ್ಞೆಗೆ ಕೊಂಡೊಯ್ಯುತ್ತದೆ. ಸಂಸ್ಕಾರಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳಲಾರಂಭಿಸುತ್ತವೆ. ನಿಮ್ಮ ಹುಟ್ಟಿನೊಂದಿಗೆ ಬಂದ ಸಂಸ್ಕಾರಗಳು ಯಾವಾಗ ನಿಮ್ಮ ಮೇಲಿನ ಶಕ್ತಿಯನ್ನು ಕಳೆದುಕೊಳ್ಳಲಾರಂಭಿಸುತ್ತವೆಯೋ ಆಗ ಹೊಸ ಸಂಸ್ಕಾರಗಳ ಸೇರ್ಪಡೆ ನಿಲ್ಲುತ್ತದೆ. ಸೇರ್ಪಡೆಯೂ ನಿಂತು, ನಿಮ್ಮಲ್ಲಿ ಇರುವ ಕರ್ಮಗಳ ಶಕ್ತಿಯೂ ಇಲ್ಲದೇ ಹೋದಾಗ, ನಿಮ್ಮನ್ನು ಉನ್ನತ ಪ್ರಜ್ಞಾವಸ್ಥೆಯ ವಲಯಕ್ಕೆ ಪುನಃ ಪುನಃ ತರುವ ಗುರುವು ನೀವು ದೇಹವನ್ನು ಬಿಡುವಾಗ ಪ್ರತ್ಯಕ್ಷವಾಗಿ, ನಿಮ್ಮ ಸಂಚಿತವನ್ನೂ ದಹಿಸಿಬಿಡುತ್ತಾನೆ.
ನಿಮ್ಮ ಸಂಚಿತಕರ್ಮದ ಬ್ಯಾಂಕಿನೊಂದಿಗೆ ನೀವು ನೇರವಾಗಿ ವ್ಯವಹರಿಸಲಾರಿರಿ ಎಂಬುದನ್ನೂ ತಿಳಿಯಿರಿ. ಸಂಚಿತವು ದಹಿಸಿಹೋಗಲು, ಗುರುಕೃಪೆಯೊಂದೇ ದಾರಿ. ನಿಮ್ಮ ಸಂಚಿತವನ್ನು ದಹಿಸಲು ಗುರುಕೃಪೆಯು ಏನುಬೇಕಾದರೂ ಮಾಡಬಲ್ಲುದು.
ಉದಾಹರಣೆಗೆ, ನಿಮ್ಮ ಮಗು ಒಂದು ಪುಟ್ಟ ಮನೆ ಕಟ್ಟಲು ಹೆಣಗಾಡುತ್ತಿರುವಾಗ ನೀವೇನು ಮಾಡುವಿರಿ? 'ಸರಿ, ಒದ್ದಾಡಬೇಡ, ನಾನು ಕಟ್ಟಿಕೊಡುತ್ತೇನೆ' ಎನ್ನುವಿರಿ. ಹಾಗೆಯೇ, ಒಬ್ಬ ಶಿಷ್ಯನು ತನ್ನ ಪ್ರಾರಬ್ದ ಮತ್ತು ಆಗಾಮ್ಯ ಕರ್ಮಗಳನ್ನು ತೊರೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವಾಗ, ಗುರುಕ್ಟಪೆಯು ತಾನೇ ತಾನಾಗಿ ನಡೆದು ಸಂಚಿತವೂ ಸಹ ತೊರೆದು ಹೋಗುತ್ತದೆ!
ಒಂದು ಬಹುಮುಖ್ಯವಾದ ಅಂಶವನ್ನು ತಿಳಿದುಕೊಳ್ಳಿರಿ, ಅದೇನೆಂದರೆ, ಇಲ್ಲಿ ಗುರುಕೃಪೆಯೆಂಬುದಾಗಿ ಮಾತನಾಡುತ್ತಿರುವುದು ನನ್ನ ಮೇಲೆ ಮಾತ್ರ ಆಧಾರಿತವಾಗಿಲ್ಲ. ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಸಾಧನೆ ಅಥವ ಧ್ಯಾನವನ್ನು ಯಾರೇ ಮಾಡಿದಾಗ್ಯೂ, ನನ್ನ ಹೊರತಾಗಿಯೂ, ಅವರ ಮೇಲೆ ಕೃಪೆಯಾಗುತ್ತದೆ! ಅದು ನನ್ನ ಮೇಲೆ ಆಧಾರಿತವಾಗಿಯೇ ಇಲ್ಲ, ಅದು ತನ್ನಷ್ಟ ತಾನೇ ನಡೆಯುವ ಕೌಶಲ್ಯ.
ಅದು ಕೇವಲ ನಿಮ್ಮ ಗ್ರಹಿಕೆಯ ಮೇಲೆ ಆಧಾರಿತವಾಗಿದೆಯೇ ವಿನಃ ನನ್ನ ಮೇಲಲ್ಲವೆಂಬುದನ್ನು ಸ್ಪಷ್ಟವಾಗಿಸಿಕೊಳ್ಳಿರಿ. ನಾನೊಂದು ಸಾಗರದಂತೆ– ಯಾರು ಬೇಕಾದರೂ ಯಾವ ಗಾತ್ರದ ಪಾತ್ರೆಯಲ್ಲಿಯಾದರೂ ತುಂಬಿಸಿಕೊಂಡು ಹೋಗಲು ನಾನು ಸದಾ ಲಭ್ಯ. ನೀವು ಒಂದು ತೆಂಗಿನಚಿಪ್ಪನ್ನು ತಂದರೆ, ನನ್ನನ್ನು ಅಷ್ಟರಮಟ್ಟಿಗೆ ತೆಗೆದುಕೊಂಡು ಹೋಗಬಹುದು. ಇನ್ನು ಸ್ವಲ್ಪ ದೊಡ್ಡ ಪಾತ್ರೆಯನ್ನು ತಂದರೆ ಅದರಲ್ಲಿ ಹಿಡಿಸುವಷ್ಟು ತೆಗೆದುಕೊಂಡು ಹೋಗಬಹುದು. ಇನ್ನೂ ದೊಡ್ಡದಾದ ಪಾತ್ರೆಯನ್ನು ತಂದರೆ ಅದೂ ಹಿಡಿಸುವಷ್ಟುತೆಗೆದುಕೊಂಡು ಹೋಗಬಹುದು. ಅದೇ, ನೀವು ಜಾಣರಾದರೆ, ಒಂದು ಕಾಲುವೆಯನ್ನೇ ತೋಡಿಕೊಳ್ಳಬಹುದು.
ಹೀಗೆ, ದೀಕ್ಷೆ ಅಥವ ಪೂಜೆ ಎಂದರೆ, ಎಲ್ಲಾ ದೀಕ್ಷೆಗಳ, ಗುರುಗಳೊಂದಿಗಾದ ಮಹಾನ್ ಅನುಭವಗಳ ಮತ್ತು ಆದೇ ಉನ್ನತವಾದ ಪ್ರಜ್ಞಾಸ್ಥಿತಿಗೆ ಮತ್ತೆ ಮತ್ತೆ ಹೋಗುವ ದೈನಂದಿನ ಸ್ಮರಣೆ. ಆ ಉನ್ನತವಾದ ಸ್ತರದಲ್ಲಿ ಪ್ರತಿದಿನವೂ ಇರಲು ತಯಾರಾದಾಗ, ಮುಂದಿನ 24 ಗಂಟೆಗಳ ಕಾಲ ನಡೆಯಲಿರುವ ಜೀವನದ ನಾಟಕಕ್ಕೆ ತಯಾರಾಗಿದ್ದೀರೆಂದೇ ಅರ್ಥ. ನಿಮಗೆ ಮುಂದಿನ 24 ಗಂಟೆಗಳಿಗೆ ಬೇಕಾಗುವ ಶಕ್ತಿ ಇರುತ್ತದೆ. ಪೂಜೆಯ ಹಿಂದಿರುವ ಕಾರಣವೇ ಇದು.
ಗುರು ಪೂಜೆ
ಗುರುಪೂಜೆಯಲ್ಲಿ ಆಂತರ್ಯದಲ್ಲಿ ಗುರುಗಳಿಗೆ ಗೌರವವನ್ನರ್ಪಿಸುವ ಕಲ್ಪನೆಯನ್ನು ಮಾಡಿಕೊಳ್ಳ ಲಾಗುತ್ತದೆ. ಗುರುಪೂಜೆಯಲ್ಲಿ, ಮಾನಸ ಪೂಜಾ ಮಂತ್ರದಿಂದ ನಿಮ್ಮಲ್ಲಾಗಿರುವ ಎಲ್ಲ ಕ್ಲಿಕ್ ಗಳೂ ನೆನಪಿಗೆ ಬರುವುವು.
ಮಾನಸ ಪೂಜಾಮಂತ್ರದ ಮೊದಲನೆಯ ಪಂಕ್ತಿಯು 'ಹೃತ್ ಪದ್ಮಾಸನಂ ದದ್ಯಾತ್' ಎಂದರೆ, ನನ್ನ ಹೃದಯವು ನಿನ್ನ ಆಸನವಾಗಲಿ' ಎನ್ನುತ್ತದೆ. ನಮ್ಮ ಹೃದಯವು ಶುದ್ದವಾಗಿರಬೇಕೆಂಬುದನ್ನು ಈ ಪಂಕ್ತಿಯೇ ಸೂಚಿಸುತ್ತದೆ. ಅದು ಒಳಗೇ ಆಗುವ ನೆನಪು - ಒಂದು ಕ್ಲಿಕ್. ಈ ಕ್ಲಿಕ್ ಆದಾಗ, ನಮ್ಮ ಎಲ್ಲ ಆಲೋಚನೆಗಳು, ನುಡಿಗಳು ಮತ್ತು ಕ್ರಿಯೆಗಳು ತಾವಾಗಿಯೇ ಶುದ್ದವಾಗುತ್ತವೆ ಮತ್ತು ಇನ್ನೂ ಹೆಚ್ಚು ಕರ್ಮಗಳನ್ನು ಕಟ್ಟಿ ಕೊಳ್ಳದಂತೆಯೂ ಆಗುತ್ತದೆ. ನಮ್ಮ ನಡೆ, ನುಡಿ ಮತ್ತು ಆಚರಣೆಗಳು ಅತಿಶಯವಾದ ಅರಿವಿನಿಂದ ಕೂಡಿ ಕಟ್ಟಿಕೊಳ್ಳದಂತಾಗುತ್ತದೆ.
ನಂತರ, 'ಸಹಸ್ರಾರ್ ಅಚ್ಯುತಾಮೃತ್ಟೇ ಪಾದ್ಯಂ ಚರಣಯೋರ್ ದದ್ಯಾತ್' ಎಂಬ ಪಂಕ್ತಿ ಇದೆ. ಸಹಸ್ರಾರ ಅಮೃತ ಎಂದರೆ ನೀವು ಕೃತಜ್ಞತ್ತೆಯಿಂದ ತುಂಬಿಹೋದಾಗ ನಿಮ್ಮ ನಾಲಿಗೆ ಮತ್ತು ಗಂಟಲಿನಲ್ಲಿ ಆಗುವ ತೀಕ್ಷ್ಣವಾದ ಸಿಹಿಯ ರುಚಿ. ನಿಮ್ಮಲ್ಲಿ ಕೆಲವರು ಇದನ್ನು ಅನುಭವಿಸಿರಬಹುದು. ಅದರಲ್ಲೂ, ಆನಂದ ದರ್ಶನದ ಸಮಯದಲ್ಲಿ ಅನುಭವಿಸಬಹುದು. ನಿಮ್ಮಲ್ಲೆಷ್ಟು ಜನರಿಗೆ ಹೀಗಾಗಿದೆ? ಆನಂದ ದರ್ಶನ ನಡೆಯುತ್ತಿರುವಾಗ ನಿಮಗೆ ಇದ್ದಕ್ಕಿದ್ದಂತೆ ಗಂಟಲಿನಲ್ಲೆಲ್ಲಾ ಸಿಹಿಯಾಗುತ್ತದೆ. ಇದೇ ಆಳವಾದ ಕೃತಜ್ಣತೆಯಿಂದ ಉಂಟಾಗುವ 'ಸಹಸ್ರಾರಾಮೃತ್ಯೆಃ !'
ನಿಮಗೆ ಸಂತೃಪ್ತಿಯಾದಾಗ ಸಹಸ್ರಾರದಿಂದ–ಎಂದರೆ ನಿಮ್ಮ ನೆತ್ತಿಯ ಮಧ್ಯಭಾಗದಿಂದ–ಅಮೃತ ವರ್ಷವಾಗುತ್ತದೆ. ಹಾಗೂ ನಿಮ್ಮ ಗಂಟಲೆಲ್ಲಾ ಅದರಿಂದ ತುಂಬಿಕೊಳ್ಳುತ್ತದೆ. ಆ ಅಮೃತವನ್ನೇ 'ಪಾದ್ಯಂ' ಅಥವ ದೇವರ ಪಾದಗಳನ್ನು ತೊಳೆಯುವ ನೀರಾಗಿ ಉಪಯೋಗಿಸಬೇಕಾದುದು. ಅದರರ್ಥವೇನೆಂದರೆ, ಪ್ರತಿದಿನವೂ ಪೂಜೆಗೆ ಕುಳಿತಾಗ ಆ ಅಮೃತವನ್ನು ಅನುಭವಿಸಲು, ಅಮೃತವರ್ಷವಾಗಲು ಕಾರಣವಾದ ಸನ್ನಿವೇಶಗಳನ್ನು ಅಥವ ಒಳ್ಳೆಯ ಅನುಭವಗಳನ್ನು ಸ್ಮರಿಸಿಕೊಳ್ಳುವುದು ಅವಶ್ಯಕ! ನಮ್ಮ ಉದಾಹರಣೆಯಲ್ಲಿ, ಅದು ಆನಂದ ದರ್ಶನದ ಅನುಭವ. ಆಗ, ನೀವು ನೀವಾಗಿಯೇ ಆನಂದ ಪರವಶರಾಗುವಿರಿ. ಪೂಜೆಯ ಆ ಕ್ಷಣದಲ್ಲಿ ನಿಮ್ಮ ಗಂಟಲಿನಲ್ಲಿ ಆ ಸಿಹಿಯನ್ನು ಅನುಭವಿಸದಿದ್ದರೆ, ನೀವು ಪೂಜೆಯನ್ನು ಮಾಡಲಾಗುವುದಿಲ್ಲ ಏಕೆಂದರೆ, ನೀವು ಸುಳ್ಳು ಹೇಳಿದಂತಾಗುತ್ತದೆ! ನಿಮಗೆ ನಿಜವಾಗಿಯೂ ಆ ಭಾವನೆಯುಂಟಾದರೆ ಮಾತ್ರ ಪೂಜೆಯಲ್ಲಿ 'ಸಹಸ್ರಾರಚ್ಯುತಾಮೃತ್ಯೇ ಪಾದ್ಯಂ ಚರಣಯೋರ್ ದದ್ಯಾತ್' ಎಂಬ ಪದಗಳನ್ನುಚ್ಚರಿಸಲು ಅಧಿಕಾರವಿರುತ್ತದೆ.
'ಮನಸ್ತು ಅರ್ಘ್ಯಂ ನಿವೇದಯಾತ್' ಎಂದರೆ, ನಿಮ್ಮ ಮನಸ್ಸನ್ನೇ ಭಗವಂತನಿಗೆ ಆಹಾರವಾಗಿ ಅರ್ಪಿಸುತ್ತಿದ್ದೀರಿ ಎಂದರ್ಥ. ನಿತ್ಯಾನಂದ ಸ್ಪುರಣ ಪ್ರೋಗಾಂನ (ಲೈಫ್ ಬ್ಲಿನ್ ಪ್ರೋಗ್ರಾಂ–ಹಂತ–2) ಕೊನೆಯಲ್ಲಿ ನಿಮ್ಮ ಎಲ್ಲಾ ಸಂಸ್ಕಾರಗಳನ್ನೂ ಬೇರೂರಿರುವ ಸ್ಮರಣೆಗಳನ್ನೂ, ಅಥವ ಕರ್ಮವನ್ನು ಅಗ್ನಿಗೆ ಅರ್ಪಿಸುತ್ತೀರಿ. ಇವೆಲ್ಲವೂ ಸೇರಿ ಆಗಿರುವುದೇ ನಿಮ್ಮ ಮನಸ್ಸು ಹಾಗಾಗಿ, ನೀವು ಈ ಪಂಕ್ತಿಯನ್ನುಚ್ಚ ರಿಸಿದಾಗ ನೀವಾಗಿಯೇ ಆ ಕ್ರಿಯೆಯನ್ನು ಸ್ಮರಿಸಿಕೊಂಡು 'ಹಾಂ, N.S.P. ಯಲ್ಲಿ ಹೇಗೆ ಸಮಸ್ತವನ್ನೂ ಅರ್ಪಿಸಿದ್ದೆನೋ ಹಾಗೆಯೇ ಈಗಲೂ ಅಲ್ಲಿಂದೀಚೆಗೆ ಕೂಡಿಹಾಕಿಕೊಂಡಿರುವುದನ್ನು ನಿನ್ನ ಪಾದಗಳಿಗೆ ಸಮರ್ಪಿಸುತ್ತೇನೆ ಎಂದುಕೊಳ್ಳುತ್ತೀರಿ. ಇದು ಇಲ್ಲಿ ಆಗಬೇಕಾದ ಕ್ಲಿಕ್ ಗೆ ಮತ್ತೊಂದು ಉದಾಹರಣೆ.
'ತೇನ ಅಮೃತೇನ ಆಚಮನೀಯಂ' ಎಂದರೆ 'ಅದೇ ಭಾವೋದ್ರೇಕದ ಅಮೃತವನ್ನು ನಿನಗೆ ಕುಡಿಯಲು ಕೊಡುತ್ತೇನೆ' ಎಂದರ್ಥ.
ಆ ಅಮೃತವನ್ನು ಪುನಃ ಅನುಭವಿಸಲು ಈ ಪಂಕ್ತಿಯು, ಆ ಸಂತೋಷ, ಆ ಆನಂದಗಳ 'ಆನಂದದರ್ಶನ'ದ ಅನುಭವಕ್ಕೆ ನಿಮ್ಮನ್ನು ಮರಳಿಸುತ್ತದೆ. ಹಾಗಾಗಿ, ಈ ರೀತಿಯಲ್ಲಿ ಈ ಮಂತ್ರದ ಪ್ರತಿಯೊಂದು ಹಂತವೂ ನಿಮಗಾದ ಕ್ಲಿಕ್‌ಗಳಿಗೂ ದೀಕ್ಷೆಯ ಅನುಭವಗಳಿಗೂ ನಿಮ್ಮನ್ನು ಮರಳಿಸುತ್ತದೆ. ನಾನು ಗುರುಮಂತ್ರದ ಕೆಲವು ಪದಗಳನ್ನು ಮಾತ್ರ ವಿವರಿಸಿದ್ದೇನೆ. ನೀವು ಅದೆಲ್ಲವನ್ನೂ ಅಮೂಲಾಗ್ರವಾಗಿ ಪರಿಶೀಲಿಸಿದರೆ, ಸಂಪ್ರದಾಯವನ್ನು ಶ್ಲಾಘಿಸುವುದು ಮಾತ್ರವಲ್ಲ, ಸಂಪ್ರದಾಯದ ಸಮಗ್ರ ವಿಜ್ಞಾನವು ಹೇಗೆ ಬಂದಿತೆಂಬುದನ್ನು ಶ್ಲಾಘಿಸಲು ಮೊದಲುಮಾಡುವಿರಿ.
ಅದು ಎಂತಹ ಸುಂದರವಾದ ಕಲ್ಪನೆ! ನೀವಿದನ್ನು ಅರ್ಥ ಮಾಡಿಕೊಂಡರೆ ಸಾಕು. ಬೇಡವಾದ ಎಲ್ಲ ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳು ತಾವಾಗಿಯೇ ನಿಮ್ಮನ್ನು ಬಿಟ್ಟುಹೋಗುತ್ತವೆ ಹಾಗೂ ಅನತಿ ಕಾಲದಲ್ಲಿಯೇ ಗುರುಕೃಪೆಯು ನಿಮ್ಮ ಮೇಲಾಗುವುದು. ಒಮ್ಮೆ ಅದಾಯಿತೆಂದರೆ, ನಿಮಗೆ ಮೋಕ್ಷ ದೊರೆತಂತೆಯೇ.
ಧ್ಯಾನ ಮತ್ತು ಪ್ರಜ್ಞೆ — ಕರ್ಮಕ್ಕೆ ಪ್ರತಿರೋಧಕಗಳು
ನಿಮ್ಮ ಮೇಲೆ ನನ್ನ ಕೆಲಸ.
ನಿಮಗೆ ಒಂದೇ ಒಂದು ಸಲವಾದರೂ ಶುದ್ದ ಪ್ರಜ್ಞೆಯ ಇಣುಕು ನೋಟವಾಗಿದ್ದರೂ ಸಾಕು, ಯಾವ ಕರ್ಮವೂ ಏನನ್ನೂ ಮಾಡಲಾರದು. ಕರ್ಮದ ಕಂಪನಕ್ಕಿಂತಲೂ ನಿಮ್ಮ ಕಂಪನವು ಹೆಚ್ಚಾಗುತ್ತದೆ. ನಿಮ್ಮಲ್ಲಿ ಆಲೋಚನೆಗಳಿರು ವವರೆವಿಗೂ ಕರ್ಮಾವು ನಿಮ್ಮ ಮೇಲೆ ಪ್ರಭಾವಬೀರಬಲ್ಲದು. ಪ್ರಜ್ಞಾಪೂರಿತ ಅರಿವಿನ ಸ್ಥಿತಿಯಲ್ಲಿ ನೀವು ಆಲೋಚನೆಗಳನ್ನು ಮೀರಿ
ಹೋಗುವಿರಿ. ಹಾಗಾಗಿ, ಸ್ವಾಭಾವಿಕವಾಗಿಯೇ ಕರ್ಮದ ಮೇಲೆ ಅಧಿಕಾರ ಮಾಡಲಾರಂಭಿಸುವಿರಿ. ಯಾವ ಧ್ಯಾನವನ್ನೇ ಆಗಲಿ, ತೀವ್ರವಾಗಿ ಮಾಡಿದಲ್ಲಿ, ಸತ್ಯದ, ಎಂದರೆ ಶುದ್ಧಪ್ರಜ್ಞೆಯ ಒಂದು ಇಣುಕುನೋಟವು ಲಭಿಸುತ್ತದೆ. ಆ ಕಾರಣದಿಂದಲೇ, ಧ್ಯಾನವೆಂದರೆ ನಿಮ್ಮ ಕ್ಯಾಮರಾದ ಫಿಲ್ಮ್‌ನ್ನು ನೇರವಾಗಿ ಸೂರ್ಯನಿಗೆ ತೆರೆದುಕೊಂಡಂತೆ ಎನ್ನುತ್ತಾರೆ. ಕ್ಯಾಮರಾದ ಮುಚ್ಚಳವು ಒಂದು ಸೆಕೆಂಡು ತೆರೆದುಕೊಂಡರೆ, ಅದರ ಮುಂದಿರುವುದೆಲ್ಲವೂ ಸೆರೆಹಿಡಿಯಲ್ಪಡುತ್ತದೆ. (ರೆಕಾರ್ಡ್ ಆಗುತ್ತದೆ). ಅದೇ, ಮುಚ್ಚಳವನ್ನು ಪೂರ್ತಿಯಾಗಿ ತೆರೆದೇ ಬಿಟ್ಟರೆ, ಏನಾಗುತ್ತದೆ? ಸೆರೆಹಿಡಿದ್ದೆಲ್ಲವೂ ಅಳಿಸಿಹೋಗುತ್ತದೆ.
ನೀವು ಹುಟ್ಟಿದಾಗ, ಕ್ಯಾಮರಾದ ಮುಚ್ಚಳವು ಒಂದು ಕ್ಷಣ ತೆರೆದುಕೊಂಡಿತು ಮತ್ತು ಜೀವವು ನಿಮ್ಮ ದೇಹವನ್ನು ಹೊಕ್ಟಿತು. ಆ ಕ್ಷಣದಲ್ಲಿ ಹೊರಗಡೆಯ ದೃಶ್ಯದಲ್ಲಿ ಇದ್ದುದೆಲ್ಲವೂ ಸೆರೆಯಾಯಿತು. ದೃಶ್ಯವೆಂಬ ಪದಕ್ಕೆ ನಾನು ಹೇಳುವುದು ಆ ಕ್ಷಣದಲ್ಲಿದ್ದ ಗ್ರಹಗತಿಗಳು. ಆ ಕಾರಣದಿಂದಲೇ ಹುಟ್ಟಿದ ಕಾಲ ಬಹಳ ಮುಖ್ಯ. ಆದನ್ನಾದರಿಸಿ ನಿಮ್ಮ ಚೈತನ್ಯವು ಕಾರ್ಯಶೀಲ ವಾಗುವುದು. ಹೇಗಾದರೂ, ಧ್ಯಾನ ಮಾಡುತ್ತಿರುವಾಗ, ನಾನು ಮುಚ್ಚಳವನ್ನು ಸಾಕಷ್ಟು ಬೇಕೆಂದೇ ತೆರೆದಿರುತ್ತೇನೆ! ಆದುದರಿಂದ ಸ್ವಾಭಾವಿಕವಾಗಿಯೇ ಸೆರೆಹಿಡಿದದ್ದೆಲ್ಲವೂ ಅಳಿಸಿಹೋಗುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ನೀವು ಹುಟ್ಟಿದಾಗ ಮೊದಲನೆಯ ಬಾರಿಗೆ ಮುಚ್ಚಳವು ತೆರೆಯಲ್ಪಟ್ಟಿತ್ತು. ನಿಮಗೆ ದೀಕ್ಷೆ ಲಭಿಸಿದಾಗ ಎರಡನೆಯ ಬಾರಿಗೆ ತೆರೆಯಲ್ಪಟ್ಟಿತು. (ಮುಚ್ಚಳವನ್ನು ಪೂರ್ತಿಯಾಗಿಯೂ ಸಹಜ ವಾಗಿಯೂ ಸೂರ್ಯನ ಕಿರಣಗಳು ನಿಮ್ಮ ಕರ್ಮಗಳನ್ನೆಲ್ಲ ಅಳಿಸಿ ಹಾಕ ಲೆಂದು ಮುಚ್ಚಳವನ್ನು ಪೂರ್ತಿಯಾಗಿಯೂ ಸಹಜವಾಗಿಯೂ ತೆರೆದಿಡ ಲಾಗಿದೆ). ಗುರುಗಳಿಂದ ದೀಕ್ಷೆ ಪಡೆದಾಗ ನಿಮ್ಮನ್ನು 'ದ್ವಿಜ' ಎಂದು
ಕರೆಯುವುದು ಈ ಕಾರಣಕ್ಕಾಗಿಯೇ. ನಿಮ್ಮ ಕ್ಯಾಮರಾದ ಚಾಲಕನನ್ನೂ ಅಷ್ಟು ಕಾಲ ಮುಚ್ಚಳವನ್ನು ತೆರೆದಿದ್ದವನನ್ನೂ ಗುರು ಎಂದು ಕರೆಯುತ್ತಾರೆ– ಆತನೇ ಗುರು.
ಕರ್ಮ ಎಂಬ ವಿಷಯದ ಮುಂದುವರಿಕೆ
ತಿಳಿಯಿರಿ, ಸರಳವಾಗಿ ಹೇಳಬೇಕೆಂದರೆ ಅಜ್ಞಾನ ಜನ್ಯವಾದ ಆಲೋಚನೆಗಳ, ನುಡಿಗಳ ಮತ್ತು ಕ್ರಿಯೆಗಳ ಪ್ರತಿಫಲವಾಗಿ ತಿಳಿದೂ ತಿಳಿದೂ ಅದೇ ದುಃಖ ದುಮ್ಮಾನಗಳನ್ನು ಮತ್ತೆ ಮತ್ತೆ ಅನುಭವಿಸಬೇಕಾದುದಕ್ಕೆ ಕಾರಣವಾಗಿರುವುದೇ ಕರ್ಮ. ಈ ಚಕ್ರವನ್ನು ತಪ್ಪಿಸಿಕೊಳ್ಳಬೇಕಾದರೆ ಅನುಗ್ರಹಿಸಲ್ಪಟ್ಟ ಕ್ಲಿಕ್‌ಗಳಿಗೆ ಈಡು ಮಾಡಿಕೊಂಡು ಉತ್ತಮವಾದ ಪ್ರಜ್ಞೆಯ ಸ್ಥಿತಿಯಲ್ಲಿ ಜೀವಿಸುವುದೇ ಮಾರ್ಗ. ಈ ಮೂಲ ವಿಜ್ಞಾನವನ್ನು ಅರಿತು ಕೊಳ್ಳದೇ ಹೋದಾಗ, ಸಕಲವನ್ನೂ ತಪ್ಪಾಗಿ ವ್ಯಾಖ್ಯಾನ ಮಾಡುವಿರಿ.
ಯಾರಿಗಾದರೂ ಸಲಹೆಕೊಟ್ಟಾಗಲಾಗಲೀ, ಯಾರನ್ನಾದರೂ ಸ್ಪರ್ಶಿಸಿ ದಾಗಲಾಗಲೀ ಅವರ ಕರ್ಮವು ತಮಗೆ ಅಂಟಿಕೊಳ್ಳುವುದೇ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರು ಬೇರೆಯವರ ಕರ್ಮವನ್ನು ಕಟ್ಟಿಕೊಳ್ಳಲು ತಾವು ಬಹಳ ದುರ್ಬಲರು ಎಂದು ಕೊಳ್ಳುತ್ತಾರೆ. ಅದರಿಂದ ತಪ್ಪಿಸಿಕೊಳ್ಳಲು ಹೇಗೆಂದು ತಿಳಿಯಲು ಅಪೇಕ್ಷಿಸುತ್ತಾರೆ. ಬೇರೆಯವರ ಕರ್ಮವನ್ನು ನೀವು ಕಟ್ಟಿಕೊಳ್ಳಲು ಆಗುವುದೇ
ಇಲ್ಲವೆಂಬುದನ್ನು ತಿಳಿಯಿರಿ; ನಿಮಗೆ ನಿಮ್ಮದೇ ಸಾಕಷ್ಟಿದೆಯಲ್ಲ! ಆದುದರಿಂದ, ಇನ್ನೊಬ್ಬರಿಂದ ಕರ್ಮವನ್ನು ತೆಗೆದುಕೊಳ್ಳುವ ವಿಷಯದಲ್ಲಿ ಬಗ್ಗೆ ಚಿಂತಿಸಬೇಡಿರಿ.
ಯಾರನ್ನಾದರೂ ಸ್ಪರ್ಷಿಸುವುದರಿಂದಾಗಲೀ, ಸಲಹೆ ಕೊಡುವುದ— ರಿಂದಲಾಗಲೀ ದೈಹಿಕ ಸಂಬಂಧದಿಂದಾಗಲೀ ಅಥವ ದೈಹಿಕ ಸನಿಹದಿಂದಾಗಲೀ ಕರ್ಮವನ್ನು ಕಟ್ಟಿಕೊಳ್ಳಲಾಗುವುದೇ ಇಲ್ಲ. ಯಾರದಾದರೂ ಸುತ್ತಮುತ್ತ ಎಡೆಬಿಡದೇ ಇದ್ದು, ಸನಿಹದಲ್ಲಿಯೇ ಇದ್ದರೆ, ಅವರ ಮನೋಧರ್ಮವನ್ನು ಪಡೆಯಬಹುದು; ಆದರೆ ಆತನ ಆಕೆಯ ಕರ್ಮವನ್ನಲ್ಲವೇ ಅಲ್ಲ. ಅಂದ ಹಾಗೆ, ನೀವು ಅವರ ಮನೋಧರ್ಮವನ್ನು ಹೊಂದದೇ ಇರಲು ನಿಮಗೆ ಮನೋ ಧಾರ್ಡ್ಯ ಇರಬೇಕು. ಅದು ಅಪಾಯಕರ. ಆದರೆ ನಿಮಗಾದ ಕ್ಲಿಕ್‌ಗಳಿಂದಾಗಿ ನೀವು ದೃಢವಾಗಿದ್ದರೆ ಇದು ನಿಮ್ಮನ್ನು ಯಾವ ರೀತಿಯೂ ಬಾಧಿಸುವುದಿಲ್ಲ.
ಮತ್ತೊಂದು ವಿಷಯ– ನಾನು ನಿಮ್ಮ ಕರ್ಮದ ತಂಟೆಗೆ ಬರುವುದಿಲ್ಲ. ಸೂರ್ಯೋದಯವಾಗ ಕತ್ತಲೆಯು ಹೇಗೆ ನಿವಾರಣೆಯಾಗು– ತ್ತದೆಯೋ ಹಾಗೆ ಗುರುವಿನ ಸಾನಿಧ್ಯದಲ್ಲಿ ಕರ್ಮವು ದಹಿಸಿಬಿಡುತ್ತದೆ. ಕರ್ಮವು ಕತ್ತಲಿನಂತೆ ನಕಾರಾತ್ಮಕವಾದುದು. ಅದಕ್ಕೆ ಸಕಾರಾತ್ಮಕ ಉಳಿಗಾಲವಿಲ್ಲ; ನಾನು ಹೇಳುವುದೇನೆಂದರೆ, ಇಲ್ಲಿರುವ ವಸ್ತುವನ್ನು ತೆಗೆದುಕೊಂಡು ಎಸೆದುಬಿಡುವಂತೆ ಅದನ್ನು ಹೊರಗೆ ಎಸೆದು ಬಿಡಲಾಗುವುದಿಲ್ಲ.
ಬೆಳಕಿಲ್ಲದಿರುವಿಕೆಯನ್ನು ಕತ್ತಲು ಎನ್ನುವಂತೆಯೇ ನಮ್ಮ ಅಂತರಂಗದಲ್ಲಿ ಬೆಳಕಿಲ್ಲದಿರುವುದೇ ಕರ್ಮ ಅಥವ ಬೇರೆ ರೀತಿಯಲ್ಲಿ ಹೇಳಬೇಕೆಂದರೆ ಅಜ್ಞಾನ. ಅದು ಚೈತನ್ಯವಿಲ್ಲದಿರುವಿಕೆ. ಕ್ಲಿಕ್‌ಗಳ ನೆನಪಿನ ಮೂಲಕ ಅರ್ಥಮಾಡಿಕೊಂಡ ರೀತಿಯಲ್ಲಿ ಜೀವಿಸುವ ಮೂಲಕ ಯಾವ ಕರ್ಮವನ್ನಾದರೂ ದಹಿಸಬಹುದು.
ಕರ್ಮವೆಂಬುದು ಅದರಲ್ಲಿರುವ ನಿಮ್ಮ ಭಯವೇ ಹೊರತು ಬೇರೆಯಲ್ಲ. ಕೊನೆಯ ಪಕ್ಷ ಭಯದ ಅಂಶವಂತೂ ಭದ್ರವಾಗಿದೆ. ಕರ್ಮವು ನಿಮ್ಮ ಭಯದಷ್ಟು ಆಳವಾಗಿಯೂ ಇಲ್ಲ. ಭಯವು ನಿಮ್ಮ ಕಾರಣ ಶರೀರದ ಆಳಕ್ಕೆ ಹೋಗುತ್ತದೆ. ನೀವು ಆಳವಾಗಿ ನಿದ್ರೆಹೋಗುವಾಗ ಶಕ್ತಿ ಪದರಕ್ಕೆ ಹೋಗುವಂತೆ. ನಿಮ್ಮ ತಲೆಯ ಮೇಲೆ ಒಂದು ಕತ್ತಿ ಇದ್ದು, ನೀವು ನಿದ್ರಿಸಿದರೆ, ವಿಪರೀತವಾದ ಭಯದಿಂದ ನೀವು ಕಾರಣ ಶರೀರವನ್ನು ತಲಪುವಿರಿ. ಕರ್ಮ ವೆಂಬುದಕ್ಕೆ ಅಷ್ಟು ಆಳವೂ ಇಲ್ಲ. ಅದು ನೀವೇ ಮಾಡಿಕೊಂಡದ್ದು ಮತ್ತು ಅದನ್ನು ನೀವು ನಿವಾರಿಸಿಕೊಳ್ಳಬಹುದು ಮತ್ತು ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳದೆಯೂ, ಆಲೋಚನೆಗಳಿಂದಲೂ, ನುಡಿ ಗಳಿಂದಲೂ, ಕಾರ್ಯಗಳಿಂದಲೂ, ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳುವು ದಿಲ್ಲವೆಂಬ ಪ್ರಜ್ಞಾಪೂರಿತ ನಿರ್ಧಾರದಿಂದಲೂ ಅದನ್ನು ಇಲ್ಲವಾಗಿಸ ಬಹುದು.
ಕೇವಲ ಕರ್ಮವನ್ನು ತೀರಿಸಿಕೊಳ್ಳುತ್ತಲೂ ಹೆಚ್ಚು ಕರ್ಮವನ್ನು ಕಟ್ಟಿಕೊಳ್ಳದೆಯೂ ಇರುವಂತಹ ಜೀವನವನ್ನು ನಡೆಸುವುದು ಬಹಳ ಮುಖ್ಯ. ವೈದಿಕ ಧರ್ಮದ ವಿವಾಹಗಳಲ್ಲಿ ಈ ವಿಚಾರವನ್ನೇ ಉತ್ತೇಜಿಸಿರುವುದು. ವೈದಿಕ ವಿವಾಹಗಳಲ್ಲಿ ಪತಿ ಪತ್ನಿಯರು
ತಮ್ಮ ದಾಂಪತ್ಯ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಮುಂದಾಗಿಸಿ– ಕೊಳ್ಳುವ ಸಂಕಲ್ಪವನ್ನು ಕೈಗೊಂಡು ಸಹಜೀವನವನ್ನು ನಡೆಸುತ್ತಾರೆ. ಇದನ್ನು ವಾನಪ್ರಸ್ತಾಶ್ರಮ ಎನ್ನುತ್ತಾರೆ. ಹಾಗೆಂದರೆ, ಅದು ಕರ್ಮವನ್ನು ತೊರೆಯಲೂ, ಹೊಸದಾದ ಕರ್ಮವನ್ನು ಕಟ್ಟಿ ಕೊಳ್ಳದೆಯೂ ಇರಲು ಪರಸ್ಪರವಾಗಿ ಅವರು ತೆಗೆದುಕೊಳ್ಳುವ ನಿರ್ಧಾರ. ಸಾಮಾನ್ಯವಾಗಿ ವಿವಾಹದಲ್ಲಿ ಗಂಡು ವಿಷಯಾಭಿಲಾಶೆಯಿಂದಲೂ, ಹೆಣ್ಣು ಭಯದಿಂದಲೂ ವರ್ತಿಸುತ್ತಾರೆ. ಗಂಡು, ಹೆಣ್ಣಿನ ಭಯದ ದೃಷ್ಟಿಕೋನವನ್ನೂ, ಹೆಣ್ಣು ಗಂಡಿನ ಆಸೆಯ ದೃಷ್ಟಿಕೋನವನ್ನೂ ದುರುಪಯೋಗಿಸುತ್ತಾರೆ. ಆದರೆ ಈ ಸಂಕಲ್ಪವು ಪರಸ್ಪರರ ಕರ್ಮವನ್ನು ನಿವಾರಿಸಲೂ, ಒಬ್ಬರಿಗೊಬ್ಬರು ದುರುಪಯೋಗ ಮಾಡದಂತೆಯೂ ಹಾಗೂ ಹೆಚ್ಚಿಸದಂತೆಯೂ ಇರುವುದನ್ನು ದೃಢೀಕರಿಸುತ್ತದೆ.
'ಸ್ವಾಮೀಜಿ, ಕರ್ಮವನ್ನು ಮೀರಿ ಹೋಗುವುದು ಹೇಗೆ?' ಎಂದು ಯಾರೋ ನನ್ನನ್ನು ಕೇಳಿದರು.
ಕರ್ಮವನ್ನು ಕಟ್ಟಿಕೊಳ್ಳುವುದನ್ನು ತಡೆಯುವುದು ಹೇಗೆಂದು ಇದುವರೆವಿಗೂ ನಾವು ಚರ್ಚಿಸಿದ್ದೇವೆ. ಕರ್ಮದ ನಿವಾರಣೆಗೆ ಪರಿಹಾರಾರ್ಥವಾಗಿ ನಾನೊಂದು ಸುಲಭೋಪಾಯವನ್ನು ಹೇಳಿ– ಕೊಡುತ್ತೇವೆ. ಈ ಕ್ಷಣದಿಂದಲೇ ನಿಮ್ಮ ಜೀವನದಲ್ಲಿ ಆದ ಆಗು ಹೋಗುಗಳನ್ನು ಸ್ಮರಿಸಿಕೊಳ್ಳಲು ಪ್ರಯತ್ನಿಸಿರಿ. ಈ ಕ್ಷಣದಿಂದ ನಿಮ್ಮ ಬಾಲ್ಯದ ದಿನಗಳಿಗೆ ಹಿಂದಿರುಗಿ ಹೋಗಿರಿ. ಎಷ್ಟು ಸಾಧ್ಯವೋ ಅಷ್ಟನ್ನು ಸ್ಮರಿಸಿರಿ. ಏನು ಸಾಧ್ಯವಿಲ್ಲವೋ ಅದಕ್ಕೆ ಚಿಂತಿಸಬೇಡಿರಿ. ನಿಮಗೆ ಏನನ್ನು ಸ್ಮರಿಸಲು ಸಾಧ್ಯವಿಲ್ಲವೋ ಅದು ಕೇವಲ ಉಳಿಕೆ ಎಂಬುದನ್ನು ತಿಳಿಯಲೇಬೇಕು. ಅದು ನಿಮ್ಮನ್ನು ಆಳವಾಗಿ ಹೊಕ್ಕಿಲ್ಲ. ಆದ
ಕಾರಣವೇ ಅದು ನಿಮ್ಮ ಸ್ಮೃತಿಯಲ್ಲಿಲ್ಲ. ಈ ತಂತ್ರವನ್ನು ಒಂದು ವರ್ಷಕಾಲ ಅಭ್ಯಾಸ ಮಾಡಿರಿ. ಪುನರ್ಜೀವಿಸುವುದು ಆಶ್ಚರ್ಯಕರ ವಾದ ಬಿಡುಗಡೆ.
ನಮ್ಮ ಎರಡನೆಯ ಹಂತದ ನಿತ್ಯಾನಂದ ಸ್ಪುರಣ ಕಾರ್ಯಕ್ರಮ (NSP) ಎಂಬುದು ಕೇವಲ ಈ ಮಾದರಿಯಾಗಿ ಕರ್ಮವನ್ನು ಕಳೆದುಕೊಳ್ಳುವುದಕ್ಕೆ ಕೇಂದ್ರೀಕೃತವಾಗಿದೆ.
ಅದು ಒಬ್ಬ ಆತ್ಮಜ್ಞಾನಿಯಾದ ಗುರುಗಳ ಸಮ್ಮುಖದಲ್ಲಿ ಆಗುವ ಆಧ್ಯಾತ್ಮಿಕಾಭಿಷೇಕದಂತೆ.
ಒಂದು ವಿಷಯವನ್ನು ತಿಳಿದುಕೊಳ್ಳಿರಿ. ಗುರುಗಳಾದವರಿಗೆ ಕರ್ಮ ವೆಂಬುದಿಲ್ಲ. ಅವರಿಗೆ ಆಗಬೇಕಾದುದ್ದೇನೂ ಇಲ್ಲ, ಪಡೆಯಬೇಕಾ– ದದ್ದೂ ಏನಿಲ್ಲ. ಹಾಗಾದರೆ, ಅವರು ದೇಹದಿಂದೇಕೆ ಇರಬೇಕು? ಅದು ಕೇವಲ ಮಾನವ ಪ್ರೇಮಕ್ಕಾಗಿ, ಅವರು ಮಾನವ ದೇಹವನ್ನು ಪಡೆಯುವುದು ಕೇವಲ ಇನ್ನೂ ಹೆಚ್ಚು ಜನರಿಗೆ ಜನನ ಮರಣಗಳ ಚಕ್ರದಿಂದಲೂ, ಕರ್ಮದ ಹಿಡಿತದಿಂದಲೂ ಮುಕ್ತಿಯನ್ನು ದಯ ಪಾಲಿಸಲು ಮಾತ್ರ.
The Supreme Pontiff Of Hinduism Bhagawan Sri Nithyananda Paramashivamರ ಬಗ್ಗೆ
ಮಾನವನ ಜೀವನದುದ್ದೇಶದ ಕೊನೆ ಯಿಲ್ಲದ ಅನ್ವೇಷಣೆಯು ಈ ಸಾಲಿ ನಿಂದ ಕೊನೆಗೊಳ್ಳುತ್ತದೆ. ಪರಮಾನಂದವೇ ಹಾದಿ ಹಾಗೂ ಗುರಿ. ಇದು THE SUPREME PONTIFF OF HINDUISM BHAGAWAN SRI NITHYANANDA PARAMASHIVAMರ ಅನುಭವ ಹಾಗೂ ಬೋಧನೆ. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಈಗಿರುವ ಒಬ್ಬ ಜ್ಞಾನೋ ದಯ ಹೊಂದಿದ ಗುರು ಹಾಗೂ ನವಕಾಲೀನ ಅತೀಂದ್ರಿಯವಾದಿ.
ಪರಮಾನಂದವು ಕೊನೆಯಲ್ಲಿ ಸಿಗುವಂತಹುದಲ್ಲ., ಆದರೆ ಅದರ ಹಾದಿಯೇ ಪರಮಾನಂದವೆಂಬ ಅವರ ಅನುಭವ ಸಹಿತ ಜ್ಞಾನವನ್ನು ಮೊದಲು ನೀಡುವುದೇ ಅವರ ಜೀವಿತದ ಧ್ಯೇಯವಾಗಿದೆ. ಎಂದರೆ
Part 2: Karma - Why Series_Kannada_part_2.md
ದಿನದ 24 ಗಂಟೆಗಳಲ್ಲಿಯೂ ಪರಮಾನಂದದಲ್ಲಿ ಇರಲು ಸಾಧ್ಯವಾಗುವಂತಹ ಸ್ಥಿತಿ! ನಾವು ನಮ್ಮ ಚಿದಾವಕಾಶದಲ್ಲಿ ಶ್ರಮಿಸುವುದರ ಮೂಲಕ ಈ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದು ಅವರು ತಿಳಿಯಪಡಿಸುತ್ತಾರೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ದಕ್ಷಿಣ ಭಾರತದ ಒಂದು ಪ್ರಮುಖವಾದ ಆಧ್ಯಾತ್ಮಿಕ ಕೇಂದ್ರವಾದ ತಿರುವಣ್ಣಾಮಲೈ, ಎಂಬ ಊರಿನಲ್ಲಿ ಜನಿಸಿದರು. ತೀವ್ರ ಧ್ಯಾನ, ಹಾಗೂ ಯೋಗ, ತಂತ್ರ ಮತ್ತು ಇತರ ಪೌರಾತ್ಯ ಅತೀಂದ್ರಿಯ ಜ್ಞಾನಗಳ ಅಧ್ಯಯನದ ಮೂಲಕ ಆಂತರ್ಯದ ಪರಮಾನಂದ ಸ್ಥಿತಿಯನ್ನು ಹೊಂದಿದರು. ವೈಯಕ್ತಿಕ ಅರಿವನ್ನು ಸ್ಪಷ್ಟಗೊಳಿಸಿ ಆಧ್ಯಾತ್ಮಿಕವಾಗಿ ಬಲಶಾಲಿಗಳಾದ ವ್ಯಕ್ತಿಗಳನ್ನು ಸೃಷ್ಟಿಸಲು ಅವರು ಸ್ವಾನುಭವದಿಂದ ಪರಮಾನಂದದ ತಂತ್ರಶಾಸ್ತ್ರವನ್ನು ನಿರೂಪಿಸಿದ್ದಾರೆ.
ನಮ್ಮ ಸಹಜಸ್ಥಿತಿಯಾದ ಧ್ಯಾನದಲ್ಲಿ ಮುಳುಗಲು ಅವರು ಅಸಂಖ್ಯಾತ ಕ್ರಮವಿಧಾನಗಳನ್ನು ನಿರ್ಮಿಸಿದ್ದಾರೆ. ಅವರು, ವಾಸ್ತವ ಪ್ರಪಂಚದಲ್ಲಿ ಯಶಸ್ಸನ್ನು ಗಳಿಸಲು ಹಾಗೂ ಆಂತರ್ಯದಲ್ಲಿ ಆಳವಾದ ಪೂರ್ಣತೆಯನ್ನು ಪಡೆಯಲು, ಧ್ಯಾನವೊಂದೇ ಇಂತಹ ಬೀಗಗಳನ್ನು ತೆಗೆಯಬಲ್ಲ ಕೀಲಿಕೈ' ಎಂದು ಹೇಳುತ್ತಾರೆ.
The Supreme Pontiff Of Hinduism Bhagawan Sri Nithyananda Paramashivam ಸಂಸ್ಥೆ
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂಸ್ಥೆಯು ಆಂತರಿಕ ಆನಂದಕ್ಕಾಗಿ ಪ್ರಪಂಚದಾದ್ಯಂತ ನಿಯೋಜಿಸಿರುವ ಆಂದೋಲನ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAMರ ಅವತಾರವು, ವೈಯಕ್ತಿಕ ಪ್ರಜ್ಞೆಯನ್ನು ಸಮಗ್ರ ಪ್ರಜ್ಞೆಯನ್ನಾಗಿಸಿ, ವರಿಷ್ಠ ಪ್ರಜ್ಞಾ ಪರಿಧಿಯನ್ನು ಪ್ರವೇಶಿಸುವ ನೂತನ ಆವರ್ತವನ್ನು ನಿರ್ಮಿಸುವುದಾಗಿದೆ.
ಇದನ್ನು ಸಾಧಿಸಲು ಸಂಸ್ಥೆಯು ಒಂದು ಕೋಟಿ ಜನರಿಗೆ 'ನಿತ್ಯಧ್ಯಾನ್' ಎಂಬ ವಿಶಿಷ್ಟವಾದ ಧ್ಯಾನ ದೀಕ್ಷೆಯನ್ನೂ, ಒಂದು ಲಕ್ಷ ಜನರಿಗೆ ಜೀವನ್ಮುಕ್ತ ದೀಕ್ಷೆಯನ್ನೂ ನೀಡಬೇಕೆಂದು ಉದ್ದೇಶಿಸಿದೆ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂಸ್ಥೆಯ ಕೇಂದ್ರಗಳು ಹಾಗೂ ಆಶ್ರಮಗಳು ಪ್ರಪಂಚದಾದ್ಯಂತ ಆಂತರಿಕ ಬೆಳವಣಿಗೆಯು ಮಹತ್ತರವಾಗಿಯೂ, ಬಾಹ್ಯದ ಬೆಳವಣಿಗೆಯು ಸಹಜ ಪರಿಣಾಮವಾದಂತೆಯೂ ಮಾಡುವ ಆಧ್ಯಾತ್ಮಿಕ ಪ್ರಯೋಗಾಲಯಗಳಂತೆ ನಡೆಯುತ್ತವೆ. ಈ ವಿದ್ಯಾ ಸಂಸ್ಥೆಗಳು ಧ್ಯಾನದಿಂದ ವಿಜ್ಞಾನದವರೆಗೆ ಅನೇಕ ಚಟುವಟಿಕೆಗಳ ಮೂಲಕ ಸಂಶೋಧನೆಯನ್ನು ಬಯಲು ಮಾಡುವಿಕೆಗೆ ಸ್ಥಳ ಮತ್ತು ಅವಕಾಶಗಳಾಗಿ ರೂಪಿಸಲ್ಪಟ್ಟಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ಮಿಲನವಾಗಿ ಆನಂದವಾದ ಜೀವನವನ್ನು ಸೃಷ್ಟಿಸುವಲ್ಲಿ, ಅವು ಪರಿಮಾಣ ಆಧ್ಯಾತ್ಮಿಕತೆಯನ್ನು ಬೆಳೆಸುತ್ತವೆ.
ಅವು ಶೀಘ್ರವಾಗಿ ಪರಿಣಾಮಕಾರಿಯಾಗಿ ಬದಲಾವಣೆಗಳನ್ನು ಕೊಡುವಂತಹ ಖಚಿತ ಜೀವನ ಪರಿಹಾರಗಳನ್ನು ನೀಡುತ್ತಿವೆ. ಅಂತರರಾಷ್ಟೀಯ ವೇದಿಕ್ ಹಾಗೂ ವಿಶ್ವವಿದ್ಯಾಲಯದ ಮೂಲಕ ವೈರುಧ್ಯ ಶ್ರೇಣಿಯ ಧ್ಯಾನ–ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ ಸಿಸ್ಟಂ ಮೂಲಕ ಉಚಿತ ಶಕ್ತಿ ಉಪಶಮನವನ್ನೂ, ಉಚಿತ ಯುವ ಶಿಕ್ಷಣವನ್ನೂ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನವನ್ನೂ ಸಾಮುದಾಯಿಕ
ಕಾರ್ಯಕ್ರಮಗಳನ್ನೂ, ಉಚಿತ ವೈದ್ಯಕೀಯ ಶಿಬಿರಗಳನ್ನೂ ಉಚಿತ ಭೋಜನಗಳನ್ನೂ, ಭರತದಲ್ಲಿ ಲೈಫ಼್ ಬ್ಲಿಸ್ ಟೆಕ್ನಾಲಜಿಯೆಂಬ ಉಚಿತವಾದ ಒಂದು ವರ್ಷದ ವಸತಿಯುತ ತರಬೇತಿ ಕಾರ್ಯಕ್ರಮ– ವನ್ನೂ, ಮಕ್ಕಳಿಗೆ ಒಳಾಂಗಣ ಗುರುಕುಲ ಪದ್ದತಿಯ ಶಿಕ್ಷಣವನ್ನೂ, ಹಾಗೂ ಇಂತಹ ಇನ್ನೂ ಅನೇಕ ಸೇವೆಗಳನ್ನೂ ಜಗತ್ತಿನಾದ್ಯಂತ ನೀಡಲಾಗುತ್ತಿದೆ.
ನಿತ್ಯ ಧೀರ ಸೇನಾದ ಆನಂದ ಸೇವಕರು – ಎಂಬ ಸ್ವಯಂ ಸೇವಕರು – ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡು ಅತ್ಯುತ್ಸಾಹದಿಂದ ಸಂಸ್ಥೆಂತುನ್ನು ಬೆಂಬಲಿಸುತ್ತಿದ್ದಾರೆ.
ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂಸ್ಥೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹಂತಗಳಲ್ಲಿ ವೈಶಿಷ್ಟ್ಯಪೂರ್ಣ ಧ್ಯಾನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ನಮೂದಿಸಲಾಗಿದೆ.
ಲೈಫ಼್ ಬ್ಲಿಸ್ ಪ್ರೋಗ್ರಾಂ ಹಂತ 1: ಆನಂದ ಸ್ಪುರಣ ಪ್ರೋಗ್ರಾಂ (LBP ಹಂತ 1 – ASP) ನಿಮ್ಮನ್ನು ಶಕ್ತಿಯುತವಾಗಿಸುತ್ತದೆ.
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಮುಖ ಚಕ್ರಗಳನ್ನು ವಿರಮಿಸುವ ಮತ್ತು ಶಕ್ತಿಯುತಗೊಳಿಸುವ ಚಕ್ರ ಅಭ್ಯಾಸದ ಕಾರ್ಯಕ್ರಮ, ದುರಾಸೆ, ಭಯ, ಚಿಂತೆ, ಗಮನದ ಕೊರತೆ, ಶ್ರಮ, ಹೊಟ್ಟೆಕಿಚ್ಚು, ಸ್ವಾಭಿಮಾನ,
ಅತೃಪ್ತಿ, ಮುಂತಾದ ನಿಮ್ಮ ವಿವಿಧ ರೀತಿಯ ಭಾವನೆಗಳಿಗೆ ಅದು ಸ್ಪಷ್ಟವಾದ ಬೌದ್ದಿಕ ಮತ್ತು ಅನುಭಾವಿಕ ಅರ್ಥವನ್ನು ನೀಡುತ್ತದೆ. ಅದನ್ನು ದೈಹಿಕ ಮಟ್ಟದಲ್ಲಿ ಆಧ್ಯಾತ್ಮಿಕ ಪರಿಣಾಮವನ್ನುಂಟು ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅದು ನಿಮ್ಮ ಆನಂದದ ಸತ್ಯತೆಯನ್ನು ಅನುಭವಿಸಲು ಇರುವ ಖಚಿತ ಜೀವನ ಪರಿಹಾರ. ಅದು ಈ ಭೂಗೋಳದಲ್ಲಿ ಲಕ್ಷಾಂತರ ಜನರಿಂದ ಪ್ರಮಾಣೀಕರಿಸಲ್ಪ– ಟ್ಟಿರುವ ಬಹಳ ಪ್ರಯೋಜನಕಾರಿಯಾದ ಕಾರ್ಯಗಾರ.
ಲೈಫ಼್ ಬ್ಲಿಸ್ ಪ್ರೋಗ್ರಾಂ ಹಂತ 2: ನಿತ್ಯಾನಂದ ಸ್ಫುರಣ ಪ್ರೋಗ್ರಾಂ (IBP ಹಂತ–2 NSP) ಮರಣದ ರಹಸ್ಯವನ್ನು ಕಳಚುವುದು.
ಮರಣದ ನಿಗೂಢತೆಯನ್ನು ಕಳಚಿ ಜೀವಿಸುವ ಕಲೆಯ, ಹಿಡಿತವನ್ನು ಸಡಲಿಸುವ, ಒಂದು ಕಾರ್ಯಕ್ರಮ. ನಿಮಗೆ ಮರಣದ ಪ್ರಕ್ರಿಯೆ ಮತ್ತು ಉದ್ದೇಶ ತಿಳಿದಿದ್ದರೆ, ನೀವು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಜೀವಿಸುತ್ತೀರಿ. ಮರಣಾನಂತರದ ಭಯದಿಂದ ಬೇರೂರಿರುವ ಮತ್ತು ಪ್ರಜ್ಞಾರಹಿತ ಭಾವನೆಗಳಾದ ತಪ್ಪಿತಸ್ಥ ಮನೋಭಾವ, ಸುಖ ದುಃಖಗಳಿಂದ ವಿಮೋಚನೆಯನ್ನು ಹೊಂದುವ ಅವಕಾಶವನ್ನುಂಟು ಮಾಡುತ್ತದೆ. ಅದು ಸ್ವಾಭಾವಿಕ ಬುದ್ಧಿಶಕ್ತಿ ಮತ್ತು ಇದ್ದಕ್ಕಿದ್ದಂತೆಯೇ ಆಗುವ ಉತ್ಸಾಹದಿಂದ ಪ್ರೇರಿಸಲ್ಪಟ್ಟ ಹೊಸ ಜೀವನಕ್ಕೆ ದ್ವಾರವಾಗಿದೆ.
ಲೈಫ಼್ ಬ್ಲಿಸ್ ಪ್ರೋಗ್ರಾಂ ಹಂತ – 3: ಆತ್ಮ ಸ್ಫುರಣ ಪ್ರೋಗ್ರಾಂ (LBP ಹಂತ 3 ATSP) ಇದು ಅಡ್ಡಿ, ಆತಂಕಗಳನ್ನು ಪರಿಹರಿಸುತ್ತದೆ. ಮನಸ್ಸಿನ ಚಟುವಟಿಕೆಯನ್ನು ಸ್ಪಷ್ಟವಾಗಿ ಪರಿಶೀಲಿಸುವ ಮತ್ತು
ಮನಸ್ಸು ನಿಮ್ಮನ್ನು ಆಳುವುದಕ್ಕಿಂತ ಮನಸ್ಸಿನ ಒಡೆತನ ಗಳಿಸುವುದು ಹೇಗೆಂಬುದನ್ನು ಆನುಭಾವಿಕವಾಗಿ ತೋರಿಸುವ ಕಾರ್ಯಕ್ರಮ. ತಕ್ಷಣವೇ ಆನುಭಾವಿಕ ತಿಳುವಳಿಕೆಯನ್ನುಂಟುಮಾಡಲು ಅದು ಅಪೂರ್ವ ಧ್ಯಾನಗಳೊಡನೆ ಮಿಳಿತವಾದ ಸಂಪೂರ್ಣ ಮಹತ್ತರ ಬೌದ್ದಿಕ ಗ್ರಹಿಕೆಯನ್ನು ಒಳಗೊಂಡಿದೆ.
ಭರತದ ಬೆಂಗಳೂರಿನ ಬಳಿಯ ಬಿಡದಿಯ ಆಶಮದಲಿ ನಡೆಸಲಾಗುತ್ತಿರುವ LBT ತರಗತಿಗಳು
ಲೈಫ಼್ ಬ್ಲಿಸ್ ಟೆಕ್ನಾಲಜಿ (Lbt)
ಲೈಫ಼್ ಬ್ಲಿಸ್ ಟೆಕ್ನಾಲಜಿಯು 18 ರಿಂದ 30 ವರ್ಷದೊಳಗಿನ ತರುಣರಿಗಾಗಿ ಪ್ರಾಯೋಗಿಕ ಜೀವನ ಚಾತುರ್ಯದ ಒಂದು ವರ್ಷದ ಉಚಿತ ವಸತಿಯುತ ಕಾರ್ಯಕ್ರಮ. ಕಾರ್ಯಕ್ರಮದ ಮೂಲವು ಪೌರಾತ್ಯ ಪದ್ಧತಿಯ ವೈದಿಕ ವಿದ್ಯಾಭ್ಯಾಸವಾಗಿದ್ದು, ಈಗಿನ ಕಾಲದ
ಯುವಕರಿಗೆ ಒಳ್ಳೆಯ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸುವಂತ ವಿನ್ಯಾಸಗೊಳಿಸಲಾಗಿದೆ. ಸೃಜನಾತ್ಮಕ ಬುದ್ಧಿ ಮತ್ತು ಸ್ವಾವಲಂಬನೆಗಳ ಶಿಕ್ಷಣವನ್ನು ಕೊಟ್ಟು, ವೃತ್ತಿಪರ ಅಭಿರುಚಿಗಳನ್ನು ನೀಡುವುದರ ಮೂಲಕ ಆರ್ಥಿಕವಾಗಿಯೂ, ಆಧ್ಯಾತ್ಮಿಕವಾಗಿಯೂ, ಸ್ವಾವಲಂಬಿಗಳಾದ ಯುವ ಜನಾಂಗವನ್ನು ನಿರ್ಮಾಣ ಮಾಡುತ್ತದೆ.
ಇದೆಲ್ಲದಕ್ಕಿಂತಲೂ ಮಿಗಿಲಾಗಿ, ಒಬ್ಬ ಆತ್ಮಜ್ಞಾನಿಯ ರಕ್ಷಣೆಯಲ್ಲಿ ಕಲಿಯುವ ಸದವಕಾಶವನ್ನು ಜೀವನದಲ್ಲೊಮ್ಮೆಯೇ ದೊರಕುವಂತಹ ಸದವಕಾಶವನ್ನು ನೀಡುತ್ತದೆ.
ನಿತ್ಯ ಸ್ಪಿರಿಚುಯಲ್ ಹೀಲಿಂಗ್ – ವಿಶ್ವಶಕ್ತಿಯ ಮೂಲಕ ಉಪಶಮನ ಇದು ಉಪಶವನಕಾರರಿಗೆ ಧ್ಯಾನವಾಗಿಯೂ, ಉಪಶಮನ ಹೊಂದುವವರಿಗೆ ಉಪಶಮನಕಾರಿಯಾಗಿಯೂ ಪರಿಣಾಮ ವಾಗುವಂತಹ ವಿಶ್ವಶಕ್ತಿಯ ಮೂಲಕ ಉಪಶಮನ ಮಾಡುವ ವಿಶೇಷವಾದ ಮತ್ತು ಶಕ್ತಿಶಾಲಿಯಾದ ಧ್ಯಾನ ವಿಧಾನ. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಮೈಗ್ರೇನ್‌ನಿಂದ ಕ್ಯಾನ್ಸರ್‌ವರೆಗೂ ಲಕ್ಷಾಂತರ ಜನರಿಗೆ ಇರುವ ರೋಗಗಳನ್ನು ಗುಣಪಡಿಸುವ ಈ ವೈಜ್ಞಾನಿಕ ್ನಿತ್ಯ ಸ್ಪಿರಿಚುಯಲ್ ಹೀಲಿಂಗ್'ನ ದೀಕ್ಷೆಯನ್ನು ಸಾವಿರಗಟ್ಟಲೆ ಜನರಿಗೆ ದಯಪಾಲಿಸುತ್ತಿದ್ದಾರೆ.
ಧ್ಯಾನ್ – ಜೀವನಾನಂದದ ಧ್ಯಾನ (ಲೈಫ಼್ ಬ್ಲಿಸ್ ಧ್ಯಾನ)
ಈ ಭೂಗ್ರಹದ ಮೇಲೆ ನಲಿದಾಡುತ್ತಿರುವ ಲಕ್ಷಾಂತರ ಜನರ ಪೈಕಿ ನೀವೂ ಒಬ್ಬರಾಗಿರಿ. 'ಆನ್ ಕ್ಲಬ್ ಕಗಿರಿ' ಆನ್ ಲೈನ್‌ನಲ್ಲಿ ನೋಂದಾಯಿಸಿಕೊಂಡು ದೀಕ್ಷೆ ಪಡೆಯಿರಿ.
ನಿತ್ಯಧ್ಯಾನ್ ಎಂಬುದು THE SUPREME PONTIFF OF HINDUISM BHAGAWAN SRI NITHYANANDA PARAMASHIVAM
ಮಾನವತೆಗೆ ನೀಡಿರುವ ಪ್ರಭಾವಶಾಲಿಯಾದ ದೈನಂದಿನ ಧ್ಯಾನ. ಅದು ಒಂದು ಸೂತ್ರ ಅಥವ ತಂತ್ರ–ಸಮಗ್ರವಾದುದು ಹಾಗೂ ಪರಿಪೂರ್ಣವಾದುದು. ಅದು ಪೂರ್ಣ ವ್ಯಕ್ತಿತ್ವದ ಮೇಲೆ ಪರಿಣಮಿಸಿ ಪರಿವರ್ತನೆಯನ್ನುಂಟು ಮಾಡುತ್ತದೆ ಮತ್ತು ಆತ್ಮಜ್ಞಾನದ ಕೊನೆಯ ಅನುಭವವು ಉದಯಿಸಲು ತಯಾರು ಮಾಡುತ್ತದೆ. ಈ ತಂತ್ರದ ಪ್ರತಿಯೊಂದು ಭಾಗವೂ ಉಳಿದ ಭಾಗಗಳಿಗೆ ನೆರವಾಗಿದ್ದು, ವ್ಯಕ್ತಿ ಪ್ರಜ್ಞೆಯನ್ನು ಏರಿಸುತ್ತದೆ. ನಿಮ್ಮ ಮನಸ್ಸಿಗೆ 'ಆನ್ ಕ್ಲಬ್' ತರಬೇತಿಯನ್ನು ನೀಡುತ್ತದೆ ಮತ್ತು ಆನಂದವಾದ ಜೀವನವನ್ನು ನಡೆಸುವಂತಾಗುತ್ತದೆ. ಅದು ಶಾಶ್ವತಾನಂದಕ್ಕಾಗಿ ಮಾಡುವ ಧ್ಯಾನ.